Sunday, January 30, 2011

ಜಾತಿ ಗಣತಿ : ಆಳುವ ವರ್ಗಕ್ಕೆ ಲಾಭ - ಆನಂದ್ ತೇಲ್ತುಂಬ್ಡೆಈಗಾಗಲೇ ಶುರುವಾಗಿರುವ ೨೦೧೧ರ ಜನಗಣತಿ ಪ್ರಕ್ರಿಯೆಯಲ್ಲಿ ಜಾತಿಯನ್ನೂ ಸೇರಿಸಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆಯೇ ಕೇಂದ್ರದ ಯುಪಿಎ ಸರ್ಕಾರವು ಮಂತ್ರಿಮಂಡಲ ಸಮಿತಿಯೊಂದನ್ನು ರಚಿಸಿದೆ. ಯಾವುದಾದರೂ ತೊಡಕಾದ ಸಮಸ್ಯೆಯುಂಟಾದರೆ ಅದಕ್ಕೆ ಸಂಬಂಧಪಟ್ಟ ಮಂತ್ರಿಮಂಡಲ ಸಮಿತಿ ರಚಿಸಿ, ಅದೇನೋ ಪರಿಹಾರದ ಮ್ಯಾಜಿಕ್ ವಿಧಾನ ಕಂಡುಹಿಡಿದುಬಿಡುವುದು ಎಂದು ನಂಬುವ ಚಾಳಿ ಇತ್ತೀಚೆಗೆ ಶುರುವಾಗಿದೆ. ಜಾತಿಗಣತಿಯ ಪರ ಮತ್ತು ವಿರೋಧವಾಗಿ ಈಗಾಗಲೇ ಕರ್ಕಶ ಧ್ವನಿಯ ವಾದಗಳೂ, ಅದರ ಜೊತೆಗೇ ಅಚ್ಚರಿಪಡುವಂಥ ಗೊಂದಲಗಳೂ ಬೇರೆ ಬೇರೆ ಮೂಲಗಳಿಂದ ಜಾತಿ, ವರ್ಗ, ವ್ಯಕ್ತಿಗಳು, ಪಕ್ಷಗಳು ಇತ್ಯಾದಿ - ಹುಟ್ಟಿಕೊಂಡು ಮಂತ್ರಿಮಂಡಲ ಸಮಿತಿಯ ಮ್ಯಾಜಿಕಲ್ ತೀರ್ಪು ಏನಿರಬಹುದೆಂದು ಊಹಿಸುವುದನ್ನೇ ಕಷ್ಟಗೊಳಿಸಿವೆ. ಆದರೆ ನಿರ್ಧಾರವೇನಾದರೂ ಜಾತಿ ಜನಗಣತಿ ನಡೆಸಬೇಕೆಂಬುದರ ಪರವಾಗಿ ಬಂದರೆ, ಅದು ದಲಿತ ವಿಮೋಚನೆಗೆ ಎರಡನೆಯ ಅತಿ ದೊಡ್ಡ ಪೆಟ್ಟು ಮೊದಲನೆಯದು ಮಂಡಲ್ ಆಯೋಗದ ವರದಿಯಾಧಾರಿತ ಮೀಸಲಾತಿ - ಎಂದು ಹೇಳಬಹುದು.

ವಸಾಹತುಶಾಹಿ ಕಾಲದ ಜಾತಿಜನಗಣತಿ

೧೮೫೭ರ ಸಿಪಾಯಿ ದಂಗೆಯ ನಂತರ ಬ್ರಿಟಿಷ್ ವಸಾಹತುಶಾಹಿಯು `ಅತ್ಯಾವಶ್ಯಕ ಎಂದು ಪರಿಗಣಿಸಿ ತೆಗೆದುಕೊಂಡ ಕೆಲವು ಕ್ರಮಗಳಲ್ಲಿ, ವಿವಿಧ ಜಾತಿಗಳನ್ನು ಗುರುತಿಸಲು ನಡೆಸಿದ ಜನಗಣತಿ ವ್ಯವಸ್ಥೆಯೂ ಒಂದು. ಸಿಪಾಯಿ ದಂಗೆಯು ಬ್ರಿಟಿಷ್ ಅಧಿಕಾರಿಗಳಿಗೆ ಸ್ಥಳೀಯ ಆಚಾರ ವಿಚಾರಗಳು ಹಾಗೂ ಅಂತಹುದೇ ವಿಷಯಗಳ ಬಗೆಗೆ ತಮಗೆ ಎಂಥ ಶೋಚನೀಯ ಅಜ್ಞಾನ ಇದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿತು. ಸ್ಥಳೀಯ ಜನರ ಕುರಿತಾದ ಜ್ಞಾನವು ತಮ್ಮ ಶತ್ರು-ಮಿತ್ರರಾರೆಂಬುದನ್ನು ಕಂಡುಕೊಳ್ಳಲು ಹಾಗೂ ಆ ಮೂಲಕ ಭವಿಷ್ಯದಲ್ಲಿ ಮತ್ತೆ ದಂಗೆಗಳಾಗದಂತೆ ತಡೆಯಲು ಸಹಾಯವಾಗಬಹುದೆಂಬುದೂ ಅವರ ಲೆಕ್ಕಾಚಾರವಾಗಿತ್ತು. ಅಲ್ಲದೇ ಸ್ಥಳೀಯರ ಒಳ ಗುಂಪುಗಳನ್ನು ಗುರ್ತಿಸುವುದರಿಂದ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುವಂತಹ ರಾಜಕೀಯ ಆಟಕ್ಕೆ ಅನುಕೂಲ ಎಂದೂ ಎನಿಸಿತು. ಹೀಗಾಗಿ ದೊಡ್ಡ ಮೊತ್ತದ ಶ್ರಮ, ಹಣ, ಸಮಯವನ್ನು ತೊಡಗಿಸಿ ಜಾತಿಗಳ ಗಣತಿಯನ್ನು ಅವರು ನಡೆಸಿದ್ದು ಜಾತಿಗಳ ಬಗ್ಗೆ ತಿಳಿದುಕೊಳ್ಳುವ ಬೌದ್ಧಿಕ ಕುತೂಹಲದಿಂದ ಮಾತ್ರವಲ್ಲ. ಜಾತಿ ಎಂಬ ಸಂಸ್ಥೆ ಕುರಿತ ಅವರ ತೀವ್ರಗೊಂಡ ಆಸಕ್ತಿಯ ಮೂಲ ರಾಜಕೀಯ ಉದ್ದೇಶವೇ ಆಗಿತ್ತು. `ಜಿಲ್ಲಾ ಕೈಪಿಡಿಗಳೂ, ಗೆಝೆಟಿಯರುಗಳೂ ಇಡಿಯ ಅಧ್ಯಾಯಗಳನ್ನೇ ಜಾತಿ ಮತ್ತು ಕಟ್ಟಳೆಗಳ ಮಾನವಶಾಸ್ತ್ರೀಯ ಅಧ್ಯಯನಕ್ಕಾಗಿ ಮೀಸಲಿಟ್ಟವು. ಸಾಮ್ರಾಜ್ಯದ ಆಡಳಿತ ಸಮೀಕ್ಷೆಗಳು ಜಾತಿಯನ್ನು ತಮ್ಮ ಅಧ್ಯಯನದ ಕೇಂದ್ರಬಿಂದುವನ್ನಾಗಿ ಮಾಡಿಕೊಂಡವು. ೧೮೭೨ರ ಮೊದಲನೆಯ ದಶವಾರ್ಷಿಕ ಗಣತಿಯ ಹೊತ್ತಿಗೆ ಜಾತಿಯೆಂಬುದು ಸಾಮಾಜಿಕ ವಿಂಗಡಣೆಯ ಹಾಗೂ ಜ್ಞಾನದ ಕೇಂದ್ರಬಿಂದುವಾಗಿತ್ತು. ೧೯೦೧ರ ಹೊತ್ತಿಗೆ ಜನಗಣತಿ ಆಯುಕ್ತನಾಗಿದ್ದ ಎಚ್. ಎಚ್. ರಿಸ್ಲೆ ಇಡೀ ಭಾರತದ ಜನಾಂಗೀಯ ಅಧ್ಯಯನ ಸಮೀಕ್ಷೆಯಲ್ಲಿ ತಾನು ಆಸಕ್ತನಾಗಿರುವುದಾಗಿ ಹೇಳಿರುವುದನ್ನು ಗಮನಿಸಿದರೆ ಜಾತಿಯೆಂಬುದು ಆ ವೇಳೆಗಾಗಲೆ ವಸಾಹತುಶಾಹಿಯು ರೂಪಿಸಿದ ಅಧಿಕೃತ ಅಳತೆಗೋಲಾಗಿದ್ದುದು ತಿಳಿಯುತ್ತದೆ.

ಹಿಂದುತ್ವ ರಾಷ್ಟ್ರೀಯವಾದಿಗಳು ಕೆಲ ಜಾಣ ಅಮೆರಿಕನ್ ಇತಿಹಾಸಕಾರರನ್ನು ಉಲ್ಲೇಖಿಸಿ ಸಿದ್ಧಪಡಿಸಿರುವ ಅಪಕ್ವ ವಾದವನ್ನು ನಾವು ಅಲ್ಲಗಳೆಯುತ್ತಲೇ, ಜಾತಿಜನಗಣತಿಯು ಈ ಮೊದಲೇ ಅಸ್ಪಷ್ಟವಾಗಿದ್ದ ಗುಂಪುಗಳನ್ನು ಎಣಿಕೆ ಮಾಡುವುದರ ಮೂಲಕ ಜಾತಿಗಳನ್ನು ಸ್ಪಷ್ಟ ವಿಭಜನೆಗೊಳಿಸಿತು. ಕೋಹ್ನ್ ಗಮನಿಸುವಂತೆ, `ಜನಗಣತಿ ಕ್ರಿಯೆಯು ಸಾಧಿಸಿದ್ದೇನೆಂದರೆ ಆಡಳಿತದ ಅನುಕೂಲಕ್ಕಾಗಿ ಭಾರತವನ್ನು ಸಾಮಾಜಿಕ ವಿಭಜನೆಗೊಳಪಡಿಸಿದ್ದು. ಜನಗಣತಿಯು ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಭಿನ್ನತೆಗಳನ್ನು ಮೂರ್ತಗೊಳಿಸಿತು. ಈ ಕ್ರಿಯೆಯು ನಂತರ ತಳ ಸಮುದಾಯಗಳ ವಿಮೋಚನಾ ಚಳುವಳಿಗೆ ಪ್ರೇರಣೆಯಾಗಿದ್ದು ಅನಪೇಕ್ಷಿತ ಪರಿಣಾಮವಾಗಿದ್ದರೂ ಕೂಡಾ, ವಸಾಹತುಶಾಹಿಗಳ ಮೂಲ ಉದ್ದೇಶ ತಮ್ಮ ಆಳ್ವಿಕೆಯನ್ನು ಭದ್ರಗೊಳಿಸಿಕೊಳ್ಳುವುದೇ ಆಗಿತ್ತು ಎಂಬುದನ್ನು ನಾವು ಮರೆಯಬಾರದು.

ಜಾತೀಕರಣದ ರಾಜಕಾರಣ

ಮಂಡಲ್ ಆಯೋಗವು ತನ್ನ ಶಿಫಾರ್ಸಿನಂತೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ ೨೦ ವರ್ಷಗಳ ನಂತರ ಅದನ್ನು ಮತ್ತೆ ಮುಂದುವರಿಸಬೇಕಾದರೆ ಮೀಸಲಾತಿಯ ಪರಿಣಾಮವನ್ನು ಅಳೆದು ನೋಡಬೇಕೆಂದು ಹೇಳಿತ್ತು. ಈಗ ಜನಗಣತಿಯಲ್ಲಿ ಹಿಂದುಳಿದ ಜಾತಿಗಳ ಗಣತಿ ಸೇರಿಸುವುದು ಅಗತ್ಯವೆಂಬುದಕ್ಕೆ ಕೊಡುತ್ತಿರುವ ಮೇಲ್ನೋಟದ ಕಾರಣ ಇದೇ ಆಗಿದೆ. ೨೦೦೧ರ ಜನಗಣತಿ ಆರಂಭವಾಗುವುದಕ್ಕಿಂತಲೂ ಮುಂಚೆ ಹೀಗೆಯೇ ಜಾತಿಯನ್ನು ಗಣತಿಯಲ್ಲಿ ಸೇರಿಸಬೇಕೆಂಬ ಒತ್ತಾಯವು ಕೇಳಿಬಂದಿತ್ತು. ಆದರೆ ಯಾವ ಕಾರಣಕ್ಕಾಗಿಯೋ ಗಣತಿ ಕಾರ್ಯದ ಉಸ್ತುವಾರಿ ವಹಿಸುವ ಗೃಹ ಮಂತ್ರಾಲಯವು ಈ ಸಲಹೆಯನ್ನು ತಿರಸ್ಕರಿಸಿತ್ತು. ಈ ಸಲ ಮಂತ್ರಿಮಂಡಲ ಸಮಿತಿಗೆ ವಿಷಯ ಹಸ್ತಾಂತರಿಸಿ ಅದು ಕೋಲಾಹಲಕ್ಕೆ ಕಾರಣವಾಗಿದ್ದರೂ ಕೂಡಾ ಸರ್ಕಾರವು ಜಾತಿಗಣತಿ ನಡೆಸಲು ಒಪ್ಪಿಕೊಳ್ಳಲೇಬೇಕಾದ ಒತ್ತಡಕ್ಕೆ ಸಿಲುಕುವುದಂತೂ ಖಚಿತ.

ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಕೊಡಬೇಕೆಂಬ ಮಂಡಲ್ ವರದಿಯ ಶಿಫಾರ್ಸು ಒಪ್ಪಿಕೊಂಡಿರುವುದೇ ಇಂದು ಜಾತಿ ಜನಗಣತಿಯನ್ನು ಸಮರ್ಥಿಸಿಕೊಳ್ಳಲು ಇರುವ ಮೂಲಕಾರಣವಾಗಿದೆ. ಮಂಡಲ್ ವರದಿಯ ಶಿಫಾರ್ಸುಗಳು ಹಾಗೂ ಅದನ್ನು ಒಪ್ಪಿದ ೧೯೮೯ರ ವಿ. ಪಿ. ಸಿಂಗ್ ಸರ್ಕಾರ ಜಾತಿನಾಶದ ಹಾದಿಯ ದೊಡ್ಡ ಅನಿಷ್ಟಗಳಾಗಿವೆ. ಅದು ಜಾತಿಯನ್ನು ಪುನರುಜ್ಜೀವನಗೊಳಿಸಿತು. ಜಾತಿಯಾಟದ ತರಲೆಗಳು ಮೊದಲೆಲ್ಲ ವ್ಯಕ್ತಿ ಅಥವಾ ವರ್ಗಗಳ ಲಾಭಕ್ಕಾಗಿ ನಡೆಯುತ್ತಿದ್ದು ಈಗ ಸಂವಿಧಾನದ ಹೆಸರಿನಲ್ಲಿ ಶುರುವಾದವು. ಸಂವಿಧಾನವು ೧೫(೪), ೧೬(೪), ೪೬ ಮತ್ತು ೩೪೦ನೆಯ ಪರಿಚ್ಛೇದಗಳಲ್ಲಿ `ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಅಥವಾ `ಹಿಂದುಳಿದ ವರ್ಗಗಳ ಪ್ರಜೆಗಳಿಗೆ ಎಂದು ಉಲ್ಲೇಖಿಸಿದೆ. ಜನಪರ ರಾಜಕೀಯವು ವರ್ಗ ಮತ್ತು ಜಾತಿಗಳ ದ್ವಂದ್ವದಲ್ಲಿ ಸಿಲುಕಿರುವ ಈ ದೇಶದಲ್ಲಿ, ಪ್ರಭುತ್ವ ಮತ್ತು ನ್ಯಾಯಾಂಗ ಎರಡೂ ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟ ವರ್ಗವು ಜಾತಿಯೆಂದೇ ಪರಿಗಣಿಸಿವೆ. ಒಂದು ಇಡೀ ಜಾತಿಯೇ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆಯೆಂದು ಪರಿಗಣಿಸಬೇಕಾದರೆ ಆ ಇಡಿಯ ಜಾತಿಯೇ ಏಕರೂಪವಾಗಿದೆಯೆಂದು ಸಾಬೀತುಪಡಿಸಬೇಕು ಮತ್ತು ಅಂತಹ ಸಮುದಾಯಕ್ಕೆ ಒಂದು ಯೋಜನೆ ತಯಾರಿಸುವಷ್ಟು ಸ್ಪಷ್ಟತೆ ಒದಗಿರಬೇಕು. ಆದರೆ ಇಂತಹ ಯಾವ ಅರಿವೂ ಆಗ ದೊರೆತಿರಲಿಲ್ಲ.

ಜಾತಿ: ಚಲನೆಯ ದಿಕ್ಕು

ಜಾತಿಯನ್ನು ಜನಗಣತಿಯಲ್ಲಿ ಸೇರಿಸುವ ಪರವಾಗಿ ಮಾಡುವ ವಾದದ ಪ್ರಮುಖ ಅಂಶ ಅದು ನಿರ್ದಿಷ್ಟ ಸಾಮಾಜಿಕ ಗುಂಪುಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ ಎನ್ನುವುದು. ಆದರೆ ಅಂಥ ಸಾಮಾಜಿಕ ಸಮುದಾಯಗಳನ್ನು ಜಾತಿ ಆಧಾರದ ಮೇಲೆ ಅರಿತುಕೊಳ್ಳಲು ಇಂದು ಸಾಧ್ಯವೆ? ಇಂತಹ ಜಾತಿಬಂಧವಿಲ್ಲದ ದಲಿತರನ್ನು ಮತ್ತು ಬುಡಕಟ್ಟುಗಳನ್ನು ಇತರೆ ಪಂಗಡಗಳ ಗುಂಪಿಗೆ ಸೇರಿಸುವ ದೊಡ್ಡ ಗೊಂದಲವನ್ನು ಸೃಷ್ಟಿಸಿದೆ ಹಾಗೂ ಇದು ಜಾತಿಯ ಚಾಲಕ ಶಕ್ತಿಯ ಬಗೆಗೆ ಅವರಿಗಿರುವ ಅಜ್ಞಾನವನ್ನು ಸೂಚಿಸುತ್ತದೆ. ನೆಹರೂ ಮಾದರಿ ಅಭಿವೃದ್ಧಿಯು ಗ್ರಾಮೀಣ ಭಾಗಗಳಲ್ಲಿ ಭೂ ಸುಧಾರಣೆ ಮತ್ತು ಹಸಿರು ಕ್ರಾಂತಿಯ ಮೂಲಕ ತಂದ ಬದಲಾವಣೆಗಳು ಈ ಮೊದಲು ಕಂಡರಿಯದ ಸ್ಥಿತ್ಯಂತರವನ್ನು ಜಾತಿ ರಚನೆಯಲ್ಲಿ ತಂದಿದೆ ಎನ್ನಬಹುದು. ಹಳ್ಳಿಗಳಿಂದ ಮೇಲ್ಜಾತಿಗಳ ಭೂಮಾಲೀಕರು ವಲಸೆ ಹೋಗಿದ್ದಾರೆ, ಸಾಂಪ್ರದಾಯಿಕವಾಗಿ ಒಕ್ಕಲುತನವನ್ನೇ ನಂಬಿಕೊಂಡು ಬಂದ ಜನಸಂಖ್ಯೆಯ ದೃಷ್ಟಿಯಿಂದ ಪ್ರಬಲವಾಗಿರುವ ಶೂದ್ರ ಜಾತಿಗಳು ಸಂಘಟಿತವಾಗಿ ರಾಜಕೀಯ ಶಕ್ತಿಯಾಗಿ ಹೊಮ್ಮಿವೆ ಹಾಗೂ ಅವು ಇಡೀ ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಚಿತ್ರಣವನ್ನೇ ಬದಲಿಸಿಬಿಟ್ಟಿವೆ. ವೈರುಧ್ಯವೆಂದರೆ `ಹಿಂದುಳಿದವು ಎಂಬ ಹಣೆಪಟ್ಟಿ ಹಚ್ಚಿಕೊಂಡ ಈ ಜಾತಿಗಳು, ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳನ್ನು ಪೂರ್ತಿ ನಿಯಂತ್ರಣಕ್ಕೆ ತೆಗೆದುಕೊಂಡಿವೆ, ರಾಜಕೀಯದಲ್ಲಿ ಮೇಲುಗೈ ಸಾಧಿಸಿವೆ, ಮತ್ತು ದೇಶದ ಆರ್ಥಿಕತೆಯಲ್ಲೂ ಗಮನಾರ್ಹ ಪಾಲು ಪಡೆದಿವೆ. ಇಂಥ ಬೆಳವಣಿಗೆಗಳಿಂದಲೇ ಈ ಜಾತಿಗಳಿಗೂ ಮತ್ತು ದ್ವಿಜರಿಗೂ ಮೊದಲಿದ್ದ ಪಾರಂಪರಿಕ ಅಂತರ ಈಗ ಉಳಿದಿಲ್ಲ. ಈ ಬಗೆಯ ಜಾತಿ ಚಲನಶೀಲತೆಯು ಜಾತಿಗಳನ್ನು ದಲಿತರು ಮತ್ತು ದಲಿತೇತರರು ಎಂಬ ವಿಭಾಗಕ್ಕಷ್ಟೇ ಸೀಮಿತಗೊಳಿಸಿದೆ. ಹಿಂದುಳಿದ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಬಹುಪಾಲು ಜನರೂ ಕೂಡಾ ದಲಿತರು ಮತ್ತು ಬುಡಕಟ್ಟುಗಳಷ್ಟೇ ಹಿಂದುಳಿದಿರಬಹುದಾದರೂ ಜಾತಿಯೆಂಬ ಸಾಂಪ್ರದಾಯಿಕ ಚೌಕಟ್ಟು ಅವರನ್ನು ತಮ್ಮ ಜಾತಿಯ ಬಲಶಾಲಿಗಳೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುವುದೇ ಹೊರತು ದಲಿತರು ಮತ್ತು ಬುಡಕಟ್ಟುಗಳೊಂದಿಗೆ ಗುರುತಿಸಿಕೊಳ್ಳುವುದನ್ನು ತಡೆಯುತ್ತದೆ.

ಸ್ವಯಂಘೋಷಿತ ಪ್ರಗತಿಪರ ಬುದ್ಧಿಜೀವಿಗಳು ಶೋಷಿತರ ಪರವಾಗಿ ವಕಾಲತ್ತು ವಹಿಸುವಾಗಲೆಲ್ಲ ಸ್ವಾತಂತ್ರಾನಂತರದ ಈ ಜಾತಿಚಲನೆಯ ವಿಷಯವನ್ನು ಸಂಪೂರ್ಣ ನಿರ್ಲಕ್ಷಿಸುತ್ತಾರೆ. ಪರಿಶಿಷ್ಟ ಜಾತಿ/ಪಂಗಡದವರಿಗೆ ನೀಡಲಾದ ಸಾಮಾಜಿಕ ನ್ಯಾಯದ ತತ್ವವನ್ನು ಹಿಂದುಳಿದ ಜಾತಿಗಳಿಗೂ ಅನ್ವಯಿಸಿ ಅವರು ಸಂಪೂರ್ಣ ತಪ್ಪು ಮಾಡುತ್ತಾರೆ. ಪರಿಶಿಷ್ಟ ಜಾತಿ/ ಪಂಗಡಗಳಿಗೆ ಸಾಮಾಜಿಕ ಮೀಸಲಾತಿಯ ಮೂಲಕ ವಿಶೇಷ ಸವಲತ್ತು ನೀಡಿದ ಮೂಲ ಉದ್ದೇಶವೇ ಪರಿಶಿಷ್ಟ ಜಾತಿಗಳು ಅಸ್ಪೃಶ್ಯತೆ ಹಾಗೂ ಬುಡಕಟ್ಟು ಜನಾಂಗಗಳು ಪ್ರತ್ಯೇಕತೆಗೆ ಒಳಗಾಗಿರುವರೆಂಬ ಕಾರಣಕ್ಕೆ. ಇದನ್ನೇ ಶೂದ್ರ ಜಾತಿಗಳಿಗೂ ಅನ್ವಯಿಸಲಾಗದು. ಹಾಗೆ ಮಾಡಿದಲ್ಲಿ ಅದು ಮೀಸಲಾತಿಯ ಮೂಲ ಉದ್ದೇಶವನ್ನೇ ಕೆಡಿಸಿದಂತಾಗುತ್ತದೆ ಹಾಗೂ ಅವರನ್ನು ಶೋಷಿಸಿದ ಶಕ್ತಿಗಳನ್ನೇ ಕಡೆಗಣಿಸಿದಂತಾಗುತ್ತದೆ. ಹಿಂದುಳಿದ ಮತ್ತು ಇತರೆ ಹಿಂದುಳಿದ ವರ್ಗಗಳ ಹಿಂದುಳಿದಿರುವಿಕೆಯು ದೇಶದ ಸೆಕ್ಯುಲರ್ ಅರ್ಥದಲ್ಲಿ ಹಿಂದುಳಿದಿರುವಿಕೆಯ ಒಂದು ಭಾಗವಾಗಿದೆ ಹಾಗೂ ಅದು ಬಡತನ, ಆರೋಗ್ಯ ಹಾಗೂ ಇಂತಹ ನಾಚಿಕೆಪಡುವಂತಹ ಇನ್ನೂ ಹಲವು ಸೂಚ್ಯಂಕಗಳ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ವರ್ಗಗಳಿಗೆ ಅವಕಾಶಗಳನ್ನು ನ್ಯಾಯಯುತವಾಗಿ, ಸಮಾನವಾಗಿ ಹಂಚುವ ಜವಾಬ್ದಾರಿ ಪ್ರಭುತ್ವದ್ದಾಗಿದೆ. ಆದರೆ ಇದನ್ನು ಜಾತಿ ಆಧಾರದ ಮೇಲೆ ನಡೆಸಬೇಕೆನ್ನುವುದು ಆಳುವ ವರ್ಗದ ಅನುಕೂಲಕ್ಕಾಗಿ ಮಾತ್ರ ಆಗುತ್ತದೆ. ಅವರು ಜನರ ಗಮನವನ್ನು ನವಉದಾರೀಕರಣದ ಯೋಜನೆಗಳಿಂದ ಬೇರೆಡೆ ಸೆಳೆಯುವ ದುಷ್ಟ ಉದ್ದೇಶಕ್ಕಾಗಿಯೇ ಜಾತಿ ವಿಷಯವನ್ನು ಬಳಸಿಕೊಳ್ಳುತ್ತಾರೆ. ಜನರ ಬವಣೆಗಳ ಮೂಲಕಾರಣ ಮಾತ್ರ ಹಾಗೇ ಉಳಿಯುತ್ತದೆ.

ದೋಷಪೂರ್ಣ ವಾದಸರಣಿಗಳು

ಈ ತೆರನ ವಾದಗಳಿಗೆ ಉತ್ತಮ ಉದಾಹರಣೆಯೆಂದರೆ `ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಸತೀಶ್ ದೇಶಪಾಂಡೆ ಮತ್ತು ಮೇರಿ ಜಾನ್* ಅವರು ವಿರೋಧಿಗಳ ಅಭಿಪ್ರಾಯಗಳನ್ನು `ಕಾರ್ಯನಿರ್ವಹಣೆಯ ತೊಡಕುಗಳು, `ರಾಜಕೀಯ ಆಕ್ಷೇಪಣೆಗಳು ಎಂಬ ಹೆಸರಿನಡಿ ತಮ್ಮದೇ ರೀತಿಯಲ್ಲಿ ಮಂಡಿಸಿರುವ ವಿಶ್ಲೇಷಣೆ. ಜಾತಿ ಜನಗಣತಿಯಿಂದ ಸಮಾಜದ ಒಂದು ಸಾಮೂಹಿಕ ಚಿತ್ರಣ ದೊರಕಬಹುದಾದಲ್ಲಿ ಕಾರ್ಯನಿರ್ವಹಣೆಯ ತೊಡಕುಗಳನ್ನು ಮೀರುವುದು ಕಷ್ಟವಲ್ಲ. ಆದರೆ ಪ್ರಶ್ನೆಯೆಂದರೆ ಇವೆಲ್ಲ ಯಾವ ಲಾಭಕ್ಕಾಗಿ? ಜಾತಿ ಅಸ್ಮಿತೆಯ ಬಹುರೂಪತೆ ಹಾಗೂ ಅನಿರ್ದಿಷ್ಟತೆಯನ್ನು ಗುರುತಿಸಿಯೂ ಅವರು ಜಾತಿಗಳಿಗೆ ಬೇರೆ ಸಮಾನಾರ್ಥಕ ಪದಗಳನ್ನು ಹುಡುಕಿ, ಸೂಚಿಸಿ, ನಂತರ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಅವನ್ನು ಕ್ರೋಢೀಕರಿಸಬಹುದೆಂದು ಅಡ್ಡಾದಿಡ್ಡಿ ಸಲಹೆಗಳನ್ನು ಕೊಟ್ಟಿದ್ದಾರೆ. ಹೀಗೆ ಹೇಳುತ್ತ ಕಾರ್ಯನಿರ್ವಹಣೆಯ ತೊಡಕುಗಳನ್ನು ತೃಣಗೊಳಿಸಿ ವಿಲಕ್ಷಣ ಸಲಹೆಗಳನ್ನಿತ್ತ ಹಾಗೆ ತೋರುತ್ತದೆ. ಮೂಲ ಸಮಸ್ಯೆಯು ಜಾತಿಯ ಲಕ್ಷಣಗಳ ಬಗೆಗೇ ಆಗಿದೆ. ಒಬ್ಬ ಸಮಾಜಶಾಸ್ತ್ರಜ್ಞ ಹೇಳಿರುವಂತೆ ಜಾತಿಗೆ ಖಚಿತವಾದ ನಿರೂಪಣೆ ಇಲ್ಲ. ಅದು ಉದ್ಯೋಗ, ವಯಸ್ಸು, ಲಿಂಗ, ಶಿಕ್ಷಣ ಇತ್ಯಾದಿಗಳನ್ನು ಅಳೆದಂತೆ ಅಳೆಯಬಲ್ಲ ಮೂರ್ತ ವಸ್ತುನಿಷ್ಟ ವಿವರವಲ್ಲ. ಅದು ಕಾಲದಿಂದ ಕಾಲಕ್ಕೆ ನಮ್ಮ ಪರಿಭಾವನೆಯಲ್ಲಿ ಬದಲಾಗುತ್ತ ಹೋಗುವ ವ್ಯಕ್ತಿನಿಷ್ಠ ಅಂಶ. ಜಾತಿಯ ಒಂದು ಅಪಾಯಕಾರೀ ಗುಣವನ್ನು ಮೇಲೆ ಹೇಳಿದ ಲೇಖಕರು ನಿರ್ಲಕ್ಷಿಸಿದ್ದಾರೆ ಜಾತಿಯೆಂಬುದೇ ಮೇಲುಕೀಳಿನ ಆಧಾರದ ಮೇಲೆ ನಿಂತ ಒಡೆಯುವ ಗುಣವಾಗಿದೆ. ಇಷ್ಟೆಲ್ಲ ಋಣಾತ್ಮಕ ಅಂಶಗಳಿದ್ದೂ ಇನ್ನೂ ಯಾರಾದರೂ ಜಾತಿ ವಿವರ ಬೇಕು ಎಂದು ಹೇಳಿದರೆ ಅದರ ಉದ್ದೇಶ ಏನೆಂದು ಅರ್ಥವಾಗುವುದಿಲ್ಲ.

ಅವರು ಎತ್ತಿ ಉತ್ತರಿಸಿರುವ ರಾಜಕೀಯ ಆಕ್ಷೇಪಣೆಯ ಮತ್ತೊಂದು ಪ್ರಶ್ನೆ ಗಣತಿ ಮಾಡುವುದರಿಂದ ಒಡೆದು ಆಳಿದಂತೆ ಆಗುವುದಿಲ್ಲವೇ ಎಂಬುದು. ಅದಕ್ಕೆ ಅವರು `ತಳಸಮುದಾಯದವರು ಅಧಿಕಾರ ಹಂಚಿಕೆಯ ಕುರಿತು ಪ್ರಶ್ನಿಸಿದಾಗಲೆಲ್ಲ ಅದನ್ನು ಮೇಲ್ಜಾತಿಗಳು ಒಡೆದು ಆಳುವ ನೀತಿಯೆಂದು ಆಪಾದಿಸುತ್ತವೆ ಎಂದಿದ್ದಾರೆ. ಇಲ್ಲಿನ ಮೂಲ ಪ್ರಶ್ನೆ ಏನೆಂದರೆ ಜಾತಿಯು ಅಧಿಕಾರ, ಅವಕಾಶ ಅಥವಾ ಮತ್ತಾವುದೇ ಸಂಪನ್ಮೂಲಗಳನ್ನು ಸಮಾನವಾಗಿ ಹಂಚಲಿಕ್ಕೆ ಒಂದು ಅರ್ಹ ಘಟಕವಾಗಿದೆಯೇ ಎಂಬುದು. ಸಿದ್ಧ ಮಾದರಿಗಳನ್ನು ಬಿಟ್ಟು ಒಂದು ಕ್ಷಣ ಇದರ ಬಗೆಗೆ ಚಿಂತಿಸಬೇಕಾಗುತ್ತದೆ. ಅದು ಇಚ್ಛಾಪೂರ್ವಕವಾಗಿಯೋ ಅಥವಾ ವಸಾಹತುಶಾಹಿ ಕಾಲದಂತೆ ರೂಪಿಸಲ್ಪಟ್ಟಿದ್ದೋ, ಅಂತೂ ಭಾರತದ ಇಂದಿನ ರಾಜಕೀಯ ವಾಸ್ತವವನ್ನು ಸರಳವಾಗಿ ಹೀಗೆ ವರ್ಣಿಸಬಹುದು; ಇಲ್ಲಿರುವುದು ಆಳುವ ವರ್ಗ ಮತ್ತು ಆಳಿಸಿಕೊಳ್ಳುವ ಜಾತಿಗಳು. ಜಾತಿ ಜನಗಣತಿಯನ್ನು ಸಮರ್ಥಿಸಿಕೊಳ್ಳುವ ಭರದ ತೆರೆಮರೆಯ ಗುದ್ದಾಟದಲ್ಲಿ ಸ್ವಾತಂತ್ರ ಭಾರತದ ಅತಿ ದೊಡ್ಡ ಪ್ರಮಾದವೆಂದರೆ ಇಲ್ಲಿಯತನಕ ಜಾತಿ ಜನಗಣತಿಯಾಗದೇ ಇರುವುದು ಎಂದೂ ಅವರು ಹೇಳಿಬಿಡುತ್ತಾರೆ. ನಿಜವಾಗಿಯೂ ಪರಿಸ್ಥಿತಿ ಅದುವೇ ಆಗಿದ್ದಲ್ಲಿ ಹಿಂದುಳಿದ ಜಾತಿಗಳು ಇಂದು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ರಂಗಗಳಲ್ಲಿ ಇಷ್ಟು ಮುನ್ನೆಲೆಗೆ ಬರಲು ಹೇಗೆ ಸಾಧ್ಯವಾಗುತ್ತಿತ್ತು ಎಂಬುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ವಸಾಹತುಶಾಹಿ ಆಳ್ವಿಕೆಗಾರರ ರೀತಿ ನೆಹ್ರೂ ಮತ್ತು ಗಾಂಧಿಯಂತಹ ಕಾಂಗ್ರೆಸ್ ಮುಖಂಡರ ನಾಯಕತ್ವದಲ್ಲಿ ಜಾತಿ ಗಣತಿ ಬೇಡವೆಂದು ಏಕೆ ನಿರ್ಧರಿಸಿದ್ದರೆಂದರೆ ಅದು ಕ್ಷೇತ್ರ-ಮತದಾರರನ್ನು ಅನಿಶ್ಚಿತವಾಗಿ ಒಡೆದು ಹಾಕುವುದೆಂಬ ಅಳುಕು ಅವರಿಗೆ ಇತ್ತು. ಇದೆಲ್ಲದರ ಹೊರತಾಗಿಯೂ ಪ್ರಭುತ್ವವು ಜಾತಿ ಕುರುಡಾಗಿರಲಿಲ್ಲ, ಇದಕ್ಕೆ ಯಾವ ದಲಿತ ಬೇಕಾದರೂ ಸಾಕ್ಷ್ಯ ನುಡಿಯಬಲ್ಲ. ಆದರೆ ಅದು ಹಿಂದುಳಿದ ಜಾತಿಗಳ ಬೆಳವಣಿಗೆಗೇನೂ ತೊಡಕಾಗಲಿಲ್ಲ. ಒಂದು ಜಾತಿ ಸಮುದಾಯವಾಗಿ, ಹೊಂದಾಣಿಕೆಯ ಸಮ್ಮಿಶ್ರ ಸರ್ಕಾರಗಳು, ಮಂಡಲ್ ಮೀಸಲಾತಿ, ಅಲ್ಲದೇ ಈಗ ಜಾತಿಜನಗಣತಿ ಬೇಕೆಂಬ ಬೇಡಿಕೆ ಇವೆಲ್ಲವೂ ಹಿಂದುಳಿದ ಜಾತಿಗಳು ಸಬಲರಾಗಿದ್ದನ್ನೇ ಸೂಚಿಸುತ್ತಿದೆ. ಅದೇ ವೇಳೆಗೆ ಅದು ಅವರದೇ ಸಮುದಾಯದ ದೊಡ್ಡ ಸಂಖ್ಯೆಯ ಜನರು ಶಕ್ತಿಹೀನರಾಗಿರುವುದನ್ನೂ ಸೂಚಿಸುತ್ತದೆ.

ಇಲ್ಲ, ಜಾತಿ ಜನಗಣತಿಯಿಂದ ಜನರಿಗೇನೂ ಲಾಭವಿಲ್ಲ. ಲಾಭ ಆಳುವ ವರ್ಗಕ್ಕೆ ಮಾತ್ರ.

*******

೧. ಶೇಖರ ಬಂದೋಪಾಧ್ಯಾಯ, ಕ್ಯಾಸ್ಟ್, ಪೊಲಿಟಿಕ್ಸ್ ಅಂಡ್ ದಿ ರಾಜ್: ಬೆಂಗಾಲ್ ೧೮೭೨ ೧೯೩೭( ಕಲ್ಕತ್ತಾ: ಕೆ.ಪಿ.ಬಾಗ್ಭಿ ಅಂಡ್ ಕಂಪನಿ) ೧೯೯೦:೨೯
೨. ನಿಕೊಲಸ್ ಬಿ. ಡರ್ಕ್ಸ್, ಕ್ಯಾಸ್ಟ್ಸ್ ಆಫ್ ದಿ ಮೈಂಡ್: ಕಲೊನಿಯಲಿಸ್ಮ್ ಅಂಡ್ ದಿ ಮೇಕಿಂಗ್ ಆಫ್ ಮಾಡರ್ನ್ ಇಂಡಿಯಾ (ನ್ಯೂಜೆರ್ಸಿ: ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್) ೨೦೦೧:೧೫
೩. ಎಸ್. ಕವಿರಾಜ್, `ದಿ ಇಮ್ಯಾಜಿನರಿ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾ, ಪಿ. ಚಟರ್ಜಿ ಮತ್ತು ಜಿ. ಪಾಂಡೆ (ಸಂ)ದಲ್ಲಿ `ಸಬಾಲ್ಟರ್ನ್ ಸ್ಟಡೀಸ್(ಡೆಲ್ಲಿ: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್) ೧೯೯೨
೪. ಬಿ.ಎಸ್. ಕೋಹ್ನ್, ಕಲೋನಿಯಲಿಸ್ಮ್ ಅಂಡ್ ಇಟ್ಸ್ ಫಾರ್ಮ್ಸ್ ಆಫ್ ನಾಲೆಜ್ (ಪ್ರಿನ್ಸ್‌ಟನ್: ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್)೧೯೯೬:೮
೫. ಎ. ಕೃಷ್ಣಕುಮಾರ್, `ಕ್ಯಾಸ್ಟ್ ಅಂಡ್ ದಿ ಸೆನ್ಸಸ್, ಫ್ರಂಟ್ ಲೈನ್ ೧೭ (೧೮) ೨.೧೫.೨೦೦೦
೬. ಜಿ. ಷಾ, `ಕ್ಯಾಸ್ಟ್ ಬೇಸ್ಡ್ ಸೆನ್ಸಸ್ ವಿಲ್ ಕಾಂಪೌಂಡ್ ಪಾಸ್ಟ್ ಬ್ಲಂಡರ್‍ಸ್, ಟೈಂಸ್ ಆಫ್ ಇಂಡಿಯಾ, ಮೇ ೨೨, ೧೯೯೮
೭. ಜಿ. ಷಾ, ಕ್ಯಾಸ್ಟ್ಸ್ ಅಂಡ್ ಡೆಮೋಕ್ರಾಟಿಕ್ ಪ್ರಾಕ್ಟೀಸ್ ಇನ್ ಇಂಡಿಯಾ, (ಲಂಡನ್: ಆಂಥೆಮ್ ಪ್ರೆಸ್) ೨೦೦೪.೨೭ ಮತ್ತು ಜಿ. ಷಾ, ಕ್ಯಾಸ್ಟ್ ಬೇಸ್ಡ್ ಸೆನ್ಸಸ್ ವಿಲ್ ಕಾಂಪೌಂಡ್ ಪಾಸ್ಟ್ ಬ್ಲಂಡರ್‍ಸ್, ಟೈಂಸ್ ಆಫ್ ಇಂಡಿಯಾ, ಮೇ ೨೨, ೧೯೯೮

ಅನಾಮಿಕ ಕವನಗಳು


೬.
ಎಷ್ಟು ಸಾರಿ ತೊಳೆದರೂ ಕನ್ನಡಿಯನ್ನು
ಮುಖದ ಕಲೆ ಅಳಿಸಲಾಗದು.
೭.
ಈ ಮನಸು ಕುದಿಕುದಿವ ಅವಿಶ್ರಾಂತ
ನಡುಗೆಯಲ್ಲಿದೆಯೆಂಬುದು ಸುಳ್ಳೇನಲ್ಲ
ನಿನ್ನ ಅಸಹನೆಗೆ ಕಾರಣವಿರಬಹುದು.
ಕಾದ ಬಂಡೆ ಜಂಗಮ ಕಾಲುಗಳನು
ಸ್ಥಾವರ ಮಾಡಗೊಡುವುದಿಲ್ಲ.
ಸುಡುವ ಕೆಂಡದ ಮೇಲೆ ಕಾಲೂರಿ
ನನ್ನೆಡೆಗೆ ಕೈಚಾಚುವ ಮನಸು ಹೇಳುತ್ತಿದೆ
ಪಾತರಗಿತ್ತಿ, ಹಾರಿ ಹೋಗುವ ಮುನ್ನ
ಸ್ಥಾವರಕ್ಕೂ ಜೀವತುಂಬು.
೮.
ಈ ಪ್ರೀತಿ
ಭೋರ್ಗರೆಯುವ ಜಲಧಾರೆಯಿಂದ
ಒಂದು ಹನಿಯನ್ನೂ
ಕೆನ್ನಾಲಿಗೆ ಚಾಚಿ ಪ್ರಜ್ವಲಿಸುವ ಬೆಂಕಿಯಿಂದ
ಒಂದು ಕಿಡಿಯನ್ನೂ
ನಿಗಿನಿಗಿ ಉರಿಯುವ ಸೂರ್ಯನಿಂದ
ಒಂದು ಕಣವನ್ನೂ
ಒಮ್ಮೆಲೆ ಬಂದೆರಗುವ ಬಿರುಗಾಳಿಯ ಧೂಳಿನಿಂದ
ಒಂದು ಅಣುವನ್ನೂ
ಘೀಳಿಡುವ ಆನೆ ಸದ್ದಿನಿಂದ
ಒಂದು ತುಣುಕನ್ನೂ
ಪಡೆದುಕೊಂಡಿದೆ.
ಕ್ಷಮಿಸು ಲೋಕವೆ..
ತಣ್ಣನೆಯ ಪ್ರೀತಿ ಸಾಧ್ಯವಿಲ್ಲ.
- ಅನಾಮಿಕ
೯.
ನೀನು
ಉಸಿರಾಡುವ ಗಾಳಿಯ ಹಾಗೆ
ಕಣ್ಣಿಗೆ ಕಾಣುವುದಿಲ್ಲ
ನಿನ್ನ ಇರುವಿಕೆ ಮಾತ್ರ
ಪ್ರತಿಕ್ಷಣ ಅರಿವಿಗೆ ಬರುತ್ತದೆ
ಏನು ಹೇಳಲಿ?
ಲೋಕ ಕಲಿಸಿದ ಪಾಠವಿದು
ಒಳಗಿರುವುದೆಲ್ಲ ಹೊರಗೆ ಕಾಣಿಸದು
೧೦.
ನೀನು ಬೆಂಕಿಯಿಟ್ಟೆ
ಎಂಬುದು ನೆಪವಷ್ಟೆ
ಸುಟ್ಟ ಮೇಲಷ್ಟೆ
ಗಂಧದ ಕಡ್ಡಿಗೆ ಸುವಾಸನೆ.
೧೧.
ದೀಪ ಹಚ್ಚಿಟ್ಟ ಮೇಲಾದರೂ
ಎದುರಿನ ಮುಖ ಕಾಣಲಿಲ್ಲವಾದರೆ
ದೋಷ ಎಲ್ಲಿಯದೆಂದು
ಈಗಲಾದರೂ ಹುಡುಕು
೧೨.
ನಿನ್ನದೇನು ಮಹಾ?
ಬೆಳಕಾದವನನ್ನು ಕತ್ತಲೆಗೆ ದೂಡುವುದು
ದಿನದ ಪರಂಪರೆ.
೧೩.
ಬಿದ್ದ ಮಳೆ ಒಂದೇ.
ಭೂಮಿಯ ಅನುಭವಕ್ಕೆ
ನೂರು ಬಣ್ಣ

೧೪.
ಯಾರ ನೋವನ್ನೂ
ಸಹಿಸಲಾಗುವುದಿಲ್ಲ ನನಗೆ
ನನ್ನದರ ಹೊರತು
ಎಲ್ಲರ ಸಾವಿಗೂ ಕಣ್ಣೀರಾಗುವೆ
ನನ್ನದರ ಹೊರತು
೧೫.
ಹೂ ಮುಡಿದಿರುವಾಗಿನ ಖದರು
ಜಗುಲಿ ಗುಡಿಸುವಾಗಿನ ನೆದರು
ಗೋರಿ ಮೇಲೆ ಹರಡುವಾಗಿನ ಸದರು
ಒಂದೇ ಅಲ್ಲ
ಎಲ್ಲೆಡೆ ಇಟ್ಟಿದ್ದು
ಹೂವೇ ಆದರೂ
ಹೂವಿಟ್ಟ ಮನಸು ಘನತೆ ಪಡೆಯುವುದು
ಹೂವು ನಲುಗುವುದು.
೧೬.
ಒಂದು ರಾತ್ರಿಯಾದರೂ
ನಾನು ಕತ್ತಲಲ್ಲಿ ಉಳಿಯದಂತೆ
ನೋಡಿಕೊಂಡೆ.
ಅದಕ್ಕೆಂದೇ
ಬೆಳಗಾಗುವ ಹೊತ್ತಿಗೆ
ನೀ ಹಚ್ಚಿಟ್ಟ ಹಣತೆಯಲ್ಲಿ
ಐಕ್ಯವಾದೆ.
೧೭.
ತುಟಿಗಳ ಬಿಸಿ ಆರುತ್ತ ನಡೆದಿದೆ
ಎದೆಯ ಕಾತರ ನಿಧಾನದ ಹಾದಿಯಲ್ಲಿದೆ
ಮಳೆಗಾಲದಲ್ಲೇ ಭೂಮಿಯ ಬಿಸಿ ಇಂಗತೊಡಗಿದೆ
ಇದು ನಿನ್ನ ಭಾಷೆಯಲ್ಲಿ ಉದಾಸೀನತೆ
ಲೋಕದ ಭಾಷೆಯಲ್ಲಿ ವೈರಾಗ್ಯ
ಎಲ್ಲ ಭಾಷೆಗಳೂ
ಬಣ್ಣದಲ್ಲಿ ಮುಳುಗೇಳುವ ಸಮಯವಿದು
ನನ್ನ ನಿನ್ನ ಎದೆಯ
ಎಚ್ಚರವಾಗಿಯೇ ಇದ್ದರೆ
ಬಿಸಿ ಆರುವ ತುಟಿಗಳಲ್ಲಿ
ಕಾತರ ಕಳೆದುಕೊಂಡ
ಎದೆಯ ಹಾದಿಯಲಿ
ಹಸಿ ಇಂಗುವ ಭೂಮಿಯಲಿ
ಸಾವು ಇಂಚಿಂಚಾಗಿ
ಬೆಳೆಯುವ ಸತ್ಯ ಗೊತ್ತಾಗುತ್ತಿತ್ತೇನೋ?
೧೮.
ನಿನ್ನ ಅರ್ಥ ಮಾಡಿಕೊಳ್ಳುವುದೊಂದು ಕಸರತ್ತು
ನಾನದನ್ನು ನಿಲ್ಲಿಸಿದೆ
ಆ ಗಳಿಗೆಯಿಂದ ನಿನ್ನ ಮೌನ
ಎದೆಗೆ ತಲುಪತೊಡಗಿತು.
ಮಾತು ಕೇಳತೊಡಗಿತು
ಕೆಲವು ಸಂಗತಿಗಳಿರುತ್ತವೆ
ಬಾಯಿ ಬಿಟ್ಟು ಹೇಳಿದರೆ
ಬರೀ ಸದ್ದಷ್ಟೇ ಕೇಳುತ್ತದೆ
ಎಲ್ಲೋ ಇರುವ ಹೂ
ಅರಳಿದ್ದು ಗೊತ್ತಾಗುವ ಹಾಗೆ
ದೇಹದ ಒಳಗುಟ್ಟುಗಳು ಹೀಗಿರುತ್ತವಲ್ಲ
ಮಾತಿಲ್ಲದೆಯೂ
ಹೃದಯಕ್ಕೆ ಮುಟ್ಟುತ್ತವೆ.
೧೯.
ನಿನ್ನ ನೋಡುವುದೆಂದರೆ
ಕಾತರದಲ್ಲಿ ಕುದಿಯುವುದಲ್ಲ
ನನ್ನ ಮುಖ ನಾನು ಕಾಣುವುದು
೨೦.
ಲೋಕ ಅಂದುಕೊಳ್ಳಬಹುದೆಂದು
ನಾನು ಬದಲಾಗಲಾರೆ
ಈ ಬದುಕು
ಪ್ರೇಮದ ಆಟಕ್ಕಾಗಿಯೇ ಮೀಸಲಿದೆ
ಪ್ರೇಮವನ್ನು ಗೆಲ್ಲುತ್ತೇನೆ ಎಂದಲ್ಲ
ಈ ಆಟದಲ್ಲಿ ಸೋಲಾದರೂ ಚಿಂತೆಯಿಲ್ಲ
ಕೊನೆಗೊಮ್ಮೆ ದ್ವೇಷದ ಆಟವನ್ನು
ಆರಂಭಿಸುವುದು
ನನಗೆ ಬೇಡವೆನಿಸಿದೆ.

೨೧.ಅವನೆಂದನು

ನಿನ್ನನ್ನು ಪ್ರೀತಿಸಿದರೆ ಪ್ರೇಮಿಯಾಗುವೆ

ಲೋಕವನ್ನು ಪ್ರೀತಿಸಿದರೆ

ದೇವರಾಗುವೆ..

ಅವಳೆಂದಳು

ನನ್ನನ್ನು ಪ್ರೀತಿಸಿ ನನಗೆ ದೇವರಾಗು

ನನಗೆ ದೇವರಾದವನು

ಲೋಕಕ್ಕೂ ದೇವರಾಗುವನು

ನನ್ನನ್ನು ಪ್ರೀತಿಸದವನು

ಲೋಕವನ್ನು ಪ್ರೀತಿಸುತ್ತಾನೆಂದರೆ

ಹೇಗೆ ನಂಬುವುದು?೨೨.ನನ್ನಂತೆ ನಿನ್ನಂತೆ

ಲೋಕದಲ್ಲಿ ಎಲ್ಲರೂ

ಪ್ರೀತಿಯನ್ನು ಬೇಡುತ್ತ ಹೊರಟವರೆ

ಕೊಡುವವರು ಇಲ್ಲದಾಗ

ಬೇಡುವವರ ಸಂಖ್ಯೆ

ದೊಡ್ಡದಾಗುವುದು

ಕೊಡದೇ ಹೋದ ಅರಿವು

ಪಡಕೊಂಡ ಸಮುದ್ರದ ನೀರನ್ನೂ

ಬರಿದಾಗಿಸುವುದು

ಬೇಡುವ ಬದಲು ಕೊಡುವುದನ್ನೇಕೆ

ರೂಢಿಸಿಕೊಳ್ಳಲಿಲ್ಲ?

ಹಾಗೆ ಮಾಡಿದ್ದರೆ

ಸಮುದ್ರದಲ್ಲಿದ್ದೂ

ಬಾಯಾರಿಕೆಯಿಂದ ಸಾಯುವ

ಘೋರತೆಯಿಂದ

ತಪ್ಪಿಸಿಕೊಳ್ಳಬಹುದಿತ್ತೇನೋ?೨೩.

ಬಣ್ಣದ ಚಿಟ್ಟೆ

ಕನಸಿನ ರೆಪ್ಪೆ ಪಿಳುಕಿಸುವುದು

ಹಗಲಿನಲ್ಲಲ್ಲ೨೪.ನೀನು ಪ್ರೀತಿಸದೇ ಇದ್ದರೆ ಏನಾಗುತ್ತಿತ್ತು?

ಏನಿಲ್ಲ

ಎಲ್ಲವೂ ಹಾಗೆಯೇ ಇರುತ್ತಿತ್ತು..

ನಾನೂ..
ನನ್ನೊಳಗಿನ ರಾಕ್ಷಸ ವಿಲಾಸವೂ..


೨೫.

ಸಂತನಾದರೇನು?

ಅವಮಾನದ ಕಟಕಟೆಯನ್ನೇರಿದಾಗ

ಅನುಮಾನ

ಎಲ್ಲ ದಿಕ್ಕಿನಿಂದಲೂ

ಎದ್ದು ಬರುವುದು

ಕುರುಡನ ಕೈಯಲ್ಲಿಯ ಕಲ್ಲು

ಯಾವ ದಿಕ್ಕಿನತ್ತ

ತಿರುಗುವುದೆಂದು

ಯಾರಿಗೂ ಗೊತ್ತಾಗುವುದಿಲ್ಲ

ಸ್ವತಃ ಕುರುಡನಿಗೂ ಸಹಾ..೨೬.

ನಿನ್ನ ಪ್ರೀತಿಯಲ್ಲಿ

ನಾನು ಸುಟ್ಟುಕೊಂಡ ಮೇಲಷ್ಟೇ

ನಿನ್ನ ಪ್ರೀತಿಸುವುದು

ರುಜುವಾತಾಗುವುದು

ಕಳವಳಕ್ಕೆ ಕಾರಣಗಳಿಲ್ಲ

ಸುಡದ ಸುರಕ್ಷಿತ ದಾರಿಯಲ್ಲಿ
ಪ್ರೇಮ ದೊರಕದು


-ಅನಾಮಿಕ


ವಾಮನ ಪಾದ


ಜನವರಿ ೧೬ರ `ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಮುಖಪುಟ ಲೇಖನಗಳನ್ನು ಓದಿ ಈ ಪ್ರತಿಕ್ರಿಯೆ.
`ಹರಕೆ ಹರಾಜು: ಯಾವುದು ಸಹಜ? ಯಾವುದು ಅವಮಾನ? ಎಂಬ ಲೇಖನದಲ್ಲಿ ಅವಮಾನ ಎಂಬ ಪದವನ್ನು ವಿಚಿತ್ರ ತರ್ಕಗಳಿಂದ ಪುನರ್‌ವ್ಯಾಖ್ಯಾನಿಸಲಾಗಿದೆ. `ಸ್ಥಳದ ದೃಷ್ಟಿಯಿಂದಾಗಲೀ, ಪರಿಣಾಮದ ವ್ಯಾಪ್ತಿಯಿಂದಾಗಲೀ, ಹಾಗೂ ಒಳಗೊಂಡ ಹಣದ ಪ್ರಮಾಣದಿಂದಾಗಲೀ ಅಷ್ಟೇನೂ ಮುಖ್ಯವಲ್ಲದ ಯಾವುದೋ ಒಂದು ಸಣ್ಣ ಊರಿನ, ಒಂದು ಪುಟ್ಟ ದೇವಸ್ಥಾನದಲ್ಲಿ, ಒಂದಷ್ಟು ಜನ ನಡೆಸುವ ಮಡೆಸ್ನಾನದ ಬಗ್ಗೆ ಎಷ್ಟೆಲ್ಲ ಜನ ಪ್ರತಿಕ್ರಿಯಿಸುತ್ತಿರುವಾಗ, ಕೋಟಿಗಟ್ಟಲೆ ರೂಪಾಯಿಗೆ ಹರಾಜಾಗುತ್ತ ಮಾನಮರ್ಯಾದೆ ಕಳೆದುಕೊಂಡು ಅವಮಾನಿತರಾಗುತ್ತಿರುವ ಕ್ರಿಕೆಟಿಗರ ಬಗ್ಗೆ ಯಾರೂ ಸೊಲ್ಲೇ ಎತ್ತುತ್ತಿಲ್ಲವಲ್ಲ ಎಂಬುದು ಅವರ ವೇದನೆ.
ಕ್ರಿಕೆಟ್ ಎಂಬುದು ಆಟವಲ್ಲ, ಧರ್ಮವಾಗಿರುವ ಈ ದೇಶದಲ್ಲಿ ಆಟಗಾರರಿಗೆ ಯಾವುದು ಮುಖ್ಯ? ದೇಶವೋ? ದೇಶಕ್ಕಾಗಿ ಆಡುವುದೋ? ದೇಶದ ಜನರ ಸಂಕಟ, ನೋವು, ಹಗರಣಗಳೋ? ಫಿಟ್ನೆಸ್ ಕಾಪಾಡಿಕೊಂಡು ಅದನ್ನು ನಗದೀಕರಿಸಿಕೊಳ್ಳುವುದೋ? ಅಭಿಮಾನಿಗಳ ಆರಾಧನೆಯೇ ಬಂಡವಾಳವಾದ ಜಾಹೀರಾತುಗಳೋ? ಅತಿ ಶ್ರೀಮಂತ ಬಿಸಿಸಿಐ ಸಂಸ್ಥೆ, ಹಾಗೂ ಅದರ ಆಟಗಾರರನ್ನು ವರ್ತಮಾನದ ಯಾವುದೂ ಬಾಧಿಸುವಂತೆ ಕಾಣದು. ಇಂಥವರ ಹೆಸರಲ್ಲಿ ಜನ ಗುಡಿ, ಸಂಘ ಕಟ್ಟಿ, ಹೋಮ ಮಾಡಿ ಭಕ್ತಿ ಪ್ರದರ್ಶಿಸುತ್ತಾರೆ. ಟ್ವೆಂಟಿ ಟ್ವೆಂಟಿ ಎಂಬ ಹೊಚ್ಚಹೊಸ ವಿಕೃತ ಜೂಜಿನ ಹಿನ್ನೆಲೆಯಲ್ಲಿ ಈ ಅಭಿಮಾನಕ್ಕೆ ಆಟಗಾರರು ಅರ್ಹರೇ? ಈ ವಿಷಯದ ಬಗ್ಗೆ ನಿಜಕ್ಕೂ ಚರ್ಚೆಯಾಗಬಹುದಿತ್ತು.
ಆದರೆ ಆ ಬರಹದ ಮುಖ್ಯ ಕಾಳಜಿ ಆಟಗಾರರ ಹರಾಜಿನ ನೈತಿಕ ಪ್ರಶ್ನೆಯಲ್ಲ. ಬದಲಿಗೆ ನಂಬಿಕೆಯ ಜಗತ್ತಿನೊಳಗೆ ವಿಚಾರವಾದಿಗಳ `ಅಕ್ರಮ ಪ್ರವೇಶ ನಿಷೇಧಿಸುವುದೇ ಆಗಿದೆ. ಹಾಗೆಯೇ ಕ್ರಿಕೆಟಿಗರ ಹರಾಜನ್ನು ರೋಮಿನ ಗ್ಲಾಡಿಯೇಟರುಗಳ ಹರಾಜಿಗೆ, ಅವರ ಅವಮಾನವನ್ನು ಮಡೆಸ್ನಾನಕ್ಕೆ ಹೋಲಿಸಲಾಗಿದೆ! ಇದೆಂಥ ಹೋಲಿಕೆ? ಒಂದೆಡೆ ಅವಮಾನಿತನೇ ದಮನಿತನಾಗಿದ್ದರೆ, ಮತ್ತೊಂದೆಡೆ ಅವಮಾನಿತ ಕ್ರಿಕೆಟಿಗ ಐಶ್ವರ್ಯತಾರೆಯಾಗಿ ಹೊಮ್ಮುವ ಐಪಿಎಲ್ ಎಂಬ ಪ್ರಮೇಯವಿದೆ! ಹರಾಜು ಎಂಬ ಪದ ಸಾಮಾನ್ಯವಾಗಿರುವುದೊಂದನ್ನು ಬಿಟ್ಟರೆ ಎಲ್ಲಿಯ ಗ್ಲಾಡಿಯೇಟರ್? ಎಲ್ಲಿಯ ಕ್ರಿಕೆಟಿಗರು? ತಮ್ಮ ಯಜಮಾನನ ಜೂಜು-ಅಹಮಿಕೆಯ ತೆವಲಿಗೆ ಮೈ ಬೆಳೆಸಿ, ಹುಸಿ ಕದನದಲ್ಲಿ ರಕ್ತ ಸುರಿಸುತ್ತಿದ್ದ ಗುಲಾಮ ಗ್ಲಾಡಿಯೇಟರುಗಳ ಅವಮಾನ, ನೋವನ್ನು; ಕೋಟಿಗಟ್ಟಲೆಗೆ ಬಿಕರಿಯಾದ ಬಗ್ಗೆ ಸಂಭ್ರಮಾಶ್ಚರ್ಯ ವ್ಯಕ್ತಪಡಿಸುವ ಆಟಗಾರನಿಗೆ ಹೋಲಿಸಬಹುದೆ? ತನ್ನ ವೈಯುಕ್ತಿಕ ಕಷ್ಟಗಳೆದುರಿಗೆ ಉಂಡೆಲೆ ಮೇಲೆ ಉರುಳಲೂ ಅಸಹ್ಯಪಡದ ಭಕ್ತರ ಮನೋವೇದನೆಯನ್ನು, ಕೋಟಿಗಟ್ಟಲೇ ಹಣ ಪಡೆಯಬೇಕಾದ ಆಟಗಾರರ `ಅವಮಾನ(?)ಕ್ಕೆ ಹೋಲಿಸಬಹುದೆ? ಹೋಲಿಕೆ ಸಮಪಾತಳಿಯಲ್ಲಿ ನಡೆಯಬೇಕು. ಇವೆರೆಡನ್ನೂ ಒಂದೇ ನೆಲೆಗೆ ತಂದು ವಿಶ್ಲೇಷಿಸಲು ಇರುವ ಪ್ರಮಾಣ ಯಾವುದು?
ವೈಯುಕ್ತಿಕ ತಲ್ಲಣಗಳು ಭಕ್ತನಿಗೂ, ನಾಸ್ತಿಕನಿಗೂ, ಬಡವನಿಗೂ, ಸಿರಿವಂತನಿಗೂ ಇವೆ. ಹೊರಬರುವ ದಾರಿಗಳನ್ನು ಅವರವರೇ ಕಂಡುಕೊಳ್ಳಬೇಕು. `ಅವರಿಷ್ಟ ಬಂದಂತೆ ಅವರು ಮಾಡಿಕೊಳ್ಳುತ್ತಾರೆ ಎಂಬ ಮಾನವ ಹಕ್ಕು-ಸ್ವಾತಂತ್ರದ ಪ್ರತಿಪಾದನೆಯ ಗಡಿಯನ್ನು ಎಲ್ಲಿಯತನಕ ವಿಸ್ತರಿಸಬಹುದು? ನಂಬಿಕೆ ಆಚರಣೆಗಳ ಮೌನ ಜಗತ್ತಿನಲ್ಲಿ ನಡುವಣ ಗೋಡೆ ಇದ್ದರೂ ತಿಳಿಯುವುದಿಲ್ಲ. ಬಿದ್ದರೂ ಸದ್ದಾಗುವುದಿಲ್ಲ. ಇಂತಹ ಸೂಕ್ಷ್ಮ ವಿಷಯದ ಕುರಿತು ಗಟ್ಟಿ ಮಾತು, ಉಪದೇಶ ಅಪೇಕ್ಷಾರ್ಹವಲ್ಲ. ಗೊತ್ತು. ಆದರೆ `ಚಕ್ರವರ್ತಿ ತೊಟ್ಟ ಬಟ್ಟೆ ಹೇಗಿದೆಯೆಂಬ ನಗ್ನ ಸತ್ಯ ಹೇಳಲು ಮಗುವಾದರೂ ಬರಲೇಬೇಕಲ್ಲವೆ? ಹೀಗೆ ಸತ್ಯ ಹೇಳಹೊರಟವರನ್ನೆ ಕಲಿತ ಪಂಡಿತರು ಮಾನವ ಹಕ್ಕು, ಸ್ವಾತಂತ್ರದ ಹೆಸರಿನಲ್ಲಿ ಕತ್ತಿ ಹಿರಿದು ಹತ್ತಿಕ್ಕ ಹೊರಡುವುದನ್ನು ನೋಡಿದರೆ, ಕವಿಮಾತಿನ ಸತ್ಯ ಅರಿವಾಗುತ್ತದೆ. `ಆವಾವ ಆಭರಣಗಳಂ ತೊಟ್ಟೊಡೆ ತೊಗಲ್ ಪೊನ್ನಾಗುವುದೇ?
ಮೇಲಿನ ಕುರ್ಚಿಯಲ್ಲಿ ಕುಳಿತವ, ಅವಮಾನಿತ, ವೀಕ್ಷಕ ಎಂಬ ಚಿತ್ರಣದೊಂದಿಗೆ ಆ ಬರಹದಲ್ಲಿ ಉಲ್ಲೇಖಿಸಿರುವ `ರೂಪಕ ಒಂದಿದೆ. ಆಹಾ ಎಂಥ ರೂಪಕ!! ಇನ್ನೊಂದು ರೂಪಕದ ಮೂಲಕವೇ ಇದಕ್ಕುತ್ತರಿಸಬೇಕು. ಮೊನ್ನೆ ಬೂದಾಳು ನಟರಾಜ್ ಹಾವೇರಿಯಲ್ಲಿ ಮಾತನಾಡುತ್ತಾ ಹೇಳಿದರು: `ಕ್ರಿಸ್ಟೋಫರ್ ಕೊಲಂಬಸ್ ಮೊದಲ ವಸಾಹತುಶಾಹಿ ಎನ್ನುತ್ತಾರೆ. ಆದರೆ ಮೊದಲ ವಸಾಹತುಶಾಹಿ ವಾಮನ. ಅವನು ತಲೆ ಮೇಲಿಟ್ಟು ತುಳಿದ ಕಾಲನ್ನು ಇನ್ನೂ ಆಚೆ ಸರಿಸಲಾಗಿಲ್ಲ. ವಾಮನ ಪಾದದ ಆಳಗಲ, ಶಕ್ತಿ, ಇರವುಗಳನ್ನು ತಿಳಿಸುವುದು ಇಂಥ ಬರಹಗಳೇ.
ಅವಮಾನದ ಮೂಲ ಇರುವುದು ಭೂತದಲ್ಲಿ. ಅನುಭವವಾಗುತ್ತಿರುವುದು ವರ್ತಮಾನದಲ್ಲಿ. ಇಂಥ ಹೊತ್ತಲ್ಲಿ ಅಮೂರ್ತ ನೋವಿನಿಂದ ಭವಿಷ್ಯದಲ್ಲಾದರೂ ಬಿಡುಗಡೆ ದೊರೆವ ಕಡೆಗೆ ಒಂದೆರೆಡು ಹೆಜ್ಜೆ ಮುಂದಿಡಬೇಕಾದರೆ ಅಂತಃಕರಣವಿಲ್ಲದ ಹೋಲಿಕೆ, ತರ್ಕಗಳಿಂದ ಖಂಡಿತ ಸಾಧ್ಯವಿಲ್ಲ..
*******
ಇದೇ ಬರಹದ ಆಚೆ ಮತ್ತೊಂದು ಬರಹವಿದೆ. `ಬಯಕೆಯೇ ಜೀವನದ ಮಿತಿಗಳನ್ನು ಮೀರುವ ದಾರಿ ಎಂಬ ಬುದ್ಧ ವಿರೋಧಿ ನೀತಿ-ಸೂತ್ರ ಬೋಧಿಸುವ, `ಬಿಎಮ್‌ಡಬ್ಲ್ಯೂ, ಟ್ರಾಕ್ಟರ್‌ಗಳನ್ನೂ ಓಡಿಸುವ ಹೈಟೆಕ್ ಸ್ವಾಮಿಯೊಬ್ಬರನ್ನು ಪ್ರಮೋಟ್ ಮಾಡುವ ಬರಹ ಅದು. ಆ ಸಂತರಿಗೆ `ಆಸೆಯಿಲ್ಲದ ಬದುಕಿನ ಬಗ್ಗೆ ಮಾತನಾಡುವ ಬೂಟಾಟಿಕೆ ಅನುಭಾವಿಗಳ ಬಗ್ಗೆ ಆದರವಿಲ್ಲ! ಆಶ್ಚರ್ಯವಿಲ್ಲ. ಅವರ ಮಾತು ಕೇಳಿ:
`ಉಸಿರೆಳೆದುಕೊಂಡು ಬಿಡುವ ಪ್ರಕ್ರಿಯೆಯಲ್ಲಿ ನೀವು ಇಡೀ ಜಗತ್ತಿನ ಜೊತೆಗೆ ಅನುಸಂಧಾನ ನಡೆಸಬಹುದು.
`ಅರಿವು ಮೂಡಿದಲ್ಲಿ ರೊಟ್ಟಿಯ ತುಂಡನ್ನೂ, ಆಲೂಗೆಡ್ಡೆಯನ್ನೂ ಮನುಷ್ಯನನ್ನಾಗಿ ಮಾಡಬಹುದು!
ಗಣಿಧೂಳಿನಲ್ಲಿ ಹೂತುಹೋದ ದಿನಗೂಲಿಗೆ, ತಿನ್ನುವ ರೊಟ್ಟಿಯೇ ತತ್ವಾರವಾದವನಿಗೆ ಈ ಅನುಭಾವಿಯ ಮಾತನ್ನು ಯಾವ ಭಾಷೆಯಲ್ಲಿ ಬೋಧಿಸಬಹುದು?
ಬುದ್ಧ ಹಸಿದವನಿಗೆ ಧರ್ಮ ಬೋಧಿಸಲಾಗುವುದಿಲ್ಲ ಎಂದ.
ಇವರೂ ಅಷ್ಟೆ, ಹಸಿದವರಿಗೆ ಧರ್ಮ ಬೋಧಿಸುವುದಿಲ್ಲ!
- ಡಾ. ಎಚ್. ಎಸ್. ಅನುಪಮಾ

Why the Census Should Not Count Caste

Economic & Political Weekly EPW july 31, 2010 vol xlv no 31 79

Why the Census Should Not Count Caste

V K Natraj, (vknatraj@rediffmail.com) was earlier director, Madras Institute of
Development Studies, Chennai.

A response to the article “The Politics of Not Counting Caste” (EPW, 19 June 2010) and the editorial “Why We Must Count Caste” (22 May) on caste in the 2011 Census, contesting the main arguments therein on the need to enumerate all castes during the enumeration. This is a brief response to the article on caste enumeration by Satish Deshpande and Mary E John (SD-MJ) (“The Politics of Not Counting Caste”, 19 June) and the EPW editorial (“Why We Must Count Caste”, 22 May). Both make out a strong case for caste e numeration.
The principal focus here is on what numbers can achieve and whether they can help policy formulation and implementation. The demand for numerical certainty (assuming that it is feasible, a highly doubtful prospect to which we shall
return later) should be appraised against the background of recent developments in
the economy and polity. Today, what we witness is a steady withdrawal of the State from several spheres of development. A major consequence is that the State has ceased to be the leading employer, a status which it enjoyed until about two decades ago. Therefore little purpose will be served by collecting the numbers of the “socially and educationally backward classes of citizens” in the language of Article 15(4) of the Constitution or “backward class of citizens which in the opinion of the state is not adequately represented in the services under the state” (Article 16(4)).The proposed numerical exercise would have had justification in the heyday of the State as the lead player in the field of employment and education. In both areas the state has willingly and readily withdrawn from this role. In fact, this dilution in the State’s role is one of the pivotal points of the economic reforms which officially commenced in the early 1990s.
One cannot resist making the point that the proponents of the enumeration in the 2011 Census do not provide even a sample list of the programmes that are speci fically aimed at the Other Backward Classes (OBCs). Further, we need to remember that there is a well argued case for universalizing some important programmes aimed at the poor such as the Public Distribution System. It is therefore difficult to see how numbers can contribute to policy formulation and/or to improved implementation.
There was a time when in the states of Karnataka and Tamil Nadu, in particular, positive discrimination (reservations in common usage) had a major role to play in making available opportunities to the OBCs specially in engineering, medicine and a few other similar courses. However, with the enormous increase in the number of colleges offering these courses there is almost a glut of seats and instances of places going unoccupied are not rare. In respect of two areas where the State was in the lead, and for some decades virtually the only player, its place is getting marginalised. In addition, given the orientation of policy in recent times the thrust is towards more privatisation. It is therefore reasonable to voice strong doubts in this context about the claim that determining the numbers of the OBCs will help formulation of government policy.
The EPW editorial goes further and a sserts that the knowledge of numbers
of every caste in the country will “deessentialise” caste. While no one should doubt the wisdom of “de-essentialising” a blot on our social landscape the question is whether a census enumeration will achieve this. A related point is that if members of a caste were to be enumerated would it universalise the caste equation instead of restricting it to the lower castes. Again, the aim is laudable but there are diffi culties which are rather more intricate than what are airily dismissed as “ logistical”. In the first place there appears to be an assumption that the caste structure is a static, unchanging behemoth which is actually far from the truth. Distinguished sociologists have drawn attention to the manner in which changes take place within caste. This is well documented and there is no need to dwell on it here. Of more relevance to our present concerns are two equally important issues. The first is that it is the difficulty in determining who the OBCs are that has led to the vast mass of litigation on positive discrimination. There is comparatively little litigation seeking implementation of positive discrimination but an enormous amount questioning the composition of the OBC list and the quantum of reservation.
That being the case it is hard to discern how the population of an indeterminate category can be ascertained through a headcount. An additional complexity flows from another source. Can it be assumed that respondents know whether they belong to the OBCs? The question is not as inane as it may appear. In states like Karnataka many applicants for engineering/medical education do not mention the name of their caste fearing that they may attract the “creamy layer”
barrier. With the threshold for the creamy layer being quite high (and there is a recommendation in Karnataka that it should be raised further) this problem will confront several respondents as well as enumerators. There is a likelihood of respondents not knowing whether they belong to the OBCs.
However, even more questionable is the unstated assumption behind the pro-enumeration lobby, namely, that the OBCs as a group is one homogeneous entity. This is most certainly not true. As urged above, much of the difficulty in implementing reservations stems from determining who constitute the OBC. In addition, there are important internecine wars among them. Taking Karnataka again as an example, the present struggle is b etween the dominant castes such as the Lingayats and Vokkaligas, on the one hand, and the groups in competition with them such as the Kurubas, on the other, wh0 have all the makings of an emerging dominant caste. The pro-enumeration argument fails to recognise this and would have us believe that the backward classes are one group. In this scenario it is not improbable that there may well be false information furnished. SD-MJ answer this with the argument that the census is there to record what respondents state, its purpose is not to discover the “truth” about caste. And they go further and urge us to accept the view that respondents have no incentive to furnish false information since the census record does not entitle them to any benefit. This, however, misses a point of great relevance.
Caste enumeration is advocated by political parties and some social groups so as to bolster their claim of the support of large numbers in their camp. That this
motivation is undisclosed should cause no surprise, but that it is ignored should. The demand for enumeration is largely and powerfully voiced by the intermediate castes and especially by those which are now on the way to establishing claims to
dominant status. The protection provided by large numbers will not apply when political/ social groups canvass among their folk to return themselves under a particular nomenclature. A recent example from Karnataka illustrates this. The matter concerns a caste called Sadar which itself is divided into subgroups. It so happens that within the dominant caste of Lingayats there is a sub-sect called S adar. Some officials while issuing certificates of backwardness, most probably deliberately, treated the two as synonymous. There was expectedly a furore and the mistake rectified. This is brought in here only to make the point that census enumerators confronted with this or a similar situation will record what they are told but the result may be an inaccurate reflection of the true picture. And it would not do to get over this by arguing that we are only concerned with what respondent state. Amidst all this what about the fate of the numerically very small caste groups? In a democratic system, at least the way our electoral battles are fought, numbers are of immense importance.
Given this one wonders what will happen to castes which are very small in number. The first Karnataka Backward Classes Commission with L G Havanur as chairman estimated that there were 88 castes with a population of less than 0.01% of the state population and 347 whose population could not be ascertained. (Needless to state these estimates are subject to error.) If such numbers receive affi rmation in a census enumeration, their position will in all likelihood get further marginalised. It is not unlikely that attempts may be made to incorporate them into larger caste groups with which they share similarities. This would have the effect of diluting the very essence of diversity which caste enumeration is intended to capture. Proponents of enumeration believe that enumeration by bringing caste out into the open will help us break with the “caste blindness that the Indian state has followed since independence” (SD-MJ). And after this comes the assertion that the “ notion of caste blindness combined the formal abolition of caste in the Constitution with what amounted to a ban on public discussion of caste”. The first surprise is the statement that the Constitution abolishes caste and equally so the argument that there was a virtual ban on public discussion.
Hardly any proof is available in support of either assertion. The one point on which the authors are perhaps right is in the argument that the upper castes generally like to believe that they have somehow outgrown the institution,
but here again there is an obvious conundrum which is missed. Caste is freely and increasingly used for political purposes and the dominant and other intermediate castes as also the so-called upper castes are not averse to this. The problem in short stems from “misplaced aggregation” of castes into a supposed homogeneous group. Lest what has been urged so far be taken as a denial of the importance of
caste it needs to be stated that caste is important and recognition of its newer
forms necessary for many purposes. It is just that a one-shot question put by untrained enumerators (untrained to spot caste nuances) is not the way to go about it.
The Madras Institute of Development Studies conducted a seminar on this issue in 2000 (with the active participation and assistance of the University of Mysore, the Institute of Social and Economic Change and the National Institute of Advanced Studies, Bangalore) at which there was almost a consensus that carefully
desig ned ethnographic studies conducted by an independent agency was the
best way forward.
Who’s Afraid Of Caste Census?
By Kancha Ilaiah
13 June, 2010 Deccanchronicle.com
Ever since the Centre announced that it would collect data on various castes during the ongoing Census, the media has created a hue and cry saying that this would harm the nation and open a Pandora’s Box of caste conflicts. On the other hand, those who seek caste enumeration are of the view that this would clear the cobwebs and deliver proper data on other backward classes (OBCs) that will help implement reservation policies and welfare schemes better.
The collection of caste data was not a decision taken by the government on its own. The OBC leadership across the country has demanded it and the Supreme Court advised the Centre to go for such a Census to ensure that an accurate population database was made available.
Let us not forget the fact that even at the time of the 2001 Census there was a strong demand for caste census. The then deputy Prime Minister L.K Advani, in fact, went on record to say that caste data would be collected. But Right-wing academic forces — particularly a group of sociologists and anthropologists — advised the Bharatiya Janata Party-led National Democratic Alliance government not to go for such an enumeration as it would go against the interests of the ruling upper castes and communities.
It should be noted that the opposition to caste data has been coming from upper castes that still control the levers of power. The lower castes have never opposed such a proposal.
It is fallacious to argue that society would get further divided if the population of each caste is known to the policymakers and to the public.
Caste culture is all around us. In the dalit-bahujan discourse, the upper castes are being shown as constituting less than 15 per cent. This could be totally wrong. Even within the lower castes there are several false claims about numbers. Every caste claims that it is numerically the strongest and keeps asking for its “rightful” share.
How to tell them that their claims are wrong? When caste has become such an important category of day-to-day reckoning it is important to have proper data at hand to tell communities that they constitute this much and cannot ask for more than their share.
It is true that we cannot distribute everything based on caste. But caste census is the right basis for statistics such as literacy rate and issues like the proportion of representation. Once we cite the Census data there cannot be any authentic opposition to that evidence.
The upper caste intelligentsia is afraid that once detailed data on number of people in lower castes is available it would become a major ground for asking for accurate proportional representation in certain sectors, such as education and employment.
For example, once the caste data is available, the 50 per cent limit on reservations imposed by the Supreme Court could be questioned on the basis of numbers. This would in turn help in sustaining the overall system of liberal democracy. The system of democracy would only get deeper with the discourse of numbers.
Democracy is in effect a system of numbers unlike communism, which does not deal with numbers while institutionalizing a government. In a democracy, the governing system is institutionalized through an electoral process and in such a system the people must be counted from all angles — sex, race, religion, caste and so on. In a democracy based on numbers, any section of society can come to power.
Based on the counting on the basis of religion, Hindus have realised that they are the majority. And because of that understanding they have claimed power. When Mahatma Gandhi suggested that Muhammed Ali Jinnah should be made the first Prime Minister in order to avoid Partition, Jawaharlal Nehru and Sardar Patel put forth the argument that India was a Hindu-majority nation and would not accept a Muslim as its first Prime Minister. Where did the notion of Hindu majoritarianism come from? It came from numbers.
With the same logic what is wrong if women, cutting across religious divides, count themselves, and organize themselves to come to power? They constitute about 50 per cent of the population and if they want to fight for gender democracy, they too can come to power. So should there be a demand for abolition of gender enumeration, too?
If caste census is done, the Indian democracy would thrive on the firm support of the lower castes who keep hoping of getting their share based on their numbers. The upper castes may feel desolate with the system of democracy itself, if this shift begins to take place. They might call such a shift “castocracy”. But would they call a state or a nation being ruled by women “womenocracy”?
Cognitive social psychology says all such theories are constructed on a convenience known as “comfort zone”. If brown upper castes live in white societies they see brown bashing but black bashing remains hidden in their blind spots. In white societies the browns are not in their comfort zone but in India they are and do not want to see the other’s “discomfort zone”.
Many upper caste intellectuals say that caste was a construction of the colonial census system. They talk as if caste never existed before the British started an enumerative process. By their logic we should come to the conclusion that before the British enumerated people based on religion, there were no religions in India. There are many such blind spots in India and that is why we still remain backward in theories of knowledge.
Let all castes — not just OBCs — be counted for strengthening our democratic system. I know that even mine is a blind-spot theory but it may have the effect of an antidote.

ಭಯೋತ್ಪಾದನೆ: ಕಠಿಣ ಕಾನೂನುಗಳು ಅದಕ್ಕುತ್ತರವೆ?

-ಪ್ರಶಾಂತ ಭೂಷಣ್

ಮುಂಬಯಿಯ ಎರಡು ಪಂಚತಾರಾ ಹೋಟೆಲುಗಳ ಮೇಲೆ ನಡೆದ ಭಯೋತ್ಪಾದಕರ ದಾಳಿಯು ಮಾಧ್ಯಮಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಹಲವು ಬಗೆಯ ಗೊಂದಲ ಹಾಗೂ ವಿವಾದಗಳನ್ನು ಸೃಷ್ಟಿಸಿದೆ. ‘ಸಾಕಪ್ಪಾ ಸಾಕು’, ‘ನಾವು ತೆರಿಗೆ ಕೊಡುವುದಿಲ್ಲ’, ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಾಶಮಾಡಿ’ ಎಂಬ ಘೋಷಣೆಗಳು ಪದೇಪದೇ ಕೇಳಿಬರುತ್ತಿವೆ. ಉಳಿದೆಲ್ಲ ಸಲಹೆ ಸೂಚನೆಗಳ ಜೊತೆಗೆ ‘ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ’ ಎಂಬುದು ಹೊಸ ಮಂತ್ರವಾಗಿದೆ. ಕಠಿಣ ಕ್ರಮ ಎಂದರೆ ಕಠಿಣ ಕಾನೂನುಗಳನ್ನು ಜಾರಿಗೆ ತರುವುದು. ಕೇಂದ್ರದ ಯುಪಿಎ ಸರ್ಕಾರವು ನಾಲ್ಕು ವರ್ಷಗಳ ಹಿಂದಷ್ಟೇ ದುರ್ಬಳಕೆಯಾದ ಹಾಗೂ ಅನಪೇಕ್ಷಿತ ವಿರುದ್ಧ ಪರಿಣಾಮ ಉಂಟುಮಾಡಿದ ಕಾರಣ ಹೇಳಿ Pಔಖಿಂ ಎಂಬ ಕ್ರೂರ ಕಾನೂನನ್ನು ವಾಪಸು ತೆಗೆದುಕೊಂಡಿತು. ಈಗ ಅದೇ ಸರ್ಕಾರ ಜನರ ಗಲಾಟೆ, ಅಭಿಪ್ರಾಯವನ್ನೇ ಆಧಾರವಾಗಿಟ್ಟುಕೊಂಡು ಈಗಾಗಲೇ ಚಾಲ್ತಿಯಲ್ಲಿರುವ UಂPಂ ಕಾನೂನಿಗೆ ತಿದ್ದುಪಡಿ ತರಲು ಯತ್ನಿಸುತ್ತಿದೆ. ಈ ತಿದ್ದುಪಡಿಗಳನ್ನು ಡಿಸೆಂಬರ್ ೧೫ರಂದು ಸಂಸತ್ತಿನಲ್ಲಿ ಮಂಡಿಸಲಾಯಿತು. ಅದರ ಮರುದಿನವೇ ಯಾವುದೇ ಚರ್ಚೆ, ಅನುಮೋದನೆ, ನಾಗರಿಕ ಸಮಾಜಕ್ಕೆ ಅದರ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಅವಕಾಶವೇ ಕೊಡದೆ ಅನುಮೋದಿಸಲಾಯಿತು.

ಕಠಿಣ ಕಾನೂನು ಬರಬೇಕೆಂದು ವಾದಿಸುವವರಿಗೆ ಕಾನೂನುಗಳನ್ನು ಕಠಿಣಗೊಳಿಸುವುದು ಯಾವುದು ಎಂದು ತಿಳಿದಿರುವುದಿಲ್ಲ. ಅಲ್ಲದೇ ಕಠಿಣ ಕಾನೂನುಗಳು ಹೇಗೆ ಭಯೋತ್ಪಾದನೆಯನ್ನು ತಡೆಗಟ್ಟುತ್ತವೆ ಅಥವಾ ನಿಗ್ರಹಿಸುತ್ತವೆ ಎಂದೂ ತಿಳಿದಿರುವುದಿಲ್ಲ. ಮೊದಲನೆಯದಾಗಿ ಯಾವುದೇ ಕಾನೂನು ಬಂಧಿಸಲ್ಪಟ್ಟ ವ್ಯಕ್ತಿಯನ್ನು ಕಸ್ಟಡಿಯಲ್ಲಿಟ್ಟುಕೊಳ್ಳಲು, ಶಿಕ್ಷೆ ನೀಡಲು, ಅದನ್ನು ಜಾರಿಗೊಳಿಸಲಷ್ಟೇ ಸಹಾಯ ಮಾಡುತ್ತದೆ. ಎಷ್ಟೇ ಕಠಿಣವಾದ ಅಥವಾ ಭಯಾನಕವಾದ ಕಾನೂನೂ ಸಹಾ ಬಂಧಿಸಲ್ಪಡುವ ಮುನ್ನವೇ ಸಾಯಲು ತಯಾರಾಗುವ ಆತ್ಮಹತ್ಯಾದಳದ ಭಯೋತ್ಪಾದಕನನ್ನು ನಿಗ್ರಹಿಸಲು, ತಡೆಗಟ್ಟಲು ಶಕ್ತವಲ್ಲ. ಬೇಲ್ ಸಿಗದೆಂಬ ವಿಷಯವಾಗಲೀ ಅಥವಾ ಅಪರಾಧಿಯೆಂದು ಶಿಕ್ಷೆಗೊಳಗಾಗುವ ಭಯವಾಗಲೀ ಮುಂಬಯಿ ದಾಳಿಕೋರರ ರೀತಿಯ ಭಯೋತ್ಪಾದಕರನ್ನು ಹೆದರಿಸುವ ಸಾಧ್ಯತೆ ಇಲ್ಲ. ಹಾಗೆ ನೋಡಿದರೆ ಇರಾಕಿನಲ್ಲಿ ರಕ್ಷಣಾಪಡೆಗಳಾಗಲೀ, ಸೇನೆಯಾಗಲೀ ಯಾವುದೇ ವ್ಯಕ್ತಿಯನ್ನು ತನಗಿಷ್ಟ ಬಂದಂತೆ ಬಂಧಿಸಬಹುದು, ಅನಿರ್ದಿಷ್ಟ ಅವಧಿಯವರೆಗೆ ಕಸ್ಟಡಿಯಲ್ಲಿಟ್ಟುಕೊಳ್ಳಬಹುದು ಅಥವಾ ಯಾರನ್ನು ಬೇಕಾದರೂ ಗುಂಡು ಹೊಡೆದು ಕೊಲ್ಲಬಹುದು. ಪೋಲೀಸ್ ಆಗಲೀ ಅಥವಾ ರಕ್ಷಣಾ ಪಡೆಗಳಾಗಲೀ ಇದಕ್ಕಿಂತ ಹೆಚ್ಚು ಅಧಿಕಾರ ಹೊಂದಲಾರವು. ಆದರೂ ಇಂತಹ ಅಧಿಕಾರವು ಇರಾಕಿನಲ್ಲಿ ಭಯೋತ್ಪಾದನೆಯನ್ನು ಕಡಿಮೆ ಮಾಡುವುದು ಒತ್ತಟ್ಟಿಗಿರಲಿ, ತಮ್ಮನ್ನೇ ತಾವು ಸಿಡಿಸಿಕೊಂಡು ನೂರಾರು ಅಮಾಯಕರನ್ನು ದಿನನಿತ್ಯ ಕೊಲ್ಲುವ ಪರಿಸ್ಥಿತಿಯನ್ನು ಸೃಷ್ಟಿಸಿದೆ.

Pಔಖಿಂವನ್ನು ಹಿಂದೆಗೆದುಕೊಂಡಾಗ ಅದರ ಕೆಲವು ಕ್ರೂರ ಅಂಶಗಳನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ - UಂPಂ - ದಲ್ಲಿ ಸೇರಿಸಿಕೊಳ್ಳಲಾಯಿತು. ಇದರ ಜೊತೆಗೆ ಛತ್ತೀಸ್‌ಘರ್ ಸಾರ್ವಜನಿಕ ರಕ್ಷಣಾ ಕಾಯ್ದೆಯನ್ನೂ ಸೇರಿಸಿಕೊಂಡರು. ಅದರ ಪ್ರಕಾರ ನಿಷೇಧಿತ ಸಂಘಟನೆ ಅಥವಾ ನಿಷೇಧಿತ ಸಂಘಟನೆಗೆ ಸೇರಿದ ವ್ಯಕ್ತಿಗೆ ಯಾವುದೇ ರೀತಿಯ ಸಹಾಯ ಮಾಡುವುದು ನಿಷಿದ್ಧವಾಗಿದೆ. ಆ ಕಾನೂನನ್ನು PUಅಐ ಕಾರ್ಯದರ್ಶಿಯಾದ ಬಿನಾಯಕ್ ಸೇನ್‌ರಂತಹ ನಿಸ್ವಾರ್ಥ ಹೋರಾಟಗಾರನನ್ನು ಬಂಧಿಸಲು ಬಳಸಲಾಯಿತು. ಬಿನಾಯಕ್ ಸೇನ್ ಛತ್ತೀಸ್‌ಘರ್‌ನ ಮೂಲೆಮೂಲೆಯಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದರಲ್ಲಿ ಕಾಲಕಳೆದವರು. ಕಳೆದ ಒಂದೂವರೆ ವರ್ಷದಿಂದ ಅವರನ್ನು ಸೆರೆಯಲ್ಲಿಡಲಾಗಿದೆ. ಅದಕ್ಕೆ ನೀಡಿರುವ ಕಾರಣ ಜೈಲಿನಲ್ಲಿರುವ ಮಾವೋ ಬಂಡುಕೋರರ ಪತ್ರಗಳನ್ನು ಅವರ ಜೊತೆಗಾರರಿಗೆ ಒಯ್ದು ಕೊಡುತ್ತಿದ್ದರೆನ್ನುವುದು. ಅವರು ಒಯ್ದು ಕೊಟ್ಟ ಪತ್ರಗಳಲ್ಲಿ ಬುಡಮೇಲು ಮಾಡುವಂಥದು ಏನೂ ಇರಲಿಲ್ಲವೆಂಬುದು ಬೇರೆ ವಿಷಯ. ಮುಖ್ಯವೆಂದರೆ ಶಂಕಿತ ಮಾವೋ ಬಂಡುಕೋರನಿಂದ ಅವರು ಪತ್ರವನ್ನೊಯ್ದರು ಎಂಬುದೇ ನಿಷೇಧಿತ ಮಾವೋ ಸಂಘಟನೆಗೆ ನೀಡಿದ ‘ಸಹಾಯ’ವಾಯಿತೇ ಎನ್ನುವುದು.

ಜಾಮೀನು ನಿರಾಕರಿಸುವುದರಿಂದ ತನಿಖಾ ತಂಡಗಳಿಗೆ ಅಮಾಯಕರನ್ನು ಬಂಧನಕ್ಕೊಳಪಡಿಸಿ ತಮಗಿಷ್ಟ ಬಂದಷ್ಟು ದಿನ ಯಾವ ಸಾಕ್ಷ್ಯಾಧಾರವಿಲ್ಲದೆಯೂ ಕಸ್ಟಡಿಯಲ್ಲಿಟ್ಟುಕೊಳ್ಳಲು ಅನುಕೂಲವಾಗಿದೆ ಅಷ್ಟೇ. ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದಾನೆ ಎಂದು ಮೇಲ್ನೋಟಕ್ಕೇ ಸಾಬೀತಾಗುವಂತಿದ್ದರೆ ಯಾವ ನ್ಯಾಯಾಲಯವೂ ಅಂತಹ ವ್ಯಕ್ತಿಗೆ ಜಾಮೀನು ಕೊಡುವುದಿಲ್ಲ. ಭಯೋತ್ಪಾದಕ ಕೃತ್ಯ ನಡೆಸಿದ ವ್ಯಕ್ತಿಯೊಬ್ಬ ಬಂಧಿಸಲ್ಪಟ್ಟು, ಜಾಮೀನು ಮೇಲೆ ಹೊರಬಂದು, ಶಕ್ತಿಯುತ ಕಾನೂನುಗಳ ಬೆಂಬಲವಿಲ್ಲದೇ ಪಾರಾದ ಯಾವ ಕೇಸುಗಳೂ ಸರ್ಕಾರದ ಮುಂದೆ ಇಲ್ಲ. ಹಾಗೆಯೇ ಹಿಂಸೆ ಅಥವಾ ಹಿಂಸೆಯ ಭಯದಿಂದ ಪೋಲೀಸರು ಯಾರಿಂದ ಬೇಕಾದರೂ ತಪ್ಪೊಪ್ಪಿಗೆ ಪಡೆಯಲೂ ಸಾಧ್ಯ. ಪೋಲೀಸ್ ತಪ್ಪೊಪ್ಪಿಗೆಗಳು ಯಾವುದೇ ವ್ಯಕ್ತಿಯನ್ನು ಅಪರಾಧಿಯೆಂದು ಗುರುತಿಸಲಿಕ್ಕಾಗಲೀ, ಶಿಕ್ಷೆಗೊಳಪಡಿಸುವುದಕ್ಕಾಗಲೀ ನಂಬಲರ್ಹವಲ್ಲದ ಹಾಗೂ ಅಸುರಕ್ಷಿತ ದಾಖಲೆಗಳು. ಖಿಂಆಂ ಕಾನೂನಿನಲ್ಲಿದ್ದ ಕ್ರೂರ ಅಂಶಗಳು ಪೋಲೀಸರಿಗೆ ಅಮಾಯಕರನ್ನು ಅನಿರ್ದಿಷ್ಟ ಅವಧಿಯವರೆಗೆ ಬಂಧನದಲ್ಲಿಟ್ಟುಕೊಳ್ಳಲು, ಪೋಲೀಸ್ ತಪ್ಪೊಪ್ಪಿಗೆ ಆಧಾರದ ಮೇಲೆ ಆರೋಪಪಟ್ಟಿ ತಯಾರು ಮಾಡಲು ಹಾಗೂ ವರ್ಷಾನುಗಟ್ಟಲೆ ಕೋರ್ಟ್ ವಿಚಾರಣೆಗೊಳಪಡಿಸಿ ಶಿಕ್ಷೆ ನೀಡಲು ಪ್ರೋತ್ಸಾಹ ನೀಡುತ್ತವೆ. ಕೊನೆಗೆ ಆ ಕೇಸನ್ನು ಬಗೆಹರಿಸಲಾಯಿತೆಂದು ಘೋಷಿಸಿಕೊಳ್ಳಲು ಪೋಲೀಸರು ಕಸ್ಟಡಿಯಲ್ಲಿ ಅವರನ್ನು ಹಿಂಸಿಸಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸುತ್ತಾರೆ.

ದೀರ್ಘಾವಧಿಯ ಬಂಧನವು ವ್ಯಕ್ತಿ ಗೌರವವನ್ನು ಖಾಯಮ್ಮಾಗಿ ನಾಶಗೊಳಿಸುವುದಲ್ಲದೇ ಆ ಕುಟುಂಬ ಆರ್ಥಿಕವಾಗಿ ನಾಶವಾಗುವ ಹಾಗೆ ಮಾಡುತ್ತದೆ. ಈ ಕ್ರೂರ ಕಾಯಿದೆಗಳಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾದ ಬಹುಪಾಲು ಜನರು ಅಮಾಯಕರು ಎಂಬುದಕ್ಕೆ ಶೇ.೯೮ ಜನರು ದೋಷಮುಕ್ತರೆಂದು ಬಿಡುಗಡೆಯಾಗಿರುವುದೇ ಸಾಕ್ಷಿ. ಆದರೆ ಬಿಡುಗಡೆ ಸುಮ್ಮನೇ ಸಿಗುವಂಥದಲ್ಲ. ಅವರ ಗೌರವ, ಆರೋಗ್ಯ, ಬದುಕು, ಕುಟುಂಬದ ಆರ್ಥಿಕ ಸ್ಥಿತಿ ಈ ಎಲ್ಲದಕ್ಕೂ ಅಪಾರ ಹಾನಿಯಾದ ನಂತರವೇ ಬಿಡುಗಡೆಯಾಗಿರುತ್ತದೆ. ಇದರಿಂದ ಸಾವಿರಾರು ಮುಗ್ಧರಿಗೆ ತನಿಖಾ ತಂಡಗಳು ಆರೋಪಿ ಎಂಬ ಹಣೆಪಟ್ಟಿ ಹಚ್ಚಿ ಅನ್ಯಾಯ ಮಾಡಿರುವುದಷ್ಟೇ ಅಲ್ಲ, ಅಲ್ಪಸಂಖ್ಯಾತರಿಗೆ ಅಭದ್ರತೆ, ಪರಕೀಯತೆ ಮತ್ತು ಪೋಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಿಟ್ಟಿಗೇಳಲೂ ಕಾರಣವಾಗಿದೆ.

ಇದು ಎಷ್ಟೋ ಜನತಾ ನ್ಯಾಯಮಂಡಳಿಗಳು ಕಂಡುಕೊಂಡ ಸತ್ಯ. ಈ ಕಾಯಿದೆಗಳಿಂದ ಅಪರಾಧಿಗಳೆಂದು ಹೆಸರಿಸಲ್ಪಟ್ಟ ಎಷ್ಟೋ ಜನ ಅಹವಾಲು - ಸಾಕ್ಷಿ ಕೇಳಿದ ನಂತರ ಈ ವಿಷಯಗಳು ಬೆಳಕಿಗೆ ಬಂದವು. Pಔಖಿಂ ದ ಜನತಾ ನ್ಯಾಯಮಂಡಳಿಯಲ್ಲಿ ಶ್ರೇಷ್ಠ ನ್ಯಾಯಾಧೀಶರುಗಳಾದ ರಾಮ್ ಜೇಠ್ಮಲಾನಿ, ಜಸ್ಟಿಸ್ ಸುರೇಶ್, ಜಸ್ಟಿಸ್ ಡಿ.ಕೆ. ಬಸು, ಕೆ.ಜಿ. ಕಣ್ಣಬೀರನ್ ಮತ್ತು ಇನ್ನೂ ಕೆಲವು ಗೌರವಾನ್ವಿತ ವ್ಯಕ್ತಿಗಳಿದ್ದರು. ಆ ನ್ಯಾಯಮಂಡಳಿಯ ೨೦೦೪ರ ವರದಿ ಹೀಗಿದೆ: ‘ಆರೋಪಿ ಮತ್ತು ತಜ್ಞ ಸಾಕ್ಷ್ಯಗಳನ್ನು ಪುನರಾವಲೋಕಿಸಿದಾಗ ಈ ಕಾನೂನಿನ ಸಾದಾ ಬಳಕೆ ಮತ್ತು ದುರ್ಬಳಕೆ ಎರಡನ್ನೂ ಬೇರ್ಪಡಿಸಲಾಗದೆನ್ನಿಸುತ್ತದೆ. ಈ ಶಾಸನವು ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆ. ಭಯೋತ್ಪಾದಕರಿಗಿಂತ ಸಾಮಾನ್ಯ ಜನರನ್ನು, ಅದರಲ್ಲೂ ಬಡ ಮತ್ತುಅವಕಾಶ ವಂಚಿತ ಸಮುದಾಯಗಳಾದ ದಲಿತರು, ಬುಡಕಟ್ಟು ಜನಾಂಗಗಳು, ಅಲ್ಪಸಂಖ್ಯಾತರು, ಆದಿವಾಸಿಗಳು ಹಾಗೂ ಶ್ರಮಜೀವಿಗಳನ್ನು ಭಯಗ್ರಸ್ತಗೊಳಿಸಲು ಇದನ್ನು ಉಪಯೋಗಿಸಲಾಗಿದೆ.’ ( ಜನತಾ ನ್ಯಾಯಮಂಡಳಿ - ಮಧ್ಯಂತರ ಹೇಳಿಕೆ)

ಭಯೋತ್ಪಾದನೆಯ ವಿರುದ್ಧ ನೇಮಿಸಲ್ಪಟ್ಟ ದೇಶದ ಎಲ್ಲಾ ರಾಜ್ಯಗಳ ಪೋಲೀಸ್ ತನಿಖಾ ತಂಡಗಳ ‘ಜನತಾ ನ್ಯಾಯಮಂಡಳಿ’ಯನ್ನು ಆಗಸ್ಟ್ ೨೦೦೮ರಲ್ಲಿ ಹೈದರಾಬಾದಿನಲ್ಲಿ ಆಯೋಜಿಸಲಾಗಿತ್ತು. ಇಬ್ಬರು ಮಾಜಿ ಮುಖ್ಯ ನ್ಯಾಯಾಧೀಶರು, ಹಲವು ಗೌರವಾನ್ವಿತ ಅಕ್ಯಾಡೆಮಿಕ್ ವಿದ್ವಾಂಸರು, ವಕೀಲರು ಮತ್ತು ಸಮಾಜ ವಿಜ್ಞಾನಿಗಳು ಜ್ಯೂರಿಯಾಗಿ ಅಲ್ಲಿ ಕಾರ್ಯ ನಿರ್ವಹಿಸಿದ್ದರು. ಅವರೆಲ್ಲ ಒಮ್ಮತದಿಂದ ತೆಗೆದುಕೊಂಡ ನಿರ್ಧಾರ ಇದು:

‘ಪುರಾವೆಗಳು ತೋರಿಸಿಕೊಡುವಂತೆ ದೊಡ್ಡ ಸಂಖ್ಯೆಯಲ್ಲಿ ತರುಣ ಮುಸ್ಲಿಮರನ್ನು ದೇಶಾದ್ಯಂತ ನಡೆದ ಹಲವು ಭಯೋತ್ಪಾದಕ ಕೃತ್ಯಗಳ ನಂತರ ಶಂಕಿಸಿ ಬಂಧಿಸಲಾಗಿದೆ. ಅದರಲ್ಲೂ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಆಂಧ್ರ ಪ್ರದೇಶ, ರಾಜಾಸ್ಥಾನಗಳಲ್ಲಿ ಇದು ಹೆಚ್ಚು ಪ್ರಮಾಣದಲ್ಲಿ ಕಂಡುಬಂದರೂ ಅಲ್ಲಿಗಷ್ಟೇ ಸೀಮಿತವಾಗಿಲ್ಲ.

ಮುಸ್ಲಿಮರನ್ನು ಭಯೋತ್ಪಾದಕ ಕೃತ್ಯಗಳ ತನಿಖೆಯ ಹೆಸರಿನಲ್ಲಿ ಅಪರಾಧೀಕರಣಗೊಳಿಸುವುದು ಮತ್ತು ರಾಕ್ಷಸರೆಂಬಂತೆ ಬಿಂಬಿಸುವುದು, ಆ ವ್ಯಕ್ತಿ ಮತ್ತು ಕುಟುಂಬದವರಿಗೆ ತೀವ್ರ ಮಾನಸಿಕ ಹಿಂಸೆ ಉಂಟುಮಾಡುವುದಷ್ಟೇ ಅಲ್ಲ, ಆ ಇಡೀ ಸಮುದಾಯದ ಇತರರನ್ನೂ ಘಾಸಿಗೊಳಿಸುತ್ತದೆ. ಇದು ತೀವ್ರವಾದ ಅಭದ್ರತೆ ಮತ್ತು ಪರಕೀಯ ಭಾವನೆಯನ್ನು ಅವರಲ್ಲಿ ಬೆಳೆಸಬಹುದು ಮತ್ತು ಇಡೀ ದೇಶಕ್ಕೆ ಅಪಾಯಕಾರೀ ಪರಿಣಾಮ ಉಂಟಾಗಬಹುದು.’

ಈಗ UಂPಂ ಗೆ ತಂದ ತಿದ್ದುಪಡಿಗಳು ನಿಸ್ಸಂದೇಹವಾಗಿ ಇನ್ನೂ ಕ್ರೂರವಾಗಿವೆ. ಇದು ಪೋಲೀಸರಿಗೆ ಶೋಧನೆ, ಬಂಧನ, ಪೋಲೀಸ್ ಕಸ್ಟಡಿ ಮತ್ತು ಯಾವ ಸಾಕ್ಷ್ಯಾಧಾರಗಳಿಲ್ಲದೆ ಅನುಮಾನಾಸ್ಪದ ವ್ಯಕ್ತಿಗಳನ್ನು ಜೈಲಿನಲ್ಲಿಡುವುದನ್ನು ಮತ್ತಷ್ಟು ಸುಲಭಗೊಳಿಸಿದೆ. ಹೊಸದಾಗಿ ಕಾಯ್ದೆಯಲ್ಲಿ ಸೇರಿಸಲಾದ ಸೆಕ್ಷನ್ ೪೩ ಎ ಪ್ರಕಾರ ಸಂಬಂಧಪಟ್ಟ ಅಧಿಕಾರಿಗೆ ಅಪರಾಧವೆಂದು ಪರಿಗಣಿಸಲ್ಪಟ್ಟ ಕ್ರಿಯೆಯ ಸಂಚು ರೂಪಿಸಲು ಕಾರಣವಾಗಿದ್ದಾನೆಂದು ಯಾವುದೇ ವ್ಯಕ್ತಿಯನ್ನು ಬಂಧಿಸಲು, ಯಾವುದೇ ಸ್ಥಳವನ್ನು ಪರಿಶೀಲಿಸಲು ಅಧಿಕಾರವಿದೆ.

ಮುಂದುವರೆದು ಈ ಕಾಯ್ದೆಯಡಿ ಬರುವ ಅಪರಾಧದ ಬಗೆಗೆ ತನಿಖೆ ನಡೆಸುವ ಅಧಿಕಾರಿಗೆ ತನಿಖೆಗೆ ಅಗತ್ಯವಿದ್ದಲ್ಲಿ ಯಾವುದೇ ಸಂಘಟನೆ ಅಥವಾ ವ್ಯಕ್ತಿಯನ್ನು ಯಾವುದೇ ಮಾಹಿತಿ ಕೊಡುವಂತೆ ಕೇಳಬಹುದಾಗಿದೆ. ಈ ಮಾಹಿತಿ ನೀಡುವಲ್ಲಿ ವಿಫಲವಾದರೆ ೩ ವರ್ಷ ಜೈಲುವಾಸದ ತನಕ ಶಿಕ್ಷೆಗೆ ಅರ್ಹನಾಗಿರುತ್ತಾನೆ. ಇಂತಹ ಅವಕಾಶಗಳಿಂದ ಪೋಲೀಸರು ಎಲ್ಲ ತರಹದ ಸಾಮಾಜಿಕ ಕಾರ್ಯಕರ್ತರು, ವಕೀಲರು, ವೈದ್ಯರು, ಪತ್ರಕರ್ತರು ಎಲ್ಲರನ್ನೂ ಶಂಕಿತ ಭಯೋತ್ಪಾದಕನಿಗೆ ಕಾನೂನು ಅಥವಾ ವೈದ್ಯಕೀಯ ಸಹಾಯ ನೀಡಿದರೆಂಬ ಕಾರಣ ನೀಡಿ ಬಂಧಿಸಬಹುದಾಗಿದೆ.

ಪೋಲೀಸ್ ಕಸ್ಟಡಿಯಲ್ಲಿ ವ್ಯಕ್ತಿಯೊಬ್ಬನನ್ನು ಇಟ್ಟುಕೊಳ್ಳಲು ಇದ್ದ ಗರಿಷ್ಠ ಕಾಲಾವಧಿಯನ್ನು ೧೫ ದಿನಗಳಿಂದ ೩೦ ದಿನಗಳವರೆಗೆ ವಿಸ್ತರಿಸಲಾಗಿದೆ. ಕಸ್ಟಡಿಯ ಅವಶ್ಯಕತೆಯನ್ನು ‘ಕಸ್ಟಡಿ ವಿಚಾರಣೆ’ ಎಂದು ತೋರಿಸಲಾಗುತ್ತದೆ. ಇದರ ಅರ್ಥ ಕಸ್ಟಡಿ ಹಿಂಸೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಭಾರತದ ಕಸ್ಟಡಿ ಸಾವುಗಳ ಸಂಖ್ಯೆ ವಿಶ್ವದಲ್ಲೇ ಅತಿ ಹೆಚ್ಚು ಸಾವು ಸಂಭವಿಸುವ ದೇಶಗಳ ಸಾಲಿನಲ್ಲಿದೆ. ಹಿಂಸೆಯ ಕುರಿತು ವಿಶ್ವಸಂಸ್ಥೆಯ ಜಾಗತಿಕ ಒಪ್ಪಂದಕ್ಕೆ ಭಾರತವು ಸಹಿ ಹಾಕಿಲ್ಲ. ನಮ್ಮ ಸಂವಿಧಾನವು ಯಾರನ್ನೂ ಅವನಿಚ್ಛೆಗೆ ವಿರುದ್ಧವಾಗಿ ಸಾಕ್ಷಿಯಾಗುವಂತೆ ಒತ್ತಾಯಿಸಬಾರದು ಎಂದು ಹೇಳಿದ್ದರೂ, ಬಲಪ್ರಯೋಗಿಸಿ ತಿಂಗಳಾನುಗಟ್ಟಲೇ ಕಸ್ಟಡಿ ವಿಚಾರಣೆ ನಡೆಸಲಾಗುತ್ತದೆ. ಅಹ್ಮದಾಬಾದ್-ಜೈಪುರ-ದೆಹಲಿ ಸರಣಿ ಬಾಂಬ್ ಸ್ಫೋಟಗಳ ರೂವಾರಿ ಎಂದು ಪರಿಗಣಿಸಲ್ಪಟ್ಟ ಅಬು ಬಷೀರನನ್ನು ೬ ತಿಂಗಳಿಗಿಂತ ಹೆಚ್ಚು ಕಾಲ ಪೋಲೀಸು ಕಸ್ಟಡಿಯಲ್ಲಿಡಲಾಗಿದೆ. ಅವನ ವಿರುದ್ಧ ೨೫ಕ್ಕಿಂತ ಹೆಚ್ಚು ಎಫ್‌ಐಆರ್‌ಗಳು ಸ್ಫೋಟ ನಡೆದ ನಗರಗಳಲ್ಲಿ ದಾಖಲಾಗಿವೆ. ಒಂದಾದ ಮೇಲೆ ಒಂದರ ಅಡಿಯಲ್ಲಿ ಆತನನ್ನು ಬಂಧಿಸಲಾಗುತ್ತಿದೆ.

ಅಪರಾಧ ದಂಡ ಸಂಹಿತೆ ವಿಧಿಸುವ ಪ್ರಕಾರ: ೯೦ ದಿನದೊಳಗಾಗಿ ಬಂಧಿತ ವ್ಯಕ್ತಿಯ ಆರೋಪಪಟ್ಟಿ ಸಲ್ಲಿಸದಿದ್ದಲ್ಲಿ ಆತ ಜಾಮೀನು ಪಡೆಯಲು ಅರ್ಹನಾಗುತ್ತಾನೆ. ಏಕೆಂದರೆ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಪೋಲೀಸರು ಆರೋಪ ಪಟ್ಟಿ ಸಲ್ಲಿಸುವವರೆಗೆ ಜಾಮೀನು ಸಿಗುವುದು ಅಸಾಧ್ಯ. ಈಗ ಮಾಡಿರುವ ಹೊಸ ತಿದ್ದುಪಡಿಯ ಪ್ರಕಾರ ಬಂಧಿತನ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಇರುವ ಗಡುವನ್ನು ೧೮೦ ದಿನಗಳಿಗೆ ವಿಸ್ತರಿಸಲಾಗಿದೆ. ಮತ್ತೊಂದು ತಿದ್ದುಪಡಿಯು ವಿಚಾರಣೆ ಸಂದರ್ಭದಲ್ಲಿ ಜಾಮೀನು ಪಡೆಯುವುದನ್ನು ಅಕ್ಷರಶಃ ಅಸಾಧ್ಯವಾಗಿ ಮಾಡಿದೆ. ಅದರ ಪ್ರಕಾರ ‘ಒಂದು ವೇಳೆ ನ್ಯಾಯಾಲಯಕ್ಕೆ ಕೇಸ್ ಡೈರಿಯ ಸೂಕ್ಷ್ಮ ಪರಿಶೀಲನೆ ಅಥವಾ ಸೆಕ್ಷನ್ ೧೭೩ ಆಧಾರದ ಆರೋಪಪಟ್ಟಿಯ ಆಧಾರದಲ್ಲಿ ಆರೋಪಿಯ ಮೇಲೆ ಹೊರಿಸಲಾದ ಆರೋಪವು ಸತ್ಯ ಎಂದು ಕಂಡುಬಂದಲ್ಲಿ, ಆರೋಪಿಯು ಜಾಮೀನು ಮೇಲಾಗಲೀ ಅಥವಾ ಬಾಂಡ್ ಆಧಾರದ ಮೇಲಾಗಲೀ ಬಿಡುಗಡೆಯಾಗಲಾರ.’

ಈ ತಿದ್ದುಪಡಿಗಳು UಂPಂ ಯನ್ನು Pಔಖಿಂ ಗಿಂತ ಕ್ರೂರ ಕಾನೂನನ್ನಾಗಿ ಮಾಡಿವೆ. Pಔಖಿಂ ದಲ್ಲಿದ್ದು ಇದರಲ್ಲಿಲ್ಲದ ಒಂದೇ ಅಂಶವೆಂದರೆ ಪೋಲೀಸ್ ತಪ್ಪೊಪ್ಪಿಗೆಯನ್ನು ಸಾಕ್ಷಿಯೆಂದು ಪರಿಗಣಿಸುವುದು.

ಕ್ರೂರ ಕಾನೂನುಗಳು ಭ್ರಷ್ಟ ಹಾಗೂ ಕೋಮುವಾದಿ ಪೋಲೀಸರ ಕೈಗೆ ಸಿಕ್ಕರೆ ಅವು ಭಯೋತ್ಪಾದನೆಯನ್ನು ನಿಗ್ರಹಿಸುವುದಲ್ಲ, ಅದನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿರುವುದು ನಮ್ಮ ಕಣ್ಣ ಮುಂದಿದೆ. ಈ ನೆಲದ ಸಾದಾ ಕಾನೂನುಗಳು ಭಯೋತ್ಪಾದಕ ಕೃತ್ಯಗಳ ತನಿಖೆಗೂ ಸಾಕು. ಸಮಸ್ಯೆಯಿರುವುದು ಅನುಷ್ಠಾನಗೊಳಿಸಬೇಕಾದ ಪೋಲೀಸ್ ವ್ಯವಸ್ಥೆಯಲ್ಲಿ. ಸೆಪ್ಟೆಂಬರ್ ೨೦೦೬ರ ಹಲವು ತಜ್ಞ ಸಮಿತಿಯ ವರದಿಗಳಲ್ಲಿ ಹೇಳಿರುವಂತೆ ಪೋಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಲ್ಲಿ ಸ್ವತಂತ್ರ ರಾಜ್ಯ ಮತ್ತು ರಾಷ್ಟ್ರ ಸುರಕ್ಷಾ ಆಯೋಗಗಳ ಸ್ಥಾಪನೆ, ಪೋಲೀಸ್ ಸಿಬ್ಬಂದಿ ಮಂಡಳಿ, ಪೋಲೀಸ್ ದೂರು ಪ್ರಾಧಿಕಾರಗಳ ಸ್ಥಾಪನೆ, ಪೋಲೀಸ್ ಕೇತ್ರಕಾರ್ಯ ನಡೆಸುವ ಎಲ್ಲ ಹಂತಗಳ ಮುಖ್ಯಸ್ಥರನ್ನು ಅತಿ ಕಡಿಮೆ ಅವಧಿಗೆ ನೇಮಕಾತಿ ಮಾಡುವುದು ಇವೆಲ್ಲ ಸೇರಿವೆ. ಈ ಸುಧಾರಣೆಗಳ ಉದ್ದೇಶ ಪೋಲೀಸ್ ಮತ್ತು ತನಿಖಾ ತಂಡಗಳಿಗೆ ಉತ್ತರದಾಯಿತ್ವ ತರುವುದು ಹಾಗೂ ಅವನ್ನು ರಾಜಕಾರಣದ ಕಪಿಮುಷ್ಟಿಯಿಂದ ಬಿಡಿಸುವುದು. ಆದರೆ ಈ ಸುಧಾರಣೆಗಳನ್ನು ಕೇಂದ್ರವಾಗಲೀ, ರಾಜ್ಯ ಸರ್ಕಾರಗಳಾಗಲೀ ಅನುಷ್ಠಾನಕ್ಕೆ ತರಲಿಲ್ಲ. ಯಾವುದೇ ರಾಜಕೀಯ ಪಕ್ಷವೂ ಪೋಲೀಸ್ ವ್ಯವಸ್ಥೆಯ ಮೇಲಿನ ತನ್ನ ಹಿಡಿತ ಬಿಟ್ಟುಕೊಡಲು ಸಿದ್ಧವಿಲ್ಲ.

ಪೋಲೀಸ್ ಮತ್ತು ಗುಪ್ತಚರ ವಿಭಾಗದೊಳಗಿನ ಸುಧಾರಣೆಗಳು ಭದ್ರತೆಯನ್ನು ಹೆಚ್ಚಿಸಿ ಭಯೋತ್ಪಾದನಾ ಕೃತ್ಯಗಳನ್ನು ಕಡಿಮೆ ಮಾಡುವುದರಲ್ಲಿ ಅನುಮಾನವಿಲ್ಲ. ಆದರೆ ಇದು ಸಮಸ್ಯೆಯನ್ನು ನಿವಾರಿಸುವುದಿಲ್ಲ. ಅತಿ ದಕ್ಷ ಪೋಲೀಸ್, ಭದ್ರತಾ ವಿಭಾಗ, ಗುಪ್ತಚರ ವ್ಯವಸ್ಥೆ ಹೊಂದಿರುವ ಇಸ್ರೇಲಿನಲ್ಲಿ ಅದು ಸಣ್ಣ ದೇಶವಾಗಿದ್ದರೂ ಭಯೋತ್ಪಾದನೆ ತಡೆಗಟ್ಟಲಾಗಿಲ್ಲ. ಪ್ರತಿ ತಿಂಗಳೂ ಒಂದಾದರೂ ಆತ್ಮಹತ್ಯಾ ದಾಳಿ ಅಲ್ಲಿ ನಡೆಯುತ್ತದೆ. ತನ್ನ ಜೀವವನ್ನೇ ಕೊಡಲು ತಯಾರಿರುವ ಭಯೋತ್ಪಾದಕರನ್ನು ಯಾವ ಭದ್ರತೆಯಾಗಲೀ, ಗುಪ್ತಚರ ವ್ಯವಸ್ಥೆಯಾಗಲೀ ನಿಯಂತ್ರಿಸುವುದು ಸಾಧ್ಯವಿಲ್ಲ. ಅವರ ಪ್ರಚೋದನೆಯನ್ನು ನಾಶ ಮಾಡಿದರೆ ಮಾತ್ರ ಅವರನ್ನು ತಡೆಯಬಹುದು. ಇದಕ್ಕೆ ೯/೧೧ರ ಬಳಿಕ ಚೋಮ್‌ಸ್ಕಿ ನೀಡಿದ ಸಲಹೆ ಅವಶ್ಯವಿದೆ: ‘ ಈ ೯/೧೧ರ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ನಮಗೊಂದು ಆಯ್ಕೆಯಿದೆ. ನಾವು ನ್ಯಾಯಯುತ ದಿಗ್ಭ್ರಮೆ ವ್ಯಕ್ತಪಡಿಸಬಹುದು; ಈ ಅಪರಾಧಕ್ಕೆ ಕಾರಣವೇನೆಂದು ಅರಿತುಕೊಳ್ಳಲು ಯತ್ನಿಸಬಹುದು; ಎಂದರೆ ಅಪರಾಧಿಯ ಪರಕಾಯ ಪ್ರವೇಶ ಅಥವಾ ಅಂತಃಸ್ಸಾಕ್ಷಿಯ ಪ್ರವೇಶ ಮಾಡಬಹುದು.. ಮುಂದೆ ಇನ್ನೂ ಕ್ರೂರವಾದ ದಿನಗಳು ಬರಲಿವೆ ಎಂಬುದರ ಸಂಭವನೀಯತೆಯನ್ನು ಒಪ್ಪಬಹುದು ಅಥವಾ ಬಿಡಬಹುದು.’

ಕೊನೆಗೂ ಭಯೋತ್ಪಾದಕನ ಪ್ರಚೋದನೆಯನ್ನು ಅರ್ಥಮಾಡಿಕೊಳ್ಳುವುದು, ಸಮಾಜದಲ್ಲಿರುವ ಅದರಲ್ಲೂ ಪೋಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಅನ್ಯಾಯ ಸರಿಪಡಿಸುವುದೇ ಮುಂತಾದ ಕ್ರಮಗಳಿಂದ, ಕ್ರೂರ ಕಾನೂನುಗಳನ್ನು ಭ್ರಷ್ಟ ಮತ್ತು ಅಸೂಕ್ಷ್ಮ ಪೋಲೀಸ್ ಸಂಸ್ಥೆಗಳಿಗೆ ಕೊಡುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಭಯೋತ್ಪಾದನೆಯನ್ನು ನಿಗ್ರಹಿಸಬಹುದು.

(ಈ ಲೇಖನ ೨೦೦೯ರ ಜೂನ್‌ನಲ್ಲಿ ’ದಿ ಹಿಂದು’ನಲ್ಲಿ ಪ್ರಕಟವಾಗಿತ್ತು.

ಪ್ರಶಾಂತ್ ಭೂಷಣ್ ಖ್ಯಾತ ಸುಪ್ರೀಂ ಕೋರ್ಟ್ ವಕೀಲರೂ, ನಾಗರಿಕ ಸ್ವಾತಂತ್ರ ಮತ್ತು ಮಾನವ ಹಕ್ಕುಗಳ ಪ್ರತಿಪಾದಕರೂ ಆಗಿದ್ದಾರೆ. ಮೊರಾರ್ಜಿ ದೇಸಾಯಿ ಮಂತ್ರಿ ಮಂಡಲದಲ್ಲಿ ಕಾನೂನು ಮಂತ್ರಿಯಾಗಿದ್ದ ಶಾಂತಿಭೂಷಣ್‌ರ ಮಗ ಇವರು. ನರ್ಮದಾ ಬಚಾವೋ, ಬೋಫೋರ್ಸ್ ಹಗರಣ, ಜೈನ್ ಹವಾಲಾ ಹಗರಣ, ಎನ್ರಾನ್ ವಿವಾದ, ಮಾಹಿತಿ ಹಕ್ಕಿನಡಿಯಲ್ಲಿ ಸುಪ್ರೀಂಕೋರ್ಟ್, ತೈಲ ಕಂಪನಿಗಳಿಂದ ಬಂಡವಾಳ ಹಿಂತೆಗೆತ ಮುಂತಾದ ಪ್ರಸಿದ್ಧ ಕೇಸುಗಳಲ್ಲಿ ವಾದಿಸಿದ ಇವರು, ಅರುಂಧತಿ ರಾಯ್ ಮತ್ತು ಆಶಿಶ್ ನಂದಿ ಅವರ ಪರವಾಗಿಯೂ ವಾದಿಸಿದ್ದಾರೆ. ೫೪ ವರ್ಷದ ಪ್ರಶಾಂತ್ ಭೂಷಣ್ ೧೯೮೩ರಿಂದ ಸುಪ್ರೀಂಕೋರ್ಟಿನಲ್ಲಿ ಲಾಯರಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ, ಮಾನವ ಹಕ್ಕು, ಪರಿಸರ ರಕ್ಷಣೆ ವಿಷಯಗಳು, ಸಾರ್ವಜನಿಕ ಸೇವೆಯಲ್ಲಿರುವವರ ಉತ್ತರದಾಯಿತ್ವ - ಈ ಎಲ್ಲವೂ ಇವರ ಆಸಕ್ತಿಯ ವಿಷಯಗಳು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಭ್ರಷ್ಟಾಚಾರದ ಕುರಿತು ನಿರ್ಭೀತಿಯಿಂದ ವಾದಿಸುವ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಎಂಬ ಅಸ್ತ್ರಕ್ಕೂ ಹೆದರದೆ ಮಾತನಾಡುತ್ತಾರೆ.)

ಖೈರ್ಲಾಂಜಿ ಪ್ರಕರಣದ ಹೈಕೋರ್ಟ್ ತೀರ್ಪು: ಕುಗ್ಗಿಹೋದ ನ್ಯಾಯ

ಬಹಳ ದಿನಗಳಿಂದ ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಖೈರ್ಲಾಂಜಿ ಹತ್ಯಾಕಾಂಡ ಕುರಿತ ಹೈಕೋರ್ಟ್ ತೀರ್ಪು ಹೊರಬಿದ್ದಿದೆ. ನಾಗಪುರದ ಹೈಕೋರ್ಟ್ ಪೀಠ, ಭಂಡಾರದ ತ್ವರಿತ ನ್ಯಾಯಾಲಯ ಆರು ಜನ ಆರೋಪಿಗಳಿಗೆ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಖಾಯಂಗೊಳಿಸುತ್ತದೆ ಎಂದು ಭಾವಿಸಲಾಗಿತ್ತು. ಆರು ಜನ ಆರೋಪಿಗಳಿಗಿ ಭಂಡಾರದ ತ್ವರಿತ ನ್ಯಾಯಾಲಯ ನೀಡಿದ್ದ ಮರಣದಂಡನೆ ತೀರ್ಪನ್ನು ಪುನರ್‌ಪರಿಶೀಲಿಸಲು ಆರೋಪಿಗಳು ನಾಗಪುರದ ಹೈಕೋರ್ಟ್ ಪೀಠಕ್ಕೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಇದರ ಜೊತೆಗೆ ಪ್ರಕರಣಕ್ಕೆ ಸಂಬಂದಿsಸಿದಂತೆ ಸಿಬಿಐ ಸಹ ಹೈಕೋರ್ಟ್‌ಗೆ ಎರಡು ಅರ್ಜಿಗಳನ್ನು ಸಲ್ಲಿಸಿತ್ತು. ಈ ನಾಲ್ಕು ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಂಡ ಹೈಕೋರ್ಟ್ ಜುಲೈ ೧೪ ರಂದು ತನ್ನ ತೀರ್ಪನ್ನು ಪ್ರಕಟಿಸಿದೆ. ನಿರೀಕ್ಷೆಯಂತೆ ಬಾಂಬೆ ಹೈಕೋರ್ಟ್‌ನ ನಾಗಪುರ ಬೆಂಚಿನ ನ್ಯಾಯ್ಯಾದಿsಶರಾದ ಎ ಪಿ ಲಾವಂಡೆ ಮತ್ತು ಆರ್ ಸಿ ಚವ್ಹಾನ್ ಖೈರ್ಲಾಂಜಿಯಲ್ಲಿ ನಾಲ್ಕು ಜನ ದಲಿತರನ್ನು ಕೊಂದ ಆರು ಜನ ಪಾತಕಿಗಳಿಗೆ ವಿದಿsಸಿದ್ದ ಮರಣದಂಡನೆಯನ್ನು ರದ್ದು ಪಡಿಸಿ, ೨೫ ವರ್ಷದ ಜೀವಾವದಿs ಶಿಕ್ಷೆಯನ್ನು ನೀಡಿ ತೀರ್ಪಿತ್ತಿದ್ದಾರೆ. ನಾಗಪುರದ ಗೌರವಾನ್ವಿತ ಹೈಕೋರ್ಟ್ ಈ ಪ್ರಕರಣವನ್ನು ’ಅಪರೂಪದಲ್ಲಿಯೇ ಅಪರೂಪದ್ದು’ ಎಂದು ಪರಿಗಣಿಸಲೇ ಇಲ್ಲ. ಈ ಹತ್ಯೆಗಳ ಹಿಂದಿದ್ದ ಜಾತಿ ವೈಷಮ್ಯ ಮತ್ತು ನಿಶ್ಚಿತ ಕೊಲೆ ಸಂಚಿನ ಕ್ರೂರ ಪಾತಕದ ಹುನ್ನಾರನ್ನು ಕೋರ್ಟ್ ಅರ್ಥಮಾಡಿಕೊಳ್ಳಲಿಲ್ಲ. ಈ ಹಿಂದೆ ಭಂಡಾರ ತ್ವರಿತ ನ್ಯಾಯಲಯ ಎಂಟು ಜನ ಆರೋಪಿಗಳಲ್ಲಿ ಆರು ಜನಕ್ಕೆ ಮರಣದಂಡನೆಯನ್ನು ವಿದಿsಸಿತ್ತು. ನ್ಯಾಯಾಲಯದ ಈ ತೀರ್ಪು ದಲಿತರಲ್ಲಿ ಸಹಜವಾಗಿಯೇ ಹರ್ಷವನ್ನುಂಟು ಮಾಡಿತ್ತು. ಆದರೆ ಆರೋಪಿಗಳಿಗೆ ಮರಣದಂಡನೆಯನ್ನು ರದ್ದು ಮಾಡಿರುವ ಹೈಕೋರ್ಟ್‌ನ ತೀರ್ಪು ಇವರಲ್ಲಿ ತಲ್ಲಣವನ್ನುಂಟು ಮಾಡಿದೆ. ಎಲ್ಲಾ ಪ್ರಕರಣಗಳಂತೆ ಇಲ್ಲಿಯೂ ಕೋರ್ಟ್ ಮೂಲಕ ನ್ಯಾಯ ಪಡೆಯುವ ಸಲುವಾಗಿ ಈ ಪ್ರಕರಣವೂ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಲಿದೆ. ಇದು ತಾತ್ಕಾಲಿಕವಾಗಿ ದಲಿತರ ದುಗುಡಗಳನ್ನು ಸ್ವಲ್ಪ ಮಟ್ಟಿಗೆ ಶಮನಗೊಳಿಸಲಿದೆ. ಆದರೆ ಖೈರ್ಲಾಂಜಿಯು ನಮ್ಮ ವ್ಯವಸ್ಥೆಯ ಅಂತರ್ಗತ ಕರಾಳ ಮುಖಗಳನ್ನು ತೆರೆದಿಡುತ್ತಲೇ ಹೋಗುತ್ತಿದೆ.
ಊರ್ಜಿತಗೊಳ್ಳದ ಮರಣದಂಡನೆ
ಒಬ್ಬ ದಲಿತ ತಾಯಿ, ಆಕೆಯ ಮಗಳು ಮತ್ತು ಉಳಿದ ಇಬ್ಬರು ಗಂಡು ಮಕ್ಕಳನ್ನು ಖೈರ್ಲಾಂಜಿಯಲ್ಲಿ ಹತ್ಯೆ ಮಾಡಲಾಗಿತ್ತು. ಸವರ್ಣೀಯ ಜಾತ್ಯಾಂಧರ ಉನ್ಮತ್ತ ಅಹಂಕಾರ ಮತ್ತು ನಿರಂತರವಾಗಿ ಸಾಕಿಕೊಂಡು ಬಂದ ಜಾತಿ ವೈಷಮ್ಯಗಳು ಖೈರ್ಲಾಂಜಿಯ ನಾಲ್ಕು ಜನ ಸ್ವಾಬಿsಮಾನಿ, ಅಸಹಾಯಕ ದಲಿತರ ಹತ್ಯೆಗೆ ಕಾರಣವಾಗಿದ್ದವು. ಹತ್ಯೆಗಳು ನಡೆದು ಬಹಳ ದಿನಗಳ ಕಾಲ ಯಾರ ಗಮನಕ್ಕೂ ಬಾರದ ಈ ಪ್ರಕರಣ ಆನಂತರ ಭುಗಿಲೆದ್ದ ಸ್ವಯಂಪ್ರೇರಿತ ಪ್ರತಿಭಟನೆಗಳಿಂದ ರಾಜ್ಯಾದ್ಯಂತ ಎಲ್ಲರೂ ಈ ಕಡೆ ಗಮನ ಹರಿಸುವಂತಾಯ್ತು. ಜನರ ಸ್ವಯಂಪ್ರೇರಿತ ಪ್ರತಿಭಟನೆಗಳನ್ನು ಪ್ರಭುತ್ವ ಹತ್ತಿಕ್ಕಲು ತನ್ನೆಲ್ಲ ಶಕ್ತಿಯನ್ನು ಬಳಸಿತು. ಈ ಪ್ರತಿಭಟನೆಗಳ ಹಿಂದೆ ನಕ್ಸಲೀಯರಿದ್ದಾರೆ ಎಂದು ಪ್ರಭುತ್ವ ಎಲ್ಲರನ್ನು ದಾರಿ ತಪ್ಪಿಸಲು ನೋಡಿತು. ಜನರ ಪ್ರತಿಭಟನೆಗಳ ಒತ್ತಡ ತಾಳಲಾರದೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಲ್ಲದೆ, ಈ ಪ್ರಕರಣದ ವಿಚಾರಣೆ ನಡೆಸಲು ಭಂಡಾರ ಸೆಷನ್ ಕೋರ್ಟ್‌ನಲ್ಲಿ ತ್ವರಿತ ನ್ಯಾಯಾಲಯವನ್ನು ಸರಕಾರ ಸ್ಥಾಪಿಸಿತು. ಇಷ್ಟಾಗಿಯೂ ಈ ಪ್ರಕರಣವು ತನ್ನ ಕೈತಪ್ಪಿ ಹೋಗದಂತೆ ನೋಡಿಕೊಳ್ಳಲು ಸರಕಾರ ತನ್ನದೇ ಆದ ಒಬ್ಬ ಪ್ರಾಸಿಕ್ಯೂಟರನ್ನು ನೇಮಿಸಿತು. ಖೈರ್ಲಾಂಜಿ ಪ್ರಕರಣವನ್ನು ಪತ್ತೆ ಹಚ್ಚಿ ಇದರ ವಿರದ್ಧ ರಾಜ್ಯವ್ಯಾಪಿ ಹೋರಾಟಕ್ಕೆ ಕಾರಣವಾದ ಸಂಸ್ಥೆಯೊಂದು ಹತ್ಯೆಯಾದ ದಲಿತರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ಪ್ರಸಿದ್ಧ ವಕೀಲರಾದ ಶಶಿಭೂಷಣ್ ವಹಾನೆಯವರನ್ನು ನೇಮಿಸಲು ಕೋರಿತ್ತು. ಆದರೆ ಪ್ರಭುತ್ವ ತನ್ನದೇ ಆದ ಪ್ರಾಸಿಕ್ಯೂಟರನ್ನು ನೇಮಿಸಿಬಿಟ್ಟಿತು. ಇದಾದ ನಂತರ ತ್ವರಿತ ನ್ಯಾಯಾಲಯ ಖೈರ್ಲಾಂಜಿ ಪ್ರಕರಣವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಟ್ರಾಸಿಟಿ ಕಾಯ್ದೆಯ (Sಛಿheಜuಟeಜ ಅಚಿsಣe ಚಿಟಿಜ Sಛಿheಜuಟeಜ ಣಡಿibe ಠಿಡಿeveಟಿಣioಟಿ oಜಿ ಂಣಡಿಚಿಛಿiಣಥಿ ಂಛಿಣ ೧೯೮೯) ಅಡಿಯಲ್ಲಿ ಪರಿಗಣಿಸಬೇಕಿತ್ತು. ಆದರೆ ತ್ವರಿತ ನ್ಯಾಯಾಲಯ ಒಂದು ತೀರ್ಮಾನಕ್ಕೆ ಬಂತು. ಖೈರ್ಲಾಂಜಿಯ ಸದರಿ ಪ್ರಕರಣವು ಜಾತಿ ದ್ವೇಷದ ಹಿನ್ನೆಲೆಯಲ್ಲಿ ನಡೆದಿಲ್ಲ. (ಈ ಕಾರಣಕ್ಕೆ ಂಣಡಿಚಿಛಿiಣಥಿ ಂಛಿಣ ನ್ನು ಅನ್ವಯಿಸಲಾಗುವುದಿಲ್ಲ) ಜೊತೆಗೆ ಹೆಣ್ಣಿನ ಶೀಲದ ಮೇಲೆ ಅತ್ಯಾಚಾರ ನಡೆದಿಲ್ಲ. ಆದ್ದರಿಂದ ಈ ಹತ್ಯೆಗಳು ಪೂರ್ವನಿಯೋಜಿತವಲ್ಲ ಎಂಬ ತೀರ್ಮಾನಕ್ಕೆ ತ್ವರಿತ ನ್ಯಾಯಾಲಯ ಬಂದಿತು. ಇದರಿಂದಾಗಿ ಖೈರ್ಲಾಂಜಿಯ ಜಾತ್ಯಾಂಧ ರಕ್ತಸಿಕ್ತ ಹಿಂಸಾಕೃತ್ಯವು ಕೇವಲ ಸಾಮಾನ್ಯ ಅಪರಾಧದ ಮಟ್ಟಕ್ಕೆ ಇಳಿದು ಹೋಯ್ತು. ಈ ವ್ಯವಸ್ಥಿತ ಹಿಂಸಾಕೃತ್ಯ, ತಕ್ಷಣಕ್ಕೆ ಆವೇಶಕ್ಕೊಳಗಾದ ಗುಂಪಿನ ಅನುಚಿತ ಅಪರಾಧವಾಗಿ ಪರಿಗಣಿಸಲ್ಪಟ್ಟಿತು. ಆದರೆ ಭಂಡಾರದ ತ್ವರಿತ ನ್ಯಾಯಾಲಯ ಎಂಟು ಜನ ಆರೋಪಿಗಳಲ್ಲಿ ಆರು ಜನರಿಗೆ ಮರಣದಂಡನೆ ಮತ್ತು ಇಬ್ಬರಿಗೆ (ಈ ಇಬ್ಬರು ವಯಸ್ಸಿನಲ್ಲಿ ಚಿಕ್ಕವರು ಎಂಬ ಕಾರಣಕ್ಕೆ) ಜೀವಾವದಿs ಶಿಕ್ಷೆ ವಿದಿsಸಿತು. ನ್ಯಾಯಾಲಯ ಖೈರ್ಲಾಂಜಿಯ ಪ್ರಕರಣವನ್ನು ಸರಳವಾಗಿ ಪರಿಗಣಿಸಿದರೂ ಅಪರಾದಿsಗಳಿಗೆ ಮರಣದಂಡನೆ ವಿದಿsಸಲ್ಪಟ್ಟಿದ್ದರಿಂದ, ದಲಿತರು ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲರೂ ನಿಟ್ಟುಸಿರು ಬಿಡುವಂತಾಯ್ತು.
ಭಾರತದ ಚರಿತ್ರೆಯಲ್ಲಿ ನ್ಯಾಯಾಲಯದ ಈ ತೀರ್ಪನ್ನು ಒಂದು ಮೈಲಿಗಲ್ಲೆಂದೇ ಭಾವಿಸಲಾಯಿತು. ಕಾರಣ ಭಾರತದಲ್ಲಿ ಜಾತಿ ದೌರ್ಜನ್ಯದ ಪ್ರಕರಣದಲ್ಲಿ ಮರಣದಂಡನೆ ವಿದಿsಸಿದ ಮೊದಲ ಪ್ರಕರಣ ಇದಾಗಿತ್ತು. ತಮಗೆ ನ್ಯಾಯ ಸಿಕ್ಕಿತೆಂದು ದಲಿತ ನಾಯಕರು ಸಾರ್ವಜನಿಕವಾಗಿ ಸಿಹಿ ಹಂಚಿ ಸಂತೋಷಪಟ್ಟರು. ಈ ಕೇಸಲ್ಲಿ ವಾದ ಮಾಡಿದ ಅತ್ಯಂತ ಪ್ರಭಾವಿ ಪ್ರಾಸಿಕ್ಯೂಟರಾದ ಉಜ್ವಲ್ ನಿಕ್ಕಮ್ ಅವರನ್ನು ರಾಮದಾಸ್ ಅಠವಾಲೆ ಸನ್ಮಾಸಿದರು. ಆದರೆ ಇದೇ ಉಜ್ವಲ್ ನಿಕ್ಕಮ್ ಕೆಲವೇ ವರ್ಷಗಳ ಹಿಂದೆ ರಾಮಬಾಯಿ ನಗರದಲ್ಲಿ ದಲಿತರ ಮೇಲೆ ವಿನಾಕಾರಣ ಗೋಲಿಬಾರ್ ಮಾಡಿಸಿ ೧೦ ಜನ ದಲಿತರನ್ನು ಕೊಂದ ಕ್ರೂರ ಪಾತಕಿ ಮನೋಹರ್ ಕದಮ್‌ನನ್ನು ನ್ಯಾಯಾಲಯದ ಶಿಕ್ಷೆಯಿಂದ ಕಾಪಾಡಿದ್ದರು ಎಂಬ ಸತ್ಯವನ್ನು ಅವರು ಮರೆತಿದ್ದರು. (೧೯೯೭ರ ಜುಲೈ ೪ರಂದು ಮನೋಹರ್ ಕದಮ್ ಎಂಬ ಸಬ್‌ಇನ್‌ಸ್ಪೆಕ್ಟರ್ ರಾಮಾಬಾಯಿ ನಗರದಲ್ಲಿ ಬೆಳಗಿನ ಜಾವ ೭.೪೫ರ ಹೊತ್ತಿಗೆ ದಲಿತರ ಮೇಲೆ ಅಕಾರಣವಾಗಿ ಗೋಲಿಬಾರ್ ಮಾಡಿಸಿದ್ದ. ರಾಮಾಬಾಯಿ ನಗರದ ದಲಿತರು ಅಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಯಾರೋ ಅವಮಾನ ಮಾಡಿದ್ದರಿಂದ ಆರೋಪಿಗಳನ್ನು ಬಂದಿsಸಲು ಕೆಲವು ದಿನಗಳಿಂದ ಚಳುವಳಿ ನಡೆಸಿದ್ದರು. ಯಾವ ಪ್ರಚೋದನೆ, ದೊಂಬಿ, ಆಕ್ರಮಣ ಮತ್ತು ಗಲಭೆಗಳೇ ಇಲ್ಲದ ಒಂದು ಮುಂಜಾವಿನಲ್ಲಿ ಈ ಮನೋಹರ್ ಕದಮ್ ನಿರಾಯುಧರಾಗಿದ್ದ ದಲಿತರ ಮೇಲೆ ಗೋಲಿಬಾರ್ ಮಾಡಿಸುತ್ತಾನೆ. ಈ ಗೋಲಿಬಾರ್‌ನಲ್ಲಿ ೧೦ ಜನ ಸಾವನ್ನಪುತ್ತಾರೆ. ೨೫ ಜನ ದಲಿತರು ಗಾಯಗೊಳ್ಳುತ್ತಾರೆ. ಈ ಮನೋಹರ್ ಕದಮ್‌ನನ್ನು ಈ ಪ್ರಕರಣದಲ್ಲಿ ೨೦೦೭ರವರೆಗೆ ಆರೋಪಿಯೆಂದು ಪೋಲೀಸರು ಬಂದಿsಸಿರಲಿಲ್ಲ. ಆದರೆ ತನಿಖಾ ತಂಡಗಳ ವರದಿಯ ಆಧಾರದ ಮೇಲೆ ಅವನನ್ನು ಬಂದಿsಸಿ ವಿಚಾರಣೆಗೊಳಪಡಿಸಿದ ಮೇಲೆ ಮೇ ೭ ೨೦೦೯ ರಂದು ಈತನಿಗೆ ನ್ಯಾಯಾಲಯ ಜೀವಾವದಿs ಶಿಕ್ಷೆ ವಿದಿsಸುತ್ತದೆ. ಆದರೆ ಮೇ ೨೨ರಂದೇ ಆತನಿಗೆ ಹೈಕೋರ್ಟ್‌ನಲ್ಲಿ ಮೇಲ್ಮನವಿಗೆ ಅವಕಾಶ ಸಿಕ್ಕು ಬೇಲ್ ಮೇಲೆ ಬಿಡುಗಡೆಯಾಗುತ್ತಾನೆ. -ಅನುವಾದಕ) ಅಂದಿನಿಂದ ಈ ಹತ್ಯಾಕಾಂಡದ ನೆನಪಿಗೆ ಪ್ರತಿ ವರ್ಷ ರಾಮಾಬಾಯಿ ನಗರದ ದಲಿತರು, ಗೋಲಿಬಾರ್‌ನಲ್ಲಿ ಸತ್ತವರ ನೆನಪಿಗೆ ಹುತಾತ್ಮ ದಿನಾಚರಣೆಯನ್ನು ಆಚರಿಸುತ್ತಲೇ ಬಂದಿದ್ದಾರೆ. ಈಗ ಇದೇ ದಲಿತರು ತಮ್ಮ ನಾಯಕನ ಈ ವರ್ತನೆಯನ್ನು ಉದಾರ ಹೃದಯದಿಂದ ಕ್ಷಮಿಸಿಬಿಟ್ಟರು. ದಲಿತರು ರಾಮಾಬಾಯಿ ನಗರದಲ್ಲಿ ಘಟಿಸಿದ ಕೃತ್ಯವನ್ನು ಸರಳವಾಗಿ ಪರಿಗಣಿಸಿದರೇ? ಖೈರ್ಲಾಂಜಿಯ ಹತ್ಯಾಕಾಂಡವನ್ನು ಶತಮಾನಗಟ್ಟಲೆ ಸಾಕಿಕೊಂಡು ಬಂದ ಜಾತಿ ಸಂಘರ್ಷದ ಪರಿಣಾಮ ಎಂದು ಅರ್ಥ ಮಾಡಿಕೊಳ್ಳಲು ಕಷ್ಟಪಡಬೇಕಿಲ್ಲ. ದುರಾದೃಷ್ಟದ ಸಂಗತಿಯೆಂದರೆ ಪ್ರಾಸಿಕ್ಯೂಷನ್‌ವರು ಈ ಜಾತಿ ಸಂಘರ್ಷದ ವಿಷಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲೇ ಇಲ್ಲ. ಇಬ್ಬರು ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ಕ್ರೂರ ಅತ್ಯಾಚಾರವನ್ನು ಸತ್ಯಶೋಧನಾ ತಂಡಗಳು ಬೆಳಕಿಗೆ ತಂದವು. ಆದರೆ ಪೋಸ್ಟ್‌ಮಾರ್ಟಂನಲ್ಲಿ ಆದ ತಪುಗಳಿಂದಾಗಿ ಅತ್ಯಾಚಾರಗಳು ನಡೆದಿವೆ ಎಂದು ಕೋರ್ಟ್‌ನಲ್ಲಿ ಪ್ರೂವ್ ಮಾಡಲಾಗಲಿಲ್ಲ. ಆದರೆ ಅರೆಬೆತ್ತಲಾಗಿ ಬಿದ್ದಿದ್ದ ಆ ಅಮಾಯಕ ಹೆಣ್ಣುಮಕ್ಕಳ ಶವಗಳು ಗಟ್ಟಿಯಾಗಿ ಕೂಗುತ್ತಿದ್ದವು ತಮ್ಮ ಮೇಲೆ ಅತ್ಯಾಚಾರವಾಗಿದೆ ಎಂದು. ಈ ಎಲ್ಲಾ ಸ್ಪಷ್ಟ ವಿಚಾರಗಳನ್ನು ಪ್ರಾಸಿಕ್ಯೂಷನ್‌ವರು ಕೋರ್ಟ್‌ಗೆ ಹೇಳಲೇ ಇಲ್ಲ. ಸಿದ್ಧಾರ್ಥ್ ಗಜಬೆ ಮೇಲೆ ಹಲ್ಲೆ ಮಾಡಿದವರನ್ನು ಪೋಲೀಸರ ಮುಂದೆ ಪ್ರಿಯಾಂಕ ಮತ್ತು ಸುರೇಖ ಗುರುತಿಸಿದ್ದರು. ಈ ಕಾರಣಕ್ಕಾಗಿಯೇ ಸುರೇಖ ಮತ್ತು ಪ್ರಿಯಾಂಕರ ಮೇಲೆ ಖೈರ್ಲಾಂಜಿಯ ಗ್ರಾಮಸ್ಥರು ಯೋಜಿತ ಕೃತ್ಯ ಎಸಗಿದ್ದಾರೆ ಎಂಬುದನ್ನು ಪ್ರಾಸಿಕ್ಯೂಷನ್‌ವರು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲಿಲ್ಲ. ಆದರೂ ಭಂಡಾರದ ತ್ವರಿತ ನ್ಯಾಯಾಲಯ ಆರು ಜನ ಆರೋಪಿಗಳಿಗೆ ಮರಣದಂಡನೆ ವಿದಿsಸಿ ತೀರ್ಪಿತ್ತಿತು. ಒಟ್ಟಾರೆ ಈ ಪ್ರಕರಣ ತ್ವರಿತ ನ್ಯಾಯಾಲಯದಲ್ಲಿ ನಿರ್ವಹಿಸಲ್ಪಟ್ಟ ರೀತಿಯಿಂದಲೇ ಅಪರಾದಿsಗಳಿಗೆ ವಿದಿsಸಿದ್ದ ಮರಣದಂಡನೆ ಮೇಲಿನ ಕೋರ್ಟ್‌ಗಳಲ್ಲಿ ಊರ್ಜಿತವಾಗುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೂ ಈ ತೀರ್ಪು ತಮಗೆ ಸಿಕ್ಕ ಜಯ ಎಂದು ದಲಿತರು ಸಿಹಿ ಹಂಚಿ ಸಂತೋಷಪಟ್ಟರು.
ಖೈರ್ಲಾಂಜಿ ಪ್ರಕರಣವನ್ನು ನ್ಯಾಯಾಲಯದ ಮುಂದೆ ಮಂಡಿಸಿದ ವಿಧಾನದಲ್ಲಿಯೇ ಲೋಪಗಳಿದ್ದವು. ಖೈರ್ಲಾಂಜಿಯ ದಲಿತ ಕುಟುಂಬದ ಮೇಲೆ ನಡೆದ ರಾಕ್ಷಸೀ ಅತ್ಯಾಚಾರ ಮತ್ತು ಕೊಲೆಗಳು ನಡೆದದ್ದು ಜಾತಿ ವೈಷಮ್ಯದ ಕಾರಣಕ್ಕೆ ಎಂಬ ಸತ್ಯವನ್ನು ಪ್ರಾಸಿಕ್ಯೂಷನ್‌ವರು ಮರೆಮಾಚಿದರು. ಜಾತಿ ದೌರ್ಜನ್ಯ ಕಾಯ್ದೆಯ (ಅಚಿsಣe ಂಣಡಿಚಿಛಿiಣಥಿ ಂಛಿಣ)ಅಡಿಯಲ್ಲಿ ಈ ಪ್ರಕರಣವನ್ನು ಪರಿಗಣಿಸುವುದೇ ಅಸಂಗತ ಎಂಬ ಸನ್ನಿವೇಶವನ್ನು ಸೃಷ್ಟಿಸಲಾಯಿತು. ಖೈರ್ಲಾಂಜಿಯಲ್ಲಿ ನಡೆದ ಕೊಲೆಗಳು ಕೇವಲ ದ್ವೇಷದಿಂದಾಗಿ ನಡೆದಿವೆ, ಇದರಲ್ಲಿ ಜಾತಿಯ ವೈಷಮ್ಯ ಭಾಗಶಃ ಇರಬಹುದಾದರೂ ಅದು ಅಪ್ರಸ್ತುತ ಎಂದು ನ್ಯಾಯಾಲಯದಲ್ಲಿ ವಾದಿಸಲಾಯಿತು. ಇಂತಹ ವಿತಂಡವಾದಕ್ಕೆ, ಜಾತಿಯ ಕಾರಣದಿಂದಲೇ ಈ ಹೀನ ಕೃತ್ಯ ಸಂಭವಿಸಿತು ಎಂದು ಯಾರಾದರೂ ಸಾದಿsಸಿ ತೋರಿಸಲು ಹೇಗೆ ಸಾಧ್ಯ? ಜಾತಿ ದೌರ್ಜನ್ಯ ಕಾಯ್ದೆಯನ್ನು ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸೇರದವರು, ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮೇಲೆ ನಡೆಸುವ ದೌರ್ಜನ್ಯ ಒಂದು ಅಪರಾಧ ಎಂದು ವ್ಯಾಖ್ಯಾನಿಸುವ ಸರಳ ಕಾಯ್ದೆ ಎಂದು ಇದನ್ನು ಪರಿಗಣಿಸಿಬಿಡಬಹುದು. ಜಾತಿ ದೌರ್ಜನ್ಯಗಳನ್ನು ತಡೆಯುವ ’ಅತ್ಯಂತ ಪ್ರಬಲ ಕಾಯ್ದೆ’ ಎಂದು ಪರಿಗಣಿತವಾಗಿರುವ ಈ ಕಾಯ್ದೆ ನ್ಯಾಯಲಯದಲ್ಲಿ ಅನ್ವಯವಾಗುವಾಗ ದುರ್ಬಲವಾಗಿಬಿಡುತ್ತದೆ. ಇಂತಹ ಅಪರೂಪದ ಸಂದರ್ಭದಲ್ಲೂ ನ್ಯಾಯಾದಿsಶರೂ ಸಹ ಜಾತಿ ದೌರ್ಜನ್ಯಗಳನ್ನು ಅಟ್ರಾಸಿಟಿ ಕಾಯ್ದೆಯ ಅಡಿಯಲ್ಲಿ ನೋಡಬೇಕೋ ಬೇಡವೋ ಎಂಬ ಸಂದಿಗ್ಧಕ್ಕೆ ಬೀಳುತ್ತಾರೆ. ಖೈರ್ಲಾಂಜಿ ಪ್ರಕರಣ ಜಾತಿ ದೌರ್ಜನ್ಯದ ತೆರೆದ ಪುಸ್ತಕದಂತೆ ಕಾಣದೇ ಹೋದರೆ, ಜಾತಿ ದೇಷದ ಕಾರಣಕ್ಕಾಗಿ ಇಲ್ಲಿಯ ಅಪರಾಧಗಳು ನಡೆದಿವೆ ಎಂದು ಪರಿಗಣಿಸದೇ ಹೋದರೆ, ಜಾತಿ ದೌರ್ಜನ್ಯ ತಡೆ ಕಾಯ್ದೆ (Pಡಿeveಟಿಣioಟಿ oಜಿ ಂಣಡಿಚಿಛಿiಣಥಿ ಂಛಿಣ) ಯನ್ನು ತಿಪ್ಪೆಗೆ ಎಸೆಯುವುದು ಒಳಿತು. ಇದರಿಂದ ಕೊನೆ ಪಕ್ಷ ದಲಿತರು ಪ್ರಭುತ್ವ ತಮ್ಮನ್ನು ರಕ್ಷಿಸಿಲು ಕಾಯ್ದೆಯೊಂದನ್ನು ರೂಪಿಸಿದೆ ಎಂಬ ಮೂಢನಂಬಿಕೆಯಿಂದಾದರೂ ಹೊರಬಂದಂತಾಗುತ್ತದೆ.
ಮೊದಲು ಜಾತಿ ದೌರ್ಜನ್ಯ ತಡೆ ಕಾಯ್ದೆಯನ್ನು ದಲಿತರು ಸಂಭ್ರಮದಿಂದ ಸ್ವಾಗತಿಸಿದರು. ಅಷ್ಟೇ ಖಾರವಾಗಿ ಸವರ್ಣೀಯರು ಈ ಕಾಯ್ದೆಯನ್ನು ದ್ವೇಷಿಸಿದರು. ಈ ಕಾಯ್ದೆ ಅನ್ವಯವಾಗುವ ಆರಂಭದ ಹಂತದಿಂದಲೇ ಒಂದು ವಿವಾದಾತ್ಮಕ ಕಾಯ್ದೆಯಾಗಿ ಪರಿಗಣಿಸಲ್ಪಟ್ಟಿದೆ. ಆಗಲೇ ಇಪ್ಪತ್ತು ವರ್ಷಗಳನ್ನು ಪೂರೈಸಿರುವ ಈ ಕಾಯ್ದೆ ಈ ಮಟ್ಟಿನ ಆಯುಷ್ಯವನ್ನು ಕೇವಲ ಅರಚಾಟಗಳಲ್ಲಿಯೇ ಕಳೆದಿದೆ. ಬಹಳ ಜನ ಮರೆತಂತಿದೆ, ೧೯೮೯ ರಲ್ಲಿ ಜಾತಿ ದೌರ್ಜನ್ಯ ತಡೆ ಮಸೂದೆ ಕಾಯ್ದೆ (Pಡಿeveಟಿಣioಟಿ oಜಿ ಂಣಡಿಚಿಛಿiಣಥಿ ಂಛಿಣ) ಯಾದರೂ ಅದರ ಕಾನೂನಿನ ರೂಪುರೇಷಗಳು ರಚನೆಯಾದದ್ದು (೧೯೯೫) ಆರು ವರ್ಷಗಳ ನಂತರ. ಮಹಾರಾಷ್ಟ್ರದಲ್ಲಿ ಶಿವಸೇನೆ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಂತಹ ರಾಜಕೀಯ ಪಕ್ಷಗಳು ಎಲ್ಲಂದರಲ್ಲಿ ಈ ಕಾಯ್ದೆಯ ವಿರುದ್ಧ ಜನ ದಂಗೆ ಏಳುವಂತೆ ಮಾಡಿದವು. ಈ ಪಕ್ಷಗಳು ಸದರಿ ಕಾಯ್ದೆಯನ್ನು ರದ್ದು ಮಾಡುವಂತೆ ಸಂಚು ಮಾಡಿದವು. ಈ ಕಾಯ್ದೆಯ ಪ್ರಕಾರ ಸರಕಾರ ದಾಖಲಾದ ಪ್ರಕರಣಗಳನ್ನು ಬಗೆಹರಿಸಲು ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕಾಗುತ್ತದೆ. ಈ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ಕಾರ್ಯಪಡೆಯನ್ನು ಮತ್ತು ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್‌ಗಾಗಿ ವಕೀಲರನ್ನು ನೇಮಕ ಮಾಡಬೇಕಾಗುತ್ತದೆ. ಆದರೆ ಇಂದಿಗೂ ಈ ಕಾಯ್ದೆಯ ಅನ್ವಯಕ್ಕಾಗಿ ಮೇಲಿನವರ ಸಮ್ಮತಿಯನ್ನು ಕಾಯುವಂತಹ ಸ್ಥಿತಿ ಬಂದೊದಗಿದೆ. ಇದರಿಂದಾಗಿ ಪ್ರಧಾನ ಮಂತ್ರಿಗಳೂ ಸಹ ಜಾತಿ ದೌರ್ಜನ್ಯದ ಪ್ರಕರಣಗಳಲ್ಲಿ ಅಪರಾದಿsಗಳಿಗೆ ಶಿಕ್ಷೆಯಾಗದೇ ಇರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಜಾತಿ ದೌರ್ಜನ್ಯದ ಪ್ರಕರಣಗಳನ್ನು ಅಟ್ರಾಸಿಟಿ ಕಾಯ್ದೆಯಡಿಯಲ್ಲಿ ದಾಖಲಿಸಿಕೊಳ್ಳದೆ ಪೋಲೀಸರೂ ಇದನ್ನು ದುರ್ಬಲಗೊಳಿಸಿದ್ದಾರೆ. ಈ ಎಲ್ಲ ವಿದ್ಯಮಾನಗಳನ್ನು ಗಮನಸಿದರೆ, ಪ್ರಭುತ್ವ ಈ ಕಾಯ್ದೆಯನ್ನ ಮುಂದಿಟ್ಟುಕೊಂಡು ದಲಿತರನ್ನು ಮೂರ್ಖರನ್ನಾಗಿಸುವ ಚಿಲ್ಲರೆ ರಾಜಕಾರಣದಲ್ಲಿ ತೊಡಗಿದಂತೆ ಕಾಣುತ್ತದೆ. ಎಸ್ ಸಿ ಮತ್ತು ಎಸ್ ಟಿ ಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಇಂಡಿಯನ್ ಪಿನಲ್‌ಕೋಡ್‌ಗಳಿಗಿಂತ ಈ ಕಾಯ್ದೆ ಕಠೋರವಾಗಿ ಪರಿಗಣಿಸುತ್ತದೆ ಎಂದು ಮೇಲುನೋಟಕ್ಕೆ ಕಾಣುತ್ತದೆ. ಯಾವುದಾದರೊಂದು ಅಟ್ರಾಸಿಟಿ ಪ್ರಕರಣದಲ್ಲಿ ಸಿಬಿಐ ಈ ಕಾಯ್ದೆಯ ಅನ್ವಯ ಅಪರಾದಿsಗಳನ್ನು ಬಂದಿsಸಿ ನ್ಯಾಯಲಯಕ್ಕೆ ಒಪ್ಪಿಸಿದ ಮೇಲೆ ಕಾನೂನು ಕ್ರಮಗಳನ್ನು ಬಿಗಿಯಾಗಿ ತೆಗೆದುಕೊಳ್ಳದೇ ಹೋದರೆ, ಆಪಾದಿತರು ಜೀವಾವದಿs ಅಥವಾ ಮರಣದಂಡನೆಯಿಂದ ಸುಲಭವಾಗಿ ಪಾರಾಗಿ ಬಿಡಬಹುದು.
ಖೈರ್ಲಾಂಜಿ ಪ್ರಕರಣ ಪ್ರಭುತ್ವವನ್ನಷ್ಟೇ ಅಲ್ಲ ನಾಗರಿಕ ಸಮಾಜವನ್ನೂ ಅನುಮಾನದಿಂದ ನೋಡುವಂತೆ ಮಾಡಿದೆ. ಎಲ್ಲರಿಗೂ ಗೊತ್ತಿರುವಂತೆ ಸರಕಾರದ ಆಡಳಿತ ಯಂತ್ರ ಯಾವ ಹಂತದಲ್ಲೂ ದಲಿತರಿಗೆ ನ್ಯಾಯ ಸಿಗುವಂತಹ ಪೂರಕ ವಾತಾವರಣವನ್ನು ಸೃಷ್ಟಿಸುವುದಿಲ್ಲ. ಖೈರ್ಲಾಂಜಿಯ ಪ್ರಕರಣದಲ್ಲಿ ಭಾಗಿಯಾದ ಪಾತಕಿಗಳನ್ನು ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಿ ತಕ್ಕ ಶಿಕ್ಷೆ ವಿದಿsಸಬಹುದಾದ ಎಲ್ಲ ಕ್ರಮಗಳನ್ನೂ ಅಟ್ರಾಸಿಟಿ ಕಾಯ್ದೆ ಹೊಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸತ್ಯಶೋಧನಾ ತಂಡಗಳು ಈ ಪ್ರಕರಣ ಕುರಿತು ದಾಖಲಿಸಿರುವ ವರದಿಗಳು ಸರಕಾರದ ಅದಿsಕಾರಿಗಳೂ ಈ ಕೃತ್ಯಗಳಲ್ಲಿ ಶಾಮೀಲಾಗಿರುವುದನ್ನು ದಾಖಲಿಸಿವೆ. ಆದರೆ ಪ್ರಾಸಿಕ್ಯೂಷನ್‌ವರು ಈ ಎಲ್ಲ ಸತ್ಯಗಳನ್ನು ನ್ಯಾಯಲಯದ ಮುಂದೆ ತರಲೇ ಇಲ್ಲ. ಇದಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪಾತಕಿಗಳು ಆಪಾದಿತರ ಪಟ್ಟಿಯಿಂದ ಹೊರಬರುವಂತಾದರು. ನಂತರ ಇವರನ್ನು ಆಪಾದಿತರ ಪಟ್ಟಿಯಲ್ಲಿ ಸೇರಿಸುವ ಯಾವ ಪ್ರಯತ್ನಗಳೂ ನಡೆಯಲಿಲ್ಲ. ಕಾನೂನಿನ ಕೈಯಿಂದ ಹೀಗೆ ತಪ್ಪಿಸಿಕೊಂಡ ಮೂವರಲ್ಲಿ ಒಬ್ಬ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸ್ಥಳೀಯ ರಾಜಕೀಯ ಮುಖಂಡನ ಸಂಬಂದಿsಯೂ ಆಗಿದ್ದ.
ಮರಣದಂಡನೆ ಎಂಬ ಬೆದರು ಬೊಂಬೆ
ಖೈರ್ಲಾಂಜಿಯ ದಲಿತರನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಕೋರ್ಟ್ ಮರಣದಂಡನೆಯನ್ನು ವಿದಿsಸಿದಾಗ ಸಂಭ್ರಮಿಸಿದ್ದ ದಲಿತ ನಾಯಕರು, ಆ ಶಿಕ್ಷೆಯನ್ನು ಜೀವಾವದಿs ಶಿಕ್ಷೆಗೆ ಇಳಿಸಿದ್ದಕ್ಕಾಗಿ ಹತಾಶೆಗೆ ಒಳಗಾಗಿದ್ದಾರೆ. ಬರ್ಬರವಾಗಿ ಇನ್ನೊಬ್ಬರ ಮೇಲೆ ಸೇಡು ತೀರಿಸಿಕೊಳ್ಳವ ಪುರಾತನ ಮನೋಭಾವಕ್ಕಿಂತ, ಅಪರಾಧ ಮಾಡಿದವರಿಗೆ ಹೀಗೆ ಮರಣದಂಡನೆ ವಿದಿsಸುವುದೇ ಅಪರಾಧಗಳನ್ನು ತಡೆಯುವ ದೊಡ್ಡ ಅಸ್ತ್ರ ಎಂದು ಕುರುಡಾಗಿ ನಂಬಿಕೊಂಡ ಬರಲಾಗಿದೆ. ಆದರೆ ಈಗಿನ ಸ್ಥಾಪಿತ ಸತ್ಯ ಯಾವುದೆಂದರೆ, ಮರಣದಂಡನೆಗಳು ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯುವ ಅಸ್ತ್ರವಾಗಿ ಉಳಿದಿಲ್ಲ ಎಂಬುದು. ಅಬಿsವೃದ್ಧಿ ಹೊಂದಿದ ಬಹುತೇಕ ರಾಷ್ಟ್ರಗಳು ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಿವೆ. ಮತ್ತು ಯಾವ ರಾಷ್ಟ್ರಗಳು ಮರಣದಂಡನೆಯನ್ನು ಜಾರಿಯಲ್ಲ ಇಟ್ಟಿವೆಯೋ ಆ ರಾಷ್ಟ್ರಗಳಿಗಿಂತ ರದ್ದು ಪಡಿಸಿದ ರಾಷ್ಟ್ರಗಳಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವುದು ಕಂಡುಬರುತ್ತದೆ. ಅಮೇರಿಕಾ ಸಂಯುಕ್ತ ಸಂಸ್ಥಾನದಂತಹ ಪ್ರಮುಖ ಮೂರು ಬಂಡವಾಳಶಾಹಿ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳು ಇನ್ನೂ ಮರಣದಂಡನೆಯನ್ನು ಒಂದು ಶಿಕ್ಷೆಯಾಗಿ ಉಳಿಸಿಕೊಂಡಿವೆ. ಇನ್ನುಳಿದ ಎರಡು ರಾಷ್ಟ್ರಗಳೆಂದರೆ ಜಪಾನ್ ಮತ್ತು ದಕ್ಷಿಣ ಕೊರಿಯಾ. ಆದರೆ ಅಮೇರಿಕಾ ಸಂಯುಕ್ತ ಸಂಸ್ಥಾನದ ಕೆಲವು ರಾಜ್ಯಗಳು ಮರಣದಂಡನೆಯನ್ನು ರದ್ದುಪಡಿಸುವೆ. ಅಮೇರಿಕಾದಲ್ಲಿ ಯಾವ ರಾಜ್ಯಗಳು ಮರಣದಂಡನೆಯನ್ನು ರದ್ದುಪಡಿಸಿವೆಯೋ ಆ ರಾಜ್ಯಗಳಲ್ಲಿ ಅಪರಾಧಗಳ ಸಂಖ್ಯೆ, ಮರಣದಂಡನೆಯನ್ನು ಜಾರಿಯಲ್ಲಿಟ್ಟಿರುವ ರಾಜ್ಯಗಳ ಅಪರಾಧಗಳ ಸಂಖ್ಯೆಗಿಂತ ಕಡಿಮೆ ಇದೆ. ೧೯೯೦ ರಿಂದ ೨೦೦೭ ರ ಸಮೀಕ್ಷೆಯೊಂದರ ಪ್ರಕಾರ ಅಮೇರಿಕಾ ಸಂಯುಕ್ತ ಸಂಸ್ಥಾನದ ಮರಣದಂಡನೆಯನ್ನು ರದ್ದುಪಡಿಸಿರುವ ರಾಜ್ಯಗಳಿಗಿಂತ, ರದ್ದು ಮಾಡದೇ ಇರುವ ರಾಜ್ಯಗಳಲ್ಲಿ ಶೇ ೪೬% ರಷ್ಟು ಕೊಲೆಗಳು ಹೆಚ್ಚಾಗಿವೆ. ನೈತಿಕವಾಗಿ ಮರದಂಡನೆ ಸಮರ್ಥನೀಯವಲ್ಲ. ಆಧುನಿಕ ನ್ಯಾಯಶಾಸ್ತ್ರದಲ್ಲಿ ಮರಣದಂಡನೆ ಶಿಕ್ಷೆ ಅಸಂಗತವಾಗಿಯೇ ಉಳಿದುಕೊಂಡು ಬಂದಿದೆ. ಯಾವ ಪ್ರಭುತ್ವಕ್ಕೂ ಜೀವವೊಂದನ್ನು ನಾಶ ಮಾಡುವ ಅದಿsಕಾರವಿರುವುದಿಲ್ಲ. ಅಂತಾದರೂ ಜಾತಿ ದೌರ್ಜನ್ಯಕ್ಕೆ ಒಳಗಾಗುವ ಅಸಹಾಯಕ ದಲಿತರಿಗೆ ತಮ್ಮ ಮೇಲೆ ನಡೆವ ಅಪರಾದಿs ಕೃತ್ಯಗಳಿಗೆ ಪ್ರತಿಯಾಗಿ ಪಾತಕಿಗಳಿಗೆ ಗರಿಷ್ಟ ಶಿಕ್ಷೆಯನ್ನು ಆಗ್ರಹಿಸುವ ನೈತಿಕ ಹಕ್ಕಿದೆ.
ಇದೆಲ್ಲ ಇರಲಿ, ದಲಿತರು ಮರಣದಂಡನೆ ಶಿಕ್ಷೆಯನ್ನು ಸಮರ್ಥಿಸುವುದನ್ನು ನೋಡಿದರೆ ಸಂಕಟವಾಗುತ್ತದೆ. ಭಾರತದಲ್ಲಿ ಮರಣದಂಡನೆಯನ್ನು ಮೀಸಲಾಗಿಟ್ಟಿರುವುದು ದಲಿತರಿಗೆ ಎಂಬುದನ್ನು ಹಲವು ಸಂದರ್ಭಗಳು ಸಾಬೀತುಪಡಿಸುತ್ತವೆ. ಕೆಲವು ವರ್ಷಗಳ ಹಿಂದೆ ಗಯಾ ಮೂಲದ ಮಾನವ ಹಕ್ಕುಗಳ ಹೋರಾಟಗಾರ ಮತ್ತು ಮಾನವ ಹಕ್ಕುಗಳ ಜನ ಸಂಘಟನೆಯ ಸದಸ್ಯರಾದ ಪ್ರಭಾತ್‌ಕುಮಾರ್ ಶಾಂಡಿಲ್ಯ ಒಂದು ಮಹತ್ವದ ವಿಷಯವನ್ನು ನನ್ನ ಗಮನಕ್ಕೆ ತಂದರು. ದಲಿತರು, ಕೆಳಜಾತಿಗಳಿಗೆ ಸೇರಿದವರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಮಾತ್ರ ಸ್ವಾತಂತ್ರ್ಯನಂತರ ಗಲ್ಲು ಶಿಕ್ಷೆಗೆ ಒಳಗಾಗಿದ್ದಾರೆ. ಸ್ವಾತಂತ್ರ್ಯನಂತರ ಮೇಲ್ಜಾತಿಗೆ ಸೇರಿದ ಅಪರಾದಿsಗಳು ಗಲ್ಲು ಶಿಕ್ಷೆಗೆ ಒಳಗಾಗಿಲ್ಲ. ಇದಕ್ಕೆ ಅಪವಾದವೆಂದರೆ, ಮಹಾತ್ಮ ಗಾಂದಿsಯನ್ನು ಕೊಂದ ನಾಥೂರಾಮ್ ಗೋಡ್ಸೆ, ನಾರಾಯಣ ಅಪ್ಟೆ ಮತ್ತು ಕೋಲ್ಕೊತ್ತಾದಲ್ಲಿ ೧೪ ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಧನಂಜಯ ಚಟರ್ಜಿ ಮಾತ್ರ. ಆದರೆ ಗಲ್ಲು ಶಿಕ್ಷೆಯಲ್ಲಿ ಮಾತ್ರ ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಶೇಕಡ ನೂರಕ್ಕೆ ನೂರು ಮೀಸಲಾತಿ ದೊರಕಿಬಿಟ್ಟಿದೆ.
ಖೈರ್ಲಾಂಜಿಗೆ ಪ್ರಭುತ್ವದ ಕೊಡುಗೆ
ಜಾತಿ ದೌರ್ಜನ್ಯಗಳು ಸಾಮಾನ್ಯ ಅಪರಾಧಗಳೇನಲ್ಲ. ಈ ದೌರ್ಜನ್ಯಗಳ ಹಿಂದೆ ಶ್ರೇಣೀಕೃತ ವ್ಯವಸ್ಥೆಯ ತಾರತಮ್ಯದ ಸಂಸ್ಕೃತಿ ಮತ್ತು ಜಾತಿ ಸಿದ್ಧಾಂತಗಳು ಕೆಲಸ ಮಾಡುತ್ತಿರುತ್ತವೆ. ಇಂತಹ ಅಪರಾಧಗಳನ್ನೆಸಗುವವರು ತಾವಷ್ಟೇ ದೈವಾಂಶ ಸಂಭೂತರು, ಧರ್ಮನಿಷ್ಟರು ಎಂಬ ಅಹಂಭಾವನೆಯಿಂದ ಕೂಡಿರುತ್ತಾರೆ. ಇಂತಹ ಅಹಂ ನಿಷವಿತೆ ಮತ್ತು ಪಾರಂಪರಿಕ ನಂಬಿಕೆಗಳ ಮೇಲೆ ಬದುಕುತ್ತಿರುವವರನ್ನು ಅವರ ಸನಾತನ ಜಗತ್ತಿನಿಂದ ಹೊರತರಬೇಕಾಗುತ್ತದೆ. ಇಂತಹ ನಂಬಿಕೆಗಳ ಜಗತ್ತಿನಿಂದ ಈ ಜನರನ್ನು ಹೊರತರುವ ಹೊಣೆಗಾರಿಕೆಯನ್ನು ಸ್ವತಃ ಪ್ರಭುತ್ವ ಜಾರಿ ಮಾಡಬೇಕಾಗುತ್ತದೆ. ಪ್ರಭುತ್ವದ ಇಂತಹ ಸಾಮಾಜಿಕ ಹೊಣೆಗಾರಿಕೆಯೇ ನಿರ್ಣಾಯಕವಾದದ್ದು. ಈ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಲು ಮತ್ತು ಕಾರ್ಯಗತಗೊಳಿಸಲು ಪ್ರಭುತ್ವಕ್ಕೆ ಇಚ್ಫಾಶಕ್ತಿಯೂ ಬೇಕಾಗುತ್ತದೆ. ಆದರೆ ಪ್ರಭುತ್ವವು ಇಂತಹ ಹೊಣೆಗಾರಿಕೆಯನ್ನು ನಿಭಾಯಿಸಿದ ಉದಾಹರಣೆಗಳು ಸಿಗುವುದಿಲ್ಲ. ಜಾತಿ ದೌರ್ಜನ್ಯಗಳನ್ನು ನಿಗ್ರಹಿಸುವುದಿರಲಿ ಪ್ರಭುತ್ವವೇ ಜಾತಿ ದೌರ್ಜನ್ಯಗಳೆನ್ನಸಗುವ ಪಾತಕಿಗಳಿಗೆ ಬೆಂಗಾವಲಾಗಿ ನಿಂತು, ಅವರು ತಮ್ಮ ರಾಕ್ಷಸೀ ಕೃತ್ಯಗಳನ್ನು ಮುಂದುವರಿಸಲು ಬೇಕಾದ ಎಲ್ಲ ಅನುಕೂಲಗಳನ್ನು ಒದಗಿಸುತ್ತಿದೆ. ಖೈರ್ಲಾಂಜಿಯಲ್ಲಿ ಅತ್ಯಾಚಾರವೆಸಗಿ, ಬರ್ಬರ ಹತ್ಯೆಗಳನ್ನು ನಡೆಸಿದ ಪಾತಕಿಗಳಿಗೆ ತಾವು ಎಂತಹ ಅಪರಾಧವೆಸಗಿದ್ದೇವೆ ಎಂದು ಸ್ಪಷ್ಟವಾಗಿ ಗೊತ್ತಿದೆ. ಆದರೆ ಅವರಿಗೆ ತಾವು ಕಾನೂನಿನ ಗೊಂದಲಮಯ ವಕ್ರಸುಳಿಯಿಂದ ನಿಶ್ಚಿತವಾಗಿ ಪಾರಾಗಿ ಬರುತ್ತೇವೆ ಎಂಬ ನಂಬಿಕೆಯೂ ಇದೆ. ಈ ಹತ್ಯೆಗಳ ಕುರಿತು ಸಾರ್ವಜನಿಕ ಪ್ರತಿಭಟನೆಗಳಿಂದ ಸ್ಥಳೀಯವಾಗಿ ಜನರಲ್ಲಿ ಮೂಡಿದ್ದ ಭಾವನೆಗಳನ್ನು ಇವರು ನೂರಕ್ಕೆ ನೂರು ಹೋಗಲಾಡಿಸಿದ್ದಾರೆ. ಸ್ಥಳೀಯರ ಪ್ರಕಾರ ಖೈರ್ಲಾಂಜಿಯ ಘಟನೆಗಳಿಗೆ ಕಾರಣರಾದ ಮುಖ್ಯ ವ್ಯಕ್ತಿಗಳಾಗಲೇ ಕಾನೂನಿನ ಕಪಿಮುಷ್ಟಿಯಿಂದ ಮತ್ತು ನ್ಯಾಯಾಲಯ ವಿದಿsಸಬಹುದಾದ ಶಿಕ್ಷೆಯಿಂದ ಪಾರಾಗಿಬಿಟ್ಟಿದ್ದಾರೆ. ಒಟ್ಟಾರೆ ಈ ಪ್ರಕರಣ ಸೂಕ್ಷ್ಮವಾಗಿ ದಲಿತರು ವರ್ಸಸ್ ಪ್ರಭುತ್ವ ಎಂಬ ತನ್ನ ಸ್ವರೂಪವನ್ನು ತೆರೆದಿಡುತ್ತಿದೆ.
ಖೈರ್ಲಾಂಜಿ ಸ್ಪಷ್ಟವಾಗಿ ನಮ್ಮ ಮುಂದೆ ಜಾತಿ ಸಂಘರ್ಷದ ಇತಿಹಾಸವನ್ನು ತೆರೆದಿಟ್ಟಿದೆ. ಅಲ್ಲಿ ಭೋತಮಾಂಗೆ ಕುಟುಂಬವನ್ನು ಈಗಾಗಲೇ ನಿರ್ನಾಮ ಮಾಡಲಾಗಿದೆ. ಆ ಗ್ರಾಮದಲ್ಲಿ ಬದುಕಿರುವ ಎರಡು ದಲಿತ ಕುಟುಂಬಗಳು ಮುಂದಿನ ಕಂತಿನ ನರಮೇಧಕ್ಕೆ ಬಾಕಿ ಉಳಿದಿವೆ. ಖೈರ್ಲಾಂಜಿ ಗ್ರಾಮ ಈಗ ಭಾಗಶಃ ಪೋಲೀಸರ ಶಿಬಿರವಾಗಿ ಮಾರ್ಪಟ್ಟಿದೆ. ಈ ಗ್ರಾಮದಲ್ಲಿಯ ಹತಭಾಗ್ಯ ದಲಿತರನ್ನು ಕ್ರೂರವಾಗಿ ಕೊಂದ ಪಾತಕಿಗಳು ನಾಶವಾಗುವ ಮುನ್ನ, ಆ ಕುರಿತು ಜಗತ್ತು ಅಸಹ್ಯಪಟ್ಟುಕೊಳ್ಳುತ್ತಿರುವಾಗಲೇ ಸರಕಾರ ಈ ವರ್ಷ ಖೈರ್ಲಾಂಜಿಗೆ ವ್ಯಾಜ್ಯಮುಕ್ತ ಅಬಿsಯಾನದಡಿ (ಆisಠಿuಣe ಈಡಿee ಅಚಿmಠಿಚಿigಟಿ) ಒಂದು ಲಕ್ಷ ರೂಪಾಯಿಗಳ ಬಹುಮಾನ ಘೂಷಿಸಿದೆ. ಇದರ ಅರ್ಥ ತುಂಬಾ ಸ್ಪಷ್ಟವಾಗಿದೆ. ಪ್ರಭುತ್ವವು ದಲಿತರ ರಕ್ಷಣೆಯನ್ನೇ ಕಾಲಕಸವಾಗಿಸಿದೆ ಎಂದು.

ಮೂಲ: ಆನಂದ ತೇಲ್‌ತುಂಬ್ಡೆ
ಅನು: ಎ ಎಸ್ ಪ್ರಭಾಕರ

ಬೌದ್ಧಿಕ ದಿವಾಳಿತನವನ್ನು ಬಿಂಬಿಸುವ ’ಅವಮಾನ’ದ ವ್ಯಾಖ್ಯಾನ

ಮಾನ್ಯರೆ,
ಪ್ರಜಾವಾಣಿಯ ಜನವರಿ ೧೬, ೨೦೧೧ರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಕೆ.ವಿ. ಅಕ್ಷರ ಅವರ ’ಹರಕೆ ಹರಾಜು: ಯಾವುದು ಸಹಜ? ಯಾವುದು ಅವಮಾನ?’ ಲೇಖನಕ್ಕೆ ನನ್ನದೊಂದು ಪ್ರತಿಕ್ರಿಯೆ.

ಅಕ್ಷರ ಅವರ ವಿಚಾರಲಹರಿ ನಮ್ಮ ಸಮಸಮಾಜದ ಕನಸು ಕಾಣುವ ಮನಸ್ಸುಗಳಿಗೆ ಮಾಡಿದ ಅವಮಾನದಂತೆಯೂ ಅಕ್ಷರರಂಥವರ ಅಕ್ಷರದ ಬೌದ್ಧಿಕತೆಗೆ ಬಡಿದಿರುವ ಪೂರ್ವಗ್ರಹದ ಬಾಧೆಯಂತೆಯೂ ಕಾಣುತ್ತಿದೆ. ತಮ್ಮ ವಿಚಾರದ ಕೊನೆಯಲ್ಲಿ ಅವರು ’...ಇವುಗಳಲ್ಲಿ ಯಾವುದೇ ಒಂದರ ಪರವಾಗಿ ವಕಾಲತ್ತು ಮಾಡುವುದೂ ನನ್ನ ಉದ್ದೇಶವಲ್ಲ’ ಎಂದು ಹೇಳುವಲ್ಲಿಯೇ ತಾವು ಯಾವುದರ ಪರವಾಗಿದ್ದಾರೆಂಬುದನ್ನು ತೋರಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಅವರ ಲೇಖನದ ಆರಂಭದಲ್ಲೇ ಇದೆ. ಮೇಲ್ವರ್ಗದ ಜನ ತಿಂದುಂಡ ಎಂಜಲೆಲೆಯ ಮೇಲೆ ಜನರು ಉರುಳಾಡುವುದು ಅವರಿಗೆ ನಗಣ್ಯವೆನ್ನಬಹುದಾದ ಘಟನೆ. ಅವರ ಲೇಖನದ ಶೀರ್ಷಿಕೆಯೇ ಹೇಳುವಂತೆ ಅದು ಈ ಸಮಾಜದಲ್ಲಿ ನಡೆಯಬಹುದಾದ ’ಸಹಜ’ ಕ್ರಿಯೆ. ಅವರ ಪ್ರಕಾರ ಅದು ಮನುಷ್ಯನೊಬ್ಬನಿಗೆ ಮಾಡುವ ಅವಮಾನವೇನೂ ಅಲ್ಲ; ಅಸಮಾನತೆಯನ್ನು ಮತ್ತಷ್ಟು ಉತ್ತೇಜಿಸುವ, ಪಾವಿತ್ರ್ಯ-ಅಪಾವಿತ್ರ್ಯದ ಹುಸಿಯನ್ನು ವೈಭವೀಕರಿಸುವ, ಶ್ರೇಷ್ಠ-ಕನಿಷ್ಠದ ತಾರತಮ್ಯ ಬಿತ್ತುವ, ಮೇಲು-ಕೀಳನ್ನು ಎತ್ತಿ ಹಿಡಿಯುವ ಆಚರಣೆಯಂತೆ ಅದನ್ನು ನೋಡಬೇಕಿಲ್ಲ. ಹಾಗಾಗಿ ಅವರು ಅಂತಹುದೊಂದು ಮೌಢ್ಯದ ಪರವಾಗಿದ್ದಾರೆಂದು ಹೇಳಬಹುದು.
ಅವಮಾನ ಎನ್ನುವುದರ ಕುರಿತೂ ಅಕ್ಷರ ಅವರು ತಮಗೆ ಗೊಂದಲವಿರುವುದಾಗಿ ಹೇಳಿಕೊಂಡಿದ್ದಾರೆ; ಇದು ತಪ್ಪೇನೂ ಅಲ್ಲ. ಯಾಕೆಂದರೆ ಅಪಮಾನವೆಂಬುದನ್ನು ಅಕ್ಷರರಂಥವರೇನೂ (ಸಾಮಾಜಿಕವಾಗಿ, ದೈಹಿಕವಾಗಿ) ಅನುಭವಿಸಿದವರಲ್ಲವಲ್ಲ! ಸ್ವತಃ ಅಪಮಾನಿತನಿಗೇ ತನಗೆ ಆಗುತ್ತಿರುವುದು ಅಪಮಾನ ಎಂದು ಗೊತ್ತಿಲ್ಲದಿರುವುದರಿಂದ ಅದು ಅವಮಾನ ಅಥವಾ ಶೋಷಣೆ ಎನ್ನಿಸಿಕೊಳ್ಳುವುದಿಲ್ಲ ಎನ್ನುವುದು ಅಕ್ಷರ ಅವರ ವಾದ. ಹಾಗಾದರೆ ಮಲ ತಿನ್ನಿಸಿಕೊಂಡ, ತಲೆಯ ಮೇಲೆ ಮಲ ಸುರಿದುಕೊಂಡ ದಲಿತರಿಗೆ, ಬೆತ್ತಲೆ ಹರಕೆ ಸಲ್ಲಿಸುವ ಹೆಣ್ಣುಮಕ್ಕಳಿಗೆ ತಾವು ಅನುಭವಿಸುತ್ತಿರುವುದು ಅವಮಾನವೆಂದು ತಿಳಿದಿಲ್ಲವಾದರೆ ಅದನ್ನು ಅಕ್ಷರ ಅವರ ಪ್ರಕಾರ ಅಪಮಾನವೆಂದು ಭಾವಿಸಕೂಡದು! ಬದಲಿಗೆ ಅದನ್ನೊಂದು ಸಹಜವಾದ ಸಾಮಾಜಿಕ ಕ್ರಿಯೆಯೆಂಬಂತೆ ನೋಡಬೇಕು; ಅಥವಾ ನಮ್ಮ ಸಮಾಜ ಇರುವುದು ಹೀಗೆಯೇ ಎಂದು ನಾವೆಲ್ಲರೂ ತಿಳಿದುಕೊಳ್ಳಬೇಕು. ನಮ್ಮ ಅನುಭವಕ್ಕೆ ಬಾರದ ಯಾವುದನ್ನೂ ನಾವು ಶೋಷಣೆ ಎಂದಾಗಲೀ, ಅತ್ಯಾಚಾರವೆಂದಾಗಲೀ ಕರೆಯಕೂಡದು ಎಂಬ ಅಕ್ಷರ ಅವರ ವಾದ ಕೇವಲ ವಿತಂಡವಾದವಾಗಿದೆ. ಹೀಗೆ ವಿತಂಡವಾದ ಹೂಡುತ್ತಾ ಹೋಗುವುದೇ ಆದರೆ, ನಾವು ಕೊಲೆಗೀಡಾಗುವ ಮನುಷ್ಯನನ್ನು, ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಗಳೊಬ್ಬಳನ್ನು, ದಬ್ಬಾಳಿಕೆಗೊಳಗಾಗುವ ಶೋಷಿತನೊಬ್ಬನನ್ನು ಸುಲಭವಾಗಿ ’ಬ್ರೈನ್ ವಾಷ್’ ಮಾಡಿ ’ನಿಮ್ಮ ಮೇಲೆ ನಡೆಯುತ್ತಿರುವುದು ಕೊಲೆ, ಅತ್ಯಾಚಾರ, ದಬ್ಬಾಳಿಕೆ, ಶೋಷಣೆ ಅಲ್ಲ’ ಎಂದು ನಂಬಿಕೆ ಹುಟ್ಟಿಸುವುದು ಸುಲಭ ಎಂದಾಯಿತು!
’ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೇ ಹೊರತು, ಆತನ ಪರವಾಗಿ ಇನ್ನೊಬ್ಬರು ’ಅವನಿಗೆ ಅವಮಾನವಾಗುತ್ತಿದೆ’ ಎಂದು ತೀರ್ಮಾನಿಸಲಾಗದು’ ಎಂಬ ಅಕ್ಷರ ಅವರ ಇನ್ನೊಂದು ಥಿಯರಿ ಅಪ್ರಬುದ್ಧವಾದುದು. ಹಾಗೆ ಶೋಷಣೆ-ಅವಮಾನದ ಅರಿವನ್ನು ಶೋಷಿತರು-ಅವಮಾನಿತರಲ್ಲಿ ಬಿತ್ತದೆ ಹೋಗಿದ್ದರೆ ಜಗತ್ತಿನಲ್ಲಿ ಇಷ್ಟೆಲ್ಲ ಮಾನವಂತರು ಇಷ್ಟೆಲ್ಲ ಮಾನವಪರ ಚಳುವಳಿಗಳಿಗೆ ಸಾಕ್ಷಿಗಳಾಗಲು ಸಾಧ್ಯವೇ ಆಗುತ್ತಿರಲಿಲ್ಲ; ಗಾಂಧಿ, ಅಂಬೇಡ್ಕರ್‌ರಂಥವರು ಅಪಮಾನಿತರ ಪರವಾದ ನಾಯಕರಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಸ್ವತಃ ಸಂಸ್ಕೃತಿ ಚಿಂತಕರಾದ ಅಕ್ಷರ ಅಂಥವರಿಗೆ ಇದು ಗೊತ್ತಿಲ್ಲದ ಸಂಗತಿಯೇನಲ್ಲ.
ಮೇಲ್ವರ್ಗದ ಜನ ತಿಂದುಂಡ ಎಂಜಲೆಲೆಗಳ ಮೇಲೆ ಜನ ಹೊರಳಾಡುವುದು ಮೌಢ್ಯ, ಶ್ರೇಷ್ಠತೆಯನ್ನು ಪ್ರತಿಷ್ಠಾಪಿಸುವುದರ ಕುತಂತ್ರ ಎಂಬುದು ೨೦೧೧ರಲ್ಲಿ ಬದುಕುತ್ತಿರುವ ಅಕ್ಷರರಂಥ ’ವಿಚಾರವಂತ’ರಿಗೆ ಅವಮಾನ ಎನ್ನಿಸಿದ್ದಕ್ಕಿಂತಲೂ ಕ್ರಿಕೆಟಿಗರ ಹರಾಜು ಪ್ರಕ್ರಿಯೆಯೇ ದೊಡ್ಡ ಅವಮಾನ ಎಂದು ಭಾವಿಸುವ ಅವರ ವೈಚಾರಿಕತೆಯೇ ಅರೆಬರೆಯಾದುದು. ಕ್ರಿಕೆಟಿಗರು ಹರಾಜಾಗುವುದು ಈ ದೇಶ ತಲುಪಿರುವ ಬೌದ್ಧಿಕ ದಿವಾಳಿತನಕ್ಕೆ ಉದಾಹರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಕ್ರಿಕೆಟಿಗರನ್ನು ಸಮೂಹಸನ್ನಿಯ ತೆರದಿ ಆರಾಧಿಸುವ, ಸೌಂದರ್ಯ ಸ್ಪರ್ಧೆಗಳ, ರಿಯಾಲಿಟಿ ಶೋಗಳ ವಿಕೃತಿಯನ್ನು ಪೂಜಿಸುವ, ಟೀವಿ ಚಾನೆಲ್‌ಗಳ ಜ್ಯೋತಿಷ್ಯ-ಭವಿಷ್ಯವನ್ನು ಕುರುಡಾಗಿ ಅನುಕರಿಸುವ ಮಧ್ಯಮವರ್ಗದವರ ಅರೆತಿಳುವಳಿಕೆಯಂತೆಯೇ ಇದೂ ಕೂಡ. ಅದರ ಬಗ್ಗೆ ಮಾತನಾಡಬೇಕಾದುದು ಎಲ್ಲಾ ಪ್ರಜ್ಞಾವಂತರ ಆದ್ಯತೆ ಕೂಡ. ಆದರೆ ಎಂಜಲೆಲೆಯ ಘಟನೆಗೂ ಕ್ರಿಕೆಟಿಗರ ಹರಾಜಿಗೂ ತಮ್ಮ ವಿಚಾರವನ್ನು ತಳುಕಿ ಹಾಕಿ ನೋಡುವ ಅಕ್ಷರ ಅವರ ಚಿಂತನೆಯೇ ಅಸ್ಪಷ್ಟತೆಯಿಂದ ಕೂಡಿದೆ. ಅಥವಾ ಅವರೇ ಹೇಳುವ ಹಾಗೆ ಮನುಷ್ಯನೊಬ್ಬನಿಗೆ ಅವಮಾನವಾಗುವುದಕ್ಕಿಂತಲೂ ಕ್ರಿಕೆಟಿಗರ ಮಾನಗೇಡಿತನವೇ ಅವರಿಗೆ ದೊಡ್ಡ ಅವಮಾನವಾಗಿ ಕಂಡಿರುವುದರ ಹಿಂದೆ ಅಕ್ಷರ ಅವರ ಸಾಮಾಜಿಕ ಚಿಂತನೆಯ ಆಯ್ಕೆ ಇದೆ.
ಇದನ್ನೊಂದು ಸಂಸ್ಕೃತಿ ಚಿಂತನೆಯಂತೆ ಬಿಂಬಿಸಲು ನೋಡುವ ಅಕ್ಷರರಂಥವರ ಬೌದ್ಧಿಕವಿಲಾಸದ ಬಗ್ಗೆ ವಿಷಾದವಾಗುತ್ತಿದೆ. ಇಡೀ ಲೇಖನವನ್ನು ಓದುತ್ತಲೇ ಇದನ್ನು ಅಕ್ಷರ ಅವರು ಬರೆದರೆಂಬ ಕಾರಣಕ್ಕೆ ಸಾಪ್ತಾಹಿಕದ ಸಂಪಾದಕರು ಪ್ರಕಟಿಸಿದರೋ ಏನೋ ಅನುಮಾನ ನನಗೆ ಮೂಡಿತು; ಹಾಗಿರುವುದೇ ನಿಜವಾದಲ್ಲಿ ’ಪ್ರಜಾವಾಣಿ’ಯನ್ನು ನನ್ನದೇ ಸೈದ್ದಾಂತಿಕ ಕಾರಣಗಳಿಗೆ ಪ್ರೀತಿಸುವ ನನ್ನಂಥವನಿಗೆ ನಿಜವಾಗಿಯೂ ವಿಷಾದವಿದೆ.
-ಮಂಜುನಾಥ್‌ಲತಾ

*ಎಲೈ ಮನುಷ್ಯ, ನೀ ಸಿಡಿಯಬೇಕು *- ನಾಮದೇವ್ ಧಸಾಳ್

ಎಲೈ ಮನುಷ್ಯನೇ,

ನೀನು ಸಿಡಿಯಬೇಕು

ಎಲ್ಲಕ್ಕೂ ಮೊದಲು ನಿನ್ನನ್ನೇ ಸ್ಫೋಟಿಸಿಕೋ

ಚಂಡೆಯ ಲಯಕ್ಕೆ ಹೆಜ್ಜೆ ಹಾಕು

ಹಶಿಶ್ ಗಾಂಜಾ ಸೇದು

ಓಪಿಯಮ್ ಜಗಿ, ಲಾಲ್ ಪಾರಿ ಅಗಿ

ದಿವಾಳಿಯಾಗಿದ್ದರೆ ಕಂಟ್ರಿ ಸಾರಾಯಿ ಕುಡಿ,

ಅಗ್ಗದ ಡಾಲ್ಡಾ ಹೀರು

ಹಗಲೂ ರಾತ್ರಿ ತೂರಾಡು, ದಿನಪೂರ್ತಿ ಕಂಠಮಟ್ಟ ಕುಡಿದೇ ಇರು

ಎಲ್ಲರಿಗೂ ಶಾಪ ಹಾಕು; ಅವನಮ್ಮನ ಶೀಲ, ಅವನಕ್ಕನ ಹಾದರ ಹಿಡಿದು ನಿಂದಿಸು

ಎಲ್ಲರ ಬೈಯ್ಯಿ, ಕಪಾಳಕ್ಕೆ ಬಾರಿಸು, ಗುದ್ದು...

ಒಂದು ರಾಮ್‌ಪುರೀ ಚಾಕು ಕೈಗೆ ಸಿಗೋ ಹಾಗಿಟ್ಟುಕೊಳ್ಳಯ್ಯಾ

ಒಂದು ಚೂರಿ, ಕೊಡಲಿ, ಕತ್ತಿ, ಕಬ್ಬಿಣದ ರಾಡು, ಬಿದಿರು, ಹಾಕಿ ಸ್ಟಿಕ್ ಎಲ್ಲ..

ನಿನ್ನ ಜೊತೆಗೇ ಆಸಿಡ್ ಬಾಟಲಿ ಮತ್ತಂಥದನ್ನು ಒಯ್ಯಿ

ಕಣ್ಣೆವೆ ಮಿಟುಕಿಸದೆ ಕರುಳು ಬಗೆದು ಹೊರಗೆಳೆಯಲು ತಯಾರಿರು

ಕೊಲೆ ಮಾಡು, ನಿದ್ರಿಸುತ್ತಿರುವವರನ್ನು ಕೊಲ್ಲು

ಮನುಷ್ಯರನ್ನು ಗುಲಾಮರನ್ನಾಗಿಸು, ಕುಂಡೆಯ ಮೇಲೆ ಬಾರುಕೋಲಿನಿಂದ ಬಾರಿಸು

ರಕ್ತ ಸೋರುವ ಅವರ ಬೆನ್ನ ಮೇಲೆ ನಿನ್ನ ಬೇಳೆ ಬೇಯಿಸು

ನೆರೆಯವನ ಮನೆ ಕಳವು ಮಾಡು, ಬ್ಯಾಂಕ್ ಲೂಟಿ ಹೊಡಿ

ಲೇವಾದೇವಿಯ ಮತ್ತು ದುಡ್ಡಿನ ಹೊಲಸು ನಾತ ಸೂಸುವವರ ತಾಯ್ಗಂಡನಾಗು

ಕಂಡೂ ಕಾಣದಂತೆ ನಿನ್ನ ಬಂಧುಗಳ ಗಂಟಲು ಸೀಳು; ವಿಷವುಣಿಸು; ದುಃಸ್ವಪ್ನವಾಗು.

ಯಾರ ಅಮ್ಮ ಅಕ್ಕನನ್ನಾದರೂ, ಎಲ್ಲಿಬೇಕಾದರೂ ಗೂನಾಗಿ ಬಾಗಿಸು.

ಸುಲಿಗೆ ಮಾಡಲು ಮುದುಕಗಿದುಕರೆಂದು ಬಿಟ್ಟುಬಿಡಬೇಡ ಮತ್ತೆ

ಇವನ ಪ್ರಾಯ ಸರಿಯಿತು, ಹದಗೆಟ್ಟವ ಎನ್ನದೇ ಒಬ್ಬೊಬ್ಬರನ್ನೂ ಕೆಡವು.

ಸಾರ್ವಜನಿಕವಾಗಿ ವೇದಿಕೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡು

ಸೂಳೆಗೇರಿ ಬೆಳೆಸು; ತಲೆಹಿಡುಕನ ಲಂಚದಲ್ಲಿ ಬದುಕು; ಹೆಂಗಸಿನ ಮೂಗು, ಮೊಲೆ
ತೊಟ್ಟು ಕೊಯ್ಯಿ

ನಗ್ನರಾಗಿಸಿ ಅವರನ್ನು ಕತ್ತೆ ಮೇಲೆ ಮೆರವಣಿಗೆ ಮಾಡಿ ಮರ್ಯಾದೆ ಕಳಿ

ಗೊತ್ತಾಯಿತೇನಯ್ಯಾ ಮನುಷ್ಯ? ರಸ್ತೆ ಬಗೆದು ಹಾಕು, ಸೇತುವೆ ಉಡಾಯಿಸು

ಬೀದಿ ದೀಪಗಳನ್ನು ಕೆಡವಿ ಉರುಳಿಸು

ಪೋಲಿಸ್ ಮತ್ತು ರೈಲ್ವೆ ಸ್ಟೇಷನ್ನುಗಳನ್ನು ಚಿಂದಿ ಮಾಡು

ಸಾಹಿತ್ಯ ಸಂಘ, ಶಾಲೆ, ಕಾಲೇಜು, ಆಸ್ಪತ್ರೆ, ವಿಮಾನ ನಿಲ್ದಾಣ ಎಲ್ಲ ನೆಲ ಸಮ ಮಾಡಲು

ಗ್ರೆನೇಡ್ ಬಿಸಾಡು; ಹೈಡ್ರೋಜೆನ್ ಬಾಂಬ್ ಹಾಕು.

ಪ್ಲೇಟೋ, ಐನ್‌ಸ್ಟೀನ್, ಆರ್ಕಿಮಿಡಿಸ್, ಸಾಕ್ರೆಟೀಸ್

ಮಾರ್ಕ್ಸ್, ಅಶೋಕ, ಹಿಟ್ಲರ್, ಕಾಮು, ಸಾರ್ತ್ರೆ, ಕಾಫ್ಕಾ

ಬೋದಿಲೇರ್, ರಿಂಬಾಡ್, ಎಜ್ರಾ ಪೌಂಡ್, ಹಾಪ್‌ಕಿನ್ಸ್, ಗಯಟೆ

ದೋಸ್ತೋಯೇವ್ಸ್‌ಕಿ, ಮಯಕೋವ್ ಸ್ಕಿ, ಮಾಕ್ಸಿಂ ಗಾರ್ಕಿ

ಎಡಿಸನ್, ಮ್ಯಾಡಿಸನ್, ಕಾಳಿದಾಸ, ತುಕಾರಾಮ, ವ್ಯಾಸ, ಶೇಕ್ಸ್‌ಪಿಯರ್, ಜ್ಞಾನೇಶ್ವರ

ಎಲ್ಲರನ್ನೂ ಚರಂಡಿಯ ಮ್ಯಾನ್ ಹೋಲ್ ತೆಗೆದು ಅದರಲ್ಲಿ ದೂಡಿ

ಅವರನ್ನು ಅವರವರ ಪದಗಳ ಜೊತೆ ಕೊಳೆಸು.

ಜೀಸಸ್, ಪೈಗಂಬರ್, ಬುದ್ಧ ಮತ್ತು ವಿಷ್ಣುವಿನ ಅನುಯಾಯಿಗಳನ್ನು ಗಲ್ಲಿಗೇರಿಸು

ದೇವಸ್ಥಾನ, ಮಸೀದಿ, ಚರ್ಚು, ಶಿಲ್ಪ, ಮ್ಯೂಸಿಯಂಗಳನ್ನು ಕೆಡವು

ಎಲ್ಲ ಪುರೋಹಿತರನ್ನೂ ಗುಂಡಿಟ್ಟು ಕೊಲ್ಲು.

ಅವರ ರಕ್ತದಿಂದ ಶಿಲಾಶಾಸನ ಬರೆಸು

ಪ್ರಪಂಚದ ಎಲ್ಲ ಪವಿತ್ರ ಗ್ರಂಥಗಳ ಎಲ್ಲ ಪುಟ ಹರಿದು ಹಾಕಯ್ಯಾ,

ಅದನ್ನು ಹೇತವನ ಕುಂಡೆ ಒರೆಸಿಕೊಳ್ಳಲು ಕೊಟ್ಟುಬಿಡು.

ಬೇಲಿಯ ಗೂಟ, ಕಡ್ಡಿ ಕಿತ್ತು ಅಲ್ಲೇ ಹೇಲು ಉಚ್ಚೆ ಮಾಡಿ ತಿಪ್ಪೆಯೆಬ್ಬಿಸು

ಅಲ್ಲೇ ಮುಟ್ಟಿನ ಬಟ್ಟೆ ಬಿಸುಡು, ಕಫ ಉಗುಳು, ಸೀನಿ ಸಿಂಬಳ ಸುರಿಸು

ಸಹಿಸಲಾಗದ ಗಬ್ಬು ನಾತ ಹರಡಿ ಎಲ್ಲವನ್ನೂ ಮುಗಿಸು

ಮೇಲೆ, ಕೆಳಗೆ, ನಡುವೆ - ಎಲ್ಲವನ್ನೂ ನರಕ ಮಾಡಿಬಿಡು.

ಕೇಳಯ್ಯಾ,

ನೀನು ಮನುಷ್ಯನ ರಕ್ತವನ್ನೇ ಕುಡಿ, ಹುರಿದ ಮನುಷ್ಯ ಮಾಂಸವನ್ನು ತಿನ್ನು,
ಅವರದೇ ನೆಣ ಕರಗಿಸಿ ಕುಡಿ,

ಬಂಡೆಗೆ ನಿನ್ನ ಟೀಕಾಕಾರರ ಮೂಳೆ ಕುಟ್ಟಿ ಪುಡಿಪುಡಿ ಮಾಡಿ ತುಪ್ಪ ಹೀರು

ವರ್ಗಯುದ್ಧ, ಜಾತಿ ಯುದ್ಧ, ಕೋಮು ಯುದ್ಧ, ಪಕ್ಷ ಯುದ್ಧ, ಧರ್ಮ
ಯುದ್ಧ, ಮಹಾಯುದ್ಧ ಎಲ್ಲ ಸಂಘಟಿಸು

ಯಾರೇ ಆದರೂ ಪೂರಾ ಅನಾಗರಿಕ, ಕ್ರೂರ, ಸನಾತನವಾಗಬೇಕು.

ಯಾವನಿಗೂ ಹೆದರದೇ ಸೊಪ್ಪು ಹಾಕದೇ ಅರಾಜಕತೆ ಹುಟ್ಟಿಸು.

ಉಳದೇ, ಬೆಳೆಯೇ ಬೆಳೆಯದೇ, ಎಲ್ಲ ಉಪವಾಸ ಸಾಯುವಂಥ ಆಂದೋಲನ
ಶುರುಮಾಡು

ಅವರವರನ್ನೇ ಎಲ್ಲರೂ ಕೊಂದುಕೊಳ್ಳಲಿ, ಕಾಯಿಲೆ ಹರಡಲಿ, ಮರಗಳ ಎಲೆ ಉದುರಿ
ಬೋಳಾಗಲಿ.

ಒಂದೂ ಹಕ್ಕಿ ಹಾಡದಂತೆ ನೋಡಿಕೋ, ನೋವಲ್ಲಿ ಅರಚುತ್ತ ಎಲ್ಲ ಸಾಯಬೇಕು

ಇದೆಲ್ಲ ಕ್ಯಾನ್ಸರ್ ಗಡ್ಡೆಯಂತೆ ಬೆಳೆಬೆಳೆದು ವಿಶ್ವ ಬಲೂನಿನಂತೆ ಉಬ್ಬಲಿ

ಹೊತ್ತಲ್ಲದ ಹೊತ್ತಲ್ಲಿ ಅದನ್ನು ಒಡೆದುಬಿಡು, ಮುದುರಿಬಿಡು.

ಇಷ್ಟೆಲ್ಲ ಆದಮೇಲೂ ಯಾರಾದರೂ ಬದುಕುಳಿದರೆ ಅವರು ದರೋಡೆ ನಿಲ್ಲಿಸಲಿ,

ದುರ್ಬಲರನ್ನು ಗುಲಾಮರನ್ನಾಗಿಸದೇ ಇರಲಿ

ಬೇರೆಯವರನ್ನು ಬಿಳಿ, ಕಪ್ಪು, ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು
ಹೆಸರಿಟ್ಟು ಕರೆಯದಿರಲಿ

ರಾಜಕೀಯ ಪಕ್ಷ ಹುಟ್ಟುಹಾಕದೇ, ಆಸ್ತಿ ಮನೆ ಕಟ್ಟದೇ

ತಾಯಿ, ತಂಗಿ, ಸಂಬಂಧಿಗಳನ್ನೇ ಗುರುತಿಸದ ಅಪರಾಧ ಮಾಡದಂತಾಗಲಿ.

ಎಲ್ಲರಿಗೂ ಆಕಾಶ ಅಜ್ಜ, ಭೂಮಿ ಅಜ್ಜಿಯಾಗಲಿ.

ಒಬ್ಬರಿಗೊಬ್ಬರು ಪ್ರೀತಿಯಿಂದ ಮುದ್ದಾಡಲಿ

ಸೂರ್ಯ ಚಂದ್ರರು ನಾಚಿಕೆಗೆಟ್ಟು ಕಳಾಹೀನರಾಗುವಷ್ಟು ಒಳ್ಳೆಯ ಕೆಲಸ
ಮಾಡಯ್ಯಾ

ಎಲ್ಲರೂ ಪ್ರತಿ ತುತ್ತನ್ನೂ ಎಲ್ಲರೊಂದಿಗೆ ಹಂಚಿಕೊಳ್ಳುವಂತೆ,

ಮಾನವತ್ವದ ಹಾಡನ್ನು ಕಟ್ಟಿ ಹಾಡುವಂತೆ ಮಾಡಯ್ಯಾ ಓ ಮನುಷ್ಯಾ..

ಮಾಡಯ್ಯಾ ಮನುಷ್ಯ ಮನುಷ್ಯತ್ವದ ಹಾಡು ಮಾತ್ರ ಹಾಡುವಂತೆ..

- ಮರಾಠಿ ಮೂಲ : ನಾಮದೇವ್ ಧಸಾಳ್

ಕನ್ನಡಕ್ಕೆ : ಡಾ. ಎಚ್. ಎಸ್. ಅನುಪಮಾ

ಕಳೆದು ಹೋದ ೨೦೧೦ ಬಂದ ನವ ವರ್ಷ ೨೦೧೧

ಸ್ನೇಹಿತರೇ
ವರ್ಷಗಳು-ಸಂವತ್ಸರಗಳು ಕಳೆಯುವುದು-ಮುಗಿಯುವುದು, ಹೊಸ ವರ್ಷಗಳು ಬರುವುದು ಪ್ರಕೃತಿ ಸಹಜ ಕ್ರಿಯೆ. ಅದು ಪ್ರಕೃತಿ ಧರ್ಮ(ಧರ್ಮಕ್ಕೆ ಏನೆಲ್ಲ ಅರ್ಥವಿದೆ ನೋಡಿ!). ಅದರಂತೆ ೨೦೧೦ ಮುಗಿಯುತ್ತಿದೆ(ಡಿಸೆಂಬರ್ ನಲ್ಲಿ ಬರೆದ ಲೇಖನ). ೨೦೧೧ ಬರುತ್ತಿದೆ. ಕಳೆದುದರ ಬಗ್ಗೆ ವಿಷಾದದ ಅಗತ್ಯವಿಲ್ಲ ಮತ್ತು ಬರುತ್ತಿರುವುದರ ಬಗ್ಗೆ ಅತಿಯಾದ ನಿರೀಕ್ಷೆಗಳು ಬೇಡ. ಕಳೆದ ವರ್ಷ ಬರಿ ದುಃಖವೇ ಇತ್ತು ಎಂದೇನಲ್ಲ ಅಥವಾ ಬರುವ ವರ್ಷದಲ್ಲಿ ಬರಿ ಹರ್ಷವಿರುತ್ತದೆ ಎಂಬುದು ಒಂದು ಭ್ರಮೆ. ಭ್ರಮೆಗೆ ಒಳಗಾಗದ ರೀತಿಯಲ್ಲಿ ಹಳೆಯ ವರ್ಷವನ್ನು ಬೀಳ್ಕೋಡೋಣ ಮತ್ತು ಹೊಸವರ್ಷವನ್ನು ಸ್ವಾಗತಿಸೋಣ. ಇದು ನಮ್ಮ ಹೊಸವರ್ಷದ ಮೀಮಾಂಸೆಯಾಗಲಿ.

ನಮಗೆ ಹೊಸ ವರ್ಷ ೨೦೧೧ ಉತ್ಸಾಹವನ್ನು, ಹುಮ್ಮಸ್ಸನ್ನು ತರಲಿ.
ಮುಂದಿನ ೨೦೧೧ ಹೆಚ್ಚಿನ ಕೆಲಸ ಮಾಡಲು ಸ್ಪೂರ್ತಿ ನೀಡಲಿ.

ನನಗೆ ೨೦೧೦ ಅನೇಕ ದೃಷ್ಟಿಯಿಂದ ಮರೆಯಲಾರದ ಸಂವತ್ಸರ. ಅದು ಅತ್ಯಂತ ಒತ್ತಡದ ವರ್ಷವೂ ಆಗಿತ್ತು. ಮಹತ್ವವಾದುದನ್ನು ಸಾಧಿಸಿದ ವರ್ಷ ಅದು. ಇಂಗ್ಲೀಷಿನಲ್ಲಿ ಹೇಳುವುದಾದರೆ ೨೦೧೦ ನನಗೆ ಅತ್ಯಂತ ಪ್ರೊಡಕ್ಟಿವ್ ಸಂವತ್ಸರ. ಸಮೂಹವಾಗಿ, ಸಮುದಾಯವಾಗಿ ಮತ್ತು ವೈಯುಕ್ತಿಕವಾಗಿ ಅದು ನನಗೆ ಸಾಧನೆಗಳ ಒಂದು ಸಂವತ್ಸರ. ಅದು ನನಗೆ ಸತೃಪ್ತಿಯನ್ನು ತಂದುಕೊಟ್ಟ ವರುಷ. ನನ್ನ ಮಹತ್ವಾಕಾಂಕ್ಷೆಯ ನಾಲ್ಕಾರು ಪುಸ್ತಕಗಳು ೨೦೧೦ರಲ್ಲಿ ಬೆಳಕು ಕಂಡವು. ನಾನು ರಾಜ್ಯ ಸರ್ಕಾರದ ಯೋಜನಾ ಇಲಾಖೆಗೆ ಸಿದ್ಧಪಡಿಸಿದ್ದ ‘ವಿಜಾಪುರ ಜಿಲ್ಲಾ ಮಾನವ ಅಭಿವೃದ್ದಿ ವರದಿ’ಯು ಕನ್ನಡ ಮತ್ತು ಇಂಗ್ಲೀಷಿ ಆವೃತ್ತಿಯಲ್ಲಿ ಪ್ರಕಟವಾಗಿವೆ. ಸುಮಾರು ಕಳೆದ ೧೫ ತಿಂಗಳುಗಳಲ್ಲಿ ನಾನು ಮತ್ತು ನನ್ನ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ಸೇರಿ ಸುಮಾರು ೨೦೦೦ ಪುಟಗಳಷ್ಟು ವರದಿಗಳು, ಕೈಪಿಡಿಗಳು, ಲೇಖನಗಳು ಮುಂತಾದವುಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದ್ದೇವೆ.

‘ಸಂವಾದ’ ಪತ್ರಿಕೆಗೆ ನಾನು ಆಗಸ್ಟ್ ೨೦೦೮ ರಿಂದ ಬರೆಯುತ್ತಿದ್ದ ಅಂಕಣ ‘ಧರೆ ಹತ್ತ್ತಿ ಉರಿದರೆ’ ಎಂಬುದು ೨೦೧೦ರ ಅಕ್ಟೋಬರ್‌ನಲ್ಲಿ ಮುಗಿಯಿತು. ಅಲ್ಲಿ ಬರೆದ ನನ್ನ ಅಂಕಣ ಬರಹಗಳ ಲೇಖನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ.

ವಿವಿಯ ಭೂಮಿಯ ಹೋರಾಟ
ಸಮೂಹವಾಗಿ ಅದು ಸಾಧನೆಯ ಸಂವತ್ಸರ. ಯಾಕೆಂದರೆ ನಮ್ಮ ವಿವಿಯ ಭೂಮಿ ಹೋರಾಟದಲ್ಲಿ ನಾವು ಜಯ ಗಳಿಸಿದೆವು. ಪ್ರತಿಗಾಮಿ ಶಕ್ತಿಗಳ, ಕೋಮುವಾದಿ ಅನಿಷ್ಟಗಳ, ಪರಿವಾರೋತ್ತಮರ ಅಟ್ಟಹಾಸದ ವಿರುದ್ಧವಾದ ಹೋರಾಟ ಅದಾಗಿತ್ತು. ಆ ಶಕ್ತಿಗಳು ಆಳುವ ವರ್ಗದ ನೆರವಿನೊಂದಿಗೆ ಅಟ್ಟಹಾಸದಿಂದ ಮೆರೆಯುತ್ತಿರುವ ಕಾಲದಲ್ಲಿ ಅವುಗಳ ವಿರುದ್ಧ ಹೋರಾಟ ಮಾಡಿದೆವು ಮತ್ತು ಗೆದ್ದೆವು. ನನ್ನ ವೃತ್ತಿ ಜೀವನದಲ್ಲಿ ೨೦೧೦ ಒಂದು ಮೈಲುಗಲ್ಲು. ನಮ್ಮ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯದ ಭೂಮಿಗಾಗಿ ಹೋರಾಟವನ್ನು ನಡೆಸಬೇಕಾಯಿತು. ಅದರಲ್ಲಿ ನನ್ನದು ನಿರ್ಣಾಯಕ ಪಾತ್ರವಾಗಿತ್ತು. ಅಲ್ಲಿ ಕೇವಲ ಸರ್ಕಾರದ ವಿರುದ್ಧ ಮಾತ್ರ ನಮ್ಮ ಯುದ್ಧವಾಗಿರಲಿಲ್ಲ. ಅನೇಕ ಶಕ್ತಿಗಳ ವಿರುದ್ಧ - ಆಂತರಿಕ(ಆಡಳಿತ ಮತ್ತು ವಿವಿಯ ಪ್ರಾದಿಕಾರ) ಮತ್ತು ಬಹಿರಂಗ - ಹೋರಾಟ ನಡೆಸಬೇಕಾಯಿತು. ಆ ಹೋರಾಟದಲ್ಲಿ ನಾವು ಯಶಸ್ವಿಯಾದೆವು. ನಮ್ಮ ಹೋರಾಟದ ಹಿಂದೆ ಇಡೀ ಕನ್ನಡ ನಾಡಿತ್ತು. ಇದೇ ಬಗೆಯ ಭೂಮಿಯ ಪರಭಾರೆಯನ್ನು ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯವು ೨೦೧೦ರಲ್ಲಿ ಎದುರಿಸಿತು. ಆದರೆ ಅದಕ್ಕೆ ಅದನ್ನು ರಕ್ಷಿಸಿಕೊಳ್ಳುವುದಿರಲಿ ಅದನ್ನು ಒಂದು ಸಮಸ್ಯೆಯನ್ನಾಗಿ ಮಾಡುವುದಕ್ಕೂ ಅಲ್ಲಿನ ಪ್ರಾಧ್ಯಾಪಕರಿಗೆ ಸಾಧ್ಯವಾಗಲಿಲ್ಲ. ಕಾರಣವೆಂದರೆ ನಮ್ಮ ವಿವಿಯ ಭೂಮಿ ಪರಭಾರೆಯ ಹೋರಾಟದಲ್ಲಿ ನಮ್ಮ ಜೊತೆಯಲ್ಲಿ ಕರ್ನಾಟಕದ ಜನರಿದ್ದರು. ಅಲ್ಲಿ ಜನರಿರಲಿಲ್ಲ. ಜನರ ಜೊತೆಯಲ್ಲಿ ವಿವಿಗಳು ತಮ್ಮನ್ನು ತಾವು ಯಾಕೆ ಗುರುತಿಸಿಕೊಳ್ಳ್ಳಬೇಕು ಎಂಬುದಕ್ಕೆ ಇದು ಒಂದು ಪಾಠವಾಗಬೇಕು. ನಮ್ಮ ಹೋರಾಟವನ್ನು ಕಂಡು ಅನೇಕರಿಗೆ ಆಶ್ಚರ್ಯವಾಗಿದೆ. ಏಕೆಂದರೆ ಇಂದು ನಮ್ಮ ವಿವಿಗಳಲ್ಲಿ ವಿದ್ವಾಂಸರು ವಿವಿಗಳನ್ನು ತಮ್ಮದೆಂದು ಭಾವಿಸಿವುದು ಕಂಡು ಬರುತ್ತಿಲ್ಲ. ಅಲ್ಲಿಯದು ಕೇವಲ ಕೆಲಸ ಮತ್ತು ಕೂಲಿಯ ಸಂಬಂಧವಾಗಿ ಬಿಟ್ಟಿದೆ. ಒಂದು ಕಾಲಕ್ಕೆ ಮಾರ್ಕ್ಸಿಸ್ಟರನ್ನು, ಎಡಪಂಥೀಯರನ್ನು ಕಾರ್ಮಿಕರ ಬಗ್ಗೆ, ಬಡವರ ಬಗ್ಗೆ, ಹೋರಾಟ ಮಾಡುತಿದ್ದ ಸಂದರ್ಭಗಳಲ್ಲಿ ಅವರ ವರ್ಗಸಂಘರ್ಷದ ಮತ್ತು ಅದರ ಬಗೆಗಿನ ಬದ್ಧತೆ ಬಗ್ಗೆ ಜನರು ಟೀಕಿಸುತ್ತಿದ್ದರು. ಜನರ ಬದುಕು ಎಂದರೆ ಕೇವಲ ಕೂಲಿಯಲ್ಲವೆಂದು ಅಣಕಿಸುತ್ತಿದ್ದರು. ಇಂದು ಹಣ ಗಳಿಸುವುದು ಮತ್ತು ಕೂಲಿಗಾಗಿ ಮಾತ್ರ ದುಡಿಯುವುದು ಒಂದು ಮೌಲ್ಯವಾಗಿ ಬಿಟ್ಟಿದೆ. ಹಣ ಗಳಿಸುವುದು ಬದುಕಿನ ಯಶಸ್ಸಿನ ಅಳತೆಗೋಲಾಗಿದೆ. ವೃತ್ತಿಯನ್ನು ಕೇವಲ ಕೂಲಿಯ ಸಂಗತಿಯಾಗಿ ನೋಡುದರ ಬಗ್ಗೆ ಒಂದು ಕಾಲಕ್ಕೆ ಅಸಹನೆಯಿತ್ತು. ಆದರೆ ಇಂದು ಕೂಲಿ, ಸಂಬಳ, ಹಣ, ಬಿಟ್ಟು ಬೇರೇನಾದರೂ ಇದೆಯಾ ಎಂಬುದರ ಬಗ್ಗೆ ಅನುಮಾನ ಉಂಟಾಗುತ್ತದೆ.

ನಾನು ೨೦೧೦ರಲ್ಲಿ ಪ್ರಕಟಿಸಿದ ಮತ್ತು ಪ್ರಕಟಿಸುವ ಹಾಗೂ ಇತರರ ಪ್ರಕಟಣೆಗೆ ನೆರವಾದ ಪುಸ್ತಕಗಳ ಪಟ್ಟಿ.
ನನ್ನ ಪುಸ್ತಕಗಳು
೧. ಲಿಂಗಾಯತ ತತ್ವ ಪ್ರಣಾಳಿಕೆ. ನೀಲಗಂಗಾ ಪ್ರಕಾಶನ, ಗುಳೇದಗುಡ್ಡ.
೨. ಲಿಂಗ ಸಂಬಂಧಗಳು ಮತ್ತು ಅಭಿವೃದ್ಧಿ. ಪ್ರಸಾರಾಂಗ. ಕವಿವಿ. ವಿದ್ಯಾರಣ್ಯ.
೩. ಕರ್ನಾಟದಲ್ಲಿ ಸಾಕ್ಷರತೆಯ ಲಿಂಗ ಸಂಬಂಧಿ ಆಯಾಮಗಳು. ಪ್ರಸಾರಾಂಗ. ಕವಿವಿ. ವಿದ್ಯಾರಣ್ಯ.
೪. ಹಕ್ಕು ಮತ್ತು ಹಂಗು (ಅಭಿವೃದ್ಧಿ ಅಧ್ಯಯನ ಪ್ರಬಂಧಗಳು). ಪ್ರಸಾರಾಂಗ. ಕವಿವಿ. ವಿದ್ಯಾರಣ್ಯ.
೫. ಅಭಿವೃದ್ಧಿ ಮತ್ತು ದುಸ್ಥಿತಿ: ವಿಜಾಪುರ ಜಿಲ್ಲಾ ಅಧ್ಯಯನ. ಪ್ರಸಾರಾಂಗ. ಕವಿವಿ. ವಿದ್ಯಾರಣ್ಯ.
೬. ಧರೆ ಹತ್ತು ಉರಿದರೆ (ಪ್ರಚಲಿತ ಕರ್ನಾಟಕ ಕುರಿತ ಲೇಖನಗಳು). ಪಲ್ಲವ ಪ್ರಕಾಶನ, ಚನ್ನಪಟ್ಟಣ, ಬಳ್ಳಾರಿ.
೭. ವಿಜಾಪುರ ಜಿಲ್ಲಾ ಮಾನವ ಅಭಿವೃದ್ಧಿ ವರದಿ-೨೦೦೬. ರಾಜ್ಯ ಯೋಜನಾ ಇಲಾಖೆ. ಕರ್ನಾಟಕ ಸರ್ಕಾರ, ಬೆಂಗಳೂರು.
೮. ಃiರಿಚಿಠಿuಡಿ ಆisಣಡಿiಛಿಣ ಊumಚಿಟಿ ಆeveಟoಠಿmeಟಿಣ ಖeಠಿoಡಿಣ-೨೦೦೬. Sಣಚಿಣe Pಟಚಿಟಿಟಿiಟಿg ಆeಠಿಚಿಡಿಣmeಟಿಣ. ಉoveಡಿಟಿmeಟಿಣ oಜಿ ಏಚಿಡಿಟಿಚಿಣಚಿಞಚಿ. ಃಚಿಟಿgಚಿಟuಡಿu.
೯. ಪ್ರಚಲಿತ ಕರ್ನಾಟಕ(ಸಾಮಾಜಿಕ-ಆರ್ಥಿಕ ಸಮಸ್ಯೆಗಳ ಬಗೆಗಿನ ಲೇಖನಗಳು). ಲಡಾಯಿ ಪ್ರಕಾಶನ, ಗದಗ.

ನನ್ನ ನೆರವಿನಿಂದ ಪ್ರಕಟವಾದ ಇತರೆ ವಿದ್ವಾಂಸರ ಪುಸ್ತಕಗಳು
೧. ಡಾ.ಎ.ಆರ್.ವಾಸವಿ ಅವರ ‘ಒಳಗನ್ನಡಿ: ಕನ್ನಡದ ಸಮಾಜ ವಿಜ್ಞಾನ ಬರಹಗಳು’. ಪ್ರಸಾರಾಂಗ. ಕವಿವಿ. ವಿದ್ಯಾರಣ್ಯ.
೨. ಡಾ.ಕೆ.ರಾಘವೇಂದ್ರ ರಾವ್. ‘ಏಚಿಡಿಟಿಚಿಣಚಿಞಚಿ Uಟಿiಜಿiಛಿಚಿಣioಟಿ: ಂ Poಟiಣiಛಿಚಿಟ Iಟಿಣeಡಿಠಿಡಿeಣಚಿಣioಟಿ’. ಪ್ರಸಾರಾಂಗ. ಕವಿವಿ. ವಿದ್ಯಾರಣ್ಯ.
೩. ಡಾ.ಬಿ.ಶೇಷಾದ್ರಿ. ‘Uಟಿಜeಡಿsಣಚಿಟಿಜiಟಿg ಊumಚಿಟಿ ಆeveಟoಠಿmeಟಿಣ ಚಿಟಿಜ ಖegioಟಿಚಿಟ ಆisಠಿಚಿಡಿiಣies’. ಪ್ರಸಾರಾಂಗ. ಕವಿವಿ. ವಿದ್ಯಾರಣ್ಯ.
೪. ಡಾ.ವಿಜಯಕುಮಾರ್ ಬೊರಟ್ಟಿ. ‘ಹಿರಿಯರ ಹಿರಿತನ ಹಿಂದೇನಾಯಿತು’. (ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರವು ಪ್ರಕಟಿಸುತ್ತಿರುವ ವಚನ ಸಂಸ್ಕೃತಿ ಮಾಲೆಯ ಮೊದಲ ಕೃತಿ). ಪ್ರಸಾರಾಂಗ. ಕವಿವಿ. ವಿದ್ಯಾರಣ್ಯ.

ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥನಾಗಿ--
ಕನ್ನಡ ವಿಶ್ವವಿದ್ಯಾಲಯವು ಕೂಡಲಸಂಗಮzಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ನೆರವಿನಿಂದ ಸ್ಥಾಪಿಸಿರುವ ‘ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ’ದ ಮುಖ್ಯಸ್ಥನಾಗಿ ೨೦೧೦ರಿಂದ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಕೂಡಲಸಂಗಮದಲ್ಲಿಲ್ಲ. ಅಲ್ಲಿ ಒಬ್ಬರು ಸಂದರ್ಶನ ಪ್ರಾಧ್ಯಾಪಕರಿದ್ದಾರೆ. ನಾನು ಕೇಂದ್ರದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ನೆರವಾಗುತ್ತಿದ್ದೇನೆ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಎರಡು ದಿನಗಳ ವಚನ ಕಮ್ಮಟ, ವಿಜಾಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಜೊತೆಯಲ್ಲಿ ಒಂದು ದಿನದ ವಚನ ಕಮ್ಮಟ ನಡೆಸಲಾಗಿದೆ. ಬಸವನ ಬಾಗೇವಾಡಿಯಲ್ಲಿನ ಬಸವಣ್ಣನ ದೇವಾಲಯದ ವಾಸ್ತು ಕುರಿತಂತೆ ಅಲ್ಲಿ ಒಂದು ದಿನದ ವಿಚಾರ ಸಂಕಿರಣ ಮಾಡಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡಮಿಯ ಜೊತೆಯಲ್ಲಿ ೨೦೧೧ರ ಫೆಬ್ರವರಿಯಲ್ಲಿ ಎರಡು ದಿನಗಳ ‘ವಚನ ಸಂಸ್ಕೃತಿ ಮತ್ತು ದಲಿತರು’ ಎಂಬ ವಿಷಯ ಕುರಿತಂತೆ ವಿಚಾರ ಸಂಕಿರಣವನ್ನು ಕೂಡಲಸಂಗಮದಲ್ಲಿ ನಡೆಸಲು ಸಿದ್ದತೆ ನಡೆದಿದೆ. ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ವಚನ ಸಂಸ್ಕೃತಿಯ ಬಗ್ಗೆ ಚಿಂತನಾಗೋಷ್ಟಿಗಳನ್ನು ೨೦೧೧ರಲ್ಲಿ ನಡೆಸಬೇಕೆಂದಿದೆ.

ಪ್ರಜಾವಾಣಿ ಲೇಖನಗಳು
ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ನಾನು ಅಂಕಣಗಾರನಲ್ಲ. ಆದರೆ ಆ ಪತ್ರಿಕೆಯು ನನ್ನನ್ನು ಒರ್ವ ಅಂಕಣಗಾರನಂತೆ ನಡೆಸಿಕೊಳ್ಳುತ್ತಿದೆ. ನಿಯಮಿತವಾಗಿ ಅಲ್ಲದಿದ್ದರು ತಿಂಗಳಿಗೆ ಒಂದು ಅಗ್ರ ಲೇಖನವನ್ನು ನಾನು ಅದರಲ್ಲಿ ಪ್ರಕಟಿಸುತ್ತ ಬಂದಿದ್ದೇನೆ. ಪ್ರತಿ ಲೇಖನ ಪ್ರಕಟವಾದಾಗಲೂ ರಾಜ್ಯದ ಬೇರೆ ಬೇರೆ ಭಾಗಗಳಿಂದ ಜನರು ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಅದರಲ್ಲಿ ಶಾಭಾಸ್‌ಗಿರಿ ನೀಡುವವರು ಅಧಿಕ. ಮೂಗು ಮುರಿಯುವವರು ಇರುತ್ತಾರೆ. ಈ ಬಗೆಯ ಮೂಗು ಮುರಿಯುವವರು ಇರಬೇಕು. ಆ ಬಗೆಯ ಮೂಗು ಮುರಿಯುವ ಪ್ರತಿಕ್ರಿಯೆಯು ನಮ್ಮನ್ನು ಸದಾ ಜಾಗೃತ ಸ್ಥಿತಿಯಲ್ಲಿಟ್ಟಿರುತ್ತದೆ.

ವಿಸ್ತರಣಾ ಚಟುವಟಿಕೆಗಳು
ನಾನು ೨೦೧೦ರಲ್ಲಿ ರಾಜ್ಯದ ನಾನಾ ಕಾಲೇಜುಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ್ದೇನೆ, ಪ್ರಬಂಧ ಮಂಡಿಸಿದ್ದೇನೆ. ನಮ್ಮ ವಿಭಾಗದ ನಿಯತಕಾಲಿಕೆಯಲ್ಲಿ ನಿಯಮಿತವಾಗಿ ಅಧ್ಯಯನ ಪ್ರಬಂಧಗಳನ್ನು ಪ್ರಕಟಿಸಿದ್ದೇನೆ. ಬೇರೆ ಬೇರೆ ಸಂಕಲನಗಳಿಗೆ ಪ್ರಬಂಧಗಳನ್ನು ನೀಡಿದ್ದೇನೆ.
ರಾವ್‌ಬಹದ್ದೂರರ ‘ಗ್ರಾಮಾಯಣ ಸಾಂಸ್ಕೃತಿ ಮುಖಾಮುಖಿ’(ಸಂ.ಡಾ. ಅಮರೇಶ್ ನುಗುಡೋಣಿ) ಎಂಬ ಸಂಪಾದಿತ ಕೃತಿಯಲ್ಲಿ ನನ್ನ ಒಂದು ಲೇಖಲವಿದೆ.
ಬಸವನ ಬಾಗೇವಾಡಿ(ಸಂ.ಡಾವಾಸುದೇವ ಬಡಿಗೇರ್) ಕುರಿತ ಸ್ಥಳಿಯ ಚರಿತ್ರೆ ಮಾಲೆಯ ಸಂಪಾದಿತ ಕೃತಿಯಲ್ಲಿ ನನ್ನ ಒಂದು ಲೇಖನವಿದೆ.
‘ಕೊಪ್ಪಳ ಜಿಲ್ಲೆಯ ಹಿಂದುಳಿದಿರುವಕೆಯ ನೆಲೆಗಳು’ ಎಂಬ ಲೇಖನವನ್ನು ಗುಲಬರ್ಗಾ ವಿಶ್ವವಿದ್ಯಾಲಯವು ಸಿದ್ದಪಡಿಸುತ್ತಿರುವ ಕೃತಿಯೊಂದಕ್ಕೆ ನೀಡಲಾಗಿದೆ(ಸಂ.ಅಲ್ಲಮಪ್ರಭು ಬೆಟ್ಟದೂರು).
ಪ್ರಸಿದ್ಧ ಸಮಾಜವಿಜ್ಞಾನಿ ಪ್ರಭಾತ್ ಪಟ್ನಾಯಿಕ್ ಅವರ ಹತ್ತು ಲೇಖನಗಳ ಕನ್ನಡ ಅನುವಾದದ ‘ನೀರ ಮೇಲಿನ ಗುಳ್ಳೆ’ (ಪ್ರಕಾಶನ: ಚಿಂತನ ಪುಸ್ತಕ, ಬೆಂಗಳೂರು) ಪುಸ್ತಕಕ್ಕೆ ಮುನ್ನುಡಿ ಬರೆದಿದ್ದೇನೆ.
ವಿಶ್ವವಿದ್ಯಾಲಯದ ಅನೇಕ ಆಡಳಿತಾತ್ಮಕ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದೇನೆ. ಒಂದು ಸಂತೋಷದ ವಿಷಯವೆಂದರೆ ಬರುವ ಫೆಬ್ರವರಿಗೆ ವಿವಿಯಲ್ಲಿ ನನ್ನ ಡೀನ್ ಹುದ್ದೆ ಜವಾಬ್ದಾರಿ ಮುಗಿಯುತ್ತದೆ.
ಹೀಗೆ ವರ್ಷ ಪೂರ್ತಿ ಕೆಲಸದಲ್ಲಿ ತೊಡಗಿಕೊಂಡು ಸಂತೋಷ ಪಟ್ಟಿದ್ದೇನೆ. ನಾನು ೨೦೧೧ರಲ್ಲೂ ಸಂತೋಷವಾಗಿರಲು ಬಯಸುತ್ತೇನೆ.

ನೆರೆ ಪರಿಣಾಮ ಅಧ್ಯಯನ ವರದಿ.
ನಾನು ನಮ್ಮ ವಿವಿಯ ಸಹೋದ್ಯೋಗಿಗಳಾದ ಡಾ.ರಹಮತ್ ತರೀಕರೆ ಮತ್ತು ಡಾ.ಶೈಲಜಾ ಹಿರೇಮಠ ಅವರ ಜೊತೆ ಮಹಿಳಾ ಅಧ್ಯಯನ ಕೇಂದ್ರದ ನೆರವಿನೊಂದಿಗೆ ೨೦೦೯-೨೦೧೦ನೆಯ ಸಾಲಿನಲ್ಲಿ ಕೈಗೊಂಡ ಮಹತ್ವದ ಕೆಲಸವೆಂದರೆ ೨೦೦೯ರ ಉತ್ತರ ಕರ್ನಾಟಕದ ನೆರೆ ಹಾವಳಿಯ ಪರಿಣಾಮಗಳನ್ನು ಕುರಿತ ಅಧ್ಯಯನ. ಈ ಅಧ್ಯಯನಕ್ಕಾಗಿ ನಾವು ನೆರೆ ಹಾವಳಿಗೆ ತುತ್ತಾದ ಗದಗ, ಬಾಗಲಕೋಟೆ, ಧಾರವಾಡ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ೧೮ ಆಯ್ದ ಹಳ್ಳಿಗಳಿಗೆ ಭೇಟಿ ಕೊಟ್ಟು ಕ್ಷೇತ್ರ ಕಾರ್ಯ ಮಾಡಿದೆವು. ಅಲ್ಲಿ ನಮಗೆ ಕಂಡು ಬಂದ ಸಂಗತಿಗಳನ್ನು ಹೀಗೆ ಸ್ಥೂಲವಾಗಿ ಪಟ್ಟಿ ಮಾಡಬಹುದು.
೧. ಸರ್ಕಾರವು ಕ್ರೈಸಿಸ್‌ನಲ್ಲಿ ಅತುತ್ಯುಮ ರೀತಿಯಲ್ಲಿ ಕೆಲಸ ಮಾಡುತ್ತದೆ. ನಾವೇ ನೋಡಿದಂತೆ ನೆರೆ ಹಾವಳಿಯ ಸಂದರ್ಭದಲ್ಲಿ ರೆವಿನ್ಯೂ ಇಲಾಖೆಯ ಅಧಿಕಾರಿಗಳು ಹಗಲು-ರಾತ್ರಿಯೆನ್ನದೆ ಕೆಲಸ ಮಾಡಿದ್ದಾರೆ.
೨. ಆದರೆ ದೈನಂದಿನ ಸಂದರ್ಭದಲ್ಲಿ ಮಾತ್ರ ಅವರು ಹಣ ಕೀಳುವ, ಜೋಬದ್ರವಾದ, ಕಿರುಕುಳ ಕೊಡುವ, ನೌಕರಶಾಹಿಯ ಅಪರಾವತಾರವಾಗಿ ಬಿಡುತ್ತಾರೆ.
೩. ನಮ್ಮ ಸರ್ಕಾರವು ೨೦೦೯ರ ನೆರೆ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇಲ್ಲದಿದ್ದರೆ ೨೦೧೦-೨೦೧೧ನೆಯ ಸಾಲಿನ ಬಜೆಟ್ಟಿನಲ್ಲಿ ನೆರೆ ಹಾವಳಿಯ ಪರಿಹಾರಕ್ಕೆ ಬಿಡಿಗಾಸು ತೆಗೆದಿರಿಸದಿರುವುದು ಸಾಧ್ಯವಾಗುತ್ತಿರಲಿಲ್ಲ.
೪. ನೆರೆ ಹಾವಳಿಯಲ್ಲಿ ಜನರು ಮನೆ, ಜಾನುವಾರು, ಬೆಳೆ, ದಾಸ್ತಾನು, ಹೊಲ-ಗದ್ದೆಗಳನ್ನು ಕಳೆದುಕೊಂಡರು. ಮುಖ್ಯವಾಗಿ ಮಹಿಳೆಯರು ಇನ್ನಿಲ್ಲದ ದುಸ್ಥಿತಿಗೆ ಒಳಗಾದರು. ಆದರೆ ನಮ್ಮ ಸರ್ಕಾರವು ನೆರೆ ಪರಿಹಾರವೆನ್ನುವುದನ್ನು ಕೇವಲ ಮನೆ ಕಟ್ಟಿಸುವ ಕಾಟ್ರಾಕ್ಟ್‌ಗಿರಿಗೆ ಸೀಮಿತಗೊಳಿಸಿ ಬಿಟ್ಟಿತು.
೫. ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ತಾತ್ಪೂರ್ತಿಕವಾಗಿ ಅವರವರ ಊರುಗಳ ಹತ್ತಿರ ಜಿಂಕ್‌ಶೀಟುಗಳ ಶೆಡ್ಡುಗಳನ್ನು ಕಟ್ಟಿಸಿಕೊಟ್ಟಿದೆ. ಆ ಶೆಡ್ಡುಗಳು ಅಲ್ಲಿ ವಾಸಿಸುವವರಿಗೆ ಖಾಯಮಾದ ಮನೆಗಳಾಗುತ್ತದೆ ಎಂಬುದು ನಮಗೆ ಖಾತ್ರಿಯಾಯಿತು. ಏಕೆಂದರೆ ೨೦೦೭ ಮತ್ತು ೨೦೦೮ರಲ್ಲಿ ನೆರೆ ಹಾವಳಿಗೆ ಮನೆ ಕಳೆದುಕೊಂಡವರು ಆಗ ಸರ್ಕಾರ ನೀಡಿದ್ದ ಶೆಡ್ಡುಗಳಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ. ಅಂದಮೇಲೆ ೨೦೦೯ರಲ್ಲಿನ ನೆರೆ ಹಾವಳಿಯ ಸಂತ್ರಸ್ಥರಿಗೆ ಇದು ಭಿನ್ನವಾಗುತ್ತದೆ ಎಂಬುದಕ್ಕೆ ನಮಗೆ ಯಾವುದೇ ಪುರಾವೆ ದೊರೆಯಲಿಲ್ಲ.

ನಾನು ೨೦೧೦ರಲ್ಲಿ ಸಂತೋಷವಾಗಿರುವುದಕ್ಕೆ ಕಾರಣಕರ್ತಳಾದ ನನ್ನ ಹೆಂಡತಿ ದಾಕ್ಷಾಯಿಣಿಗೆ ಕೃತಜ್ಞತೆ ಸಲ್ಲಿದಿದ್ದರೆ ತಪ್ಪಾಗುತ್ತದೆ. ಒಂದು ಕಸಿವಿಸಿಯ ಸಂಗತಿಯೆಂದರೆ ನನ್ನ ಅನೇಕ ಕೆಲಸಗಳಿಗೆ ನೆರವಾಗುತ್ತಿದ್ದ ನನ್ನ ಮಗಳು ಶೋಭಿತ ೨೦೧೦ರಲ್ಲಿ ಪಿಯುಸಿ ಮುಗಿಸಿ ಬಾಗಲಕೋಟೆಯ ಎಂಜಿನಿಯರಿಂಗ್ ಕಾಲೇಜು ಸೇರಿದ್ದಾಳೆ. ನನ್ನ ಕಂಪ್ಯೂಟರ್ ಕೈಕೊಟ್ಟಾಗ ರಿಪೇರಿ ಮಾಡುತ್ತಿದ್ದವಳವಳು, ಮಾರ್ಗದರ್ಶಕಳಾಗಿದ್ದವಳವಳು. ಮಗ ಬೆಂಗಳೂರಿನ ಹಾರ್ಡವೇರ್ ವಿದೇಶಿ ಕಂಪನೆಯೊಂದರಲ್ಲಿ ಯಾವತ್ತೂ ಕೆಲಸವೆಂದು ದುಡಿಯುತ್ತಿದ್ದಾನೆ.
೧೦
ಕರ್ನಾಟಕ ಇಂದು ತನಗೆ ಬಳುವಳಿಯಾಗಿ ಬಂದ ಜನಮುಖಿ ಸಂಸ್ಕೃತಿ ಪರಂಪರೆಯ ದಾರಿಯಿಂದ ದೂರ ಸರಿಯುತ್ತಿದೆ. ಭ್ರಷ್ಟಾಚಾರವು ಇಂದು ಸರ್ವೆಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ನಡೆ ಮತ್ತು ನುಡಿಗಳ ನಡುವೆ ಅಂತರವಿರಬಾರದೆಂದು ನಮ್ಮ ವಚನ ಪರಂಪರೆ ಹೇಳಿದರೆ ಅದರ ವಾರಸುದಾರೆಂದು ಹೇಳಿಕೊಳ್ಳುವ ಜನರು ಇಂದು ಕರ್ನಾಟಕದಲ್ಲಿ ನಡೆ-ನುಡಿಗಳ ನಡುವಿನ ಉಭಯತನವು ಅಪರಾಧವಲ್ಲವೆನ್ನುನಂತೆ ನಡೆದುಕೊಳ್ಳುತ್ತಿದ್ದಾರೆ. ಯಜ್ಞ-ಯಾಗ ನಡೆಸುವುದು, ಹೋಮ-ಹವನ ಮಾಡುವುದು ಸರ್ಕಾರದ ಕಾರ್ಯಕ್ರಮವಾಗಿ ಬಿಟ್ಟಿದೆ. ಜನತಂತ್ರವು ಇಂದು ಕರ್ನಾಟಕದಲ್ಲಿ ಅಪಾಯಕ್ಕೆ ಸಿಲುಕಿದೆ. ಈ ದಿಶೆಯಲ್ಲಿ ನಾವು ಯೋಚನೆ ಮಾಡಬೇಕಾಗಿದೆ.
೧೧
ನಮ್ಮ ವಿವಿಯಲ್ಲಿನ ನಮಗೆ ೨೦೧೦ ಮತ್ತೊಂದು ಕಾರಣಕ್ಕೆ ಮರೆಯಲಾಗದ ಸಂವತ್ಸರ. ನಮ್ಮೆಲ್ಲರ ಕಣ್ಮಣಿಯಾದ, ಕರ್ನಾಟಕದ ಕಲ್ಚರಲ್ ಕ್ರಿಟಿಕ(ಸಾಂಸ್ಕೃತಿಕ ವಿಮರ್ಶಕ)ರಾದ ಮತ್ತು ನಮ್ಮ ವಿವಿಯ ಹೆಮ್ಮೆಯ ವಿದ್ವಾಂಸರಾದ ಡಾ.ರಹಮತ್ ತರೀಕೆರೆಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿದೆ. ಇದು ಸಾಮಾನ್ಯವಾದ ಸಾಧನೆಯಲ್ಲ. ಈ ಪ್ರಶಸ್ತಿಯನ್ನು ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಸಕಾರಣವಾಗಿ ಅರ್ಪಿಸಿದ್ದಾರೆ. ವಿವಿಯೊಂದರಲ್ಲ್ಲಿ ಸೇವೆಯಲ್ಲಿದ್ದಾಗಲೆ, ಚಿಕ್ಕ ವಯಸ್ಸಿಗೆ, ಮತ್ತು ಚಿಂತನಾ ಕೃತಿಗೆ ಇಂತಹ ಪ್ರಶಸ್ತಿ ಬಂದಿರುವುದು ದೊಡ್ಡ ಸಂಗತಿ ಮತ್ತು ಅದನ್ನು ಪಡೆದ ಕೀರ್ತಿಗೆ ಅವರು ಬಾಜನರಾಗಿದ್ದಾರೆ. ನಾವೂ ಪ್ರಶಸ್ತಿ ಪಡೆದಷ್ಟೇ ಬೀಗುತ್ತಿದ್ದೇವೆ. ಒಂದು ವಿಶ್ವವಿದ್ಯಾಲಯಕ್ಕೆ ಮತ್ತು ಅಲ್ಲಿ ದುಡಿಯುತ್ತಿರುವ ಮಂದಿಗೆ ಇದಕ್ಕಿಂತ ಹೆಚ್ಚಿನ ಮನ್ನಣೆ ಮತ್ತಾವುದು ಬೇಕು!
ಈ ಎಲ್ಲ ಸಾಧನೆಗಳು ನಮಗೆ ಹೊನ್ನಶೂಲವಾಗದಿರಲಿ, ನಮ್ಮ ಮೇಲಿನ ಟೀಕೆಗಳು ನಮ್ಮನ್ನು ಧೃತಿಗೆಡಿಸದಿರಲಿ. ಹೊಸವರ್ಷವು ಆಗಮಿಸಿರುವ ಸಂದರ್ಭದಲ್ಲಿ ಹಳೆಯದನೆಲ್ಲ ಮರೆಯೋಣ. ನಮ್ಮ-ನಿಮ್ಮ ಬದುಕು ೨೦೧೧ರಲ್ಲಿ ನೆಟ್ಟಗಿರಲಿ-ನೆಟ್ಟಗಾಗಲಿ.
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ.
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರ ಒಲಿಸುವ ಪರಿ.

ತಮ್ಮೆಲ್ಲರಿಗೂ ಹೊಸ ವರ್ಷ ೨೦೧೧ ರ ಒಳ್ಳೆಯ ಹಾರೈಕೆಗಳು.

ಟಿ.ಆರ್.ಚಂದ್ರಶೇಖರ, ವಚನ, ಸೊಸೈಟಿ ರಸ್ತೆ. ಅಮರಾವತಿ, ಹೊಸಪೇಟೆ. ೫೮೩ ೨೦೧., ದೂ.ವಾ. ೯೪೪೯೦ ೨೯೩೧೧.

Saturday, January 29, 2011

ಸಕಲರಲ್ಲಿಯೂ ಲಿಂಗಾತ್ಮವಿದೆ - ಕಥೆ

`ಹುಚ್ಚನಿಗೂ ಹುಡುಗಿಯರ ಖಯಾಲಿ' ಎಂಬ ರ್ಶಿಕೆ ಹೊತ್ತ ಸುದ್ದಿಯೊಂದು ಟಿವಿಯಲ್ಲಿ ಬಿತ್ತರಗೊಳ್ಳುತ್ತಿದ್ದುದನ್ನು ನೋಡಿದ ರತ್ನ ಇನ್ನೇನೂ ಹೋಗಿ ಮಲಗಬೇಕೆಂದವಳು ಕ್ಷಣ ನಿಂತು ನೊಡಿದಳು. ಒಮ್ಮೆಲೆ ಪರಿಚಿತ ಮುಖವೊಂದು ಟಿವಿ ಪರದೆಯನ್ನು ಆವರಿಸಿದಾಗ ತಕ್ಷಣಕ್ಕೆ ಗಾಬರಿಯಾಗಿ ಯಲ್ಲವ್ವಜ್ಜಿಯನ್ನು ಕೂಗಿದಳು. ಒಡೋಡುತ್ತ ಬಂದ ಮುದುಕಿ ಟಿವಿಯಲ್ಲಿ ತನ್ನ ಮಗ ಹುಚ್ಚರಾಮನನ್ನು ವಿಚಿತ್ರ ದೃಶ್ಯಗಲ್ಲಿ ನೋಡುತ್ತಾ ನಿಂತಲ್ಲಿಯೆ ಕುಸಿದು ಕುಳಿತಳು.
ಟಿ"ಯ ಪರದೆಯ ಮೇಲೆ ಒಂದು ಮಂಡಂಗಿ ಮತ್ತು ದೊಗಳೆ ಪ್ಯಾಂಟನ್ನು ಹಾಕಿಕೊಂಡಿದ್ದ ನೋಡಲು ಹುಚ್ಚನಂತಿದ್ದ ಒಬ್ಬ ವ್ಯಕ್ತಿಯ ಎದೆಯ ಮೇಲಿನ ಅಂಗಿಯನ್ನು ಒಂದಿಬ್ಬರು ಹುಡುಗರು ಹಿಡಿದುಕೊಂಡಿದ್ದರು. ನೋಡಲಿಕ್ಕೆ ಕಾಲೇಜು ಕನ್ಯೆಯರಂತೆ ಕಾಣುತ್ತಿದ್ದ ಐದಾರು ಹುಡುಗಿಯರು ಸರತಿಯಂತೆ ಒಬ್ಬರಾದ ಮೇಲೆ ಒಬ್ಬರು ಆ ಅರೆ ಹುಚ್ಚನ ಹೊm, ಮುಖ ಮೋತಿಗಳೆನ್ನದೆ ಎಲ್ಲೆಂದರಲ್ಲಿ ಜಜ್ಜುತ್ತಿದ್ದರು. ಒಬ್ಬ ವೀರನಾರಿಯಂತೂ ಕೈಯಲ್ಲಿ ತನ್ನ ಹೈಹಿಲ್ಡ್ ಚಪ್ಪಲಿ ಹಿಡಿದು ಅವನ ಮುಖದ ಮೇಲೆ ಕುಕ್ಕುತ್ತಿದ್ದಳು. ಆ ಹುಚ್ಚನ ತುಟಿ ಹರಿದು ರಕ್ತ ಜಿನುಗ ತೊಡಗಿತು. ಸುತ್ತಲು ನಿಂತಿದ್ದ ಹುಡುಗರಂತೂ `ನಿಮ್ಮೌವನ ನಿನಗ ಅಕ್ಕತಂಗ್ಯಾರ ಅದಾರಿಲೊ?, ನೋಡಾಕ ಹುಚ್ಚ ಇದ್ದಾಂಗದಿ. ನಿನಗ ಹುಡುಗ್ಯಾರ ಬೇಕಲೆ ಮಗನ' ಅಂದು ಬೈಯತ್ತಲೆ ಸಿನೆಮಾದಲ್ಲಿನ ಹೀರೋಗಳು ಖಳನಾಯಕರನ್ನು ಗುಮ್ಮುವಂತೆ ಆ ಹುಚ್ಚನ ಮೆದುವಾದ ಜಾಗದಲ್ಲಿ ಗುಮ್ಮುತ್ತಿದ್ದರು. ಆ ಹುಚ್ಚ `ಅವ್ವವ್ವೋ ಎಪ್ಪಪ್ಪೊ'ಎಂದಾಗಲೆಲ್ಲ ಇವರಿಗೆ ಮತ್ತಷ್ಟು ಹುರುಪು ಬರುತ್ತಿತ್ತು. ಅದರಲ್ಲಿಯೂ ತಮ್ಮ ಕಾಲೇಜು ಹುಡುಗಿಯರ ಮುಂದೆ ತಮ್ಮ ಪೌರುಷದ ಪರಾಕ್ರಮ ಪ್ರದರ್ಶಿಸಲು ಸಿಕ್ಕ ಅವಕಾಶವನ್ನು ಅವರು ಸರಳವಾಗಿ ಬಿಟ್ಟು ಕೋಡಬೇಕೆ?
ಇಂತಹ ದೃಶ್ಯಗಳನ್ನು ರಿಪೀಟು ಮಾಡಿ ತೋರಿಸಿ ತಾನೆ ಬೋರುಪಟ್ಟುಕೊಂಡ ನಮ್ಮ ಪ್ರಜಾಪ್ರಭುತ್ವದ ನಾಲ್ಕನೆ ಆಧಾರಸ್ಥಂಭ ಎನಿಸಿಕೊಂಡಿರುವ ಟಿವಿವಾಹಿನಿ ಪತ್ರಕರ್ತ ಕ್ಷಮಿಸಿ, ದೃಶ್ಯಕರ್ತ ಇದಕ್ಕೆ ಸ್ವಲ್ಪ ಒಗ್ಗರಣಿ ಹಾಕೋನು ಅನಕೊಂಡು ಸುತ್ತ ಮುತ್ತಲಿನ ಹುಡುಗ ಹುಡುಗಿಯರನ್ನು ಆ ಅರೆಹುಚ್ಚ ಮಾಡಿದ ಆವಾಂತರಗಳೆನು ಅನ್ನುವುದರ ಬಗ್ಗೆ ಬೈಟ್ ತೆಗೆದುಕೊಳ್ಳಲು ಸಿದ್ದನಾದ. ತಮ್ಮ ಮುಖಾರವಿಂದವೂ ಟಿವಿಯಲ್ಲಿ ಬರುತ್ತದೆ ಎಂದೊಂಡನೆ ಫುಲ್ ಖುಯಾದ ಹುಡುಗರು ತಮ್ಮ ಕ್ರಾಪು, ಬಟ್ಟೆ ಗಳನ್ನು ನೀವಿಕೊಂಡು ನಿಂತಲ್ಲಿಯೆ ರಿಹರ್ಸಲ್ ನಡೆಸಿ ತಯಾರಾದರು. ಆದರೆ ದೃಶ್ಯಕರ್ತ ಹುಡುಗರನ್ನು ಪಕ್ಕಕ್ಕೆ ಸರಿಸಿ ಕನ್ಯಾಮಣಿಗಳನ್ನು ಮುಂದಕ್ಕೆ ಕರೆದಾಗ ಹುಡುಗರು ಕೊಂಚ ನಿರಾಶರಾಗಿ ಅಲ್ಲಿಯೆ ಗುಂಪುಗಟ್ಟಿದರು.
ಕೈಯಲ್ಲಿ ಚಪ್ಪಲಿ ಹಿಡಿದುಕೊಂಡಿದ್ದ ಆ ವೀರರಮಣಿಯು ಆ ಅರೆ ಹುಚ್ಚನಿಗೆ ಹೊಡೆದದ್ದು ಸಾಕೆನಿಸಿಯೋ, ಟಿವಿ ವಾಹಿನಿಯಲ್ಲಿ ತನ್ನ ಅರಳುವ ಮುಖ ತೊರಿಸುವ ಸದ್ದುzಶಕ್ಕೊ ಅಥವಾ ತನ್ನ ಬಾ ಚಪಲ ತಣಿಸಿಕೊಳ್ಳುವುದಕ್ಕೊ (ತಿನ್ನುವುದಕ್ಕಲ್ಲ) ದಿಡೀರ್ ಎಂದು ಬಂದು ಕ್ಯಾಮರಾ ಮುಂದೆ ಪ್ರತಿಷ್ಠಾಪಣೆಗೊಂಡಳು.
ಎರಡು ಸಲ ಕೆಮ್ಮಿ ದ್ವನಿ ಸರಿಪಡಿಸಿಕೊಂಡು `ಮಯ್ ನೇಮ್ ಇಜ್ ನಳಿನಿ ಅಂತ.ಎವರಿಡೇ ಮಾರ್ನಿಂಗ್ ಆಂಡ್ ಆಫ್ಟರ್‌ನೂನ್ ನಾವು ಈ ಸೈಡ್‌ನಿಂದ ಆ ಸೈಡ್‌ಗೆ ಈ ಬ್ರೀಡ್ಜ್ ಇನಸೈಡ್‌ನಿಂದ ಕಾಲೇಜಿಗೆ ಹೋಗುತ್ತಿzವು. ಕೆಲವು ದಿನಗಳೆ ಹಿಂದೆ ಈ ಮ್ಯಾಡ ಮ್ಯಾನ್ ಇಲ್ಲಿ ಬ್ರಿಡ್ಜ್ ಇನಸೈಡನಲ್ಲಿ ನಿಂತು ಹುಡುಗೀರನ ಚುಡಾಸುತ್ತಿದ್ದಾನೆ. ಫಸ್ಟ್ ನಾವು ಕೇರ್ ಮಾಡಲಿಲ್ಲ. ಬಟ್ ಎವರಿಡೆ ಈ ಸ್ಟುಪಿಡ್ ಜಾಸ್ತಿ ಹುಚ್ಚಾಟ ನಡೆಸಿದ. ಹುಡುಗೀರನ ಫಾಲೋ ಮಾಡೋದು, ಸ್ಮೆಲ್ ಮಾಡೋದು'
ಮುಂತಾದ ರೀತಿಯಲ್ಲಿ ಕಿರಿಕಿರಿ ಮಾಡುತ್ತಿದ್ದ ಎಂದು ಆ ವೀರ ರಮಣಿ ತನ್ನದೆಯಾದ ಕಂಗ್ಲೀಷ್ ಭಾಷೆಯಲ್ಲಿ ಹೆಳುತ್ತಿರಬೇಕಾದರೆ ಒಬ್ಬ ಅವಳನ್ನೆ ತನ್ನ ಆಸೆಗಣ್ಣುಗಳಿಂದ ನೋಡುತ್ತ `ಅಷ್ಟೆ ಅಲ್ಲ ಸರ್ ಯಾವಾಗಲೂ ತೋಡೆಸಂದಿಯಲ್ಲಿ ಕೈ ಇಟ್ಟುಕೊಂಡಿರತ್ತಿದ್ದ. ಇನ್ನೊಂದು ವಿಷಯ ಸರ್, ಒಂಟಿ ಹುಡುಗೀರು ಕಂಡ್ರೆ ಇವನು ಒಮ್ಮೊಮ್ಮೆ ತನ್ನ ಈ ದೊಗಳೆ ಪ್ಯಾಂಟನ್ನು ಬಿಚ್ಚುತ್ತಿದ್ದ ಸರ್' ಎಂದು ದೃಶ್ಯಕರ್ತನ ಕಿವಿಯ ಹತ್ತಿರ ಬಂದು ಮಹಾನ್ ಗುಟ್ಟೊಂದನ್ನು ಉಸುರಿದ.
ಪ್ರಮೋಷನ್ ಆಸೆಂದ "ಭಿನ್ನ ಶೈಲಿಯ ಹಸಿಬಿಸಿ ಸುದ್ದಿಗಾಗಿ ತುಡಿಯುತ್ತಿದ್ದ ಆ ದೃಶ್ಯಕರ್ತನು ಪ್ಯಾಂಟು ಬಿಚ್ಚುವ ಶಬ್ದ ಕಿವಿಗೆ ಬಿದ್ದೊಡನೆ ಇದನ್ನು ಪ್ರಾಕ್ಟಿಕಲ್ ಸಮೇತ ಟಿವಿಯಲ್ಲಿ `ಬಿಸಿಬಿಸಿಯಾಗಿ ತೋರಿಸಿದರೆ'ಎಂಬ ವಿಚಾರ ಹೊಳೆದು, ತಕ್ಷಣವೆ ಅದನ್ನು ಕೃತಿಗೆ ಇಳಿಸುವಲ್ಲಿ ಕಾರ್ಯಪ್ರವೃತ್ತನಾದನು. ಯಾವ ಹುಡಗನು ತನ್ನ ಕಿವಿಯಲ್ಲಿ ಉಸುರಿದ್ದನೊ ಅದೆ ಹುಡುಗ ಮತ್ತು ಆ ಹುಡುಗನ ಗೆಳೆಯರನ್ನು ಸಾಧನವನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದನು. ಈ ಕೆಲಸಕ್ಕೆ ಕೆಲವು ಹುಡುಗರು ಹೇಸಿಗೆ ಪಟ್ಟುಕೊಂಡು ಹಿಂದಕ್ಕೆ ಸರಿದರು. ಮತ್ತೆ ಕೆಲವರು ತಮ್ಮ ಮುಖಾರವಿಂದ ಟಿವಿಯಲ್ಲಿ ಅರುಳುತ್ತದೆ ಎಂಬ ಆಸೆಗೆ ಬಿದ್ದು ಆ ಅರೆ ಹುಚ್ಚನ ಮೇಲೆ ದಾಳಿ ನಡೆಸಿ `ಹ್ಯಾಂಗ ಪ್ಯಾಂಟು ಬಿಚ್ಚುತ್ತಿದ್ದಿ ಈಗ ತೋರಿಸು ಮಗನ' ಅನಕೋತ ಅವನಿಗೆ ಗುದ್ದತೊಡಗಿದರು. ಇನ್ನು ತನಗೆ ಬೇರೆ ದಾರಿಯೆ ಇಲ್ಲ ಎನಿಸಿದಾಗ ಆ ಹುಚ್ಚ ನಿಧಾನಕ್ಕೆ ತನ್ನ ಪ್ಯಾಂಟು ಬಿಚ್ಚತೊಡಗಿದ. ದೃಶ್ಯಗಳನ್ನು ನೋಡುತ್ತಿದ್ದ ಆ ಅರೆ ಹುಚ್ಚನ ಮುಪ್ಪಾನು ಮುದುಕಿ ಯಲ್ಲವ್ವನ ಕಣ್ಣಾಲಿಗಳು ತೇವಗೊಂಡು ಟಿವಿಯಲ್ಲಿನ ದೃಶ್ಯಗಳು ಮಸುಕು ಮಸುಕಾಗತೊಡಗಿದವು.
* * * * *
ಬಾಗಲಕೋಟೆಯ ಉದಗಟ್ಟಿ ಹಳ್ಳಿಯಲ್ಲಿ ಯಲ್ಲಮ್ಮಜ್ಜಿ ಮನೆತನವು ತಲೆತಲಾಂತರದಿಂದಲೂ ದುರಗವ್ವನ ಗುಡಿಯ ಪುಜಾರಿಕೆ ಮಾಡಿಕೊಂಡು ಬರುತ್ತಿದೆ. ಇತ್ತ ಹುಚ್ಚನೂ ಅಲ್ಲದ ಅತ್ತ ಶ್ಯಾನಾನೂ ಅಲ್ಲದ ಕನಕಪ್ಪನಿಗೆ ೩೮ವರ್ಷಗಳ ಹಿಂದೆ ಈ ಯಲ್ಲಮ್ಮಜ್ಜಿಯನ್ನು ಮದುವೆ ಮಾಡಿಕೊಡಲಾಗಿತ್ತು. ಅಷ್ಟೆನೂ ಅನಕೂಲಸ್ತರಲ್ಲದ ಯಲ್ಲಮ್ಮಜ್ಜಿಯ ತವರು ಮನೆಯವರು ದುರಗವ್ವನ ಪೂಜಾರಿಕೆಗೆ ಮರುಳಾಗಿ ಹುಡುಗ ಸ್ವಲ್ಪ ಮಬ್ಬ ಇದ್ರೂ ಮಗಳು ಸುಖವಾಗಿರತಾಳ ಅನಕೊಂಡು ಮದು" ಮಾಡಿಕೊಟ್ಟಿದ್ದರು. ಯಲ್ಲವ್ವ ದುರಗವ್ವನ ಗುಡಿ ಪೂಜಾರಿಕೆ ನಿಬಾಸುತ್ತಲೆ ಹುಚ್ಚ ಗಂಡನೊಂದಿಗೆ ಬಿಗಿಯಾಗಿ ಬದುಕು ಸಾಗಿಸುತ್ತಾ ಸರೀಕರೊಂದಿಗೆ ಹೌದೌದು ಎನಿಸಿಕೊಂಡಿದ್ದಳು. ತಿಂಗಳೊಳಗ ನಾಕ ದಿನ ಊರಾಗಿದ್ದರ ಹತ್ತಾರು ದಿನ ಭಕ್ತರ ಮನೆಗೆ ಬೀಕ್ಷಾ ಬೇಡಾಕ ದೇಶಾಂತರ ಹೋಗುತ್ತಿದ್ದ ಕನಕಪ್ಪ, ಯಲ್ಲಮ್ಮಜ್ಜಿ ಬದುಕಿಗೆ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳನ್ನು ಜೋಡು ಮಾಡಿದ ನಂತರ ಒಂದಿನ ದೇಶಾಂತರ ಹೋದವ ಇಲ್ಲಿಯವರೆಗೆ ಬಂದಿರಲೆ ಇಲ್ಲ.
ಯಾರಿದ್ರೆನು ಬಿಟ್ರೇನು ಕಾಲ ಉರುಳಿಕೋತ ಹೋದಂಗ ಯಲ್ಲಮ್ಮಜ್ಜಿ ಮಕ್ಕಳು ದೊಡ್ಡಾರಾದ್ರು. ಮಗಳು ರುಕುಮವ್ವಳಿಗೆ ೧೫ತುಂಬಿ ದೊಡ್ಡಾಕಿ ಆದ ಮ್ಯಾಲ ಪಕ್ಕದ ಹಳ್ಳಿಯ ದೂರದ ಸಂಬಂಧಿಕರ ಹುಡುಗನೊಬ್ಬನಿಗೆ ಮದುವಿ ಮಾಡಿ ಕೊಟ್ಟಿದ್ಲು. ಹಿರೆ ಗಂಡ ಮಗ ಪರಲಾದನ್ನು ಬಾಗಲಕೋಟಿ ಶಾಲಿಯೊಳಗ ಓದಾಕ ಹಾಕಿದಳು. ಆದ್ರ ಯಲ್ಲಮ್ಮಜ್ಜಿಗೆ ಸಣ್ಣ ಮಂಗಂದ ಚಿಂತಿ. ಹುಡುಗ ಯಾವ ಯಾವ ವಯಸ್ಸಿಗೆ ಏನೇನೂ ಕಲಕೋಬೇಕಿತ್ತೊ ಅದನ್ನು ಕಲಕೊಳ್ಳಲಿಲ್ಲ ಅನ್ನೋಕ್ಕಿಂತ ಅದ್ಯಾವದೂ ಅಂವಂಗ ತಲಿಗೆ ಹತ್ತಲ್ಲಿಲ್ಲ ಅಂತ ಹೇಳಬೇಕು. ಹುಡುಗನಿಗೆ ೧೨ವರ್ಷ ಮುಗದ ಮ್ಯಾಲೂ ಅಂವನ ಮುಕಳಿ ತೊಳೆಯೋದ್ರಿಂದ ಹಿಡಿದು ಎಲ್ಲ ಸೇವೆಗಳನ್ನು ಯಲ್ಲವ್ವನ ಮಾಡಬೇಕಿತ್ತು. ಚಡ್ಡಿ ಕಸಿನೂ ಆಕಿನ ಕಟ್ಟಬೇಕು. ಇನ್ನೂ ಚಂದಂಗ ಮಾತಾಡಾಕ ಬರದ ಹುಚ್ಚ ರಾಮನಿಗೆ ಇನ್ನ ಶಾಲಿಯೋಳಗ ಸರಸೋತಿಯಾದ್ರು ಹ್ಯಾಂಗ ಒಲಿತಾಳ. ಹಿಂಗಾಗಿ ಆತ ಯಾವಾಗಲೂ ಯಲ್ಲವ್ವಗ ಜೋಡಿಯಾಗಿ ಮನಿಯೊಳಗ ಬಿದ್ದಿರತಿದ್ದ.
ರುಕಮವ್ವಳ ಮಗಳು ರತ್ನಾಳನ್ನು ಸೈತ ಮುದುಕಿ ತನ್ನ ಮನಿಯಾಗ ತಂದ ಇಟಕೊಂಡು ಸಾಲಿ ಕಳಸತಿದ್ಲು. ತನ್ನ ಇಬ್ಬರ ಗಂಡ ಮಕ್ಕಳೊಳಗ ಯಾರೊಬ್ಬರಿಗಾದರೂ ಮೊಮ್ಮಗಳನ್ನು ಗಂಟು ಹಾಕ್ಕೊಬೇಕು ಅನ್ನೋದು ಯಲ್ಲವ್ವಳ ಆಸೆಯಾಗಿತ್ತು. ಆದ್ರ ಪರಲಾದ `ರತ್ನ ಕರ್ರಗ ಅದಾಳ ನಾನು ಆಕಿನ ಮದುವಿ ಆಗಂಗಿಲ್ಲ' ಅಂತ ಮೊದಲ ಹೇಳಿದ್ದ. ಇನ್ನ ಪಾಪ ಸಣ್ಣಾಂವ `ರಾಮಣ್ಣ ಹುಚ್ಚ ಅದಾನ. ನಾನು ಅವಂಗ ನನ್ನ ಮಗಳನ್ನು ಕೊಡೂದಿಲ್ಲ' ಅಂತ ಶಾರವ್ವ ಹೇಳಿದ್ದಳು.
ಇದ್ಯಾವುದರ ಪರಿವೆ ಇಲ್ಲದ ರಾಮಣ್ಣ ತನ್ನ ಅಕ್ಕನ ಮಗಳು ರತ್ನಳೊಡನೆ ಯಾವಾಗಲು ಆಟದಲ್ಲಿ ಮಗ್ನನಾಗಿರುತ್ತಿದ್ದನು. ಈಗೀಗ ಮುಂಜಾನಿ ಹೊಳಿ ಕಡೆ ಹೇಲಾಕ ಹೋದ ಮ್ಯಾಲ ತನ್ನ ಮುಕುಳಿ ತಾನ ತೊಳಕೊತಿದ್ದನಾದರೂ, ಅಂವನ ಚಡ್ಡಿಯ ಕಸಿಯನ್ನು ಯಲ್ಲವ್ವ ಅಥವಾ ಅವಳ ಮೊಮ್ಮಗಳು ರತ್ನಾ ಕಟ್ಟಬೇಕಾಗುತ್ತಿತ್ತು.
* * * * *
ಬಾಗಲಕೊmಯೊಳಗ ರೂಂ ಮಾಡಿ ಮನಿಂದ ಬುತ್ತಿ ತರಿಸಿಕೊಂಡು ಕಾಲೇಜು ಓದುತಿದ್ದ ಪರಲಾದನ ಕೈಂದ ಎನೂ ಮಾಡಿದರೂ ಹನ್ನಾಡನೆತ್ತೆ ಪಾಸಾಗದೆ ಲಗಾ ಹೊಡೆಯುವುದು ತಪ್ಪಿರಲಿಲ್ಲ. `ಇಂವ ಪಾಸ ಆಗಿ ಎನ್ ನೋಕ್ರಿ ಹಿಡಿಯೋದು ಕೆಟ್mತಿ. ಬೇಕಾದ್ರ ಊರಿಗೆ ಬಂದು ಪೂಜಾರಿಕೆ ಮಾಡಲಿ' ಎಂದು ಯಲ್ಲವ್ವ ಅವನಿಗೆ ಬುತ್ತಿ ಕಟ್ಟಿ ಕಳಸೋದನ್ನು ನಿಲ್ಲಿಸಿಬಿಟ್ಟಳು. ಆದರೆ ಎನೇನೋ ಕಥಿ ಹೇಳಿ ಊರಿಗೆ ಬಂದಾಗೊಮ್ಮೆ ಯಲ್ಲವ್ವನ ಹಂತ್ಯಾಕ ರೊಕ್ಕ ಉಚ್ಚುತ್ತಿದ್ದ ಪರಲಾದ, ತನ್ನ ರೂಮಿನ ಪಕ್ಕದ `ಲಿಂಗೇಶ್ವರ' ಖಾನಾವಳಿಯಲ್ಲಿ ತಿಂಗಳ ಚೀಟಿ ಹರಿಸಿ ಊಟ ಮಾಡುತ್ತಿದ್ದ. ಖಾನಾವಳಿ ಮಾಲಕಗ ಚಸ್ಮಾ ಬಂದಿದ್ದರಿಂದ ಖಾನಾವಳಿ ಕ್ಯಾಯರ್ ಸೀಟಿನಲ್ಲಿ ಕೂಡ್ರುತ್ತಿದ್ದ ಮಾಲಕನ ಮಗಳು ರಾಧಾ ಮತ್ತು ಪರಲಾದನ ನಡುವೆ ಗೆಳೆತನ ಬೆಳೆದು, ಅದೂ ಮದುವೆಯಾಗುವಷ್ಟರ ಮಟ್ಟಿಗೆ ಮುಂದುವರೆಯಿತು. ಕೊನೆಗೊಂದು ಒಂದು ದಿನ ಆ ರಾಧಾಳನ್ನೆ ಮದುವೆಯಾದ ಪರಲಾದ ರಾಧಾಳ ಕ್ಯಾಯರ್ ಸೀಟಿನಲ್ಲಿ ತಾನು ಕೂಡ್ರತೊಡಗಿದ.
* * * * *
ಹುಚ್ಚ ರಾಮ ರತ್ನಳನ್ನು ಬಾಳ ಹಚಗೊಂಡಿದ್ದ. ರತ್ನ ಸಾಲಿಗೆ ಹೋಗುವ ಮುಂಚೆ ಎರಡು ತಾಸು ಊರ ಹೊರಗಿನ ತಿಪ್ಪಿಯೊಳಗ ಎಮ್ಮಿ ಮೇಸಬೇಕಿತ್ತು. ಅವಳು ಎಮ್ಮಿ ಮೇಸಾಕ ರಾಮನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಳು. ಇಬ್ಬರು ಅಲ್ಲಿ ಕುಂಟಿಬಿಲ್ಲೆ, ಅಂಡ್ಯಾಳ, ಮಣಪತ್ತ, ಲಗೋರಿ ಮರಕೋತಿಯಾಟ ಮುಂತಾದವುಗಳನ್ನು ಆಡುತ್ತಿದ್ದರು.
ಹಿಮಗ ಆಡಕೋತ ಮೈಮರೆತಾಗ ಕೆಲವೊಮ್ಮೆ ಎಮ್ಗೊಮಿಳು ಪಕ್ಕದ ಎರಿಹೊಲ ಹೊಕ್ಕು ತುಡುಗತನ ಮಾಡಿದಾಗ ಹೊಲದ ಯಜಮಾನರು ಎಮ್ಮಿಗಳನ್ನು ಕೊಂಡವಾಡಕ್ಕ ಹಾಕಿ ಯಲ್ಲವ್ವನಿಗೆ ಹೇಳಿ ಕಳುಹಿಸುತ್ತಿದ್ದರು. ಆಗೆಲ್ಲ ದಂಡ ಕಟ್ಟಿ ಎಮ್ಮಿ ಬಿಡಿಸಿಕೊಂಡು ಬರುತ್ತಿದ್ದ ಯಲ್ಲವ್ವ `ಎಮ್ಮಿ ತುಡಗ ಮಾಡಾಕ ಬಿಟ್ಟು ಎಲ್ಲಿ ಹರಗ್ಯಾಡಾಕ ಹೋಗಿದ್ದಿ ಹಡಿಬಿಟ್ಟಿ' ಅಂತ ಬಡಿಯುತ್ತಿದ್ದಾಗ ರಾಮ ಅವಸರವಾಗಿ ಅವಳ ಕೈಂದ ಬಡಿಗೆ ಕಸದೊಗೆದು ಅಳ್ಳುತ್ತ ಅಡ್ಡ ನಿಂತು `ಬಾಡ ಬಾಡ' ಎಂದು ಕಣ್ಣಲ್ಲಿ ನೀರು ತೊಂದುಕೊಂಡು ಎಬಡಿಸುತ್ತಿದ್ದ.
ರತ್ನ ಮೈನರೆದು ಇದ್ದುದುರಾಗ ಚಲೋ ಮನೆತನ ಬಂದಾಗ ಯಲ್ಲವ್ವ ಮದುವಿ ಮಾಡಿಕೊಟ್ಟಿದ್ದಳು. ರತ್ನ ಲಗ್ನ ಆಗಿ ಹೊದ ಮ್ಯಾಲ ಹುಚ್ಚರಾಮನಿಗೆ ಸಂಗಾತಿಗಳ್ಯಾರು ಸಿಕ್ಕದಂತಾಗಿ ಏಕಾಂಗಿ ಭವ ಕಾಡತೊಡಗಿತು. ಇಷ್ಟರಲ್ಲಾಗಲೆ ಆತ ವಯಸ್ಸಿಗೆ ಬಂದದ್ದರಿಂದ ಹುಚ್ಚನೆಂದು ಕನಿಕರ ತೋರದ ಹರೆಯದ ಕಾವು ಏಕಾಂಗಿ ಭವದೊಂದಿಗೆ ಮೇಳೈಸಿ ಸುಡುವುದಕ್ಕೆ ಸುರು ಹಚ್ಚಿಕೊಂಡಿತು.
* * * * *
ಹುಚ್ಚುರಾಮ ಮೊದಲಿನಿಂದಲೂ ಮನೆಯ ಹೊರಗಿನ ಕಟ್ಟೆಯ ಮೇಲೆ ಮಲಗಿರುತ್ತಿದ್ದ. ಇತ್ತೀಚೆಗೆ ಅವನ ಕೈಗಳು ತೊಡೆಗಳ ಸಂದಿಯೊಳಗೆ ಸೇರಿಕೊಂಡು ಮಿಸುಕಾಡುತ್ತಿದ್ದವು. ಅಪ್ರಯತ್ನಪೂರ್ವಕವಾಗಿ ಶುರುವಾದ ಈ ಮಿಸುಗುಡುವಿಕೆ ಆನಂತರದಲ್ಲಿ ಅಭ್ಯಸವಾಗಿ ಪರಿವರ್ತನೆಗೊಂಡಿತ್ತು. ಕೈಗಳ ಮಧ್ಯದಲ್ಲಿ ಸಿಕ್ಕಿಕೊಳ್ಳವ ಆತನ ಪುರುಷತ್ವಕ್ಕೆ ಅದೇನೊ ಅವ್ಯಕ್ತ ಆನಂದವಾಗುತ್ತಿತ್ತು. ತಟ್ಟಿನಂತಹ ತನ್ನೆರಡು ಕೌದಿಗಳೊಳಗೆ ಈ ಮಿಸುಗುಡುವಿಕೆ ಮತ್ತು ಸಾಉಖದ ನರುಳುವಿಕೆ ದಿನನಿತ್ಯವು ಮರುಕಳಿಸುತ್ತಿತ್ತು.
ಒಂದು ಮಧ್ಯ ರಾತ್ರಿ ಆ ಹರಕು ತಟ್ಟಿನೊಳಗೆ ಚಪಾತಿ ಬಣ್ಣದ ಮೃದು ಮಧುರ ಕೈಗಳೆರಡು ಅವನ ತೊಡೆ ಸಂದಿಯನ್ನು ಬಳಸಿದವು. ಕಿನಿಕಿನಿಯ ಬಳೆ ಶಬ್ದ ಹೊರಡಿಸುತ್ತಿದ್ದ ಆ ಕೈಗಳು ಹೆಣ್ಣಿನವು ಎನ್ನುವುದು ಆ ಹುಚ್ಚು ರಾಮನಿಗೂ ಅರ್ಥವಾಯಿತು. ಹಿಂದೆಂದೂ ಅನುಭವಿಸದ ಸುಖವೊಂದ ಅವನ ಮೈಯಡರಿ ಮತ್ತೇರಿಸಿತೊಡಗಿತ್ತಾದರೂ ಅವನಿಗೆ ಮುಂದೆನು ಮಾಡಬೆಕೆಂಬುದು ಗೊತ್ತಾಗದಾತು. ಆದರೆ ಆ ಅನುಭವಿ ಹೆಣ್ಣು ಅವನಿಗೆ ತನ್ನ ಅನುಭವವನ್ನೆಲ್ಲಾ ಉಣಬಡಿಸಿದ್ದಳು. ಮೇವು ಹಸಿರಾಗಿತ್ತು. ಎತ್ತು ಹಸಿದಿತ್ತು.
ರತ್ನಳದೆ ವಯಸ್ಸಿನ ಪಕ್ಕದ ಮನೆಯ ಶಾರಿ ಪಂಚಮಿ ಹಬ್ಬಕ್ಕೆಂದು ತವರ ಮನೆಗೆ ಬಂದಿದ್ದಳು. ಅವಳ ಗಂಡ ಮಿಲಿಟರಿಗೆ ಸೇರಿದ್ದರಿಂದ ಗಂಡನೊಂದಿಗಿನ ಒಂದು ಅಪೂರ್ವ ಸಮಾಗಮಕ್ಕಾಗಿ ಅವಳು ಐದಾರು ತಿಂಗಳಗಳವರೆಗೆ ಕೆಲವೊಮ್ಮೆ ಇಡಿ ವರ್ಷದವರೆಗೆ ಕಾಯಬೇಕಿತ್ತು. ಕಳೆದ ತಿಂಗಳು ಬಂದು ಹೋಗಿದ್ದ ಅವಳ ಮಿಲಟರಿ ಗಂಡ ತಿಂಗಾಳುಗಟ್ಟಲೆಯ ತನ್ನ ಹಸಿವನ್ನು ಒಂದು ವಾರದಲ್ಲಿಯೆ ನೀಗಿಸಿಕೊಂಡು ಮತ್ತೆ ದೂರ ದೇಶಕ್ಕೆ ಮರಳಿ ಹೋಗಿದ್ದ. ಭರತ ದೇಶದ ವೈವಿಧ್ಯಮಯ ಸಂಸ್ಕೃತಿಯ ತನ್ನ ಮಿಲಿಟರಿ ಗಳೆಯರಿಂದ ಕೇಳಿ ತಿಳಿದಿದ್ದ ವಿವಿಧ ನಮೂನಿಯ ರತಿ ಮಜ್ಜನದ ಭಂಗಿಗಳನ್ನು ಶಾರಿಯ ಮೇಲೆ ಪ್ರಯೋಗಿಸಿದ್ದ. ಆತ ಹೋದ ಮೇಲೆ ಅವಳಿಗೆ ಸಹಜವಾಗಿ ಆ ಭಂಗಿಗಳೆಲ್ಲವೂ ರಾತ್ರಿಯೆಲ್ಲ ಕಾಡತೊಡಗಿದವು. ಅಂತಹ ಕಾಡುವ ಆ ಒಂದು ರಾತ್ರಿಯಲ್ಲಿಯೆ ಅವಳಿಗೆ ಮಲಗಲಿಕ್ಕೆ ಅಸಾಧ್ಯವೆನಿಸಿ ಒಂದಕ್ಕೆ ಮಾಡುವ ನೆಪದಲ್ಲಿ ಎದ್ದು ಹೊರ ಬಂದಿದ್ದಳು.
ಅವಳು ತನ್ನ ಸೀರೆ ಎತ್ತಿ ತಾಮ್ರದ ತತ್ರಾಣಿ ಗಾತ್ರದ ಹಿಂಭಾಗವನ್ನು ನೆಲಕ್ಕೆ ತಂದು ಕಾಲ ಮಡಿಯುವುದಕ್ಕೂ ಹತ್ತಿರದ ಕm ಮೇಲೆ ಮಲಗಿದ್ದ ಹುಚ್ಚರಾಮ ಮಿಸುಕಾಡುತ್ತಾ ಮುಲುಗುವುದಕ್ಕೂ ಸರಿ ಹೋತು. ಅವಳಿಗೆ ಹುಚ್ಚರಾಮನ ಮುಲುಗಾಟ ಮಿಸುಕಾಟ, ಸುಖದ ನರಳಾಟಗಳು ಅರ್ಥವಾಗಿ ಅವುಗಳಿಗೆ ಹೊಸ ಅರ್ಥವನ್ನು ಮಾಡಿಸಿದ್ದಳು.
ಮೊದಲ ದಿನ ಶಾರಿಯ ದಾಳಿಂದ ಹುಚ್ಚರಾಮ ಸ್ವಲ್ಪ ಹೆದರಿದನಾದರೂ ಅನಂತರದಲ್ಲಿ ಮುಂದಿನೆಂmನು ಎಂಟು ದಿನಗಳವರೆಗೆ ಅದು ಒಂದು ರೂಡಿಯಾಗಿ ಆಮೇಲಾಮೇಲೆ ಬೀಡಲಾರದ ಚಟವಾಗಿ ಪರಿಣಮಿಸಿತು. ಆದರೆ ಹಬ್ಬ ಮುಗಿದ ಮೇಲೆ ಶಾರಿ ಮತ್ತೆ ತನ್ನ ಗಂಡನ ಮನೆಯತ್ತ ಮುಖ ಮಾಡಿದಾಗ ಹುಚ್ಚರಾಮ ಈಗ ನಿಜಕ್ಕೂ ಏಕಾಂಗಿಯಾಗಿಬಿಟ್ಟ. ಅನಾಯಾಸವಾಗಿ ಸಿಕ್ಕು ಸುಖದ ವರಸೆಯನ್ನು ನೀಡಿದ್ದ ಶಾರಿ, ಇದ್ಯಾವುದರ ಖಬರಿಲ್ಲದೆ ಹುಚ್ಚರಾಮನ ಆ ಮಿಸುಕಾಟಗಳನ್ನು ಮೊದಲಿನಂತೆ ಮಿಸುಕಾಡಲು ಬಿಟ್ಟು ನಿರ್ಧುಯಾಗಿ ನಿರ್ಗಮಿ ಸಿಬಿಟ್ಟಿದ್ದಳು.
ಹೊರಗಡೆ ಮಲಗುತ್ತಿದ್ದ ಹುಚ್ಚರಾಮ ಈಗ ಮಧ್ಯರಾತ್ರಿಗಳಲ್ಲಿ ಹುಚ್ಚು ಹಿಡಿದವನಂತೆ ಏಕಾಂಗಿಯಾಗಿ ಊರ ತುಂಬೆಲ್ಲಾ ಅಲೆದಾಡತೊಡಗಿದ್ದ. ಚಂದ್ರ ಚಲ್ಲಿದ ಹಾಲ ಬೆಳದಿಂದಳು, ಮೈದಡುವುತ್ತಿದ್ದ ತಂಗಾಳಿ, ಗಿಳಿಡುತ್ತಿದ್ದ ನಾಗಳೆಲ್ಲವೂಗಳಿಂದಲೂ ಅವನೊಳಗಿನ ಕಾವು ಮತ್ತಷ್ಟು ಹೆಚ್ಚಾಗಿ ಆತ ಎನೇನೊ ಬಡಬಡಿಸುತ್ತ ನರಳುತ್ತಿದ್ದ.
* * * * *

ಅದೆ ದಿನಗಳ ಒಂದು ಮುಂಜಾನೆ ತನ್ನ ಪ್ಯಾಟಿ ಹೆಂತಿಯೊಂದಿಗೆ ಪರಲಾದ ಉದಗಟ್ಟಿಗೆ ಪಾದಂಗೈದಿದ್ದ. ನುಣ್ಣಗೆ, ತಿಳುಗುಲಾಬಿಯ ಸೀರೆ, ತೋಳಿಗಂಟಿಕೊಂಡಿದ್ದ ಜಂಪರ್ ತೊಟ್ಟಿದ್ದ ರಾಧ ಯಾವಾಗಲೂ ತನ್ನ ಗಂಡ ಪರಲಾದನಿಗೆ ಅಂಟಿಕೊಂಡೆ ಇರುತ್ತಿದ್ದುದರಿಂದ ಸಹಜವಾಗಿಯೆ ಹುಚ್ಚರಾಮನಿಗೆ ಅಸೂಯೆಗಿಟ್ಟುಕೊಂಡಿತ್ತು. ಹುಚ್ಚುರಾಮ ತನ್ನ ಆಸೂಯೆ ಮತ್ತು ಆಸೆ ಬೆರೆತ ಕಣ್ಣುಗಳನ್ನು ಸಾಧ್ಯವಾದಾಗಲೆಲ್ಲ ಆ ಹೊಸ ಜೊಡಿಯ ಮೇಲೆಯೆ ಕೇಂದ್ರಿಕರಿಸುತ್ತಿದ್ದ.
ಅಂದು ರಾತ್ರಿ ನಿದ್ದೆ ಬರದೆ ಶಾರಿಯ ಜುಗಲಬಂದಿ ಬಗ್ಗೆಯೆ ಕನಸು ಕಾಣುತ್ತಾ ಹುಚ್ಚರಾಮ ಕಟ್ಟೆ ಯ ಮೇಲೆ ಮಲಗಿರಬೇಕಾದರೆ ಒಳಗಡೆ ಕೊಣೆಯ ಸಂದಿಂದ ರಾಧಾಳ ಮುಲುಕಾಟ, ಪರಲಾದನ ಏರುಸಿರನ ಪರದಾಟ, ಇಬ್ಬರ ಸುಖದ ನರಳಾಟ, ತೃಪ್ತ-ಅತೃಪ್ತದ ಎಗರಾಟಗಳು ಆ ನಿಶಬ್ದ ರಾತ್ರಿಯಲ್ಲಿ ಅಸ್ಪಷ್ಟವಾಗಿ ಕೇಳುತ್ತಾ ಕೇಳುತ್ತಾ ನಿಚ್ಚಳವಾಗತೊಡಗಿದವು. ರಾಧಾಳ ಮುಲುಕಾಟವು ಶಾರಿಯ ಮುಲುಕಾಟದೊಂದಿಗೆ ಹೋಲಿಕೆಯಾಗಿ ಹುಚ್ಚುರಾಮ ಎದ್ದು ಕುಳಿತು ಬಾಗಿಲು ಸಂದಿಗೆ ತನ್ನ ಕಣ್ಣೋಟ ತೂರಿಸಿ ನೋಡಬಾರದ್ದನ್ನು ನೋಡಿಬಿಟ್ಟ. ಬಾಯಲ್ಲಿ ಜೊಲ್ಲು ಸುರಿಯುತ್ತಿತ್ತು.
ಅವತ್ತೆ ಹುಚ್ಚರಾಮ ನಿಶ್ಚುಸಿಬಿಟ್ಟ. ಅವ್ವಗೆ ಹೇಳಿ ತಾನು ಹ್ಯಾಂಗಾದರೂ ಮಾಡಿ ಯಾವ ಹೆಂಗ್ಸನ್ನಾದರೂ ಲಗ್ನ ಆಗಿ ಬೀಡಬೇಕು. ನಾಳೆಯ ಅವ್ವಳನ್ನು ಕೇಳಿಬಿಡಬೇಕು. ಅವ್ವ ಯಾರನ್ನಾದರೂ ತಂದು ನನಗೆ ಗಂಟು ಹಾಕಿಯೇ ಹಾಕುತ್ತಾಳೆ ಎಂಬ ಭರವಸೆಯೊಂದಿಗೆ ಆತ ಅವತ್ತು ಮಲಗಲು ಪ್ರಯತ್ನಿಸಿದ. ಆದರೆ ಮಗ್ಗಲು ಪ್ರಯತ್ನಿಸಿದ್ದೆ ಬಂತು. ನಿದ್ದೆ ಹತ್ತಿರ ಸುಳಿಯಲಿಲ್ಲ.
ನಿನ್ನೆ ರಾತ್ರಿ ನಿದ್ದೆ ಇಲ್ಲದ್ದಕ್ಕೂ ಏನೊ. ಅಂದು ಹೊತ್ತಾರೆ ಬಾಳ ತಡವಾಗಿ ಹುಚ್ಚರಾಮನಿಗೆ ಎಚ್ಚರವಾತು. ಆಗಲೆ ಎಳೆಬಿಸಿಲು ಅವನ ಹರಕು ಕೌದಿಯೊಳಗಿಂದ ತನ್ನ ಚಿತ್ತಾರ ಚೆಲ್ಲಿ ಚುರುಕು ಮುಟ್ಟಿಸತೊಡಗಿತ್ತು. ಕಣ್ಣುಜ್ಜುತ್ತಾ ಮೇಲೆದ್ದ ಹುಚ್ಚುರಾಮ ದಿನನಿತ್ಯದಂತೆ ತನ್ನ ಮನೆ ದೇವರು ದುರಗವ್ವನ ಗುಡಿ ದಿಕ್ಕಿಗೆ ಭಕ್ತಿಂದ ಕೈಮುಗಿದ. `ಎದ್ದಕೂಡ್ಲೆ ದುರಗವ್ವನಿಗೆ ಕೈ ಮುಗಿದರೆ ಆ ದೇ" ನಮ್ಮಂಥವರ ಕಷ್ಟ ಕಳೆದು ನಾವು ಬಯಸಿದ್ದನ್ನು ಕೊಡತಾಳ' ಅಂತ ಅವ್ವ ಹೇಳಿದ್ದು ನೆನಪಿಗೆ ಬಂದು ಇಂದು ಗುಡಿಯಲ್ಲಿ ತನಗೂ ಹೆಂತಿ ಕೊಂಡಬೇಕೆಂದು ದುರಗವ್ವಳಲ್ಲಿ ಕೇಳಿಯೇಬಿಡಬೇಕು ಎಂದು ಆತ ನಿರ್ಧರಿಸಿದ. ತನ್ನ ಕೌದಿಯನ್ನು ಮುದ್ದೆಮಾಡಿ ಮೂಲೆಗೆ ಸರಿಸಿದ. ಹಾಸಿಕೊಂಡ ಸಣಬಿನ ಚೀಲದ ನಡುಭಗವು ಗುಂಡಾಕಾರದಲ್ಲಿ ಚಿತ್ರ ಮೂಡಿಸಿಕೊಂಡು ಉಚ್ಚಿಯ ಚಿಂಗ್ ವಾಸನಿ ಮೂಗಿಗೆ ಅಡರುತ್ತಿತ್ತು. ಆ ತಟ್ಟನ್ನು ತೆಗೆದು ಅಲ್ಲಿಯೆ ಗೂಟವೊಂದಕ್ಕೆ ಬಿಸಲಿಗೆ ಹಾಕಿ ಮೈ ಮುರಿದನು.
ಅಣ್ಣ ಪರಲಾದ ಹೆಂಡತಿ ರಾಧಾ, ನಿನ್ನೆ ರಾತ್ರಿ ತಾನೆನೂ ಮಾಡಿಯೆ ಇಲ್ಲ ಎನ್ನುವ ಸೋಗುಮುಖ ಮಾಡಿಕೊಂಡು, ಆ ಎಳೆ ಬಿಸಲಿನಲ್ಲಿಯೆ ತನ್ನ ಉದ್ದಗೂದಲುಗಳನ್ನು ಬಾಚಣಿಗೆಯಲ್ಲಿ "ಕ್ಕಿ ಎಡಬೈತಲೆ ತೆಗದು ಹೆರಳಿನಲ್ಲಿ ಹಿಡಿದಿಡುವ ಕಾಯಕದಲ್ಲಿ ತೊಡಗಿದ್ದಳು. ಆಕೆಯ ಎದುರಿಗೆ ಕುಳಿತಿದ್ದ ಕನ್ನಡಿಯು ತನ್ನ ಮುಖದ ಮೇಲಿನ ಎಳಿ ಬಿಸಲನ್ನು ಆಕೆಯ ಮುಖಕ್ಕೆ ಉಗುಳಿ ಅವಳ ಕೆನ್ನೆಯನ್ನು ರಂಗುಗೊಳಿಸಿ ನಗುತ್ತಿತ್ತು. ಆಕೆಯ ಕೂದಲಿನ ವಯ್ಯಾರದ ಮಣಿದಾಟಗಳ ಮೇಲೆಯೆ ಕಣ್ಣಿಟ್ಟುಕೊಂಡು ಪಕ್ಕದ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಪರಲಾದನನ್ನು ನೋಡಿ ಹುಚ್ಚುರಾಮನ ಮಂಕಾದ.
ಇವತ್ತು ಯಲ್ಲವ್ವಜ್ಜಿಯನ್ನು ಕೇಳಿ ಲಗ್ನದ ತಿರ್ಮಾಣವನ್ನು ಮಾಡಿಕೊಳ್ಳಲೆಬೇಕೆಂದು ರಾಮ ತನ್ನ ಮುಖದ ಮೇಲೆ ಬೊಗಸೆ ನೀರನ್ನು ಗೊಜ್ಜಿಕೊಳ್ಳದೆ ಯಲ್ಲಮ್ಮಜ್ಜಿ ಇರುವ ದುರುಗವ್ವನ ಗುಡಿಯತ್ತ ನಡೆದ. ಅವತ್ತು ಮಂಗಳವಾರ ಬೇರೆ ಇದ್ದುದರಿಂದ ಎರಡ್ಮೂರು ವರ್ಷಗಳ ಹಿಂದೆ ಮೈನರೆತಿದ್ದ ಊರ ಹುಡುಗಿಯರು ತಮಗೆ ಇವರ್ಷದ ಮದು" ಸೀಜನ್ನಿನಲ್ಲಾದರೂ ಚಲೋ ಗಂಡ ಸಿಗಲಿ ಎಂದು ದುರಗವ್ವಳ ಹಂತ್ಯಾಕ ಬೇಡಿಕೊಳ್ಳಾಕ ಹರ್‍ಯಾಗೆದ್ದು, ಮುಸುರಿ ತೊಳದು ಜಳಕ ಮಾಡಿ ಪೇರನ್‌ಲ", ಫಾಂಡ್ಸ್ ಪೌಡರ್ ಹಚಗೊಂಡು ಇದ್ದುದರೊಳಗ ಚಲೊ ಲಂಗ ದಾವಣಿ ಹಾಕ್ಕೂಂಡು ಕೆಲವರು ದುರಗವ್ವನ ಗುಡಿ ಕಡೆ ಮುಖ ಮಾಡಿದ್ದರೆ, ಹಲವರು ಈಗಾಗಲೆ ದುರಗವ್ವನ ದರುಶನ ಭಗ್ಯ ಪಡೆದುಕೊಂಡು ತಮ್ಮ ಮನೆಗಳತ್ತ ಮುಖಮಾಡಿದ್ದರು. ಮುಖವೆನೂ ಮನೆ ಕಡೆ ಇದ್ದರೂ ಆ ಕಡೆ ಈ ಕಡೆ ತಮ್ಮ ಅರಳುಗಣ್ಣುಗಳನ್ನು ಚಲ್ಲುವುದು, ಎದರಾದ ಹುಡುಗರ ಎದೆಯ ಮೇಲೆ ತಮ್ಮ ಕಣ್ಣೋಟದ ಬಾಣ ಬೀಡುವುದು ಅವರ ವಯೋಸಹಜ ಚಾಂಚಲ್ಯವನ್ನು ಪ್ರತಿಪಾದಿಸುತ್ತಿತ್ತು.
ಎದುರಾದ ಹುಡುಗಿಯರ ಕಣ್ಣೋಟಗಳ ಅಂಚು ಆಗಾಗ ಹುಚ್ಚರಾಮನಿಗೂ ತಾಗುತ್ತಿದ್ದುದರಿಂದ ರಾಮ ಇವರೇನಾದರೂ ತನ್ನನ್ನು ಲಗ್ನ ಆಗಬಹುದೆ ಎನ್ನುವ ಕನಸಿಗೆ ಜಾರುತ್ತಿದ್ದ. ಕನಸಿನಲ್ಲಿಯೆ ಆ ಹುಡುಗಿಯರ ಗಂಡನಾಗುತ್ತಾ ತನ್ನ ಸೊಟ್ಟಗಾಲನ್ನು ಎಳೆದೆಳೆದು ಮುಂದಕ್ಕೆ ಒಗೆಯುತ್ತಿದ್ದ.
* * * * *
ಈ ಊರಿಗೆ ಕಾಲಿmಗಿನಿಂದಲೂ ದುರುಗವ್ವ ತಾಯ ಪೂಜೆ ಯಲ್ಲವ್ವಳ ಹೆಗಲಿಗೆ ಬಿದ್ದಿತ್ತು. ಸೂರದಿಕ್ಕಿನಲ್ಲಿ ಬೆಳ್ಳಿ ಚುಕ್ಕಿ ಮೂಡುವ ಹೊತ್ತಿನಲ್ಲಿಯೆ ದಿನಾಲೂ ಎಳುವ ಎಲ್ಲವ್ವ ಮನೆಯ ಕಸ ಮುಸುರೆ ಮಾಡಿ ಊರ ಅಗಸೆ ಬಾಗಿಲನಲ್ಲಿಯ ಕೈ ಬೊರಿನಿಂದ ಒಂದು ಕೊಡ ನೀರು ತಂದು ಜಳಕ ಮಾಡಿ, ಮತ್ತೆ ಬೋರಿಗೆ ಹೋಗಿ ಮತ್ತೊಂದು ಕೊಡ ಮಡಿ ನೀರು ಹೊತ್ತು ದುರಗವ್ವನ ಗುಡಿಯತ್ತ ಸಾಗುವಳು. ದುರಗವ್ವ ನಿನ್ನೆಂದ ಹೊತ್ತಿದ್ದ ಹೂ ಮಾಲೆ, ಸೀರೆ, ಬಿಂದಿ, ಬೆಳ್ಳಿ ಕಣ್ಣು, ಮುಂತಾದವುಗಳನ್ನು ಕಿತ್ತು ಪೂಜಾ ಬುಟ್ಟಿಯಲ್ಲಿ ಇಟ್ಟುಕೊಳ್ಳುವಳು. ಬರಿಮೈ ದುರಗವ್ವಳ ಕರಿಕಲ್ಲಿನ ದೇಹವನ್ನು ಕೊಡ ನೀರು ಸುರಿದು ಜಳಕ ಮಾಡಿಸುವಳು. ತಂಬಿಗೆಯಲ್ಲಿ ತಂದಿದ್ದ ಒಳ್ಳೆಣ್ಣಿಯನ್ನು ದೇ"ಯ ಮೈಗೆ ಮೆತ್ತಿ ಕರಿಮೈ ದುರಗವ್ವ ತಳ ತಳ ಹೊಳೆಯುವಂತೆ ಮಾಡುವಳು. ಆಮೇಲೆ ಯಲ್ಲವ್ವಳಿಗೆ ಬೆಳ್ಳಿ ಕಣ್ಣು ತೊಡಿಸಿ, ಬಿಂದಿ ಇಟ್ಟು ಮಡಿಂದ ತಂದಿದ್ದ ಹಸಿರು ಸೀರೆ ಉಡಿಸಿ ಬಿಡಿ ಹೂಗಳನ್ನು ಮುಡಿಸಿ ದುರಗವ್ವ ಮುಂದೆ ಉದ್ದಕ್ಕೆ ಅಡ್ಡ ಬೀಳುವಳು. ಇದು "ಂದೆ ತಲೆತಲಾಂತರದಿಂದ ನಡೆಸಿಕೊಂಡ ಬಂದ ಪದ್ದತಿಯಾಗಿತ್ತು.
ರಾಮ ಬರೊ ಹೊತ್ತಿಗೆ ದುರಗವ್ವ ಯಲ್ಲವ್ವಳಿಂದ ಸೀರೆ ಉಡಿಸಿಕೊಂಡು ಇನ್ನೆನೊ ಎದ್ದು ಬರತಾಳೆನೊ ಅನ್ನೊಹಂಗ ಕುಳಿತಿದ್ದಳು. ಎಂದೂ ಇಲ್ಲದ ಮಗ ಇಂದು ಗುಡಿಗೆ ಬಂದಿರೊದನ್ನು ನೊಡಿದ ಯಲ್ಲವ್ವ, ಎನು ಕಿತಾಪತಿ ಮಡಿಕೊಂಡು ಬಂದಿರುವನೊ ಎಂದು ಗಾಬರಿಯಾದಳು. ಅವಳ ಮುಂದೆ ಬಂದು ನಿಂತ ರಾಮ `ನಂಗ ಇವತ್ತು ಲಗ್ನ ಮಾಡು' ಎಂದು ರಾಗ ತೆಗೆದದ್ದು ಕೇಳಿ ಯಲ್ಲವ್ವಳಿಗೆ ಮತ್ತಷ್ಟು ಗಾಬರಿಯಾಯತು. ರಾಮ ಒಮ್ಮೆ ಹಟ "ಡಿದರೆ ಅದು ಸಿಗುವವರೆಗೂ "ಂದಕ್ಕೆ ಸರಿಯುವಂತವನಲ್ಲ ಎಂದು ಆಕೆಗೆ ಚನ್ನಾಗಿ ಗೊತ್ತಿತ್ತು. `ಅಣ್ಣಂಗ ಲಗ್ನ ಮಾಡಿದಂಗ ನನಗೂ ಲಗ್ನ ಮಾಡು' ಎಂದು ಅರೆ ತೆರೆದ ಬಾಂದ ಮತ್ತೆ ಎಬಡಿಸಿದ. `ಮುದುಕಿ ತಣ್ಣಗೆ `ನಿನಗ ಹೆಂತಿ ಎಲ್ಲಿಂದ ತರಲೆಪಾ. ಈ ಸಲ ತುಳಸಿಗೆರಿ ಹನುಮಪ್ಪನ ಜಾತ್ರಿಗೆ ಹೊಕ್ಕಿವಲ್ಲ. ಆಗ ಜಾತ್ರಾಗ ಒಂದು ಗೊಂಬಿ ತೊಗೊಂದು ಅದನ್ನ ಮದುವೆ ಮಾಡತೀನಿ' ಎಂದು ತಮಾಷೆ ಮಾಡಿದಳು. ಆದರೆ ಹುಚ್ಚುರಾಮ `ನನಗ ಇವತ್ತ ಎಷ್ಟೊತ್ತಿದ್ರು ಹೆಂತಿ ಬೇಕು' ಎಂದು ನೆಲಕ್ಕೆ ಬಿದ್ದು ಹೊರಳಾಡುತ್ತಾ ರೊಚ್ಚೆ ತೆಗೆದ. ನಾನಾ ತರದ ಸಮಾಧಾನ ಹೇಳುವಷ್ಟು ಹೇಳಿಯಾದ ಮೇಲೆಯೂ ಸುಮ್ಮನಾಗದ ರಾಮನನ್ನು ನೋಡಿ ಸಿಟ್ಟು ತಡೆಯಲಾರದೆ ಯಲ್ಲವ್ವ ಗುಮ್ಮಗೈ ಮಾಡಿಕೊಂಡು ಗುಮ್ಮತೊಡಗಿದಳು. `ಯಾವ ಇದಿ ಮಾಯದಾಗ "ಂಗ ಹುಚ್ಚನಾಗಿ ಹುಟ್ಟಿದಿ. ನೆಲಕ್ಕ ಬಿದ್ದ ಗಳೆನ ನೆಗದ ಬಿದ್ದರಾ ಹೋಗಲಿಲ್ಲ' ಎಂದು ರೋಷಗೊಂಡು ಗುದ್ದುವುದು ಮತ್ತು ಬೈಯ್ಯುವುದನ್ನು ಏಕಕಾಲಕ್ಕೆ ಮಾಡತೊಡಗಿದಳು. ರಾಮ `ಗಿಗ್ಗಿಗ್ಗೀ'ಎಂದು ತನ್ನ ವಿಕಾರ ದ್ವನಿ ತೆಗದು ಅಳತೊಡಗಿದ. ಗುದ್ದಿ ಗುದ್ದಿ ಸಾಕಾಗಿ ಎಂದಿನಂತೆ ತನ್ನ ಪೂಜಾ ಬುಟ್ಟಿಯನ್ನು ಕೊಡವನ್ನು ಬಗಲಲ್ಲಿ ಇಟ್ಟುಕೊಂಡು ಮನೆಯ ಕಡೆ ಹೊರಟ ಯಲ್ಲವ್ವ `ನನ್ನಮಗ ಎಲ್ಲರಾಂಗ ಶ್ಯಾನ್ಯಾ ಇದ್ದಂದ್ರ ಇವತ್ತು ಮೂರು ಮಕ್ಕಳ ತಂದಿ ಆಕ್ಕಿದ್ದ' ಎಂದು ಮುಸಿ ಮುಸಿ ಕಣ್ಣಿರು ಒರೆಸಿಕೊಳ್ಳುತ್ತಾ ಮನೆಯ ಕಡೆ ಬಿರಬಿರನೆ ಹೋಗಿಬಿಟ್ಟಳು.
ಅಲ್ಲಿಯೆ ಬಿದ್ದು ಹೊರಳಾಡುತ್ತಿದ್ದ ರಾಮನಿಗೆ ಗುಡಿಯಲ್ಲಿ ಗುಮ್ಮನಗುಸುಕಿಯಂತೆ ಕುಳಿತಿದ್ದ ದುರಗವ್ವನೆ ಮೇಲೆಯೆ ಸಿಟ್ಟು ಒತ್ತರಿಸಿ ಬಂತು. ದಿನ ಬೆಳಗ್ಗೆ ಕೈಮುಗಿದರೂ ತಾನು ಬೇಡಿದ್ದನ್ನು ಕೊಡಲಾರದ ಈ ದುರಗವ್ವಳನ್ನು ಒಂದು ಕೈ ನೋಡಿಯೆ ಬಿಡಬೇಕು ಎಂದು ಕಣ್ಣೀರು ಒರೆಸಿಕೊಳ್ಳುತ್ತಲೆ ತೂರಾಡುತ್ತಾ ಮೇಲೆದ್ದು ದೇವಿ ಮೂರ್ತಿಗೆ ಎದುರಾಗಿ ನಿಂತ. `ಸರಳ ನನಗೆ ಹೆಂತಿ ಕೊಡು, ಕೊಡಲ್ಲಾ ಅಂದ್ರ ನನ್ನ ಕಡೆಂದ ಇಷ್ಟುದಿನ ಯಾಕ ಕೈ ಮುಗಿಸಿಕೊಂಡಿ, ಎಂದು ಅಳ್ಳುತ್ತಲೆ ಸವಾಲು ಹಾಕಿದ. ಆದರೆ ದೇವಿ ರಾಮನೊಂದಿಗೆ ತಾನು ಮಾತಾಡುವುದಿಲ್ಲ ಎನ್ನುವಂತೆ ದಿಮ್ಮನೆ ಕುಳಿತಿದ್ದಳು. `ನಿಮ್ಮೌವಳ ನಿನ್ನ ಕೈಯಲ್ಲಿ ಹೆಂತಿ ಕೊಡಕ್ಕಾ ಆಗಲ್ಲಂದ್ರ ನಿನ ನನ್ನ ಮದುವಿಯಾಗು' ಎಂದು ದೇವಿ ಉಟ್ಟಿದ್ದ ಸೀರೆಗೆ ಕೈ ಹಾಕುವುದಕ್ಕೂ ಹುಡುಗಿಯರಿಬ್ಬರು ದೇ"ಯ ಗುಡಿಗೆ ಬರುವುದಕ್ಕೂ ಸರಿಯಾತು.
ದೇವಿಯ ಮುಂದೆ ಉರಿಯುತ್ತಿದ್ದ ದೀಪಕ್ಕೆ ಸೀರೆ ತಾಗಿ ಕ್ಷಣಾರ್ಧದಲ್ಲಿ ಆ ದೇ"ಗೆ ಉಡಿಸಿದ್ದ ರೇಷ್ಮೆ ಸೀರೆ ಬಗ್ಗನೆ ಹೊತ್ತಿ ಉರಿಯತೊಡಗಿತು. ಹುಡುಗಿಯರಿಬ್ಬರು `ಹುಚ್ಚರಾಮ ಗುಡಿಗೆ ಬೆಂಕಿ ಹಚ್ಯಾನ ಬರ್ರೆಪೋ' ಎಂದು ತಮ್ಮ ಬಾಗೆ ಕೈಗಳನ್ನು ತಂದು ಲಬೋ ಲಬೋ ಹೊಯ್ಯಕೊಳ್ಳಾಕ ಹತ್ತಿದರು. ನಾ ಕೂಡ ನಿ ಕೂಡ ಎಂದು ಭರ್ಜರಿಯಾಗಿಯೆ ಜನ ಸೇರಿ ಊರಿಯುತ್ತಿದ್ದ ಬೆಂಕಿಯನ್ನು ನಂದಿಸಿ ದೇ"ಯನ್ನು ರಕ್ಷಿಸಿದರು. ರಾಮನ ಬೆನ್ನುಗಳ ಮೇಲೆ ಬಾಸುಂಡೆಗಳು ಮೂಡಿದವು.
* * * * *
ಈ ಸುದ್ದಿ ನಿನ್ನೆಯೆ ಊರಿಗೆ ಬಂದಿದ್ದ ಪರಲಾದನಿಗೆ ಮುಟ್ಟಿ ಊರ ಜನ ತನಗೆ ಕೊಡುತ್ತಿದ್ದ ಮರ್‍ಯಾದೆಗೆ ಕಲ್ಲು ಬಿತ್ತಲ್ಲ ಎಂದು ಗೋಳಾಡತೊಡಗಿದರೆ ರಾಮನ ಮದು"ಯ ಹುಚ್ಚನ್ನು ಹ್ಯಾಂಗ ಬಿಡಿಸುವುದು ಎಂದು ಯಲ್ಲವ್ವ ಚಿಂತಿಸುತ್ತಿದ್ದಳು. ಇಂದು ಹೊಡೆತ ತಿಂದದ್ದಕ್ಕಾಗಿ ಸ್ವಲ್ಪ ದಿನ ರಾಮ ಸುಮ್ಮನಿದ್ದರೂ ಆಮೇಲೆ ಓಣಿಯ ಯಾವುದಾದರು ಹುಡುಗಿಗೆ ಏನಾದರು ಅಂದು ಊರ ರಾಡಿ ಮನೆಗೆ ತಂದರೆ ತಾನು ಹೆಣ್ಣ ಹೆಂಗಸು ಏನು ಮಾಡಬೇಕು ಎಂದು ಮುದುಕಿ ಚಿಂತಿಸತೊಡಗಿದಳು. ಈ ಗೊಂದಲದ ವಾತಾವರಣದ ನಡುವೆ ಮನೆಗೆ ಸೋಸಿಯಾಗಿ ಬಂದಿದ್ದ ರಾಧಾ `ರೀ ಅತ್ತಿಯವರ, ನಮ್ಮ ಮನಿಗೆ ರಾಮಣ್ಣ ಮಾಮನ್ನ ಸ್ವಲ್ಪ ದಿನ ಕರಕೊಂಡು ಹೋಗೊನೇನ್ರಿ' ಎಂದು ಹೊಸ ವರಾತ ತೆಗೆದಳು. ಹೆಂಡತಿಯ ಈ ಕರೆಯುವಿಕೆಯ ಹಿಂದೆ ಏನೊ ಒಂದು ಒಳಸ್ವಾಥಾರ್ಥ ಇದ್ದೆ ಇದೆ ಎಂಬುದನ್ನು ಅವಳ ಒಡನಾಟದೊಂದಿಗೆ ಕಂಡುಕೊಂಡಿದ್ದ ಪರಲಾದ ಹೆಂಡತಿಯ ಕರೆಯುವಿಕೆಗೆ ತಾನು `ಸೋ..'ಎಂದ.
ಮೆಟ್ಟ ಬದಲಾದರೆ ಮಗ ಸುದಾರಿಸಿಯಾನು ಎಂಬ ಸಣ್ಣ ಆಸೆಯೊಂದಿಗೆ ಹಾಗೂ ಹಿರಿಮಗ ಪರಲಾದನಿರುವ ಧೈರ್ಯದೊಂದಿಗೆ ಯಲ್ಲವ್ವಜ್ಜಿ ಮಗ ಹುಚ್ಚರಾಮನನ್ನು ಕಳುಹಿಸಿಕೊಡಲು ಒಲ್ಲದ ಮನಸ್ಸಿನಿಂದ ಒಪ್ಪಿದಳು. ಇದ್ದೊಂದು ಪೈಜಾಮದಂತಹ ಚೊಣ್ಣವನ್ನು ಕಟ್ಟಿಸಿಕೊಂಡು ಹುಚ್ಚುರಾಮ ಹೊಸ ಹುರುಪಿನಿಂದಲೆ ಅವತ್ತು ಬಾಗಲಕೋಟೆಯ ಬಸ್ಸು ಹತ್ತಿದ.
* * * * *
ಅಂದಿನಿಂದ ಹುಚ್ಚರಾಮನಿಗೆ ಬಾಗಲಕೋmಯ ಹಳೆ ಬಸ್‌ಸ್ಟಾಂಡಿನ ತಿರು"ನಲ್ಲಿ ರಾರಾಜಿಸುತ್ತಿದ್ದ ಲಿಂಗೇಶ್ವರ ಖಾನಾವಳಿಯೆ ವಾಸ್ತವ್ಯದ ಗೂಡಾತು. `ನಮ್ಮ ಮನೆಯೊಳಗಿಟ್ಟುಕೊಂಡು ಚಲೋತಂಗ ರಾಮಣ್ಣನನ್ನು ನೋಡಿಕೊಳ್ತಿ"ರಿ ಅತ್ತಿ' ಎಂದಿದ್ದ ಯಲ್ಲವ್ವನ ಸೊಸೆಮುದ್ದು, ರಾಮಣ್ಣನಿಗೆ ಮೊದಲ ದಿನ ಮಾತ್ರ ತನ್ನ ಮನೆಯ ದರ್ಶನ ಮಾಡಿಸಿದ್ದಳು. ಆ ಮನೆಯ ಅಂಗಳದಲ್ಲಿ ಮೊದಲ ರಾತ್ರಿ ಕಳೆದ ರಾಮನನ್ನು ಮರುದಿನ ಖಾನಾವಳಿಗೆ ವರ್ಗ ಮಾಡಲಾತು.
ಖಾನಾವಳಿ ಒಂದು ಬದಿಗೆ ಒಂದು ಬಸವೇಶ್ವರ ಕಾಲೇಜಿಗೆ ಹೋಗುವ ಗೇm ಇದ್ದರೆ ಮತ್ತೊಂದೆಡೆ ಸುತ್ತಲಿನ ತರಾವರಿ ಹಳ್ಳಿಗಳಿಗೆ ಜನರನ್ನು ತಂದು ಸುರಿಯುತ್ತಿದ್ದ ಬಸ್ಸುಗಳ ನಿಲ್ದಾಣವಿತ್ತು. ಹೀಗಾಗಿ ಮದ್ಯಾಹ್ನ ೧೨ಹೊಡೆತೆಂದರೆ ಖಾನಾವಳಿ ಫುಲ್ ರಶ್ಯಾಗುತ್ತಿತ್ತು. ಹೋmಲಿನಲ್ಲಿನ ತುಂಬ ಹತ್ತಾರು ಸಪ್ಲೆಯರ್‌ಗಳ ಗುಂಪಿಗೆ ಕೈ ತುಂಬ ಕೆಲಸ. ಅದರಲ್ಲಿ ಹುಚ್ಚರಾಮ ಕೂಡ ಒಬ್ಬನಾಗಿದ್ದನಾದರೂ ಆತನ ಬಾಯಲ್ಲಿ ಯಾವಾಗಲೂ ಜೊಲ್ಲು ಸೋರುತ್ತಿದ್ದುದರಿಂದ ಮತ್ತು ನಡೆದಾಡುವಾಗ ತೂರಾಡುತ್ತಿದ್ದುದರಿಂದ ಆತ ನೆಲಕ್ಕಂಟಿಕೊಂಡೆ ನೆಲದಲ್ಲಿನ ಕೆಲಸಗಳನ್ನು ಮಾಡಬೇಕತ್ತು. ಊಟಕ್ಕೆ ಮೊದಲು ಬಾ ಮುಕ್ಕುಳಿಸುವ ಎಲೆಯಡಿಕೆಯ ಕೆಂಪು, ನೆಲದಲ್ಲಿ ಚೆಲ್ಲಿದ್ದ ಕಸ-ಮುಸುರೆ, ಉಂಡಾದ ಮೇಲೆ ಉಗುಳಿದ್ದ ಎಂಜಲು, ಹೊm ತುಂಬಿಯಾದ ಮೇಲೆ ಡೇಗುಗಳ ಕಸರು ಮುಂತಾದವುಗಳನ್ನು ಕೈಂದ ಬಳಿದು ಸ್ವಚ್ಚ ಮಾಡುವುದು, ನೆಲ ಒರೆಸುವುದು, ತೊಳೆಯುವುದು ಇವೆ ಮುಂತಾದವುಗಳು ಆತನ ದಿನನಿತ್ಯದ ಸೇವೆಗಳಾಗಿದ್ದವು.
ಖಾನಾವಳಿಯ ಮ್ಯಾನೆಜರ್ ಆಗಿದ್ದ ಪರಲಾದ ಯಾವಾಗಲೂ ಕ್ಯಾಶ್ ಕೌಂಟರ್‌ನಲ್ಲಿ ಕುಳಿತುಕೊಂಡಿರುತ್ತಿದ್ದ. ರಾಮಣ್ಣನ ಕೆಲಸಗಳನ್ನು ನೋಡಿಯೂ ನೋಡದಂತಿರುತ್ತಿದ್ದ ಪರಲಾದ ಕೆಲವೊಮ್ಮೆ ಯಾವ ಆಳುಗಳು ಬೈಸಿಕೊಳ್ಳಲಿಕ್ಕೆ ಸಿಗದಿದ್ದಾಗ ರಾಮನನ್ನೆ ಬೈಯ್ದು ತನ್ನ ಚಟವನ್ನು ತೀರಿಸಿಕೊಳ್ಳುತ್ತಿದ್ದ. ಆ ಹತ್ತಾರು ಆಳುಕಾಳುಗಳಲ್ಲಿ ರಾಮ ತನ್ನ ತಮ್ಮನೆಂದು ಬೇಧ ಭವವನ್ನು ಎಣಿಸದೆ ಎಲ್ಲರನ್ನು ಸಮನಾಗಿ ಕಾಣುತ್ತಿದ್ದ ಮತ್ತು ಆ ಪರಂಸಂಗ ಬರಲೆಬಾರದು ಎಂದು ಆಳುಗಳ ಮುಂದೆ ರಾಮ ತನ್ನ ತಮ್ಮನೆಂದೂ ಅಥವಾ ತನ್ನ ಊರಿನವನೆಂದೂ ಹೇಳಿಯೂ ಇರಲಿಲ್ಲ. ಹೀಗಾಗಿ ಎಲ್ಲ ಸಪ್ಲೇಯರ್‌ಗಳು ಹುಚ್ಚರಾಮನ ಮೇಲೆ ತಮ್ಮ ಯಜಮಾನಿಕೆಯನ್ನು ತೋರಿಸಿ ತಮ್ಮ ಅಧಿಕಾರದ ಅಂಹಕಾರವನ್ನು ತಣಿಸಿಕೊಳ್ಳುತ್ತಿದ್ದರು.
ಊರಲ್ಲಿ ಕೇವಲ ದನ ಅಡ್ಡಾಡಿಸಿಕೊಂಡಿದ್ದ ಹುಚ್ಚರಾಮ ಇಲ್ಲಿ ಮುಂಜಾನೆಂದ ಸರೀರಾತ್ರಿಯವರೆಗೆ ದನದಂತೆ ದುಡಿಯಲೆ ಬೇಕಿತ್ತು. ಒಮ್ಮೊಮ್ಮೆ ಊರಲ್ಲಿನ ಅವ್ವ್ವಳ ನೆನಪಾಗುತ್ತಿದರೂ ಊರಿಗೆ ಹ್ಯಾಂಗ ಹೋಗಬೇಕೆಂದು ಗೊತ್ತಾಗದೆ ಅಲ್ಲಿಯೆ ಕಣ್ಣೀರಾಗುತ್ತಿದ್ದ. ಕೆಲವೊಮ್ಮೆ ಕೆಲಸ ಮಾಡುವುದಿಲ್ಲವೆಂದೂ ಹಟ ಹಿಡಿಯುತ್ತಿದ್ದನಾದರೂ ಸಪ್ಲೇಯರ್‌ಗಳು ಬಡಿದು ಬೈಯ್ದು ಮಾಡಿ ಕಾಟ ಕೊಡುತ್ತಿದ್ದರು.
* * * * *
ಯಲ್ಲವ್ವಳ ಮೊಮ್ಮಗಳು ರತ್ನ ಗಂಡನ ಮನೆಯಲ್ಲಿ ಚನ್ನಾಗಿಯೆ ಹೊಂದಿಕೊಂಡಿದ್ದಳಾದರೂ ಕಚ್ಚೆಹರುಕ ಗಂಡ ಮನೆಯೂಟಕ್ಕಿಂತಲೂ ಹಾದಿಬದಿಯ ಹೊಟೆಲುಗಳಲ್ಲಿ ಉಂಡು ಬರುತ್ತಿದ್ದುದೆ ಹೆಚ್ಚು. ಏನಾದರಾಗಲಿ ಗಂಡ ಗಂಡನೆ ಎಂದುಕೊಂಡ ರತ್ನ ಅಂಥವನಿಂದಲೆ ಹೊm ಭರಿಸಿಕೊಂಡು ಮುದ್ದಾದ ಹೆಣ್ಣೊಂದನ್ನು ಹೆತ್ತಿದ್ದಳು. ಆದರೆನು ಮಾಡುವುದು ಆಕೆಯ ದುರ್ವಿಧಿಯಂಬಂತೆ ಬಲಮೊಲೆಗೆ ನಿಧಾನಕ್ಕೆ ಕ್ಯಾನ್ಸರ್‌ನಂತಹ ಗಂಟು ಬೆಳೆದು, ಅದು ಎನೂ ಮದ್ದು ಮಾಡಿದರೂ ಕರಗದೆ ಕೊನೆಗೆ ಆಫರೆಷನ್ ಮೂಲಕ ಆ ಗಂಟಿನೊಂದಿಗೆ ಪೂರ್ತಿ ಬಲ ಮೊಲೆಯನ್ನು ಕತ್ತರಿಸಬೇಕಾಗಿ ಬಂತು.
ಪೂರ್ತಿ ಬಲ ಎದೆಯ ಕತ್ತರಿಸಿಕೊಂಡು ಸಪಾಟು ಮಾಡಿಸಿಕೊಂಡದ್ದಕ್ಕಾಗಿ ರತ್ನ ಅಥವಾ ಅವಳು ಮಗಳು ಮರುಗಿದಕ್ಕಿಂತಲೂ ಹೆಚ್ಚಾಗಿ ಆಕೆಯ ಗಂಡನನ್ನು ಅದು ಬಾದಿಸತೊಡಗಿತು. ಬಲಗಡೆ ಎದೆಯೆ ಇಲ್ಲದವಳನ್ನು ಒಬ್ಬ ಹೆಂಗಸಾಗಿ ಅದು ತನ್ನ ಹೆಂಡತಿಯಾಗಿ ಒಪ್ಪಿಕೊಳ್ಳುವುದು ಅವನಿಗೆ ಬಹಳ ಕಷ್ಟವಾಗತೊಡಗಿತು. ರಾತ್ರಿ ಆತನ ಕೈ ಅಚಾನಕ್ಕಾಗಿ ಆಕೆಯೆ ಬಲ ಎದೆಯ ಮೇಲೆ ಹೋದರೆ ಅಲ್ಲೇನಿದೆ? ಬರೀ ಬರಡುದೊಗಲು.
ದಿನಕಳೆದಂತೆ ಗಂಡ ಎನಿಸಿಕೊಂಡವ ಮನೆಗೆ ಬರುವುದನ್ನೆ ಕಡಿಮೆ ಮಾಡತೊಡಗಿದ. ಎಲ್ಲದಕ್ಕೂ ಸಿಡಿ"ಡಿಗುಟ್ಟತೊಡಗಿದ. ಹೊಡೆತಗಳು ಬಿದ್ದು ನೀಲಿ ಬಾರುಗಳೆಳತೊಡಗಿದವು. ಕೊನೆಗೊಮ್ಮೆ ಅವನ ಒತ್ತಾಯದಂತೆ ಡೈವೊರ್ಸ್ ಪತ್ರಗಳಿಗೆ ಸಹಿ ಮಾಡಿ, ರತ್ನ ತನ್ನ ಒಂಟಿ ಮೊಲೆಯೊಂದಿಗೆ ಹೆಣ್ಣು ಮಗುವನ್ನು ಬಗಲಲ್ಲಿಟ್ಟುಕೊಂಡು ಯಲ್ಲವ್ವಜ್ಜಿಯ ಮನೆಗೆ ಮರಳಿದ್ದಳು.
* * * * *
ಹಗಲೆಲ್ಲ ಕೆಲಸದಲ್ಲಿ ಮೈಮರೆಯುತ್ತಿದ್ದ ಖಾನಾವಳಿ ಸಪ್ಲೆಯರ್‌ಗಳೆಲ್ಲ ರಾತ್ರಿಯಾದೊಡನೆ ಚಿಂತೇಗೀಡಾಗುತ್ತಿದ್ದರು. ಏರು, ಮಧ್ಯ, ಮಾಗಿದ ಹರೆಯದ ಹುಡುಗರೆಲ್ಲ ಆ ಹೋಟೆಲಿನಲ್ಲಿ ಸಪ್ಲೆಯರ್‌ಗಳಾಗಿ ಜಮಾಸಿದ್ದರು. ಮಾಡಲಿಕ್ಕೆ ಬೇರಾವ ಕೆಲಸಗಳು ಗೊತ್ತಿಲ್ಲದೆ ತಮ್ಮ ಮನೆಗಳ ಬಡತನ ನೀಗಲು ಒಂದಿಷ್ಟಾದರು ಸಹಾಯವಾಗಲಿ ಎಂಬ ಉzಶದಿಂದ ಈ ಖಾನಾವಳಿಯಲ್ಲಿ ಸಪ್ಲೆಯರ್‌ಗಳಾಗಿದ್ದರು. ರಾತ್ರಿಯಾಗುತ್ತಿದ್ದಂತೆ ಅವರಿಗೆ ಮಾಗುತ್ತಿರುವ ವಯಸ್ಸಿನ ನೆನಪಾಗಿ ವಿಚಿದ್ರಕಾರಿ ನೆನಪುಗಳು ಕಾಡತೊಡಗಿ ವಿಚಿತ್ರವಾಗಿ ಕಾವೇರುತ್ತಿದ್ದರು. ಆ ವೇಳೆಯಲ್ಲಿಯೆ ಅವರ ಕಾವನ್ನು ಮೇಲ್ನೋಟಕ್ಕೆ ತಣಿಸುವಂತೆ ಕಂಡರೂ ಹೊಕ್ಕುಳಾಳದೊಳಗಿಂದ ಜ್ವಾಲಾಮುಖಿಯ ಕಾನಂತೆ ಬೋರ್ಗರೆಯಲು ಕಿಚ್ಚು ಹಚ್ಚುತ್ತಿದ್ದ ಆಯುಧವೊಂದು ಆ ಅಮಾಯಕರ ಕೈಗೆ ಸೇರಿಕೊಂಡಿತ್ತು.
ಕೈ ಬೆರಳು ತಾಗಿಸಿದರೆ ವೈ"ಧ್ಯಮಯ ಬಣ್ಣ ಕಾರುವ, ಕಿ"ಗಿಟ್ಟುಕೊಂಡರೆ ಮಧುರಭವಗಳನ್ನು ಕೆರಳಿಸುವ ಅಗ್ಗದ, ಆದರೆ ಅದ್ದೂರಿಯ ಮೊಬೈಲುಗಳು ಸಪ್ಲೆಯರ್‌ಗಳ ಕೈಯಲ್ಲಿ ಕಂಗೊಳಿಸತೊಡಗಿದವು. ಕಡ್ಡಿಪೆಟ್ಟಿಗೆ ಗಾತ್ರದ ಆ ಮೊಬೈಲೆಂಬೋ "ಶ್ವದಲ್ಲಿ ಅಂಗಿ ಬುಡ್ಡಿ ಗಾತ್ರದ ಚಿಪ್ಪೊಂದನ್ನು ಸಿಗಿಸಿದರೆ ಜಗತ್ತಿನಲ್ಲಿನ ಎಲ್ಲ ಬಿಳಿ-ಕರಿಯ ಹುಡುಗಿಯರ ಹೊಳಪುಳ್ಳ ಮೈಯನ್ನು ಇಂಚಿಂಚೂ ನೋಡುವ ಅವಕಾಶವಾಗುತ್ತಿತ್ತು. ಆ ಚಲ್ಲು ಚಲ್ಲಾದ ಹುಡುಗಿಯರು ಹುಡುಗರೊಂದಿಗೆ ಖಾಸಗಿಯಾಗಿ ಹಂಚಿಕೊಳ್ಳುತಿದ್ದ ಬಿನ್ನಾಣದ ಕ್ಷಣಗಳನ್ನು ನೋಡುತ್ತಾ ಅವರ ಬಿಸಿಯುಸಿರುಗಳನ್ನು ಕೇಳಿಸಿಕೊಳ್ಳಬಹುದಾಗಿತ್ತು. ಸಪ್ಲೆಯರ್‌ಗಳು ತಮ್ಮ ಸಂಬಳವಾದಾಗಲೆಲ್ಲ ಪಕ್ಕದ ಕಂಪ್ಯೂಟರ್ ಸೆಂಟರ್‌ಗಳಿಗೆ ನುಗ್ಗಿ ಮೂರು ರೂಪಾಗೊಂದರಂತೆ ಫಾರೆನ್ ಅಥವಾ ಲೋಕಲ್ ತಳಿಯ ಇಂತಹ ನೀಲಿ ಕ್ಲಿಪಿಂಗ್‌ಗಳನ್ನು ಹಾಕಿಸಿಕೊಳ್ಳುತ್ತಿದ್ದರು. ಪ್ರತಿದಿನ ರಾತ್ರಿ ಪರಸ್ಪರ ಹಂಚಿಕೊಂಡು ಹಾಸಿಗೆಯಲ್ಲಿ ಉರುಳಿಕೊಂಡು ನೋಡುತ್ತಿದ್ದರು. ಕೆಲವರು ತುಂಬು ಮುಸುಕೆಳೆದುಕೊಂಡು ಚಿತ್ರ ನೊಡುತ್ತಾ ಒಳಗಡೆಯ ಮುಲುಕುತ್ತಿದ್ದರು.
ಹಗಲೆಲ್ಲ ಸೋತು ಸುಣ್ಣವಾಗಿ ತನ್ನ ಪಾಡಿಗೆ ತಾನು ಮೂಲೆಯೊಂದರಲ್ಲಿ ಬಿದ್ದುಕೊಳ್ಳುತ್ತಿದ್ದ ಹುಚ್ಚರಾಮನಿಗೂ ಕಿಡಿಗೇಡಿ ಸಪ್ಲೆಯರ್‌ಗಳು ಒಂದು ದಿನ ದಯೆ ತೋರಿ ಮೊಬೈಲಿನಲ್ಲಿನ ನಿಲಿ "ಶ್ವವನ್ನು ತೋರಿಸಿದರು. ನೋಡುತ್ತಿದ್ದ ರಾಮನಿಗೆ ಜೊಲ್ಲು "ಶ್ರಿತ ಬಿಸಿಯುಸಿರನ್ನು ಬಿಡತೊಡಗಿದ. ಅವನಿಗೆ ಶಾರಿಯೊಂದಿಗೆ ಕಳೆದ ಕ್ಷಣಗಳ ನೆನಪಾಗಿ ಮತ್ತೊಮ್ಮೆ ಲಗ್ನವಾಗುವ ಬಯಕೆ ಬಲವಾಗಿ ಕಾಡತೊಡಗಿತು. "ಗೆ ಕಾಡುವ ದಿನಗಳಲ್ಲಿಯೆ ಬಸವೇಶ್ವರ ಕಾಲೇಜು ಎದುರಿನ ಆ ಬ್ರಿಡ್ಜ್ ಕೆಳಗೆ ಹೋಗಿ ನಿಲ್ಲಲ್ಲು ಪ್ರಾರಂಭಿಸಿದ್ದ. ಪ್ರತಿದಿನ ಬೆಳಗ್ಗೆ ೭.೩೦ ಆ ಮಬ್ಬು ಬೆಳಗುಗಳಲ್ಲಿ ಬಿಗಿಯುಡುಪು ದರಿಸಿ ಬರುವ ಕಾಲೇಜು ಹುಡುಗಿಯರಲ್ಲಿ ಯಾರಾದರೂ ಒಬ್ಬರು ತನ್ನನ್ನು ಲಗ್ನವಾದಾರೂ; ಎಂಬ ದೂರದ ಬಯಕೆ ಅವನಿಗೆ ಅಲ್ಲಿ ನಿಲ್ಲುವಂತೆ ಮಾಡುತ್ತಿತ್ತು. ಆದರೆ ಯಾವ ಹುಡುಗಿಯರು ಅವನತ್ತ ಮೂಸುತ್ತಿರಲಿಲ್ಲವಾದ್ದರಿಂದ ಕೊನೆಯ ಪ್ರಯತ್ನವೆಂಬಂತೆ ಆತ ಹುಡುಗಿಯರನ್ನು ಕಂಡು ಹಲ್ಲುಗಿಂಜುವುದು, ತೊಡೆಯ ಸಂದಿಯಲ್ಲಿ ಕೈಟ್ಟುಕೊಂಡು "ಚಿತ್ರವಾಗಿ ನಗಲು ಪ್ರಯತ್ನಿಸುವುದು, ಮತ್ತು ಕಡೆಯ ಪ್ರಯತ್ನವಾಗಿ ಪೈಜಾ"ನ ಲಾಡಿ ಬಿಚ್ಚುವುದನ್ನು ಮಾಡತೊಡಗಿದ. "ಗೆ ಬಿಚ್ಚುವ ಒಂದು ಮುಂಜಾನೆಯೆ ಆತ ಟ"ಯೊಂದರ ದೃಶ್ಯಕರ್ತನಿಗೆ ಸಿಕ್ಕಿಬಿದ್ದಿದ್ದ. ಕಿಡಿಗೇಡಿ ಕಾಲೇಜು ಹುಡುಗನೊಬ್ಬ ಟಿ" ವಾ"ನಿಗೆ ಪೋನು ಮಾಡಿ ತಿಳಿಸಿದ್ದನೆಂದು ಕಾಣುತ್ತದೆ.
* * * * *
ಟಿ" ಮೇಲಿನ ಮಗನ ರಾದ್ಧಾಂತವನ್ನು ನೋಡಿ ಕಣ್ಣೀರಾದ ಯಲ್ಲವ್ವಜ್ಜಿ ಮರುದಿನ ವಸ್ತಿ ಬಸ್ಸಿಗೆ ಬಾಗಲಕೊmಯ ಲಿಂಗೇಶ್ವರ ಖಾನಾವಳಿಗೆ ಓಡೋಡುತ್ತ ಬಂದಳು. ಮುದುಕಿಯ ಕಣ್ಣಲ್ಲಿ ಇನ್ನೂ ನೀರಾಡುತ್ತಿದ್ದವು. ಹೂಸಿನ ವಾಸ್ನಿ ಎಲ್ಲರಿಗೂ ಗೊತ್ತಾಗುವಂತೆ ನಿನ್ನೆಯ ಘಟನೆ ಇಡಿ ಬಾಗಲಕೋmಗೆಲ್ಲ ಗೊತ್ತಾಗಿತ್ತು. ಟಿ"ಯಲ್ಲಿ ನೋಡಿದ್ದು ಸಾಕಾಗದೆ ಕೆಲವೊಬ್ಬರು ಲಿಂಗೇಶ್ವರ ಖಾನಾವಳಿಯ ಸುತ್ತಮುತ್ತ ಹಾಯ್ದು ಹುಚ್ಚರಾಮನ ದರ್ಶನಕ್ಕಾಗಿ ಹಾತೊರೆಯುತ್ತಿದ್ದರು. ಬಾಗಲಕೋmಯಲ್ಲಿ ಈಗಷ್ಟೆ ಹೆಸರು ಮಾಡುತ್ತಿದ್ದ ಲಿಂಗೇಂಶ್ವರ ಖಾನಾವಳಿಯ ಹೆಸರನ್ನು ಈ ಹುಚ್ಚಖೋಡಿಯನ್ನು ಸೇರಿಸಿಕೊಂಡು ಕಳೆದುಕೊಳ್ಳುವಂತಾತು ಎಂದು ಪರಲಾದನ ಮಾವ ನಿನ್ನೆಂದ ವಟಗುಟ್ಟುತ್ತಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಪರಲಾದ `ನನ್ನ ಮರ್‍ಯಾದಿ ಕಳಿಯಾಕ ಹುಟ್ಟಿ ಬಂದೇನೋ ಮಳ್ಳ ನನ್ನ ಮಗನ' ಅನಕೊಂಡು ಕೈಗೆ ಸಿಕ್ಕ ಬಡಿಗೆಯೊಂದನ್ನು ತೆಗೆದುಕೊಂಡು ಸಿಟ್ಟು ಆರುವ ತನಕ ಬಡಿದು ರಾಮ ಮೂಲೆಯೊಂದರಲ್ಲಿ ಹೋಗಿ ಬೀಳುವಂತೆ ಮಾಡಿದ್ದ. ರಾಮ ಗ್ಗೀಗ್ಗೀಗಿ ಎಂದು ಆಕಾಶಮುಖಿಯಾಗಿ ಗಿಳಿಟ್ಟಿದ್ದ.
ಮೈಯೆಲ್ಲಾ ಹಣ್ಣುಗಾ ಮಾಡಿಕೊಂಡಿದ್ದ ರಾಮ ತನ್ನ ಅವ್ವಳನ್ನು ನೋಡುತ್ತಿದ್ದಂತೆ "ಕಾರವಾಗಿ ಅಳ್ಳುತ್ತಾ ಯಲ್ಲವ್ವಳಿಗೆ ತೆಕ್ಕೆಬಿದ್ದಿದ್ದ. ರಾಮನ ದುಬ್ಬವನ್ನು ನೆವರಿಸುತ್ತಿದ್ದ ಯಲ್ಲವ್ವ ಕೂಡ ಕಣ್ಣೀರಾದಳು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಪರಲಾದ `ಹುಚ್ಚು ಸುಳಿಮಗ ನನ್ನ ಮರ್‍ಯಾದಿ ಎಲ್ಲ ಕಳದ. ನೀ ಇವತ್ತ ಬರದಿದ್ರ ಇವನೌನ ಕೊಂದ ಬಿಡತಿದ್ನಿ ಇಂವನ' ಎಂದು ತನ್ನ ಸಿಟ್ಟನ್ನು ಕಾರಿಕೊಂಡ. ಸೊರಗಿ ಸುಣ್ಣವಾಗಿದ್ದ ಹುಚ್ಚರಾಮನನ್ನು ನೋಡಿಯೆ ಕಳವಳಗೊಂಡಿದ್ದ ಯಲ್ಲವ್ವ `ನಾ ಇನ್ನೂ ಬದಕಿನಿ ಅಪಾ. ನಾ ಹಡದ ಮಗ ನನಗೇನಾ ಬಾರಲ್ಲ. ಇರೂ ಮm ಜ್ವಾಪಾನ ಮಾಡತೀನಿ' ಎಂದು ರಾಮನನ್ನು ಎಳೆದುಕೊಂಡು ಬಸ್ ಸ್ಟಾಂಡಿ ಕಡೆಗೆ ದಾಪುಗಾಲು ಹಾಕಿದ್ದಳು.
* * * * *
ಹುಚ್ಚರಾಮನನ್ನು ಕೆರೆದುಕೊಂಡ ಬಂದು ಮತ್ತೆ ಮನೆ ತುಂಬಿಸಿಕೊಂಡ ಯಲ್ಲವ್ವ ಅವತ್ತು ರಾತ್ರಿ ಊಟವನ್ನು ಸರಿಯಾಗಿ ಮಾಡದೆ ತನ್ನ ಮಗ ಹುಚ್ಚರಾಮನ ಭ"ಷ್ಯದ ಕುರಿತು ಮೊಮ್ಮಗಳು ರತ್ನಳೊಂದಿಗೆ ಚಿಂತಿ ಮಾಡುತ್ತಾ ನಾಲ್ಕು ಮಾತನಾಡಿದಳು. `ನಾ ಇರೂವಷ್ಟು ದಿನ ಹ್ಯಾಂಗೋ ಜ್ಪಾಪಾನ ಮಾಡತೀನಿ. ನಾ ಹ್ವಾದ ಮ್ಯಾಲ ನನ್ನ ಮಗನ್ನ ಯಾರು ನೊಡಿಕೊಳ್ಳೋರು' ಅನಕೋತ ಗೊಳಾಡಿಕೊಂಡಳು. `ಹೋಗಲಿ ಸುಮ್ಮಕಿರಮ್ಮ ಪಾಪಾ ರಾಮಣ್ಣ ಮಾಮಂದ ಅಷ್ಟ ಅಲ್ಲ ನನ್ನ ಬಾಳ ಹದಗೆಟ್ಟ ಹೋಗೇತಿ. ಆ ದೇವರು ಹ್ಯಾಂಗ ದಾರಿ ತೊರಸತಾನೊ ಹಾಂಗ ಮಾಡಿದ್ರಾತು' ಎಂದು ರತ್ನ ಮುಸಿ ಮುಸಿ ಅಳ್ಳುತ್ತಲೆ ಯಲ್ಲವ್ವಜ್ಜಿಯನ್ನು ಸಮಾಧಾನಿಸಿದಳು.
"ಂಗ ಮುದುಕಿ ಮತ್ತು ಮೊಮ್ಮಗಳು ಒಬ್ಬರಿಗೊಬ್ಬರು ಸಮಾಧಾನ ಹೆಳಿಕೊಳ್ಳುತ್ತಲೆ ಅವತ್ತು ಹಾಸಿಗೆ ಹಾಸಿಕೊಳ್ಳತೊಡಗಿದರು. ನಿನ್ನೆಯ ಹೊಡೆತದಿಂದಾಗಿ ಎದ್ದಿದ್ದ ಬಾಸುಂಡೆಗಳು ಇನ್ನು ಬಾಡದೆ ಇದ್ದಕ್ಕಾಗಿ ಹುಚ್ಚರಾಮ ನರಳುತ್ತಲೆ ಇದ್ದ. ಮೈ ಕೈ ನೋ"ನೊಂದಿಗೆ ಸ್ವಲ್ಪ ಉರಿ ಬಂದಿದ್ದವು. `ಇವತ್ತು ಹೊರಗ ಮಲಗೊದು ಬ್ಯಾಡ. ಮೈಯಾಗ ಹುಸಾರಿಲ್ಲ ಇಲ್ಲೆ ಕೋಲ್ಯಾಗ ಮಲಕೊ' ಎಂದು ಯಲ್ಲವ್ವ ರಾಮನಿಗೆ ಹಾಸಿಕೊಟ್ಟಳು. ತಾನು ಪಡಸಾಲಿಯಲ್ಲಿಯೆ ಅಡ್ಡಾದಳು. ರತ್ನ ಕೂಡ ಪಡಸಾಲಿಯ ಒಂದು ಮೂಲಿಯೊಳಗ ಮಗಳನ್ನು ಹಾಕಿಕೊಂಡು ಅಡ್ಡಾದಳು.
ರತ್ನಳಿಗೆ ಯಲ್ಲವ್ವಜ್ಜಿಯ ಚಿಂತೆಯ ಮಾತುಗಳೆ ತಲೆಯಲ್ಲಿ ಗುಂಯಗುಡತೊಡಗಿದವು. ಆಕೆ ಒಂಟಿ ಮೊಲೆಯವಳೆಂದು ತಿರಸ್ಕರಿಸಿದ ಗಂಡ ಮತ್ತು ಹುಚ್ಚರಾಮನನ್ನು ತಕ್ಕಡಿಯಲ್ಲಿ ತೂಗಿ ನೋಡಿದಾಗ ತನ್ನ ಮಾಜಿ ಗಂಡನಿಗಿಂತ ಈ ಅಮಾಯಕ ರಾಮಣ್ಣ ಮಾಮನೆ ಹೆಚ್ಚು ತೂಕದವನಾಗಿ ಅವಳಿಗೆ ಗೋಚರಿಸಿದನು. ಪಾಪ ರಾಮಣ್ಣ ಮಾಮನಿಗೆ ಒಂದು ಮದುವೆಯಂತದು ಆಗಿ ಒಬ್ಬ ಹೆಂಡತಿದ್ದರೆ "ಗೆ ಮರ್‍ಯಾದೆ ಹೋಗುವ ಪರಿಸ್ಥಿತಿ ಬರುತ್ತಿತ್ತೆ. ಅವನು ಮನುಷ್ಯ. ಮನುಷ್ಯನಿಗಿರುವ ಎಲ್ಲ ಆಸೆ, ಹಸಿವುಗಳು ಇವೆ ಎಂಬುದನ್ನು ಈ ಸಮಾಜ ಏಕೆ ಅರ್ಥ ಮಾಡಿಕೊಂಡಿಲ್ಲ. ಬುದ್ಧಿಮಾಂಧ್ಯರಿಗೆ ಕೇವಲ ಊಟ, ಬmಗಳನ್ನು ಮಾತ್ರ ನೀಡಿದರೆ ಸಾಲುವುದಿಲ್ಲ. ಅವರ ಮೈ-ಮನಸ್ಸಿಗೆ ಸಂಗಾತಿ ಬೇಕು ಎಂಬ "ಚಾರಗಳನ್ನು ಒಳಗೊಂಡ ಸಂಸ್ಥೆಯೊಂದು ಹೊರದೇಶಗಳಲ್ಲಿ ಇಂತಹ ಬುದ್ಧಿಮಾಂದ್ಯರಿಗಾಗಿ ಮತ್ತು ಅಂಗ"ಕಲರಿಗಾಗಿ ಲೈಂಗಿಕ ಸೇವೆಗಳನ್ನು ನೀಡಲು ಕಾರ್ಯಕರ್ತರನ್ನು ಇಟ್ಟುಕೊಂಡು ಕಾರ್ಯನಿರ್ವ"ಸುತ್ತಿರುವ ಸುದ್ದಿಗಳನ್ನು ಆಕೆ ಯಾವದೋ ಸುದ್ದಿಪತ್ರಿಕೆಯೊಂದರಲ್ಲಿ ಓದಿದ್ದು ಈಗ ನೆನಪಿಗೆ ಬರತೊಡಗಿತು.
ಮಗು ಈಗಷ್ಟೆ ಮೊಲೆ ಹಾಲು ಕುಡಿದು ತುಟಿಗಂಟಿಕೊಂಡಿದ್ದ ಹಾಲಿನ ನೊರೆಯೊಂದಿಗೆ ನಿದ್ದೆಗೆ ಜಾರತೊಡಗಿತು. ಮಗುವಿನ ದುಬ್ಬ ಚಪ್ಪರಿಸುತ್ತಿದ್ದುದನ್ನು ಬಿಟ್ಟ ರತ್ನ, ನಿಧಾನಕ್ಕೆ ಎದ್ದು ಕುಳಿತಳು. ಕೋಲಿಯೊಳಗಿನ ಹುಚ್ಚರಾಮ ಇನ್ನೂ ನರಳುತ್ತಿದು ಅವಳಿಗೆ ಅಸ್ಪಷ್ಟವಾಗಿ ಕೇಳುತ್ತಿತ್ತು. ನಿಧಾನಕ್ಕೆ ಮೇಲೆದ್ದ ರತ್ನ, ಹುಚ್ಚರಾಮ ಮಲಗಿದ್ದ ಕೋಲಿಯ ಬಾಗಿಲನ್ನು ತಳ್ಳಿಕೊಂಡು ಒಳಹೋದಳು. ಆಕೆಯನ್ನು ಯಲ್ಲವ್ವಳ ಪ್ರಬುದ್ಧ ಕಣ್ಣುಗಳು ಮೆಚ್ಚುಗೆಂದ ಗಮನಿಸುತ್ತಿದ್ದವು.
ಮಗ್ಗುಲಲ್ಲಿ ತಡಕಾಡಿ ತಾ ಇಲ್ಲದ್ದನ್ನು ತಾ ಇಲ್ಲದ್ದನ್ನು ಕಂಡುಕೊಂಡ ಮಗು ಇನ್ನೇನು ಅಳಬೇಕೆಂದು ಬಾ ತಗೆಯುವುದರಲ್ಲಿತ್ತು. ದೂರದಲ್ಲಿ ಮಲಗಿದ್ದ ಯಲ್ಲವ್ವ ದಾವಿಸಿ ಬಂದು ಮಗುವಿನ ದುಬ್ಬವನ್ನು ಚಪ್ಪರಿಸುತ್ತಾ `ಉಊ ಲಾಲಿ.. ಸುಮ್ಮಕ ಮಕ್ಕೊಳವ್ವಾ.., ನಿನಗ ಹೊಸ ಅಪ್ಪ ಸಿಗತಾನ..., ಅಪ್ಪ ಬೇಕಂದ್ರ ಸುಮ್ಮನ ಮಕ್ಕೋಬೇಕು' ಎಂದು ಲಾಲಿ ಹಾಡುತ್ತಾ, ದುಬ್ಬ ಚಪ್ಪರಿಸುತ್ತಾ ರಮಿಸತೊಡಗಿದಳು. ಗಾಳಿಗೆ ನಲಗುತ್ತಿದ್ದ ದೀಪ ನಿಧಾನಕ್ಕೆ ಪ್ರಶಾಂತಗೊಂಡು ಬೆಳಕು ಚಲ್ಲುತ್ತಿತ್ತು.


- HANAMANTH HALIGERI,
Bangalore-560002

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...