Sunday, July 31, 2011

ಜಾನಪದ ಅಧ್ಯಯನ, ಅನ್ವಯ, ಮತ್ತು ಸದ್ಯದ ಮುಖಾಮುಖಿ ಕುರಿತಂತೆಡಾ.ಟಿ.ಆರ್. ಚಂದ್ರಶೇಖರ್ ಅವರೊಂದಿಗೆ ಮಾತುಕತೆಡಾ.ಟಿ.ಆರ್. ಚಂದ್ರಶೇಖರ್ ಅವರು ಅಭಿವೃದ್ಧಿ ಅಧ್ಯಯನಗಳನ್ನು ಕರ್ನಾಟಕದ ಪ್ರಾದೇಶಿಕ ಅಭಿವೃದ್ಧಿಯ ನೆಲೆಯಲ್ಲಿ ನಿರ್ವಚಿಸುತ್ತಿರುವವರಲ್ಲಿ ಪ್ರಮುಖರು. ಇವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಈ ನಾಡಿನ ಎಲ್ಲ ಬಗೆಯ ಆತಂಕಕಾರಿ ಬೆಳವಣಿಗೆಗೆ ಭಿನ್ನವಾಗಿ ದ್ವನಿಯಾಗುತ್ತಿರುವವರು. ನಮ್ಮಂಥಹ ಯುವ ಸಮುದಾಯವನ್ನು ನಾಚಿಸುವಂತೆ ದಣಿವರಿಯದೆ ನಿರಂತರ ದುಡಿಮೆಯಲ್ಲಿ ತೊಡಗಿಸಿಕೊಂಡ ವಿದ್ವಾಂಸರು. ವಚನ ಚಳವಳಿಯನ್ನು, ಪ್ರಾದೇಶಿಕ ಅಸಮಾನತೆಯನ್ನು, ಬಡಜನರ ಶೋಚನೀಯ ಸ್ಥಿತಿಗಳನ್ನು ಅಭಿವೃದ್ಧಿ ಅಧ್ಯಯನದ ವಿಧಾನಗಳಲ್ಲಿ ಭಿನ್ನವಾಗಿ ಎದುರುಗೊಳ್ಳುತ್ತಿರುವವರು. ಕನ್ನಡ ವಿಶ್ವವಿದ್ಯಾಲಯದ ದೇಸಿ ಆಲೋಚನ ಕ್ರಮವನ್ನು ಅಭಿವೃದ್ಧಿ ಅಧ್ಯಯನಗಳ ಮೂಲಕ ಹೊಸ ನೆಲೆಗಟ್ಟನ್ನು ಕೊಡಲು ಶ್ರಮಿಸುತ್ತಿರುವವರು. ಅವರ ಬರಹಗಳಲ್ಲಿರುವ ಪ್ರಭುತ್ವದ ವಿರುದ್ಧದ ಕಿಡಿಗಳು ನನ್ನಂಥವರಿಗೆ ಹೊಸ ಬೆಳಕಾಗುತ್ತಿವೆ. ಅವರು ಜಾನಪದ ಅಧ್ಯಯನ, ಅನ್ವಯ, ಮತ್ತು ಸದ್ಯದ ಮುಖಾಮುಖಿ ಕುರಿತಂತೆ ಒಳನೋಟಗಳಿರುವ ಮಾತುಕತೆ ಇಲ್ಲಿದೆ.
ಅರುಣ್: ಸಾರ್ ಇಂದು ಅಭಿವೃದ್ಧಿ ಎನ್ನುವ ಪದವೇ ಬಂಡವಾಳಶಾಹಿಗಳ ಪರವಾದ ಪದ ಎನ್ನುವಂತಿರುವ ಈ ಹೊತ್ತಲ್ಲಿ ಅದೇ ಪದವನ್ನು ಜನಸಾಮಾನ್ಯರ ಒಳಿತಿನ ಅಭಿವೃದ್ಧಿಯ ನೆಲೆಯಲ್ಲಿ ಹೊಸ ಅರ್ಥವನ್ನು ಕೊಡುತ್ತಿದ್ದೀರಿ. ಈ ನೆಲೆಯಲ್ಲಿ ನೀವು ಜಾನಪದವನ್ನು ಹೇಗೆ ಅರ್ಥೈಸಲು ಪ್ರಯತ್ನಿಸುತ್ತೀರಿ?

ಡಾ.ಟಿ.ಆರ್.ಸಿ: ನಿಜ, ಅಭಿವೃದ್ಧಿ ಎಂಬ ನುಡಿಯು ಬಂಡವಾಳಶಾಹಿ-ಪರವಾದುದು. ಅದರಿಂದ ಅದನ್ನು ರಕ್ಷಿಸುವುದು ಹೇಗೆ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಹೊಸ ಅರ್ಥ ಮಾತ್ರವಲ್ಲ. ಅದಕ್ಕೆ ಹೊಸ ಸಿದ್ಧಾಂತವನ್ನೇ ರೂಪಿಸಬೇಕಾಗಿದೆ. ಬಹಳ ಮುಖ್ಯವಾದ ಸಂಗತಿಯೆಂದರೆ ಅಭಿವೃದ್ಧಿಯನ್ನು ಸ್ಥಳೀಯತೆಗೆ ನಿಷ್ಠವನ್ನಾಗಿ ಮಾಡಬೇಕು. ಅದು ಪ್ರಧಾನವಾಗಿ ಪ್ರದೇಶ-ನಿರ್ದಿಷ್ಟವಾಗಿರಬೇಕು. ಆಗ ಸಹಜವಾಗಿ ಅದು ಸ್ಥಳಿಯ ಕಲೆ, ಕಾಯಕ, ದುಡಿಮೆ, ಸಂಪನ್ಮೂಲ, ಕಸುಬುದಾರಿಕೆ, ವಾಸ್ತು, ಸಂಸ್ಕೃತಿ ಹೀಗೆ ಎಲ್ಲವನ್ನೂ ಒಳಗೊಳ್ಳುವಂತಾಗುತ್ತದೆ. ಜಾನಪದವೆಂಬುದು ನನಗೆ ತೋರಿದಂತೆ ಸ್ಥಳಿಯ ಬದುಕನ್ನು ಕುರಿತ ಅಧ್ಯಯನ. ಸ್ಥಳೀಯ ತಂತ್ರಜ್ಞಾನ, ಸ್ಥಳೀಯ ಸಂಪನ್ಮೂಲ, ಸ್ಥಳೀಯ ಬಂಡವಾಳ, ಸ್ಥಳೀಯ ಕುಶಲತೆ, ಸ್ಥಳೀಯ ಶಿಕ್ಷಣ, ಸ್ಥಳೀಯ ಮನೆ ಕಟ್ಟುವ ತಂತ್ರ, ಜಾನುವಾರುಗಳನ್ನು ಸಾಕುವ ಕ್ರಮ ಮುಂತಾದವುಗಳನ್ನು ಕುರಿತ ಅಧ್ಯಯನವನ್ನು ನಾನು ಜಾನಪದ ಅಧ್ಯಯನವೆಂದು ಕರೆಯಲು ಇಷ್ಟಪಡುತ್ತೇನೆ. ಇಲ್ಲಿ ಒಂದು ಎಚ್ಚರ: ಸ್ಥಳಿಯತೆ ಎಂದಾಗ ಅದು ಬಾಹ್ಯದಿಂದ ಸಂಪೂರ್ಣವಾಗಿ ಪ್ರತ್ಯೇಕಗೊಂಡಿರಬೇಕಿಲ್ಲ. ವಿಶ್ವಾತ್ಮಕತೆ(ಅಖಂಡತೆ) ಮತ್ತು ವಿಶಿಷ್ಟತೆಗಳನ್ನು(ಖಂಡ ನೆಲೆಗಟ್ಟು) ಹೇಗೆ ಸಂಯೋಜಿಸಿಕೊಳ್ಳಲಾಗುತ್ತದೆ ಎಂಬುದು ಇಲ್ಲಿ ಮುಖ್ಯ. ಮತ್ತೊಂದು ಎಚ್ಚರವನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು: ಅದೇನೆಂದರೆ ನಮ್ಮ ಜಾನಪದ ಎಂಬುದು ಅನೇಕ ಅಮಾನವೀಯ ಸಂಗತಿಗಳನ್ನು ಕಾಲಕ್ರಮೇಣ ಬೆಳೆಸಿಕೊಂಡು ಬಿಟ್ಟಿದೆ. ಅವುಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಸ್ವ-ವಿಮರ್ಶೆ/ಆತ್ಮ-ನಿರೀಕ್ಷಣೆ ಎಂಬುದು ಇಂದಿನ ಅಧ್ಯಯನಗಳ ಮೂಲದಲ್ಲಿರಬೇಕಾದ ಒಂದು ಸಂಗತಿ. ಪರಂಪರೆಯ ವೈಭವೀಕರಣವಾಗಲಿ ಅಥವಾ ಆಧುನಿಕತೆ ಬಗ್ಗೆ ವಿಮರ್ಶಾ-ರಹಿತ ಸ್ವೀಕರಣೆಯಾಗಲಿ ಅಪೇಕ್ಷಣೀಯವಲ್ಲ.


ಅರುಣ್: ಸಾರ್, ನೀವು ನಿಮ್ಮ ಬರಹಗಳು ಬಹುಪಾಲು ಕ್ಷೇತ್ರ ಕಾರ್ಯ ಮತ್ತು ಸರಕಾರದ ಯೋಜನೆಯ ವಾಸ್ತವದ ಅನುಷ್ಠಾನದ ನೆಲೆಯಲ್ಲಿ ಆಲೋಚಿಸುತ್ತಿದ್ದೀರಿ. ಹಾಗಾಗಿ ಜಾನಪದ ವೃತ್ತಿ ಮತ್ತು ನಂಬಿಕೆಯ ಜಗತ್ತನ್ನು ಆಧರಿಸಿ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಸಾದ್ಯವೆ?

ಡಾ..ಟಿ.ಆರ್.ಸಿ: ಜಾನಪದ ಅಧ್ಯಯನ ಎಂದರೆ ಅದು ಇನ್ವೆರಿಯಬಲಿ ಕ್ಷೇತ್ರ ಅಧ್ಯಯನವೇ ಆಗಿರುತ್ತದೆ. ಅದಕ್ಕೆ ಬೇರೆ ಬದಾರಿಯೇ ಇಲ್ಲ. ಜಾನಪದ ವೈದ್ಯ, ಜಾನಪದ ಆಟಗಳು, ಜಾನುವಾರುಗಳ ಸಾಕಣಿಕೆ, ಜಾನಪದ ಕರಕುಶಕಕಲೆ, ಮಹಿಳೆಯರ ಜಾನಪದ ಹಸೆಯ ಕಲೆ, ಸ್ಥಳಿಯ ತಿನುಸುಗಳನ್ನು ಸಿದ್ದಪಡಿಸುವುದು, ಕೃಷಿ, ಮೀನುಗಾರಿಕೆ, ಕೋಳಿ ಸಾಕಣಿಕೆ, ಹಂದಿ ಸಾಕಣಿಕೆ ಇತ್ಯಾದಿ ಇತ್ಯಾದಿ ಸಂಗತಿಗಳನ್ನು ಒಳಗು ಮಾಡಿಕೊಂಡು ಜಾನಪದ ಅಧ್ಯಯನಗಳನ್ನು ನಡೆಸಬಹುದು. ನನ್ನನ್ನು ಹೀಗೆ ಒಂದೇ ಸಾರಿ ಜಾನಪದವನ್ನು ಆದರಿಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ತಿಳಿಸಿ ಎಂದರೆ ಸಾಧ್ಯವಾಗುವುದಿಲ್ಲ. ಅದನ್ನು ನಾನು ಕೂಡ ಅಧ್ಯಯನ ಮಾಡಬೇಕು.

ಈಗ ಏನಾಗಿದೆಯೆಂದರೆ ಜಾನಪದವನ್ನು ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಅವುಗಳ ಕೃಪಾಪೋಷಿತ ಸಂಸ್ಥೆಗಳು ವಸ್ತು ಸಂಗ್ರಹಾಲಯದ ಸಂಗತಿಗಳನ್ನಾಗಿ ನೋಡುವ ಕ್ರಮವನ್ನು ಬೆಳೆಸಿಬಿಟ್ಟಿದ್ದಾರೆ. ಜಾನಪದ ಕಲಾವಿದರನ್ನು ಒಂದು ವಿಧದಲ್ಲಿ ‘ನಮ್ಮಿಂದ ಬದುಕುವವರು’ ಎನ್ನುವಂತೆ ಕಾಣಲಾಗುತ್ತಿದೆ. ಅಲ್ಲಿ ‘ಘನತೆ’ ಎಂಬುದು ಗೈರುಹಾಜರಾಗಿ ಬಿಟ್ಟಿದೆ. ಇದನ್ನು ಅಮರ್ತ್ಯ, ಚಟರ್ಜಿ `Patient Approach' ಅಂತಾ ಕರೆಯುತ್ತಾನೆ. ಇಲ್ಲಿ ಅಗತ್ಯವಾಗಿರುವುದು`Agency Approach'. ಜನಪದರು ತಮ್ಮನ್ನು ತಾವು ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿಕೊಂಡು ಬದುಕುವಂತೆ ಮಾಡಬೇಕು. ಅವರನ್ನು ಈಗ ಪರಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಅವರು ಸದಾ ನಮ್ಮ ಕೃಪೆಯಲ್ಲಿರಬೇಕು ಎಂದು ತಿಳಿಯುವುದಿದೆಯ್ಲಾ ಅದು ಅತ್ಯಂತ ಅಪಾಯಕಾರಿ. ಅದು ಅಭಿವೃದ್ಧಿಯಲ್ಲ.


ಅರುಣ್: ಜಾನಪದ ಅಧ್ಯಯನಗಳನ್ನು ಅಭಿವೃದ್ಧಿ ಅಧ್ಯಯನ ವಿಧಾನಗಳ ಮೂಲಕ ಅಂತರ್ ಶಿಸ್ತೀಯ ಅಧ್ಯಯನ ಮಾಡಲು ಸಾದ್ಯವೆ? ಹಾಗಿದ್ದಲ್ಲಿ ಒಂದೆರಡು ಸಲಹೆಗಳನ್ನು ಕೊಡಿ.

ಡಾ..ಟಿ.ಆರ್.ಸಿ: ಇದಕ್ಕೆ Anthropology ಯ ತರಬೇತಿ, ಸೈದ್ಧಾಂತಿಕ ತಿಳುವಳಿಕೆ, ವ್ಯಾಪಕ ಅಧ್ಯಯನ ಬೇಕು. ನಮಗೆ ಇಷ್ಟವಿರಲಿ ಇಲ್ಲದಿರಲಿ ಇಂಗ್ಲೀಷ್ ಭಾಷೆಯ ಅಗತ್ಯವಿದೆ. ಈಗ ನಮ್ಮಲ್ಲಿ ಅಭಿವೃದ್ಧಿ ಅಧ್ಯಯನ ಎಂದರೆ ಉತ್ಪಾದನೆ, ಹಣ, ಬ್ಯಾಂಕು ಮುಂತಾದ ಸಂಗತಿಗಳಿಗೆ ಮೀಸಲಾದುದು ಮತ್ತು ಜಾನಪದವು ಭಾವುಕವಾದ ಸಂಗತಿಗಳಿಗೆ ಸಂಬಂಧಿಸಿದುದು ಎಂಬ ನಂಬಿಕೆ ಹಬ್ಬಿ ಬಿಟ್ಟಿದೆ. ಇದು ಹೋಗಬೇಕು. ಈ ಬಗೆಯ ರಿಸ್ಕಿಗೆ, ಸಾಹಸಕ್ಕೆ ನಾವು ಸಿದ್ದವಿದ್ದೇವೆಯೇ? ಇದು ಮಿಲಿಯನ್ ಡಾಲರ್ ಪ್ರಶ್ನೆ.

ಅರುಣ್: ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಅಭಿವೃದ್ದಿ ಅಧ್ಯಯನ ವಿಭಾಗದ ಚಿಂತಕರಾದ ನೀವು ಜಾನಪದ ವಿವಿಯ ಮೊದಲ ಆದ್ಯತೆಯ ಕೆಲಸಗಳು ಏನಾಗಿರಬೇಕು, ನಿಮ್ಮ ಕನಸಿನ ಜಾನಪದ ವಿವಿ ಹೇಗಿರುತ್ತೆ?

ಡಾ.ಟಿ.ಆರ್.ಸಿ:
೧. ಅಲ್ಲಿ ಮೊದಲು Anthropology ವಿಭಾಗವನ್ನು ಆರಂಭಿಸಬೇಕು. ಪ್ರತಿ ವಿಭಾಗದಲ್ಲಿ ಸಮಾಜಶಾಸ್ತ್ರದ ತಜ್ಞರು ಇರಬೇಕು. ಅಧ್ಯಯನ ವಿಧಾನದ ಬಗ್ಗೆ ಹೆಚ್ಚು ಮಹತ್ವ ನೀಡಬೇಕು.
೨. ಅಲ್ಲಿ ಸೇರುವವರೆಲ್ಲರಿಗೂ ಇಂಗ್ಲೀಷನ ಜ್ಞಾನ ಇರಲೆಬೇಕೆಂದೇನಿಲ್ಲ. ಆದರೆ ಜಾನಪದ ವಿವಿಯು ತನ್ನಲ್ಲಿ ಒಂದು ಪೂರ್ಣ ಪ್ರಮಾಣದ ಇಂಗ್ಲೀಷ್ ವಿಭಗವನ್ನು ಆರಂಭಿಸಬೇಕು. ಅಲ್ಲಿ ಅಧ್ಯಯನ ನಡೆಯಬೇಕಾಗಿಲ್ಲ. ಅಲ್ಲಿ ವಿದ್ವಾಂಸರಿಗೆ Functional English ತರಬೇತಿ ನೀಡಬೇಕು.
೩. ಒಂದು ತಿಂಗಳ, ಒಂದು ವರ್ಷದ ಅಧ್ಯಯನಗಳಿಗೆ ಪ್ರತಿಯಾಗಿ ದೀರ್ಘಕಾಲೀನ ಅಧ್ಯಯನಗಳನ್ನು ಅದು ಪ್ರೋತ್ಸಾಹಿಸಬೇಕು.
೪. ಮಹಿಳಾ ಜಾನಪದ ಅಧ್ಯಯನ ವಿಭಾಗವನ್ನು ಅದು ಅರಂಭಿಸಬೇಕು.
೫. ಜನಪದ ಆಚರಣೆಗಳನ್ನು ಗಣ್ಯರನ್ನು ಬರಮಾಡಿಕೊಳ್ಳುವುದಕ್ಕೆ, ವೈಭವೀಕರಣಕ್ಕೆ, ಬಳಸಿಕೊಳ್ಳಬಾರದು.

ತೊಲಗ ಬೇಕಾದವರು ಯಾರು?


- ಸುರೇಶ್ ಭಟ್, ಬಾಕ್ರಬೈಲ್

“ಪುಂಡರು ಕೊನೆಯದಾಗಿ ದೇಶಭಕ್ತಿಯ ಆಸರೆ ಪಡೆದುಕೊಳ್ಳುತ್ತಾರೆ ”
- ಸ್ಯಾಮುವೆಲ್ ಜಾನ್ಸನ್


“ಪ್ರಜೆಗಳಲ್ಲಿ ತೀವ್ರ ಮಟ್ಟದ ದೇಶಭಕ್ತಿಯ ಭಾವನೆಯನ್ನು ಉದ್ದೀಪಿಸುವುದಕ್ಕಾಗಿ ರಣಕಹಳೆಯೂದುವ ನಾಯಕನ ಬಗ್ಗೆ ಎಚ್ಚರಿಕೆ ವಹಿಸಿ. ದೇಶಭಕ್ತಿ ಎನ್ನುವುದು ಎರಡಲಗಿನ ಖಡ್ಗವಿದ್ದಂತೆ; ಒಂದೆಡೆ ಅದು ಧಮನಿಗಳಲ್ಲಿ ಕೆಚ್ಚು ತುಂಬಿದರೆ ಇನ್ನೊಂದೆಡೆ ಮನಸ್ಸನ್ನು ಸಂಕುಚಿತಗೊಳಿಸುತ್ತದೆ. ರಣಕಹಳೆಯ ಸದ್ದು ಅತ್ಯುಚ್ಚ ಮಟ್ಟಕ್ಕೇರುತ್ತಿದ್ದಂತೆ ದ್ವೇಷದಿಂದ ನೆತ್ತರು ಕುದಿಯತೊಡಗುವಾಗ ಮನಸ್ಸು ಮುಚ್ಚಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಾಯಕನಿಗೆ ಪ್ರಜೆಗಳ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಮೇಯವೇ ಇರುವುದಿಲ್ಲ. ಏಕೆಂದರೆ ಭೀತಿಗೊಳಗಾಗಿರುವ, ದೇಶಭಕ್ತಿಯಿಂದ ಕುರುಡಾಗಿರುವ ಜನರೇ ಖುದ್ದಾಗಿ ತಮ್ಮೆಲ್ಲ ಹಕ್ಕುಗಳನ್ನು ಸಂತೋಷದಿಂದ ಬಿಟ್ಟುಕೊಡುತ್ತಾರೆ.....”
-ದೇಶಭಕ್ತಿ ಕುರಿತಂತೆ ಜೂಲಿಯಸ್ ಸೀಸರ್, ಷೇಕ್ಸ್ಪಿಯರ್ ನಾಟಕದಲ್ಲಿ.

“ಶಾಲೆಗಳಲ್ಲಿ ಕುರ್‌ಆನ್, ಬೈಬಲ್ ಸೇರಿದಂತೆ ಯಾವುದೇ ಗ್ರಂಥ ಪಠಣಕ್ಕೂ ಸಹಕಾರ ನೀಡಲು ಸಿದ್ಧ..... ಭಗವದ್ಗೀತೆ ಅಭಿಯಾನ ವಿರೋಧಿಸುವವರು ದೇಶದ ಧರ್ಮ, ಸಂಸ್ಕೃತಿ, ರಾಷ್ಟ್ರೀಯತೆಗೆ ವಿರುದ್ಧವಾಗಿರುವವರು, ಇಂಥವರು ದೇಶ ಬಿಟ್ಟು ಹೋಗಲಿ” ಎಂದು ಮತ್ತೊಮ್ಮೆ ಗುಡುಗಿದ್ದಾರೆ ಕರ್ನಾಟಕದ ಸನ್ಮಾನ್ಯ ಶಿಕ್ಷಣ ಸಚಿವ ಕಾಗೇರಿಯವರು.ಇಲ್ಲಿ ಸಹಕಾರ ಅಂದರೆ ಯಾರ ಸಹಕಾರ? ಸಚಿವರ ವೈಯುಕ್ತಿಕ ಸಹಕಾರವೋ ಅಥವಾ ಇತರರ ಸಹಕಾರವೋ ಅಥವಾ ಸರಕಾರದ ಶಿಕ್ಷಣ ಇಲಾಖೆಯ ಸಹಕಾರವೋ? ಸರಕಾರಿ ಶಿಕ್ಷಣಸಂಸ್ಥೆಗಳಲ್ಲಿ ಧರ್ಮ ಬೋಧನೆಗೆ ಯಾರೇ ಸಹಕಾರ ನೀಡಿದರೂ ಅದು ಅಕ್ಷಮ್ಯ ಅಪರಾಧ ಎನ್ನುವುದು ಮಾನ್ಯ ಸಚಿವರಿಗೆ ತಿಳಿದಿಲ್ಲವೇ? ಶಿಕ್ಷಣ ಇಲಾಖೆಯ ಆಯುಕ್ತರೇ ಖುದ್ದಾಗಿ ಹೊರಡಿಸಿರುವ ಸುತ್ತೋಲೆ ಇರುವಾಗ ಗೀತಾ ಪಠಣ ಸರಕಾರದ ಕಾರ್ಯಕ್ರಮವಲ್ಲವೆಂದು ಹೇಗೆ ವಾದಿಸುತ್ತಿದ್ದಾರೆ?

ಹಠಮಾರಿಯಾದ ಸಣ್ಣ ಮಾಣಿಯಂತೆ ಸಂವಿಧಾನದ ಕಲಮು ೨೮(೧)ರ ಸ್ಪಷ್ಟ ಉಲ್ಲಂಘನೆಯನ್ನು ಮತ್ತೂ ಮತ್ತೂ ಸಮರ್ಥಿಸಲು ಹೊರಟಿರುವ ಮಾನ್ಯ ಸಚಿವರ ಮಾತುಗಳನ್ನು ಕೇಳಿ ನಗು, ಅಳು ಎರಡೂ ಉಕ್ಕುತ್ತಿವೆ. ಧರ್ಮದ ಅಮಲು ನೆತ್ತಿಗೆ ಅಡರಿ ಯುಕ್ತಾಯುಕ್ತತೆಯ ವಿವೇಚನೆಯನ್ನೇ ಕಳೆದು ಕೊಂಡಿರುವುದಕ್ಕೆ ನಗು ಬರುತ್ತಿದೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಮಂತ್ರಿವರೇಣ್ಯರು ಸಂವಿಧಾ ನಕ್ಕೆ ಬಗೆಯುತ್ತಿರುವ ಘೋರ ಅಪಚಾರವನ್ನು ಕಂಡಾಗ ಅಳು ಬರುತ್ತಿದೆ.

ಪ್ರಗತಿಪರರು ದೇಶ ಬಿಟ್ಟು ತೊಲಗಬೇಕೆಂದು ಆದೇಶ ಹೊರಡಿಸುತ್ತಿರುವಂಥವರೂ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ನಿಷ್ಠಾವಂತ ಕಾರ್ಯಕರ್ತರೂ ಆಗಿರುವ ಶಿಮಾನ್ ಕಾಗೇರಿಯವರು ಹಿಂದೂತ್ವವಾದಿಗಳ ದೇಶಭಕ್ತಿ ಕುರಿತಂತೆ ಕೆಲವು ಮೂಲ ಪಾಠಗಳನ್ನು ಕಲಿತುಕೊಳ್ಳುವ ಜರೂರಿ ಇದೆ.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ

ಮುಘಲರ ನಂತರದಲ್ಲಿ ದೇಶವನ್ನಾಳಿದ ಬ್ರಿಟಿಷರು ರಾಜ್ಯಾಡಳಿತದಿಂದ ಧರ್ಮವನ್ನು ದೂರವಿಡುವ ನೀತಿಯನ್ನು ಅನುಸರಿಸಿದರಾದರೂ ಭಾರತೀಯ ಸಮಾಜವನ್ನು ಧರ್ಮದ ಆಧಾರದಲ್ಲಿ ಒಡೆಯಲೆತ್ನಿಸಿದರು. ಬ್ರಿಟಿಷರ ಒಡೆದಾಳುವ ನೀತಿಗೆ ಪೂರಕವಾಗಿ ಅವರ ವಸಾಹತುಶಾಹಿ ಇತಿಹಾಸಕಾ ರರು ಪ್ರಪ್ರಥಮವಾಗಿ ಭಾರತದ ನಾಗರಿಕತೆಯನ್ನು ‘ಹಿಂದೂ’ ಮತ್ತು ‘ಮುಸ್ಲಿಂ’ ಕಾಲಘಟ್ಟಗಳು ಎಂಬುದಾಗಿ ವಿಭಜಿಸಿದರು. ಅದನ್ನೆ ಪಾಕಿಸ್ತಾನಿ ಮತ್ತು ಹಿಂದೂ ರಾಷ್ಟ್ರೀಯವಾದಿ ಬಣಗಳು ಯಥಾವತ್ತಾಗಿ ಅನುಸರಿಸಿದವು.

ಬ್ರಿಟಿಷರ ಕಾಲದಲ್ಲಿ ಆಡಳಿ ತದ ಪ್ರಮುಖ ಸ್ಥಾನಗಳನ್ನು ಬ್ರಾಹ್ಮಣರೇ ಆಕ್ರಮಿಸಿಕೊಂಡ ರಾದರೂ ರಾಜಕೀಯದಲ್ಲಿ ಧರ್ಮದ ಹಸ್ತಕ್ಷೇಪಕ್ಕೆ ಅವಕಾಶವಿರಲಿಲ್ಲ. ಹೀಗಾಗಿ ಹಿಂದಿನ ಬ್ರಾಹ್ಮಣ ಪ್ರಾಬಲ್ಯವನ್ನು ಮರು ಸ್ಥಾಪಿಸಲೋಸುಗ ಹಿಂದೂ ಮಹಾಸಭಾ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ಸಂಸ್ಥೆಗಳು ಹುಟ್ಟಿಕೊಂಡವು. ವೈದಿಕಶಾಹಿ ಅಂದಿನಿಂದ ಇಂದಿನ ತನಕವೂ ಈ ದೇಶವನ್ನು ತನ್ನ ಸಂಪೂರ್ಣ ಹತೋಟಿಗೊಳಪಡಿಸಲು ಅತ್ಯಂತ ಸು ವ್ಯವಸ್ಥಿತವಾಗಿ ಹಾಗೂ ಅವಿರತವಾಗಿ ಶ್ರಮಿಸುತ್ತಾ ಬಂದಿದೆ.

೧೯೪೨ರ ಕ್ವಿಟ್ ಇಂಡಿಯ ಚಳವಳಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಂದು ಅತ್ಯಂತ ಮಹತ್ವದ ಮಜಲು. ಅಂದಿನ ಆ ರಾಷ್ಟ್ರವ್ಯಾಪಿ ಚಳವಳಿಯಲ್ಲಿ ಕೇವಲ ಕಾಂಗ್ರೆಸ್ ಮುಖಂಡ ರಷ್ಟೆ ಅಲ್ಲ, ಜನಸಾಮಾನ್ಯರಾದಿ ಲಕ್ಷಾಂತರ ಭಾರತೀಯರು ಪಾಲ್ಗೊಂಡಿದ್ದರು. ಆದರೆ ಆ ಸಂದರ್ಭದಲ್ಲಿ ಹಿಂದುತ್ವವಾದಿಗಳೇನು ಮಾಡಿದರು? ಎಲ್ಲರೂ ಬ್ರಿಟಿಷರ ಬೆಂಬಲಕ್ಕೆ ನಿಂತರು! “.......ಸರಕಾರದ ಯಾವುದೇ ಮುಖ್ಯ ಸ್ಥಾನ ಅಥವಾ ಹುದ್ದೆಯಲ್ಲಿರುವವರು ಅದಕ್ಕೆ ಅಂಟಿಕೊಂಡು ತಮ್ಮ ನಿಯಮಿತ ಕರ್ತವ್ಯಗಳನ್ನು ಮಾಡುತ್ತಿರಬೇಕು” ಎನ್ನುತ್ತದೆ ಹಿಂದೂ ಮಹಾ ಸಭಾ ಅಧ್ಯಕ್ಷ ಸಾವರ್ಕರ್ ಅಂದು ಹೊರಡಿಸಿದ್ದ ಕಟ್ಟಾಜ್ಞೆ. ಇದು ಯಾವ ತೆರನಾದ ದೇಶಭಕ್ತಿ?

ಸುಮಾರು ಮೂರು ವರ್ಷಗಳ ಹಿಂದೆ, ೧೯೩೯ರಲ್ಲಿ ಮಹಮದಾಲಿ ಜಿನ್ನಾ ಪಾಕಿಸ್ತಾನದ ರಚನೆಗಾಗಿ ಒತ್ತಾಯಿಸಿದ ಸಂದರ್ಭದಲ್ಲಿ, ಇದೇ ಹಿಂದೂ ಮಹಾಸಭಾವು ಮುಸ್ಲಿಂ ಲೀಗ್‌ನೊಂದಿಗೆ ಕೈಜೋಡಿಸಿ ಸಿಂಧ್ ಪ್ರಾಂತ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ನಡೆಸುತ್ತಿತ್ತು! ಪಾಕಿಸ್ತಾನ ರಚನೆಯನ್ನು ಬೆಂಬಲಿಸುವ ನಿರ್ಣಯವೊಂದನ್ನು ಸಿಂಧ್ ಅಸೆಂಬ್ಲಿ ಅನುಮೋದಿಸಿ ದಾಗ ಹಿಂದೂ ಮಹಾಸಭಾ ಮಂತ್ರಿಗಳಲ್ಲಿ ಒಬ್ಬನಾದರೂ ರಾಜೀನಾಮೆ ನೀಡಲಿಲ್ಲ! ಬದಲಿಗೆ ಕೇವಲ ದಾಖಲೆಗೋಸ್ಕರ ಒಂದು ಖಂಡನೆ ವ್ಯಕ್ತಪಡಿಸಿ ಅಷ್ಟಕ್ಕೇ ಸಂತೃಪ್ತರಾದರು! ಸಾವರ್ಕರ್ ಮತ್ತು ಆರೆಸ್ಸೆಸ್ ಸಂಸ್ಥಾಪಕ ಡಾ| ಮೂಂಜೆ ಸೇರಿಕೊಂಡು ಪಂಜಾಬಿನಲ್ಲೂ ಇದೇ ತೆರನಾದ ಸಮ್ಮಿಶ್ರ ಸರಕಾರವೊಂದನ್ನು ರಚಿಸಲು ಮುಂದಾಗಿದ್ದರು.

೧೯೪೨ರಲ್ಲಿ ಬಂಗಾಳದಲ್ಲಿಯೂ ಹಿಂದೂ ಮಹಾ ಸಭಾ, ಮುಸ್ಲಿಂ ಲೀಗ್‌ಗಳ ಸಮ್ಮಿಶ್ರ ಸರಕಾರವಿತ್ತು. ಮುಸ್ಲಿಂಲೀಗ್‌ನ ಫಜಲುಲ್ ಹಕ್ ನೇತೃತ್ವದಲ್ಲಿದ್ದ ಅಂದಿನ ಬಂಗಾಳ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದವರು ಹಿಂದೂ ಮಹಾಸಭಾ ಮುಖಂಡ ಡಾ| ಶ್ಯಾಮಾ ಪ್ರಸಾದ್ ಮುಖರ್ಜಿ. ಆತ ಬಂಗಾಳದ ಬ್ರಿಟಿಷ್ ರಾಜ್ಯಪಾಲ ಸರ್ ಜಾನ್ ಹರ್ಬರ್ಟ್‌ಗೆ ಬರೆದ ಪತ್ರವೊಂದನ್ನು ಹಿಂದೂತ್ವವಾದಿ ‘ದೇಶಭಕ್ತಿ’ಯ ಉತ್ತಮ ನಿದರ್ಶನವೆನ್ನಬಹುದು.

ಜುಲೈ ೨೬, ೧೯೪೨ರ ಆ ಪತ್ರದಲ್ಲಿ ಬ್ರಿಟಿಷರೊಂದಿಗೆ ಅಧಿಕಾರ ಹಂಚಿಕೆಯ ಒಪ್ಪಂದವೊಂದರ ನಿರ್ದಿಷ್ಟ ಪ್ರಸ್ತಾಪವಿತ್ತು:

“ಪ್ರಶ್ನೆ ಏನೆಂದರೆ ಬಂಗಾಳದಲ್ಲಿ ಈ ಚಳವಳಿ ಕ್ವಿಟ್ ಇಂಡಿಯಾವನ್ನು ಎದುರಿಸುವುದು ಹೇಗೆ? ಕಾಂಗ್ರೆಸ್ ತನ್ನ ಶಕ್ತಿಮೀರಿ ಪ್ರಯತ್ನಿಸಿದರೂ ಈ ಚಳವಳಿಯನ್ನು ಬಂಗಾಳದಲ್ಲಿ ನೆಲೆಗೊಳಿಸಲು ಸಾಧ್ಯವಾಗದ ರೀತಿಯಲ್ಲಿ ಪ್ರಾಂತ್ಯದ ಆಡಳಿತವನ್ನು ನಡೆಸಬೇಕು. ಯಾವ ಸ್ವಾತಂತ್ರ್ಯಕ್ಕೋಸ್ಕರ ಕಾಂಗ್ರೆಸ್ ಈ ಚಳವಳಿಯನ್ನು ಆರಂಭಿಸಿ ದೆಯೋ ಈಗಾಗಲೆ ಆ ಸ್ವಾತಂತ್ರ್ಯವನ್ನು ಜನಪ್ರತಿನಿಧಿಗಳು ಪಡೆದುಕೊಂಡಿದ್ದಾರೆಂದು ಜನತೆಗೆ ಹೇಳಲು ನಮ್ಮಿಂದ, ಅದರಲ್ಲೂ ವಿಶೇಷವಾಗಿ ಹೊಣೆ ಯರಿತ ಮಂತ್ರಿಗಳಿಂದ, ಸಾಧ್ಯವಾಗಬೇಕು.ತುರ್ತು ಪರಿಸ್ಥಿತಿಯ ವೇಳೆ ಕೆಲವು ರಂಗಗಳಲ್ಲಿ ಸ್ವಾತಂತ್ರ್ಯ ಸೀಮಿತವಿರಬಹುದು. ಭಾರತೀಯರು ಬ್ರಿಟಿಷರಲ್ಲಿ ವಿಶ್ವಾಸವಿಡಬೇಕು. ಅದು ಬ್ರಿಟನ್‌ನ ಸಲುವಾಗಿಯೂ ಅಲ್ಲ, ಬ್ರಿಟಿಷರು ಪಡೆದುಕೊಳ್ಳಬಹುದಾದ ಯಾವುದೇ ಮೇಲುಗೈಯ ಸಲುವಾಗಿಯೂ ಅಲ್ಲ. ಇದೇ ಪ್ರಾಂತ್ಯದ ರಕ್ಷಣಾ ವ್ಯವಸ್ಥೆ ಹಾಗೂ ಸ್ವಾತಂತ್ರ್ಯವನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕೋಸ್ಕರ ಭಾರತೀಯರು ಬ್ರಿಟಿಷರಲ್ಲಿ ವಿಶ್ವಾಸವಿಡಬೇಕಿದೆ. ನೀವು ರಾಜ್ಯಪಾಲರಾಗಿ ಪ್ರಾಂತ್ಯದ ಸಾಂವಿಧಾನಿಕ ಮುಖ್ಯಸ್ಥ ನಂತೆ ಕಾರ್ಯಾಚರಿಸಲಿರುವಿರಿ. ನಿಮ್ಮ ಸಂಪೂರ್ಣ ವ್ಯವಹಾರಗಳನ್ನು ನಿಮ್ಮ ಮಂತ್ರಿಗಳ (ಅಂದರೆ ನಮ್ಮ) ಸಲಹೆ ಪ್ರಕಾರ ನಿರ್ವಹಿಸಲಿರುವಿರಿ.”

ಆಗಸ್ಟ್ ೯, ೧೯೪೨ರಂದು ಕ್ವಿಟ್ ಇಂಡಿಯ ಚಳವಳಿ ಆರಂಭವಾದಾಗ ರಾಜ್ಯಪಾಲರು ಹಕ್ ಸಚಿವ ಸಂಪುಟವನ್ನು ಕರೆಸಿ ಅವರೆಲ್ಲರೂ ಒಂದೋ ಬ್ರಿಟಿಷ್ ಸರಕಾರದ ದಮನಕಾರಿ ನೀತಿಯನ್ನು ಬೆಂಬಲಿಸಬೇಕು ಇಲ್ಲಾ ರಾಜೀನಾಮೆ ನೀಡಬೇಕೆಂದು ತಿಳಿಸಿದರು. ಆದರೆ ಮುಖರ್ಜಿಯಾದಿಯಾಗಿ ಯಾರೂ ರಾಜೀನಾಮೆಗೆ ಮುಂದಾಗಲಿಲ್ಲ! ಹೇಗಿದೆ ದೇಶಭಕ್ತಿಯ ವರಸೆ?

ವಿದೇಶೀ ಶಿಸ್ಟ್ ಮತ್ತು ನಾಝಿ ಸಿದ್ಧಾಂತಗಳ ಪ್ರಭಾವ

ವೈದಿಕ ಧರ್ಮದಲ್ಲಿನ ಜಾತಿ ಪದ್ಧತಿ ಮನುಷ್ಯರನ್ನು ಐದು ವರ್ಣ ಅಥವಾ ಗುಂಪು ಅಥವಾ ಜಾತಿಗಳಾಗಿ ವಿಂಗಡಿಸುತ್ತದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಅಸ್ಪಶ್ಯ ಮತ್ತು ಮ್ಲೇಚ್ಛರೆಂದು ಹೀಗಳೆಯಲಾಗುವ ಹಿಂದೂಯೇತರರೇ ಆ ಐದು ಜಾತಿಗಳು.ನಾಝಿಗಳೂ ಇದೇ ಮಾದರಿಯಲ್ಲಿ ಮಾನವರನ್ನು ಐದು ಶ್ರೇಣೀಕೃತ ಜನಾಂಗೀಯ ವರ್ಗಗಳಾಗಿ ವಿಂಗಡಿಸಿದರು. ತುತ್ತತುದಿಯಲ್ಲಿ ಬಿಳಿ ಚರ್ಮದ, ನೀಲಿಕಂಗಳ ಪರಿಶುದ್ಧ ಜರ್ಮನ್ ಆರ್ಯನರಿದ್ದರೆ ಅವರ ನಂತರ ಅನುಕ್ರಮವಾಗಿ ಇತರ ಐರೋಪ್ಯರು, ಸ್ಲಾವ್ ಜನ, ಏಷ್ಯನರು ಮತ್ತು ಆಫ್ರಿಕನರು ಬರುತ್ತಾರೆ. ನಿಜ ಹೇಳಬೇಕೆಂದರೆ ಆಫ್ರಿಕ ಖಂಡದ ನಿವಾಸಿಗಳು ಮಾನವರೇ ಅಲ್ಲವೆಂದು ಪ್ರತಿಪಾದಿಸಲಾಗುತ್ತಿತ್ತು!

ಹೀಗಾಗಿ ಮಹಾರಾಷ್ಟ್ರದ ಬ್ರಾಹ್ಮಣವಾದಿಗಳ ನೇತೃತ್ವದ ಹಿಂದೂ ರಾಷ್ಟ್ರೀಯವಾದಿಗಳ ಮೇಲೆ ಫ್ಯಾಶಿಸಂ ಮತ್ತು ನಾಝಿಸಂ ಸಿದ್ಧಾಂತಗಳು ಗಾಢ ಪ್ರಭಾವ ಬೀರಿದ್ದವು. ಅವರ ಮಟ್ಟಿಗೆ ಫ್ಯಾಶಿಸಂ ಒಂದು ಸಂಪ್ರದಾಯವಾದಿ ಕ್ರಾಂತಿಯ ನಿದರ್ಶನವಾಗಿತ್ತು. ಅವರ ಪಾಲಿಗೆ ಇಟೆಲಿ ಮತ್ತು ಜರ್ಮನಿ ಗಳು ಸೂರ್ತಿಯ ಸೆಲೆಗಳಂತಿದ್ದವು. ಫ್ಯಾಶಿಸಂನ ಪ್ರಭಾವದ ಪರಿಣಾಮವಾಗಿ ಆಗಲೇ ಅಸ್ತಿತ್ವದಲ್ಲಿದ್ದ ರಾಜಕೀಯ ಹಿಂದೂ ಸಂಘಟನೆಗಳು ಇನ್ನಷ್ಟು ಕಾರ್ಯಸಮರ್ಥವಾದವು ಮತ್ತು ಅವುಗಳ ರಾಜಕೀಯ ಗುಣಗಳೂ ಇನ್ನಷ್ಟು ಗಟ್ಟಿ ಗೊಂಡವು. ಜನರಲ್ಲಿ ಸೈನಿಕ ಮನೋ ಪ್ರವೃತ್ತಿ ಬೆಳೆಸಿ ಹಿಂದೂ ಸಮಾಜವನ್ನು ಸೈನ್ಯೀಕರಣಗೊಳಿಸುವ ಚಿಂತನೆಗಳು ಶಿಸಂ ಮತ್ತು ನಾಝಿಸಂಗಳಿಂದಲೆ ಹರಿದು ಬಂದಿವೆ. ಇದನ್ನೆಲ್ಲ ದೃಢ ಪಡಿಸು ವಂತಿವೆ ಲೆ| ಕ| ಶಿಕಾಂತ್ ಪುರೋಹಿತ್, ಪ್ರಮೋದ್ ಮುತಾಲಿಕ್‌ರಂತಹವರು ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸು ತ್ತಿರುವ ಬಗೆಗಿನ ಇತ್ತೀಚಿನ ಮಾಧ್ಯಮ ವರದಿಗಳು.

ಸಾವರ್ಕರ್ ಮತ್ತು ವಿದೇಶೀ ತತ್ವಗಳಿಗೆ ಒಲವು

ಮೂಲತಃ ಹಿಮಾಲಯ ಪರ್ವತಗಳಿಂದ ಕೆಳಗಿಳಿದು ಬಂದ ಹಿಂದೂಗಳೆಲ್ಲರೂ ಒಂದೇ ರಕ್ತ ಸಂಬಂಧಿಗಳು, ಹಿಂದೂ ಜನಾಂಗ ಇತರ ಜನಾಂಗಗಳಿಗಿಂತಲೂ ಶ್ರೇಷ್ಠವೆಂಬ ಜನಾಂಗೀಯ ಶ್ರೇಷ್ಠತೆಯ ಕಲ್ಪನೆ ಸಾವರ್ಕರ್‌ರನ್ನು ಸ್ವಾಭಾವಿಕವಾಗಿ ಇಟೆಲಿ, ಜರ್ಮನಿಗಳತ್ತ ಆಕರ್ಷಿತರಾಗುವಂತೆ ಮಾಡಿತು. ಮಹಾರಾಷ್ಟ್ರೀಯ ಬ್ರಾಹ್ಮಣನೂ, ನಾಸ್ತಿಕವಾದಿಯೂ ಆಗಿದ್ದ ಸಾವರ್ಕರ್ ಶಿಸ್ಟ್ ಮತ್ತು ನಾಜಿ ಸಿದ್ಧಾಂತಗಳನ್ನು ತುಂಬಾ ಮೆಚ್ಚಿಕೊಂಡಿದ್ದರು. ಆತ ಹಿಟ್ಲರ್ ಮತ್ತು ಮುಸೊಲಿನಿಯನ್ನು ಅಪಾರವಾಗಿ ಗೌರವಿಸುತ್ತಿದ್ದರು. ೧೯೩೦ರ ದಶಕದ ಅಂತ್ಯಕ್ಕಾಗು ವಾಗ ಜರ್ಮನಿ ಬಗ್ಗೆ ಆತನ ಒಲವು ಹೆಚ್ಚತೊಡಗಿತ್ತು.

೧೯೪೦ರ ಹಿಂದೂ ಮಹಾಸಭಾದ ಮದುರೆಯ ಅಧಿವೇಶನದ ವೇಳೆ “......ಜರ್ಮನಿ ಅಂದು ಯಾವ ಸನ್ನಿವೇಶಗಳಲ್ಲಿ ಸಿಲುಕಿಕೊಂಡಿತ್ತೆಂಬುದನ್ನು ಪರಿಗಣಿಸಿದರೆ ಅದನ್ನು ಉಳಿಸಿದ್ದೇ ನಾಜಿ ಸಿದ್ಧಾಂತ ಎನ್ನುವುದರಲ್ಲಿ ಎರಡು ಮಾತಿಲ್ಲ. ....ಆ ಪರಿಸ್ಥಿತಿಯಲ್ಲಿ ಹಿಟ್ಲರ್ ಜರ್ಮನಿಯ ಆಪದ್ರಕ್ಷಕನಾಗಿದ್ದರೆನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ......” ಎಂದು ಹೇಳಿದ್ದರು. ನೆಹರೂ ಶಿಸಂ, ನಾಜಿಸಂಗಳನ್ನು ವಿರೋಧಿಸಿದಾಗ, ಅದನ್ನು ಸಹಿಸದ ಸಾವರ್ಕರ್ ನಾವು ಮೆಚ್ಚುವ ಪ್ರಭುತ್ವದ ರೂಪವನ್ನೆ ಜರ್ಮನಿ, ಜಪಾನ್, ರಷ್ಯಾ ಅಥವಾ ಇಟೆಲಿ ಕೂಡ ಆಯ್ಕೆ ಮಾಡಿಕೊಳ್ಳಬೇಕೆಂದು ಅವರಿಗೆ ಆದೇಶಿಸಲು ನಾವು ಯಾರು?

ಜರ್ಮನಿಗೆ ಯಾವುದು ಹಿತಕರವೆನ್ನುವುದನ್ನು ನೆಹರೂಗಿಂತ ಚೆನ್ನಾಗಿ ಹಿಟ್ಲರ್ ಬಲ್ಲ. ನಾಜಿಸಂ ಅಥವಾ ಫ್ಯಾಶಿಸಂನ ಮಂತ್ರದಂಡದಿಂದ ಅವೆರಡು ದೇಶಗಳು ಕಂಡಿರುವ ಅದ್ಭುತ ಪ್ರಗತಿಯೇ ಆ ತತ್ವಗಳು ಅವುಗಳ ಆರೋಗ್ಯಕ್ಕೆ ಅಗತ್ಯವಿದ್ದ ಟಾನಿಕ್ ಎಂಬುದನ್ನು ಖಚಿತಪಡಿಸು ತ್ತದೆ” ಎಂದು ನೆಹರೂ ವಿರುದ್ಧ ವಾಗ್ದಾಳಿ ನಡೆಸಿದರು. ಅಂದು ಮಹಾರಾಷ್ಟ್ರದ ಕೆಲವು ಪತ್ರಿಕೆಗಳು ಫ್ಯಾಶಿಸ್ಟ್ ಚಿಂತನೆಗಳಿದ್ದ ಬರಹಗಳನ್ನು ನಿಯಮಿತವಾಗಿ ಪ್ರಕಟಿಸುತ್ತಿದ್ದವು. ಅದೇ ರೀತಿ ಜರ್ಮನ್ ಪತ್ರಿಕೆಯೊಂದು ಸಾವರ್ಕರ್‌ರ ಭಾಷಣವನ್ನು ಪ್ರಕಟಿಸಿತ್ತು. ಒಂದು ನಿರ್ದಿಷ್ಟ ಮಟ್ಟದವರೆಗೆ ಇಟೆಲಿಯ ಸರಕಾರದೊಂದಿಗೆ ನೇರ ಸಂಪರ್ಕವನ್ನೂ ಇರಿಸಿಕೊಳ್ಳಲಾಗಿತ್ತು.

ಆರೆಸ್ಸೆಸ್ ಸಂಸ್ಥಾಪಕ ಡಾ| ಬಿ.ಎಸ್. ಮೂಂಜೆ ಇಟೆಲಿಗೆ ತೆರಳಿ ಅಲ್ಲಿನ ಸೇನಾ ತರಬೇತಿ ಶಾಲೆಗಳನ್ನೂ, ಯುವಜನ ಸಂಘಟನೆಗಳನ್ನೂ ಅಭ್ಯಸಿಸಿದ್ದರಲ್ಲದೆ ಮುಸೊಲಿನಿಯನ್ನೂ ಭೇಟಿಯಾಗಿದ್ದರು.ಸಾವರ್ಕರ್ ತನ್ನ ‘ಹಿಂದೂತ್ವ’ ಪ್ರಬಂಧದಲ್ಲಿ ಪ್ರತಿಪಾದಿಸಿದ, ಸೈದ್ಧಾಂತಿಕ ಮಟ್ಟದಲ್ಲಿ ಅನ್ಯ ಸಮುದಾಯಗಳನ್ನು ಶತ್ರುಗಳನ್ನಾಗಿಸುವ ಆಂತರಿಕ ವೈರಿಯ ಕಲ್ಪನೆಗೆ ಪ್ರೇರಣೆಯೇ ಫ್ಯಾಶಿಸಂ ಮತ್ತು ನಾಜಿಸಂ. ಆತ ಜರ್ಮನಿಯ ಜನಾಂಗ ನೀತಿಯನ್ನು ಹಾಗೂ ಅಲ್ಲಿನ ಯಹೂದ್ಯ ಸಮಸ್ಯೆಯನ್ನು ಭಾರತದ ಮುಸ್ಲಿಂ ಪ್ರಶ್ನೆಗೆ ಎಡೆಬಿಡದೆ ಹೋಲಿಸಿರುವುದೇ ಇದಕ್ಕೆ ಸಾಕ್ಷಿ.

ಸಾವರ್ಕರ್‌ರ ಹಿಂದೂತ್ವ ಸಿದ್ಧಾಂತದಲ್ಲಿ ಒಟ್ಟು ನಾಲ್ಕು ಮಹತ್ವದ ಅಂಶಗಳಿವೆ. ವೊದಲನೆಯದಾಗಿ, ಹಿಂದೂ ರಾಷ್ಟ್ರ ಒಂದು ಅತ್ಯುಚ್ಚ ಜನಾಂಗದಿಂದ ಹುಟ್ಟಿದೆ. ಎರಡನೆಯದಾಗಿ, ಅಲ್ಪಸಂಖ್ಯಾತರೆಲ್ಲರೂ ನೀಚ ಜನಾಂಗಗಳಷ್ಟೇ ಅಲ್ಲದೆ ಪರಧರ್ಮಗಳ ಅನುಯಾಯಿಗಳೂ ಆಗಿರುವುದರಿಂದ ಅವರನ್ನು ದ್ವೇಷಿಸಬೇಕು.ಮೂರನೆಯದಾಗಿ, ಹಿಂದೂ ಧರ್ಮ ಬದುಕುಳಿದಿರುವುದು ವರ್ಣಾಶ್ರಮ ಧರ್ಮದಿಂದಾಗಿ. ನಾಲ್ಕನೆಯದಾಗಿ, ಹಿಂದೂ ಜನಾಂಗ ಇಡೀ ಪ್ರಪಂಚವನ್ನು ಆಳುವುದಕ್ಕೆ ಸಿದ್ಧವಾಗಿದೆ.

‘ಗುರು’ ಗೋಲ್ವಲ್ಕರ್‌ರ ಆದರ್ಶ: ಅರೆಸ್ಸೆಸ್‌ನ ಮತ್ತೊಬ್ಬ ಸರಸಂಘಚಾಲಕ ಗೋಲ್ವಲ್ಕರ್ ಕೂಡ ಸಾವರ್ಕರ್‌ರ ಚಿಂತನೆ ಗಳನ್ನೇ ಮುಂದುವರಿಸಿದರು. ಜರ್ಮನರ ರಾಷ್ಟ್ರಾಭಿಮಾನವನ್ನು ತುಂಬಾ ಮೆಚ್ಚಿದ್ದ ಗೋಲ್ವಲ್ಕರ್‌ರ ರಾಷ್ಟ್ರ ಮತ್ತು ರಾಷ್ಟ್ರೀಯತೆಗಳ ಕಲ್ಪನೆಗಳಿಗೆ ಜರ್ಮನಿಯ ವಕೀಲ ಜೊಹಾನ್ ಕಾಸ್ಪರ್ ಬ್ಲಂಟ್‌ಸ್ಕ್ಲಿಯ ಸಾಹಿತ್ಯದಿಂದಲೂ ಸೂರ್ತಿ ದೊರೆತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿರೋಧಿಸಿದ ಗೋಲ್ವಲ್ಕರ್‌ರ ಆದರ್ಶವಾಗಿದ್ದುದು ನಾಜಿಗಳ ರಾಷ್ಟ್ರೀಯ ಸಮಾಜವಾದ. ಗೋಲ್ವಲ್ಕರ್‌ರ ಮಾದರಿ ಹಿಂದೂ ರಾಷ್ಟ್ರದ ಕಲ್ಪನೆ ಮತ್ತು ಹಿಟ್ಲರ್‌ನ ಸರ್ವಾಧಿಕಾರಿ, ನಿರಂಕುಶ ಪ್ರಭುತ್ವದ ಕಲ್ಪನೆ ಇವೆರಡೂ ಒಂದೇ ಅಚ್ಚಿನಲ್ಲಿ ಎರಕ ಹೊಯ್ದಂತಿವೆ.

ಬಿಜೆಪಿಗೆ ಎರವಲು ನೀಡಲಾಗುವ ಆರೆಸ್ಸೆಸ್ ಕಾರ್ಯಕರ್ತರ ಕುರಿತಂತೆ ಗೋಲ್ವಲ್ಕರ್‌ರ ಉವಾಚಗಳು ಸ್ವಾರಸ್ಯಕರವಾಗಿವೆ. ಅವರೆಲ್ಲರೂ ಅದರ ರಾಜಕೀಯ ತಾಳಕ್ಕೆ ತಕ್ಕಂತೆ ಕುಣಿಯ ಬೇಕಾಗಿರುವ ‘ನಟ’ರೆಂದು ಗೋಲ್ವಲ್ಕರ್ ಹೇಳಿದ್ದಾರೆ. ರಾಜಕೀಯದಲ್ಲಿ ಕೈಚಳಕ ನಡೆಸುವುದಕ್ಕಾಗಿ ಯಾವ ರೀತಿಯ ಸಿಬ್ಬಂದಿಯನ್ನು ಬಿಜೆಪಿಗೆ ನಿಯೋಜಿಸಲಾಗುತ್ತದೆ ಮತ್ತು ಆರೆ ಸ್ಸೆಸ್ ಅವರಿಂದ ಏನನ್ನು ನಿರೀಕ್ಷಿಸುತ್ತದೆ ಎಂಬುದನ್ನು ಮೊದಲನೆ ಹೇಳಿಕೆ ತಿಳಿಸುತ್ತದೆ. ಮಾರ್ಚ್ ೧೬, ೧೯೫೪ ರಂದು ವಾರ್ಧಾದ ಸಿಂಡಿಯಲ್ಲಿ ಮಾಡಿದ ಭಾಷಣದ ವೇಳೆ ಗೋಲ್ವಲ್ಕರ್ ಹೇಳಿದರು: “ನಾವು ಸಂಘಟನೆಯೊಂದರ ಭಾಗವೆಂದು ಹೇಳಿ ಅದರ ಶಿಸ್ತನ್ನು ಒಪ್ಪಿದ ಮೇಲೆ ಜೀವನದಲ್ಲಿ ಆಯ್ಕೆಗಳ ಪ್ರಶ್ನೆ ಇರು ವುದಿಲ್ಲ. ಹೇಳಿದಂತೆ ಮಾಡಿ. ಕಬಡ್ಡಿ ಆಡಲು ಹೇಳಿದರೆ ಕಬಡ್ಡಿ ಆಡಿ. ಸಭೆ ನಡೆಸಬೇಕೆಂದು ಹೇಳಿದರೆ ಸಭೆ ನಡೆಸಿ. ......ಉದಾಹರಣೆಗೆ ನಮ್ಮ ಕೆಲವು ಸ್ನೇಹಿತರಿಗೆ ರಾಜಕೀಯದಲ್ಲಿ ಕೆಲಸ ಮಾಡುವಂತೆ ಹೇಳಲಾಯಿತು.

ಇದರರ್ಥ ಅವರಿಗೆ ರಾಜಕೀಯದಲ್ಲಿ ಭಾರೀ ಆಸಕ್ತಿ ಇದೆ ಅಥವಾ ಪ್ರೇರೇಪಣೆ ಇದೆ ಎಂದಲ್ಲ. ಅವರು ರಾಜಕೀಯಕ್ಕಾಗಿ ನೀರಿಲ್ಲದ ಮೀನಿನಂತೆ ಪ್ರಾಣತ್ಯಾಗ ಮಾಡುವುದಿಲ್ಲ. ರಾಜಕೀಯದಿಂದ ಹೊರಬರುವಂತೆ ಹೇಳಿದರೆ ಅದಕ್ಕೂ ಅವರ ಆಕ್ಷೇಪವಿಲ್ಲ. ಅವರ ಸ್ವಂತ ವಿವೇಚನೆ ಬೇಕಾಗಿಯೇ ಇಲ್ಲ.”

ಎರಡನೆ ಹೇಳಿಕೆ ಹೀಗಿದೆ: “ನಮ್ಮ ಕೆಲವು ಸ್ವಯಂಸೇವಕರು ರಾಜಕೀಯದಲ್ಲಿ ದುಡಿಯುತ್ತಿದ್ದಾರೆಂಬ ವಿಷಯವೂ ನಮಗೆ ಗೊತ್ತಿದೆ. ಅಲ್ಲಿ ಅವರು ಅಗತ್ಯ ಬಿದ್ದಂತೆ ಸಾರ್ವಜನಿಕ ಸಭೆ, ಮೆರವಣಿಗೆಗಳನ್ನು ಸಂಘಟಿಸುವ ಕೆಲಸವನ್ನೂ ಘೋಷಣೆ ಕೂಗುವುದನ್ನೂ ಮಾಡಬೇಕು. ಇವೆಲ್ಲವೂ ನಮ್ಮ ಕೆಲಸದ ಭಾಗವಲ್ಲ, ಆದಾಗ್ಯೂ ನಟನಿಗೆ ಯಾವ ಪಾತ್ರವನ್ನು ವಹಿಸಲಾಗುತ್ತದೊ ಅದನ್ನಾತ ತನ್ನ ಪೂರ್ತಿ ಸಾಮರ್ಥ್ಯವನ್ನು ಬಳಸಿಕೊಂಡು ನಿರ್ವಹಿಸಬೇಕು. ಆದರೆ ಸ್ವಯಂಸೇವಕರು ಕೆಲವೊಮ್ಮೆ ಎಷ್ಟೊಂದು ಅತಿಶಯ ಉತ್ಸಾಹದಿಂದ ತಮ್ಮ ಪಾತ್ರ ಮೀರಿ ನಡೆಯುತ್ತಾರೆಂದರೆ ಈ ಕೆಲಸಕ್ಕೆ ನಿರುಪಯುಕ್ತ ರಾಗುತ್ತಾರೆ. ಇದು ಒಳ್ಳೆಯದಲ್ಲ.”

ಹಿಂದುತ್ವದ ರಾಜಕೀಯ ಉದ್ದೇಶಗಳು ಮತ್ತು ಧರ್ಮ

ರಾಜಕೀಯ ಉದ್ದೇಶಗಳನ್ನು ಮೇಲ್ನೋಟಕ್ಕೆ ಧಾರ್ಮಿಕವಾಗಿರುವ ಆಡಂಬರದ ಶಬ್ದಗಳಿಂದ ಸಿಂಗರಿಸಿ ಆ ಮೂಲಕ ಅದನ್ನು ಮರೆಮಾಚುವುದೇ ಹಿಂದೂತ್ವ ಸಿದ್ಧಾಂತದ ಪ್ರಧಾನ ಅಂಶ. ಹೀಗಾಗಿ ಬಿಜೆಪಿಗರ ಧಾರ್ಮಿಕ, ಸಾಂಸ್ಕೃತಿಕ, ದೇಶಭಕ್ತಿಯ ಆಲಂ ಕಾರಿಕ ಮಾತುಗಳ ಹಿಂದೆ ಯಾವತ್ತೂ ಒಂದು ಕ್ರೂರ ರಾಜಕೀಯ ಲೆಕ್ಕಾಚಾರ ಇದ್ದೇ ಇದೆ. “ಬಿಜೆಪಿ ಮಟ್ಟಿಗೆ ಹಿಂದೂತ್ವ ಕೇವಲ ಒಂದು ಅವಕಾಶವಾದಿ ತಂತ್ರವಲ್ಲದೆ ಇನ್ನೇನೂ ಅಲ್ಲ” ಎಂದು ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿಯವರು ಅಮೆರಿಕಾದ ರಾಜತಾಂತ್ರಿಕರೆದುರು ಮನಬಿಚ್ಚಿರುವುದು ವಿಕಿಲೀಕ್ಸ್ ಮೂಲಕ ಬಯಲಾಗಿದೆ. ರಾಮ ಜನ್ಮಭೂಮಿ ಚಳವಳಿ ಕೇವಲ ರಾಜಕೀಯ ಚಳವಳಿಯಾಗಿತ್ತೆಂದು ಇನ್ನೋರ್ವ ನಾಯಕಿ ಸುಷ್ಮಾ ಸ್ವರಾಜ್ ಕೂಡಾ ಒಪ್ಪಿಕೊಂಡಿದ್ದಾರೆ.

ಹಿಂದುತ್ವ ಮತ್ತು ಭಯೋತ್ಪಾದನೆ

ಚೇಂಬರ್ಸ್ ಶಬ್ದಕೋಶದ ಪ್ರಕಾರ:ಭಯೋತ್ಪಾದನೆ ಅಂದರೆ ‘ರಾಜಕೀಯ ಗುರಿ ಸಾಧಿಸುವುದಕ್ಕಾಗಿ ಹಿಂಸಾಮಾರ್ಗದ ಬಳಕೆ.’ಉಗ್ರಗಾಮಿತ್ವ ಅಂದರೆ ‘ಮತಾಂಧ ಅಥವಾ ತೀವ್ರ ಮಟ್ಟದ ನಿಲುವುಗಳಿಗೆ ಬದ್ಧತೆ.’ ಇದನ್ನು ಗಣನೆಗೆ ತೆಗೆದುಕೊಂಡಾಗ ಹಿಂದೂತ್ವ ಸಿದ್ಧಾಂತದ ಗರ್ಭದಲ್ಲೆ ಉಗ್ರಗಾ ಮಿತ್ವ ಮತ್ತು ಭಯೋತ್ಪಾದನೆ ಅಡಗಿದೆಯೆಂಬ ಸತ್ಯ ನಿಚ್ಚಳವಾಗುತ್ತದೆ. ಹಿಂದೂತ್ವವಾದಿಗಳ ಪ್ರೇರಕ ಶಕ್ತಿಯಾಗಿರುವುದೇ ಮುಸೊಲಿನಿ ಮತ್ತು ಹಿಟ್ಲರ್ ನಡೆಸಿದ ನಾಗರಿಕ ಮತ್ತು ಮಾನವಹಕ್ಕುಗಳ ದಮನ, ಸ್ವಘೋಷಿತ ವೈರಿಗಳ ವಿರುದ್ಧ ನಡೆಸಿದ ವ್ಯವಸ್ಥಿತ ಅಪಪ್ರಚಾರ ಮತ್ತು ಭಯೋತ್ಪಾದಕ ಕೃತ್ಯಗಳು. ಹಿಂದೂತ್ವವಾದಿಗಳ ಓಲೈಕೆಗೆ ನಿಂತಿರುವ ಸ್ವಾಮಿ, ಸಾಧುಗಳ ಸಂಖ್ಯೆಯೂ ಬಹಳ ದೊಡ್ಡದಿದೆ.

ಇವರ ಪೈಕಿ ಸ್ವಾಮಿ ಅಸೀಮಾನಂದ, ಶಾರದಾ ಸರ್ವಜ್ಞ ಪೀಠದ ಶಂಕರಾ ಚಾರ್ಯ ಸ್ವಾಮಿ ಅಮೃತಾನಂದ, ಮಹರ್ಷಿ ದಯಾನಂದನ ಶಿಷ್ಯ ಆನಂದ ಮಿತ್ರಾನಂದ ಸ್ವಾಮಿ, ಸಾಧ್ವಿ ಪ್ರಜ್ಞಾಸಿಂಗ್‌ರಂತಹ ಬಾಂಬ್ ಪ್ರಿಯರೂ ಇದ್ದಾರೆ. ಮತಾಂತರ, ಭಯೋತ್ಪಾದನೆ, ಗೋಮಾಂಸ, ‘ಲವ್ ಜಿಹಾದ್’ ಮುಂತಾದ ಭಾವನಾತ್ಮಕ ವಿಷಯಗಳಿಗೆ ಧರ್ಮದ ಲೇಪವನ್ನು ಕೊಟ್ಟು ಆ ಮೂಲಕ ಧರ್ಮಭೀರು ಹಿಂದೂ ಗಳನ್ನು, ಅದರಲ್ಲೂ ಮುಖ್ಯವಾಗಿ ಸವರ್ಣೀಯ ಹಿಂದೂಗಳನ್ನು ಮರುಳಾಗಿಸಿ, ಭಾರತದ ಜಾತ್ಯತೀತ, ಪ್ರಜಾತಾಂತ್ರಿಕ ಬುನಾದಿ ಯನ್ನು ಕಿತ್ತೊಗೆದು ಸರ್ವಾಧಿಕಾರಿ ಶೈಲಿಯ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ಹಿಂದೂತ್ವವಾದಿಗಳ ಏಕೈಕ ಗುರಿಯಾಗಿದೆ. ಮಾನ್ಯ ಕಾಗೇರಿಯವರು ಪ್ರದರ್ಶಿಸಿರುವುದೂ ಇದೇ ಸರ್ವಾಧಿಕಾರಿ ಶೈಲಿಯನ್ನು.

ಅಭಿನವ್ ಭಾರತ್

ಹಿಂದೂತ್ವವಾದಿಗಳು ೨೦೦೭ರಲ್ಲಿ ‘ಅಭಿನವ್ ಭಾರತ್’ ಎಂಬ ನೂತನ ಸಂಘಟನೆಯೊಂದನ್ನು ಹುಟ್ಟುಹಾಕಿದರು. ಇದಕ್ಕೆ ತನ್ನದೇ ಆದ ಸಂವಿಧಾನವಿದೆ. “ಭಾರತ್ ಸ್ವರಾಜ್ಯ, ಸುರಾಜ್ಯ ಹಾಗೂ ಸುರಕ್ಷಾ” ಎಂಬ ಗುರಿ ಹಾಗೂ ಉದ್ದೇಶಗಳನ್ನು ಹೊಂದಿರುವ ಪ್ರತ್ಯೇಕ ಹಿಂದೂ ರಾಷ್ಟ್ರದ ಸ್ಥಾಪನೆಯೇ ಇದರ ಮುಖ್ಯ ಉದ್ದೇಶ. ಇಂದು ಭಯೋತ್ಪಾದನೆಯ ಆರೋಪ ಎದುರಿಸುತ್ತಿರುವ ಈ “ಅಭಿನವ್ ಭಾರತ್” ಸಂಘಟನೆಯ ಪ್ರಸಕ್ತ ರಾಷ್ಟ್ರಾಧ್ಯಕ್ಷೆ ಯಾರು? ಸಾವರ್ಕರ್‌ರ ಸೋದರನ ಸೊಸೆ ಹಿಮಾನಿ ಸಾವರ್ಕರ್! ಭೂಸೇನೆಯ ಲೆ| ಕ| ಪ್ರಸಾದ್ ಪುರೋಹಿತ್ ಇದರ ಸಹಸಂಸ್ಥಾಪಕ. ಕಾರ್ಯನಿರ್ವಾಹಕ ಅಧ್ಯಕ್ಷನಾಗಿರುವ ಭೂಸೇನೆಯ ನಿವೃತ್ತ ಮೇ| ರಮೇಶ್ ಉಪಾಧ್ಯಾಯ ಎಂಬಾತ ಹಿಂದೊಮ್ಮೆ ಆರೆಸ್ಸೆಸ್‌ನ ಮಾಜಿ ಸೇನಾಸಿಬ್ಬಂದಿ ವಿಭಾಗದ ಮುಖ್ಯಸ್ಥನಾಗಿದ್ದರು.


ಭಾರತದ ಪ್ರಜಾತಾಂತ್ರಿಕ ಸರಕಾರವನ್ನು ಬುಡಮೇಲುಗೊಳಿಸುವ ಉದ್ದಿಶ್ಯವನ್ನು ಸಾಧಿಸುವುದಕ್ಕೋಸ್ಕರ ನೇಪಾಳ ಮತ್ತು ಇಸ್ರೇಲ್‌ನಂತಹ ವಿದೇಶಗಳ ಸಹಾಯ ಯಾಚಿಸಲೂ ಹಿಂದೆ ಮುಂದೆ ನೋಡದ ಸಂಘಟನೆ ಇದು. ಅಭಿನವ್ ಭಾರತ್‌ನ ಸ್ಥಾಪನೆ ಮತ್ತು ನಿಧಿ ಸಂಗ್ರಹಣೆಗಳಲ್ಲಿ ವಿಶ್ವ ಹಿಂದೂ ಪರಿಷತ್ ನಾಯಕ ಪ್ರಣ್ ತೊಗಾಡಿಯಾ ಕೂಡ ಪಾಲ್ಗೊಂಡಿದ್ದರೆಂದು ಪುರೋಹಿತ್ ಸಿಬಿಐಗೆ ತಿಳಿಸಿದ್ದಾರೆ. ಈ ಸಂಘಟನೆ ನಿಧಿ ಸಂಗ್ರಹಿಸಿ, ಶಸಾಸ, ಸ್ಪೋಟಕಗಳನ್ನು ಖರೀದಿಸಿ ಅದನ್ನೆಲ್ಲ ದುಷ್ಟ ಹಾಗೂ ರಾಷ್ಟ್ರವಿರೋಧಿ ಚಟುವಟಿಕೆಗಳಿಗಾಗಿ ಬಳಸಿಕೊಂಡಿರು ವುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಿವೆ.

ಬಾಂಬು ಸ್ಫೋಟ ಇತ್ಯಾದಿ ದುಷ್ಕೃತ್ಯಗಳ ಮೂಲಕ ದೇಶಾದ್ಯಂತ ಕೋಮುಗಲಭೆಗಳನ್ನು ಸೃಜಿಸಿ ಸಾಂವಿಧಾನಿಕವಾಗಿ ಸ್ಥಾಪಿತವಾಗಿರುವ ಸರಕಾರ ವನ್ನು ಅಸ್ಥಿರಗೊಳಿಸುವ ಯೋಜನೆಗಳನ್ನು ರೂಪಿಸುವುದಕ್ಕಾಗಿ ಭೋಪಾಲ, ಇಂದೋರ್, ನಾಸಿಕ್, ದೇವಲಾಲಿ, ಪುಣೆ, ಜಮ್ಮು ಮುಂತಾದ ಜಾಗಗಳಲ್ಲಿ ಸಂಘಟನೆಯ ಸಭೆ ನಡೆಸಿರುವುದಕ್ಕೂ ಸಾಕ್ಷ್ಯಾಧಾರಗಳಿವೆ. ದಯಾನಂದ್ ಪಾಂಡೆ ಉರು ಸ್ವಾಮಿ ಅಮೃತಾನಂದ್ ಎಂಬಾತನ ಲ್ಯಾಪ್‌ಟಾಪ್‌ನಲ್ಲಿ ಆತ, ಸಾಧ್ವಿ ಪ್ರಜ್ಞಾಸಿಂಗ್ ಮತ್ತು ಪುರೋಹಿತ್ ವಿವಿಧ ಸಭೆಗಳಲ್ಲಿ ಆರ್‌ಡಿ ಎಕ್ಸ್, ರಾಸಾಯನಿಕ ಬಾಂಬ್ ಮತ್ತು ಅವುಗಳನ್ನು ಬಳಸುವ ಬಗ್ಗೆ ಮಾತಾಡುತ್ತಿದ್ದ ವಿವರಗಳಿವೆ. ಮಾಲೆಗಾಂವ್, ಹೈದರಾಬಾದ್, ಅಜ್ಮೀರ ಮತ್ತು ಸಂಝೆತಾ ಎಕ್ಸ್‌ಪ್ರೆಸ್ ಸೋಟ ಪ್ರಕರಣಗಳ ಬಹುತೇಕ ಆರೋಪಿಗಳು ‘ಅಭಿನವ್ ಭಾರತ್’ನ ಸದಸ್ಯರು.

ಜನವರಿ ೨೩, ೨೦೦೪ರಲ್ಲಿ ವಿಶ್ವ ಹಿಂದೂ ಮಹಾಸಂಘ ಕಾಠ್ಮಂಡುವಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ವೊಂದರಲ್ಲಿ ನೇಪಾಳದ ಅರಸು ಗ್ಯಾನೇಂದ್ರನನ್ನು ವಿಶ್ವಾದ್ಯಂತದ ಹಿಂದೂಗಳ ಸಾಮ್ರಾಟನೆಂದು ಕೊಂಡಾಡಲಾಯಿತು. ವಿಶ್ವ ಹಿಂದೂ ಪರಿ ಷತ್ ಅಧ್ಯಕ್ಷ ಅಶೋಕ್ ಸಿಂಘಾಲ್ ಮಾತ ನಾಡಿ “ಧರ್ಮದ ರಕ್ಷಣೆಗಾಗಿ ಭಗವಂತನಿಂದ ಸೃಷ್ಟಿಸಲ್ಪಟ್ಟಿರುವ ಈ ಹಿಂದೂ ಸಾಮ್ರಾಟನನ್ನು ರಕ್ಷಿಸುವುದು ಜಗತ್ತಿನ ೯೦೦ ಮಿಲಿಯ ಹಿಂದೂಗಳ ಕರ್ತವ್ಯ” ವೆಂದಿದ್ದರು.

ಇಂದಿನ ‘ಅಭಿನವ್ ಭಾರತ್’ನ ನೇತಾ ರರೂ ನೇಪಾಳದ ದೊರೆಯೊಂದಿಗೆ ನಿಕಟ ಸಂಪರ್ಕಗಳನ್ನು ಇಟ್ಟುಕೊಂಡಿದ್ದರು. ಅದೇ ರೀತಿ ಇಸ್ರೇಲ್ ಜೊತೆಗೂ ಸಂಪರ್ಕ ಮಾಡಿ ದ್ದರು. ೨೦೦೮ರ ಮಾಲೆಗಾಂವ್ ಮತ್ತಿತರ ಸೋಟ ಪ್ರಕರಣಗಳ ೧೪ ಮಂದಿ ಆರೋಪಿ ಗಳ ಪೈಕಿ ಇಬ್ಬರಾದ ಪುರೋಹಿತ್ ಮತ್ತು ದಯಾನಂದ್ ಪಾಂಡೆ ಇವರುಗಳ ಸಂಭಾ ಷಣೆಯೊಂದರ ಸ್ಯಾಂಪಲ್ ಇಲ್ಲಿದೆ:
“........ನಾವು ಜೂನ್ ೨೪, ೨೦೦೬ರಂದು ಮತ್ತು ೨೦೦೭ರಲ್ಲಿ ದೊರೆ ಗ್ಯಾನೇಂದ್ರನನ್ನು ಭೇಟಿಯಾಗಿದ್ದೆವು.... ಪ್ರಸ್ತಾಪವನ್ನು ರಾಜ ಅಂಗೀಕರಿಸಿದ್ದ... ಅಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ನನ್ನ ಕಡೆಯಿಂದ ೨೦ ಅಧಿಕಾರಿಗಳನ್ನೂ ೨೦೦ ಸೈನಿಕರನ್ನೂ ತರಬೇತುಗೊಳಿಸ ಲಾಗುವುದು. ನನಗೆ ಪ್ರತಿ ವರ್ಷ ೪೦ ಅಧಿಕಾರಿಗಳು ಹಾಗೂ ೪೦೦ ಸೈನಿಕರು ದೊರೆಯಲಿದ್ದಾರೆ. ಆತನದ್ದು ಒಂದು ಸ್ವತಂತ್ರ ರಾಷ್ಟ್ರವಾಗಿರುವುದರಿಂದ ಆತ ಝೆಕೊಸ್ಲೊವಾಕಿಯದಿಂದ ಎಕೆ-೪೭ಗಳನ್ನು ಪಡೆದುಕೊಳ್ಳಬಹುದು, ದುಡ್ಡು ನಾನು ಕೊಡುವೆ, ಗುಂಡುಗಳ ವ್ಯವಸ್ಥೆ ನಾನು ಮಾಡುವೆನೆಂದು ದೊರೆಯಲ್ಲಿ ಕೋರಿಕೊಂಡಾಗ ದೊರೆ ಇದಕ್ಕೆ ಸಮ್ಮತಿಸಿದ್ದಾರೆ....”
“..........(ಇಸ್ರೇಲಿಗಳೊಂದಿಗೆ) ನಾವು ನಾಲ್ಕು ಅಂಶಗಳಿಗಾಗಿ ಕೇಳಿಕೊಂಡಿದ್ದೇವೆ. ಒಂದು, ಉಪಕರಣಗಳ ನಿರಂತರ, ತಡೆರಹಿತ ಪೂರೈಕೆ ಹಾಗೂ ತರಬೇತು. ಎರಡು, ಟೆಲ್ ಅವ್‌ನಲ್ಲಿ ನಮ್ಮ ಕೇಸರಿ ಧ್ವಜದೊಂದಿಗೆ ನಮ್ಮ ಕಚೇರಿ ತೆರೆಯಲು ಅನುಮತಿ. ಮೂರು, ರಾಜಕೀಯ ಆಶ್ರಯ. ನಾಲ್ಕು, ಹಿಂದೂ ರಾಷ್ಟ್ರದ ಜನನವನ್ನು ವಿಶ್ವ ಸಂಸ್ಥೆಯಲ್ಲಿ ಘೋಷಿಸುವ ನಮ್ಮ ಧ್ಯೇಯಕ್ಕೆ ಬೆಂಬಲ.”
ಈಗ ನೀವೇ ಹೇಳಿ ದೇಶ ಬಿಟ್ಟು ತೊಲಗಬೇಕಾದವರು ಯಾರು?

ಪ್ರಣಯದ ಉನ್ಮಾದದ ದೃಶ್ಯ ಕಾವ್ಯ

sroty1
ದೆಹಲಿ ಮೃಗಾಲಯದಲ್ಲಿ ಶನಿವಾರ ಪ್ರಣಯದಾಟದಲ್ಲಿ ತೊಡಗಿದ್ದ ಹೆಜ್ಜಾರ್ಲೆ (ಪೆಲಿಕನ್) ಜೋಡಿ ಹಕ್ಕಿಗಳು

Saturday, July 30, 2011

ಜಾನಪದ ವಿಶ್ವವಿದ್ಯಾಲಯ ಪುಟ್ಟ ಸಂಶೋಧನ ಕೇಂದ್ರವಾಗಬೇಕು: ಪ್ರೊ.ರಹಮತ್ ತರೀಕೆರೆ

ಮಾತುಕತೆ


ಅರುಣ್:ಇಂದು ಜಾನಪದ ಅಧ್ಯಯನಗಳನ್ನು ಸಂಸ್ಕೃತಿ ಚಿಂತನೆಯ ಭಾಗವಾಗಿ ಒಳಗು ಮಾಡಿಕೊಳ್ಳುವ ವಿಧಾನ ಯಾವುದು?

ರಹಮತ್ ತರೀಕೆರೆ: ಈಗ ಕನ್ನಡದಲ್ಲಿ ಸಂಸ್ಕೃತಿ ಚಿಂತನೆಯ ಹೊಸ ಹಾದಿಗಳು ಮೂಡುತ್ತಿವೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಈ ಚಿಂತನೆಯಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಆಕರ ಜಾನಪದದ್ದೇ ಆಗಿದೆ. ಆದರೆ ಈ ಚಿಂತನೆಯನ್ನು ನಮ್ಮ ಸಮುದಾಯಗಳ ಚಿಂತನಾಕ್ರಮದ ಭಾಗವಾಗಿ, ಮತ್ತಷ್ಟು ಸೃಜನಶೀಲವಾಗಿ ಜೀವಂತವಾಗಿ ಮಾಡಬೇಕಿದೆ. ಚರಿತ್ರೆ, ಭಾಷಾವಿಜ್ಞಾನ, ಸಮಾಜವಿಜ್ಞಾನ, ಸಾಹಿತ್ಯ, ಶಿಲ್ಪ, ಚಿತ್ರಕಲೆ ಸಿನಿಮಾ- ಹೀಗೆ ಹಲವು ಶಿಸ್ತು ಮತ್ತು ಮಾಧ್ಯಮಗಳ ಮೂಲಕ ಪ್ರವೇಶಿಸುವ ಹಾದಿಗಳನ್ನು ಹುಡುಕಬೇಕಿದೆ. ಇದು ಯಾರೊ ಒಬ್ಬಿಬ್ಬರು ಗಣ್ಯವಿದ್ವಾಂಸರು ಮಾಡುವ ಕೆಲಸವಲ್ಲ. ಇದೊಂದು ಟೀಂ ವರ್ಕ್ಸ್.


ಅರುಣ್: ಈತನಕದ ಕರ್ನಾಟಕದ ಜಾನಪದ ಅಧ್ಯಯನಗಳನ್ನು ನೀವು ಹೇಗೆ ಗ್ರಹಿಸುತ್ತೀರಿ? ಈಗ ಜಾನಪದ ಅಧ್ಯಯನಗಳು ಹೊರಳಿಕೊಳ್ಳಬೇಕಾದ ದಿಕ್ಕು ಯಾವುದು?

ರಹಮತ್ ತರೀಕೆರೆ: ಕರ್ನಾಟಕದ ಜಾನಪದ ಅಧ್ಯಯನಗಳಲ್ಲಿ ಅನೇಕರು ತೊಡಗಿದ್ದಾರೆ ಮತ್ತು ಅದ್ಭುತವಾದ ಹಾದಿಗಳನ್ನು ಸೋಸಿದ್ದಾರೆ. ಆದರೆ ಎರಡು ಸಮಸ್ಯೆಗಳಿವೆ. ೧. ಜಾನಪದವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಕೆಲವರಲ್ಲಿ ಅದು ಪಶ್ಚಿಮದ ಸಿದ್ಧಾಂತ ನೆರಳಿನಲ್ಲಿ ನಡೆಯುತ್ತಿರುವುದು. ೨. ಮತ್ತೆ ಕೆಲವರಲ್ಲಿ ಅದು ಸ್ವವಿಮರ್ಶೆಯಿಲ್ಲದ ವೈಭವೀಕರಣದ ದೇಶೀಯ ಸ್ವಗತಗಳಲ್ಲಿ ನರಳುತ್ತಿರುವುದು. ನಮ್ಮಲ್ಲಿ ಕಳೆದ ಒಂದು ಶತಮಾನದಿಂದ ನಡೆದಿರುವ ಸಂಗ್ರಹ ಮತ್ತು ಸಂಪಾದನೆ ಅದ್ಭುತವಾಗಿದೆ. ಮೊದಲ ಸಲಕ್ಕೆ ಹಳ್ಳಿಗಳಿಗೆ ಹೋಗಿ ಜನರ ಜತೆ ಕುಳಿತು ಕೆಲಸ ಮಾಡಿದ ಆ ಮಹನೀಯರನ್ನು ಕೃತಜ್ಞತೆಯಿಂದ ನೆನೆಯಬೇಕು. ಆದರೆ ಸಂಗ್ರಹವಾಗಿ ಪ್ರಕಟವಾಗಿರುವ ಈ ಆಕರಗಳಲ್ಲಿ ಶೇಕಡ ೫ರಷ್ಟೂ ವಿಶ್ಲೇಷಣೆಗೆ ಒಳಗಾಗಿಲ್ಲ. ಜನಪದ ಕತೆಗಳ ವಿಶ್ಲೇಷಣೆಯಂತೂ ಬಹಳ ಕಡಿಮೆ ಆಗಿದೆ. ಈ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ವಿದ್ವತ್ ಸಾಧನೆಗಾಗಿ ಅಲ್ಲ, ನಮ್ಮ ದುಡಿವ ಜನ ಸಮುದಾಯಗಳ ಅನುಭವ ಮತ್ತು ಸೃಜನಶೀಲತೆಯನ್ನು ಮಥಿಸಿ ತಿಳಿವನ್ನು ಮತ್ತು ವಿವೇಕವನ್ನು ಪಡೆಯುವುದಕ್ಕಾಗಿ ಮಾಡಬೇಕಿದೆ. ಇದನ್ನು ಹೇಳುವಾಗ ಸಂಗ್ರಹ ಮಾಡುವವರೊಬ್ಬರು ವಿಶ್ಲೇಷಣೆ ಮತ್ತು ವ್ಯಾಖ್ಯಾನ ಮಾಡುವವರು ಮತ್ತೊಬ್ಬರು ಎಂಬ ಶ್ರೇಣೀಕೃತ ಬೌದ್ಧಿಕ ಶ್ರಮವಿಭಜನೆ ತೊಲಗಿ, ಅವೆರಡೂ ಏಕೀಭವಿಸುವುದು ಸಾಧ್ಯವಾಗಬೇಕು. ಜನರೊಟ್ಟಿಗೆ ಕುಳಿತು ಆಕರವನ್ನು ಪಡೆಯುವಾಗಲೇ ಅದನ್ನು ವಿಶ್ಲೇಷಿಸಲು ಬೇಕಾದ ಚೌಕಟ್ಟು ಮತ್ತು ಚಿಂತನೆ ಕೂಡ ಹುಟ್ಟುತ್ತಿರುತ್ತದೆ.
ಅರುಣ್:ಈಗ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಆರಂಭವಾಗಿದೆ ಸಂಸ್ಕೃತಿ ಚಿಂತಕರಾಗಿ ನೀವು ಜಾನಪದ ವಿಶ್ವವಿದ್ಯಾಲಯದ ಮೊದಲ ಆದ್ಯತೆ ಏನಾಗಬೇಕೆಂದು ಬಯಸುತ್ತೀರಿ? ನಿಮ್ಮ ಕನಸಿನ ಜಾನಪದ ವಿವಿ ಹೇಗಿರಬೇಕು?

ರಹಮತ್ ತರೀಕೆರೆ: ನನಗೆ ತಕ್ಷಣಕ್ಕೆ ಅನಿಸುವಂತೆ, ಅದೊಂದು ಪುಟ್ಟ ಸಂಶೋಧನ ಕೇಂದ್ರವಾಗಬೇಕು. ಅದರೊಳಗೆ ಕರ್ನಾಟಕದಲ್ಲಿ ಜೀವಚಿತವಾಗಿ ಚಿಂತನೆ ಮಾಡಬಲ್ಲ ಕರ್ನಾಟಕದ ಎಲ್ಲ ಭಾಗಗಳಿಂದ ಬಂದ ತರುಣ ಸಂಶೋಧಕರ ಪಡೆಯೊಂದು ಕೆಲಸ ಮಾಡುವಂತಿರಬೇಕು. ಸಂಶೋಧನೆಗೆ ಪೂರಕವಾಗಿ ಎಂಫಿಲ್ ಪಿಎಚ್‌ಡಿ ಡಿಲಿಟ್ ಕೋರ್ಸುಗಳನ್ನು ನಡೆಸಬಹುದು. ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುವವರಿಗಿಂತ, ತಾವಿರುವ ಸ್ಥಳಗಳಿಂದಲೇ ವಿಶ್ವವಿದ್ಯಾಲಯಕ್ಕಾಗಿ ಸಂಶೋಧನೆ ಮಾಡುವವರು ಹೆಚ್ಚಾಗಬೇಕು. ವಿಶ್ವವಿದ್ಯಾಲಯ ಅದಕ್ಕೊಂದು ವೇದಿಕೆಯಾಗಬೇಕು. ಕನ್ನಡದಲ್ಲಿ ಕವಿತೆ ಕತೆ ಬರೆಯುವ ಬಹಳ ತರುಣರಿದ್ದಾರೆ. ಸಂಶೋಧನೆ ಮಾಡುವವರು ಕಡಿಮೆಯಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬಂದಿರುವ ನೆಪದಲ್ಲಿ ಸಂಶೋಧನೆಗೆ ಹೆಚ್ಚು ಅವಕಾಶಗಳು ಕಲ್ಪಿತವಾಗುತ್ತಿವೆ. ಇಂತಹ ಹೊತ್ತಲ್ಲಿ ಈ ವಿದ್ವತ್ ಬರ ಬಂದಿದೆ. ಈ ಪರಿಸ್ಥಿತಿಯನ್ನು ನಾವೆಲ್ಲ ಸೇರಿ ಬದಲಾಯಿಸಬೇಕು. ಬದಲಾಯಿಸಬಹುದು ಕೂಡ. ಕರ್ನಾಟಕದ ಬೇರೆಬೇರೆ ಭಾಗದಲ್ಲಿರುವ ಹೊಸ ಪ್ರತಿಭೆಗಳನ್ನು ಆರಿಸಿ, ಅವಕ್ಕೆ ಹೊಸ ಅಧ್ಯಯನ ವಿಧಾನಗಳ, ಹೊಸ ಜನರೊಡನಾಟದ ತರಬೇತಿ ಕೊಡುವುದು ಸಾಧ್ಯವಿದೆ.

ಅರುಣ್:ಈಗ ಸಾಂಸ್ಕೃತಿಕ ಅಧ್ಯಯನಗಳಿಗೆ ಪ್ರವೇಶ ಪಡೆಯುವ ಯುವ ಚಿಂತಕರಿಗೆ ಯಾವ ಬಗೆಯ ಸಿದ್ದತೆಗಳ ಅಗತ್ಯವಿದೆ?

ರಹಮತ್ ತರೀಕೆರೆ: ಅಧ್ಯಯನ ಮತ್ತು ತಿರುಗಾಟ-ಇದೊಂದು ಜೋಡಿ ಪರಿಕಲ್ಪನೆ. ಅಧ್ಯಯನ ಮತ್ತು ಚಿಂತನೆಯಿಲ್ಲದ ತಿರುಗಾಟ ಗೊಡ್ಡಾಗುತ್ತದೆ. ತಿರುಗಾಟ ಮತ್ತು ಜನರ ಒಡನಾಟವಿಲ್ಲದ ಅಧ್ಯಯನಕ್ಕೆ ಬೇಗನೇ ಮಂಕುಹಿಡಿಯುತ್ತದೆ. ಕನ್ನಡದಲ್ಲಿ ಎಷ್ಟೊಂದು ಬಗೆಯ ತಿಳುವಳಿಕೆ ಸೃಷ್ಟಿಯಾಗುತ್ತ್ತಿದೆ? ಅದನ್ನು ವಶಪಡಿಸಿಕೊಳ್ಳುವುದು ಮತ್ತು ಅದರ ಜತೆಗೆ ವಾಗ್ವಾದ ಆರಂಭಿಸುವುದು ನಮ್ಮ ಯುವಕರಿಗೆ ಸಾಧ್ಯವಾಗಬೇಕು. ಬೌದ್ಧಿಕವಾದ ಆರೋಗ್ಯಕರವಾದ ಜಗಳವಿಲ್ಲದೆ, ಪಿತ್ರಾರ್ಜಿತ ಆಸ್ತಿಯಂತೆ ಪರಂಪರೆಯ ತಿಳುವಳಿಕೆಯನ್ನು ಪಡೆದುಕೊಂಡರೆ, ಅದು ಕಟ್ಟಿಕೊಟ್ಟ ಬುತ್ತಿಯಂತೆ. ಆದರೆ ಅದರ ಜತೆ ವಿಮರ್ಶಾತ್ಮಕ ಒಟನಾಟ ಮಾಡುತ್ತಿದ್ದಂತೆ, ತಿಳುವಳಿಕೆಗೆ ನಾವೂ ಸೇರಿಸುವುದಿದೆ ಎಂದು ಹೊಳೆಯತೊಡಗುತ್ತದೆ. ಇಂತಹ ಕಸುವನ್ನು ಕೆಲವಾದರೂ ಯುವಕರು ತೋರುತ್ತಿದ್ದಾರೆ ಎನ್ನುವುದು ನೆಮ್ಮದಿಯ ಸಂಗತಿ.

The Ballad Of BS Yeddyurappa - A Poem

Yeddy saw the Iron Ore Ore
He stole it, became a Chor Chor
Sold it, the $$ started to Pour Pour
He made many a Crore Crore

He wanted More More
Became an Iron Whore Whore
The Governor started to Bore Bore
Yeddy attacked with a Gore Gore


There was Blood Blood
Of Allegations there was a Flood Flood
On Yeddy there was thrown Mud Mud
Plans to remove him were a Dud Dud

He sang I am Dabangg,Hud Hud
I am the Stud Stud
Everything is Fine Fine
The Iron is Mine Mine

There was a No Confidence Motion
For that money was the Lotion
The MLA’s were Bought Bought
No one could be Caught Caught

The Congress tried to Scream Scream
To make Yeddy resign was their Dream Dream
They wanted him to fall on his face Flat Flat
They didn’t remember that their Chavan gulped the Adarsh Flat Flat


Chavan and Yeddy
To resign none was Ready
Yeddy depended on the Brothers Reddy
To keep his Chief Ministership very very Steady

Then came along Justice Hegde
That’s what began Yeddy’s bad Day Day
He screamed “ Help,Mayday,Mayday”
Not being CM anymore meant Canceling Payday

That’s what was written in the Lokayukta Report Report
Yeddy didn’t dare go to Court Court
In Bangalore he wanted to hold Fort Fort

The Media started to Spout Spout
In front of Gadkari, Yeddy decided to show his Clout Clout

He repeated the same Line Line
“I will not Resign Resign”

Finally the time Came Came
For Yeddy things wouldn’t be the Same Same
There was a lot of Drama Drama
Yeddy went to the Temple and shouted “Rama,Rama”


Neither Rama nor Krishna heard his Cry Cry
All Yeddy could do was Try Try
Yeddy’s Bheja was getting Fry Fry
His options were getting Dry Dry

Yeddy started to Yell Yell
Losing the chair was Hell Hell
But the time had Come Come
Yeddy in despair needed the Rum Rum


There was no Choice Choice
No one heard his Voice Voice
All his rants were just Noise Noise

As he waved the ‘V’ Sign Sign
All he could do was Resign ResignLater Yeddy came and met Me
He asked me Sadly Sadly
Why he was forced to resign so Badly Badly?

“You fool” I Said Said
“Get this into your Head Head”

It was not Kumaraswamy who made you Resign


It was not the Reddy Brothers who made you Resign
It was not the Congress who made you Resign
It was not the Governor who made you Resign
It was not the BJP high command that made you Resign

Heck,it wasn’t even JUSTICE HEDGE who made you Resign

The only one who made YOU resign was YOU!!

You shouldn’t have stolen the Ore
Instead You kept saying “Yeh Dil Maange More”

MORE ORE MORE ORE
NOW CHIEF MINISTER NO MORE

You want to blame someone for losing Your Chair?
Look no further than the one in the mirror You Stare.
ಗದ್ದಲದ ನಡುವೆ ಮರೆಯಬಾರದ ನೋಟಯುರೋಪ್ ತೀವ್ರವಾದದ ವಿರುದ್ಧ ಕಾರ್ಯಾಚರಿಸಲಿ


ಓಸ್ಲೊದ ಎಲ್ಲ ಜನರಂತೆ ಜರ್ಝರಿತಗೊಂಡ ಬೀದಿಗಳಲ್ಲಿ ಮತ್ತು ಸೋಟಗೊಂಡ ಬೀದಿಗಳಲ್ಲಿ ನಾನು ನಡೆದಾಡಿದ್ದೇನೆ. ಯುವ ರಾಜಕೀಯ ಕಾರ್ಯಕರ್ತರು ಹತ್ಯೆಗೀಡಾದ ದ್ವೀಪದಲ್ಲಿ ಕಾಲ ಕಳೆದಿದ್ದೇನೆ. ನನ್ನ ದೇಶದ ಭಯ ಮತ್ತು ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ. ಈ ಹಿಂಸಾ ಚಾರ ಉದ್ದೇಶರಹಿತವಲ್ಲ. ಈಗಿನ ಪ್ರಶ್ನೆಯೆಂ ದರೆ, ಇದು ಯಾಕೆ ಹೀಗಾಯಿತು? ನಾರ್ವೆಯ ಭಯೋತ್ಪಾದನೆ ಮುಸ್ಲಿಂ ಉಗ್ರಗಾಮಿಗಳಿಂದ ಸಂಭವಿಸಲಿಲ್ಲ. ಅದು ಎಡ ಪಂಥೀಯ ತೀವ್ರವಾದಿಗಳಿಂದಲೂ ಸಂಭವಿ ಸಿಲ್ಲ.ಆದಾಗ್ಯೂ,ಈ ಎರಡು ಗುಂಪುಗಳು ನಮ್ಮ ಜೀವನ ವಿಧಾನಕ್ಕೆ ಎದುರಾಗಿರುವ ‘ಆಂತರಿಕ ಬೆದರಿಕೆ’ ಎಂಬುದಾಗಿ ಪದೇ ಪದೇ ಆರೋಪಿಸಲಾಗುತ್ತಿದೆ. ಜುಲೈ ೨೨ರವರೆಗೆ ನಡೆದ ಸ್ಫೋಟಗಳು ಹಾಗೂ ಅಂದು ಮಧ್ಯಾಹ್ನದ ಹೊತ್ತಿನಲ್ಲಿ ಆ ಭಯಾನಕ ಗಂಟೆಗಳಲ್ಲಿ ದೇಶವನ್ನು ಬೆಚ್ಚಿ ಬೀಳಿಸಿದ ಆ ಸೋಟವೂ ಬಂದದ್ದು ಬಲಪಂಥೀಯ ತೀವ್ರವಾದ ದಿಂದ.

ದಶಕಗಳಿಂದ ಈ ದೇಶದಲ್ಲಿ ನಡೆದ ರಾಜಕೀಯ ಹಿಂಸಾಚಾರಗಳು ಬಹುತೇಕ ನವ- ನಾಝಿಗಳ ಹಾಗೂ ಇತರ ಜನಾಂಗೀಯವಾದಿ ಗುಂಪುಗಳ ಕೊಡುಗೆಯಾಗಿದ್ದವು. ೧೯೭೦ರ ದಶಕದಲ್ಲಿ ಅವರು ಎಡಪಂಥೀಯ ಪುಸ್ತಕದಂಗಡಿಗಳನ್ನು ಉಡಾಯಿಸಿದರು ಹಾಗೂ ಮೇ ದಿನದ ಮೆರವಣಿಗೆಯಲ್ಲಿ ಬಾಂಬ್ ಸಿಡಿಸಿದರು. ೧೯೮೦ರ ದಶಕದಲ್ಲಿ ಸಂಘ ಟನೆಗೆ ದ್ರೋಹ ಬಗೆದರೆಂಬ ಕಾರಣಕ್ಕೆ ಇಬ್ಬರು ನವ ನಾಝಿಗಳನ್ನು ಹತ್ಯೆ ಮಾಡಲಾಯಿತು.

ಕಳೆದ ಎರಡು ದಶಕ ಗಳಲ್ಲಿ ಜನಾಂಗೀಯ ದಾಳಿಗಳಿಂದ ಇಬ್ಬರು ಬಿಳಿಯೇತರ ನಾರ್ವೆ ಬಾಲ ಕರು ಸತ್ತಿದ್ದಾರೆ. ೧೯೭೩ರಲ್ಲಿ ಇಸ್ರೇಲ್ ಭದ್ರತಾ ಪಡೆ ‘ವೊಸಾದ್’ ಲಿಲ್ ಹ್ಯಾಮರ್‌ನಲ್ಲಿ ಅಮಾಯಕ ವ್ಯಕ್ತಿಯೊಬ್ಬ ನನ್ನು ಬೆನ್ನತ್ತಿ ಕೊಂದ ಬಳಿಕ ಯಾವುದೇ ವಿದೇಶಿ ಗುಂಪು ನಾರ್ವೆಯ ನೆಲದಲ್ಲಿ ಜನರನ್ನು ಕೊಂದಿಲ್ಲ ಅಥವಾ ಗಾಯ ಗೊಳಿಸಿಲ್ಲ.ಈ ಇತಿಹಾಸ ನಮ್ಮ ಮುಂದಿದ್ದರೂ ನಮ್ಮ ಮೇಲೆ ಭಯೋತ್ಪಾದನೆ ದಾಳಿ ಮಾಡಿದಾಗ ನಾವು ಕೂಡಲೇ ಸಂಶಯ ಪಟ್ಟಿದ್ದು ಇಸ್ಲಾಮಿಕ್ ಜಗತ್ತಿನ ಬಗ್ಗೆ. ಅದು ಜಿಹಾದಿಗಳು. ಅವರೇ ಆಗಿರಬೇಕು ಎಂದು ನಾವು ಮಾತನಾಡಿಕೊಂಡೆವು. ಅದು ನಾರ್ವೆಯ ಮೇಲೆ ಹಾಗೂ ನಮ್ಮ ಜೀವನ ಶೈಲಿಯ ಮೇಲೆ ನಡೆದ ದಾಳಿ ಎಂಬುದಾಗಿ ನಾವು ಪರಿಗಣಿಸಿದೆವು.

ಸ್ಫೋಟದ ಸುದ್ದಿ ಹರಡಿದಂತೆ ಓಸ್ಲೊದಲ್ಲಿ ಹಿಜಾಬ್ ಧರಿಸಿದ ಯುವತಿಯರು ಮತ್ತು ಅರಬ್ಬರಂತೆ ಕಾಣುವ ಗಂಡಸರಿಗೆ ಕಿರುಕುಳ ನೀಡಲಾಯಿತು.ಒಂದು ಸಣ್ಣ ಅಚ್ಚರಿ. ಭಯೋತ್ಪಾದನೆ ಪೂರ್ವದಿಂದ ಬರುತ್ತದೆ ಎಂದು ಹತ್ತು ವರ್ಷಗಳಿಂದ ನಮಗೆ ಹೇಳಲಾಗುತ್ತಿತ್ತು. ಅರಬ್ಬರು ಶಂಕಿತರು ಹಾಗೂ ಎಲ್ಲ ಮುಸ್ಲಿಮರು ಕಳಂಕಿತರು ಎಂದು ಹೇಳಲಾಗುತ್ತಿತ್ತು. ವಿಮಾನ ನಿಲ್ದಾಣದ ಖಾಸಗಿ ಕೋಣೆಗಳಲ್ಲಿ ಬಿಳಿಯೇತರ ವ್ಯಕ್ತಿಗಳನ್ನು ತಪಾಸಣೆಗೆ ಗುರಿಪಡಿಸುತ್ತಿದ್ದುದನ್ನು ನಾವು ನಿರಂತರ ನೋಡಿದ್ದೇವೆ. “ನಮ್ಮ” ತಾಳ್ಮೆಯ ಮಿತಿಯ ಬಗ್ಗೆ ನಾವು ನಿರಂತರ ಚರ್ಚೆ ಮಾಡಿದ್ದೇವೆ. ಇಸ್ಲಾಮಿಕ್ ಜಗತ್ತು ನಮಗೆ “ಇತರ” ಆಗಿ ಹೋದಂತೆಯೇ, “ನಮ್ಮ” ಮತ್ತು “ಅವರ” ನಡುವಿನ ವ್ಯತ್ಯಾಸ ನಾಗರಿಕರನ್ನು ಕ್ರೂರವಾಗಿ ಕೊಲೆ ಮಾಡುವ ಸಾಮರ್ಥ್ಯ ಎಂಬ ನಿರ್ಧಾರಕ್ಕೆ ಬಂದಿದ್ದೇವೆ.

ಪ್ರತಿಯೊಬ್ಬರೂ ಅಲ್-ಖಾಯ್ದಾದತ್ತ ಯಾಕೆ ನೋಡುತ್ತಿದ್ದಾರೆ ಎನ್ನುವುದಕ್ಕೆ ಇನ್ನೊಂದು ಕಾರಣವೂ ಇದೆ. ಅನಿಸ್ತಾನದ ಯುದ್ಧದಲ್ಲಿ ನಾರ್ವೆ ೧೦ ವರ್ಷಗಳಿಂದ ಭಾಗಿಯಾಗಿದೆ. ಕೆಲವು ಸಮಯ ನಾವು ಇರಾಕ್ ಯುದ್ಧದಲ್ಲಿ ಭಾಗವಹಿಸಿದ್ದೇವೆ. ನಾವು ಟ್ರಿಪೋಲಿಯ ಮೇಲೂ ಬಾಂಬ್‌ಗಳನ್ನು ಹಾಕಿದ್ದೇವೆ. ಬೇರೆ ಕಡೆಯ ಯುದ್ಧಗಳಲ್ಲಿ ಭಾಗವಹಿಸುವುದಕ್ಕೂ ಒಂದು ಮಿತಿಯಿದೆ. ಯಾಕೆಂದರೆ, ಒಂದು ದಿನ ನಮ್ಮ ಅಂಗಳಕ್ಕೆ ಯುದ್ಧ ಬಂದೇ ಬರುತ್ತದೆ.ಇದು ನಮಗೆ ಗೊತ್ತಿದ್ದರೂ ಭಯೋ ತ್ಪಾದಕ ದಾಳಿ ನಡೆದಾಗ ಯುದ್ಧದ ಬಗ್ಗೆ ಯಾವುದೇ ಉಲ್ಲೇಖವಿರುವುದಿಲ್ಲ. ನಮ್ಮ ವೊದಲ ಪ್ರತಿಕ್ರಿಯೆ- “ಅದು ಅವರೇ ಆಗಿರಬೇಕು”- ಯಾವತ್ತೂ ವಿವೇಚನಾರಹಿತವಾಗಿರುತ್ತದೆ.

ಇದು ನನ್ನ ಅನುಭವಕ್ಕೇ ಬಂದಿದೆ. ನಾವು ವಿದೇಶಕ್ಕೆ ತೆಗೆದು ಕೊಂಡು ಹೋದ ಯುದ್ಧ ನಮ್ಮ ಅಂಗಳಕ್ಕೇ ಬಂದಿದೆ ಎಂದು ನಾನು ಭಯಪಟ್ಟಿದ್ದೇನೆ. ಹಾಗಾದರೆ ಮುಂದೇನು? ನಮ್ಮ ಸಮಾಜಕ್ಕೆ ಏನಾಗುವುದು? ನಮ್ಮ ಸಹಿಷ್ಣುತೆಗೆ, ಸಾರ್ವಜನಿ ಕ ಚರ್ಚೆಗೆ, ಹಾಗೂ ಎಲ್ಲಕ್ಕಿಂತಲೂ ಹೆಚ್ಚು ಇಲ್ಲಿ ನೆಲೆಯೂರಿರುವ ವಲಸಿಗರಿಗೆ ಹಾಗೂ ನಾರ್ವೆ ಯಲ್ಲಿ ಹುಟ್ಟಿದ ಅವರ ಮಕ್ಕಳಿಗೆ ಏನಾಗುವುದು?ಆದರೆ, ಅದು ಹಾಗಲ್ಲ. ಹೃದಯದಲ್ಲಿನ ಕರಾಳತೆ ನಮ್ಮಲ್ಲಿ ಆಳವಾಗಿ ಬೇರುಬಿಟ್ಟಿದೆ. ಬಾಂಬ್ ಸೋಟಗಳನ್ನು ನಡೆಸಿದ ಭಯೋತ್ಪಾದಕ ನಾರ್ವೆಯ ಬಿಳಿಯ ಪುರುಷ; ಮುಸ್ಲಿಮ್ ಅಲ್ಲ, ಮುಸ್ಲಿಂ ದ್ವೇಷಿ.

ಈ ಬೆಳವಣಿಗೆ ಹೊರಬೀಳುತ್ತಿದ್ದಂತೆಯೇ, ಈ ಕೃತ್ಯವು ಹುಚ್ಚನೊಬ್ಬನ ಕೃತ್ಯ ಎಂಬುದಾಗಿ ಚರ್ಚಿತವಾಯಿತು ಹಾಗೂ ಆ ದಾಳಿ ನಮ್ಮ ಸಮಾಜದ ಮೇಲೆ ನಡೆದ ದಾಳಿ ಎಂಬ ರೀತಿ ಯಲ್ಲಿ ನಡೆಯುತ್ತಿದ್ದ ಚರ್ಚೆ ನಿಂತು ಹೋಯಿ ತು. ಮಾತಿನ ಧಾಟಿ ಬದಲಾಯಿತು ಹಾಗೂ ಪತ್ರಿಕೆಗಳು ತಮ್ಮ ಗಮನವನ್ನು ಬೇರೆಡೆಗೆ ಹರಿಸಿದವು. ಈಗ ಯಾರೂ ಯುದ್ಧದ ಬಗ್ಗೆ ಮಾತನಾ ಡುತ್ತಿಲ್ಲ. ಈಗ ‘ಭಯೋತ್ಪಾದಕ’ ಎಂಬ ಪದ ಬಳಸುವಾಗ ಅದು ಏಕವಚನವಾಗುತ್ತದೆ, ಬಹು ವಚನವಲ್ಲ. ಇದು ಒಂದು ಗುಂಪು ಮಾಡಿದ ಕೃತ್ಯ ಎನ್ನುವುದಕ್ಕೆ ಬದಲಾಗಿ ಓರ್ವ ವ್ಯಕ್ತಿ ಮಾಡಿದ ಕೃತ್ಯವೆಂಬಂತೆ ಬಿಂಬಿಸಲಾಗುತ್ತಿದೆ. ಈ ಕೃತ್ಯ ಅಧಿಕೃತವಾಗಿ ರಾಷ್ಟ್ರೀಯ ದುರಂತವಾಗಿದೆ.

ಒಂದು ವೇಳೆ, ಈ ಕೃತ್ಯವನ್ನು ಇಸ್ಲಾಮಿಕ್ ಹಿನ್ನೆಲೆ ಹೊಂದಿದ ಮಾನಸಿಕ ಸ್ಥಿಮಿತ ಕಳೆದು ಕೊಂಡ ವ್ಯಕ್ತಿಯೊಬ್ಬ ಮಾಡಿದ್ದರೆ ಪರಿಸ್ಥಿತಿ ಹೀಗೆಯೇ ಇರುತ್ತಿತ್ತೆ? ಹಂತಕ ಮಾನಸಿಕ ರೋಗಿ ಎಂಬುದಾಗಿ ನಾನು ಭಾವಿಸುತ್ತೇನೆ. ದ್ವೀಪವೊಂದರಲ್ಲಿ ಒಂದು ಗಂಟೆ ಕಾಲ ಹದಿ ಹರೆಯದವರನ್ನು ಬೇಟೆಯಾಡಿ ಕೊಲ್ಲುತ್ತಾನೆಂದರೆ ಆತ ಎಲ್ಲ ವಿವೇಚನೆಗಳನ್ನು ಕಳೆದುಕೊಂಡಿದ್ದಾನೆ ಎಂದೇ ಅರ್ಥ. ಆದರೆ, ೯/೧೧ ಅಥವಾ ಲಂಡನ್‌ನಲ್ಲಿ ನಡೆದ ಭೂಗತ ಬಾಂಬ್ ಸೋಟದಂತೆಯೇ ಇದು ಕೂಡ ರಾಜಕೀಯ ಕಾರಣಕ್ಕಾಗಿ ನಡೆದ ಹುಚ್ಚಾಟ.

ಜನಾಂಗೀಯವಾದಿ ಗುಂಪುಗಳ ವೆಬ್ ಪುಟಗಳನ್ನು ಯಾರಾದರೂ ನೋಡಿದರೆ ಅಥ ವಾ ನಾರ್ವೆಯ ವೃತ್ತ ಪತ್ರಿಕೆಗಳ ಆನ್‌ಲೈನ್ ಚರ್ಚೆಗಳನ್ನು ಯಾರಾದರೂ ನೋಡಿದರೆ ಇಸ್ಲಾಮ್ ಕುರಿತ ಹೆದರಿಕೆಯನ್ನು ಯಾವ ರೀತಿಯಲ್ಲಿ ಹರಡಲಾಗುತ್ತಿದೆ ಎಂಬುದನ್ನು ನೋಡಬಹುದು. ಚರ್ಚೆಗಳ ಅನಾಮಿಕ ಲೇಖ ಕರು ಜನಾಂಗೀಯತೆ ವಿರೋಧಿ ಉದಾರವಾದಿಗಳನ್ನು ಮತ್ತು ಎಡಪಂಥೀಯರನ್ನು ಕುಟುಕು ವುದನ್ನು ಇಲ್ಲಿ ಧಾರಾಳವಾಗಿ ಗಮನಿಸಬಹುದು.ಜುಲೈ ೨೨ರ ಉಗ್ರಗಾಮಿ ಇಂಥ ಚರ್ಚೆ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನು.

ಆತ ೨೦೦೬ರವರೆಗೆ ನಾರ್ವೆಯ ಅತ್ಯಂತ ದೊಡ್ಡ ರಾಜಕೀಯ ಪಕ್ಷಗಳ ಪೈಕಿ ಒಂದಾಗಿರುವ ಪೋಪ್ಯುಲಿಸ್ಟ್ ರೈಟ್ ಪಾರ್ಟಿಯ ಸಕ್ರಿಯ ಕಾರ್ಯಕರ್ತನಾಗಿದ್ದನು. ಬಳಿಕ ಆತ ಪಕ್ಷಗಳನ್ನು ತೊರೆದು ಇಂಟರ್‌ನೆಟ್ ಮುಖಾಂತರ ಇಸ್ಲಾಮ್ ವಿರೋಧಿ ಗುಂಪುಗಳ ಸಮುದಾಯದಕ್ಕೆ ತನ್ನ ಸಿದ್ಧಾಂತಗಳನ್ನು ಪ್ರಚಾರಪಡಿಸುವ ಕೆಲಸದಲ್ಲಿ ತೊಡಗಿಕೊಂಡನು.ಬಾಂಬ್ ಸೋಟಗಳು ಅಂತಾ ರಾಷ್ಟ್ರೀಯ ಇಸ್ಲಾಮ್‌ವಾದಿ ಭಯೋತ್ಪಾದನೆಯ ಕೃತ್ಯ ಎಂದು ವಿಶ್ವ ನಂಬಿದ ಸಮಯದಲ್ಲಿ, ನಾರ್ವೆಯ ಹೋರಾಟ ದಲ್ಲಿ ತಾವು ಬೆಂಬಲವಾಗಿ ನಿಂತಿದ್ದೇವೆ ಎಂದು ಒಬಾಮ, ಕ್ಯಾಮರೂನ್ ಸೇರಿದಂತೆ ವಿಶ್ವದ ನಾಯಕರು ಹೇಳಿಕೆ ನೀಡಿದರು.

ಹಾಗಾದರೆ, ಈಗ ಅದು ಯಾವ ಹೋರಾಟ? ಎಲ್ಲ ಪಾಶ್ಚಾತ್ಯ ನಾಯಕರು ತಮ್ಮ ದೇಶಗಳ ಗಡಿಗಳೊಳಗೆ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರು ಇನ್ನು ತಮ್ಮದೇ ದೇಶದಲ್ಲಿರುವ ಬಲಪಂಥೀಯ ಉಗ್ರವಾದದ ವಿರುದ್ಧ ಹೋರಾಟ ನಡೆಸುವರೇ? ಇಸ್ಲಾಮ್ ಕುರಿತ ಭಯ ಮತ್ತು ಜನಾಂಗೀಯತೆ ವಿರುದ್ಧ ಹೋರಾಟ ನಡೆಸುವರೇ?ಸ್ಪೋಟಗಳು ನಡೆದ ಕೆಲವೇ ಗಂಟೆಗಳಲ್ಲಿ ಹೇಳಿಕೆ ನೀಡಿದ ನಾರ್ವೆಯ ಪ್ರಧಾನಿ ಜೆನ್ಸ್ ಸ್ಟೋಲ್ಟನ್ ಬರ್ಗ್, ದಾಳಿಗೆ ನಮ್ಮ ಉತ್ತರ ಹೆಚ್ಚು ಪ್ರಜಾ ಸತ್ತಾತ್ಮಕವಾಗಿರಬೇಕು ಹಾಗೂ ಮುಕ್ತವಾಗಿರ ಬೇಕು ಎಂದು ಹೇಳಿದರು. ೯/೧೧ರ ದಾಳಿ ನಡೆದ ಬಳಿಕ ಜಾರ್ಜ್ ಬುಶ್ ನೀಡಿದ ಹೇಳಿ ಕೆಗಿಂತ ನಮ್ಮ ಪ್ರಧಾನಿಯ ಹೇಳಿಕೆಯಲ್ಲಿ ಪ್ರಜ್ಞಾವಂತಿಕೆಯಿದೆ. ಈ ಬಗ್ಗೆ ನಾವು ಹೆಮ್ಮೆ ಪಟ್ಟು ಕೊಳ್ಳಬಹುದು.

ಆದರೆ, ದ್ವಿತೀಯ ಮಹಾಯುದ್ಧದ ಬಳಿಕ ನಾರ್ವೆ ಅನುಭವಿಸಿದ ಅತ್ಯಂತ ದೊಡ್ಡ ದುರಂತದ ಹಿನ್ನೆಲೆಯಲ್ಲಿ ನನ್ನಲ್ಲಿ ಕೆಲವು ಸಲಹೆಗಳಿವೆ. ಬೆಳೆಯುತ್ತಿರುವ ಅಸಹಿಷ್ಣುತೆ, ಜನಾಂಗೀಯವಾದ ಮತ್ತು ದ್ವೇಷಕ್ಕೆ ನಿಯಂತ್ರಣ ಹೇರಲು ನಾವು ಈ ಘಟನೆ ಯನ್ನು ಉಪಯೋಗಿಸಿಕೊಳ್ಳಬೇಕು. ಕೇವಲ ನಾರ್ವೆ ಅಥವಾ ಸ್ಕಾಂಡಿನೇವಿಯಾದಲ್ಲಿ ಮಾತ್ರವಲ್ಲ, ಇಡೀ ಯುರೋಪ್‌ನಲ್ಲಿ.(ಅಸ್ಲಾಕ್ ಸಿರ ಮಿಹ್ರ್ ಓಸ್ಲೊದ ಹೌಸ್ ಆಫ್‌ ಲಿಟರೇಚರ್‌ನ ನಿರ್ದೇಶಕರಾಗಿದ್ದಾರೆ. ಅವರು ಬರಹಗಾರ ಮತ್ತು ರೆಡ್ ಎಲೆ ಕ್ಟೋರಲ್ ಅಲಯನ್ಸ್‌ನ ಮಾಜಿ ನಾಯಕರಾಗಿದ್ದಾರೆ.)

ಅಸ್ಲಾಕ್ ಸಿರ ಮಿಹ್ರ್


ಕಣ್ಣು ಮುಚ್ಚಿಕೊಳ್ಳುತ್ತಿರುವ ಕನ್ನಡ ಲೇಖಕರು!!- ಪರಶಿವಧನಗೂರು


ದಲಿತಕವಿ ಸಿದ್ಧಲಿಂಗಯ್ಯನವರ ಬದಲಾದ ಮನಸ್ಥಿತಿಯ ಮಾತುಗಳಿಗೆ ನಾಡಿನ ಎಲ್ಲಾ ಕಡೆಯಿಂದ ವಿವಿಧ ರೀತಿಯ ಪ್ರತಿಕ್ರಿ ಯೆಗಳ ಸುರಿಮಳೆಯಾಗುತ್ತಿದೆ!. ಪ್ರತಿಕ್ರಿಯಿಸುತ್ತಿರುವವರೆಲ್ಲರೂ ಕೇವಲ ಸಿದ್ಧಲಿಂಗಯ್ಯ ಎಂಬ ವ್ಯಕ್ತಿಯ ಮಾತುಗಳನ್ನೇ ಹಿಡಿದುಕೊಂಡು ಜಗ್ಗಾಡುತ್ತ ಕನ್ನಡ ನೆಲದ ಲೇಖಕರ ಆಳದಲ್ಲಾಗುತ್ತಿರುವ ಪಲ್ಲಟಗಳ ಕಡೆ ಕಣ್ಣು ಹಾಯಿಸದೆ ತಪ್ಪಿಸಿಕೊಳ್ಳು ತ್ತಿರುವುದು ಬೇಸರದ ಸಂಗತಿ.ಏಕೆಂದರೆ ಪ್ರಗತಿಪರ, ವೈಚಾರಿಕ ಪ್ರಜ್ಞೆ ಇಟ್ಟುಕೊಂಡು ಬರೆಯುತ್ತಿದ್ದ ಹಲವಾರು ಲೇಖಕರು ಇಂದು ತಟಸ್ಥರಾಗಿದ್ದಾರೆ.ಬಂಡಾಯದ ಲೇಖಕರು ತಮ್ಮ ಮೊನಚು ಕಳೆದುಕೊಂಡು ಮೂಲೆ ಸೇರಿದ್ದಾರೆ.ಸಾಹಿತ್ಯ ವಲಯ ದಲ್ಲಿ ಯಾವ ಹೊಸ ತರದ ಸೃಜನಶೀಲ ಚಟುವಟಿಕೆಗಳು- ಹುಡುಕಾಟಗಳು ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಕಲೆ- ಸಂಗೀತಗಳು ಮಾರುಕಟ್ಟೆ ಸಂಸ್ಕೃತಿಯಲ್ಲಿ ಮಿಂದು ದಿಕ್ಕಾ ಪಾಲಾಗಿ ಉಳ್ಳವರಿಗೆ ಬಹು ಪರಾಕು ಹೇಳುತ್ತ ಹಣವಂತರನ್ನು ರಂಜಿಸುತ್ತಿವೆ!.

ಜನರ ನೋವಿಗೆ ಮಿಡಿವ ಪ್ರಾಣಮಿತ್ರ ನಾಗಬೇಕಿದ್ದ ಕವಿ ಕಣ್ಣು ಮುಚ್ಚಿಕೊಳ್ಳುತ್ತಿರುವ ಎಲ್ಲಾ ಲಕ್ಷಣಗಳೂ ಈಗ ಗೋಚರ ವಾಗುತ್ತಿವೆ. ಆಳುವ ಸರಕಾರಗಳು ಹೇಳುವ ಪ್ರಗತಿಯ ನಾಟಕದ ಸ್ಲೋಗನ್‌ಗಳ ನ್ನಷ್ಟೇ ಕಿವಿಯಲ್ಲಿ ಕೇಳಿಸಿ ಕೊಂಡು ಆನಂದ ತುಂದಿಲರಾಗಿ ಕಣ್ಣುಮು ಚ್ಚಿಕೊಂಡು ನಡೆಯಲು ಪ್ರಯತ್ನಿಸುತ್ತಿರುವ ಈ ಹೊಸ ತಳಿಯ ಬರಹಗಾರರು ಹೊಸಬರೇನಲ್ಲ ವೆಂಬುದು ಮಾತ್ರ ಆತಂಕದ ವಿಚಾರವಾಗಿದೆ!. ಜಾಗತೀಕರಣವೆಂಬುದು ಇಲ್ಲಿನ ಆಳುವ ವರ್ಗದೊಡನೆ ಕಲೆತು ನಮ್ಮ ಕಲೆ, ಸಂಗೀತ, ಸಾಹಿತ್ಯದ ಮೇಲೆ ಎಸೆದಿರುವ ‘ಸಾಂಸ್ಕೃತಿಕ ಬಾಂಬ್’ನ ಪರಿಣಾಮ ಇಲ್ಲಿ ಪಲ್ಲಟಗಳು ಉಂಟಾಗುತ್ತಿವೆ.

ಜನಸಂಸ್ಕೃತಿಯ ವಿರೋಧಿಯಾದ ಬಂಡವಾಳಶಾಹಿಗಳ ಸಾಂಸ್ಕೃತಿಕ ಬಾಂಬಿನ ವಿಷ ಈಗ ನಮ್ಮ ನೆಲದ ಜೀವಪರ ಚಿಂತನೆಗಳನ್ನೇ ತಿರುಚಿಹಾಕಿ, ಕೊಳ್ಳುಬಾಕ ಸಂಸ್ಕೃತಿಯ ಮೌಲ್ಯಗಳನ್ನು ಎಲ್ಲರಲ್ಲೂ ಬಿತ್ತುತ್ತಿದೆ!. ಅದರ ಪರಿಣಾಮದಿಂದಲೇ ನಮ್ಮ ಬರಹಗಾರರ ಮಾತುಗಳಲ್ಲಿ ಬೇರೆಯದೆ ತೆರನಾದ ಸ್ವರ ಹೊರಡುತ್ತಿದೆ. ಅದಕ್ಕೆ ಮತ್ತೊಂದು ಉದಾಹರಣೆಯೆಂದರೆ 15-5-2011ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜ್ಞಾನಪೀಠ ಪುರಸ್ಕೃತ ಸಾಹಿತಿಗಳಾದ ಅನಂತ ಮೂರ್ತಿಯವರು ‘ಲೇಖಕರು ಎಡ- ಬಲ ಬಿಡಬೇಕು’ ಎಂಬ ವಿಚಿತ್ರವಾದ ವೈಯಕ್ತಿಕ ಸಲಹೆಯೊಂದನ್ನು ಸಾರ್ವಜನಿಕವಾಗಿ ಉಚಿತ ವಾಗಿ ನೀಡಿದ್ದಾರೆ!.

ಮುಂದುವರಿದು ಮಾತನಾಡುತ್ತಾ ‘‘ಇತ್ತೀಚೆಗೆ ನಡೆದ ಚುನಾವಣೆಯ ಪಲಿತಾಂಶದ ನಂತರ ಎಡ-ಬಲ ಪರಿಕಲ್ಪನೆ ಬದಲಾಗಿದೆ!. ಪಶ್ಚಿಮ ಬಂಗಾಳದಲ್ಲಿ ಟಾಟಾಗೆ ಭೂಮಿ ನೀಡಲು ಮುಂದಾದ ಎಡಪಂಥೀ ಯರು ಸೋತಿದ್ದಾರೆ! ಅದನ್ನು ವಿರೋಧಿಸಿದ ಮಮತಾ ಬ್ಯಾನರ್ಜಿ ಗೆದ್ದಿದ್ದಾಳೆ. ಹಾಗಾದರೆ ಬ್ಯಾನರ್ಜಿ ಬಲಪಂಥೀಯಳೇ? ಮೂಲದ್ರಾವಿಡರು ಎಂದು ಕೊಳ್ಳುವ ಕರುಣಾನಿಧಿ 2ಜಿ ಹಗರಣದಿಂದಾಗಿ ಸೋತಿದ್ದಾರೆ. ಮೈಸೂರು ಬ್ರಾಹ್ಮಣರಾದ ಜಯಲಲಿತಾ ಗೆದ್ದಿದ್ದಾರೆ! ಒಟ್ಟಾರೆ ದೇಶದಲ್ಲಿ ಎಡ-ಬಲದ ಭ್ರಮೆ ಬದಲಾಗಿದೆ.’’ ಎಂದು ಸಮಜಾಯಿಸಿ ನೀಡುತ್ತಾ ವಿಜ್ಞಾನದ ಮೂಲತತ್ವಗಳಿಗೇ ಸವಾಲು ಹಾಕುವ ರೀತಿ Positive-Negetiveಗಳೆಂಬುದು ಇಲ್ಲವೇ ಇಲ್ಲ, ಅದೆಲ್ಲಾ ಭ್ರಮೆ! ಎಂಬಂತೆ ಮಾತನಾಡಿದ್ದಾರೆ.

ಅವರ ದೃಷ್ಟಿ ಈ ಸಮಾಜದಲ್ಲಿ ಎಲ್ಲಾ ಸರಿ ಇದೆ, ಜನರನ್ನು ಶೋಷಿಸುವ ಪಂಥವೆಂಬುದು ಇಲ್ಲ! ಆ ಕಾರಣದಿಂದ ಜನಪರವಾದ ಮತ್ತೊಂದು ಪಂಥದ ಅವಶ್ಯಕತೆ ಈಗಿಲ್ಲ ಎಂಬಂತಿದೆ!. ಈ ದೇಶದಲ್ಲಿ ದುಡಿವ ಜನರ ಮೇಲೆ ಆಳುವ ವರ್ಗದಿಂದ ಎಷ್ಟೆಲ್ಲಾ ಶೋಷಣೆ ನಡೆಯುತ್ತಿದ್ದರೂ ಮಾನ್ಯ ಕವಿಗಳು ಪ್ಯಾಸಿಸ್ಟರ ರೀತಿ, ಆಡಳಿತಪಕ್ಷ ಇದ್ದಮೇಲೆ ವಿರೋಧ ಪಕ್ಷದ ಅವಶ್ಯಕತೆ ಇಲ್ಲ! ಆಡಳಿತ-ವಿರೋಧ ವೆಂಬ ಭ್ರಮೆಬೇಡ ಎಂಬರ್ಥದ ಮಾತು ಆಡುತ್ತಾ ಬಿನ್ನಾ ಭಿಪ್ರಾಯಕ್ಕೆ ಅವಕಾಶವಿಲ್ಲದ ಅಪ್ರಜಾತಾಂತ್ರಿಕ ಮಾತು ಗಳನ್ನು ಉದುರಿಸುತ್ತಾರೆಂದರೆ ಕನ್ನಡದ ಲೇಖಕರ ಕಣ್ಣುಗಳು ಮುಚ್ಚಿಕೊಳ್ಳುತ್ತಿವೆ ಎಂಬುದಕ್ಕೆ ಬೇರೆ ನಿದರ್ಶನ ಬೇಕೆ?.

ಅನಂತಮೂರ್ತಿಯವರ ಮಾತುಗಳಿಗೆ ರಾಜ್ಯದೆಲ್ಲೆಡೆ ಯಿಂದ ಒಳ್ಳೆಯ ಪ್ರತಿಕ್ರಿಯೆ-ಚರ್ಚೆಯನ್ನು ನಿರೀಕ್ಷಿಸಿದ್ದ ನನ್ನಂತಹವರಿಗೆ ಬೌದ್ಧಿಕವಾಗಿ ದಿವಾಳಿಯ ಹಾದಿ ಹಿಡಿದಿರುವ ಕನ್ನಡ ಲೇಖಕರ ಮೌನದಿಂದ ನಿರಾಶೆಯಾಗಿದ್ದು ಸುಳ್ಳಲ್ಲ.ಅದೇ ದಿನ ಮತ್ತೊಂದು ಕಾರ್ಯಕ್ರಮದಲ್ಲಿ ಮಾತ ನಾಡುತ್ತಾ ಮತ್ತೊಬ್ಬ ಬಂಡಾಯ ಬರಹಗಾರರಾದ ಚಂ(ಪಾ)ದ್ರಶೇಖರ ಪಾಟೀಲರು ‘‘ಪ್ರಜಾಪ್ರಭುತ್ವಕ್ಕೆ ಪರ್ಯಾಯವಿಲ್ಲ! ಏಕೆಂದರೆ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟರು ಪತನಗೊಂಡಿದ್ದಾರೆ!.’’ ಎಂದು ಷರಾ ಬರೆದಂತೆ ಹೇಳಿಕೆ ಕೊಟ್ಟಿದ್ದಾರೆ. ಜಾಗತೀಕರಣದ ಕಡೆ ಒಲವು ತೋರಿ ಕಮ್ಯೂನಿಷ್ಟರು ಭೂಸ್ವಾಧೀನ ಪ್ರಕ್ರಿಯೆಗೆ ಕೈಹಾಕಿದ್ದನ್ನು ನಾವೆಲ್ಲ ವಿರೋಧಿಸುತ್ತಲೇ ಈಗ ಗೆದ್ದಿರುವ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲೇ ಟಾಟಾದವರಿಗೆ, ಬಂಡವಾಳಶಾಹಿಗಳಿಗೆ ಭೂಮಿ ಕೊಡಲು ಮುಂದಾಗಿರುವುದನ್ನು ಗಂಭೀರವಾಗಿ ನೋಡಿ ಪ್ರತಿಕ್ರಿಯಿಸಬೇಕಿದೆ.

ಮತ್ತೊಬ್ಬ ಬರಹಗಾರರಾದ ಜಿ.ಕೆ.ಗೋವಿಂದರಾವ್ ರವರು ಅಣ್ಣಾ ಹಝಾರೆಯ ಭ್ರಷ್ಟಾಚಾರ ವಿರೋಧಿ ಹೋರಾಟದ ಹುಳುಕುಗಳ ಬಗ್ಗೆ ಪ್ರಸ್ತಾಪಿಸುತ್ತಾ ‘‘ಕೊನೆಗೆ ಪ್ರಜಾತಂತ್ರದಲ್ಲಿ ಎಲ್ಲವೂ ವಾಹನಗಳ ಲೈಸನ್ಸ್‌ನಿಂದ ಹಿಡಿದು ಪ್ರತಿಯೊಂದು ಕೂಡ ಬಹು ನಿಧಾನಗತಿಯ ಪ್ರಕ್ರಿಯೆಗಳು ಎಂದು ಮನದಟ್ಟು ಮಾಡಿಕೊಳ್ಳಬೇಕು!; ತಾಳ್ಮೆಯಿಂದ ಕಾಯುವುದನ್ನು ರೂಢಿಸಿಕೊಳ್ಳಬೇಕು!.’’ ಎಂದು ಮುಂದುವರಿದು ‘‘ಸಮಷ್ಟಿಯ, ಭವಿಷ್ಯದ ಪ್ರಜ್ಞೆಯನ್ನು ಒಳಗೊಂಡ ಕಲಾತ್ಮಕ ಸೃಷ್ಟಿಯ ದರ್ಶನ ಶಕ್ತಿ ಪಡೆದ ಚಳುವಳಿಗೆ ಮಾತ್ರ ನಮ್ಮ ಬೆಂಬಲ’’ ಎಂದಿದ್ದಾರೆ!. ತಮ್ಮ ಹೇಳಿಕೆಗಳಿಗೆ ತಾವೇ ಢಿಕ್ಕಿಹೊಡೆದುಕೊಂಡು ಜನರನ್ನು ದಾರಿತಪ್ಪಿಸುವ ಈ ಬರಹಗಾರರ ಪಾಂಡಿತ್ಯದ ಹೇಳಿಕೆಗಳು ಹೇಗಿವೆ ನೋಡಿ.

ಒಂದುಕಡೆ ಸಮಷ್ಟಿಯ, ಭವಿಷ್ಯದ ಪ್ರಜ್ಞೆಯನ್ನು ಒಳಗೊಂಡ ಕಲಾತ್ಮಕ ಸೃಷ್ಟಿಯ ದರ್ಶನಶಕ್ತಿ ಪಡೆಯುವಂತಹ ಚಳವಳಿಗಳ ಅವಶ್ಯಕತೆಗಳ ಮಾತನಾಡುತ್ತಾ ಮತ್ತೊಂದೆಡೆ ಸಮಷ್ಟಿಯ ಬದಲಾವಣೆಗೆ ತಾಳ್ಮೆಯಿಂದ ಕಾಯುವುದನ್ನು ರೂಢಿಸಿಕೊಳ್ಳಬೇಕೆಂದೂ ವಾಹನದ ಲೈಸನ್ಸ್‌ನಂತೆ ಪ್ರಜಾತಂತ್ರ ನಿಧಾನಗತಿಯಲ್ಲಿ ನಿಮ್ಮ ಬಳಿಗೆ ನಡೆದು ಬರುತ್ತದೆಂದು ಕಥೆ ಹೊಸೆಯುತ್ತಾ ಜನರನ್ನು ಹೊಸ ಸಾಧ್ಯತೆಗಳ ಹುಡುಕಾಟದ ಮಡಿಲಿಂದ ವಿಮುಖಗೊಳಿಸುತ್ತಾರೆ!. 60ವರ್ಷಗಳ ನಂತರವೂ ಒಂದು ಹೊಸ ಕಲಾತ್ಮಕ ಸೃಷ್ಟಿಯ ದರ್ಶನ ಪಡೆಯಲಾರದೆ ಒದ್ದಾಡುತ್ತಿರುವ ಎಷ್ಟೋ ಸೃಜನಶೀಲ ತುಂಡುಗಳು ಹಿಂದೂ ಸನಾತನ ಜಾತಿ ಅಸಮಾನತೆಗೊಂದು ಪರ್ಯಾಯ ಸಾಂಸ್ಕೃತಿಕ ರೂಪಕೊಡಲಾರದೆ ದಿವಾಳಿಯೆದ್ದಿದ್ದರೂ ನಮ್ಮಂತಹ ನವ ಯುವಬರಹಗಾರರಿಗೆ ದಿಕ್ಕುತೋರಲು ನಾಮುಂದು ತಾಮುಂದು ಎನ್ನುತ್ತಾ ಒಂಟಿಕಾಲಲ್ಲಿ ನಿಂತಿರುತ್ತಾರೆ!. ಹಾಸ್ಯಾಸ್ಪದ ಅನ್ನಿಸುತ್ತಿದೆ ಅಲ್ಲವೇ?

ಜಗತ್ತಿನ ಎಲ್ಲಾ ದುಡಿವ ಜನರ ವಿರುದ್ಧ ಸಂಚುರೂಪಿಸಿ ದರೋಡೆಗೆ ಸಿದ್ಧವಾಗಿರುವ ಬಂಡವಾಳಶಾಹಿ ಸಂಸ್ಕೃತಿಗೆ ಪರ್ಯಾಯವನ್ನು ಹುಡುಕಬೇಕಾದ ಸಂದರ್ಭದಲ್ಲಿ ಬರಹಗಾರರು, ಚಿಂತಕರು ಎನಿಸಿಕೊಂಡ ಜನ ಹೀಗೆ ಪರ್ಯಾಯವೇ ಬೇಡ!, ಎಡ-ಬಲ ಬಿಟ್ಟುಬಿಡೋಣ!, ಪ್ರಜಾತಂತ್ರ ವಾಹನದ ಲೈಸನ್ಸ್‌ನಂತೆ ನಿಧಾನಕ್ಕೆ ಬರುತ್ತೆ ಕಾಯುವುದನ್ನು ರೂಢಿಮಾಡಿಕೊಳ್ಳಿ!, ಬಂಡಾಯ ಸಾಹಿತ್ಯ ಈಗ ಅವಶ್ಯಕತೆ ಇಲ್ಲ ಎಂಬಂತೆ ಹಿಮ್ಮುಖ ಚಲನೆಯ ತಟಸ್ಥ ನಿಲುವಿನ ಸಿದ್ಧಾಂತಗಳನ್ನು ಪ್ರತಿಪಾದಿಸುವುದು ಕವಿಗಳು ಕಣ್ಣುಮುಚ್ಚಿಕೊಳ್ಳುತ್ತಿರುವ ಪ್ರಕ್ರಿಯೆಗೆ ಸಾಕ್ಷಿಯಾಗಿದೆ. ಆ ಲೆಕ್ಕದಲ್ಲಿ ಪ್ರಾಧಿಕಾರದ ಸಿದ್ಧಲಿಂಗಯ್ಯ ಮುಂದಿದ್ದಾರೆ ಅಷ್ಟೆ!.

ಗಂಡ ಭೇರುಂಡ ರೂಪದ ಶತ್ರು

- ಶಿವಸುಂದರ್

ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ಈ ದೇಶದ ದಮನಿತ ಮತ್ತು ದುಡಿಯುವ ಜನ ತೆಯ ಶತ್ರು ಎಂದು ಡಾ. ಅಂಬೇಡ್ಕರ್‌ರವರು 1927ರಲ್ಲೇ ಸ್ಪಷ್ಟವಾಗಿ ಘೋಷಿಸಿದ್ದರು. ಜಾಗತೀಕರಣದ ನೀತಿಗಳು ಈ ದೇಶವನ್ನು ಅದೇ ಹೆಸರಿನಲ್ಲಿ ಆಕ್ರಮಣ ಮಾಡಿ ಇಪ್ಪತ್ತು ವರ್ಷಗಳೇ ಕಳೆದಿರುವ ಈ ಸಂದರ್ಭದಲ್ಲಿ ಜಾಗತೀಕರಣವೆಂದರೆ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಯ ಸಂಘಟಿತವಾದ ಹೊಸ ಸ್ವರೂಪದ ಆಕ್ರಮಣವೆಂದೇ ಹೇಳಬಹುದು. ಜಾಗತೀಕರಣ ದುಡಿಯುವ ಮತ್ತು ದಮನಿತ ಜನರ ಶತ್ರುವೇ ಎಂಬ ಪ್ರಶ್ನೆ ಇಂದು ಅಷ್ಟಾಗಿ ಉಳಿದಿಲ್ಲವಾದರೂ ಎಷ್ಟು ದೊಡ್ಡ ಶತ್ರು ಎಂಬ ಪ್ರಶ್ನೆ ಮಾತ್ರ ಉಳಿದೇ ಇರುವಂತೆ ಕಾಣುತ್ತಿದೆ. ಇತ್ತೀಚೆಗೆ ನ್ಯಾಷನಲ್ ಲಾ ಸ್ಕೂಲಿನಲ್ಲಿ ಜಾಗತೀ ಕರಣದ ಪರಿಣಾಮಗಳು ಮತ್ತು

ಸಾಮಾಜಿಕ ಚಳವಳಿಗಳು: ಕರ್ನಾಟಕದ ಅನುಭವ ಅವ ಲೋಕನ ಎಂಬ ಬಗ್ಗೆ ನಡೆದ ಎರಡು ದಿನಗಳ ವಿಚಾರ ಸಂಕಿರಣ ದಲ್ಲಿ ಈ ವಿಷಯ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುವಂತಿತ್ತು. ಒಟ್ಟು ಎರಡು ದಿನಗಳ ಆ ಚಿಂತನ ಮಂಥನದಲ್ಲಿ ಜಾಗತೀಕರ ಣದ ಪರಿಕಲ್ಪನೆಯ ಸುತ್ತ, ಅದರ ಅಪಾಯದ ಸುತ್ತ ಮತ್ತು ಅದನ್ನು ಎದುರಿಸಬೇಕಾದ ಮಾರ್ಗ ಮತ್ತು ಪರ್ಯಾ ಯಗಳ ಸುತ್ತ ಹಲವು ಬಗೆಯ ಚಿಂತನೆಗಳು ಚರ್ಚಿಸಲ್ಪಟ್ಟವು.

ವಿರೋಧಿಸುವ ಮಾರ್ಗ ಮತ್ತು ಪರ್ಯಾಯಗಳ ಬಗ್ಗೆ ಸಹಜವಾಗಿಯೇ ಹಲವು ಅಭಿಪ್ರಾಯಗಳು ಇರಲು ಸಾಧ್ಯ. ಆದರೆ ಜಾಗತೀಕರಣದ ಉದ್ದೇಶ ಮತ್ತು ಅದು ಭಾರತದ ಸಮಾಜದ ಮೇಲೆ ಮಾಡು ತ್ತಿರುವ ಪರಿಣಾಮಗಳ ಗಂಭೀರತೆಯ ಬಗ್ಗೆ ಕೆಲವು ಮೂಲಭೂತ ಸಂದೇಹಗಳು ಈಗಲೂ ಕೆಲವರಲ್ಲಿ ಉಳಿದಿರುವುದು ಮಾತ್ರ ಆಶ್ಚರ್ಯ ತರಿಸುವಂತಿತ್ತು. ಅದರಲ್ಲೂ ದಮನಿತ ಸಮುದಾಯದ ಮೇಲೆ ಜಾಗತೀಕರಣದ ಪ್ರಭಾವ ಮತ್ತು ಪರಿಣಾಮವನ್ನು ಎಷ್ಟು ತೀವ್ರವಾಗಿ ತೆಗೆದು ಕೊಳ್ಳಬೇಕು ಎಂಬುದು ಈಗಲೂ ದಮನಿತ ಸಮುದಾಯಗಳನ್ನು ಸಂಘಟಿಸುತ್ತಿರುವ ಕೆಲವು ಪ್ರಮುಖ ಸಂಘಟನೆಗಳಲ್ಲಿ ಮತ್ತು ಬುದ್ಧಿ ಜೀವಿಗಳಲ್ಲಿ ಪ್ರಶ್ನೆಯಾಗಿಯೇ ಉಳಿದುಕೊಂಡಿರುವುದನ್ನು ಈ ವಿಚಾರ ಸಂಕಿರಣ ಸ್ಪಷ್ಟ ಪಡಿಸುತ್ತಿತ್ತು.

ಜಾಗತೀಕರಣದ ರೂಪದಲ್ಲಿ ವ್ಯಕ್ತವಾಗುತ್ತಿರುವ ಬಂಡವಾಳಶಾಹಿಯ ಆಕ್ರಮಣ ಈ ದೇಶದ ಬ್ರಾಹ್ಮಣಶಾಯ ಜೊತೆ ಅನುಸಂಧಾನ ಮಾಡಿಕೊಂಡು ದಮನಿತರ ಬದುಕಿನ ಮೇಲೆ ದೊಡ್ಡ ರೂಪದ ಶತ್ರುಗಳಾಗಿ ಎರಗುತ್ತಿವೆ. ಈ ನೈಚ್ಯಾನು ಸಂಧಾನವೇ ಶತ್ರುವಿನ ಸ್ವರೂಪವನ್ನು ಮರೆ ಮಾಚುತ್ತಿದೆ ಮತ್ತು ಗೊಂದಲಗಳಿಗೆ ದೂಡುತ್ತಿದೆ. ಜಾಗತೀಕರಣದ ಇಪ್ಪತ್ತು ವರ್ಷಗಳ ನಂತರವೂ ಈ ಸ್ವದೇಶಿ ಮತ್ತು ವಿದೇಶಿ ಶತ್ರುಗಳ ಮೈತ್ರಿಯಿಂದಾಗಿ ಉಂಟಾಗಿರುವ ಶತ್ರುವಿನ ಗಂಡಭೇರುಂಡ ಸ್ವರೂಪದ ಚಹರೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೇ ಇರುವುದೇ ಒಂದು ಜಾಗತೀಕರಣ ಮುಂದಿಡು ತ್ತಿರುವ ಸವಾಲಿನ ಸ್ವರೂಪವನ್ನು ಅರ್ಥಪಡಿಸು ತ್ತಿದೆ. ಶತ್ರುವಿನ ಚಹರೆಯನ್ನೇ ಸರಿಯಾಗಿ ಅರ್ಥಮಾಡಿ ಕೊಳ್ಳದಿದ್ದರೆ ಅದನ್ನು ಎದುರಿಸುವುದಾದರೂ ಹೇಗೆ?

ಕೆಲವು ಚಿಂತಕರು ಈ ಜಾಗತೀಕರಣ ವೆನ್ನುವುದೂ ಸಹ ಮನುಷ್ಯನ ಸಹಜ ವಿಕಾಸದ ಅಲೆಯಲ್ಲಿ ಬಂದಿರುವ ಒಂದು ಕಾಲಘಟ್ಟ ಮತ್ತು ಸಹಜ ವಿಕಾಸದ ಭಾಗವಾಗಿಯೇ ಅದು ಮಾಯವಾಗುತ್ತದೆ ಎಂದು ನಂಬಿಕೊಂಡಿದ್ದಾರೆ. ಮತ್ತು ಜಾಗ ತೀಕರಣವನ್ನು ವಿರೋಧಿಸುವ ಅಥವಾ ಪ್ರತಿರೋಧಿಸುವ ಎರಡು ಮಾರ್ಗಗಳು ತಪ್ಪೆಂದೂ, ಎರಡಕ್ಕೂ ಮಧ್ಯಮದ ಮಾರ್ಗ ವನ್ನು ಅನುಸರಿಸಬೇಕೆಂದೂ ಸಲಹೆ ಮಾಡುತ್ತಾರೆ. ಇನ್ನು ಕೆಲವರು ಜಾಗತೀಕರಣ ತಂದಿಟ್ಟಿರುವ ತಂತ್ರಜ್ಞಾನದ ಪವಾಡ ವನ್ನು ನೋಡಿ ಮಂತ್ರ ಮುಗ್ಧರಾಗಿ ನಾರಾಯಣಮೂರ್ತಿಯಂತಹ ಸಾಫ್ಟ್ ಶೋಷಕರನ್ನು ಹಾಡಿಹೊಗಳುವ ಮುಗ್ಧ ಕ್ರೌರ್ಯ ವನ್ನು ತೋರುತ್ತಾರೆ.

ಅಂಥವರು ವಾದಿಸುವಂತೆ ಮನುಷ್ಯ ಇತಿಹಾಸದಲ್ಲಿ ಸಂಭ ವಿಸಿರುವುದೆಲ್ಲಾ ಸಹಜವಾಗಿಯೇ ಸಂಭವಿ ಸುತ್ತದೆ ಎನ್ನುವುದು ನಮ್ಮನ್ನು ವಿಧಿವಾದಕ್ಕೆ ಕೊಂಡೊಯ್ಯುವುದಲ್ಲದೆ ಮನುಷ್ಯನ ಪ್ರಜ್ಞಾಪೂರ್ವಕ ಮಧ್ಯಪ್ರವೇಶ ಮತ್ತು ಸಾಹಸ ಪ್ರವೃತ್ತಿಯನ್ನೇ ನಿರಾಕರಿಸುತ್ತದೆ. ಮಾರ್ಕ್ಸ್ ಹೇಳಿದಂತೆ ಮನುಷ್ಯ ಇತಿಹಾಸ ವನ್ನು ಬದಲಿಸುತ್ತಾನೆ. ಆದರೆ ಇತಿಹಾಸದ ನಿಯಮಗಳಿಗೆ ಒಳಪಟ್ಟು. ಅಂದರೆ ಬದಲಾ ವಣೆಯ ಸ್ವರೂಪವನ್ನು ಇತಿಹಾಸದ ಕಾಲಘಟ್ಟ ನಿರ್ಧರಿಸಿದರೂ ಮನುಷ್ಯನ ಪ್ರಜ್ಞಾಪೂರ್ವಕ ಮಧ್ಯಪ್ರವೇಶವಿಲ್ಲದೆ ಬದಲಾವಣೆ ಸಾಧ್ಯವಿಲ್ಲ.

ಇಪ್ಪತ್ತನೇ ಶತಮಾನದ ಇತಿಹಾಸವೇ ಅದಕ್ಕೆ ಸಾಕ್ಷಿ. ಎಲ್ಲೆಲ್ಲಿ ದಮನಿತ ಸಮುದಾಯದ ಸಂಘಟಿತ ಪ್ರಯತ್ನ ನಡೆದಿದೆಯೋ ಅಲ್ಲೆಲ್ಲಾ ಜನರ ಬದುಕು ಇನ್ನಷ್ಟು ಹಸನುಗೊಂಡಿದೆ. ಎಲ್ಲೆಲ್ಲಿ ಅದಿಲ್ಲವೋ ಅಲ್ಲಿ ಬದುಕು ಇನ್ನಷ್ಟು ದಾರುಣಗೊಂಡಿದೆ. ಅಷ್ಟೆಲ್ಲಾ ಏಕೆ? ಸಾಮಾಜಿಕ ಚಳವಳಿಗಳು ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ದಮನಿತ ಸಮುದಾಯಗಳ ಬದುಕು ಮತ್ತು ಆತ್ಮವಿಶ್ವಾಸ ಇಂದಿಗಿಂತಲೂ ಹೆಚ್ಚಿತ್ತಲ್ಲವೇ? ಅಂತಾರಾಷ್ಟ್ರೀಯ ಬಂಡವಾಳ ಶಾಹಿಗಳ ಮತ್ತು ಅವರ ಬೆಂಬಲಕ್ಕೆ ನಿಂತಿರುವ ಸಾಮ್ರಾಜ್ಯಶಾಹಿ ಪ್ರಭುತ್ವಗಳ ಮತ್ತು ಅವರ ದಲ್ಲಾಳಿತನ ಮಾಡುತ್ತಿರುವ ನಮ್ಮಂಥ ದೇಶಗಳ ಆಳುವ ವರ್ಗಗಳ ಸಂಘಟಿತ ಪ್ರಜ್ಞಾಪೂರ್ವಕ ಆಕ್ರಮಣದ ಭಾಗವಾಗಿಯೇ ಜಾಗತೀಕರಣ ಇಂದು ಭಾರತದ ಬಡ ಜನತೆಯನ್ನು ಅದ ರಲ್ಲೂ ದಲಿತ ಶ್ರಮಜೀವಿಗಳನ್ನು ದಮನಿಸುತ್ತಿದೆ.

ಹೀಗಾಗಿ ದಲಿತ ಮತ್ತು ಎಲ್ಲಾ ಶೋಷಿತ ಮತ್ತು ದಮನಿತರ ಸಂಘಟಿತ ಬಂಡಾಯದಿಂದ ಮಾತ್ರ ಆ ಆಕ್ರಮಣವನ್ನು ಹಿಮ್ಮೆಟ್ಟಿ ಸಲು ಸಾಧ್ಯ. ಅಂಬೇಡ್ಕರ್‌ರವರೂ ಗುರುತಿಸಿದಂತೆ ಈ ದೇಶದ ದಮನಿತರ ಶತ್ರುಗಳಾದ ಬ್ರಾಹ್ಮಣ ಶಾಹಿ ಮತ್ತು ಬಂಡವಾಳಶಾಹಿಗಳನ್ನು ನಾವು 1947ರಲ್ಲಿ ಪಡೆದ ಸ್ವಾತಂತ್ರ್ಯ ಯಾವ ರೀತಿಯಲ್ಲೂ ನಿರ್ನಾಮ ಮಾಡಲಿಲ್ಲ. ಈಗ ಜಾಗತೀಕರಣ ಈ ಎರಡು ಶತ್ರುಗಳು ಒಂದಾಗುವುದಕ್ಕೆ ಹಾಗೂ ಹೊಸ ರೀತಿಯಲ್ಲಿ ದಮನಿತ ಜನತೆಯನ್ನು ಬಲಿ ಹಾಕುವ ವೇದಿಕೆಯನ್ನು ಸಿದ್ಧಪಡಿಸಿದೆ.

ಜಾಗತೀಕರಣದ 20 ವರ್ಷಗಳಲ್ಲಿ ದಲಿತ ಸಮುದಾಯದ ಬಡತನದ ದಾರುಣತೆ ಹೆಚ್ಚಾಗಿದೆ. ಸರಕಾರಿ ಅಂಕಿಅಂಶಗಳ ಪ್ರಕಾ ರವೇ ಬಡತನದ ಪ್ರಮಾಣ ಕಳೆದ ಇಪ್ಪತ್ತು ವರ್ಷಗಳಲ್ಲಿ ಶೇ. 29ರಿಂದ ಶೇ.50ಕ್ಕೆ ಹೆಚ್ಚಾಗಿದೆ. ಆ ಬಡವರಲ್ಲಿ ಜಾತಿ ಪ್ರಧಾನವಾಗಿ ದಲಿತ ಅಥವಾ ಶೂದ್ರ ಜಾತಿಗಳೇ ಆಗಿರುತ್ತದೆ, ಪ್ರಾಯಶಃ ಅಲ್ಪಸಂಖ್ಯಾತ ಮೇಲ್ಜಾತಿ ಬಡವರು ಇದರಲ್ಲಿ ಸೇರಿಕೊಳ್ಳುತ್ತಾರೆ. ಬಂಡವಾಳಶಾಹಿ ವಿದೇಶಿಯರದ್ದೇ ಆದರೂ ಸ್ವದೇಶಿಯರದ್ದೇ ಆದರೂ ಜಾತಿ ವ್ಯವಸ್ಥೆಯನ್ನು ಅಲುಗಾಡಿಸಲಿಲ್ಲ. ಅಲ್ಲದೆ, ಇದು ಬಡತನದ ದಾರುಣತೆಯನ್ನು ಹೆಚ್ಚಿಸಿ ದಲಿತ-ದಮನಿತ- ಶೋಷಿತ-ಬಡಜನತೆ ಯನ್ನು ಇನ್ನಷ್ಟು ದೀನರನ್ನಾಗಿ ಮಾಡಿ ಅಪಮಾನಕ್ಕೆ ಗುರಿ ಮಾಡಿದೆ.

ಮತ್ತೊಂದೆಡೆ ಸಾಂಪ್ರದಾಯಿಕ ಬ್ರಾಹ್ಮಣ ಶಾಹಿ ಸಾಮಾಜಿಕ ರಚನೆಗಳಿಗೆ ಹೊಸ ಜೀವ ತುಂಬಿ ಅಪಮಾನವನ್ನು ಜಾಸ್ತಿ ಮಾಡಿದೆ. ಹಸಿವು ಮತ್ತು ಅಪಮಾನ ಗಳೆರಡು ಹೀಗೆ ಬ್ರಾಹ್ಮಣವಾದ ಮತ್ತು ಬಂಡವಾಳವಾದದ ಮೈತ್ರಿಯ ಅವಳಿ ಮಕ್ಕಳೇ ಆಗಿವೆ. ಜಾಗತೀಕರಣದ ಕಾಲಘಟ್ಟದಲ್ಲಿ ಆಗಿರುವ ಒಂದೇ ಬದಲಾವಣೆ ಯೆಂದರೆ ದಮನಿತ ಸಮುದಾಯಗಳಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾಗದಿದ್ದರೂ ಜಾಗತೀಕರಣದ ಫಲಾನುಭವಿ ಮಧ್ಯಮ ವರ್ಗವೊಂದು ಹುಟ್ಟುಕೊಂಡಿದೆ. ಇದು ಈ ಹಿಂದಿನ ಮಧ್ಯಮವರ್ಗದಂತೆ ಸಮು ದಾಯದಲ್ಲಿ ಬೇರು ಬಿಟ್ಟ ವರ್ಗವಲ್ಲ.ಸಮುದಾಯದ ಹಿತಕ್ಕಾಗಿ ಹೋರಾಡಿದ ವರ್ಗವಲ್ಲ. ಇದು ಜಾಗತೀಕರಣ ಬಿತ್ತುವ ಪರಮ ಸ್ವಾರ್ಥವನ್ನು ಮತ್ತು ತಾವು ಶ್ರೇಷ್ಠವೆಂದು ಭಾವಿಸುವ ಬ್ರಾಹ್ಮಣವಾದಿ ಮೌಲ್ಯವನ್ನು ಹೊಂದಿರುವ ಮಧ್ಯಮ ವರ್ಗವಾಗಿದೆ.

ದಮನಿತ ಸಮುದಾಯಗಳ ಸಾಂಸ್ಕೃತಿಕ ಮತ್ತು ಬೌದ್ಧಿಕ ಬಂಡವಾಳವೇ ಈ ಮಧ್ಯಮ ವರ್ಗ. ಎಲ್ಲಾ ದಮನಿತ ಸಮುದಾಯಗಳನ್ನು ಚಳವಳಿಗೆ ಪ್ರೇರೇಪಿಸು ವುದೇ ಮಧ್ಯಮ ವರ್ಗ. ಆದರೆ ಈಗ ನವಉದಾರವಾದಿ ಶಾಲೆಯಲ್ಲಿ ಪಳಗಿದ ಈ ಹೊಸ ಮಧ್ಯಮ ವರ್ಗದ ಅರ್ಜುನರು ತಮ್ಮ ಸಮುದಾಯಗಳ ಬಗ್ಗೆ ಎಂದೆಂದಿಗೂ ಯೋಚಿಸದಂತೆ ಮಾಡಲು ಪರಮ ವ್ಯಕ್ತಿವಾದಿ ಸ್ವಾರ್ಥದ ಭಗವದ್ಗೀತೆಯನ್ನು ಬೋಧಿಸಿ ನಮ್ಮ ಕೈಯಿಂದಲೇ ನಮ್ಮ ಕಣ್ಣನ್ನು ಚುಚ್ಚಿಸುತ್ತಿದೆ. ಇದು ಪಿತೂರಿಯೋ ಕುತಂತ್ರವೋ ಅಲ್ಲ.

ಅಂತಾರಾಷ್ಟ್ರೀಯ ಬಂಡವಾಳಶಾಹಿ ಅನುಸರಿಸುತ್ತಿರುವ ಸಾಮಾ ಜಿಕ ಮತ್ತು ಸಾಂಸ್ಕೃತಿಕ ನೀತಿ. ಹೀಗಾಗಿ ಇಂದು ಬ್ರಾಹ್ಮಣಶಾಹಿ ಮೌಲ್ಯಗಳು ಎಲ್ಲಾ ಸಮುದಾಯಗಳಲ್ಲಿ ಹುಟ್ಟುಕೊಂಡಿರುವ ಈ ನವ ಅರ್ಜುನ ವರ್ಗದಲ್ಲಿ ಹೊಸಹುಟ್ಟನ್ನು ಕಂಡುಕೊಂಡಿದೆ. ಇದು ಸಾಮಾಜಿಕ ಚಳವಳಿಗಳ ಮೇಲೂ ನೇರ ಪರಿಣಾಮ ಬೀರುತ್ತಿದೆ. ಈ ವಾಸ್ತವ ಇಂದು ಬ್ರಾಹ್ಮಣ ಶಾಹಿ ಮತ್ತು ಬಂಡವಾಳಶಾಹಿಯ ನಡುವೆ ಇರುವ ಅವಿನಾಭಾವೀ ಸಂಬಂಧವನ್ನು ತೋರಿಸುತ್ತದೆ. ಹಾಗೂ ಬ್ರಾಹ್ಮಣಶಾಹಿ ವಿರೋಧಿ ಹೋರಾಟ ಈ ಹಿಂದಿನಂತೆ ಕೇವಲ ಧರ್ಮಶಾಸ್ತ್ರೀಯ ಬ್ರಾಹ್ಮಣವಾದಕ್ಕೆ ಮಾತ್ರ ಸೀಮಿತವಾಗಬಾರದೆಂಬ ಎಚ್ಚರವನ್ನು ನೀಡುತ್ತದೆ.

ವಾಸ್ತವವಾಗಿ ಆ ಹಳೆಯ ಧರ್ಮಶಾಸ್ತ್ರೀಯ ಬ್ರಾಹ್ಮಣವಾದ ಹಿಂದುತ್ವದ ಪುನರುತ್ಥಾನದ ಅಲೆಯಲ್ಲಿ ಮರು ಹುಟ್ಟನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದೆಯೆಂಬುದು ನಿಜ. ಆದರ ವಿರುದ್ಧದ ಹೋರಾಟ ಖಂಡಿತಾ ಮುಂದುವರಿಯಬೇಕು. ಆದರೆ ಅಷ್ಟು ಮಾತ್ರ ಸಾಲುವುದಿಲ್ಲ. ಬ್ರಾಹ್ಮಣವಾದ ಮತ್ತು ಬಂಡವಾಳವಾದ ಜಾಗತೀಕರಣದ ಕಾಲ ಘಟ್ಟದಲ್ಲಿ ಮ಺ಡಿಕೊಂಡಿರುವ ಹೊಸ ಮೈತ್ರಿ ಮತ್ತು ಅದರ ಸ್ವರೂಪ, ಚಹರೆ ಮತ್ತು ದಮನಿತ ಸಮುದಾಯಗಳಲ್ಲೇ ಹುಟ್ಟಿಕೊಂಡಿರುವ ಅದರ ವಕ್ತಾರ ಫಲಾನುಭವಿಗಳ ಅಪಾಯಗಳ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡುವ ಅಗತ್ಯ ಹಿಂದೆಂದಿಗಿಂತಲೂ ಇದೆ. ಶಿಕ್ಷಣ, ಉದ್ಯೋಗಾವಕಾಶಗಳು ಮತ್ತು ಆಸ್ತಿ ಇವುಗಳ ಪ್ರಜಾತಾಂತ್ರಿಕ ಮರು ಹಂಚಿಕೆಯಾಗದೆ ಈ ದೇಶದ ದಲಿತರ ಮತ್ತು ದಮನಿತ ಸಮುದಾಯಗಳ ಹಸಿವಾಗಲೀ, ಅಪಮಾನವಾಗಲೀ ತೀರುವುದಿಲ್ಲ.

ಜಾಗತೀಕರಣದ ನೀತಿಗಳು ಈ ಆಶಯಗಳಿಗೆ ತದ್ವಿರುದ್ಧವಾಗಿದೆ. ಹಸಿವು ಮತ್ತು ಅಪಮಾನಗಳು, ಸಮಾಜ ಮತ್ತು ಆರ್ಥಿಕತೆ, ಅಭಿವೃದ್ಧಿ ಮಾದರಿ ಮತ್ತು ಪ್ರಜಾತಂತ್ರದ ಸ್ವರೂಪ ಒಂದಕ್ಕೊಂದು ಕಾರ್ಯಕಾರಣ ಸಂಬಂಧವನ್ನೇ ಹೊಂದಿವೆ. ಇವುಗಳಲ್ಲಿ ಕರ್ಮಠ ಮಾರ್ಕ್ಸ್‌ವಾದಿಗಳು ಮಾಡಿದಂತೆ ಕೇವಲ ಹಸಿವು, ಆರ್ಥಿಕತೆ ಅಥವಾ ಅಭಿವೃದ್ಧಿ ಇವುಗಳಿಗೆ ಮಾತ್ರ ಒಟ್ಟುಕೊಟ್ಟು ಅರ್ಥಮಾಡಿಕೊಂಡರೆ ಈ ವಿದ್ಯಮಾನದ ಮತ್ತೊಂದು ಮುಖವೇ ಆಗಿರುವ ಅಪಮಾನ, ಸಾಮಾಜಿಕ ರಚನೆ ಮತ್ತು ಪ್ರಜಾತಂತ್ರದ ಹೂರಣ ಇವುಗಳು ಹಾಗೆಯೇ ಉಳಿದುಕೊಂಡು ಬದಲಾವಣೆ ಸಾಧ್ಯವೇ ಆಗುವುದಿಲ್ಲ.

ಹಾಗೆಯೇ ಇತರ ಲೋಹಿಯಾವಾದಿ ಅಥವಾ ಉದಾರವಾದಿ ಸಂಘಟನೆಗಳು ಒತ್ತು ಕೊಡುವಂತೆ ಹಸಿವಿನ ಪ್ರಶ್ನೆಯನ್ನೇ ಎತ್ತದೆ ಅಪಮಾನದ ಪ್ರಶ್ನೆಯನ್ನು, ಆರ್ಥಿಕತೆಯ ಪ್ರಶ್ನೆಯನ್ನೇ ಗಮನಿಸದೆ ಕೇವಲ ಸಾಮಾಜಿಕ ಬದಲಾವಣೆಯ ಪ್ರಶ್ನೆಯನ್ನು ಹಾಗೂ ಅಭಿವೃದ್ಧಿ ಮಾದರಿಯ ಪ್ರಶ್ನೆಯನ್ನೇ ಕೇಳದೆ ಕೇವಲ ವಿಕೇಂದ್ರೀಕರಣದಂತ ಪ್ರಜಾತಾಂತ್ರಿಕ ರಚನೆಗಳ ಬಗ್ಗೆ ಒತ್ತುಕೊಟ್ಟು ಹೋರಾಡುವುದು ಜಾಗತೀಕರಣದ ಹಿಂದಿನ ಬಂಡವಾಳಶಾಹಿ ಶಕ್ತಿಗಳ ಮೇಲೆ ಯಾವ ಪರಿಣಾಮವನ್ನು ಬೀರು ವುದಿಲ್ಲ. ಬದಲಿಗೆ ಸತ್ಯವನ್ನು ಹೀಗೆ ವಿಘಟಿತವಾಗಿ ಗ್ರಹಿಸುವುದು ಶತ್ರುಗಳಿಗೆ ಅಪ್ಯಾಯಮಾನವಾದದ್ದೇ ಆಗಿರುತ್ತದೆ.

ಆ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಜಾಗತೀಕರಣದ ಬಗ್ಗೆ ಇನ್ನೂ ಸಂಘಟಿತವಾಗಿ ಹೋರಾಡಬೇಕೆಂಬ ಒಟ್ಟಾರೆ ಅಭಿಪ್ರಾಯ ಮೂಡಿಬಂದರೂ ಜಾಗತೀಕರಣದ ಈ ಕಾಲಘಟ್ಟದಲ್ಲಿ ವರ್ಗ-ಜಾತಿ ಶೋಷಣೆಗಳು, ಆರ್ಥಿಕ ಮತ್ತು ಸಾಮಾಜಿಕ ವಿದ್ಯಮಾನಗಳು ಹೇಗೆ ಒಂದರ ಜೊತೆ ಒಂದು ಹೆಣೆದುಕೊಂಡಿವೆ ಎಂಬುದರ ಬಗ್ಗೆ ಗೊಂದಲಗಳಿರುವುದು ಸ್ಪಷ್ಟವಾಗಿತ್ತು. ಎಲ್ಲಾ ಜನಪರ ಸಂಘಟನೆಗಳು ಜಂಟಿ ಹೋರಾಟವನ್ನು ನಡೆಸುತ್ತಲೇ ಈ ಗೊಂದಲಗಳ ತಾತ್ವಿಕ ಪರಿಹಾರದ ಕಡೆ ಸಾಧ್ಯ ವಾದಷ್ಟು ಬೇಗ ಹೆಜ್ಜೆ ಹಾಕಬೇಕಿದೆ.
ನಿಷೇಧಗಳನ್ನು ನಿಷೇಧಿಸಿ...

ರಾಮಚಂದ್ರ ಗುಹಾ

ಅಮೆರಿಕನ್ ಲೇಖಕರೊಬ್ಬರ ಮಹಾತ್ಮ ಗಾಂಧಿ ಕುರಿತಾದ ಪುಸ್ತಕವನ್ನು ಈ ವರ್ಷದ ಆರಂಭದಲ್ಲಿ ಗುಜರಾತ್ ಸರ್ಕಾರ ನಿಷೇಧಿಸಿತು. ನಂತರ ಆಗ ಆ ಪುಸ್ತಕ ಭಾರತದಲ್ಲಿ ಲಭ್ಯವಾಗಲಿಲ್ಲ. ಗುಜರಾತ್‌ನಲ್ಲಿ ಯಾರೊಬ್ಬರೂ ಆ ಪುಸ್ತಕ ಓದಿರಲಿಲ್ಲ.

ಏಕಪಕ್ಷೀಯವಾದ ಪತ್ರಿಕಾ ವರದಿ ಹಾಗೂ ಅದಕ್ಕಿಂತಲೂ ಹೆಚ್ಚು ಪೂರ್ವಗ್ರಹಪೀಡಿತ ಪುಸ್ತಕ ವಿಮರ್ಶೆಯ ಆಧಾರದ ಮೇಲೆ ಮುಖ್ಯಮಂತ್ರಿ ನರೇಂದ್ರ ಮೋದಿ ಪುಸ್ತಕದ ನಿಷೇಧಕ್ಕೆ ಆದೇಶ ಹೊರಡಿಸಿದ್ದರು.

ಮೋದಿಯವರು ಈ ನಿಷೇಧದ ಆದೇಶ ಹೊರಡಿಸಿದ ನಂತರ, ಅವರನ್ನು ಅನುಕರಿಸುವುದೇ ಭಾರತ ಸರ್ಕಾರದ ಮೊದಲ ಪ್ರತಿಕ್ರಿಯೆ ಆಗಿತ್ತು. ರಾಷ್ಟ್ರದಾದ್ಯಂತದ ನಿಷೇಧಕ್ಕೆ ಕಾಂಗ್ರೆಸ್ ವಕ್ತಾರರು ಕರೆ ನೀಡಿದರು.

ಅವರ ಮಾತನ್ನು ಅನುಸರಿಸುವ ಇಂಗಿತವನ್ನು ಆಗಿನ ಕಾನೂನು ಸಚಿವ ವೀರಪ್ಪ ಮೊಯ್ಲಿಯವರೂ ನೀಡಿದರು. ನಂತರ ವಿದೇಶಗಳ್ಲ್ಲಲೂ ಈ ಬಗ್ಗೆ ಸ್ಪರ್ಧೆ ಉಂಟಾಗಿ, ದೇಶಾಭಿಮಾನದ ಅಲೆಯೇ ಉಕ್ಕಿತು.

ಮಹಾತ್ಮರ ಒಳ್ಳೆಯ ಹೆಸರನ್ನು ರಕ್ಷಿಸುತ್ತಿರುವುದಾಗಿ ಹೇಳಿಕೊಳ್ಳಲು ಕಾಂಗ್ರೆಸ್ಸೇತರ ರಾಜಕಾರಣಿಯೊಬ್ಬರಿಗೆ ಅವಕಾಶವನ್ನಾದರೂ ಕಾಂಗ್ರೆಸ್ ಹೇಗೆ ನೀಡುತ್ತದೆ?

ಅಂತೂ ಕಡೆಗೆ, ಪುಸ್ತಕದ ಮೇಲೆ ಭಾರತ ಸರ್ಕಾರ ನಿಷೇಧ ಹೇರಲಿಲ್ಲ. ಇದಕ್ಕೆ ಮುಖ್ಯವಾಗಿ ರಾಜ್‌ಮೋಹನ್ ಗಾಂಧಿ ಹಾಗೂ ಗೋಪಾಲಕೃಷ್ಣ ಗಾಂಧಿಯವರಿಬ್ಬರೂ ತಕ್ಷಣ ಮಧ್ಯಪ್ರವೇಶಿಸಿದ್ದು ಮುಖ್ಯ ಕಾರಣ.

ಇಬ್ಬರೂ ಮಹಾತ್ಮ ಗಾಂಧಿಯವರ ಮೊಮ್ಮಕ್ಕಳು. ಜೊತೆಗೆ, ಸ್ವತಃ ವಿದ್ವಾಂಸರು ಹಾಗೂ ಸಾರ್ವಜನಿಕ ವ್ಯಕ್ತಿಗಳು. ವಾಗ್ವಾದಗಳನ್ನು ಉತ್ತೇಜಿಸಿದ, ಬೆಂಬಲಿಸಿದ ಗಾಂಧಿಯ ಚೈತನ್ಯಕ್ಕೆ ಈ ನಿಷೇಧ ತದ್ವಿರುದ್ಧವಾದದ್ದು; ಜೊತೆಗೆ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ಭಾರತದ ಪ್ರತಿಪಾದನೆಗಳನ್ನೂ ಇದು ಪ್ರಶ್ನಿಸುತ್ತದೆ ಎಂಬಂತಹ ವಾದಗಳನ್ನು ಮಂಡಿಸಿ ರಾಜ್‌ಮೋಹನ್ ಹಾಗೂ ಗೋಪಾಲಕೃಷ್ಣ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದರು.ನಿಷೇಧ ಸುದ್ದಿ ಮಾಡುತ್ತದೆ.

ಆದರೆ ನಿಷೇಧ ಹಿಂತೆಗೆದುಕೊಂಡದ್ದು ಸುದ್ದಿಯಾಗುವುದಿಲ್ಲ. ರಾಷ್ಟ್ರದ 27 ರಾಜ್ಯಗಳಲ್ಲಿ ಜೋಸೆಫ್ ಲೆಲ್ವೆಲ್ಡ್ ಅವರ `ದಿ ಗ್ರೇಟ್ ಸೋಲ್` ಪುಸ್ತಕದ ಮುಕ್ತ ಪ್ರಸರಣಕ್ಕೆ ಅವಕಾಶ ಮಾಡಿಕೊಡಲು ಸರ್ಕಾರದ ಮೇಲೆ ಒತ್ತಡ ಹೇರಿದ್ದಕ್ಕಾಗಿ ರಾಜ್‌ಮೋಹನ್ ಹಾಗೂ ಗೋಪಾಲಕೃಷ್ಣ ಅವರಿಗೆ ಭಾರತೀಯರು, ವಿಶೇಷವಾಗಿ ಗಾಂಧಿ ವಿದ್ವಾಂಸರು ಕೃತಜ್ಞರಾಗಿರಬೇಕಾಗುತ್ತದೆ.

ಆದರೆ 28ನೇ ರಾಜ್ಯದಲ್ಲಿ ಅದೂ ಗಾಂಧಿಯದೇ ನಾಡಿನಲ್ಲಿ ಈ ಪುಸ್ತಕದ ಪ್ರತಿಯನ್ನು ಹೊಂದುವುದು ಅಥವಾ ಮನೆಯಲ್ಲಿಟ್ಟುಕೊಳ್ಳುವುದು ಅಕ್ರಮವಾಗುತ್ತದೆ. ಪುಸ್ತಕ ಲಭ್ಯವಾಗುವ ಮುಂಚೆಯೇ ನಿಷೇಧಿಸುವ ಮೂಲಕ ಮಹಾತ್ಮರ ಬಹುಸಂಸ್ಕೃತಿಯ ಸಿದ್ಧಾಂತಗಳನ್ನು ರಕ್ಷಿಸುವ ಸೋಗಿನಲ್ಲಿ ತಮ್ಮ ಸಂಕುಚಿತ ಪಂಥಾಭಿಮಾನವನ್ನು ಮರೆ ಮಾಡಬಹುದೆಂದು ನರೇಂದ್ರ ಮೋದಿ ಭಾವಿಸಿದ್ದಿರಬಹುದು.

ನಂತರ, ಗಾಂಧಿ ಮೊಮ್ಮಕ್ಕಳ ವಿವೇಚನಾಯುಕ್ತ ಸಲಹೆಗೆ ಮಣಿದು ಭಾರತ ಸರ್ಕಾರ ಪುಸ್ತಕದ ಮುಕ್ತ ಪ್ರಸರಣಕ್ಕೆ ಅವಕಾಶ ಮಾಡಿದ್ದರೂ, ಗುಜರಾತ್‌ನಲ್ಲಿ ಈಗಲೂ ಈ ಪುಸ್ತಕ ಶಾಸನಾತ್ಮಕವಾಗಿ ಲಭ್ಯವಿಲ್ಲ ಎಂಬುದು ಆ ರಾಜ್ಯದ ಮುಖ್ಯಮಂತ್ರಿಯ ಸಂಕುಚಿತ ಪೂರ್ವಗ್ರಹದ ಮನಸ್ಸು ಹಾಗೂ ಅನ್ಯಮತದ್ವೇಷಿ ಮನಸ್ಥಿತಿಯನ್ನು ಬಿಂಬಿಸುತ್ತದೆ.

ದುಃಖದ ಸಂಗತಿ ಎಂದರೆ, ಗಾಂಧಿಯವರ ಮೊಮ್ಮಕ್ಕಳು ಪ್ರದರ್ಶಿಸಿದಂತಹ ಕೆಚ್ಚನ್ನು (ಹಾಗೂ ಸಭ್ಯತೆಯನ್ನೂ) ಆಧುನಿಕ ಭಾರತದ ಇತರ ಕೆಲವು ದೊಡ್ಡ ವ್ಯಕ್ತಿಗಳ ಬೆಂಬಲಿಗರಾಗಲಿ ಅಥವಾ ಅವರ ಸಂತತಿಯಾಗಲಿ ಅನುಕರಿಸಿದ್ದು ಕಂಡುಬರುವುದಿಲ್ಲ.

ಪೀಟರ್ ಹೀಹ್ಸ್ ಅವರು ಅರವಿಂದರನ್ನು ಕುರಿತು ಬರೆದ ಜೀವನಚರಿತ್ರೆಗಾದ ಗತಿಯನ್ನು ಗಮನಿಸಿ. ಹೀಹ್ಸ್ ಅವರು ನಿಜವಾದ ವಿದ್ವಾಂಸ. ಇತಿಹಾಸದ ಹಲವು ಮುಖ್ಯ ಕೃತಿಗಳ ಲೇಖಕ (ಅವುಗಳಲ್ಲಿ `ದಿ ಬಾಂಬ್ ಇನ್ ಬೆಂಗಾಲ್`ಸಹ ಸೇರುತ್ತದೆ). ಅಷ್ಟೇ ಅಲ್ಲ, ಅವರು ಅನೇಕ ವರ್ಷಗಳ ಕಾಲ ಪುದುಚೇರಿಯ ಅರವಿಂದ ಆಶ್ರಮದ ಪತ್ರಾಗಾರದ ಉಸ್ತುವಾರಿ ಹೊತ್ತುಕೊಂಡಿದ್ದವರು.

2008ರಲ್ಲಿ, ಪೀಟರ್ ಹೀಹ್ಸ್ ಅವರ `ಲೈವ್ಸ್ ಆಫ್ ಶ್ರೀ ಅರಬಿಂದೊ` ಪುಸ್ತಕವನ್ನು ನ್ಯೂಯಾರ್ಕ್‌ನ ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿತು. ಜೀವಮಾನವಿಡೀ ನಡೆಸಿದ ಆಳವಾದ ಅಧ್ಯಯನದ ಫಲವಾದ ಈ ಕೃತಿಯ ಅನುಭವಜನ್ಯ ಗಹನತೆ ಹಾಗೂ ಚುರುಕು ವಿಶ್ಲೇಷಣೆಗಳನ್ನು ಸರಿಗಟ್ಟುವುದು ಸಾಧ್ಯವೇ ಇಲ್ಲ.

ಏಕೆಂದರೆ, ಬೇರೆಲ್ಲರಿಗಿಂತ ಹೆಚ್ಚಾಗಿ ಅರವಿಂದರ ಬದುಕಿನ ಸುತ್ತಲಿನ ದಾಖಲಾತಿಗಳ ಸಾಕ್ಷ್ಯಗಳು ಹೀಹ್ಸ್ ಅವರಿಗೆ ಚೆನ್ನಾಗಿ ಗೊತ್ತಿದೆ. ಅರವಿಂದರನ್ನು ರೂಪಿಸಿದ ರಾಜಕೀಯ ಹಾಗೂ ಆಧ್ಯಾತ್ಮಿಕ ಪ್ರಪಂಚಗಳ ಬಗ್ಗೆ ಅವರಿಗೆ ಆಳವಾದ ಅರಿವಿದೆ. ಆದರೆ, ಈ ವಿಶಿಷ್ಟ ಭಾರತೀಯನ ವಿಶಿಷ್ಟ ಬದುಕನ್ನು ಭಾರತದಲ್ಲೇ ಓದಲಾಗದು.

ಇದಕ್ಕೆ ಕಾರಣ, ಇದರ ಮಾರಾಟದ ಮೇಲೆ ಅರವಿಂದರ ಸ್ವಘೋಷಿತ ಭಕ್ತರು ಕೋರಿದ ತಡೆ ಆದೇಶ ಹಾಗೂ ಇದನ್ನು ಹೆಚ್ಚು ಸಕ್ರಿಯವಾಗಿರುವ ಒಡಿಶಾ ಹೈಕೋರ್ಟ್ ಮನ್ನಿಸಿದ್ದು. ಹೀಹ್ಸ್ ಅವರ ಪುಸ್ತಕದಲ್ಲಿ ಅರವಿಂದರನ್ನು ಕುರಿತಂತೆ ಗೌರವಾದರಗಳಿವೆ. ಆದರೆ ಪೂಜ್ಯಭಾವನೆಯ ಅತಿರೇಕವಿಲ್ಲ.

ಸ್ವಾತಂತ್ರ್ಯ ಹೋರಾಟಕ್ಕೆ ಅರವಿಂದರ ಕೊಡುಗೆಗಳಿಗೆ ಅವರು ಪ್ರಣಾಮ ಸಲ್ಲಿಸುತ್ತಾರೆ. ಹೀಹ್ಸ್ ಹೀಗೆ ಬರೆಯುತ್ತಾರೆ - `ಅರವಿಂದರಿಗಿಂತ ಮುಂಚೆ, `ಸ್ವಾತಂತ್ರ್ಯ`ದ ಬಗ್ಗೆ ಬಹಿರಂಗವಾಗಿ ಮಾತನಾಡಲು ಯಾರೂ ಧೈರ್ಯ ತೋರುತ್ತಿರಲಿಲ್ಲ.

ಇಪ್ಪತ್ತು ವರ್ಷಗಳ ನಂತರ, ಇದೇ ಚಳವಳಿಯ ಅಂಗೀಕೃತ ಗುರಿಯಾಯಿತು`. ಸಾಹಿತ್ಯ ಹಾಗೂ ತತ್ವಜ್ಞಾನಕ್ಕೆ ಅರವಿಂದರ ಕೊಡುಗೆಗಳನ್ನೂ ಅವರು ಶ್ಲಾಘಿಸುತ್ತಾರೆ. ಹೀಗಿದ್ದೂ ಅರವಿಂದರಿಗೆ ಅತೀಂದ್ರಿಯ ಶಕ್ತಿಗಳಿತ್ತು ಎಂಬಂತಹ ಪ್ರತಿಪಾದನೆಗಳಿಗೆ ವೈಜ್ಞಾನಿಕ ನೆಲೆಯಲ್ಲಿ ಅವರು ಸಂಶಯ ತಾಳಿದ್ದರು.

`ಶ್ರೀ ಅರವಿಂದರನ್ನು ಅವತಾರವಾಗಿ ಒಪ್ಪಿಕೊಳ್ಳುವುದು ಧರ್ಮಶ್ರದ್ಧೆಯ ವಿಚಾರ` ಎಂದು ಅವರು ಬರೆಯುತ್ತಾರೆ. ಜೊತೆಗೆ `ಧರ್ಮಶ್ರದ್ಧೆಯ ವಿಚಾರಗಳು ಬಹುಬೇಗನೇ ಅಂಧಶ್ರದ್ಧೆಯೂ ಆಗಿಬಿಡುತ್ತದೆ` ಎಂದೂ ಹೀಹ್ಸ್ ಹೇಳುತ್ತಾರೆ.ಈ ಮೆಲುದನಿಯ ನಿರಾಕ್ಷೇಪಣೀಯವಾದ ಹೇಳಿಕೆ, ಅರವಿಂದರ ಅಂಧಾನುಯಾಯಿಗಳನ್ನು ಕೆರಳಿಸಿತು.

ಭಾರತದಲ್ಲಿ ಭಾರತೀಯ ಪ್ರಕಾಶಕರಿಗೆ ಈ ಪುಸ್ತಕದ ಪ್ರಸರಣಕ್ಕೆ ನಿಷೇಧ ಕೋರಿ ಕೆಲವು ಭಕ್ತಾದಿಗಳು ಒಡಿಶಾ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದರು. ಪೀಟರ್ ಹೀಹ್ಸ್ ಅವರ ವೀಸಾ ರದ್ದತಿ ಹಾಗೂ ದೇಶದಿಂದ ಅವರನ್ನು ಹೊರಗೆ ಕಳಿಸಬೇಕೆಂದು ಕೋರುವ ಮೊಕದ್ದಮೆಯನ್ನೂ ತಮಿಳುನಾಡಿನ ನ್ಯಾಯಾಲಯದಲ್ಲಿ ಹೂಡಲಾಯಿತು.

ಇಂತಹ ಕ್ರಮಗಳಿಂದಾಗಿ, ಅರವಿಂದರ ತತ್ವಗಳ ಜ್ಯೋತಿಯನ್ನು ಬೆಳಗುತ್ತಿರುವ ಸಮಕಾಲೀನ ಅನುಯಾಯಿಗಳಲ್ಲಿನ ಕೆಚ್ಚು ಗಾಂಧಿ ಮೊಮ್ಮಕ್ಕಳಿಗಿಂತ ಕಡಿಮೆಯದು ಎಂಬುದನ್ನು ಅವರೇ ತೋರ್ಪಡಿಸಿಕೊಂಡಂತಾಯಿತು.

ಅವರ ಪೂಜನೀಯ ಮೂರ್ತಿ, ಒಂದೇ ಒಂದು ವಿದ್ವತ್‌ಪೂರ್ಣ ಕೃತಿಯಿಂದ ನಾಶವಾಗುವಷ್ಟು ಅಥವಾ ಹಾನಿಗೊಳಗಾಗುವಷ್ಟು ನಾಜೂಕಿನದೆ? ಎಂಬ ಪ್ರಶ್ನೆ ಉಂಟಾಗುತ್ತದೆ.

ಮುಂದಿನದು, ಆಸ್ಟ್ರೇಲಿಯನ್ ಪತ್ರಕರ್ತ ಹಮೀಶ್ ಮ್ಯಾಕ್‌ಡೊನಾಲ್ಡ್ 1998ರಲ್ಲಿ ಧೀರೂಭಾಯಿ ಅಂಬಾನಿ ಕುರಿತು ಪ್ರಕಟಿಸಿದ `ದಿ ಪಾಲಿಸ್ಟರ್ ಪ್ರಿನ್ಸ್` ಪುಸ್ತಕದ ಪ್ರಕರಣ. ಇದೇನೂ ವಿದ್ವತ್‌ಪೂರ್ಣವಾದ ಕೃತಿಯಲ್ಲ.

ತೂಕ ಹಾಗೂ ವಸ್ತುವಿನ ದೃಷ್ಟಿಯಿಂದ ಹಗುರವಾದದ್ದು. ಹೀಗಿದ್ದೂ, ಒಂದೆಡೆ ಯಶಸ್ವಿ ಉದ್ಯಮಿ ಹಾಗೂ ಮತ್ತೊಂದೆಡೆ ಹಿರಿಯ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ಮಧ್ಯದ ಆತ್ಮೀಯ ಸಂಪರ್ಕಗಳ ದಾಖಲಾತಿಯ ದೃಷ್ಟಿಯಿಂದ ಇದು ಗಮನಾರ್ಹವಾದುದಾಗಿತ್ತು.

ಈ ಪುಸ್ತಕವನ್ನು ಅದೇನು ಕಾರಣವೊ, ಭಾರತದಲ್ಲಿ ಎಂದೂ ಮಾರಾಟ ಮಾಡಲಿಲ್ಲ. ಆದರೆ ಅದಕ್ಕೂ, ಪುಸ್ತಕದ ವಸ್ತುವಾದ ವ್ಯಕ್ತಿಯ ಸಂತತಿಗೂ ಸಂಬಂಧ ಇದ್ದಿದ್ದು ಹೌದು.

ನಿಜ ಹೇಳಬೇಕೆಂದರೆ, `ದಿ ಪಾಲಿಸ್ಟರ್ ಪ್ರಿನ್ಸ್` ಪುಸ್ತಕದ ಪ್ರತಿಯನ್ನು ಭಾರತದ ಹೊರಗೆ ಪಡೆಯುವುದೂ ಕಷ್ಟವಿತ್ತು. ಯಾರೋ - ಯಾರೆಂದು ನಾವು ಊಹಿಸಬಹುದು- ಉಳಿದಿದ್ದ ಅಷ್ಟೂ ದಾಸ್ತಾನನ್ನು ಖರೀದಿಸಿಬಿಟ್ಟಿದ್ದರು.

ಲಭ್ಯವಿದ್ದ ಕೆಲವೇ ಪ್ರತಿಗಳು ಒಂದು ಪ್ರತಿಗೆ ಅಮೆರಿಕ ಡಾಲರ್ 500ಕ್ಕೂ ಹೆಚ್ಚಿನ ಬೆಲೆಯಲ್ಲಿ ಅಂತರ್ಜಾಲದ ತಾಣಗಳಲ್ಲಿ ಮಾರಾಟವಾಗುತ್ತಿದ್ದವು. ಕಳೆದ ವರ್ಷ, ಈ ಪುಸ್ತಕದ ಹೊಸ ಆವೃತ್ತಿಯನ್ನು ಹೊಸ ಹೆಸರಿನೊಂದಿಗೆ ಪ್ರಕಟಿಸಲಾಯಿತು.

`ಅಂಬಾನಿ ಅಂಡ್ ಸನ್ಸ್` ಹೆಸರಿನ ಈ ಪುಸ್ತಕದಲ್ಲಿ ಕುಟುಂಬದ ಮುಂದಿನ ಪೀಳಿಗೆಯ ಕುರಿತು ಕೆಲವು ಹೊಸ ಅಧ್ಯಾಯಗಳಿದ್ದವು. ಹೀಗಿದ್ದೂ, ಮೂಲ ಆವೃತ್ತಿಯಲ್ಲಿದ್ದ ರಾಜಕಾರಣಿಗಳು ಹಾಗೂ ಸ್ವತಃ ಅಂಬಾನಿಗಳಿಗೇ ಸಂಬಂಧಿಸಿದ ವಿಮರ್ಶಾತ್ಮಕ, ಟೀಕಾತ್ಮಕ ಉಲ್ಲೇಖಗಳೆಲ್ಲವನ್ನೂ ಕೈಬಿಡಲಾಗಿತ್ತು. ಈ ರಾಷ್ಟ್ರದಲ್ಲಿ ಪುಸ್ತಕದ ವಿತರಣೆಯ ಹಕ್ಕಿಗೆ ವಿನಿಮಯವಾಗಿ ಭಾರತೀಯ ಪ್ರಕಾಶಕ ತೆರಬೇಕಾಗಿದ್ದ ಬೆಲೆ ಅದು.

ಈ ಪ್ರಕರಣಗಳು ನಿರೂಪಿಸುವಂತೆ, ಉತ್ಸಾಹವನ್ನು ಕುಂದಿಸುವಷ್ಟು ಮಟ್ಟಿಗೆ ಪದೇ ಪದೇ ಪುಸ್ತಕಗಳನ್ನು ಭಾರತ ಗಣರಾಜ್ಯ ನಿಷೇಧಿಸಿದೆ. ಈ ನಿಷೇಧದ ಸಂಸ್ಕೃತಿಗೆ ಮೂರು ಅಂಶಗಳು ಕಾರಣ.

ಮೊದಲನೆಯದು, ಪುಸ್ತಕದಲ್ಲಿ ಚಿತ್ರಿತರಾದ ವ್ಯಕ್ತಿಯನ್ನು ಕುರಿತಂತೆ ವಸ್ತುನಿಷ್ಠ ಹಾಗೂ ನಿಷ್ಠುರತೆಯ ವಿಮರ್ಶೆಗಳ ಬಗ್ಗೆ ಅವರ ಸಂತತಿ ಅಥವಾ ಅನುಯಾಯಿಗಳು ಹೊಂದಿದ ಧೈರ್ಯಗೆಟ್ಟಂತಹ ಅಥವಾ ಅಭದ್ರತೆಯ ಭಾವ.

ಎರಡನೆಯದು, ಈ ಅಂಧಾಭಿಮಾನಿ ಅಥವಾ ಅಭದ್ರತೆಯ ಭಾವದಅನುಯಾಯಿಗಳು ನ್ಯಾಯಾಲಯಗಳಲ್ಲಿ ಆಸರೆಯನ್ನು ಕಂಡುಕೊಂಡಿರುವುದು.

ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾದ ನಿಲುವುಗಳನ್ನೇ ಸುಪ್ರೀಂ ಕೋರ್ಟ್ ಸಾಮಾನ್ಯವಾಗಿ ತೆಗೆದುಕೊಳ್ಳುವುದು ಹೌದಾದರೂ, ಕೆಳ ನ್ಯಾಯಾಲಯಗಳು ಹೆಚ್ಚು ಪ್ರಬುದ್ಧತೆ ಪ್ರದರ್ಶಿಸುವುದಿಲ್ಲ.

ರಾಜಿ ಮನೋಭಾವದ ಅಥವಾ ಪ್ರಚಾರಪ್ರಿಯ ನ್ಯಾಯಾಧೀಶರು ಪುಸ್ತಕಗಳು ಹಾಗೂ ಕಲಾಕೃತಿಗಳ ಮುಕ್ತ ಪ್ರಸರಣವನ್ನು ನಿಷೇಧಿಸಿ ತಡೆ ಆದೇಶಗಳನ್ನು ನೀಡುತ್ತಾರೆ.

ಸುಪ್ರೀಂ ಕೋರ್ಟ್ ತಲುಪುವವರೆಗೆ ಕಾದು ಹೋರಾಡಲು ಸಮಯ, ಹಣ ಅಥವಾ ಶಕ್ತಿ ಎಲ್ಲ ಅರ್ಜಿದಾರರಿಗೂ ಇರುವುದು ಸಾಧ್ಯವಿಲ್ಲ. (ಈ ಪ್ರಕ್ರಿಯೆಗೆ ವರ್ಷಗಳೇ ಹಿಡಿಯುತ್ತವೆ). ಹೀಗಾಗಿ ಒಮ್ಮೆ ಹೇರಿದ ನಿಷೇಧ ರದ್ದಾಗುವುದು ಅಪರೂಪ.

ನಿಷೇಧಗಳ ಹೆಚ್ಚಳಕ್ಕೆ ಮೂರನೇ ಹಾಗೂ ಅತಿ ಮುಖ್ಯವಾದ ಕಾರಣ ನಮ್ಮ ರಾಜಕೀಯ ವರ್ಗದ ಪುಕ್ಕಲುತನ. ಆರಂಭದ ಉದಾಹರಣೆ ಎಂದರೆ 1989ರಲ್ಲಿ ರಾಜೀವ್ ಗಾಂಧಿ ಸರ್ಕಾರದಿಂದ ಸಲ್ಮಾನ್ ರಷ್ದಿ ಅವರ `ದಿ ಸಟಾನಿಕ್ ವರ್ಸಸ್` ಕೃತಿ ಮೇಲೆ ಹೇರಿದ ನಿಷೇಧ.

ಆ ಸಂದರ್ಭದಲ್ಲಿ ಇತಿಹಾಸಕಾರ ಧರ್ಮ ಕುಮಾರ್ ಅವರು ಬರೆದಂತೆ ಆ ನಿಷೇಧ, `ಸರ್ಕಾರದ ದೌರ್ಬಲ್ಯದ ಸಂಕೇತವಾಗಿತ್ತು. ಜಾತ್ಯತೀತ ರಾಷ್ಟ್ರದಲ್ಲಿ ದೈವನಿಂದೆ ಮಾತ್ರವಷ್ಟೇ ಎಂದೂ ಶಿಕ್ಷಾರ್ಹ ಅಪರಾಧವಲ್ಲ; ಭಾರತದ ರಾಷ್ಟ್ರಪತಿ ಯಾವುದೋ ಅಥವಾ ಎಲ್ಲಾ ಧರ್ಮಗಳ ಸಮರ್ಥಕರೂ ಅಲ್ಲ.`

ನಂತರದ ವರ್ಷಗಳಲ್ಲಿ, ಎಲ್ಲಾ ಬಗೆಯ ರಾಜಕೀಯ ಧುರೀಣರೂ ಲೆಕ್ಕವಿಲ್ಲದಷ್ಟು ಬಾರಿ ಒಂದು ದೃಷ್ಟಿಕೋನವನ್ನು ಬಿಂಬಿಸುವ ಪುಸ್ತಕಗಳು, ಸಿನಿಮಾಗಳು ಹಾಗೂ ಚಿತ್ರಕಲಾಕೃತಿಗಳನ್ನು ನಿಷೇಧಿಸಿದ್ದಾರೆ.

ಬಾಂಗ್ಲಾದೇಶದ ದಿಟ್ಟ ಲೇಖಕಿ ತಸ್ಲಿಮಾ ನಸ್ರೀನ್ ಅವರ ಕಾದಂಬರಿಗಳನ್ನು ಪಶ್ಚಿಮ ಬಂಗಾಳದ ಎಡರಂಗ ನಿಷೇಧಿಸಿತ್ತು. ಜಿನ್ನಾ ಕುರಿತ ಒಂದು ಪುಸ್ತಕ ಹಾಗೂ ಅಮೀರ್ ಖಾನ್‌ರ ಒಂದು ಚಿತ್ರವನ್ನು ನರೇಂದ್ರ ಮೋದಿ ನಿಷೇಧಿಸಿದ್ದರು.

ಶಿವಾಜಿ ಕುರಿತ ವಿದ್ವತ್‌ಪೂರ್ಣ ಪುಸ್ತಕದ ಮೇಲಿನ ನಿಷೇಧಕ್ಕೆ ಮಹಾರಾಷ್ಟ್ರದ ಶರದ್ ಪವಾರ್ ಪಕ್ಷ ಹೊಣೆಯಾಗಿತ್ತು. ಎಂ.ಎಫ್.ಹುಸೇನ್ ಚಿತ್ರಕಲಾಕೃತಿಗಳನ್ನು ಹಿಂದೂತ್ವವಾದಿಗಳ ದಾಳಿಕೋರ ತಂಡಗಳು ನಾಶ ಮಾಡಿದುದಲ್ಲದೆ, ಅವರ ವಿರುದ್ಧ ಒಂದಾದ ಮೇಲೆ ಒಂದರಂತೆ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡಿದ್ದು ಅವರು ದೇಶ ಬಿಟ್ಟು ಹೋಗುವುದಕ್ಕೆ ಕಾರಣವಾಯಿತು.

ಇದೊಂದು ವಿಷಾದದ ಕಥೆ. ಬೆದರಿಕೆಯ ವಾತಾವರಣದಲ್ಲಿನ ಹೇಡಿತನದ ಕಥೆ. ಮುಕ್ತ ಅಭಿವ್ಯಕ್ತಿಯನ್ನು ಪ್ರತಿಬಂಧಿಸುವ ಈ ಪ್ರಕ್ರಿಯೆಯಲ್ಲಿ ಕೆಳ ನ್ಯಾಯಾಲಯಗಳು ಹಾಗೂ ಕೆಲವು ಹೈಕೋರ್ಟ್‌ಗಳೂ ಭಾಗಿ.

ಎಲ್ಲಾ ಪಕ್ಷಗಳ ಹಾಗೂ ಎಲ್ಲಾ ಸರ್ಕಾರಗಳ ರಾಜಕಾರಣಿಗಳೂ ಇದಕ್ಕೆ ಹೊರತಲ್ಲ. ಕೆಲವೊಂದು ಅಪವಾದಗಳಲ್ಲಿ, ಭಾರತೀಯ ಪ್ರಜಾಪ್ರಭುತ್ವವಾದಿಗಳು ಸಾಂತ್ವನ ಪಡೆಯಬಹುದು. ಅವೆಂದರೆ ಸುಪ್ರೀಂ ಕೋರ್ಟ್ ಹಾಗೂ ಸಾರ್ವಜನಿಕ ಹಿತದ ದೃಷ್ಟಿಕೋನದ ಸಾರ್ವಜನಿಕ ವ್ಯಕ್ತಿಗಳಾದ ರಾಜ್‌ಮೋಹನ್ ಹಾಗೂ ಗೋಪಾಲಕೃಷ್ಣ ಗಾಂಧಿ.

prajavani

Ambedkar and Buddhism

Book Review

Name of the Book: Ambedkar and Buddhism

Author: Sangharakshita

Publisher: Motilal Banarsidass Publishers, New Delhi

Year: 2006

Pages: 181

Price: Rs. 150

Reviewed by: Yoginder Sikand

Babasaheb Ambedkar was undoubtedly one of the greatest leaders of modern India. Hailed for his pioneering efforts in struggles for justice and equality for the oppressed ‘low’ castes and for framing the Indian Constitution, it was his role in reviving Buddhism in the land of its birth, from where it had almost completely disappeared over the centuries, that, as this brilliantly inspiring book argues, was his crowning achievement. In 1956, along with tens of thousands of his followers, Babasaheb converted to Buddhism, following which vast numbers of other Indians have, over the years, found meaning in acceptance of the doctrine of the Buddha.

This book provides a fascinating account of the gradual evolution of Ambedkar’s religious thought that finally culminated in his momentous decision to convert to Buddhism. The author, a well-known British Buddhist monk, speaks from years of experience of working among Buddhists in India and abroad and from his own personal interactions with Ambedkar before and after the latter’s conversion to Buddhism. He succinctly summarises Ambedkar’s critique of Brahminical Hinduism, from the point of view of both ethics and social justice, and illustrates how Ambedkar, acutely conscious of the importance of religion in personal as well as social life, came to be convinced that Buddhism was the best choice, not just for his fellow oppressed Dalits but for other Indians as well, and, indeed, for the whole of humankind.

The book sets out Ambedkar’s religious journey by providing details of his evolution as a public figure committed to the emancipation of the Dalits from the oppression of the dominant castes, legitimacy for which is provided by the Brahminical Hindu scriptures. Sangharakshita discusses important life-transforming events in Ambedkar’s own life as a victim of ‘upper’ caste prejudice despite his eminent educational qualifications and the important public positions he occupied, which led him to increasingly realise that the emancipation of the Dalits and other oppressed castes was impossible within the framework of Brahminical Hinduism. He provides details of Ambedkar’s initial, pre-conversion struggles against ‘upper’ caste hegemony, such as leading campaigns to defy bans on entry of Dalits into Hindu temples and their access to public tanks; his dramatic public burning of the draconian Manusmriti, the Bible of Brahminism, which, like other Brahminical texts, is premised on the permanent degradation of the Dalits and Shudras; and his consistent opposition to the Congress and its ‘upper’ caste Hindu leadership for their aversion to the independent mobilisation and emancipation of the oppressed castes and for their consistent defence of ‘upper’ caste Hindu domination, an agenda that they shared with other right-wing Hindu revivalists who, unlike them, made no pretence of being ‘secular’, ‘democratic’ and ‘pro-poor’. Frustrated by continued ‘upper’ caste Hindu opposition to the emancipation of the Dalits, for it directly threatened their own caste and class privileges, in 1935, at the Depressed Classes Conference, Ambedkar famously declared that although he had been born a Hindu, he did not intend to die as one. His break with Hinduism was to be irrevocable. However, he was yet to announce which religion he felt best for himself and for his fellow Dalits.

Sangharakshita then turns to developments in Ambedkar’s religious thought in the post-1947 phase, after Ambedkar resigned, in 1951, from Nehru’s Cabinet because of, among other reasons, the government’s apathy to the Dalits and Nehru’s lack of sufficient support to the Hindu Code Bill that he had drafted and which aimed at a radical reform of Hindu Personal Law. His resignation marked the virtual end of his political career, but, as Sangharakshita shows, it may have been a blessing in disguise for it enabled him to devote more attention than he hitherto had to religious matters, for he was now convinced that without a cultural revolution, which necessarily meant the embracing of an egalitarian and humane religion, mere political representation or economic development of the Dalits and other oppressed castes was meaningless and insufficient to challenge ‘upper’ caste-class hegemony.

As Sangharaskhita shows, Ambedkar had already read up on Buddhism early on in his life as an activist and showed appreciation for the Buddha’s opposition to Brahminism and caste discrimination. As he freed himself from his earlier hectic political activism, he became increasingly involved with the Buddhist cause for its direct relevance to the Dalits in their quest for emancipation. In 1950, he visited Sri Lanka, where he addressed the World Fellowship of Buddhists, appealing to the Dalits of that country to embrace Buddhism. The next year, he compiled the Buddha Upasana Patha, a collection of Buddhist devotional texts. In 1954, he paid two visits to Burma, and the next year he founded the Bharatiya Bauddha Mahasabha, or the Indian Buddhist Society, and announced that henceforth he would devote himself to propagating Buddhism in India. Then, in 1956, along with almost 400,000 men and women, mostly from his own Mahar caste, Ambedkar took the tri sarana, the Three Refuges, and the pancha shila, the Five Precepts, embracing Buddhism at Nagpur in what was probably the largest mass conversion event in world history. Sangharakshita describes the conversion experience as immensely liberating for those who participated in it, for it provided them a new identity and sense of self in their quest to break the shackles of caste and untouchability that the ‘upper’ castes had thrust on them for millennia. He also mentions in passing, though one wishes he had provided more details, of his own involvement in propagating Buddhism among Dalits after, and inspired by, Ambedkar’s own conversion.

Sangharakshita elaborates at length as to how Ambedkar himself envisaged the Buddhist conversion movement. His renunciation of Hinduism was not, he makes clear, directed at individual ‘upper’ caste people, but, rather, against Brahminism as an inegalitarian ideology and a politico-cultural system that was premised on the degradation of a vast section of humanity based simply on birth. Since Hinduism was premised on caste, and most forms of Hinduism were based on the untenable notion of Brahmin supremacy, it posed, Ambedkar believed, a permanent, impassable barrier to the quest for self-respect of the historically oppressed castes, who formed the majority of the Indian population. In contrast, the Buddha strongly denounced caste discrimination, and so his religion, Ambedkar stressed, was ideal not just for the oppressed castes but also for other Indians, who, too, in his view, needed to be liberated from caste consciousness and meaningless dogma in the name of religion and culture in order to be truly humane. Unlike Islam and Christianity, Ambedkar pointed out, Buddhism was an Indic religion, and conversion to it would not involve acceptance of a foreign culture—Arabic, in the case of the former, or Western, in the case of the latter. As he explained, ‘[…] Buddhism is part and parcel of the Bharatiya culture. I have taken care that my conversion will not harm the tradition of the culture and history of this land.’ Moreover, Ambedkar believed that the ancestors of many Dalits had once been Buddhists and that they had been turned by the Brahmins into Untouchables precisely because of their religion, which the Brahmins saw as a rival to their authority and hegemony. In other words, for Ambedkar, the mass conversion of Dalits to Buddhism also served to revive the glorious historical Buddhist legacy of their ancestors, which had been destroyed by Brahminical revivalists as well as Islamic iconoclasts, both of who were responsible for the disappearance of Buddhism from the land of its birth through active persecution of Buddhists.

Buddhism had other features that attracted Ambedkar to it, which convinced him that it was the right religion for the Dalits—and others—to adopt, Sanghrakshita elaborates. It was based on a clear code of ethics that were centred on human welfare rather than being theocentric, as in the case of other religions. Because Buddhism has no room for a creator god whose dictatorial will determines or influences the fate of individuals, it is opposed to the passive fatalism and mindless worship and ritualism that most other religions promote. Unlike the god-centred religions, it does not require its followers to believe in unscientific dogmas. It does not threaten them with hell-fire, there to be punished by a tyrannical dictator god, if they refuse to believe in particular theological claims, practise certain rituals, or engage in certain mortifications and sacrifices. Nor does it offer them the bribe of bliss in heaven if they do so. In contrast to other religions, Buddhism is based not on god, a belief that inevitably leads to priestly tyranny, but, rather, simply on a code of personal morality and a system of mental training. This conduces to both personal as well as collective welfare. The Buddha, Ambedkar correctly argued, ‘was the first teacher in the world who made morality the essence and foundation of religion.’ ‘Buddhism is the only religion based upon ethical principles and teaches how to work for the well-being of the common man,’ Ambedkar rightly wrote. For the Buddha, religion, or, more properly, Dhamma, was not based on the worship of an external god, but, rather, had everything to do with personal mental and moral development, which was possible only through self-effort rather than through abject dependence on a presumed deity. One could, therefore, hope to improve one’s conditions through one’s own actions, rather than hope in vain for presumed divine intervention. Accordingly, actions were to be performed or abstained from not according to whether they were believed to have been commanded by a god, but, rather, according to whether or not they were in themselves right. Likewise, Ambedkar argued, Buddhism did not ennoble enforced or involuntary poverty, which was an inevitable consequence of Hinduism with regard to the Dalits.

Unlike key figures in other religions, who made special, though unverifiable, claims for themselves as being representatives of an invisible god or even as gods themselves, the Buddha made no such assertions, Ambedkar pointed out. The Buddha, he noted, was fully human and did not claim any supernatural origins or powers, but, through his efforts, had attained Buddha-hood or supreme enlightenment, a status that any other human could also attain if he walks on the path that the Buddha had taught. In contrast to the leading figures in other religions, the Buddha did not issue orders, based on a claim of special links to an invisible god, but only advised and inspired people to adopt the moral path. Unlike them, he did not claim infallibility for his teachings. Ambedkar refers to the Mahaparinibbana Sutta, where the Buddha tells his disciple Ananda that his doctrine is based on reason and experience, and that his followers should not accept his teachings as correct and binding simply because they emanated from him. This indicated, Ambedkar believed, that Buddhism, unlike other religions, was capable of adjusting to changing circumstances.

All this and more led Ambedkar to write, ‘If the new world—which be it realized is very different from the old—must have a religion—and the new world needs a religion far more than the old world did—then it can only be the religion of the Buddha.’ This was no hollow rhetoric, for Ambedkar, Sangharakshita tells us, deeply felt that Buddhism, unlike the other religions, satisfied all the criteria of a meaningful philosophy—ethical, social, and intellectual. Unlike the god-centred religions, it was scientific, in a certain sense, and placed no bars on mental development. Unlike them, it did not glorify narrow communalism in the name of the unity of a set of co-believers. Rather, it stood for universal liberty, equality, fraternity and compassion.

At the same time as Ambedkar saw Buddhism as the religion of the new age, including for his own fellow Dalits, he also stressed the need for reforms in the Buddhist monastic community, the Sangha, to make it more socially engaged and relevant to the laity. He critiqued world-renouncing tendencies that had crept into the Sangha, which, he noted, were against the philosophy of the Buddha himself. Members of the Buddhist Sangha had to be concerned about the material and spiritual conditions and welfare of people, rather than restricting themselves to meditation alone or content simply with the quest for their own enlightenment. If the Sangha was to serve as a model of the ideal society, to provide intellectual leadership to people, to render free practical service to them and to retain their links with them, Ambedkar believed that there was much need for reform. Commenting on the conditions of the Buddhist monks or bhikkhus in the Buddhist-majority parts of South-East Asia, he commented that ‘a very large majority are merely Sadhus and Sannyasis spending their time in meditation or idleness. There is in them neither learning nor service.’ By focussing only on their own spiritual quest, and being indifferent to the sufferings of the world, many bhikkhus, he sadly noted, had given up the Buddhist ideal of service to others. Accordingly, Sangharakshita writes, Ambedkar suggested important reforms in the Sangha, hoping that bhikkhus would emulate, in some respects, the Catholic Jesuits in terms of education and social involvement. That would not be an innovation though, for it was thoroughly in keeping with the spirit of the Buddha’s own life. He also expected them to play a more central and active role in spreading the message of the Buddha so that Buddhism would once again expand and flourish in India.

Sangharakshita reflects on the course of the Buddhist movement in India in the years after the mass conversion that Ambedkar led in Nagpur in 1956, just seven weeks after which he died. He notes that, over the years, the movement has slowed down, that many Buddhists continue to practice various pre-Buddhist customs, and that even among the Dalits, only some castes have taken to Buddhism while the majority have not. Clearly, then, Ambedkar’s dream of reviving Buddhism in the land of its birth remains far from complete. But, be that as it may, this dream continues to provide inspiration for millions aspire for a more just, egalitarian and compassionate society that the Buddha pointed the way towards.

This eminently inspiring book is a must-read for everyone concerned about the struggle for social justice in India as well as for those seeking a more meaningful spirituality. It definitely deserves to reach more than a narrow English-knowing readership and certainly ought to be translated into various regional languages.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...