Monday, November 21, 2011

ಕೊರೆಗಾವ್ ವಿಜಯ : ದಲಿತ ಸ್ವಾಭಿಮಾನ dina

1818 d£ÉêÀj 1.
EzÀÄ zÀ°vÀ ¸Áé©üªÀiÁ£ÀzÀ ¢£À ! zÀ°vÀgÁzÀªÀgÉ®è ªÀÄgÉAiÀÄzÉà £É£À¦qÀ¨ÉÃPÁzÀ ¢£À. Erà zÉñÀzÀ°èAiÉÄà ªÀtðzsÀªÀÄðªÀ£ÀÄß ¥Á°¹, zÀ°vÀgÀ£ÀÄß ¤gÀAvÀgÀªÁV ±ÉÆõÀuÉ ªÀiÁqÀÄvÀÛ, CªÀgÀ ªÉÄÃ¯É ¢£À¤vÀå C£ÁåAiÀĪɸÀUÀÄvÀÛ §A¢zÀÝ ªÀĺÁgÁµÀÖçzÀ ¥ÉñÉéUÀ¼À ¸ÉÆPÀÌqÀV¹ ¥ÉñÁé¬Ä ¸ÁªÀiÁædåªÀ£ÀÄß E¤ß®èzÀAvÉ ªÀiÁrzÀ LwºÁ¹PÀ ¢£À«zÀÄ. ¸ÀĪÀiÁgÀÄ £À®ªÀvÀÄÛ ¸Á«gÀzÀ¶ÖzÀÝ ¥ÉñÉé ¸ÉʤPÀgÀ£ÀÄß PÉêÀ® LzÀÄ £ÀÆgÀÄ «ÃgÀ AiÉÆÃzsÀgÀÄ ªÀÄtÄÚªÀÄÄQ̹zÀ ¢£À«zÀÄ.
ºËzÀÄ !
»AzÀÆ zsÀªÀÄðzÀ C£ÁZÁgÀUÀ¼À£Éß®è zÀ°vÀgÀ ªÉÄÃ¯É ºÉÃj, ¤zÀð¬ÄAiÀiÁV ªÀwð¹zÀÝ ¥ÉñÉéUÀ½UÉ EAxÀzÉÆÝAzÀÄ CAvÀå vÉÆÃj¸ÀĪÀ CªÀ±ÀåPÀvÉ EvÀÄÛ. CzÀ£ÀÄß ¸ÁzsÀå ªÀiÁr vÉÆÃj¹zÀªÀgÀÄ ©ænµï ¸ÉãÉAiÀÄ°èzÀÝ zÀ°vÀ AiÉÆÃzsÀgÀÄ. ¥ÀÄuÉ-CºÀªÀÄzÁ£ÀUÀgÀ ªÀiÁUÀðzÀ°è ©üêÀiÁ£À¢AiÀÄ wÃgÀzÀ°è PÉÆÃgÉUÁªÀ ºÉ¸Àj£À MAzÀÄ ¸ÀtÚ ºÀ½î¬ÄzÉ. ºÀ½î ¸ÀtÚ¢zÀÝgÀÆ ©üêÀiÁ wÃgÀzÀ D ºÀ½îAiÀÄ°è CqÀVgÀĪÀ EwºÁ¸À vÀÄA§ zÉÆqÀØzÀÄ. CµÉÖà C®è CzÀÄ ¸ÀÆáwðzÁAiÀÄPÀªÁzÀÄzÀÆÝ ºËzÀÄ ! CzÉÆAzÀÄ £ÀªÀÄä£ÀÄß ºÀÄjzÀÄA©¸ÀĪÀ ªÀÄvÀÄÛ C©üªÀiÁ£À ¥ÀqÀĪÀAvÉ ªÀiÁqÀĪÀ EwºÁ¸ÀªÉà ¸Àj.
°vÀ ªÀUÀð¢AzÀ §AzÀªÀgÀÄ AiÀiÁªÀÅzÉà PÉ®¸ÀzÀ°èzÀÝgÀÆ ¤µÉ×UÉ ºÉ¸ÀgÁzÀªÀgÀÄ. ªÀtðªÀåªÀ¸ÉܬÄAzÀ ªÀåwvÀgÁV £À®ÄV ºÉÆÃzÀ CªÀgÀÄ, ¸ÉÃ£É ¸ÉÃj ¸Á¢ü¹zÀ ¹¢ÞUÀ¼ÀÄ MAzÉgÀqÀgÀ®è. CªÀÅUÀ¼À£ÀÄß MAzÉÆAzÁV ªÉÄ®ÄPÀÄ ºÁQzÁUÀ ªÀÄÄaÑlÖ CxÀªÁ ªÀÄgÉvÀÄ ºÉÆÃzÀ EwºÁ¸ÀzÀ zÉÆqÀØzÉÆAzÀÄ CzsÁåAiÀÄ vÉgÉzÀÄPÉƼÀÄîvÀÛzÉ.
C¸ÀºÀåªÉ¤ß¸ÀĪÀAvÀºÀ C¸Ààø±ÀåvÉAiÀÄ£ÀÄß ºÉÃj ¥ÀæwPÀëtªÀÇ ¸ÀA±À¬ÄvÀ zÀȶ֬ÄAzÀ £ÉÆÃqÀĪÀ ¥ÉñÉéUÀ¼À £ÀqÉAiÀÄ£ÀÄß «gÉÆâü¹, CzÀPÉÌ vÀPÀÌ ¥ÀæwÃPÁgÀ wÃj¹PÉƼÀî®Ä vÀªÀÄUÁzÀ CªÀªÀiÁ£ÀªÀ£ÀÄß ºÉÆmÉÖAiÉƼÀVlÄÖPÉÆArzÀÝ ªÀĺÁgÀgÀÄ ¸Áé©üªÀiÁ£À¢AzÀ ¥ÀÄnzÉzÀÄÝ UɮĪÀÅ ¸Á¢ü¸ÀĪÀÅzÀPÉÌ LwºÁ¹PÀªÁzÀ PÉÆÃgÉUÁªÀ PÀzÀ£À CªÀPÁ±À ¤ÃrvÀÄ.
©ænµÀgÀÄ C¸Ààø±ÀåvÉAiÀÄ «ZÁgÀ¢AzÀ zÀÆgÀªÀŽzÀÄ PÉêÀ® «ÃgÀvÀ£ÀªÀ£Éßà ªÀÄÄRåªÁVlÄÖPÉÆAqÀÄ vÀªÀÄä ¸ÉãÉAiÀÄ°è ªÀĺÁgÀjUÉ ºÉaÑ£À ¥ÀæªÀiÁtzÀ°è ¥ÀæªÉñÀ ¤Ãr, CªÀjUÉ ¸ÉãÁ ²PÀët ¤ÃrzÀgÀÄ. F ªÀĺÁgÀgÀ C¨sÀÆvÀ¥ÀƪÀð PÀ°vÀ£ÀzÀ PÁgÀt¢AzÀ¯Éà ©ænµÀgÀÄ PÉÆÃgÉUÁªÀ PÀzÀ£ÀªÀ£ÀÄß UÉ®è®Ä ¸ÁzsÀåªÁ¬ÄvÀÄ. EwºÁ¸ÀzÀ AiÀiÁªÀÅzÉà ¥Àæ¸ÀAUÀUÀ¼ÀÄ ªÀĺÁgÀgÀ F PÀ°vÀ£ÀPÉÌ ¸Àj¸ÁnAiÀiÁV ¤®è¯ÁgÀªÀÅ. PÉÆÃgÉUÁªÀzÀ°è CRAqÀªÁV ¤AwgÀĪÀ «dAiÀĸÀÛA¨sÀ EA¢UÀÆ D «ÃgÀ ªÀĺÁgÀgÀ £É£À¥À£ÀÄß ºÀZÀÑ ºÀ¹gÁVnÖzÉ.
§AzsÀÄUÀ¼ÉÃ, qsÉÆÃAV, ¥ÁRAr, ¸ÀªÀÄAiÀĸÁzsÀPÀvÀ£À ªÀÄvÀÄÛ zÉêÀgÀÄ-zsÀªÀÄðzÀ ºÉ¸Àj£À°è ªÀĺÁgÀgÀ §zÀÄPÀ£Éßà ºÀgÁªÀÄ ªÀiÁrzÀ, ¸ÀÆvÀæzÀ UÉÆA¨ÉAiÀÄ£ÁßV¹zÀ F ¸ÀªÀiÁdPÉÌ ªÀĺÁgÀ gÀPÀÛzÀ°ègÀĪÀ GªÉÄâ£À gÀhÄ®Pï vÉÆÃj¸ÀĪÀ ¸ÀA¢ü ¹QÌvÉA§ MAzÉà MAzÀÄ PÁgÀt¢AzÀ PÉÆÃgÉUÁªÀ PÀzÀ£À £ÀqɬÄvÀÄ. ªÀĺÁgÀgÀ ¸Áé©üªÀiÁ£ÀªÀ£Éßà ºÁ¼ÀÄ ªÀiÁrzÀ ¥ÉñÉéUÀ¼À «gÀÄzÀÞ ºÉÆÃgÁl ªÀiÁrzÀ PÉÆÃgÉUÁªÀ PÀzÀ£ÀzÀ°è ©ænµï ¸ÀgÀPÁgÀ dAiÀÄ UÀ½¸À®Ä ªÀĺÁgÀ «ÃgÀgÀ ¥ÀgÁPÀæªÀĪÉà PÁgÀt JA§ÄzÀ£ÀÄß ªÀÄgÉAiÀĨÁgÀzÀÄ.
AiÀiÁjUÉ ªÀÄ£ÀĵÀågÁV §zÀÄPÀ®Ä CªÀPÁ±ÀªÀ£Éßà ¤ÃrgÀ°®èªÉÇà AiÀiÁjUÉ M¼ÉîAiÀÄ §mÉÖ CxÀªÁ ¥ÁvÉæ §¼À¸ÀĪÀÅzÀPÉÌ ¤§ðAzsÀ«vÉÆÛÃ, AiÀiÁjUÉ ©Ã¢UÀ¼À°è CqÁØqÀ®Æ CªÀPÁ±À«gÀ°®èªÉÇÃ, AiÀiÁgÀ «ÃgÀvÀé ªÀÄvÀÄÛ ±ËAiÀÄðvÀéPÉÌ CªÀPÁ±À zÉÆgÉAiÀÄÄwÛgÀ°®èªÉÇÃ, AiÀiÁjUÉ CªÀªÀiÁ¤vÀgÁV §zÀÄPÀĪÀ C¤ªÁAiÀÄðvÉAiÀÄ£ÀÄß ¸ÀȶָÀ¯ÁVvÉÆÛà CªÀgÀÄ CAxÀªÀÅUÀ¼À£Éß®è «gÉÆâü¸ÀĪÀÅzÀPÁÌVAiÉÄà ©ænµï ¸ÉãÉAiÀÄ£ÀÄß ¸ÉÃj vÀªÀÄä ¥ÀgÁPÀæªÀÄzÀ MAzÀÄ gÀhÄ®Pï£ÀÄß vÉÆÃj¸ÀĪÀÅzÀPÉÌ ¸ÁzsÀåªÁ¬ÄvÀÄ.
£É£À¦r §AzsÀÄUÀ¼ÉÃ, ²gÀÆgÀ¢AzÀ 27 ªÉÄÊ®ÄUÀ¼À ¸ÀvÀvÀ PÁ®ßrUÉ ªÀÄvÀÄÛ ºÀ¹ªÀÅ-¤ÃgÀrPÉUÀ½AzÀ ªÁåPÀÄ®UÉÆArzÀÝgÀÆ ¨ÉgÀ¼ÉtÂPÉAiÀĶÖzÀÝ ¸Áé©üªÀiÁ¤ ªÀĺÁgÀ AiÉÆÃzsÀgÀÄ vÀªÀÄVAvÀ 40 ¥ÀlÄÖ ºÉaÑzÀÝ ¸ÀªÀð±À¸ÀÛç¸ÀfÓvÀ ¥ÉñÉé ¸ÉãÉAiÀÄ£ÀÄß 12 UÀAmÉUÀ¼À PÁ®zÀ PÀzÀ£ÀzÀ°è zÁgÀÄtªÁV ¥ÀgÁ¨sÀªÀUÉƽ¹ ¥ÉñÉéAiÀÄ ±Á»vÀ£ÀªÀ£ÀÄß zsÀƽ¥Àl ªÀiÁrzÀgÀÄ !
F PÀzÀ£ÀzÀ°è ªÉÆzÀ®£Éà ºÁUÀÆ JgÀqÀ£Éà gÉfªÉÄAn£À MlÄÖ 50 AiÉÆÃzsÀgÀÄ «ÃgÀ ªÀÄgÀtªÀ£ÀߦàzÀgÀÄ. 205 AiÉÆÃzsÀgÀÄ UÁAiÀiÁ¼ÀÄUÀ¼ÁzÀgÀÄ. ºÀÄvÁvÀägÁzÀªÀgÀ°è 22 ªÀĺÁgÀgÀÄ, 16 ªÀÄgÁoÀgÀÄ, 8 gÀd¥ÀÆvÀgÀÄ E§âgÀÄ »AzÀÆUÀ¼ÀÄ ºÁUÀÆ vÀ¯Á M¨ÉÆâ§â ªÀÄĹèA ªÀÄvÀÄÛ Qæ²ÑAiÀÄ£ï AiÉÆÃzsÀgÀÄ ¸ÉÃjzÁÝgÉ.
EzÀPÉÌ®è ¥ÀÆ«ðPÀgÀÄ ¸ÀÆáwðAiÀÄÆ PÁgÀtªÁVvÀÄÛ. »AzÉ ²ªÁf PÁ®¢AzÀ®Æ ªÀĺÁgÀgÀÄ vÀªÀÄä «ÃgÀ-±ËAiÀÄð-¸ÁºÀ¸ÀUÀ½AzÀ ¥ÀæSÁåvÀgÀVzÁÝgÉ. ¥ÁZÀUÀqÀzÀ gÁAiÀÄ£ÁPÀ, ¸ÀĨsÀ£ÁPÀ ªÁWÀ£ÁPÀ, ªÀÄzÀ£ÁPÀ K¸À£ÁPÀ, zsÉÆÃAqÀ£ÁPÀ ¥ÀÄAqÀ£ÁPÀ, ªÉÆzÀ®Ä ¸ÁvÁgÀPÉÌ ¸ÉÃjzÀÝ ¸ÁAVè f¯ÉèAiÀÄ vÁ¸ÀUÁªÀ vÁ®ÆQ£À PÁ¼ÀA© UÁæªÀÄzÀ eÁVÃgÀzÁgÀ£ÁVzÀÝ ±ÀÆgÀ ªÉÆzÀ®£É ²zÀ£ÁPÀ, gÁAiÀÄ£ÁPÀ ªÀĺÁgÀ ªÉÆzÀ¯ÁzÀªÀgÀ ¥ÀnÖAiÉÄà EzÉ. EzÀgÀ ªÀÄÄAzÀĪÀjPÉAiÀiÁV PÉÆÃgÉUÁªÀ PÀzÀ£À PÀ°UÀ¼ÁzÀ ªÀĺÁgÀ AiÉÆÃzsÀgÀÄ PÁt¹PÉƼÀÄîvÁÛgÉ.
1822 gÀ°è PÉÆÃgÉUÁªÀzÀ°è ©üêÀiÁ £À¢AiÀÄ zÀAqÉAiÀÄ ªÉÄÃ¯É «dAiÀĸÀÛA¨sÀªÀ£ÀÄß ¤«Äð¸À¯ÁVzÉ. «dAiÀĸÀÛA¨sÀzÀ ªÉÄÃ¯É “One of the proudest triumphs of the British Army in the East” JAzÀÄ §gÉAiÀįÁVzÉ. CAzÀgÉ ‘¨sÁgÀvÀzÀ ¥ÀƪÀð ¥ÀæzÉñÀUÀ¼À°è vÀ£ÀßzÁV¹PÉÆArgÀĪÀ ºÀ®ªÁgÀÄ «dAiÀÄUÀ¼À°èAiÉÄà F «dAiÀĪÀÅ ©ænµÀ ¸ÉÃ£É ºÉªÉÄä ¥ÀqÀĪÀAwzÉ’ JA§ÄzÀÄ C°è G¯ÉèÃTvÀªÁVzÉ. ¸ÀÛA¨sÀzÀ §¢UÀ¼À°è EAVèÃµï ªÀÄvÀÄÛ zÉêÀ£ÁUÀj °¦AiÀÄ°è ºÀÄvÁvÀägÁzÀ «ÃgÀAiÉÆÃzsÀgÀ ºÉ¸ÀgÀÄUÀ¼ÀÄ PÉvÀÛ®ànÖªÉ. ¹Ã£À£ÁPÀ PÀªÀÄ®£ÁPÀ, gÁªÀÄ£ÁPÀ K¸À£ÁPÀ, UÉÆÃAzÀ£ÁPÀ PÉÆÃqsÉ£ÁPÀ, gÁªÀÄ£ÁPÀ K¸À£ÁPÀ, ¨sÁUÀ£ÁPÀ ºÀgÀ£ÁPÀ, CA§gÀ£ÁPÀ PÁ£À£ÁPÀ, gÀÆ¥À£ÁPÀ ®R£ÁPÀ, UÀt£ÁPÀ ¨Á¼À£ÁPÀ, PÁ¼À£ÁPÀ PÉÆÃAqÀ£ÁPÀ, ªÀ¥À£ÁPÀ gÁªÀÄ£ÁPÀ, «l£ÁPÀ zsÁªÀÄ£ÁPÀ, gÁd£ÁPÀ UÀt£ÁPÀ, ªÀ¥À£ÁPÀ ºÀgÀ£ÁPÀ, gÉÊ£ÁPÀ ªÁ£À£ÁPÀ, UÀt£ÁPÀ zsÀgÀªÀÄ£ÁPÀ, zÉêÀ£ÁPÀ D£À£ÁPÀ, UÉÆÃ¥Á¼À£ÁPÀ ¨Á¼À£ÁPÀ, ºÀgÀ£ÁPÀ »ÃgÀ£ÁPÀ, eÉÃoÀ£ÁPÀ zÉÊ£ÁPÀ, UÀt£ÁPÀ ®R£ÁPÀ, eÁ£À£ÁPÀ ºÀgÀ£ÁPÀ, gÀvÀ£À£ÁPÀ zsÀ£À£ÁPÀ JA§ C°èAiÀÄ ºÉ¸ÀgÀÄUÀ¼Éà £ÀªÀÄä ªÉÄÊ ªÀÄ£ÀUÀ¼À£ÀÄß gÉÆêÀiÁAavÀUÉƽ¸ÀÄvÀÛªÉ. ªÀÄgÉvÀÄ ºÉÆÃzÀ EwºÁ¸ÀªÀ£ÀÄß PÀtÄäAzÉ PÀnÖ PÉÆqÀÄvÀÛªÉ.
§ºÀıÀB EAvÀºÀ ªÀĺÁgÀ «ÃgÀgÀ£ÀÄß PÀArzÀÝ ªÀĺÁgÁµÀÖçzÀ ¸ÀAvÀ±ÉæõÀÖ vÀÄPÁgÁªÀÄ, “ªÀĺÁgÁ¹ ²ªÉ l PÉÆÃ¥É vÉÆà ¨ÁæºÀät £ÀªÉí l” JAzÀÄ vÀªÀÄä C¨sÀAUÀzÀ°è ºÉýzÁÝ£É. CAzÀgÉ ¨ÁæºÀätjVAvÀ ªÀĺÁgÀgÀÄ ªÀĺÁªÀÄ»ªÀÄgÀÄ JA§ÄzÉà E°èAiÀÄ ¨sÁªÀ.
qÁ. ¨Á¨Á¸ÁºÉç CA¨ÉÃqÀÌgÀgÀÄ vÀªÀÄä C£ÀÄAiÀiÁ¬ÄUÀ¼ÉÆA¢UÉ ²gÀÆgÀ ¸À«ÄÃ¥ÀzÀ ©üêÀiÁ-PÉÆÃgÉUÁªÀPÉÌ §AzÀÄ «ÃgÀ-¥ÀgÁPÀæªÀÄzÀzÀ UÀvÀ ¸ÁºÀ¸ÀªÀ£ÀÄß ¸ÁgÀĪÀ «dAiÀÄ ¸ÀÛA¨sÀPÉÌ 1£Éà d£ÉêÀj 1927 gÀAzÀÄ UËgÀªÀ ªÀAzÀ£É ¸À°è¹zÀgÀÄ. D ¢£ÀªÀ£ÀÄß PÉÆÃgÉUÁªÀ PÀzÀ£ÀzÀ ªÀĺÁgÀ PÀ°UÀ¼À ¸Àäøw¢£ÀªÀ£ÁßV DZÀj¹zÀgÀÄ. EzÀQÌAvÀ ªÉÆzÀ®Ä EwºÁ¸ÀzÀ°è ªÀÄÄaѺÉÆÃVzÀÝ CxÀªÁ ªÀÄÄaÑ ºÁPÀ®àlÖ «dAiÀÄ ¸ÀÛA¨sÀzÀvÀÛ AiÀiÁgÀÆ ºÁAiÀÄÄwÛgÀ°®è PÀÆqÀ. DzÀgÉ AiÀiÁªÁUÀ qÁ. ¨Á¨Á¸ÁºÉç CA¨ÉÃqÀÌgÀgÀÄ ¸Àäøw¢£ÀªÀ£ÀÄß DZÀj¹zÀgÉÆà CA¢¤AzÀ EA¢£ÀªÀgÉUÉ ¥ÀæwªÀµÀð d£ÉêÀj 1 gÀAzÀÄ zÉñÀzÀ ««zsÀ ¨sÁUÀUÀ½AzÀ §gÀĪÀ C¸ÀASÁåvÀ d£À ¸ÀªÀÄƺÀ ¸Àäøw ¢£ÀªÀ£ÀÄß DZÀj¸ÀÄvÀÛ §gÀ¯ÁUÀÄwÛzÉ.. qÁ. ¨Á¨Á¸ÁºÉç CA¨ÉÃqÀÌgÀgÀÄ AiÀiÁªÀÅzÉà ªÀĺÀvÀézÀ PÉ®¸À«zÀÝgÀÆ CzÀ£Éß®è §¢UÉÆwÛ d£ÉêÀj MAzÀgÀAzÀÄ PÉÆÃgÉUÁªÀPÉÌ §AzÀÄ «dAiÀÄ ¸ÀÛA¨sÀPÉÌ UËgÀªÀ ªÀAzÀ£É ¸À°è¸ÀÄwÛzÀÝgÀÄ.
»ÃUÉ®è EzÀÝgÀÆ PÀÆqÀ PÉ®ªÀÅ ¸ÀªÀÄAiÀĸÁzsÀPÀgÀÄ PÉÆÃgÉUÁªÀ PÀzÀ£ÀzÀ §UÉÎ ºÉüÀĪÀÅzÉãÉAzÀgÉ `F PÀzÀ£À £ÀªÀÄäzÉà zÉñÀzÀ°èAiÀÄ £ÀªÀÄäzÉà §AzsÀÄUÀ¼À «gÀÄzÀÞªÁVvÀÄÛ ! D PÀzÀ£ÀzÀ ¥sÀ®ªÁzÀgÀÆ K£ÀÄ ?’
»ÃUÉ ºÉüÀĪÀªÀjUÉ MAzÀÄ ¸ÀªÁ®£ÀÄß F ¸ÀAzÀ¨sÀðzÀ°è ºÁPÀ¯ÉèÉÃPɤ¸ÀÄvÀÛzÉ ; C®è ¸Áé«Ä, vÀªÀÄä §AzsÀÄUÀ¼À£ÀÄß AiÀiÁgÁzÀgÀÆ UÀįÁªÀÄgÀ£ÁßV ªÀiÁrPÉƼÀÄîvÁÛgÉAiÉÄà ? vÀªÀÄä §AzsÀÄ«£À ºÉtÄÚªÀÄUÀ¼ÉƧâ¼À ªÀiÁ£ÀªÀ£ÀÄß PÀ¼ÉAiÀÄÄvÁÛgÉAiÉÄà ? vÀªÀÄä §AzsÀÄUÀ¼À£ÀÄß AiÀiÁgÁzÀgÀÆ C£Àß-¤ÃjUÁV ZÀqÀ¥Àr¸ÀĪÀAvÉ ªÀiÁqÀÄvÁÛgÉAiÉÄà ? ¸ÁªÀðd¤PÀ eÁUÀzÀ°è CqÁØqÀ®Ä ¤§ðAzsÀ «¢ü¸À§ºÀÄzÉà ? vÀªÀÄä ¨ÁAzsÀªÀgÀ£ÀÄß AiÀiÁgÁzÀgÀÆ ºÉüÀ ºÉ¸Àj®èzÀAvÉ £Á±À ªÀiÁqÀĪÀ PÀÄvÀAvÀæ ªÀiÁqÀ§ºÀÄzÉà ? vÀªÀÄä §AzsÀÄUÀ¼À ªÉÄÃ¯É vÁªÉà PɸÀgÀÄ JgÀa, C¥ÀºÁ¸Àå ªÀiÁr £ÀUÀ§ºÀÄzÉà ? F ¥ÀæPÀgÀtUÀ¼ÀÄ £ÀqÉAiÀÄÄvÀÛ¯Éà EªÉ JAzÁzÀgÉ CªÀgÀÄ £ÀªÀÄä §AzsÀÄUÀ¼ÀÄ ºÉÃUÁUÀÄvÁÛgÉ ?
PÉêÀ® ¨ÉgÀ¼ÉtÂPÉAiÀĶÖzÀÝ ªÀĺÁgÀ «ÃgÀ AiÉÆÃzsÀgÀÄ, ¥ÉñÉéUÀ¼À §¯ÁqsÀå ¸ÉãÉAiÀÄ£ÀÄß F PÉÆÃgÉUÁªÀ PÀzÀ£ÀzÀ°è »Ã£ÁAiÀĪÁV ¸ÉÆð¹zÀÄÝ ¸ÉÆÃfUÀªÀ®è. ¥ÉñÉéUÀ½AzÀ GAmÁzÀ ¸ÁªÀiÁfPÀ C¤µÀÖ, C£ÁåAiÀÄ ªÀÄvÀÄÛ C¸Ààø±ÀåvÉUÀ½AzÀ vÀªÀÄUÁzÀ ±ÉÆõÀuÉUÉ ¥ÀæwAiÀiÁV ¥ÀæwPÁgÀ ¸Á¢ü¹zÀ F £ÀqÉ ªÀĺÁgÀgÀ ¸Áé©üªÀiÁ£ÀªÀ£ÀÄß JwÛ »rAiÀÄÄvÀÛzÉ. PÉÆÃgÉUÁªÀ PÀzÀ£ÀzÀ UɮĪÀÅ JAzÀgÉ C£ÁåAiÀÄzÀ «gÀÄzÀÞ ¥ÀqÉzÀ UɮĪÉà DVzÉ.
qÁ. ¨Á¨Á¸ÁºÉç CA¨ÉÃqÀÌgï CªÀgÀÆ PÀÆqÀ EzÉà C©ü¥ÁæAiÀĪÀ£ÀÄß ªÀåQÛ¸ÀÄvÁÛgÉ. "©ænµÀgÀ ¥ÀgÀªÁV ªÀĺÁgÀ AiÉÆÃzsÀgÀÄ AiÀÄÄzÀÞ ªÀiÁrzÀÄÝ C©üªÀiÁ£À ¥ÀqÀĪÀ ¸ÀAUÀwAiÀÄ®è¢zÀÝgÀÆ ªÀĺÁgÀ AiÉÆÃzsÀgÀÄ ©ænµÀgÀ ¥ÀgÀ AiÀiÁPÉ ºÉÆÃzÀgÀÄ JA§ ¥Àæ±Éß J®ègÀ ªÀÄ£ÀzÀ°è ªÀÄÆqÀĪÀÅzÀÄ ¸ÀºÀdªÉà DVzÉ. ªÀĺÁgÀgÀÄ ªÀÄvÉÛãÀÄ ªÀiÁqÀ®Ä ¸ÁzsÀå«vÀÄÛ ? »AzÀÄUÀ¼É¤¹PÉÆAqÀªÀgÀÄ CªÀgÀ£ÀÄß QüÀÄ JAzÀÄ ¥ÀjUÀt¹ £Á¬Ä-£ÀjUÀ½VAvÀ®Æ PÀqÉAiÀiÁV ªÀwð¹zÁUÀ D CªÀªÀiÁ£ÀªÀ£ÀÄß ¸À»¹PÉÆAqÀÄ JµÀÄÖ ¢£À §zÀÄPÀĪÀÅzÀÄ ? ¸Áé©üªÀiÁ£ÀzÀ £É¯ÉAiÀÄ°è ªÀÄvÀÄÛ ºÉÆmÉÖUÉ »lÄÖ zÉÆgÀQ¹PÉƼÀî®Ä CªÀgÀÄ C¤ªÁAiÀÄðªÁV ©ænµÀgÀ ¸ÉÃ£É ¸ÉÃjzÀgÉA§ÄzÀ£ÀÄß ¥ÀæwAiÉƧâgÀÄ ®PÀëöåzÀ°èqÀ¨ÉÃPÀÄ" JA§ qÁ. ¨Á¨Á¸ÁºÉç CA¨ÉÃqÀÌgï CªÀgÀ ªÀiÁvÀÄUÀ¼À£ÀÄß £ÁªÀÅ CxÀð ªÀiÁrPÉƼÀî¨ÉÃPÀÄ.
ªÀĺÁgÀ AiÉÆÃzsÀgÀÄ ªÀÄÄAa¤AzÀ®Æ CAzÀgÉ ²ªÁfAiÀÄ PÁ®¢AzÀ®Æ ªÀÄgÁoÁ ¸ÉãÉAiÀÄ°è ¥ÁæªÀiÁtÂPÀvɬÄAzÀ, ¥ÀgÁPÀæªÀÄ¢AzÀ zÀÄrzÀªÀgÀÄ. DzÀgÉ JgÀqÀ£Éà ¨ÁfgÁªÀ UÀzÀÄÝUÉ KjzÁUÀ C£ÀĨsÀ«¹zÀ eÁwAiÀÄvÉAiÀÄ vÁgÀvÀªÀÄåvÉ zÀ°vÀgÀ£ÀÄß ¸ÀºÀdªÁVAiÉÄà PÉgÀ½¹vÀÄÛ. D ¸ÀAzÀ¨sÀðzÀ°è CzÀ£ÀÄß ºÉüÀ¯ÁVvÀÄÛ PÀÆqÀ. JgÀqÀ£Éà ¨ÁfgÁªÀ£À §zÀ°UÉ ¨ÉÃgÉAiÀĪÀgÀÄ AiÀiÁgÁzÀgÀÆ ¸ÀªÀÄxÀðgÀÄ ¥ÉñÉéUÀ¼ÁzÀgÉ ªÀiÁvÀæ vÁªÀÅ vÀªÀÄä vÁAiÉÄß®ªÀ£ÀÄß ¥ÁætªÀ£Éßà §° PÉÆmÁÖzÀgÀÆ PÀÆqÀ PÁ¥ÁqÀ®Ä ¹zÀÞ«gÀĪÀÅzÁV ¥ÀgÁPÀæ«Ä ²zÀ£ÁPÀ ªÀÄ£À« ªÀÄÆ®PÀ ¥ÀæPÀn¹zÀÝ. ¥ÉñÉé F «£ÀAwAiÀÄ£ÀÄß CvÀåAvÀ wgÀ¸ÁÌgÀ¢AzÀ vÀ½î ºÁQzÀ. DzÀÝjAzÀ¯Éà ªÀĺÁgÀ AiÉÆÃzsÀgÀÄ ©ænµÀ ¥ÀqÉ ¸ÉÃj ¥ÉñÉéAiÀÄ£ÀÄß ªÀÄÄV¸À®Ä ªÀÄÄAzÁzÀgÀÄ. ¸ÀASÉåAiÀÄ°è C®àªÁVzÀÝgÀÆ CvÀåAvÀ PÉaѤAzÀ PÀ°vÀ£À ¥ÀæzÀ²ð¹zÀ ªÀĺÁgÀ AiÉÆÃzsÀgÀÄ, vÀªÀÄä ªÉÄÃ¯É CªÀiÁ£À«ÃAiÀĪÁzÀ §AzsÀ£ÀPÁj ¤AiÀĪÀÄUÀ½AzÀ C¸Ààø±ÀåvÉAiÀÄ£ÀÄß ºÉÃjzÀÝ ¥ÉñÉé DqÀ½vÀªÀ£ÀÄß PÀzÀ£ÀzÀ°è ªÀÄtÄÚ ªÀÄÄQ̹zÀgÀÄ.
¥Àæw ªÀµÀð d£ÉêÀj MAzÀgÀAzÀÄ zÉñÀzÀ ªÀÄÆ¯É ªÀÄƯÉUÀ½AzÀ §ÈºÀvï ¥ÀæªÀiÁtzÀ°è DUÀ«Ä¸ÀĪÀ zÀ°vÀgÀÄ ªÉÆzÀ®Ä «dAiÀÄ ¸ÀÛA¨sÀPÉÌ UËgÀªÀ ªÀAzÀ£É ¸À°è¸ÀÄvÁÛgÉ. £ÀAvÀgÀ ªÉÄÊzÁ£ÀzÀ DlUÀ¼ÀÄ DgÀA¨sÀUÉƼÀÄîvÀÛªÉ. ªÀÄzsÁåºÀß ¸ÀºÀ¨sÉÆÃd£À PÀÆqÀ EgÀÄvÀÛzÉ. ¨sÉÆÃd£ÀzÀ £ÀAvÀgÀ MA¢µÀÄÖ «±ÁæAw ¥ÀqÉzÀÄPÉÆAqÀÄ ¸ÀAeÉAiÀÄ E½ ºÉÆwÛ£À ¸ÀªÀÄAiÀÄzÀ°è ««zsÀ ¸ÀàzsÉðUÀ¼À°è UÉzÀݪÀjUÉ §ºÀĪÀiÁ£À «vÀgÀuÉAiÀiÁUÀÄvÀÛzÉ. F ¸ÀAzÀ¨sÀðzÀ°è ¸À¨sÉAiÀÄÆ £ÀqÉAiÀÄÄvÀÛzÉ.
§AzsÀÄUÀ¼ÉÃ, £ÁªÀÅ ¥Àæw ªÀµÀð D «ÃgÀ «dAiÀĸÀÛA¨sÀzÀ ºÀwÛgÀ ºÉÆÃV UÀAl®Ä ºÀjAiÀÄĪÀAvÉ WÉÆõÀuÉ PÀÆUÀÄvÉÛêÉ. EzÀ£ÀÄß vÀ¥ÉàAzÀÄ £Á£ÀÄ ºÉüÀÄwÛ®è. M¼ÉîAiÀÄ ¸ÀAUÀwAiÉÄà ¸Àj ! DzÀgÉ CzÉà bÀ®¢AzÀ ; CzÉà ªÀÄ£À¹ì¤AzÀ £ÁªÀÅ £ÀªÀÄä ¥ÀÆ«ðPÀgÀ ¥ÀgÁPÀæªÀĪÀ£ÀÄß G½¹PÉÆAqÀÄ §gÀ¨ÉÃPÀÄ JAzÀÄ PÀÆqÀ £ÀªÀÄUÉ DUÀ C¤ß¸À¨ÉÃPÀ®èªÉà ? C¤ß¹zÀgÀÆ D ¥ÀgÁPÀæªÀÄ ±ÀQÛ EAzÀÄ £ÀªÀÄä°è G½¢zÉAiÉÄà ? G½AiÀÄ¢zÀÝgÉ CzÀPÁÌV aAw¸ÀĪÀ PÀ¤µÀÖ ¸Ëd£ÀåªÁzÀgÀÆ £ÀªÀÄUÉ EgÀ¨ÉÃqÀªÉà ? fêÀzÀ ºÀAUÀÄ vÉÆgÉzÀÄ CªÀgÀÄ CAzÀgÉ £ÀªÀÄä ¥ÀÆ«ðPÀgÀÄ vÀ¯Á £À®ªÀvÀÄÛ ¸ÉʤPÀjUÉ M§â ªÀĺÁgÀ AiÉÆÃzsÀgÁV WÀ£ÀWÉÆÃgÀ PÀzÀ£ÀzÀ°è «d¬ÄAiÀiÁUÀÄvÁÛgÉ ! ºÁUÁzÀgÉ EAzÀÄ £ÀªÀÄä AiÀÄÄzÀÞ J°è DUÀ¨ÉÃQzÉ ? AiÀiÁgÉÆA¢UÉ DUÀ¨ÉÃQzÉ ? 500 ªÀĺÁgÀgÀÄ MAzÉà fêÀªÁV ºÉÆÃgÁl ªÀiÁrzÀÝjAzÀ¯Éà «dAiÀIJæà CªÀjUÉ M°zÀ¼ÀÄ. ºÁUÁzÀgÉ CAxÀ ±ÀQÛ EAzÀÄ £ÀªÀÄä°è G½¢zÉAiÉÄà ? £ÁªÀÅ ¸Áéyð ªÀÄvÀÄÛ qsÉÆÃAV ªÀÄA¢AiÀÄ®è C®èªÉà ? EA¢£À PÉÆÃgÉUÁªÀ «dAiÀĸÀÛA¨sÀ EgÀĪÀ ¥ÀæzÉñÀªÀ£ÀÄß PÀAqÁUÀ PÉqÀÄPɤ¸ÀÄvÀÛzÉ. CzÉÆAzÀÄ ºÁ¼ÀÄ ¸ÀÄjAiÀÄĪÀ ¸Àä±Á£À ¨sÀÆ«ÄAiÀÄAvÁVzÉ. £ÀªÀÄä «ÃgÀgÀ£ÀÄß £ÁªÉà ªÀÄgÉwgÀĪÀ ¥sÀ® CzÀÄ. ¸ÀPÁðgÀ CzÀ£ÀÄß C©üªÀÈ¢Þ ªÀiÁr®è J£ÀÄߪÀÅzÀQÌAvÀ EµÉÖ®è ºÉÆÃgÁl ªÀiÁr, qÁ. ¨Á¨Á¸ÁºÉçgÀ ºÉ¸Àj¤AzÀ C£Àß w£ÀÄßwÛgÀĪÀ £À£ÀߪÀgÀÄ ªÀÄ£À¸ÀÄì ªÀiÁrzÀgÉ D «dAiÀĸÀÛA¨sÀ EgÀĪÀ ¸ÀܼÀªÀ£ÀÄß ¥ÉæÃPÀëtÂÃAiÀÄ ¸ÀܼÀªÀ£ÁßV ¥ÀjªÀwð¸ÀĪÀ PÁAiÀÄð C¸ÁzsÀåªÉà ?
vÀÄA§ PÉmÉÖ¤¸ÀÄvÀÛzÉ §AzsÀÄUÀ¼ÉÃ, £ÀªÀÄUÉ EAzÀÄ £ÀªÀÄä ¥ÀƪÀð ¥ÀgÀA¥ÀgÉAiÀiÁUÀ°Ã, ¨Á¨Á¸ÁºÉçgÀ DzÀ±ÀðUÀ¼ÁUÀ°Ã PÀtÄäAzÉ E®è. DzÀgÉ CªÀgÀ ºÉ¸ÀgÀ£ÀÄß ªÀÄÄAzÀÄ ªÀiÁrPÉÆAqÀÄ ºÉÆmÉÖ ºÉÆgÉAiÀÄĪÀ°èAiÉÄà £ÁªÀÅ ¤gÀvÀgÁVzÉÝêÉ.
£ÀªÀÄä MUÀÎnÖ£À (KPÀvÉAiÀÄ) EwºÁ¸ÀªÀ£ÀÄß £ÁªÀÅ ªÀÄgÉwzÉÝÃªÉ C®èªÉà ? EzÀjAzÀ¯Éà ±ÉÆõÀuÉ «Äw «ÄÃgÀÄvÀÛzÉAiÀÄ®èªÉà ? £ÁªÀÅ £ÀªÀÄä £ÀªÀÄä°èAiÉÄà dUÀ¼ÀªÁqÀÄvÀÛ PÀĽwÛzÉÝÃªÉ JA§ÄzÀ£ÀÄß PÀAqÁUÀ C¤¸ÀÄvÀÛzÉ ; AiÀiÁgÁågÀÄ PÀ°vÀgÉÆà CªÀgÀ°èAiÀÄ PÉ®ªÀgÀÄ vÀªÀÄä ºÉÆmÉÖAiÀÄ£ÀßµÉÖà zÉÆqÀØzÁV¹PÉÆAqÀgÀÄ ! vÀªÀÄä ¸ÀªÀiÁdPÉÌ vÁªÉãÁzÀgÀÆ IÄt ¸ÀAzÁAiÀÄ ªÀiÁqÀ¨ÉÃQzÉAiÉÄà JA§ CjªÀÅ CªÀgÀ°è ªÀÄPÁqÉ ªÀÄ®V ©nÖzÉ !
£ÁªÀÅ £ÀªÀÄä ±ËAiÀÄðzÀ EwºÁ¸ÀªÀ£Éßà ªÀÄgÉwzÉÝÃªÉ ; ºÀvÀÄÛ d£À ºÀvÀÄÛ PÀqÉ ªÀÄÄR ªÀiÁr ¤AwzÉÝÃªÉ ! MAzÀÄUÀÆqÀĪÀ ; MUÀÎlÄÖ ¥ÀæzÀ²ð¸ÀĪÀ ªÀiÁvÉà E®è ! CzÀgÀ ¥ÀjuÁªÀĪÀ£Éßà £ÁªÀÅ C£ÀĨsÀ«¸ÀÄwÛzÉÝêÉ. ¸ÁªÀiÁ£Àå£ÁzÀ £À£ÀߣÀÆß ¸ÉÃj¹ £ÀªÀÄäªÀgÉà DVgÀĪÀ ªÀÄÄRAqÀgÀÆ EzÀPÉÌ ºÉÆuÉUÁgÀgÁVzÁÝgÉ J¤¸ÀĪÀÅ¢®èªÉà ?
`C¸ÀºÁAiÀÄPÀªÁV §zÀÄPÀĪÀÅzÀQÌAvÀ CªÀé£À ºÉÆmÉÖAiÀÄ°èAiÉÄà ¸ÀvÀÄÛ ºÉÆÃUÀĪÀÅzÀÄ ªÉÄîĒ JAzÀÄ qÁ. ¨Á¨Á¸ÁºÉç CA¨ÉÃqÀÌgïgÀÄ ºÉýzÀÝgÀÄ. EAxÀ ªÀĪÀÄð¨sÉÃzÀPÀ ªÀiÁvÀÄUÀ¼ÉãÁzÀgÀÆ £ÀªÀÄUÉ vÀnÖzÁݪÉAiÉÄà ? E®è ! £ÁªÉ®è vÀl¸ÀÜgÁV ¸ÀA§¼À ¥ÀqÉzÀÄ ¨ÉZÀÑUÉ ºÉÆzÀÄÝPÉÆAqÀÄ ªÀÄ®VzÉÝÃªÉ ; JZÀÑgÁVzÉÝÃªÉ J£ÀÄߪÀ PÉ®ªÀgÀÄ «£ÁPÀgÀt vÀªÀÄä vÀªÀÄä°è dUÀ¼À ªÀiÁrPÉƼÀÄîwÛzÁÝgÉ ; E£ÀÆß PÉ®ªÀgÀÄ ªÀÄvÀìgÀ¢AzÀ ¥ÀgÀ¸ÀàgÀ ªÀiÁvÀ£ÁqÀĪÀÅzÀ£Éßà ©lÄÖ©nÖzÁÝgÉ.
§AzsÀÄUÀ¼ÉÃ, F ¸ÀAzÀ¨sÀðzÀ°è £Á£ÀÄ «±Àé«zÁå®AiÀÄ ªÀÄlÖzÀ°è ¤AvÀÄ MAzÀÄ ªÀiÁvÀÄ ºÉüÀÄwÛzÉÝãÉ. ¤ÃªÉ®è ¸Áé©üªÀiÁ¤ zÀ°vÀgÉà DVzÀÝgÉ, QAavÁÛzÀgÀÆ ¥ÀqÉzÀÄPÉÆAqÀÄzÀÝgÀ IÄt wÃj¸ÀĪÀ PÁAiÀÄðªÀ£ÀÄß AiÀiÁPÉ ªÀiÁqÀ¨ÁgÀzÀÄ. CzÀ£ÀÄß PÀ£ÁðlPÀ «±Àé«zÁå®AiÀÄ¢AzÀ¯Éà DgÀA©ü¸À§ºÀÄzÀ®è ? ²PÀëPÉÃvÀgÀ ¹§âA¢AiÀÄ£ÀÄß ©r ; AiÀÄÄf¹ ¸ÀA§¼À ¥ÀqÉAiÀÄÄwÛgÀĪÀ zÀ°vÀ ¥ÁæzsÁå¥ÀPÀgÀÄ wAUÀ½UÉ PÉêÀ® £ÀÆgÀÄ gÀÄ¥Á¬Ä ¤ÃrzÀ MAzÀÄ ¤¢üAiÀÄ£ÀÄß DgÀA©ü¸À¨ÉÃPÀÄ ; C°è ¸ÉÃgÀĪÀ ºÀt zÀ°vÀ «zÁåyðUÀ¼À PÀ¯ÁåtPÉÌ ¸ÀzÀÄ¥ÀAiÉÆÃUÀªÁUÀ¨ÉÃPÀÄ J¤¸ÀĪÀÅ¢®èªÉ ? M¼ÀeÁwUÀ¼À£Éßà ªÀÄÄAzÀÄ ªÀiÁrPÉÆAqÀÄ ¥ÀgÀ¸ÀàgÀ zÉéõÀ-dUÀ¼À ªÀÄgÉAiÀĨÉÃPÀÄ J¤¸ÀĪÀÅ¢®èªÉà ? «zÁåyðUÀ¼À£ÀÆß ºÁ¢ vÀ¦à¸ÀĪÀ ZÁ½AiÀÄ£ÀÄß ©lÄÖ PÀÆr ¨Á¼ÀĪÀ PÀ£À¸À£ÀÄß £À£À¸ÀÄ ªÀiÁrPÉƼÀî®Ä ¸ÁzsÀå«®èªÉà ? ªÀÄ£À¸ÀÄì ªÀiÁrzÀgÉ J®èªÀÇ ¸ÁzsÀå«zÉ. zÀAiÀÄ«lÄÖ MAzÀÄ ªÀiÁvÀ£ÀÄß ªÀiÁvÀæ £Á£ÀÄ E°è ºÉüÀ§AiÀĸÀÄvÉÛÃ£É ; ªÉÆlÖªÉÆzÀ®Ä ¤ÃªÀÅ ¤ªÀÄä ¤ªÀÄä UÀÆqÀÄUÀ¼À£ÀÄß ©lÄÖ ºÉÆgÀ§¤ß ; ¤ªÀÄä£ÀÄß ¸ÀÄwÛPÉÆArgÀĪÀ ¥ÉÆgÉAiÀÄ£ÀÄß PÀ¼Àa E®èªÉà ºÀjzÉÆUɬÄj ; ¸ÉÆÃzÀgÀ ¸ÀA§AzsÀUÀ¼À£ÀÄß ¨É¸ÉAiÀÄ®Ä ªÀÄÄAzÁV ! £ÀªÀÄä ¥ÀÆ«ðPÀgÀ EwºÁ¸ÀzÀ CjªÀÅ EzÀÄÝzÉÝà DzÀ°è EzÀÄ C¸ÁzsÀåªÉãÀÆ C®è JA§ÄzÀÄ £À£Àß CZÀ® «±Áé¸ÀªÁVzÉ.

Saturday, November 19, 2011

ಮೂರು ದ್ವಿಪದಿಗಳುಬದುಕಲು
ಬಿಡು
ಬುದ್ಧನ ನಗು ನಿನ್ನಲ್ಲೂ ಕಾಣುತ್ತದೆ

ನಗರದ ಕೂಟಗಳಲಿ ಹಾರಾಡುತ್ತಿದೆ ಬೀದಿಗೆ ಹಸ್ತಾಂತರಗೊಂಡ ಧರ್ಮದ ಧ್ವಜ
ಸೋನೆಮಳೆ ವಾರವಿಡೀ ಸುರಿದರೂ ಹಾಗೆ ಇದೆ ಬೀದಿ ತುಂಬಿದ ಸಾವ ವಾಸನೆ


ನಿಷ್ಟಾವಂತ ಮನೆಯ ನಗು ನೋಡಿ ನೋಡಿ ಮಗ್ಗುಲಿದ್ದವರ ಕಣ್ಣು ಮುಚ್ಚಿಬಿಟ್ಟಿತ್ತು
ಗಾಯದ ನಗುವಿಗೆ ಮುಲಾಮು ಸವರುವ ಅದೃಶ್ಯ ಕೈ ಕುಂಬಿ ಮೇಲೆ ಕಣ್ಣು ತೆರೆಯಿತು

ಚಿತ್ರ :ಗೂಗಲ್ ಕೃಪೆ

ನಾಲ್ಕು ಮರಾಟಿ ಕವನಗಳು

ಅನುವಾದ : ಡಾ. ಸರಜೂ ಕಾಟ್ಕರ್


ಮಹಾಕವಿಯೇ

ರಾಮರಾಜ್ಯದ ಒಣಸ್ತುತಿ ಹಾಡುವ
ಕವಿ ವಾಲ್ಮೀಕಿ

ಅದೆಂತಹ ಕವಿ ನೀನು?
ನೀನೊಬ್ಬ ರ್‍ಯಾಸ್ಕಲ್ ಸೂಳೆಮಗ

ಕ್ರೌಂಚ ಪಕ್ಷಿಯ ಆಕ್ರಂದನ ಕೇಳಿ
ಕರುಣೆ ಸೂಸಿದ ನಿನ್ನ ಹೃದಯ

ಯಾವ ವಸ್ತಿಯಲ್ಲಿ ನೀನು ಹುಟ್ಟಿದೆಯೋ
ಯಾವ ವಸ್ತಿಯಲ್ಲಿ ನೀನು ಬೆಳೆದೆಯೋ?

ಆ ನಿರ್ಲಕ್ಷಿತ ಜನರ ನೋವು
ವಿಷಾದದ ಮುಖಗಳು
ಹೃದಯ ಹಿಂಡುವ ದುಃಖ
ನೋಡಿ ನಿನಗೆ ಸ್ವಲ್ಪಾದರೂ ಕರುಣೆ ಹುಟ್ಟಲಿಲ್ಲವೆ?

ಮನುಷ್ಯತ್ವಕ್ಕಾಗಿ ಹಪಹಪಿಸಿದ ಅವರ
ಕೂಗು ನಿನಗೆ ಎಂದೂ
ಕೇಳಿಸಲಿಲ್ಲವೇ?

ನಿನ್ನ ರಕ್ತದಿಂದಲೇ ಹುಟ್ಟಿದ ಶಂಭೂಕನನ್ನು
ನೀನು ಶಾಸ್ತ್ರಗಳ ಆಧಾರದಿಂದ
ಕೊಂದುಹಾಕಿದೆ

ರಾಮರಾಜ್ಯದ ಸ್ತುತಿ ಹಾಡುವ ಮಹಾಕವಿಯೇ

ನಿನಗೆ ನಾನು ಮಹಾಕವಿ
ಎಂದು ಹೇಗೆ ಕರೆಯಲಿ?

ಈ ಅನ್ಯಾಯ ಅತ್ಯಾಚಾರ ದುಃಖ ನೋವು
ಗಳ ಬಗ್ಗೆ ಒಂದೇ ಒಂದಾದರೂ
ಸಾಲು ನೀನು ರಚಿಸಿದ್ದರೆ

ನಿನ್ನ ಹೆಸರನ್ನು ನಾನು ಹೃದಯದ
ಮೇಲೆ ಕೊರೆದುಕೊಳ್ಳುತ್ತಿದ್ದೆ

ಮರಾಠಿ ಮೂಲ: ದಯಾ ಪವಾರ್

೨ .ನಾನು ನಿರಾಶನಾಗಿಲ್ಲ

ಆಕಾಶದಷ್ಟು ದೊಡ್ಡದಾದ ನೋವನ್ನು
ಅದೆಷ್ಟು ದಿನಗಳ ಕಾಲ ಮುಚ್ಚಿಡಲು ಸಾಧ್ಯ?
ಪ್ರಶ್ನೆಗಳ ಬಾಲ ದಿನದಿನಾ ಬೆಳೆಯುತ್ತಲೇ ಹೋಗುತ್ತದೆ.
ನಮ್ಮ ಬಿಡುಗಡೆಗೆ ಯಾರು ಬರಬಹುದು?
ಈ ರಾಜಕಾರಣಿಗಳು?
ಅವರು ಒಬೆರಾಯ್ ಶೆರಟನ್ ಹೋಟೆಲನ್ನು
ಉದ್ಘಾಟಿಸುತ್ತಿರಬಹುದು: ನಮ್ಮ ನೆನಪನ್ನು
ಅವರು ಖಂಡಿತ ತೆಗೆಯುತ್ತಾರೆ
ನಾಳಿನ ದಿನಪತ್ರಿಕೆಗಳ ಹೆಡ್ ಲೈನುಗಳಲ್ಲಿ ಮಿಂಚುತ್ತಾರೆ
ಇಲ್ಲಿಯ ಬುದ್ಧಿಜೀವಿಗಳು?
ಅವರಂತೂ ಒಬೆರಾಯ್ ಶೆರಟನ್
ನೀಡಿದ ಆತಿಥ್ಯದಲ್ಲಿ ಮುಳುಗಿ
ತಾವು ಆಡಬೇಕಾದ ಶಬ್ದಗಳಿಗಾಗಿ ತಡಕುತ್ತಿರಬಹುದು
ಇಲ್ಲಿಯ ವಿದ್ಯಾರ್ಥಿ ಸಮೂಹ?
ಪ್ಯಾಂಟಿನ ಬಾಟಮ್‌ಗಾಗಿ ಭೀಕರವಾಗಿ
ಜಗಳವಾಡಲಷ್ಟೇ ಯೋಗ್ಯರು ಈ ವಿದ್ಯಾರ್ಥಿಗಳು
ಇಲ್ಲಿಯ ಕಾರ್ಮಿಕ ಸಂಘಟನೆಗಳು?
ಅವರ ಹೋರಾಟ ಕೇವಲ ಬೋನಸ್‌ಗಾಗಿ
ಇಷ್ಟಿದ್ದರೂ ನಾನು ನಿರಾಶನಾಗಿಲ್ಲ
ದೂರದ ಮಂದ ಬೆಳಕಿನ ದೀಪ ನನಗೆ ಕಾಣಿಸುತ್ತಿದೆ
ಜನರ ಕಣ್ಣುಗಳಲ್ಲಿ ಆಶೆಯ ಮಿಣುಕು ಗೋಚರಿಸುತ್ತಿದೆ
ಖಂಡಿತ ನಾನು ನಿರಾಶನಾಗಿಲ್ಲ
ಆಗಸದಷ್ಟು ದೊಡ್ಡ ನೋವನ್ನು
ನಿಭಾಯಿಸುವುದು ಹೇಗೆಂಬ ಸತ್ಯ ನನಗೆ ಗೊತ್ತು
ನಾನು ನಿರಾಶನಾಗಿಲ್ಲ
ಉಜ್ವಲವಾದ ಒಂದು ಕನಸು
ನನ್ನ ಕಣ್ಣುಗಳ ಎದುರು
ತೂಗಾಡುತ್ತಿದೆ
ಅದು ನನಸಾಗುತ್ತದೆಂದೂ ಗೊತ್ತು ನನಗೆ
ಯಾಕೆಂದರೆ ನಾನೆಂದೂ ನಿರಾಶನಾಗಿಲ್ಲ.

-ಮರಾಠಿ ಮೂಲ: ಅರ್ಜುನ್ ಡಾಂಗ್ಳೆ

೩ .

ಶಬ್ದಗಳಿಗೆ

ನನ್ನ ಶಬ್ದಗಳಿಗೆ
ರೋಮಿಯೋ ಜ್ಯೂಲಿಯಟ್ಟರು ಬೇಡ
ನನ್ನ ಶಬ್ದಗಳಿಗೆ
ಸೂರ ಸಂಗೀತದ ಸ್ಪರ್ಶವೇ ಬೇಡ
ನನ್ನ ಶಬ್ದಗಳಿಗೆ
ಟಾಂಗಾದ ಕುದುರೆಯಾಗುವುದು ಬೇಡ
ನನ್ನ ಶಬ್ದಗಳಿಗೆ
ಕೇವಲ ಕವಿತೆಯಾಗುವುದು ಬೇಡ
ನನ್ನ ಶಬ್ದಗಳೇ:
ನೀವೆಂದೂ ಚಂದ್ರನ ಸಮೀಪವೂ ಸುಳಿದಾಡಬೇಡಿ
ಬಾಬಾಸಾಹೇಬರ ಮೂರ್ತಿಗೆ
ನತಮಸ್ತಕರಾಗಿ ಪ್ರತಿದಿನ ಯುದ್ಧಗೆಲ್ಲಲು ಹೊರಡಿ

- ಮರಾಠಿ ಮೂಲ: ಪಾಂಡೂ ಪಾಟೀಲ

೪ .


ಯುದ್ಧ

ನನ್ನಜ್ಜಿ ಭಿಕ್ಷೆ ಬೇಡಿ ಬಂದ ನಂತರ
ಅವಳ ಜೋಳಿಗೆಯನ್ನು ನಾನು ಹುಡುಕಾಡಹತ್ತಿದೆ
ಕೈಗೆ ಬಿಸಿಬಿಸಿ ರೊಟ್ಟಿ ಸಿಕ್ಕಿತು
ಖಗೋಲ ವಿಜ್ಞಾನಿಗೆ ಹೊಸ
ಗ್ರಹ ಸಿಕ್ಕಷ್ಟು ಖುಷಿಯಿಂದ ನಾನು
‘ಇದನ್ಯಾರು ಕೊಟ್ಟರು? ಎಂದು ಕೇಳಿದೆ
‘ಮೇಲಿನ ಮನೆಯ ಪಾಟೀಲರು ಅಜ್ಜಿ ಹೇಳಿದಳು
ಕೈಗೆ ಚಂದ್ರ ಹಿಡಿದಂತೆ ರೊಟ್ಟಿ ಹಿಡಿದು ತಿನ್ನುವಾಗ
ಹಸಿ ಬಾಣಂತಿ ನನ್ನ ತಾಯಿ
ಆ ರೊಟ್ಟಿಯತ್ತ ಆಸೆ ಕಣ್ಣುಗಳಿಂದ ನೋಡುತ್ತಿದ್ದಳು
ಅಜ್ಜಿಯ ಕಾಲಿನೆಡೆಗೆ ನನ್ನ ಲಕ್ಷ್ಯ.
ಅವಳ ಕಾಲು ಸಂದುಗಳನ್ನು ನಾಯಿ ಹರಿದು ಹಾಕಿತ್ತು
ರಕ್ತದ ಕೋಡಿ ಕಾಲುಗಳಿಂದ ಜಿನುಗುತ್ತಿತ್ತು
ಈಗ ಅಜ್ಜಿ ನಾಯಿಯಂತೆ ಬೊಗಳಬಹುದೆಂದು
ನಾನು ಗಾಬರಿಯಾದೆ
ಹೊಟ್ಟೆಯಲ್ಲಿ ಹಸಿವಿನ ಬೆಂಕಿ
ಅಜ್ಜಿಯ ಗಾಯದಲ್ಲಿಂದ ನಗುವ
ಬುದ್ಧ ಗೋಚರಿಸಲಾರಂಭಿಸಿದ
ಗೋಚರಿಸಿದ ಬುದ್ಧ
ನಗಲಾರಂಭಿಸಿದ

-ಮರಾಠಿ ಮೂಲ: ಶರಣಕುಮಾರ ಲಿಂಬಾಳೆಅರಣ್ಯ ರೋದನವಾಗುತ್ತಿರುವ ಕಬ್ಬು ಬೆಳೆಗಾರರ ಸಮಸ್ಯೆ

ಬಿ . ಜಿ. ಬಣಕಾರರಾಜ್ಯದಲ್ಲಿ ಸಹಕಾರಿ ವಲಯದಲ್ಲಿ 24, ಸಾರ್ವಜನಿಕ ವಲಯದಲ್ಲಿ 2, ಜಂಟಿ ವಲಯದಲ್ಲಿ 1, ಖಾಸಗಿ ವಲಯದಲ್ಲಿ 33 ಹೀಗೆ ಒಟ್ಟು 66 ಸಕ್ಕರೆ ಕಾರ್ಖಾನೆಗಳು ಇವೆ. ಇವೆಲ್ಲವುಗಳ ಕಬ್ಬು ಅರೆದು ಸಕ್ಕರೆ ಮಾಡುವ ಸಾಮರ್ಥ್ಯ ದಿನವೊಂದಕ್ಕೆ 2.19ಲಕ್ಷ ಟನ್ ಇದ್ದು ವರ್ಷದಲ್ಲಿ 300 ದಿವಸದಲ್ಲಿ 657.45 ಲಕ್ಷ ಟನ್ ಕಬ್ಬನ್ನು ನುರಿಸಬಹುದಾಗಿದೆ. 2010-11ರಲ್ಲಿ ಈ ಕಾರ್ಖಾನೆಗಳು ಕೇವಲ 277.95 ಲಕ್ಷ ಟನ್ ಕಬ್ಬನ್ನು ಅರೆದು 379.50ಲಕ್ಷ ಟನ್ ಕಬ್ಬನ್ನು ಸಾಮರ್ಥ್ಯಕ್ಕನುಗುಣವಾಗಿ ಅರೆಯಲು ವಿಫಲವಾಗಿದೆ. ರಾಜ್ಯದಲ್ಲಿ ಕಬ್ಬು ಬೆಳೆಯಲು ಫಲವತ್ತಾದ ಭೂಮಿ ಸಾಕಷ್ಟು ಇದೆ. ಶ್ರಮ ವಹಿಸಿ ಬೆಳೆಯುವ ಕಬ್ಬು ಬೆಳೆಗಾರರೂ ಇದ್ದಾರೆ.ಈ ಕಾರ್ಖಾನೆಗಳು ವರ್ಷದಲ್ಲಿ ಕನಿಷ್ಠ 41ದಿನಗಳಿಂದ ಗರಿಷ್ಠ 297ದಿನ ಕಬ್ಬು ಅರೆಯಲಾಗಿದೆ.ಕಬ್ಬಿನಿಂದ ಸಕ್ಕರೆ ಇಳುವರಿ ಶೇಕಡಾ7.55ರಿಂದ ಗರಿಷ್ಠ ಶೇಕಡಾ 12.40ರವರೆಗೆ ಇದೆ. ಮಹಾರಾಷ್ಟ್ರದಲ್ಲಿ ಸಕ್ಕರೆ ಇಳುವರಿ ಗರಿಷ್ಠ ಶೇಕಡಾ 13.63ರಷ್ಟು ಇದೆ.

ಕರ್ನಾಟಕದಲ್ಲಿ ಪ್ರತಿ ವರ್ಷ ಆಗಾಗ್ಗೆ ಹಳೆ ಹಾಗೂ ಹೊಸ ಅನೇಕ ಕಾರ್ಖಾನೆಗಳು ನಿಷ್ಕ್ರಿಯವಾಗುತ್ತಿವೆ. ಅನೇಕ ಬಂದಾಗಿವೆ, ಕೇವಲ ಕೆಲವೆನ್ನುವಂತೆ ಸಹಕಾರಿ ಕ್ಷೇತ್ರದಲ್ಲಿ ಬಿಜಾಪುರದ ನಂದಿ ಹಾಗೂ ಬೆಳಗಾವಿಯ ಹಿರಣ್ಯ ಕೇಸಿ ಕಾರ್ಖಾನೆಗಳು ಮಾತ್ರ ಲಾಭದಲ್ಲಿ ನಡೆಯುತ್ತಿದ್ದು, 23 ಸಹಕಾರಿ ಕಾರ್ಖಾನೆಗಳು 1561.74 ಕೋಟಿ ಕೂಡಿಬಿದ್ದ ಹಾನಿಯಲ್ಲಿವೆ. ಖಾಸಗಿ ವಲಯದಲ್ಲಿ 7 ಕಾರ್ಖಾನೆಗಳು ಮಾತ್ರ ಹಾನಿಯಲ್ಲಿದ್ದು ಬಹುತೇಕ ಕಾರ್ಖಾನೆಗಳು ಲಾಭದಲ್ಲಿವೆ. 5 ಕಾರ್ಖಾನೆಗಳನ್ನು ನಡೆಸುತ್ತಿರುವ ರೇಣುಕಾ ಶುಗರ್ಸ್ ಕಂಪೆನಿ 504.30 ಕೋಟಿ ಲಾಭ ಗಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿಯ 1. ಭದ್ರಾ 2.ದಕ್ಷಿಣ ಕನ್ನಡ 3. ಘಟಪ್ರಭಾ 4. ಮಹಾತ್ಮಗಾಂಧಿ 5. ನಾರಂಜಾ 6.ಅಳಂದೆ ಸಕ್ಕರೆ ಕಾರ್ಖಾನೆಗಳು 2010-11ರಲ್ಲಿ ತಮ್ಮ ಕೂಡಿಬಿದ್ದ ಹಾನಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿವೆ. ಕೂಡಿಬಿದ್ದ ಹಾನಿಯಲ್ಲಿ ನಂಬರ್ 1. ಮೈಶುಗರ್ 268.87ಕೋಟಿ 2.ಪಾಂಡವಪುರ 175.88 ಕೋಟಿ 3. ಬೀದರ 162.09 ಕೋಟಿ 4.ಖಾನಾಪುರ 144.50ಕೋಟಿ 5.ನಾರಂಜಾ 113.74ಕೋಟಿ ಹೀಗೆ ಈ ಐದು ಕಾರ್ಖಾನೆಗಳು ತಲಾ 100 ಕೋಟಿಗಿಂತ ಹೆಚ್ಚು ಕೂಡಿಬಿದ್ದ ಹಾನಿಯಲ್ಲಿದ್ದು, ಉಳಿದವುಗಳು 100.00ಕೋಟಿಗಿಂತ ಕಡಿಮೆ ಹಾನಿಯಲ್ಲಿದ್ದು ಈ ಒಟ್ಟು 23 ಕಾರ್ಖಾನೆಗಳ ಕೂಡಿಬಿದ್ದ ಹಾನಿ 1561 ಕೋಟಿ ಮೀರಿದ್ದು ಈ ಕೂಡಿಬಿದ್ದ ಹಾನಿ ಪ್ರತಿವರ್ಷ ಏರುತ್ತಲೇ ಇದೆ.

ಕೆಲವು ಸಹಕಾರಿ ಕಾರ್ಖಾನೆಗಳು 10 ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಸಮರ್ಪಕ ಆಡಳಿತ ಮಾಡದೆ ಸಾಮರ್ಥ್ಯಕ್ಕೆ ತಕ್ಕಂತೆ ಕಬ್ಬು ನುರಿಸದೆ, ಸಮರ್ಪಕವಾದ ಸಕ್ಕರೆ ಇಳುವರಿ ಪಡೆಯದೆ, ಕಬ್ಬು ಬೆಳೆಗಾರರಿಗೆ ಸಮರ್ಪಕ ಬೆಲೆಯನ್ನು ನಿಗದಿ ಮಾಡದೆ, ಸಕಾಲದಲ್ಲಿ ಕಬ್ಬಿನ ಬೆಲೆಯ ಮೊತ್ತವನ್ನು ನೀಡದೆ ಕಾರ್ಖಾನೆ ಕಾರ್ಮಿಕರಿಂದ ಹೆಚ್ಚು ದಿನಗಳಲ್ಲಿ ಕಬ್ಬು ನುರಿಸದೆ, ಆವಶ್ಯಕತೆಗಿಂತ ಹೆಚ್ಚು ಸಿಬ್ಬಂದಿಯನ್ನು ನೇಮಿಸುತ್ತ, ಕರ್ತವ್ಯಗಳ ನಿರ್ವಹಣೆಯಲ್ಲಿ ಸತತವಾಗಿ ತಪ್ಪುಗಳನ್ನು ಎಸಗುತ್ತ, ಕಬ್ಬು ಬೆಳೆಗಾರರ ಹಿತಾಸಕ್ತಿಗೆ ಬಾಧೆಯನ್ನುಂಟು ಮಾಡುತ್ತ, ದುಂದುವೆಚ್ಚ ಮಾಡುತ್ತ ಸತತವಾಗಿ 5 ವರ್ಷಗಳಿಗೂ ಹೆಚ್ಚಾಗಿ ನಿರಂತರವಾಗಿ ಕಾರ್ಖಾನೆಗೆ ಹಾನಿ ಮಾಡುತ್ತ ಸಹಕಾರಿ ಸಂಘಗಳ ಕಾಯ್ದೆ ಮತ್ತು ನಿಯಮಗಳನ್ನು ಧಿಕ್ಕರಿಸುತ್ತ ಮುಂದುವರಿಯುತ್ತಿದ್ದರೂ ಸಹಕಾರಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು, ಕಬ್ಬು ಅಭಿವೃದ್ಧಿ ಅಧಿಕಾರಿ ಮತ್ತು ಸಕ್ಕರೆ ನಿರ್ದೇಶಕರು ಸಹಕಾರಿ ಸಂಘಗಳ ಕಾಯ್ದೆಯ ಕಲಂ 30ರ ಪ್ರಕಾರವಾಗಲಿ 31ರ ಪ್ರಕಾರವಾಗಲಿ ಅನೇಕ ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳಲು ನಿಷ್ಕ್ರಿಯರಾಗಿರುವುದು ಖಂಡನೀಯ ಹಾಗೂ ನಾಚಿಕೆಗೇಡು.

ತಪ್ಪಿತಸ್ಥ ಕಾರ್ಖಾನೆಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ವೈಯರವರು ಅಧಿಕಾರಿಗಳಿಗೆ ಆದೇಶ ಕೊಟ್ಟಿದ್ದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿರುವುದನ್ನು ನೋಡಿದರೆ ಅಧಿಕಾರಿಗಳು, ತಪ್ಪಿತಸ್ಥ ಕಾರ್ಖಾನೆಗಳ ಆಡಳಿತ ಮಂಡಳಿಯವರು ಕೂಡ ಶಾಮೀಲಾಗಿದ್ದಾರೆಂದರೆ ತಪ್ಪಾಗಲಾರದು.

ಸಹಕಾರಿ ಕಾಯ್ದೆಯ ಕಲಂ 30ರ ಪ್ರಕಾರ ಅದರಲ್ಲೂ ವಿಶೇಷವಾಗಿ 30(1)(ಸಿ) ಪ್ರಕಾರ ನಿರಂತರವಾಗಿ ಮೂರು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದರೆ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ರವರು ಆಡಳಿತ ಸಮಿತಿಯನ್ನು ತೆಗೆದುಹಾಕಲು ಅವಕಾಶವಿದ್ದರೂ ಈ ಕ್ರಮ ತೆಗೆದುಕೊಳ್ಳುತ್ತಿಲ್ಲ.ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ಕನಿಷ್ಠ 1500ರಿಂದ ಗರಿಷ್ಠ 2272 ರೂಪಾಯಿ ಕೊಟ್ಟ ಉದಾಹರಣೆ ಇದ್ದರೂ ರಾಜ್ಯ ಸರಕಾರ ಕಬ್ಬಿನ ದರವನ್ನು ಇಂದಿಗೂ ನಿರ್ದಿಷ್ಟ ಪಡಿಸಿಲ್ಲ. ಎಸ್.ಎ.ಸಿ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರಕಾರ ಮೀನಾಮೇಷ ಮಾಡುವುದು ಸರಿಯಲ್ಲ, ಕೇಂದ್ರ ಸರಕಾರ ಸಕ್ಕರೆ ರಫ್ತು ನಿಷೇದ ರದ್ದುಗೊಳಿಸುವಲ್ಲಿ ವಿಫಲವಾಗಿದೆ.

ರಾಜ್ಯದಲ್ಲಿಯ ಕಬ್ಬು ಬೆಳೆಗಾರ ಹಾಗೂ ರೈತ ಮುಖಂಡರಾದ ಕರಬೂರು ಶಾಂತಕುಮಾರ, ಕೋಡಿಹಳ್ಳಿ ಚಂದ್ರಶೇಖರ ಮೊದಲಾದವರು ಅನೇಕ ಬಾರಿ ಆಗಾಗ್ಗೆ ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಸರಕಾರಗಳ ಗಮನಕ್ಕೆ ತಂದು ಬಗೆಹರಿಸಲು ಪರಿಣಾಮಕಾರಿಯಾಗಿ ಪ್ರಯತ್ನಿಸುತ್ತಿದ್ದು ಅವರ ಸಮರ್ಪಕ ಹಾಗೂ ಸರಿಯಾದ ಹೋರಾಟಕ್ಕೆ ಸರಕಾರ ಸ್ಪಂದಿಸದೆ ಇರುವುದು ಭೂಷಣವಲ್ಲ.

ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿ ಅನೇಕ ಆಡಳಿತ ಮಂಡಳಿಯವರು ಹಾಗೂ ಅನೇಕ ಖಾಸಗಿ ಕಾರ್ಖಾನೆಗಳ ಮಾಲಕರಾಗಿ ಕೆಲವು ಮಂತ್ರಿಗಳು, ಸಂಸದರು, ಶಾಸಕರು ಮೊದಲಾದ ಪ್ರಭಾವಿ ಮುಖಂಡರು ಇರುವುದರಿಂದ ಅವರು ಸರಕಾರವನ್ನು ಹಾಗೂ ಅಧಿಕಾರಿಗಳನ್ನು ಸವಾರಿ ಮಾಡುತ್ತಲಿದ್ದರೂ, ಸರಕಾರ ಹಾಗೂ ಅಧಿಕಾರಿಗಳು ದಾಕ್ಷಿಣ್ಯಪರರಾಗಿ ನ್ಯಾಯ ನಿಷ್ಠುರಿಗಳಾಗದೆ ಇರುವುದರಿಂದ ರಾಜ್ಯದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳು ಉತ್ತಮ ವ್ಯವಹಾರ ಹಾಗೂ ಭವಿಷ್ಯ ಉನ್ನತಿ ಹೊಂದದೆ ಅವನತಿ ಹೊಂದುತ್ತಿದೆಯೆಂಬ ಉಗ್ರ ಟೀಕೆ ಕಬ್ಬು ಬೆಳೆಗಾರ ಹಾಗೂ ಕಬ್ಬು ಬೆಳೆಗಾರರ ನೇತಾರ ಮುಖಂಡ ಮೊದಲಾದವರಿಂದ ಕೇಳಿ ಬರುತ್ತಿದ್ದು, ಈ ಟೀಕೆಯಲ್ಲಿ ಸತ್ಯಾಂಶವಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಇಲಾಖಾ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಹೊಣೆಗಾರ ಉಚ್ಛ ಅಧಿಕಾರಿಗಳು ಚಿಂತನ ಮಂಥನ ಮಾಡಿ ರಾಜ್ಯ ಸರಕಾರದ ಹಿತದೃಷ್ಟಿಯ, ಬಿಜೆಪಿ ರಾಜಕೀಯ ಪಕ್ಷದ ಹಿತದೃಷ್ಟಿಯಿಂದ ಇನ್ನಾದರೂ ಸೂಕ್ತ ಕ್ರಮ ತೆಗೆದುಕೊಂಡರೆ ಹಾಗೂ ದಿವಾಳಿ ಅಂಚಿನಲ್ಲಿರುವಕಬ್ಬು ಬೆಳೆಗಾರ ಬಾಗೂ ಕಬ್ಬಿನ ಕಾರ್ಖಾನೆಗಳ ಹದಗೆಟ್ಟ ಪರಿಸ್ಥಿತಿಯನ್ನು ಸುಧಾರಿಸಿದರೆ ಸರಕಾರದ ಕೆಲಸ ದೇವರ ಕೆಲಸವಾದೀತು.

Thursday, November 17, 2011

ಹತ್ತು ದ್ವಿಪದಿಗಳು
ಕಲಿಯುವ ಮನಸಿದ್ದರೆ ಬೆದುರುಗೊಂಬೆಯ ಪಾಠ ಇಷ್ಟೇ
ಕೊಳ್ಳುವವ ಎದುರು ನಿಂತರೂ ತಲೆ ಬಾಗದೆ ಬದುಕು

ದೊಡ್ಡ ಮನೆಗೆ ಹೋದಾಗ ಪುಟ್ಟ ಅಕ್ವೇರಿಯಮ ಕಂಡಿತು
ತನ್ನ ಬದುಕಿನ ರೂಪಕಗಳೇ ಕಣ್ಣೆದುರಿಗಿದ್ದಾಗ ಮನುಷ್ಯನಿಗೆ ಸಮಾಧಾನ

ಬೀದಿಗಳ ತುಂಬ ಕಾಮೊತ್ತೇಜಕ ಔಷಧಿಯ ಬೋರ್ಡ್ ತಗುಲಿಸಿದ್ದಾಗಿದೆ
ಬಾಂಧವರೆ ನಮಗೇಕೆ ಯಯಾತಿಯನ್ನು ದೂರುವ ಪಾಠ ?

ಸೂರ್ಯನೇ ಮುಳುಗಲು ಹೊರಟಿರುವಾಗ
ಇರುಳಿನ ಸಾಂತ್ವಾನಕ್ಕೆ ಕೈ ಮುಗಿಯಬೇಕೆನಿಸುವುದು..!

ನೀನು ಬಿಟ್ಟು ಹೋದ ಮೇಲೆ
ಮನೆಯಲ್ಲಿ ಮಿಂಚುಹುಳುವಷ್ಟೇ ಉಳಿಯಿತು

ಈಗಷ್ಟೆ ಅಲ್ಲ ಪ್ರತಿ ಸಾರಿಯೂ ಮನೆ ಬದಲಿಸುವಾಗ
ಏನು ಮಾಡಿದರೂ ಅಳಿಸಲಾಗಲಿಲ್ಲ ಗೋಡೆ ಮೇಲಿನ ಮಳೆಗಳ ಗುರುತು

ಶರತ್ಕಾಲದ ಸಂಜೆ ಉದುರುವ ಎಲೆಗಳನ್ನೇಕೆ ತೋರಿಸಿದೆ ನಿನಗೆ
ಗೆಳೆಯಾ ನೆರೆಗೂದಲು ಮುಚ್ಚಿಡುವ ಹೊಸ ಪ್ರಯತ್ನ ನನಗಿನ್ನೂ ಹೊಳೆದಿಲ್ಲ

ಮಗು, ನನ್ನೊಡಲಲ್ಲಿ ಕುಡಿಯೊಡೆದ ಗಳಿಗೆ ಜಗದ ಯಾವ ಮಗುವೂ ಅನಾಥವಾಗದಿರಲಿ ಎಂದೆ ನೀನು
ನಾನೀಗ ಅನಾಥ ಹಸುಳೆಗಳ ತೋರಿಸಿಯೇ ನಿನ್ನ ದು: ಇವರಿಗಿಂತ ಭಿನ್ನವಲ್ಲ ಮಗಳೇ ಎಂದು ಸಮಾಧಾನಿಸುವೇನು

ನೀ ಬಂದೂಕು ಹೆಗಲೇರಿಸಿಕೊಂಡು ಬಂದಾಗ ನಾ ಹೂ ಹಿಡಿದುಕೊಂಡು ಜೊತೆಯಾದೆ
ದಾರಿಯಲ್ಲಿ ಹೂವಿನ ಸುತ್ತ ಹಾರಾಡುವ ಚಿಟ್ಟೆಗಳ ನೆರಳು ಬಂದೂಕಿನ ಮೇಲೂ ಚಾಚಿತು
೧೦
ಹೂಗಳು ಬಳ್ಳಿಯಲ್ಲಿಯೇ ಇದ್ದವು
ಗಾಳಿ ಹೊತ್ತೊಯ್ಯುತಿತ್ತು ಬುದ್ಧನ ನಗು


ಚಿತ್ರ : ವ್ಯಾನ ಗೋ

ಮಾಧ್ಯಮಲೋಕಕ್ಕೆ ನ್ಯಾಯಾಂಗದ ಕಪಾಳ ಮೋಕ್ಷ

- ಡಾ. ಎನ್ ಜಗದೀಶ್ ಕೊಪ್ಪ.


ಮೊನ್ನೆ ಸೋಮವಾರ ಭಾರತದ ಮಾಧ್ಯಮದ ಇತಿಹಾಸದಲ್ಲೇ ನಡೆಯದ ಅಪರೂಪದ ಘಟನೆ ನಡೆದು, ಮಾಧ್ಯಮದ ಮಂದಿಯನ್ನ ಆತಂಕದ ಮಡುವಿಗೆ ನೂಕಿದೆ. ಭಾರತದ ಪ್ರಸಿದ್ಧ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಬಳಗದ ಇಂಗ್ಲೀಷ್ ಛಾನಲ್ ಟೈಮ್ಸ್ ನೌ ಅವಸರಕ್ಕೆ ಬಲಿ ಬಿದ್ದು ಮಾಡಿದ ಒಂದು ಸಣ್ಣ ಪ್ರಮಾದಕ್ಕೆ ಈಗ ತೆರಬೇಕಾಗಿರುವ ದಂಡ ಸಾಮಾನ್ಯವಾದುದಲ್ಲ. ಬರೋಬ್ಬರಿ ನೂರು ಕೋಟಿ ರೂಪಾಯಿಗಳು.
ಸುದ್ಧಿ ಚಾನಲ್ ಗಳ ಸ್ಪರ್ಧೆಯ ನಡುವೆ ಎಲ್ಲರಿಗಿಂತ ಮುಂಚಿತವಾಗಿ ಸುದ್ಧಿ ತಲುಪಿಸುವ ಭರದಲ್ಲಿ ಅದರ ಖಚಿತತೆ, ಔಚಿತ್ಯ, ಸುದ್ಧಿಮೂಲಗಳ ಪ್ರಾಮಾಣಿಕತೆ ಇವೆಲ್ಲವನ್ನು ಮರೆತು ಅವಸರವಾಗಿ ತಪ್ಪು ಮಾಹಿತಿಗಳನ್ನು ಸುದ್ಧಿಯ ನೆಪದಲ್ಲಿ ಭಿತ್ತರಿಸುವುದು ಇವತ್ತು ಭಾರತದ ಎಲ್ಲಾ ಭಾಷೆಗಳ ಛಾನಲ್ ಗಳ ಕೆಟ್ಟ ಛಾಳಿಯಾಗಿದೆ.
ಇಂತಹದೆ ತಪ್ಪನ್ನು ಟೈಮ್ಸ್ ನೌ ಕೂಡ ಮಾಡಿತು.

2008ರಲ್ಲಿ ಗಾಜಿಯಾಬಾದ್ ನ್ಯಾಯಾಲಯದ ನೌಕರರ ಭವಿಷ್ಯ ನಿಧಿಹಣ ದುರುಪಯೋಗವಾದ ಹಗರಣದಲ್ಲಿ ನ್ಯಾಯಾಧೀಶ ಪಿ.ಕೆ. ಸಮಂತ್ ಅವರ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ 2008ರ ಸೆಪ್ಟೆಂಬರ್ 10 ರಂದು ಟೈಮ್ಸ್ ನೌ ಚಾನಲ್ ಸುದ್ಧಿ ಬಿತ್ತರಿಸುತ್ತಾ ಸಮಂತರ ಭಾವಚಿತ್ರ ಎಂದು ಭಾವಿಸಿ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಪುಣೆ ಮೂಲದ ಸಾವಂತ್ ರವರ ಭಾವಚಿತ್ರ ಪ್ರಕಟಿಸಿ ಪ್ರಮಾದ ಎಸಗಿತು.
ಇದರಿಂದ ಆಕ್ರೋಶಗೊಂಡ ಸಾವಂತರು ಪುಣೆಯ ಸ್ಥಳೀಯ ನ್ಯಾಯಾಲಯದಲ್ಲಿ ನೂರು ಕೋಟಿ ರೂ.ಗಳಿಗೆ ಪರಿಹಾರ ಕೋರಿ ಮಾನ ನಷ್ಟ ಮೊಕದ್ದಮೆ ದಾಖಲಿಸಿದರು. ನ್ಯಾಯಲಯ ಅವರ ಮನವಿಯನ್ನು ಎತ್ತಿ ಹಿಡಿದು ಪರಿಹಾರ ನೀಡುವಂತೆ ಆದೇಶ ನೀಡಿತು. ಟೈಮ್ಸ್ ನೌ ಛಾನಲ್ ಇದರ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ ಹೊಕ್ಕಾಗ ಹೈಕೋರ್ಟ್ ಸಹ ಸಾವಂತರ ಪರ ತೀರ್ಪು ನೀಡಿ ನ್ಯಾಯಾಲಯದಲ್ಲಿ 20 ಕೋಟಿ ಠೇವಣಿ ಹಾಗೂ 80 ಕೋಟಿ ರೂ ಗಳ ಬ್ಯಾಂಕ್ ಗ್ಯಾರಂಟಿ ನೀಡುವಂತೆ ಸೂಚಿಸಿತು.
ಅಂತಿಮವಾಗಿ ಟೈಮ್ಸ್ ಸಂಸ್ಥೆ ದೆಹಲಿಯ ಸುಪ್ರೀಂ ಕೋರ್ಟ್ ಮೊರೆ ಹೋದರೆ, ದ್ವಿಸದಸ್ಯ ಪೀಠದ ನ್ಯಾಯಮೂ ರ್ತಿಗಳಾದ ಜಿ. ಎಸ್. ಸಿಂಘ್ವಿ ಹಾಗು ಎಸ್. ಜೆ. ಮುಖ್ಯೋಪಾಧ್ಯಾಯ ಚಾನಲ್ನ ಅಜರ್ಿಯನ್ನು ತಿರಸ್ಕರಿಸಿ, ಹೈಕೋರ್ಟ್ ಆದೇಶಕ್ಕೆ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ತೀರ್ಪಿತ್ತರು.
ಇಲ್ಲಿನ ಇಡೀ ಪ್ರಕ್ರಿಯೆಯಲ್ಲಿ ಒಂದು ಸೂಕ್ಷ್ಮ ಸಂಗತಿಯನ್ನು ಗಮನಿಸಬೇಕು. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಮಾನ ನಷ್ಟಕ್ಕೆ ಒಳಗಾದರೆ, ಅವನು ನ್ಯಾಯಾಲಯದ ಮೂಲಕ ಕೋರುವ ಪರಿಹಾರ ಮೊತ್ತದ ಶೇ.10 ರಷ್ಟು ಹಣವನ್ನು ಮೊಕದ್ದಮೆ ದಾಖಲಿಸುವಾಗ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು. ಒಂದು ವೇಳೆ ಅವನು ಮಾನಹಾನಿಯ ಬಗ್ಗೆ ಸಾಬೀತು ಪಡಿಸಲು ವಿಫಲನಾದರೆ, ಹಣವನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡು ಎದುರಾಳಿಯ ನ್ಯಾಯಲಯದ ವೆಚ್ಚವನ್ನು ಭರಿಸಲು ಪರಿಹಾರದ ರೂಪದಲ್ಲಿ ನೀಡಲಾಗುತ್ತದೆ.
ಹಾಗಾದರೆ, ನಿವೃತ್ತ ನ್ಯಾಯಾಧೀಶರಾದ ಸಾವಂತರಿಗೆ 100 ಕೋಟಿ ಪರಿಹಾರ ಕೇಳಲು 10 ಕೋಟಿ ಹಣ ಠೇವಣಿ ಇಡಲು ಎಲ್ಲಿಂದ ಬಂತು? ಇಲ್ಲೇ ಇರುವುದು ಕಾನೂನಿನ ಸಡಿಲವಾದ ಅಂಶ. ಠೇವಣಿ ಕುರಿತಂತೆ ಕಾನೂನಿನಲ್ಲಿ ಸಮಾಜದ ಗಣ್ಯ ವ್ಯಕ್ತಿಗಳಿಗೆ ನಿಯಮವನ್ನು ಸಡಿಲಿಸುವ ಕುರಿತಂತೆ ಆಯಾ ನ್ಯಾಯಾಧೀಶರ ವಿವೇಚನೆಗೆ ಬಿಡಲಾಗಿದೆ. ಈ ಪ್ರಕರಣವನ್ನು ಗಮನಿಸಿದಾಗ ನ್ಯಾಯ ನೀಡುವಲ್ಲಿ ಎಲ್ಲಾ ಹಂತದಲ್ಲಿ ಕೂಡ ಪಕ್ಷಪಾತ ಧೋರಣೆ ಅನುಸರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಒಬ್ಬ ನಿವೃತ್ತ ನ್ಯಾಯಾದೀಶನ ಮರ್ಯಾದೆ ನೂರು ಕೋಟಿ ಬೆಲೆ ಬಾಳಲು ಹೇಗೆ ಸಾಧ್ಯ? ಅಂದ ಮಾತ್ರಕ್ಕೆ ನಾನು ಮಾಧ್ಯಮದ ಒಂದು ಭಾಗವಾಗಿದ್ದರೂ ಕೂಡ ಇಂದಿನ ಮಾಧ್ಯಮಗಳ ವರ್ತನೆಯನ್ನು ಸಮರ್ಥಿಸಲು ಸಿದ್ಧನಿಲ್ಲ.
ಭಾರತದ ಪತ್ರಿಕೋದ್ಯಮದ ಇತಿಹಾಸದಲ್ಲಿ ವರದಿಯನ್ನ ಜಾಹಿರಾತು ರೂಪಕ್ಕೆ ಇಳಿಸಿದ ನೀಚವೃತ್ತಿಯ ಕಳಂಕ ಅಂಟಿ ಕೊಂಡಿರುವುದು ಟೈಮ್ಸ್ ಆಫ್ ಇಂಡಿಯಾ ಬಳಗಕ್ಕೆ. ಸ್ವಾತಂತ್ರ ಪೂರ್ವದ ಮುನ್ನ ಬ್ರಿಟೀಷರಿಂದ ಪ್ರಾರಂಭವಾದ ಈ ಪತ್ರಿಕೆ ನಂತರದ ದಿನಗಳಲ್ಲಿ ಮಾರ್ವಾ ಮನೆತನವಾದ ಜೈನ್ ಕುಟುಂಬಕ್ಕೆ ಸೇರಿದ್ದು, ಆನಂತರ ಲಾಭಕೋರತನವನ್ನು ಗುರಿಯಾಗಿರಿಸಿಕೊಂಡು ಪತ್ರಿಕೆಯಲ್ಲಿ ಪೇಜ್ ತ್ರೀ ಎಂಬ ಮೂರನೇ ದರ್ಜೆಯ ಸಂಸ್ಕೃತಿಯ ವರದಿಯನ್ನ ಪರಿಚಯಿಸಿದ ಹೀನ ಇತಿಹಾಸ ಈ ಪತ್ರಿಕೆ ಜೊತೆ ತಳಕು ಹಾಕಿಕೊಂಡಿದೆ.
ಭಾರತದ ಪತ್ರಿಕೋದ್ಯಮ ಇಂದು ಎಂತಹ ಮಾನಗೆಟ್ಟ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಕೇವಲ ಆರು ತಿಂಗಳ ಹಿಂದೆ ದೆಹಲಿ ಮೂಲದ ಹಿಂದೂಸ್ಥಾನ್ ಟೈಮ್ಸ್ ಎಂಬ ಪತ್ರಿಕೆ ಮಧ್ಯಪ್ರದೇಶದ ಇಂದೋರ್ ನಗರದಿಂದ ಹೊಸ ಆವೃತ್ತಿ ಪ್ರಾರಂಭಿಸಿತು. ಮೊದಲ ಸಂಚಿಕೆಯ ವರದಿ ಇಡೀ ಭಾರತವನ್ನು ಬೆಚ್ಚಿ ಬೀಳಿಸಿತು.
ವರದಿಯ ಸಾರಾಂಶವೇನೆಂದರೆ, ಇಂದೋರ್ ಆಸ್ಪತ್ರೆಯಲ್ಲಿ ಹುಟ್ಟುವ ಪ್ರತಿ ಹೆಣ್ಣು ಮಗುವಿಗೂ ಲಿಂಗ ಪರಿವರ್ತನೆ ಮಾಡಲಾಗುತ್ತದೆ ಎಂಬ ವಿಷಯ.
ಇಂತಹ ಅವೈಜ್ಞಾನಿಕ ವರದಿಯನ್ನ ಗಮನಿಸಿದ ಹಿಂದೂ ದಿನಪತ್ರಿಕೆ ಈ ಕುರಿತಂತೆ ಭಾರತದ ಮಕ್ಕಳ ತಜ್ಞರೂ ಸೇರಿದಂತೆ, ಲಂಡನ್, ನ್ಯೂಯಾರ್ಕ್ ನಗರದ ವೈದ್ಯರನ್ನು ಸಂದರ್ಶನ ಮಾಡಿ ಇದೊಂದು ಅವಿವೇಕದ, ಅವೈಜ್ಞಾನಿಕ ವರದಿ ಎಂದು ವಿಶೇಷ ವರದಿ ಪ್ರಕಟಿಸಿತು. ಜೊತೆಗೆ ಒಂದು ಅರ್ಥಪೂರ್ಣ ಟಿಪ್ಪಣಿಯನ್ನು ವರದಿಯ ಕೆಳಭಾಗದಲ್ಲಿ ಪ್ರಕಟಿಸಿತು. ಆ ಟಿಪ್ಪಣಿಯ ಸಾರಾಂಶ ಹೀಗಿತ್ತು:
ಪ್ರಿಯ ಓದುಗರೆ? ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪತ್ರಿಕೆಯ ಪ್ರತಿ ಸ್ಪರ್ಧೆ ನಿಜ, ಆದರೆ ಈ ಪತ್ರಿಕೆ ಪ್ರಕಟಿಸಿರುವ ಒಂದು ಅವೈಜ್ಞಾನಿಕ ವರದಿಗೆ ವಿವರಣೆ ನೀಡುವುದು ನಮಗೆ ಅನಿವಾರ್ಯ. ಈ ಕಾರಣದಿಂದ ವಾಸ್ತವಿಕ ಸತ್ಯವನ್ನು ಆಧರಿಸಿದ ಈ ವರದಿನ್ನು ಪ್ರಕಟಿಸುತಿದ್ದೇವೆ.
ಕೇಂದ್ರ ಸಕರ್ಾರ ಕೂಡ ವರದಿಯಿಂದ ಬೆಚ್ಚಿ ಬಿದ್ದು ತನಿಖೆಗೆ ತಜ್ಷರ ಸಮಿತಿಯೊಂದನ್ನು ನೇಮಕಮಾಡಿತ್ತು. ಆ ಸಮಿತಿ ಇಂದೋರ್ ಆಸ್ಪತ್ರೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಜನಿಸಿದ ಮಕ್ಕಳ ದಿನಾಂಕ, ವೇಳೆ, ಲಿಂಗ ಇವುಗಳನ್ನು ಆಧಾರವಾಗಿಟ್ಟುಕೊಂಡು ಆ ಮಕ್ಕಳ ಪೋಷಕರನ್ನು ಪತ್ತೆ ಮಾಡಿ ತನಿಖೆ ಮಾಡಿದಾಗ ಇದೊಂದು ಕಟ್ಟು ಕಥೆಯೆಂಬುದು ಬೆಳಕಿಗೆ ಬಂತು. ಆನಂತರ ಪತ್ರಿಕೆ ಸಾರ್ವಜನಿಕರ ಕ್ಷಮೆ ಯಾಚಿಸಿ, ಈ ಬಗ್ಗೆ ವರದಿ ಮಾಡಿದ ವರದಿಗಾರ್ತಿ ಮತ್ತು ಈ ಸುದ್ಧಿ ಪ್ರಕಟಿಸಿದ ಸ್ಥಾನಿಕ ಸಂಪಾದಕನನ್ನು ಕಿತ್ತು ಹಾಕಿತು.
ಇದು ವ್ಯಕ್ತಿಯೊಬ್ಬ ತಾನು ಮಾಡಿದ ವಾಂತಿಯನ್ನು ತಾನೇ ತಿನ್ನಬೇಕಾದ ಅನಿವಾರ್ಯದ ಸ್ಥಿತಿ. ಇಂತಹ ದಯನೀಯವಾದ ಸ್ಥಿತಿ ನಮ್ಮ ಮಾಧ್ಯಮಗಳಿಗೆ ಬೇಕೆ? ಇದು ಅಕ್ಷರದ ಹೆಸರಿನಲ್ಲಿ ಅನ್ನ ತಿನ್ನುವವರ ಆತ್ಮಸಾಕ್ಷಿಯ ಪ್ರಶ್ನೆ.
ನಮ್ಮ ಮಾಧ್ಯಮಕ್ಕೆ ತನ್ನ ವೃತ್ತಿಯ ಬಗ್ಗೆ ಘನತೆ, ಗಂಭೀರತೆ ಎಂಬುದು ಇದ್ದಿದ್ದರೆ, ನ್ಯಾಯಾಂಗದ ಕೈಯಲ್ಲಿ ಈ ರೀತಿ ಕಪಾಳ ಮೋಕ್ಷವಾಗುತ್ತಿರಲಿಲ್ಲ.
ಇಂತಹ ಕಪಾಳ ಮೋಕ್ಷದ ಬಿಸಿ ನಮ್ಮ ಕನ್ನಡದ ಸುದ್ಧಿ ಚಾನಲ್ ಗಳಿಗೂ ಮುಟ್ಟಬೇಕಾಗಿದೆ.

ಏನೋ ಮಾಡಲು ಹೋಗಿ...’’: ಮಧುಕರ್ ಶೆಟ್ಟಿಯವರಿಗೊಂದು ಬಹಿರಂಗ ಪತ್ರ


-ಶಿವಸುಂದರ

ಮಧುಕರ್ ಶೆಟ್ಟಿಯವರಿಗೊಂದು ಬಹಿರಂಗ ಪತ್ರ

ಪ್ರಿಯ ಮಧುಕರ್ ಶೆಟ್ಟಿಯವರೇ,

ಮೊನ್ನೆ ಭಾನುವಾರ ಕನ್ನಡ ಪತ್ರಿಕೆಯೊಂದರಲ್ಲಿ ನಿಮ್ಮ ಸಂದರ್ಶನ ಓದಿದೆ.ಲೋಕಾಯುಕ್ತ ಸಂಸ್ಥೆಯಲ್ಲೂ ಭ್ರಷ್ಟಾಚಾರಿಗಳು ಇದ್ದಾರೆಂಬ,ಲೋಕಾಯುಕ್ತ ಪ್ರಚಾರಪ್ರಿಯವೆಂಬ,ಮತ್ತು ಪ್ರಾಮಾಣಿಕತೆಯನ್ನು ಒಂದು ಸಂಸ್ಥೆಗೆ ಗುತ್ತಿಗೆ ವಹಿಸಲಾಗದೆಂಬ ನಿಮ್ಮ ಹೇಳಿಕೆಗಳು ಆಶ್ಚರ್ಯವನ್ನೂ ಹುಟ್ಟಿಸಲಿಲ್ಲ. ತಪ್ಪೂ ಎನಿಸ ಲಿಲ್ಲ. ಆದರೆ ನಿಮ್ಮ ಸಂದರ್ಶನದ ಸಂದರ್ಭ, ಅದು ಪ್ರಕಟವಾದ ಪತ್ರಿಕೆ ಮತ್ತು ಅದು ಬಳಕೆಯಾಗುತ್ತಿರುವ ಬಗೆ ಮಾತ್ರ ನನ್ನಲ್ಲಿ ಆಶ್ಚರ್ಯವನ್ನೂ, ವಿಷಾದವನ್ನು , ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.ನಿಮ್ಮ ಬಗ್ಗೆ, ನಿಮ್ಮ ಪ್ರಾಮಾಣಿಕತೆ, ನಿಷ್ಠುರತೆ, ನೈತಿಕತೆಗಳ ಬಗ್ಗೆ ನಿಮ್ಮ ಕಾಲೇಜು ದಿನಗಳ ಸ್ನೇಹಿತರಿಂದ ಕೇಳಿ ತಿಳಿದಿದ್ದೆ. ನಿಮ್ಮಂಥಾ ಸೂಕ್ಷ್ಮ ಮನಸ್ಸಿನವರು ಎಲ್ಲ ಬಿಟ್ಟು ಪೊಲೀಸ್ ಇಲಾಖೆಯನ್ನು ಏಕೆ ಸೇರಿದರು ಎಂತಲೂ ಅವರನ್ನು ಪ್ರಶ್ನಿಸಿದ್ದೆ. ಅಂಥವರು ಒಂದೋ ಪೊಲೀಸ್ ಇಲಾಖೆಯಲ್ಲಿ ಬಹಳ ದಿನ ಉಳಿಯಲಾರರು ಅಥವಾ ತಮ್ಮತನ ವನ್ನು ಉಳಿಸಿಕೊಂಡು ಉಳಿಯಲಾರರು ಎಂದೂ ಕೂಡಾ ಅನಿಸಿತ್ತು.

ಇಲ್ಲವಾದರೆ ತೀವ್ರ ನೈತಿಕ ಗೊಂದಲದಲ್ಲಿ ವ್ಯಕ್ತಿಗತ ಪರಿಶುದ್ಧತೆಯ ನೆಲೆಯಲ್ಲಿ ಉಳಿದುಕೊಂಡರೂ (?) ಸಾಮಾಜಿಕವಾಗಿ ಸಿನಿಕರಾಗಿಬಿಡಬಹುದೆಂದೂ ಅನಿಸಿತ್ತು.ನೀವು ವೀರಪ್ಪನ್ ‘ಬೇಟೆ’ಯ ಸರಕಾರಿ ಶಿಕಾರಿಯಲ್ಲಿ ಸೇರಿಕೊಂಡ ಗುರಿಕಾರರಲ್ಲಿ ಒಬ್ಬರು ಎಂದು ಗೊತ್ತಾದಾಗ ಅಂದಿನ ಹೈದ ರಾಬಾದ್ ವಿಶ್ವವಿದ್ಯಾಲಯದಂತಹ ರ್ಯಾಡಿ ಕಲ್ ಸನ್ನಿವೇಶದಲ್ಲಿ ರಾಜಕೀಯ ಮತ್ತು ಸಮಾಜಶಾಸ್ತ್ರವನ್ನು ಕಲಿತ ನಿಮ್ಮಂಥವರೂ ಸಹ ವೀರಪ್ಪನ್ ಸಮಸ್ಯೆಯನ್ನು ಪ್ರಭುತ್ವದ ರೀತಿ ಸರಳವಾಗಿ ಮತ್ತು ಆಷಾಢಭೂತಿತನ ದಿಂದ ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಹುಟ್ಟಿತ್ತು. ಅಲ್ಲಿದ್ದ ಶಂಕರ್ ಬಿದರಿಯಂಥ ಬಹಳಷ್ಟು ಜನ ‘ವೀರಾಧಿ ವೀರರು’ ವೀರಪ್ಪನ್‌ಗಿಂತ ಜಾಸ್ತಿ ಕಾಡಿನ ಮಹಿಳೆಯರ ಮೇಲೆ ಬಡಪಾಯಿ ಆದಿವಾಸಿಗಳ ಮೇಲೆ ತಮ್ಮ ಶೌರ್ಯವನ್ನು ಪ್ರದರ್ಶಿಸುತ್ತಿದ್ದಾಗ ಇಂಥವಕ್ಕೆ ಮಧುಕರ್ ಶೆಟ್ಟಿಯವರು ಹೇಗೆ ಸ್ಪಂದಿಸುತ್ತಿರಬಹುದು ಎಂದು ವಿಷಾದ ಭರಿತ ಕುತೂಹಲ ಹುಟ್ಟುತ್ತಿತ್ತು.

ವೀರಪ್ಪನ್ ಬೇಟೆಯ ಹೆಸರಲ್ಲಿ ನಡೆಯುತ್ತಿರುವ ಪರಮ ಭ್ರಷ್ಟಾಚಾರವನ್ನೂ ಸಹ ಹೇಗೆ ಸಹಿಸಿಕೊಳ್ಳುತ್ತಿರಬಹುದು ಮತ್ತು ಹಲವಾರು ಅಧಿಕಾರಿಗಳು ಈ ಬೇಟೆಗಾರ ಪಡೆಯನ್ನು ಬಿಟ್ಟು ಬರುತ್ತಿರುವಾಗ ಮಧುಕರ್ ಶೆಟ್ಟಿಯ ವರಂಥವರು ಹೇಗೆ ಅಲ್ಲೇ ಇರಲು ಸಾಧ್ಯ ವಾಗುತ್ತಿದೆ? ಯಾವ ತಾತ್ವಿಕ ಮತ್ತು ನೈತಿಕ ಪಾತಳಿಯಲ್ಲಿ ನಿಂತು ಅವರು ತಮ್ಮ ಪಾಲು ದಾರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರಬಹುದೂ ಅಂತಲೂ ಪ್ರಶ್ನೆ ಹುಟ್ಟುತ್ತಿತ್ತು. ಅಂತಿಮವಾಗಿ ವೀರಪ್ಪನ್ ಹತ್ಯೆಯೇ ಆದಮೇಲೆ ಇಡೀ ಪ್ರಕರಣವನ್ನು ಒಬ್ಬ ಪೊಲೀಸ್ ಆಗಿ ಅಲ್ಲದೆ ಒಬ್ಬ ಸೂಕ್ಷ್ಮ ಮನಸ್ಸಿನವನಾಗಿ ರಾಜಕೀಯ- ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಹೇಗೆ ಅರ್ಥೈಸಿ ಕೊಳ್ಳುತ್ತಿರಬಹುದು ಎಂಬ ಕುತೂಹಲವಿತ್ತು. ವೀರಪ್ಪನ್ ಬೇಟೆಯಲ್ಲಿ ಶಿಕಾರಿಯಾಗಿರುವುದು ಕೇವಲ ವೀರಪ್ಪನ್ ಅಲ್ಲ ಅನಿಸುತ್ತಿತ್ತು.

ನಂತರ ನಿಮ್ಮ ಬಗ್ಗೆ ಅತಿ ಹೆಚ್ಚು ಕೇಳಿ ಬಂದದ್ದು ತಾವು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಯಾಗಿದ್ದಾಗ. ಈಗಲೂ ತಮ್ಮ ಬಗ್ಗೆ ಚಿಕ್ಕಮಗಳೂರಿನ ಆದಿವಾಸಿಗಳ ಹಾಡಿಗಳಲ್ಲಿ ದಂತಕಥೆಗಳಿವೆ. ಕೆಲವರ ಬಳಿ ಈಗಲೂ ಅಪರಾತ್ರಿಯಲ್ಲೂ ಬೇಕಾದರೂ ನನ್ನನ್ನು ಸಂಪರ್ಕಿಸಿ ಎಂದು ನೀವು ಕೊಟ್ಟ ಮೊಬೈಲ್ ನಂಬರ್ ಇದೆ. ಅಲ್ಲಿನ ಶ್ರೀಮಂತ ಕಾಫಿ ಪ್ಲಾಂಟರುಗಳು ಈಗಲೂ ನಿಮ್ಮನ್ನು ಸಿಟ್ಟಿನಿಂದ ನೆನಪು ಮಾಡಿಕೊಳ್ಳುತ್ತಾರೆ. ನಕ್ಸಲರ ಬಗ್ಗೆ ನಿಮ್ಮ ನಿಲುವು ಏನೇ ಇದ್ದರೂ ಇದ್ದ ಅಧಿ ಕಾರವನ್ನು ಇದ್ದ ಸಮಯದಲ್ಲಿ ಆದಿವಾಸಿಗಳ ಹಿತವನ್ನು ಕಾಯುವುದಕ್ಕೆ ಬಳಸಲು ನೀವು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರೆಂದು ಅಲ್ಲಿ ನಿಮಗೆ ಹೆಸರು ಇದೆ.

ನಕ್ಸಲ್ ಹೋರಾಟದ ಬಗ್ಗೆ ನಿಮಗೆ ಸಿಟ್ಟಿತ್ತು. ಸಾಮಾನ್ಯ ಆದಿವಾಸಿ ಗಳನ್ನು ತಪ್ಪುದಾರಿ ಹಿಡಿಸುತ್ತಾರೆಂದು. ಏನೇ ಬದಲಾವಣೆಯಾದರೂ ಪ್ರಜಾಸತ್ತೆಯಿಂದಲೇ ಆಗಬೇಕು ಮತ್ತು ಕಾಯಬೇಕು ಎಂಬುದೂ ತಮ್ಮ ವಾದವಾಗಿತ್ತು. ಆದರೂ ನೀವು ಚಿಕ್ಕಮಗ ಳೂರಿನಲ್ಲಿ ಮಾತ್ರ ಸುಳ್ಳು ಎನ್‌ಕೌಂಟರ್ ನಡೆಯಲು ಬಿಡಲಿಲ್ಲ. ಪ್ರಾಯಶಃ ಕೇವಲ ಕಾನೂನು ನಿಷ್ಠತೆ ಜನರಿಗೆ ಒಳ್ಳೆಯದನ್ನು ಮಾಡುವುದಿಲ್ಲ ಎಂದು ನಿಮಗೆ ಅರ್ಥವಾಗಿತ್ತೇ? ಪ್ರಜಾತಂತ್ರದ ಸೌಂದರ್ಯ (beauty of democracy)ದ ಅನುಭವಕ್ಕಿಂತಲೂ ಅದರ ಕ್ರೌರ್ಯದ ಅನು ಭವವೇ ಸಾಮಾನ್ಯ ಜನರಿಗೆ ಹೆಚ್ಚು ಎಂಬುದು ನಿಮ್ಮ ಗಮನಕ್ಕೆ ಬಂದಿತ್ತೇ? ಪ್ರಾಯಶಃ ಆದ್ದರಿಂದಲೇ ನಿಮ್ಮ ಭಾವಸೂಕ್ಷ್ಮ ತೆಗೆ ಬಹುಮಾನವೆಂಬಂತೆ ನೀವು ಇಂಟೆಲಿ ಜೆನ್ಸ್ ಇಲಾಖೆಗೂ ಅಲ್ಲಿಂದ ರಾಜ್ಯಪಾಲರ ಬೆಂಗಾವಲಿಗೂ ವರ್ಗಾವಣೆಯಾದಿರಿ.

ನೀವು ಇಂಟೆಲಿಜೆನ್ಸ್ ಮುಖ್ಯಸ್ಥರಾಗಿದ್ದಾಗಲೇ ಕರ್ನಾ ಟಕದ ನಕ್ಸಲ್ ಹೋರಾಟದ ನಾಯಕ, ಅಸಾಧಾರಣ ಮೇಧಾವಿ ಸಾಕೇತ್ ರಾಜನ್ ಅವರನ್ನು ಪೊಲೀಸರು ಕಗ್ಗೊಲೆ ಮಾಡಿದರು. ಅದೊಂದು ಸುಳ್ಳು ಎನ್‌ಕೌಂಟರ್ ಎಂದು ಸತ್ಯವಂತರಾದ ನಿಮಗೆ ಗೊತ್ತೇ ಇದೆ. ಸಾಕೇತ್ ರಾಜನ್‌ರ ಬದ್ಧತೆ ಮತ್ತು ಬೌದ್ಧಿಕತೆಯ ಬಗ್ಗೆ ನಿಮ್ಮಂತ ಹಲವು ಅಧಿಕಾರಿ ಗಳಿಗೆ ಮೆಚ್ಚುಗೆ ಇತ್ತು. ಆದರೂ ‘‘ಜನಪರ ವಾಗಿ ಚಿಂತಿಸುವ ಗ್ರಾಮ್ಸ್ಕಿಯ ಮೆದುಳು ಚಿಂತಿಸುವುದನ್ನು ನಿಲ್ಲಿಸಬೇಕು’’ ಎಂದು ಷಡ್ಯಂತ್ರ ಮಾಡಿದ ಫ್ಯಾಸಿಸ್ಟ್ ಮುಸಲೋನಿ ಸರಕಾರಕ್ಕಿಂತ ಕ್ರೂರ ವಾಗಿ ಕರ್ನಾಟಕ ಸರಕಾರ ಒಂದು ಜನಪರ ಮೇಧಾವಿಯ ಮೆದುಳನ್ನು ಅಕ್ಷರಶಃ ನುಚ್ಚು ನೂರು ಮಾಡಿತು.

ಗ್ರಾಮ್ಸ್ಕಿಯ ಬಗ್ಗೆ ಅಪಾರ ಗೌರವ ಮತ್ತು ಆದರವನ್ನು ಇಟ್ಟುಕೊಂಡಿರುವ ‘ಸೂಕ್ಷ್ಮ ಮತ್ತು ಚಿಂತನಶೀಲ’ ವ್ಯಕ್ತಿತ್ವದ ತಾವು ಈ ಕೊಲೆಗೆ ಕೇವಲ ಅಸಹಾಯಕ ವಿಷಾದವನ್ನಷ್ಟೇ ವ್ಯಕ್ತಪಡಿಸಿದ್ದು ಸಹಜವೇ ಆಗಿತ್ತಾದರೂ ಅದು ನಿಮ್ಮತನದ ಉಳಿವಿನ ಬಗ್ಗೆ ತೀವ್ರ ಜಿಜ್ಞಾಸೆಯನ್ನೇಕೆ ಹುಟ್ಟುಹಾಕಲಿಲ್ಲ ಎಂಬ ಪ್ರಶ್ನೆ ನಿಮ್ಮ ಸಂದರ್ಶನ ಓದಿದ ನಂತರ ನನ್ನಲ್ಲಿ ಹುಟ್ಟುಹಾಕಿದೆ. ಇರಲಿ, ಅನಂತರ ನೀವು ಲೋಕಾಯುಕ್ತಕ್ಕೆ ಬರುವ ತನಕ ನಿಮ್ಮದು ಅಜ್ಞಾತವಾಸವೇ.ಹಲ್ಲಿಲ್ಲದ ಹಾವಾಗಿ, ಪ್ರಚಾರ ಲೋಲುಪ ವಾಗಿದ್ದ ಲೋಕಾಯುಕ್ತ ಅಲ್ಪಸ್ವಲ್ಪ ಜನರಿಗೆ ಉಪಯುಕ್ತವಾದ ಕೆಲಸ ಮಾಡಿದ್ದು ಗಣಿ ಹಗರಣವನ್ನು ಬಯಲಿಗೆ ತಂದ ಮೇಲೆಯೇ. ಅಧಿಕಾರಸ್ಥ ರಾಜಕಾರಣಿಗಳನ್ನು ಅದರಲ್ಲೂ ಮುಖ್ಯಮಂತ್ರಿಯನ್ನೂ ಸಹ ಕಟಕಟೆಯ ಹಿಂದೆ ನಿಲ್ಲಿಸಲು ಸಾಧ್ಯ ಎಂದು ನೀವು ಮತ್ತು ನಿಮ್ಮಂಥ ಕೆಲವು ನಿಸ್ಪೃಹ ಅಧಿಕಾರಿಗಳು ಮಾಡಿ ತೋರಿಸಿದ್ದರಿಂದ ನೀವುಗಳು ಹೀರೋಗಳಿಗಾಗಿ ಕಾಯು ತ್ತಿದ್ದ ನತದೃಷ್ಟ ಸಮಾಜದ ಹೀರೋಗಳಾಗಿ ಬಿಟ್ಟಿರಿ.

ಅದೇನೇ ಇರಲಿ ನಮ್ಮ ಸಂದರ್ಭವೇ ಹಾಗಿತ್ತು. ಒಂದೆಡೆ ಬ್ರಹ್ಮಾಂಡ ಭ್ರಷ್ಟಾಚಾರ ವನ್ನೂ ಬಟಾಬಯಲಲ್ಲಿ ನಡೆಸುತ್ತಲೂ ಮತ್ತು ಅದನ್ನು ಗತ್ತಿನಿಂದಲೇ ದಕ್ಕಿಸಿ ಕೊಳ್ಳುತ್ತಿರುವ, ಪ್ರಜಾತಂತ್ರ ಕೊಟ್ಟ ಅವಕಾಶಗಳನ್ನೇ ತಮ್ಮ ಸತತ ಸುಲಿಗೆಗೆ ರಹದಾರಿಯನ್ನಾಗಿ ಮಾಡಿಕೊಂಡಿರುವ ಬಿಜೆಪಿ ಸರಕಾರ, ಭ್ರಷ್ಟಾಚಾರದ ಮಟ್ಟಿಗೆ ಅದರ ಪ್ರತಿರೂಪವೇ ಆಗಿರುವ ವಿರೋಧ ಪಕ್ಷಗಳು. ಮತ್ತೊಂದೆಡೆ ಪರ್ಯಾಯದ ಕನಸನ್ನು ಬಿತ್ತಲಾಗದಷ್ಟು ದುರ್ಬಲವಾಗಿರುವ ಮತ್ತು ಪರೋಕ್ಷ ವಾಗಿ ಈ ತಾತ್ವಿಕ ಮತ್ತು ಭೌತಿಕ ಭ್ರಷ್ಟಾ ಚಾರದ ಫಲಾನುಭವಿಗಳೂ ಆಗಿಬಿಟ್ಟಿರುವ ಚಳವಳಿಗಳು. ಹೀಗಾಗಿ ಸತತ ವಿಶ್ವಾಸ ದ್ರೋಹಗಳು ಜನಮಾನಸದಲ್ಲಿ ಹತಾಶೆಯನ್ನೂ ಮತ್ತು ಆತ್ಮಘಾತುಕ ರಾಜಕೀಯ ಸಿನಿಕತನ ವನ್ನು ಬಿತ್ತುತ್ತಿದೆ.

ಕರ್ನಾಟಕದ ಜನತೆ ಇಂತಹ ಸೂಕ್ಷ್ಮಮತ್ತುಅಪಾಯಕಾರಿ ಸಾಮಾಜಿಕ ಮಾನಸಿಕತೆಯಲ್ಲಿರುವಾಗಲೇ ಯಡಿಯೂರಪ್ಪನವರೂ ಸಹ ಜೈಲಿಗೆ ಹೋಗುವಂತಾಗಿದ್ದೂ, ಕುಮಾರಸ್ವಾಮಿಯ ಮೇಲೂ ಕೇಸು ಫೈಲಾಗಿದ್ದೂ, ಕೇಂದ್ರದಲ್ಲಿ ದೊಡ್ಡ ದೊಡ್ಡವರೂ ಜೈಲು ಪಾಲಾ ದದ್ದೂ ಒಂದು ಬಗೆಯ ಭರವಸೆಯ ಚೇತರಿಕೆ ಯನ್ನು ಹುಟ್ಟುಹಾಕಿತು. ಕರ್ನಾಟಕದ ಜನತೆ ಸ್ವಲ್ಪಮಟ್ಟಿಗಾದರೂ ನಿರಾಳ ಅನುಭವಿಸಲು ನೀವೂ ಕಾರಣರೇ.ದುರದೃಷ್ಟವೆಂದರೆ ಒಂದು ನಿಷ್ಕ್ರಿಯ ಪ್ರಜಾಸತ್ತೆಯಲ್ಲಿ ನಡೆಯುವ ಇಂಥಾ ಪವಾಡಗಳೂ ಸಹ ಜನರಿಗೆ ಆತ್ಮವಿಶ್ವಾಸ ಹುಟ್ಟಿಸುವ ಬದಲು ಹೊಸ ದೇವರುಗಳನ್ನು ಸೃಷ್ಟಿಸಿ ಭಕ್ತ ಪರಂಪರೆಯನ್ನೂ ಮುಂದುವರಿಸುತ್ತದೆ. ಇಲ್ಲೂ ಹೀಗೆ ಆಯಿತು.ಸಂತೋಷ್ ಹೆಗ್ಡೆ ಇಲ್ಲಿ, ಅಣ್ಣಾಹಝಾರೆ ಅಲ್ಲಿ ಹೊಸ ದೇವರುಗಳಾದರು.

ಈಗ ಕರ್ನಾಟಕ ಎದುರಿಸುತ್ತಿರುವ ಸ್ಥಿತಿ ನೋಡಿ. ಒಂದೆಡೆ ಅಣ್ಣಾ ಹಝಾರೆ, ಸಂತೋಷ್ ಹೆಗ್ಡೆಗಳು ಹುಟ್ಟಿಹಾಕಿರುವ ಸಡಿಲ ಬುನಾದಿಯ ಭರವಸೆಗಳು. ಮತ್ತೊಂದೆಡೆ ಜನರ ಸಿನಿಕತನವನ್ನು ತಮ್ಮ ರಾಜಕೀಯ ಮರುಹುಟ್ಟಿಗೆ ಮತ್ತು ತಮ್ಮ ಭ್ರಷ್ಟಾಚಾರದ ಸಮರ್ಥನೆಗೆ ಬಳಸಿಕೊಳ್ಳಲು ಬಯಸುತ್ತಿರುವ ಯಡಿಯೂರಪ್ಪನವರಂಥಾ ರಾಜಕಾರಣಿಗಳು, ಭ್ರಷ್ಟ ಪತ್ರಿಕೋದ್ಯಮಿ ಕಂ ಪಾರ್ಟ್ ಟೈಮ್ ಕೋಮುವಾದಿ ರಾಜಕಾರಣಿಗಳು.ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರದ ಫಲಾನುಭವಿ ಪತ್ರಿಕೆಯಲ್ಲಿ ತಮ್ಮ ಸಂದರ್ಶನ ಪ್ರಕಟವಾಗಿದ್ದು ನನಗಂತೂ ಆಶ್ಚರ್ಯವನ್ನೇ ತಂದಿತು.

ಈಗ ತಮ್ಮ ಆ ಪತ್ರಿಕೆಯ ಸಂದರ್ಶನವನ್ನು ಪರಮ ಭ್ರಷ್ಟಾಚಾರಿ ಯಡಿಯೂರಪ್ಪತಮ್ಮ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.ತಾವು ‘‘ಲೋಕಾಯುಕ್ತ ಸಂಸ್ಥೆಯಲ್ಲೂ ಭ್ರಷ್ಟಾಚಾರಿಗಳಿದ್ದಾರೆ’’ ಎಂದು ಹೇಳಿದ್ದನ್ನು ಯಡಿಯೂರಪ್ಪನವರು ತಮ್ಮ ಮೇಲೆ ಹೊರಿಸಿರುವ ಆರೋಪಗಳೆಲ್ಲಾ ಸುಳ್ಳು ಎಂಬ ವಾದಕ್ಕೆ ಸಮರ್ಥನೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ‘‘ಬೇರೆಯವರ ತಪ್ಪಿನಲ್ಲಿ ನಾವು ಪ್ರಚಾರ ಪಡೆದುಕೊಳ್ಳುವುದು ಎಷ್ಟು ಸರಿ’’ ಎಂಬ ತಮ್ಮ ನೈತಿಕ ಗೊಂದಲದ ಸ್ವಗತವನ್ನು ಅವರು ಸಂತೋಷ್ ಹೆಗ್ಡೆ ಕೇಂದ್ರದಲ್ಲಿ ಅಧಿಕಾರ ಸ್ಥಾನದ ಮೇಲೆ ಕಣ್ಣಿಟ್ಟುಕೊಂಡು ಅಪವಾದ ಹೊರಿಸಿದ್ದಾರೆ ಎಂಬ ವಾದಕ್ಕೆ ಸಮರ್ಥನೆಯಾಗಿ ಬಳಸಿಕೊಳ್ಳುತ್ತಿದ್ದಾರೆ.

‘‘ಪ್ರಾಮಾಣಿಕತೆಯೆಂಬುದು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯಲ್ಲಿ ಇರಬೇಕಾದ ನೈತಿಕ ಮೌಲ್ಯ. ಅದರ ಗುತ್ತಿಗೆಯನ್ನು ಯಾವುದಾದರೂ ಒಂದು ಸಂಸ್ಥೆಗೆ ಹೇಗೆ ವಹಿಸಲು ಸಾಧ್ಯ?’’ ಎಂಬ ನಿಮ್ಮ ತಾತ್ವಿಕ ಪ್ರಶ್ನೆಯನ್ನು ಈಗ ಎಲ್ಲ ಪಕ್ಷಗಳ ಭ್ರಷ್ಟರು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಬೇಕೆಂಬ ಕುತಂತ್ರಕ್ಕೆ ಸಮರ್ಥನೆಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ನೀವು ನಿರೀಕ್ಷಿಸದೇ ಇದ್ದಿರಬಹುದು. ನಿಮ್ಮ ಪ್ರಶ್ನೆಗಳಲ್ಲಿ ಸತ್ವವೇ ಇರಬಹುದು. ಆದರೆ ಈ ಸಂದರ್ಶನ ಕೊಡಬೇಕಾದರೆ ಅದೂ ಈ ಸಂದರ್ಭದಲ್ಲಿ ಈ ಪತ್ರಿಕೆಗೆ ಕೊಡಬೇಕಾದರೆ ಇವನ್ನೆಲ್ಲಾ ಯಾಕೆ ನೀವು ಯೋಚಿಸಲಿಲ್ಲ ಎಂಬ ಬಗ್ಗೆ ನನಗೇ ಪ್ರಶ್ನೆಗಳಿವೆ..

ಈ ಪ್ರಶ್ನೆಗಳನ್ನು ಎತ್ತಬಾರದು ಎಂಬುದು ನನ್ನ ವಾದವಲ್ಲ.. ಆದರೂ ನೈತಿಕವಾಗಿ ಹಿನ್ನಡೆ ಅನುಭವಿಸುತ್ತಿದ್ದ ಭ್ರಷ್ಟಾಚಾರಿಗಳು ಈಗ ಸ್ವಲ್ಪವಾದರೂ ಸಾರ್ವಜನಿಕ ಕ್ಷೇತ್ರದಲ್ಲಿ ತಲೆ ಎತ್ತಿ ತಿರುಗಲು ವಿತಂಡವಾದವನ್ನು ಹೂಡಲು ತಮ್ಮ ತರ್ಕ ಮತ್ತು ಸಂದರ್ಶನ ಬಳಕೆಯಾಗುತ್ತಿರುವುದಂತೂ ಸತ್ಯ. ಅದಕೆ ನೀವು ನೇರವಾಗಿಯಲ್ಲದಿದ್ದರೂ ಪರೋಕ್ಷವಾಗಿ ಹೊಣೆಗಾರರು ಎಂಬುದರಲ್ಲಿ ಎರಡು ಮಾತಿಲ್ಲ.ನೀವು ಎತ್ತಿರುವ ಪ್ರಶ್ನೆಗಳ ಬಗ್ಗೆಯೂ ನನಗೆ ತಕರಾರಿದೆ. ಲೋಕಾಯುಕ್ತದಲ್ಲಿ ಭ್ರಷ್ಟರಿದ್ದಾರೆ ಖಂಡಿತಾ. ಸಂತೋಷ್ ಹೆಗ್ಡೆ ಪ್ರಚಾರ ಪ್ರಿಯರು ನಿಜ. ಪ್ರಾಮಾಣಿಕತೆ ವ್ಯಕ್ತಿನಿಷ್ಟ ನೈತಿಕ ಪ್ರಶ್ನೆ ನಿಜ. ಎಲ್ಲವೂ ಸತ್ಯ. ಆದರೆ ಅರ್ಧ ಸತ್ಯ. ಭ್ರಷ್ಟತೆಯ ನಿರ್ದಿಷ್ಟ ಪ್ರಕರಣದ ಸುತ್ತ ನ್ಯಾಯ ಪ್ರಕ್ರಿಯೆ ಪ್ರಾರಂಭವಾಗಿರುವಾಗ ನೀವು ಸಾರ್ವತ್ರಿಕ ಸಾಧ್ಯತೆಗಳನ್ನು ಅದರ ಎದುರಾಗಿ ನಿಲ್ಲಿಸಿ ನಿರ್ದಿಷ್ಟ ಪ್ರಕರಣದ ಆರೋಪಿಗಳಿಗೆ ನೈತಿಕ ಶಕ್ತಿ ತಂದುಕೊಟ್ಟಿದ್ದೀರಿ. ನಿಜ.

ಈ ಕೇಸುಗಳು ಗಟ್ಟಿಯಾದ ಸಾಕ್ಷಿ ಪುರಾವೆಗಳನ್ನು ಒದಗಿಸುವ ಹಿಂದೆ, ಪ್ರಭಾವಿಗಳ ಮೇಲೆ ಕೇಸು ಫೈಲಾಗುವ ಹಿಂದೆ ಖಂಡಿತಾ ಆಳುವ ಪಕ್ಷಗಳ ನಡುವಿನ ಜಿದ್ದಾಜಿದ್ದಿ ಕಾರಣವೇ ಹೊರತು ಜನಪರ ಕಾಳಜಿಗಳಲ್ಲ. ‘ಎಲ್ಲೋ ಒಂದು ಕಡೆ’ ಒಂದು ಪಕ್ಷ ಮತ್ತೊಂದು ಪಕ್ಷವನ್ನು ಸದೆ ಬಡಿಯಲು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಲೋಕಾಯುಕ್ತ ನಡೆಸಿದ ಪ್ರಾಮಾಣಿಕ ಕ್ರಮಗಳು ಬಳಕೆಯಾಗುತ್ತಿರಬಹುದು. ನೀವೇ ಹೇಳಿದಂತೆ ಲೋಕಾಯುಕ್ತದಲ್ಲಿಯೂ ಭ್ರಷ್ಟ ಅಧಿಕಾರಿಗಳು ದುಡ್ಡಿಗೋ, ವಶೀಲಿಗೋ, ಜಾತಿಗೋ ಒಬ್ಬರ ಪರವಾದ ಅಥವಾ ಇನ್ನೊಬ್ಬರ ವಿರೋಧವಾದ ಕೆಲಸ ಮಾಡುತ್ತಿರಬಹುದು. ಆದರೂ ಆಳುವ ವರ್ಗಗಳ ನಡುವಿನ ಸಂಘರ್ಷ ಈ ಪ್ರಜಾತಂತ್ರದ ಮಿತಿಗಳನ್ನು ಮುನ್ನೆಲೆಗೆ ತರುತ್ತಿರುವುದು ನಿಜ. ಇದರಲ್ಲಿ ತಮ್ಮ ಪಾಲೂ ಇದೆ.

ಈಗ ಬೇಕಿರುವುದು ಆ ಮಿತಿಗಳನ್ನು ಮೀರುವ ದಾರಿಯ ಹುಡುಕಾಟ. ಅದು ಸಕ್ರಿಯ ಮತ್ತು ಸಾರಾಂಶದಲ್ಲಿ ಜನರನ್ನು ಸಬಲೀಕರಿಸುವ ಸಾರಭೂತ ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ಮಾತ್ರ ಸಾಧ್ಯ. ಹಳೆಯದರ ನಾಶ ಹೊಸದರ ನಿರ್ಮಾಣಕ್ಕೆ ಮುಂದಾಗದಿದ್ದರೆ ಅದು ವಿನಾಶಕಾರಿ ಪರಿಣಾಮವನ್ನು ಮಾತ್ರ ಹೊಂದಿರುತ್ತದೆ. ನಿಜ ಇದು ಹೀಗೆ ಮುಂದುವರಿದರೆ ಈ ಸಮಾಜ ಮತ್ತೊಂದು ದೊಡ್ದ ಭ್ರಮನಿರಸನಕ್ಕೆ ಮತ್ತು ಆತ್ಮಘಾತುಕ ಸಿನಿಕತನಕ್ಕೆ ಈಡಾಗುತ್ತದೆ. ಹಾಗಾಗದಿರಬೇಕೆಂದರೆ ಜನ ಹೊಸ ದೇವರುಗಳನ್ನಲ್ಲದೆ ತಮ್ಮ ಸಕ್ರಿಯ ರಾಜಕೀಯ ಕ್ರಿಯಾಶೀಲತೆಯಲ್ಲಿ ನಂಬಿಕೆಯನ್ನಿಟ್ಟುಕೊಳ್ಳುವಂತೆ ಮಾಡುವುದು ಅತ್ಯಗತ್ಯ. ಅದಕ್ಕೆ ಬೇಕಾಗಿರುವುದು ಪೊಳ್ಳನ್ನು ಬಹಿರಂಗಗೊಳಿಸುವ ಕ್ರಿಯೆಯ ಜೊತೆಗೆ ಜನತಂತ್ರವನ್ನು ಗಟ್ಟಿಗೊಳಿಸುವ ಜನರ ಕ್ರಿಯಾಶೀಲತೆಯನ್ನು ಗಟ್ಟಿಗೊಳಿಸುವ ರಾಜಕೀಯ ಪ್ರಕ್ರಿಯೆ. ಅದು ವ್ಯಕ್ತಿನಿಷ್ಠ ನೆಲೆಯ ಪ್ರಾಮಾಣಿಕತೆ ಮತ್ತು ನಿಷ್ಠೂರತೆಯ ಜೊತೆಜೊತೆಗೆ ಸಾಮಾಜಿಕ ಮತ್ತು ಸಾಂಸ್ಥಿಕ ಕ್ರಿಯಾಶೀಲತೆಯಿಂದ ಮಾತ್ರ ಸಾಧ್ಯ.

ಆದರೆ ನಿಮ್ಮದು ಮೊದಲಿಂದಲೂ ಪರಮ ವ್ಯಕ್ತಿನಿಷ್ಠ ಚಿಂತನೆ. ಹೀಗಾಗಿಯೇ ಪ್ರಜಾತಂತ್ರದ ಮತ್ತು ಲೋಕಾಯುಕ್ತದ ಸಾಂಸ್ಥಿಕ ವೈಫಲ್ಯಗಳು ನಿಮ್ಮಲ್ಲಿಯೂ ಭ್ರಮನಿರಸನ ಹುಟ್ಟಿಸುತ್ತದೆಯೇ ವಿನಃ ಅದರ ನಡುವಿನಿಂದಲೇ ಜನತಂತ್ರವನ್ನು ಪುನಶ್ಚೇತನಗೊಳಿಸಬಲ್ಲ ಸಾಧ್ಯತೆಗಳು ಗೋಚರಿಸುವುದಿಲ್ಲ. ಹೀಗಾಗಿ ನಿಮ್ಮ ನೈತಿಕ ಗೊಂದಲದ ತಾರ್ಕಿಕ ಅಂತ್ಯ ಸಿನಿಕತನವೇ ಆಗಿಬಿಡುವ ಅಪಾಯವಿದೆ. ಸಿನಿಕತನದ ಪ್ರಧಾನ ಫಲಾನುಭವಿಗಳು ಈ ವ್ಯವಸ್ಥೆಯ ರಖವಾಲಾಗಳೇ! ಹೀಗಾಗಿ ಪ್ರಶ್ನೆ ಕೇಳುವ ಸ್ವಾತಂತ್ರ್ಯವನ್ನು ಬಯಸುವವರು ಉತ್ತರವನ್ನು ಹುಡುಕುವ ಪ್ರಕ್ರಿಯೆಯಲ್ಲಿ ಒಂದಾಗಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಮರೆಯಲಾದೀತೇ? ನೀವು ಪ್ರಜಾತಾಂತ್ರಿಕ ಸಂಸ್ಥೆಗಳ ಬಗ್ಗೆ ಎತ್ತುತ್ತಿರುವ ಪ್ರಶ್ನೆ ಪ್ರಜಾತಂತ್ರದ ಕ್ಷಿತಿಜವನ್ನು ಇನ್ನಷ್ಟು ವಿಸ್ತರಿಸಲು ಸಹಾಯವಾಗದೆ ಈವರೆಗೆ ಆದ ಗಳಿಕೆಯನ್ನೂ ಕಸಿದುಕೊಳ್ಳಲು ಭ್ರಷ್ಟರಿಗೆ ಸಹಾಯ ಮಾಡುವಂತಾದರೆ ನೀವು ಇನ್ನಷ್ಟು ನೈತಿಕ ಗ್ಲಾನಿಗೆ ಗುರಿಯಾಗುತ್ತೀರಿ..ಅಲ್ಲವೇ?

ಸಂದರ್ಭ ನಿಮ್ಮಿಂದ ಸ್ಪಷ್ಟೀಕರಣ ಕೇಳುತ್ತಿದೆ...ಇಲ್ಲದಿದ್ದರೆ ಏನೋ ಮಾಡಲು ಹೋಗಿ ಏನೋ ಮಾಡಿದಂತೆ ಆಗುತ್ತದೆ. ನೀವು ಎತ್ತಿರುವ ಪ್ರಶ್ನೆಗಳು ವ್ಯವಸ್ಥೆಯ ಹುಳುಕನ್ನು ನಿರ್ಮೂಲನೆ ಮಾಡಲು ಜನತಂತ್ರವನ್ನು ಗಟ್ಟಿಗೊಳಿಸಲು ಬೇಕಾದ ಪ್ರಕ್ರಿಯೆಗೆ ಚಾಲನೆ ನೀಡಬೇಕೇ ವಿನಃ ಸಮಾಜದಲ್ಲಿ ಸಿನಿಕತೆಗೆ ಮತ್ತು ಭ್ರಷ್ಟರ ಪುನರುಜ್ಜೀವನಕ್ಕೆ ಇಂಬುಗೊಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆಯಲ್ಲವೇ? ಯಾರೋ ಒಬ್ಬ ಆರೋಪಿ ಅಧಿಕಾರಿ ನಿಮ್ಮ ದಾಳಿಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಲೋಕಾಯುಕ್ತವನ್ನೇ ಬಿಡಬೇಕಾದ ತೀರ್ಮಾನ ತೆಗೆದುಕೊಂಡವರು ನೀವು. ಏನಿಲ್ಲದಿದ್ದರೂ, ಈಗ ನಿಮ್ಮ ಸಂದರ್ಶನದ ಪರಿಣಾಮ ಭ್ರಷ್ಟರ ಪುನರುಜ್ಜೀವನಕ್ಕೆ ದಾರಿ ಮಾಡಿಕೊಡ್ಡುತ್ತಿರುವುದನ್ನು ಅದಕ್ಕಿಂತಲೂ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುತ್ತೀರಿ ಎಂಬ ನಿರೀಕ್ಷೆಯನ್ನಂತೂ ನನ್ನಲ್ಲಿ ಹುಟ್ಟುಹಾಕಿದೆ.....


ಆರು ದ್ವಿಪದಿಗಳು
ನಿನ್ನ ಹಾಗೆ ಮಳೆಗಾಲದ ಸೂರ್ಯನೂ ಮಗ್ಗುಲ ಬದಲಿಸಿದನೇನೋ
ಗಾಳಿಯಲ್ಲಿ ಹೆಜ್ಜೆಗುಂಟ ಅಲೆಯುತ್ತಿದೆ ಮೈ ಚುಚ್ಚುವ ಚಳಿಯ ಸೂಜಿ

ಆಡಿ ಆಡಿ ದಡ ಸೇರಿದ ನಾವು ನಿರುಮ್ಮುಳ
ನಾವು ಹೋದ ಮೇಲೂ ಹುಟ್ಟು ಆಡಿದ ಚಹರೆ ಹೊತ್ತು ದಿನಗೆಳೆಯುವುದು ಕಲಕಿದ ನೀರು

ನನ್ನ ಬರಹದ ಸಿದ್ಧ ಮಾದರಿ ವಸ್ತು ಪಾತ್ರ ಎಷ್ಟೇ ಸ್ಥಿರ ಪ್ರೇಮಿನಲ್ಲಿಟ್ಟರೂ
ನಿನ್ನ ಮನದಲ್ಲಿ ಅವೆಲ್ಲ ಅದಲ್ಬದಲ್ ಕಂಚಿಕದಲಾದರೆ ಬರಹ ಸಾಯದೆ ಬದುಕುವುದು

ಬೇಲಿ ಕಟ್ಟಿದ ತೋಟದಲ್ಲೇ ಹೂ ಅರಳಿತು
ಕಾವಲುಗಾರ ಪಾರಾಗ ಸ್ಪರ್ಶವ ಸುಮ್ಮನೆ ನಿಂತು ನೋಡಬೇಕಾಯಿತು

ಹೂ ಮಾರುವ ಹೂಗಾರನಿಗೂ ಲೋಕ ಹೂ ಖರೀದಿಸಿತು
ಲೋಕವೇ ಹೂ ಮೈಮೇಲಿದ್ದರೂ ಹೂಗಾರನಿಗದು ತಿಳಿಯದೇ ಹೋಯ್ತು

ಇವು ಮಹಾಕಾವ್ಯದ ಸಾಲುಗಳಲ್ಲ ಎಂಬುದು ನನಗೂ ಗೊತ್ತು
ಶಬ್ದವಾಗದ ಹೃದಯದ ಮಾತು ಹೃದಯಕ್ಕೆ ತಲುಪಿಸಲು ಎರಡು ಸಾಲು

-ಚಿತ್ರ :ಗೂಗಲ್ ಕೃಪೆ

Wednesday, November 16, 2011

ನಾಲ್ಕೈದು ಹನಿಗಳು....

-ಬಿ . ಎಂ

ಕೈದಿ
ಕೈದಿಯೊಬ್ಬ ಸೂರ್ಯನ
ಬೆಳಕನ್ನು ಅರಸುತ್ತಾ
ಸೆರೆಮನೆಗೆ ಕನ್ನ ಕೊರೆಯುವಂತೆ

ನಾನು ಕವಿತೆ ಬರೆಯುತ್ತೇನೆ!

ಧರಿಸಿದ ಸರಪಳಿಗಳು, ಕೈಕೋಳಗಳನ್ನು
ರೂಪಕಗಳಂತೆ ಬಳಸಿ
ನನ್ನ ಕವಿತೆಗಳನ್ನು
ಶೃಂಗರಿಸುತ್ತೇನೆ!

ಗೆಳತಿ
ಗಲ್ಲಿಗೇರಿಸುವ ಮುನ್ನ
ಮುಚ್ಚುತ್ತಾರೆ ಮುಖ
ಇದು ಬುರ್ಖಾದ ಬಗ್ಗೆ
ನನ್ನ ಗೆಳತಿಯ ತರ್ಕ

ಪರಿಮಳ
ಮೀನು ಮಾರುವವಳು ನನ್ನ ನಲ್ಲೆ
ಈಗಷ್ಟೇ ಬಂದು ಹೋದಳು
ಕೋಣೆಗೆ
ಎಲ್ಲರೂ ಮೂಗು ಮುಚ್ಚಿದರು
ನನಗೆ ಮಾತ್ರ ಯಾಕೋ...
ಕೋಣೆ ತುಂಬಾ ಮಲ್ಲಿಗೆ

ಡಿಸೆಂಬರ್ 30(ಸದ್ದಾಂ ಹುಸೇನ್‌ನನ್ನು ಗಲ್ಲಿಗೇರಿಸಿದ ದಿನ)
ಗಲ್ಲಿಗೇರಿಸಲ್ಪಡುವವ ಮುಖ ಮುಚ್ಚಿಕೊಂಡಿಲ್ಲ
ಗಲ್ಲಿಗೇರಿಸುವ
ಕಟುಕರು ಮುಖಮುಚ್ಚಿಕೊಂಡಿದ್ದಾರೆ!

ಯಾರು ಜಗತ್ತಿಗೆ ಮುಖ ತೋರಿಸಲು
ಭಯ ಪಟ್ಟರೋ ಅವರು
ಡಿಸೆಂಬರ್ 30ರಂದು ಸತ್ತರು
ಅಂದು ನೇಣಿನ ಕುಣಿಕೆಯಲ್ಲಿ ತೂಗಿದ್ದು
ಯಾರು ಎನ್ನುವುದನ್ನು ಜಗತ್ತಿನ
ಎದೆಯ ಮೇಲೆ ಚೂರಿಯ
ಮೊನೆಯಿಂದ ಕೆತ್ತಲಾಯಿತು...

ನಾಕು ಸಾಲುಗಳು...
ಅಪರಿಚಿತ ಓಣಿಯಲ್ಲಿ
ತಡವರಿಸುವ
ಎಳೆ ಕಂಬನಿಯಂತಿರುವ
ಆ ನಾಕು ಸಾಲುಗಳನ್ನು ಬರೆದೆ
ಕವಿತೆಯೆಂದು ಕರೆದೆ
ಅವರು ನಕ್ಕರೂ...

ನನಗೆ ಗೊತ್ತಿದೆ...
ಆ ಸಾಲುಗಳು
ಅನಾಥ-

ನನ್ನ ಸಾವಿನ ಬಳಿಕ
ಕೊಳೆಯಗೊಡುವುದಿಲ್ಲ
ನಾಕು ಕಡೆ ಹೆಗಲು ಕೊಟ್ಟು
ಮಸಣ ಮುಟ್ಟುವ ತನಕ

-ಬಿ . ಎಂ

ಪ್ರಜಾಸತ್ತೆಯ ಕತ್ತು ಹಿಸುಕುವ ಪ್ರಯತ್ನ..

-ಅವಧಿಯಿಂದ

ನಾ ದಿವಾಕರಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಪ್ರಭುಗಳ ನಡುವಿನ ಸೂಕ್ಷ್ಮ ಸಂಬಂಧಗಳನ್ನು ನಿರ್ಧರಿಸುವುದು ಸಾಂವಿಧಾನಿಕ ಮೌಲ್ಯಗಳ ಪರಿಪಾಲನೆ ಮಾತ್ರ. ಸಂವಿಧಾನ ಕೇವಲ ಒಂದು ಮಾರ್ಗದರ್ಶಕ ಗ್ರಂಥವಲ್ಲ. ಅಥವಾ ಇಂತಹುದೇ ನಿಯಮಗಳನ್ನು ಪಾಲಿಸಬೇಕೆಂದು ನಿಗದಿಪಡಿಸುವ ಒಂದು ಸಂಹಿತೆಯೂ ಅಲ್ಲ. ಪ್ರಜೆಗಳಿಂದ ಚುನಾಯಿತರಾದ ಪ್ರಜಾ ಪ್ರತಿನಿಧಿಗಳು ದೇಶದ ಅಭ್ಯುದಯಕ್ಕಾಗಿ, ಜನಸಾಮಾನ್ಯರ ಏಳಿಗೆಗಾಗಿ ಮತ್ತು ಉತ್ತಮ ಸಮಾಜದ ನಿಮರ್ಾಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಯಾವ ದಿಕ್ಕಿನಲ್ಲಿ ನಡೆಸಬೇಕು ಎಂದು ಸಲಹೆ ನೀಡುವ ಒಂದು ಅದ್ಭುತ ಗ್ರಂಥ ಸಂವಿಧಾನ. ಭಾರತದ ಸಂವಿಧಾನವನ್ನು ವಿಶ್ವದ ಅತ್ಯಂತ ಶ್ರೇಷ್ಠ ಸಂವಿಧಾನ ಎಂದು ಪರಿಗಣಿಸಲಾಗುತ್ತದೆ. ಇದನ್ನು ರೂಪಿಸಲು 299 ಸದಸ್ಯರ ಸಮಿತಿ ವರ್ಷಗಟ್ಟಲೆ ಶ್ರಮ ವಹಿಸಿದೆ. ರಾಜಕೀಯ, ಆಥರ್ಿಕ, ಸಾಮಾಜಿಕ ವಲಯದ ಸಾವಿರಾರು ಮುತ್ಸದ್ದಿಗಳು ಭಾರತದ ಕೋಟ್ಯಾಂತರ ಜನಗಳ ಮೂಲ ಆಶಯಗಳನ್ನು ಪರಿಗಣಿಸಿ, ಈ ಆಶಯಗಳನ್ನು ಸಾಕಾರಗೊಳಿಸಲು ಪೂರಕವಾಗುವಂತಹ ಕಾಯ್ದೆ ಕಾನೂನುಗಳನ್ನು ರಚಿಸಲು ನೆರವಾಗುವಂತೆ ಭಾರತದ ಸಂವಿಧಾನವನ್ನು ರಚಿಸಿದ್ದಾರೆ. ಈ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವ ನಿಷ್ಠೆ, ಬದ್ಧತೆ ಮತ್ತು ಶ್ರದ್ಧೆ ಇಲ್ಲದ ಯಾವುದೇ ವ್ಯಕ್ತಿ ಭಾರತದ ಪ್ರಜೆಗಳನ್ನು ಪ್ರತಿನಿಧಿಸಲು ಅರ್ಹನಲ್ಲ ಎಂಬ ಒಂದು ಕಟ್ಟು ನಿಟ್ಟಿನ ಕಾಯ್ದೆಯನ್ನು ಜಾರಿಗೊಳಿಸುವುದು ಇಂದಿನ ತುರ್ತು ಅಗತ್ಯತೆ ಎನಿಸುತ್ತದೆ. ಕಾರಣ ಸ್ಪಷ್ಟ. ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ತಮ್ಮ ಸಾಂವಿಧಾನಿಕ ಕರ್ತವ್ಯ ಪ್ರಜ್ಞೆಯೇ ಇಲ್ಲವಾಗಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಭಾರತ ಆರು ದಶಕಗಳ ಗಣತಂತ್ರವನ್ನು ಪೂರೈಸಿದ್ದರೂ ಇನ್ನೂ ಅದೇ ರಾಜಪ್ರಭುತ್ವದ ಮನೋಭಾವವನ್ನೇ ತೋರುತ್ತಿರುವ ರಾಜಕಾರಣಿಗಳ, ರಾಜಕೀಯ ಪಕ್ಷಗಳ ಊಳಿಗಮಾನ್ಯ ಧೋರಣೆ ಇನ್ನೂ ಪಕ್ವವಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಶಾಶ್ವತವಲ್ಲ ಎಂದು ನಂಬಲಾಗಿದೆಯಾದರೂ, ಭಾರತದ ರಾಜಕಾರಣದಲ್ಲಿ ಕುಟುಂಬ ಪ್ರಜ್ಞೆಯೇ ಮೇಲುಗೈ ಸಾಧಿಸಿರುವುದರಿಂದ ಅಧಿಕಾರ ಕೇಂದ್ರೀಕರಣ ಕೌಟುಂಬಿಕ ಸ್ವರೂಪ ಪಡೆದಿದೆ. ಮಾಜಿಯಾಗಲಿ, ಹಾಲಿಯಾಗಲಿ ಅಧಿಕಾರಸ್ಥ ರಾಜಕಾರಣ ಮಾತ್ರ ಒಂದೇ ರೀತಿಯಲ್ಲಿ ವತರ್ಿಸುವುದನ್ನು ಕಾಣುತ್ತಿದ್ದೇವೆ.

ಪ್ರಜೆಗಳು-ಪ್ರಭುಗಳು ಮತ್ತು ಪ್ರಜಾತಂತ್ರ

ಪ್ರಜೆಗಳ ದೃಷ್ಟಿಯಲ್ಲಿ ಕಾಣುವ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳೆಂಬ ಎರಡು ಬಣಗಳು ಬಾಹ್ಯ ಲೋಕಕ್ಕೆ ಭಿನ್ನವಾಗಿ ಕಂಡರೂ ಆಂತರಿಕವಾಗಿ ಎರಡೂ ಬಣಗಳು ಪ್ರಭುತ್ವವನ್ನೇ ಪ್ರತಿನಿಧಿಸುವುದು ಸತ್ಯ. ಹಾಗಾಗಿ ಈ ಎರಡೂ ಬಣಗಳ ಮೂಲ ಉದ್ದೇಶ ಪ್ರಭುತ್ವದ ಹಿತಾಸಕ್ತಿಗಳನ್ನು ರಕ್ಷಿಸುವುದರ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದೇ ಆಗಿರುತ್ತದೆ. ಹಾಗಾಗಿಯೇ ರಾಜಕಾರಣದಲ್ಲಿ ಶಾಶ್ವತ ವೈರಿಗಳಿಲ್ಲ ಎಂಬ ನಾಣ್ಣುಡಿ ಇಂದಿಗೂ ತನ್ನ ಗೂಡಾರ್ಥವನ್ನು ಉಳಿಸಿಕೊಂಡಿದೆ. ಇದರ ಪ್ರತ್ಯಕ್ಷ ನಿದರ್ಶನವನ್ನು ಕನರ್ಾಟಕದ ರಾಜಕಾರಣದಲ್ಲಿ ಕಾಣಬಹುದಾಗಿದೆ. ತನ್ನ ರಾಜಕೀಯ ಪ್ರಾಬಲ್ಯ ಸ್ಥಾಪಿಸಲು ಗಣಿ ಧಣಿಗಳನ್ನು ಯಥೇಚ್ಚವಾಗಿ ಬಳಸಿಕೊಂಡ ಬಿಜೆಪಿಗೆ ನಾಯಕತ್ವ ನೀಡಿದ ಯಡಿಯೂರಪ್ಪ ಇಂದು ತಮ್ಮ ಮೂಲವನ್ನೇ ತಿರಸ್ಕರಿಸಿ ಸ್ವಾರ್ಥ ರಾಜಕಾರಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ಪಕ್ಷದ ಬೆಳವಣಿಗೆಗೆ ನೆರವು ನೀಡಿದ ಗಣಿ ಧಣಿಗಳು ಇಂದು ಯಡಿಯೂರಪ್ಪನವರ ವೈಯ್ಯಕ್ತಿಕ ಏಳಿಗೆಯ ಮೆಟ್ಟಿಲುಗಳಾಗಿ ಪರಿಣಮಿಸುತ್ತಾರೆ. ಮತ್ತೊಂದೆಡೆ ಅಕ್ರಮ ಗಣಿಗಾರಿಕೆಯ ವಿರುದ್ಧ ದನಿ ಏರಿಸಿ ಬಳ್ಳಾರಿ ಗಣಿಧಣಿಗಳ ವಿರುದ್ಧ ರಣಕಹಳೆ ಊದಿದ ದೇವೇಗೌಡ ಅಂಡ್ ಸನ್ಸ್ ಈಗ ಬಿಜೆಪಿಯಿಂದ ಹೊರಬಂದಿರುವ ಶ್ರೀರಾಮುಲು ಪರವಾಗಿ ತುತ್ತೂರಿ ಊದಲು ಸಿದ್ಧವಾಗುತ್ತಿದ್ದಾರೆ. ಈ ವಿದ್ಯಮಾನಗಳ ನಡುವೆ ಬಲಿಪಶುವಾಗಿರುವುದು ಯಾವ ರಾಜಕೀಯ ಪಕ್ಷವೂ ಅಲ್ಲ, ರಾಜಕಾರಣಿಯೂ ಅಲ್ಲ, ಬದಲಾಗಿ ಈ ರಾಜಕೀಯ ನಾಯಕರ ಭ್ರಷ್ಟಾಚಾರದ ವಿರಾಟ್ ಸ್ವರೂಪವನ್ನು ಸಾರ್ವಜನಿಕರ ಮುಂದೆ ಬಿಚ್ಚಿಟ್ಟ ಒಂದು ಸಾಂವಿಧಾನಿಕ ಸಂಸ್ಥೆ. ಆಡಳಿತದಲ್ಲಾಗಲೀ ವ್ಯಕ್ತಿಗತ ನೆಲೆಯಲ್ಲಾಗಲೀ ಭ್ರಷ್ಟಾಚಾರ ಉದ್ಭವಿಸುವುದೇ ದುರಾಸೆಯ ಪರಿಣಾಮವಾಗಿ. ತನ್ನ ಅಧಿಕಾರ, ಪ್ರಾಬಲ್ಯ, ಅಧಿಪತ್ಯ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಅಧಿಕಾರಸ್ಥ ಶಕ್ತಿಗಳು ಉಪಯೋಗಿಸುವ ಅನೇಕ ತಂತ್ರಗಳಲ್ಲಿ ಭ್ರಷ್ಟಾಚಾರವೂ ಒಂದು. ರಾಜಕೀಯ ಪಕ್ಷಗಳು ಈ ತಂತ್ರವನ್ನು ಅನೇಕ ಸ್ವರೂಪಗಳಲ್ಲಿ ಅನುಸರಿಸಿದರೆ, ರಾಜಕಾರಣಿಗಳು ಈ ಸ್ವರೂಪಗಳನ್ನು ಮತ್ತಷ್ಟು ವಿಕೃತಗೊಳಿಸಿ ತಮ್ಮ ವೈಯ್ಯಕ್ತಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಾರೆ. ಈ ಒಂದು ವಿಶಿಷ್ಟ ವಿದ್ಯಮಾನವನ್ನು ಕನರ್ಾಟಕದ ಇತ್ತೀಚಿನ ರಾಜಕಾರಣ, ಅಕ್ರಮ ಗಣಿಗಾರಿಕೆ ಮತ್ತು ಭೂ ಹಗರಣಗಳಲ್ಲಿ ಕಾಣಬಹುದು. ರಾಜಕೀಯ ಭ್ರಷ್ಟಾಚಾರದ ವಿರಾಟ್ ಸ್ವರೂಪವನ್ನು ಅನಾವರಣಗೊಳಿಸಿದ ಲೋಕಾಯುಕ್ತವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರದಲ್ಲಿ ರಾಜಕೀಯ ಪಕ್ಷಗಳು ಸಕ್ರಿಯವಾಗಿರುವುದನ್ನು ನೋಡಿದರೆ, ಭಾರತದ ಪ್ರಜಾತಂತ್ರಕ್ಕೆ ಭವಿಷ್ಯವೇ ಇಲ್ಲವೇನೋ ಎಂದು ಆತಂಕವಾಗುತ್ತದೆ.

ಮಾಜಿ ಪ್ರಧಾನಮಂತ್ರಿ ದೇವೇಗೌಡರು, ಲೋಕಾಯುಕ್ತದ ಅಧಿಕಾರಿಗೆ ದೂರವಾಣಿಯ ಮೂಲಕ ಬೆದರಿಕೆ ಹಾಕುವುದು ಸಂವಿಧಾನಕ್ಕೆ ಎಸಗಿದ ಅಪಚಾರವಲ್ಲದೆ ಮತ್ತೇನು ? ಶಾಲೆಗಳನ್ನು ಮುಚ್ಚುವುದಿಲ್ಲ ವಿಲೀನಗೊಳಿಸುತ್ತೇವೆ ಎಂದು ಶಿಕ್ಷಣ ಮಂತ್ರಿ ಹೇಳಿದಂತೆ ತಾವು ಕೇವಲ ಎಚ್ಚರಿಕೆ ನೀಡಿದ್ದೇವೆ ಬೆದರಿಕೆ ಹಾಕಿಲ್ಲ ಎಂಬ ಸಬೂಬುಗಳನ್ನು ನಂಬಲು ಕನರ್ಾಟಕದ ಜನತೆ ಅಬ್ಬೇಪಾರಿಗಳಲ್ಲ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸುವ ಪದಪುಂಜಗಳಿಗಿಂತಲೂ ಅವುಗಳ ಹಿಂದಿನ ಗೂಡಾರ್ಥವನ್ನು ಗ್ರಹಿಸುವ ಮಟ್ಟಿಗೆ ಕನರ್ಾಟಕದ ಜನತೆ ಪ್ರಜ್ಞಾವಂತರಾಗಿದ್ದಾರೆಂಬ ಸತ್ಯವನ್ನು ದೇವೇಗೌಡ ಮತ್ತು ಅವರ ಪುತ್ರರು ಗ್ರಹಿಸಬೇಕಿದೆ. ಆದರೆ ದೇವೇಗೌಡರಿಗಾಗಲಿ, ಯಡಿಯೂರಪ್ಪನವರಿಗಾಗಲೀ ತಮ್ಮ ಸ್ವಹಿತಾಸಕ್ತಿಗಳೇ ಪ್ರಧಾನವಾಗುತ್ತದೆಯೇ ಹೊರತು ಸಾಂವಿಧಾನಿಕ ಮೌಲ್ಯಗಳಲ್ಲ. ಹಾಗಾಗಿಯೇ ರಾಜಕಾರಣಿಗಳ ದೃಷ್ಟಿಯಲ್ಲಿ ಒಮ್ಮೆ ಹೀರೋ ಆಗಿ ಕಾಣುವ ಸಂತೋಷ್ ಹೆಗ್ಡೆ ಮರುಕ್ಷಣದಲ್ಲಿ ವಿಲನ್ ಆಗಿಯೂ ಕಾಣುತ್ತಾರೆ. ಕುಟುಂಬ ರಾಜಕಾರಣದಲ್ಲಿ ಹಾಸು ಹೊಕ್ಕಾಗಿರುವ ದೃತರಾಷ್ಟ್ರ ಪ್ರೇಮ ಕೇವಲ ದೇವೇಗೌಡರಿಗೆ ಸೀಮಿತವಲ್ಲ. ಕರುಣಾನಿಧಿಯನ್ನೂ ಸೇರಿದಂತೆ ಎಲ್ಲ ರಾಜಕಾರಣಿಗಳೂ ತಮ್ಮ ಕೌಟುಂಬಿಕ ರಾಜಕಾರಣದ ರಕ್ಷಣೆಗಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದನ್ನು ನಾವು ಕಾಣುತ್ತಿದ್ದೇವೆ. ಕೇಂದ್ರ ಯುಪಿಎ ಸಕರ್ಾರದ ಭ್ರಷ್ಟಾಚಾರ ಹಗರಣಗಳನ್ನು ಸಿಬಿಐಗೆ ಒಪ್ಪಿಸಿ ಎಂದು ಆಗ್ರಹಿಸುವ ಬಿಜೆಪಿಯ ಕನರ್ಾಟಕದ ನಾಯಕರು, ತಮಗೆ ಸಿಬಿಐನಲ್ಲಿ ನಂಬಿಕೆಯೇ ಇಲ್ಲ ಎಂದು ಹೇಳುತ್ತಾರೆ. ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಿದ ಲೋಕಾಯುಕ್ತವನ್ನು ಹೊಗಳಿ ಹೊನ್ನ ಶೂಲಕ್ಕೇರಿಸಿದ ದೇವೇಗೌಡರು, ತಮ್ಮ ಪುತ್ರನ ವಿರುದ್ಧ ಸೊಲ್ಲೆತ್ತಿದ ಕೂಡಲೇ ಲೋಕಾಯುಕ್ತ ಸಂಸ್ಥೆಯ ಪ್ರಸ್ತುತತೆಯನ್ನೇ ಪ್ರಶ್ನಿಸುತ್ತಾರೆ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಕಾಣುತ್ತಿರುವ ಕಟು ವಾಸ್ತವ. ಹಾಗಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವ ನಿರಂತರ ಯತ್ನ ನಡೆಯುತ್ತಲೇ ಇರುತ್ತದೆ.
ಸಂವಿಧಾನ ಬದ್ಧತೆ ಮತ್ತು ಆಳ್ವಿಕರ ಹಿತಾಸಕ್ತಿ
ಲೋಕಾಯುಕ್ತ ಸಂಸ್ಥೆಯಲ್ಲೇ ಭ್ರಷ್ಟರಿದ್ದಾರೆ ಎಂದು ಮಧುಕರ ಶೆಟ್ಟಿ ಎಂಬ ಒಬ್ಬ ಅಧಿಕಾರಿ ಹೇಳಿದ ಮಾತ್ರಕ್ಕೆ ಸಂಸ್ಥೆಯ ಪ್ರಸ್ತುತತೆಯನ್ನೇ ಪ್ರಶ್ನಿಸುವ ರಾಜಕಾರಣಿಗಳು ಇಂತಹ ಅಧಿಕಾರಿಗಳನ್ನೇ ಏಕೆ ಖರೀದಿಸಬಾರದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಿಜ, ಭಾರತದಲ್ಲಿ ಸ್ಥಾಪಿಸಲಾಗಿರುವ ಅನೇಕ ಸಾಂವಿಧಾನಿಕ ಸಂಸ್ಥೆಗಳಲ್ಲಿ, ನ್ಯಾಯಾಂಗವನ್ನೂ ಸೇರಿದಂತೆ, ಭ್ರಷ್ಟರಿದ್ದಾರೆ, ಭ್ರಷ್ಟಾಚಾರವೂ ಇದೆ. ಹಾಗೆಂದ ಮಾತ್ರಕ್ಕೆ ಈ ಸಂಸ್ಥೆಗಳ ಪ್ರಸ್ತುತತೆಯನ್ನೇ ಪ್ರಶ್ನಿಸುವುದು ಪ್ರಜಾತಂತ್ರಕ್ಕೆ ದ್ರೋಹ ಬಗೆದಂತಾಗುತ್ತದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆ ಕೇವಲ ರಾಜಕಾರಣಿಗಳದ್ದಲ್ಲ. ಪ್ರತಿಯೊಬ್ಬ ಪ್ರಜೆಯೂ ಈ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಈ ಸತ್ಯಾಂಶವನ್ನು ಅಧಿಕಾರಸ್ಥ ರಾಜಕಾರಣಿಗಳೂ ಅರಿತಿರಲಿ. ಯಾವುದೇ ಸಾಂವಿಧಾನಿಕ ಸಂಸ್ಥೆಯಲ್ಲಿನ ನ್ಯೂನತೆಗಳನ್ನು, ಲೋಪದೋಷಗಳನ್ನು ಸರಿಪಡಿಸುವ ಮೂಲಕವೇ ಭ್ರಷ್ಟ ರಾಜಕಾರಣಿಗಳನ್ನು ಮಟ್ಟಹಾಕುವುದು ಇಂದಿನ ಅಗತ್ಯತೆ. ಇದು ಪ್ರಜೆಗಳ ಆಶಯವೂ ಹೌದು. ಇಲ್ಲಿ ಪ್ರಶ್ನೆ ಉದ್ಭವಿಸುವುದು ಸಾಂವಿಧಾನಿಕ ಸಂಸ್ಥೆಗಳ ಪ್ರಸ್ತುತತೆಯ ಬಗ್ಗೆ ಅಲ್ಲ. ಬದಲಾಗಿ ಈ ಸಾಂವಿಧಾನಿಕ ಸಂಸ್ಥೆಗಳನ್ನು ನಿಯಂತ್ರಿಸುವ ಪ್ರಭುತ್ವದ ಆಡಳಿತ ನೀತಿಗಳ ಬಗ್ಗೆ. ಲೋಕಾಯುಕ್ತವಾಗಲಿ, ನ್ಯಾಯಾಂವಾಗಲಿ, ಪೊಲೀಸ್ ಇಲಾಖೆಯಾಗಲಿ, ಇಲ್ಲಿ ಭ್ರಷ್ಟ ಅಧಿಕಾರಿಗಳನ್ನು ನೇಮಿಸುವ ಅಧಿಕಾರ ಇರುವುದು ಆಳ್ವಿಕರಿಗೇ ಅಲ್ಲವೇ ? ಪ್ರತಿಯೊಂದು ಆಡಳಿತಾರೂಢ ಪಕ್ಷವೂ ಎಲ್ಲ ಸಾಂವಿಧಾನಿಕ ಸಂಸ್ಥೆಗಳಲ್ಲಿ ತಮಗೆ ಬೇಕಾದವರನ್ನು, ತಮ್ಮ ನಿಲುವಿಗೆ ಸ್ಪಂದಿಸುವವರನ್ನು ನೇಮಿಸುವುದು ಭಾರತರ ರಾಜಕಾರಣದಲ್ಲಿ ಪರಂಪರೆಯಾಗಿಯೇ ಬೆಳೆದುಬಂದಿದೆ.

ಈ ನಿಟ್ಟಿನಲ್ಲಿ ಯಾವ ಪಕ್ಷವೂ ಭಿನ್ನವಾಗಿಲ್ಲ. ಹೀಗಿರುವಾಗ ಇಂತಹ ಸಂಸ್ಥೆಗಳಲ್ಲಿ ನುಸುಳಿರುವ ಭ್ರಷ್ಟ ಅಧಿಕಾರಿಗಳ ಹೇಳಿಕೆಗಳನ್ನೇ ಆಧರಿಸಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ನಿರ್ಧರಿಸಲು ಸಾಧ್ಯವೇ ? ನ್ಯಾಯಾಂಗದಲ್ಲಿ ಭ್ರಷ್ಟರಿದ್ದ ಮಾತ್ರಕ್ಕೆ ನ್ಯಾಯಾಂಗದ ಸಿಂಧುತ್ವವನ್ನೇ ಪ್ರಶ್ನಿಸುವುದು ಸಾಧ್ಯವೇ ? ಈ ಪ್ರಶ್ನೆಗಳಿಗೆ ಆಳ್ವಿಕರು ಉತ್ತರ ನೀಡಬೇಕಿದೆ. ಅಧಿಕಾರ ವಿಕೇಂದ್ರೀಕರಣ ಮತ್ತು ಪ್ರಜೆಗಳ ಕೈಗೇ ಅಧಿಕಾರ ನೀಡುವ ಉದಾತ್ತ ಚಿಂತನೆಯಿಂದ ರೂಪಿಸಿದ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಮುಂದಾಗಿರುವ ಭಾರತೀಯ ಪ್ರಭುತ್ವದ ಪ್ರತಿನಿಧಿಗಳು ಈಗ ದೇಶದ ಆಂತರಿಕ ವ್ಯವಸ್ಥೆಯ ಸ್ವಾಸ್ಥ್ಯವನ್ನು ಕಾಪಾಡಲು ರಚಿಸಲಾಗಿರುವ ಸಾಂವಿಧಾನಿಕ ಸಂಸ್ಥೆಗಳನ್ನೂ ಬುಡಮೇಲು ಮಾಡಲು ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಒಂದೆಡೆ ಭ್ರಷ್ಟಾಚಾರ ನಿಮರ್ೂಲನೆಗಾಗಿ ಲೋಕಪಾಲ್ ಮಸೂದೆ ಮಂಡಿಸಲು ಮುಂದಾಗುತ್ತಿರುವ ಜನಪ್ರತಿನಿಧಿಗಳು ಮತ್ತೊಂದೆಡೆ ಭ್ರಷ್ಟಾಚಾರವನ್ನು ನಿಗ್ರಹಿಸುವ ಸಾಧನಗಳಂತಿರುವ ಸಾಂವಿಧಾನಿಕ ಸಂಸ್ಥೆಗಳನ್ನೇ ನಾಶಪಡಿಸಲು ಯತ್ನಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಇದು ಪ್ರಜಾಸತ್ತೆಯ ಕತ್ತು ಹಿಸುಕುವ ಪ್ರಯತ್ನವೆಂದೇ ಹೇಳಬೇಕಾಗಿದೆ. ಲೋಕಾಯುಕ್ತ, ಲೋಕಪಾಲ್, ಸಿಬಿಐ, ನ್ಯಾಯಾಂಗ ಈ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಅವಶ್ಯಕತೆ ಇರುವುದು ಈ ದೇಶದ ಪ್ರಜೆಗಳಿಗೆ, ಅವರ ಹಿತಾಸಕ್ತಿಗಳ ರಕ್ಷಣೆಗೆ. ಇವುಗಳನ್ನು ರಕ್ಷಿಸುವ ಹೊಣೆಗಾರಿಕೆಯೂ ಪ್ರಜೆಗಳದ್ದೇ ಆಗಿರುತ್ತದೆ. ಈ ಸಂದರ್ಭದಲ್ಲಿ ಭಾರತದ ಪ್ರಜೆಗಳು ಜಾಗೃತರಾಗದಿದ್ದಲ್ಲಿ ಮುಂದೊಂದು ದಿನ ರಾಜಕೀಯ ಭ್ರಷ್ಟಾಚಾರ ಅನಿರ್ಬಂಧಿತ ವಿದ್ಯಮಾನವಾಗಿ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ನುಂಗಿಹಾಕಬಹುದು.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...