Tuesday, January 31, 2012

ಮೂರು ದ್ವಿಪದಿಗಳುತುಂಬು ಗಟ್ಟಿಲ್ಲದ ಎಲೆ ಅಕಾಲಿಕವಾಗಿ ಉದುರಿ ಬಿದ್ದಿತು
ಕಡೆಗೂ ಲೋಕ ಆಪಾದನೆ ಬೆನ್ನ ಮೇಲಿರಿಸಿಕೊಂಡಲೆವ ಗಾಳಿಯ ಕಡೆಗೆ ನೋಡಿತುನೀನೇಕೆ ಇಷ್ಟೊಂದು ಕಾಠಿಣ್ಯದೆಣಿ ನಿನಗೆ ಕೇಳಿದ ಹಾಗೆ ಒಮ್ಮೆ ಬದುಕನ್ನು ಕೇಳಿದೆ
ಕ್ಷಣ ಹೊತ್ತು ಸುಮ್ಮನಿದ್ದು ನಿನ್ನ ಹಾಗೆ ಹೇಳಿತು : ಸರಳ ಸಂಗತಿಗಳು ನಿನಗೆ ಇಷ್ಠವಾಗಲ್ಲಕೆಲವು ಸಲ ಜೀವನದಲ್ಲೇನು ಬೇಕನ್ನುವದ ನಿರ್ಧಾರ ಮಾಡಿಯೇ ಬದುಕು ಸಾಗಿಸಿದೆ
ಹುಸಿ ತುಟಿಯ ಮೇಲಿನ ನಗುವಾಗಿ ಉಳಿಯಿತು ಸತ್ಯ ಒದ್ದೆಗಣ್ಣಿನ ಹನಿಯಾಗಿ ಹರಡಿತು

ಗರ್ಭಪಾತ - ಆ ಇನ್ನೊಂದು ಮುಖ

ಡಾ. ಎಚ್ ಎಸ್ ಅನುಪಮಾ

¹Ûçà ¨sÀÆætºÀvÉå DzsÀĤPÀ ¨sÁgÀvÀPÉÌ CAngÀĪÀ PÀ¼ÀAPÀ. EzÀÄ UÀ¨sÀð¥ÁvÀQÌgÀĪÀ ¤¸ÀUÀð «gÉÆâü, ªÀiÁ£ÀªÀ «gÉÆâü ªÀÄÄR. °AUÁ£ÀÄ¥ÁvÀ ªÀµÀð¢AzÀ ªÀµÀðPÉÌ PÀĹAiÀÄÄvÀÛ FUÀ ¥Àæw ¸Á«gÀ UÀAqÀĪÀÄPÀ̽UÉ 914 ºÉtÄÚªÀÄPÀ̽zÁÝgÉ. ªÀgÀzÀQëuÉ, ¦vÀÈ¥ÀæzsÁ£À ªÀåªÀ¸ÉÜ, MAzÉà ªÀÄUÀÄ ¸ÁPÉA§ zsÉÆÃgÀuÉ, UÀAqÀĪÉÆúÀ EªÉ®èªÀÇ ºÉtÄÚªÀÄUÀÄ«£À «gÀÄzÀÞ PÉ®¸À ªÀiÁqÀÄwÛgÀĪÁUÀ ¸ÀªÀÄPÁ°Ã£À «eÁÕ£ÀªÀÇ CzÀPÉÌ PÉÊeÉÆÃr¹zÉ.

¤°ð¥ÀÛ «eÁÕ£À-vÀAvÀæeÁÕ£ÀªÀ£ÀÆß ¥ÀÄgÀĵÀ ¥ÀæzsÁ£À ªÀåªÀ¸ÉÜ ¤AiÀÄAwæ¸ÀÄwÛzÉ. D«ÄßAiÉÆøÉAmɹ¸ï ªÀÄvÀÄÛ ¸ÉÆ£ÉÆÃUÀæ¦ü JA§ vÀ¥Á¸ÀuÁ vÀAvÀæUÀ¼ÀÄ ¹ÛçèsÀÆæt ºÀvÉåAiÀÄ ¨sÁUÀªÁVzÀÄÝ F PÁ®zÀ zÀÄgÀAvÀªÉà ¸Àj. D«ÄßAiÉÆøÉAmɹ¸ï vÀ¥Á¸ÀuÉAiÀÄ°è UÀ¨sÀðaîzÀ°è ¨sÀÆætzÀ ¸ÀÄvÀÛ DªÀj¹PÉÆArgÀĪÀ D«ÄßAiÀiÁnPï ¥sÀÄè¬Äqï JA§ zÀæªÀªÀ£ÀÄß ºÉÆgÀvÉUÉzÀÄ ¥ÀjÃPÉëUÉƼÀ¥Àr¹ ¨sÀÆætªÀÅ PÉÆæêÉÆøÉÆêÀiï ¸ÀA§A¢ü C£ÀĪÀA²PÀ PÁ¬Ä¯ÉUÀ½AzÀ §¼À®ÄwÛzÀÝgÉ ¥ÀvÉÛ ªÀiÁqÀ¯ÁUÀÄwÛvÀÄÛ. CzÉà PÉÆæêÉÆøÉÆêÀiï C£Á°¹¸ï FUÀ °AUÀ¥ÀvÉÛUÉ §¼ÀPÉAiÀiÁUÀÄwÛzÉ. D«ÄßAiÉÆøÉAmɹ¸ï zÀĨÁj ªÀÄvÀÄÛ J¯ÉèqÉ ®¨sÀå«®è. DzÀgÉ HgÀÆj£À°ègÀĪÀ C¯ÁÖç¸ËAqï¸ÁÌöå¤AUï ªÀIJãÀÄUÀ¼ÀÄ °AUÀ¥ÀvÉÛUÉ §¼ÀPÉAiÀiÁUÀÄwÛªÉ. £ÀªÀzɺÀ°AiÉÆAzÀgÀ¯Éèà 1800 ¸ÁÌöå¤AUï PÉÃAzÀæUÀ½ªÉ!

UÀAqÀĪÀÄUÀĪÉà ¨ÉÃPÉ£ÀÄߪÀÅzÀÄ K¶AiÀiÁ d£ÀgÀ PÁ¬Ä¯É. zÀQët PÉÆjAiÀiÁ, vÉʪÁ£ï, ¨sÁgÀvÀ ªÀÄvÀÄÛ aãÁUÀ¼ÀÄ ¹Ûçà ¨sÀÆætºÀvÉåAiÀÄ ªÀÄÄAZÀÆtÂAiÀÄ°èªÉ. 1979gÀ°è aãÁ PÀÄlÄA§ AiÉÆÃd£É PÀqÁØAiÀÄ ªÀiÁr MAzÉà ªÀÄUÀÄ ºÉgÀ®Ä GvÉÛÃf¹zÀ £ÀAvÀgÀ MAzÉà ªÀÄUÀÄ ¸ÁPÀÄ, CzÀÄ UÀAqÁVgÀ¨ÉÃPÉ£ÀÄߪÀ ¥Á®PÀgÀÄ ºÉZÀÑvÉÆqÀVzÀgÀÄ. CzÉà gÉÆÃUÀ ¨sÁgÀvÀPÀÆÌ ºÀ©âzÉ. ¥Àæ¥ÀAZÀzÁzÀåAvÀ EgÀĪÀ UÀAqÀÄ ªÉÆúÀ¢AzÀ GvÉÛÃfvÀ£ÁzÀ CªÉÄjPÀzÀ gÉÆ£Á¯ïØ JjPÀì£ï JA§ vÀdÕªÉÊzÀå, UÀ¨sÀðzsÁgÀuÉUÉ ªÀÄÄ£ÀߪÉà UÀAqÀĪÀÄUÀÄ DAiÀÄÄÝPÉƼÀÀÄzÁzÀ vÀAvÀæeÁÕ£À C©üªÀÈ¢Þ¥Àr¹ ¥ÉÃmÉAmï ¥ÀqÉzÀÄPÉƼÀî®Ä ºÉÆgÀnzÀÝ! d¥Á¤£À qÁ. JºÁa EdPÁ ±ÉÃ. 85% AiÀıÀ¹éAiÀiÁzÀ UÀAqÀÄ ºÉgÀĪÀ vÀAvÀæªÀ£ÀÄß ¥ÀæZÁgÀ¥Àr¹zÀÝ. IÄvÀĸÁæªÀªÁzÀ AiÀiÁªÁåªÀ ¢£ÀUÀ¼À°è zÀA¥ÀwUÀ¼ÀÄ ºÉÃUÉ zÉÊ»PÀ ¸ÀA¥ÀPÀð ªÀiÁrzÀgÉ UÀAqÀĪÀÄUÀÄ ºÀÄlÄÖvÀÛzÉAzÀÄ ºÉüÀĪÀ aäà PÁå¯ÉAqÀgï ªÀÄ»¼Á ¤AiÀÄvÀPÁ°PÀUÀ¼À°è ¥ÀæPÀlªÁUÀÄwÛgÀÄvÀÛzÉ. »ÃUÉ «eÁÕ£À vÀAvÀæeÁÕ£ÀUÀ¼ÀÆ °AUÀvÁgÀvÀªÀÄå ¨É¼É¸ÀĪÀvÀÛ C©üªÀÈ¢ÞAiÀiÁzÀªÀÅ.

DAiÀÄÝ °AUÀ ºÀvÉå C£ÉʸÀVðPÀ, C¥ÀgÁzsÀ. EzÀÄ EAzÀÄ ¤£ÉßAiÀÄ «zÀåªÀiÁ£ÀªÀ®è. ªÉÆzÀ®Ä ¹Ûçò±ÀĺÀvÉå £ÀqÉAiÀÄÄwÛvÀÄÛ. ºÀÄnÖzÀ ºÉtÄÚªÀÄUÀÄ«UÉ ©VAiÀiÁzÀ §¼É vÉÆr¹ E®èªÉà §mÉÖ ¸ÀÄwÛ G¹gÀÄUÀnÖ¹ PÉÆ®ÄèwÛzÀÝgÀÄ. wêÀæ C£ÁzÀgÀ, vÁgÀvÀªÀÄå, ¤µÁ̼ÀfUÉ JµÉÆÖà ºÉtÄÚªÀÄPÀ̼ÀÄ ¸ÁAiÀÄÄwÛzÀݪÀÅ. ºÉtÄÚUÀ¼À ªÀiÁgÁlªÀÇ £ÀqÉ¢vÀÄÛ. FUÀ MA¨sÀvÀÄÛ wAUÀ¼ÀÄ ºÉÆgÀĪÀÅzÀÄ, ºÉgÀĪÀÅzÀÄ AiÀiÁªÀÅzÀÆ E®èzÉà ºÉuÉÚAzÀÄ w½¢zÉÝà `PÉ®¸À ªÀÄÄV¹©qÀĪÀ’ DvÀÄgÀ ºÉvÀÛªÀgÀzÀÄÝ. F ºÀvÉåUÉ AiÀiÁgÀ£ÀÄß ºÉÆuÉ ªÀiÁqÀĪÀÅzÀÄ? EzÀgÀ°è £ÉÃgÀªÁV ªÀÄUÀÄ«£À ¸ÀȶÖPÀvÀðgÉà ¥Á¯ÉÆÎArgÀÄvÁÛgÉ. ºÀÄnÖ¹zÀªÀjUÉà ºÉtÄÚ KPÉ ¨ÉÃqÀªÁUÀÄvÁÛ¼É? £ÀªÀÄä d£À¥ÀzÀgÀ JµÉÆÖà ºÁqÀÄUÀ¼À°è vÀªÀÄäAvÉ PÀµÀÖ¥ÀqÀĪÀ ºÉtÄÚfêÀ ºÀÄnÖvÀ®è JAzÀÄ ºÉtÄÚ ºÀÄnÖzÀÝgÀ §UÉUÉ zÀÄBT¹zÁÝgÉ. ªÀiÁUÀðgÉmï UÁ£Àðgï JA§ UÀįÁ«Ä ªÀÄ»¼É vÀ£Àß ªÀÄUÀ¼À£ÀÄß PÉÆAzÀÄ CzÀPÁÌV «ZÁgÀuÉ JzÀÄj¸ÀĪÁUÀ `£À£Àß ªÀÄUÀ¼ÀÄ JA¢UÀÆ UÀįÁªÀÄ ºÉuÁÚV £ÉÆêÀ£ÀĨsÀ«¸ÀÄvÀÛ ¨Á¼ÀĪÀÅzÀÄ ¨ÉÃqÀ. CzÀPÉÌà PÉÆAzÉ. £À£ÀUÉ WÀ£ÀWÉÆÃgÀ ²PÉëAiÀÄ£Éßà ¤Ãr. UÀ®ÄèUÀA§PÉÌ ºÁqÁqÀÄvÀÛ ¨ÉÃPÁzÀgÀÆ ºÉÆÃUÀÄvÉÛãÉ, DzÀgÉ ©qÀÄUÀqÉ ªÀiÁr ªÀÄvÉÛ UÀįÁªÀļÁV zÀAiÀÄ«lÄÖ PÀ½¸À¨ÉÃr’ JAzÀÄ CAUÀ¯ÁZÀÄvÁÛ¼É. CªÀÄä¤UÀÆ ªÀÄUÀ¼ÀÄ ¨ÉÃqÀªÁUÀĪÀÅzÀÄ F PÁgÀtPÉÌ.

¹Ûçà ¨sÀÆætºÀvÉå «gÉÆâü¸ÀĪÀ ¨sÀgÀzÀ°è PÉ® `fêÀ¥ÀgÀ’ ºÉÆÃgÁlUÁgÀgÀÄ UÀ¨sÀð¥ÁvÀªÀ£Éßà ¤µÉâü¸À¨ÉÃPÉA§ GUÀæ¨ÉÃrPÉ ªÀÄÄA¢qÀÄwÛzÁÝgÉ. UÀ¨sÀð¥ÁvÀ «gÉÆâü¹ ºÀjzÁqÀĪÀ ªÉÄïï-¸ÀAzÉñÀUÀ¼À£ÀÄß UÀªÀĤ¹zÀgÉ EzÀÄ CxÀðªÁUÀÄvÀÛzÉ. DzÀgÉ J®è UÀ¨sÀð¥ÁvÀUÀ¼ÀÄ ¹Ûçà ¨sÀÆætºÀvÉåAiÀÄ®è. UÀ¨sÀð¥ÁvÀ JAzÀ PÀÆqÀ¯Éà d£ÀgÀ ¨sÁªÀÅPÀ ¥ÀæeÉÕ eÁUÀÈvÀªÁUÀÄvÀÛzÉ. ªÀiÁqÀĪÀªÀgÀÄ £ÀgÀºÀAvÀPÀgÁVAiÀÄÆ, ªÀiÁrPÉƼÀÄîªÁPÉ gÁPÀë¹AiÀiÁVAiÀÄÆ ©A©¸À®àqÀÄvÁÛgÉ. PÁªÀÄ, PÀÄlÄA§, ªÀÄ»¼ÉUÉ ¸ÀA§A¢ü¹zÀ ¥ÀgÀA¥ÀgÁUÀvÀ gÀÆrüUÀ¼À PÀÄjvÀÄ DzsÀĤPÀ ¨sÁgÀvÀPÉÌ zÀéAzÀéUÀ½ªÉ. CAxÀªÀÅUÀ¼À°è UÀ¨sÀð¥ÁvÀªÀÇ MAzÀÄ. ªÉÆzÀ°¤AzÀ®Æ UÀ¨sÀð¥ÁvÀ PÉƯÉ, ¥Á¥ÀPÀgÀ JAzÉà ¥ÀjUÀt¸À®ànÖzÉ. ºÉtÄÚ ©qÀÄUÀqÉAiÀÄ zÁj JAzÀÄ §AiÀĹzÀÄÝ, vÀ£Àß ºÀPÉÌAzÀÄ w½¢zÀÄÝ, DAiÉÄÌAiÀÄ CªÀPÁ±ÀªÉAzÀÄ §UÉ¢zÀÄÝ fêÀ«gÉÆâü JAzÀÄ ©A©¸À®àlÖgÉ?

¹Ûçà ¨sÀÆætºÀvÉåAiÀÄ£ÀÄß MvÀÛnÖVlÄÖ £ÉÆÃrzÀgÉ, AiÀiÁªÀ °AUÀzÉÝà DVgÀ° vÀ£ÀUÉ F ªÀÄUÀÄ ¨ÉÃqÀ JAzÀÄ ¤zsÀðj¸ÀĪÀÅzÀÄ ªÀÄ»¼Á ºÀPÀÄÌ JAzÉà ¥ÀjUÀt¸À¯ÁVzÉ. F ºÀPÀÌ£ÀÄß ªÀÄ»¼É ¸ÀÄ®¨sÀzÀ°è ©lÄÖPÉÆqÀ¯ÁgÀ¼ÀÄ. UÀ¨sÀð¥ÁvÀ ºÀPÀÄÌ PÉÊeÁjzÀgÉ CZÁvÀÄAiÀÄðPÉÌ §¸ÀÄgÁzÀ J¼É¨Á¯ÉAiÀÄgÀÄ, zsÁ«ÄðPÀ ºÁUÀÆ ¥ÁwªÀævÀåzÀ ¥ÉưùAUï £ÀqɸÀ§AiÀĸÀĪÀ UÀAqÀ£À PÁgÀt¢AzÀ PÀÄlÄA§ AiÉÆÃd£É C¼ÀªÀr¹PÉƼÀî¯ÁgÀzÀªÀgÀÄ, ªÀÄgÀĪÀÄzÀĪÉAiÀiÁUÀzÀ «zsÀªÉAiÀÄgÀÄ, ªÀÄvÉÛ ªÀÄPÀ̼À M®èzÀ »j CªÀÄäA¢gÀÄ EªÀgÉ®è ¨ÉÃqÀzÀ ªÀÄPÀ̼À£ÀÄß ºÉgÀ¨ÉÃPÁUÀÄvÀÛzÉ. UÀ¨sÀð¥ÁvÀ d£À¸ÀASÁå ¤AiÀÄAvÀætzÀ CxÀªÁ PÀÄlÄA§ AiÉÆÃd£ÉAiÀÄ ªÀiÁUÀðªÀ®è. CzÀÄ £ÁªÀÅ ¸ÀªÀÄyð¹PÉƼÀÄîªÀ ªÀiÁ£ÀªÀ ºÀvÉå JA§ÄzÀgÀ°è JgÀqÀÄ ªÀiÁw®è. DzÀgÉ ªÀÄ»¼ÉAiÀÄ UÀ¨sÀðzÉƼÀVgÀĪÀ ªÀÄUÀÄ«£À PÀÄjvÀ PÁ¼Àf UÀ¨sÀð ºÉÆgÀĪÀ ªÀÄ»¼ÉAiÀÄ §UÉUÀÆ EgÀ¨ÉÃPÀ®èªÉ?

***

¨sÁgÀvÀzÀ°è ªÀµÀðPÉÌ JµÀÄÖ UÀ¨sÀð¥ÁvÀUÀ¼ÁUÀÄvÀÛªÉA§ ¤RgÀ CAQCA±À ®¨sÀå«®è. ¸ÀPÁðgÀ ¥ÀæwªÀµÀð 25 ®PÀë PÁ£ÀÆ£ÀħzÀÞ UÀ¨sÀð¥ÁvÀ £ÀqÉAiÀÄÄvÀÛzÉAzÀÄ ºÉýzÀgÉ ¸ÀPÁðgÉÃvÀgÀ ¸ÀA¸ÉÜUÀ¼À ¥ÀæPÁgÀ F ¸ÀASÉå 1.1 PÉÆÃn. CzÀgÀ°è CzsÀðzÀµÀÄÖ PÁ£ÀÆ£ÀĨÁ»gÀ UÀ¨sÀð¥ÁvÀUÀ¼ÀÄ. LzÀ£Éà MAzÀÄ ¨sÁUÀ ¹Ûçà ¨sÀÆætºÀvÉå. ¥ÀæwªÀµÀð 28 ¸Á«gÀQÌAvÀ C¢üPÀ ªÀÄ»¼ÉAiÀÄgÀÄ UÀ¨sÀð¥ÁvÀzÀ PÁA¦èPÉõÀ£ïUÀ½AzÀ ¸ÁªÀ£ÀߥÀÄàwÛzÁÝgÉ. 80% UÀ¨sÀð¥ÁvÀUÀ¼À£ÀÄß PÀÄlÄA§AiÉÆÃd£Á «zsÁ£À C¼ÀªÀr¹PÉƼÀîzÀ «ªÁ»vÀ ¹ÛçÃAiÀÄgÀÄ ªÀiÁrPÉÆAqÀgÉ, G½zÀ 20% ¨ÉÃgÉ PÁgÀtUÀ½UÁV DUÀĪÀAxÀzÀÄ.

UÀ¨sÀð¥ÁvÀ «±ÁézÀåAvÀ JA¢¤AzÀ £ÀqÉzÀħA¢gÀĪÀAxÀzÀÄÝ. LzÀÄ ¸Á«gÀ ªÀµÀðzÀ PɼÀUÉ aãÁzÀ µÉ£ÁAUï gÁd ªÀÄ»¼ÉAiÀÄjUÉ ¥ÁzÀgÀ¸À ¤Ãr UÀ¨sÀð¥ÁvÀ ªÀiÁr¸À®Ä ¸ÀÆa¹zÀÝ. Cj¸ÁÖl¯ï ¥ÀæPÁgÀ UÀAqÀĨsÀÆætPÉÌ 40 ºÁUÀÆ ºÉtÄÚ¨sÀÆætPÉÌ 90 ¢£ÀªÁzÁUÀ `ªÀiÁ£ÀªÀ ¥ÀæeÉÕ’ §gÀÄvÀÛzÉ. F CªÀ¢üVAvÀ ªÉÆzÀ®Ä UÀ¨sÀð¥ÁvÀ ¸ÀªÀÄävÀªÁVvÀÄÛ. »¥ÉÆÃPÉæn¸ï ¥ÀæweÁÕ«¢üAiÀÄ°è `UÀ¨sÀð¥ÁvÀ ªÀiÁqÀĪÀ ¥É¸ÀjUÀ¼À£ÀÄß ªÀÄ»¼ÉUÉ PÉÆqÀĪÀÅ¢®è’ J£ÀÄߪÀ CA±À EvÀÄÛ. ¨sÁgÀvÀzÀ®Æè ¸ÀäøwUÀ¼ÀÄ «¢ü¸ÀĪÀ ¤AiÀĪÀÄUÀ¼À°è ªÉÆzÀ® ªÀÄÆgÀÄ ªÀtðUÀ¼ÀÄ UÀ¨sÀð¥ÁvÀ ªÀiÁrPÉƼÀÄîªÀAwgÀ°®è. ºÁUÉãÁzÀgÀÆ ªÀiÁrzÀ°è CªÀgÀ£ÀÆß, CªÀjUÉ ¸ÀºÁAiÀÄ ¤ÃrzÀªÀgÀ£ÀÆß ²PÉëUÉ M¼À¥Àr¸À¯ÁUÀÄwÛvÀÄÛ.

UÀ¨sÀð¥ÁvÀPÉÌ ºÀvÀÄÛºÀ®ªÀÅ «zsÁ£ÀUÀ¼ÀÄ ZÁ°ÛAiÀÄ°èzÀݪÀÅ. w£ÀߨÁgÀzÀÝ£ÀÄß w£ÀÄߪÀÅzÀÄ, Cw±ÀæªÀÄzÀ PÉ®¸À ªÀiÁqÀĪÀÅzÀÄ, G¥ÀªÁ¸À, ºÉÆmÉÖUÉ ©VAiÀiÁV §mÉÖ ¸ÀÄvÀÄÛªÀÅzÀÄ ªÀÄvÀÄÛ ©¹¤ÃgÀÄ JgÀZÀĪÀÅzÀÄ, PÁzÀ PÀgÀlzÀ ªÉÄÃ¯É ªÀÄPÁqÉ ªÀÄ®UÀĪÀÅzÀÄ, zÉúÀ¢AzÀ gÀPÀÛ ºÀjAiÀÄUÉÆqÀĪÀÅzÀÄ, dfÓzÀ FgÀĽî CxÀªÁ ºÀ¨É ªÉÄÃ¯É PÀÆgÀĪÀÅzÀÄ, ªÀiÁdðPÀªÀ£ÀÄß UÀ¨sÀðzÁégÀzÉƼÀUÉ vÀÄA§ÄªÀÅzÀÄ, UÀ¨sÀðzÁégÀzÀ°è CxÀªÁ M¼ÀUÉ OµÀ¢ü ºÀaÑzÀ PÀrØ ZÀÄaÑ UÀ¨sÀð ºÉÆgÀºÁPÀ®Ä ¥ÀæAiÀÄw߸ÀĪÀÅzÀÄ EvÁå¢. EAxÀ «zsÁ£ÀUÀ½AzÀ vÁ¬ÄUɵÀÄÖ C¥ÁAiÀÄ«vÀÄÛ JAzÀÄ AiÀiÁgÁzÀgÀÆ H»¸À§ºÀÄzÀÄ. UÁAiÀÄ, QêÀÅ, £ÀAdÄ, CªÀªÀiÁ£À.. Nºï, CzɵÀÄÖ vÁAiÀÄA¢gÀÄ ¥Áæt vÉvÀÛgÉÆÃ?! E½AiÀÄzÀ §¸ÀÄjUÉ CzɵÀÄÖ d£À DvÀäºÀvÉåUÉ ±ÀgÀuÁzÀgÉÆÃ?

»A¢£À vÀ¯ÉªÀiÁj£À CªÀÄäA¢gÀÄ C£ÀĨsÀ«¹zÀ EAxÀ zÁgÀÄt C¸ÀºÁAiÀÄPÀvÉUÀ¼ÀÄ £ÀªÀÄä zÉñÀPÀ̵ÉÖà ¹Ã«ÄvÀªÁVgÀ°®è. ¥Àæ¥ÀAZÀzÀ §ºÀ¼ÀµÀÄÖ zÉñÀUÀ¼À ºÉAUÀ¸ÀgÀÆ ºÉgÀĪÀ AiÀÄAvÀæUÀ¼ÁVzÀÝgÀÄ. «eÁÕ£À vÀAvÀæeÁÕ£ÀzÀ°è G£Àßw ¸Á¢ü¹ ªÀiÁ£ÀªÀºÀPÀÄÌ eÁUÀÈw ªÀÄÆrzÀÝgÀÆ d£À£À ¤AiÀÄAvÀætzÀ ªÀÄnÖUÉ CªÉÄjPÀ ¸ÀªÀiÁdzÀÄÝ ¸À£ÁvÀ£À zsÉÆÃgÀuÉAiÉÄÃ. 1850gÀ ¸ÀĪÀiÁj£À F WÀl£É £ÉÆÃr: £ÀÆåAiÀiÁPïð£À ºÉÆgÀ¨sÁUÀzÀ MAzÀÄ DgÉÆÃUÀå ²©gÀzÀ°è 28 ªÀµÀðzÀ ¸Áår ¸ÁåPïì JA§ ªÀÄ»¼É vÀ£ÀUÉ ªÀÄPÀ̼À£ÀÄß ºÉvÀÄÛºÉvÀÄÛ ¸ÁPÁV FUÀµÉÖà ªÀÄÆgÀÄ wAUÀ¼À §¸ÀÄgÀ£ÀÄß UÀ¨sÀð¥ÁvÀ ªÀiÁrPÉÆArzÁÝVAiÀÄÆ, UÁågÀAn ¥sÀ°vÁA±À EgÀĪÀ d£À£À¤AiÀÄAvÀætzÀ §UÉÎ w½¸À¨ÉÃPÉAzÀÆ C®ªÀvÀÄÛPÉÆAqÀ¼ÀÄ. CzÀPÉÌ ªÉÊzÀågÀÄ £À¸ÀÄ£ÀUÀÄvÀÛ, `ºÁUÁzÀgÉ ¤£Àß UÀAqÀ£À£ÀÄß ªÀÄ£É ZÁªÀtÂAiÀÄ ªÉÄÃ¯É ªÀÄ®UÀ®Ä ºÉüÀÄ. CzÀÄ UÁågÀAn UÀ¨sÀð¤gÉÆÃzsÀPÀ’ JAzÀÄ PÀ½¹©lÖgÀÄ. PÀtÂÚÃgÀÄ vÀÄA©PÉÆAqÀÄ ºÉÆgÀ§AzÀ DPÉ ²©gÀzÀ £À¸ï𠧽 UÀ¨sÀð¤gÉÆÃzsÀPÀzÀ ªÀiÁ»w PÉýzÀgÉ ®¨sÀå«gÀ°®è. PÉ® wAUÀ¼ÀÄUÀ¼À¯Éèà ªÀÄvÉÆÛAzÀÄ UÀ¨sÀð¥ÁvÀzÀ ªÉÃ¼É ¸Áår ¸ÀvÀÄÛ ºÉÆÃzÀ¼ÀÄ.

EAxÀ ¸ÁªÀÅ, ºÀvÁ±É, ¤¸ÀìºÁAiÀÄPÀvÉUÀ¼ÀÄ ¥Àæ¥ÀAZÀzÀ PÉÆÃlåAvÀgÀ ªÀÄ»¼ÉAiÀÄgÀ PÀvÉAiÀiÁVvÀÄÛ. PÁgÀt CªÁåºÀvÀªÁV £ÀqÉzÀgÀÆ UÀ¨sÀð¥ÁvÀ £ÉÊwPÀ M¦àUÉ ¥ÀqÉ¢gÀ°®è. PÀÄlÄA§ AiÉÆÃd£É ªÀÄvÀÄÛ UÀ¨sÀð¥ÁvÀ PÁ£ÀÆ£ÀÄ ªÀÄ£ÀßuÉAiÀÄ£ÀÆß ¥ÀqÉ¢gÀ°®è. FUÀ®Æ UÀ¨sÀð¥ÁvÀPÉÌ zsÁ«ÄðPÀ, ¸ÁªÀiÁfPÀ, £ÉÊwPÀ ¤§ðAzsÀUÀ½ªÉ. PÉ® Qæ²ÑAiÀÄ£ï ¥ÀAxÀUÀ¼À°è UÀ¨sÀð¥ÁvÀPÉÌ CªÀPÁ±À ¤ÃrzÀÝgÀÆ PÁåxÉÆ°Pï ¥ÀAxÀ RqÁRArvÀ PÀÄlÄA§ AiÉÆÃd£É «gÉÆâü¸ÀÄvÀÛzÉ. PÉ® E¸ÁèA ¸ÀªÀÄÄzÁAiÀÄUÀ¼ÀÄ vÁ¬ÄAiÀÄ DgÉÆÃUÀåPÉÌ ªÀÄļÀĪÁUÀĪÀÅzÁzÀgÉ K¼ÀÄ ªÁgÀzÉƼÀV£À UÀ¨sÀð vÉUÉAiÀÄ®Ä ¸ÀªÀÄäw¹zÀgÉ PÉ®ªÉqÉ F CªÀ¢üAiÀÄ£ÀÄß 4 wAUÀ¼ÀªÀgÉUÉ «¸ÀÛj¸À¯ÁVzÉ. »ÃUÉ zsÀªÀÄð, ¯ÉÆÃPÀgÀÆrüUÀ¼ÀÄ ºÉgÀĪÀªÀ¼À EµÁÖ¤µÀÖzÀ PÀÄjvÀÄ QAavÀÆÛ aAw¸ÀzÉ ºÀÄlÖ°gÀĪÀ PÀƹUÉ PÀįÁ« ºÉÆ°¢gÀĪÀÅzÀÄ PÀAqÀħgÀÄvÀÛzÉ.

19£Éà ±ÀvÀªÀiÁ£ÀzÀ ºÉÆwÛUÉ ¹ÛçêÁ¢ zÀ¤UÀ¼ÀÄ UÀnÖAiÀiÁUÀvÉÆqÀVzÀªÀÅ. ºÉtÂÚUÉ ¥ÀÄgÀĵÀ¤VgÀĪÀ J®è £ÁUÀjPÀ C¢üPÁgÀ ¸ÀªÀ®vÀÄÛUÀ¼ÀÆ ¹UÀ¨ÉÃPÀÄ; ªÀÄPÀ̼À ¤ªÀðºÀuÉ ªÀÄ»¼ÉAiÀÄ eÉÊ«PÀ PÀvÀðªÀåªÁzÀÝjAzÀ AiÀiÁªÁUÀ, JµÀÄÖ ªÀÄPÀ̼ÀÄ ¨ÉÃPÉAzÀÄ ¤zsÀðj¸ÀĪÀ ºÀPÀÌ£ÀÄß CªÀ½UÉà PÉÆqÀ¨ÉÃPÉ£ÀÄߪÀ MvÁÛAiÀÄ DgÀA©üPÀ ªÀÄ»¼Á ºÉÆÃgÁlUÀ¼À°è PÁt¹vÀÄ. PÀÄlÄA§ AiÉÆÃd£É ªÀÄvÀÄÛ d£À£À ¤AiÀÄAvÀæt EªÉgÉqÀÆ ªÀÄ»¼ÉAiÀÄ ©qÀÄUÀqÉUÉ ªÉÆzÀ® ªÉÄnÖ®ÄUÀ¼ÀÄ JAzÉà ¨sÁ«¸À¯ÁVvÀÄÛ. `§vïð ¸ÉÖçöÊPï- d£À£À ªÀÄĵÀÌgÀ’ JA§ ºÉƸÀ D¯ÉÆÃZÀ£ÉAiÀÄ£ÀÄß ªÀÄ»¼Á ZÀ¼ÀĪÀ½AiÀÄ ªÀÄÄAZÀÆtÂAiÀÄ°èzÀÝ C£ÀvÉÆÃ¯ï ¥sÁæ£ïì ºÁUÀÆ gÉÆøÁ ®PÉìA§Uïð ªÀÄÄA¢lÖgÀÄ. KgÀÄwÛgÀĪÀ d£À¸ÀASÉå, ªÀÄPÀ̼À ¥Á®£É ¥ÉÆõÀuÉAiÀįÉèà ¸ÀªÉzÀÄ ºÉÆÃUÀĪÀ ªÀÄ»¼Á ªÀiÁ£ÀªÀ ¸ÀA¥À£ÀÆä® EªÀ£Éß®è UÀªÀÄ£ÀzÀ°èlÄÖPÉÆAqÀÄ PÉ® zÉñÀUÀ¼ÀÄ PÀÄlÄA§AiÉÆÃd£É/UÀ¨sÀð¥ÁvÀPÉÌ ¸ÀªÀÄäw ¤ÃrzÀªÀÅ.

¨sÁgÀvÀzÀ°è PÁ£ÀÆ£ÀħzÀÞ UÀ¨sÀð¥ÁvÀ ¤AiÀÄAvÀætPÁÌV JAn¦ DPïÖ - 1971 §AvÀÄ. CzÀgÀ ¥ÀæPÁgÀ UÀ¨sÀð¥ÁvÀ JAzÀgÉ 28 ªÁgÀ CªÀ¢üAiÉƼÀV£À UÀ¨sÀð vÉUɹPÉƼÀÄîªÀÅzÀÄ. UÀ¨sÀð¥ÁvÀªÀ£ÀÄß AiÀiÁgÀÄ, AiÀiÁjUÉ, J°è ªÀiÁqÀ§ºÀÄzÀÄ JA§ ¸ÀàµÀÖ ¤AiÀĪÀiÁªÀ½/¤zÉÃð±À£ÀªÀ£ÀÄß D PÁ¬ÄzÉ ¤ÃrvÀÄ. EzÀgÀ ¥ÀæPÁgÀ vÁ¬ÄAiÀÄ ¥ÁætPÉÌ C¥ÁAiÀÄ«zÀÝgÉ; ºÀÄnÖzÀ°è ªÀÄUÀÄ«UÉ ªÉÊPÀ®å ªÀÄwÛvÀgÉ vÉÆAzÀgÉAiÀiÁUÀĪÀAwzÀÝgÉ; CvÁåZÁgÀ¢AzÀ UÀ¨sÀð zsÀj¹zÀÝgÉ; «ªÁ»vÀ ªÀÄ»¼ÉAiÀÄ°è PÀÄlÄA§ AiÉÆÃd£É «¥sÀ®ªÁV UÀ¨sÀð zsÀj¹zÀÝgÉ UÀ¨sÀð¥ÁvÀPÉÌ CªÀPÁ±À«zÉ. 5 wAUÀ½VAvÀ ºÉZÀÄÑ CªÀ¢üAiÀÄ UÀ¨sÀð vÉUÉAiÀĨÉÃQzÀÝgÉ E§âgÀÄ vÀdÕ ªÉÊzÀågÀ C©ü¥ÁæAiÀÄ«gÀ¨ÉÃPÀÄ. PÁ£ÀÆ£ÀÄ C£ÀĪÀÄw ¥ÀqÉzÀ ¸ÀܼÀzÀ°è C£ÀĪÀÄw ¥ÀqÉzÀ ªÉÊzÀågÉà ªÀiÁqÀ¨ÉÃPÀÄ.

ªÀÄ£ÀzÀ ªÀiÁvÀÄ:

CªÀiÁ£ÀĵÀ PÉƯÉ, AiÀÄÄzÀÞ, ¥ÉÆð¸ï »A¸É, ¯ÁPÀ¥ï qÉvï, PËlÄA©PÀ zËdð£ÀåUÀ¼ÀÄ EªÉ®è JAxÀ PÀpt PÁ£ÀÆ£ÀÄ §AzÀgÀÆ PÀrªÉÄAiÀiÁUÀ°®è, KPÉ? »A¸É £ÀªÀÄä°è CAvÀUÀðvÀªÁVzÉ. M¼ÀUɯÉÆèà CqÀVPÉÆArgÀĪÀ »A¸ÉAiÀÄ£ÀÄß ºÀÄqÀÄQ £Á±À ªÀiÁr fêÀPÁgÀÄtåzÀ VqÀ ¨É¼É¸À¨ÉÃPÁVzÉ. »ÃUÉ E¤ì÷ÖlÆåµÀ£À¯Éʸï DzÀ »A¸ÉAiÀÄ MAzÀÄ ªÀÄÄR UÀ¨sÀð¥ÁvÀ.

CªÀÄäA¢gÉÃ, ¨sÁ«Ã CªÀÄäA¢gÀ£ÀÄß ºÀÄqÀÄQ £Á±ÀªÀiÁqÀĪÀ eÁ®zÀ°è zÀAiÀÄ«lÄÖ ¨sÁVAiÀiÁUÀ¨ÉÃr. UÀ¨sÀð¥ÁvÀPÉ̼À¸ÀĪÀ §zÀ®Ä ¨ÉÃqÀzÀ UÀ¨sÀ𠤮èzÀAvÉ PÀÄlÄA§ AiÉÆÃd£É C¼ÀªÀr¹PÉƽî. CzÀÄ ¸ÁzsÀåªÁUÀ¢zÀÝ°è CxÀªÁ «¥sÀ®ªÁzÀ°è wAUÀ¼À ¸ÁæªÀ £Á¯ÉÌöÊzÀÄ ¢£À vÀqÀªÁzÀ PÀÆqÀ¯Éà ªÀÄÆvÀæ vÀ¥Á¸ÀuÉ ªÀiÁr¹. ªÉÊzÀågÀ£ÀÄß ¸ÀA¥ÀQð¹.

- qÁ. JZï. J¸ï. C£ÀÄ¥ÀªÀiÁ

d®d d£ÀgÀ¯ï ªÀÄvÀÄÛ ºÉjUÉ D¸ÀàvÉæ

PÀªÀ®QÌ CAZÉ

ºÉÆ£ÁߪÀgÀ vÁ®ÆPÀÄ, G.PÀ. f¯Éè

581361, ¥sÉÆÃ: 9480211320

ಚಿಂತೆ ಬಿಡಿಹೂವಾ ಮುಡಿದಂತೆ..
ಡಾ . ಎಚ್ ಎಸ್ ಅನುಪಮಾ

1.

ಲೋಕವೇ..
ಮೂರು ರಸ್ತೆ ಕೂಡುವ
ನಡುಹಾದಿಯಲಿ ನಿಲಿಸಿ
ನೀ ಸುರಿಸಬಹುದಾದ
ಆಪಾದನೆಗಳ ಯಾದಿ
ನನಗೆ ಗೊತ್ತಿರಲಿಲ್ಲವೆಂದಲ್ಲ
ಆದರೆ
ಮೂರು ದಾರಿ ಕೂಡುವಲ್ಲಿ ದೊರೆ
ಕೈಕೊಡವಿ ನಡೆದಾನೆಂದು
ಊಹಿಸಿರಲಿಲ್ಲ..

ಹಾದಿಬೀದಿಯ ಮಾತು ಎದೆ ಸುಡುತ್ತಿಲ್ಲ
ಮುರಿದ ಮನೆಗಾಗಿ ಅಳುತ್ತಲೂ ಇಲ್ಲ
ಕೈಯಾರೆ ಬೆಳೆಸಿದ್ದ
ಮತ್ತೆ ಚಿಗುರಲಾರದ
ಸಂಬಂಧದ ಕುರಿತು ದುಃಖವಿದೆ
ಗೊತ್ತು..
ಅವನ ಪಶುಸಮಾನ ಅನುಮಾನದ ಹಿಂದೆ
ಮೊಣಕಾಲೂರಿ ಕುಳಿತ
ಪ್ರೇಮ ಹಸಿವಿನ ಮನುಷ್ಯನಿದ್ದಾನೆ..
ಗೊಣಗಾಟ ಹಚ್ಚೆ ಹುಯ್ದಂತೆ ಅಚ್ಚೊತ್ತಿದೆ

ನಾನೊಲ್ಲದ ಚೂಡಾಮಣಿ ಧರಿಸಿ
ನಾರುಮಡಿ ಉಟ್ಟಾಗಲೇ ಊಹಿಸಿದ್ದೆ
ಮೌನ ಅಶೋಕೆಯಲ್ಲಿ ತಯಾರಿ ನಡೆಸಿದ್ದೆ
ಆದರೂ ಲೋಕವೇ..
ಇದೇನಿದು
ಅಗ್ನಿಪರೀಕ್ಷೆಯ ಅನ್ಯಾಯ?!
ದೇಹ ಸುಟ್ಟು ಬೂದಿಯಾಯಿತು
ದುಗುಡ ಸುಡಲಿಲ್ಲ
ನಾ ಹಗುರವಾದರೂ
ಎದೆ ಭಾರ ಇಳಿಯಲಿಲ್ಲ

ಪಾಪ ಪುಣ್ಯಗಳ ಎಲ್ಲೆಯಾಚೆ
ಸರಿ ತಪ್ಪುಗಳ ಗೊಂದಲದಾಚೆ
ಹರಡಿಕೊಂಡಿದ್ದೇನೆ ಲೋಕವೇ..
ಈಗ ತಿಳಿಯುತ್ತಿದೆ
ಸಂಬಂಧಗಳ ಪ್ರಾಣ
ಕಾಮವಾಸನೆಗಳ ಎಲ್ಲೆಯಾಚೆ
ದೇಹಸಂಭ್ರಮದಾಚೆ
ಎಲ್ಲೋ ಅಡಗಿದೆ...

೨.
ಸೋರುವ ಹೃದಯಕ್ಕೆ
ಕಾಲದ ಸಣ್ಣ ತುಂಡು
ಒಂದಲ್ಲ ಒಂದು ದಿನ
ತೇಪೆ ಹಚ್ಚಬಹುದು..

ಜೀವವೇ
ಹೊತ್ತಿಸು ಹಣತೆಯ
ಇರುಳುಗಣ್ಣಿಗೆ ಜಗ
ಮಸುಕಾಗಿಯಾದರೂ ಕಾಣಬಹುದು

3.

ಲೋಕವೇ..
ತೀರಿಸಲಾಗದ ಎಷ್ಟೋ ಸಾಲಗಳಿರುವಾಗ
ಪ್ರೇಮ ಮೀಸಲು ಅಪರಾಧ
ಹಂಚಿಬಿಡಬೇಕು
ಮಿಡಿವ ಎಲ್ಲದಕ್ಕೂ

ಪಶುಪಕ್ಷಿಗುಡ್ಡಬಯಲುಗಳಿಗೂ..


ಹಣತೆ ಬೆಳಗುತ್ತಿಲ್ಲವೆಂದು ಖೇದಗೊಳ್ಳದಿರು
ಬೆಳಕಿಗಾಗಿ ಕಾಯುವುದ ನಿಲಿಸದಿರು
ನೀ ತುಂಬುವ ತೈಲ ಕಳುವಾಗುತ್ತಿದೆ
ಯಾರದೋ
ಸಾವಿನಂತಹ ದಾರುಣ ಸಂಕಟ
ಉರಿಸಿ ಬೂದಿ ಮಾಡಲು
ನಿನ್ನ ಬೆಂಕಿಯೇ ಬೇಕಾಗಿದೆ
ಇಂದಲ್ಲ ನಾಳೆ ಅವರ ದುಃಖ ಮುಗಿಯಬಹುದು
ನಿನ್ನ ಮೂಲೆಮೂಲೆ ಬೆಳಕಾಗಬಹುದು


ಡಾ . ಗುರುಲಿಂಗ ಕಾಪಸೆಯವರಿಗೊಂದು ಪ್ರಶಸ್ತಿ

ಹಿರಿಯ ಸಾಹಿತಿ, ವಿಮರ್ಶಕ, ಸಂಶೋಧಕ ಡಾ.ಗುರುಲಿಂಗ ಕಾಪಸೆ ಅವರಿಗೆ ಹಾವೇರಿಯ ಹೊಸಮಠ ಹಾಗೂ ಬಸವ ಕೇಂದ್ರ ಈ ಬಾರಿಯ `ಡಾಶಿಮುಶ' ಪ್ರಶಸ್ತಿ ನೀಡಿ ಗೌರವಿಸಿವೆ. ಫೆ.3 ರಂದು ಸಂಜೆ 6.30 ಕ್ಕೆ ಹಾವೇರಿಯ ಹೊಸಮಠ ಎಸ್ ಜೆಎಂ ಕಾಲೇಜು ಆವರಣದಲ್ಲಿ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಈ ಹಿರಿಯ ಚೇತನಕ್ಕೆ ಚಿತ್ರದುರ್ಗದ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಹೊಂದಿದೆ

Monday, January 30, 2012

೨೭ ದ್ವಿಪದಿಗಳು
ಗಾಳಿಯಲಿ ಬೆರೆತ ಯಾರೊ ಊದುವ ಕೊಳಲನಾದ ಕೋಗಿಲ ರಾಗ ಕೇಳಿ ಈ ಮನಸಿಗೇಕೊ ದಣಿವು
ಏನೂ ಇಲ್ಲದ ಭಾರ ಹೊತ್ತು ದಾರಿ ಸಾಗುವುದೆಂತು ಸುಖದ ನೆನಪುಗಳೆ ಕಾಲುಗಳನು ಕಲ್ಲಾಗಿಸಿದ ಮೇಲೆ ?ನಿನ್ನ ಕಂಗಳಿಂದ ಹಾರಿದ ಕಿಡಿ ತಾಕಿ ಎದೆ ಅಗ್ನಿಕುಂಡವಾಗಿ ಬಾಗಿದೆ
ಹೊಸದೇನಲ್ಲ ಬಾಗಿದರಷ್ಟೇ ಅಗ್ನಿಕುಂಡದಲ್ಲೂ ಹೂಗಳರಳಿ ಅಗ್ನಿಗಂಧವಾಗುವುದುನಂಬಿಕೆ ಕನ್ನಡಕದ ಹಾಗೆ ಬೇಕಿದ್ದರೆ ಅದರೊಳಗಿಂದ ಈ ಪ್ರೀತಿಯನು ಒರಗೆ ಹಚ್ಚಿಡು
ಇಷ್ಟೆ ನಿನ್ನ ಹಾಗೆ ಸಂತನೂ ಕತ್ತಲಲ್ಲಿ ಮಲಗಿಯೇ ಮುಂಜಾವಿನ ಅರಿವನ್ನು ಪಡೆದವನುದೇಹದಲಿ ಎಷ್ಟೇ ನೋವುಗಳಿದ್ದರೂ ನಿನ್ನ ತುಟಿ ತಾಕಿದರದು ಹೂವಿನಂತಾಗುವುದು
ಓ ಪವಾಡವೆಂದರೆ ಇದೆ ಇರಬೇಕು ಮಳೆ ಬಿದ್ದ ಮೇಲೆ ಭೂಮಿಯ ಗಂಧ ಗೊತ್ತಾಗುವುದುಅಂಗಳದಲಿ ತೆವಳುವ ಬಸವನಹುಳವನು ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ
ಕೆಲವು ಸಲ ನಮ್ಮ ಮುಖವನು ನೋಡಿಕೊಳ್ಳಲು ಕನ್ನಡಿಯೆದುರೇ ನಿಲ್ಲಬೇಕಿಲ್ಲಹತ್ತಿರ ಬಂದಷ್ಟು ದೂರ ಸರಿಯುವ ವಾಸ್ತವದಗನ್ನಡಿಯಲ್ಲಿ
ಕಾಣುವುದೆಲ್ಲ ಬರೀ ದೂರ ತಳ್ಳಿದಷ್ಟೂ ಹತ್ತಿರಾಗುವ ನೆನಪುಗಳುನೀ ಕಾಲಿಟ್ಟ ಗಳಿಗೆ ಬೆಳಗಾಯಿತೆಂದವರಂಗಳದಲ್ಲೂ ಹುಶಾರಿ ಹೆಜ್ಜೆಯೂರು
ಕಾರಣಗಳು ಬೇಕಿಲ್ಲ ಆಸೆಗೆ ಬಿದ್ದರೆ ನೀ ಹಚ್ಚಿದ ದೀಪವೇ ನಿನ್ನೂ ಸುಡುವುದುನನ್ನ ಹಾಗೆ ಕಣ್ಣುಬಿಟ್ಟೆ ಮಲಗಿದ ಇರುಳಲಿ ನೀನು ಮಲಗುವ ಮಂಚ ಖಾಲಿ ಬಿದ್ದಿದೆ
ನಡು ಇರುಳು ಎಷ್ಟು ಕತ್ತಲಿದ್ದರೂ ಕೆಲವು ಖಾಲಿತನಗಳನು ಮುಚ್ಚಿಡಲು ಬರುವುದಿ
ಲ್ಲ


ನೀನು ಬೆಂಕಿಯಿಟ್ಟೆ ಎಂಬುದು ನೆಪವಷ್ಟೆ
ಸುಟ್ಟ ಮೇಲಷ್ಟೆ ಗಂಧದ ಕಡ್ಡಿಗೆ ಸುವಾಸನೆ

೧೦
ಎಷ್ಟೇಯಾದರೂ ಇದು ನಿನ್ನ ಕೈಯಲ್ಲಾಡುವ ಜೀವ
ಕೈದೆರೆದರೆ ಅಪ್ಪಿ ನಿನ್ನ ಸ್ಪರ್ಷ ಹೊತ್ತು ಹಾರುವೆ ಮುಚ್ಚಿದರೆ ನಿನ್ನ ಸ್ಪರ್ಷದಲ್ಲೆ ಐಕ್ಯನಾಗುವೆ


೧೧
ಬದುಕಿರುವ ನೆರಳುಗಳ ಮೇಲೆ ನಡೆಯುವ ಹಾದಿ ಇನ್ನೂ ಇದೆ
ಪ್ರೀತಿಯನು ಹುಗಿದ ನೆಲಕೆ ಹೆಜ್ಜೆಯೂರಿದಾಗ ರಾಕ್ಷಸನ ಕಾಲೂ ಕಂಪಿಸುವವು


೧೨
ಇರುಳು ಹಗಲಿಗೆ ತಂದೊಪ್ಪಿಸಿದ ನಿನ್ನನು ಹಗಲು ಮತ್ತೆ ಕತ್ತಲೆಗೆ ತಂದುಬಿಡುವುದು
ನೋಡು ನೋಡು ದಡದ ಮೇಲೆ ಕುಳಿತ ಕಪ್ಪೆ ಕಲ್ಲು ಬಿದ್ದು ಸದ್ದಾದ ಬಾವಿಗೇ ಹಾರುವುದು


೧೩
ಬೆಳಕು ಎಷ್ಟಿದ್ದರೇನು
ಕತ್ತಲಾಗದೆ ಹಣತೆ ಮುಗುಳ್ನಗುವುದಿಲ್ಲ..!


೧೪
ಸೂರ್ಯ ಮುಳುಗಿದ ಮೇಲೆ
ಭೂಮಿಗೆ ಬೆಳಕಿನ ಅನುಭವ..!


೧೫
ನನ್ನ ದೌರ್ಬಲ್ಯಗಳ ಜತೆ ನೀನು ನನ್ನ ಪ್ರೀತಿಸಿದೆಂದೇ
ನಾನು ಮನುಷ್ಯನಾದೆ
೧೬
ನನ್ನಾತ್ಮದ ತುಂಬ ಇಳಿಯದ ನಿಶೆ ರಾಜ್ಯವಾಳಿದ ಹಾಗೆ
ನಿದ್ರಾಹೀನ ಕಂಗಳಿಗೆ ಕಪ್ಪು ಹಗಲು ಅಪರಿಚಿತ ಸ್ನೇಹಿತನಲ್ಲ


೧೭
ಈ ದಿನ ಎದೆಯ ಬಟ್ಟಲಿಗೆ ಮೌನ ಸುರಿದ ನೋವಿನ ಮಧುವ ಮಾತು ಕುಡಿಯುತ್ತ ನಡೆಯಿತು
ನಗು ಸಂಭ್ರಮ ನೀಡಿ ಬೆಳೆಸುವ ಈ ದಿನಗಳು ಬೇರೇನಲ್ಲ ಹೆತ್ತಮರಿಗಳ ತಿಂದು ಬದುಕುವ ಪ್ರಾಣಿಗಳ ಹಾಗೆ


೧೮
ಈ ಮನೆಯ ಕದವು ಮುಚ್ಚಿದಾಗ ಆ ಮನೆಯ ಬಾಗಿಲು ತೆರೆದ ಸದ್ದಾಯಿತು
ಹೆಜ್ಜೆಗೊಬ್ಬರು ದೇಹ ಬೆಸೆಯುವವರು ಸಿಗುವ ಓಣಿಯಲಿ ಮನಸು ಬೆಸೆವವರು ಸಿಗುವದಾದರೂ ಹೇಗೆ ಹೇಳಿ ?


೧೯
ನನ್ನನು ದೂರಿಕೊಂಡ ಹಾಗೆ ಆ ಹತಭಾಗ್ಯ ಹೆಂಗಸರನ್ನು ದೂರಲಾರೆ
ಎಲ್ಲಿಯೆ ನೋಡು ದೇಹವನು ಮಾರಿಕೊಳ್ಳುವ ಅಡ್ಡೆಯಲ್ಲಿ ಪ್ರೀತಿಯನ್ನು ಬಿಕರಿಗಿಟ್ಟಿಲ್ಲ


೨೦
ನನ್ನನು ದೂರಿಕೊಂಡ ಹಾಗೆ ಆ ಹತಭಾಗ್ಯ ಹೆಂಗಸರನ್ನು ದೂರಲಾರೆ
ಎಲ್ಲಿಯೆ ನೋಡು ದೇಹವನು ಮಾರಿಕೊಳ್ಳುವ ಅಡ್ಡೆಯಲ್ಲಿ ಪ್ರೀತಿಯನ್ನು ಬಿಕರಿಗಿಟ್ಟಿಲ್ಲ


೨೧
ಕೆಟ್ಟ ಕಾಲದಲಿ ಚಿತ್ತಭಿತ್ತಿಯಲಿ ಎರಡು ಕನಸು ಕಾಣಿಸಿದಾಗ ನಾವು ಅಗಲುವುದಕೆ ನೂರು ನೆಪಗಳಿದ್ದವು
ಬೆಳಗಾದರೆ ಬಲಿಯಾಗುವ ಹುಂಜ ಎಚ್ಚರಾಗಿ ಬಲಿ ಪಡಿವವರನೆ ಎಚ್ಚರಿಸಲು ಮತ್ತೆ ಮತ್ತೆ ಕೂಗುಹಾಕುವುದು


೨೨
ಸೂರ್ಯನಿಲ್ಲದ ಮೇಲೆ ಭೂಮಿ ಮನಗಂಡಳು;
ತನ್ನೊಳಗಿರುವುದೆಲ್ಲ ಬರೀ ಕತ್ತಲೆಂದು


೨೩
ಭೂಮಿಯನು ತೊರೆದ ಮೇಲೆ ಸೂರ್ಯನಿಗೆ ಅರಿವಾಯ್ತು ;
ಅವಳಿಲ್ಲದೆ ನನಗೆ ಮುಖವೆಂಬುದಿಲ್ಲ


೨೪
ಸಾವೂ ನಾಚುವಂಥ ನಿದ್ದೆ ಕವಿದಿತ್ತು ಸೋಲೊಪ್ಪದ ನಿನ್ನ ಅಂತಿಮ ಶಿಕ್ಷೆಗೆ ಎಚ್ಚರಾಯಿತು
ಉಸಿರಾಡುವ ಗಾಳಿಯೇ ಅಶುದ್ಧಗೊಂಡ ಮೇಲೆ ದೇಹದ ರಕ್ತ ಶುದ್ಧವಾಗಿ ಉಳಿಯುವುದಿಲ್ಲ

೨೫

ನಾಳೆ ಸೂರ್ಯನಿಗೆ ಭೂಮಿ ಹತ್ತಿರಾಗತಾಳಂತೆ
ಭೂಮಿಯ ಮೇಲಿದ್ದವರು ನಾವೇಕೆ ದೂರ ಇರಬೇಕು ?

೨೬
ಬೇರು ಕಾಮದ ಕುಂಡದಲ್ಲಿತ್ತು ನಾನು ಪ್ರೇಮದ ದೇಟಿಗೆ ನೀರು ಹನಿಸಿದೆ
ಹೌದು ಬೆಳಕಿಗಾಗಿ ಕತ್ತಲೆಯ ಕೌದಿ ಹೊದ್ದು ಮಲಗಲೇಬೇಕು


೨೭
ಅಪನಂಬಿಕೆಯಿಂದ ಲೋಕ ನಿನ್ನ ನೋಡುವುದ ಇಷ್ಟ ಪಡುವ ನನ್ನಾತ್ಮದ ಬರಡುತನಕೆ ನಕ್ಕುಬಿಡು
ಕಾಮಾತುರದ ಅಲುಗಿಗೆ ಒಡಲ ಬಯಕೆಯ ಬಳ್ಳಿ ಸಿಕ್ಕಮೇಲೆ ಬೆಂಕಿಯಿಂದ ಬೆಳಕಿನ ದಾಹ ಹಿಂಗದು

RSS ನಿಜ ಬಣ್ಣ ಗೊತ್ತೇನು ?
ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಒಂದು ದೊಡ್ಡ ಶಿಬಿರ ಹುಬ್ಬಳ್ಳಿಯಲ್ಲಿ ನಡೀತಿದೆ. ಈ ಶಿಬಿರದಲ್ಲಿ ಸಾವಿರಾರು ಆರೆಸ್ಸೆಸ್ಸಿಗರು ಪಾಲ್ಗೊಂಡಿದ್ದಾರೆ. ಸಮವಸ್ತ್ರ ಧರಿಸಿ, ಶಿಸ್ತಿನ ಸಿಪಾಯಿಗಳಾಗಿ ನಿನ್ನೆ ಇವರು ನಡೆಸಿದ ಪಥಸಂಚಲನವಂತೂ ನೋಡಿದವರ ಮೆಚ್ಚುಗೆಗೆ ಕಾರಣವಾಗುವಂತಿತ್ತು. ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ನಾಯಕರು ಪಾಲ್ಗೊಂಡಿದ್ದಾರೆ. ರಾಜ್ಯ ರಾಜಕಾರಣ, ಭಾರತೀಯ ಜನತಾ ಪಕ್ಷದ ಆಂತರಿಕ ಶಿಸ್ತು, ಭ್ರಷ್ಟಾಚಾರಗಳ ಬಗ್ಗೆಯೆಲ್ಲಾ ಅಲ್ಲಿ ಮಾತುಕತೆಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿದವು. ಕನ್ನಡ – ಕನ್ನಡಿಗ- ಕರ್ನಾಟಕಗಳ ಬಗ್ಗೆಯಾಗಲೀ, ಭಾರತದ ಸಂವಿಧಾನದ ಬಗ್ಗೆಯಾಗಲೀ, ಒಕ್ಕೂಟ ವ್ಯವಸ್ಥೆಯ ಬಗ್ಗೆಯಾಗಲೀ, ಜಾತ್ಯಾತೀತತೆಯ ಬಗ್ಗೆಯಾಗಲೀ ಆರೆಸ್ಸೆಸ್ಸಿಗೆ ಇರುವ ನಿಲುವುಗಳನ್ನು ಅರಿತಾಗ ಈ ಸಂಭ್ರಮ ಆತಂಕವಾಗಿ ಬದಲಾಗುವುದರಲ್ಲಿ ಅಚ್ಚರಿಯಿಲ್ಲ!
ಸಂಘದ ಹೊರಮುಖ !
ಆರೆಸ್ಸೆಸ್ ಎನ್ನುವುದು ದೇಶದ ಅತ್ಯಂತ ಶಿಸ್ತುಬದ್ಧ ಸಾಮಾಜಿಕ ಸಂಘಟನೆ ಎಂದೇ ಗುರುತಾಗಿದೆ. ಇಲ್ಲಿನ ಕಾರ್ಯಕರ್ತರು ಸ್ವಾರ್ಥ ಮರೆತು ನೆರೆ ಬರ ಮೊದಲಾದ ಸಂದರ್ಭಗಳಲ್ಲಿ ಜನತೆಯ ರಕ್ಷಣೆಗೆ, ಸಹಾಯಕ್ಕೆ ಧಾವಿಸಿ ಬಂದದ್ದಿದೆ. ವ್ಯವಸ್ಥಿತವಾಗಿ ಕಟ್ಟಲ್ಪಟ್ಟಿರುವ ಈ ಸಂಸ್ಥೆಯ ಒಳರಚನೆ ಹಾಗೂ ಹರವುಗಳು ಹೆಸರುವಾಸಿಯಾಗಿದೆ. ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ, ಭಾರತೀಯರನ್ನು ಭಾರತಕ್ಕಾಗಿ ಮಿಡಿಯುವಂತೆ ಮಾಡಬಲ್ಲ ಸಂಸ್ಥೆ ಇದೆಂಬ ಹೆಸರೂ ಸಂಘಕ್ಕಿದೆ. ಮನೆ ಮಠ ಸ್ವಂತ ಬದುಕು ಬಿಟ್ಟು ಸಂಘ ಬಯಸುತ್ತಿರುವ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ತ್ಯಾಗಿಗಳ ದೊಡ್ಡಪಡೆಯೇ ಇದರಲ್ಲಿದೆ. ಸಂಘದ ಅನೇಕ ಕಾರ್ಯಕರ್ತರು ಅಕ್ಷರಶಃ ಸಂತರಂತೆ ತಮ್ಮದೆಲ್ಲವನ್ನೂ ಬಿಟ್ಟು ಸಮಾಜಕ್ಕಾಗಿ ದುಡಿಯುತ್ತಿರುವುದೂ ಕೂಡಾ ಸತ್ಯ. ಆದರೆ ವೈಯುಕ್ತಿಕ ಹಿರಿಮೆಗಳು, ಅನೇಕರ ನಿಸ್ವಾರ್ಥತೆ, ತ್ಯಾಗ, ಗಟ್ಟಿತನಗಳು ಬಳಕೆಯಾಗುತ್ತಿರುವ ಉದ್ದೇಶ ಮಾತ್ರಾ ದುರದೃಷ್ಟಕರವಾದುದ್ದಾಗಿದೆ.

ಸಂಘದ ಬೋಧನೆಯನ್ನು ಪ್ರಶ್ನಾತೀತವಾಗಿ ಒಪ್ಪುವ ಕಾರ್ಯಕರ್ತರ ಸೈನ್ಯವನ್ನೇ ಹೊಂದಿರುವ ಸಂಘವು, ಮೂಲತಃ ತಾನು ನಂಬಿರುವ ಸಿದ್ಧಾಂತಗಳಲ್ಲೇ ಪ್ರಜಾಪ್ರಭುತ್ವ ವಿರೋಧಿ, ವೈವಿಧ್ಯತಾ ವಿರೋಧಿ ನಿಲುವುಗಳನ್ನು ಹೊಂದಿರುವ ಪುರಾವೆಗಳನ್ನು, ಸಂಸ್ಥೆಯ ಪೂಜನೀಯ ಆದರ್ಶವಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ಚಿಂತನಗಂಗಾ (ಶ್ರೀ ಗುರೂಜಿ ಸಮಗ್ರ, ಸಂಪುಟ ೧೧, ಪ್ರಕಾಶಕರು: ಸಾಹಿತ್ಯ ಸಂಗಮ ಪ್ರಕಾಶನ) ಪುಸ್ತಕದಲ್ಲಿ ಕಾಣಬಹುದಾಗಿದೆ. ಚಿಂತನಗಂಗಾ ಸಂಘವನ್ನು ಅರಿಯುವವರಿಗೆ, ಸಂಘದ ಸಿದ್ಧಾಂತಗಳಿಗೆ ಕನ್ನಡಿ ಎನ್ನುವ ಮಾತುಗಳು ಪುಸ್ತಕದ ಮೊದಲಲ್ಲೇ ಬರೆಯಲಾಗಿರುವುದರಿಂದ ಇದನ್ನು ಸಂಘದ ಅಧಿಕೃತವಾದ ನಿಲುವು ಎಂದೇ ಪರಿಗಣಿಸಬೇಕಾಗುತ್ತದೆ. ಈ ನಿಲುವಿನ ಸರಿತಪ್ಪುಗಳನ್ನು ವಿಶ್ಲೇಷಿಸದೆ, ರಾಷ್ಟ್ರೀಯ ಸ್ವಂಯಂಸೇವಕ ಸಂಘವು ನಾಡಿನಲ್ಲಿ ಬಲಶಾಲಿಯಾಗಲು ಕನ್ನಡಿಗರು ಕೈಗೂಡಿಸಿದ್ದೇ ಆದರೆ ನಾಳಿನ ದಿನ ಮರುಕ ಪಡಬೇಕಾದೀತು!

ಭಾಷೆಗಳ ಬಗ್ಗೆ !

ವೈವಿಧ್ಯತೆಯನ್ನು ಹಳಿಯಲಾಗದ, ಆದರೆ ಒಪ್ಪಲಾಗದ ಮನಸ್ಥಿತಿಯನ್ನು, ಇಂತಹ ವೈವಿಧ್ಯತೆ ಇರುವುದರಿಂದಾಗಿಯೇ ಚಡಪಡಿಕೆ ಹೊಂದಿರುವುದನ್ನೂ ಈ ಕೆಳಗಿನ ಮಾತುಗಳು ಧ್ವನಿಸುತ್ತಿವೆ.

ನಮ್ಮ ರಾಷ್ಟ್ರೀಯ ಪರಂಪರೆಯ ವೈವಿಧ್ಯವು ಭಾಷೆಗಳ ಕ್ಷೇತ್ರಗಳಲ್ಲೂ ವ್ಯಕ್ತಗೊಂಡಿದೆ.. ಎಲ್ಲಾ ಭಾಷೆಗಳೂ ಮೂಲತಃ ಒಂದೇ. ವಾಸ್ತವವಾಗಿ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಸಂಸ್ಕೃತಿಯ ದಿವ್ಯ ಪರಿಮಳವನ್ನು ಹರಡುವ ನವವಿಕಸಿತ ಕುಸುಮಗಳಂತೆ. ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದರೆ ಭಾಷೆಗಳ ಆ ಸಾಮ್ರಾಜ್ಞಿ ದೇವವಾಣಿ ಸಂಸ್ಕೃತ. ಅದರ ಸಂಪನ್ನತೆ ಮತ್ತು ಪರಂಪರಾಗತ ಪಾವನ ಸಂಬಂಧಗಳಿಂದಾಗಿ ಅದೊಂದೇ ನಮ್ಮ ರಾಷ್ಟ್ರೀಯ ಏಕತೆಗೆ ಬಲನೀಡುತ್ತಿರುವ ಒಂದು ಮುಖ್ಯ ಅಂಶ. ಆದರೆ ದುರದೃಷ್ಟವಶಾತ್ ಅದು ಇಂದು ಸಾಮಾನ್ಯ ಬಳಕೆಯಲ್ಲಿಲ್ಲ. ಅದನ್ನು ಬಳಕೆಗೆ ತರುವ ನೈತಿಕ ಅಭಿಮಾನವಾಗಲೀ, ಕೆಚ್ಚೆದೆಯಾಗಲೀ ನಮ್ಮ ಇಂದಿನ ಆಡಳಿತಗಾರರಿಗಿಲ್ಲ.

(ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು ಏಕೆ ತಲೆ ಎತ್ತುತ್ತಿವೆ ಗೊತ್ತಾಯ್ತಲ್ಲಾ?)

ಇಂಗ್ಲೀಶ್ ನಮ್ಮ ಮೇಲೆ ಹೇರಲ್ಪಟ್ಟ ಕೃತಕ ಹೊರೆ. ಇದನ್ನು ಕಿತ್ತೆಸೆಯಬೇಕು. ಇಂಗ್ಲೀಶ್ ಮುಂದುವರಿಕೆ ಮಾನಸಿಕ ದಾಸ್ಯದ ಲಕ್ಷಣ. ಸಂಪರ್ಕ ಭಾಷೆಯ ಸಮಸ್ಯೆಗೆ ಪರಿಹಾರವೇನು? ಸಂಸ್ಕೃತವು ಆ ಸ್ಥಾನವನ್ನು ಪಡೆಯುವವರೆಗೆ ಅನುಕೂಲದ ದೃಷ್ಟಿಯಿಂದ ಹಿಂದಿಗೆ ಆದ್ಯತೆ ನೀಡಬೇಕು. ಯಾಕೆಂದರೆ ದೇಶದ ಬಹುಭಾಗದ ಜನರು ಬಳಸುವುದು ಹಿಂದಿಯನ್ನೇ. ಕಲಿಯುವುದಕ್ಕೆ ಮತ್ತು ಆಡುವುದಕ್ಕೆ ಅತ್ಯಂತ ಸುಲಭವಾದ ಭಾಷೆಯೂ ಅದೇ. ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಲು ಕುಂಭ ಅಥವಾ ಬೇರಾವುದಾದರೂ ಮೇಳಕ್ಕೆ ಕಾಶಿಗಾಗಲೀ, ಪ್ರಯಾಗಕ್ಕಾಗಲೀ ಹೋದರೆ, ದೂರದ ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳಿಂದ ಅಲ್ಲಿ ಕಿಕ್ಕಿರಿದು ನೆರೆಯುವ ಅಗಾಧ ಜನಸ್ತೋಮ ಹಿಂದಿಯನ್ನೇ, ಅದೆಷ್ಟೇ ಅಪಕ್ವವಾಗಿರಲೀ, ಬಳಸುವುದನ್ನು ಕಾಣುತ್ತೇವೆ.

ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ದೃಷ್ಟಿಯಿಂದ ನಾವು ಹಿಂದಿಯನ್ನು ಒಪ್ಪಬೇಕು. ವಾಸ್ತವವಾಗಿ ಬ್ರಿಟೀಷರ ಆಳ್ವಿಕೆಯಲ್ಲೂ ಬಂಗಾಳಿ, ಮರಾಠಿ ಮತ್ತು ಗುಜರಾತಿಗಳು ಅದ್ಭುತ ಪ್ರಗತಿಯನ್ನು ಸಾಧಿಸಿವೆ. ಒಂದೇ ಭಾಷೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಇವೆಲ್ಲಾ ಭಾಷೆಗಳನ್ನೂ ನಾಶಮಾಡುವುದನ್ನು ಯಾವನೂ ಸಹಿಸಲಾರ. ಆದ್ದರಿಂದ ಹಿಂದಿಯು ಇತರ ಭಾಷೆಗಳ ಮೇಲೆ ಆಕ್ರಮಣ ಅಥವಾ ಯಜಮಾನಿಕೆ ನಡೆಸುವುದೆಂಬ ಶಂಕೆ, ಭೀತಿಗಳು ಕೇವಲ ಕಟ್ಟುಕತೆ, ಸ್ವಾರ್ಥಿ ರಾಜಕಾರಣಿಗಳ ಸೃಷ್ಟಿ.

ಒಟ್ಟು ಸಾರವೆಂದರೆ “ಹಿಂದೀಯನ್ನು ನೀವೆಲ್ಲಾ ಒಪ್ಪಿ. ಬ್ರಿಟೀಷರು ಆಳುವಾಗಲೇ ಭಾರತೀಯ ಭಾಷೆಗಳು ಉದ್ಧಾರವಾಗಿದ್ದವು, ಹಿಂದೀಲಿ ಆಳಿದರೆ ಏನಾಗುತ್ತದೆ?” ಎನ್ನುವ ನಿಲುವು ಕಾಣುತ್ತದೆ. ಇಂದು ಹಿಂದೀ ಬರದಿದ್ದರೆ ಕೆಲಸ ಕೊಡಲ್ಲಾ ಎಂದು ನಮ್ಮಲ್ಲಿ ಹುಟ್ಟಿಕೊಂಡಿರುವ ಪರಿಸ್ಥಿತಿ ಆಕ್ರಮಣವಲ್ಲವೇ? ಹಿಂದೀ ಯಜಮಾನಿಕೆಯಲ್ಲವೇ?

ಒಕ್ಕೂಟದ ಬಗ್ಗೆ !


ಸ್ವಯಂನಿರ್ಣಯಾಧಿಕಾರದ ಘೋಷಣೆಯ ಈ ತಪ್ಪು ಅನ್ವಯವನ್ನು ಕಾಶ್ಮೀರಕ್ಕೆ ಮತ್ತು ಈಗ ಗೋವಾಕ್ಕೆ ವಿಸ್ತರಿಸಲಾಗಿದೆ. ಕಾಶ್ಮೀರಿಗಳೇ ತಮ್ಮ ಭವಿಷ್ಯವನ್ನು ತೀರ್ಮಾನಿಸಬೇಕು ಎಂದರೆ ದೇಶದ ಏಕತ್ವವನ್ನೂ ಭಾರತದ ಜನರ ಏಕತ್ವವನ್ನೂ ತಿರಸ್ಕರಿಸಿದಂತೆ.

ಆನಂತರ ಬಂತು ನಮ್ಮ ಸಂವಿಧಾನ. ಇದು ನಮ್ಮ ದೇಶವನ್ನು ಸ್ವಲ್ಪ ಹೆಚ್ಚು ಕಡಿಮೆ ಪ್ರತ್ಯೇಕವೇ ಆದ ಘಟಕಗಳಾಗಿ ಒಡೆದು ಪ್ರತಿಯೊಂದಕ್ಕೂ ಒಂದು ‘ರಾಜ್ಯ’ವನ್ನು ಕೊಟ್ಟು ಎಲ್ಲವನ್ನೂ ಒಂದು ‘ಒಕ್ಕೂಟ’ವಾಗಿ ‘ಸಂಯುಕ್ತ’ಗೊಳಿಸಿತು. ಪ್ರತಿಭಾಷೆಯ ಗುಂಪು ‘ಒಂದು ಜನಾಂಗ’ವಾಗಿ ತನ್ನದೇ ಪ್ರತ್ಯೇಕ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿ‘ಸಮೃದ್ಧವಾಗಿ ಸ್ವಯಮಾಧಿಕಾರ’ವನ್ನು ಪಡೆದ ‘’ರಾಜ್ಯಗಳ ಒಕ್ಕೂಟ’ದ ಗೀಳು ನಮ್ಮ ನಾಯಕರ ಮನಸ್ಸನ್ನೂ ವಿಚಾರಶಕ್ತಿಯನ್ನೂ ಆಕ್ರಮಿಸಿಬಿಟ್ಟಿತ್ತು.

ಇವು ನಿರಾಸೆಗೊಳಿಸುವ ಯೋಚನೆಗಳೇ. ಆದರೆ ನಾವು ನಿರಾಸೆಯಿಂದ ಕೈಕಾಲು ಸೋಲಬೇಕಾಗಿಲ್ಲ: ಏಕೆಂದರೆ ಇದಕ್ಕೆ ಒಂದು ಮದ್ದುಂಟು.

ಇದಕ್ಕಾಗಿ ನಮ್ಮ ದೇಶದ ಸಂವಿಧಾನದ ಒಕ್ಕೂಟ ಸ್ವರೂಪದ ಎಲ್ಲಾ ಮಾತನ್ನೂ ಆಳವಾಗಿ ಹೂಳಬೇಕು. ಭಾರತ ರಾಜ್ಯದೊಳಗೇ ‘ಸ್ವಯಮಾಧಿಕಾರ’ವುಳ್ಳ ಅಥವಾ ಭಾಗಶಃ ಸ್ವಯಮಾಧಿಕಾರವುಳ್ಳ ‘ರಾಜ್ಯಗಳ’ ಅಸ್ತಿತ್ವವನ್ನೇ ಅಳಿಸಿಹಾಕಬೇಕು.

ಸಾಮಾಜಿಕ ಸಮಸ್ಯೆಯ ಸರಳೀಕರಣ !
ಮೀಸಲಾತಿ ವ್ಯವಸ್ಥೆಯ ಬಗ್ಗೆ ಗುರೂಜಿಯವವರ ಅನಿಸಿಕೆ:

ನಮ್ಮ ಜನರಲ್ಲಿ ವಿವಿಧ ವಿಭಾಗಗಳವರಿಗೆ ಹರಿಜನರು, ನಿಮ್ನ ಜಾತಿಯವರು, ನಿಮ್ನ ಬುಡಕಟ್ಟಿನವರು ಹೀಗೆಲ್ಲಾ ಹೆಸರುಗಳನ್ನು ಕೊಡಾಲಾಗುತ್ತಿದೆ. ಹಣದಾಸೆ ತೋರಿಸಿ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿರುವುದು.

ಇದನ್ನು ಓದಿದಾಗ ಆರೆಸ್ಸೆಸ್ ಮೀಸಲಾತಿ ಬಗ್ಗೆ ಎಂತಹ ನಿಲುವನ್ನು ಹೊಂದಿದೆ ಎಂಬುದು ಅರಿವಾಗುತ್ತದೆ. ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿದೆಯೆನ್ನಲಾದ, ಇಂದಿಗೂ ಬಹುಸಂಖ್ಯಾತರನ್ನು ತಾರತಮ್ಯಕ್ಕೀಡುಮಾಡುತ್ತಿರುವ ಸಮಾಜಿಕ ಅಸಮಾನತೆಯೇ ಇರಲಿಲ್ಲ ಎನ್ನುವಂತಹ ಅನಿಸಿಕೆಯನ್ನು ಗುರೂಜಿ ಮಾತುಗಳು ಧ್ವನಿಸುತ್ತಿರುವುದು ಸಂಘ ಇಡೀ ಸಮಾಜದ ಸಮಸ್ಯೆಗಳನ್ನು ಸರಳೀಕರಿಸುತ್ತಿರುವುದನ್ನು ತೋರುತ್ತದೆ. ಜಾತೀಯತೆ ತೊಲಗಬೇಕು ಅನ್ನುವ ನಿಲುವು ಸಂಘಕ್ಕಿದೆ ಎನ್ನಲಾಗುತ್ತದೆ, ಆದರೆ ಜಾತಿಯ ಕಾರಣದಿಂದಲೇ ತುಳಿತಕ್ಕೊಳಗಾದವರನ್ನು ಮೇಲೆತ್ತುವುದಕ್ಕೆ ಸಂಘವು ದೇವಸ್ಥಾನಕ್ಕೆ ಪ್ರವೇಶ, ಬಾವಿನೀರು ಬಳಸಲು ಅನುಮತಿಯಂತಹ ಮೇಲ್ಮೇಲಿನ ಪರಿಹಾರಗಳಿಗಿಂತಲೂ ಮಿಗಿಲಾದ ಪರಿಹಾರವನ್ನು ನೀಡಲಾರದಾಗಿದೆ.

ಸಂಘದ ಧರ್ಮದೃಷ್ಟಿ !

ಈ ನಾಡಿನಲ್ಲಿರುವ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೋಭಾವವೇನು? ಅವರು ಈ ನಾಡಿನಲ್ಲಿ ಹುಟ್ಟಿದರು, ಸಂದೇಹವೇ ಇಲ್ಲ. ಆದರೆ ಈ ನೆಲದ ಉಪ್ಪಿಗೆ ನಿಷ್ಠೆಯಿಂದ ಇದ್ದಾರೆಯೇ ಅವರು!? ಅವರನ್ನು ಬೆಳೆಸಿದ ಈ ನಾಡಿಗೆ ಕೃತಜ್ಞರಾಗಿದ್ದಾರೆಯೇ? ಈ ನಾಡು ಮತ್ತು ಇಲ್ಲಿನ ಪರಂಪರೆಯ ಮಕ್ಕಳು ತಾವು ಮತ್ತು ಇದಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಮಹಾಭಾಗ್ಯ ಎಂದು ಅವರು ಭಾವಿಸಿದ್ದಾರೆಯೇ? ಖಂಡಿತಾ ಇಲ್ಲ! ಮತಾಂತರದೊಂದಿಗೇ ರಾಷ್ಟ್ರದಲ್ಲಿ ಅವರ ಪ್ರೇಮ ಮತ್ತು ನಿಷ್ಠೆಗಳು ಹೊರಟೇ ಹೋಗಿವೆ.

ಇದು ಇಲ್ಲಿಗೇ ಮುಗಿಯಲಿಲ್ಲ. ಈ ನಾಡಿನ ಶತ್ರುಗಳೊಂದಿಗೆ ಅವರು ಮಾನಸಿಕವಾಗಿ ಏಕತೆಯನ್ನು ಬೆಳೆಸಿಕೊಂಡಿದ್ದಾರೆ.

ಕೆಲವು ಸಮಾಜ ಬಂಧುಗಳು ನಮ್ಮ ಜೊತೆ ಬಿಟ್ಟು ಕಳೆದ ಕೆಲವು ಶತಮಾನಗಳಲ್ಲಿ ಎಲ್ಲೆಲ್ಲೋ ಅಲೆಯುತ್ತಿದ್ದವರು ಈಗ ಮರಳಿ ನಮ್ಮ ಬಳಿಗೆ ಬಂದಲ್ಲಿ ಅವರಿಗೆ ನಮ್ಮ ಪ್ರೀತಿ ಗೌರವಗಳನ್ನು ತೋರಿಸದೆ, ಸಂತೋಷ ಪಡದೆ ಹೇಗಿದ್ದೇವು? ಇಲ್ಲಿ ಬಲಾತ್ಕಾರವೇನೂ ಇಲ್ಲ. ವಿಷಯವನ್ನು ಸರಿಯಾಗಿ ತಿಳಿದುಕೊಂಡು ಅವರು ಹಿಂದಕ್ಕೆ ಬರಲಿ. ಉಡುಪು, ಸಂಪ್ರದಾಯ, ವಿವಾಹ ಪದ್ಧತಿ, ಅಂತ್ಯಸಂಸ್ಕಾರ ಇಂತಹವುಗಳಲ್ಲೆಲ್ಲ ಅವರು ತಮ್ಮ ಪೂರ್ವಿಕರ ಹಿಂದುಜೀವನ ವಿಧಾನವನ್ನು ಸ್ವೀಕರಿಸಲಿ ಎಂಬುದಷ್ಟೇ ನಮ್ಮ ಕರೆ, ಪ್ರಾರ್ಥನೆ.

ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು, ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು, ಇವುಗಳಿಂದ ಜನಿಸಿದ ಒಂದೇ ರಾಷ್ಟ್ರವಾಹಿನಿಯ ತೀಕ್ಷ್ಣ ಪ್ರಜ್ಞೆ ಇದೇ ನಮ್ಮ ರಾಷ್ಟ್ರಸೌಧದ ಅಡಿಬಂಡೆ!

ಈ ನಾಡಿನ ಒಳಗಿನ ಅಪಾಯಗಳೆಂದು ಇವರು ಬಗೆದಿರುವುದು ಮೂರನ್ನು. ಮೊದಲನೆಯದು ಮುಸ್ಲಿಮರು, ಎರಡನೆಯದು ಕ್ರೈಸ್ತರು ಮತ್ತು ಮೂರನೆಯದು ಕಮ್ಯುನಿಸ್ಟರು! ಹೀಗೆಂಬ ಮೂರು ಬೇರೆಬೇರೆ ಅಧ್ಯಾಯಗಳೇ ಈ ಪುಸ್ತಕದಲ್ಲಿದೆ. ಇದೇ ಇಂದಿಗೂ ಸಂಘದ ನಿಲುವಾಗಿದೆಯೇ ?

ಆರೆಸ್ಸೆಸ್ ಮತ್ತು ಕರ್ನಾಟಕ

ಇಂತಹ ನಿಲುವುಗಳ ಸಂಘವು ಕರ್ನಾಟಕದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಷ್ಟೂ ಕನ್ನಡ ಕನ್ನಡಿಗ ಕರ್ನಾಟಕಗಳ ಅಸ್ತಿತ್ವಕ್ಕೇ ಎರವಾದೀತು. ಏಕೆಂದರೆ ನಾಡಿನ ಆಡಳಿತದಲ್ಲಿ ಭಾಷೆಯಾಗಿ ಕನ್ನಡಕ್ಕಿಂತಾ ಹಿಂದೀಗೆ ಪ್ರಾಮುಖ್ಯತೆ. ನಾಡಾಗಿ ಒಗ್ಗೂಡಿದ ಕರ್ನಾಟಕಕ್ಕಿಂತಾ ಕನ್ನಡನಾಡನ್ನು ಪುಟ್ಟ ಪುಟ್ಟ ರಾಜ್ಯಗಳಾಗಿ ಒಡೆಯುವುದಕ್ಕೇ ಪ್ರಾಮುಖ್ಯತೆ ಮತ್ತು ಕನ್ನಡಿಗನಿಗಿಂತಾ ಕನ್ನಡಿಗರ ನಿಷ್ಠೆಯನ್ನೆಲ್ಲಾ ಧರ್ಮದ ಹೆಸರಲ್ಲಿ ಪುಟಕ್ಕಿಟ್ಟು ನೋಡುವುದಕ್ಕೆ ಪ್ರಾಮುಖ್ಯತೆ. ಕನ್ನಡಿಗ ಮುಸಲ್ಮಾನ, ಕನ್ನಡಿಗ ಕ್ರೈಸ್ತನಿಗಿಂತಾ ನಮಗೆ ಸಂಬಂಧವೇ ಇರದ ಹೊರನಾಡಿನ ಹಿಂದುವಿಗೆ ಪ್ರಾಮುಖ್ಯತೆ!

ಸಂಘ ನೇರವಾಗಿ ರಾಜಕೀಯಕ್ಕಿಳಿಯಲಿ !

ಇದೇ ಸಂಘದವರಿಗೆ ಬಿಜೆಪಿಯೆನ್ನುವ ಇನ್ನೊಂದು ಮುಖವಿದೆ. ಬಿಜೆಪಿಯೂ ಆರೆಸ್ಸೆಸ್ಸೂ ಒಂದೇ ಎನ್ನುವುದಕ್ಕೆ ಗಣವೇಶ ಧರಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳ ಫೋಟೋಗಳಿರುವುದೇ ಸಾಕು! ಈ ಮುಖವಾಡ ಧರಿಸಿದ ಪಕ್ಷದ ಸಿದ್ಧಾಂತ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತಾಡುತ್ತದೆ, ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಉಳಿವಿನ ಬಗ್ಗೆ ಮಾತಾಡುತ್ತದೆ. ಮೀಸಲಾತಿಯ ಪರವಾಗಿ ಮಾತಾಡುತ್ತದೆ, ಚುನಾವಣೆ ಹತ್ತಿರ ಬಂದಾಗ, ಮುಸ್ಲಿಂರ ಮತಕ್ಕಾಗಿ ‘ಗೆದ್ದ ಮೇಲೆ ಮುಸ್ಲಿಂವೊಬ್ಬರನ್ನು ಮಂತ್ರಿ ಮಾಡುತ್ತೇನೆ’ ಎನ್ನುತ್ತಾ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗುತ್ತದೆ… ಸಂಘವೇನೂ ಕಮ್ಮಿಯಿಲ್ಲ, ಬಿಜೆಪಿ ನಾಯಕರುಗಳಿಗೆ ಶಿಸ್ತಿನ ಪಾಠ ಹೇಳುತ್ತೆ, ಕೇಶವಶಿಲ್ಪಕ್ಕೆ ಕರೆಸಿ ಬುದ್ಧಿ ಹೇಳುತ್ತೆ. ತೆಪ್ಪಗಿರಲು ಆಜ್ಞೆ ಮಾಡುತ್ತದೆ…ವಿಪರ್ಯಾಸವೆಂದರೆ ಹೀಗೆ ಕೈಗೊಂಬೆಯಂತೆ ಆಡಾಡಿಸುತ್ತಲೇ ‘ಸೋನಿಯಾ ಗಾಂಧಿಯ ಕೈಗೊಂಬೆ ಕಾಂಗ್ರೆಸ್’ ಎನ್ನುವ ಆರೋಪವನ್ನೂ ಮಾಡುತ್ತದೆ. ಸಂಘ ಹೀಗೆ ಬಿಜೆಪಿಯ ಮೂಲಕ ತನ್ನ ಸಿದ್ಧಾಂತಗಳಿಗೆ ವಿರುದ್ಧವಾದುದನ್ನು ಹೇಳಿಸಿ, ಸೀಟು ಗೆಲ್ಲಿಸಿ, ಸರ್ಕಾರ ಮಾಡಿಸಿ, ಆಮೇಲೆ ತಮ್ಮ ಸಿದ್ಧಾಂತದ ಜಾರಿ ಮಾಡುವ ಮೋಸಗಾರಿಕೆಗಿಂತಾ ನೇರವಾಗಿ ತಾನೇ, ತನ್ನ ಸಿದ್ಧಾಂತಗಳನ್ನು ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ರಾಜಕಾರಣಕ್ಕೆ ಇಳಿಯುವುದು ಪ್ರಾಮಾಣಿಕತೆಯೆನ್ನಿಸುತ್ತದೆ !

ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಹಿಂದೂ ಧರ್ಮ !
ಮೂಲ: ಗೈಲ್ ಓಮ್ವೆಟ್
ಸಂಗ್ರಹಾನುವಾದ: ನಾ.ದಿವಾಕರ


ಡಾ.ಬಿ.ಆರ್. ಅಂಬೇಡ್ಕರ್
ಸಾಮಾನ್ಯವಾಗಿ ಅಂಬೇಡ್ಕರ್ ಹೆಸರಿತ್ತಿದರೆ ಮೂಗು ಮುರಿಯುವ ಮೇಲ್ಜಾತಿಯವರ ಮನದಾಳದಲ್ಲಿ ಅಂಬೇಡ್ಕರ್ ಬಗ್ಗೆ ಇರುವ ದ್ವೇಷ ವೈಷಮ್ಯಗಳಿಗೆ ಮೀಸಲಾತಿ ನೀತಿಯೂ ಒಂದು ಕಾರಣ. ಮೀಸಲಾತಿ ನೀತಿಯ ಪರಿಣಾಮವಾಗಿ ನಮಗೆ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ದೊರೆಯುತ್ತಿಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ನಮಗಿಂತಲೂ ಕಡಿಮೆ ಆಂಕ ಗಳಿಸಿದವರಿಗೂ ಸೀಟು ದೊರೆಯುತ್ತದೆ ಎಂದು ವಾದಿಸುವ ಪ್ರತಿಭೆಯ ಸಮರ್ಥಕರಲ್ಲಿ ಮೀಸಲಾತಿ ಒಂದು ಸಾಮಾಜಿಕ ತೊಡಕು. ಈ ಆಕ್ರೋಶಗಳು ಮೇಲ್ನೋಟಕ್ಕೆ ಕಾಣದಿದ್ದರೂ ಆಂತರ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆದವರ ಬಗ್ಗೆ ಇರುವ ಅಸಡ್ಡೆ ಅನುಭವಿಸಿದವರಿಗೆ ಮಾತ್ರ ವೇದ್ಯವಾಗುತ್ತದೆ. ಮೇಲ್ಜಾತಿಯವರ, ವಿಶೇಷವಾಗಿ ದ್ವಿಜ ಸಂಪ್ರದಾಯದವರ ಮನದಾಳದಲ್ಲಿನ ಈ ಮನೋಭಾವದ ಹಿಂದೆಯೇ ಅಂಬೇಡ್ಕರ್ ಬ್ರಾಹ್ಮಣ ವಿರೋಧಿ ಎಂಬ ಭಾವನೆ ಸುಪ್ತವಾಗಿರುವುದು ಸ್ಪಷ್ಟ. ಈ ತಪ್ಪುಕಲ್ಪನೆಯನ್ನು ಹೋಗಲಾಡಿಸಬೇಕಾದ ಅನಿವಾರ್ಯತೆ ಇದೆಯೇ ಎನ್ನುವುದಕ್ಕಿಂತಲೂ, ತಪ್ಪು ಕಲ್ಪನೆಗಳಿಂದ ಉದ್ಭವಿಸುವ ಸಾಮಾಜಿಕ ಸಂಘರ್ಷಗಳನ್ನು ತಡೆಗಟ್ಟುವ ದೃಷ್ಟಿಯಿಂದ ವಾಸ್ತವವನ್ನು ಗ್ರಹಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಈ ಲೇಖನ.


ತಮ್ಮ ಯೌವ್ವನಾವಸ್ಥೆಯಲ್ಲೇ ಅಂಬೇಡ್ಕರ್ ಅವರು ತಮ್ಮ ಸಮುದಾಯದ ನಾಯಕರಾಗಿ ಹೊರಹೊಮ್ಮುವ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಅವರ ತಂದೆಯೂ ಮಗನನ್ನು ಸಮಾಜ ಸೇವೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಿದ್ದರು. ತನ್ನ ವ್ಯಾಸಂಗದೊಂದಿಗೇ ಸಮಾಜಸೇವೆಯನ್ನೂ ಮುಂದುವರೆಸುವುದಾಗಿ ಅಂಬೇಡ್ಕರ್ ಬರೋಡದ ಮಹಾರಾಜರಿಗೆ ಆಶ್ವಾಸನೆ ನೀಡಿದ್ದರು. ಒಂದು ಅಸ್ಪೃಶ್ಯ ಸಮುದಾಯದಲ್ಲಿ ಜನಿಸಿದ ವ್ಯಕ್ತಿ ಅತ್ಯುನ್ನತ ಮಟ್ಟದ ವ್ಯಾಸಂಗವನ್ನು ಲಂಡನ್ನಿನಲ್ಲಿ ಮುಗಿಸಿ ೧೯೨೦ರಲ್ಲಿ ಭಾರತಕ್ಕೆ ಹಿಂದಿರುಗಿದಾಗ , ಜೀವನೋಪಾಯಕ್ಕಾಗಿ ಸಂಪಾದಿಸುವುದರೊಡನೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವುದೂ ಅಂಬೇಡ್ಕರ್‌ಗೆ ಅನಿವಾರ್ಯವಾಗಿತ್ತು.


ಈ ಕಾಲಘಟ್ಟದಲ್ಲಿ ಭಾರತೀಯ ಸಮಾಜ ಪ್ರಕ್ಷುಬ್ಧತೆಯಿಂದ ಕೂಡಿತ್ತು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ರಾಷ್ಟ್ರೀಯವಾದಿ ಚಳುವಳಿ ತೀವ್ರತೆ ಪಡೆದುಕೊಂಡಿತ್ತು. ಸೋವಿಯತ್ ಸಂಘದಲ್ಲಿ ನಡೆದ ಶ್ರಮಿಕ ವರ್ಗಗಳ ಕ್ರಾಂತಿಯಿಂದ ಪ್ರೇರೇಪಿತವಾದ ಕಾರ್ಮಿಕ ಚಳುವಳಿ ಚಿಗುರೊಡೆಯುತ್ತಿತ್ತು. ಇದೇ ವೇಳೆಯಲ್ಲಿ ಹೆಚ್ಚು ಸಂಘಟಿತವಲ್ಲದ, ಸಿದ್ಧಾಂತ ಮತ್ತು ನಾಯಕತ್ವಗಳಿಗಾಗಿ ಹುಡುಕಾಡುತ್ತಿದ್ದ ಬಲಿಷ್ಟವಾದ ಜಾತಿ ದಮನಿತರ ಚಳುವಳಿಯೂ ವ್ಯಾಪಕವಾಗಿ ಹರಡಿತ್ತು. ಮಾರ್ಕ್ಸ್‌ವಾದಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಬಲ ಚಳುವಳಿಗಳ ಬೆನ್ನಲ್ಲೇ ದಲಿತರು ಮತ್ತು ಬ್ರಾಹ್ಮಣೇತರರ ಚಳುವಳಿಗಳು ತೀವ್ರತೆ ಪಡೆದುಕೊಂಡು ರಾಜಕೀಯ ರಂಗ ಪ್ರವೇಶಿಸಿದ್ದವು. ಹತ್ತೊಂಬತ್ತನೆಯ ಶತಮಾನದಿಂದಲೇ ದೇಶಾದ್ಯಂತ ದಲಿತ ಚಳುವಳಿಗಳು ಪ್ರಾರಂಭವಾಗಿದ್ದವು. ಶಿಕ್ಷಣಕ್ಕಾಗಿ, ವ್ಯವಸಾಯ ಭೂಮಿಗಾಗಿ, ದೇವಾಲಯ ಪ್ರವೇಶಕ್ಕಾಗಿ, ಸಾರ್ವಜನಿಕ ಸೌಲಭ್ಯಗಳ ಮುಕ್ತ ಉಪಯೋಗಕ್ಕಾಗಿ ಹೋರಾಟಗಳು ರೂಪುಗೊಂಡಿದ್ದವು. ಅನೇಕ ಸಮಾಜ ಸುಧಾರಣಾ ಸಂಸ್ಥೆಗಳು, ಕ್ರೈಸ್ತ ಮಿಷನರಿಗಳು ಈ ಹೋರಾಟಗಳಿಗೆ ನೈತಿಕ ಬೆಂಬಲ ನೀಡಿದ್ದವು. ೧೮೭೫ರಲ್ಲಿ ಸ್ಥಾಪಿತವಾದ ಮಹಾತ್ಮ ಜ್ಯೋತಿ ಬಾ ಫುಲೆಯವರ ಸತ್ಯ ಶೋಧಕ ಸಮಾಜ್ ಮಹಾರಾಷ್ಟ್ರದ ದಲಿತರಿಗೆ ಬೆಂಗಾವಲಾಗಿತ್ತು. ಮಹರ್ ಸಮುದಾಯದ ಜನತೆ ಸೇನೆಯಲ್ಲಿ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿ ಹೋರಾಟ ಕೈಗೊಂಡಿದ್ದರು. ಅಲ್ಪ ಸ್ವಲ್ಪ ಆದಾಯವನ್ನು ಹೊಂದಿದ್ದ ಮಹರ್ ಸಮುದಾಯ ಮಹಾರಾಷ್ಟ್ರದ ಪ್ರಥಮ ಸಂಘಟಿತ ಶೋಷಿತ ಸಮುದಾಯವಾಗಿತ್ತು. ಸಾರ್ವಜನಿಕ ಕೆರೆಗಳ ನೀರನ್ನು ಉಪಯೋಗಿಸಲು ಅನೇಕ ಹೋರಾಟಗಳು ನಡೆದಿದ್ದವು.


೧೯೧೭-೧೮ರ ನಂತರದಲ್ಲಿ ರಾಷ್ಟ್ರವಾದಿ ಚಳುವಳಿಯೂ ಅಸ್ಪೃಶ್ಯತೆಯ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲಾರಂಭಿಸಿತ್ತು. ೧೯೧೬ರ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಪ್ರಥಮ ಬಾರಿಗೆ ಅಸ್ಪೃಶ್ಯತೆಯ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಬಲವಾದ ಸಮಾಜ ಸುಧಾರಕ ಸಂಘಟನೆ ಹಿಂದುಳಿದ ವರ್ಗಗಳ ಮಂಡಳಿ ಮೇಲ್ಜಾತಿಯ ವಿಥಲ್ ರಾಮ್‌ಜಿ ಶಿಂಧೆಯವರ ನೇತೃತ್ವದಲ್ಲಿ ಹಿಂದೂ ಧರ್ಮದ ಸುಧಾರಣೆಗಾಗಿ ಶ್ರಮಿಸುತ್ತಿತ್ತು. ಮಹಾರಾಷ್ಟ್ರದ ಬ್ರಾಹ್ಮಣೇತರ ಪಕ್ಷದ ಕಟ್ಟಾ ವಿರೋಧಿಯಾಗಿದ್ದ ಶಿಂಧೆ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಒಳಗೊಳ್ಳುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಿದ್ದರು. ಮೇಲ್ಜಾತಿಯವರ ಸುಧಾರಣಾ ಯತ್ನಗಳು ಅಸ್ಪೃಶ್ಯತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಮೂರು ಸಂದರ್ಭಗಳಲ್ಲಿ ವ್ಯಕ್ತವಾಗಿದ್ದವು. ೧೯೧೭-೧೮ರ ಅವಧಿಯಲ್ಲಿ ನಡೆದ ಮೂರು ಅಸ್ಪೃಶ್ಯತಾ ನಿವಾರಣಾ ಸಮಾವೇಶಗಳಲ್ಲಿ ಅಂಬೇಡ್ಕರ್ ಅವರನ್ನು ಸನ್ಮಾನಿಸುವ ಯೋಚನೆ ಫಲಪ್ರದವಾಗಲಿಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ನೀಡಿದ್ದ ಸುಧಾರಣಾ ಶಿಫಾರಸ್ಸುಗಳನ್ನು ಇಲ್ಲಿ ಬೆಂಬಲಿಸಲಾಗಿತ್ತು. ಎರಡನೇ ಸಮಾವೇಶದಲ್ಲಿ ದಲಿತರ ಮತಾಂತರವನ್ನು ವಿರೋಧಿಸಲಾಗಿತ್ತು. ಮೂರನೆಯ ಸಮಾವೇಶದಲ್ಲಿ ಗಾಂಧೀಜಿಯವರು ಉಪಸ್ಥಿತರಿದ್ದರೂ ಅಸ್ಪೃಶ್ಯ ಸಮುದಾಯಗಳನ್ನು ಪ್ರತಿನಿಧಿಸುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ.


ಏತನ್ಮಧ್ಯೆ ಪ್ರಬಲವಾಗಿ ಬೆಳೆಯುತ್ತಿದ್ದ ಬ್ರಾಹ್ಮಣೇತರ ಚಳುವಳಿಗಳು ಅಸ್ಪೃಶ್ಯರ ಬೆಂಬಲ ಗಳಿಸಿದ್ದವು. ಸತ್ಯ ಶೋಧಕ ಸಮಾಜ ಬಹುತೇಕ ಗ್ರಾಮಗಳಲ್ಲಿ ಕಾರ್ಯನಿರತವಾಗಿತ್ತು. ಬ್ರಾಹ್ಮಣರ ಅಧಿಪತ್ಯ ಮತ್ತು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ ಈ ಸಂಘಟನೆ ಶೂದ್ರರು ಮತ್ತು ಅತಿ ಶೂದ್ರರು(ದಲಿತರು) ಭಾರತದ ಮೂಲ ನಿವಾಸಿಗಳೆಂದೂ, ಆರ್ಯರ ಆಗಮನದ ನಂತರ ಗುಲಾಮಗಿರಿಗೆ ಒಳಗಾದರೆಂದೂ ಪ್ರತಿಪಾದಿಸಿತ್ತು. ಈ ಪ್ರತಿಪಾದನೆ ಬ್ರಾಹ್ಮಣೇತರ ಚಳುವಳಿಗಳ ಮೂಲಮಂತ್ರವಾಗಿ ಪರಿಣಮಿಸಿ, ಮದ್ರಾಸಿನಲ್ಲಿ ಪ್ರಬಲವಾಗಿದ್ದ ಚಳುವಳಿಗಳಿಗೂ ವೇದಿಕೆಯನ್ನು ಒದಗಿಸಿತ್ತು. ೧೯೧೭ರ ವೇಳೆಗೆ ಬ್ರಾಹ್ಮಣೇತರ ಚಳುವಳಿಗಳು ರಾಜಕೀಯ ಪ್ರವೇಶ ಮಾಡಿದ್ದವು. ಕೊಲ್ಹಾಪುರದ ಮಹಾರಾಜ ಶಾಹು ಛತ್ರಪತಿ ಕ್ಷತ್ರಿಯನೆಂಬ ಅಹಮಿಕೆಯಿಂದ ಆಳಿದರೂ, ಬ್ರಾಹ್ಮಣ್ಯದ ವಿರೋಧಿಯಾಗಿದ್ದುದು, ಮಹಾರಾಷ್ಟ್ರದಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಪೂರಕವಾಗಿತ್ತು. ಅನೇಕ ಬ್ರಾಹ್ಮಣೇತರರು ಆಡಳಿತ ಕಛೇರಿಗಳಲ್ಲಿ ನೇಮಕಗೊಂಡರು. ಇದೇ ಅವಧಿಯಲ್ಲೇ ಸರ್ಕಾರಿ ನೌಕರಿಯಲ್ಲಿ ಮೀಸಲಾತಿಯೂ ಜಾರಿಗೆ ಬಂದಿತ್ತು. ಶಾಹು ಮಹಾರಾಜರು ಅಸ್ಪೃಶ್ಯರಿಗೆ ಪ್ರತ್ಯೇಕ ಹಾಸ್ಟೆಲುಗಳನ್ನು ನಿರ್ಮಿಸಿದ್ದೇ ಅಲ್ಲದೆ ಸಣ್ಣ ಚಹಾ ಮಳಿಗೆಗಳನ್ನು ಸ್ಥಾಪಿಸಲೂ ನೆರವು ನೀಡಿದ್ದರು.


ಬಹುತೇಕ ಬ್ರಾಹ್ಮಣರ ನೇತೃತ್ವದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ನಡೆಯುತ್ತಿದ್ದ ಚಳುವಳಿಗಳು ಯುವಕ ಅಂಬೇಡ್ಕರ್ ಅವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಶಿಂಧೆ ಮುಂತಾದ ನಾಯಕರು ತಮ್ಮ ಅಸ್ಪೃಶ್ಯತಾ ವಿರೋಧಿ ಚಳುವಳಿಯಲ್ಲಿ ಅಸ್ಪೃಶ್ಯರಿಗೆ ಯಾವುದೇ ಅವಕಾಶ ನೀಡದಿದ್ದುದು ಮತ್ತು ಅಸ್ಪೃಶ್ಯರೊಡನೆ ಸಹಭೋಜನದಲ್ಲಿ ಪಾಲ್ಗೊಳ್ಳದಿದ್ದುದು ಅಂಬೇಡ್ಕರ್ ಅವರನ್ನು ಶಾಹು ಮಹರಾಜರ ಕಡೆಗೆ ಸೆಳೆದಿತ್ತು. ೧೯೨೦ರಲ್ಲಿ ಪ್ರಥಮ ಬಾರಿಗೆ ಶಾಹು ಮಹಾರಾಜರನ್ನು ಭೇಟಿಯಾದ ಅಂಬೇಡ್ಕರ್, ಅವರು ಅಸ್ಪೃಶ್ಯರೊಡನೆ ಬೆರೆಯುತ್ತಿದ್ದುದನ್ನು ಕಂಡು ಅವರಿಂದ ಪ್ರಭಾವಿತರಾಗಿದ್ದರು. ೧೯೨೦ರ ಮಾನ್‌ಗಾಂವ್ ಸಮಾವೇಶದಲ್ಲಿ ಅಂಬೇಡ್ಕರ್ ಅವರನ್ನು ಸತ್ಕರಿಸಿದ ಶಾಹು ಮಹಾರಾಜ್ ಅಂಬೇಡ್ಕರ್ ಅವರಿಗೆ ಧನಸಹಾಯ ಮಾಡಿದ್ದೂ ಅಲ್ಲದೆ ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೂ ಕಳುಹಿಸಿದ್ದರು. ತನ್ನನ್ನು ಸಮಾನ ಮನೋಭಾವದಿಂದ ಕಾಣುತ್ತಿದ್ದ ಶಾಹು ಅವರೊಡನೆ ಅಂಬೇಡ್ಕರ್ ಮುಕ್ತವಾಗಿ ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯವಾದದ ಬಗ್ಗೆ ಚರ್ಚಿಸುತ್ತಿದ್ದರು. ಅಂಬೇಡ್ಕರ್ ಮತ್ತು ಶಾಹು ಮಹಾರಾಜ್ ಎದುರಿಸುತ್ತಿದ್ದ ಅಪಮಾನಗಳು ವಿಭಿನ್ನ ಲಕ್ಷಣಗಳನ್ನು ಹೊಂದಿದ್ದರೂ, ಈರ್ವರಲ್ಲೂ ಸಮಾನ ಮನೋಭಾವ ವ್ಯಕ್ತವಾಗುತ್ತಿತ್ತು. ಹಾಗಾಗಿಯೇ ತಮ್ಮ ಪ್ರಾರಂಭಿಕ ದಿನಗಳಲ್ಲಿ ಬ್ರಾಹ್ಮಣರಿಂದ ಹೆಚ್ಚಿನ ಬೆಂಬಲ ಗಳಿಸಿದರೂ, ಅಂಬೇಡ್ಕರ್ ಅವರಿಗೆ ಬ್ರಾಹ್ಮಣೇತರರಲ್ಲಿ ಹೆಚ್ಚಿನ ಸಾಂಗತ್ಯ ಗೋಚರಿಸುತ್ತಿತ್ತು.


೧೯೨೩ರಲ್ಲಿ ಲಂಡನ್‌ನಿಂದ ಹಿಂದಿರುಗಿದ ಬಳಿಕ ಅಂಬೇಡ್ಕರ್ ಅವರ ಕಾರ್ಯವೈಖರಿಯೇ ಬದಲಾಗಿತ್ತು. ಅವರ ಮನೆಯ ಮುಂದೆ ಜಮಾಯಿಸುತ್ತಿದ್ದ ಸಮುದಾಯದ ಜತೆ ಕಾರ್ಯ ಚಟುವಟಿಕೆಗಳಿಗಾಗಿ ಚಡಪಡಿಸುತ್ತಿದ್ದರು. ಈ ಸಂದರ್ಭದಲ್ಲೇ ಅಂಬೇಡ್ಕರ್ ೧೯೨೪ರ ಮಾರ್ಚಿ ೯ರಂದು ಬಹಿಷ್ಕೃತ ಹಿತಕಾರಿಣಿ ಸಭಾ ಎಂಬ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯಲ್ಲಿ ಚಮನ್‌ಲಾಲ್ ಸೆಟಲ್‌ವಾಡ್, ಕೆ.ಎಫ್. ನಾರಿಮನ್ ಮುಂತಾದವರು ಸಕ್ರಿಯರಾಗಿದ್ದರು. ಶಿಕ್ಷಣ, ಆರ್ಥಿಕ ಪ್ರಗತಿ, ದಮನಿತ ಜನಸಮುದಾಯಗಳ ಹಿತಾಸಕ್ತಿಗಳ ರಕ್ಷಣೆ ಈ ಸಭಾದ ಮುಖ್ಯ ಧ್ಯೇಯಗಳಾಗಿದ್ದವು. ಈ ಸಂಘಟನೆಯ ಮೂಲಕ ಸಮೂಹ ನಾಯಕರಾಗಿ ಬೆಳೆದ ಅಂಬೇಡ್ಕರ್ ಉತ್ತಮ ವಾಗ್ಮಿಯಾಗಿಯೂ ಹೊರಹೊಮ್ಮಿದ್ದರು. ಅಧಿಕಾರಶಾಹಿಯಲ್ಲಿ ಅಧಿಪತ್ಯ ಸಾಧಿಸಿದ್ದ ಬ್ರಾಹ್ಮಣ ಸಮುದಾಯವನ್ನು ತೀವ್ರವಾಗಿ ಖಂಡಿಸುತ್ತಲೇ, ಅಸ್ಪೃಶ್ಯರಿಗೆ ಮತ್ತು ಶೂದ್ರರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಅಂಬೇಡ್ಕರ್ ಸಮರ್ಥಿಸುತ್ತಿದ್ದರು. ಇದೇ ವೇಳೆಗೆ ಶಾಸನ ಸಮಿತಿಯಲ್ಲೂ ಅಸ್ಪೃಶ್ಯರ ಪರವಾದ ದನಿ ಮೊಳಗಲಾರಂಭಿಸಿತ್ತು. ಸಾರ್ವಜನಿಕ ಸ್ಥಳಗಳನ್ನು ಅಸ್ಪೃಶ್ಯರಿಗೆ ಮುಕ್ತವಾಗಿಸಲು ಶಾಸನವನ್ನು ಹೊರಡಿಸಲಾಯಿತು. ೧೯೨೬ರಲ್ಲಿ ಬಾಂಬೆ ಶಾಸನ ಸಮಿತಿಗೆ ನೇಮಿಸಲ್ಪಟ್ಟ ಅಂಬೇಡ್ಕರ್ ಸಮಿತಿಯ ಅನೇಕ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ಅಸ್ಪೃಶ್ಯರ ಸಮಸ್ಯೆಗಳನ್ನು ಮುಂದಿಡುತ್ತಿದ್ದರು.


ಇದೇ ಸಂದರ್ಭದಲ್ಲಿ ಅಸ್ಪೃಶ್ಯರ ಮಹತ್ತರ ಹೋರಾಟವೊಂದು ರೂಪುಗೊಳ್ಳುತ್ತಿತ್ತು. ಮಾನವನ ಅತ್ಯಮೂಲ್ಯ ಅವಶ್ಯಕತೆಯಾದ ನೀರು ಅಸ್ಪೃಶ್ಯರಿಗೆ ಅಲಭ್ಯವಾಗಿತ್ತು. ಕಾರಣ ಮೇಲ್ಜಾತಿಯವರು ಅಸ್ಪೃಶ್ಯರನ್ನು ಅಶುದ್ಧರೆಂದು ಪರಿಗಣಿಸುತ್ತಿದ್ದರು. ಕೊಂಕಣ ಪ್ರಾಂತ್ಯದ ಮಹಾಡ್ ಎಂಬ ಸಣ್ಣ ಪಟ್ಟಣದಲ್ಲಿ ಪುರಸಭೆ ಸಾರ್ವಜನಿಕ ಕೆರೆಯನ್ನು ಅಸ್ಪೃಶ್ಯರಿಗೂ ಮುಕ್ತವಾಗಿಸಿ ಆದೇಶ ಹೊರಡಿಸಿತ್ತು. ಈ ಪಟ್ಟಣದಲ್ಲಿ ಮುಂಬೈನಿಂದ ವಲಸೆ ಬರುವ ದಲಿತರು, ಮೇಲ್ಜಾತಿಗಳವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂಬೇಡ್ಕರ್ ಅವರಿಗೆ ದಲಿತರು ಮಾತ್ರವಲ್ಲದೆ ಪ್ರಗತಿಪರ ಮೇಲ್ಜಾತಿಯವರ ಬೆಂಬಲವೂ ಇತ್ತು. ಇವರಲ್ಲಿ ಅನಂತರಾವ್ ಚಿತ್ರೆ, ಸುರೇಂದ್ರನಾಥ್ ಟಿಪ್ಸೆ, ಸಹಸ್ರಬುದ್ಧಿ , ಎನ್.ಎಂ.ಜೋಷಿ ಪ್ರಮುಖರಾಗಿದ್ದರು.


೧೯೨೭ರ ಮಾರ್ಚಿ ೧೯-೨೦ರಂದು ಬಹಿಷ್ಕೃತ ಹಿತರಕ್ಷಣಾ ಸಭೆಯು ಮಹಾಡ್‌ನಲ್ಲಿ ಜಿಲ್ಲಾ ಸಮಾವೇಶ ಏರ್ಪಡಿಸಿತ್ತು. ಸಮಾವೇಶದ ಎರಡನೇ ದಿನ ಚಿತ್ರೆಯವರ ಸೂಚನೆಯ ಮೇರೆಗೆ ಸಾರ್ವಜನಿಕ ಕೆರೆಯಲ್ಲಿ ಅಸ್ಪೃಶ್ಯರು ನೀರು ಕುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ೧೫೦೦ಕ್ಕೂ ಹೆಚ್ಚು ಜನ ನೀರು ಕುಡಿಯಲಾರಂಭಿಸಿದರು. ಈ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆಯೇ ಮೇಲ್ಜಾತಿ ಹಿಂದೂಗಳು ಎಲ್ಲೆಂದರಲ್ಲಿ ಜಮಾಯಿಸಲಾರಂಭಿಸಿದರು. ದಲಿತರು ದೇವಾಲಯಕ್ಕೂ ಪ್ರವೇಶಿಸುತ್ತಾರೆಂಬ ಭೀತಿಯಿಂದ ಮೇಲ್ಜಾತಿ ಹಿಂದೂಗಳು ಅಸ್ಪೃಶ್ಯರ ಮೇಲೆ ಆಕ್ರಮಣ ಆರಂಭಿಸಿದರು. ಆಕ್ರಮಣದಲ್ಲಿ ಅನೇಕ ಅಸ್ಪೃಶ್ಯರು ಏಟು ತಿನ್ನಬೇಕಾಯಿತು. ನಂತರ ಬ್ರಾಹ್ಮಣರು ಕೆರೆಯ ಶುದ್ಧೀಕರಣ ಕ್ರಿಯೆಯನ್ನು ಏರ್ಪಡಿಸಿದ್ದರು.


ಈ ಪ್ರಕರಣ ಮತ್ತು ಆಕ್ರಮಣ ಇಡೀ ಮಹಾರಾಷ್ಟ್ರದಲ್ಲಿ ಸಂಚಲನ ಉಂಟುಮಾಡಿತ್ತು. ದಲಿತ ಸಮುದಾಯದ ಹೋರಾಟಗಳಿಗೆ ಮಹಾಡ್ ಒಂದು ಲಾಂಛನ ಕೇಂದ್ರವಾಗಿ ಪರಿಣಮಿಸಿತು. ದೇಶಾದ್ಯಂತ ದಲಿತ ಸಮುದಾಯಗಳಿಗೆ ಈ ಹೋರಾಟ ಹೊಸ ಹುರುಪು ತಂದಿತ್ತಿತು. ೧೯೨೭ರ ಡಿಸೆಂಬರ್‌ನಲ್ಲಿ ಅಂಬೇಡ್ಕರ್ ನೀರಿನ ಹಕ್ಕಿಗಾಗಿ ಸತ್ಯಾಗ್ರಹ ಸಮಾವೇಶ ಪ್ರಾರಂಭಿಸಿದರು. ಇದೇ ಸಮಯದಲ್ಲಿ ಪ್ರಾರಂಭವಾದ ಬಹಿಷ್ಕೃತ ಭಾರತ್ ಪತ್ರಿಕೆ ಅಸ್ಪೃಶ್ಯರ ಅನೇಕ ಸಮಸ್ಯೆಗಳನ್ನು ಪ್ರಕಟಿಸಲಾರಂಭಿಸಿತು. ಆರ್ಯ ಸಮಾಜದ ಶುದ್ಧೀಕರಣ ಚಳುವಳಿಯನ್ನು ಈ ಪತ್ರಿಕೆಯ ಮೂಲಕ ಖಂಡಿಸಲಾಗುತ್ತಿತ್ತು. ಪ್ರಾರಂಭದಲ್ಲಿ ಜಾತಿ ರಹಿತ ಆರ್ಯ ಸಮಾಜದ ಸ್ಥಾಪನೆಗಾಗಿ ನಡೆಯುತ್ತಿದ್ದ ಶುದ್ಧೀಕರಣ ಕ್ರಿಯೆ ಕ್ರಮೇಣ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಯತ್ನವಾಗಿ ಮಾರ್ಪಟ್ಟಿದ್ದು ತೀವ್ರ ಟೀಕೆಗೊಳಗಾಯಿತು. ಇದೇ ಸಂದರ್ಭದಲ್ಲಿ ಕೆಲವು ನಾಯಕರು ಸತ್ಯಾಗ್ರಹ ಸಮಾವೇಶದಲ್ಲಿ ಯಾವುದೇ ಬ್ರಾಹ್ಮಣರಿಗೆ ಅವಕಾಶ ನೀಡಕೂಡದು ಎಂದು ಆಗ್ರಹಿಸಿದರು. ಆದರೆ ಈ ವಾದವನ್ನು ತಿರಸ್ಕರಿಸಿದ ಅಂಬೇಡ್ಕರ್ ನಮ್ಮ ಚಳುವಳಿಯು ಬ್ರಾಹ್ಮಣ್ಯದ ವಿರುದ್ಧ ಮತ್ತು ಬ್ರಾಹ್ಮಣ ಧರ್ಮದ ವಿರುದ್ಧವೇ ಹೊರತು, ಬ್ರಾಹ್ಮಣರ ವಿರುದ್ಧವಲ್ಲ ಎಂದು ಹೇಳಿದ್ದರು. ನಂತರದಲ್ಲಿ ಮತಾಂತರದ ಪ್ರಶ್ನೆ ಉದ್ಭವಿಸಿದಾಗ, ಇಸ್ಲಾಂಗೆ ಮತಾಂತರ ಹೊಂದುವ ಸಲಹೆಗಳೂ ಕೇಳಿಬಂದವು. ಆದರೆ ಅಂಬೇಡ್ಕರ್ ಅವರು ಮೊದಲು ನಾವು ಹಿಂದೂ ಧರ್ಮಕ್ಕೆ ಸೇರಿದವರೇ ಇಲ್ಲವೇ ಎಂದು ನಿರ್ಧರಿಸೋಣ ಎಂದು ಹೇಳುವ ಮೂಲಕ ಇಡೀ ಚರ್ಚೆಗೆ ಹೊಸ ಆಯಾಮವನ್ನು ಒದಗಿಸಿದ್ದರು.


೧೯೨೭ರ ಡಿಸೆಂಬರ್ ೨೩ರಂದು ಸತ್ಯಾಗ್ರಹ ಸಮಾವೇಶದ ವೇಳೆಗೆ ಮಹಾಡ್‌ನಲ್ಲಿ ೧೫ ಸಾವಿರಕ್ಕೂ ಹೆಚ್ಚು ದಲಿತರು ಸೇರಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರು ಕೆರೆಯನ್ನು ನೀರನ್ನು ಬಳಸದಂತೆ ನಿಷೇದಾಜ್ಞೆ ಹೊರಡಿಸಿದ್ದರು. ಈ ಆಜ್ಞೆಯನ್ನು ಪಾಲಿಸಿದ ಅಂಬೇಡ್ಕರ್ ವಿಚಲಿತರಾಗದೆ, ಮತ್ತೊಂದು ವಿಶಿಷ್ಟ ಹೋರಾಟವನ್ನು ಹಮ್ಮಿಕೊಂಡಿದ್ದರು. ಪುರೋಹಿತಶಾಹಿ ಹಿಂದೂ ಧರ್ಮದ ಪವಿತ್ರ ಶಾಸನ ಗ್ರಂಥವಾದ ಮನುಸ್ಮೃತಿಯನ್ನು ದಹಿಸುವ ಕಾರ್ಯಕ್ರಮವನ್ನು ಅಂಬೇಡ್ಕರ್ ಏರ್ಪಡಿಸಿದರು. ಈ ನಿರ್ಣಯವನ್ನು ಮಂಡಿಸಿದವರು ಸಹಸ್ರಬುದ್ಧಿ ಎಂಬ ಬ್ರಾಹ್ಮಣರಾದರೆ, ಅನುಮೋದಿಸಿದವರು ಚಂಬಾರರಾದ ರಾಜಭೋಜ್ ಅವರಾಗಿದ್ದರು. ಸಮಾವೇಶದ ಪ್ರಥಮ ದಿನದ ರಾತ್ರಿ ಮನುಸ್ಮೃತಿಯನ್ನು ದಹಿಸಲಾಗಿತ್ತು. ಮೂರನೆಯ ದಿನ ಆಕ್ರಮಣಶೀಲ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಭಕ್ತಿ ಸಂತರು, ಗಾಂಧೀಜಿ, ಅಗರ್‌ಕರ್ ಮತ್ತು ಶಾಹುಮಹಾರಾಜ್ ಅವರ ಬಗ್ಗೆ ಘೋಷಣೆಗಳನ್ನು ಕೂಗಲಾಯಿತು. ನಂತರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಂಬೇಡ್ಕರ್ ಅಸ್ಪೃಶ್ಯ ಮಹಿಳೆಯರನ್ನು ಕುರಿತು, ಕೆಳಜಾತಿಗಳಂತೆ ಬೆಳ್ಳಿಯ ಒಡವೆಗಳನ್ನು ಧರಿಸುವ ಪವೃತ್ತಿಯನ್ನು ಕೈಬಿಟ್ಟು ತಮ್ಮ ಜಾತಿ ಸಂಕೇತಗಳು ಗೋಚರಿಸದಂತೆ, ಮೇಲ್ಜಾತಿಯವರ ರೀತಿ ಉಡುಪು ಧರಿಸಲು, ಮಕ್ಕಳಿಗೆ ತಪ್ಪದೆ ಶಿಕ್ಷಣ ನೀಡಲು ಕರೆ ನೀಡಿದ್ದರು. ಈ ಹಂತದಿಂದ ಮಹಾಡ್ ಅಂಬೇಡ್ಕರ್ ಅವರ ಹೋರಾಟಗಳ ಕೇಂದ್ರ ಬಿಂದುವಾಯಿತು. ಅಸ್ಪೃಶ್ಯರ ಭಾಗವಹಿಸುವಿಕೆ ಮತ್ತು ಕೆಲವು ಮೇಲ್ಜಾತಿಯವರ ಬೆಂಬಲ ಅಂಬೇಡ್ಕರ್‌ಗೆ ಪ್ರೋತ್ಸಾಹದಾಯಕವಾಗಿತ್ತು.

ಹಿಂದೂ ಧರ್ಮದ ಪವಿತ್ರ ಶಾಸ್ತ್ರದ ವಿರುದ್ಧ ನಡೆದ ಈ ಸಂಘರ್ಷದೊಡನೆಯೇ, ಸಾರ್ವಜನಿಕ ಸ್ಥಳಗಳನ್ನು ಮತ್ತು ಅವಕಾಶಗಳನ್ನು ಬಳಸುವಲ್ಲಿ ದಲಿತರಿಗೆ ಸಮಾನ ಅವಕಾಶಗಳಿಗಾಗಿ ಹೋರಾಟಗಳು ತೀವ್ರವಾಗತೊಡಗಿತು. ೧೯೨೦ರ ದಶಕದಲ್ಲಿ ಅಸ್ಪೃಶ್ಯರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಹೆಚ್ಚಿನ ಪ್ರಜ್ಞೆ ಮೂಡಲಾರಂಭಿಸಿತು. ಗುರುವಾಯೂರಿನಲ್ಲಿ ದೇವಾಲಯದ ಮುಂದೆ ಹಾದು ಹೋಗುವ ರಸ್ತೆಯಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದಲ್ಲಿ ದಲಿತರು ಈ ರಸ್ತೆಯನ್ನು ಹಾದು ಹೋಗುವ ಹಕ್ಕಿಗಾಗಿ ಹೋರಾಟ ನಡೆಸಿದ್ದರು. ಪುಣೆಯ ಪಾರ್ವತಿ ದೇವಸ್ಥಾನ ಮತ್ತು ನಾಸಿಕ್‌ನಲ್ಲಿರುವ ರಾಮ ದೇವಾಲಯದಲ್ಲೂ ದಲಿತರ ಪ್ರವೇಶಕ್ಕಾಗಿ ಹೋರಾಟ ರೂಪುಗೊಂಡಿತು. ಈ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಅಂಬೇಡ್ಕರ್ ಸೆಕ್ಯುಲರ್ ಪ್ರಜಾ ಹಕ್ಕುಗಳಿಗಾಗಿ ಮತ್ತು ಹಿಂದೂ ಧರ್ಮದ ನಿರಾಕರಣೆಗಾಗಿ ವೇದಿಕೆ ಸಿದ್ಧಪಡಿಸುತ್ತಿದ್ದರು. ಈ ಹಂತದಲ್ಲೇ ಅಸ್ಪೃಶ್ಯರನ್ನು ಹಿಂದೂ ಧರ್ಮದಲ್ಲಿ ಸಮೀಕರಿಸುವ ಗಾಂಧೀಜಿಯವರ ಯತ್ನಗಳನ್ನು ಅಂಬೇಡ್ಕರ್ ತೀವ್ರವಾಗಿ ಟೀಕಿಸಲಾರಂಭಿಸಿದರು.

ನಾಸಿಕ್ ಸತ್ಯಾಗ್ರಹದಲ್ಲಿ ಅಂಬೇಡ್ಕರ್ಈ ಹಂತದಲ್ಲಿ ಆರ್ಯರ ಆಗಮನದ ವಾದವನ್ನು ಸಂಪೂರ್ಣವಾಗಿ ಒಪ್ಪದ ಅಂಬೇಡ್ಕರ್ ಹಿಂದೂ ಧರ್ಮವನ್ನೂ ಸಂಪೂರ್ಣವಾಗಿ ಖಂಡಿಸುತ್ತಿರಲಿಲ್ಲ. ಬದಲಾಗಿ ಭಕ್ತಿಪಂಥ, ತುಕಾರಾಂ, ಜ್ಞಾನೇಶ್ವರ್ ಮುಂತಾದ ಸಮಾಜ ಸುಧಾರಕರ ಬಗ್ಗೆ ಗಾಢವಾದ ಅಧ್ಯಯನವನ್ನು ಆರಂಭಿಸಿದ್ದರು. ತಮ್ಮದೇ ಆದ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ಮಂಡಿಸುವ ಧ್ಯೇಯವನ್ನು ಹೊಂದಿದ್ದ ಅಂಬೇಡ್ಕರ್ ತಮ್ಮ ಅಧ್ಯಯನ ಮತ್ತು ಅನುಭವಗಳನ್ನೇ ಆಧಾರವಾಗಿರಿಸಿಕೊಂಡಿದ್ದರು. ತಮ್ಮ ತಂದೆಯವರ ಕಬೀರ್ ಪಂಥದ ಅನುಭವಗಳನ್ನು ಅಭ್ಯಸಿಸುತ್ತ ಕಬೀರ್‌ದಾಸ್ ಅವರ ತೀವ್ರಗಾಮಿತ್ವ ಹೇಗೆ ಬ್ರಾಹ್ಮಣವಾದದ ಚೌಕಟ್ಟಿನಲ್ಲಿ ಸಿಲುಕಿಹೋಗಿತ್ತು ಎಂಬ ಅಂಶವನ್ನೂ ಅಂಬೇಡ್ಕರ್ ಗ್ರಹಿಸಿದ್ದರು. ಅವರ ಮುಂದಿನ ಚಿಂತನಾ ಕ್ರಮವೂ ಇದರಿಂದಲೇ ಪ್ರಭಾವಿತವಾಗಿತ್ತು.


ಮುಂಬೈ ಶಾಸನ ಸಮಿತಿಯಲ್ಲಿ ಅಂಬೇಡ್ಕರ್ ಪ್ರಬಲ ದನಿಯಾಗಿ ಹೊರಹೊಮ್ಮಿದ್ದರು. ಅಸ್ಪೃಶ್ಯರ ಪರವಾದ ಅನೇಕ ಶಾಸನಗಳನ್ನು ಅನುಷ್ಟಾನಗೊಳಿಸುವಲ್ಲಿ ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದರು. ೧೯೨೭ರ ಸೆಪ್ಟೆಂಬರ್‌ನಲ್ಲಿ, ಮೇಲ್ಜಾತಿಯ ಹಿಂದೂಗಳು, ಕ್ರೈಸ್ತರು, ಅಸ್ಪೃಶ್ಯರನ್ನೊಳಗೊಂಡ ಸಮತಾ ಸಮಾಜ್ ಸಂಘವನ್ನು ಸ್ಥಾಪಿಸಿದ ಅಂಬೇಡ್ಕರ್ ಸಹಭೋಜನ ಮತ್ತು ಅಂತರ್ಜಾತಿ ವಿವಾಹಕ್ಕಾಗಿ ಪ್ರಚಾರ ಕೈಗೊಂಡಿದ್ದರು. ಅಂತರ್ಜಾತಿ ವಿವಾಹದ ಕಾರ್ಯಕ್ರಮ ಫಲಪ್ರದವಾಗಲಿಲ್ಲ. ಈ ಹಂತದಲ್ಲಿ ಅಸ್ಪೃಶ್ಯರ ವಿವಾಹದಲ್ಲಿ, ಮನಃಪೂರ್ವಕವಾಗಿ ಅಲ್ಲದಿದ್ದರೂ, ಸಂದರ್ಭಕ್ಕನುಗುಣವಾಗಿ ವೈದಿಕ ಸಂಪ್ರದಾಯಗಳನ್ನು ಅನುಸರಿಸಲೂ ಸೂಚಿಸಿದ್ದರು. ಬಹುಶಃ ಈ ಹಂತದಲ್ಲಿ ಅಂಬೇಡ್ಕರ್ ಹಿಂದೂ ಧರ್ಮದ ಎಲ್ಲ ಸ್ವರೂಪಗಳನ್ನು ವಿರೋಧಿಸುತ್ತಿರಲಿಲ್ಲ ಎನಿಸುತ್ತದೆ.


ನಂತರದ ದಿನಗಳಲ್ಲಿ ಅಂಬೇಡ್ಕರ್ ಅವರು ಕೈಗೊಂಡ ಹೋರಾಟಗಳು ಹಿಂದೂ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ನಿಟ್ಟಿನಲ್ಲಿ ಸಾಗಿದ್ದು ಈಗ ಇತಿಹಾಸ. ಆದರೆ ಜಾತಿವ್ಯವಸ್ಥೆಯ ವಿರುದ್ಧದ ತಮ್ಮ ಹೋರಾಟದಲ್ಲಿ ಅಂಬೇಡ್ಕರ್ ಅವರಿಗೆ ಸ್ಪಷ್ಟತೆ ಇದ್ದು, ಯಾವುದೇ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಕಟಪಡಿಸುತ್ತಿರಲಿಲ್ಲ ಎಂಬ ಅಂಶವನ್ನು ಗಮನಿಸಬೇಕಾಗಿದೆ. ಅಂಬೇಡ್ಕರ್ ಬ್ರಾಹ್ಮಣ ದ್ವೇಷಿ, ದಲಿತರ ಪರ ಎಂದಾಕ್ಷಣ ಬ್ರಾಹ್ಮಣ ವಿರೋಧಿ ಎಂದು ಆರ್ಥೈಸುವ ಆಧುನಿಕ ಚಿಂತಕರು ಈ ಸತ್ಯವನ್ನು ಗ್ರಹಿಸಿದರೆ ಒಳಿತು.

ಈ ವಿವೇಕಾನಂದ ನಿಮಗೆ ಗೊತ್ತೆ?

ಈ ವರ್ಷದ ಆರಂಭದಲ್ಲಿ ಸಂಸ್ಕೃತಿಗೆ ಸಂಬಂಧಿಸಿದಂತೆ ಎರಡು ಸಂಚಲನ ಉಂಟಾ ಗಿದೆ. ‘ಮಡೆಸ್ನಾನ’ ಕುರಿತ ಮಠಾಧೀಶರುಗಳ ಸಂವಾದ ಒಂದಾದರೆ, ವಿವೇಕಾನಂದರನ್ನು ಕುರಿತ ದಿನೇಶ್ ಅಮೀನ್ ಮಟ್ಟು ಅವರ ಲೇಖನ ಮತ್ತೊಂದು. ನಿಡುಮಾಮಿಡಿ ಮಠದ ಚನ್ನಮಲ್ಲ ಸ್ವಾಮೀಜಿ ಅವರು ಪ್ರಸ್ತಾಪಿಸಿದ ‘ಮೇಲುಕೀಳಿನ ಸಂಪ್ರದಾಯ ಬೇಕೆ

ಅಥವಾ ಸಮಾನತೆಯ ಸಂವಿಧಾನ ಬೇಕೆ? ಎಂಬ ವಿಚಾರದಲ್ಲಿ ಪೇಜಾ ವರ ಮಠಾಧೀಶರ ಸ್ಪಷ್ಟ ನಿಲುವು ವ್ಯಕ್ತವಾಗದಿದ್ದರೂ ಅವರು ಒಲಿದು ವಾಲಿದ್ದು ಸಂಪ್ರದಾಯಕ್ಕೆ.ಅವರಿಗೆ ಸಮಾನತೆಯ ಸಂವಿಧಾನ ಕ್ಕಿಂತ ತಾನು ಶ್ರೇಷ್ಠ ಎನ್ನುವ ಸಂಪ್ರದಾ ಯದ ಹುಸಿಯೆ ಹೆಚ್ಚು ಖುಷಿ.’

ಮುಂಜಿ ಕ್ರಿಯೆ ಇರುವ ಯಾವುದೇ ಧರ್ಮಗಳ, ಸಂಪ್ರದಾಯಗಳ ಬಗ್ಗೆ ನನಗೆ ಒಲವಿಲ್ಲ. ನಾನು ಅದರ ಕಡು ವಿರೋಧಿ. ಏಕೆಂದರೆ ಅದು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತಾನು ಇತರರಿಗಿಂತ ಭಿನ್ನ ಎನ್ನುವ ಭಾವನೆ ಯನ್ನು ಭಿತ್ತಿ ಬಿಡುತ್ತದೆ. ಆದ ಕಾರಣವೇ ಪರಮಹಂಸರು, ರಮಣರು ಜನಿವಾರ ಕಿತ್ತೆಸೆದು ಎಲ್ಲರೊಳಗೆ ಒಂದಾದರು. ಪೇಜಾವರರಿಗೆ ಅಂಟಿಕೊಂಡಿರುವ ಜನಿವಾರ ಅವರನ್ನು ಮಾನವೀಯ ವಾಗಲು, ಕ್ರಿಯಾತ್ಮಕವಾಗಿ ಒಂದಾಗಲು ಬಿಡುತ್ತಿಲ್ಲ. ಹೆಚ್ಚೆಂದರೆ ಅವರದು ಅನುಕಂಪದಲ್ಲೇ ಉಳಿದು ಅಳಿದು ಹೋಗುವ ಜೀವ. ಪರಮಹಂಸರಂತೆ, ರಮಣರಂತೆ ಬೆಳಕಾಗುವ ಶಕ್ತಿ ಅದಕ್ಕಿಲ್ಲ. ಶ್ರೇಷ್ಠತೆಯ ವ್ಯಸನದ ಜನಿವಾರವನ್ನು ಕಿತ್ತೊಗೆಯುವವರೆಗೆ ಅದು ಸಾಧ್ಯವೂ ಇಲ್ಲ ಎಂಬುದು ನಿಸರ್ಗ ಸತ್ಯ. ಕಾವಿಗೆ ಘನತೆ ಗಾಂಭೀರ್ಯಗಳನ್ನು ತಂದುಕೊಟ್ಟ ವಿವೇಕಾ ನಂದರು ಜನಿಸಿದ ಈ ಪುಣ್ಯಭರತ ಭೂಮಿ ಯಲ್ಲಿ ಕಾವಿಧಾರಿ ಪಡೆಯ ನಡೆ ವಿಷಾದನೀಯ. ಶ್ರೀರಾಮಕೃಷ್ಣ ಮಠದ ಕೆಲವು ಕಾವಿಧಾರಿ ಗಳು ಇದರಿಂದ ಹೊರತಾಗಿಲ್ಲ. ಮನು ಕುಲದ ವೀರಧೀರ ಸನ್ಯಾಸಿ ವಿವೇಕಾನಂದ ರನ್ನು ಕೋಮುವಾದಕ್ಕೆ ಎಳೆದು ಕಾವಿಯ ಶೀಲಹರಣ ಮಾಡುತ್ತಿರುವ ಪ್ರಸ್ತುತದಲ್ಲಿ ಕೋಮುವಾದಿಗಳ ವಿರುದ್ಧ ಎದೆ ಸೆಟೆದು ಸಿಂಹಘರ್ಜನೆ ಮಾಡಿದ ವಿಶ್ವಾಸ ಸನ್ಯಾಸಿ ಈ ವಿವೇಕಾನಂದ ನಿಮಗೆ ಗೊತ್ತೆ? ಸಾವಧಾನ ದಿಂದ ಒಳಗಣ್ತೆರೆದು ಓದಿ.

2. ಬಾಲ್ಯದ ತುಂಟತನಗಳು, ಹಾವು ಬಂದರೂ ಎಚ್ಚರವಾಗದ ಏಕಾಗ್ರತೆ, ತೋಟದಲ್ಲಿ ಆಂಜನೇಯ ಸಿಗುತ್ತಾನೆ ಎಂದ ಹರಿಕಥೆ ದಾಸರ ಮಾತು ನಂಬಿ ಇಡೀ ರಾತ್ರಿ ಆನಂಜನೇಯನನ್ನು ಅರಸಿದ್ದು- ಇವುಗಳು ಒಂದಾದರೆ, ಅವರು ಹುಕ್ಕಾ ಸೇದುತ್ತಿದ್ದರು, ಮಾಂಸ ಸೇವಿಸುತ್ತಿದ್ದರು, ಊಟ ಉಪಚಾರ ದಲ್ಲಿ ರಸಿಕರಾಗಿದ್ದರು ಎನ್ನುವುದು ಮತ್ತೊಂದು. ಅಮೆರಿಕದ ಸಹೋದರ ಸಹೋದರಿಯರೆ ಎಂದಾಗ ಸಭಿಕರು ಐದು ನಿಮಿಷ ಕರತಾಡನ ಮಾಡಿದರು. ನಿಮ್ಮಂತ ಮಗು ಬೇಕು ನನ್ನನ್ನು ವರಿಸಿ ಎಂದ ಮಹಿಳೆಗೆ ನಾನೇ ನಿಮ್ಮ ಮಗ ಎಂದರು. ನಮ್ಮ ಧರ್ಮಗ್ರಂಥ ಮೇಲಿದೆ ನಿಮ್ಮದು ಕೆಳಗಿದೆ ಎಂದದ್ದಕ್ಕೆ ಹೌದು ಅದು ಆಧಾರವಾಗಿದೆ ಎಂದರು ಎನ್ನುವುದು. ಮತ್ತು ಒಮ್ಮೆ ಕೋತಿಗಳ ಹಿಂಡು ಅಟ್ಟಿಸಿಕೊಂಡು ಬಂದಾಗ ಅವರ ಉರಿವ ನೇತ್ರಗಳಿಂದ ಅಟ್ಟಿದ ಅವರ ಶಕ್ತಿ- ಇಂಥ ವಿಚಾರಗಳಿಂದಲೇ ಕಾಲಹರಣ ಮಾಡುತ್ತಿರು ವವರಿಗೆ ಅವರು ಮನುಕುಲದ ಮಂಗಳಕ್ಕಾಗಿ ಜಾತಿ,ಮತ,ಕುಲ,ಗೋತ್ರಗಳ, ಪ್ರಗತಿ ವಿರೋಧಿ ಗಳಾದ ಸಂಪ್ರದಾಯಶೀಲ ಪುರೋಹಿತ ಶಾಹಿಯ ವಿರುದ್ಧ ಸಮರ ಸಾರಿದ ವಿಚಾರಗಳು ಮರೆಯಾಗುತ್ತಿವೆ. ಆದ ಕಾರಣವೇ ಅವರನ್ನು ಒಂದು ಧರ್ಮದ ಬ್ರಾಂಡ್ ಮಾಡಿಕೊಂಡು ಅನ್ಯಧರ್ಮೀಯರ ವಿರುದ್ಧ ಬಾಂಬ್ ಎಂಬಂತೆ ಬಿಂಬಿಸಲಾಗುತ್ತಿದೆ. ಅನ್ಯಧರ್ಮೀಯರೂ ವಿವೇಕಾನಂದರ ವಿಚಾರಗಳಿಗೆ ಅಷ್ಟಾಗಿ ತೆರೆದುಕೊಳ್ಳದಿರುವುದು ಶೋಚನೀಯ.
ನನ್ನ ‘ವಿವೇಕಾನಂದರ ಕ್ರಾಂತಿಕಾರಿ ವಿಚಾರ ಗಳು’ ಕೃತಿಗೆ ಕುವೆಂಪು ಹಾರೈಕೆಯ ನುಡಿಗಳನ್ನು ಬರೆದುಕೊಡುವ ಸಂದರ್ಭದಲ್ಲಿ ‘ವಿವೇಕಾ ನಂದರನ್ನು ‘ಹಿಂದೂ ಸನ್ಯಾಸಿ’ ಎಂದು ಸೀಮಿತ ದೃಷ್ಟಿಯಿಂದ ಕರೆಯಬಾರದು. ಅವರನ್ನು ವಿಶಾಲದೃಷ್ಟಿಯಿಂದ ‘ವಿಶ್ವ ಸನ್ಯಾಸಿ’ ಎಂದು ಕರೆಯಬೇಕು ಎಂದರು. ‘ಸತ್ಯ-ನನ್ನ ದೇವರು; ವಿಶ್ವ ನನ್ನ ರಾಷ್ಟ್ರ ’ಎಂದ ವಿವೇಕಾನಂದರೂ ಕೂಡ ‘‘ನಾನು ಭಾರತಕ್ಕೆ ಸೇರಿರುವಷ್ಟೇ ವಿಶ್ವಕ್ಕೂ ಸೇರಿದ್ದೇನೆ. ಅದರಲ್ಲಿ ಯಾವ ಆಷಾಢಭೂತಿತನವೂ ಇಲ್ಲ...ನಾನು ಯಾವುದೇ ದೇಶದ ಗುಲಾಮನೇ?... ಮೂಢ ರೂ, ನಿರಭಿಮಾನಿಗಳೂ, ಜಾತಿಭ್ರಾಂತರೂ, ವಂಚಕರೂ, ಹೇಡಿಗಳೂ, ಕಟುಕರೂ ಆದ ಹಿಂದೂ ಪುರೋಹಿತರಂತೆ ಬದುಕಿ ಸಾಯಲು ನಾನು ಹುಟ್ಟಿರುವೆನೆಂದು ತಿಳಿದಿರುವೆಯಾ? ನಾನು ಹೇಡಿತನವನ್ನು ದ್ವೇಷಿಸುತ್ತೇನೆ’’ ಎಂದಿದ್ದಾರೆ. ಇಂಥ ವಿಶ್ವ ವೈಶಾಲ್ಯತೆಯನ್ನು ಅಪ್ಪಿದ ಅವರನ್ನು ಒಂದು ಕೋಮಿಗೆ ಎಳೆದುಕಟ್ಟಿ ಹಾಕುವ ಕೊಳಕು ಹುನ್ನಾರಗಳು ಕ್ರಿಯಾಶೀಲ ವಾಗಿರುವುದು ವಿಷಾದನೀಯ.

3. ರಾಷ್ಟ್ರ ಈಗ ವಿವೇಕಾನಂದರ 150ನೆ ಜನ್ಮ ದಿನಾಚರಣೆಯನ್ನು ಇಡೀ ವರ್ಷ ಆಚರಿಸುತ್ತಿದೆ. ಅದು ಸ್ವಾಗತಾರ್ಹ. ಆದರೆ ವಿವೇಕಾನಂದರು ಬದುಕಿದ್ದಾಗ ಅವರನ್ನು ಈ ದೇಶದ ಸಂಪ್ರದಾಯ ಶೀಲರು ನಡೆಸಿಕೊಂಡ ಹಾಗೂ ಈಗ ನಡೆಸಿ ಕೊಳ್ಳುತ್ತಿರುವ ರೀತಿಯನ್ನು ಕುರಿತು ಕೊಂಚ ನಮ್ಮ ವಿವೇಕದ ಕಣ್ತೆರೆದು ನೋಡಬೇಕಿದೆ.
ಅಮೆರಿಕದ ಪ್ರೊ.ಜಾನ್ ಹೆನ್ರಿ ರೈಟ್ ಅಮೆರಿಕದ ಎಲ್ಲ ಪ್ರೊಫೆಸರ್‌ಗಳ ಒಟ್ಟುಗೂಡಿದ ಜ್ಞಾನಕ್ಕಿಂತಲೂ ವಿವೇಕಾನಂದರ ಜ್ಞಾನ ಉಜ್ವಲ ವಾದುದು ಎಂದರೆ ‘ಈ ವ್ಯಕ್ತಿಯ ಅದ್ಭುತ ಧೀಶಕ್ತಿಯ ಎದುರು ನಮ್ಮ ಪ್ರೊಫೆಸರ್‌ಗಳು ಮಕ್ಕಳಿದ್ದ ಹಾಗೆ’ ಎಂದು ಡಾ. ಮಿಲ್ಸ್ ಕೊಂಡಾ ಡಿದರು. ಆದರೆ ಭಾರತೀಯರು? ಬಾಲ್ಯದಾರಂಭ ದಿಂದ ವಿವೇಕಾನಂದರು ಪಟ್ಟ ಪರಿಪಾಟಲನ್ನು ಅವರ ಮಾತುಗಳಲ್ಲಿಯೇ ಕೇಳಿ. ತಂದೆ ಸತ್ತು ಸಂಸಾರ ಸಂಕಷ್ಟಕ್ಕೆ ಸಿಲುಕಿದ್ದಾಗ

‘ಚಾಕರಿ ಹುಡುಕಿಕೊಂಡು ಬೀದಿ ಬೀದಿ ಅಲೆದೆ. ಹೊಟ್ಟೆಗೆ ಅನ್ನವಿಲ್ಲ, ಕಾಲಿಗೆ ಮೆಟ್ಟಿಲ್ಲ. ಅರ್ಜಿ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದೆ. ಮೊದಲು ಸಹಾಯ ನೀಡಲು ಇಚ್ಛಿಸುತ್ತಿದ್ದವರೇ ಈಗ ನಿರಾಕರಿಸುತ್ತಿದ್ದರು.’
ಪರಮಹಂಸರ ‘ಜೀವ-ಶಿವ’ ತತ್ವವನ್ನು ಜಗತ್ತಿಗೆ ಸಾರಬೇಕೆಂಬ ದೃಢ ಸಂಕಲ್ಪದಿಂದ ಸನ್ಯಾಸ ಸ್ವೀಕರಿಸಿದ ಮೇಲೆ ‘‘ಸುತ್ತಲೂ ಇರುವ ಜನರಿಂದ ನಮಗೆ ಸಿಕ್ಕಿದ್ದು ಒದೆತ ಮತ್ತು ನಿಂದೆಯಲ್ಲದೆ ಮತ್ತೇನೂ ಅಲ್ಲ. ನಮ್ಮ ಊಟಕ್ಕೆ ಮನೆಯಿಂದ ಮನೆಗೆ ಹೋಗಿ ಭಿಕ್ಷೆ ಬೇಡಬೇಕಾಗುತ್ತಿತ್ತು. ಅಲ್ಲೊಂದು ಚೂರು ಇಲ್ಲೊಂದು ಚೂರು ರೊಟ್ಟಿ ಸಿಕ್ಕುತ್ತಿತ್ತು. ಜನರು ತಿಂದು ಉಳಿದ ತಂಗಳು ದೊರಕುತ್ತಿತ್ತು. ನನ್ನ ದೇಹ ಸ್ಥಿತಿ ಹದಗೆಡುತ್ತಾ ಬಂತು. ಯಾವಾಗಲೂ ಅತಿ ಬಡತನದ ಕನಿಷ್ಠ ಊಟ. ಕೆಲವು ವೇಳೆ ಕಲ್ಲಿನಂತೆ ಗಟ್ಟಿಯಾದ ರೊಟ್ಟಿ ಸಿಕ್ಕುತ್ತಿತ್ತು. ಆ ರೊಟ್ಟಿಯನ್ನು ತಿಂದಾಗ ಬಾಯಲ್ಲಿ ರಕ್ತ ಬರುತ್ತಿತ್ತು. ಹಲವು ತಿಂಗಳು ನಾನು ಇದರ ಮೇಲೆಯೇ ಜೀವಿಸಿದೆ. ಇದು ನನ್ನ ದೇಹದಾರ್ಢ್ಯ ವನ್ನೇ ಕ್ಷೀಣಿಸಿತು.’’
ಅಮೆರಿಕದಲ್ಲಿ ಕಷ್ಟದಲ್ಲಿದ್ದಾಗ ಹಣಕ್ಕಾಗಿ ವಿವೇಕಾನಂದರು ತಂತಿ ಕಳುಹಿಸಿದರು. ಅದನ್ನು ತಿಳಿದ ಒಬ್ಬ ಥಿಯಾಸಫಿ ಸೊಸೈಟಿ ಸದಸ್ಯ ‘‘ಈಗ ಈ ಪಿಶಾಚಿ ಸಾಯುತ್ತದೆ. ದೇವರು ನಮ್ಮನ್ನು ಆಶೀರ್ವದಿಸಲಿ’ ಎಂದು ಬರೆದ. ಪ್ರತಿನಿಧಿ ಪತ್ರ ಕಳುಹಿಸಲು ವಿವೇಕಾನಂದರು ಭಾರತದ ಸಂಸ್ಥೆಗಳಿಗೆ ಬರೆದರು. ಯಾರೂ ಕೊಡಲಿಲ್ಲ. ಬದಲಿಗೆ ಈತ ಶೂದ್ರ, ಸನ್ಯಾಸಿ ಆಗುವ ಹಕ್ಕಿಲ್ಲ ಎಂದು ಬರೆದರು.

ಅಮೆರಿಕದಲ್ಲಿ ವಿಜಯಿಯಾಗಿ ಹಿಂದಿರುಗಿ ಬಂದ ವಿವೇಕಾನಂದರು ‘‘ನನ್ನನ್ನು ಶೂದ್ರನೆಂದು ಕರೆದು ಸನ್ಯಾಸಿಯಾಗಲು ಅಧಿಕಾರ ವಿಲ್ಲವೆಂದು ಹೇಳಿರುವರು. ಇದನ್ನು ಚರ್ಚಿಸುವವರಿಗೆ ಚರಿತ್ರೆ ಸ್ವಲ್ಪ ಗೊತ್ತಿರಬೇಕಿತ್ತು... ಹದಿನಾಲ್ಕು ವರ್ಷ ಗಳಿಂದ ಉಪನ್ಯಾಸವನ್ನು ಎದುರಿ ಸಿದವನನ್ನು, ಮಾರನೆಯ ದಿನ ಎಲ್ಲಿ ಊಟ ಸಿಗುವುದು, ಎಲ್ಲಿ ಮಲಗುವುದು ಎಂದು ಗೊತ್ತಿಲ್ಲದವನನ್ನು ಇಷ್ಟು ಸುಲಭವಾಗಿ ಅಂಜಿಸುವುದಕ್ಕೆ ಆಗುವು ದಿಲ್ಲ. ಶಾಖವಾದ ಬಟ್ಟೆಯಿಲ್ಲದೆ, ಥರ್ಮಾ ಮೀಟರ್ ಸೊನ್ನೆಯ ಕೆಳಗೆ 30ಡಿಗ್ರಿ ತೋರಿಸುತ್ತಿದ್ದ ಕಡೆ ಬಾಳಿದವ ನನ್ನು ಇಂಡಿಯಾ ದೇಶದಲ್ಲಿ ಅಷ್ಟು ಸುಲಭವಾಗಿ ಅಂಜಿಸುವುದಕ್ಕೆ ಆಗುವು ದಿಲ್ಲ. ನಾನು ಪಶ್ಚಿಮ ದೇಶಗಳಿಂದ ಹಿಂದಿರುಗಿ ಬರುತ್ತಿರುವೆನೆಂದು ರಾಣಿ ಸಮಣಿಯ ತೋಟದ ಮಾಲಕರು ನನ್ನನ್ನು ಒಳಗೆ ಪ್ರವೇಶಿಸಲು ಬಿಡಲಿಲ್ಲ’’ ಎಂದಿದ್ದಾರೆ.

ಭಾರತದ ಸ್ಥಿತಿಗತಿಯನ್ನು ಚೆನ್ನಾಗಿ ಅರಿತಿದ್ದ ವಿವೇಕಾನಂದರು ಆಶ್ರಮದ ಅಧ್ಯಕ್ಷರಾದ ಬ್ರಹ್ಮಾನಂದರಿಗೆ ‘ಪೂಜೆಯ ಖರ್ಚನ್ನು ತಿಂಗಳಿಗೆ ಎರಡು ರೂಪಾಯಿಗೆ ಇಳಿಸು. ದೇವರ ಮಕ್ಕಳು ಉಪವಾಸದಿಂದ ನರಳುತ್ತಿರುವರು. ನೀರು ಮತ್ತು ತುಳಸಿದಳದಿಂದ ಮಾತ್ರ ಪೂಜಿಸು. ದೇವರ ನೈವೇದ್ಯಕ್ಕೆ ಕೊಡುವ ಹಣವನ್ನು ದೀನರಲ್ಲಿರುವ ಜೀವಂತ ದೇವರಿಗೆ ಆಹಾರ ವನ್ನು ನೈವೇದ್ಯ ಮಾಡುವುದರಲ್ಲಿ ವ್ಯಯಿಸಲಿ’’ ಎಂದರು. ಆದರೆ ಇಂದು ಇಡೀ ಭಾರತದಲ್ಲಿ ಆಗುತ್ತಿರುವುದೇನು? ದೇವರು ಧರ್ಮದ ಹೆಸರಿನಲ್ಲಿ ವೌಢ್ಯವನ್ನು ಬಿತ್ತುತ್ತಾ ದೇವರನ್ನು ಕೊಬ್ಬಿಸಿ ಜನರನ್ನು ನಿರ್ವೀರ್ಯ ರನ್ನಾಗಿಸುವ ವಿಕೃತ ಕ್ರಿಯೆ ಯಾವ ಅಡೆ ತಡೆಯೂ ಇಲ್ಲದೆ ನಿರಂತರವಾಗಿ ಸಾಗಿದೆ. ಕಾವಿಯ ಕಣ್ಣುಗಳು ಕಾಂಚನಕ್ಕಾಗಿ ಉಜ್ವಲ ವಾಗಿ ತೆರೆದುಕೊಂಡಿವೆ. ಆದ ಕಾರಣವೇ ‘ಮನುಷ್ಯರ ಸಂಖ್ಯೆಗಿಂತ ಹೆಚ್ಚಾಗಿ ದೇವರುಗಳು ಇರುವರು. ಆದರೂ ಯಾವ ಸಹಾಯವೂ ಒದಗಲಿಲ್ಲ. ಇಂಡಿಯಾ ದೇಶದಲ್ಲಿ ಜನರು ಆರು ಕೋಟಿ ದೇವರಿಗೆ ಗೋಳಿಡುವರು. ಆದರೂ ನಾಯಿಗಳಂತೆ ಸಾಯುವರು.’’ ಏಕೆ ಎಂದು ವಿವೇಕಾನಂದರು ವಿವೇಕದ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
*

-ವಾರ್ತಾಭಾರತಿ ಕೃಪೆಕನ್ನಡ ಕಳೆದುಕೊಂಡ ವೈಚಾರಿಕ ಮನಸ್ಸು


ಜಿನ, ಬುದ್ಧ ಬಸವ ತತ್ವಗಳ ಸಾರದಿಂದ ಅದ್ದಿ ತೆಗೆದ ವ್ಯಕ್ತಿತ್ವ ಎಲ್. ಬಸವರಾಜು ಅವರದು. ಕನ್ನಡ ಸಾರಸ್ವತ ಲೋಕಕ್ಕೆ ಎಲ್‌ಬಿ ಎಂದೇ ಪರಿಚಿತರಾಗಿರುವ ಬಸವರಾಜು ಅವರ ಸೃಜನಶೀಲತೆಯ ಆಳ-ಹರವಿನ ಅರಿವಿರುವ ವರಿಗಷ್ಟೇ ಗೊತ್ತು, ಕನ್ನಡ ಕಳೆದುಕೊಂಡುದು ಏನು ಎನ್ನುವುದು. ಮೇಲ್ನೋಟಕ್ಕೆ ವಿದ್ವಾಂಸನಾಗಿ, ಭಾಷಾ ತಜ್ಞನಾಗಿ ಗುರುತಿಸಲ್ಪಟ್ಟರೂ, ಬಸವರಾಜು ಕನ್ನಡ ಪರಂಪರೆಯ ಕಾವಲು ಭಟರಂತೆ ಕೆಲಸ ಮಾಡಿದವರು. ಅವರು ಸಂಗ್ರಹಿಸಿದ ಗ್ರಂಥಗಳು, ಅವರು ರಚಿಸಿದ ಕೃತಿಗಳೆಲ್ಲವೂ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಗಳಾಗಿವೆ. ಆಳವಾದ ಅಧ್ಯಯನಕ್ಕಾಗಿಯಷ್ಟೇ ಬಸವ ರಾಜು ಗುರುತಿಸಿಲ್ಪಟ್ಟವರಲ್ಲ.

ಅಷ್ಟೇ ತೀಕ್ಷ್ಣವಾದ ವೈಚಾರಿಕ ದೃಷ್ಟಿಕೋನವನ್ನು ಹೊಂದಿದವರು ಬಸವರಾಜು. ಪುರೋಹಿತ ಚಿಂತನೆಗಳು ಕನ್ನಡ ಪರಂಪರೆಗೆ ಧಕ್ಕೆ ತಂದಾಗಲೆಲ್ಲ ಸ್ಪಷ್ಟವಾಗಿ ಅದನ್ನು ಖಂಡಿಸಿದವರು. ಒಬ್ಬ ವಿದ್ವಾಂಸ ಹೇಗಿರಬೇಕು ಎನ್ನುವುದಕ್ಕೆ ಎಲ್.ಬಸವರಾಜು ಅತ್ಯುತ್ತಮ ಉದಾಹರಣೆ ಮತ್ತು ಮಾದರಿ. ಇಂದಿನ ತಲೆಮಾರು ಸಂಶೋಧನೆಯ ಕುರಿತಂತೆ ಆಸಕ್ತಿಯನ್ನು ಕಳೆದುಕೊಂಡಿದೆ. ಅದು ನಿಷ್ಪ್ರಯೋಜಕ ಮತ್ತು ಆಧುನಿಕ ಚಿಂತನೆಗ ಳಿಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಭಾವಿಸಿದೆ. ಹಲವು ವಿದ್ವಾಂಸರೆಂದು ಕರೆಸಿಕೊಂಡವರು ಸಂಶೋಧನೆಯ ಹೆಸರಿ ನಲ್ಲಿ ಪುರೋಹಿ ತಶಾಹಿ ವ್ಯವಸ್ಥೆಯ ಭಜನಕಾ ರರಾಗಿ ಮಾರ್ಪಟ್ಟರು. ಆ ವ್ಯವಸ್ಥೆಯ ಪೋಷಕರಾದರು. ಆದರೆ ಬಸವರಾಜು ಸಂಶೋಧನೆ, ಗ್ರಂಥ ಸಂಪಾದನೆಯನ್ನು ವಿದ್ವಾಂಸನೆಂಬ ಕಿರೀಟವನ್ನು ಧರಿಸಿಕೊಳ್ಳುವ ದುರುದ್ದೇಶಕ್ಕೆ ಬಳಸಿಕೊಳ್ಳಲಿಲ್ಲ. ಅವರು ತಮ್ಮ ಸಂಶೋಧನೆ ಗಳ ಮೂಲಕ, ಸಂಪಾದನೆಯ ಮೂಲಕ, ಆಧುನಿಕ ಪೂರ್ವ ದಿನಗಳ ಪರ್ಯಾಯ ಆಲೋಚನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸಿದರು.

ಬ್ರಾಹ್ಮಣ್ಯ ಚಿಂತನೆಯ ವಿರುದ್ಧ ಸಿಡಿದೆದ್ದ ಬಸವ ಚಳವಳಿ, ಜಿನ ಚಳವಳಿ, ಬೌದ್ಧ ಚಳವಳಿಯ ಬೇರುಗಳನ್ನು ಕನ್ನಡದ ಉದ್ದಗದಲ್ಲಿ ತಡಕಾಡಿದರು. ಪಂಪನ ಆದಿಪುರಾಣ, ವಚನ ಚಿಂತನ, ಬುದ್ಧ ಚರಿತೆ, ನೂರು ಶರಣರ ಸಾವಿರ ವಚನಗಳು ಇತ್ಯಾದಿಗಳೆಲ್ಲ ಈ ತಡಕಾಟದ ಫಲವಾಗಿದೆ. ಅವರನ್ನಿಂದು ಲಯಾಕಾರ ವಿನ್ಯಾಸಕಾರ ಎಂದೇ ಗ್ರಂಥ ಸಂಪಾದನೆಯ ಕ್ಷೇತ್ರದಲ್ಲಿ ಗುರುತಿಸಲಾ ಗುತ್ತಿದೆ. ಬಹುಶಃ ವೈಚಾರಿಕತೆ ಯನ್ನು ಮುನ್ನೆಲೆಯಾಗಿಟ್ಟು ಕೊಂಡು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೈದ ಸಂಶೋಧಕರು ತೀರಾ ಅಪರೂಪ. ಶಂಬಾ ಜೋಷಿಯವರಂತಹ ಬೆರಳೆಣಿಕೆಯ ಸಂಶೋಧಕರಷ್ಟೇ ನಮ್ಮ ಮುಂದಿದ್ದಾರೆ. ಈ ಸಾಲಿನಲ್ಲಿ ಗಟ್ಟಿಯಾಗಿ ಬೇರೂರಿದವರು ಬಸವರಾಜು. ಗ್ರಂಥ ಸಂಪಾದನೆಯೆನ್ನುವುದು ಸಣ್ಣ ಕೆಲಸವಲ್ಲ. ಇತಿಹಾಸದ ಬೇರನ್ನು ತಡಕುತ್ತಾ, ಅದರ ಕಾಲ, ಸಂದರ್ಭಗಳನ್ನು ಅರ್ಥೈಸುತ್ತಾ, ಅವುಗಳನ್ನು ಮತ್ತೆ ಎತ್ತಿ ನಿಲ್ಲಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಒಂದಿಷ್ಟು ಕೈ ತಪ್ಪಿದರೂ ಅಪಾಯ ಕಟ್ಟಿಟ್ಟದ್ದು. ಗಾಢವಾದ ಅಧ್ಯಯನ ಅತ್ಯಗತ್ಯ. ತಪ್ಪುಗಳನ್ನು ಗುರುತಿಸುವ ಸೂಕ್ಷ್ಮತೆ ಇರಬೇಕು.

ಬರಹಗಳ ಅಸಲಿತನವನ್ನು ಉಜ್ಜಿ ನೋಡುವ ವಿಮರ್ಶಕ ಗುಣ ಇರಬೇಕು. ವಿದ್ವಾಂಸ ಇದರಲ್ಲಿ ಒಂದಿಷ್ಟು ಎಚ್ಚರ ತಪ್ಪಿದರೂ, ಅದನ್ನು ಬೇರೆ ಬೇರೆ ಹಿತಾಸಕ್ತಿಗಳು ದುರ್ಬಳಕೆ ಮಾಡುವ ಸಾಧ್ಯತೆಗಳಿರುತ್ತವೆ. ಕನ್ನಡದ ಪಾಲಿಗೆ ಹಳೆಗನ್ನಡವನ್ನು ಸರಳಗನ್ನ ವಾಗಿ ಪರಿಚಯಿಸಿದವರು ಬಸವರಾಜು. ಪಂಪ ಮತ್ತು ರನ್ನರನ್ನು ಸಾಹಿತ್ಯದ ವಿದ್ಯಾರ್ಥಿಗಳು ಮತ್ತೊಮ್ಮೆ ಬಸವರಾಜು ಮೂಲಕ ಸರಳವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಯಿತು. ವಿದ್ವಾಂಸರು ಹಳೆಯದನ್ನು ಹುಡುಕಾಡುತ್ತಾ, ವರ್ತಮಾನವನ್ನು ಮರೆಯುವ ಅನೇಕ ಸಂದರ್ಭಗಳಿರುತ್ತವೆ. ವರ್ತಮಾನ ತಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ಭೂತಗಳ ಕಡತಗಳ ಧೂಳಿನಲ್ಲ್ಲಿ ಕಳೆದು ಹೋಗಿರುತ್ತಾರೆ. ಆದರೆ ಬಸವರಾಜು ಅವರು ಹಳೆಯದನ್ನು ಮುರಿದು ಕಟ್ಟಿದವರು. ಅದರ ಆಧುನಿಕ ಸಂವೇದನೆಗಳನ್ನು ಗುರುತಿಸುವ ಪ್ರಯತ್ನ ಮಾಡಿದರು. ವಿಧ್ವತ್ತು ಪುರೋಹಿತರ ಸೊತ್ತು ಎನ್ನುವುದನ್ನು ಶತಾಯುಗತಾಯ ವಿರೋಧಿಸಿ ದರು.

ಶರಣವಚಗಳ ಹಿಂದಿರುವ ಸಾರಸರ್ವಸ್ವದ ಮೂಲಕ ಅದನ್ನು ಅಭಿವ್ಯಕ್ತಿ ಗೊಳಿಸಿದರು. ವಿಶೇಷವೆಂದರೆ, ವರ್ತಮಾ ನದ ಕನ್ನಡದ ಸಂದರ್ಭವನ್ನು ಅವರು ವೈಚಾರಿಕ ಕಣ್ಣುಗಳ ಮೂಲಕ ನೋಡಿದರು. ಪುರೋಹಿತ ಶಾಹಿ ವ್ಯವಸ್ಥೆ ಮತ್ತೆ ಬಲಾಢ್ಯವಾಗುತ್ತಿರುವುದನ್ನು ಅವರು ಗಮನಿಸಿದ್ದರು ಮತ್ತು ಅದನ್ನು ಖಂಡಿಸಿ ದ್ದರು. ಕನ್ನಡ ಸಾಹಿತ್ಮ ಸಮ್ಮೇಳನಾಧ್ಯಕ್ಷರಾಗಿ ಅವರು ಮಾಡಿದ ಭಾಷಣ ಈ ಕಾರಣಕ್ಕಾಗಿಯೇ ಹಲವರಲ್ಲಿ ಆಕ್ರೋಶವನ್ನು ಹುಟ್ಟಿಸಿ ಹಾಕಿತ್ತು. ತಮ್ಮ ಭಾಷಣದಲ್ಲಿ ಬ್ರಾಹ್ಮಣ್ಯ ಚಿಂತನೆಯನ್ನು ಬಲವಾಗಿ ಖಂಡಿಸಿ ದ್ದರು. ಜಾತಿವಾದವನ್ನು ಟೀಕಿಸಿದ್ದರು.

ಯಾವುದೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಆವರೆಗೆ ಬಸವರಾಜು ತೋರಿಸಿದ ಧೈರ್ಯ ವನ್ನು ತೋರಿಸಿರಲಿಲ್ಲ. ಹಾಗೆಯೇ ಸಮ್ಮೇಳ ನಾಧ್ಯಕ್ಷರ ಗೌರವಾರ್ಥ ನೀಡಲ್ಪಟ್ಟ ಹತ್ತು ಲಕ್ಷ ರೂ. ಹಣವನ್ನು ಸಾಹಿತ್ಯ ಸೇವೆ ಗಾಗಿ ಮೀಸಲಿಟ್ಟರು. ಬಸವರಾಜು ಅವರ ನಿಧನದಿಂದ ಹಳೆ ಗನ್ನಡ ಮತ್ತು ಹೊಸಗನ್ನಡದ ನಡುವಿನ ಕೊಂಡಿಯೊಂದು ಕಳಚಿದಂತಾಗಿದೆ. ಕನ್ನಡ ಪರಂಪರೆಯ ಉಳಿವಿಗಾಗಿ ಹಗಲಿರುಳು ತೊಡಗಿಕೊಂಡ ವೈಚಾರಿಕ ಮನಸ್ಸೊಂದು ನಮ್ಮ ನಡುವಿನಿಂದ ಅಗಲಿ ಹೋದಂತಾಗಿದೆ.

-ವಾರ್ತಾಭಾರತಿ ಸಂಪಾದಕೀಯ


ನಿಸರ್ಗ ಸೌಂದರ್ಯದ ಚಿತ್ತಾರ-Naveen kmf
ನವೀನ್, ಕೆಎಂಎಫ್.

Sunday, January 29, 2012

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮತ್ತೊಂದು ಪ್ರಹಾರ


-ಅವಧಿಯಿಂದ


ನಾ ದಿವಾಕರ್

ಭಾರತದ ಸಂವಿಧಾನ ವಿಶ್ವದಲ್ಲೇ ಅತ್ಯುತ್ತಮವಾದ, ಉತ್ಕೃಷ್ಟವಾದ, ಉದಾತ್ತವಾದ ಸಂವಿಧಾನ ಎಂದೇ ಹೆಸರು ಗಳಿಸಿದ್ದರೆ ಅದಕ್ಕೆ ಕಾರಣ ನಮ್ಮ ಸಂವಿಧಾನದಲ್ಲಿ ಸಾರ್ವಭೌಮ ಪ್ರಜೆಗಳಿಗೆ ಒದಗಿಸಲಾಗಿರುವ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯ. ಕೆಲವು ನಿಬಂಧನೆಗಳಿಗೊಳಪಟ್ಟಿದ್ದರೂ ಭಾರತದ ಸಂವಿಧಾನ ಪ್ರಜೆಗಳಿಗೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಯಪಾಲಿಸಿದೆ. ಸಂವಿಧಾನ ಕತರ್ೃಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆ ಮೂಡಲು ಕಾರಣ ಭಾರತ ಶತಮಾನದ ಕಾಲ ಬ್ರಿಟೀಷ್ ವಸಾಹತುಶಾಹಿಯ ಆಳ್ವಿಕೆಯಲ್ಲಿದ್ದುದು ಮತ್ತು ಈ ಅವಧಿಯಲ್ಲಿ ಜನಸಾಮಾನ್ಯರ ಮೂಲಭೂತ ಹಕ್ಕುಗಳು ಬ್ರಿಟೀಷ್ ಸಾಮ್ರಾಜ್ಯದ ದಮನಕ್ಕೊಳಗಾಗಿದ್ದುದು. ಈ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಕೆಲವು ನಿಬಂಧನೆಗಳಿವೆ. ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟುಮಾಡುವಂತಹ, ಯಾವುದೇ ಒಂದು ಜನಸಮೂಹದ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ, ಸಾಮಾಜಿಕ ಸೌಹಾರ್ದತೆಯನ್ನು ಕದಡುವಂತಹ ವ್ಯಾಖ್ಯಾನಗಳಿಗೆ ಕಡಿವಾಣ ಹಾಕಲಾಗಿದೆ. ಇದು ಅಗತ್ಯವೂ ಹೌದು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ನಿಬಂಧನೆಗಳು ಕೆಲವೊಮ್ಮೆ ಸಹಕಾರಿಯಾಗಲೂಬಹುದು.

ಆದರೆ ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಸಂವೇದನಾಶೀಲ ಕ್ಷೇತ್ರಗಳಲ್ಲಿ ಸೃಜನಶೀಲತೆಯ ಚೌಕಟ್ಟಿನಲ್ಲಿ ವ್ಯಕ್ತವಾಗಬಹುದಾದ ಸಾಹಿತಿ-ಕಲಾವಿದರ ಅಭಿಪ್ರಾಯಗಳು ಸಮಾಜದ ಒಂದು ನಿದರ್ಿಷ್ಟ ವರ್ಗದ ಭಾವನೆಗಳಿಗೆ ಘಾಸಿ ಉಂಟುಮಾಡಿದ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಪರಿಗಣಿಸಬೇಕು ಎಂಬುದು ಇಂದಿನ ಚಚರ್ೆಯ ವಿಷಯವಾಗಿದೆ. ಭಾರತದಂತಹ ಸಂಕೀರ್ಣ, ಬಹುಮುಖೀ ಸಮಾಜದಲ್ಲಿ ಅಸ್ಮಿತೆಗಳೇ ಪ್ರಧಾನ ಭೂಮಿಕೆ ನಿರ್ವಹಿಸುತ್ತವೆ. ಜನಸಾಮಾನ್ಯರ ಆಂತರಿಕ ಭಾವನೆಗಳನ್ನೂ ಸಹ ಯಾವುದೋ ಒಂದು ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸಿಡಲಾಗುತ್ತದೆ. ಹಾಗಾಗಿ ಜನಸಮೂಹಗಳ ಧಾಮರ್ಿಕ, ಭಾಷಿಕ, ಪ್ರಾದೇಶಿಕ ಮತ್ತು ಜಾತಿಸಂಬಂಧಿತ ಭಾವನೆಗಳು ಈ ಅಸ್ಮಿತೆಗಳನ್ನು ನಿರ್ಧರಿಸಿ, ನಿರ್ವಹಿಸುವ ಕೆಲವೇ ಪ್ರಬಲ ಗುಂಪುಗಳ ವ್ಯಾಖ್ಯಾನಕ್ಕೆ ಸುಲಭವಾಗಿ ಒಳಪಡುತ್ತವೆ. ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಹುಯಿಲೆದ್ದಾಗಲೆಲ್ಲಾ ಈ ಒಂದು ಕ್ಷೀಣ ಧ್ವನಿಯೇ ಪ್ರಧಾನವಾಗಿ ಗೋಚರಿಸಿ ಚಚರ್ೆ, ವಿವಾದಗಳನ್ನು ಸೃಷ್ಟಿಸುತ್ತದೆ.

ಇಂತಹ ಸನ್ನಿವೇಶದಲ್ಲಿ ಉದ್ಭವಿಸುವ ಸಂಕಥನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯೇ ಸಂಕುಚಿತವಾಗುತ್ತಾ ಹೋಗುವುದನ್ನು ಕಾಣಬಹುದಾಗಿದೆ. ಸಲ್ಮಾನ್ ರಷ್ದಿ, ಎಂ.ಎಫ್. ಹುಸೇನ್ ಮುಂತಾದ ಮಹಾನ್ ಸಾಹಿತಿ ಕಲಾವಿದರ ಕೃತಿಗಳ ಸುತ್ತ ಉದ್ಬವಿಸುವ ವಾದ ವಿವಾದಗಳು ಈ ಸಂಕುಚಿತ ಚೌಕಟ್ಟಿನಲ್ಲೇ ಚಚರ್ೆಗೊಳಗಾಗುತ್ತವೆ. ಸಂಘಟನಾ ಸಾಮಥ್ರ್ಯ ಮತ್ತು ಪ್ರಾಬಲ್ಯದ ಅಹಮಿಕೆಗಳು ಬಹುಪಾಲು ಸಂಘಟನೆಗಳಿಗೆ ಇಡೀ ಜನಸಮುದಾಯಗಳನ್ನು ಪ್ರತಿನಿಧಿಸುತ್ತೇವೆ ಎಂಬ ಭ್ರಮೆಯನ್ನೂ ಮೂಡಿಸುವುದನ್ನು ಈ ಸಂಕಥನಗಳಲ್ಲಿ ಕಾಣಬಹುದು. ಹಾಗಾಗಿಯೇ ಜೈಪುರ ಸಾಹಿತ್ಯೋತ್ಸವಕ್ಕೆ ಸಲ್ಮಾನ್ ರಷ್ದಿ ಆಗಮಿಸುವುದು ಇಡೀ ಭಾರತೀಯ ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ ಎಂಬ ಭಾವನೆಯನ್ನು ಸೃಷ್ಟಿಸಲಾಗುತ್ತದೆ. ಕೆಲವೇ ಮೂಲಭೂತವಾದಿ ಮತೀಯ ಸಂಘಟನೆಗಳು, ಕೆಲವೇ ಮೌಲ್ವಿಗಳು ತಮ್ಮ ಸ್ವಕಲ್ಪಿತ ಪ್ರಾತಿನಿಧಿತ್ವವವನ್ನೇ ಬಳಸಿಕೊಂಡು ಸಾಮುದಾಯಿಕ ಹಿತಾಸಕ್ತಿಗಳ ಸಂರಕ್ಷಕರಾಗಿ ಫಟ್ವಾಗಳನ್ನು ಹೊರಡಿಸುವುದನ್ನು ಇಲ್ಲಿ ಕಾಣಬಹುದು.

ಭಾರತದ ಸೆಕ್ಯುಲರಿಸಂನ ವéೈಶಿಷ್ಟ್ಯ ಎಂದರೆ ಇಲ್ಲಿ ಮತಾಂಧರಿಗೇ ಹೆಚ್ಚು ಮನ್ನಣೆ ದೊರೆಯುವುದು. ಸರ್ವ ಧರ್ಮ ಸಮಭಾವದ ಹೆಸರಿನಲ್ಲಿ ಧರ್ಮವನ್ನು ಪೋಷಿಸುವ ಸೋಗಿನಲ್ಲಿ ಮತೀಯವಾದಿಗಳಿಗೆ, ಧಾಮರ್ಿಕ ಢಂಬಾಚಾರಗಳಿಗೆ ಮನ್ನಣೆ ನೀಡುವ ಆಳ್ವಿಕರು ದೇವರನ್ನು ಒಂದು ಸಾರ್ವಜನಿಕ ಉದ್ಯಮವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಜ್ ಯಾತ್ರೆಗೆ ಕೇಂದ್ರ ಸಕರ್ಾರ ಕೋಟ್ಯಾಂತರ ರೂಗಳ ಸಬ್ಸಿಡಿ ನೀಡುತ್ತದೆ ಎಂದು ಆರೋಪಿಸಲಾಗುತ್ತದೆ. ಇದು ನಿಜವೇ. ಆದರೆ ಕೇಂದ್ರ ಸಕರ್ಾರಗಳು ಹಿಂದೂ ಉತ್ಸವಗಳಿಗೂ ಅಷ್ಟೇ ಪ್ರಮಾಣದ, ಇನ್ನೂ ಹೆಚ್ಚಿನ ಸಬ್ಸಿಡಿ ನೀಡುವುದನ್ನು ನಾವು ಗಮನಿಸುವುದೇ ಇಲ್ಲ. ಹನ್ನೆರಡು ವರ್ಷಗಳಿಗೊಮ್ಮೆ ಉಜ್ಜಯಿನಿ, ಅಲಹಾಬಾದ್, ನಾಸಿಕ್ ಮತ್ತು ಹರಿದ್ವಾರದಲ್ಲಿ ನಡೆಯುವ ಮಹಾ ಕುಂಭಮೇಳ ಉತ್ತಮ ನಿದರ್ಶನ. ಈ ಕುಂಭಮೇಳಗಳಿಗೆ ಒದಗಿಸಲಾಗುವ ಸಕರ್ಾರದ ಸಹಾಯಧನ 120 ಕೋಟಿ ರೂಗಳು. ಅದೇ ರೀತಿ ಹಜ್ ಯಾತ್ರೆಗೆ ಹೋಗುವ ಮುಸ್ಲಿಮರಿಗೂ ಸಕರ್ಾರ ಸಹಾಯಧನ ನೀಡುತ್ತದೆ. ಪಾಕಿಸ್ತಾನದ ಗುರುದ್ವಾರಕ್ಕೆ ಹೋಗುವ ಸಿಖ್ಖರಿಗೂ ನೀಡುತ್ತದೆ. ಅಮರನಾಥ ಯಾತ್ರೆ, ವéೈಷ್ಣೋದೇವಿ ಯಾತ್ರೆಗಳಿಗೂ ಸಕರ್ಾರವೇ ಖಚರ್ು ಮಾಡುತ್ತದೆ. ಒಂದು ವರದಿಯ ಪ್ರಕಾರ ದೆಹಲಿ ಸಕರ್ಾರದ ಒಟ್ಟು ಖಚರ್ಿನಲ್ಲಿ ಶೇ. 74ರಷ್ಟು ಧಾಮರ್ಿಕ-ಸಾಂಸ್ಕೃತಿಕ ಕ್ಷೇತ್ರಕ್ಕೇ ಮೀಸಲಾಗಿರುತ್ತದೆ.

ಸಕರ್ಾರ ಇಷ್ಟೆಲ್ಲಾ ಖಚರ್ು ಮಾಡಿ ಎಲ್ಲ ಧಾಮರ್ಿಕ ಕೇಂದ್ರಗಳನ್ನೂ ಪೋಷಿಸುತ್ತಿದ್ದರೂ, ಯಾವುದೇ ಧರ್ಮದ ನಾಯಕರೂ ತಮ್ಮ ಮೇಲಿನ ನಿಯಂತ್ರಣ, ನಿಬಂಧನೆಗಳನ್ನು ಸಹಿಸುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಹಾಗಾಗಿಯೇ ಧರ್ಮ ಮತ್ತು ಧಾಮರ್ಿಕ ವಿಚಾರಗಳನ್ನು ಕುರಿತು ವ್ಯಾಖ್ಯಾನ ಮಾಡುವ ಯಾವುದೇ ಲೇಖಕ ಹಲ್ಲೆಗೊಳಗಾಗುತ್ತಾನೆ. ದಮನಕ್ಕೊಳಗಾಗುತ್ತಾನೆ. ಬಹಿಷ್ಕೃತನಾಗುತ್ತಾನೆ. ಸಲ್ಮಾನ್ ರಷ್ದಿಯ ಸಟಾನಿಕ್ ವರ್ಸಸ್, ರಾಮಾನುಜಂ ಅವರ ಮುನ್ನೂರು ರಾಮಾಯಣ, ಡಿ.ಎನ್ ಝಾ ಅವರ ಮಿತ್ ಆಫ್ ಹೋಲಿ ಕೌ, ಆಬ್ರೇಮೆನನ್ ಅವರ ರಾಮಾಯಣ, ಜೇಮ್ಸ್ ಲೈನ್ ಅವರ ಶಿವಾಜಿ ಇವೆಲ್ಲವೂ ಮತೀಯ ಶಕ್ತಿಗಳ ದಾಳಿಗೆ ತುತ್ತಾಗಲು ಸಕರ್ಾರಗಳ ಈ ಓಲೈಕೆ ನೀತಿಯೇ ಕಾರಣವಾಗಿದೆ. ಜನರು ಯಾವ ಆಹಾರ ಸೇವಿಸಬಹುದು, ಕಲಾವಿದರು ಯಾವ ರೀತಿಯ ಕಲಾಕೃತಿ ಸೃಷ್ಟಿಸಬೇಕು, ಕವಿಗಳು ಹೇಗೆ ತಮ್ಮ ಕವಿತಾ ಕೌಶಲ್ಯವನ್ನು ಪ್ರದಶರ್ಿಸಬೇಕು, ಸಾಹಿತಿಗಳು ಹೇಗೆ ಕೃತಿರಚನೆ ಮಾಡಬೇಕು ಇವೆಲ್ಲವನ್ನೂ ನಮ್ಮ ಸಕರ್ಾರಗಳು ಮತಾಂಧ ಶಕ್ತಿಗಳ ಮೂಲಕ ನಿರ್ಧರಿಸುತ್ತದೆ. ಈ ನಿಯಮಗಳನ್ನು ಮೀರಿದವರು ಹುಸೇನ್, ರಷ್ದಿಗಳಾಗುತ್ತಾರೆ.

ರಷ್ದಿ ತಮ್ಮ ಸಟಾನಿಕ್ ವರ್ಸಸ್ ಕೃತಿಯಲ್ಲಿ ಪ್ರವಾದಿ ಪೈಗಂಬರ್ ಅವರನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದಾರೆ ಎಂದು ಆರೋಪಿಸಿ ಆ ಕೃತಿಯನ್ನ ನಿಷೇಧಿಸಿದ ಭಾರತ ಸಕರ್ಾರ ಮೂರು ದಶಕಗಳ ಹಿಂದೆ ಮಾಡಿದ ತಪ್ಪಿಗೆ ಇಂದಿಗೂ ಮತೀಯವಾದಿಗಳ ಆಜ್ಞಾಪಾಲಕನಂತೆ ವತರ್ಿಸಬೇಕಾಗಿದೆ. ರಷ್ದಿ ತಮ್ಮ ಕೃತಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಒಪ್ಪುವುದು ಬಿಡುವುದು ವೈಯ್ಯಕ್ತಿಕ ವಿಚಾರ. ಆದರೆ ಅವರ ಕೃತಿಯನ್ನು ನಿಷೇಧಿಸುವುದು, ಭಾರತೀಯ ಸಂಜಾತನಾದ ಒಬ್ಬ ಸಾಹಿತಿಯನ್ನು ಬಹಿಷ್ಕರಿಸುವುದು, ಭಾರತಕ್ಕೆ ಪ್ರವೇಶಿಸುವುದನ್ನೇ ತಡೆಗಟ್ಟುವುದು ಇವೆಲ್ಲವೂ ಅಸಾಂವಿಧಾನಿಕ ಮತ್ತು ಅನೈತಿಕ ವರ್ತನೆಗಳಾಗುತ್ತವೆ. ಸಂಪ್ರದಾಯವಾದಿ ಮುಸ್ಲಿಮರಿಗೆ ರಷ್ದಿಯವರ ಕೃತಿ ಆಕ್ಷೇಪಾರ್ಹವಾದರೆ ನ್ಯಾಯಾಂಗದ ಮೂಲಕ , ಹೋರಾಟದ ಮೂಲಕ, ಚಚರ್ೆಯ ಮೂಲಕ ಪ್ರತಿಭಟಿಸುವ ಅವಕಾಶವಿದೆ ಆದರೆ ಕೃತಿಯನ್ನೂ ಕೃತಿಕಾರನನ್ನೂ ನಿಷೇಧಿಸುವ ಅಧಿಕಾರ ಇರುವುದಿಲ್ಲ. ವಿಪಯರ್ಾಸವೆಂದರೆ ಭಾರತದಲ್ಲಿನ ಎಲ್ಲ ಮತೀಯ ಸಂಘಟನೆಗಳೂ ಈ ಅಧಿಕಾರವನ್ನು ತಮ್ಮ ಇಚ್ಚೆಗನುಸಾರವಾಗಿ ಬಳಸಿಕೊಳ್ಳುತ್ತಿವೆ.

ರಷ್ದಿ ಮುಸ್ಲಿಂ ಮೂಲಭೂತವಾದಿಗಳ ಗುರಿಯಾದರೆ ಹುಸೇನ್ ಹಿಂದೂ ಮೂಲಭೂತವಾದಿಗಳಿಗೆ ಗುರಿಯಾಗುತ್ತಾರೆ. ಅಲ್ಲಿ ಮೌಲ್ವಿಗಳು ಫತ್ವಾ ಹೊರಡಿಸಿದರೆ ಇಲ್ಲಿ ಭಜರಂಗಿಗಳು ಆದೇಶ ನೀಡುತ್ತಾರೆ. ಧಾಮರ್ಿಕ ಭಾವನೆಗಳು ಈ ಸಂಘಟನೆಗಳ ಮೂಲ ಬಂಡವಾಳವಾಗಿ ಪರಿಣಮಿಸುತ್ತವೆ, ಜನಸಾಮಾನ್ಯರ ನಂಬಿಕೆ ವಿಶ್ವಾಸಗಳು ಅಸ್ಮಿತೆಗಳನ್ನು ಸಂರಕ್ಷಿಸುವ ಪ್ರಬಲ ಅಸ್ತ್ರಗಳಾಗುತ್ತವೆ. ಆದ್ದರಿಂದಲೇ ರಷ್ದಿಯ ಕೃತಿಯನ್ನು ಓದದೆಯೇ ಕೃತಿಯನ್ನು ನಿಷೇಧಿಸಲಾಗುತ್ತದೆ, ಹುಸೇನ್ ಅವರ ಕಲಾಕೃತಿಯ ಗಂಧವನ್ನೂ ಅರಿಯದೆ ನಾಶಪಡಿಸಲಾಗುತ್ತದೆ. ಈ ನಿರ್ಣಯ ಕೈಗೊಳ್ಳುವವರು, ಈ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವವರು ಪ್ರತಿನಿಧಿಸುವುದು ಜನತೆಯ ಮನದಾಳದಲ್ಲಿನ ಅವ್ಯಕ್ತ ಭಾವನೆಗಳನ್ನೇ ಹೊರತು, ವಾಸ್ತವ ಜಗತ್ತಿನಲ್ಲಿ ಬಾಳಲಿಚ್ಚಿಸುವ ಜನಸಮುದಾಯಗಳನ್ನಲ್ಲ. ಹಾಗಾಗಿ ಸಂಘಟನೆಗಳ ಅಥವಾ ಕೆಲವೇ ನಾಯಕರ ನಿಲುವುಗಳೇ ಸಮುದಾಯದ ನಿಲುವುಗಳಾಗಿ, ಸಾರ್ವತ್ರಿಕ ಅಭಿಪ್ರಾಯಗಳಾಗಿ, ಸಾರ್ವಕಾಲಿಕ ಸತ್ಯಗಳಾಗಿ ಪ್ರತಿಪಾದಿಸಲ್ಪಡುತ್ತವೆ.

ಆದರೆ ಈ ಪ್ರತಿಪಾದನೆಗಳಿಗೆ ಮನ್ನಣೆ ನೀಡುವ ನಮ್ಮ ಆಳುವ ವರ್ಗಗಳಿಗೆ ಏನನ್ನೋಣ ? ಸಾಂವಿಧಾನಿಕ ತತ್ವಾದರ್ಶಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಹೊತ್ತಿರುವ ಜನ ಪ್ರತಿನಿಧಿಗಳು ತಮ್ಮ ಪ್ರಾತಿನಿಧಿಕ ಹೊಣೆಗಾರಿಕೆ, ಉತ್ತರದಾಯಿತ್ವಗಳನ್ನೂ ಮರೆತು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮತೀಯ ಶಕ್ತಿಗಳಿಗೆ ಶರಣಾಗುವುದು ಸ್ವತಂತ್ರ ಭಾರತದ ದುರಂತಗಳಲ್ಲೊಂದು. ರಷ್ದಿ, ಹುಸೇನ್ ಮತ್ತಿತರ ಕಲಾವಿದರ ಮೇಲೆ ನಿಷೇಧ ಹೇರುವ ಮತೀಯ ಸಂಘಟನೆಗಳ ಪ್ರಾತಿನಿಧಿಕ ಸತ್ವ ಏನೆಂದು ಗ್ರಹಿಸುವ ಸಾಮಥ್ರ್ಯವನ್ನೂ ಆಳ್ವಿಕರು ಕಳೆದುಕೊಂಡಿರುವುದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ನಿಷೇಧಕ್ಕೊಳಗಾದ ಕೃತಿ, ಕಲಾಕೃತಿ, ಕೃತಿಕಾರ ಮತ್ತು ಕಲಾವಿದರಿಗೆ ಭಾರತೀಯ ಸಂವಿಧಾನ ಯಾವ ರೀತಿಯ ನ್ಯಾಯ ಒದಗಿಸುತ್ತದೆ ಎಂಬ ಪ್ರಶ್ನೆ ಎದುರಾದಾಗ ನಮ್ಮ ಗಣತಂತ್ರದ ಆದ್ಯತೆಗಳು, ಪ್ರಜಾತಂತ್ರದ ಮೌಲ್ಯಗಳು, ಮಾನವೀಯ ತತ್ವಗಳು ಪ್ರಶ್ನಾರ್ಹವಾಗಿಬಿಡುತ್ತವೆ. ಸಲ್ಮಾನ್ ರಷ್ದಿಯ ಸಟಾನಿಕ್ ವರ್ಸಸ್ ಭಾರತದಲ್ಲಿ ನಿಷೇಧಿತವಾಗಿದ್ದರೂ ಕಾನೂನಿನ ಪ್ರಕಾರ ಪುಸ್ತಕದ ಪ್ರತಿಗಳನ್ನು ಆಮದು ಮಾಡಿಕೊಳ್ಳುವಂತಿಲ್ಲವಷ್ಟೆ. ಆದರೆ ಈ ಕೃತಿಯನ್ನು ಓದಲೂಬಾರದು, ಅಂತಜರ್ಾಲದಲ್ಲಿ ಡೌನ್ಲೋಡ್ ಮಾಡಬಾರದು ಎಂಬ ನಿಬಂಧನೆಗಳಿಲ್ಲ. ಅದರೆ ರಾಜಸ್ಥಾನ ಸಕರ್ಾರ ಮೂಲಭೂತವಾದಿಗಳಿಗೆ ಎಷ್ಟರ ಮಟ್ಟಿಗೆ ಹೆದರಿದೆ ಎಂದರೆ, ಈ ಕೃತಿಯ ಕೆಲವು ಅಧ್ಯಾಯಗಳನ್ನು ಸಾಹಿತ್ಯೋತ್ಸವದಲ್ಲಿ ಓದಿದ ಹರೀಶ್ ಕುಂಜ್ರು , ಅಮಿತಾವ್ ಕುಮಾರ್ ಮತ್ತಿಬ್ಬರು ಸಾಹಿತಿಗಳನ್ನು ಬಲವಂತವಾಗಿ ಹೊರಗೆ ತಳ್ಳಲಾಗಿದೆ. ಕೃತಿಯ ಸಾಲುಗಳನ್ನು ಓದಲೂ ಬಿಡದೆ, ರಷ್ದಿಯವರು ವಿಡಿಯೋ ಸಂದರ್ಶನದ ಮೂಲಕ ಮಾತನಾಡಲೂ ಅವಕಾಶ ನೀಡದೆ ಇರುವುದು ಪ್ರಜಾತಂತ್ರಕ್ಕೇ ಅಪಮಾನಕರ. ವಿಪಯರ್ಾಸವೆಂದರೆ ಎಂ.ಎಫ್. ಹುಸೇನ್ ಕಲಾಕೃತಿಗಳ ಪ್ರದರ್ಶನಕ್ಕೂ ಅವಕಾಶ ನೀಡದ ಬಿಜೆಪಿ ನಾಯಕರು ಈಗ ರಷ್ದಿಯ ಪರ ವಹಿಸುತ್ತಿದ್ದಾರೆ. ಭಾರತದಲ್ಲಿ ಎಲ್ಲವೂ ರಾಜಕೀಯವೇ, ಕ್ಷುದ್ರ ರಾಜಕೀಯ !

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಭುತ್ವದ ಪ್ರಯತ್ನಗಳಿಗೆ ಪೂರಕವಾಗಿ ತಮ್ಮ ಪ್ರಾತಿನಿಧಿಕ ಶಕ್ತಿಯನ್ನು ಬಳಸಿಕೊಳ್ಳುವ ಮತೀಯವಾದಿ ಸಂಘಟನೆಗಳು ಭಾರತದ ಸಂವಿಧಾನವನ್ನೇ ಅವಹೇಳನ ಮಾಡುತ್ತಿರುವುದನ್ನು ನೋಡಿದರೆ, ನಿಷೇಧಕ್ಕೊಳಗಾಗಬೇಕಿರುವುದು ಯಾರು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಸಂವಿಧಾನವನ್ನು ಗೌರವಿಸುವ ಪ್ರಜ್ಞಾವಂತ ಸಮಾಜ ಗಂಭೀರವಾಗಿ ಯೋಚಿಸಬೇಕಾದ ವಿಚಾರ ಇದು. ಪ್ರಜಾತಂತ್ರದ ಉಳಿವಿಗೆ ಇದು ಅಗತ್ಯವೂ ಹೌದು.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...