Thursday, July 05, 2012

ಡಾ. ಯು.ಆರ್. ಅನಂತಮೂರ್ತಿಗೆ ವೈಕಂ ಪ್ರಶಸ್ತಿ

ಡಾ. ಅನಂತಮೂರ್ತಿಗೆ ವೈಕಂ ಪ್ರಶಸ್ತಿ


:ಗಲ್ಫ್ ಮಲಯಾಳಿಗಳ ಸಾಂಸ್ಕೃತಿಕ ಸಂಘಟನೆ ‘ಪ್ರವಾಸಿ ದೋಹಾ’ ಸ್ಥಾಪಿಸಿರುವ 18ನೆ ವೈಕಂ ಮುಹಮ್ಮದ್ ಬಶೀರ್ ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್.ಅನಂತಮೂರ್ತಿ ಪಡೆದಿದ್ದಾರೆ.ಎಂ.ಟಿ. ವಾಸುದೇವನ್ ನಾಯರ್, ಬಾಬು ಮಾಥರ್ ಹಾಗೂ ಎಂ.ವಿ. ರಹ್ಮಾನ್‌ರನ್ನೊಳಗೊಂಡ ಆಯ್ಕೆ ಸಮಿತಿಯು ಅವರನ್ನು ಈ ಪ್ರಶಸ್ತಿಗಾಗಿ ಆರಿಸಿದೆ.ಪ್ರಶಸ್ತಿಯು ರೂ.50 ಸಾವಿರ ನಗದು, ಫಲಕ ಹಾಗೂ ಕಲಾವಿದ ನಂಬೂದಿರಿ ವಿನ್ಯಾಸಿಸಿರುವ ಕಿರು ಪ್ರತಿಮೆಯೊಂದನ್ನು ಒಳಗೊಂಡಿರುತ್ತದೆ.ಪ್ರಶಸ್ತಿ ಘೋಷಿಸಿದ ಆಯ್ಕೆ ಸಮಿತಿಯ ಸದಸ್ಯರು, ಅನಂತಮೂರ್ತಿ ಪಾಶ್ಚಿಮಾತ್ಯ ಜಗತ್ತಿನೊಂದಿಗೆ ಗುರುತಿಸಲ್ಪಟ್ಟಿರುವ ಆಧುನಿಕತೆಯ ಅಂಧಾನುಸರಣೆ ಮಾಡುವ ಶಕ್ತಿಗಳಿಂದ ದೂರವುಳಿದು, ಪರಂಪರೆಯೊಂದಿಗಿನ ಸಂಘರ್ಷವನ್ನು ತನ್ನ ಬರಹಗಳಲ್ಲಿ ಪಡಿಮೂಡಿಸಿದ್ದಾರೆ.ಭಾರತದ ಸಾಂಸ್ಕೃ ತಿಕ ಬಹುತ್ವವನ್ನು ಎತ್ತಿ ಹಿಡಿದ ಅನಂತಮೂರ್ತಿ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಮಾಜಿ ಉಪಕುಲಪತಿಯಾಗಿದ್ದರೂ, ತನ್ನ ಮಾತೃಭಾಷೆ ಕನ್ನಡದ ಬಗ್ಗೆ ನಿಷ್ಠೆ ಹೊಂದಿದ್ದಾರೆ.

ಇದಕ್ಕೆ ಅವರು ಕನ್ನಡದಲ್ಲಿ ಬರೆದ ಅಪಾರ ಸಾಹಿತ್ಯವೇ ಸಾಕ್ಷಿ. ಇದಕ್ಕಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.ಅನಂತಮೂರ್ತಿ ವೈಕಂ ಮುಹಮ್ಮದ್ ಬಶೀರ್‌ರನ್ನು ಇತರ ದೇಶಗಳ ಓದುಗರಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದವರು ಹೇಳಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬನಿಗೆ ಎಂ.ಎನ್.ವಿಜಯನ್ ಸ್ಮಾರಕ ವಿದ್ಯಾರ್ಥಿ ವೇತನವಾಗಿ ರೂ.15 ಸಾವಿರ ನೀಡಲಾಗುವುದೆಂದು ಪ್ರವಾಸಿ ಟ್ರಸ್ಟ್‌ನ ಆಡಳಿತ ಸಮಿತಿ ತಿಳಿಸಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...