Thursday, January 31, 2013

ಹಿಂದೂ ರಾಷ್ಟ್ರೀಯವಾದಿಗಳ ಪ್ರೇರಕ ಶಕ್ತಿಸುರೇಶ್ ಭಟ್ ಬಾಕ್ರಬೈಲುಸೌಜನ್ಯ: ವಾರ್ತಾಭಾರತಿಇದೇ ಫೆಬ್ರವರಿ 3ರಂದು ಮಂಗಳೂರಿನ ಕೆಂಜಾರು ಎಂಬಲ್ಲಿ ಹಿಂದೂ ವಿರಾಟ್ ದರ್ಶನ್ ಎಂಬ ಕಾರ್ಯಕ್ರಮವೊಂದು ನಡೆಯಲಿದ್ದು, ಅದಕ್ಕೆ ಭರದ ಸಿದ್ಧತೆಗಳಾಗುತ್ತಿರುವುದಾಗಿ ವರದಿಯಾಗಿದೆ. ಜನಸಾಮಾನ್ಯರು ಇದನ್ನೊಂದು ಹಿಂದೂಗಳ ಧಾರ್ಮಿಕ ಸಮಾವೇಶ ಎಂದು ಪರಿಭಾವಿಸುವ ಸಾಧ್ಯತೆಗಳಿರುವುದನ್ನು ಅಲ್ಲಗಳೆಯಲಾಗದು. ಆದರೆ ಅದೊಂದು ತಪ್ಪು ಕಲ್ಪನೆಯಾಗುತ್ತದೆ. ಯಾಕೆಂದರೆ ಈ ಸಮಾವೇಶವನ್ನು ಆಯೋಜಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ಧಾರ್ಮಿಕ ಸಂಘಟನೆಯೂ ಅಲ್ಲ, ಸಮಸ್ತ ಹಿಂದೂಗಳನ್ನು ಪ್ರತಿನಿಧಿಸುವ ಸಂಸ್ಥೆಯೂ ಅಲ್ಲ. ಅದು ಹಿಂದುತ್ವ ಎಂಬ ಶುದ್ಧ ರಾಜಕೀಯ ಸಿದ್ಧಾಂತದಡಿ ಕಾರ್ಯಾಚರಿಸುತ್ತಿರುವ ಒಂದು ಸಂಘಟನೆ. ರಾಜಕಾರಣದ ಜೊತೆ ಧರ್ಮವನ್ನು ಬೆರೆಸಿ ಎರಕಹೊಯ್ದಿರುವಂತಹ ಈ ಹಿಂದುತ್ವ ಸಿದ್ಧಾಂತ ಸಾವರ್ಕರ್‌ರ ವಿಶಿಷ್ಟ ಕೊಡುಗೆ. ಅಂಡಮಾನ್ ಜೈಲಿನಲ್ಲಿ ರಾಗಿ ಬೀಸುತ್ತಾ ಹೆಣೆಯಲಾಗಿರುವ ಈ ಜಾಣ್ಮೆಯ ಸಿದ್ಧಾಂತವನ್ನು ಸಾಮಾನ್ಯ ಜನರನ್ನು ಸೆಳೆಯಲೋಸುಗವೇ ಹೊಸೆಯಲಾಗಿದೆ. 

ಧರ್ಮವನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡುತ್ತಾ ಭಾರತವನ್ನೊಂದು ಹಿಂದೂ ರಾಷ್ಟ್ರವಾಗಿ ಪರಿವರ್ತಿಸಿ ಫ್ಯಾಸಿಸ್ಟ್ ಮಾದರಿಯ ಸರ್ವಾಧಿಕಾರ ಸ್ಥಾಪಿಸುವುದೇ ಅದರ ಅಂತಿಮ ಗುರಿ. ಸಾಮಾಜಿಕ, ಸಾಂಸ್ಕೃತಿಕ ಮುಖವಾಡದ ಹಿಂದೆ ರಾಜಕಾರಣ ಆರೆಸ್ಸೆಸ್ ತಾನೊಂದು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯೆಂದು ಎಷ್ಟೇ ಹೇಳಿ ಕೊಂಡರೂ ಅದು ಬರೀ ಮುಖವಾಡ ಅಷ್ಟೇ. ವಾಸ್ತವವಾಗಿ ಅದು ತನ್ನ ರಾಜಕೀಯ ಅಂಗಗಳಾದ ಜನಸಂಘ, ಭಾರತೀಯ ಜನತಾ ಪಕ್ಷಗಳ ಮುಖಾಂತರ ಹಿಂದುತ್ವ ಸಿದ್ಧಾಂತವನ್ನು ಕಾರ್ಯ ರೂಪಕ್ಕಿಳಿಸಲು ಶಥಪ್ರಯತ್ನ ಮಾಡುತ್ತಾ ಬಂದಿದೆ.

‘‘ಸಂಘಕ್ಕೆ ರಾಜಕಾರಣ ಇಲ್ಲ.ಸಂಘ ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಮೀಸಲಾಗಿದೆ’’ ಎನ್ನುತ್ತದೆ ಆರೆಸ್ಸೆಸ್ ಸಂವಿಧಾನದ ಕಲಮು 4(ಬಿ). ಅದೇ ರೀತಿ ಆರೆಸ್ಸೆಸ್‌ನ ಮುಖವಾಣಿ ಆರ್ಗನೈಸರ್‌ನ ಫೆಬ್ರವರಿ 6, 2000ದ ಸಂಚಿಕೆಯ ಸಂಪಾದಕೀಯ ಕೂಡ ‘‘ಆರೆಸ್ಸೆಸ್ ಒಂದು ರಾಜಕೀಯ ಪಕ್ಷವಲ್ಲ... ಅದರ ಪದಾಧಿಕಾರಿಗಳು ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಗಳಾಗಿರಬಾರದು... ಅದು ರಾಷ್ಟ್ರೀಯ ಚಟುವಟಿಕೆಗಳಿಗೆ ಪ್ರೇರಣೆ ನೀಡಲೆತ್ನಿಸುತ್ತಿರುವ ಒಂದು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ’’  ಎನ್ನುತ್ತದೆ.
ಗಾಂಧಿ ಹತ್ಯೆಯ ನಂತರ ನಿಷೇಧಕ್ಕೊಳಗಾದ ಸಂದರ್ಭದಲ್ಲಿಯೂ ಆರೆಸ್ಸೆಸ್ ತಾನೊಂದು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯೆಂದು ಹೇಳಿಕೊಂಡಿತು. ಆದರೆ ಮುಂದೊಮ್ಮೆ ಇದೇ ಆರೆಸ್ಸೆಸ್ ತಾನು ರಾಜಕಾರಣದಲ್ಲೂ ಕೈಯಾಡಿ ಸುತ್ತಿರುವ ವಿಚಾರವನ್ನು ಒಪ್ಪಿಕೊಳ್ಳಲೇಬೇಕಾ ಯಿತು. 1967ರಲ್ಲಿ ನ್ಯಾಯಾಲಯವೊಂದು ಆರೆಸ್ಸೆಸ್‌ನ ಹಣಕಾಸು ಮೂಲಗಳನ್ನು ಪ್ರಶ್ನಿಸಿ ಅದು ತೆರಿಗೆ ಕಟ್ಟುತ್ತಿದೆಯೇ ಎಂದು ಕೇಳಿದಾಗ, ತನ್ನ ಕೆಲಸ ರಾಜಕಾರಣಕ್ಕೆ ಸಮನಾಗಿರುವುದರಿಂದ ತಾನು ತೆರಿಗೆಗೆ ಬಾಧ್ಯನಲ್ಲ ಎಂದಿತ್ತು!

ಭಾರತೀಯ ಜನತಾ ಪಕ್ಷ ಎಂಬುದು ಆರೆಸ್ಸೆಸ್‌ನ ರಾಜಕೀಯ ಶಾಖೆ ಎಂಬ ಸತ್ಯಾಂಶವನ್ನು ಅದರ ಅಧಿಕೃತ ಪ್ರಕಟಣೆಗಳೆ, ಬಯಲುಗೊಳಿಸುತ್ತವೆ. ಆರೆಸ್ಸೆಸ್‌ನ ಕೇಂದ್ರ ಪ್ರಕಟಣಾ ಸಂಸ್ಥೆಯಾದ ಸುರುಚಿ ಪ್ರಕಾಶನ 1997ರಲ್ಲಿ ಪ್ರಕಟಿಸಿದ ಪರಮ್ ವೈಭವ್ ಕೆ ಪಥ್ ಪರ್ ಪುಸ್ತಕದಲ್ಲಿ ಬಿಜೆಪಿಯ ಹುಟ್ಟಿನ ಕುರಿತು ಸವಿಸ್ತಾರವಾದ ಲೇಖನವೇ ಇದೆ. ಈ ಪುಸ್ತಕದಲ್ಲಿ ಬಿಜೆಪಿ, ಎಬಿವಿಪಿ, ವಿಹಿಂಪ, ಹಿಂದೂ ಜಾಗರಣ್ ಮಂಚ್ ಸೇರಿದಂತೆ ಆರೆಸ್ಸೆಸ್‌ನ 40ಕ್ಕೂ ಅಧಿಕ ಉಪಸಂಸ್ಥೆಗಳ ಮತ್ತು ಸ್ವಯಂಸೇವಕರ ವಿವಿಧ ಚಟುವಟಿಕೆಗಳ ವಿವರಗಳಿವೆ. 
 
ಆರೆಸ್ಸೆಸ್‌ನ ಗುರು ಗೋಲ್ವಲ್ಕರ್‌ರ ಹೇಳಿಕೆಗಳು ಕೂಡ ಬಿಜೆಪಿಗೆ ಸಂಘದ ಸ್ವಯಂಸೇವಕರನ್ನು ಎರವಲು ನೀಡಲಾಗುತ್ತಿರುವ ವಿಚಾರವನ್ನು ಅರುಹುತ್ತವೆ: ‘‘ನಮ್ಮ ಕೆಲವು ಸ್ವಯಂಸೇವಕರು ರಾಜಕೀಯದಲ್ಲಿ ದುಡಿಯುತ್ತಿದ್ದಾರೆಂಬ ವಿಷಯವೂ ನಮಗೆ ಗೊತ್ತಿದೆ. ಅಲ್ಲಿ ಅವರು ಅಗತ್ಯ ಬಿದ್ದಂತೆ ಸಾರ್ವಜನಿಕ ಸಭೆ, ಮೆರವಣಿಗೆಗಳನ್ನು ಸಂಘಟಿಸುವ ಕೆಲಸ ವನ್ನೂ ಘೋಷಣೆ ಕೂಗುವುದನ್ನೂ ಮಾಡಬೇಕು. ಇವೆಲ್ಲವೂ ನಮ್ಮ ಕೆಲಸದ ಭಾಗವಲ್ಲ, ಆದಾಗ್ಯೂ ನಟನೆಗೆ ಯಾವ ಪಾತ್ರವನ್ನು ವಹಿಸಲಾಗುತ್ತದೊ ಅದನ್ನಾತ ತನ್ನ ಪೂರ್ತಿ ಸಾಮರ್ಥ್ಯವನ್ನು ಬಳಸಿ ಕೊಂಡು ನಿರ್ವಹಿಸಬೇಕು.......’’
 
ಫ್ಯಾಸಿಸಂ, ನಾಝಿಸಂ ಪ್ರಭಾವ ಮುಸೊಲಿನಿಯ ಕಾಲದಲ್ಲಿ ಇಟಲಿಯಲ್ಲಿ ಹುಟ್ಟಿಕೊಂಡ ಫ್ಯಾಸಿಸಂ ಮೂಲತಃ ರಾಷ್ಟ್ರೀಯವಾದಿ ಸಿದ್ಧಾಂತ, ಪ್ರಜಾಸತ್ತೆಯ ದಮನ ಮತ್ತು ಸರ್ವಾಧಿಕಾರಿ ಆಡಳಿತವನ್ನು ಆಧರಿಸಿದ ಒಂದು ರಾಜಕೀಯ ವ್ಯವಸ್ಥೆ. ಜರ್ಮನಿಯಲ್ಲಿ ಹಿಟ್ಲರ್ ಅನುಸರಿಸಿದ ನಾಝಿಸಂ ಸಿದ್ಧಾಂತ ಇದೇ ಫ್ಯಾಸಿಸಂನ ಒಂದು ಶಾಖೆ. ಈ ಅವಳಿ ಸಿದ್ಧಾಂತಗಳು ಪ್ರಪಂಚದೆಲ್ಲೆಡೆ ಮಾನವಹಕ್ಕುಗಳ ಅತ್ಯಧಿಕ ಉಲ್ಲಂಘನೆಗೆ ಕಾರಣವಾಗಿವೆ.
ಫ್ಯಾಸಿಸಂ, ನಾಝಿಸಂ ಆರ್ಯ ಶ್ರೇಷ್ಠತೆಯ ಪ್ರತಿಪಾದಕರು. ಬ್ರಾಹ್ಮಣ ಪಾರಮ್ಯವನ್ನು ಎತ್ತಿಹಿಡಿಯುವ ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್‌ನ ಹಿಂದೂ ರಾಷ್ಟ್ರೀಯವಾದಿಗಳು ಫ್ಯಾಸಿಸಂ ಮತ್ತು ನಾಜಿಸಂ ಸಿದ್ಧಾಂತಗಳಿಂದ ಗಾಢವಾಗಿ ಪ್ರಭಾವಿತರಾಗಿದ್ದರು ಎನ್ನುವುದಕ್ಕೆ ಹಲವಾರು ದಾಖಲೆಗಳು ಲಭ್ಯವಿವೆ. ಅಖಂಡ ಸಾಮ್ರಾಜ್ಯದ ಕಲ್ಪನೆ, ಏಕರೂಪತೆಯ ಹೇರುವಿಕೆ, ಜನಾಂಗೀಯವಾದ, ಬಿಗಿ ಕವಚದೊಳಗಿನ ರಾಷ್ಟ್ರೀಯತೆ ಹಾಗೂ ತೀವ್ರ ಸೈನಿಕ ಪ್ರವೃತ್ತಿಯ ಪ್ರತಿಪಾದನೆಯ ವಿಚಾರಗಳಿಗೆ ಸಂಬಂಧಪಟ್ಟಂತೆ ಇವುಗಳ ನಡುವೆ ತುಂಬಾ ಸಾಮ್ಯತೆ.
ಭಾರತದ ಹಿಂದೂಗಳಲ್ಲಿ ಸೈನಿಕ ಮನೋಪ್ರವೃತ್ತಿ ಬೆಳೆಸಿ ಹಿಂದೂ ಸಮ್ರಾಜ್ಯವನ್ನು ಸೈನೀಕರಣಗೊಳಿಸುವ ಆರೆಸ್ಸೆಸ್ ಚಿಂತನೆಗಳು ಫ್ಯಾಸಿಸಂ, ನಾಝಿಸಂಗಳಿಂದಲೆ ಹರಿದುಬಂದಿವೆ. ಹಿಂದುತ್ವ ಮತ್ತು ಫ್ಯಾಸಿಸಂ ಅಂದು ಬಾಲಗಂಗಾಧರ ತಿಲಕರ ಕೇಸರಿ ಪತ್ರಿಕೆ ಮುಸೊಲಿನಿಯ ಜೀವನ ಚರಿತ್ರೆಯನ್ನಲ್ಲದೆ ಇಟಲಿಯ ಕುರಿತಂತೆ ಅನೇಕ ಲೇಖನಗಳನ್ನು ಪ್ರಕಟಿಸಿತ್ತು. 
 
ಆಗಸ್ಟ್ 13, 1929ರ ಕೇಸರಿಯಲ್ಲಿ ಪ್ರಕಟವಾಗಿದ್ದ ಮಹತ್ವದ ಲೇಖನವೊಂದರ ಭಾಗ ಹೀಗಿದೆ: ‘‘ಇಟಲಿಯ ಯುವಜನರು ಶಿಸ್ತಿನಿಂದಿದ್ದಾರೆ.ಇದಕ್ಕೆ ಮುಖ್ಯ ಕಾರಣಗಳೆಂದರೆ-ಅವರು ವ್ಯಾಪಕವಾದ ಅಚಲ ಧಾರ್ಮಿಕ ಭಾವನೆಗಳನ್ನು ಹೊಂದಿದ್ದಾರೆ; ಜನರಿಗೆ ಕುಟುಂಬದ ಮೇಲೆ ಪ್ರೀತಿಯಿದೆ; ಸಾಂಪ್ರದಾಯಿಕ ಮೌಲ್ಯಗಳಿಗೆ ಆದರ ತೋರಿಸುತ್ತಿದ್ದಾರೆ; ವಿಚ್ಛೇದನೆ ಇರ ಕೂಡದು,ಏಕಾಂಗಿಗಳಾಗಕೂಡದು,ಮಹಿಳೆಯರಿಗೆ ಮತದಾನದ ಹಕ್ಕು ಇರಕೂಡದು, ಒಲೆಬುಡದಲ್ಲಿರುವುದೇ ಮಹಿಳೆಯರ ಕರ್ತವ್ಯವೆಂದು ನಂಬಿದ್ದಾರೆ.’’
ಸರ್ವಾಧಿಕಾರಿ ಮುಸೊಲಿನಿ ಎಲ್ಲ ಸಮಾಜವಾದಿ ಮತ್ತು ಪ್ರಗತಿಪರ ರಾಜಕೀಯ ಪಕ್ಷಗಳನ್ನು ಹಿಂಸಾತ್ಮಕವಾಗಿ ಬಗ್ಗುಬಡಿಯಲೆಂದು ಜನಸೈನ್ಯಗಳನ್ನು (ಎಂವಿಎಸ್‌ಎನ್ ಅಥವಾ ಕರಿಷರಟುಗಳು) ಸ್ಥಾಪಿಸಿದ್ದ. ಸಮಾಜವಾದಿ ಗಳನ್ನು, ಕಮ್ಯೂನಿಸ್ಟರನ್ನು ಮತ್ತಿತರ ಪ್ರಗತಿ ಪರರನ್ನು ಬೆದರಿಸುವುದಕ್ಕಾಗಿ ನುರಿತ ಯೋಧರ ‘ಸ್ಕ್ವಾಡ್ರಿಸಿ’ ಪಡೆಗಳನ್ನು ಸ್ಥಾಪಿಸಿದ್ದ. ಅದೇ ರೀತಿ ‘ಬಲಿಲ್ಲಾ’ ಮತ್ತು ‘ಅವಾನ್‌ಗಾರ್ಡಿಸಿ’  ಎಂಬ ಯುವಜನ ಸಂಘಟನೆಗಳಿದ್ದವು. 
 
ಈ ರೀತಿಯ ಸಮಾಜದ ಸೈನ್ಯೀಕರಣವೆ ಇಟಲಿಯ ಸಮಾಜವನ್ನು ಅರಾಜಕತೆಯಿಂದ ಸುವ್ಯವಸ್ಥೆಯೆಡೆಗೆ ಒಯ್ದು ಅದರ ನೈಜ ಪರಿವರ್ತನೆಗೆ ಮುಖ್ಯ ಕಾರಣವಾಯಿತೆಂದು ನಂಬಿದ ಹಿಂದೂ ರಾಷ್ಟ್ರೀಯವಾದಿಗಳು ಅದರತ್ತ ಆಕರ್ಷಿತರಾದರು. ಇವರಲ್ಲೊಬ್ಬರಾದ ಡಾ.ಮೂಂಜೆ 1931ರಿಂದ 37ರ ತನಕ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು. ಇದೇ ಮೂಂಜೆ 1925ರಲ್ಲಿ ಸ್ಥಾಪಿತವಾದ ಆರೆಸ್ಸೆಸ್‌ನ ಓರ್ವ ಸಂಸ್ಥಾಪಕರೂ ಆಗಿದ್ದರು. 1931ರಲ್ಲಿ ಇಟಲಿಗೆ ತೆರಳಿದ ಮೂಂಜೆ ರೋಮ್‌ನ ಮಿಲಿಟರಿ ಕಾಲೇಜು, ಕೇಂದ್ರ ದೈಹಿಕ ಶಿಕ್ಷಣ ಮಿಲಿಟರಿ ಶಾಲೆ ಹಾಗೂ ದೈಹಿಕ ಶಿಕ್ಷಣದ ಫ್ಯಾಸಿಸ್ಟ್ ಅಕಾಡಮಿಗಳನ್ನು ನೋಡಿಕೊಂಡು ‘ಬಲಿಲ್ಲಾ’, ‘ಅವಾನ್‌ಗಾರ್ಡಿಸಿ’ ಕಚೇರಿಗಳಿಗೆ ಭೇಟಿಯಿತ್ತರು. 

ಅಲ್ಲಿ ಸೇರ್ಪಡೆಯಾಗಿದ್ದ 6ರಿಂದ 18 ವರ್ಷ ಪ್ರಾಯದ ಮಕ್ಕಳಿಗೆ ವಾರಕ್ಕೊಮ್ಮೆ ನೀಡುತ್ತಿದ್ದ ದೈಹಿಕ ಕಸರತ್ತು, ಸೇನಾ ಮಾದರಿಯ ತರಬೇತಿ, ಡ್ರಿಲ್, ಪೆರೇಡ್ ಇತ್ಯಾದಿಗಳನ್ನು ಬಹಳ ಮೆಚ್ಚಿಕೊಂಡರು. ಮೂಂಜೆ ಇದೆಲ್ಲವನ್ನೂ ತಮ್ಮ ದಿನಚರಿಯಲ್ಲಿ ದಾಖಲಿಸಿದ್ದಾರೆ. ಹಾಗಾಗಿ ಮುಸೊಲಿನಿಯ ಈ ಫ್ಯಾಸಿಸ್ಟ್ ಸಂಘಟನೆಗಳ ರಚನಾ ವಿನ್ಯಾಸಕ್ಕೂ ಆರೆಸ್ಸೆಸ್ ಮತ್ತು ಸಂಘ ಪರಿವಾರದ ರಚನಾ ವಿನ್ಯಾಸಕ್ಕೂ ಬಹಳಷ್ಟು ಸಾಮ್ಯಗಳಿರುವುದು ಖಂಡಿತಾ ಕಾಕತಾಳೀಯವಲ್ಲ.
1934ರಲ್ಲಿ ಹೆಡ್ಗೆವಾರ್ ಮತ್ತು ಲಾಲು ಗೋಖಲೆಯವರನ್ನು ಭೇಟಿಯಾದ ಮೂಂಜೆ ಹೀಗೆ ಹೇಳಿದರು: ‘‘......ವಿಷಯ ಏನೆಂದರೆ ಅಂದಿನ ಶಿವಾಜಿ ಅಥವಾ ಇಂದಿನ ಮುಸೊಲಿನಿ, ಹಿಟ್ಲರ್‌ಗಳಂತಹ ಹಿಂದೂ ಸರ್ವಾಧಿಕಾರಿಯಿರುವ ನಮ್ಮದೇ ಸ್ವರಾಜ್ಯ ಬೇಕಾಗಿದೆ... ಆದರೆ ಅಂತಹ ಸರ್ವಾಧಿಕಾರಿಯೊಬ್ಬ ಹುಟ್ಟುವ ತನಕ ನಾವು ಕೈಕಟ್ಟಿ ಕೂರಬೇಕೆಂದು ಇದರರ್ಥವಲ್ಲ. ಒಂದು ವೈಜ್ಞಾನಿಕ ಯೋಜನೆ ಯನ್ನು ರೂಪಿಸಿ ಅದಕ್ಕೆ ಪ್ರಚಾರ ನೀಡಬೇಕು.’’ 

1933ರ ಬ್ರಿಟಿಷ್ ಗುಪ್ತಚರ ವರದಿಯೊಂದು ಆರೆಸ್ಸೆಸ್‌ನ ಫ್ಯಾಸಿಸ್ಟ್ ಸ್ವಭಾವವನ್ನೂ ಅದಕ್ಕೂ ಮೂಂಜೆಗೂ ಇದ್ದ ನಂಟುಗಳನ್ನೂ ಹೊರಗೆಡವುತ್ತದೆ. ಆ ವರದಿಯ ಪ್ರಕಾರ 1927ರಲ್ಲಿ ಮರಾಠಿ ಭಾಷಾ ಜಿಲ್ಲೆಗಳಲ್ಲಿ ಹಾಗೂ ಕೇಂದ್ರೀಯ ಪ್ರಾಂತಗಳಲ್ಲಿ ಆರೆಸ್ಸೆಸ್‌ನ್ನು ಪುನರ್‌ವ್ಯವಸ್ಥಿತಗೊಳಿಸುವ ಜವಾಬ್ದಾರಿಯನ್ನು ಮೂಂಜೆಗೆ ವಹಿಸಲಾಗಿತ್ತು. ‘‘ಇಟಲಿಯ ಫ್ಯಾಸಿಸ್ಟರ ಮತ್ತು ಜರ್ಮನಿಯ ನಾಝಿಗಳ ಮಾದರಿಯಲ್ಲೇ ಭವಿಷ್ಯದ ಭಾರತದಲ್ಲಿಯೂ ಕಾರ್ಯಾಚರಿಸುವ ದಿನವನ್ನು ಆರೆಸ್ಸೆಸ್ ಎದುರು ನೋಡುತ್ತಿದೆ ಎಂದರೆ ಪ್ರಾಯಶಃ ಅತಿಶಯೋಕ್ತಿಯಾಗಲಾರದು’’ ಎನ್ನುತ್ತದೆ ಆ ವರದಿ.

ಹಿಂದುತ್ವ ಮತ್ತು ನಾಝಿಸಂ

1930ರ ದಶಕದಲ್ಲಿ ಅಸ್ಥಿರವಾಗಿದ್ದ ಜರ್ಮನಿಯನ್ನು ಆರ್ಥಿಕ ಹಿಂಜರಿತದಿಂದ, ಕಮ್ಯೂನಿಸ್ಟರಿಂದ, ಯಹೂದ್ಯ ಮತ್ತಿತರ ಅಲ್ಪಸಂಖ್ಯಾತರಿಂದ ರಕ್ಷಿಸಬಲ್ಲ ಏಕೈಕ ವ್ಯಕ್ತಿ ತಾನೆಂದು ಬಹುತೇಕ ಜರ್ಮನರನ್ನು ನಂಬಿಸುವಲ್ಲಿ ಹಿಟ್ಲರ್ ಯಶಸ್ವಿಯಾಗಿದ್ದ. ಜರ್ಮನಿಯ ಕೆಳ ಮತ್ತು ಮಧ್ಯಮ ವರ್ಗಗಳ ಆರ್ಥಿಕ ಆವಶ್ಯಕತೆಗಳನ್ನು ಮನಗಂಡ ಹಿಟ್ಲರ್ ಅವರಿಗಿಷ್ಟವಾಗುವಂತೆ ನಡೆದುಕೊಂಡ. ಅವರಲ್ಲಿ ರಾಷ್ಟ್ರೀಯತೆ, ಯಹೂದ್ಯ ಮತ್ತು ಕಮ್ಯೂನಿಸ್ಟ್ ವಿರೋಧಿ ಭಾವನೆಗಳನ್ನು ಉದ್ದೀಪಿಸಿದ. ಹಾಗಾಗಿ ಮುಂದೆ ಆತ ಲಕ್ಷಾಂತರ ಕಮ್ಯೂನಿಸ್ಟರ ಮತ್ತು ಯಹೂದ್ಯರ ಮಾರಣಹೋಮ ನಡೆಸಿದಾಗ ಅದಕ್ಕೆ ಜನರಿಂದ ವಿಶೇಷ ಪ್ರತಿರೋಧ ವ್ಯಕ್ತವಾಗಲಿಲ್ಲ. 

ಗುಜರಾತ್ ವಿದ್ಯಮಾನಗಳನ್ನು ಇದರೊಂದಿಗೆ ಹೋಲಿಸಬಹುದು. ಹಿಟ್ಲರನ ಜನಾಂಗದ್ವೇಷದ ಕ್ರಮಗಳನ್ನು ಹೊಗಳಿ ಅದನ್ನು ಅನುಸರಿಸಬೇಕೆಂದು ಪರೋಕ್ಷವಾಗಿ ಹೇಳಿದ ಗೋಲ್ವಲ್ಕರ್‌ರನ್ನು ಅವರ ಮಾತುಗಳಲ್ಲಿಯೆ ಕೇಳಿ: ‘‘ಜರ್ಮನಿ ತನ್ನ ಸ್ವಂತ ಜನಾಂಗ ಹಾಗೂ ಸಂಸ್ಕೃತಿಯ ಪರಿಶುದ್ಧತೆಯನ್ನು ಕಾಪಾಡುವುದಕ್ಕೋಸ್ಕರ ದೇಶದೊಳಗಿದ್ದ ಸೆಮಿಟಿಕ್ ಜನಾಂಗಗಳಾದ ಯಹೂದಿಗಳನ್ನು ಖಾಲಿ ಮಾಡಿ ಇಡೀ ವಿಶ್ವಕ್ಕೆ ಆಘಾತ ನೀಡಿತು. ಇಲ್ಲಿ ವ್ಯಕ್ತವಾಗಿರುವುದು ಅತ್ಯುನ್ನತ ಮಟ್ಟದ ಜನಾಂಗ ಗರ್ವ.
ಮೂಲಭೂತ ವ್ಯತ್ಯಾಸಗಳನ್ನು ಹೊಂದಿರುವ ಜನಾಂಗಗಳನ್ನೂ ಸಂಸ್ಕೃತಿಗಳನ್ನೂ ಒಂದು ಏಕೀಕೃತ ಸಮಗ್ರವಾಗಿಸುವುದು ಹೆಚ್ಚುಕಮ್ಮಿ ಅಸಾಧ್ಯವೆನ್ನುವುದನ್ನೂ ಜರ್ಮನಿ ತೋರಿಸಿಕೊಟ್ಟಿದೆ. ಹಿಂದುಸ್ತಾನದಲ್ಲಿರುವ ನಾವು ಈ ಉತ್ತಮ ಪಾಠವನ್ನು ಕಲಿತು ಅದರ ಲಾಭ ಪಡೆದುಕೊಳ್ಳಬೇಕು.’’

ದೇಶಭಕ್ತಿ

ದೇಶಭಕ್ತಿಯ ಗುತ್ತಿಗೆ ಪಡೆದವರಂತೆ ವರ್ತಿಸುವ ಈ ಮಂದಿ 1942ರ ಕ್ವಿಟ್ ಇಂಡಿಯ ಚಳವಳಿಯ ವೇಳೆ ಬ್ರಿಟಿಷರ ಬೆಂಬಲಕ್ಕೆ ನಿಂತಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಉದಾಹರಣೆಗೆ ಇವರ ಓರ್ವ ಮುಖಂಡ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿಯನ್ನೇ ತೆಗೆದುಕೊಳ್ಳಿ. ಕ್ವಿಟ್ ಇಂಡಿಯ ಚಳವಳಿಯ ಕಾಲದಲ್ಲಿ ಮುಸ್ಲಿಂ ಲೀಗ್‌ನ ಫಝಲುಲ್ ಹಕ್ ನೇತೃತ್ವದ ಬಂಗಾಳ ಸರಕಾರದಲ್ಲಿ ಮುಖರ್ಜಿ ಹಣಕಾಸು ಸಚಿವ ಆಗಿದ್ದರು. 

ಮಂತ್ರಿಯಾಗುಳಿಯುವ ಹೆಬ್ಬಯಕೆಯಿಂದ ಆತ ಜುಲೈ 26, 1942ರಂದು ಬಂಗಾಳದ ರಾಜ್ಯಪಾಲ ಸರ್ ಜಾನ್ ಹರ್ಬರ್ಟ್‌ಗೆ ಪತ್ರ ಬರೆದು ಬ್ರಿಟಿಷರೊಂದಿಗೆ ಅಧಿಕಾರ ಹಂಚಿಕೆಗಾಗಿ ನಿರ್ದಿಷ್ಟ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದರು: ‘‘....ಕಾಂಗ್ರೆಸ್ ತನ್ನ ಶಕ್ತಿಮೀರಿ ಪ್ರಯತ್ನಿಸಿದರೂ ಈ ಚಳುವಳಿಯನ್ನು ಬಂಗಾಳದಲ್ಲಿ ನೆಲೆಗೊಳಿಸಲು ಸಾಧ್ಯವಾಗದ ರೀತಿಯಲ್ಲಿ ಪ್ರಾಂತ್ಯದ ಆಡಳಿತವನ್ನು ನಡೆಸಬೇಕು...... ಭಾರತೀಯರು ಬ್ರಿಟಿಷರಲ್ಲಿ ವಿಶ್ವಾಸವಿಡಬೇಕು..... ನೀವು ರಾಜ್ಯಪಾಲರಾಗಿ ಪ್ರಾಂತ್ಯದ ಸಾಂವಿಧಾಕ ಮುಖ್ಯಸ್ಥನಂತೆ ಕಾರ್ಯಾಚರಿಸಲಿರುವಿರಿ. ನಿಮ್ಮ ಸಂಪೂರ್ಣ ವ್ಯವಹಾರಗಳನ್ನು ನಿಮ್ಮ ಮಂತ್ರಿಗಳ ಸಲಹೆ ಪ್ರಕಾರ ನಿರ್ವಹಿಸಲಿರುವಿರಿ.’’

ಫ್ಯಾಸಿಸಂ, ನಾಝಿಸಂಗಳು ಇಟಲಿ, ಜರ್ಮನಿಯ ಮಧ್ಯಮ ಮತ್ತು ಕೆಳ ವರ್ಗಗಳಲ್ಲಿ ಅನಾಯಾಸವಾಗಿ ಬೇರೂರಿದ ಮಾದರಿಯಲ್ಲೆ ಭಾರತದಲ್ಲಿ ಹಿಂದೂ ರಾಷ್ಟ್ರೀಯವಾದ ಬೆಳೆಯುತ್ತಿರುವುದು ಆತಂಕಕಾರಿ. ದೇಶಭಕ್ತಿಯ ಮಂತ್ರ ಪಠಿಸುವ ಮೂಲಕ ಜನರನ್ನು ರೊಚ್ಚಿಗೆಬ್ಬಿಸುವ ಪ್ರಯತ್ನವೂ ನಡೆಯುತ್ತಿದೆ. ಷೇಕ್ಸ್‌ಪಿಯರ್ ನಾಟಕವೊಂದರಲ್ಲಿ ಜೂಲಿಯಸ್ ಸೀಸರ್ ಆಡುವ ಈ ಕೆಳಗಿನ ಮಾತುಗಳನ್ನು ನಾವೆಲ್ಲರೂ ಮೆಲುಕು ಹಾಕಬೇಕಲ್ಲದೆ, ಅದನ್ನೊಂದು ಎಚ್ಚರಿಕೆಯ ಕರೆಗಂಟೆಯಾಗಿ ಪರಿಗಣಿಸಬೇಕು. 

‘‘ಪ್ರಜೆಗಳಲ್ಲಿ ತೀವ್ರ ಮಟ್ಟದ ದೇಶಭಕ್ತಿಯ ಭಾವನೆಯನ್ನು ಉದ್ದೀಪಿಸುವುದಕ್ಕಾಗಿ ರಣಕಹಳೆಯೂದುವ ನಾಯಕನ ಬಗ್ಗೆ ಎಚ್ಚರಿಕೆ ವಹಿಸಿ. ದೇಶಭಕ್ತಿ ಎರಡಲಗಿನ ಖಡ್ಗವಿದ್ದಂತೆ; ಒಂದೆಡೆ ಅದು ಧಮನಿಗಳಲ್ಲಿ ಕೆಚ್ಚು ತುಂಬಿದರೆ ಇನ್ನೊಂದೆಡೆ ಮನಸ್ಸನ್ನು ಸಂಕುಚಿತಗೊಳಿಸುತ್ತದೆ. ರಣಕಹಳೆಯ ಸದ್ದು ಅತ್ಯುಚ್ಚ ಮಟ್ಟಕ್ಕೇರುತ್ತಿದ್ದಂತೆ ದ್ವೇಷದಿಂದ ನೆತ್ತರು ಕುದಿಯತೊಡಗುವಾಗ ಮನಸ್ಸು ಮುಚ್ಚಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಾಯಕನಿಗೆ ಪ್ರಜೆಗಳ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಮೇಯವೇ ಇರುವುದಿಲ್ಲ. ಏಕೆಂದರೆ ಭೀತಿಗೊಳಗಾಗಿರುವ, ದೇಶಭಕ್ತಿಯಿಂದ ಕುರುಡಾಗಿರುವ ಜನರೇ ಖುದ್ದಾಗಿ ತಮ್ಮೆಲ್ಲ ಹಕ್ಕುಗಳನ್ನು ಸಂತಸದಿಂದ ಬಿಟ್ಟುಕೊಡುತ್ತಾರೆ.....’’  
*****************
ಆಧಾರ: ಎ.ಜಿ.ನೂರಾನಿಯವರ The RSS and the BJP; Savarker and Hindutva ಮತ್ತು ಶಂಶುಲ್ ಇಸ್ಲಾಂರವರ  Know the RSS
 

ಪತ್ರಕರ್ತ ಸೂರಿಂಜೆಯ ವಿರುದ್ಧ ಸಂಚು ರೂಪಿಸಿದ ಪೊಲೀಸರಿಗೆ ಶಿಕ್ಷೆಯಾಗಲಿವಾರ್ತಾಭಾರತಿ ಸಂಪಾದಕೀಯ


ಕೊನೆಗೂ ಪತ್ರಕರ್ತ ನವೀನ್ ಸೂರಿಂಜೆಯವರ ಮೇಲಿನ ಪ್ರಕರಣವನ್ನು ಹಿಂದೆಗೆಯಲು ಸರಕಾರ ಮನಸ್ಸು ಮಾಡಿದೆ. ಇದೇನೂ ಪತ್ರಕರ್ತರಿಗೆ ಮಾಡಿದ ಉಪಕಾರವಲ್ಲ. ಸರಕಾರ ತಾನು ಮಾಡಿದ ತಪ್ಪನ್ನು ತಿದ್ದಿಕೊಂಡಿದೆಯಷ್ಟೇ. ಆ ಮೂಲಕ ಇನ್ನೊಂದು ಮುಖಭಂಗವನ್ನು ಸರಕಾರ ತಪ್ಪಿಸಿಕೊಂಡಿದೆಯೆನ್ನಬಹುದು.  ಒಬ್ಬ ಪತ್ರಕರ್ತನ ಮೇಲಿನ ಮೊಕದ್ದಮೆಗಳನ್ನು ಹಿಂದೆಗೆಯಲು ಸರಕಾರಕ್ಕೆ ಇಷ್ಟು ಸಮಯ ಹಿಡಿಯಿತು. ಆದರೆ ಈ ಸರಕಾರದ ಇತಿಹಾಸವನ್ನು ಬಿಡಿಸಿದರೆ, ಈ ಹಿಂದೆ ಹಲವು ದುಷ್ಕರ್ಮಿಗಳ ಮೇಲಿನ ಪ್ರಕರಣಗಳನ್ನು ಅತ್ಯಂತ, ಸಂತೋಷ ಹೆಮ್ಮೆಯಿಂದ ಹಿಂದೆಗೆದಿದೆ. ಈ ಹಿಂದೆ, ಕೋಮು ಗಲಭೆಯಲ್ಲಿ ಭಾಗವಹಿಸಿದ ಹಲವು ದುಷ್ಕರ್ಮಿಗಳನ್ನು, ಸಮಾಜ ವಿದ್ರೋಹದಲ್ಲಿ ತೊಡಗಿದ್ದ ಸಂಘಪರಿವಾರದ ಕಾರ್ಯಕರ್ತರನ್ನು ಸ್ವಾತಂತ್ರ ಯೋಧರೋ ಎಂಬ ರೀತಿಯಲ್ಲಿ ಸಂಪುಟ ಅವರ ಮೇಲಿದ್ದ ಪ್ರಕರಣಗಳನ್ನು ತೆಗೆದು ಹಾಕಿತ್ತು. ಇಂದು ಸಮಾಜದಲ್ಲಿ ಕೋಮು ಗಲಭೆ, ಕೋಮು ಪ್ರಚೋದನೆಗಳು ನಡೆದರೆ ಅವರನ್ನು ಪೊಲೀಸರು ಬಂಧಿಸಲು ಹಿಂದೇಟು ಹಾಕುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ಕಾರಣ, ಎಲ್ಲ ಸಾಕ್ಷಾಧಾರಗಳೊಂದಿಗೆ ಬಂಧಿಸಿದರೂ ಸಂಪುಟದಲ್ಲಿ ಅವರ ಮೇಲಿನ ಪ್ರಕರಣಗಳನ್ನು ಹಿಂದೆಗೆದು ಕೊಳ್ಳಲಾಗುತ್ತದೆ. ಈ ಮೂಲಕ, ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಮುಖಭಂಗವುಂಟು ಮಾಡಲಾಗುತ್ತಿತ್ತು. ಹೀಗಿರುವಾಗ ಸಂಪುಟದಲ್ಲಿ ಪತ್ರಕರ್ತನ ಮೇಲಿನ ವೊಕದ್ದಮೆ ತೆಗೆದು ಸರಕಾರ ತನ್ನ ಮಾನವನ್ನು ಕಾಪಾಡಿಕೊಂಡಿದೆ ಎಂದಷ್ಟೇ ಹೇಳಬಹುದು.ಪತ್ರಕರ್ತ ನನ್ ಸೂರಿಂಜೆಯ ಪ್ರಕರಣ  ತೀರಾ ಭಿನ್ನವಾದುದು.
ಇಲ್ಲಿ ನವೀನ್ ಸೂರಿಂಜೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ ಒಂದೇ ಕಾರಣಕ್ಕೆ ಅವರ ಮೇಲೆ ಮೊಕದ್ದಮೆಯನ್ನು ಪೊಲೀಸರು ದಾಖಲಿಸಿದರು. ಒಂದು ರೀತಿಯಲ್ಲಿ, ನವೀನ್ ಸೂರಿಂಜೆಯ ಮೂಲಕ, ಹೋಮ್‌ಸ್ಟೇ ಪ್ರಕರಣದಲ್ಲಿ ತಮ್ಮ ತಪ್ಪು ಬಹಿರಂಗವಾಯಿತು ಎನ್ನುವ ಸೇಡಿಗೋಸ್ಕರ ಪೊಲೀಸರು ಕೇಸುಗಳನ್ನು ದಾಖಲಿಸಿದ್ದರು. ಸೂರಿಂಜೆಯನ್ನು ಎಷ್ಟು ಹೀನಾಯವಾಗಿ ನಡೆಸಿಕೊಂಡರೆಂದರೆ, ಅವರನ್ನು ಹೋಮ್‌ಸ್ಟೇಯ ಇತರ ಆರೋಪಿಗಳ ಪಟ್ಟಿಯಲ್ಲಿ ಸೇರಿಸಿ ಬಿಟ್ಟರು.
ಅಂದರೆ, ಮಹಿಳೆಯರ ಮೇಲೆ ಬರ್ಬರವಾಗಿ ದಾಳಿ ನಡೆಸಿದ ಸಂಘಪರಿವಾರದ ಆರೋಪಿಗಳ ಸಾಲಲ್ಲಿಯೇ ನವೀನ್ ಸೂರಿಂಜೆಯನ್ನೂ ನಿಲ್ಲಿಸಿದರು. ಹೋಮ್‌ಸ್ಟೇ ಪ್ರಕರಣವನ್ನು ತಪ್ಪಿಸುವುದಕ್ಕೆ ಪೊಲೀಸರಿಗೆ ಎಲ್ಲ ರೀತಿಯಲ್ಲೂ ಸಾಧ್ಯವಿತ್ತು. ಆದರೆ ಸಂಘಪರಿವಾರದ ಇಂತಹ ದಾಳಿಗಳು ನಡೆಯುವುದು ಪೊಲೀಸರ ಸಹಕಾರದೊಂದಿಗೆ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸತ್ಯ. ಹೋಮ್‌ಸ್ಟೇಯಲ್ಲಿ ದಾಳಿ ನಡೆಯುವಾಗ  ಅಲ್ಲಿ ಪೊಲೀಸರು ಉಪಸ್ಥಿತರಿದ್ದರು ಎನ್ನುವುದು ಮಾಧ್ಯಮಗಳ ಮೂಲಕ ಜಗಜ್ಜಾಹೀರಾಯಿತು.
ಹೆಣ್ಣು ಮಕ್ಕಳ ಮೇಲೆ ವಿಕೃತಕಾಮಿಗಳಂತೆ ಸಂಘಪರಿವಾರದ ಕಾರ್ಯಕರ್ತರು ಎರಗಿ ಬೀಳುವುದು ಮತ್ತು ಪೊಲೀಸರು ಆ ಕುರಿತಂತೆ ನಪುಂಸಕರಂತೆ ವರ್ತಿಸಿರುವುದೂ ನನ್ ಸೂರಿಂಜೆಯ ಮೂಲಕವೇ ದೇಶಾದ್ಯಂತ ತಿಳಿಯಿತು. ದುರದೃಷ್ಟವಶಾತ್, ಪೊಲೀಸರು ಈ ಘಟನೆಯನ್ನು ನಾಗರಿಕ ಜಗತ್ತಿನ ಮುಂದೆ ಇಟ್ಟ ಒಂದೇ ಕಾರಣಕ್ಕೆ ಸೂರಿಂಜೆಯ ಮೇಲೆ ಕೇಸು ಜಡಿದರು. ಹೈಕೋರ್ಟ್ ಸೂರಿಂಜೆಯ ಮೇಲೆ ಅನುಕಂಪ ವ್ಯಕ್ತಪಡಿಸಿದರೂ ಪೊಲೀಸರಿಗೆ ಸೂರಿಂಜೆಯನ್ನು ಪ್ರಕರಣದಿಂದ ಕೈಬಿಡುವ ಇಷ್ಟವಿರಲಿಲ್ಲ.
ಇದೇ ಸಂದರ್ಭದಲ್ಲಿ ಸಂಘಪರಿವಾರದ ಮುಖಂಡರೂ ಈ ಪ್ರಕರಣದಲ್ಲಿ ಪೊಲೀಸರ ಜೊತೆಗೆ ಕೈ ಜೋಡಿಸಿದರು. ಎಲ್ಲದರ ಪರಿಣಾಮವಾಗಿ ಸೂರಿಂಜೆ ಐದು ತಿಂಗಳಿಗೂ ಅಧಿಕ ಕಾಲ ಜೈಲಿನಲ್ಲಿರಬೇಕಾಯಿತು. ಪೊಲೀಸ್ ಇಲಾಖೆಗೂ ಸಂಘ ಪರಿವಾರಕ್ಕೂ ಇರುವ ಸಂಬಂಧ ಏನು ಎನ್ನುವುದನ್ನು ಕರಾವಳಿಯಲ್ಲಿ ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿಲ್ಲ.
ಪೊಲೀಸರು, ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮದ ಉದ್ಘಾಟನೆಯನ್ನೇ ಇಲ್ಲಿ ಸಂಘಪರಿವಾರದ ಮುಖಂಡ ಪ್ರಭಾಕರ ಭಟ್ ಮಾಡುತ್ತಾರೆಂದ ಮೇಲೆ, ಸಂಘ ಪರಿವಾರದ ಹಿಂಬಾಲಕರ ಕೃತ್ಯಗಳನ್ನು ನಮ್ಮ ಪೊಲೀಸರು ಸಮರ್ಥಿಸಿಕೊಳ್ಳದೇ ಇರು ತ್ತಾರೆಯೇ? ಸೂರಿಂಜೆಯ ಬಿಡುಗಡೆಯಿಂದ ಪ್ರಕರಣ ಮುಗಿದಂತಾಗುವುದಿಲ್ಲ. ಸೂರಿಂಜೆ ಪ್ರಕರಣದಲ್ಲಿ ಪೊಲೀಸರ ವರ್ತನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. 
ದೇಶದ ಎಲ್ಲ ಮಾಧ್ಯಮಗಳಲ್ಲೂ ಈ ಪ್ರಕರಣ ಚರ್ಚೆಗೊಳಗಾಗಿತ್ತು. ಕರ್ನಾಟಕ ತನ್ನ ಸಾಚಾತನವನ್ನು ಸಾಬೀತು ಮಾಡಬೇಕಾದರೆ, ಸೂರಿಂಜೆಯ ವಿರುದ್ಧ ಸುಳ್ಳು ಕೇಸು ದಾಖಲಿಸಿದ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹಾಗೆಯೇ ಹೋಮ್ ಸ್ಟೇ ಪ್ರಕರಣದಲ್ಲಿ ಆರೋಪಿಗಳ ಮೇಲೆ ತೆಗೆದುಕೊಂಡ ಕ್ರಮ ಏನನ್ನುವುದು ವಿಚಾರಣೆಗೆ ಒಳಪಡಬೇಕಾಗಿದೆ.
ಹೋಮ್‌ಸ್ಟೇ ಪ್ರಕರಣದಲ್ಲಿ ಮಹಿಳೆಯರು ಕೇವಲ ಹಲ್ಲೆಗೀಡಾದದ್ದು ಮಾತ್ರವಲ್ಲ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಆದುದರಿಂದ, ಆರೋಪಿಗಳ ಮೇಲೆ ಬಲವಾದ ಮೊಕದ್ದಮೆಯನ್ನು ಹೂಡಬೇಕಾಗಿದೆ. ಕನಿಷ್ಠ ಜೀವಾವಧಿ ಶಿಕ್ಷೆಯಾದರೂ ಅವರಿಗೆ ದೊರಕಬೇಕಾಗಿದೆ.  ಹಾಗೆಯೇ ನವೀನ್ ಸೂರಿಂಜೆಯ ಪ್ರಕರಣ ಮತ್ತೊಮ್ಮೆ ಮರುಕಳಿಸದಂತೆ ಸರಕಾರ ಎಚ್ಚೆತ್ತುಕೊಳ್ಳಬೇಕು.
ಮಾಧ್ಯಮಗಳ ಬಾಯಿ ಮುಚ್ಚಿಸುವ ಪೊಲೀಸರ ಕೃತ್ಯಕ್ಕೆ ಕಡಿವಾಣ ಹಾಕಬೇಕು ಮಾತ್ರವಲ್ಲ, ಕರಾವಳಿಯಲ್ಲಿ ಪೊಲೀಸರಿಗೂ ಸಂಘಪರಿವಾರಕ್ಕೂ ಇರುವ ಸಂಬಂಧ ತನಿಖೆಗೊಳಗಾಗಬೇಕು. ದುಷ್ಕರ್ಮಿಗಳೊಂದಿಗೆ ಕೈಜೋಡಿಸುವ ಪೊಲೀಸರನ್ನು ಸರಿಪಡಿಸುವ ಕಡೆಗೆ ಮೊದಲು ಮನಮಾಡಬೇಕು. ಬಳಿಕವಷ್ಟೇ ನಾವು ಕರಾವಳಿಯ ಉಳಿದ ಅನೈತಿಕ ಕೃತ್ಯಗಳನ್ನು ತಡೆಯುವ ಬಗ್ಗೆ ಯೋಚಿಸಬಹುದಾಗಿದೆ.

ಮಅದನಿಯ ಕೈಬೆರಳುಗಳಿಗೆ ವ್ಯವಸ್ಥೆ ಜೋಡಿಸಿದ ಕೃತಕ ಉಗುರುಗಳು...! :ಭಾಗ-2ಮಅದನಿಯ ಕೈಬೆರಳುಗಳಿಗೆ ವ್ಯವಸ್ಥೆ ಜೋಡಿಸಿದ ಕೃತಕ ಉಗುರುಗಳು...! :ಭಾಗ-2

 

ಬಿ.ಎಂ.ಬಶೀರ್

 ಸೌಜನ್ಯ: ವಾರ್ತಾಭಾರತಿ

 

 ಅದನಿ ಕಾನ್ಶೀರಾಮ್ ಜೊತೆಗೆ ರಾಜಕೀಯ ಮಾತುಕತೆ ನಡೆಸಲು ಮುಂದಾದಾಗ ಕೇರಳದ ರಾಜಕೀಯ ವಲಯದಲ್ಲಿ ಸಣ್ಣ ಕಲರವ ಆರಂಭವಾಯಿತು. ಬಿಎಸ್‌ಪಿ ಮತ್ತು ಪಿಡಿಪಿ ಒಂದಾಗಿದ್ದರೆ ಬಹುಶಃ ಕೇರಳದಲ್ಲಿ ಒಂದು ರಾಜಕೀಯ ಕ್ರಾಂತಿಯೇ ನಡೆದು ಬಿಡುತ್ತಿತ್ತೋ ಏನೋ. (ಮಅದನಿ ತನ್ನ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದೇ ಅಂಬೇಡ್ಕರ್ ಜಯಂತಿ ದಿನ)ಆದರೆ ಅದಕ್ಕೆ ವೊದಲೇ ಮಅದನಿಯನ್ನು ಮಟ್ಟ ಹಾಕಲು ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಬಿಟ್ಟಿದ್ದವು.ಮಅದನಿಯ ದುರದೃಷ್ಟ ವೊದಲು ತೆರೆದುಕೊಂಡದ್ದು ಮುಸ್ಲಿಮ್ ಲೀಗನ್ನು ಎದುರು ಹಾಕಿಕೊಂಡ ಕಾರಣ. ಕ್ಯಾಲಿಕಟ್ ಐಸ್‌ಕ್ರೀಮ್ ಪಾರ್ಲರ್ ಪ್ರಕರಣದಲ್ಲಿ ಮುಸ್ಲಿಮ್ ಲೀಗ್‌ನ ಕುಂಞಾಲಿಕುಟ್ಟಿ ಹೆಸರು ಕೇಳಿ ಬಂದ ಕಾರಣ, ಮಅದನಿ ಅಂದು ತನ್ನ ಪಿಡಿಪಿ ಮೂಲಕ ಕುಂಞಾಲಿಕುಟ್ಟಿಯ ವಿರುದ್ಧ ಅಭಿಯಾನ ಆರಂಭಿಸಲು ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದರು.
ಬೀದಿಯಲ್ಲಿ ನಿಂತು ಅಮಾಯಕ ಮುಸ್ಲಿಮರನ್ನು ಪ್ರಚೋದಿಸಿದಂತಲ್ಲ, ರಾಜಕಾರಣಿಗಳನ್ನು ಮುಟ್ಟುವುದು ಎನ್ನುವುದು ಮಅದನಿಗೆ ತಿಳಿಯುವಾಗ ತಡವಾಗಿತ್ತು. ಅಂದಿನ ಕಮ್ಯುನಿಷ್ಟ್‌ನ ನಾಯಕರಾದ ನಾಯನಾರ್ ನೇತೃತ್ವದ ಸರಕಾರ 1992ರಲ್ಲಿ ಬಾಕಿ ಉಳಿದಿದ್ದ ಒಂದು ಕೇಸನ್ನು ಎತ್ತಿ ಹಾಕಿತ್ತು.
1992ರ ಮಾರ್ಚ್‌ನಲ್ಲಿ ಮಅದನಿ  ಮಾಡಿದ ಭಾಷಣಕ್ಕಾಗಿ ಅವರಿಗೆ ವಾರಂಟ್ ಆಗಿತ್ತು. ಆದರೆ ಆ ವಾರಂಟ್ ಇಶ್ಯೂ ಅಗಿದ್ದು 1998ರಲ್ಲಿ. ಕುಂಞಾಲಿ ಕುಟ್ಟಿಯ ತಂಟೆಗೆ ಹೋದ ಒಂದೇ ಒಂದು ಕಾರಣಕ್ಕೆ  ಅವರು ಜೈಲು ಸೇರಿದರು. ಆರು ತಿಂಗಳು ಜೈಲು ಶಿಕ್ಷೆಯೂ ಆಯಿತು.  ಆದರೆ ಆ ಆರು ತಿಂಗಳು ಹತ್ತು ವರ್ಷವಾಗಿ ಮಾರ್ಪಡುತ್ತದೆ ಎಂದು ಮಅದನಿ ತಿಳಿದುಕೊಂಡಿರಲಿಲ್ಲ.
1998ರಲ್ಲಿ ತಮಿಳು ನಾಡಿನಲ್ಲಿ ಭೀಕರ ಕೋಮು ಗಲಭೆ, ಅದರಲ್ಲಿ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯ ಮಾಧ್ಯಮಗಳಲ್ಲಿ ಸುದ್ದಿಯಾಯಿತು. 20ಕ್ಕೂ ಅಧಿಕ ಮುಸ್ಲಿಮರು ಇದರಲ್ಲಿ ಬರ್ಬರವಾಗಿ ಕೊಲ್ಲಲ್ಪ ಟ್ಟಿದ್ದರು.  ಇದಾದ ಬಳಿಕ ಕೊಯಮತ್ತೂರು ಬಾಂಬ್ ಸ್ಫೋಟ ನಡೆಯಿತು. ಈ ಪ್ರಕರಣದಲ್ಲಿ ಮಅದನಿಯನ್ನು ಒಂದು ಫೋನ್ ಕರೆಯ ಆಧಾರದ ಮೇಲೆ  ಸಿಲುಕಿಸಲಾಯಿತು. ಮಅದನಿ ಅದರಲ್ಲಿ ೮೪ನೆ ಆರೋಪಿಯಾಗಿ ಗುರುತಿಸಲ್ಪಟ್ಟರು.  
ಇದರಲ್ಲಿ ಮಅದನಿಯ ವಿರುದ್ಧ ಯಾವೆಲ್ಲ ನಕಲಿ ದಾಖಲೆಗಳು ಸೃಷ್ಟಿಯಾದವೋ ಆ ದಾಖಲೆಗಳೇ ಮುಂದೆ ಮಅದನಿಯನ್ನು ನಿರಪರಾಧಿ ಎಂದು ಘೋಷಿಸಿತು. ಆದರೆ ಸುದೀರ್ಘ ಹತ್ತು ವರ್ಷ ಅವರು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಳೆದರು. ಅವರು ನಿರಪರಾಧಿ ಎಂದು ಸಾಬೀತಾದ ಬಳಿಕವೂ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಅಲ್ಲಿ ಅವರ ಜೀವ ಚೈತನ್ಯವನ್ನು ಸಂಪೂರ್ಣವಾಗಿ ಹೀರಿ ತೆಗೆಯಲಾಗಿತ್ತು. ಒಂದಂತೂ ಸತ್ಯ. ಅವರಿಗೆ ಶಿಕ್ಷೆಯಾಗುತ್ತದೆ ಎಂಬ ಭರವಸೆ ಪೊಲೀಸರೂ, ರಾಜಕಾರಣಿಗಳಿಗೂ ಇದ್ದಿರಲಿಲ್ಲ.
ಆದರೆ ಹತ್ತು ವರ್ಷಗಳ ಜೈಲು ಬದುಕಿನಲ್ಲಿ ನಾಸರ್ ಮಅದನಿ ಮುಗಿದು ಹೋಗಬೇಕು ಎನ್ನುವ ಉದ್ದೇಶ ಎಲ್ಲರದ್ದೂ ಆಗಿತ್ತು. ಅಂತೆಯೇ ಅವರನ್ನು ಭೀಕರವಾಗಿ ಜೈಲಿನಲ್ಲಿ ನಡೆಸಿಕೊಳ್ಳಲಾಗಿತ್ತು. 100 ಕೆ.ಜಿ.ಗೂ ಅಧಿಕ ಇದ್ದ ಮಅದನಿ 50 ಕೆ.ಜಿ.ಗೆ ಇಳಿದಿದ್ದರು. ಆದರೆ ಅವರು ಜೈಲಿನಲ್ಲಿ ಸಾಯದೆ ಬದುಕಿ ಬಂದರು. ಇದು ನಿಜಕ್ಕೂ ರಾಜಕಾರಣಿ ಗಳಿಗೆ ತಲೆನೋವೇ ಆಗಿ ಬಿಟ್ಟಿತ್ತು.
ಜೈಲಿನ ಶಿಕ್ಷೆ ಮಅದನಿಯನ್ನು ಇನ್ನಷ್ಟು ಪಳಗಿಸಿತ್ತು ಎನ್ನುವುದಂತೂ ಸತ್ಯ. ಅವರ ಧ್ವನಿಯ ಆವೇಶ ಪೂರ್ಣ ಇಳಿದಿತ್ತು. ಮಾತುಗಳು ಸೌಮ್ಯತೆಯನ್ನು ಪಡೆದಿತ್ತು. ಯಾವುದೇ ರಾಜಕೀಯ ಅಥವಾ ಧಾರ್ಮಿಕ ಹೇಳಿಕೆಯನ್ನು ನೀಡುವಾಗ ತೂಗಿ ತೂಗಿ ಮಾತನಾಡುತ್ತಿದ್ದರು. 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ಬಳಿಕ ಅವರು ಮಾಧ್ಯಮಗಳಿಗೆ ಹೇಳಿದ್ದು “ನನಗೆ ಜೈಲು ಶಿಕ್ಷೆ ತುಂಬಾ ಕಲಿಸಿದೆ. ಅದು ನನ್ನನ್ನು, ನನ್ನ ಹೃದಯವನ್ನು ಪರಿವರ್ತನೆಗೊಳಿಸಿದೆ. ಮುಂದಿನ ಜೀವನವನ್ನು ಬಡವರಿಗಾಗಿ, ಹಿಂದುಳಿದ ವರ್ಗದವರಿಗಾಗಿ, ಶೋಷಿತರಿಗಾಗಿ ಮುಡಿಪಾಗಿಡುತ್ತೇನೆ...”
ಮಅದನಿ ಅವರ ಉಗುರು, ಹಲ್ಲುಗಳು ಸಂಪೂರ್ಣ ಉದುರಿ ಹೋಗಿದ್ದವು. ಜೈಲಿನಿಂದ ಅವರು  ಹೊರಬಂದಾಗ ಅವರ ಅನುಯಾಯಿಗಳೆಲ್ಲ ಭಾಗಶಃ ದೂರವಾಗಿ ಬಿಟ್ಟಿದ್ದರು. ಆವೇಶಮಯ ಭಾಷಣಗಳಿಲ್ಲದ ಮಅದನಿ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದ್ದರು. ಬಹುಶಃ ಅವರನ್ನು ಅವರಷ್ಟಕ್ಕೆ ಬಿಟ್ಟಿದ್ದರೆ ಮುಂದಿನ ದಿನಗಳಲ್ಲಿ ಮಅದನಿ ಹೇಳ ಹೆಸರಿಲ್ಲದಂತಾ ಗುತ್ತಿದ್ದರು. ಯಾಕೆಂದರೆ ರಾಜಕೀಯವಾಗಿ ಸಂಘಟಿತರಾಗಲೂ ಅವರಲ್ಲಿ ಶಕ್ತಿಯಿರಲಿಲ್ಲ. ಆದರೆ ಅವರು ಅಳಿದುಳಿದ ಪಿಡಿಪಿಯನ್ನು ಸಂಘಟಿಸಿ, ಕಮ್ಯುನಿಷ್ಟ್ ಪಕ್ಷದತ್ತ ತನ್ನ ಒಲವನ್ನು ಯಾವಾಗ ವ್ಯಕ್ತ ಪಡಿಸಿದರೋ, ಅವರ ವಿರುದ್ಧ ರಾಜಕೀಯ ಪಕ್ಷಗಳು ಮತ್ತೆ ಒಂದಾದವು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ಸಂಭವಿಸಿ ಒಬ್ಬರು ಮೃತರಾದರು. 
ಈ ಸ್ಫೋಟ ಕರ್ನಾಟಕದ ಅತಂತ್ರ ಬಿಜೆಪಿ ಸರಕಾರಕ್ಕೆ ಭಾರೀ ವರವಾಯಿತು. ‘ಉಗ್ರರು, ಭಯೋತ್ಪಾದನೆ’ಯ ಕಡೆಗೆ ಬೆರಳು ತೋರಿಸಿ, ಸರಕಾರದೊಳಗಿನ ಭಿನ್ನಮತ, ಒಡಕು, ಭ್ರಷ್ಟಾಚಾರ ಇವನ್ನೆಲ್ಲ ಮುಚ್ಚಿ ಹಾಕಲು ಯತ್ನಿಸಿದರು. ಇದೇ ಸಂದರ್ಭದಲ್ಲಿ ಕೇರಳದ ರಾಜಕಾರಣಿಗಳಿಗೂ ಮಅದನಿ ಮತ್ತೆ  ಭಯೋತ್ಪಾದಕನಾಗಿ ಗುರುತಿಸಲ್ಪಡಬೇಕಾಗಿತ್ತು. ಕೇರಳ ಮತ್ತು ಕರ್ನಾಟಕ ಸರಕಾರ ಒಟ್ಟು ಸೇರಿ ಮಅದನಿಯಲ್ಲಿ ಸರಣಿ ಸ್ಫೋಟದ ಆರೋಪಿಯನ್ನು ಹುಡುಕಿತು.
ಮಅದನಿಯನ್ನು ಬೆಂಗಳೂರು ಸ್ಫೋಟಕ್ಕೆ ಆರೋಪಿಯನ್ನಾಗಿ ಮಾಡುವ ಮೂಲಕ, ಅದಾಗಲೇ ಅರ್ಧ ಜೀವಚ್ಛವವಾಗಿದ್ದ ಒಂದು ದೇಹಕ್ಕೆ ಕೃತಕ ಉಗುರು, ಹಲ್ಲುಗಳನ್ನು  ನೀಡುವ ಪ್ರಯತ್ನ ನಡೆಸಿದವು ಉಭಯ ಸರಕಾರಗಳು. ಇದೆಷ್ಟು ಅಪಾಯಕಾರಿ ಕೆಲಸವಾಗಿತ್ತೆಂದರೆ, ಅದಾಗಲೇ ಜೈಲಿನಲ್ಲಿ ಸತ್ತು ಹೋಗಿದ್ದ ಹಳೆಯ ಮಅದನಿಯ ಪ್ರತಿಕೃತಿಯ ಪುನರ್‌ಸೃಷ್ಟಿಯಾಗಿತ್ತು. ಜನರು ಆ ಹಳೆಯ ಮಅದನಿಯನ್ನು ಎಂದೋ ಮರೆತು ಬಿಟ್ಟಿದ್ದರು. ಆದರೆ ಇದೀಗ ಸರಕಾರವೇ ಆ ಮಅದನಿಯನ್ನು ಸೃಷ್ಟಿಸಿ ಜನರ ಮುಂದೆ ನಿಲ್ಲಿಸಿದೆ. ಜೈಲಿನಲ್ಲಿಟ್ಟು ಅಲ್ಲೇ ಅವರನ್ನು ಹೂತು ಹಾಕಲು ನಿರ್ಧರಿಸಿದಂತಿದೆ. ಜನರನ್ನು ಪ್ರಚೋದಿಸುವ ಅಪಾಯಕಾರಿ ಕೆಲಸಕ್ಕೆ ವ್ಯವಸ್ಥೆಯೇ ಇಳಿದು ಬಿಟ್ಟಿದೆ.
ಗಮನಿಸಿ. ಬೆಂಗಳೂರಿನ ಸರಣಿ ಸ್ಫೋಟ ನಡೆಸಿರುವುದು ಯಾರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸರಕಾರಕ್ಕೆ ಅದು ಮಅದನಿಯಂತಹ ಯಾರಾದರೂ ನಡೆಸಿದರೆ ಹೆಚ್ಚು ಅನುಕೂಲ. ಪೊಲೀಸರಿಗೆ ತನಿಖೆ ನಡೆಸುವ ಕಷ್ಟ ಉಳಿಯಿತು. ಮಅದನಿಯ ವಿರುದ್ಧವಿರುವ ಸಾಕ್ಷಗಳು ಎಷ್ಟು ತೆಳುವಾದುದು ಎನ್ನುವುದನ್ನು ಒಮ್ಮೆ ನೋಡಿ. ಅವರು ಬಾಡಿಗೆಗಿರುವ ಮನೆಯ ಮಾಲಕ  ಜೋಸ್ ವಗೀ೯ಸ್. ಪೊಲೀಸರು ಇವನನ್ನು ಠಾಣೆಗೆ ಕರೆಸಿ ಅವನಿಂದ ಒಂದು ಹೇಳಿಕೆಯನ್ನು ಬರೆಸಿದರು.
ಅದೇನೆಂದರೆ, “ಒಮ್ಮೆ ನಾನು ಮನೆ ಬಾಡಿಗೆ ವಸೂಲು ಮಾಡಲು ಹೋದಾಗ ಮಅದನಿ ಯಾರೊಂದಿಗೋ ಮಾತನಾಡುತ್ತಾ ‘ಬಾಂಬ್’ ‘ಸ್ಫೋಟ’ ಎಂಬ ಶಬ್ದವನ್ನು ಹೊರಡಿಸಿದ್ದರು” ಎಂದು. ಆದರೆ ಮುಂದೆ ಇದೇ ಜೋಸ್ ವಗೀ೯ಸ್ ‘ಅಂತಹದು ಸಂಭವಿಸಿಯೇ ಇಲ್ಲ” ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಮುಖ್ಯವಾಗಿ, ಮನೆಬಾಡಿಗೆ ವಸೂಲಿಗೆ ನಾನು ಮಅದನಿಯ ಮನೆಗೆ ಒಮ್ಮೆಯೂ ಹೋಗಿಲ್ಲ.
ಯಾಕೆಂದರೆ ಅವರು ಬಾಡಿಗೆಯನ್ನು ಬ್ಯಾಂಕ್ (ಎಚ್‌ಡಿಎಫ್‌ಸಿ)ಗೆ ಪಾವತಿಸುತ್ತಾರೆ ಎಂದು ಮಾಧ್ಯಮಗಳಿಗೆ ಮುಖ್ಯ ವಾಗಿ ತೆಹಲ್ಕಾಗೆ ಸ್ಪಷ್ಟ ಪಡಿಸಿದ್ದಾರೆ. ತೆಹಲ್ಕಾ ವರದಿಗಾರ್ತಿ ಕೆ.ಕೆ.ಶಾಹಿನಾ ಅವರೊಂದಿಗೆ ಜಾರ್ಜ್ ಎಲ್ಲವನ್ನು ಬಾಯಿ ಬಿಡುತ್ತಾರೆ. ಇದರಿಂದ ಸಿಟ್ಟಿಗೆದ್ದ ಕರ್ನಾಟಕ ಪೊಲೀಸರು ಮುಂದೆ, ತನಿಖಾ ವರದಿಗಾರ್ತಿ ಶಾಹಿನಾ ವಿರುದ್ಧವೇ ಪ್ರಕರಣವನ್ನು ದಾಖಲಿಸುತ್ತಾರೆ. ಅಷ್ಟೇ ಅಲ್ಲ, ಜಾರ್ಜ್ ಈ ಕುರಿತಂತೆ ಪೊಲೀಸರ ವಿರುದ್ಧವೇ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನ್ನ ಹೇಳಿಕೆಯನ್ನು ಪೊಲೀಸರು ತಿರುಚಿದ್ದಾರೆ ಎಂದೂ ಹೇಳಿದ್ದರು.
ಕೊಯಮತ್ತೂರು ಸ್ಫೋಟದ ಆರೋಪದಿಂದ ಬಿಡುಗಡೆಯಾದ ಬಳಿಕ ಸರಕಾರ ಅವರಿಗೆ ಇಬ್ಬರು ಅಂಗರಕ್ಷಕರನ್ನು ಕೊಟ್ಟಿತ್ತು. ಇದು, ಮಅದನಿಯ ರಾಜಕೀಯ ನಡೆಯ ಬಗ್ಗೆ ಕಣ್ಣಿಡಲು ಹೊರತು, ಮಅದನಿಯ ರಕ್ಷಣೆಗಾಗಿರಲಿಲ್ಲ. ಇವರನ್ನೆಲ್ಲ ಕಣ್ಣು ತಪ್ಪಿಸಿ ಒಂಟಿ ಕಾಲಿನ ಮಅದನಿ ಕೊಡಗಿಗೆ ಹೋಗಿ, ಅಲ್ಲಿರುವ ನಝೀರ್ ಎಂಬವನ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನುವುದೇ ತಮಾಷೆಯ ವಿಷಯವಾಗಿದೆ. ಇದನ್ನು ತನಿಖೆ ನಡೆಸಲು ತೆಹಲ್ಕಾ ಪತ್ರಕರ್ತೆ ಶಾಹಿನಾ ಕೊಡಗಿಗೆ ಹೋದಾಗ ಪೊಲೀಸರು ಆಕೆಯನ್ನು ಬಂಧಿಸಿ, ಆಕೆಯ ಮೇಲೆ ಮೊಕದ್ದಮೆಯನ್ನು ದಾಖಲಿಸಿ ಅವರ ಕೈಗಳನ್ನು ಕಟ್ಟಿ ಹಾಕಿದರು.
ಇದರ ವಿರುದ್ಧ ಅಂತಾರಾಷ್ಟ್ರೀಯ ಮಾಧ್ಯಮಗಳು ತಮ್ಮ ಖಂಡನೆಯನ್ನು ವ್ಯಕ್ತಪಡಿಸಿವೆ.ಇದೀಗ ಮಅದನಿಯ ಬೆಂಬಲಿಗರು ಹೇಳುವುದು ಇಷ್ಟೇ. “ಸರಣಿ ಸ್ಫೋಟ ನಡೆಸಿದ್ದರೆ ಅವರಿಗೆ ಮರಣದಂಡನೆಯಾಗಲಿ. ಆದರೆ ವಿಚಾರಣೆಯ ಹೆಸರಿನಲ್ಲಿ ಅವರನ್ನು ಜೈಲಿನಲ್ಲಿ ಸಾಯಿಸುವುದು ಬೇಡ”.ಇಂದು ಅನುಕಂಪದ ಬಲದ ಮೇಲೆ ಮತ್ತೆ ಮಅದನಿಯ ಅಭಿಮಾನಿಗಳು ಹುಟ್ಟಿಕೊಳ್ಳು ತ್ತಿದ್ದಾರೆ. ಒಂದು ವೇಳೆ, ಮಅದನಿ ವಿಚಾರಣೆಯ ಹೆಸರಿನಲ್ಲಿ ಅನಾರೋಗ್ಯದಿಂದ ಸತ್ತೇ ಹೋದರೆ, ಅದು ಕೇರಳದ ಒಂದು ವರ್ಗದ ಮುಸ್ಲಿಮರ ಮೇಲೆ ಭೀಕರ ಪರಿಣಾಮವನ್ನು ಬೀರಬಹುದು. ಇದರಿಂದ ಮಅದನಿಗೆ ಯಾವುದೇ ನಷ್ಟವಾಗುವುದಿಲ್ಲ. 29ರ ದಶಕದ ಮಅದನಿಯನ್ನು ಮತ್ತೆ ಪೊಲೀಸರೇ ಜೀವಂತಗೊಳಿಸಿದಂತಾಗುತ್ತದೆಯಷ್ಟೇ.
ಈ ಪ್ರಕರಣದಲ್ಲಿ ಮಅದನಿಯ ಪಾತ್ರ ಗುರುತಿಸಿ ನ್ಯಾಯಾಲಯ ಅವರನ್ನು ಶಿಕ್ಷಿಸಿದರೆ ಅದು ಸ್ವಾಗತಾರ್ಹ. ಆದರೆ ನಿರಪರಾಧಿಯಾಗಿ ಜೈಲಲ್ಲೇ ಅವರು ಸತ್ತು ಹೋದರೆಂದರೆ, ಕೇರಳದಲ್ಲಿ 92ರ ದಶಕದ ಮಅದನಿಗಳು ಮತ್ತೆ ಚಿಗುರುವ ಸಾಧ್ಯತೆಯಿದೆ. ಅಂತಹದ್ದು ಯಾವುದೂ ಘಟಿಸದಿರಲಿ. ಈ ದೇಶ, ಈ ಸಂವಿಧಾನದ ಮೇಲಿರುವ ಭರವಸೆ ನಮ್ಮ ಯುವಕರಲ್ಲಿ ಅಜರಾಮರವಾಗಿ ಇರಲಿ ಎನ್ನುವುದೇ ನನ್ನ ಆಶಯ.

 prativaadi@gmail.com

ಹಿಂದೂ ಧರ್ಮ ರಕ್ಷಕ-ಟಿಪ್ಪು ಸುಲ್ತಾನ್; ಭಾಗ-6


ಸಂಪಾದನೆ: ಕೋ.ಚೆನ್ನಬಸಪ್ಪ

ಮೂಲ: ದಿ.ಶ್ರೀ.ತಿ.ತಾ.ಶರ್ಮ

ಸೌಜನ್ಯ: ವಾರ್ತಾಭಾರತಿ

 

ಟಿಪ್ಪು ಕಡೆಯವರೆಗೂ ಮರಾಠರ ಸ್ನೇಹವನ್ನು ಗಳಿಸಬಹುದೆಂದು ಪ್ರಯತ್ನ ಮಾಡಿದ. ನಿಝಾಮನಾಗಲಿ, ಮರಾಠರಾಗಲಿ ಅವನಿಗೆ ನೆರವಾಗಲಿಲ್ಲ. ಪೇಶ್ವೆ ಬಾಜಿರಾಯನ ಬಳಿಗೆ ಟಿಪ್ಪು ತನ್ನ ದೂತರನ್ನಟ್ಟಿದ; ಅವರು ದುರಂತ ಪರಿಸ್ಥಿತಿಯನ್ನು ವರ್ಣಿಸಿ,ತವ್ಮೊಡೆಯನ ಆಲೋಚನೆಗಳನ್ನೆಲ್ಲ ವಿವರಿಸಿ, ‘ತಾಗ ನೆರವಾಗಬೇಕು’ ಅಂದರು. ಬಾಜಿರಾಯ ‘ಮೀನವೇಷ’ ಮಾಡುತ್ತ ಕುಳಿತ. ಟಿಪ್ಪು ರಣರಂಗದಲ್ಲಿ ಬಿದ್ದನೆಂಬ ಸುದ್ದಿ ಬಂತು. ಆಗ ನಾನಾ ಹೃದಯಭಾರದಿಂದ, "Tippu is finished; the British power has increased; the whole of east India is already theirs; Poona will be the next victim. Evil days seem to be ahead, there is no escape from destiny. '
ಈಗ ಸಂಘ ಪರಿವಾರ ಈ ದೇಶವನ್ನು ಬ್ರಿಟಿಷರ ಪಾದಾಕ್ರಾಂತ ಮಾಡಿದ ದೇಶದ್ರೋಹಿಗಳು ಯಾರೆಂಬುದನ್ನು ಹೇಳಬೇಕು.ಟಿಪ್ಪು ದೇಶದ್ರೋಹಿಯೋ? ಬ್ರಿಟಿಷರಿಗೆ ನೆರವಾದ ತಿರುಮಲರಾಯ ಮರಾಠಾ ಪೇಶ್ವೆ ಗಳೋ? ಉತ್ತರ ಹೇಳಿ.
ಅಭಿಮಾನಧನ ಟಿಪ್ಪು
ಆಂಗ್ಲರೊಂದಿಗೆ ಸಂಧಾನಕ್ಕೆ ಕಳಸಿದ ನಿಝಾಮ ನೊಂದಿಗೆ ವಿವಾಹಬಾಂಧವ್ಯಕ್ಕೆ ಅವನು ಸಿದ್ಧವಾಗಲಿಲ್ಲ.
“ದುಃಖದ, ನಾಚಿಕೆಯ, ಪಾಪಜೀವನವನ್ನು
ದೀರ್ಘಕಾಲ ನಡೆಸುವುದಕ್ಕಿಂತ
ಸಂಗ್ರಾಮ ಮೇಘಗರ್ಜನೆಯಾಗು ತಿರಲು,
ರಕ್ತವರ್ಷ ಸುರಿಯುತಿರಲು, ರನಂತೆ
ರಣರಂಗದಲಿ, ಮರಣವನ್ನಪ್ಪುವುದೇ ಮೇಲು.”
-ಬರ್ನಾರ್ಡ್ ವಿಕ್ಲಿಫ್, ೧೮೨೩
(ಟಿಪ್ಪು ಬಿದ್ದೆಡೆ ಕೂತು, ಕಣ್ಣೀರಿಟ್ಟು, ವಿಕ್ಲಿಫ್ ಹಾಡಿದ ಹಾಡಿನ ಪಲ್ಲವಿ)
ಶ್ರೀರಂಗಪಟ್ಟಣದ ಪತನವಾಯಿತು; ಟಿಪ್ಪು ಬಿದ್ದ; ರಾಜಧಾನಿಯ ಕೊಲೆಯಾಯಿತು; ಅರಮನೆಯ ಸೂರೆಯಾಯಿತು. ಟಿಪ್ಪುವಿನ ‘ವ್ಯಾಘ್ರಾಸನ’ವಿದ್ದ ಕೋಣೆಯಿಂದ ಅದನ್ನು ಕದಲಿಸಲಾರದೆ ‘ಲೂಟಿಕೋರರು’ ಅದನ್ನು ಚೂರು ಚೂರು ಮಾಡಿದರು; ‘ಭಗ್ನಾವಸ್ಥೆ’ಯಲ್ಲಿ ಅದು ಇಂದಿಗೂ ಬ್ರಿಟನ್ನಿನ ‘ವಿಂಡರ‍್ಸ್’ಅರಮನೆಯಲ್ಲಿದೆ!
ಟಿಪ್ಪು ಸುಲ್ತಾನನ ಗ್ರಂಥಭಂಡಾರ ‘ಜಗದಾಶ್ಚರ‍್ಯಕರ’ವಾದುದು. ಅದನ್ನೆಲ್ಲ ಆಂಗ್ಲರು ಲಂಡನ್ನಿಗೊಯ್ದರು. ಈ ಭಂಡಾರದ ಮಾತು ಹಾಗಿರಲಿ, ‘ಪ್ರಭುತ್ವ ಪತ್ರ ವ್ಯವಹಾರ’ ಸಾಹಿತ್ಯ ರಾಶಿರಾಶಿಯಾಗಿತ್ತು. ಟಿಪ್ಪುವಿನ ಪತ್ರಗಳಿಗಂತೂ ಲೆಕ್ಕವೇ ಇರಲಿಲ್ಲ. ಅವನ ಸ್ವಹಸ್ತ ಗ್ರಂಥಗಳಿಗೆ ಮಿತಿ ಇಲ್ಲ. ಇವೊಂದೂ ನಮ್ಮ ದೇಶದಲ್ಲಿಲ್ಲ, ಎಲ್ಲ ಬ್ರಿಟನ್ನಿನಲ್ಲಿವೆ. ಆಂಗ್ಲರು ಆರಿಸಿ, ಭಾಷಾಂತರ ಮಾಡಿ ಪ್ರಕಟಿಸಿದ ಹಲವಂಶಗಳು ಮಾತ್ರ ಲಭ್ಯವಾಗಿವೆ. ಟಿಪ್ಪು ಸತ್ತು ಸ್ವರ್ಗಾಲಯ ಸೇರಿ ಇನ್ನೂರು ವರ್ಷಗಳಾದರೂ ಅವನ ಜೀವನ ಕುರಿತು ಪೂರ್ಣಾಂಶಗಳನ್ನು ತಿಳಿಯಲು ಸಾಧ್ಯವಿಲ್ಲ ವಾಗಿದೆ. ಟಿಪ್ಪುವಿನ ಪರಮವೈರಿಗಳಿಗೇನು ಬೇಕಾಯಿತೊ, ಎಷ್ಟು ಬೇಕಾಯಿತೊ, ಅಷ್ಟನ್ನು ಮಾತ್ರ ಅವರು ಕೂಡಲೇ ಪ್ರಕಟಿಸಿದರು.
ವೊದಲಿನ ಇಪ್ಪತ್ತು ಕಡತಗಳೂ (ಕಾಗದಗಳ ಕಟ್ಟು) ಟಿಪ್ಪು ಸುಲ್ತಾನನಿಗೂ ಫ್ರೆಂಚ್ ಜನಾಂಗಕ್ಕೂ ಏರ್ಪಟ್ಟ ಸ್ನೇಹಬಾಂಧವ್ಯಕ್ಕೆ ಸಂಬಂಧಪಟ್ಟವು. 2-7-1797ನೆಯ ತಾರೀಕಿನ ಪತ್ರದಿಂದ ಟಿಪ್ಪು ಮೀರ್ ಗುಲಾಂ ಅಲಿ ಮತ್ತು ಮಿರ್ಜಾ ಬಾಕರ್ ಎಂಬ ಇಬ್ಬರು ರಾಯಭಾರಿಗಳನ್ನು ಯುರೋಪಿಗೆ ಕಳುಹಿಸಿ, ಫ್ರೆಂಚ್ ಜನಾಂಗದೊಂದಿಗೆ ಸ್ನೇಹ ಬಾಂಧವ್ಯದ ಕರಾರು ಮಾಡಿಕೊಳ್ಳುವಂತೆ ಅವರಿಗೆ ಸಲಹೆ ಮಾಡಿದಂತೆಯೂ ತಿಳಿದು ಬರುತ್ತದೆ. ರಾಯಭಾರಿಗಳಿಬ್ಬರೂ ‘ಫ್ರೆಂಚ್ ಜನಾಂಗ ದೊಂದಿಗೆ ಮಾಡಿಕೊಳ್ಳಬೇಕಾದ ಒಪ್ಪಂದಗಳೇನು, ವಿಧಿಗಳೇನು’ ಎಂಬುದಾಗಿ ಕೇಳುತ್ತಾರೆ. ಇದು ಉತ್ತರ:
1.ಫ್ರೆಂಚ್ ಸೈನ್ಯಗಳೂ ಫ್ರೆಂಚ್ ದಂಡ ನಾಯಕನೂ ಖುದಾಬಾದ್ ಸರಕಾರದ (ದೇವದತ್ತವಾದ ಸರಕಾರ)ಆಜ್ಞೆಗೆ ಒಳಗಾಗಿ ರಬೇಕು.
2.ಚನ್ನಪಟ್ಟಣ (ಮದರಾಸು)ವನ್ನಾಕ್ರಮಿಸಿದ ಮೇಲೆ ಅದನ್ನು ಧ್ವಂಸ ಮಾಡಬೇಕು; ಗೋವಾ ಕೋಟೆ ‘ದೇವದತ್ತ ಸರಕಾರ’ಕ್ಕೆ ಸೇರತಕ್ಕದ್ದು. ಮುಂಬೈ ಫ್ರೆಂಚರಿಗೆ ಸೇರತಕ್ಕದ್ದು.
3.ಬಂಗಾಳವನ್ನು ಗೆಲ್ಲಲು ‘ದೇವದತ್ತ ಸರಕಾರ’ದ ಸೈನ್ಯಗಳು, ಫ್ರೆಂಚ್ ಸೈನ್ಯಗಳೊಂದಿಗೆ ಸೇರತಕ್ಕದ್ದು. ಫ್ರೆಂಚ್ ದಂಡನಾಯಕನ ಆಜ್ಞೆ ಇಲ್ಲದೆ ಯಾವ ಸಂಗ್ರಾಮ ಕಾರ್ಯವನ್ನೂ ಕೈಗೊಳ್ಳಲಾಗದು. ಬಂಗಾಳದಲ್ಲಿ ಗೆದ್ದ ಭೂಭಾಗಗಳನ್ನಿಬ್ಬರೂ ಸಮನಾಗಿ ಹಂಚಿಕೊಳ್ಳತಕ್ಕದ್ದು.
4.ಆಂಗ್ಲರೊಂದಿಗೆ ಯುದ್ಧ ಮಾಡಬೇಕಾದ ರಾಗಲಿ, ಶಾಂತಿಯ ಕರಾರು ಮಾಡಿಕೊಳ್ಳ ಬೇಕಾದರಾಗಲಿ, ಫ್ರೆಂಚ್ ಮತ್ತು ‘ದೇವದತ್ತ ಸರಕಾರ’ಗಳೆರಡರ ಒಮ್ಮತದಿಂದ ಆಗತಕ್ಕದ್ದು.
ಫ್ರೆಂಚರೊಡನೆ ಒಂದಾಗಿದ್ದರೂ, ಅವರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದ ಟಿಪ್ಪು. ಎರಡನೆಯ ಕಡತದ ಕಾಗದ ಪತ್ರಗಳಿಂದ ಟಿಪ್ಪುವಿನ ಅಧಿಕಾರಿಗಳು ಫ್ರೆಂಚರನ್ನು ಕುರಿತು ಎಚ್ಚರಿಕೆಯಿಂದ ವರ್ತಿಸಬೇಕೆಂದು ತವ್ಮೊಡೆಯನಿಗೆ ಎಚ್ಚರಿಕೆ ಕೊಡುತ್ತಾರೆ! ‘ಪ್ರತಿಕ್ಷಣವೂ ಇಂಗ್ಲಿಷರ ಖಂಡನೆ, ಅವರಿಗೆ ಬುದ್ಧಿಕಲಿಸಬೇಕಾದುದು ಅನಿವಾರ್ಯ, ನಾವು ಅಪಾರ ಹಣ ವೆಚ್ಚ ಮಾಡುತ್ತಿದ್ದೇವಾದರೂ ಫ್ರೆಂಚ್‌ರ ಅಪ್ರಾಮಾಣಿಕತೆ, ಕೃತಘ್ನತೆ, ವೈರಸ್ವಭಾವ, ಪ್ರಭುಗಳಿಗೆ ವೇದ್ಯವೇ ಇದೆ.
ಕ್ಯಾಲಿಕಟ್ ಜಿಲ್ಲೆಯನ್ನು ಫ್ರೆಂಚ್‌ರು ಖುದಾಬಾದ್ ಸರಕಾರಕ್ಕೆ ಒಪ್ಪಿಸುವವರೆಗೆ, ಅವರು ಯಾರೂ ಪ್ರಭುಗಳ ಯಾವ ಬಂದರಿ ನಲ್ಲೂ ಬಂದಿಳಿಯಲು ಅಪ್ಪಣೆ ಕೊಡಬಾರದು. ಅವರಿಗೆ ಸಾಮಾನು ಸರಂಜಾಮನ್ನೂ ಒದಗಿಸ ಬಾರದು; ರಕ್ಷಣೆ ಕೊಡಬಾರದು. ಪ್ರಭುಗಳು ಫ್ರೆಂಚರಿಂದ ಹಡಗುಗಳನ್ನು ಕೊಳ್ಳಬಹುದು; ಆದರೆ ಅವುಗಳನ್ನು ಯಾನಕ್ಕೆ ಕಳುಹಿಸಬಾರದು; ಯಾಕೆಂದರೆ ಅವೆಲ್ಲ ಕಳ್ಳಕಾಕರಂತೆ ಕದ್ದವು. ಇವುಗಳನ್ನು ನಾವು ಕಳುಹಿಸಿದರೆ ಯಾವ ಬಂದರಲ್ಲಿ ಏನು ತೊಂದರೆಯೋ ಬಲ್ಲವರು ಯಾರು? ಆದ್ದರಿಂದ ಪ್ರಭುಗಳು ಬೇರೊಂದು ಹಡಗನ್ನು ಕಳುಹಿಸಬಹುದು.
ಇಬ್ಬರು ಐರೋಪ್ಯ ನಾವಿಕರೊಂದಿಗೆ ನಮ್ಮ ಅಂತರಂಗಕ್ಕೆ ಸೇರಿದ ವರನ್ನು ಕಳುಹಿಸಬಹುದು. ಆದರೆ ಪ್ರಭುಗಳು ಪತ್ರಗಳನ್ನು ಕಳುಹಿಸುವುದು ಅನವಶ್ಯಕ’ ಹೀಗೆ ಎಚ್ಚರಿಕೆ ಕೊಟ್ಟವರು ಮುಹಮ್ಮದ್ ರೇಜಾ ಮತ್ತು ಪೂರ್ಣಯ್ಯ! 10ನೆಯ ಕಡತವಾದರೂ ಇಂದಿಗೂ ಎಂತಹ ವರ ಕುತೂಹಲವನ್ನಾದರೂ ಕೆರಳಿಸುವಂತಹು ದಾಗಿದೆ. ಫ್ರೆಂಚ್ ಜನಾಂಗದೊಂದಿಗೆ ರಾಯಭಾರ ನಡೆಸಲು ಕಳುಹಿಸಿದ ಮಿರ್ಜಾ ಬಾಕರ್, ಮೀರ್ ಯೂಸೂಫ್ ಆಲಿ, ಮೀರ್ ಗುಲಾಂ ಅಲಿ, ಹಸನ್ ಅಲಿ ಈ ನಾಲ್ವರಿಗೂ ಟಿಪ್ಪು ಸುಲ್ತಾನ “ಬುದ್ಧಿ-ನಿರೂಪ” ಕೊಡುತ್ತಾನೆ.
“ದೇವರಿಗೂ ದೇವರ ಪ್ರವಾದಿಗೂ ವಿಧೇಯರಾಗಿರಿ. ಈ ವಿಧೇಯತೆಯ ಕರ್ತವ್ಯ ನೆರವೇರಿಸಬೇಕಾದರೆ ಜನ್(ಹೆಣ್ಣು), ಜಿಸ್ (ಜೀವನ), ಜರ್(ಹಣ), ಜಮೀನ್ (ಮಣ್ಣು-ಭೂಮಿ) ಈ ನಾಲ್ಕು ‘ಜಕಾರ’ಗಳನ್ನು ಬಿಡಬೇಕು. ಈ ನಾಲ್ಕನ್ನೂ ಬಿಡದವರು ಕಾಫಿರ್ (ನಾಸ್ತಿಕ), ಕೆತಾಜ್ (ಹಂದಿ), ಕುಲ್ (ನಾಯಿ) ಈ ಮೂರು ‘ಕಕಾರ’ದ ಕಶ್ಮಲಕ್ಕೆ ಸಮಾನರು.
‘ಸತ್ಯನಿಷ್ಠರಾಗಿರಬೇಕು; ಅದು ನಾಲ್ಕು ಬಗೆ ಯಾಗಿದೆ. ನಯನನಿಷ್ಠೆ ಮೊದಲನೆಯದು; ಸರಕಾರಕ್ಕೇನು ಎಲ್ಲಿ ಕೆಡಕಾಗುವುದು ಕಂಡು ಬಂದರೂ ಅದನ್ನು ನಿವಾರಿಸಬೇಕು. ಎರಡನೆಯದು ಶ್ರವಣನಿಷ್ಠೆ; ರಾಜಭಕ್ತಿ ವಿರುದ್ಧ ಯಾರಾದರೂ ಮಾತನಾಡಿದ್ದು ಕಿವಿಗೆ ಬಿತ್ತೋ, ತಕ್ಷಣ ಅಂತಹವರಿಗೆ ಬುದ್ಧಿ ಹೇಳಬೇಕು; ಪ್ರಭುತ್ವಕ್ಕೆ ತಿಳಿಸಬೇಕು. ನಾಲಿಗೆಯ ನಿಷ್ಠೆ ಮೂರನೆಯದು; ಮಾತನಾಡುವ ಶಕ್ತಿ ಇರುವ ವರೆಗೆ ರಾಜಭಕ್ತಿ, ಕೃತಜ್ಞತೆ ಕುರಿತು ಮಾತ ನಾಡಬೇಕು, ರಾಜಭಕ್ತಿ ಪ್ರಚಾರ ಮಾಡಬೇಕು.
ನಾಲ್ಕನೆಯದು ಹಸ್ತನಿಷ್ಠೆ ಅಥವಾ ಶುದ್ಧಹಸ್ತ. ನಿಮ್ಮ ಕೈಗಳು ಸದಾ ಸರಕಾರದ ಸೇವೆಗೆ ವಿನಿಯೋಗವಾಗಬೇಕು-ಬರೆಯಬೇಕು; ಶತ್ರು ನಿರೋಧಕ್ಕಾಗಿ ಕತ್ತಿಯನ್ನೋ, ಬಂದೂಕನ್ನೋ ಹಿಡಿಯಬೇಕು, ಲಂಚ ಕೊಡುವವನೂ ಸ್ವೀಕರಿಸುವವನೂ ಇಬ್ಬರೂ ನರಕ ಪ್ರವೇಶ ಮಾಡುತ್ತಾರೆ.’
11-5-1798ರಲ್ಲಿ ಟಿಪ್ಪು ತನ್ನ ರಾಯಭಾರಿಗಳು ಹಲವರಿಗೊಂದು ಪತ್ರ ಬರೆದಿದ್ದಾನೆ:‘ನೀವು ಬರುವಾಗ ಹಡಗುಗಳನ್ನು ನಿರ್ಮಿಸುವವರನ್ನು ಕರೆತರಬೇಕು; ಅದಕ್ಕೆ ಸಂಬಂಧಪಟ್ಟ ಹಾಗೆ ಇತರ ಕಾರೇಗಾರದವರನ್ನು ಸಮ್ಮುಖಕ್ಕೆ ಕರೆದು ತರಬೇಕು. ನಾನು ಅವರನ್ನು ಮುಖತಃ ಕಂಡ ಮೇಲೆ ಹಡಗುಗಳನ್ನು ನಿರ್ಮಿಸಲಿಕ್ಕಾಗಿ ಅವರನ್ನು ನೇಮಿಸುತ್ತೇನೆ’ ಎಂಬುದಾಗಿ ಹೇಳಿದ್ದಾನೆ. ರಾಯಭಾರಿಗಳು ವಿದೇಶಗಳಲ್ಲಿ ಸಂಚಾರ ಮಾಡುವಾಗ ತಾವು ಏನೇನು ನೋಡುವರೋ, ಎಲ್ಲೆಲ್ಲಿಗೆ ಹೋಗುವರೋ,ಎಲ್ಲ ವಿವರಗಳನ್ನೂ ಪ್ರತ್ಯೇಕವಾಗಿ ಪ್ರತಿಯೊಬ್ಬರೂ ವರದಿಗಳನ್ನು ಬರೆದು ಕಳುಹಿಸ ಬೇಕೆಂಬುದಾಗಿ ತಿಳಿಸಿದ್ದಾನೆ.
ಜಮಾನ ಷಹಾ ಆಸ್ಥಾನಕ್ಕೆ ಕಳುಹಿಸಿದ ಮೀರ್ ಹಬೀಬುಲ್ಲಾ ಮತ್ತು ಮೀರ್ ಮುಹಮ್ಮದ್ ರೇಜಾ ಇಬ್ಬರು ರಾಯಭಾರಿಗಳಿಗೂ ಟಿಪ್ಪು ಸುಲ್ತಾನ ಕೊಟ್ಟ ‘ಹುಕುಂನಾಮೆ’ಯನ್ನು ನೋಡಿದರೆ ಪರಮಾಶ್ಚರ್ಯವಾಗುತ್ತದೆ. ಟಿಪ್ಪು ಸುಲ್ತಾನನ ದೂರದೃಷ್ಟಿ, ಅಭಿರುಚಿ ವೈಶಾಲ್ಯ-ವೈವಿಧ್ಯ ಮತ್ತು ತನ್ನ ರಾಜ್ಯದ ಆರ್ಥಿಕ ಭದ್ರ ತಳಹದಿಗಾಗಿ ವಾಣಿಜ್ಯ-ಕೈಗಾರಿಕೆಗಳನ್ನು ಸ್ಥಾಪಿಸುವುದಗತ್ಯವೆಂಬ ವಿಶ್ವಾಸ-ಇವೆಲ್ಲ ವ್ಯಕ್ತವಾಗುತ್ತವೆ.
‘ಜಮಾಲಾಬಾದಿನಿಂದ (ಮಂಗಳೂರು) ಹಡಗು ಹತ್ತಿ, ಕಾರ್ಖಾನೆಯ ವಾಣಿಜ್ಯಾಧಿಕಾರಿ (ಮಲ್ಲಿಕ್-ಉ-ತೂಜರ್)ಯೊಂದಿಗೆ, ಕಚ್ಚಿಗೆ ಹೋಗಿ; ಅಲ್ಲಿ ನಮ್ಮ ಕಾರ್ಖಾನೆಯ ದರೋಗರು (ಅಧಿಕಾರಿಗಳು) ಹೇಗೆ ಕೆಲಸ ಮಾಡುತ್ತಿರುವರೆಂಬುದನ್ನು ಗಮನಿಸಿ ಕಚ್ಛ ಮಹಾರಾಜರ ಭೇಟಿ ಮಾಡಿ ಅವರಿಗೆ ಖಿಲ್ಲತ್ತುಗಳನ್ನೊಪ್ಪಿಸಿ, ಅವರ ಸ್ನೇಹ ಬಾಂಧವ್ಯವನ್ನು ಭದ್ರಗೊಳಿಸಿ, ರಾಜರ ಅಪ್ಪಣೆ ಪಡೆದು ಮಿಂಡಿಯಲ್ಲೊಂದು ಕಾರ್ಖಾನೆ ಸ್ಥಾಪಿಸಲು ಮನೆ ಪಡೆಯಿರಿ.
ರಾಜರು, ಅವರ ತಮ್ಮಂದಿರ ವಿಚಾರ ಬರೆಯಿರಿ. ಅಲ್ಲಿನ ವ್ಯಾಪಾರ ಸಾಪಾರ; ಸುಂಕ ಸಾರಿಗೆ, ವಿಚಾರಗಳನ್ನು ತಿಳಿದುಕೊಳ್ಳಿ. ಕುದುರೆ ವ್ಯಾಪಾರಿಗಳಿಗೆ ಒಳ್ಳೆ ಮಾತು ಹೇಳಿ, ಭರವಸೆ ಕೊಟ್ಟು, ನಮ್ಮ ರಾಜ್ಯದ ಬಂದರುಗಳಿಗೆ ವ್ಯಾಪಾರಕ್ಕಾಹ್ವಾನಿಸಿ. ಅವರಿಗೆ ರಿಯಾಯಿತಿಗಳನ್ನು ತೋರಿಸುವುದಾಗಿ ಹೇಳಿ. ವಿದೇಶಿ ಬಂದರು ವ್ಯಾಪಾರಿಗಳು ನಮ್ಮ ದೇಶದ ಬಂದರುಗಳೊಂದಿಗೆ ಬಾಂಧವ್ಯ ಕಲ್ಪಿಸಿಕೊಂಡು ವ್ಯಾಪಾರ ಮಾಡಲು ಅವರನ್ನು ಪ್ರೋತ್ಸಾಹಿಸುವುದೇ ನಿಮ್ಮ ಕರ್ತವ್ಯವಾಗಲಿ.
‘ಅಲ್ಲಿಂದ ಕರಾಚಿ ಬಂದರಿಗೆ ಹೋಗಿ; ಅಲ್ಲಿಂದ ನಸೀರಖಾನನ್ನ ಭೇಟಿ ಮಾಡಿ; ನಜರನ್ನೊಪ್ಪಿಸಿ; ಆ ದೇಶದಲ್ಲಿ ನೋಡಬೇಕಾದದ್ದನ್ನೆಲ್ಲ ನೋಡಿ. ಅಲ್ಲಿಂದ ಪರ್ಶಿಯಾಕ್ಕೆ ಪ್ರಯಾಣ ಮಾಡಿ. ಆ ದೇಶದಿಂದ ಆಶ್ಚರ್ಯಕರವಾದ ವಸ್ತುಗಳೇನೇನುಂಟೋ ಅವುಗಳನ್ನೆಲ್ಲ ತನ್ನಿ (Bring back with you the different rarities and choice productions of the country)’ ಈ ವಿಧವಾಗಿ ಟಿಪ್ಪು ತನ್ನ ರಾಯಭಾರಿಗಳಿಗೆ ಬರೆಯುತ್ತ ಹೋಗಿದ್ದಾನೆ.
ಅವರಿಂದ ಎಲ್ಲ  ವಿವರಗಳನ್ನು ಪಡೆದು, ತನ್ನ ತಿಳುವಳಿಕೆಯ ಭಂಡಾರವನ್ನು ಸಮೃದ್ಧಗೊಳಿಸುತ್ತಿದ್ದಾನೆ. ‘ಕಾಬೂಲಿಗೆ ಹೋಗಿ ಸಮಯವರಿತು, ಅಲ್ಲಿನ ವಜೀರರ ಸಹಕಾರ ಸಹಾಯ ಪಡೆದು, ಸ್ಥಳೀಯ ಆಚಾರ, ಆಸ್ಥಾನ ಮರ್ಯಾದೆಯರಿತು ವರ್ತಿಸಿ, ಜಮಾನ್‌ಷಹಾರವರಿಗೆ ‘ನಜರು-ಮುಜರೆ’ ಗಳನ್ನು ಅರ್ಪಿಸಿರಿ. ನಮ್ಮ ಮತ್ತು ಅವರ ಸ್ಥಾನ ಮರ್ಯಾದೆಯನ್ನು ಪಾಲಿಸಿ, ಗಂಭೀರವಾಗಿ ನಿಮ್ಮ ರಾಯಭಾರದ ಉದ್ದೇಶ್ಯವನ್ನು ಸಫಲಗೊಳಿಸುವ ಪ್ರಯತ್ನ ಮಾಡಿ’ರೆಂದು ಪ್ರತಿಯೊಂದು ಸಲ ಬರೆದಾಗಲೂ ಎಚ್ಚರಿಸುತ್ತಾನೆ.
೧೭ರ ಸುಮಾರಿನಲ್ಲಿ ಫ್ರೆಂಚರು ಟಿಪ್ಪು ಸುಲ್ತಾನರ ಬಳಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ, ವ್ಯಾಪಾರ ಕರಾರೊಂದನ್ನು ಮಾಡಿಕೊಳ್ಳಲು ಪ್ರಯತ್ನ ಮಾಡಿದರು. “ನಾವು ನಿಮ್ಮ ಶತ್ರುಗಳಿಗೆ ಸಹಾ ಮೋಸ ಮಾಡುವುದಿಲ್ಲ. ಮಲಬಾರ್ ಕರಾವಳಿಯ ಅರಸರೊಂದಿಗೆ ಯಾವ ರೀತಿ ಬಾಂಧವ್ವನ್ನೂ ಕಲ್ಪಿಸಿಕೊಳ್ಳುವುದಿಲ್ಲ”ವೆಂಬ ಭರವಸೆಯನ್ನು ಕೊಟ್ಟು, “ನಿಮ್ಮ ರಾಜ್ಯದಲ್ಲಿ ನಮ್ಮ ವ್ಯಾಪಾರ ಸಾಪಾರಗಳು ಸುಗಮವಾಗಿ ನಡೆಯಲು ಕಾರ್ಖಾನೆಗಳನ್ನು, ವಸತಿಗಳನ್ನು ಕಟ್ಟಲಿಕ್ಕೆ ತೀರದಲ್ಲಿ ಅಥವಾ ಅನುಕೂಲವಾದ ಕಡೆ ಸ್ಥಳ ಕೊಡಬೇಕು” ಎಂಬುದಾಗಿ ಕೇಳಿದರು. ಟಿಪ್ಪು ಇದಕ್ಕೆ ಒಪ್ಪಲಿಲ್ಲ.
“ನಾವಿದಕ್ಕೊಪ್ಪಿದರೆ ರಾಜ್ಯದ ವ್ಯಾಪಾರೋದ್ಯಮಗಳೆಲ್ಲ ಫ್ರೆಂಚರ ಗುತ್ತಿಗೆಯಾಗಿ ಹೋಗುತ್ತದೆ. ಇದನ್ನು ನಾವೆಂದಿಗೂ ಕಾರಣ ನಿಶ್ಚಿತ ಪ್ರಮಾಣದಲ್ಲಿ ಅವರು ನಮ್ಮ ದೇಶದಿಂದ ಶ್ರೀಗಂಧದ ಮರ, ಮೆಣಸು, ಏಲಕ್ಕಿ ಮತ್ತು ಅಕ್ಕಿಯನ್ನು ಕೊಂಡೊಯ್ಯಲು” ಒಪ್ಪಿಗೆ ಕೊಟ್ಟ.ತುರ್ಕಿ, ಯುರೋಪುಗಳಿಗೆ ರಾಯಭಾರಗಳನ್ನು ಕಳುಹಿಸುವಾಗ ರಾಜಕಾರಣವೊಂದೇ ಅವನ ಉದ್ದೇಶವಾಗಿರಲಿಲ್ಲ.
“ಮುಸ್ಲಿಮರ ರಾಜಕೀಯ ಪ್ರಭಾವ ಪತನಕ್ಕೆ ಅವರು ವ್ಯಾಪಾರ-ಕೈಗಾರಿಕೆಗಳನ್ನು ಉದಾಸೀನ ಮಾಡಿದ್ದೇ ಕಾರಣ. ಇವೆರಡಕ್ಕು ಹೆಚ್ಚು ಲಕ್ಷ ಕೊಟ್ಟಿದ್ದೇ ಐರೋಪ್ಯರ ರಾಜಕೀಯ ಔನ್ನತ್ಯಕ್ಕೆ ಕಾರಣ ಮತ್ತು ಮುಸ್ಲಿಂ ರಾಜ್ಯಗಳನ್ನವರು ತುಳಿಯಲಿಕ್ಕೆ ಕಾರಣ” ಎಂಬುದಾಗಿ ತರ್ಕ ಮಾಡಿ, ತನ್ನ ರಾಯಭಾರಿಗಳಿಗೆಲ್ಲ “ನೀವು ಹೋದ ರಾಜ್ಯಗಳಲ್ಲೆಲ್ಲ ಅರಸಿ ನೋಡಿ, ತಾಂತ್ರಿಕ ನಿಪುಣರನ್ನು ಕರೆತನ್ನಿ. ಒಳ್ಳೆ ಕಲಾವಿದರನ್ನು ಕರೆತನ್ನಿ”ರೆಂದು ಅವರಿಗೆ ಸೂಚನೆ ಮಾಡುತ್ತಿದ್ದ.
ಟಿಪ್ಪುವಿನ ಪರಮ ವೈರಿಗಳಾದ ಆಂಗ್ಲರ ಕಣ್ಣುಗಳಿಂದ ನೋಡದೆ, ನಮ್ಮ ಕಣ್ಣುಗಳಿಂದಲೇ ನಾವು ಟಿಪ್ಪುವನ್ನು ನೋಡಿದಾಗ “ಇವನೆಂತಹ ಮಹಾರ! ಇವನೆಂತಹ ದೇಶಭಕ್ತ!” ಅನ್ನಿಸದೆ ಇರದು. ಅವನ ದೇಶಭಕ್ತಿಯನ್ನು ಅಳೆಯಲು ಒಂದು ‘ಮಾನದಂಡ ಉಂಟ’ ಅನ್ನಿಸುತ್ತದೆ ಈ ಸನ್ನಿವೇಶವನ್ನು ಕುರಿತು ಅಲೋಚನೆ ಮಾಡಿದಾಗ.
ಹೈದರಾಬಾದ್ ನಿಝಾಮನು ತನ್ನ ವಕೀಲರು ಕೆಲವರನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಿದ. ಉಭಯ ರಾಮಮನೆತನಗಳನ್ನು ವಿವಾಹ ಬಾಂಧವ್ಯಗಳಿಂದ ಸಮೀಪಕ್ಕೆ ತಂದು, ಸ್ನೇಹವನ್ನು ಭದ್ರಗೊಳಿಸಬೇಕೆಂಬುದೇ ಈ ಪ್ರಯತ್ನದ ಪರಮೋದ್ದೇಶವಾಗಿತ್ತು. ನಿಝಾಮನ ವಕೀಲರು ತವ್ಮೊಡೆಯನ ಮನೋಗತವನ್ನು ತಿಳಿಸಿದರು. ಟಿಪ್ಪುವಾದರೋ, “ನಿಝಾಮರ ಮಗನಿಗೆ ನನ್ನ ಮಗಳನ್ನು ಕೊಟ್ಟು ವಿವಾಹ ಮಾಡಬೇಕೆಂಬ ಸೂಚನೆಗೆ ನಾನು ಕಿವಿಗೊಡಲು ಸಿದ್ಧನಾಗಿಲ್ಲ. ಆಂಗ್ಲರೊಂದಿಗೆ ಕರಾರು ಮಾಡಿಕೊಳ್ಳಲು ಸಂಧಾನ ನಡೆಸುವಂತಹ ಅರಸನೊಂದಿಗೆ ವಿವಾಹ ಬಾಂಧವ್ಯ ಸಲ್ಲದು” ಎಂಬುದಾಗಿ ಉತ್ತರ ಕೊಟ್ಟ!!
“ಭಾರತದ ಪರಮ ವೈರಿಗಳೊಂದಿಗೆ ಸ್ನೇಹವೆ?”- ಇದು ಮಾನಧನ, ಅಭಿಮಾನಧನ, ದೇಶಭಕ್ತ ಟಿಪ್ಪುವಿನ ಪ್ರಶ್ನೆ.
*ಶ್ರದ್ಧಾಳು ಹಿಂದೂಗಳು ಶೃಂಗೇರಿ ಮಠವನ್ನು ಲೂಟಿ ಮಾಡಿದರು! ಸ್ವಾಮಿಗಳನ್ನು ಓಡಿಸಿದರು! ಮತಾಂಧ ಮುಸ್ಲಿಮರು ಮಠವನ್ನು ಉದ್ಧಾರ ಮಾಡಿದರು! ಸ್ವಾಮಿಗಳನ್ನಾಹ್ವಾನಿಸಿ, ಗೌರವಿಸಿ, ಕಾಪಾಡಿದರು!
*ಶ್ರೀರಂಗಪಟ್ಟಣದ ಸುಲ್ತಾನರ ಅರಮನೆಗೆ ಪಶ್ಚಿಮಕ್ಕೆ 150 ಗಜಗಳ ದೂರದಲ್ಲೇ ಇದೆ ಶ್ರೀರಂಗನಾಥನ ದೇವಾಲಯ!
*ಅರಮನೆಯ ಜನಾನಾ ಪಕ್ಕದಲ್ಲೇ ಇದೆ ಗಂಗಾಧರೇಶ್ವರನ ಗುಡಿ!
*ಬೆಂಗಳೂರು ಕೋಟೆಯ ಶ್ರೀನಿವಾಸ ತನ್ನಾಲಯದಲ್ಲಿ ಸುಲ್ತಾನನ ಅರಮನೆ ಪಕ್ಕದಲ್ಲೆ ಸುಖವಾಗಿದ್ದಾನೆ!
*ನಂಜನಗೂಡಿನ ದೇವರಿಗೆ ‘ಹಕೀಂ ನಂಜುಂಡ’ನೆಂದೂ ಹೆಸರು. ಅಲ್ಲಿನ ಪಚ್ಚೆಯ ಲಿಂಗವೊಂದಕ್ಕೆ ‘ಪಾದಷಾಲಿಂಗ’ವೆಂದೂ ಕರೆಯುತ್ತಾರೆ.
*ನಂಜನಗೂಡು-ಶ್ರೀರಂಗಪಟ್ಟಣ ದೇವಾಲಯಗಳಲ್ಲಿ ಚಿನ್ನ-ಬೆಳ್ಳಿ ಪೂಜೆಯ ಪಾತ್ರೆಗಳೆಷ್ಟೋ ಇವೆ. ಕೆಲವುಗಳ ಮೇಲೆ ಟಿಪ್ಪು ಸುಲ್ತಾನರ ಸೇವೆ’ ಮುಂತಾದ ಭಕ್ತಿ  ಹೃದಯಸೂಚಕ ಪದಗಳಿವೆ!
*ಮರಾಠರು ಕೆಡವಿದ್ದ ಶ್ರೀರಂಗ ದೇವಾಲಯದ ಗೋಡೆಗಳನ್ನು ಹೈದರ್- ಟಿಪ್ಪುಗಳು ಜೀರ್ಣೋದ್ಧಾರ ಮಾಡಿದರು!

 

Wednesday, January 30, 2013

ಗಾಂಧಿ ಮತ್ತು ದಲಿತರು : ದ್ವೇಷದ ಬಳುವಳಿAnand Teltumbde, grandson of Dr. Ambedkar, addressing a symposium on ‘Post-era of Dr. Ambedkar—his philosophy and mission' at Tirupati on Saturday. — Photo: K V Poornachandra Kumar


ಡಾ. ಆನಂದ್ ತೇಲ್ತುಂಬ್ಡೆ
ಅನು: ಡಾ. ಎಚ್. ಎಸ್. ಅನುಪಮಾ


ಆಧುನಿಕ ಇತಿಹಾಸದ ಅತಿ ಕಹಿ ವೈರುಧ್ಯವೆಂದರೆ ಮಹಾತ್ಮಾ ಗಾಂಧಿ ಕುರಿತು ದಲಿತರಿಗಿರುವ ದ್ವೇಷ. ಅಂಬೇಡ್ಕರರನ್ನು ಹೊರತುಪಡಿಸಿ ಇನ್ಯಾರೂ ಬರೆಯದಷ್ಟು, ಮಾತನಾಡದಷ್ಟು, ಹೋರಾಡದಷ್ಟು ದಲಿತರು ಗಾಂಧಿ ವಿರುದ್ಧ ತಿರುಗಿಬಿದ್ದಿದ್ದಾರೆ.

ಹಾಗೆ ನೋಡಿದರೆ ೧೯೧೪ರಲ್ಲಿ ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ ಗಾಂಧಿ ತಮ್ಮ ದಲಿತಪರ ಕಾಳಜಿಯನ್ನು ೧೯೧೬ರಲ್ಲೇ ವ್ಯಕ್ತಪಡಿಸಿದ್ದರು. ಆಗಿನ್ನೂ ಅಂಬೇಡ್ಕರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವಿದ್ಯಾರ್ಥಿಯಾಗಿದ್ದರು. ಗಾಂಧಿ ಆಗಲೇ ಪೂಜ್ಯ ವ್ಯಕ್ತಿಯಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ತಾರತಮ್ಯದ ವಸಾಹತುಶಾಹಿ ಆಡಳಿತದ ವಿರುದ್ಧ ನಾಗರಿಕ ಅಸಹಕಾರ (ಸತ್ಯಾಗ್ರಹ) ಎಂಬ ಹೊಸ ಅಸ್ತ್ರವನ್ನು ಸತತವಾಗಿ ಬಳಸಿ ಯಶಸ್ವಿಯಾಗಿದ್ದರು. ಅದರ ಹಿಂದಿನ ವರ್ಷವಷ್ಟೇ ಅವರಿಗೆ ಮಹಾತ್ಮಾ ಎಂಬ ಬಿರುದೂ ಜೊತೆಗೂಡಿತ್ತು.೧೯೨೭ರಲ್ಲಿ ಅಂಬೇಡ್ಕರ್ ತಮ್ಮ ಮೊದಲ ದಲಿತ ಮಾನವ ಹಕ್ಕು ಹೋರಾಟವನ್ನು ಮಹಾಡ್‌ನಲ್ಲಿ ಆರಂಭಿಸಿದರು. ಅದಕ್ಕಿಂತ ಮುಂಚೆ ಗಾಂಧೀಜಿಯವರ ಸತ್ಯಾಗ್ರಹದಿಂದ ಪ್ರೇರಿತರಾಗಿ ೧೯೨೪-೨೫ರಲ್ಲಿ ಕೇರಳದ ವೈಕಂ ಸತ್ಯಾಗ್ರಹ ನಡೆದಿತ್ತು. ಸತ್ಯಾಗ್ರಹ ಪೆಂಡಾಲಿನಲ್ಲಿ ದಾರಿದೀಪವೇನೋ ಎಂಬಂತೆ ಇದ್ದಿದ್ದು ಗಾಂಧೀಜಿಯ ಒಂದೇ ಒಂದು ಭಾವಚಿತ್ರ. ಅಂಬೇಡ್ಕರರಿಗೆ ಗಾಂಧಿಯೊಡನೆ ಸಹಮತವಿರದಿದ್ದರೂ ಅವರ ಕೊಡುಗೆಯನ್ನು ವ್ಯಾವಹಾರಿಕ ದೃಷ್ಟಿಯಿಂದ ಅಂಗೀಕರಿಸಿ ಹೀಗೆ ಹೇಳಿದ್ದರು: ‘ನಮ್ಮ ಹತ್ತಿರ ಮತ್ಯಾರೂ ಬರದಿದ್ದಾಗ, ಮಹಾತ್ಮಾ ಗಾಂಧಿಯವರ ಕರುಣೆ ಕಡಿಮೆ ಬೆಲೆಯದಲ್ಲ.’ ಹಾಗಾದರೆ ದಲಿತ ಚಳುವಳಿಗೆ ಗಾಂಧಿ ದ್ವೇಷವನ್ನು ಬಳುವಳಿಯಾಗಿ ಕೊಟ್ಟಿದ್ದು ಯಾವುದು?೧೯೩೦-೩೨ರ ನಡುವೆ ನಡೆದ ದುಂಡುಮೇಜಿನ ಪರಿಷತ್ತಿನಲ್ಲಿ ಅಂಬೇಡ್ಕರ್ ಮತ್ತು ಗಾಂಧಿ ನಡುವಿನ ಕಹಿ ಮುಖಾಮುಖಿಯಲ್ಲಿ ಈ ದ್ವೇಷದ ಮೂಲವನ್ನು ಹುಡುಕಬಹುದು. ೧೯೩೧ರ ಆಗಸ್ಟ್ ೩೧ರಂದು ಮುಂಬಯಿಯಲ್ಲಿ ನಡೆದ ಅವರಿಬ್ಬರ ಮೊದಲ ಭೇಟಿಯಲ್ಲಿ ಇದರ ಮುನ್ಸೂಚನೆಯಿತ್ತು. ಈ ಭೇಟಿ ಗಾಂಧಿ ಆಹ್ವಾನದ ಮೇರೆಗೆ ಏರ್ಪಾಡಾಗಿತ್ತು ಹಾಗೂ ಅವರಿಬ್ಬರ ನಡುವಿನ ರಾಜಿಯಾಗಲು ಅಸಾಧ್ಯವಾದ ಭಿನ್ನಮತಗಳನ್ನು ಮುನ್ನೆಲೆಗೆ ತಂದಿತು.

ಮಹಾಡ್ ಅನುಭವದಿಂದ ಭ್ರಮನಿರಸನ ಹೊಂದಿದ್ದ ಅಂಬೇಡ್ಕರ್, ಕ್ರೂರ ಜಾತಿವ್ಯವಸ್ಥೆ ಬುಡಮೇಲು ಮಾಡಲು ಹಿಂದೂಗಳು ಸುಧಾರಣಾ ಮಾರ್ಗ ಅನುಸರಿಸುವರೆಂದು ನಂಬಲು ಸಿದ್ಧರಿರಲಿಲ್ಲ. ಎಂದೇ ಅವರು ರಾಜಕೀಯ ಅವಕಾಶಗಳತ್ತ ಗಮನ ಹರಿಸಿದರು. ದಮನಿತ ವರ್ಗಗಳ ಹಿತಾಸಕ್ತಿ ಕಾಯುವ ಸಲುವಾಗಿ ತೆಗೆದುಕೊಳ್ಳಬಹುದಾದ ವಿಶೇಷ ರಾಜಕೀಯ ಕ್ರಮಗಳ ಕುರಿತು ಗಾಂಧಿ ನಿಲುವು ಏನೆಂದು ಅಂಬೇಡ್ಕರ್ ತಿಳಿಯಬಯಸಿದ್ದರು. ಗಾಂಧಿ ಹೇಳಿದರು: ‘ಹಿಂದೂಗಳಿಂದ ರಾಜಕೀಯವಾಗಿ ಅಸ್ಪೃಶ್ಯರನ್ನು ಬೇರ್ಪಡಿಸುವುದಕ್ಕೆ ನನ್ನ ಒಪ್ಪಿಗೆಯಿಲ್ಲ. ಅದು ಸಂಪೂರ್ಣ ಆತ್ಮಹತ್ಯಾತ್ಮಕ.’ ಈ ಮಾತನ್ನು ಕೇಳಿದಾಗ ಅಂಬೇಡ್ಕರ್‌ಗೆ ಗಾಂಧಿ ಕುರಿತ ತಮ್ಮ ದೂರದ ಭಯ ನಿಜವಾದಂತೆನಿಸಿತು.

ಅವರ ನಡುವಿನ ಭಿನ್ನಮತ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಮತ್ತಷ್ಟು ನಿಚ್ಚಳವಾಯಿತು. ಮೊದಲ ಪರಿಷತ್ತನ್ನು ಬಹಿಷ್ಕರಿಸಿದ್ದ ಗಾಂಧಿ ಎರಡನೆಯದರಲ್ಲಿ ಭಾಗವಹಿಸಿದ್ದೇ ಅಲ್ಲದೆ ತಾವು ಎಲ್ಲ ಹಿಂದೂಗಳ ಪ್ರತಿನಿಧಿಯಾಗಿರುವುದರಿಂದ ಅಸ್ಪೃಶ್ಯರ ಪ್ರತಿನಿಧಿಯೂ ಹೌದೆಂದು ಪ್ರತಿಪಾದಿಸಿದರು. ಹಿಂದೂ ಧರ್ಮದಲ್ಲಿ ಅಸ್ಪೃಶ್ಯರು ಸೇರಿರದ ಕಾರಣ ಮುಸ್ಲಿಮರಿಗೆ ನೀಡಿದಂತೆಯೇ ದಲಿತರಿಗೆ ಬೇರೆಯೇ ಆದ ಮತಕ್ಷೇತ್ರ ನೀಡಬೇಕೆಂಬ ಅಂಬೇಡ್ಕರರ ಬೇಡಿಕೆಯನ್ನು ಅವರು ವಿರೋಧಿಸಿದರು.

ಆದರೆ ತಮ್ಮ ವಾದದಲ್ಲಿ ಗೆದ್ದ ಅಂಬೇಡ್ಕರ್ ಅಸ್ಪೃಶ್ಯರಿಗೆ ಪ್ರತ್ಯೇಕ ಮತಕ್ಷೇತ್ರ ಪಡೆಯುವಲ್ಲಿ ಸಫಲರಾದರು. ಆ ಪ್ರಕಾರ ಪ್ರತ್ಯೇಕ ಮತದಿಂದ ತಮ್ಮದೇ ಪ್ರತಿನಿಧಿಯನ್ನು ಆರಿಸಿಕಳಿಸುವ ಅವಕಾಶ ಶೋಷಿತರಿಗೆ ದೊರೆಯಿತು. ಜೊತೆಗೆ ಸಾಮಾನ್ಯ ಅಭ್ಯರ್ಥಿಯನ್ನೂ ಆರಿಸಿ ಕಳಿಸುವ ಅವಕಾಶವಿತ್ತು. ಪರಿಷತ್ತಿನಲ್ಲಿ ಇದನ್ನು ವಿರೋಧಿಸಿದ್ದ ಗಾಂಧಿ ನಂತರ ಪೂನಾದಲ್ಲಿ ದ್ವಿಮತದಾನ ಪದ್ಧತಿ ವಿರೋಧಿಸಿ ಆಮರಣಾಂತ ಉಪವಾಸ ಶುರುಮಾಡಿದರು. ಅಂಬೇಡ್ಕರ್ ಪ್ರತ್ಯೇಕ ಮತಕ್ಷೇತ್ರ ಪ್ರತಿಪಾದಿಸುವುದನ್ನು ಕೈ ಬಿಡಲು ಒತ್ತಡ ತಂದರು.

ಇಷ್ಟವಿಲ್ಲದಿದ್ದರೂ ಅಂಬೇಡ್ಕರ್ ಪೂನಾ ಒಪ್ಪಂದಕ್ಕೆ ಸಹಿ ಮಾಡಿದರು. ಅದರಿಂದ ದಲಿತರ ಪ್ರತ್ಯೇಕ ಮತಕ್ಷೇತ್ರವನ್ನೂ, ಅಸ್ಪೃಶ್ಯರ ಸ್ವತಂತ್ರ ಪ್ರತಿನಿಧಿತ್ವವನ್ನೂ ಬಿಟ್ಟುಕೊಡಬೇಕಾಯಿತು. ಅದರ ಬದಲಾಗಿ ಶೋಷಿತರಿಗೆ ಹೆಚ್ಚು ಮೀಸಲು ಕ್ಷೇತ್ರಗಳನ್ನು ನೀಡಲಾಯಿತು. ಈಗಲೂ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿರುವ ಪೂನಾ ಒಪ್ಪಂದವು ದಲಿತರಿಗೆ ಅವಶ್ಯವಿರುವ ಸ್ವತಂತ್ರ ರಾಜಕೀಯ ಪ್ರಾತಿನಿಧ್ಯದ ಅವಶ್ಯಕತೆಯನ್ನು ಪ್ರತಿಪಾದಿಸುತ್ತದೆ. ಇದು ಆಳುವ ವರ್ಗದವರ ಜೊತೆ ಶೋಷಿತ ನಾಯಕರ ಹೊಂದಾಣಿಕೆ ರಾಜಕೀಯ ಎಂಬ ಅಣೆಕಟ್ಟಿನ ಬಾಗಿಲು ತೆರೆಯಿತು. ಅವರನ್ನು ದಲಿತ ಪ್ರತಿನಿಧಿಗಳೆಂಬ ಹೆಸರಿನ ವಿದೂಷಕರನ್ನಾಗಿಸಿತು.

ಪೂನಾ ಒಪ್ಪಂದದ ಪರಿಣಾಮವೆಂಬಂತೆ ಗಾಂಧಿ ಸೆ.೩೦, ೧೯೩೨ರಲ್ಲಿ ಹರಿಜನ ಸೇವಕ ಸಂಘ ಶುರುಮಾಡಿದರು. ಅದರ ಕೇಂದ್ರ ಸಮಿತಿಯಲ್ಲಿ ಅಂಬೇಡ್ಕರ್ ಸೇರಿದಂತೆ ಹಲವು ಅಸ್ಪೃಶ್ಯ ಸಮುದಾಯದವರಿದ್ದರು. ನ. ೧೯೩೩ ಹಾಗೂ ಜು. ೧೯೩೪ರ ಮಧ್ಯ ಗಾಂಧಿ ೧೨,೫೦೦ ಮೈಲಿ ಸಂಚರಿಸಿ ಅಸ್ಪೃಶ್ಯತೆ ಎಂಬ ದುಷ್ಟತನದ ಬಗ್ಗೆ ಮಾತನಾಡುತ್ತ ಆ ಸಂಸ್ಥೆಗೆ ಧನಸಂಗ್ರಹಣೆ ಮಾಡಿದರು.

ಸಾರ್ವಜನಿಕ ಬಾವಿ, ರಸ್ತೆ, ಶಾಲೆ, ದೇವಾಲಯ ಮತ್ತು ರುದ್ರಭೂಮಿಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶಾವಕಾಶ ನೀಡಬೇಕೆಂದು ಹರಿಜನ ಸೇವಕ ಸಂಘ ಪ್ರತಿಪಾದಿಸಿದರೂ ಅಂತರ್ಜಾತಿ ಆಚರಣೆಗಳನ್ನು ಪ್ರೋತ್ಸಾಹಿಸಲಿಲ್ಲ. ಆರ್ಥಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಅಸ್ಪೃಶ್ಯರಿಗೆ ಸಮಾನ ಅವಕಾಶ ನೀಡುವ ಕುರಿತು ಒತ್ತುಕೊಡಬೇಕೆಂದು ಅಂಬೇಡ್ಕರ್ ಬಯಸಿದ್ದರು. ಆದರೆ ಉಳಿದವರು ಇದನ್ನು ಒಪ್ಪಲಿಲ್ಲ. ಎಂದೇ ಕೆಲ ತಿಂಗಳುಗಳಲ್ಲೇ ಅಂಬೇಡ್ಕರ್ ಸಂಘದಿಂದ ಹೊರಬಂದರು, ಅವರ ಹಿಂದೇ ಉಳಿದವರೂ ಕೂಡಾ ಹೊರನಡೆದರು. ನಂತರ ಹರಿಜನ ಸೇವಕ ಸಂಘವು ನೈತಿಕ ಆಧಾರದ ಮೇಲೆ ಅಸ್ಪೃಶ್ಯರನ್ನು ಅದರಲ್ಲಿ ಸೇರಿಸಿಕೊಳ್ಳಲಿಲ್ಲ. ಸವರ್ಣೀಯರ ಆತ್ಮಶುದ್ಧಿ ಮತ್ತು ಪಶ್ಚಾತ್ತಾಪದ ರೂಪವಾಗಿ ಹರಿಜನ ಸೇವಕ ಸಂಘ ಇದ್ದು ಅಸ್ಪೃಶ್ಯರಿಗೆ ಅದರಲ್ಲಿ ಯಾವ ಪಾತ್ರವೂ ಇಲ್ಲವೆಂದು ಹೇಳಿತು.

ಅಸ್ಪೃಶ್ಯತೆ ಕುರಿತ ಗಾಂಧಿ ಕ್ರಮಗಳು ಕೃತ್ರಿಮ ಸುಧಾರಣೆಯ ನೆಲೆಯದು. ಗಾಂಧಿ ಅಸ್ಪೃಶ್ಯತೆಯನ್ನು ಹಿಂದೂ ಧರ್ಮದ ಒಂದು ಕಳಂಕವನ್ನಾಗಿ ನೋಡಿದರು, ಆದರೆ ಅದನ್ನು ಧರ್ಮದ ಮೂಲಾಧಾರವಾದ ವ್ಯವಸ್ಥೆಯ ಭಾಗವಾಗಿ ನೋಡಲಿಲ್ಲ. ಅವರು ಅದನ್ನು ಮೇಲ್ಜಾತಿ ಹಿಂದೂಗಳ ಶುದ್ಧೀಕರಣದಿಂದ ತೊಳೆಯಬಹುದಾದ ಕೊಳೆಯೆಂದು ಭಾವಿಸಿದರು. ಅವರು ವರ್ಣಾಶ್ರಮ ಧರ್ಮವನ್ನೂ, ಅದರ ಫಲವಾದ ಜಾತಿ ವ್ಯವಸ್ಥೆಯನ್ನೂ ನಂಬಿದ್ದರು. ವೈಕಂ ಸತ್ಯಾಗ್ರಹದ ವೇಳೆ ನಂಬೂದಿರಿ ಪುರೋಹಿತರೊಂದಿಗೆ ಮಾತುಕತೆ ಆಡುತ್ತಾ ಅಸ್ಪೃಶ್ಯನಾಗಿ ಹುಟ್ಟುವುದು ಒಬ್ಬನ ಕರ್ಮ ಫಲವೆಂದು ಒಪ್ಪಿಕೊಂಡರು.

೧೯೩೭ರಲ್ಲಿ ಅವರು ಹೇಳಿದರು: ‘ಕಸಗುಡಿಸುವವನಾಗಿ ಹುಟ್ಟಿದಾತ ತನ್ನ ಜೀವನದ ಸಲುವಾಗಿ ಕಸ ಹೊಡೆಯುವ ವೃತ್ತಿಯನ್ನೇ ಅನುಸರಿಸಬೇಕು, ನಂತರ ಅವನಿಗಿಷ್ಟ ಬಂದಿದ್ದನ್ನು ಮಾಡಬಹುದು. ಒಬ್ಬ ಕಸಗುಡಿಸುವವನೂ ಕೂಡಾ ಒಬ್ಬ ಲಾಯರಿನಂತೆ ಅಥವಾ ನಿಮ್ಮ ಅಧ್ಯಕ್ಷರಷ್ಟೇ ಯೋಗ್ಯವಾದವನು. ನನ್ನ ಪ್ರಕಾರ ಅದೇ ಹಿಂದೂ ಧರ್ಮ.’ ಇದು ಜಾತಿಪದ್ಧತಿಯನ್ನು ಒಪ್ಪಿತ ಆಂತರಿಕ ವ್ಯವಸ್ಥೆಯನ್ನಾಗಿಸುವ ಪ್ರಯತ್ನವಾಗಿ, ಸಮಾನ ಅವಕಾಶ ನಿರಾಕರಿಸುವ ವ್ಯವಸ್ಥೆಯಾಗಿ ಮುಂದುವರೆಯುವಂತೆ ಮಾಡಿತು. ಎಲ್ಲೋ ಕೆಲವರು ಒಬ್ಬ ಲಾಯರ್ ಅಥವಾ ಅಧ್ಯಕ್ಷ ಲೌಕಿಕ ಸ್ಥಾನಮಾನಗಳಲ್ಲಿ ಕಸಗುಡಿಸುವವನಿಗೆ ಸಮ ಎಂದು ಒಪ್ಪುವಷ್ಟು ಸಫಲವಾಯಿತು.

‘ವರ್ಣನಿಯಮವು ತನ್ನ ಪೂರ್ವಪಿತೃಗಳ ಕಸುಬನ್ನೇ ಜೀವನಾಧಾರವಾಗಿ ಮುಂದುವರೆಸಬೇಕೆಂದು ಹೇಳುತ್ತದೆ’ ಎಂದರು ಗಾಂಧಿ. ಇವು ದಲಿತರ ಸಬಲೀಕರಣದ ಪ್ರಯತ್ನಗಳನ್ನು ನೇರವಾಗಿ ನಿರಾಕರಿಸುವ ಮಾತುಗಳು. ಎಂದೇ ಅಂಬೇಡ್ಕರ್ ಪ್ರಣೀತ ಜಾತಿವಿನಾಶವನ್ನು ಪ್ರತಿಪಾದಿಸುವ ದಲಿತರಿಗೆ ಇದನ್ನು ಸಹಿಸುವುದು ಕಷ್ಟ.

ಗಾಂಧಿಯನ್ನು ಅರ್ಥಮಾಡಿಕೊಳ್ಳಲು ಗ್ರಹಿಸಬೇಕಾದ ಮೂಲ ಅಂಶಗಳೆಂದರೆ ಹಳ್ಳಿ ವಾತಾವರಣವನ್ನು ಆದರ್ಶವಾಗಿಸುವ ಪ್ರಯತ್ನದಲ್ಲಿ ಸರ್ವಸಮ್ಮತಿಗೆ ಅವರಿತ್ತ ಆದ್ಯತೆ ಹಾಗೂ ಸಂಘರ್ಷದ ವಿರೋಧ. ಅತಿಚತುರ ತಂತ್ರಗಾರ ಗಾಂಧಿ ಪ್ರಸ್ತುತ ವ್ಯವಸ್ಥೆಯ ವೈರುಧ್ಯಗಳನ್ನು ಎತ್ತಿತೋರಿಸಿ ಅದನ್ನು ಸರಿಪಡಿಸುವ ಮಾತನಾಡುವ ಬದಲು ಧಾರ್ಮಿಕ-ನೈತಿಕ ಹೊದಿಕೆಗಳಡಿ ಹುಳುಕು ಮುಚ್ಚಿಬಿಡಲು ಪ್ರಯತ್ನಿಸಿದರು. ಗಾಂಧಿಯ ಬಳುವಳಿ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಈಗಲೂ ಜೀವಂತವಿದೆ. ಅದು ಅಸ್ಪೃಶ್ಯತೆ ಆಚರಣೆಯನ್ನು ಕಾನೂನುವಿರೋಧಿ ಎನ್ನುತ್ತಲೇ ಜಾತಿವ್ಯವಸ್ಥೆಯನ್ನು ದಲಿತ ಹಿತಾಸಕ್ತಿ ರಕ್ಷಕನ ನೆಪದಲ್ಲಿ ಕಾಪಾಡುತ್ತಿದೆ.


ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...