Friday, May 31, 2013

ದಿನದ ಸಾಲು-3

ಗೋಡೆಗಂಟಿದ ಚಿತ್ರಪಟ ಮಾಸುವಾಗ ಹುಟ್ಟಿದವು ಈ ಕ್ಷಮಿಸುವ ಪದಗಳು
ವಿಳಾಸ ಹುಡುಕುವ ಜರೂರತ್ತಿಲ್ಲದ ಮಾತಷ್ಟೇ ಎದೆಯಿಂದ ಸರಾಗ ದಾಟಬಲ್ಲವು

‘ತಣ್ಣನೆ ಸಾಮೂಹಿಕ ಬೇಟೆ’ ಹಿಂದಿನ ಕೆಲವು ಕರಾಳ ಸತ್ಯಗಳು
ಜಿ.ಮಹಂತೇಶ್


ಛತ್ತೀಸ್‌ಗಡವಷ್ಟೇ ಅಲ್ಲ, ಭಾರತ ದೇಶವೂ ಅಕ್ಷರಶಃ ಬೆಚ್ಚಿ ಬಿದ್ದಿದೆ. ಮಾವೊವಾದಿಗಳನ್ನು ಹತ್ತಿಕ್ಕಲು ಸೆಲ್ವಾಜುಡುಂ ಅನ್ನು ಬಳಸಿಕೊಂಡಿದ್ದ ಛತ್ತೀಸ್‌ಗಡ ಪ್ರಭುತ್ವಕ್ಕೆ ಮಾವೊವಾದಿಗಳು ಮರ್ಮಾಘಾತದ ಹೊಡೆತ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತ್ತು ಅಹಿಂಸೆಯಲ್ಲಿ ನಂಬಿಕೆ ಇರುವವರ್ಯಾರು ಮಾವೊವಾದಿಗಳ ಈ ಕೃತ್ಯವನ್ನು ಬೆಂಬಲಿಸಲಾರರು. ಆದರೆ ಅದೇ ಪ್ರಭುತ್ವ, ಸೆಲ್ವಾ ಜುಡುಂ ಹೆಸರಿನಲ್ಲಿ ಅದೆಷ್ಟೋ ಮಂದಿ ಆದಿವಾಸಿಗಳನ್ನು ಸಾವಿನ ಮನೆಗೆ ಅಟ್ಟಿತ್ತು. ಆದಿವಾಸಿಗಳ ವಿರುದ್ಧ ಆದಿವಾಸಿಗಳನ್ನೇ ಎತ್ತಿಕಟ್ಟಿ ಅವರೊಳಗೇ ಒಬ್ಬ ಗೂಢಚಾರನನ್ನ್ನು ನೇಮಿಸಿತ್ತು. ಅದೇ ಗೂಢಚಾರರ ನೆರವಿನಿಂದ ಸದ್ದಿಲ್ಲದೇ ಮಾರಣ ಹೋಮ ನಡೆಸಿತ್ತು.ಛತ್ತೀಸ್‌ಗಡದಲ್ಲಿ ಮೊನ್ನೆ ನಡೆದ ಮಹೇಂದ್ರ ಕರ್ಮ ಮತ್ತು ಪಿಸಿಸಿ ಅಧ್ಯಕ್ಷ ನಂದಕುಮಾರ್ ಹಾಗೂ ಅವರ ಪುತ್ರನ ಹತ್ಯೆ ಆದಾಗ ಎಲ್ಲರೂ ಮರುಗಿದರು. 

ಖುದ್ದು ಸೋನಿಯಾ, ರಾಹುಲ್, ಮನಮೋಹನ್‌ಸಿಂಗ್ ಭೇಟಿ ಕೊಟ್ಟು ಕಂಬನಿಗರೆದರು. ನಿಷ್ಪಾಪಿ ಆದಿವಾಸಿಗಳ ಮಾರಣ ಹೋಮ ನಡೆದಾಗ ಬಹುತೇಕ ಹೃದಯಗಳು ಅದ್ಯಾಕೋ ಏನೋ ಮರುಗಲಿಲ್ಲ;ಗಲ್ಲದ ಮೇಲೆ ಕಣ್ಣೀರು ಹರಿಯಲಿಲ್ಲ.ಅರಣ್ಯ ಸಂಪತ್ತಿನ ಲೂಟಿಗೆ ತೊಡಕಾಗಿದ್ದ ಆದಿವಾಸಿಗಳು ಅಲ್ಲಿರುವುದು ಯಾರಿಗೂ ಬೇಡವಾಗಿತ್ತು. ವಿಶೇಷವಾಗಿ ಗಣಿ ದೊರೆಗಳು ಮತ್ತು ಅವರ ಬೆನ್ನಿಗೆ ನಿಂತ ಪ್ರಭುತ್ವಕ್ಕೆ ಸುತಾರಾಂ ಬೇಡವಾಗಿತ್ತು.

ಆಗಷ್ಟೇ ರಚನೆಯಾಗಿದ್ದ ಛತ್ತೀಸ್‌ಗಡ ರಾಜ್ಯದಲ್ಲಿ ಮಾವೊವಾದ ಚಳವಳಿಯೂ ಹೆಡೆ ಎತ್ತತೊಡಗಿತ್ತು. ಇದರ ಹೆಡೆಯನ್ನು ಬಡಿದು ಬಾಯಿಗೆ ಹಾಕಿಕೊಳ್ಳಲು ಅಲ್ಲಿನ ಪ್ರಭುತ್ವವೇ ಭಯೋತ್ಪಾದಕ ಅಭಿಯಾನ ಆರಂಭಿಸಿತ್ತು. ಈ ಅಭಿಯಾನಕ್ಕಿದ್ದ ಹೆಸರು ಸೆಲ್ವಾಜುಡುಂ ಎಂದು.ಅದಿವಾಸಿ ಗೊಂಡಿ ಭಾಷೆಯಲ್ಲಿ ಸೆಲ್ವಾ ಜುಡುಂ ಎಂದರೇ, ತಣ್ಣನೆ ಸಾಮೂಹಿಕ ಬೇಟೆ ಎಂದು.
ಛತ್ತೀಸಗಡ ರಾಜ್ಯದಲ್ಲಿ ಬಸ್ತಾರ್ ಎಂಬುದೊಂದು ಸಣ್ಣ ಜಿಲ್ಲೆ ಇದೆ. ಈ ಜಿಲ್ಲೆಯಲ್ಲಿ ಹೇರಳವಾದ ಖನಿಜ ಮತ್ತು ಅರಣ್ಯ ಸಂಪತ್ತನ್ನು ಗರ್ಭೀಕರಿಸಿಕೊಂಡಿದೆ. ಇಲ್ಲಿ ಉತ್ಕ್ರಷ್ಟ ದರ್ಜೆಯ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಡೋಲೋಮೈಟ್, ಬಾಕ್ಸೈಟ್, ವಜ್ರ ಸೇರಿದಂತೆ ಮತ್ತಿತರೆ ಖನಿಜ ಸಂಪತ್ತಿದೆ. ಹೀಗಾಗಿಯೇ ಅಲ್ಲಿನ ಸರಕಾರ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ.
ಛತ್ತೀಸಗಡ ಸರಕಾರ ಇಲ್ಲಿನ ಖನಿಜ ಸಂಪತ್ತನ್ನು ಬಗೆಯಲು ಹತ್ತಾರು ಖಾಸಗಿ ಗಣಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆ ಒಪ್ಪಂದ ಮೊತ್ತವೇ 60 ಸಾವಿರ ಕೋಟಿಗಿಂತಲೂ ಅಧಿಕ. ಬಸ್ತಾರ್ ನೆಲದಲ್ಲಿ ಹುದುಗಿರುವ ಖನಿಜ ಸಂಪತ್ತನ್ನು ಬಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ಆಗಷ್ಟೇ ಹೆಡೆ ಎತ್ತಿದ್ದ ಮಾವೊವಾದಿಗಳು ಖನಿಜ ಸಂಪತ್ತನ್ನು ಬಗೆಯುವುದಕ್ಕೆ ವಿರೋಧಿಸಿ, ಆದಿವಾಸಿಗಳ ಬೆನ್ನಿಗೆ ನಿಂತಿದ್ದರು.

ಹೀಗಾಗಿಯೇ, ಅಲ್ಲಿನ ಸರಕಾರ ಆದಿವಾಸಿ ಸಂಸ್ಕೃತಿಯನ್ನು ಬುಡ ಸಮೇತ ಕೀಳ ಲಾರಂಭಿಸಿದೆ. ಇದರ ಒಂದು ಭಾಗವಾಗಿಯೇ ಸೆಲ್ವಾಜುಡುಂ ರೂಪುಗೊಂಡಿರುವುದು. ಆದಿವಾಸಿಗಳ ವಿರೋಧಿಗಳನ್ನು ಕಲೆ ಹಾಕಿ, ತಿಂಗಳಿಗೆ 1,500 ರೂಪಾಯಿಗಳನ್ನು ನೀಡಿದ್ದ ಸರಕಾರ ಅವರನ್ನೇ ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿ ನೇಮಕ ಮಾಡಿತ್ತು. ತರಬೇತಿ ಪಡೆದುಕೊಂಡ ವಿಶೇಷ ಪೊಲೀಸ್ ಅಧಿಕಾರಿಗಳು ಆದಿವಾಸಿಗಳ ನರಮೇಧ ನಡೆಸಿದ್ದರು. 

ಆದಿವಾಸಿಗಳ ತಲೆ ಕತ್ತರಿಸಿ ಹಳ್ಳಿಗಳ ಪ್ರಮುಖ ಸ್ಥಳಗಳಲ್ಲಿ ನೇತು ಹಾಕಲಾಗಿತ್ತು. ಗರ್ಭಿಣಿಯರ ಹೊಟ್ಟೆ ಸೀಳಿ ಭ್ರೂಣವನ್ನು ಕಿತ್ತೆಸೆಯುತ್ತಿದ್ದರು. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹಳ್ಳಿ ಹಳ್ಳಿಗಳನ್ನೇ ಸುಟ್ಟು ಬೂದಿ ಮಾಡಲಾಗುತ್ತಿತ್ತು. ಆದರೆ, ಹೊರ ಜಗತ್ತಿಗೆ ಇದ್ಯಾವುದು ಬೆಳಕಿಗೆ ಬರಲೇ ಇಲ್ಲ.ಸಲ್ವಾಜುಡುಂ ವಿರುದ್ಧ ಕಳೆದ 5 ವರ್ಷಗಳ ಕೆಳಗೆ ‘ಆದಿವಾಸಿ ಕಲಾ ಮಂಚ್’ ತಂಡ, ದೇಶಾದ್ಯಂತ ಸೆಲ್ವಾ ಜುಡಂನ ಭೀಕರತೆಯನ್ನು ಹೇಳಿತ್ತು. 

ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲೂ ಇದೇ ತಂಡ ಸತ್ಯಾಂಶಗಳನ್ನು ಹೊರಗೆಡವಿತ್ತು. ಅದೇ ತಂಡ ಕರ್ನಾಟಕಕ್ಕೂ ಭೇಟಿ ನೀಡಿ ಶಿವಮೊಗ್ಗದಲ್ಲೂ ಸೆಲ್ವಾಜುಡುಂನ ಹಿಂದಿರುವ ಅದೆಷ್ಟೋ ಕರಾಳ ಕೃತ್ಯಗಳ ಕಠೋರ ಸತ್ಯಗಳನ್ನು ಬಿಚ್ಚಿಟ್ಟಿತ್ತು. ಆಗ ಆ ತಂಡದ ನೇತೃತ್ವ ವಹಿಸಿದ್ದು ರಾಜ್‌ಕುಮಾರ್ ಎನ್ನುವ ಪುಟ್ಟ ಪೋರ. ಶಿವಮೊಗ್ಗಕ್ಕೆ ಆತ ಬಂದಾಗ ಆತನಿಗಿನ್ನೂ 14 ವರ್ಷ. 5ನೆ ತರಗತಿಗೆ ಶರಣು ಹೊಡೆದು, ತನ್ನ ತಾಯ್ನೆಲದ ಮೇಲಿನ ದೌರ್ಜನ್ಯವನ್ನು ಕಂಡಿದ್ದ ಆತನ ಕಣ್ಣುಗಳು ಆಕ್ರೋಶಗೊಂಡಿದ್ದವು.

ಈತ ಹೋದಲೆಲ್ಲಾ ಹೇಳುತ್ತಿದ್ದುದು ‘ಹಮ್ ಆದಿವಾಸಿ ಹೈಜಂಗಲ್ ಬಿ ಹಮಾರಾ ಹೈ..ಜಂಗಲ್ ಮೆ ಮಿಲ್ನಾಕಾ ಸಂಪತ್ತಿ ಬಿ ಹಮಾರಾ ಹೈ(ನಾವು ಆದಿವಾಸಿಗಳು. ಇಲ್ಲಿನ ಅರಣ್ಯವೂ ನಮ್ಮದೇ ಅರಣ್ಯದಲ್ಲಿ ದೊರಕುವ ಸಂಪತ್ತೂ ಕೂಡ ನಮ್ಮದೇ). ಈತನ ಹಾವ ಭಾವಗಳನ್ನು ನೋಡಿದವರಿಗೆ ಈತನನ್ನು ಎಲ್ಲರೂ ಗದ್ದರ್‌ಗೆ ಹೋಲಿಸುತ್ತಿದ್ದರು. ಈತನ ರಟ್ಟೆಯಲ್ಲಿ ಅಂಥಾ ಕಸುವು ಇರಲಿಲ್ಲ. ಮೀಸೆಯೂ ಮೂಡಿರಲಿಲ್ಲ. ಆದರೂ ರಾಜ್ಯ ಪ್ರಭುತ್ವದ ವಿರುದ್ಧ ಸೆಟೆದು ನಿಂತಿದ್ದ. ಸೆಟೆದು ನಿಂತುಕೊಂಡೇ ಹೇಳಿದ್ದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ.

‘ಮೈ ಇದರ್ ದಮನ್ ಕಿ ಸಚ್ಚಾಯೇ ಬತಾನೆ ಆಯಾ ಹೂಂ. ಆಜ್ ಬಸ್ತಾರ್ ಮೇ ಜನತಾ ಕೆ ಊಪರ್ ಥಂಡಾಕೆ ನಾಮ್ ಸೆ ಹತ್ಯಾರ್ ಚಲಾ ರಹೇ ಹೈ. ಔರ್ ಯೇ ಕಾರ್ವಾಯೇ ಶಾಂತಿ ಕೆ ಅಭಿಯಾನ್ ಕರ್ಕೆ ಸರ್ಕಾರ್ ಚಿಲ್ಲಾ ರಹೇ ಹೈ. ವೇಷ್ ಬದಲ್ಕರ್ ಶೈತಾನ್ ಆತೇ ಹೈ ಸಾಥ್ ಮೇ ಮಾಯಾ ಕಾ ಜಾಲ್ ಲಾತೇ ಹೈ’(ನಾನಿಲ್ಲಿ ನಮ್ಮನ್ನು ಹತ್ತಿಕ್ಕುತ್ತಿರುವ ಸತ್ಯಾಂಶಗಳನ್ನು ಹೇಳಲು ಬಂದಿರುವೆ.ಇವತ್ತು ಬಸ್ತಾರ್ ಜನರ ಮೇಲೆ ತಣ್ಣಗೆ ಆಯುಧಗಳನ್ನಿಡಿದು ನಮ್ಮನ್ನು ಹೊಡೆದುರುಳಿಸುತ್ತಿವೆ. ಇದನ್ನು ಶಾಂತಿ ಅಭಿಯಾನ ಎಂದು ಸರಕಾರ ಕೂಗುತ್ತಿದೆ. ವೇಷ ಬದಲಿಸಿಕೊಂಡು ಸೈತಾನ ಬರುತ್ತಾನೆ ಮತ್ತು ಮಾಯೆಯ ಜಾಲ ಬೀಸುತ್ತಾನೆ.)

ಹಣೆಗೆ ಕೆಂಪು ಪಟ್ಟಿ, ಸೊಂಟಕ್ಕೆ ಹಸಿರು ಹೊದಿಕೆ ಸುತ್ತಿಕೊಂಡು ಹಾಡುತ್ತ ಹಾಡುತ್ತ ‘ಸಾಥಿಯೋ ಚಲೇ ಚಲೋದೂರ್ ನಹೀಮುಕ್ತಾ ಕಾ ಮಕಾನ್‌ಮುಕ್ತಿ ಗೀತ್ ಗಾತೆ ಕಹೋ.ಶಹೀದ್ ಹೋಂಸಬ್ ಕೋ ಲಾಲ್ ಸಲಾಂ’ ಎಂದು ಹೇಳುವಾಗಲಂತೂ ಇಡೀ ಸಭಾಂಗಣ ಕೆಂಪಾಗಿತ್ತು.ಮೊನ್ನೆ ಮೊನ್ನೆ ಮಾವೊವಾದಿಗಳು ಛತ್ತೀಸ್‌ಗಡದಲ್ಲಿ ನಡೆಸಿದ ಹತ್ಯೆಗಳೂ, ತಣ್ಣನೆಯ ಸಾಮೂಹಿಕ ಬೇಟೆಗೆ ಸಹಜವಾಗಿಯೇ ಪ್ರತಿಕಾರವಾಗಿತ್ತು. 

ಮಾವೊವಾದಿಗಳ ಪ್ರತಿಕಾರದ ಬಗೆ ಮತ್ತು ಪ್ರಭುತ್ವದ ಕಾರ್ಯಾಚರಣೆ ಎರಡೂ ಮನುಷ್ಯ ವಿರೋಧಿ. ಅಲ್ಲಿನ ಸರಕಾರ ಆದಿವಾಸಿಗಳ ಏಳ್ಗೆಗೆ ಶಾಶ್ವತ ಯೋಜನೆಗಳನ್ನು ರೂಪಿಸಿ, ಅವರೂ ನಮ್ಮವರೇ ಎಂದು ಒಳಗೆ ಬಿಟ್ಟುಕೊಳ್ಳುವ ವಾತಾವರಣ ನಿರ್ಮಾಣ ಆಗಬೇಕು.ನಿಜಕ್ಕೂ ಇಂಥ ಆಶಯ ಇನ್ನಾದರೂ ಈಡೇರಲಿ.

‘ಅಭಿವದ್ಧಿ ಭಯೋತ್ಪಾದನೆ’ ಮತ್ತು ತೀವ್ರಗಾಮಿ ನಕ್ಸಲ್ ಚಳವಳಿಶಿವಸುಂದರ್

ಸೌಜನ್ಯ : ವಿಜಯ ಕರ್ನಾಟಕ''ಜನ ಬಲವಾದ ಕಾರಣವಿಲ್ಲದೆ ಬಂದೂಕಿನ ಮೊರೆ ಹೋಗುವುದಿಲ್ಲ. ಅಸ್ತಿತ್ವದಲ್ಲಿರುವ ವ್ಯವಸ್ಥೆ ಬಡವರ ಮೇಲೆ, ದುರ್ಬಲರ ಮೇಲೆ ದಬ್ಬಾಳಿಕೆ ನಡೆಸುತ್ತಾ ಬದುಕನ್ನು ದುರ್ಬರಗೊಳಿಸುವಾಗ ಬಡಜನರು ಮತ್ತು ವಂಚಿತರು ದಂಗೆ ಏಳುತ್ತಾರೆ. ಇಂದು ಛತ್ತೀಸ್‌ಗಢದಲ್ಲಿ ಆಗುತ್ತಿರುವುದು ಇದೇ ಎಂಬುದರ ಬಗ್ಗೆ ನಮಗೆ ಅನುಮಾನವೇ ಇಲ್ಲ.'' ಈ ಮಾತನ್ನು ಹೇಳಿದವರು ಮಾವೋವಾದಿಗಳು ಅಲ್ಲ. ಅವರನ್ನು ಬೆಂಬಲಿಸುತ್ತಾರೆ ಎಂದು ದೂಷಿಸಲ್ಪಡುವ ಮಾನವ ಹಕ್ಕುಗಳ ಕಾರ್ಯಕರ್ತರೂ ಅಲ್ಲ. ಬದಲಿಗೆ ಈ ದೇಶದ ಸರ್ವೋಚ್ಚ ನ್ಯಾಯಾಲಯ!

ಸಂದರ್ಭ: ನಕ್ಸಲರ ಬೆಂಬಲದೊಂದಿಗೆ ಸರಕಾರದ ವಿರುದ್ಧ ಬಂಡೆದ್ದಿದ್ದ ಬಡ, ವಂಚಿತ, ಅಸಹಾಯಕ ಆದಿವಾಸಿಗಳ ಕಗ್ಗೊಲೆ- ಅತ್ಯಾಚಾರ ಮಾಡುತ್ತಿದ್ದ 'ಸಾಲ್ವಾ ಜುಡುಂ' ಎಂಬ ಹಂತಕ ಪಡೆಯನ್ನು ಬರ್ಖಾಸ್ತುಗೊಳಿಸಬೇಕೆಂದ ಸುಪ್ರೀಂ ಕೋರ್ಟಿನ ಜಸ್ಟೀಸ್ ಬಿ. ಸುದರ್ಶನರೆಡ್ಡಿ ಮತ್ತು ಜಸ್ಟೀಸ್ ಸುರಿಂದರ್ ಸಿಂಗ್ ನಿಜ್ಜಾರ್‌ರವರ ದ್ವಿಸದಸ್ಯ ಪೀಠ, 2011ರ ಜುಲೈ 7ರಂದು ನೀಡಿದ ಆದೇಶ.

ಕಳೆದ ಮೇ 25ರಂದು ಮಾವೋವಾದಿಗಳ ಹಿಂಸಾತ್ಮಕ ದಾಳಿಗೆ ಪ್ರಧಾನ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ಮಹೇಂದ್ರ ಕರ್ಮ ಈ 'ಸಾಲ್ವಾಜುಡುಂ'ನ ಸ್ಥಾಪಕ. ಛತ್ತೀಸ್‌ಗಢದ ಬಿಜೆಪಿ ಸರಕಾರ ಮತ್ತು ಕೇಂದ್ರ ಸರಕಾರಗಳೆರಡೂ ಅದರ ಬೆಂಬಲಿಗರು!

ಅಸಲು ಈ ಮಾವೋವಾದಿಗಳೆಂದರೆ ಯಾರು? ಈ ದೇಶದವರೋ? ಬೇರೆ ಗ್ರಹದವರೋ? ಅವರನ್ನು ಆದಿವಾಸಿಗಳು ಯಾಕೆ ಬೆಂಬಲಿಸುತ್ತಾರೆ? 'ಈ ಸಾಲ್ವಾ ಜುಡುಂ' ಎಂದರೇನು? ಅದರ ನಾಯಕ ಮಹೇಂದ್ರ ಕರ್ಮ ಆದಿವಾಸಿಯೇ ಆಗಿದ್ದರೂ, ಆದಿವಾಸಿಗಳ ಮೇಲೆ ಹಿಂಸಾಚಾರ ನಡೆಸಿ ಅವರನ್ನು ಅರಣ್ಯದಿಂದ ಹೊರದಬ್ಬುತ್ತಿದ್ದದ್ದು ಏಕೆ? ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆ ರಡೂ ಸಂವಿಧಾನಾತ್ಮಕ ಚೌಕಟ್ಟನ್ನು ಮೀರಿ ಬೆಂಬಲಿಸುತ್ತಿದ್ದದ್ದೇಕೆ? ಈ ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಈ ವಿದ್ಯಮಾನ ಅರ್ಥವಾಗುವುದು ಬಹಳ ಕಷ್ಟ. ಏಕೆಂದರೆ ಹಿಂಸೆ ಮತ್ತು ಪ್ರತಿಹಿಂಸೆಗಳು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತವೆ. ಆ ಸಂದರ್ಭಗಳನ್ನು ಅರ್ಥಮಾಡಿಕೊಂಡು ಅದನ್ನು ಬದಲಿಸದೆ, ಅದರ ಅಭಿವ್ಯಕ್ತಿಯಾಗಿರುವ ಹಿಂಸೆಯನ್ನು ಮಾತ್ರ ಹತ್ತಿಕ್ಕಲು ಯತ್ನಿಸುವುದು ಸಂದರ್ಭದ ಕ್ರೌರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಅದೇ ಆದೇಶದಲ್ಲಿ ಸುಪ್ರೀಂ ಕೋರ್ಟೇ ಮತ್ತೊಂದು ಕಡೆ ಹೇಳುವಂತೆ, 'ಸಮಸ್ಯೆ ಪ್ರಭುತ್ವ ಮತ್ತು ಮಾವೋವಾದಿಗಳಿಬ್ಬರ ನಡುವೆ ನಜ್ಜುಗುಜ್ಜಾಗಿರುವ ಆದಿವಾಸಿಗಳು ಅಲ್ಲ, ಅವರ ನೋವನ್ನು ಕಂಡು ದ್ವನಿ ಎತ್ತುತ್ತಿರುವ ಸಮಾಜದ ಪ್ರಜ್ಞಾವಂತ ಮಾನವ ಹಕ್ಕುಗಳ ಕಾರ್ಯಕರ್ತರೂ ಅಲ್ಲ. ಸಮಸ್ಯೆಯ ಮೂಲ ಇರುವುದು, ಕಳೆದ ಕೆಲವು ವರ್ಷಗಳಲ್ಲಿ ಸರಕಾರಗಳು ಬೆಂಬಲಿಸುತ್ತಾ ಬಂದಿರುವ ರಾಜಕೀಯ ಆರ್ಥಿಕತೆಯಲ್ಲಿ ಮತ್ತು ಅದು ಅನಿವಾರ್ಯವಾಗಿ ಹುಟ್ಟುಹಾಕುತ್ತಿರುವ ಕ್ರಾಂತಿಕಾರಿ ರಾಜಕಾರಣದಲ್ಲಿ'.

ಇದನ್ನು ಅರ್ಥಮಾಡಿಕೊಳ್ಳಲೆಂದೇ ಕೇಂದ್ರ ಸರಕಾರದ ಯೋಜನಾ ಅಯೋಗವು 2008ರಲ್ಲಿ ನೇಮಕ ಮಾಡಿದ್ದ ಪರಿಣತರ ಸಮಿತಿಯು "Development Challenges in Extremist Affected Areas" (ತೀವ್ರಗಾಮಿ ಸಂತ್ರಸ್ತ ಪ್ರದೇಶಗಳಲ್ಲಿನ ಅಭಿವದ್ಧಿ ಸವಾಲುಗಳು) ಎಂಬ ವರದಿಯನ್ನು ನೀಡಿತು. ಆ ವರದಿಯು ಸ್ಪಷ್ಟಪಡಿಸುವಂತೆ ಈ ದೇಶದ ಸರಕಾರಗಳು ತರುತ್ತಿರುವ ಆರ್ಥಿಕ ನೀತಿಗಳು, ಅಭಿವದ್ಧಿ ಯೋಜನೆಗಳು ಈ ದೇಶದ ಬಹುಪಾಲು ದಲಿತ, ಆದಿವಾಸಿಗಳನ್ನು ಮಹಿಳೆಯರ ಬದುಕನ್ನು ಕಸಿದು, ಕೆಲವೇ ಶ್ರೀಮಂತ ವರ್ಗದ ಐಷಾರಾಮಿತನವನ್ನು ಹೆಚ್ಚಿಸುತ್ತಿದೆ. ಈ ದೇಶದ ಶಾಸನಾತ್ಮಕ ಮತ್ತು ಆಡಳಿತ ವ್ಯವಸ್ಥೆ ಈ ಅಭಿವದ್ಧಿ ಪಥಕ್ಕೆ ಅಡ್ಡ ಬರುವವರನ್ನೆಲ್ಲಾ ತೀವ್ರಗಾಮಿಗಳ ಪಟ್ಟ ಕಟ್ಟಿ ಅಮಾನವೀಯವಾಗಿ ಬಗ್ಗು ಬಡಿಯುತ್ತಿದೆ. ಕಳೆದ ಆರು ದಶಕಗಳಲ್ಲಿ ಹೈವೇ, ಗಣಿಗಾರಿಕೆ, ದೊಡ್ಡ ಡ್ಯಾಂ ಇನ್ನಿತರ ತಥಾಕಥಿತ ಅಭಿವದ್ಧಿ ಯೋಜನೆಗಳ ಲಾಭ ಪಡೆದದ್ದು ಈ ದೇಶದ ಮತ್ತು ವಿದೇಶದ ಕಾರ್ಪೊರೇಟ್ ಕಂಪನಿಗಳು. ಆದರೆ ಅದಕ್ಕೆ ತಮ್ಮ ಬದುಕು ಮತ್ತು ಜೀವನೋಪಾಯಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದು ಈ ದೇಶದ ಆದಿವಾಸಿಗಳು ಮತು ದಲಿತರು. ಹೀಗಾಗಿ ಈ ವ್ಯವಸ್ಥೆಯೇ ಮೂಲಭೂತವಾಗಿ ಶ್ರೀಮಂತರದಾದ್ದರಿಂದ ಅದಕ್ಕೆ ವಿರುದ್ಧವಾಗಿ ಬಡವರು ದಂಗೆ ಎದ್ದು 'ಕ್ರಾಂತಿ'ಯ ಮೂಲಕ ಪರ್ಯಾಯ ಸರಕಾರ ರಚಿಸಬೇಕು ಎಂಬ ಮಾವೋವಾದಿಗಳ ರಾಜಕೀಯ ಆದಿವಾಸಿಗಳಿಗೆ ಅತ್ಯಂತ ಆಪ್ತವಾಗಿ ಕಂಡಿದೆ. ಆ ವರದಿಯು ಹೇಳುವಂತೆ ಮಾವೋವಾದಿಗಳಿಗೆ ಛತ್ತೀಸ್‌ಗಢದಲ್ಲಿ ಆದಿವಾಸಿಗಳ ನಡುವೆ ಬಲವಾದ ನೆಲೆಯಿದೆ.

2011ರ ಸುಪ್ರೀಂ ಕೋರ್ಟಿನ ಆದೇಶವೂ ಹೇಳುವಂತೆ, 1991ರಿಂದ ಈ ದೇಶ ಅನುಸರಿಸುತ್ತಿರುವ ಸಂವಿಧಾನ ವಿರೋಧಿ ಜಾಗತೀಕರಣ ನೀತಿಗಳು ಈ ದೇಶದ ಸಂಪತ್ತನ್ನು ವಿದೇಶಿ ಕಂಪನಿಗಳ ಲೂಟಿಗೆ ಬಿಟ್ಟುಕೊಟ್ಟು ಈ ದೇಶದ ಆದಿವಾಸಿಗಳನ್ನು ಬಲಿಗೊಟ್ಟಿವೆ. ಇದೇ ಆದೇಶ ಮತ್ತು ಪರಿಣಿತರ ವರದಿ ಹಾಗೂ ಕೇಂದ್ರ ಸರಕಾರ ಮತ್ತೊಂದು ಕಡೆ ಬೊಟ್ಟು ಮಾಡಿ ತೋರಿಸುವಂತೆ; ಛತ್ತೀಸ್‌ಗಢ ಮತ್ತು ಪಕ್ಕದ ಒರಿಸ್ಸಾದಲ್ಲಿ ಬಾಕ್ಸೈಟ್, ಅತ್ಯುತ್ತಮ ಗುಣಮಟ್ಟದ ಕಬ್ಬಿಣದ ಅದಿರು, ಇನ್ನಿತರ 10 ಟ್ರಿಲಿಯನ್ (10 ಲಕ್ಷ ಕೋಟಿ) ಮೌಲ್ಯದ ಖನಿಜ ಸಂಪತ್ತಿದೆ. 2000ದ ನಂತರದಲ್ಲಿ ಇದರ ಗಣಿಗಾರಿಕೆಯನ್ನು ಅತ್ಯಂತ ಅಗ್ಗದ ದರದಲ್ಲಿ ವೇದಾಂತ, ಮಿಟ್ಟೆಲ್, ರಿಯೋ ತಿಂಟೋ ಇನ್ನಿತರ ಕಂಪನಿಗಳಿಗೆ ಮಾರಿಕೊಳ್ಳಲಾಗಿದೆ. ಆ ಮಾರಾಟಕ್ಕೆ ಅಸ್ತಿತ್ವದಲ್ಲಿರುವ ಕಾನೂನು ಅಡ್ಡ ಬರಬಹುದೆಂದು ಎಸ್‌ಇಜೆಡ್ ದಾರಿಯನ್ನು ಹಿಡಿಯಲಾಗಿದೆ. ಆದರೆ ಅದಕ್ಕೆ ಅಡ್ಡಿ ಬಂದದ್ದು ಇದೇ ಮಾವೋವಾದಿಗಳ ನೇತತ್ವದಲ್ಲಿ ನಡೆದ ಸಶಸ್ತ್ರ ಆದಿವಾಸಿ ಪ್ರತಿರೋಧ. ಈ ಪ್ರತಿರೋಧವನ್ನು ಬಗ್ಗುಬಡಿಯಲೆಂದು ಬಂದದ್ದೇ ಅರೆಸೇನಾಪಡೆ ಮತ್ತು 'ಸಾಲ್ವಾಜುಡುಂ'. ಇದು ಛತ್ತೀಸ್‌ಗಢದಲ್ಲಿ ನಡೆಯುತ್ತಿರುವ ಸಂಘರ್ಷದ ಸಂದರ್ಭ. ಅಲ್ಲಿ ಮಾವೋವಾದಿ ಚಳವಳಿಗೆ ಬಲವಾದ ನೆಲೆ ಸಿಕ್ಕಿರುವುದು ಇದೇ ಕಾರಣಕ್ಕಾಗಿ.

ಅಲ್ಲಿ ಮಾವೋವಾದಿಗಳ ಸವಾಲು ಮತ್ತು ಹಿಂಸೆ ಇಲ್ಲವಾಗಬೇಕೆಂದರೆ ಮೊದಲಿಗೆ ಕಾರ್ಪೊರೇಟ್ ಕಂಪನಿಗಳ ಪರವಾಗಿ ಮತ್ತು (ಸುಪ್ರೀಂ ಕೋರ್ಟೇ ಹೇಳುವಂತೆ) ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಪ್ರಭುತ್ವ ಹಿಂಸೆ ಮತ್ತು 'ಅಭಿವದ್ಧಿ ಹಿಂಸೆ' ನಿಲ್ಲಬೇಕು. ಆಗ ಮಾವೋವಾದಿಗಳು ತನ್ನಿಂತಾನೇ ಅಪ್ರಸ್ತುತರಾಗು ತ್ತಾರೆ. ನೀರೇ ಇಲ್ಲದ ಮೀನಿನಂತಾಗುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳದೆ ಕಾರ್ಪೊರೇಟ್ ದಾಳಿ ಮತ್ತು ಪ್ರಭುತ್ವ ಹಿಂಸೆ ಮುಂದುವರಿದರೆ ಛತ್ತೀಸ್‌ಗಢದ ಚಂದಾವತಿ ನದಿಯಲ್ಲಿ ಬಡ ಆದಿವಾಸಿಗಳ, ಬಡ ಪೊಲೀಸರ, ಮಾವೋವಾದಿ ಚಳವಳಿಗಾರರ, ರಾಜಕಾರಣಿಗಳ ರಕ್ತ ಹರಿಯುತ್ತಲೇ ಇರುತ್ತದೆ. ಉಳಿದವರು ಹಿಂಸೆಯ ಅಮೂರ್ತ ನೈತಿಕ ಮೀಮಾಂಸೆಯನ್ನು ಮಾಡುತ್ತಲೇ ಇರಬೇಕಾಗುತ್ತದೆ. ಅಷ್ಟು ಮಾತ್ರವಲ್ಲ; ಅಲ್ಲಿಯವರೆಗೆ ಮಾವೋ ವಾದಿಗಳ ಚಳವಳಿ ದಿಲ್ಲಿಗೆ ಪ್ರಧಾನ ಅಂತರಿಕ ಶತ್ರುವಾಗಬಹುದು. ಆದರೆ ಛತ್ತೀಸ್‌ಗಢದ ಆದಿವಾಸಿಗಳಿಗೆ ದಿಲ್ಲಿಯೇ ಬಾಹ್ಯ ಮತ್ತು ಅಂತರಿಕ ಶತ್ರುವಾಗಿ ಕಾಣುವುದು ಮುಂದುವರಿದರೆ ಅದಕ್ಕೆ ಮಾವೋವಾದಿಗಳನ್ನು ಹೊಣೆ ಮಾಡುವುದು ಕಷ್ಟ.

In Memory Of Saki

Samvartha 'Sahil'
Ashok Shettar in his regular column in Avadhi wrote about Saket Rajan. I refused to read it on the day it was published. The following day I couldnt resist myself from reading. I read it and sat silently for a while and coincidentally one Abhishek Srivastava had written about Saket Rajan on his wall:

Saketh 1“क्‍या आपने साकेत राजन का नाम सुना है? आज पत्रकारिता दिवस पर उन्‍हें याद करना बहुत मौजूं है। साकेत राजन उर्फ कॉमरेड प्रेम- जिन्‍होंने अस्‍सी के दशक में IIMC से पत्रकारिता की पढ़ाई की और दीक्षांत समारोह में इमरजेंसी के लिए कुख्‍यात उन्‍हीं विद्याचरण शुक्‍ल के हाथों डिग्री लेने से इनकार कर दिया जो आज मेदांता अस्‍पताल में मौत से जूझ रहे हैं- उन्‍हें 6 फरवरी 2005 को धोखे से मार दिया गया था। IIMC Alumni Association से तो खैर क्‍या ही उम्‍मीद की जाए, लेकिन जिन्‍हें अब भी एक्टिविज्‍म और पत्रकारिता से न्‍यूनतम सरोकार बचा है, वे साकेत राजन के बारे में जानने, उनका लिखा पढ़ने और ज्‍यादा जानकारी जुटाने का प्रयास करेंगे, ऐसी आशा है।”
The very thought of Saket Rajan makes me restless and I cant lay my fingers on one reason and explain why he makes me restless. Now in a restless state of mind, after read Ashok Shettar’s column- with all the comments- and the note by Abhishek Srivastava I sit to write this note, on what I know not…

It was only during my last days of class 12 that I started becoming politically conscious. When I joined for my under graduation because of my association with some radical seniors I started reading about and on Marxism, Socialism etc. Not that I understood everything but still I continued to read and whatever little I grasped charged me up.
When I was in my second year of UG that I started fancying armed revolution as a romantic idealist. In a few months I came across an interview of Comrade Prem in Lankesh Patrike. The editorial of Captain (Gauri Lankesh) also spoke of Com. Prem and also had a slice from a poem that he had written on the death of Ken Saro Wiwa, the Nigerian playwright and activist, who was hanged by the then Nigerian regime in 1995 for his anti Shell mobilization and movement of the Ogoni people. The part of the poem published in Lankesh Patrike, monsoon 2004 was:
It was a lesson
You learned too late.
Your pen
Playwright
Should’ve been backed
By the gun, alright.
Viva Ken,
Poet, playwright
Wake up
Its past night
Your corpse sleeps in the coffin
Your spirit fills the air.
Stab the heart
That pumps out oil,
Shell the brain
That causes the drain,
Avenge the Saros of humankind.

By then I was under the heavy influence of Ken Viva’s short story Africa Kills Her Sun, in which Bana writes to Zole the day before him being hanged, explaining why he took an anti-social route which made a heavy impact on me. So when I read Com. Prem’s poem, especially the line, “Your pen playwright should have been backed by the gun,” I wondered if that is what Ken Viwa who fought for the Agoni people and against the multi-national Shell oil company lacked which caused him his life and the weakening of the battle for Agoni people. Yes, said my naive mind. I saw the short story of Ken as his own changed belief regarding armed revolt, at the face of death. Com. Prem happened to say the same thing and it was all convincing to the naive mind of mine. As the poetry and the words of Com. Prem uttered in the interview seeped into my heart he became my hero.
saketh-jnuFew months later some of my friends decided on a trek to Western Ghats. I agreed and we all went for a trek on 6 Feb 2005. While walking thorough the forests I kept remembering the description by Captain, in her editorial, on the path cutting through the forest to reach Com. Prem I remember having recited the poem of Com. Prem to a friend of mine after speaking about him for a while and also telling my friend, in my romantic ideas of armed revolution, that I wouldn’t mind joining Com. Prem in the forest.

When I woke up from deep sleep next morning the news paper carried the news about the assassination of Com. Prem whose name, which I wasn’t aware of, in real was Saket Rajan. My eyes swelled. I felt restless. I read the newspaper again and again and tears rolled down my eyes. Was it only his assassination that disturbed me or was it something more, I dont know. Because I had read and re-read the line saying a gun was found next to his body and I kept remembering the line, “Your pen and playwright should’ve been backed by the gun,” and it convincing me that Ken had lost the battle because he was not backed by the gun. But now here was the photo of Com. Prem alias Saket Rajan’s dead body and the report saying he had a gun in his hand. Suddenly it felt like the path that I had fancied also did not assure changing the world. The unarmed struggle of Ken stood at one end and the armed struggle of Com. Prem stood at the other end and I saw both ends meet at one point, not succeeding to change anything much but ending in almost a similar manner- at the hands of the state. It looked like a dead-end to me for I saw Ken and Com. Prem both die without achieving the larger cause that they dreamt of that they lived for and also died for. The system had managed to beat both of them and both the ways too. It was a moment of disillusionment to a naive romantic idealist. I cried like a child for I had lost not just a hero but also had lost a hopeful illusion.

The newspapers spoke of his background and his education reading which my admiration for the man shot up sky high, which was until then based on just the poem, the interview and the writing by Captain. Saki was born to a upper caste upper class family in Mysore. His father was a Major in the Indian army. Saki had left all of this behind for the causes of the wretched f the earth. One of the magazines, I remember, spoke of an incident where a policeman was abducted by Com. Prem and co who on being released did not get his job for it was suspected that he had some association with the Naxalites. Com. Prem then, the article has read, had pressed the department of police to take the policeman back for it was a matter of his livelihood. This incident showcased the human side of the so called “greatest internal threat”. This quality to respect and understand the member from the so called enemy camp was simply amazing and unheard of. To Com. Prem the policeman was not the enemy but a human being working for his livelihood which he respected. His enemy was the larger system and its that which he was fighting.
MakingHistorySakethRajan_saki_saket_rajanThe newspaper also read that he had authored two volumes of Karanataka history titled MAKING HISTORY in the name Saki. I was shocked. Shocked because I had seen those books in the book stalls of Mangalore then and wondered how come Saki- Hectar Hugh Munro- had written about Karnataka history and had ignored it as “bogus” because I couldn’t imagine a British fiction writer would write two volumes of Karanataka history. Now I went in search of the book again and couldn’t find it anywhere. One of my teachers said that he had bought two volumes and given it to the library. But the then Principal of the college burnt the book fearing it being found in the college library. My search for the book was on even when aware that the book, which untill then was a prescribed text in one of the Universities in Karanataka, was banned overnight when it was realized that the unknown author Saki was Com. Prem alias Saket Rajan. I finally read the first volume of the book in 2008.
The ‘dead-end’ which my naive mind saw those days (2005) made me write an article on Saket Rajan alias Saki alias Com. Prem for our college magazine which went unpublished. The editor of the college magazine had called me and said, “Do you want me to lose my job? I cant approve this for the college magazine.” In 2011 I had also attempted writing a play on Saki and wanted to meet some of his friends who could give me some inputs on his life. Because I couldn’t access those details the play got stuck after the first act. Now I hear that a film is being made on Saki about which I feel happy and also envy.

But every time I remember Saki alias Saket Rajan alias Com. Prem I remember that day when I read the news of his assassination and the ‘dead-end’ that the I the hot blooded naive romantic idealist saw then. “What is the way?” was/ is the question that Saki, my the then hero, left me with intertwining himself, for me, with Ken Viwa. Its that question which still makes me restless for I, in my struggle to be intensely and regularly associated with social activism and living my life, am still struggling to answer for myself and also feeling guilty about not being able to leave behind all comforts like Saki did and not being able to make the greater common good a completely personal goal, merging the self and the world.

Thursday, May 30, 2013

ದಿನದ ಸಾಲು-2ಕೊನೆಯ ಎಲೆ ಇನ್ನೂ ಹಾಗೆ ಇದೆ ಶಿಶಿರ ಕಾಲದ ಮರದ ಕೊಂಬೆಯಲಿ
ಕ್ಷಮಿಸಿಬಿಡು ನನ್ನ ನಿನ್ನ ನಂಬಿಸಲು ಮಾತುಗಳ ಮೊರೆ ಹೋಗುತ್ತಿದ್ದೇನೆ

ಮುಖ್ಯಮಂತ್ರಿ ಸಿದ್ಧರಾಮಯ್ಯ : ಮಹಿಳೆಯರ ಬಹಿರಂಗ ಪತ್ರರೆಡ್ಡಿಗಳ ವಿರುದ್ಧ ಸಿದ್ದರಾಮಯ್ಯ ಸಮರ

ಗೆ:
ಶ್ರೀ ಸಿದ್ಧರಾಮಯ್ಯ,
ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ.

ಮಾನ್ಯರೆ,

ಚುನಾವಣೆಯಲ್ಲಿ ತಮ್ಮ ಪಕ್ಷ ಬಹುಮತ ಪಡೆದು ನೀವು ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದೀರಿ. ಅಭಿನಂದನೆಗಳು. 

ಹಿರಿಯ ಸಾಹಿತಿಗಳನ್ನೆಲ್ಲ ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನ ಭೇಟಿಯಾದ ನಿಮ್ಮ ಅಪರೂಪದ ಮೇಲ್ಪಂಕ್ತಿಯಲ್ಲಿ ಒಬ್ಬ ಹಿರಿಯ ಸಾಧಕಿಯೂ ಕಾಣದೇ ಇದ್ದುದರಿಂದ ನಿಮ್ಮ ಧೋರಣೆ ಏಕಮುಖವಾಗಿದೆಯೆಂಬ ಆತಂಕ ಹುಟ್ಟಿದೆ. ನಾಡಿನ ಸಾಂಸ್ಕೃತಿಕ ಸಂಗತಿಗಳ ಕುರಿತು ಚರ್ಚಿಸಲು ನೀವು ಕರೆದ ಚಿಂತಕರ ಸಭೆಯಲ್ಲಿಯೂ ಒಬ್ಬ ಮಹಿಳೆ ಇಲ್ಲದಿರುವುದು ಹಾಗೂ ಮಂತ್ರಿಮಂಡಲದಲ್ಲಿ ಕೇವಲ ಒಬ್ಬ ಮಹಿಳೆ ಸ್ಥಾನ ಪಡೆದಿರುವುದು ಈ ಬಹಿರಂಗ ಪತ್ರ ಬರೆಯಲು ಕಾರಣವಾಗಿದೆ. 

ಈ ಸಲದ ಚುನಾವಣೆಯಲ್ಲಿ ದ್ವೇಷ ರಾಜಕಾರಣದ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಈ ನಾಡಿನ ಪ್ರಗತಿಪರ, ಜಾತ್ಯತೀತ ಜನರ ಶ್ರಮ ಹಾಗೂ ಬದ್ಧತೆಯನ್ನು ನೆನಪಿಸುವುದು ಅನಿವಾರ್ಯವಾಗಿದೆ. ಕೋಮುವಾದಿ ಶಕ್ತಿಗಳು ಇಲ್ಲಿ ಬೇರೂರಲು ಹವಣಿಸುತ್ತಿದ್ದ ದಿನಗಳಿಂದ ಒಂದಲ್ಲ ಒಂದು ರೀತಿ ಪ್ರಬಲ ಪ್ರತಿರೋಧ ಒಡ್ಡುತ್ತಲೇ ಬಂದಿರುವ ಎಡಪಂಥೀಯ, ಮಹಿಳಾ, ದಲಿತ, ಮಾನವ ಹಕ್ಕುಗಳ ಸಂಘಟನೆಗಳ ಶ್ರಮ, ಬದ್ಧತೆಗಳ ಕುರಿತು ಸಾಮಾಜಿಕ ನ್ಯಾಯವನ್ನು ನಂಬುವ ಚಿಂತಕರೂ ಸೇರಿದಂತೆ ಯಾವ ಚುನಾವಣಾ ವಿಶ್ಲೇಷಣೆಗಳೂ ನೆನಪು ಮಾಡಿಕೊಳ್ಳದಿದ್ದುದು ವಿಪರ್ಯಾಸವೇ ಆಗಿದೆ. 

ಬೆಂಗಳೂರೊಂದರಲ್ಲೇ ೨೦೧೧ರಲ್ಲಿ ಮಹಿಳೆಯರ ಮೇಲೆ ನಡೆದ ಹಿಂಸಾ ಪ್ರಕರಣಗಳ ಸಂಖ್ಯೆ ಒಟ್ಟು ೧೮೯೦. ಮಹಿಳೆಯರ ಮೇಲೆ ನಡೆಯುವ ಹಿಂಸೆಯಲ್ಲಿ ರಾಜಧಾನಿ ದೆಹಲಿ ಒಂದನೆಯ ಸ್ಥಾನದಲ್ಲಿದ್ದರೆ, ಬೆಂಗಳೂರು ಎರಡನೆಯ ಸ್ಥಾನದಲ್ಲಿದೆ. ಸರ್ಕಾರಿ ಅಂಕಿ-ಅಂಶವೇ ಹೇಳುವಂತೆ ಶಿಕ್ಷೆ ಜಾರಿಯಾಗುವ ಪ್ರಕರಣಗಳು ಶೇ ೫.೧ ಮಾತ್ರ. ಅಲ್ಲದೆ ದಿನೇದಿನೇ ಹೆಚ್ಚುತ್ತಿರುವ ಮಹಿಳೆ/ಹಸುಳೆ/ಬಾಲಕಿಯರ ಮೇಲಿನ ಬರ್ಬರ ಅತ್ಯಾಚಾರಗಳು ಆಘಾತಕಾರಿಯಾಗಿವೆ. ತಾವು ಈ ಬಗ್ಗೆ ಸೂಕ್ತಕ್ರಮ ಕೈಗೊಂಡು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ, ಶೀಘ್ರ ತನಿಖೆ ನಡೆಸಿ, ತಕ್ಕ ಶಿಕ್ಷೆ ಜಾರಿಯಾಗುವಂತಹ ವ್ಯವಸ್ಥೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತ ಸುರಕ್ಷಾ ಕ್ರಮಗಳನ್ನು ಕಲ್ಪಿಸಬೇಕು. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿ, ಅದರಲ್ಲಿ ಮಹಿಳಾ ನ್ಯಾಯಾಧೀಶರನ್ನೇ ನೇಮಿಸಿ, ತ್ವರಿತ ನ್ಯಾಯದಾನ ವ್ಯವಸ್ಥೆ ಮಾಡಬೇಕು. ಕೌಟುಂಬಿಕ ನ್ಯಾಯಾಲಯದ ಕಾರ್ಯವೈಖರಿಯನ್ನು ಪುನರಾವಲೋಕಿಸಿ ಕಾನೂನು ಪರಿವೀಕ್ಷಣೆ ನಡೆಯಬೇಕು. ಮಹಿಳಾ ದೌರ್ಜನ್ಯ ಎಸಗಿದವರು ಚುನಾವಣೆಯಲ್ಲಿ ನಿಲ್ಲದಂತೆ, ಅಧಿಕಾರದಲ್ಲಿದ್ದರೂ ಕೆಳಗಿಳಿಯುವಂತೆ ಕಾನೂನು ತರಬೇಕು. ಎಲ್ಲ ಸರ್ಕಾರಿ ಇಲಾಖೆಗಳ ಸಿಬ್ಬಂದಿಗೆ ಲಿಂಗಸಂವೇದನಾ ಶೀಲತೆ ಕಾರ್ಯಾಗಾರ ನಡೆಸಬೇಕು. ಮಹಿಳೆಯರ ಕುರಿತಂತೆ ಒಟ್ಟಾರೆ ಸಮಾಜದ ರೋಗಿಷ್ಠ ಮನಸ್ಥಿತಿಯನ್ನು ಸರಿಪಡಿಸುವ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು, ಮಾನವಹಕ್ಕು ಸಂಘಟನೆಗಳು ಹಾಗು ಸಂಬಂಧಪಟ್ಟ ತಜ್ಞರೊಂದಿಗೆ ಸಮಾಲೋಚಿಸಬೇಕು. ಜಾತ್ಯತೀತ, ಪ್ರಗತಿಪರ, ಮಹಿಳಾಪರ ಹಾಗೂ ಮಹಿಳಾ ಚಳುವಳಿಯ ಅನುಭವವಿರುವ ಕ್ರಿಯಾಶೀಲ ಮಹಿಳೆಯರನ್ನು ಮಹಿಳಾ ಆಯೋಗಕ್ಕೆ ನೇಮಿಸಿ, ನೊಂದ ಮಹಿಳೆಯರಿಗೆ ಸೂಕ್ತ ನ್ಯಾಯ ಒದಗಿಸುವ ವಾತಾವರಣ ನಿರ್ಮಾಣ ಮಾಡಬೇಕು. 

ಜೊತೆಗೆ:
  • ಆರೋಗ್ಯಕರ ಕೆಲಸದ ವಾತಾವರಣ, ಸುರಕ್ಷತೆ, ಸೂಕ್ತ ವೇತನವಿಲ್ಲದೆ ಬಿಡಿಗಾಸಿಗೆ ಅಸಂಘಟಿತವಲಯದಲ್ಲಿ ದುಡಿಯುತ್ತಿರುವ ಗುತ್ತಿಗೆ ಪೌರಕಾರ್ಮಿಕ ಮಹಿಳೆಯರು; ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರು; ಗಾರ್ಮೆಂಟ್ಸ್, ಮನೆಗೆಲಸ, ಬೀಡಿ ಕಟ್ಟುವ ಮಹಿಳೆಯರು ಮತ್ತು ಕಟ್ಟಡ ಕಾರ್ಮಿಕರಿಗೆ ಉದ್ಯೋಗ ಖಾತ್ರಿ, ಸಮಾನ ವೇತನ, ಉತ್ತಮ ಕೆಲಸದ ವಾತಾವರಣ, ಸುರಕ್ಷೆ, ಮೂಲಭೂತ ಸೌಕರ್ಯಗಳನ್ನು ಶೀಘ್ರವೇ ಜಾರಿಗೊಳಿಸುವ ವ್ಯವಸ್ಥೆ ಮಾಡಿ ಅದಕ್ಕಾಗಿ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. 
  • ಬಡವರ ಮನೆ, ನೆಲೆಗಳನ್ನು ನಿರ್ನಾಮ ಮಾಡುವ ಲಾಭಕೋರ ಮಾಲುಗಳು, ದಂಧೆಗಳನ್ನು ತಡೆದು ಮಕ್ಕಳು-ಮಹಿಳೆಯರ ಬದುಕು ಬೀದಿ ಪಾಲಾಗುವುದನ್ನು ನಿಲ್ಲಿಸಬೇಕು. ಕಡಿಮೆ ಬೆಲೆಯ ಸಾರಾಯಿ ಕುಟುಂಬ ಆರೋಗ್ಯ ನಾಶಮಾಡದಂತೆ ನೋಡಿಕೊಳ್ಳಬೇಕು. ಸರ್ಕಾರಿ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಮುಚ್ಚದೆ ಉತ್ತಮ ಸೇವೆ ಲಭ್ಯವಾಗುವಂತೆ ಮಾಡಬೇಕು. 
  • ಸಮಾಜ/ಆಡಳಿತದ ಎಲ್ಲ ಸ್ತರಗಳಲ್ಲೂ ಮಹಿಳಾ ಪ್ರಾತಿನಿಧ್ಯ ಕನಿಷ್ಠ ಮೂರನೇ ಒಂದು ಭಾಗ ಇರುವಂತೆ ನೋಡಿಕೊಳ್ಳಬೇಕು. ವಿಧಾನಸಭಾ/ಪರಿಷತ್ತಿನಲ್ಲಿರುವ ಮಹಿಳೆಯರನ್ನು ಪರಿಗಣಿಸಿ ಮಂತ್ರಿಮಂಡಲದಲ್ಲಿ ಹಾಗೂ ನಿಗಮಮಂಡಳಿಗಳಲ್ಲಿ ಸಮಾನ ಪ್ರಾತಿನಿಧ್ಯ ನೀಡಬೇಕು. ಮುಂಬರುವ ಚುನಾವಣೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಕರಾರುವಾಕ್ಕಾಗಿ ಜಾರಿಗೊಳಿಸುವ ಮೂಲಕ ಸಂವಿಧಾನದ ಲಿಂಗ ಸಮಾನತೆಯ ಆಶಯವನ್ನು ಜಾರಿಗೊಳಿಸಬೇಕು. 
  • ದೇವದಾಸಿಯರ/ವಲಸಿಗರ ಮಕ್ಕಳಿಗೆ ವಸತಿಶಾಲೆ ಮಾಡಬೇಕು. ಎಸ್‌ಸಿ,ಎಸ್‌ಟಿ/ಒಬಿಸಿ/ಮೈನಾರಿಟಿ ವಿದ್ಯಾರ್ಥಿನಿಯರ ಹಾಸ್ಟೆಲುಗಳನ್ನು ಉತ್ತಮಪಡಿಸಿ ಹೊಸ ನಿಲಯಗಳನ್ನು ತೆರೆಯಬೇಕು. ಎಲ್ಲ ಹೆಣ್ಣುಮಕ್ಕಳ ವಸತಿ ನಿಲಯಗಳಿಗೆ ಮಹಿಳಾ ವಾರ್ಡನ್/ಕೆಲಸಗಾರರನ್ನೆ ನೇಮಿಸಬೇಕು.
  • ಮಹಿಳಾ ವಿಶ್ವವಿದ್ಯಾಲಯವಷ್ಟೆ ಮಹಿಳೆಯರಿಗಲ್ಲ. ರಾಜ್ಯದ ಇನ್ನಿತರ ವಿಶ್ವವಿದ್ಯಾಲಯಗಳ ವಿಸಿ ಆಯ್ಕೆ ಹಾಗೂ ಸಿಂಡಿಕೇಟ್ ಸದಸ್ಯರ ಆಯ್ಕೆ ಸಮಯದಲ್ಲಿ ಮಹಿಳೆಯರ ಸೂಕ್ತ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕು. 

  • ಮಹಿಳೆ ಎಂಬ ಕಾರಣಕ್ಕೆ ಯಾವುದೇ ಅಪ್ರಾಮಾಣಿಕ/ಭ್ರಷ್ಟ/ಸ್ವಾರ್ಥಿ ಮಹಿಳೆಗೆ ಅವಕಾಶ ಕಲ್ಪಿಸಬೇಡಿ. ಸೂಕ್ತ ಮಹಿಳೆಯರನ್ನು ಎಲ್ಲ ಜಾತಿ, ಧರ್ಮ, ಜನವರ್ಗಗಳನ್ನು ಪ್ರತಿನಿಧಿಸುವಂತೆ ಆಯ್ದುಕೊಳ್ಳುವ ಎಚ್ಚರಿಕೆ ವಹಿಸಿ. 


ಪ್ರಜಾತಂತ್ರದ ಉಸಿರನ್ನೆ ಹತ್ತಿಕ್ಕಲು ಪ್ರಯತ್ನಿಸಿದ್ದ ತುರ್ತು ಪರಿಸ್ಥಿತಿ, ಸಿಖ್ ನರಮೇಧದ ಕೋಮು ದಳ್ಳುರಿ, ಭ್ರಷ್ಟತೆ ಇತ್ಯಾದಿಗಳು ನಮ್ಮ ನೆನಪೆಂಬ ಹಗೇವಿನಲ್ಲಿನ್ನು ಜೀವಂತವಾಗಿವೆ. ಜನಪರ ಆಡಳಿತದ ಮೂಲಕ ದುಡಿದುಣ್ಣುವ ಜನರ ಬದುಕನ್ನು ಹಸನಾಗಿಸುವ, ಜಾತಿ-ಲಿಂಗ-ವರ್ಗ ಇತ್ಯಾದಿ ಯಾವುದೇ ರೀತಿಯ ಅಮಾನವೀಯ ತಾರತಮ್ಯವನ್ನು ತೊಡೆದು ಹಾಕಿ ಸಮಾನತೆಯ, ಸಹಬಾಳ್ವೆಯ ಸಮಾಜ ರಚನೆಗಾಗಿ ಮಾಡುವ ಪ್ರಾಮಾಣಿಕ ಪ್ರಯತ್ನದ ಮೂಲಕವಷ್ಟೆ ಹಳೆಯ ಕಳಂಕಗಳನ್ನು ತೊಡೆದು ಹಾಕಲು ಸಾಧ್ಯ. ಸಮಾಜವಾದಿ ಹಿನ್ನೆಲೆಯಿಂದ ಬಂದ ನೀವು ಮಹಿಳೆಗೆ ಸುರಕ್ಷೆಯ ಜೊತೆಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಗೌರವ, ಸಮಾನತೆ ಲಭಿಸುವಂತೆ ಮಾಡುವಿರಿ ಎಂಬ ವಿಶ್ವಾಸ ಇಟ್ಟಿದ್ದೇವೆ. 
ಜಾತಿ, ವರ್ಗ, ಧರ್ಮ, ಕುಟುಂಬ, ವಿವಾಹ, ದೇಶ, ಗಡಿ, ಪ್ರಭುತ್ವ - ಹೀಗೆ ಯಾವುದೇ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯ/ಹಿಂಸೆಯನ್ನು ತಡೆದು, ಕೊನೆಗಾಣಿಸುವ ಆತ್ಮಬಲವನ್ನು ಪಡೆದುಕೊಳ್ಳಲು ನಾವೇ ಸಜ್ಜಾಗಬೇಕಾದ ಕಾಲ ಇದು. ಎಂದೇ ‘ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ’ ಹಾಗೂ ‘ಮಹಿಳಾ ಸಂಘಗಳ ಜಾಲ’ದ ಅಡಿಯಲ್ಲಿ ಸಮಾನತೆ, ಸಹಬಾಳ್ವೆ ಹಾಗು ಪ್ರಜಾತಂತ್ರದಲ್ಲಿ ನಂಬಿಕೆ ಇರುವ ೧೨೬ ಮಹಿಳಾ ಸಂಘಟನೆಗಳು ಮಂಗಳೂರಿನಲ್ಲಿ ಮಹಿಳಾ ದಿನಾಚರಣೆ ಆಚರಿಸಿ ‘ಕರ್ನಾಟಕ ರಾಜ್ಯ ಮಹಿಳಾ ಒಕ್ಕೂಟ’ವು ರೂಪುಗೊಂಡಿದೆ. ಮಹಿಳಾಪರ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಮಹಿಳಾ ಒಕ್ಕೂಟವು ಸಮಾನ ಹಕ್ಕುಗಳಿಗಾಗಿ ಮುಂಬರುವ ದಿನಗಳಲ್ಲಿ ವಿಶಾಲ ಆಂದೋಲನವನ್ನು ಹಮ್ಮಿಕೊಳ್ಳಬಯಸುತ್ತದೆ.
 
 
- ಕರ್ನಾಟಕ ರಾಜ್ಯ ಮಹಿಳಾ ಒಕ್ಕೂಟದ ಪರವಾಗಿ,
-


                                                              

- ದು. ಸರಸ್ವತಿ, ಎಚ್. ಎಸ್. ಅನುಪಮಾ, ಗುಲಾಬಿ ಬಿಳಿಮಲೆ, ಮರ್ಲಿನ್ ಮಾರ್ಟಿಸ್, ಮಲ್ಲಿಗೆ, ಸಾರಾ ಅಬೂಬಕರ್, ಚಂದ್ರಕಲಾ ನಂದಾವರ, ಗೌರಿ, ವೈದೇಹಿ, ರೀಟಾ ನೊರೋನ್ಹಾ, ಮಧು ಭೂಷಣ್, ಕೆ. ನೀಲಾ, ಶಕುನ್, ಜ್ಯೋತಿ. ಎ, ರತಿ ರಾವ್, ಪ್ರಭಾ ಮತ್ತು ಇತರರು

ಟಿಬೇಟಿಯನ್ ಕವಿತೆಗಳು
ಭುಚುಂಗ್ ಸೋನಮ್:
ಅನು: ಡಾ. ಎಚ್.ಎಸ್. ಅನುಪಮಾ


೧. ಯಾವಾಗ ಹುಟ್ಟಿದೆ?
 
 
 

ಅಮ್ಮಾ, ನಾನು ಯಾವಾಗ ಹುಟ್ಟಿದ್ದು?
ನದಿ ಒಣಗಿದ ವರ್ಷ ಮಗೂ.

ಅದು ಯಾವಾಗ?
ಬೆಳೆ ಕರಟಿದಾಗ, ಎಷ್ಟೋ ದಿನ ಉಪವಾಸ ಕಳೆದಾಗ,
ನೀ ಬದುಕಲಾರೆಯೆಂದು ಹೆದರಿದ್ದಾಗ.

ಅದು? ನಾವು ಹೊಸ ಮನೆಗೆ ಹೋದ ವರ್ಷ?
ಅವರು ನಮ್ಮ ಮನೆ ಆಕ್ರಮಿಸಿದ ವರ್ಷ, ದೇಶಭಕ್ತರಿಗೆ ಮನೆ ಪಾಲು ಮಾಡಿಕೊಟ್ಟು
ನೀ ಹುಟ್ಟಿದ ಕೊಟ್ಟಿಗೆಗೆ ನಾವೆಲ್ಲ ದೂಡಲ್ಪಟ್ಟ ವರ್ಷ ಮಗೂ. 

ಅದು ಯಾವ ವರ್ಷ?
ಅದು ಬೌದ್ಧಮಠ ನಾಶವಾದ ವರ್ಷ,
ಕಂಚಿನ ಮೂರುತಿಗಳ ಕರಗಿಸಿ ಬುಲೆಟ್ ಮಾಡಿದ ವರ್ಷ.
ಆಗಸ ಧೂಳಿನಿಂದ ತುಂಬಿದಾಗಲೇ ನೀ ಹುಟ್ಟಿದೆ ಮಗೂ.

ಅದು ಅಜ್ಜ ಸತ್ತ ವರ್ಷವೆ?
ಅದು ಅಜ್ಜನನ್ನು ಜೈಲಿಗೆ ದೂಡಿ
ಅಲ್ಲಿ ಅವ ಹೇಲು ಬಳಿದು ಸೊಳ್ಳೆ ಹೊಡೆದ ವರ್ಷ.
ಮನೆಯಲಿ ಗಂಡಸರೇ ಇಲ್ಲದಾಗ ನೀ ಹುಟ್ಟಿದೆ ಮಗೂ.

ಮನೆಗೋಡೆ ಕೆಡವಿದ ವರ್ಷ ಹುಟ್ಟಿದೆನೆ?
ಆ ವರ್ಷ ಪ್ರಾರ್ಥನಾ ಕೋಣೆ ಪುಡಿಪುಡಿ ಮಾಡಿದರು.
ಮರದ ತೊಲೆಗಳ ಸಿಗಿದರು. ಚಿತ್ರಪಟಗಳು ಕೊಳೆಯಾದವು. 
ಪೂರ್ವದಿಂದ ಹುಚ್ಚುಗಾಳಿ ಬೀಸಿತು. ಆಗ ನೀ ಹುಟ್ಟಿದೆ ಮಗೂ.

ಅದು ಯಾವ ವರ್ಷ?
ಊರ ನಡುಮಧ್ಯ ಶಾಸ್ತ್ರಗ್ರಂಥಗಳ ಅವರು ಸುಟ್ಟ ವರ್ಷ.
ಪಕ್ಷ ಹೊಗಳುವ ಕ್ರಾಂತಿಗೀತೆಗಳ ಹಾಡಿದ ವರ್ಷ.
ಗರಿಕೆಯೂ ಚಿಗುರಲೊಲ್ಲೆ ಎನುವಾಗ ನೀ ಹುಟ್ಟಿದೆ ಮಗೂ.

ನೀನು ಹಾಡಲು ನಿಲಿಸಿದ ವರ್ಷವೆ ಅದು?
ನಮ್ಮ ನೆರೆಮನೆಯವರನು ಜೀತಕ್ಕೆ ಎಳೆದೊಯ್ದ ವರ್ಷ.
ಅವಳು ಕಾಲುವೆ ತೋಡುತ್ತ ಸೋಬಾನೆ ಹಾಡಿದ್ದಳು. 
ಜನ ಒಬ್ಬೊಬ್ಬರೇ ಕಣ್ಮರೆಯಾಗುವಾಗ ನೀ ಹುಟ್ಟಿದೆ ಮಗೂ.

ಅದು ಯಾವಾಗ?
‘ತಲೆ ಹೊರಗಿಣುಕಿದರೆ ಸುತ್ತಿಗೆಯಲಿ ಬಡಿದು ಕೆಳಗುರುಳಿಸಲಾಗುವುದು’ ಎಂದು
ದೊಡ್ಡ ಕೆಂಪಕ್ಷರಗಳು ಗೋಡೆ ಮೇಲಣ ಘೋಷಣೆಯಾದ ವರ್ಷ..
ಸೂರ್ಯ ಲಜ್ಜೆಯಿಂದ ಆಗಸದಿಂದಲೇ ಮರೆಯಾದಾಗ ನೀ ಹುಟ್ಟಿದೆ ಮಗೂ.

ಅದು ಯಾವಾಗ?
ಆ ವರ್ಷ ನಿನ್ನ ತಂದೆ..  ನಿನ್ನ ತಂದೆ..೨. ಗಡೀಪಾರು

ಮನೆಯಿಂದ ದೂ...ರ 
ಬಲು ದೂ.. .. ರ
ಮೂವತ್ತಾರನೇ ಮಹಡಿಯ ಬಾಡಿಗೆ ಕೋಣೆಯಲ್ಲಿ ನಾನು.

ಸಿಕ್ಕಿಬಿದ್ದಿವೆ, ಒಂದು ಗುಂಗಿ ಹುಳ 
ಇನ್ನೊಂದು ಮೂರು ಕಾಲಿನ ಜೇಡ. 
ಜೇಡ ಗೋಡೆ ಮೇಲೆ
ನಾನು ನೆಲದ ಮೇಲೆ 
ತೆವಳುತ್ತೇವೆ
ಗುಂಗಿ ಕಿಟಕಿಗೆ 
ನಾನು ಟೇಬಲ್ಲಿಗೆ
ಡಿಕ್ಕಿ ಹೊಡೆಯುತ್ತೇವೆ
ಹಲವು ಸಲ ಮುಖಮುಖ ನೋಡಿಕೊಳ್ಳುತ್ತೇವೆ 
ಒಂಟಿತನದ ಕೊಳ ಹಂಚಿಕೊಳ್ಳುತ್ತೇವೆ
ಹಿಕ್ಕೆ, ಬಲೆಗಳಿಂದ ಅವು 
ಗೋಡೆಗೆ ಬಣ್ಣ ಬಳಿವಾಗ
ನಾನು ವರ್ಣಿಸುತ್ತೇನೆ ಬಿಡಿ ಪದಗಳಲ್ಲಿ 
ಬಲೆ, ಚಕ್ರವ್ಯೂಹ, ಸಿಕ್ಕು,
ರೆಕ್ಕೆ, ಝೇಂಕಾರ, ಕಂಪನ.. 
ಇತ್ಯಾದಿ ಇತ್ಯಾದಿ

ಮನೆಯಿಂದ ದೂ.. ..ರ
ನನ್ನ ನಿಮಿಷಗಳು ಗಂಟೆಗಳಾಗಿವೆ
ಜೇಡ ಚಾವಣಿಯ ಕಡೆ ಚಲಿಸುತ್ತಿದೆ
ಗುಂಗಿ ಕಿಟಕಿಯಿಂದ ಕಸದಬುಟ್ಟಿಗೆ ಹಾರುತ್ತಿದೆ
ಕಿಟಕಿಯಾಚೆ ದಿಟ್ಟಿಸುತ್ತೇನೆ
ಮನದ ಮಾತು ಯಾರೂ ಆಡುತ್ತಿಲ್ಲ

ನನ್ನ ಮೌನದೆದುರು
ನೀವು ಕಿವುಡಾಗುವಂತಿದ್ದರೆ...


Wednesday, May 29, 2013

ದಿನದ ಸಾಲುನಡುರಾತ್ರಿ ನಿನ್ನ ನೆನಪಾಯಿತು
ಎದ್ದು ಕತ್ತಲಿರುವ ಕಡೆ ಹಾದಿ ದೀಪ ಹಚ್ಚಿ ಬಂದೆ

Monday, May 27, 2013

ಜಾತೀಯತೆ ಎಂಬ ರೋಗ ಮತ್ತು ಮೀಸಲಾತಿ ಎಂಬ ಔಷಧ

ರಘೋತ್ತಮ ಹೊ.ಬ,
ಚಾಮರಾಜನಗರಒಂದು ಉದಾಹರಣೆ; ನಿಮಗೆ ಜ್ವರ ಬಂದಿದೆ ಎಂದಿಟ್ಟುಕೊಳ್ಳಿ. ಆಸ್ಪತ್ರೆಗೆ ಹೋಗುತ್ತೀರಿ ತಾನೆ? ಡಾಕ್ಟರರು ಹೇಳುವ ಪರೀಕ್ಷೆಗಳನ್ನು ಮಾಡಿಸಿ ಜ್ವರ ಯಾಕೆ ಬಂತು, ಹೇಗೆ ಬಂತು ಇತ್ಯಾದಿಗಳನ್ನು ವಿವರಿಸಿ ಟ್ರೀಟ್‌ಮೆಂಟ್ ಪಡೆಯುತ್ತೀರಿ ತಾನೆ? ವಾಸಿಮಾಡಿಕೊಳ್ಳುತ್ತೀರಿ ತಾನೆ? ಅದು ಬಿಟ್ಟು ಜ್ವರ ಬಂದಿದ್ದರೆ ಹೇ! ಜ್ವರಾನೂ ಇಲ್ಲ,ಏನು ಇಲ್ಲಾ ಎಂದರೆ ಬಂದಿರುವ ಜ್ವರ ವಾಸಿ ಯಾಗುತ್ತದೆಯೇ? ಆ ಜ್ವರದ ಹಿಂದಿರುವ ರೋಗ ವಾಸಿಯಾಗುತ್ತದೆಯೇ? ಖಂಡಿತ ಸಾಧ್ಯವಿಲ್ಲ. ಹಾಗೇನಾದರೂ ಜ್ವರ ಬಂದಿಲ್ಲ ಎಂದು ಆತ ಸುಮ್ಮನೆ ಕುಳಿತರೆ ಆತ ಮುಗಿದ ಹಾಗೆಯೇ. ಟಿಕೆಟ್ ತೆಗೆದುಕೊಂಡ ಹಾಗೆಯೇ! ಕಣ್ಣಾರೆಕಂಡ ನನ್ನ ಸ್ನೇಹಿತನೊಬ್ಬನ ಕಥೆ ದಿಗಿಲು ಹುಟ್ಟಿಸುತ್ತದೆ. ನಾನಾಗ ಸೆಕೆಂಡ್ ಪಿಯುಸಿ ಓದುತ್ತಿದ್ದೆ. ಊಟ ಮುಗಿದಿತ್ತು. ನನ್ನ ಸ್ನೇಹಿತ ಕೂಡ ಊಟ ಮುಗಿಸಿ ಆರಾಮಾಗಿ ಮನೆಯಲ್ಲಿ ಇದ್ದ. ಆತನಿಗೆ ಅಪ್ಪ ಅಮ್ಮ ಇರಲಿಲ್ಲ. ಅಣ್ಣ ಅತ್ತಿಗೆ ಇದ್ದರು. ನಾಚಿಕೆ ಸ್ವಭಾವದ ಆತ ಅಣ್ಣ ಅತ್ತಿಗೆಯ ಜೊತೆ ಅಷ್ಟು ಮುಕ್ತವಾಗಿ ಮಾತನಾಡುತ್ತಿರಲಿಲ್ಲ. 

ಹೀಗಿರುವಾಗ ಪರೀಕ್ಷೆ ಮುಗಿದ ಆ ದಿನ ರಾತ್ರಿ ಅವನಿಗೆ ಊಟವಾದ ನಂತರ ಯಾಕೋ ಹೊಟ್ಟೆ ತೊಳೆಸಿದಂತಾಗಿ ಭೇದಿ ಪ್ರಾರಂಭವಾಯಿತು. ರಾತ್ರಿ ಪೂರಾ ಐದಾರು ಸಾರಿ ವಾಂತಿಭೇದಿಯಾಯಿತು. ನಾಚಿಕೆ ಸ್ವಭಾವದ ಆತ ಅದನ್ನು ತನ್ನ ಅಣ್ಣ ಅತ್ತಿಗೆಗೆ ಹೇಳಲಿಲ್ಲ. ಬೆಳಗ್ಗೆ ಆದ ನಂತರ ತಾನೇ ವೈದ್ಯರ ಬಳಿ ಹೋಗಿ ತೋರಿಸಿ ಕೊಳ್ಳೋಣವೆಂದು ಸುಮ್ಮನಾದ. ಆದರೆ? ಬೆಳಗ್ಗೆ ಆಗೋ ಹೊತ್ತಿಗೆ ಆತನಿಗೆ ಭೇದಿ ಜಾಸ್ತಿಯಾಗಿ ಅರೆಜೀವವಾಗಿ ಮಲಗಿದ್ದ.

ಬೆಳಗ್ಗೆ ಅಣ್ಣನಿಗೆ ತಿಳಿಸಿದೆನಾದರೂ ಅಷ್ಟೊತ್ತಿಗಾಲೇ ಅವನ ಕಥೆ ಮುಗಿದು ಹೋಗಿತ್ತು. ಸ್ನೇಹಿತ ತನ್ನ ಸಮಸ್ಯೆಯನ್ನು ಯಾರಿಗೂ ಹೇಳದೆ ಮುಚ್ಚಿಟ್ಟುಕೊಂಡು ಸಾವಿನ ಮನೆ ಸೇರಿದ್ದ! ಸ್ನೇಹಿತ ತನಗೆ ವಾಂತಿ ಭೇಧಿ ಆಗಿದೆ ಎಂದು ತನ್ನ ಮನೆಯವರಿಗೆ ಹೇಳಿದ್ದರೆ ಆತ ಬದುಕುತ್ತಿದ್ದ. ತನ್ನ ರೋಗದ ಬಗ್ಗೆ ಹೇಳಿದ್ದರೆ ಆ ರೋಗಕ್ಕೆ ಆತ ಪರಿಹಾರ ಕಂಡು ಕೊಳ್ಳುತ್ತಿದ್ದ. ಆತ ಹಾಗೆ ಮಾಡಲಿಲ್ಲ. ತನ್ಮೂಲಕ ತನ್ನ ಕೊನೆಯನ್ನು ತಾನೇ ಕಂಡುಕೊಂಡ. ಇಂತಹ ರೋಗದ ಕಥೆಯನ್ನು ಇಲ್ಲಿ ಯಾಕೆ ಹೇಳಬೇಕಾಯಿತು ಎಂಬ ಹಿನ್ನೆಲೆಯನ್ನು ಹೇಳಿಲಿಲ್ಲ. 

ಮೊನ್ನೆ ಸ್ನೇಹಿತರ ಒಂದು ಗುಂಪು ನನ್ನನ್ನು ಸಾರ್, ನೀವ್ಯಾಕೆ ಪದೇ ಪದೇ ದಲಿತರು, ದಲಿತರು ಎಂದು ಜಾತಿಯ ಹೆಸರನ್ನು ಹೇಳುತ್ತೀರಿ? ಹೀಗಾದರೆ ಜಾತಿ ನಿರ್ಮೂಲನೆ ಹೇಗೆ ಸಾಧ್ಯ? ಒಟ್ಟಾರೆ ಹಿಂದೂಗಳು ಎನ್ನಿ. ಆಗ ನಾವೆಲ್ಲಾ ಒಂದಾಗುತ್ತೇವೆ ಎಂದು ಆಕ್ಷೇಪಿಸಿತು. ಅಂದಹಾಗೆ ಸಂಘ ಪರಿವಾರದ ಹಿನ್ನೆಲೆಯ ಸ್ನೇಹಿತರ ಆ ಗುಂಪು ನನ್ನ ನೂತನ ಕೃತಿ ‘ಗಾಂಧಿ ಹೋರಾಟ ಯಾರ ವಿರುದ್ಧ?’ವನ್ನು ಓದಿ ಅದರಲ್ಲಿ ನಾನು ಪ್ರಸ್ತಾಪಿಸಿದ್ದ ವಿಷಯಗಳನ್ನು ಓದಿಕೊಂಡು ಕುಪಿತಗೊಂಡು ನನ್ನ ಜೊತೆ ಹಾಗೆ ವಾಗ್ವಾದಕ್ಕಿಳಿಯಿತು. ಆಗ ನಾನು ಅವರಿಗೆ ತನ್ನ ರೋಗದ ಬಗ್ಗೆ ಬೇರೆಯವರಿಗೆ ಹೇಳದೆ ಸತ್ತ ಸ್ನೇಹಿತನ ಈ ಪ್ರಸಂಗ ಹೇಳ ಬೇಕಾಯಿತಷ್ಟೆ.

ನಿಜ, ಅಸ್ಪಶ್ಯತೆ, ಜಾತೀಯತೆ ಈ ದೇಶಕ್ಕೆ ವಿಶೇಷವಾಗಿ ಹಿಂದೂ ಧರ್ಮಕ್ಕಂಟಿದ ರೋಗ. ವೈಯಕ್ತಿಕ ಅಭಿಪ್ರಾಯವಲ್ಲ. ಸ್ವತಃ ಡಾ.ಅಂಬೇಡ್ಕರರೇ ಹಿಂದೂಗಳು ಈ ದೇಶದ ರೋಗಿಗಳು. ಅವರ ರೋಗದಿಂದ ಇತರರಿಗೆ ತೊಂದರೆಯಾಗುತ್ತಿದೆ. ಹಿಂದೂಗಳಿಗೆ ಅರಿವು ಮೂಡಿಸುವುದೇ ತನ್ನ ಕರ್ತವ್ಯವೆಂದು ತಮ್ಮ ಜಾತಿ ನಿರ್ಮೂಲನೆ ಎಂಬ ಕೃತಿಯಲ್ಲಿ ಹೇಳುತ್ತಾರೆ. ವಿಚಿತ್ರವೆಂದರೆ ಜಾತೀಯತೆ, ಅಸ್ಪಶ್ಯತೆ ಎಂಬ ರೋಗಗಳು ಅಂಟಿರುವುದು ಮೇಲ್ಜಾತಿಯವರಿಗಾದರೂ ಅದರಿಂದ ಬಳಲುತ್ತಿರುವವರು ಮಾತ್ರ ಕೆಳ ಜಾತಿಯವರು. 

ವಿಶೇಷವಾಗಿ ದಲಿತರು. ಬಹುಶಃ ಇಂತಹ ಪರಿಸ್ಥಿತಿ ಅಂದರೆ ರೋಗ ಬಂದಿರುವವ ರೊಬ್ಬರು, ಅದರಿಂದ ನರಳುತ್ತಿರುವವರು ಮತ್ತೊಬ್ಬರು ಎಂಬ ಪರಿಸ್ಥಿತಿ ಪ್ರಪಂಚದಲ್ಲಿ ಇನ್ನೆಲ್ಲಿಯೂ ಇಲ್ಲವೇನೊ! ಆದರೆ ಭಾರತದಲ್ಲಿ ಅದು ಇದೆ. ಅಂತಹ ರೋಗ, ಅದರ ಲಕ್ಷಣ, ಅದರಿಂದ ನರಳುವಿಕೆಯನ್ನು ಧರ್ಮ ಎನ್ನಲಾಗುತ್ತಿದೆ!ಇರಲಿ, ರೋಗ ಎಂದ ತಕ್ಷಣ treatment  ಬೇಡವೆ? ಅಂತಹ treatment  ಬೇಕು ಎಂದಾಕ್ಷಣ ಮೊದಲಿಗೆ ನಿನಗ್ಯಾವ ರೋಗ ಎಂದು ತಿಳಿಸುವುದು ಬೇಡವೆ? ಹಾಗೆ ಹೇಳಿದರೆ ತಾನೆ ವೈದ್ಯರಿಂದ ಪರಿಹಾರ ಸಿಗುವುದು? ಆದರೆ ಸಂಘಪರಿವಾರದ ಮಿತ್ರರು ಹೇಳುತ್ತಿದ್ದದ್ದೆ ಬೇರೆ! 

ನಮಗ್ಯಾವ ಜಾತಿಯೂ ಬೇಡ, ಜಾತಿಯ ಹೆಸರನ್ನು ಹೇಳುವುದೂ ಬೇಡ. ಜಾತಿ ಪ್ರಮಾಣ ಪತ್ರವನ್ನು ನೀಡುವುದನ್ನು ನಿಷೇಧಿಸಬೇಕು! ಹೀಗೆ ಸಾಗಿತ್ತು ಅವರ ವಾದ. ಅಂದಹಾಗೆ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಷೇಧಿಸಿ ಎಂದರೆ ಏನರ್ಥ? ಮೀಸಲಾತಿ ನಿಷೇಧಿಸಿ ಎಂದರ್ಥ! ಆದರೆ ಆ ಮಿತ್ರರು ಹಾಗಂತ ಹೇಳಲೆ ಇಲ್ಲ! ಜಾತಿ ಏಕೆ ಬೇಕು ಸಾರ್ ಎಂದು ಕುಯುಕ್ತಿಯ, ಕುತಂತ್ರದ ವಾದವನ್ನು ಪದೇ ಪದೇ ಮುಂದುವರಿಸಿದರು!

ಮನುವಾದವೇ ಹೀಗೆ, ಅದು ತಾನು ನೇರವಾಗಿ ಏನನ್ನು ಹೇಳಬೇಕೋ ಅದನ್ನು ಹೇಳುವುದಿಲ್ಲ. ಬದಲಿಗೆ ಇನ್ನೇನನ್ನೋ ಹೇಳಿ ಎಲ್ಲರನ್ನೂ ಯಾಮಾರಿಸುತ್ತಿರುತ್ತದೆ. ಬುದ್ಧನನ್ನು ವಿಷ್ಣುವಿನ ಅವತಾರವೆನ್ನುತ್ತದೆ. ಅಂಬೇಡ್ಕರ್, ಮಹಾತ್ಮ ಫುಲೆ, ವಿವೇಕಾನಂದ, ನಾರಾಯಣ ಗುರು ಇತ್ಯಾದಿ ಹಿಂದೂ ಧರ್ಮದ ವಿರುದ್ಧ ಬಂಡೆದ್ದವರನ್ನು ಹಿಂದೂ ಧರ್ಮದ ಸುಧಾರಕರೆನ್ನುತ್ತದೆ! ಮಸೀದಿ ಕೆಳಗೆ ಮಂದಿರವಿದೆ ಎನ್ನುತ್ತದೆ. ಮಂದಿರದ ಕೆಳಗೆ ಮತ್ತೇನೋ ಇದೆ ಎನ್ನುತ್ತದೆ! ಒಟ್ಟಿನಲ್ಲಿ ರೋಗ ಮಾತ್ರ ಹಾಗೇ ಇರಬೇಕು! ಯಾಕೆಂದರೆ ರೋಗದ ಪರಿಣಾಮ ವನ್ನು ಅನುಭವಿಸುವವರು ಅವರಲ್ಲವಲ್ಲ!

ಹಾಗಿದ್ದರೆ ರೋಗ ವಾಸಿಯಾಗುವುದು ಬೇಡವೆ? ಬೇರಾವುದಕ್ಕಾದರೂ ಇರಲಿ ಮೀಸಲಾತಿಗೋಸ್ಕರವಾದರೂ ರೋಗ ಇರಬೇಕೆಂದರ್ಥವೆ? ಊಹ್ಞೂಂ, ಜಾತೀಯತೆ ಮತ್ತು ಅಸ್ಪಶ್ಯತೆ ಎಂಬ ರೋಗ ನಾಶವಾಗಬೇಕು. ಆದರೆ ಅದು ಹೇಗೆ? ಇಂತಹ ರೋಗ ಎಂದು ವೈದ್ಯರ(ಸರಕಾರ) ಮುಂದೆ ಹೇಳದೆ ಇರುವುದರಿಂದ ಅದರ ನಾಶ ಸಾಧ್ಯವೆ? ಖಂಡಿತ ಇಲ್ಲ. ಬಾಬಾಸಾಹೇಬ್ ಅಂಬೇಡ್ಕರರ ಮಾತನ್ನು ಹೇಳುವುದಾದರೆ ಜಾತಿವ್ಯವಸ್ಥೆಗೆ ನೆಲೆಗಟ್ಟಾಗಿರುವ ಧಾರ್ಮಿಕ ಕಲ್ಪನೆ ಪರಿಕಲ್ಪನೆ ಗಳನ್ನು ಒಡೆದು ಪುಡಿಗಟ್ಟಿ ನಿರ್ನಾಮ ಮಾಡಬೇಕು. ಆಗ ಮಾತ್ರ ಜಾತಿ ವಿನಾಶ ಸಾಧ್ಯ. ಎಂತಹ great ಮಾತುಗಳು!

ಜಾತಿ ವ್ಯವಸ್ಥೆ ಎಂಬ ರೋಗ ನಾಶವಾಗ ಬೇಕಾದರೆ ಒಟ್ಟಾರೆ ಜಾತಿ ವಿನಾಶವಾಗ ಬೇಕಾದರೆ ಅದರ ಹಿಂದಿರುವ ಧಾರ್ಮಿಕ ಪರಿಕಲ್ಪನೆಗಳು, ಕಟ್ಟುಪಾಡುಗಳು, ನೀತಿ ನಿಬಂಧನೆಗಳು ನಾಶವಾಗಬೇಕು! ಸೆರೆಮನೆ ಯಿಂದ ಹೊರಬರಬೇಕಾದರೆ ಸೆರೆಮನೆಯ ಬೀಗ ತೆಗೆಯಬೇಕು ತಾನೆ? ಅಂಬೇಡ್ಕರರು ಹೇಳುವುದು ಅದನ್ನೆ. ಹಿಂದೂ ಧರ್ಮದಲ್ಲಿರುವ ಮೇಲು-ಕೀಳು, ಸ್ಪಶ್ಯ-ಅಸ್ಪಶ್ಯ, ಹೊರಗೆ- ಒಳಗೆ, ದೂರ-ಹತ್ತಿರ, ಮುಟ್ಟಿಸಿಕೊಳ್ಳದವರು- ಮುಟ್ಟಿಸಿಕೊಳ್ಳುವವರು ಇತ್ಯಾದಿ ಭೇದಗಳು ನಾಶವಾಗಬೇಕು. ಹಾಗೆ ಅದು ನಾಶವಾಗಬೇಕು ಎಂದಾಕ್ಷಣ ಅದು ಸುಮ್ಮನೆ ನಾಶವಾಗುತ್ತದೆಯೇ? 

ಊಹೂಂ, ಹೊರಗೆ ಇರುವವರು ಒಳಗೆ ಬರಲು ಪ್ರಯತ್ನಿಸಬೇಕು. ಮುಟ್ಟಿಸಿ ಕೊಳ್ಳದವರನ್ನು ಮುಟ್ಟಲು ಯತ್ನಿಸಬೇಕು. ದೂರ ಇರುವವರು ಹತ್ತಿರ ಬರಬೇಕು. ಕೆಳಗೆ ಇರುವವರು ಮೇಲೆ ಬರಬೇಕು! ಅಂದಹಾಗೆ ಇಂತಹ ಪ್ರಕ್ರಿಯೆಗಳನ್ನೇ ಪರಿವರ್ತನೆ ಎಂದು ಕರೆಯುವುದು! ಅಂತಹ ಪರಿವರ್ತನೆ ನಡೆಯುವಾಗ ಕೆಳಗೆ ಇರುವವರಿಗೆ ಮೇಲೆ ಬರಲು ಮೀಸಲಾತಿ ಎಂಬ ಹಗ್ಗ ಬೇಕಾಗುತ್ತದೆ! ದೂರ ಇರುವವರನ್ನು ಹತ್ತಿರ ತರಲು ವಿಶೇಷ ಸವಲತ್ತುಗಳ ವಾಹನ ಕಳುಹಿಸಲಾಗುತ್ತದೆ! ಹೊರಗೆ ಇರುವವರನ್ನು ಒಳಗೆ ಕರೆತರಲು ಸಂವಿಧಾನದಲ್ಲಿ ವಿಶೇಷ ವಿಧಿ ನಿಯಮಗಳನ್ನು ಅಳವಡಿಸಲಾಗುತ್ತದೆ. ತನ್ಮೂಲಕ ಜಾತೀಯತೆ ಎಂಬ ರೋಗವನ್ನು ನಾಶಪಡಿಸಲಾಗುತ್ತದೆ.

ಹೀಗಿರುವಾಗ ಮೀಸಲಾತಿ ನೀಡುವುದರಿಂದ ಜಾತೀಯತೆ ಹೆಚ್ಚಾಗುತ್ತದೆ ಎಂದರೆ, ವಿಶೇಷ ಸವಲತ್ತುಗಳನ್ನು ನೀಡುವುದರಿಂದ ತಾರತಮ್ಯ ಮಾಡಲಾಗುತ್ತದೆ ಎಂದರೆ, ಸಂವಿಧಾನದಲ್ಲಿ ವಿಶೇಷ ನಿಯಮಗಳ ಮೂಲಕ ಅಸಮಾನತೆ ಮಾಡಲಾಗುತ್ತದೆ ಎಂದರೆ, ಜಾತಿ ಎಂಬ ರೋಗ ಆ ಮೂಲಕ ಅಸ್ಪಶ್ಯತೆ ಎಂಬ ಮಹಾರೋಗದ ಮೂಲೋತ್ಪಾಟನೆ ಸಾಧ್ಯವೆ? 

1902 ಜುಲೈ, 26 (ಕೊಲ್ಲಾಪುರದ ಛತ್ರಪತಿ ಶಾಹುಮಹಾರಾಜರು ತಮ್ಮ ಸಂಸ್ಥಾನದಲ್ಲಿ ಶೂದ್ರಾತಿಶೂದ್ರರಿಗೆ ಶೇ.50 ಮೀಸಲಾತಿ ಜಾರಿ ಮಾಡಿದ ದಿನ)ರ ತನಕ ಈ ದೇಶದಲ್ಲಿ ಮೀಸಲಾತಿಯೂ ಇರಲಿಲ್ಲ,caste certificate  , ವಿಶೇಷ ವಿಧಿನಿಯಮ ಇತ್ಯಾದಿಗಳಾವವೂ ಇರಲಿಲ್ಲ. ಹಾಗಿದ್ದರೆ ಅಲ್ಲಿಯವರೆಗೆ ಈ ದೇಶ ಸರಿಯಾಗಿತ್ತು ಅಲ್ಲಿಂದಾಚೆಗೆ ಅಂದರೆ ಮೀಸಲಾತಿ ಜಾರಿಗೆ ಬಂದ ಸಮಯದಿಂದಾಚೆಗೆ ಜಾತೀಯತೆ ಎಂಬ ರೋಗ ಉಲ್ಬಣಿಸಿತೆಂದರ್ಥವೆ? ಖಂಡಿತ ಹಾಗೆಂದರೆ ಅದು ಹಾಸ್ಯಾಸ್ಪದವಾಗುತ್ತದೆ.

ಹಾಗೆ ಹೇಳುವುದಾದರೆ 1902 ಜುಲೈ 26 ಅದು ರೋಗಕ್ಕೆ ಔಷಧಿ ಕೊಡಲು ಪ್ರಾರಂಭವಾದ ದಿನ. ಮೀಸಲಾತಿ ಜಾರಿಗೆ ಬರುವ ಮೊದಲು ಮೇಲ್ಜಾತಿಗಳಿಗೆ ಅಂಟಿದ್ದ ಜಾತಿ ಎಂಬ ರೋಗ ದಿಂದ ಬಳಲುತ್ತಿದ್ದ ಕೆಳಜಾತಿಗಳು ಮೀಸಲಾತಿ ಜಾರಿಗೆ ಬಂದ ನಂತರ ತುಸು ಬಲಿತುಕೊಳ್ಳಲು ಆರಂಭಿಸಿವೆ. ಹಾಗೆಯೇ ಮೀಸಲಾತಿ ಮೂಲಕ ಜಾತೀಯತೆ ಎಂಬ ರೋಗದ ಪರಿಣಾಮದ ಅರಿವು ಅಥವಾ ನೋವು ಮೇಲ್ಜಾತಿಗಳಿಗೂ ಕೂಡ ತಾಕಲಾರಂಭಿಸಿದೆ! ಅಂದಹಾಗೆ ಅಂತಹ ನೋವು ಜಾಸ್ತಿ ಆದ ಹಾಗೆ ಮೇಲ್ಜಾತಿಗಳವರು ಏನು ಮಾಡುತ್ತಾರೆ?
ತಮಗಂಟಿರುವ ಜಾತೀಯತೆ ಎಂಬ ಆ ಜಾಡ್ಯವನ್ನು ಕಿತ್ತು ಬೀಸಾಡುತ್ತಾರೆ ತಾನೆ? ಖಂಡಿತ, ಅಂತಹ ಬೀಸಾಡುವ ಕಾಲ ಬರಬೇಕು. ಜಾತೀಯತೆ ಎಂಬ ರೋಗ ವಿನಾಶಗೊಂಡು ಮೇಲ್ಜಾತಿ, ಕೆಳಜಾತಿ ಒಟ್ಟಾರೆ ಎಲ್ಲಾ ಜಾತಿಗಳೂ ಮುಕ್ತವಾಗಿ ಪರಸ್ಪರ ಅರ್ಥಮಾಡಿಕೊಂಡು ಸಹಯೋಗದಿಂದ ಜೀವಿಸುವಂತಾಗಬೇಕು. ಪರಿಪೂರ್ಣ ಸಾಮಾಜಿಕ ಆರೋಗ್ಯವುಳ್ಳ ದೇಶ ನಮ್ಮದಾಗಬೇಕು ಎಬುದಷ್ಟೆ ಸದ್ಯದ ಕಳಕಳಿ.

Sunday, May 26, 2013

ಮಹೇಂದ್ರ ಕರ್ಮ ಮತ್ತು ಸುಪ್ರೀಂ ತೀರ್ಪುಡಿ. ಉಮಾಪತಿ


ಸೌಜನ್ಯ : ವಿಜಯ ಕರ್ನಾಟಕ

ಮೊನ್ನೆ ಛತ್ತೀಸ್‌ಗಢದಲ್ಲಿ ಹತನಾದ ಮಹೇಂದ್ರ ಕರ್ಮ ಎಂಬ ಆದಿವಾಸಿ ನಾಯಕ ಕೊಡಲಿಯ ಕಾವು ಕುಲಕ್ಕೆ ಮೃತ್ಯು ಎಂಬಂತೆ ಬದುಕಿದ್ದವನು. ದೇಶದ ಅತ್ಯುತ್ತಮ ಗುಣಮಟ್ಟದ ಕಬ್ಬಿಣದ ಅದಿರು ಮುಂತಾದ ಬೆಲೆ ಬಾಳುವ ಖನಿಜಗಳ ಭಾರೀ ನಿಕ್ಷೇಪದ ಮೇಲ್ಮೈನಲ್ಲಿ ಜೀವಿಸಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ವ್ಯವಸ್ಥೆಯ ಹುನ್ನಾರಗಳ ಕೈಯಲ್ಲಿನ ಸಾಧನವಾಗಿದ್ದ ಮಹೇಂದ್ರ ಕರ್ಮ.

ಒಂದೆಡೆ ಪ್ರಭುತ್ವದ ದಮನಕಾರಿ ಕ್ರಮಗಳು. ಮತ್ತೊಂದೆಡೆ ಮಾವೋವಾದಿಗಳ ನಡುವೆ ಸಿಕ್ಕಿ ನರಳುತ್ತಿರುವ ಆದಿವಾಸಿಗಳ ಬದುಕನ್ನು ಇನ್ನಷ್ಟು ದುರ್ಭರಗೊಳಿಸಲು ಸಾಲ್ವಾ ಜುದುಂ ಎಂಬ ಮಾವೋವಾದೀ ದಮನ ಸೇನೆಯನ್ನು ಹುಟ್ಟಿ ಹಾಕಿದವನು. ಈ ದಮನ ಸೇನೆಯನ್ನು ಛತ್ತೀಸ್‌ಗಢದ ಸರ್ಕಾರ ತನ್ನದೇ ಸೇನೆಯೆಂದು ದತ್ತು ತೆಗೆದುಕೊಂಡು ಬಂದೂಕು, ಸಂಬಳ-ಸಾರಿಗೆ ಕೊಟ್ಟು ಸಾಕಿತು. ಪ್ರಭುತ್ವದ ಅಂಗಗಳಾದ ಪೊಲೀಸು ಮತ್ತು ಸೇನೆಯ ಜೊತೆಗೆ ಕೈ ಜೋಡಿಸಿದ ಈ ದಮನ ಸೇನೆಯ ಎಲ್ಲ ಕಾಲಾಳುಗಳು ಅದೇ ಆದಿವಾಸಿಗಳು. ಆದಿವಾಸಿಗಳನ್ನು ಆದಿವಾಸಿಗಳಿಂದಲೇ ಬೇಟೆಯಾಡಿಸುವ ಅಮಾನವೀಯ ಕ್ರೌರ್ಯಕ್ಕೆ ಎರಡು ವರ್ಷಗಳ ಹಿಂದೆ ಪೂರ್ಣವಿರಾಮ ಹಾಕಿದ್ದು ಸುಪ್ರೀಂ ಕೋರ್ಟು.

ಸುಪ್ರೀಂ ಕೋರ್ಟು ನೀಡಿದ ತೀರ್ಪು ಆಳುವ ವರ್ಗಗಳು ಮತ್ತು ಆದಿವಾಸಿಗಳ ಬವಣೆಯ ಕುರಿತು ಕುರುಡಾಗಿರುವ ಈ ದೇಶದ ಮಧ್ಯಮ ವರ್ಗದ ಕಣ್ಣು ತೆರೆಸುವಂತಹುದು. ತಾನು ಹಚ್ಚಿದ ಬೆಂಕಿಗೆ ಮಹೇಂದ್ರ ಕರ್ಮ ತಾನೇ ಬಲಿಯಾದ ಈ ಹೊತ್ತಿನಲ್ಲಿ ಈ ತೀರ್ಪಿನ ಕೆಲ ಭಾಗಗಳನ್ನು ಮೆಲುಕು ಹಾಕುವುದು ಅತ್ಯಂತ ಪ್ರಸ್ತುತ. ಇಲ್ಲಿಂದ ಮುಂದಕ್ಕೆ ಬರೆದಿರುವುದೆಲ್ಲ ಸುಪ್ರೀಮ್ ಕೋರ್ಟ್‌ನ ತೀರ್ಪಿನ ಕೆಲ ಭಾಗಗಳ ನೇರ ಅನುವಾದವಲ್ಲದೆ ಇನ್ನೇನೂ ಅಲ್ಲ. ''ಪ್ರಭುತ್ವದ ಅಗಾಧ ಬಲದ ವಿರುದ್ಧ, ಜನ ಕಾರಣವೇ ಇಲ್ಲದೆ ಸುಮ್ಮಸುಮ್ಮನೆ ಬಂದೂಕು ಕೈಗೆ ಎತ್ತಿಕೊಳ್ಳುವುದಿಲ್ಲ. ದರಿದ್ರರು, ದುರ್ಬಲರು, ವಂಚಿತರನ್ನು ಬಗೆಬಗೆಯ ಅನ್ಯಾಯಗಳ ಸರಣಿಯೇ ಹುರಿದು ಮುಕ್ಕಿದಾಗ ಜನ ಬಂಡೇಳುತ್ತಾರೆ. ಛತ್ತೀಸ್‌ಗಢ ಸೀಮೆಯ ಬಹುಪಾಲು ಮಾವೋವಾದಿ ಚಟುವಟಿಕೆಯಿಂದ ಬಾಧಿತ ಎಂಬುದು ವ್ಯಾಪಕ ತಿಳಿವಳಿಕೆ. ಮಾವೋವಾದಿ ಬಂಡುಕೋರ ಚಟುವಟಿಕೆ ಮತ್ತು ಪ್ರಭುತ್ವ ಕೈಗೊಂಡ ಮಾವೋವಾದಿ ದಮನ ಕ್ರಮಗಳೆರಡರಿಂದಲೂ ಈ ಸೀಮೆಯ ಜನ ತೀವ್ರ ಸಂಕಟಕ್ಕೆ ಸಿಕ್ಕಿದ್ದಾರೆ. ಉಕ್ಕಿನ ಮುಷ್ಟಿಯಿಂದ ಆಳುವುದು, ಪ್ರತಿಯೊಬ್ಬ ವ್ಯಕ್ತಿಯನ್ನೂ ಅನುಮಾನದಿಂದ ಕಾಣುವ, ನಾಗರಿಕರ ಮಾನವೀಯ ಹಕ್ಕುಗಳ ಬಗೆಗೆ ದನಿಯೆತ್ತುವ ಯಾವನೇ ವ್ಯಕ್ತಿಯನ್ನು ಮಾವೋವಾದಿ ಎಂಬ ಗುಮಾನಿಯಿಂದ ನೋಡುವುದೊಂದೇ ತನಗಿರುವ ಆಯ್ಕೆ ಎಂದು ಛತ್ತೀಸ್‌ಗಢ ಸರ್ಕಾರ ಪದೇ ಪದೆ ನಮ್ಮ ಮುಂದೆ ಮಾಡಿಕೊಂಡಿರುವ ನಿವೇದನೆ ದುಪ್ಪಟ್ಟು ದಿಗ್ಭ್ರಾಂತಿ ಹುಟ್ಟಿಸುವಂತಹುದು.''

ಛತ್ತೀಸ್‌ಗಢ ಪ್ರಾಂತ್ಯದ ಹಲವು ಭಾಗಗಳಲ್ಲಿ ಪಿಡುಗಿನಂತೆ ಹಬ್ಬಿ ನೆಲೆಸಿರುವ ಅಮಾನವೀಯತೆಯನ್ನು ಪ್ರಶ್ನಿಸುವ ಯಾರೇ ಆದರೂ ಅವರು ಮಾವೋವಾದಿಗಳು, ಇಲ್ಲವೇ ಅವರ ಬಗೆಗೆ ಸಹಾನುಭೂತಿ ಉಳ್ಳವರು ಎಂದು ಪರಿಗಣಿಸಬೇಕು ಎಂದು ವಾದಿಸುವ ಛತ್ತೀಸ್‌ಗಢ ಸರ್ಕಾರ ಮತ್ತು ಈ ಸರ್ಕಾರದ ಪರವಾಗಿ ವಾದಿಸುವವರ ಕುರುಡುತನ ಹೆದರಿಕೆ ಹುಟ್ಟಿಸುತ್ತದೆ. ಒಂದೆಡೆ ಮಾವೋ ವಾದಿಗಳು-ನಕ್ಸಲೀಯರು, ಮತ್ತೊಂದೆಡೆ ಪ್ರಭುತ್ವ ಮತ್ತು ಅದರ ಕೆಲ ಏಜೆಂಟ್‌ಗಳಿಂದ ಛತ್ತೀಸ್‌ಗಢದ ಜನರ ನಾಗರಿಕ ಹಕ್ಕುಗಳು ವ್ಯವಸ್ಥಿತವಾಗಿ ದಮನಗೊಳ್ಳುತ್ತಿವೆ. ಹೀಗಾಗಿ ಸಮಸ್ಯೆ ಅಲ್ಲಿನ ಜನರಾಗಲೀ, ಇಲ್ಲವೇ ಅವರ ಸ್ಥಿತಿಗತಿಗಳನ್ನು ಪ್ರಶ್ನಿಸತೊಡಗಿರುವ ಸದುದ್ದೇಶದ ಚಿಂತನಶೀಲ ನ್ಯಾಯ ಪರರಾಗಲೀ ಅಲ್ಲ. ಅಸಲು ಸಮಸ್ಯೆ ಇರೋದು ಛತ್ತೀಸ್‌ಗಢ ಪ್ರಭುತ್ವ ಅನುಮೋದಿಸಿರುವ ಅನೈತಿಕ ರಾಜಕೀಯ ಅರ್ಥಸ್ಥಿತಿ ಮತ್ತು ಇಂತಹ ಅನರ್ಥ ಅರ್ಥಸ್ಥಿತಿ ಹುಟ್ಟುಹಾಕುವ ಕ್ರಾಂತಿಕಾರಕ ರಾಜಕಾರಣದಲ್ಲಿ.

ಇಂಡಿಯಾದ ಹಲವು ಭಾಗಗಳಲ್ಲಿ ಕಂಡುಬಂದಿರುವ ಹಿಂಸಾತ್ಮಕ ಆಂದೋಲನ ರಾಜಕಾರಣ ಮತ್ತು ಸಶಸ್ತ್ರ ಬಂಡಾಯ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳಿಗೂ, ತೀವ್ರ ಅಸಮಾನತೆಗಳಿಗೂ, ಇಂತಹ ಅಸಮಾನತೆಗಳನ್ನೇ ಭುಂಜಿಸಿ ಬದುಕುವ ಭ್ರಷ್ಟ ಸಾಮಾಜಿಕ ಮತ್ತು ಪ್ರಭುತ್ವ ವ್ಯವಸ್ಥೆಗೂ ಅತ್ಯಾಪ್ತ ಸಂಬಂಧಗಳಿವೆ ಎಂಬುದು ಚೆನ್ನಾಗಿಯೇ ಗುರುತಿಸಲಾಗಿರುವ ಸಂಗತಿ. ಈ ಸಂಬಂಧಗಳ ಕುರಿತು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಎಚ್ಚರಿಕೆ ನೀಡಲಾಗಿದೆ ಕೂಡ. ಯೋಜನಾ ಆಯೋಗ ರಚಿಸಿದ್ದ ತಜ್ಞರ ಸಮಿತಿಯೊಂದು ತೀವ್ರಗಾಮಿ ಬಾಧಿತ ಪ್ರದೇಶಗಳಲ್ಲಿ ಅಭಿವೃದ್ಧಿಯ ಸವಾಲುಗಳು ಎಂಬ ವಿಷಯ ಕುರಿತು ನೀಡಿರುವ ವರದಿಯ ಸಮಾಪ್ತಿಯ ಭಾಗದಲ್ಲಿರುವ ವಾಕ್ಯಗಳನ್ನು ಉಲ್ಲೇಖಿಸುವುದೇ ಆದರೆ-''ಸ್ವಾತಂತ್ರ್ಯಾನಂತರದಲ್ಲಿ ಅಳವಡಿಸಿ ಕೊಳ್ಳಲಾಗಿರುವ ಅಭಿವೃದ್ಧಿ ಮಾದರಿಯು ಸಮಾಜದ ಅಂಚಿನಲ್ಲಿ ಬದುಕಿರುವ ಜನವರ್ಗಗಳಲ್ಲಿನ ಹಾಲಿ ಅಸಂತೃಪ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ನೀತಿ ನಿರೂಪಕರು ನೀಡಿದ ಈ ಅಭಿವೃದ್ಧಿ ಮಾದರಿಯನ್ನು ಈ ಸಮುದಾಯಗಳ ಮೇಲೆ ಹೇರುತ್ತ ಬರಲಾಗಿದೆ. ಪರಿಣಾಮವಾಗಿ ಈ ಜನ ವರ್ಗಗಳಿಗೆ ದುರಸ್ತಿ ಮಾಡಲಾಗದಷ್ಟು ಹಾನಿ ತಟ್ಟಿದೆ. ಈ ಅಭಿವೃದ್ಧಿ ಮಾದರಿಗೆ ಬಹುತೇಕ ಬೆಲೆ ತೆತ್ತವರು ಬಡವರು. ಅವರ ಹಿತವನ್ನು ಬಲಿಗೊಟ್ಟು ಬಲಾಢ್ಯ ಜನವರ್ಗಗಳು ಈ ಅಭಿವೃದ್ಧಿ ಮಾದರಿಯ ಲಾಭಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಕಬಳಿಸಿದೆ. ಬಡ ಜನವರ್ಗಗಳ ಅಗತ್ಯಗಳ ಕುರಿತು ದಪ್ಪಚರ್ಮ ಬೆಳೆಸಿಕೊಂಡ ಅಭಿವೃದ್ಧಿ ಮಾದರಿಯು ಈ ಜನವರ್ಗಗಳನ್ನು ಒಕ್ಕಲೆಬ್ಬಿಸಿದ್ದು ಅವರನ್ನು ನಿಕೃಷ್ಟ ಬದುಕಿಗೆ ತಳ್ಳಿದೆ. ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗಗಳ ಕುರಿತು ಹೇಳುವುದಾದರೆ, ಈ ಅಭಿವೃದ್ಧಿ ಮಾದರಿಯು ಈ ಸಮುದಾಯಗಳ ಸಾಮಾಜಿಕ ಸಂಘಟನೆಯನ್ನು, ಸಾಂಸ್ಕೃತಿಕ ಅಸ್ಮಿತೆಯನ್ನು ಹಾಗೂ ಸಂಪನ್ಮೂಲ ನೆಲೆಯನ್ನು ನಾಶ ಮಾಡಿದೆ. ಪರಿಣಾಮವಾಗಿ ಈ ಸಮುದಾಯಗಳು ಶೋಷಣೆಗೆ ಹೆಚ್ಚು ಹೆಚ್ಚು ಪಕ್ಕಾಗುವಂತೆ ಆಗಿದೆ. ಜೀವಿ ಮತ್ತೊಂದು ಜೀವಿಯನ್ನು ಕಬಳಿಸುವ ಲಾಲಸೆಕೋರ ಹಪಾಹಪಿಯ (್ಕಠ್ಚಜಿಟ್ಠ) ಕಾಂಟ್ರ್ಯಾಕ್ಟರುಗಳು, ಮಧ್ಯವರ್ತಿಗಳು, ವರ್ತಕರು ಹಾಗೂ ಸಮಾಜದ ಇತರೆ ಆಶೆಬುರುಕ ವರ್ಗಗಳು ಆದಿವಾಸಿಗಳ ಸಂಪನ್ಮೂಲಗಳನ್ನು ಕಸಿದುಕೊಂಡು ಅವರ ಬದುಕಿನ ಘನತೆಯನ್ನು ಉಲ್ಲಂಘಿಸಿವೆ.''

ಸರ್ಕಾರಿ ವರದಿಗಳು ವಾಸ್ತವ ಸ್ಥಿತಿಯನ್ನು ತಗ್ಗಿಸಿ ತೆಳುವಾಗಿಸಿ ಹೇಳುವುದೇ ಸಾಮಾನ್ಯ ರೂಢಿ. ಆದರೆ ಭಾರತ ಸರ್ಕಾರದ ಯೋಜನಾ ಆಯೋಗ ರಚಿಸಿದ ತಜ್ಞರ ಸಮಿತಿಯೊಂದು ಕೊನೆಯಿಲ್ಲದ ದುರಾಶೆಯನ್ನು ತಣಿಸಿಕೊಳ್ಳಲೋಸುಗ ಮತ್ತೊಂದು ಜೀವಿಯನ್ನು ಕೊಲ್ಲುವುದು ಎಂಬ ಅರ್ಥ ಬರುವ '್ಕಠ್ಚಜಿಟ್ಠ' ಶಬ್ದವನ್ನು ಬಳಸಿದೆ. ನಮ್ಮ ಬಹುಸಂಖ್ಯೆಯ ಸಹ ದೇಶವಾಸಿಗಳು ಅನುಭವಿಸುತ್ತಿರುವ ಮೇರೆಯಿಲ್ಲದ ಕಷ್ಟ ಕಾರ್ಪಣ್ಯಗಳ ಸೂಚಕ ಈ ಪದ. ತಜ್ಞರ ಸಮಿತಿಯ ಇಂತಹ ವರದಿಯ ಬುದ್ಧಿಮಾತುಗಳಿಗೆ ಭಾರತ ಸರ್ಕಾರ ಕಿವುಡು ಎನ್ನುವ ನ್ಯಾಯಾಲಯ ತಜ್ಞರ ಸಮಿತಿಯು ಬುದ್ಧಿಮಾತುಗಳನ್ನು ಉಲ್ಲೇಖಿಸಿದೆ-


 ದೇಶದ ನಾನಾ ಭಾಗಗಳಲ್ಲಿ ನೆಲೆಸಿರುವ ಸಾಮಾಜಿಕ-ಆರ್ಥಿಕ ಸನ್ನಿವೇಶವೇ ನಕ್ಸಲೀಯ ಆಂದೋಲನ ಇಲ್ಲವೇ ಇತರೆ ಹಿಂಸಾತ್ಮಕ ರೂಪಗಳಿಗೆ ಕಾರಣವಾಗಿದೆ. ಈ ತ್ವೇಷಗಳನ್ನು ಸಾಮಾಜಿಕ-ಆರ್ಥಿಕ- ರಾಜಕೀಯ ಸಂದರ್ಭಗಳಲ್ಲಿ ಇಟ್ಟು ಘನತೆ ಗೌರವದ ಬದುಕನ್ನು ಕಲ್ಪಿಸಿಕೊಡುವ ಜೀವನೋಪಾಯದ ಹಕ್ಕು, ಪ್ರಾಣದ ಹಕ್ಕಿನಂತಹ ಜನಪರ ಇಶ್ಯೂಗಳ ಕಾರ್ಯಸೂಚಿಯನ್ನು ಕಾರ್ಯಸೂಚಿಯ ಮುನ್ನೆಲೆಗೆ ತರಬೇಕು. ತೀವ್ರಗಾಮಿ ಆಂದೋಲನ ಹಾಗೂ ಬಡತನದ ನಡುವೆ ಮತ್ತು ಅರಣ್ಯಗಳು ಹಾಗೂ ಅರಣ್ಯವಾಸಿಗಳ ನಡುವೆ ನೇರ ಆಳ ಸಂಬಂಧವಿದೆ. ಒಕ್ಕಲೆಬ್ಬಿಸುವ ನೀತಿಯಿಂದ ಆದಿವಾಸಿಗಳು ಗಿರಿಜನರು ಕಾರ್ಪಣ್ಯಗಳ ಸರಣಿಗೆ ಬಿದ್ದು ಬೇಯುತ್ತಾರೆ ಎಂದು ಸರ್ಕಾರದ ನೀತಿ ನಿರೂಪಕ ದಾಖಲೆ ದಸ್ತಾವೇಜುಗಳು ಸಾರುತ್ತವೆ. ಆದರೆ ಸರ್ಕಾರಗಳು ಈ ಕ್ಷೋಭೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದೇ ಬಗೆದು ಭಿನ್ನಮತವನ್ನೂ, ಅಸಂತೃಪ್ತಿಯನ್ನೂ ಜನತಂತ್ರದ ಸಕಾರಾತ್ಮಕ ಅಂಶವೆಂದು ಪರಿಗಣಿಸದೆ ದಮನ ಮಾಡುತ್ತಿವೆ. ಈ ಮನಸ್ಥಿತಿ ಬದಲಾಗಬೇಕು. ಬಡಜನರ ಸಿಟ್ಟು, ಅಶಾಂತಿಯನ್ನು ಎದುರಿಸಲು ಅದೇ ಬಡಜನರ ಮಕ್ಕಳ ಕೈಗೆ ಬಂದೂಕನ್ನು ನೀಡುತ್ತಿದೆ ಪ್ರಭುತ್ವ. ಕಾಳ್ಗಿಚ್ಚನ್ನು ಪ್ರತಿ ಕಿಚ್ಚನ್ನು ಹಚ್ಚಿ ಅಡಗಿಸುವುದು ಅರಣ್ಯದಲ್ಲಿ ಸಾಧ್ಯ. ಆದರೆ ಸಮಾಜ ಅರಣ್ಯ ಅಲ್ಲ. ಮನುಷ್ಯರೆಂದರೆ ಹುಲ್ಲಿನ ಒಣ ಹುಲ್ಲಿನ ಎಸಳುಗಳಲ್ಲ. ಸ್ವತಂತ್ರ ಚೇತನಗಳು. ಕೈಗೆ ಬಂದೂಕಿತ್ತ ಗುಂಪುಗಳು ಇತರೆ ನಾಗರಿಕರ ವಿರುದ್ಧ, ಆನಂತರ ಪ್ರಭುತ್ವದ ವಿರುದ್ಧವೇ ತಿರುಗಿ ಬಿದ್ದಿರುವ ಉದಾಹರಣೆಗಳು ಇತಿಹಾಸದಲ್ಲಿ ಹೇರಳ.

ಹಿಂಸೆಯ ಬರ್ಬರ ಮುಖ
- ಸನತ್‌ಕುಮಾರ ಬೆಳಗಲಿತಮ್ಮ ಹಿಂಸೆಯ ಕೆಂದಾವರೆಯ ಮಾಲೆಗೆ ಇನ್ನೊಂದು ಕೆಂಪು ಹೂವನ್ನು ಜೋಡಿಸಿದ್ದಾರೆ ನಕ್ಸಲೀಯರು. ಛತ್ತೀಸಗಡದಲ್ಲಿ ಕಾಂಗ್ರೆಸ್ ರ್ಯಾಲಿಯ ಮೇಲೆ ನಡೆದಿರುವ ನಕ್ಸಲ್ ದಾಳಿ ಅತ್ಯಂತ ಬರ್ಬರವಾಗಿದೆ. ಈ ದಾಳಿಗೆ ಉಗ್ರವಾದಿಗಳು ಯಾವ ಸಮರ್ಥನೆಯನ್ನೇ ನೀಡಲಿ, ಮನುಷ್ಯರೆನಿಸಿಕೊಂಡವರು ಈ ಸಮರ್ಥನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈಶಾನ್ಯ ಭಾಗದಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ಹಿಂಸೆ ಮತ್ತು ಹೆಣಗಳ ಕೊಡು-ಕೊಳ್ಳುವಿಕೆ ನಡೆಯುತ್ತಿದೆ. ಪೊಲೀಸರ ದಾಳಿ ಅದಕ್ಕೆ ಸೇಡಿನ ರೂಪದಲ್ಲಿ ನಕ್ಸಲರ ಪ್ರತಿದಾಳಿ- ಇದು ನಿರಂತರವಾಗಿ ನಡೆದು ಬರುತ್ತಲೇ ಇದೆ. ಅದರ ಇನ್ನೊಂದು ಭೀಕರ ಮುಖ ನಿನ್ನೆ ತೆರೆದುಕೊಂಡಿದೆ. ಛತ್ತೀಸ್‌ಘಡದ ಬಸ್ತಾರ್ ಜಿಲ್ಲೆಯ ದರ್ಬಾಘಾಟ್ ಬಳಿಯ ಜಗದಾಲ್ಪುರದಲ್ಲಿ ಕಾಂಗ್ರೆಸ್‌ನ ಪರಿವರ್ತನ ರ್ಯಾಲಿಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ತಂಡದ ಮೇಲೆ ನಕ್ಸಲರು ಈ ಬಾರಿ ಬರ್ಬರ ದಾಳಿ ನಡೆಸಿದ್ದಾರೆ. 
 
ಸುಮಾರು 27 ಮಂದಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕರು ಈ ದಾಳಿಗೆ ಬಲಿಯಾಗಿದ್ದರೆ, ಮಾಜಿ ಸಚಿವ ವಿ.ಸಿ.ಶುಕ್ಲಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಓರ್ವ ಶಾಸಕನೂ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಬಹುಶಃ ನಕ್ಸಲರ ದಾಳಿಯಲ್ಲೇ ಅತ್ಯಂತ ಬರ್ಬರ ದಾಳಿ ಇದಾಗಿದೆ.ಈವರೆಗೆ ನಕ್ಸಲರು ಮತ್ತು ಪೊಲೀಸರ ನಡುವೆ ಮುಖಾಮುಖಿ ನಡೆಯುತ್ತಿತ್ತು. ಈ ಮುಖಾಮುಖಿಯಲ್ಲಿ ಜನಸಾಮಾನ್ಯರೂ ಬಲಿಯಾಗುತ್ತಿದ್ದರು. 

2007ರಲ್ಲಿ ನಡೆದ ದಾಂತೆವಾಡ ದಾಳಿಗೆ 25 ಮಂದಿ ಬಲಿಯಾಗಿದ್ದರು. 2008ರಲ್ಲಿ ಒಡಿಶಾದಲ್ಲಿ ನಕ್ಸಲರು ನಡೆಸಿದ ದಾಳಿಗೆ 21 ಪೊಲೀಸರು ಮೃತಪಟ್ಟಿದ್ದಾರೆ. 2009ರಲ್ಲಿ ಪೊಲೀಸ್ ಠಾಣೆಗೆ ನುಗ್ಗಿ 17 ಪೊಲೀಸರನ್ನು ನಕ್ಸಲರು ಕೊಂದು ಹಾಕಿದ್ದರು. 2010ರಲ್ಲಿ 24ಮಂದಿ ಯೋಧರ ಹತ್ಯೆ, ಹಾಗೆಯೇ ಛತ್ತೀಸ್‌ಗಡ ದಾಂತೆವಾಡದಲ್ಲಿ 76 ಮಂದಿ ಪೊಲೀಸರ ಹತ್ಯೆಗಳೂ ಹಸಿಯಾಗಿವೆ. ಇದೀಗ ನಕ್ಸಲರ ದಾಳಿಯ ದಿಕ್ಕು, ಗುರಿ ಬದಲಾಗಿದೆ.

ಈ ಬಾರಿ ಅವರು, ಗ್ರಾಮಸ್ಥರನ್ನಾಗಲಿ, ಪೊಲೀಸರನ್ನಾಗಲಿ ಬಲಿ ಮಾಡದೆ, ನೇರ ರಾಜಕೀಯ ನಾಯಕರತ್ತ ನುಗ್ಗಿದ್ದಾರೆ. ಮಾಜಿ ಸಚಿವರನ್ನು, ಹಾಲಿ ಶಾಸಕರನ್ನು ಬರ್ಬರವಾಗಿ ಕೊಂದು ಹಾಕಿದ್ದಾರೆ. ಈ ದಾಳಿಯಿಂದಾಗಿ, ಛತ್ತೀಸ್‌ಗಡದಲ್ಲಿ ನಕ್ಸಲರು ಅದೆಷ್ಟು ಪ್ರಬಲರಾಗಿದ್ದಾರೆ ಮತ್ತು ಅಲ್ಲಿನ ಸರಕಾರ ಅದೆಷ್ಟು ದುರ್ಬಲವಾಗಿದೆ ಎನ್ನುವುದು ಸಾಬೀತಾಗಿದೆ. ಜೊತೆಗೆ, ದಾಳಿಯ ಮೂಲಕವೇ ನಕ್ಸಲರನ್ನು ಬಗ್ಗು ಬಡಿಯುತ್ತೇವೆ ಎನ್ನುವ ಕೇಂದ್ರ ಗೃಹಸಚಿವರ ಹೇಳಿಕೆಗಳಿಗೆ ಈ ಘಟನೆ ಭಾರೀ ಹಿನ್ನಡೆಯೂ ಆಗಿದೆ.

ಇಡೀ ದಾಳಿಯನ್ನು ಗಮನಿಸಿದಾಗ, ನಕ್ಸಲರು ಒಬ್ಬ ಪ್ರಮುಖ ವ್ಯಕ್ತಿಯನ್ನು ತಮ್ಮ ದಾಳಿಗೆ ಗುರಿಯಾಗಿಸಿದ್ದರೇನೋ ಎಂದೆನಿಸು ತ್ತದೆ. ಆ ವ್ಯಕ್ತಿಯ ಹೆಸರು ಮಹೇಂದ್ರ ಕರ್ಮಾ. ಯಾಕೆಂದರೆ, ಸಲ್ವಾಜುಡುಂನ ಸ್ಥಾಪನೆಯಲ್ಲಿ ಕರ್ಮಾರ ಪಾತ್ರ ಬಹು ದೊಡ್ಡದಿತ್ತು. ಒಂದು ರೀತಿಯಲ್ಲಿ ಸಲ್ವಾ ಜುಡುಂನ ಸ್ಥಾಪಕರೇ ಮಹೇಂದ್ರ ಕರ್ಮಾ. ನಕ್ಸಲೀಯರ ವಿರುದ್ಧ ಸ್ಥಳೀಯ ಗ್ರಾಮಸ್ಥರನ್ನು ಸಂಘಟಿಸಿ, ಅವರನ್ನು ಎತ್ತಿ ಕಟ್ಟುವ ಕೆಲಸದ ಇನ್ನೊಂದು ಹೆಸರೇ ಸಲ್ವಾಜುಡುಂ. ಸಾಧಾರಣವಾಗಿ ನಕ್ಸಲರ ವಿರುದ್ಧ ಹೋರಾಡುವವರು ಪೊಲೀಸರು. 

ಆದರೆ, ಪೊಲೀಸರಿಗೆ ಸ್ಥಳೀಯ ಪರಿಸರ, ನಕ್ಸಲರ ಚಟುವಟಿಕೆ ತೀರಾ ಅಪರಿಚಿತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಲ್ವಾಜುಡುಂ ಸ್ಥಾಪಿಸಿ, ಸ್ಥಳೀಯ ಸೇನೆಯೊಂದನ್ನು ಕಟ್ಟಿ, ನಕ್ಸಲರನ್ನು ಬಗ್ಗು ಬಡಿಯುವ ಯೋಜನೆಯನ್ನು ಹಾಕಿಕೊಟ್ಟವರು ಕರ್ಮಾ. ಇದೊಂದು ರೀತಿಯಲ್ಲಿ ಮಾನವ ಹಕ್ಕು ಉಲ್ಲಂಘನೆಯೂ ಆಗಿತ್ತು. ಸ್ಥಳೀಯ ಜನರು ಸಲ್ವಾಜುಡುಂಗೆ ಸೇರದೇ ಇದ್ದರೆ ಅವರನ್ನು ನಕ್ಸಲರೆಂದು ಪರಿಗಣಿಸಿ, ಪೊಲೀಸರು ಹಿಂಸಿಸುತ್ತಿದ್ದರು. ಸಲ್ವಾಜುಡುಂಗೆ ಸೇರಿದರೆ, ನಕ್ಸಲೀಯರಿಂದ ಹಲ್ಲೆಗೀಡಾಗುತ್ತಿದ್ದರು. ಸಲ್ವಾಜುಡುಂನಿಂದಾಗಿ, ಛತ್ತೀಸ್‌ಗಢವನ್ನು ಇನ್ನಷ್ಟು ನರಕಸದೃಶ ಮಾಡಿದ ಹೆಗ್ಗಳಿಕೆ ಕರ್ಮಾರಿಗೆ ಸೇರಬೇಕು. ನಕ್ಸಲರೂ ಇದರಿಂದ ಸಾಕಷ್ಟು ಹಿಂಸೆಯನ್ನು ಅನುಭವಿಸಬೇಕಾಯಿತು. 

ಗ್ರಾಮಸ್ಥರೇ ಅವರಿಗೆ ಎದುರು ನಿಲ್ಲುವಂತಹ, ಅಥವಾ ಪೊಲೀಸರು ಗ್ರಾಮಸ್ಥರನ್ನು ಗುರಾಣಿಯಾಗಿ ಬಳಸಿಕೊಂಡು ನಕ್ಸಲರನ್ನು ಮಟ್ಟ ಹಾಕುವಂತಹ ಸನ್ನಿವೇಶ ನಿರ್ಮಾಣವಾಯಿತು. ಇದರಿಂದಾಗಿ ನಕ್ಸಲರು ಕರ್ಮಾ ವಿರುದ್ಧ ಬೆಂಕಿಯಾಗಿದ್ದರು. ಅವರನ್ನು ಕೊಂದು ಹಾಕಲು ಹಲವು ಬಾರಿ ಪ್ರಯತ್ನ ನಡೆದಿತ್ತು. 2012ರ ನವೆಂಬರ್‌ನಲ್ಲಿ ನಡೆದ ದಾಳಿಯಲ್ಲಿ ಕರ್ಮಾ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಇದೀಗ ನಿನ್ನೆಯ ದಾಳಿಯಲ್ಲಿ ಅವರು ಮಾತ್ರವಲ್ಲ, ಅವರೊಂದಿಗೆ ಕಾಂಗ್ರೆಸ್‌ನ ಪ್ರಮುಖ ಮುಖಂಡರನ್ನು, ಕಾರ್ಯಕರ್ತರನ್ನು ನಕ್ಸಲರು ಬಲಿ ತೆಗೆದುಕೊಂಡರು.

ಜನಪ್ರತಿನಿಧಿಗಳಿಗೆ ನಕ್ಸಲರಿಂದ ಭದ್ರತೆಯಿಲ್ಲ ಎಂದ ಮೇಲೆ, ಇನ್ನು ಅಲ್ಲಿನ ಜನರ ಪಾಡೇನು? ನಿನ್ನೆಯ ಬರ್ಬರ ಘಟನೆ ಇಂತಹದೊಂದು ಪ್ರಶ್ನೆಯನ್ನು ಎತ್ತಿದೆ. ಕಾಂಗ್ರೆಸ್‌ನ ನಾಯಕರಲ್ಲಿ ಹಲವರು ನಕ್ಸಲೀಯರ ಕೆಂಗಣ್ಣಿಗೆ ಪಾತ್ರರು ಎನ್ನುವುದು ತಿಳಿದಿದ್ದೂ ರಾಜ್ಯ ಸರಕಾರ ಭದ್ರತೆಯನ್ನು ನಿರ್ಲಕ್ಷಿಸಿತೇಕೆ? ಈ ಮೂಲಕ, ಅಲ್ಲಿನ ಸರಕಾರ ನಕ್ಸಲರ ವಿರುದ್ಧ ತನ್ನ ಅಸಹಾಯಕತೆಯನ್ನು ತೋರ್ಪಡಿಸಿದೆಯೇ? ಎಂಬೆಲ್ಲ ಪ್ರಶ್ನೆಗಳು ಪುಂಖಾನುಪುಂಖವಾಗಿ ಹುಟ್ಟುತ್ತವೆ. 

ಈ ಹತ್ಯಾಕಾಂಡಕ್ಕಾಗಿ ಅಲ್ಲಿನ ಸರಕಾರ ಸೂಕ್ತ ಬೆಲೆಯನ್ನು ತೆರಲೇಬೇಕಾಗಿದೆ. ಛತ್ತೀಸ್‌ಗಢದ ಜನರ ಆತ್ಮವಿಶ್ವಾಸದ ಪ್ರಶ್ನೆ ಇದಾಗಿರುವುದರಿಂದ, ಮುಖ್ಯಮಂತ್ರಿ ರಾಜೀನಾಮೆ ನೀಡುವುದು ಅತ್ಯಗತ್ಯ. ಹಾಗೆಯೇ ಹಿಂಸೆ-ಪ್ರತಿಹಿಂಸೆಯಿಂದ ನಕ್ಸಲ್ ಸಮಸ್ಯೆ ಪರಿಹಾರ ಆಗದು ಎನ್ನುವುದನ್ನು ಸರಕಾರ ಒಪ್ಪಿಕೊಳ್ಳಲೇಬೇಕಾಗಿದೆ. ಹಿಂಸೆ ಯಾಚೆಗಿನ ಹೊಸ ದಾರಿಯನ್ನು ಕಂಡು ಕೊಳ್ಳುವುದಕ್ಕೂ ನಿನ್ನೆಯ ಘಟನೆ ರಾಜ್ಯ ಸರಕಾರಕ್ಕೂ, ಕೇಂದ್ರ ಸರಕಾರಕ್ಕೂ ಪ್ರೇರಣೆ ನೀಡಬೇಕಾಗಿದೆ.

2013 : ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

https://mail-attachment.googleusercontent.com/attachment/?ui=2&ik=64db019aae&view=att&th=13de53533710bcd4&attid=0.3&disp=inline&realattid=f_hf8e1ed02&safe=1&zw&saduie=AG9B_P_apJ-8s6ZpZQ22vq2XigUY&sadet=1369632629941&sads=jpxM-EOs6uc91OMLAhmLPmnFv24&sadssc=1


ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2013′ ಕ್ಕಾಗಿ ಕನ್ನಡದ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಈ ಪ್ರಶಸ್ತಿಯು ರೂ.5000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದಗ ದ ಲಡಾಯಿ ಪ್ರಕಾಶನದಿಂದ ಪ್ರಕಟಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾಗುವುದು. ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ; ಜೂನ 30.
ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ.
ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ; ಪ್ರಕಾಶ ಮತ್ತು ಸುನಂದಾ ಕಡಮೆ, ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-2013, ನಂ. 90, ‘ನಾಗಸುಧೆ’ ಮಹಡಿ, 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ- 580031, ದೂರವಾಣಿ; 0836-2376826, 9845779387.

ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ « ಅವಧಿ / avadhi

ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ « ಅವಧಿ / avadhi

Friday, May 24, 2013

ವಚನಗಳಲ್ಲಿ ಆಧ್ಯಾತ್ಮಿಕತೆ ಮತ್ತು ಸಾಮಾಜಿಕತೆ- 2ಎಚ್.ಎಸ್.ಶಿವಪ್ರಕಾಶ್

ಸೌಜನ್ಯ : ಪ್ರಜಾವಾಣಿಬಾಲಗಂಗಾಧರ ಅವರ ಚರ್ಚಿತ ಲೇಖನದಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದಾರೆ: ವಚನಗಳನ್ನು ಜಾತಿ ವಿರೋಧಿ ಹೇಳಿಕೆಗಳಾಗಿ ನೋಡದೆ ಆಧ್ಯಾತ್ಮಿಕ ಸಾಹಿತ್ಯವೆಂದು ನೋಡಿದಾಗ ನಮ್ಮ ಗೊಂದಲಗಳು ಕೊನೆಯಾಗುತ್ತವೆ.ಆಧ್ಯಾತ್ಮಿಕತೆಯ ಕುರಿತು ತಮ್ಮ ಗ್ರಹಿಕೆಗಳನ್ನೂ ಅವರು ಸಂಕ್ಷಿಪ್ತವಾಗಿದ್ದರೂ ಸ್ಪಷ್ಟವಾಗಿ ಅದೇ ಬರಹದಲ್ಲಿ ಮಂಡಿಸಿದ್ದಾರೆ.
ವಚನಗಳು ಆಧ್ಯಾತ್ಮಿಕ ಸಾಧನೆಯ ಹಲಮಜಲುಗಳನ್ನು ಅಭಿವ್ಯಕ್ತಿಸುವುದರಿಂದ ಅವುಗಳ ಆಧ್ಯಾತ್ಮಿಕತೆಯ ಬಗ್ಗೆ ಎರಡನೆಯ ಮಾತಿಲ್ಲ. ವಚನಗಳ ಮನೋವೈಜ್ಞಾನಿಕ, ಸಾಮಾಜಿಕ, ರಾಜಕೀಯ ಅರ್ಥಗಳನ್ನು ಅರಸುವ ಆತುರದಲ್ಲಿ ಅವುಗಳ ಮೂಲಭೂತ ಆಧ್ಯಾತ್ಮಿಕ ಒತ್ತನ್ನು ನಾವು ಮರೆತಿರುವುದು ನಿಜ. ಆದರೆ ವಚನಕಾರರು ಆಚರಿಸಲಿಚ್ಛಿಸಿದ ಆಧ್ಯಾತ್ಮಿಕತೆ ಯಾವುದು?

ಆಧ್ಯಾತ್ಮಿಕತೆಗೆ ಸಮಾನಾರ್ಥ ಪದಗಳಾದ ಪರಮಾರ್ಥ, ಆತ್ಮವಿದ್ಯೆ, ಬ್ರಹ್ಮವಿದ್ಯೆ ಎಂಬ ಪದಗಳಿಗೆ ಬದಲಾಗಿ ವಚನಕಾರರು  `ಅನುಭಾವ'  ಎನ್ನುವ ಪದವನ್ನು ಬಳಸಿದರು. ಇದೇ ಶಬ್ದ ಸಂಸ್ಕೃತದಲ್ಲಿ ರಸಾನುಭವದ ವಿವರಣೆಯ ಸಂದರ್ಭದಲ್ಲಿ ಬಳಕೆಯಾಗಿದೆ ನಾಟ್ಯಶಾಸ್ತ್ರದಲ್ಲಿ. ಆದರೆ ವಚನಕಾರರು ತಮ್ಮ ವಿಶಿಷ್ಟ ಆಧ್ಯಾತ್ಮಿಕ ಅನುಭೂತಿಯನ್ನು ಸೂಚಿಸಲು ಅನುಭಾವವೆಂಬ ವಿಶಿಷ್ಟಪದವನ್ನು ಬಳಸಿದ್ದಾರೆ. ಹಾಗೆಯೇ ವಚನಕಾರರು ಆಧ್ಯಾತ್ಮಿಕ ಅನುಭವವನ್ನು ನಿರ್ವಚಿಸಿದ ಬಗೆಯೂ ವಿಶಿಷ್ಟವಾದುದು. ಈ ದೃಷ್ಟಿಯಿಂದ ಅವರು ವೇದ, ಪುರಾಣ, ಆಗಮಗಳಿಗಿಂತಲೂ, ಅಡವಿ-ಗಿರಿ-ಗಹ್ವರಗಳಲ್ಲಿ ಅಡಗಿಕೂರುವ ಸಮಣಧರ್ಮಗಳಿಗಿಂತಲೂ, ಕೇವಲ ಮಲಮೂತ್ರಗಳನ್ನು ಭುಂಜಿಸುವ ಅಧೋಗತಿಗಿಳಿದಿದ್ದ ತಾಂತ್ರಿಕ ಪಂಥಗಳಿಗಿಂತಲೂ, ಮಡಕೆ, ಮೊರ,ಅಂತರ, ಬೆಂತರ, ಕೇತರಗಾವಿಲ, ಕಾಳಯ್ಯ, ಧೂಳಯ್ಯ ಮುಂತಾದ ಜನಪದ ದೈವಗಳನ್ನು ಪೂಜಿಸುವ ಧಾರ್ಮಿಕತೆಗಿಂತಲೂ ಭಿನ್ನವಾದ ಆಧ್ಯಾತ್ಮಿಕ ದೃಷ್ಟಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮದಲ್ಲದ ಸ್ಥಾವರಲಿಂಗಪೂಜಕ ಶೈವಧರ್ಮವನ್ನೂ ಕಟುವಾಗಿ ಟೀಕಿಸಿದ ಉದಾಹರಣೆಗಳುಂಟು. ಈ ವಿಶಿಷ್ಟ ಗ್ರಹಿಕೆಯಿಂದ ಪ್ರಕಟವಾಗುವ ಸಾಮಾಜಿಕ ಅರ್ಥಗಳೂ ಭಿನ್ನವಾದವು.

ಚನ್ನಬಸವಣ್ಣ ಮುಂತಾದ ಕೆಲವರು ವಚನಕಾರರಲ್ಲಿ ಮಾತ್ರ ಮುನ್ನೆಲೆಗೆ ಬಂದು, ಸಂಗೋಪನಕಾಲದಲ್ಲಿ ಅಧಿಕ ಪ್ರಾಶಸ್ತ್ಯ ಪಡೆದ ಷಟ್‌ಸ್ಥಲ ಮಾರ್ಗವೊದಕ್ಕೇ ಶರಣರ ಆಧ್ಯಾತ್ಮಿಕತೆಯನ್ನು ಇಳಿಸಲಾಗುವುದಿಲ್ಲ. ಪರಧನದ ಲೂಟಿಯ ಮೇಲೆ ನಿಂತ ದಾನ-ಧರ್ಮ ಸಿದ್ಧಾಂತಗಳಿಗೆ ಹೊರತಾದ ಕಾಯಕ-ದಾಸೋಹ ಕಲ್ಪನೆಗಳೂ ಶರಣಪಥದ ಜೀವದ್ರವ್ಯಗಳು. ಅಷ್ಟೇ ಪ್ರಮುಖವಾದುದು ವಾಗದ್ವೈತಕ್ಕೆ ಹೊರತಾದ ನಡೆ-ನುಡಿಗಳ ಐಕ್ಯತೆ.

ಆಧ್ಯಾತ್ಮಿಕ ಪಂಥಗಳು ವೈವಿಧ್ಯಪೂರ್ಣವಾಗಿದ್ದವೆಂಬುದನ್ನು ಪ್ರೊ.ಬಾಲಗಂಗಾಧರರು ಒಪ್ಪುತ್ತಾರೆ. ಆದರೆ ಅವೆಲ್ಲವುಗಳ ಗುರಿ ಸತ್ಯವೆನ್ನುತ್ತಾರೆ. ಆದರೆ ಸತ್ಯದ ಹುಡುಕಾಟ ಬರೀ ಆಧ್ಯಾತ್ಮವಾದಿಗಳ ಕಾಳಜಿ ಯಾಕಾಗಬೇಕು? ಬೇಂದ್ರೆ ಹೇಳಿದ ಹಾಗೆ: `ಒಂದೆ ಸತ್ಯವನು ಎಲ್ಲ ಕಾಣುವರು ಭಿನ್ನ ದೇಹಿಯಾಗಿ/ಯಾರೊ ಯೋಗದಲಿ, ಯಾರೊ ಭೋಗದಲಿ, ಯಾರೊ ರೋಗಿಯಾಗಿ'. 

ಆಧ್ಯಾತ್ಮಿಕತೆಯನ್ನೊಪ್ಪದ ಅಂದಿನ ಲೋಕಾಯತರು, ಭೌತಿಕ ದೃಷ್ಟಿಯಿಂದ ಹೊರಟು ಭೌತಿಕ ವಿಶ್ಲೇಷಣೆ ನೀಡಲೆಳಸುವ ಇಂದಿನ ವಿಜ್ಞಾನಿಗಳು,  ಬಾಲಗಂಗಾಧರರಂಥ ಸಮಾಜವಿಜ್ಞಾನಿಗಳು ಸತ್ಯವನ್ನೇ ತಮ್ಮ  ಗುರಿಯಾಗಿಸಿಕೊಂಡಿದ್ದಾರೆ. ಎಲ್ಲ ಆಧ್ಯಾತ್ಮಪಂಥೀಯರೂ ಸತ್ಯದ ಎರಡು ಮಜಲುಗಳನ್ನು ಗುರುತಿಸಿದ್ದಾರೆ. ಭಗವಾನ್ ಬುದ್ಧನು ತಿಪಟಿಕದಲ್ಲಿ ಲೋಕೀಯ ಸಚ್ಚಾ ಮತ್ತು ಪರಮತ್ಥ ಸಚ್ಚಾ ಎಂಬ ಇಬ್ಬಗೆಯ ಸತ್ಯಗಳನ್ನು ಗುರುತಿಸಿದ. ಇದನ್ನೇ ಅದ್ವೈತ ವೇದಾಂತಿಗಳು ಲೌಕಿಕ ಸತ್ಯ ಪರಮಾರ್ಥ ಸತ್ಯವೆಂದು ಗ್ರಹಿಸಿದರು. ಸೂಫಿಗಳು ಇದಕ್ಕೆ ಸಂವಾದಿಯಾಗಿ ಅಲ್ ಹಖೀಖಾ ಮತ್ತು ಅಲ್ ಹಖ್ ಎಂಬ ಪ್ರಙ್ಷಪ್ತಿಗಳನ್ನು ಬಳಸಿದರು. ಅಂದರೆ ಎಲ್ಲ ಆಧ್ಯಾತ್ಮಿಕವಾದಿಗಳು ಹುಡುಕುತ್ತಿರುವುದು ಭೌತಿಕ ಸತ್ಯವನ್ನಲ್ಲ. ಎಲ್ಲ ಭೌತಿಕ, ಮಾನಸಿಕ ಕ್ರಿಯೆಗಳಿಗೆ ಕಾರಣೀಭೂತವಾದ ಲೋಕಾಂತರ್ಗತವಾದರೂ ಲೋಕೋತ್ತರವಾದ ಭೌತಿಕೇತರವಾದ ಸತ್ಯವನ್ನು.. ಅಕ್ಕನ ಮಾತಿನಲ್ಲಿ: `ವೇದಂಗಳಿಗವೇದ್ಯನು, ಶಾಸ್ತ್ರಂಗಳಿಗಸಾಧ್ಯನು, ಆಗಮಂಗಳಿಗಗಮ್ಯನು, ತರ್ಕಂಗಳಿಗತರ್ಕ್ಯನು'. `ಘಟವನೊಡೆದು ದಿಟವನರಿಯಲೇಕೆ? ಆ ಘಟವೇ ದಿಟವೆಂದರಿತರೆ ಸಾಲದೆ'  ಎನ್ನುವ ದೇವರ ದಾಸಿಮಯ್ಯ ಲೌಕಿಕ-ಅಧ್ಯಾತ್ಮಗಳ ಪರಸ್ಪರಾಂತರ್ಗತೆಯನ್ನು ಎಲ್ಲ ಅನುಭಾವಿಗಳಂತೆ ಹೇಳುತ್ತಾನೆ.

ಆಧ್ಯಾತ್ಮಿಕ ಪಂಥಗಳ ಸ್ವರೂಪವನ್ನು ಮಂಡಿಸಲು ಪ್ರೊ ಬಾಲಗಂಗಾಧರ ಅವರು ಆಧ್ಯಾತ್ಮಿಕ ಸಾಧನೆ ಸಾಧಕನ ಮೇಲೆ ಉಂಟುಮಾಡುವುದೆನ್ನಲಾದ ಪರಿಣಾಮವನ್ನು ಆಶ್ರಯಿಸುತ್ತಾರೆ. ಈ ಪರಿಣಾಮದ ಬಗೆಗಿನ ಅವರ ಕಲ್ಪನೆಯನ್ನು ಹೀಗೆ ಸಂಗ್ರಹಿಸಬಹುದು: ಆಧ್ಯಾತ್ಮಿಕ ಸಾಧನೆಗಳ ದ್ವಾರಾ ವ್ಯಕ್ತಿಯೊಬ್ಬನು ತನ್ನ ಉಪಾಧಿಗಳಿಂದ, ಸಮಾಜದತ್ತವಾದ ಮಾನಸಿಕ ರಚನೆಗಳಿಂದ ಮುಕ್ತನಾಗುತ್ತಾನೆ. ಮುಂದುವರಿದು ಹೇಳುತ್ತಾರೆ:  `ಮನುಷ್ಯನು ಈ ಪ್ರಾಪಂಚಿಕ ದುಃಖಗಳಿಂದ ಬಿಡುಗಡೆ ಹೊಂದಿ ಆತ್ಯಂತಿಕ ಆನಂದವನ್ನು ಪಡೆಯುವುದು ಹೇಗೆ ಎಂಬುದನ್ನು ಎಲ್ಲಾ ಸಂಸ್ಕೃತಿಗಳೂ ಅರಸಿವೆ. ಅಧ್ಯಾತ್ಮವು ಕೂಡಾ ಅಂಥ ಹುಡುಕಾಟವೇ ಆಗಿದೆ. ಪಾಶ್ಚಾತ್ಯರ ಆನಂದದ ಕಲ್ಪನೆಯಲ್ಲಿ ಈ ಪ್ರಪಂಚವನ್ನೇ ಬದಲಿಸುವ ಕಲ್ಪನೆಯು ಮೂಲಭೂತವಾಗಿರುತ್ತದೆ. ಆದರೆ ಭಾರತೀಯ ಅಧ್ಯಾತ್ಮವು ಕಂಡುಕೊಂಡ ಉತ್ತರವೆಂದರೆ ಪ್ರಪಂಚವೂ ಹೀಗಿರುವಂತೆಯೇ ಯಾವುದೇ ಅವಸ್ಥೆಯಲ್ಲೂ ಆ ಆನಂದವನ್ನು ಹೊಂದುವುದು ಸಾಧ್ಯ. ಈ ಸ್ಥಿತಿಯನ್ನು ತಲುಪಲಿಕ್ಕೆ ಪ್ರಪಂಚವನ್ನು ಬದಲಿಸುವುದರ ಬದಲಾಗಿ ಒಬ್ಬನು ತನ್ನ ಪ್ರಾಪಂಚಿಕ ಅನುಭವದಿಂದಲೇ ಮುಕ್ತನಾಗಬೇಕು....ಅಂದರೆ ಇದು ಸಂಸಾರದಲ್ಲಿ ಬದುಕಲು ನಾವು ಯಾವ ಕೌಶಲ್ಯವನ್ನು ರೂಢಿಸಿಕೊಂಡಿದ್ದೇವೆಯೋ ಅದರಿಂದ ಉತ್ಪಾದನೆಯಾದ ತೊಳಲಾಟಗಳ ಬಂಧನದಿಂದ ಮುಕ್ತಿಯನ್ನು ಹೊಂದಿದ ಸ್ಥಿತಿ. ಈ ಸ್ಥಿತಿಯೇ ಮನುಷ್ಯನೊಬ್ಬನು ಹೊಂದಬಹುದಾದ ಆತ್ಯಂತಿಕ ಆನಂದ ಎಂಬುದು ಅಧ್ಯಾತ್ಮದ ಪ್ರತಿಪಾದನೆ. ಹಾಗೂ ಈ ಸ್ಥಿತಿಯನ್ನು ಬೇರೆ ಬೇರೆ ಹೆಸರಿನಿಂದ, ಮಾರ್ಗಗಳಿಂದ ಯೋಜಿಸಿದ್ದಾರೆ.' ಆಧ್ಯಾತ್ಮಿಕ ಕಲ್ಪನೆಯ ಹಿನ್ನೆಲೆಯಲ್ಲಿ ವಚನಗಳನ್ನು ಅರ್ಥೈಸಬೇಕೆಂಬುದು ಬಾಲಗಂಗಾಧರರ ಅಂಬೋಣ.
ಆದರೆ ತೊಂದರೆಯಿರುವುದು ಬಾಲಗಂಗಾಧರರ ಆಧ್ಯಾತ್ಮಿಕತೆಯ ಪರಿಕಲ್ಪನೆಯಲ್ಲೇ. ಇದನ್ನು ಅತಿವ್ಯಾಪ್ತಿ ದೋಷವೆನ್ನಬಹುದು. ಅಂದರೆ ಅವರು ತಮಗನುಕೂಲವಾದ ಒಂದು ಬಗೆಯ ಆಧ್ಯಾತ್ಮಿಕ ಕಲ್ಪನೆಯೊಳಗೆ ಎಲ್ಲಾ ಆಧ್ಯಾತ್ಮಿಕತೆಗಳನ್ನು ಸೇರಿಸಿಬಿಟ್ಟಿದ್ದಾರೆ. ಲೋಕವಿಮುಖವಾಗಿ ಮಂಡೆಬೋಳಿಸಿಕೊಂಡ ಓಡುಗಾಲರ ಅಧ್ಯಾತ್ಮವೊಂದೇ ಎಲ್ಲರ ಅಧ್ಯಾತ್ಮವಲ್ಲ. ಅಂಥ ಅಧ್ಯಾತ್ಮವೇ  `ಕೊಟ್ಟ ಕುದುರೆಯನೇರಲಾರದೆ ಮತ್ತೊಂದನೇರುವರ' ಪಡಿಪಾಟಲು.

ಅಧ್ಯಾತ್ಮ ಲೋಕವಿಮುಖಿಯೋ ಅಥವಾ ಲೋಕಮುಖಿಯೋ ಎಂಬ ಚರ್ಚೆಯೇ ಬೌದ್ಧರಲ್ಲಿ ಹೀನಯಾನ ಮತ್ತು ಮಹಾಯಾನಗಳ ಒಡಕಿಗೆ ಕಾರಣವಾಯಿತು. ವ್ಯಕ್ತಿಗತ ನಿರ್ವಾಣವೇ ಬುದ್ಧಶಾಸನದ ಸಾರವೆಂದರು ಥೇರವಾದಿಗಳು. ಇದಕ್ಕೆ ವಿರುದ್ಧವಾಗಿ ಸಂಸಾರವನ್ನೇ ನಿರ್ವಾಣವೆಂದು ಸಾರಿ ಮಹಾಯಾನ ಪಂಥಗಳು ಸಮಸ್ತ ಬ್ರಹ್ಮಾಂಡವನ್ನೇ ಮಹಾಕರುಣೆಯಿಂದ ದುಃಖಮುಕ್ತವಾಗಿ ಮಾಡುವ ಉದ್ದೇಶ ಎಲ್ಲ ಮಹಾಯಾನ ಪಂಥಗಳಿಗೆ ಸಮಾನವಾಯಿತು.ತನ್ನ ನಿರ್ವಾಣವೇ ಅಂತಿಮ ಗುರಿಯಾಗಿದ್ದರೆ ಬುದ್ಧ ಲೋಕಕ್ಕೆ ಹಿಂತಿರುಗಿ ಸಂಘವನ್ನು ಯಾಕೆ ಕಟ್ಟಿದ ಎಂದು ಕೇಳಿದರು ಮಹಾಯಾನಿಗಳು. ಹಾಗೆ ನೋಡಿದರೆ ಲೋಕಕಲ್ಯಾಣವು ಸಮಣ ಪಂಥವಾಗಿ ಸುರುವಾದ ಪಾಲಿ ತಿಪಿಟಕಮೂಲದ ಬೌದ್ಧದರ್ಮದಲ್ಲೂ ಮುಖ್ಯವಾಗಿತ್ತು. ಜಗತ್ತಿಗೆ ಬುದ್ಧಗುರು ನೀಡಿದ ರತ್ನತ್ರಯಗಳಲ್ಲಿ ಪ್ರಜ್ಞಾ, ಸಮಾಧಿಗಳಷ್ಟೇ ಮಹತ್ವಪೂರ್ಣತೆಯನ್ನು ಶೀಲಕ್ಕೂ ಕೊಡಲಾಯಿತು. ಶೀಲವು ಮಾನವನ ಸಾಮಾಜಿಕ ಜೀವನಕ್ಕೂ ಅಗತ್ಯ. ಆರ್ಯ ಅಷ್ಟಾಂಗ ಮಾರ್ಗದಲ್ಲಿ ಈ ಕಾರಣದಿಂದಲೇ  `ಸಮ್ಮೋ ಕಮ್ಮಂತ'  ಅಂದರೆ ಸತ್ ಕಾಯಕವನ್ನೂ ಹೇಳಲಾಗಿದೆ. ಈ ಕಾರಣದಿಂದಲೇ ಚಾಣಕ್ಯನ ಮತ್ಸ್ಯನ್ಯಾಯಕ್ಕೆ ಪ್ರತಿಯಾಗಿ ಮಹಾಕರುಣೆಯನ್ನು ಬುನಾದಿಯಾಗಿಸಿಕೊಂಡ ಪರ್ಯಾಯ ರಾಜಕೀಯ ವ್ಯವಸ್ಥೆಯ ಬಗ್ಗೆ ಆಚಾರ್ಯ ನಾಗಾರ್ಜುನನು ಶಾತಕರ್ಣಿ ಚಕ್ರಿಗೆ ಪತ್ರ ಬರೆದದ್ದು. ಕೈವಲ್ಯವನ್ನೇ ಪರಮಗುರಿಯಾಗಿಸಿಕೊಂಡ ಜೈನರೂ ಜಗತ್ತಿನಲ್ಲಿ ಅಹಿಂಸೆಯ ಪ್ರಚಾರ ಮಾಡಿದ್ದು ಈ ಕಾರಣದಿಂದಲೇ. ಯಜ್ಞಯಾಗಾದಿ ವೇದೋಕ್ತ ಮಾರ್ಗವನ್ನಾಗಲಿ ಅಥವಾ ವೇದಾಂತೋಕ್ತ ಶುದ್ಧ ಜ್ಞಾನಮಾರ್ಗವನ್ನಾಗಲಿ ಅನುಸರಿಸದ ಸಮಣ ಪಂಥಗಳ ಸಿದ್ಧಾಂತ ಮತ್ತು ಆಚರಣೆಗಳಲ್ಲಿ ಆತ್ಮೋದ್ಧಾರ ಮತ್ತು ಲೋಕಕಲ್ಯಾಣದ ಉದ್ದಿಶ್ಯಗಳು ಲಾಗಾಯ್ತಿನಿಂದ ಇದ್ದವು ಎಂಬುದು ನಿಚ್ಚಳವಾಗಿದೆ. ಈ ಪಂಥಗಳಂತೆಯೇ ದೀಕ್ಷಾಮಾರ್ಗವಾದ ನಾಥ-ಸಿದ್ಧ ಮತ್ತು ತಾಂತ್ರಿಕ ಪಂಥಗಳೂ ವೈಯಕ್ತಿಕ ಮೋಕ್ಷಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಅವರು ಮಂತ್ರ-ತಂತ್ರಾದಿ ಸಾಧನೆಗಳನ್ನು ಆತ್ಮಕಲ್ಯಾಣ ಲೋಕಕಲ್ಯಾಣವೆರಡಕ್ಕೂ ಬಳಸಿದರು. ಕಂದಮೂಲಗಳನ್ನು, ಮಂತ್ರ-ಯಂತ್ರ-ತಂತ್ರಾದಿ ಉಪಾಯಗಳನ್ನು ಇಹಸುಖಕ್ಕಾಗಿ ಉದಾಹರಣೆಗೆ ಸ್ತ್ರೀಪುರುಷ ವಶೀಕರಣ, ಶತ್ರುದಮನ, ರೋಗನಿವಾರಣೆ ಇತ್ಯಾದಿ ಗುರಿಗಳಿಗಾಗಿ ಬಳಸುವುದಕ್ಕೆ ಅವಕಾಶ ಮಾಡಿಕೊಟ್ಟವು. ಉದಾಹರಣೆಗೆ ಅದ್ವೈತತತ್ವ ಪ್ರತಿಪಾದಕವಾದ ಶಾಕ್ತಕೃತಿ `ಸೌದರ್ಯಲಹರಿ'ಯ ಅಥವಾ ತಮಿಳು ಶಾಕ್ತ ಪರಂಪರೆಯ ಮಾತೃಕಾಕೃತಿಯಾದ  `ಅಭಿರಾಮಿ'  `ಅಂದಾದಿ'ಯ ಒಂದೊಂದು ಪದ್ಯಕ್ಕೂ ಒಂದೊಂದು ಲೌಕಿಕ ಪ್ರಯೋಜನಗಳನ್ನು ಆಯಾ ಪರಂಪರೆಗಳಲ್ಲಿ ಕಲ್ಪಿಸಲಾಗಿದೆ.

ಇನ್ನು ಭಕ್ತಿಪಂಥಗಳಂತೂ ಮೂಲದಲ್ಲಿ ಎಷ್ಟು ಲೋಕಮುಖಿಯಾಗಿದ್ದವೆಂದರೆ ಮುಕ್ತಿಗೇ ವಿದಾಯ ಹೇಳಿಬಿಟ್ಟವು. ಭಕ್ತಿಪಂಥಗಳ ಪೂರ್ವಪಕ್ಷ ಮೋಕ್ಷಗಾಮಿಯಾದ ಸಮಣ ಪಂಥಗಳೆಂಬುದನ್ನು ದಯಾಕೃಷ್ಣ ಅವರು ಸರಿಯಾಗಿಯೇ ಗುರ್ತಿಸಿದ್ದಾರೆ. ಆಂಡಾಳ್ ತನ್ನ ತಿರುಪ್ಪಾವೈನ ಕೊನೆ ಪಾಶುರದಲ್ಲಿ ಶ್ರಿಕೃಷ್ಣನಲ್ಲಿ ಬೇಡುವುದು ಮೋಕ್ಷದ ಭಿಕ್ಷೆಯನ್ನಲ್ಲ, ಜನ್ಮಾಂತರಗಳ ಭಕ್ತಿಯ ಬಂಧನವನ್ನು. ಇದೇ ರೀತಿ ಶಿವಭಕ್ತರಾದ ತಮಿಳು ನಾಯನ್ಮಾರುಗಳು ತಮ್ಮ ಪ್ರಿಯದೇವಸ್ಥಾನಗಳ ಸುತ್ತಲ ಪ್ರಕೃತಿ ಸೌಂದರ್ಯವನ್ನು ಮನದುಂಬಿ ಬಣ್ಣಿಸುತ್ತಾರೆ. ಯಾಕೆಂದರೆ ಜಗತ್ತು ಶಿವಮಯ.

ಭಕ್ತಿ ಮತ್ತು ಮುಕ್ತಿಗಳ ಸಮನ್ವಯ ಪ್ರಾರಂಭವಾದದ್ದು ತಮಿಳು ಭಕ್ತಿಸಾಹಿತ್ಯದ ಸಂಗೋಪನಯುಗದಲ್ಲಿ. ಇವೆರಡು ತುಡಿತಗಳ ನಡುವಣ ಹೊಂದಾಣಿಕೆಯನ್ನು ಈ ಪರಂಪರೆಗಳ ಸಮರ್ಥಕರು ಮಾಡತೊಡಗಿದರು. ರಾಮಾನುಜರಂಥ ಸಂತರು ಶೂದ್ರರಿಗೆ ಮಂತ್ರೋಪದೇಶ ಮಾಡಿದ್ದೂ, ಆಗಲೇ  ಭ್ರಷ್ಟವಾಗುತ್ತಿದ್ದ ದೇವಸ್ಥಾನಗಳ ಆಡಳಿತವನ್ನು ಸರಿಪಡಿಸಲು ಒಂದು ಇಡೀ ಪುಸ್ತಕ ಬರೆದದದ್ದೂ ತಮಿಳು ಪರಂಪರೆಗಳ ಲೋಕಮುಖಿತ್ವಕ್ಕೆ ದ್ಯೋತಕ. ಮುಂದೆ ಶೈವಪರಂಪರೆಯ ಮುಖ್ಯ ದನಿಯಾದ ರಾಮಲಿಂಗಅಡಿಗಳು ಪಾರಂಪರಿಕ ಪಾರಮಾರ್ಥಿಕ ಪಂಥಕ್ಕೆ ಲೋಖಮುಖಿಯಾದ ಹೊಸ ಒತ್ತು ನೀಡಿದರು. ಹಿಂದಿನ ಶೈವಾಚಾರ್ಯರು `ಸಿವಮೇ ಅನ್ಬು' (ಶಿವನೇ ಪ್ರೇಮ) ಎಂದದ್ದನ್ನು  `ಅನ್ಬೇ ಸಿವಂ'  ಎಂದು ಬದಲಿಸಿದರು. ಪ್ರಾಣಿದಯಾಸಂಘಗಳನ್ನು ಚಾಲನೆ ಮಾಡಿದರು. ಜೀವಿಗಳ ಪ್ರೇಮವೇ ಶಿವನ ಪ್ರೇಮವೆಂದು ಸಾರಿದರು.
`ಸಕಲಪುರಾತನರು ಭಕ್ತಿಭಿಕ್ಷೆಯ ನೀಡಿ ಎನ್ನ ಪಾತ್ರೆ ತುಂಬಿತ್ತು ಕಾಣಾ' ಎಂದರು ಬಸವಣ್ಣ.ಅಂತೆಯೇ ಶರಣಮಾರ್ಗ ಇನ್ನಿತರ ಮಾರ್ಗಗಳಿಂದ ಹಲವು ಅಂಶಗಳನ್ನು ಪಡೆದುಕೊಂಡು ಆದ್ಯರ ಮಾರ್ಗಗಳನ್ನು ಶ್ರುತಿಯನ್ನು ನಂಬದ ಸ್ವಂತ ಅನುಭವದ ಪಾತಳಿಯ ಮೇಲೆ ತಮ್ಮದೇ ಆದ ಅನುಭಾವ ಮಾರ್ಗವನ್ನು ಕಟ್ಟಿಕೊಂಡರು. ಅವರು ಶಂಕರರು ಹೇಳಿದ್ದನ್ನೇ ಹೇಳಿದರೆನ್ನುವವರು ಶಂಕರರನ್ನೂ ಅರಿತವರಲ್ಲ ಶರಣರನ್ನೂ ಅರಿತವರಲ್ಲ. ಶರಣರಲ್ಲಿ ವ್ಯಕ್ತವಾಗುವ ಅನುಭಾವದಲ್ಲಿ ಹಲ ಬಗೆಗಳಿದ್ದವೆಂದು ಹಿಂದೆಯೇ ಹೇಳಿದ್ದೇನೆ. ಹಲವು ಹನ್ನೊಂದು ಧರ್ಮ, ಜಾತಿ, ವೃತ್ತಿ, ಪ್ರವೃತ್ತಿಗಳ ಹಿನ್ನೆಲೆಗಳಿಂದ ಬಂದ ಅವರು ಏಕತೆಯನ್ನು ಸಾಧಿಸುವ ಹಂಬಲದಲ್ಲಿ ತಮ್ಮ ವೈಶಿಷ್ಟ್ಯಗಳನ್ನು ಬಿಟ್ಟುಕೊಡಲಿಲ್ಲವೆಂಬುದು ವಚನಗಳ ಶಕ್ತ ವ್ಯಕ್ತಿಭಾಷೆಗಳಿಂದ ಗೋಚರವಾಗುತ್ತದೆ. ಪರಸತಿ-ಪರಧನಗಳ ಟೀಕೆ, ನಡೆಯಿಂದ ಕಳಚಿಕೊಂಡ ವೈದಿಕಾದಿ ಅಧ್ಯಾತ್ಮವಿಕಾರದ ನುಡಿಯ ನಿರಾಕರಣೆ, ಕುಲಮದದ ತಿರಸ್ಕಾರ-ಇವು ಬಹತೇಕ ವಚನಕಾರರಿಗೆ ಸಾಮಾನ್ಯ. ಕಸುಬಿಗ ವಚನಕಾರರು ಹೇಳುವ ಕಾಯಕಯೋಗಕ್ಕೆ ಸಂವಾದಿಯಾದುದು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ನನಗೆಲ್ಲೂ ಸಿಕ್ಕಿಲ್ಲ. ಶರಣರ ಕಾಯಕಯೋಗವು ಗೀತೋಕ್ತ ಕರ್ಮಯೋಗದ ವಿರುದ್ಧ ದೆಸೆಯಲ್ಲಿರುವುದು ಭಾರತೀಯ ಅಧ್ಯಾತ್ಮ ಪರಂಪರೆಗಳ ಸಂವಾದಾತ್ಮಕ, ಸಂಘರ್ಷಾತ್ಮಕ ನೆಲೆಗಳನ್ನು ಗುರುತಿಸದ ಬಾಲಗಂಗಾಧರರಿಗೆ ಕಾಣಿಸಲು ಸಾಧ್ಯವೇ ಇಲ್ಲ. ಬಹುಪಾಲು ಶರಣರು ಒಪ್ಪಿಕೊಂಡ ಇಷ್ಟಲಿಂಗಧಾರಣೆಯೂ ಮೂಲತಃ ಜಾತಿಸೂತಕವನ್ನು ತೊರೆಯುವ ಕ್ರಮ. `ನಾನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯೊ'  ಎಂಬ ಜ್ಞಾನೋದಯಕ್ಕೆ ಕಾರಣವಾದಂತೆ ಇತರ ಜಾತಿ ಮೂಲದವರಿಗೂ ಮೇಲುಕೀಳು ಭಾವನೆಯನ್ನು ಕಳಚಿಕೊಳ್ಳುವ ಸಾಧನ. ಮೂಲೋದ್ದೇಶ ಆಧ್ಯಾತ್ಮಿಕವಾಗಿದ್ದರೂ ಲೋಕೋದ್ಧಾರ, ಸಮಾಜೋದ್ಧಾರಗಳಿಗೂ ಎಡೆ ನೀಡುವುದಾಗಿತ್ತು. ಸಂತರು, ಸಿದ್ಧರು, ಸೂಫಿಗಳು, ಅವಧೂತರು ಲೋಕಕಲ್ಯಾಣದ ಪಾಠಗಳನ್ನು ಕಡಲಾಚೆಯಿಂದ ಬಂದು ನಮ್ಮನ್ನುದ್ಧರಿಸಬಲ್ಲೆವೆಂಬ ಭ್ರಮೆಯಲ್ಲಿದ್ದ ಕ್ರೈಸ್ತಪಾದ್ರಿಗಳಿಂದ ಕಲಿಯಬೇಕಿರಲಿಲ್ಲ.

ಅಲ್ಲಮ ಹೇಳುತ್ತಾನೆ: ` ಸತ್ತು ಹುಟ್ಟಿ ಕೆಟ್ಟವರೆಲ್ಲರೂ ದೇವಲೋಕಕ್ಕೆ ಹೋದರೆಂಬ ಬಾಲಭಾಷೆಯ ಕೇಳಲಾಗದು. ಸಾಯುವ ಮುನ್ನ ಸ್ವಯವನರಿವಡೆ ದೇವನೊಲಿವ ನಮ್ಮ ಗೊಗ್ಗೇಶ್ವರ.'  ಎಲ್ಲ ಬಂಧನಗಳಿಂದ ಕಳಚಿಕೊಂಡ ಮುಕ್ತನ ಸ್ಥಿತಿ ಆಧ್ಯಾತ್ಮಿಕ ಸಾಧನೆಯ ಒಂದು ಹಂತವೇ ಹೊರತು ಗುರಿಯಲ್ಲ. ಅದೇ ಗುರಿಯಾದರೆ ಅದು ಸಾವಿಗೆ ಸಮ. ಇಂತಹಾ ಮುಕ್ತಿಯನ್ನು ಅಪೂರ್ಣಮುಕ್ತಿಯೆಂದ ಕಾಶ್ಮೀರದ ಅಭಿನವಗುಪ್ತಾದಿ ಶೈವಾಚಾರ್ಯರು ಈ ಸ್ಥಿತಿಹೊಂದಿದವನನ್ನು `ಪ್ರಲಯಾಕಲನೆ'  ಎಂದರೇ ಹೊರತು ಸರ್ವಾತ್ಮಕನಾಗಿ ಶಿವವ್ಯಾಪ್ತಿ ಪಡೆದ ಜೀವಂತ ಶಿವನೆಂದು ಗಣಿಸಲಿಲ್ಲ. ಇಂಥಾ ಜಡಮುಕ್ತಿಯನ್ನು ಉಪದೇಶಿಸುವ ಕಾರಣದಿಂದಲೇ ಶಂಕರರ ಅದ್ವೈತವನ್ನು ಜಡಾದ್ವೈತವೆಂದು ಕರೆದರು. ಸಾಧನೆಯ ಲಕ್ಷ್ಯ ವ್ಯಕ್ತಿತ್ವದ ಪೂರ್ಣ ವಿಕಾಸವೇ ಹೊರತು ವಿನಾಶವಲ್ಲ. ಜಾತಿಕುಲಾಧಾರಿತ ಸಮಾಜದಲ್ಲಿ ದೀಕ್ಷಾಬದ್ಧ ವ್ಯಕ್ತಿಗಳ ಪ್ರತಿಸಮಾಜ ನಿರ್ಮಾಣ ಮಾಡಿದ ಆಧ್ಯಾತ್ಮಿಕ ಪರಂಪರೆಗಳು ತಮ್ಮದೇ ಆದ ರೀತಿಯಲ್ಲಿ ಜಾತಿನಿವಾರಣೆ ಮಾಡಲಿಲ್ಲವೆಂದು ಹೇಗೆ ಹೇಳುವುದು?

ಜಗತ್ತಿನ ಆಧ್ಯಾತ್ಮಿಕತೆಯಲ್ಲಿ ಬಾಲಗಂಗಾಧರರು ಗುರುತಿಸುವ ಮಾರ್ಗಗಳಲ್ಲಿ ಭಾರತೀಯ -ಪಾಶ್ಚಿಮಾತ್ಯ ಪ್ರಬೇಧಗಳೂ ಪ್ರಶ್ನಾರ್ಹ.  ಲೋಕೋತ್ತರವಾದಿಗಳಾದ ಯಹೂದಿಮೂಲ ಧರ್ಮಗಳಿಗೂ ಲೋಕಾಂತರ್ಗತವಾದಿಗಳಾದ ಇತರ ಧರ್ಮಗಳಿಗೂ ಮೂಲಭೂತ ವ್ಯತ್ಯಾಸಗಳಿದ್ದರೂ ಇವುಗಳಿಗೆ ಕಾರಣ ಭೌಗೋಳಿಕವಲ್ಲ. ಪೂರ್ವಪಶ್ಚಿಮಗಳಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಕ್ರೈಸ್ತ, ಇಸ್ಲಾಮೀಯ ಧರ್ಮಗಳ ನಡುವೆ ಉನ್ಮೇಷಗೊಂಡ ಅನುಭಾವಿ ಪಂಥಗಳು ಭಾರತೀಯ ಆನುಭಾವಿಪಂಥಗಳನ್ನೇ ಹೋಲುತ್ತವೆ. ಅವುಗಳ ನಡುವೆ ನಿರಂತರ ಕೊಡುಕೊಳ್ಳುವಿಕೆಗಳೂ ನಡೆಯುತ್ತಾ ಬಂದಿವೆ.
ವಚನಗಳು ಕೇವಲ ಆಧ್ಯಾತ್ಮಿಕವೆಂದು ನಾವು ಒಪ್ಪಿಕೊಂಡರೂ ವಚನಗಳ ಆಧ್ಯಾತ್ಮಿಕತೆ ಬಾಲಗಂಗಾಧರ ನಿರ್ವಚಿತ ಆಧ್ಯಾತ್ಮಿಕತೆಯಿಂದ ಭಿನ್ನವಾದುದು ಮಾತ್ರವಲ್ಲ ವಿರುದ್ಧವಾದುದು ಕೂಡಾ. ಆ ಆಧ್ಯಾತ್ಮಿಕತೆಗೆ ಲೌಕಿಕ ಆಯಾಮವೂ ಇದೆ. ಜಾತಿಯ  ಮತ್ತು ಜಾತಿಗೆ ಹೊರತಾದ ಅತ್ಯಾಶ್ರಮೀ ಸಮಾಜದ ನಿರ್ಮಾಣಗಳು ಶರಣರ ಸಮಾಜಮುಖಿ ಆಧ್ಯಾತ್ಮಿಕತೆ ಮುಖ್ಯ ಉದ್ದೇಶಗಳಾಗಿವೆ. ಶರಣರ ಪರಿಭಾಷೆಯಲ್ಲಿ ಇದೇ ಕಾಯಕವನ್ನು ಕೈಲಾಸವಾಗಿಸುವ ಬಗೆ; ಮರ್ತ್ಯಲೋಕದಲ್ಲಿ ಮಹಾಮನೆ ಕಟ್ಟುವ, ಕಲ್ಯಾಣವನ್ನು ಕೈಲಾಸವನ್ನಾಗಿಸುವ ಕಣಸು.

Thursday, May 23, 2013

ಸರ್ವೋದಯ ಸಮಾಜದ ಕನಸು: ಭಾಗ-2ಡಾ. ಮೊಗಳ್ಳಿ ಗಣೇಶ್


*ಜನ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾವಲಂಬನೆಗೆ ಸೂಕ್ತವಾದ ಕಾರ್ಯಗಳನ್ನು ರೂಪಿಸಬೇಕು. ಹಾಗೆಯೇ ಮಹಿಳೆಯರನ್ನು ರಾಜಕೀಯ ಶಕ್ತಿ ಕೇಂದ್ರವಾಗಿ ರೂಪಾಂತರಿಸಿ ಪ್ರತಿ ಹಳ್ಳಿಗಳಲ್ಲೂ ಮಹಿಳೆಯರ ಅರಿವಿಗೆ ಬೇಕಾದ ರಾಜಕೀಯ ವೇದಿಕೆಗಳನ್ನು ನಿರ್ಮಿಸಬೇಕು. ಆ ಮೂಲಕ ಅವರು ಸಕ್ರಿಯ ರಾಜಕಾರಣದಲ್ಲಿ ಪಾಲುಗೊಳ್ಳುವ ಕ್ರಮಗಳನ್ನು ಜಾರಿಗೊಳಿಸಬೇಕು.

*ಪ್ರತಿ ಗ್ರಾಮಗಳ ಜಲಸಂಪನ್ಮೂಲಗಳನ್ನು ವೃದ್ಧಿಗೊಳಿಸುವ ನೀರಾವರಿಯೋಜನೆಗಳನ್ನು ಕೈಗೊಳ್ಳಬೇಕು. ಅದಕ್ಕೆ ಪೂರಕವಾದ ಗ್ರಾಮೀಣ ಪರಿಸರ ಅರಿವನ್ನು ಅನುಷ್ಠಾನಗೊಳಿಸುವ ಸಮತೋಲನದ ಅಭಿವೃದ್ಧಿ ಕ್ರಮಗಳನ್ನು ಅಲವಡಿಸಬೇಕು. ಕೆರೆ ಕಟ್ಟೆಗಳಿಗೆ ನೀರು ತರುವ ದಾರಿಗಳನ್ನು ಹುಡುಕಬೇಕು. ರೈತರ ಭೂಮಿಗೆ ಅನ್ಯಾಯ ಮಾಡಬಾರದು. ಇಡೀ ಹಳ್ಳಿಗಳ ಸ್ವರೂಪಗಳನ್ನೇ ಬದಲಿಸಬೇಕು. ಕೇರಿಗಳ ರೂಪ ರಚನೆ ಸುಧಾರಣೆಗೆ ಒಳಗಾಗಬೇಕು. ಮೂಲಭೂತ ಸೌಕರ್ಯಗಳು ಆಗಬೇಕು. ಹಳ್ಳಿಯ ಮಾನಸಿಕ ಸ್ಥಿತಿ ಕೂಡ ಬದಲಾಗಬೇಕು. ಹಳ್ಳಿಗಳು ಸುರಕ್ಷಿತವಾದಾಗಲೇ ನಾಳಿನ ಭಾರತವು ಅದರ ಜಾತಿವಾರು ಸಮುದಾಯಗಳು ಸುಧಾರಣೆಗೆ ಒಳಗಾಗುವುದು. ಸಂವಿಧಾನ ಬದ್ಧವಾಗಿ ಸಿದ್ರಾಮಯ್ಯ ಅವರು ಸರಕಾರವನ್ನು ನಿಯಂತ್ರಿಸಿದರೆ ಕೇವಲ ಐದೇ ಐದು ವರ್ಷಗಳಲ್ಲಿ ಇಡೀ ಕರ್ನಾಟಕದ ಹಳ್ಳಿಗಳು ಸುಧಾರಣೆ ಆಗಬಲ್ಲವು.

*ಜಾಗತೀಕರಣದ ಕಾಲದಲ್ಲಿ ಗಾಂಧಿ ಹಾಗೂ ಅಂಬೇಡ್ಕರ್ ಅವರಿಬ್ಬರ ಹಾಗೂ ಲೋಹಿಯ ಅವರ ವಿಚಾರಗಳ ಮೂಲಕವೇ ಆಧುನಿಕೋತ್ತರ ಭಾರತ ಅಥವಾ ಕನ್ನಡ ನಾಡು ನಾಳಿನ ದಿಕ್ಕನ್ನು ಆರಿಸಬೇಕಾದುದು. ‘ಇಂದಿರಾ ಕಾಂಗ್ರೆಸ್’ ಇದನ್ನೇ ಪ್ರಯತ್ನಿಸಿದ್ದುದು. ಆ ವೇಳೆಗೆ ಇವತ್ತಿನಂತೆ ಜಾಗತೀಕರಣದ ವೇಗ ಇರದಿದ್ದರೂ ಇಂದಿರಾ ಗಾಂಧಿ ಅವರು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಬೇರೆ ಬಗೆಯಲ್ಲಿ ಮಾಡಿಕೊಂಡಿದ್ದರು. ಕರ್ನಾಟಕಕ್ಕೆ ಬರಬಹುದು ಎಂಬ ವಿಶ್ವ ಬಂಡವಾಳದ ಗಿಲೀಟಿನ ಬಗೆಗೂ ಸಿದ್ದರಾಮಯ್ಯ ಎಚ್ಚರ ವಹಿಸಬೇಕು. ಆ ಬಗೆಯ ದಂಧೆ ಲೂಟಿಯಾಗುವ ಅಪಾಯವೇ ಹೆಚ್ಚು. ಹೊರಗಿನ ಬಂಡವಾಳಕ್ಕಿಂತಲೂ ಒಳಗಿನ ಸಂಪನ್ಮೂಲವೇ ಒಂದು ನಾಡಿನ ಸಮುದಾಯಗಳ ಅಸ್ತಿತ್ವಕ್ಕೆ ಬಹಳ ಮುಖ್ಯ. ಸಂಪನ್ಮೂಲವೇ ನಾಶವಾದರೆ; ಆನಂತರ ಯಾವ ಬಂಡವಾಳವೂ ಇರುವುದಿಲ್ಲ.

*ಈ ನೆಲೆಯಲ್ಲಿ ಕನ್ನಡ ನಾಡಿನ ಸಂಪನ್ಮೂಲಗಳನ್ನು ಕಾಯುವ; ಸದ್ಬಳಕೆ ಮಾಡಿಕೊಳ್ಳುವ, ತಕ್ಕ ದೇಸೀಯ ಉದ್ಯಮತೆಗೆ ಬಳಸಿಕೊಳ್ಳುವ ತಂತ್ರಜ್ಞಾನ, ವಿಜ್ಞಾನ, ಜಾಗತಿಕ ಮಾರುಕಟ್ಟೆಗಳ ಜಾಲವನ್ನು ತಕ್ಕುದಾಗಿ ಜನತೆಯ ನ್ಯಾಯದ ಸಲುವಾಗಿ ವಿಸ್ತರಿಸುವ ನೈತಿಕತೆಯನ್ನು ಸಿದ್ದರಾಮಯ್ಯ ಅವರು ನೆರವೇರಿಸಬೇಕು. ಬಡವರು ಎಂಬ ಏಕೈಕ ಕಾರಣಕ್ಕೆ ಬಡವರ ಬಗ್ಗೆ ತುಂಬಾ ಉದಾರವಾಗಿರುವುದು ಕೂಡ ತಪ್ಪು. ಬೊಕ್ಕಸದ ಮೇಲಿನ ಹೊರೆಯನ್ನು ತಗ್ಗಿಸಲು ಮತ್ತೆ ಜನತೆಯ ತಲೆಯನ್ನೇ ಆಶ್ರಯಿಸಬೇಕಾದ ಬಿಕ್ಕಟ್ಟು ಇರುತ್ತದೆ.ಯಾವ ಮುಖ್ಯಮಂತ್ರಿಯಾಗಲೀ, ಯಾವುದೇ ಜಾತಿಯ ಇತರೆ ಮಂತ್ರಿಗಳಾಗಲೀ ಅವರಾರು ತಮ್ಮ ಜೇಬಿನಿಂದ ಹಣ ನಿಯೋಜಿಸುವುದಿಲ್ಲ. ಕಾಂಗ್ರೆಸ್ ಬಡವರ ಪಕ್ಷ ಸರಿ. ಆದರೆ ಅದು ನಗರದ ಹಲವು ವರ್ಗಗಳ ಕಷ್ಟಕ್ಕೂ ಸ್ಪಂದಿಸಬೇಕು. ಆ ನಿಟ್ಟಿನಲ್ಲಿ ಅಭಿವೃದ್ಧಿ ಸೂಚಂಕದ ಪ್ರಮಾಣವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಬೇಕು.

*ವಿಶ್ವ ಮಾರುಕಟ್ಟೆ ಹಾಗೂ ವಿಶ್ವ ಬಂಡವಾಳವೇ ದೇಶದ ಬುನಾದಿ ಅಲ್ಲ. ಕರ ಕುಶಲ ಸಮುದಾಯಗಳ ಪುನರ್ಜೀವನಕ್ಕೆ ಬೇಕಾದಂತೆ ಸ್ಥಳೀಯ ರಾಜಕಾರಣ ಹಾಗೂ ಆಡಳಿತವನ್ನು ಜಾರಿಗೊಳಿಸಬೇಕು ಮತ್ತು ಅವುಗಳ ಸಂಪನ್ಮೂಲ ಮತ್ತು ಬಂಡವಾಲಗಳನ್ನು ಮರುಜೀವಗೊಳಿಸುವ ದೇಸೀಯ ಅಭಿವೃದ್ಧಿಗಳತ್ತ ಗಮನ ಹರಿಸಬೇಕು.ಈ ತನಕ ಪಶ್ಚಿಮ ಪುನೀತವಾದ ಅಭಿವೃದ್ಧಿ ಸೂಚ್ಯಂಕಗಳಿಂದ ಆಗಿರುವ ಪ್ರಗತಿ ಎಂದರೆ; ಬಡವರು ಬಡವರಾಗಿಯೇ ಉಳಿದಿರುವುದು ಮತ್ತು ಶ್ರೀಮಂತ ಬಂಡವಾಳಿಗರು ಅನೈತಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವುದು. ಈ ಬಗ್ಗೆ ವಿಚಾರಣೆ ಆಗಬೇಕು.ಅಂತಹ ಬಂಡವಾಳ ಶಾಹಿ ರಾಜಕಾರಣಿಗಳ ಮೇಲೆ ಹೈ ಕಮಾಂಡ್ ಆದಿಯಾಗಿ ಸ್ಥಳೀಯ ಕಾಂಗ್ರೆಸ್ ನಿಯಂತ್ರಣ ಗಳೆಲ್ಲಾ ನಿಗಾವಹಿಸಬೇಕು. 

*ಮತ್ತೆ ನೆನಪಿಸುವುದಾದರೆ; ದಲಿತ ಮತಗಳ ಚಲನೆಯ ಬಗ್ಗೆ; ಕಾಂಗ್ರೆಸ್ ಪಕ್ಷವು ‘ಟೇಕನ್ ಫಾರ್ ಗ್ರಾಂಟೆಡ್’ ಎನ್ನುವ ಧೋರಣೆಯಲ್ಲಿ ದಲಿತರನ್ನು ಅವಗಣನೆ ಮಾಡಬಾರದು. ದಲಿತ ಮತಗಳು ಕೇವಲ ಬಳಕೆಯ ಬಿಟ್ಟಿ ಬಂಡವಾಳ ಅಲ್ಲ.ರಾಜ್ಯದ ಮುಸಲ್ಮಾನರು, ಹಿಂದುಳಿದ ವರ್ಗಗಳು, ದಲಿತರು ಒಂದಾದರೆ ಯಾವ ಮತೀಯ ರಾಜಕಾರಣಕ್ಕೂ ಅವಕಾಶವಿರದು. ಅಲ್ಪಸಂಖ್ಯಾತರನ್ನು ರಕ್ಷಿಸುವ ಧರ್ಮಾತೀತ ರಾಜಕೀಯ ತತ್ವವನ್ನು ಸಿದ್ದರಾಮಯ್ಯ ಅವರು ತಮ್ಮ ಆಡಳಿತದಲ್ಲಿ ಅಳವಡಿಸಬೇಕು. ಮುಸಲ್ಮಾನರನ್ನು, ಕ್ರೈಸ್ತರನ್ನೂ ಸಿದ್ದರಾಮಯ್ಯ ಬಸವಣ್ಣನಂತೆ ‘ಇವ ನಮ್ಮವ’ ಎಂದು ಅಂತರ್ಗತಿಸಿಕೊಳ್ಳಬೇಕು.ಈ ಹಿನ್ನೆಲೆಯಲ್ಲಿ ಗೆಲ್ಲಲಿ, ಸೋಲಲಿ; ಬಸವಣ್ಣ ಅವರ 12ನೆ ಶತಮಾನದ ಕಲ್ಯಾಣ ನಾಡಿನ ಕ್ರಾಂತಿಯ ಆಶಯಗಳನ್ನು ಹೊಸ ಕಾಲದ ಪಲ್ಲಟಗಳಲ್ಲಿ ಪರಿಶೀಲಿಸಿ ಪರಿಷ್ಕರಿಸಿ ಅನುಷ್ಠಾನಗೊಳಿಸಬೇಕು. 

ಬದಲಾಗುತ್ತಿರುವ ಎಲ್ಲಾ ಜಾತಿಯ ಸಮಾಜಗಳಿಗೂ ಈ ತತ್ವ ಈ ಕಾಲ ದಲ್ಲಿ ಅಂಬೇಡ್ಕರ್ ಅವರು ಒತ್ತಾಯಿಸಿದ ಜಾತ್ಯತೀತ ದೇಶದ ಆಶಯಕ್ಕೆ ಸೂಕ್ತವಾಗಿದೆ. ಹಾಗೆಯೇ ಹೊಸ ಕಾಲದ ನಾಡಿನ ಅನಿವಾರ್ಯವಾಗಿದೆ. ಸಿದ್ದರಾಮಯ್ಯನವರು ಈ ಬಗ್ಗೆ ಮುಕ್ತವಾಗಿ, ಧೈರ್ಯವಾಗಿ ನುಡಿದರೆ; ಆ ಮೂಲಕ ದಮನಿತ ಎಲ್ಲ ಜಾತಿಗಳಿಗೂ ಸ್ವಾಭಿಮಾನ, ಅರಿವು ಮೂಡುತ್ತದೆ; ಹಾಗೆಯೇ ಕಾಂಗ್ರೆಸ್ ಪಕ್ಷ ತನ್ನ ಹಳೆಯ ಜನಪ್ರಿಯತೆಯನ್ನು ಸಾಧಿಸಿಕೊಳ್ಳುತ್ತದೆ.

*ಈ ತನಕ ರಾಜ್ಯ ರೈತ ಸಂಘ, ಮಾರ್ಕ್ಸ್ ವಾದಿ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಗಳು ಹಾಗೂ ಇತರೆ ಹಿಂದುಳಿದ ವರ್ಗಗಳು ಏನೇನು ಹೋರಾಟಗಳನ್ನು ಮಾಡಿವೆಯೋ... ಆ ಬಗ್ಗೆ ಸಿದ್ದರಾಮಯ್ಯ ಅವರು ಅವಲೋಕನ ಮಾಡಿಕೊಳ್ಳಬೇಕು... ಅವರ ಹಕ್ಕೊತ್ತಾಯಗಳಿಗೆ ತಕ್ಕ ಮಾನ್ಯತೆಗಳನ್ನು ನೀಡಬೇಕು. ತಬ್ಬಲಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಸ್ಪಶ್ಯ ದಲಿತರ ನಂತರಕ್ಕೆ ಎಚ್ಚರಗೊಂಡಿರುವ ಆದಿವಾಸಿ, ಅಲೆಮಾರಿ ಸಮುದಾಯಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು. ತಬ್ಬಲಿ ಸಮುದಾಯಗಳಿಗಿರುವ ಸಂವಿಧಾನಾತ್ಮಕ ಹಕ್ಕುಗಳನ್ನು ತಲುಪಿಸಬೇಕು. ಜಾತಿವಾರು ಜನಗಣತಿಯು ತಕ್ಕುದಾಗಿ ಆಗುವಲ್ಲಿ ಸುಗಮದಾರಿ ನಿರ್ಮಿಸಬೇಕು.

* ಯುವ ಜನಾಂಗದ ಭವಿಷ್ಯವನ್ನು ವಿವೇಚಿಸದೆ ನಾಳೆಯನ್ನು ಭಾವಿಸಲಾಗದು. ಯುವ ಜನಾಂಗ ಕೆಲಸವಿಲ್ಲದೆ ಕೂತಿದೆ. ಆ ಬಗೆಯ ಸಾಮಾಜಿಕ ಒತ್ತಡದ ಹೊರೆಯನ್ನು ಕಾಂಗ್ರೆಸ್ ಪಕ್ಷ ಇಳಿಸಬಲ್ಲದು ಎಂಬ ವಿಶ್ವಾಸದಲ್ಲಿ ಮತ ನೀಡಿದೆ. ‘ಪಾಕೆಟ್ ಮನಿ’ ನೀಡುವಂತೆ ಸಮಾಧಾನಪಡಿಸದೆ ಸಮಗ್ರ ಅಭಿವೃದ್ಧಿಯಲ್ಲಿ ಯುವ ಜನಾಂಗವನ್ನು ಒಳಪಡಿಸುವ ಭರದ ಕ್ರಮಗಳು ಆಗಬೇಕಿವೆ. ಈ ನಿಟ್ಟಿನಲ್ಲಿ ಹೊಸ ಬಗೆಯ ಉದ್ಯೋಗಾವಕಾಶಗಳನ್ನು ರೂಪಿಸಬೇಕು. ಅದಕ್ಕಾಗಿ ನಗರ ಹಾಗೂ ಹಳ್ಳಿಗಳೆರಡರ ಅಭಿವೃದ್ಧಿಯ ಸಮತೋಲನಕ್ಕೆ ತಕ್ಕಂತೆ ಯುವ ಜನಾಂಗವನ್ನು ಅಳವಡಿಸುವ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಕಡ್ಡಾಯವಾಗಿ ರೂಪಿಸಬೇಕಾಗಿದೆ. ಇಂತಲ್ಲಿ ಜಾಗತೀಕರಣದ ಕ್ರಮವನ್ನು ಅನ್ವಯಗೊಳಿಸ ಬೇಕಾದ ಜರೂರಿದೆ. ಅತ್ತ ಸಾಂಪ್ರದಾಯಿಕ ಕರಕುಶಲ ಸಮಾಜಗಳ ಉನ್ನತ; ಇತ್ತ ನಗರದ ಯುವ ಜನಾಂಗದ ಭವಿಷ್ಯದ ಪ್ರತಿ ಎರಡನ್ನು ಸಮತೋಲನಗೊಳಿಸುವ ಪ್ರಕ್ರಿಯೆಗಳತ್ತ ಕಾಂಗ್ರೆಸ್ ಸಾಗಬೇಕಿದೆ. ಬಹುಪಾಲು ನೊಂದ ಜಾತಿಗಳ ಯುವ ಜನಾಂಗ ಅತ್ತ ನಗರದ ಕೊಳಗೇರಿಗಳಲ್ಲಿ ಹಾದಿ ತಪ್ಪಿದ್ದರೆ; ಇತ್ತ ಮರಳಿ ಹಳ್ಳಿಗೆ ಬಂದು ಆಯಾ ಕೇರಿಗಳಲ್ಲಿ ದಿಕ್ಕು ತಪ್ಪಿ ಅಕ್ರಮಗಳಿಗೆ ಒಳಪಡುತ್ತಿವೆ. ಇವರ ಬಗ್ಗೆ ಇಡೀ ಸರಕಾರ ಎಲ್ಲ ಹಂತಗಳಲ್ಲೂ ಸೂಕ್ತ ಗಮನಹರಿಸಬೇಕು. ಇವರನ್ನೇ ಮರೆತರೆ ನಾಳಿನ ನಾಡಿನ ಪರಿಸ್ಥಿತಿ ತುಂಬಾ ಬಿಗಡಾಯಿಸುವುದು.
*ಸಾಮಾಜಿಕ ನ್ಯಾಯದ ಸಮತೆಯ ಶಿಕ್ಷಣವನ್ನು ಜಾರಿಗೊಳಿಸಬೇಕು. ವೃತ್ತಿಪರ ಶಿಕ್ಷಣ ಕರ್ನಾಟಕದ ಪ್ರಗತಿಯಲ್ಲಿ ಮುಂದಿದೆ ಎಂದು ಹೇಳಲಾಗುತ್ತದೆ. ಆದರೆ ಈ ಶಿಕ್ಷಣ ಕ್ರಮ ವ್ಯಾಪಾರದ ಭಾಗವಾಗಿದೆ. ಇದು ನ್ಯಾಯದ ಭಾಗವಾಗಿ ಸುಧಾರಣೆಗೊಳ್ಳಬೇಕಾ ಗಿದೆ. ವಿಶ್ವವಿದ್ಯಾಲಯಗಳು ಕೂಪಮಂಡೂಕ ವಾಗುತ್ತಿವೆ. ನಾಳಿನ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳನ್ನು ಮಕ್ಕಳಿಗೆ ನಿಯೋಜಿ ಸುವ ಶಿಕ್ಷಣ ಪದ್ಧತಿ ಇರಬೇಕು. ಕನ್ನಡ ಶಾಲೆಗಳನ್ನು ಮುಚ್ಚಬಾರದು. ಸ್ಥಳೀಯ ಜ್ಞಾನ ಪರಂಪರೆಗಳ ಭಾಗವಾದ ಹಳ್ಳಿಗಾಡಿನ ಮಕ್ಕಳಿಗೆ ಜಾಗತಿಕ ಹೆದ್ದಾರಿಗಳನ್ನು ತೋರಬೇಕು.

*ಮತೀಯ ಮೂಲಭೂತ ಮತಾಂಧತೆ ಯನ್ನು ಯಾವ ಕಾರಣಕ್ಕೂ ಸಿದ್ದರಾಮಯ್ಯ ನವರು ಮಂದು ಮಾಡಲಾರರು. ಅವರವರ ಧರ್ಮ, ಜಾತಿ,ಮತಭೇದ ಅವರವರ ಮನೆಗಳಲ್ಲಿ ಇರಲಿ; ಆದರೆ ಅವು ಸಾರ್ವಜನಿಕವಾಗಿ ಉಳಿದೆಲ್ಲಾ ಇತರರ ಮೇಲೆ ಅಧಿಕಾರ ಚಲಾಯಿಸದಿರಲಿ. ಈ ನಿಟ್ಟಿನಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ದೇವನೂರ ಮಹಾದೇವ ಅವರ ಸೂಕ್ತ ಸಲಹೆಗಳನ್ನು ಸಿದ್ದರಾಮಯ್ಯನವರು ಜಾರಿಗೊಳಿಸಬೇಕು. ಕುವೆಂಪು ಅವರ ವಿಶ್ವಮಾನವ ತತ್ವವನ್ನು ರಾಜಕೀಯವಾಗಿಯೂ ನಿಜಗೊಳಿಸುವ ಜವಾಬ್ದಾರಿ ಇಡೀ ಕಾಂಗ್ರೆಸ್ ಪಕ್ಷದ ಎಲ್ಲರ ಜವಾಬ್ದಾರಿಯಾಗಬೇಕು. ಕುವೆಂಪು ಸಾರಿದ ವೈಚಾರಿಕ ಜಾಗೃತಿಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಬೇಕು. ಹಾಗೆಯೇ ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕ್ರಮಗಳಲ್ಲಿ ಆ ಸಂಗತಿಗಳನ್ನು ಅಂತರ್ಗತಿಸಬೇಕು. ಹೀಗೆ ಸಲಹೆ ನೀಡುವುದು; ಅಪೇಕ್ಷೆಗಳನ್ನು ಒಪ್ಪಿಸುವುದು ಬಹಳ ಸುಲಭ. ಬಹಳ ಕಾಲದಿಂದ ಜಡ್ಡುಗಟ್ಟಿರುವ ಸಮಾಜಗಳನ್ನು ರಾತ್ರೋರಾತ್ರಿ ಬದಲಿಸಲು ಆಗದು.

ಆದರೆ ಈಗ ಬಹುಪಾಲು ಎಲ್ಲ ಸಮುದಯಗಳು ಬೇರೆ ಬೇರೆ ಪ್ರಮಾಣಗಳಲ್ಲಿ ಎಚ್ಚರಗೊಳ್ಳುತ್ತಿವೆ. ಆ ಬಗೆಯ ಎಚ್ಚರವನ್ನು ಸಿದ್ದರಾಮಯ್ಯ ಅವರು ನಾಡಿನ ಸಮಷ್ಟಿ ಶಕ್ತಿಯಾಗುವಂತೆ ಕಾರ್ಯತಂತ್ರ ರೂಪಿಸಬೇಕು. ನಿಷ್ಠೆಯಿಂದ ಜನತೆಗೆ ಬದ್ಧವಾಗಿ ತಕ್ಕ ನ್ಯಾಯ ನೀಡಿದರೆ; ಆಗ ಸಿದ್ದರಾಮಯ್ಯ ಅವರನ್ನು ಯಾರ್ಯಾರೂ ತಡೆಯಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಅವರಿಗೆ ಎಲ್ಲ ಒಳಿತೂ ಸಾಧ್ಯವಾಗಲಿ.

(ಕೃಪೆ-ಅಗ್ನಿ)

ಭಾರತದಲ್ಲಿ ಜಾತಿಪದ್ಧತಿ ಇದೆಯೇ? : ಬಾಲಗಂಗಾಧರ ತಂಡದ ಕುತರ್ಕ-ಡಾ. ರಾಜೇಂದ್ರ ಚೆನ್ನಿ 

ಲಡಾಯಿ ವಿಶೇಷ(ಭಾರತದಲ್ಲಿ ಜಾತಿಪದ್ಧತಿ ಇದೆಯೇ?  -ಸಂಪಾದಕರು-ಡಂಕಿನ್ ಝಳಕಿ
ಪ್ರಕಾಶಕರು-ಆನಂದಕಂದ ಪ್ರಕಾಶನ, ಮಲ್ಲಾಡಿಹಳ್ಳಿ)
    

ಭಾರತದಲ್ಲಿ ಜಾತಿವ್ಯವಸ್ಥೆ ಇದೆಯೇ? ಎನ್ನುವ ಪುಸ್ತಕವನ್ನು ನಾನು ಅತ್ಯಂತ ತೀವ್ರವಾದ ವೈಚಾರಿಕ ಕುತೂಹಲದಿಂದ ಓದಿದೆ ಮತ್ತು ಓದುತ್ತಿದ್ದೇನೆ. ಈ ಪುಸ್ತಕದ ಉಪಶೀರ್ಷಿಕೆಯಲ್ಲಿ ಅದನ್ನು ಜಾತಿ ವ್ಯವಸ್ಥೆಯನ್ನು ಕುರಿತು ಎಸ್.ಎನ್.ಬಾಲಗಂಗಾಧರ ಮತ್ತು ಅವರ ಸಂಶೋಧನಾ ತಂಡದ ವಿಚಾರಗಳು ಎಂದು ವಿವರಿಸಲಾಗಿದ್ದು ಈ ಪುಸ್ತಕದ ಸಂಪಾದನೆ ಹಾಗೂ ನಿರೂಪಣೆ ಡಂಕಿನ್ ಝಳಕಿಯವರದು ಎಂದು ನಮೂದಿಸಲಾಗಿದೆ.

ಈ ಕೃತಿಯು ನನ್ನಲ್ಲಿ ಹುಟ್ಟಿಸಿದ ವೈಚಾರಿಕ ಕುತೂಹಲವನ್ನು ಹೀಗೆ ವಿವರಿಸಬಹುದು. ಮನುಷ್ಯರು ಓದು, ಬುದ್ಧಿಶಕ್ತಿ, ತರ್ಕ ಹಾಗೂ ಭಾಷೆಯನ್ನು ಮಾನವ ದ್ವೇಷಿಯಾದ ಬೌದ್ಧಿಕ ಕೆಲಸಗಳಿಗೆ ಏಕೆ ಬಳಸುತ್ತಾರೆ? ಪಾಂಡಿತ್ಯವೆಂದು ಕರೆಯಲಾಗುವ ಸಂಗತಿಯು ಒಂದು ವಲಯದಲ್ಲಿ ಅಂತಃಕರಣ, ಪ್ರೀತಿ, ಇತರರ ಬಗ್ಗೆ ಸದ್ಭಾವನೆ ಮುಂತಾದ ಭಾವನೆಗಳಿಂದ ಸಂಪೂರ್ಣ ಪರಕೀಯವಾಗಿ, ಕ್ರೂರವಾದ ಅಭಿಪ್ರಾಯಗಳನ್ನು ಸಮರ್ಥಿಸುವ ‘ತರ್ಕದ ಟಗರ ಹೋರಟೆ’ ಯಾಕೆ ಆಗುತ್ತದೆ? ಬಹು ಸಂಖ್ಯಾತ ಜನರಿಗೆ ಮನುಷ್ಯರಾಗಿ ಬದುಕುವ ಅವಕಾಶಗಳೇ ಇಲ್ಲವಾಗುತ್ತಿರುವ ಬಡದೇಶದಲ್ಲಿ ಅತಿಶಯವಾದ ಸವಲತ್ತುಗಳನ್ನು ಪಡೆದಿರುವ ವಿಶ್ವವಿದ್ಯಾಲಯಗಳ ಬುದ್ಧಿಜೀವಿ ಹಾಗು ಸಂಶೋಧಕವರ್ಗವು ಈ ಜನರು ಆಳವಾಗಿ ನಂಬಿಕೊಂಡು ಬಂದಿರುವ sಸಮಾನತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಉಡಾಫೆಯಿಂದ ತಿರಸ್ಕರಿಸುವ ದುಷ್ಟತನದ ಮೂಲವು ಎಲ್ಲಿದೆ? ನಿರ್ದಿಷ್ಟವಾಗಿ ಹೇಳುವುದಾದರೆ ಪಾಂಡಿತ್ಯ ಮತ್ತು ಬುದ್ಧಿಶಕ್ತಿಗಳು evil ನ ಅತ್ಯಂತ ಆಳವಾದ ಕೆಡುಕಿನ ರೂಪಗಳೇಕೆ ಆಗುತ್ತವೆ? 

     ಈ ಕೃತಿಯು ನನ್ನಲ್ಲಿ ಇಂಥ ಅಪಾರವಾದ ವೈಚಾರಿಕ ಕುತೂಹಲವನ್ನು ಹುಟ್ಟಿಸಿದೆ. ವಿಶ್ವವಿದ್ಯಾನಿಲಯವೊಂದರ ಸಂಶೋಧನಾ ಕೇಂದ್ರದ ಅಂತಾರಾಷ್ಟ್ರೀಯ ವಿದ್ವಾಂಸರು ಸೇರಿ ಮಾಡಿದ ಸಂಶೋಧನೆಯ ಫಲವಾದ ಈ ಕೃತಿಯ ಬಗ್ಗೆ ಈ ಮಾತುಗಳನ್ನು ಹೇಳುತ್ತಿರುವುದು ಅನೇಕರಿಗೆ ಆಶ್ಚರ್ಯವನ್ನುಂಟುಮಾಡಬಹುದು. ಈ ಮಾತುಗಳನ್ನು ಹೇಳಲು ಕಾರಣವೇನೆಂದರೆ ನನ್ನ ಅನುಭವದಲ್ಲಿ ಇದು ಕನ್ನಡದಲ್ಲಿ ಬಂದ ಅತ್ಯಂತ ದುಷ್ಟ ಕೃತಿಯಾಗಿದೆ. ಈ ದುಷ್ಟತನವನ್ನು ನಾನು ಈವರೆಗೆ ಕಂಡಿದ್ದು internet ನ ತಾಣಗಳಲ್ಲಿ, ಬ್ಲಾಗ್‌ಗಳಲ್ಲಿ ಹಾಗೂ ಬಲಪಂಥೀಯ ಅನಿವಾಸಿ ಭಾರತೀಯರ ಶಿಕ್ಷಿತ ವಲಯದ ’ಬರಹ’ಗಳಲ್ಲಿ ಮಾತ್ರ. ಇವರುಗಳನ್ನು ಪ್ರಸಿದ್ಧ ಇತಿಹಾಸಕಾರರೂ, ಆಕ್ಸ್‌ಫರ್ಡ್ ವಿಶ್ವದ್ಯಾನಿಲಯದ ಪ್ರಾಧ್ಯಾಪಕರೂ ಆದ ಸಂಜಯ್ ಸುಬ್ರಹ್ಮಣ್ಯ ಅವರು NRKDಗಳೆಂದು ಅಂದರೆ Non Resident Knicker Dhari (ನಾನ್ ರೆಸಿಡೆಂಟ್ ನಿಕ್ಕರ್‌ಧಾರೀ)ಗಳು ಎಂದು ಕರೆದಿದ್ದಾರೆ. ಇದು ಅಲ್ಪಸಂಖ್ಯಾತವಲಯವಾಗಿದ್ದರೂ ಮಾಹಿತಿ ತಂತ್ರಜ್ಞಾನವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುವ articulate ವಲಯವಾಗಿದೆ. ವಿಶೇಷವೆಂದರೆ ಇಂದು ಜಗತ್ತಿನ ಹಲವಾರು ಅತ್ಯುತ್ತಮ ವಿದ್ವಾಂಸರು, ಸಂಶೋಧಕರು ಹಾಗೂ ಮಾನವಹಕ್ಕುಗಳ ಪರವಾದ ಹೋರಾಟಗಾರರು ಕೂಡ ಅನಿವಾಸಿ ಭಾರತೀಯರಾಗಿದ್ದಾರೆ. ಬಹುಶಃ ಈ ಕಾರಣದಿಂದಾಗಿಯೇ NRKDಗಳು ತಮ್ಮ ಅತ್ಯಂತ ವಿಕಾರವಾದ ದ್ವೇಷವನ್ನು  ತೋರಿಸುವುದು ’ಪ್ರಗತಿಪರ ಬುದ್ಧಿ ಜೀವಿಗಳ’ ಬಗ್ಗೆ. ಇತಿಹಾಸಕಾರ್ತಿ ರೋಮಿಲಾ ಥಾಪರ್‌ಗೆ ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಗೌರವಾನ್ವಿತ ಪೀಠಕ್ಕೆ ಆಹ್ವಾನಿಸಬೇಕೆಂದಾಗ ಮತ್ತು ಇತ್ತೀಚೆಗೆ ನರೇಂದ್ರ ಮೋದಿಗೆ ಉಪನ್ಯಾಸ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಬಾರದೆಂದು ಅಹವಾಲು ನೀಡಿದ ಅನಿಯಾ ಲೂಂಬಾ ಮುಂತಾದ ವಿದ್ವಾಂಸರ ವಿರುದ್ಧ ಈ NRKDಗಳು ಬಳಸಿದ ಬೈಗುಳಗಳನ್ನು ಯಾವ ಮರ್ಯಾದೆವಂತ ಪತ್ರಿಕೆಯೂ ಸಹ ಪ್ರಕಟಿಸಲಾರದು. ಈ  NRKD ವಿದ್ಯಮಾನದ ವಿವರವಾದ ಚರ್ಚೆಗಾಗಿ ವಿನಯ್ ಲಾಲ್ ಅವರ ಬರಹಗಳನ್ನು ನೋಡಬಹುದಾಗಿದೆ.

ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯಾ? ಎಂಬ ಕೃತಿಯೂ ಕೂಡ ಕನ್ನಡದ ಪ್ರಗತಿಪರ ಹೋರಾಟಗಾರರ ವಿರುದ್ಧ ತನ್ನ ವೈಚಾರಿಕ ಸಮರವನ್ನು ಸಾರುತ್ತದೆ. ಪುಸ್ತಕದ ಬೆನ್ನುಡಿಯಾಗಿ ಪ್ರಕಟವಾದ ಹಾಗು ಪುಸ್ತಕದೊಳಗೆ ಪುನರಾವರ್ತನೆಯಾಗುವ ಬಾಲಗಂಗಾಧರರ ಮಾತು ಹೀಗಿದೆ: ಕನ್ನಡದ ಪ್ರಗತಿಪರ ಹೋರಾಟಗಾರರ ಜೊತೆ ನಾವು ತಲೆ ಹಾಳಾಗುವಷ್ಟು ಚರ್ಚೆ ಮಾಡಿದ್ದೇವೆ. ಈ ಚರ್ಚೆಗಳಲ್ಲಿ ನಾವು ಕಂಡುಕೊಂಡಿದ್ದೇನೆಂದರೆ, ಜಾತಿವ್ಯವಸ್ಥೆಯ ಚೌಕಟ್ಟು ಎಂದರೇನು ಎಂಬುದರ ಬಗ್ಗೆ ಅವರಾರಿಗೂ ಸ್ಪಷ್ಟತೆ ಇಲ್ಲ. ಕೃತಿಯ ಉದ್ದಕ್ಕೂ ಬಾಲು ಸಂಶೋಧನಾ ತಂಡವು ಪ್ರಗತಿಪರರನ್ನೇ ಅಡ್ರೆಸ್ ಮಾಡುತ್ತದೆ. ಉದಾಹರಣೆಗೆ ಈ ಕೃತಿಯ ಪ್ರಸ್ತಾವನೆಯಲ್ಲಿ ಡಂಕಿನ್ ಝಳಕಿಯವರು ಕಂಬಾಲಪಲ್ಲಿ ದುರಂತದ ಬಗ್ಗೆ ಮಾಡಿರುವ ಚರ್ಚೆಯನ್ನು ಗಮನಿಸಿ(ಪುಟ ೯ರಿಂದ ೧೩). ಕಂಬಾಲಪಲ್ಲಿಯ ದುರಂತದಲ್ಲಿ ಬಲಿಯಾದ ದಲಿತರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ ನೆಪದಲ್ಲಿ ಆ ಕಗ್ಗೊಲೆಯ ನಂತರ ಸರಕಾರದಿಂದ ದಲಿತ ಸಮುದಾಯಕ್ಕೆ ನ್ಯಾಯ ಸಿಗದೇ ಇರುವುದಕ್ಕೆ  ಈ ಸಂಶೋಧಕರು ಪ್ರಗತಿಪರ ಬುದ್ಧಿಜೀವಿಗಳನ್ನು ಜವಾಬ್ದಾರರನ್ನಾಗಿ ಮಾಡುತ್ತಾರೆ. ಅವರು ಹೇಳುತ್ತಾರೆ: ಒಂದು ಕ್ಷಣ ಯೋಚಿಸಿ ನೋಡಿ; ಆ ಘಟನೆ ಒಂದು ಅಪರಾಧದ ಘಟನೆಯಷ್ಟೆ ಆಗಿ ಉಳಿದಿದ್ದರೆ, ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾದ ಪೊಲಿಸ್ ಕ್ರಮವನ್ನು ಸರಕಾರವೇ ತೆಗೆದುಕೊಳ್ಳಬಹುದಾಗಿತ್ತು. ಅಥವಾ ತೆಗೆದುಕೊಳ್ಳುವಂತೆ ಜನರೇ ಒತ್ತಡವನ್ನು ಹೇರಬಹುದಾಗಿತ್ತು. ಬದಲಾಗಿ, ಈ ಘಟನೆಯ ’ಅಸ್ಪೃಶ್ಯತೆ’ ಮತ್ತು ’ಜಾತಿ ಶೋಷಣೆ’ಗೆ ಒಂದು ಉದಾಹರಣೆ ಎಂದು ನಮ್ಮ ಬುದ್ಧಿಜೀವಿ ವಲಯವು ಘೋಷಿಸುತ್ತಲೆ, ರಾಜ್ಯ(ಸರಕಾರ)ವು ಈ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಶೋಷಿತರಿಗೆ ಪರಿಹಾರದ (ನಾವು ಮೇಲೆ ಕಾಣಿಸಿದ ಈ ಎರಡು) ಕ್ರಮಗಳನ್ನು ಕೈಗೊಳ್ಳುವ ಬದಲು ’ಅಸ್ಪೃಶ್ಯತೆ’ ಮತ್ತು ’ ಜಾತಿ ಶೋಷಣೆ’ಯನ್ನು ತೊಲಗಿಸುವುದು  ಹೇಗೆ  ಎಂದು ಯೋಚಿಸುತ್ತ ಕೂರುತ್ತದೆ. ಹೀಗೆ ಜಾತಿವ್ಯವಸ್ಥೆ ಕುರಿತ ತಪ್ಪುತಪ್ಪು ಸಿದ್ಧಾಂತಗಳಿಂದಾಗಿ, ಒಂದು ಅಪರಾಧದ ಘಟನೆಯು ಸರಿಯಾದ ವಿವರಣೆಯೇ ಇಲ್ಲದ ಒಂದು ಸಂಕೀರ್ಣ ಸಾಂಸ್ಕೃತಿಕ ಸಂಗತಿಯಾಗಿ ಮಾರ್ಪಡುತ್ತದೆ. (ಪು.೧೧-೧೨).
ಓದುಗರೇ ದಯವಿಟ್ಟು ನಂಬಿ. ಈ ಮಾತುಗಳು ನಿಜವಾಗಿಯೂ ನಾನು ಹೇಳಿದ ಪುಟಗಳಲ್ಲಿಯೇ ಇವೆ. ಪ್ರಾಯಶಃ ಈ ಪ್ರಸ್ತಾವನೆಯನ್ನು ಬರೆದ ಮೇಲೆ ನ್ಯಾಯಾಲಯವು ದಲಿತರ ಕೊಲೆಗಳಿಗೆ ಕಾರಣವಾದ ಆರೋಪಿಗಳನ್ನು ಖುಲಾಸೆ ಮಾಡಿದ್ದು ಕೂಡ ಕನ್ನಡ ಬುದ್ಧಿಜೀವಿ ವಲಯವು ಜಾತಿವ್ಯವಸ್ಥೆ ಕುರಿತಾದ ತಪ್ಪು ಸಿದ್ಧಾಂತಗಳನ್ನು ನಂಬಿರುವುದರಿಂದ!. ಇಲ್ಲದಿದ್ದರೆ ’ಅಪರಾಧ’ಕ್ಕೆ ತಕ್ಕುದಾದ ಶಿಕ್ಷೆಯನ್ನು ನ್ಯಾಯಾಲಯವು ಕೊಡುತ್ತಿತ್ತು. ಬಾಲೂ ಸಂಶೋಧನಾ ಕೇಂದ್ರವು ಹೆಚ್ಚಿನ ಕ್ಷೇತ್ರಕಾರ್ಯದ ಮೂಲಕ ಇದನ್ನು ಸಾಬೀತು ಪಡಿಸಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಇದು ಕೃತಿಯಲ್ಲಿರುವ ಏಕಮಾತ್ರ ಉದಾಹರಣೆಯಲ್ಲ. ಅಸ್ಪೃಶ್ಯತೆಯ ಆಚರಣೆ, ಜಾತಿ ತಾರತಮ್ಯ, ಉದ್ಯೋಗ ನಿರಾಕರಣೆ ಇಂಥ ಯಾವ ಸಂಗತಿ ನಡೆದರೂ ಅದನ್ನು ಕೇವಲ ಅಪರಾಧವೆಂದು ಗುರುತಿಸಿ ಹತ್ತಿರದ ಪೊಲೀಸ್ ಠಾಣೆಗೆ ಡಯಲ್ ಮಾಡಿದರೆ ಪರಿಹಾರವು ತಕ್ಷಣ ಸಾಧ್ಯವಾಗುತ್ತದೆ. ತೊಂದರೆಯೆಂದರೆ ಯೂರೋಪಿಯನ್ ಕ್ರಿಶ್ಚಿಯನ್ ಮಿಶನರಿಗಳು ಕ್ರಿಶ್ಚಿಯನ್ ಥಿಯಾಲಜಿಯ ಪ್ರಭಾವದಿಂದಾಗಿ ರಿಲಿಜನ್ ಹಾಗೂ ಜಾತಿವ್ಯವಸ್ಥೆಯ ಬಗ್ಗೆ ಒಂದು ಕಥೆಯನ್ನು ಕಟ್ಟಿ, ಅದನ್ನು ವಸಾಹತುಶಾಹಿಗೆ ಒಳಗಾದ ನಮ್ಮ ಶಿಕ್ಷಿತವರ್ಗವು ಸತ್ಯವೆಂದು ಭಾವಿಸಿಕೊಂಡು, ಆನಂತರ ಈಗಲೂ ಕೂಡ ನಮ್ಮ ಪ್ರಗತಿಪರರು ಅದನ್ನು ನಿತ್ಯಸಿದ್ಧಾಂತವೆಂದು ಭಾವಿಸಿಕೊಂಡಿದ್ದರಿಂದಾಗಿ ಈ ಎಲ್ಲಾ ಅಪರಾಧಗಳಿಗೆ ನ್ಯಾಯಬದ್ಧವಾದ ಪರಿಹಾರ ದೊರೆಯುತ್ತಿಲ್ಲ. ಈ ವಿಶ್ಲೇಷಣೆ ಇಲ್ಲಿಗೆ ನಿಲ್ಲುವುದಿಲ್ಲ. ಆಧುನಿಕ ಭಾರತದ ಎಲ್ಲಾ ಪ್ರಗತಿಪರ ಹೋರಾಟಗಾರರು ಇಂಥದೇ ಸೈದ್ಧಾಂತಿಕ ತಪ್ಪನ್ನು ಮಾಡುತ್ತಲೇ ಬಂದಿರುವುದರಿಂದ ನಮ್ಮ ಬಹುಪಾಲು ಸಮಸ್ಯೆಗಳು ಉಂಟಾಗಿವೆ. ಇವುಗಳಿಗೆ ’ಹಿಂದೂಯಿಜಂ’ ಅಥವಾ ’ಜಾತಿವ್ಯವಸ್ಥೆ’ ಕಾರಣಗಳಲ್ಲವೇ ಅಲ್ಲ. ಏಕೆಂದರೆ ಇಡೀ ಕೃತಿಯ ಮುಖ್ಯವಾದವೆಂದರೆ ಇವೆರಡೂ ನಿಜವಾಗಿ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ. ಅವು ಪಶ್ಚಿಮ ನಾಗರಿಕತೆಯು ಕ್ರಿಶ್ಚಿಯನ್ ಥಿಯಾಲಜಿಯ ಪ್ರಭಾವದಲ್ಲಿ ತನ್ನನ್ನು ತಾನು (ಅಥವಾ ತನ್ನ ಅನುಭವವನ್ನು) ವಿವರಿಸಲು ಕಟ್ಟಿಕೊಂಡ ರಚನೆಗಳು. ಈ ರಚನೆಗಳನ್ನು ಒಪ್ಪಿಕೊಂಡ ಪ್ರಗತಿಪರರು ಗೊತ್ತಿಲ್ಲದೆ ತಪ್ಪು ದಾರಿ ಹಿಡಿದರು. ಈ ವಾದಕ್ಕೆ ಉದಾಹರಣೆಯಾಗಿ ಜ್ಯೋತಿಬಾ ಫುಲೆ ಹಾಗೂ ಅಂಬೇಡ್ಕರರ ಪ್ರಸ್ತಾಪವಿದೆ. ಅವರಿಬ್ಬರಿಗೂ ಜಾತಿಗೆ ಸಂಬಂಧಿಸಿದ ಕಹಿ ಅನುಭವಗಳಾಗಿದ್ದಿರಬಹುದು; ಆದರೆ ಅವುಗಳನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಅವರಿಬ್ಬರು ಆಧರಿಸಿದ್ದು ಕ್ರಿಶ್ಚಿಯನ್ ಥಿಯರಿ- ವಸಾಹತುಶಾಹಿ ಕಟ್ಟಿದ ಕತೆಯನ್ನು. (ಪು೮೭-೮೮)
"ಅಂಬೇಡ್ಕರ್ ಮತ್ತು ಫುಲೆಯಂಥವರು ಭಾರತೀಯ ಸಮಾಜದಲ್ಲಿ ಅನ್ಯಾಯವನ್ನು ಅನುಭವಿಸಿದ್ದರು ಮತ್ತು ಅದನ್ನು ಬದಲಾಯಿಸಲು ಬಯಸಿದ್ದರು ಎಂದು ಒಪ್ಪಿಕೊಳ್ಳೋಣ, ಅಂತೆಯೇ ಒಪ್ಪಿಕೊಳ್ಳಬೇಕಾದ ಇನ್ನೊಂದು ವಿಚಾರವೆಂದರೆ ಇವರ ಕಹಿ ಅನುಭವಗಳು, ಅದರಿಂದ ಹುಟ್ಟಿದ್ದ ಧೋರಣೆಗಳು ಹಾಗೂ ನಕಾರಾತ್ಮಕವಾದ  ಭಾವನೆಗಳು ತಕ್ಷಣವೇ ಹಿಂದೂ ಜಾತಿವ್ಯವಸ್ಥೆಯ ಕುರಿತ ಪ್ರೊಟೆಸ್ಟೆಂಟರ ಕಥೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಅದರ ಸಾಮಾಜಿಕ ಸ್ವರೂಪದ ಬಗೆಗಿನ ಅವರ ನಕಾರಾತ್ಮಕ ನೈತಿಕ ತೀರ್ಮಾನಗಳ ಜೊತೆ ತಳಕು ಹಾಕಿಕೊಂಡಿತು"(ಪು. ೮೭). ಇಷ್ಟು ಮಾತ್ರವಲ್ಲ ಅಂಬೇಡ್ಕರ್, ಫುಲೆ ಇವರ ಪ್ರೇರಣೆಯಿಂದ ಹುಟ್ಟಿಕೊಂಡ ಚಳುವಳಿಗಳು ಈ ಕಾರಣದಿಂದಾಗಿಯೇ ಬಹುಪಾಲು ನಕಾರಾತ್ಮಕವಾಗಿದ್ದವು ಎಂದು ಈ ಸಂಶೋಧನಾ ತಂಡವು ವಾದಿಸುತ್ತದೆ. 

 ಈ ಮೂಲಕ ಒಂದೆಡೆ ಅನ್ಯಾಯದ ಯಾವುದಾದರೂ ಅನುಭವಗಳು ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧದ ಹೋರಾಟದ ನಡುವೆ ಸಂಬಂಧವನ್ನು ಬೆಸೆಯಲಾಯಿತು. ಇದು ಅತ್ಯಂತ ನಕಾರಾತ್ಮಕ ಭಾವನೆ ಮತ್ತು ನಡವಳಿಕೆಗಳಿಂದ ಪ್ರಚೋದಿತ ಮಾದರಿಯ ಸಾಮಾಜಿಕ ನ್ಯಾಯಕ್ಕಾಗಿನ ಚಳುವಳಿಗಳನ್ನು ಹುಟ್ಟುಹಾಕಿತು. ಇಲ್ಲಿನ ಸಾಮಾಜಿಕ ಸ್ವರೂಪವನ್ನು ಮತ್ತು ಅದನ್ನು ಉಳಿಸಿಕೊಂಡು ಬರುವಂಥ ಗುಂಪುಗಳನ್ನು ನಾಶಪಡಿಸುವುದೊಂದೇ ನ್ಯಾಯವನ್ನು ತರಲು ಇರುವ ಮಾರ್ಗವೆಂದು ಈ ಚಳುವಳಿಗಳು ವಾದಿಸಿದವು" (ಪು.೮೯). ಅಂದರೆ ಅಂಬೇಡ್ಕರ್ ಹುಟ್ಟುಹಾಕಿದ ಚಳುವಳಿಗಳು ಸೈದ್ಧಾಂತಿಕವಾಗಿ ತಪ್ಪಾಗಿದ್ದವು. ಮಾತ್ರವಲ್ಲ ಅದರಿಂದಾಗಿ ಕೇವಲ ಜಾತಿದ್ವೇಷವನ್ನು ಗಟ್ಟಿಗೊಳಿಸಿದವು ಎಂದು ಇಲ್ಲಿ ತೀರ್ಮಾನವನ್ನು ನೀಡಲಾಗಿದೆ. ಅಂದ ಹಾಗೆ ಜಾತಿವಿರೋಧೀ ಚಳುವಳಿಗಳ ಬಗ್ಗೆ ಬಲಪಂಥೀಯರ ನಿಲುವೂ ಇದೇ ಆಗಿದೆ. ನಾನು ಉದ್ಧರಿಸಿದ ವಾಕ್ಯಗಳಲ್ಲಿ "ಗುಂಪು" ಎನ್ನುವುದು ಬ್ರಾಹ್ಮಣ ಜಾತಿ (ಮತ್ತು ಕೆಲವೊಮ್ಮೆ ಮೇಲ್ಜಾತಿಗಳು) ಎಂದು ಈ ಕೃತಿಯು ಬಹಳ ಸ್ಪಷ್ಟವಾಗಿ ಹೇಳುತ್ತದೆ. ಅಂಬೇಡ್ಕರ್ ಹಾಗೂ ಈ ದೇಶದ ದಲಿತ ಜನಾಂಗಗಳು, ಪ್ರಗತಿಪರರು ಪಾಲುಗೊಂಡಿದ್ದ ಚಳುವಳಿಗಳನ್ನು ಈ ಕೃತಿಯು ಹೀಗೆ ಕಸದಬುಟ್ಟಿಗೆ ಎಸೆಯಲು ಪ್ರಯತ್ನಿಸಿರುವುದು ಕೃತಿಯ ಉದ್ದಕ್ಕೂ ಸ್ಪಷ್ಟವಾಗಿದೆ. ಇದಕ್ಕೆ ಪೂರಕವಾಗಿ, ಜಾತಿಯಿಂದಾಗಿ ಉಂಟಾಗಿದೆಯೆನ್ನಲಾಗುವ ತಾರತಮ್ಯದ ಕತೆಗಳು ವಸ್ತುಸಂಗತಿಗಳಲ್ಲವೆಂದು ವಾದಿಸಲಾಗಿದೆ. ವಿವೇಕಾನಂದರು ಮಲಬಾರಿನಲ್ಲಿ ನಾಯರ್‌ಜಾತಿಯವರ ಎದುರು ಪರೆಯಾಗಳು (ದಲಿತರು) ಬೀದಿಯಲ್ಲಿ ಬರಬಾರದು ಎಂಬುದನ್ನು ಖಂಡಿಸಿದ  ಸಂಗತಿಯೂ ಕೂಡಾ ವಸ್ತು ಸಂಗತಿಯಲ್ಲ. ಅದು ಜಾತಿ ತಾರತಮ್ಯದ ಕತೆಗಳಿಂದ ಪ್ರೇರಿತವಾದ ತಪ್ಪು ನಿರೂಪಣೆಯೆಂದು ಬಾಲು ವಾದಿಸುತ್ತಾರೆ.(ಪು. )

ಇದೆಲ್ಲದರ ಪರಾಕಾಷ್ಠೆಯಾಗಿ, ನಾನು ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ, ವೈಚಾರಿಕ ದುಷ್ಟತನದ  ಉದಾಹರಣೆಯನ್ನು ಈಗ ನೋಡಬಹುದು. ಸಂಶೋಧನಾ ತಂಡದ ಪ್ರಕಾರ ಕ್ರಿಶ್ಚಿಯನ್ ಥಿಯಾಲಜಿ, ವಸಾಹತುಶಾಹಿಗಳಿಂದ ಪ್ರೇರಿತವಾದ ಬುದ್ಧಿಜೀವಿಗಳು ಇಟ್ಟುಕೊಂಡಿರುವ ತಪ್ಪು ಸಿದ್ಧಾಂತಗಳಿಂದ ಪ್ರಭಾವಕ್ಕೆ ಒಳಗಾಗಿರುವ ನಮ್ಮ ಎನ್‌ಜಿಓಗಳು ಹಾಗೂ ಮಾಧ್ಯಮಗಳು ಕೂಡ  ಜಾತಿವ್ಯವಸ್ಥೆ ಹಾಗೂ ದಲಿತರ ದೌರ್ಜನ್ಯದ ಬಗ್ಗೆ ಉತ್ಪ್ರೇಕ್ಷಿತವಾದ ಮಾತುಗಳನ್ನೇ ಹೇಳುತ್ತವೆ. ಇವುಗಳಿಗೆ ಸರಿಯಾದ ಆಧಾರವಿಲ್ಲ. ತಂಡವು ಕೊಡುವ ಉದಾಹರಣೆಯೆಂದರೆ ‘ಸಾಕ್ಷಿ’ ಎಂಬ ಎನ್‌ಜಿಓ ಸಂಸ್ಥೆ ಹೊರತಂದ ದ ದಲಿತ್ ಹ್ಯೂಮನ್ ರೈಟ್ಸ್ ಮಾನಿಟರ್ ೧೯೯೯-೨೦೦೦ (೨೦೦೦)ಎಂಬ ಹೊತ್ತಿಗೆ. ಈ ಹೊತ್ತಿಗೆಯು ಏಪ್ರಿಲ್ ೧೯೯೯ ರಿಂದ ಮಾರ್ಚ್ ೨೦೦೦ದ ನಡುವೆ ದಲಿತರ ಮೇಲೆ ನಡೆದ ದೌರ್ಜನ್ಯದ ಸುಮಾರು ೨೨೬ ಘಟನೆಗಳನ್ನು ಹಾಗೂ ದಲಿತರ ಮೇಲೆ ನಡೆದ ದೌರ್ಜನ್ಯವನ್ನು ಕುರಿತ ನಿಜಾಂಶಗಳ ಇಪ್ಪತ್ತು ವರದಿಗಳನ್ನು ವರದಿ ಮಾಡಿದೆ. ಅಲ್ಲದೆ ಇವುಗಳ ಆಧಾರದ ಮೇಲೆ "ಅಸ್ಪೃಶ್ಯತೆ ಅಸ್ತಿತ್ವದಲ್ಲಿಲ್ಲ" "ಜಾತಿ ಹಿಂಸೆಗಳು ತಟಸ್ಥವಾಗಿವೆ" "ಜಾರಿಯಲ್ಲಿರುವ ಸಂವಿಧಾನಾತ್ಮಕ ಹಾಗೂ ಕಾನೂನು ಬದ್ಧ ಕಟ್ಟಳೆಗಳು ದಲಿತರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ" ಎನ್ನುವ ಮಿಥ್‌ಗಳನ್ನು ಈ ವರದಿಯು ಪ್ರಶ್ನಿಸುತ್ತದೆ. ಇದರ ಬಗ್ಗೆ ಸಂಶೋಧನಾ ತಂಡವು ನೀಡುವ ಒಂದು ಟಿಪ್ಪಣಿಯನ್ನು ನನಗೆ ಗೊತ್ತಿರುವ ಹಾಗೆ ಹಿಟ್ಲರ್‌ನ ಅನುಯಾಯಿಗಳು ಯಹೂದಿಗಳ ಕೊಲೆಗಳ ಬಗ್ಗೆ ಮಾಡಿದ ಟಿಪ್ಪಣಿಗಳ ಹೊರತಾಗಿ ನಾಗರಿಕ ಜಗತ್ತಿನ ಇತಿಹಾಸದಲ್ಲಿ ಯಾರೂ ಮಾಡಿದಂತೆ ತೋರುವುದಿಲ್ಲ.
ಟಿಪ್ಪಣಿಯು ಹೀಗಿದೆ-"ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ೨೪ ಪ್ರತಿಶತ ದಲಿತರೇ ಇರುವಾಗ (೨೦೦೧ ರ ಜನಗಣತಿಯ ಪ್ರಕಾರ ಪರಿಶಿಷ್ಟ ಜಾತಿಗಳು ೧೬ ಪ್ರತಿಶತ, ಪರಿಶಿಷ್ಟ ಬುಡಕಟ್ಟಿನವರು ೮ ಪ್ರತಿಶತಕ್ಕಿಂತ ಮೇಲಿದ್ದಾರೆ), ಕೇವಲ ೩೮ ಕೊಲೆಗಳಿಂದ ಭಾರತದಲ್ಲಿ ಜಾತಿಯ ತಾರತಮ್ಯತೆ  ಇದೆಯೆಂದು ನಿರ್ಣಯಕ್ಕೆ ಬರಲು ಹೇಗೆ ಸಾಧ್ಯ? (ಪು. ೧೨೩) ಈ ಹೇಳಿಕೆಗೆ ಕೊಟ್ಟಿರುವ ಅಡಿಟಿಪ್ಪಣಿಯ ಪ್ರಕಾರ ಇಂಥ ದೊಡ್ಡ ಹೇಳಿಕೆಯನ್ನು ಸಮರ್ಥಿಸಲು ವಿಸ್ತಾರವಾದ ಸೈದ್ಧಾಂತಿಕ ಚರ್ಚೆ ಮತ್ತು ಒಂದು ಸಿದ್ಧಾಂತದ ಅವಶ್ಯಕತೆ ಇರುತ್ತದೆ’ (ಅದೇ ಪುಟದ ಅಡಿ ಟಿಪ್ಪಣಿ)
ಹೇಗಿದೆ ತರ್ಕ? ದಲಿತರ ಮೇಲೆ ದೌರ್ಜನ್ಯವೂ ನಡೆಯುತ್ತದೆ ಎಂದು ಸಾಬೀತು ಮಾಡಲು ಎರಡೇ ಉಪಾಯಗಳು! ಒಂದು, ದಲಿತರ ಶೇಕಡಾವಾರು ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕೊಲೆಗಳನ್ನು ತಕ್ಷಣವೇ ನಾವೆಲ್ಲಾ ಮಾಡಬೇಕು! ಇದನ್ನು ದಲಿತ ಪರವಾಗಿರುವ ಪ್ರಗತಿಪರರೇ ಮಾಡಬೇಕು! ಏಕೆಂದರೆ ಈ ಕೃತಿಯ ಭಾಷೆಯಲ್ಲಿ ಅವರು ದಲಿತಪರವಾಗಿ ತಮ್ಮ ವಿಚಾರಗಳನ್ನು "ಮಾರಾಟ ಮಾಡಿ" ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇನ್ನೊಂದು ಉಪಾಯವೆಂದರೆ ಇಷ್ಟು ಸಣ್ಣ ಪ್ರಮಾಣದಲ್ಲಿ ದಲಿತರ ಕೊಲೆ ನಡೆಯುತ್ತಿರುವುದಕ್ಕಾಗಿ ಒಂದು ಸಿದ್ದಾಂತವನ್ನು, ಕ್ರಿಶ್ಚಿಯನ್ ಥಿಯಾಲಜಿಯ ಹಾಗೂ ವಸಾಹತುಶಾಹಿಯ ಪ್ರಭಾವವಿಲ್ಲದ ಸಿದ್ಧಾಂತವನ್ನು ತಕ್ಷಣವೇ ಕಟ್ಟುವುದು. ನಮ್ಮ ಸಂವಿಧಾನ ಹಾಗೂ ನಾಗರಿಕ ಸಮಾಜದ ತಿಳುವಳಿಕೆಯ ಪ್ರಕಾರ ಒಬ್ಬ ದಲಿತನ ಕೊಲೆಯದರೂ ಅದಕ್ಕೆ  ನಾವೆಲ್ಲಾ ಆಘಾತಗೊಳ್ಳಬೇಕು. ಆದರೆ ಈ ಸಂಶೋಧನಾ ತಂಡದ ದುಷ್ಟ ತರ್ಕದ ಪ್ರಕಾರ ಅದು ಬೇಕಾಗಿಲ್ಲ.        
          
ಈ ವಾದವನ್ನು ವಿಸ್ತರಿಸಿ ನೋಡಿ. ದೆಹಲಿಯಲ್ಲಿ ಐದು ವರ್ಷದ ಹಸುಳೆಯ ಮೇಲೆ ಲೈಂಗಿಕ ಅತ್ಯಾಚಾರವಾಗಿದೆ. ಇತ್ತೀಚೆಗೆ ಯುವತಿಯೊಬ್ಬಳ ಗ್ಯಾಂಗ್‌ರೇಪ್ ಆಗಿದೆ. ನಮ್ಮ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸಂಖ್ಯೆಗೆ ಅನುಗುಣವಾದ ಪ್ರಮಾಣದಲ್ಲಿ ಮಾನಭಂಗಗಳು ಆಗುವವರೆಗೆ ಇಂಥ ಘಟನೆಗಳು ಸ್ತ್ರೀಯರ ವಿರುದ್ಧ ಆಗುತ್ತಿರುವ ಅನ್ಯಾಯವೆಂದಾಗಲೀ ಅಥವಾ ಇಂಥ ಅಪರಾಧಗಳಿಗೆ ಸಮಾಜದಲ್ಲಿರುವ ಕೆಲವು ಸಂಗತಿಗಳಾಗಲೀ ಕಾರಣವೆಂದು ವಾದಿಸಬಾರದು. ಸ್ತ್ರೀವಾದಿಗಳಂತೂ ಮಾತನಾಡಲೇಬಾರದು. ಏಕೆಂದರೆ ಅವರು ಬಳಸುವ ಸ್ತ್ರೀವಾದೀ ಚೌಕಟ್ಟುಗಳು ಪಶ್ಚಿಮದಿಂದಲೇ ಬಂದಿವೆಯಲ್ಲವೇ?

ಕೃತಿಯ ಉದ್ದಕ್ಕೂ ಇಂಥ ವಾದಗಳಿವೆ. ಅವುಗಳಲ್ಲಿ ಎರಡು ಸಂಗತಿಯನ್ನು ಪ್ರಸ್ತಾಪಿಸಿ ಲೇಖನವನ್ನು ಮುಗಿಸುತ್ತೇನೆ. ಸಂಶೋಧನಾ ತಂಡದವರಿಗೆ ರೋಮಾಂಚನವಾಗುವಂಥ ಒಂದು ಮಹಾ ಸಿದ್ಧಾಂತವನ್ನು ಬಾಲು ಅವರು ಪ್ರಸ್ತಾಪಿಸಿ, ಬೆಳೆಸುತ್ತಾರೆ. ಅದು ಹೀಗಿದೆ. ಅವರು ನೋಡಿದಂತೆ ಬ್ರಾಹ್ಮಣ ಒಳಪಂಗಡಗಳಲ್ಲಿ ಶ್ರೇಣೀಕರಣದ ಭಾವನೆಯಿಲ್ಲ.  ಜಗಳಗಳಿರಬಹುದು. ಆದರೆ ಮುಸ್ಲಿಮರಲ್ಲಿ, ಲಿಂಗಾಯತರಲ್ಲಿ, ದಲಿತರೂ ಸೇರಿದಂತೆ ಕೆಳಜಾತಿಗಳಲ್ಲಿ ತಾರತಮ್ಯ ಮಾತ್ರವಲ್ಲ, ಶ್ರೇಣೀಕರಣದ ಗಟ್ಟಿಯಾದ ಭಾವನೆಗಳಿವೆ. ಬ್ರಿಟಿಷರು ತಮ್ಮ ಪ್ರೊಟೆಸ್ಟಂಟ್ ರಿಲಿಜನ್‌ನಿಂದಾಗಿ ಬ್ರಾಹ್ಮಣರನ್ನು ಪುರೋಹಿತಶಾಹಿ (ಪ್ರೀಸ್ಟ್‌ಲಿ ಕ್ಲಾಸ್) ಎಂದುಕೊಂಡು ಅವರನ್ನು ದೂರವಿಟ್ಟು ಹೆಚ್ಚಾಗಿ ಈ ಜಾತಿಗಳ ಜತೆ ಒಡನಾಟವಿಟ್ಟುಕೊಂಡರು. ಈ ಜಾತಿಗಳಲ್ಲಿ (ಮುಸ್ಲಿಮರಲ್ಲಿ, ಲಿಂಗಾಯತರಲ್ಲಿ, ದಲಿತರೂ ಸೇರಿದಂತೆ ಕೆಳಜಾತಿಗಳಲ್ಲಿ) ಶ್ರೇಣೀಕರಣದ ಭಾವನೆ ದಟ್ಟವಾಗಿರುವುದರಿಂದ ಒಂದು ಕಡೆ ಬ್ರಿಟಿಷರು  ಜಾತಿವ್ಯವಸ್ಥೆಯೆಂದರೆ ತಾರತಮ್ಯ ಮತ್ತು ಶ್ರೇಣೀಕರಣವೆನ್ನುವ ಕಲ್ಪನೆಗೆ ಬಂದರು. ಇನ್ನೊಂದುಕಡೆಗೆ ವಸಾಹತುಶಾಹೀ ಪ್ರಜ್ಞೆಯಿಂದಾಗಿ ಈ ಜಾತಿಗಳಿಂದ ಬಂದ (ಉದಾಹರಣೆಗೆ ಅಂಬೇಡ್ಕರ್) ಭಾರತೀಯ ಜಾತಿವ್ಯವಸ್ಥೆಯನ್ನು ಅನೈತಿಕ ಶ್ರೇಣೀಕರಣದ ವ್ಯವಸ್ಥೆಯೆಂದು ತಪ್ಪಾಗಿ ಗ್ರಹಿಸಿದರು. ಈ ಪರಿಕಲ್ಪನೆ ಈಗಿನ ಪ್ರಗತಿಪರರು, ಬುದ್ಧಿಜೀವಿಗಳಲ್ಲಿ ಹಾಗೇ ಉಳಿದಿದೆ. ಬಾಲು ಅವರ ಪ್ರಕಾರ ನಿಜವೇನೆಂದರೆ ಇಂಥ ತಪ್ಪು ಗ್ರಹಿಕೆಯ ಜವಾಬ್ದಾರಿ ಕೆಳವರ್ಗ/ಜಾತಿಯವರದೇ ಹೊರತು ಬ್ರಾಹ್ಮಣರದಲ್ಲ. ತಾಳಿ, ನಾನು ಅವರ ವಾದವನ್ನು ತಿರುಚಿ ಹೇಳುತ್ತಿದ್ದೇನೆಂದು ಅಂದುಕೊಳ್ಳಬಹುದಾದ್ದರಿಂದ ಅವರ ಮಾತುಗಳನ್ನೇ ಈ ಕೃತಿಯಿಂದ ಉದ್ಧರಿಸುತ್ತೇನೆ.
ಮಾದಿಗರಲ್ಲಿನ ಆಂತರಿಕ ರಚನೆ ಹಾಗೂ ಹೊಲೆಯರ ಜೊತೆಗಿನ ಅವರ ಒಡನಾಟದ ಸ್ವರೂಪವನ್ನು ಭಾರತೀಯ ಸಮಾಜದ ರಚನೆ ಎಂಬ ತಪ್ಪು ನಂಬಿಕೆಯನ್ನು ಬೆಳೆಸಿಕೊಂಡ ಐರೋಪ್ಯರು ಈ ’ನಿಜ’ವನ್ನು ಒಳಗೊಳ್ಳಲು ಒಂದು ಸೈದ್ಧಾಂತಿಕ ಚೌಕಟ್ಟನ್ನು ಹುಡುಕಿದರು. ಹಾಗೂ ಅವರು ಅದನ್ನು ಪುರುಷಸೂಕ್ತ ಹಾಗೂ ಮನುಸ್ಮೃತಿಯಲ್ಲಿ ಕಂಡರು. ಅನಂತರ ಇಂಥ ರಚನೆಯನ್ನು ಎಲ್ಲರ ಮೇಲೆ ಬಲಾತ್ಕಾರವಾಗಿ ಹೇರಿದ ’ಅಪರಾಧಿ’ಗಳಿಗಾಗಿ ಹುಡುಕಾಡಿದರು. ಅವರಿಗೆ ’ಬ್ರಾಹ್ಮಣ ಪುರೋಹಿತರು’ ಸಿಕ್ಕಿದರು(ಪು.೨೩೩).

ಅಂದರೆ ಮಾದಿಗರು-ಹೊಲೆಯರು ತಮ್ಮ ಮಧ್ಯೆ ತಾರತಮ್ಯ, ಶ್ರೇಣೀಕರಣಗಳನ್ನು ಪಾಲಿಸಿದ್ದರಿಂದ ಐರೋಪ್ಯರು ಜಾತಿವ್ಯವಸ್ಥೆಯ ಸಿದ್ಧಾಂತವನ್ನು ಕಟ್ಟಲು ಕಾರಣವಾಯಿತು. ಆದ್ದರಿಂದ ಈ ಜಾತಿಗಳಿಂದ ಬರುವ ಎಲ್ಲಾ ಸಾಹಿತಿಗಳು, ಹೋರಾಟಗಾರರು ಜಾತಿ ವ್ಯವಸ್ಥೆಯ ಸಿದ್ಧಾಂತಕ್ಕೆ ತಮ್ಮವರ ಜಾತಿಗಳೇ ಮುಖ್ಯ ಕಾರಣವೆನ್ನುವ ಪಾಪಪ್ರಜ್ಞೆ ಬೆಳೆಸಿಕೊಳ್ಳಬೇಕು. ಹಾಗೆ ಬಾಲು ಹೇಳಲಿಕ್ಕಿಲ್ಲವೆಂದುಕೊಳ್ಳಬೇಡಿ. ಅವರು ಹೇಳುತ್ತಾರೆ: ಅವರ ಹೇಳಿಕೆ ಕೆಳಜಾತಿಗಳಿಂದ ಬಂದ ಜಾತಿವ್ಯವಸ್ಥೆಯ ವಿರುದ್ಧ ಬಂಡೆದ್ದ ಪ್ರತಿಭಟನಾಕಾರರ ಬಗ್ಗೆ - ಇಷ್ಟನ್ನು ಹೇಳಬಹುದು! ಜಾತಿ ವ್ಯವಸ್ಥೆಯ ಕುರಿತು ಅವರಿಗಿರುವ ಗೀಳಿಗೆ ಕಾರಣ ಹೈರಾರ್ಕಿಯು ಅವರ ಜೀವನದಲ್ಲಿ ನಿತ್ಯ ಅನುಭವ. ಆದರೆ ಗಮನಿಸಬೇಕಾದ ವಿಚಾರವೆಂದರೆ, ಈ ಅನುಭವಕ್ಕೆ ಬ್ರಾಹ್ಮಣರು ಕಾರಣರಲ್ಲ. ಬದಲಿಗೆ ಅವರದೇ ಜಾತಿಯವರು ( ಪು.೨೩೩ ಮತ್ತು ೨೩೪).

ಇಷ್ಟೆಲ್ಲ ಹೇಳಿದ ಮೇಲೆ ಈ ಸಂಶೋಧನಾ ತಂಡವು ಮೀಸಲಾತಿಯ ಬಗ್ಗೆ ಏನು ಹೇಳುತ್ತದೆ ಎಂದು ನೀವೇ ಊಹಿಸಬಹುದು. ಆದರೂ ಈ ಲೇಖನದ ಕೊನೆಯ ಮಾತು ಸಂಶೋಧನಾ ತಂಡದ್ದೇ ಆಗಲಿ ಎಂದು ಉದ್ಧರಿಸುತ್ತಿದ್ದೇನೆ: ಕಡಿಮೆ ಅಂಕಗಳನ್ನು ಗಳಿಸಿದರೂ ಮುಂದಿನ ತರಗತಿಗೆ ತೇರ್ಗಡೆಗೊಳಿಸುವ ಮತ್ತು ಕೆಲಸ ಕೊಡಿಸುವಂತಹ ಮೀಸಲಾತಿಯು ಜನರಿಗೆ ಹೆಚ್ಚು ಪರಿಶ್ರಮ ಪಡದೆಯೇ ಫಲವನ್ನು ಅನುಭವಿಸುವಂತೆ ಪ್ರೋತ್ಸಾಹಿಸುತ್ತದೆ (ಪು.೧೭೭). ಮೀಸಲಾತಿ ಪಡೆಯುವ ಜಾತಿಗಳು ಕ್ರಮೇಣ ಅವನತಿ ಹೊಂದುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ ಒಂದು ಜಾತಿಯನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದಿದ್ದರೆ ಆ ಜಾತಿಗೆ ಮೀಸಲಾತಿಯನ್ನು ಕೊಡಿ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ’ದಲಿತರ’ ಏಳಿಗೆಯಾಗದಿರಲು ಕಾರಣ ಜಾತಿವ್ಯವಸ್ಥೆಯಲ್ಲ. ಬದಲಿಗೆ ಅದಕ್ಕೆ ಕೊಟ್ಟ ಮೀಸಲಾತಿಯೆಂಬ ಔಷಧಿ ( ಪು.೧೭೮-೧೭೯)
.
ಓದುಗರೆ, ದಲಿತರಿಗೆ ಮೀಸಲಾತಿ ಕೊಡಿಸಿ ಅವರನ್ನು ನಾಶಮಾಡಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ನಾವೆಲ್ಲ ಸೇರಿ ಧಿಕ್ಕಾರವೆನ್ನಬಹುದೆ?!  
                                                     

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...