Tuesday, September 17, 2013

ಟೀಕೆಗೆ ಉತ್ತರ : ಕುವೆಂಪು ಚಿಂತನೆಹೃದಯ ಶಿವ ಪೇಸ್ ಬುಕ್ ನಿಂದ

ಟೀಕಾಕಾರರ ಕುರಿತು ಕೆ.ಎಸ್.ಭಗವಾನರು ಒಂದು ಕಾರ್ಯಕ್ರಮದಲ್ಲಿ ಮಾತಾಡ್ತಾ ಹೇಳಿದ ಮಾತು:

ಕುವೆಂಪುರವರ ಚಿಂತನೆ, ಬರಹಗಳನ್ನು ಅವತ್ತಿನ ಅನೇಕರು ಬಲವಾಗಿ ಟೀಕಿಸುತ್ತಿದ್ರಂತೆ. ಈ ಕುರಿತು, "ಅಂಥವರಿಗೆ ಉತ್ತರಿಸು. ನಿನ್ನ ಕೃತಿಯ ಬಗ್ಗೆ ಅವರೆತ್ತಿರುವ ಪ್ರಶ್ನೆಗೆ ಅರ್ಥವಿದೆಯೆಂದರೆ ಪ್ರತಿಕ್ರಿಯಿಸು. ಅಲ್ಲಿ ಸತ್ಯಾಸತ್ಯತೆಗಳ ಪರಾಮರ್ಶೆ ನಡೆಯುತ್ತದೆಂದರೆ ನೀನು ಮಾತಾಡಲೇಬೇಕು. ನಿನ್ನ ಕೃತಿ ಕುರಿತ ನಿನ್ನ ಉದ್ದೇಶವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡು. ಅವರ ಪ್ರಶ್ನೆಯನ್ನು ಗೌರವಿಸು" ಅಂತ ಕುವೆಂಪುರವರೊಳಗಿನ ದಾರ್ಶನಿಕ "ಕುವೆಂಪು" ಹೇಳಿದರೆ,

"ಬಿಡು ಮಾರಾಯ... ಅವರದ್ದೆಲ್ಲಾ ಇದ್ದದ್ದೇ, ಟೀಕಿಸುವವರಿಗೆ ವಿಷಯಜ್ಞಾನ, ವಿಮರ್ಶಾ ಒಳನೋಟ ಎಷ್ಟಿದೆ ಅನ್ನೋದರ ಮೇಲೆ ಅಂಥವರಿಗೆ ಉತ್ತರಿಸಬೇಕೋ, ಬೇಡವೋ ಅಂತ ನಿರ್ಧರಿಸಬೇಕಾಗುತ್ತದೆ. ಕೆಲವರಿಗೆ ಸುಖಾಸುಮ್ಮನೆ ಟೀಕೆ ಮಾಡುವುದೇ ಕೆಲಸ. ಎಷ್ಟೋ ಜನ ವಿಷಯದ ಆಳಕ್ಕಿಳಿದು ಪರಾಮರ್ಶಿಸುವುದಿಲ್ಲ. ಮೂಲಭೂತ ಸಿದ್ಧಾಂತಗಳಿಗೆ ಬದ್ದರಾಗಿ ನೇರವಾಗಿ ವಿತಂಡವಾದಕ್ಕಿಳಿಯುವುದರಲ್ಲೇ ಒಂದು ಬಗೆಯ ವಿಕೃತ ಆನಂದ ಅನುಭವಿಸುತ್ತಾರೆ. ಯಾವುದೇ ಕೃತಿಯಾಗಲಿ, ಸಿದ್ಧಾಂತವಾಗಲಿ ಕಾಲಕಾಲಕ್ಕೆ ವಿಮರ್ಶೆಗೆ ಒಳಪಡದಿದ್ದರೆ, ಹೊಸಕೋನದಲ್ಲಿ ಹೊಸ ಚಿಂತನೆಗೆ ದಾರಿ ಮಾಡಿಕೊಡದಿದ್ದರೆ ಅದರೊಳಗಿನ ಸತ್ಯಾಸತ್ಯತೆಗಳ ಅರಿವು ನಿಂತ ನೀರಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರಿಗೆ ಚರ್ಚೆಗೂ, ವಾದಕ್ಕೂ ವ್ಯತ್ಯಾಸ ಗೊತ್ತಿರಲ್ಲ. ಅಂತಹವರ ಮಾತುಗಳನ್ನು ಗಂಭೀರವಾಗಿ ತಗೋಬೇಡ. ನಿನ್ನ ಪಾಡಿಗೆ ನೀನು ಪ್ರಾಮಾಣಿಕವಾಗಿ ಬರಿ. ಸತ್ಯಕ್ಕೆ ಯಾವತ್ತೂ ಮನ್ನಣೆಯುಂಟು" ಎಂಬುದು ಕುವೆಂಪುರೊಳಗಿನ ಲೌಕಿಕ ವ್ಯಕ್ತಿ "ಪುಟ್ಟಪ್ಪ"ನವರ ಮಾತು. 

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...