Saturday, September 21, 2013

ಕೊಲೆ








-ಕಾಜೂರು ಸತೀಶ್


                -1-

'ನಿನ್ನ ಕಾಲಲ್ಲಿ ಕೆಸರಿದೆ?'
'ಉಂ..ಆಕಸ್ಮಿಕವಾಗಿ ಜನ ಬೀದಿಯಲ್ಲಿ ತುಳಿದದ್ದು'

                 -2-
'ನಿನ್ನ ಬಟ್ಟೆಯಲ್ಲಿ ಉಗುಳಿದೆ?'
'ಹುಂ... ಆಕಸ್ಮಿಕವಾಗಿ ಉಗುಳಿದ ಸಹಪ್ರಯಾಣಿಕನ ಉಗುಳು'.

                 -3-
'ನಿನ್ನ ಅಂಗಿಯಲ್ಲಿ ನೆತ್ತರಿದೆ?'
'ಹೂಂ... ಆಕಸ್ಮಿಕವಾಗಿ ದಾರಿಹೋಕನ ಉಗುರು ತಾಗಿದ್ದು'.

               -4-
'ನಿನ್ನ ಮೈಮೇಲೆ ಮಣ್ಣಿದೆ?
ಗಾಯಗಳಿವೆ?
ರಕ್ತವಿದೆ?'
ಉತ್ತರವಿಲ್ಲ!
***

1 comment:

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...