Thursday, September 26, 2013

ಹಂದಲಗೆರೆ ಗಿರೀಶ್ ಕವಿತೆಗಳು










1
ಹೆಂಡತಿ
ಅಂತರಂಗವ ಕಾಣಿಸುವ
ಕನ್ನಡಿ
2
ಸತ್ಯ ಹರಿಶ್ಚಂದ್ರನಿಗೂ
ಮಿಗಿಲು ಕನ್ನಡಿಗಳ
ಬದುಕು ,ಭಾಷೆ !

3

ಕನ್ನಡಿ ಇರುವುದು ಮುಖನೋಡಿಕೋಳ್ಳಲು
ಅಷ್ಟೇಅಲ್ಲ,ಎಂಬ ಅರಿವಿದ್ದಿದ್ದರೆ
4
ಹರೆಯದ ಹೆಣ್ಣುಗಳ
ಆತ್ಮ ಸಂಗಾತಿ
ಕನ್ನಡಿ
5
ಅಸಂಖ್ಯ ಹೆಣ್ಣುಗಳು
ಕೀಳರಿಮೆಯಿಂದ ನಲುಗುತ್ತಿವೆ
ಕನ್ನಡಿಯ ಸಹವಾಸದಿಂದ
6
ಕನ್ನಡಿಗಳೇ ಇರದಿದ್ದರೆ
ಹೊಗಳು ಭಟ್ಟರೆಲ್ಲಾ
ಮಹಾಕವಿಗಳು
!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...