Thursday, September 19, 2013

ಉ.ಪ್ರ.: ಜಾಟರ ಕೇಸರೀಕರಣ
 

 ಧೀರೇಂದ್ರ ಕೆ. ಝಾ

ಕೃಪೆ: ಓಪನ್ ಮ್ಯಾಗಜಿನ್

ವಾರ್ತಾಭಾರತಿ


ರಾಕೇಶ್ ಹಾಗೂ ನರೇಶ್ ಟಿಕಾಯತ್ ಎಂಬ ಭಾರತೀಯ ಕಿಸಾನ್ ಸಂಘದ (ಬಿಕೆಯು) ಇಬ್ಬರು ಕಮಾಂಡರ್‌ಗಳು ಬಹಳ ಕಾಲದಿಂದ ಉತ್ತರಪ್ರದೇಶದ ಪೂರ್ವ ಪ್ರಾಂತ್ಯದ ರೈತ ನಾಯಕರಲ್ಲಿ ಇಬ್ಬರಾಗಿದ್ದರು. ಮುಝಫ್ಫರ್ ನಗರ ಹಾಗೂ ನೆರೆಯ ಜಿಲ್ಲೆಗಳಲ್ಲಿ ಭುಗಿಲೆದ್ದ ಕೋಮು ದಳ್ಳುರಿ ಆ ಇಬ್ಬರು ನಾಯಕರು ಹೊರಳಿರುವ ಇನ್ನೊಂದು ರಾಜಕೀಯ ಆಯಾಮದತ್ತೆ ಬೆರಳು ತೋರಿಸಿದೆ. ಬಹುಶಃ ಇದು ಅಪಾಯಕಾರಿಯೂ ಹೌದು. ಅವರು ತಮ್ಮ ರಾಜಕೀಯ ಮಹತ್ವಾ ಕಾಂಕ್ಷೆಯನ್ನು ತಿಳಿಸುವುದಕ್ಕೊಸ್ಕರ ಬಿಜೆಪಿಯೊಂದಿಗೆ ಏರ್ಪಡಿಸಿ ರುವ ಹೊಸ ಸಂಬಂಧ ಜಾಟ್ ಭೂಮಿಯ ಸಾಮಾ ಜಿಕ ಹಂದರಕ್ಕೆ ಈಗಾಗಲೇ ಗಂಭೀರ ಆಘಾತವನ್ನು ನೀಡಿದೆ.ವೈಯಕ್ತಿಕ ಘಟನೆಯೊಂದು ಪಶ್ಚಿಮ ಉತ್ತರಪ್ರದೇಶದ ಮುಝಫ್ಫರ್ ನಗರ ಹಾಗೂ ನೆರೆಯ ಜಿಲ್ಲೆಗಳಲ್ಲಿ ವ್ಯಾಪಕ ಕೋಮು ದಳ್ಳುರಿಯಾಗಿ ಹರಡಿರುವುದು ಸ್ಪಷ್ಟವಾಗಿ ಜಾಟ್‌ನ ಈ ಇಬ್ಬರು ನಾಯಕರ ರಾಜಕೀಯ ಆಕಾಂಕ್ಷೆಗೆ ಹಾಕಿದ ಸಹಿಯಾಗಿದೆ. 

ಬಿಕೆಯು ಸ್ಥಾಪಕ ಮಹೇಂದ್ರ ಸಿಂಗ್ ಟಿಕಾಯತ್‌ರ ಮಕ್ಕಳಾದ ರಾಕೇಶ್ ಹಾಗೂ ನರೇಶ್ ಸೆ.7ರಂದು ಕರೆದ ಮಹಾಪಂಚಾಯತ್ ವಾಸ್ತವವಾಗಿ ಪ್ರದೇಶದಲ್ಲಿ ಘರ್ಷಣೆಗಳ ಸರಣಿಗೆ ಕಾರಣವಾಯಿತು.ಪೊಲೀಸ್ ದಾಖಲೆಗಳ ಪ್ರಕಾರ ಟಿಕಾಯತ್ ಸೋದರರು ಬಿಜೆಪಿ ನಾಯಕ ರಾದ ಹುಕುಂ ಸಿಂಗ್, ಸಂಗೀತ್ ಸೋಮ್ ಹಾಗೂ ಇತರರೊಂದಿಗೆ ಮಹಾ ಪಂಚಾ ಯತನ್ನು ಉದ್ದೇಶಿಸಿ ಮಾತನಾಡಿದ್ದರು. ಉದ್ವಿಗ್ನಕಾರಿ ಹೇಳಿಕೆಗಳನ್ನು ನೀಡಲಾಗಿತ್ತು. ಹಾಗೂ ಸಭೆ ಮುಗಿದೊಡನೆಯೇ ಕೋಮು ಸಂಘರ್ಷ ಆರಂಭವಾಗಿತ್ತು.

ಸಿಂಗ್, ಉತ್ತರಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯ ನಾಯಕರಾಗಿದ್ದರೆ, ಸೋಮ್ ಸರ್ಧಾನಾ ಕ್ಷೇತ್ರದ ಶಾಸಕ.ಜಾಟ್ ಸಮುದಾಯದ ಇಬ್ಬರು ವ್ಯಕ್ತಿಗಳ ಹತ್ಯೆಯ ಸಂಬಂಧ ಮಹಾಪಂಚಾಯತನ್ನು ಕರೆಯಲಾಗಿತ್ತು. ಮುಝಫ್ಫರ್‌ನಗರ ಜಿಲ್ಲೆಯ ಕವಾಲ್ ಗ್ರಾಮದಲ್ಲಿ ಅನ್ಯ ಸಮುದಾಯದ ವ್ಯಕ್ತಿ ಯೊಬ್ಬನನ್ನು ಹುಡುಗಿಯೊಬ್ಬಳನ್ನು ಅಶ್ಲೀಲವಾಗಿ ನಿಂದಿಸಿದ ಆರೋಪದಲ್ಲಿ ಹೊಡೆದು ಕೊಂದ ಆರೋಪದಲ್ಲಿ ಈ ಎರಡು ಕೊಲೆಗಳು ನಡೆದಿದ್ದವು.

ಸುಮಾರು ಒಂದು ದಶಕದಿಂದ, ತಮ್ಮ ತಂದೆಯ ನಾಯಕತ್ವದಲ್ಲಿ ಬಿಕೆಯು ಪಡೆದಿರುವ ಜನಪ್ರಿಯತೆಯಿಂದ ರಾಜಕೀಯ ಬೆಳೆ ಕೊಯ್ಯಲು ಟಿಕಾಯತ್ ಸೋದರರು ಯತ್ನಿಸು ತ್ತಿದ್ದರು. ಆದರೆ, ಇದುವರೆಗಿನ ಅವರ ಪ್ರಯತ್ನ ದಯನೀಯವಾಗಿ ಸೋತಿತ್ತು. ಟಿಕಾಯತ್ ಸೋದರರು-ಮುಖ್ಯವಾಗಿ ರಾಕೇಶ್-ಹೊಸ ಮೈತ್ರಿಕೂಟದ ನೆರವಿನಿಂದ ಮತ್ತೊಮ್ಮೆ ರಾಜಕೀಯ ಅಲೆಯನ್ನು ಪರೀಕ್ಷಿಸಲು ಸಿದ್ಧರಾಗ ಬಹುದೆಂಬುದು ಮುಝಫ್ಫರ್‌ನಗರ ಹಾಗೂ ನೆರೆಯ ಜಿಲ್ಲೆಗಳಲ್ಲಿ ವ್ಯಾಪಕ ಅಭಿಪ್ರಾಯ ವಾಗಿತ್ತು. ಅವರಿಗೆ ರಾಜಕೀಯ ಸ್ಥಿರತೆಯನ್ನು ಹೊಸ ಮೈತ್ರಿಕೂಟ ನಿಜವಾಗಿ ನೀಡಲಿದೆಯೇ ಎಂಬುದನ್ನು ತಿಳಿಯಲು ಕಾಲವಿನ್ನೂ ಪಕ್ವವಾಗಿಲ್ಲ. ಆದಾಗ್ಯೂ, ಅವರು ಈಗಾಗಲೇ, ಉತ್ತರ ಪ್ರದೇಶವು ಕಳೆದೆರಡು ತಿಂಗಳುಗಳಿಂದ ಈಡಾಗಿರುವ ಧ್ರುವೀಕರಣ ರಾಜಕೀಯದ ಭಾಗವಾಗಿದ್ದಾರೆಂಬುದನ್ನು ಇತ್ತೀಚಿನ ಘಟನೆ ಗಳು ತೋರಿಸಿವೆ.

ಬಿಕೆಯು ವಕ್ತಾರ ಧರ್ಮೇಂದ್ರ ಕುಮಾರ್ ಈ ಆರೋಪವನ್ನು ನಿರಾಕರಿಸುತ್ತಿದ್ದು, ಬಿಜೆಪಿ ಹಾಗೂ ಟಿಕಾಯತ್ ಸೋದರರ ನಡುವೆ ಯಾವುದೇ ಸಂಬಂಧವಿಲ್ಲ. ಮಹೇಂದ್ರ ಸಿಂಗ್ ಟಿಕಾಯತ್‌ರ ಮಕ್ಕಳಿಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲವೆಂದು ಪ್ರತಿಪಾದಿಸುತ್ತಿದ್ದಾರೆ. ಆ.27ರಂದು ಕವಾಲ್ ಗ್ರಾಮದಲ್ಲಿ ನಡೆದ ಜಾಟರಿಬ್ಬರ ಹತ್ಯೆ ಹಾಗೂ ಅಪರಾಧಿಗಳನ್ನು ಬಂಧಿಸುವಲ್ಲಿ ಆಡಳಿತದ ವೈಫಲ್ಯ ಪ್ರದೇಶದಲ್ಲಿ ಕೋಮು ಹಿಂಸಾಚಾರಕ್ಕೆ ಕಾರಣವೇ ಹೊರತು ಸೆ.7ರ ಮಹಾ ಪಂಚಾಯತ್‌ನಲ್ಲಿ ನೀಡಿರುವ ಉದ್ವಿಗ್ನಕಾರಿ ಹೇಳಿಕೆಗಳಲ್ಲವೆಂದು ಅವರು ಒತ್ತಿ ಹೇಳುತ್ತಾರೆ.

ಟಿಕಾಯತ್ ಸೋದರರು ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದಾರೋ ಇಲ್ಲವೋ- ಆದರೆ, ವೈಯಕ್ತಿಕವಾಗಿದ್ದ ಪ್ರಕರಣವೊಂದನ್ನು ಕೋಮು ವಾದಗೊಳಿಸಲು ಯತ್ನಿಸಿದವರಿಗೆ ತಮ್ಮನ್ನು ಬಳಸಿಕೊಳ್ಳಲು ಮುಕ್ತ ಅವಕಾಶ ನೀಡಿದ್ದಾರೆ. ಅಲ್ಲದೆ, ಜಾಟರಿಬ್ಬರ ಹತ್ಯೆಯೇ ಹಿಂಸಾಚಾರಕ್ಕೆ ಕಾರಣವಾಗಿರುತ್ತಿದ್ದರೆ ಅದು ಹತ್ಯೆಗಳು ನಡೆದೊಡನೆಯೇ ಆರಂಭವಾಗ ಬೇಕಿತ್ತು. ಅದು ಸೆ.7ರ ಟಿಕಾಯತ್ ಸೋದರರ ಮಹಾ ಪಂಚಾಯತನ್ನು ಕಾಯುತ್ತಿರಲಿಲ್ಲ.

ಮುಂದಿನ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮತದಾರರನ್ನು ಕೋಮು ಆಧಾರ ದಲ್ಲಿ ಧ್ರುವೀಕರಿಸಲು ಭಾರೀ ಪ್ರಯತ್ನಗಳು ಉತ್ತರಪ್ರದೇಶದಲ್ಲಿ ನಡೆಯುತ್ತಿವೆಯೆಂಬುದಕ್ಕೆ ಸಾಕಷ್ಟು ಸೂಚನೆಗಳು ಲಭಿಸಿವೆ. ಕಳೆದ ವರ್ಷದಿಂದೀಚೆಗೆ ರಾಜ್ಯದಲ್ಲಿ 50ಕ್ಕೂ ಹೆಚ್ಚು ಘರ್ಷಣೆಗಳು ನಡೆದಿವೆ. 

ಇವುಗಳಲ್ಲಿ ಸುಮಾರು 12ರಷ್ಟು ಘಟನೆಗಳು ಪ್ರಮುಖ ಕೋಮು ದಂಗೆಗಳೆಂದು ದಾಖಲಾಗಿವೆ. ಅಂತಿಮವಾಗಿ ಮಹಾ ಪಂಚಾಯತ್ ನೆರೆಹೊರೆಯ ಮುಸ್ಲಿಮರನ್ನು ಬಹಿಷ್ಕರಿಸುವ ನಿರ್ಣಯ ಕೈಗೊಂಡಿತೆಂದು ಅವರು ಹೇಳಿದ್ದಾರೆ.ಆದರೆ, ಯಾಕೋ ಅಲಿಗಢದಲ್ಲಿ ಪರಿಸ್ಥಿತಿ ಹದಗೆಡಲಿಲ್ಲ. ಆದರೆ, ಮುಝಫ್ಫರ್‌ನಗರದಲ್ಲಿ ಎರಡು ಸಮುದಾಯಗಳು ಒಳಗೊಂಡಿದ್ದ ಸ್ಥಳೀಯವೆನ್ನಬಹುದಾದ ಘಟನೆಯ ಬಳಿಕ ಇಂತಹ ಹೇಳಿಕೆಗಳು ಭಯಾನಕ ಕೋಮು ದಳ್ಳುರಿಗೆ ಕಾರಣವಾಗಿ, ನೆರೆಯ ಜಿಲ್ಲೆಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕಾಳ್ಗಿಚ್ಚಿನಂತೆ ವ್ಯಾಪಿಸಿತು.

ವಾಸ್ತವವಾಗಿ, ಕಳೆದ ಒಂದೆರಡು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದಿದ್ದ ಕೋಮು ಘರ್ಷಣೆಗಳಿಗಿಂತ ಪಶ್ಚಿಮ ಜಿಲ್ಲೆಗಳಲ್ಲಿ ಈ ಬಾರಿ ನಡೆದಿರುವ ಹಿಂಸಾಚಾರ ಅತ್ಯಂತ ತೀಕ್ಷ್ಣ ಹಾಗೂ ವ್ಯಾಪಕವಾಗಿದ್ದು, ಗರಿಷ್ಠ ಪ್ರಮಾಣದ ಹತ್ಯೆಗಳು ಹಾಗೂ ಆಸ್ತಿ ನಷ್ಟ ಸಂಭವಿಸಿದೆ. ಉತ್ತರಪ್ರದೇಶದಲ್ಲಿ ಮುಸ್ಲಿಮರ ಒಟ್ಟು ಜನಸಂಖ್ಯೆ ಶೇ.18 ಇದ್ದರೆ, ಪಶ್ಚಿಮ ಜಿಲ್ಲೆಗಳಲ್ಲಿ ಅದು ಶೇ.30ಕ್ಕಿಂತಲೂ ಹೆಚ್ಚಿದೆ. ತೀರಾ ಸ್ಥಳೀಯವೆನ್ನಬಹುದಾದ ಘಟನೆಗಳನ್ನು ಹೊರತುಪಡಿಸಿದರೆ, ಜಾಟ್ ಭೂಮಿ ಗಂಭೀರ ಕೋಮು ಹಿಂಸಾಚಾರ ಘಟನೆಗಳಿಂದ ಮುಕ್ತವಾಗಿತ್ತು. 

ಕೇವಲ 1990ರ ಆರಂಭದಲ್ಲಿ ಹಿಂದೂ ಕೋಮುವಾದಿಗಳು ಬಾಬರಿ ಮಸೀದಿ ಧ್ವಂಸಗೊಳಿಸಿದ ಆಸುಪಾಸಿನಲ್ಲಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಕೋಮು ಹಿಂಸಾಚಾರ ಸಂಭವಿಸಿತ್ತು.ಆ ಪರೀಕ್ಷಾ ಸಮಯದಲ್ಲೂ ಮಹೇಂದ್ರ ಸಿಂಗ್ ಟಿಕಾಯತ್ ಕೋಮುವಾದಿ ಶಕ್ತಿಗಳ ಹಿಡಿತಕ್ಕೊಳಗಾಗುವು ದನ್ನು ದೃಢವಾಗಿ ನಿರಾಕರಿಸಿದ್ದರು. ಆದರೆ, ಈಗ ಮುಝಫ್ಫರ್‌ನಗರದ ವಾತಾವರಣವನ್ನು ಕೆಡಿಸಿರುವವರಿಗೆ ಅವರ ಮಕ್ಕಳು ಸಹಾಯ ನೀಡಿದ್ದು, ಅದು ಬಿಕೆಯುನ ಹಿಂದಿನ ಸಿದ್ಧಾಂತಕ್ಕೆ ವಿರುದ್ಧವಾದ ಅಸಹಜ ಬೆಳೆವಣಿಗೆ ಯಾಗಿದೆಯೆಂದು ಅನೇಕರು ಅಭಿಪ್ರಾಯಿಸಿದ್ದಾರೆ.

ಟಿಕಾಯತ್ ತನ್ನ ಜೀವಮಾನದಲ್ಲಿ ಎಂದೂ ಬಿಜೆಪಿಯೊಂದಿಗೆ ಕೈಜೋಡಿಸಿರಲಿಲ್ಲ. ಜಾಟ್ ಹಾಗೂ ಮುಸ್ಲಿಂ ಈ ಎರಡೂ ಸಮುದಾಯದವರು ಅವರ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಮುಝಫ್ಫರ್‌ನಗರದ ಆಲ್ ಇಂಡಿಯಾ ಕಿಸಾನ್ ಸಭಾದ ನಾಯಕ ವೇದಪ್ರಕಾಶ್ ವೇದ್ ಎಂಬವರು ಹೇಳುತ್ತಾರೆ. ಟಿಕಾಯತ್‌ರ ಸಭೆಗಳಲ್ಲಿ ಹಿಂದೂಗಳು ‘ಅಲ್ಲಾ ಹೋ ಅಕ್ಬರ್’ ಹಾಗೂ ಮುಸ್ಲಿಮರು ‘ಹರ ಹರ ಮಹಾದೇವ’ ಘೋಷಣೆಗಳನ್ನು ಕೂಗುತ್ತಿದ್ದುದು ಸಾಮಾನ್ಯವಾಗಿತ್ತು. 2008ರಲ್ಲಿ ಮಾಯಾವತಿ ಸರಕಾರ ಮಹೇಂದ್ರ ಸಿಂಗರನ್ನು ಬಂಧಿಸಿದ ವೇಳೆ ಬಿಜೆಪಿ ಅವರಿಗೆ ಸಹಾನುಭೂತಿ ಸೂಚಿಸಲು ಯತ್ನಿಸಿತ್ತಾದರೂ, ಅವರು ಸಂಘಪರಿವಾರದಿಂದ ದೂರವುಳಿದು ತನ್ನ ಜಾತ್ಯತೀತ ವ್ಯಕ್ತಿತ್ವವನ್ನು ತೋರಿಸಿದ್ದರೆಂದು ಅವರು ತಿಳಿಸುತ್ತಾರೆ. 

ಮುಖ್ಯವಾಗಿ ಕಬ್ಬಿನ ಬೆಲೆಯ ಕುರಿತು ಬೆಳಕು ಚೆಲ್ಲಿ 1986ರಲ್ಲಿ ಬಿಕೆಯು ರೈತ ಸಂಘಟನೆಯನ್ನು ಸ್ಥಾಪಿಸಿದ್ದ ಟಿಕಾಯತ್, 1988ರಲ್ಲಿ ಅವರ ಸಾವಿರಾರು ಬೆಂಬಲಿಗರು ದಿಲ್ಲಿಯ ಇಂಡಿಯಾ ಗೇಟ್‌ನ ಹುಲ್ಲು ಹಾಸಿನಲ್ಲಿ ಸೇರಿ, ಅಲ್ಲೇ ಸ್ನಾನ, ಅಡುಗೆ, ಊಟಗಳನ್ನು ಬಹಿರಂಗವಾಗಿ ಮಾಡುತ್ತ ಒಂದು ವಾರ ಅಲ್ಲೇ ವಾಸ್ತವ್ಯ ಮಾಡಿದ ಬಳಿಕ ರಾಷ್ಟ್ರವ್ಯಾಪಿ ಹೆಸರನ್ನು ಸಂಪಾದಿಸಿದ್ದರು. ನಗರದ ಹೃದಯ ಭಾಗದಲ್ಲಿ ಉಂಟಾಗಿದ್ದ ಈ ಅಲ್ಲೋಲಕಲ್ಲೋಲದಿಂದ ಮಧ್ಯಮ ವರ್ಗದವರು ಆಕ್ರೊಶಿತರಾಗಿದ್ದಾರೆ, ಸುವ್ಯವಸ್ಥಿತವಾಗಿದ್ದ ರಾಜಧಾನಿಗೆ ಏಕಾಏಕಿ ಲಗ್ಗೆಯಿಟ್ಟಿದ್ದ ಅಸಂಖ್ಯಾತ ಜಾಟ್ ಸಮುದಾಯದ ರೈತರನ್ನು ಸಂಭಾಳಿಸಲು ಸರಕಾರ ವಿಫಲವಾಗಿತ್ತು.

ಟಿಕಾಯತ್, 1980ರ ಅಂತ್ಯದಲ್ಲಿ ವಿ.ಪಿ.ಸಿಂಗರ ಜನಮೋರ್ಚಾ, 1990ರ ಆರಂಭದಲ್ಲಿ ಜನತಾದಳದ ಅಥವಾ 1990ರ ಅಂತ್ಯದಲ್ಲಿ ಕಾಂಗ್ರೆಸ್‌ಗಳೆಡೆ ವಾಲಿದ್ದರೂ, ಅವರು ಔಪಚಾರಿಕವಾಗಿ ತನ್ನನ್ನು ಹಾಗೂ ತನ್ನ ಸಂಘಟನೆಯನ್ನು ರಾಜಕೀಯ ರಹಿತ ಸಂಘಟನೆಯೆಂದೇ ಪ್ರತಿಪಾದಿಸಿದ್ದರು. ಅವರು ಕೇವಲ ತನ್ನ ಮಗ ರಾಕೇಶ್ ಟಿಕಾಯತ್‌ರ ಒತ್ತಾಸೆಯಿಂದಷ್ಟೇ 2004ರ ಲೋಕಸಭಾ ಚುನಾವಣೆಯ ಮೊದಲು ಭಾರತೀಯ ಕಿಸಾನ್ ದಳ(ಬಿಕೆಡಿ) ಎಂಬ ಹೆಸರಿನಲ್ಲಿ ಬಿಕೆಯುನ ರಾಜಕೀಯ ವಿಭಾಗದ ಸ್ಥಾಪನೆಗೆ ಒಪ್ಪಿದ್ದರು. ಆ ಚುನಾವಣೆಯಲ್ಲಿ ಪಕ್ಷವು 9 ಮಂದಿ ಅಭ್ಯರ್ಥಿ ಗಳನ್ನು ನಿಲ್ಲಿಸಿತ್ತಾದರೂ ದಯನೀಯವಾಗಿ ಸೋತಿತ್ತು. 2007ರ ವಿಧಾನಸಭಾ ಚುನಾವಣೆಯಲ್ಲಿ ರಾಕೇಶ್ ಖಟೌಲಿ ಕ್ಷೇತ್ರ ದಿಂದ ಕಣಕ್ಕಿಳಿದಿದ್ದರಾದರೂ, ಕಾಂಗ್ರೆಸ್‌ನ ತಂತ್ರಗಾರಿಕೆಯ ಬೆಂಬಲದ ಹೊರತಾಗಿಯೂ ಠೇವಣಿ ಕಳೆದುಕೊಂಡಿದ್ದರು.

2008ರ ಎಪ್ರಿಲ್‌ನಲ್ಲಿ ಆಗಿನ ಮುಖ್ಯಮಂತ್ರಿ ಮಾಯಾವತಿ ಯವರ ವಿರುದ್ಧ ಜಾತೀಯ ಕಳಂಕ ಹಚ್ಚಿದ ಆರೋಪದಲ್ಲಿ ಮಹೇಂದ್ರ ಸಿಂಗ್ ಟಿಕಾಯತ್ ಬಂಧಿಸಲ್ಪಟ್ಟಿದ್ದರು ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯನ್ವಯ ಅವರ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್, ಟಿಕಾಯತ್‌ರನ್ನು ಬೆಂಬಲಿಸಿದ್ದರು. ಅದರ ಬಳಿಕ ಅವರು ಬಹಿರಂಗವಾಗಿ ಎಂದೂ ಒಪ್ಪಿಕೊಳ್ಳದಿದ್ದರೂ, ಮುಲಾಯಂರ ಕಡೆಗೆ ವಾಲುವುದಕ್ಕಾರಂಭಿಸಿದ್ದರು.

2011ರ ಮೇಯಲ್ಲಿ ಟಿಕಾಯತ್ ನಿಧನ ಹೊಂದು ವವರೆಗೂ ಅವರ ಸಂಬಂಧ ಹಾಗೆಯೇ ಮುಂದುವರಿದಿತ್ತು. ಬಳಿಕ ಸುಮಾರು ಒಂದು ವರ್ಷದ ಕಾಲ ಅವರ ಮಕ್ಕಳೂ ಅದೇ ದಾರಿಯಲ್ಲಿ ಮುಂದುವರಿದಿದ್ದರು. ಆದರೆ, 2012ರ ಅಂತ್ಯದ ವೇಳೆಗೆ ಎಸ್ಪಿಯ ಕುರಿತಾಗಿ ಟಿಕಾಯತ್ ಸೋದರರಲ್ಲಿ ಭ್ರಮನಿರಸನ ವೃದ್ಧಿಸಿತು. ಟಿಕಾಯತ್ ಸೋದರರ ರಾಜಕೀಯ ಮಹತ್ವಾಕಾಂಕ್ಷೆಯ ಕಾರಣಕ್ಕಾಗಿ ತಾವು ಅವರಿಂದ ಅಂತರ ಕಾಯ್ದು ಗೊಳ್ಳಬಯಸಿದೆವೆಂದು ಹಿರಿಯ ಎಸ್ಪಿ ನಾಯಕರೊಬ್ಬರು ಹೇಳಿದ್ದಾರೆ.
ಸರಿಪಡಿಸಲಾಗದ ಚುನಾವಣಾ ವೈಫಲ್ಯ ಹಾಗೂ ಎಸ್ಪಿಯಿಂದ ಯಾವುದೇ ಮಹತ್ತ್ವದ ಸಹಕಾರ ಪಡೆಯಲಾಗದ ಕಾರಣ ಟಿಕಾಯತ್ ಸೋದರರು ಕೊನೆಗೆ ಬಿಜೆಪಿಯೆಡೆ ಆಕರ್ಷಿತರಾದರು. ಅವರು ತಮ್ಮ ರಾಜಕೀಯ ಭವಿಷ್ಯವನ್ನು ಈ ಮೂಲಕ ಯಶಸ್ವಿಯಾಗಿ ಬದಲಾಯಿಸಿಕೊಳ್ಳುವರೇ ಎಂಬುದು ಮುಂದಿನ ತಿಂಗಳುಗಳಲ್ಲಿ ಜಾಟ್ ರಾಜಕೀಯ ಅನಾವರಣಗೊಳ್ಳಲಿರುವ ವಿಧಾನವನ್ನು ಅವಲಂಬಿಸಿದೆ ಮತ್ತು ಬಿಜೆಪಿಯ ಬೆಂಬಲವಿಲ್ಲದಿದ್ದರೆ ಅವರು ಶೀಘ್ರವೇ ಕುಸಿಯುವ ಸಾಧ್ಯತೆಯಿದೆ.

ಅದೇನೇ ಇದ್ದರೂ, ಬಿಜೆಪಿ ಹಾಗೂ ಸಂಘಪರಿವಾರದ ಇತರ ಸಂಘಟನೆಗಳ ಸಕ್ರಿಯ ಪಾತ್ರ ಹಾಗೂ ಸಮಯಕ್ಕೆ ಸರಿ ಯಾಗಿ ಕ್ರಮ ಕೈಗೊಳ್ಳುವಲ್ಲಿ ಎಸ್ಪಿ ಸರಕಾರದ ವೈಫಲ್ಯ ಮುಝಫ್ಫರ್‌ನಗರದಲ್ಲಿನ ಪರಿಸ್ಥಿತಿಗೆ ಕಾರಣವಾಗಿದ್ದು, ಇದರಲ್ಲಿ ಎರಡೂ ಪಕ್ಷಗಳು ಬಿಂಬ-ಪ್ರತಿಬಿಂಬಗಳಂತೆ ಕಾಣಿಸುತ್ತಿವೆ. ಎದುರಾಳಿ ಪಕ್ಷಗಳು ಬಿತ್ತುತ್ತಿರುವಂತೆ ಕಾಣುವ ಅಭದ್ರತೆ ಹಾಗೂ ಭಯ 2014ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ತೀವ್ರಗೊಳ್ಳುವ ಸಾಧ್ಯತೆಯಿದೆ. ಮುಂದಿನ ತಿಂಗಳುಗಳಲ್ಲಿ ಬಿಜೆಪಿ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಇಳಿದಾಗ-ಮುಖ್ಯವಾಗಿ ಉತ್ತರಪ್ರದೇಶದಲ್ಲಿ- ಅಲ್ಲಿನ ಜನರ ಉತ್ತಮ ವಿವೇಕವು ಕಠಿಣವಾದ ಪರೀಕ್ಷೆಗೆ ಒಳಗಾಗಲಿದೆ. 2012ರ ಜೂನ್‌ನಲ್ಲಿ ಆರಾಧನಾ ಸ್ಥಳ ವೊಂದರ ಹೊರಗಿರುವ ಕುಡಿಯುವ ನೀರಿನ ವಿಚಾರದಲ್ಲಿ ಮಥುರಾದ ಕೋಸಿ ಕಲಾನ್‌ನಲ್ಲಿ ದಂಗೆಯೊಂದು ಭುಗಿಲೆದ್ದು, ನಾಲ್ವರು ಹತರಾಗಿದ್ದರು. ಕಳೆದ ವರ್ಷ ಜುಲೈಯಲ್ಲಿ ಆರಾಧನಾ ಸ್ಥಳವೊಂದರ ಬಳಿಯಲ್ಲಿ ಜೋರಾದ ಸಂಗೀತದ ಸಂಬಂಧ ಬರೇಲಿಯಲ್ಲಿ ಹಿಂಸಾ ಚಾರ ನಡೆದು ಮೂವರು ಬಲಿಯಾಗಿದ್ದರು. ಆಗಸ್ಟ್‌ನಲ್ಲಿ ಬರೇಲಿಯಲ್ಲಿ ಹೊಸದಾಗಿ ಹಿಂಸಾಚಾರ ಆರಂಭವಾದ ಬಳಿಕ ಕರ್ಫ್ಯೂ ಹೇರಬೇಕಾಯಿತು. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಪವಿತ್ರಗ್ರಂಥವೊಂದನ್ನು ಅಪವಿತ್ರಗೊಳಿಸಿದ ಆರೋಪದಲ್ಲಿ ಗಾಝಿಯಾಬಾದ್‌ನಲ್ಲಿ ಭುಗಿಲೆದ್ದ ದಂಗೆಗೆ ಕನಿಷ್ಠ 6 ಮಂದಿ ಬಲಿಯಾಗಿ ದ್ದರು. 

ಅಕ್ಟೋಬರ್ 24ರಂದು ಫೈಝಾಬಾದ್‌ನ ಮೂರು ಸ್ಥಳಗಳಲ್ಲಿ ನಡೆದಿದ್ದ ದಂಗೆಗಳಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದರು. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವರ ಸುಮಾರು 25 ಅಂಗಡಿಗಳು ಬೂದಿ ಯಾಗಿದ್ದವು ಹಾಗೂ ಆರಾಧನಾ ಸ್ಥಳವೊಂದ ರಲ್ಲಿ ಯದ್ವಾತದ್ವಾ ದಾಂಧಲೆ ನಡೆಸಲಾ ಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಝಂಗಡ ಕೋಮು ಹಿಂಸಾಚಾರವೊಂದಕ್ಕೆ ಸಾಕ್ಷಿಯಾಗಿದ್ದು, 11 ಮಂದಿ ಗಾಯಗೊಂಡಿ ದ್ದರು.

ಮುಝಫ್ಫರ್‌ನಗರ, ಮೀರತ್ ಹಾಗೂ ಶಾಮ್ಲಿಯಂತಹ ಜಿಲ್ಲೆಗಳಲ್ಲೂ ಕೋಮು ಧ್ರುವೀಕರಣಕ್ಕೆ ಹಲವು ಕಾಲದಿಂದಲೇ ಪ್ರಯತ್ನಗಳು ನಡೆಯುತ್ತಿವೆ. ಉದಾ ಹರಣೆಗೆ ಕಳೆದ ವರ್ಷ ಜೂನ್‌ನಲ್ಲಿ ಮುಝಫ್ಫರ್‌ನಗರದಲ್ಲಿ ಭಾರೀ ಕೋಮು ಘರ್ಷಣೆ ನಡೆದು 20 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಈ ವರ್ಷ ಎಪ್ರಿಲ್ ಹಾಗೂ ಜುಲೈಯಲ್ಲಿ ಮೀರತ್‌ನಲ್ಲಿ ಎರಡು ಹಂತಗಳಲ್ಲಿ ಕೋಮು ಹಿಂಸಾ ಚಾರ ನಡೆದಿದ್ದು, ಇಬ್ಬರು ಬಲಿಯಾಗಿದ್ದರು. 

ಹಾಲಿ ಕೋಮು ದಳ್ಳುರಿಯ ಕೇವಲ ಒಂದೆರಡು ದಿನಗಳ ಮೊದಲು ಸೆ.3ರಂದು ಶಾಮ್ಲಿಯಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಇತರ 10 ಮಂದಿ ಗಾಯ ಗೊಂಡಿದ್ದರು.ಎರಡೂ ಸಮುದಾಯಗಳು ಒಳ ಗೊಂಡಿರುವ ಯಾವುದೇ ಸಣ್ಣ ವಿವಾದಕ್ಕೂ ಕೋಮು ಬಣ್ಣವನ್ನು ಕೊಡುವ ಅವಕಾಶವನ್ನು ಬಿಜೆಪಿಯ ಸ್ಥಳೀಯ ನಾಯಕರು ಬಿಡುತ್ತಿಲ್ಲ ವೆಂಬುದರಿಂದ ಪಕ್ಷವು ಅಶಾಂತಿ ಹರಡಲು ಯತ್ನಿಸುತ್ತಿದೆಯೆಂಬುದು ಸ್ಪಷ್ಟವಾಗುತ್ತದೆ.

ಈ ವರ್ಷ ಆಗಸ್ಟ್ 18ರಂದು ಅಲಿಗಡ ಜಿಲ್ಲೆಯ ತಲೇಸ್ರ ಗ್ರಾಮದಲ್ಲಿ ನಡೆದಿದ್ದ ಜಾಟರ ಮಹಾಪಂಚಾಯತನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ, ಈ ಸಭೆಯನ್ನು ಜಾಟ್ ಸಮು ದಾಯದ ಹುಡುಗಿಯೊಬ್ಬಳು ಅಲ್ಪಸಂಖ್ಯಾತ ಸಮುದಾಯದ ಹುಡುಗನೊಬ್ಬನೊಂದಿಗೆ ಓಡಿಹೋದ ಸಂಬಂಧದ ವಿವಾದದ ಹಿನ್ನೆಲೆ ಯಲ್ಲಿ ಕರೆಯಲಾಗಿತ್ತು. ಹೆಚ್ಚಿನವರು ಜಾಟರ ಸಹಿತ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದ ಈ ಮಹಾಪಂಚಾಯತ್‌ನಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗ ವಹಿಸಿದ್ದರು.

ಬಿಜೆಪಿಯ ಜಿಲ್ಲಾಧ್ಯಕ್ಷ ದೇವರಾಜ ಸಿಂಗ್ ಎಂಬಾತ ಈ ವಿವಾದಕ್ಕೆ ಕೋಮು ಬಣ್ಣ ಹಚ್ಚಲು ಯತ್ನಿಸಿದ್ದನೆಂದು ಸಭೆಯಲ್ಲಿ ಭಾಗವಹಿಸಿದ್ದ ನೆರೆಯ ಭೋಗಪುರ ಗ್ರಾಮದ ನಿವಾಸಿ ಸುಮನ್ ಶರ್ಮಾ ಎಂಬವರು ಆರೋಪಿಸಿದ್ದಾರೆ. ಹಿಂದೂಗಳು ಒಗ್ಗಟ್ಟಾಗಿಲ್ಲದಿರುವ ಕಾರಣ ಮುಸ್ಲಿಮರು ಈ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದಾರೆ. ಮುಸ್ಲಿಮರ ಬೆದರಿಕೆಗಳಿಗೆ ವಿರುದ್ಧವಾಗಿ ಹಿಂದೂ ಗಳು ಒಗ್ಗಟ್ಟಾಗಬೇಕು ಎಂದು ಬಿಜೆಪಿ ನಾಯಕ ಹೇಳಲಾರಂಭಿಸಿದನು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...