Wednesday, November 27, 2013

ಡಿ 14,15 ಮಂಗಳೂರಿನಲ್ಲಿ ಜನ ನುಡಿಆತ್ಮೀಯರೆ,

ವರ್ತಮಾನದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವವರಿಗೆ ಒಂದು ವಿಷಯ ಸ್ಪಷ್ಟವಾಗುತ್ತದೆ: ಮೂಲಭೂತವಾದ ಹಾಗೂ ಬಂಡವಾಳವಾದ ಈ ಎರಡೂ ಸಾಹಿತ್ಯ-ಸಂಸ್ಕೃತಿಗಳ ಮುಖವಾಡ ತೊಟ್ಟು ಜನಪರವೆಂದು ಬಿಂಬಿಸಿಕೊಳ್ಳುತ್ತ ತಮ್ಮ ಕಾರ್ಯಯೋಜನೆಗಳಿಗೆ ಮನ್ನಣೆ ಪಡೆಯುತ್ತಲಿರುವುದು; ಅಷ್ಟೇ ಅಲ್ಲ, ಜನಸಾಮಾನ್ಯರ ದೈನಂದಿನ ಬದುಕಿನೊಳಗೂ ಮಾರುಕಟ್ಟೆ ಮತ್ತು ಧಾರ್ಮಿಕ ಹಿತಾಸಕ್ತಿ ಅನಾರೋಗ್ಯಕರ ಪೈಪೋಟಿ ಹಾಗೂ ಅಸಹನೆ ಹುಟ್ಟುಹಾಕುತ್ತಿರುವುದು. ಸೂಕ್ಷ್ಮಜ್ಞನಾಗುಳಿದು ವ್ಯವಸ್ಥೆಯ ಲೋಪದೋಷಗಳನ್ನೆತ್ತಿ ತೋರಿಸಬೇಕಾದ ಸಾಹಿತಿ-ಕಲಾವಿದ-ಸಂಘಟನೆಯ ವ್ಯಕ್ತಿಗಳು ಇಂಥವರ ಮಾರುವೇಷದ ಮರ್ಮ ಅರ್ಥಮಾಡಿಕೊಳ್ಳದೇ ಅದರ ಭಾಗವಾಗುತ್ತಿದ್ದಾರೆ. ತಿಳಿದೋ, ತಿಳಿಯದೆಯೋ ಈ ವರ್ತುಲದ ಸಹಭಾಗಿಗಳಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಭವಿಷ್ಯದ ದಿಕ್ಸೂಚಿಯಾಗಬೇಕಾದ ಸಾಹಿತಿ-ಕಲಾವಿದರು ಸಾಹಿತ್ಯ ಮತ್ತು ಸಂಸ್ಕೃತಿಯ ಮಹಾಪೋಷಕರ ಋಣಭಾರ ಮತ್ತು ಆಮಿಷಕ್ಕೊಳಗಾಗಿ ಆತ್ಮವಂಚನೆ ಮಾಡಿಕೊಳ್ಳುವ ಅಪಾಯವಿದೆ. ಇದು ಯುವ ಪೀಳಿಗೆಯದ ದಿಕ್ಕು ತಪ್ಪಿಸುವ, ಗೊಂದಲಗೊಳಿಸುವ ಅಪಾಯ ದಟ್ಟವಾಗಿದೆ.

ಹೀಗಿರುತ್ತ ಸಮಾನ ಮನಸ್ಕರು ಒಂದೆಡೆ ಸೇರಿ, ಜನರಿಂದಲೇ ಹಣ ಸಂಗ್ರಹಿಸಿ, ಜನಪರವಾದ ಚಿಂತನೆಗಳನ್ನು ನಡೆಸಿ ಆ ಮೂಲಕ ಪರ್ಯಾಯ ಮಾದರಿಯೊಂದನ್ನು ರೂಪಿಸುವ ಅಗತ್ಯ ಬಹಳವಾಗಿದೆ.

ಈ ಹಿನ್ನೆಲೆಯೊಂದಿಗೆ, ‘ಅಭಿಮತ, ಮಂಗಳೂರು’ ಎಂಬ ವೇದಿಕೆ ರೂಪುಗೊಂಡಿದ್ದು ಡಿ. ೧೪, ೧೫ರಂದು ಮಂಗಳೂರಿನಲ್ಲಿ ‘ಜನ ನುಡಿ’ ಸಮಾವೇಶವನ್ನು ನಡೆಸಲು ಯೋಜಿಸಲಾಗಿದೆ. ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಿದ್ಧವಾದ ಕಾರ್ಯಕ್ರಮದ ವಿವರಗಳು ಹೀಗಿವೆ:

‘ನುಡಿಯು ಸಿರಿಯಲ್ಲ, ಬದುಕು’ 

ಅಭಿಮತ, ಮಂಗಳೂರು

ಜನ ನುಡಿ

ಡಿಸೆಂಬರ್ ೧೪ ಮತ್ತು ೧೫, ೨೦೧೩. ಸ್ಥಳ: ಕಲಾಂಗಣ್, ಶಕ್ತಿನಗರ, ಮಂಗಳೂರು

೧೪-೧೨-೨೦೧೩,  ಬೆಳಿಗ್ಗೆ  ೧೦.೦೦ - ೧೨.೩೦

ಚಾಲನೆ: ಡಾ. ರಾಜೇಂದ್ರ ಚೆನ್ನಿ
ಅಧ್ಯಕ್ಷತೆ: ಪ್ರೊ. ಎಸ್. ಜಿ. ಸಿದ್ಧರಾಮಯ್ಯ

ಪ್ರಾಸ್ತಾವಿಕ ಮಾತು: ಡಾ. ಎಚ್. ಎಸ್. ಅನುಪಮಾ
ಅತಿಥಿಗಳು: ಸಾರಾ ಅಬೂಬಕರ್
ಲಕ್ಷ್ಮಿನಾರಾಯಣ ನಾಗವಾರ
ಕಡಿದಾಳು ಶಾಮಣ್ಣ


--------------------------
೧೨.೩೦ - ೧.೦೦ ಹೋರಾಟದ ಹಾಡುಗಳು
--------------------------

ಮಧ್ಯಾಹ್ನ  ೨.೦೦ - ೪.೦೦ 

ಮಹಿಳೆ - ವರ್ತಮಾನ ಮತ್ತು ಚಳುವಳಿ

ಅಧ್ಯಕ್ಷತೆ: ಡಾ. ಕೆ. ಷರೀಫಾ
ಆಶಯ: ದು. ಸರಸ್ವತಿ

ವಿಷಯ ಮಂಡನೆ
 • ಡಾ. ಮೀನಾಕ್ಷಿ ಬಾಳಿ
 • ಡಾ. ವಿನಯಾ ವಕ್ಕುಂದ
 • ಡಾ. ಎನ್. ಗಾಯತ್ರಿ

ಪ್ರತಿಕ್ರಿಯೆ:     ಗುಲಾಬಿ ಬಿಳಿಮಲೆ
          ಡಾ. ಅನಸೂಯಾ ಕಾಂಬ್ಳೆ 
          ಜ್ಯೋತಿ ಚೇಳಾಯರು
          ಮಂಜುಳಾ ಮಾಳಗಿ 
          

ಸಂಜೆ  ೪.೦೦ -೬.೦೦ 
ಸಮಕಾಲೀನ ಸವಾಲುಗಳು - ಸಾಧ್ಯತೆಗಳು

      ಅಧ್ಯಕ್ಷತೆ: ಡಾ. ಕಾಳೇಗೌಡ ನಾಗವಾರ
ಆಶಯ: ನಾರಾಯಣ ಗಟ್ಟಿ
       
ವಿಷಯ ಮಂಡನೆ :                                     
ಡಾ. ಎಂ. ಡಿ. ವಕ್ಕುಂದ
ಕೆ. ಎಸ್. ವಿಮಲಾ  
ಡಾ. ವಿ. ಲಕ್ಷ್ಮೀನಾರಾಯಣ

ಪ್ರತಿಕ್ರಿಯೆ:        ಡಾ. ರಂಗನಾಥ್ ಕಂಟನಕುಂಟೆ
                     ಡಾ. ಅರುಣ್ ಜೋಳದ ಕೂಡ್ಲಿಗಿ 
                     ಪಿ. ಭಾರತೀದೇವಿ
                     ವರುಣ್ ನಾಯ್ಕರ್ 
                    
-----------------------------------
ಸಾಂಸ್ಕೃತಿಕ ಕಾರ್ಯಕ್ರಮ
-----------------------------------

೧೫-೧೨-೨೦೧೩
ಬೆಳಿಗ್ಗೆ ೧೦.೦೦ -೧೨.೦೦
ಜನ ಸಂಸ್ಕೃತಿ ಮತ್ತು ಮಾರುಕಟ್ಟೆ

ಆಶಯ: ಪ್ರೊ. ರಹಮತ್ ತರೀಕೆರೆ
ಅಧ್ಯಕ್ಷತೆ: ಡಾ. ಆರ್. ಪೂರ್ಣಿಮಾ

ವಿಷಯ ಮಂಡನೆ:       
 •  ಬಿ. ಶ್ರೀಪಾದ ಭಟ್ 
 •  ಡಾ. ಬಾಲ ಗುರುಮೂರ್ತಿ            
        
ಪ್ರತಿಕ್ರಿಯೆ :     ಸರ್ಜಾಶಂಕರ ಹರಳಿಮಠ
            ರವಿಕೃಷ್ಣಾ ರೆಡ್ಡಿ 
            ಡಾ. ಎಚ್. ಡಿ. ಪ್ರಶಾಂತ್ 
            ಹರ್ಷಕುಮಾರ್ ಕುಗ್ವೆ

ಮಧ್ಯಾಹ್ನ ೧೨.೦೦ - ೧.೩೦ 
ಕವಿ ಗೋಷ್ಠಿ

ಅಧ್ಯಕ್ಷತೆ: ಜಿ. ಪಿ. ಬಸವರಾಜು 
ಆಶಯ : ಪಿಚ್ಚಳ್ಳಿ ಶ್ರೀನಿವಾಸ್

 • ಆರಿಫ್ ರಾಜಾ
 • ರೇಣುಕಾ ಹೆಳವರ
 • ಶಶಿಧರ ಹೆಮ್ಮಾಡಿ  
 • ದೀಪಾ ಹಿರೇಗುತ್ತಿ
 • ಲಕ್ಷ್ಮೀನಾರಾಯಣ ಸ್ವಾಮಿ
 • ಅಕ್ಷತಾ ಹುಂಚದಕಟ್ಟೆ
 • ಸಂವರ್ಥ ಸಾಹಿಲ್
 • ಬಸವರಾಜ ಹೂಗಾರ
 • ಕೆ.ಪಿ.ಮೃತ್ಯುಂಜಯ
 • ಪ್ರವರ ಕೊಟ್ಟೂರು
 • ಬಿ. ಶ್ರೀನಿವಾಸ
 • ನಾಗರಾಜ ಹರಪನಹಳ್ಳಿ

--------------------------------------
೧.೩೦ - ೨.೦೦ ಹೋರಾಟದ ಹಾಡು
--------------------------------------

ಮಧ್ಯಾಹ್ನ  ೨.೩೦ - ೪.೩೦ 
ಕರಾವಳಿಯ ತಲ್ಲಣಗಳು

ಅಧ್ಯಕ್ಷತೆ:     ಡಾ. ಸಬಿಹಾ ಭೂಮಿಗೌಡ 

ವಿಷಯ ಮಂಡನೆ:
ಡಾ. ಎಚ್. ನಾಗವೇಣಿ 
ಅತ್ರಾಡಿ ಅಮೃತ ಶೆಟ್ಟಿ 
ಬಿ. ಎಂ. ಬಶೀರ್ 

ಪ್ರತಿಕ್ರಿಯೆ :    ಡಾ. ವಿಠ್ಠಲ ಭಂಡಾರಿ 
            ವಿದ್ಯಾ ದಿನಕೆರ್ 
            ಸುಶೀಲಾ ನಾಡ
            ವಿಠಲ ಮಲೆಕುಡಿಯ
            ಜೀವನ್ ರಾಜ್ ಕುತ್ತಾರ್            


ಸಮಾರೋಪ:
ಸಂಜೆ  ೪.೩೦ - ೬.೦೦

ಅಧ್ಯಕ್ಷತೆ: ಕೆ. ನೀಲಾ
ಸಮಾರೋಪ: ದಿನೇಶ್ ಅಮಿನ್ ಮಟ್ಟು

ಅತಿಥಿಗಳು: ಮಾವಳ್ಳಿ ಶಂಕರ್
         ಸನತ್‌ಕುಮಾರ್ ಬೆಳಗಲಿ
         ಡಾ. ವಸುಂಧರಾ ಭೂಪತಿ
         ಅನಸೂಯಮ್ಮ
         ಹರೇಕಳ ಹಾಜಬ್ಬ
            


ಸಹಯೋಗ :

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ-ಕೇರಳ
ಕರಾವಳಿ ಲೇಖಕಿಯರ ಸಂಘ
ಲಡಾಯಿ ಪ್ರಕಾಶನ, ಗದಗ
ಸಹಮತ, ಕುಂದಾಪುರ
ನಾವು ನಮ್ಮಲ್ಲಿ, ಕೊಟ್ಟೂರು
ವರ್ತಮಾನ.ಕಾಂ 
ಕರ್ನಾಟಕ ಜನ ಸಾಹಿತ್ಯ ಸಂಘಟನೆ
ಸಮುದಾಯ, ಮಂಗಳೂರು
ಇಪ್ಟಾ
ಸಹಮತ, ಹಾಸನ
ಚಿಂತನ, ಉತ್ತರ ಕನ್ನಡ 
ಆದಿಮ, ಕೋಲಾರ


ಬನ್ನಿ, ಗೆಳೆಯರೊಂದಿಗೆ. 
ನಿಮ್ಮ ಸಹಭಾಗಿತ್ವದ ನಿರೀಕ್ಷೆಯಲ್ಲಿ..
- ಅಭಿಮತ, ಮಂಗಳೂರು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...