Saturday, November 02, 2013

ದಿನದ ದೀಪ -66







1
ನೀನಿರುವ ಮನೆಯಲಿ
ಹಬ್ಬವಾಗದ ಬೆಳಕು ಬದುಕಾಗುವುದು
2
ವಾಮನ ಪಾದದ ನೆರಳು ಬೃಹದಾಕಾರವಾಗ ತೊಡಗಿತು
ಉರಿವ ಅಷ್ಟೂ ಹಣತೆಗಳ ಆರಿಸಿ ನಿರಾಳವಾದೆ
3
ಈ ನಾಡಲಿ ಹಣತೆಗಳ ಹಬ್ಬವೂ ಅಷ್ಠೇ
ಬೆಳಕು ಕತ್ತಲೆ ಶ್ರೇಷ್ಠ ಕನಿಷ್ಟ ಪಾಠದಕ್ಷರಗಳೇ

4
ಹಣತೆ ಹಚ್ಚಿಟ್ಟವರು ನಿದ್ದೆಹೋದರು
ಬೆಳಕಿನ ಬೇಟೆ ಕತ್ತಲೆಗೆ ಸಲೀಸಲಾಯಿತು

5
ಹಣತೆಗಳು ಬೀದಿಗೆ ಬಂದವು
ದೀಪವಿಲ್ಲದ ಮನೆ ಕಾಣುವುದು ನಿಚ್ಚಳವಾಯಿತು

6
ಹಣತೆ ಹಚ್ಚಿದೆ
ನನಗೂ ನೆರಳಿರುವುದು ಕಂಡಿತು

7
ಹಣತೆಗಳ ಹಬ್ಬ ಬಂದಿತೆಂದರು
ಮನೆಯಲಿ ಎಣ್ಣೆ ಇಲ್ಲದಿರುವುದ ನೆನಪಾಯಿತು

8
ಕತ್ತಲು ಕಳೆಯಲೆಂದಲ್ಲ
ಬೆಳಕು ಬೇಕೆನಿಸಿದಾಗ ನಾನು ಹಣತೆ ಹಚ್ಚಿಟ್ಟುಕೊಂಡಿದ್ದೇನೆ

9
ಹಚ್ಚಿದ ಹಣತೆಗಳ ಲೆಕ್ಕವೇ ಮನವ ತುಂಬಿತು
ಆರಿದ ಹಣತೆಗಳ ಲೆಕ್ಕದ ಮೇಲೆ ಬೆಳಕಿರಲಿಲ್ಲ

10
ಹಣತೆ ಹಚ್ಚಿದ ಖುಷಿ ಹುಚ್ಚೆದ್ದು ಕುಣಿಯುತ್ತಿದೆ
ನೆಲದ ಮೇಲೇಳದ ಹಣತೆ ಉರಿದು ಬೆಳಕಾಗುತಿದೆ


11
ಎಷ್ಟು ಹಣತೆ ಹಚ್ಚಿಟ್ಟರೇನು
ದೀಪವಾಗದೇ ಹೋದರೆ ನೀ ಮನಿಯಲ್ಲುಳಿಯುವುದು ಕತ್ತಲಷ್ಟೇ
12
ಅವರೆಲ್ಲ ಉರಿವ ಹಣತೆ ಕಂಡೆವು ಎಂದರು
ನೋಡಿದಂತೆಲ್ಲ ಅಮ್ಮನ ಚಿತ್ರ ಕಣ್ಣಿಗೆ ಕಟ್ಟಿದಂತಾಯಿತು
13
ಮಗಳಿದ್ದಾಳೆ ಮನೆಯಲ್ಲಿ
ಬೇರೆ ಹಣತೆ ಹಚ್ಚಲೇಕೆ?

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...