Saturday, November 02, 2013

ಬಿಜೆಪಿ ಮತ್ತು ಕಾಂಗ್ರೆಸ್ : ಎರಡು ಭಿನ್ನ ನೋಟ


ತೇಜ ಸಚಿನ್ ಪೂಜಾರಿ
ಅವತ್ತು ಅಮರ್ತ್ಯ ಸೇನ್ "ಮೋದಿಗೆ ನಾ ವೋಟ್ ಹಾಕೊಲ್ಲ" ಅಂದಾಗ ಬಿಜೆಪಿಯವ್ರು ಸೇನ್ ಅವರಿಂದ ಭಾರತರತ್ನ ವಾಪಸ್‌ ಕೇಳಬೇಕು ಅಂತ ಬೀದಿ ಬೀದೀಲಿ ಕಿರಿಚಾಡಿದ್ರು.. ಕಾಂಗ್ರೆಸ್ ಏಜೆಂಟ್ - ದೇಶದ್ರೋಹಿ ಅಂತ ಜರೆದ್ರು. ನಮ್ಮ ಅನಂತಮೂರ್ತಿಯವರಂತೂ ತಾವು ಜೀವನಪೂರ್ತಿ ಎದುರಿಸಿದಷ್ಟು ಟೀಕೆಗಳು ಹಾಗೂ ಜೀವನಪೂರ್ತಿ ಎದುರಿಸಿದ್ದಿರದಂತಹ ಅಪಹಾಸ್ಯ ಕುಹುಕಗಳು ಒಂದೇ ವಾರದಲ್ಲಿ ಬಂದದ್ದನ್ನು ಕಂಡೇ ಕುಗ್ಗಿ ಹೋದರು. 
 
 
 


 
ಇವತ್ತು ಲತಾ ಮಂಗೇಶ್ಕರ್ "ಮೋದಿ ಪ್ರಧಾನಿಯಾಗ್ಬೇಕು" ಅಂತಿದ್ದಾರೆ. ಕಾಂಗ್ರೆಸ್ ಸುಮ್ಮನಿದೆ. ಮೋದಿನಾ ಕಂಡರೆ ನಖಶಿಖಾಂತ ಉರಿಯುವ ದಿಗ್ವಿಜಯ ಸಿಂಗ್ ಕೂಡಾ, " ಲತಾ ಮಂಗೇಶ್ಕರ್ ನಮ್ಮ ದೇಶದ ಐಕಾನ್. ರಾಜಕೀಯ ಅಭಿಪ್ರಾಯಗಳನ್ನು ಹೊಂದುವ ಅಧಿಕಾರ ಆಕೆಗೆ ಇದೆ. ನಾವೆಲ್ಲಾ ಆಕೆಯ ಹಾಡುಗಳನ್ನು ಇಷ್ಟಪಡುತ್ತೇವೆ" ಅಂತ ಟ್ವೀಟ್ ಮಾಡಿದ್ದಾರೆ.

ಈ ಎರಡು ವಿದ್ಯಮಾನಗಳು ಹಲವು ಸಂಗತಿಗಳಿಗೆ ಕನ್ನಡಿ ಹಿಡಿಯುತ್ತವೆ.

ಕಾಂಗ್ರೆಸ್ ಪಕ್ಷವೇನೂ ಪರಿಪೂರ್ಣವಲ್ಲ. ಸ್ವಚ್ಚವೂ ಅಲ್ಲ. ಆದರೆ ಅದಕ್ಕೊಂದು ಪೊಲಿಟಿಕಲ್ ಮೆಚ್ಯುರಿಟಿ ಇದೆ. ಅದಕ್ಕೇ ಅನಂತಮೂರ್ತಿಯವರು,"ಆ ಪಕ್ಷಕ್ಕೆ ಸಮ್ರದ್ಢವಾದ ಸ್ಮ್ರತಿ ಇದೆ. ಮೆಮೊರಿ ಇದೆ" ಅಂದದ್ದು.

ಮೋದಿ ಪ್ರಧಾನಿಯಾದರೆ ಏನಾಗುತ್ತೆ ಅಂತ ಅವರ ಅಭಿಪ್ರಾಯ ಕೇಳಿದಾಗ, "ನೋಡಿ... ಈಗ ನಾನು ಮಾತಾಡುತ್ತಿರುವುದಕ್ಕೆ ಅವರ ಕಡೆಯವರು ಕೊಡುತ್ತಿರುವ ಉತ್ತರ ಮತ್ತು ಉತ್ತರಿಸುವ ರೀತಿ ನೋಡಿದರೆ ಅವರು ಅಧಿಕಾರದಲ್ಲಿರದೆ ಇರುವಾಗಲೇ ಹೀಗೆ, ಇನ್ನು ಅಧಿಕಾರಕ್ಕೆ ಬಂದರೆ? ಅಭಿವ್ಯಕ್ತಿ ಸ್ವಾತಂತ್ರ್ಯ ಇರೋದೇ ಇಲ್ಲ. ಇದು ನಿಜವಾದ ಅಪಾಯ. ಯಾರೂ ಏನೂ ಬರೆಯೋ ಹಾಗೇ ಇರಲ್ಲ. ಟೀಕಿಸೋ ಹಾಗೇ ಇರಲ್ಲ. ನಾವು ನೆಹರೂ, ಇಂದಿರಾಗಾಂಧಿ ಎಲ್ಲರನ್ನೂ ಟೀಕಿಸಬಹುದಾಗಿತ್ತು. ಲೋಹಿಯಾ ಅಂತೂ ನೆಹರೂರನ್ನು ಅಟ್ಯಾಕೇ ಮಾಡುತ್ತಿದ್ದರು. ದಿನಕ್ಕೆ ಇಪ್ಪತ್ತೈದು ಸಾವಿರ ಖರ್ಚು ಮಾಡುತ್ತಾರೆ ಅಂತ ದೊಡ್ಡ ಡಿಬೇಟ್‌ ಮಾಡ್ತಾ ಇದ್ದರು. ಕಿಶನ್‌ ಪಟ್ನಾಯಕ್‌ ಕೂಡಾ ಅತ್ಯುಗ್ರವಾಗಿ ಟೀಕೆ ಮಾಡ್ತಿದ್ದರು. ಆದರೆ ನೆಹರೂ ಕಡೆಯವರು ಲೋಹಿಯಾ ಮತ್ತಿತರರನ್ನು ಇಂಥ ನೀಚ ಮಾತುಗಳಿಂದ ಅಟ್ಯಾಕ್‌ ಮಾಡುತ್ತಿರಲಿಲ್ಲ. ಇವರನ್ನೂ ಟೀಕಿಸಬಹುದು ಅನ್ನೋ ವಾತಾವರಣ ಈಗಲೇ ಕಾಣಿಸುತ್ತಿಲ್ಲ." ಅಂದಿದ್ದರು. ಇದು ವಾಸ್ತವ.

ಮೋದಿ, ಅವರ ಪಕ್ಷ ಮತ್ತು ನಮೋ ನಾಮಧಾರಿಗಳು ಅದೇನ್ ಸಾಧನೆ ಮಾಡ್ತಾರೋ ಗೊತ್ತಿಲ್ಲ. ಆದರೆ ಅಭಿವ್ಯಕ್ತಿಗೆ ಮಾತ್ರ ಯಾವತ್ತಿಗೂ ಕಂಟಕವೇ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...