Wednesday, November 20, 2013

ಕೆಳಗಿನ ಬೀದಿ ಹುಡುಗೇರು







ಮೀನಾ ಕಂದಸಾಮಿ
ಅನುವಾದ : ಡಾ. ಎಚ್ ಎಸ್ ಅನುಪಮಾ 





ನೈತಿಕ ಪೊಲೀಸರಿಗೆ

ಈ ಹೆಂಗ್ಸು ಇದಾಳಲ್ಲ, ಅವ್ಳು ಕೊಳಕಿ, ಆಮೇಲೆ ಆ ಹುಡುಗಿ
ಓ ಅಲ್ಲಿದಾಳಲ್ಲ ಅವ್ಳು, ಹೊಟ್ಟೆಬಾಕಿ. ಆಮೇಲೆ ನಾನು
ದುಂಡನ ತೊಡೆ ಮೇಲೆ ಹಚ್ಚೆ ಹುಯ್ಸಕಂಡಿರೋ ಹೆಣ್ ನಾಯಿ
ಈ ಕರೀ ಹೆಂಗ್ಸು, ಅವ್ಳು ಬಾಯಿಬಿಟ್ರೆ ಬೆಂಕಿ ಬಿರುಗಾಳಿ
ಆ ಅವ್ಳು, ಮಾಟಗಾತಿ, ಬಂಗಾರನೇ ಪಟಾಯಿಸ್ತಾಳೆ
ಆಮೇಲೆ, ನಾನು, ಹೆಸರಲ್ಲಿ ಬೇಸಿಗೆ ತುಂಬ್ಕಂಡಿರೋ ಚಂಡಿ.

ನಾಲಗೆ ಹೊರಕ್ ಚಾಚಿ ಸೂರ್ಯನ್ನ ನುಂಗ್ತಿವಿ ನಾವು
ಸುಲಿತೀವಿ ಗಂಡಸರ, ಅಪ್ಪಟ ಹಾದರಗಿತ್ತೀರು. 
ನಿದ್ದೆಯಿಲ್ಲ. ಕಣ್ರೆಪ್ಪೇಲಿ ನಕ್ಷತ್ರ ಧೂಳು, ಹಗಲುಗನಸು.
ಬೆತ್ತಲೆ. ಮನಸಿನ್ ತುಂಬ ಆತ್ಮ ರತಿ 
ಹೌದು, ನನ್ನ ಗೆಳೇರೇ, ನಾವೆಲ್ಲ ಗೆಣೆಕಾತಿಯರು.

ಪ್ರಸ್ತದ ರಾತ್ರಿ ನಂ ಹಾಸಿಗೇಲಿ ಕನ್ಯಾಪೊರೆ ಹರಿದ ರಕ್ತ ಕಲೆಯಿರಲ್ಲ.
ನಿಮ್ಮ ಹೆಂಡರಾಗೋರ ಲಿಸ್ಟಲ್ಲಿ ನಮ್ಮ ಹೆಸರಿರಲ್ಲ.
ಸಾಯೋತಂಕ ಜೈಲ್ ಶಿಕ್ಷೆನ ನೀವು ನಮಗೆಂದೂ ಕೊಡಕ್ ಸಾಧ್ಯವಿಲ್ಲ.

  
-  (ಮಿಸ್ ಮಿಲಿಟೆನ್ಸಿ ಸಂಕಲನ)

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...