Tuesday, December 10, 2013

`ಆಳ್ವಾಸ್ ನುಡಿಸಿರಿ' ಎಂಬುದು ಪ್ಯೂಡಲ್ ಸಂಕೇತ ; ಕರಾವಳಿ ಅಲೆ ವರದಿ
ಕರಾವಳಿ ಅಲೆ ವರದಿ

ಮಂಗಳೂರು : ಮೂಡಬಿದ್ರೆಯ ಮೋಹನ ಆಳ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ವರ್ಷಂಪ್ರತಿ ನಡೆಯುವ `ನುಡಿಸಿರಿ' ಈ ಬಾರಿ ದಶಮಾನೋತ್ಸವ ಆಚರಿಸಲಿದ್ದು, ಈ ಸಾಹಿತ್ಯ ಸಮ್ಮೇಳನ ``ಬಂಡವಾಳವಾದ -ರಾಜಕಾರಣ - ಸ್ಥಾಪಿತ ಧರ್ಮದ ಅಪವಿತ್ರಮೈತ್ರಿಯೇ ಈ ನುಡಿಸಿರಿ'' ಎಂಬ ಅಭಿಪ್ರಾಯ ಬಲವಾಗಿ ಕೇಳಿ ಬರುತ್ತಿದೆ.

`ಆಳ್ವಾಸ್ ನುಡಿಸಿರಿ' ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದಾಗ ಮತ್ತು ಪ್ರತೀ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದವರ ಅಭಿಪ್ರಾಯ ಸಂಗ್ರಹಿಸಿದಾಗ ಗುಲಾಮಗಿರಿಯ ಮುಂದುವರಿಕೆ,ವಾಣಿಜ್ಯೀಕರಣ,ಅಧಾಮರ್ಿಕರ ಒಡ್ಡೋಲಗವೇ ಹೊರತು ಬೇರೆನಲ್ಲ ಎಂಬುದು ಸಾಬೀತಾಗಿದೆ. ಈ ಬಗ್ಗೆ ಹಲವು ಅಂಶಗಳು ಇಲ್ಲವೆ.


1) `ಆಳ್ವಾಸ್ ನುಡಿಸಿರಿ' ಹೆಸರೇ ಅಪ್ರಸ್ತುತ. ಕಾಲೇಜು ವಿದ್ಯಾರ್ಥಿಗಳ,ಪೋಷಕರನ್ನು ದಾಟಿ ಭಾಷೆ,ನಾಡು,ನುಡಿ ಬಗೆಗೊಂದು ಸಮ್ಮೇಳನ,ಉತ್ಸವವೆಂದು ಕರೆಯುವುದಾದರೆ,ಕಲೆ-ಸಾಹಿತ್ಯದ ನಿಜ ಪ್ರೀತಿಯ ಅನಾವರಣೇ ಆಗಿದ್ದರೆ ಮೋಹನ್ ಆಳ್ವರು ತಮ್ಮ ಮನೆತನದ/ ಶಿಕ್ಷಣ ಸಂಸ್ಥೆಗೆ ಹೆಸರಿನ ಬದಲು `ಕನ್ನಡ ನುಡಿಸಿರಿ ಅಥವಾ ಕರಾವಳಿ ನುಡಿಸಿರಿ'ಎಂದು ಇಡಬಹುದಿತ್ತಲ್ಲವೇ? ಇದು ಕೆಲವು ಶಾಪಿಂಗ್ ಮಾಲ್ಗಳಲ್ಲಿ ಹಬ್ಬ-ಹರಿದಿನಗಳ ವಿಶೇಷ ಆಫರ್ ಉತ್ಸವಗಳಷ್ಟೆ ಸಂಕುಚಿತವಾಗಿದೆ.

2)  ಉಭಯ ಜಿಲ್ಲೆಗಳ ಎಲ್ಲಾ ಶಿಕ್ಷಣ ಸಂಸ್ಥೆಗಳು ವಿದ್ಯಾಥರ್ಿಗಳ ಸೆಳೆಯಲು ಕೋಟ್ಯಂತರ ರೂಪಾಯಿ ಜಾಹೀರಾತು,ಹೋಡರ್ಿಂಗಿಗೆ ಖಚರ್ು ಮಾಡುತ್ತಿವೆ. ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಒಂದೇ ಒಂದು ಜಾಹೀರಾತಿಲ್ಲ. ಆಶ್ವರ್ಯ ಎಂದರೆ ಗೂಗಲ್ನಲ್ಲಿ `ಎಜುಕೇಶನ್ ಇನ್ ಇಂಡಿಯಾ'ಎಂದು ಟೈಪ್ ಮಾಡಿದೊಡನೆ ಮೊದಲು ಕಾಣಿಸುವುದು `ಆಳ್ವಾಸ್ ಶಿಕ್ಷಣ ಸಂಸ್ಥೆ...! ಇಡೀ ಸಾಂಸ್ಕೃತಿಕಲೋಕದ ಪ್ರತಿನಿಧಿ,ತುಳು,ವಿಶ್ವಕನ್ನಡ ಸಮ್ಮೇಳನದ ರೂವಾರಿ,ಅಚ್ಚುಕಟ್ಟಿಗೆ ಹೆಸರುವಾಸಿ, ನುಡಿಸಿರಿ ಎಂಬ ಸಾಹಿತ್ಯಲೋಕದ ಅನಭಿಷಕ್ತ ದೊರೆ ಎಂದು ಮಾಧ್ಯಮಲೋಕ ಬೆಳೆಸಿದರ ಪರಿಣಾಮ ಇದು.


3) ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 15,000 ವಿದ್ಯಾರ್ಥಿಗಳಿದ್ದಾರೆ. ಕ್ರೀಡೆ ಮತ್ತಿತರ ವಲಯದಲ್ಲಿ ಸಾಧನೆ ಮಾಡಿದವರಿಗೆ ಉಚಿತ ಶಿಕ್ಷಣ ಲಭಿಸುವುದು 100 ವಿದ್ಯಾರ್ಥಿಗಳಿಗೆ ಮಾತ್ರ. ಅಂದರೆ ಈ 15 ಸಾವಿರ ವಿದ್ಯಾರ್ಥಿಗಳ ಫೀಸಿನಲ್ಲಿ 5 ರೂ ಹೆಚ್ಚು ವಸೂಲಿ ಮಾಡಿದರೂ ಇವರ ಉಚಿತ ಶಿಕ್ಷಣ ಖಚಿತ. ಮತ್ತು ದಾನ ಶೂರ ಕರ್ಣನೆಂಬ ಬಿರುದು.

4) ಕನ್ನಡ ಸಾರಸ್ವತಲೋಕ ಇತಿಹಾಸದಲ್ಲಿ ಸಾಹಿತ್ಯ-ಚಳುವಳಿ ಒಟ್ಟೊಟ್ಟಿಗೆ ಸಾಗಿ ಬಂದಿದೆ. ಸಾಹಿತ್ಯ-ಚಳುವಳಿಗೆ ಮೆರಗು ಕೋಡುತ್ತೇನೆಂದು ಬಿಂಬಿಸುವ ಮೋಹನ ಆಳ್ವರು ಕಳೆದ ಬಾರಿ `ಕನ್ನಡದ ಮನಸ್ಸುಗಳು ಮತ್ತು ಪ್ರಗತಿಪರ ಚಳುವಳಿ'ಎಂಬ ವಿಷಯವಿಟ್ಟಿದ್ದರು. ಆದರೆ ಇದೇ ಮೋಹನ ಆಳ್ವರು ವಿಚಾರಶೀಲರು ಶತಾಯಗತಾಯ ಹೋರಾಟ ನಡೆಸಿದ ಪರಿಣಾಮ ಸರ್ಕಾರ ಸೆಝ್ 2ನೇ ಹಂತದಲ್ಲಿ ನುಂಗಿದ 2035 ಎಕರೆ ಭೂಮಿ ವಾಪಾಸಾತಿಯ ಸಂದರ್ಭ ಸೆಝ್ ಭೂಮಿಯಲ್ಲಿ `ಆಯುರ್ವೇದ ಗಿಡ'ನೆಡಲು ಅಧಿಕೃತ ಒಪ್ಪಂದ ಮಾಡಿಕೊಂಡಿದ್ದರು. ಜೊತೆಗೆ ರೈತರಿಗೆ ಕಂಟಕವಾಗಿರುವ ಸೆಝ್,ಎಂಆರ್ಪಿಎಲ್ ಫಂಡಿನಿಂದಲೇ ನುಡಿಸಿರಿ ಮೆರುಗು ಕೊಡುತ್ತಿದ್ದಾರೆ.

5) ಕಳೆದ ಒಂದು ವರ್ಷದಿಂದ ದಕ ಜಿಲ್ಲೆಯ ಧಾರ್ಮಿಕ ಸರ್ವಾಧಿಕಾರತ್ವದ ವಿರುದ್ಧ ಜನ ರೊಚ್ಚಿಗೆದ್ದು,ಚಳುವಳಿ ರೂಪ ನೀಡಿದ್ದರು. ಹಿಂದೆ ಸಮಾರೋಪ ಸಮಾರಂಭಕ್ಕೆ ಮಾತ್ರ ಸೀಮಿತವಾಗಿದ್ದ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಈ ಬಾರಿ ನುಡಿಸಿರಿ ಉದ್ಘಾಟನೆ ನಡೆಸಲಿದ್ದಾರೆ. ತನ್ನೊಂದಿಗೆ ನಾ ದಾಮೋದರ ಶೆಟ್ಟಿ,ಕದಂಬ ಎಂಬಿಬ್ಬರನ್ನು ಎಡ-ಬಲಕ್ಕಿಟ್ಟುಕೊಂಡು ಮೋಹನ ಆಳ್ವರು ಆಯ್ಕೆ ಸಮಿತಿ ಸರ್ವಾನುಮತವಿದೆ ಎಂದಿದ್ದಾರೆ (ಮೂಲಗಳ ಪ್ರಕಾರ ನುಡಿಸಿರಿ ಆಯೋಜಕರ ಈ ಆಯ್ಕೆಗೆ 3 ಕೋಟಿ ರೂ ಸಂದಾಯವಾಗಿದೆಯಂತೆ).

6) ನುಡಿಸಿರಿಯಲ್ಲಿ ಈ ಬಾರಿ ಕೃಷಿಮೇಳ ನಡೆಯುತ್ತಿದೆ. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯವರೇ ಇದರ ಮೇಲುಸ್ತವಾರಿ. ಕೃಷಿ ಭೂಮಿಯ ಸಮಾಧಿ ಮೇಲೆ ನಿರ್ಮಿತ ಎಂಆರ್ಪಿಎಲ್,ಸೆಝ್ ನೀಡಿದ ಹಣದಲ್ಲಿ ಧರ್ಮಸ್ಥಳದ ಆಯೋಜನೆಯ ಕೃಷಿ ಮೇಳ ಏನನ್ನು ತೋರಿಸುತ್ತದೆ?

7) 2010ರ ನುಡಿಸಿರಿ ಸಮ್ಮೇಳಾನಾಧ್ಯಕ್ಷ ಬರಗೂರು ರಾಮಚಂದ್ರಪ್ಪ ಪಲ್ಲಕ್ಕಿಯಲ್ಲಿ ಹೊತ್ತು ತರುವುದು ಮತ್ತು ಮುಂಡಾಸು(ಪೇಟ ಅಲ್ಲ) ಧರಿಸುವುದನ್ನು ನಿರಾಕರಿಸಿದ್ದರು. ಈ ಬಹಿರಂಗ ಆಕ್ಷೇಪಣೆಗೂ ಜಗ್ಗದ ಆಳ್ವರು ಗುಲಾಮಗಿರಿ,ಪಾಳೆಯಗಾರಿಕೆಯ ಸಂಕೇತವಾದ ಗುತ್ತಿನ ಮುಂಡಾಸನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಈ ಬಾರಿ ಅಧ್ಯಕ್ಷ ಬಿ ಎ ವಿವೇಕ್ ರೈಗೂ ತೊಡಿಸಲಿದ್ದಾರೆ.

 
ಈ ಸಲದ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ ಬಿ ಎ ವಿವೇಕ್ ರೈ ಗುತ್ತುಗಾರಿಕೆಯ ಪಳೆಯುಳಿಕೆಯಾದ ಮುಂಡಾಸೆ ತೊಡಲಿದ್ದಾರೆ. ಕಳೆದ ಬಾರಿ ನುಡಿಸಿರಿ ಡಾ ಯು ಆರ್ ಅನಂತಮೂರ್ತಿ ತೆರಳುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಲೇಖನ ವರ್ತಮಾನ.ಕಾಮ್ನಲ್ಲಿ ಪ್ರಕಟವಾದಾಗ ಇದೇ ವಿವೇಕ್ ರೈ ಲೇಖಕರ ಫೇಸ್ಬುಕ್ ಇನ್ಬಾಕ್ಸಿಗೆ ``ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೋಮುವಾದ ಮತ್ತು ಬಂಡವಾಳಶಾಹಿಗಳ ಪ್ರಾಯೋಜಕತ್ವ ವಿರೋಧಿಸಬೇಕು''ಎಂದು ಮೆಸೇಜ್ ಕಳುಹಿಸಿ,``ನಿಮ್ಮೊಂದಿಗೆ ನಾವಿದ್ದೇವೆ,ವಿರೋಧಿಸೋಣ''ಎಂದಿದ್ದರಂತೆ. ವರ್ಷದೊಳಗೆ ಪ್ಲೇಟು ಬದಲಿಸಿದ ವಿಶ್ರಾಂತರು ಮುಂಡಾಸಿನ ಆಸೆಗೆ ಬಿದ್ದು,ಪಲ್ಲಕ್ಕಿ ಅಲಂಕರಿಸಲಿದ್ದಾರೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...