Thursday, December 05, 2013

-ಎನ್ ಕೆ ಹನುಮಂತಯ್ಯ ಅವರ ಕವಿತೆ

ಮತ್ತೆ ಮರವಾಗುತ್ತೇನೆ...

ಮತ್ತೆ ಮರವಾಗುತ್ತೇನೆ...

ನಿನ್ನ ನೆನಪುಗಳು
ಬೆಂಕಿಯ ಹಕ್ಕಿಗಳಾಗಿ ಹಾರಿಬರುತ್ತವೆ ಸದಾ
ನನ್ನ ಬಳಿಗೆ

ಆಗ ನಾನು
ಮರವಾಗುತ್ತೇನೆ
ಅವು
ಗೂಡುಕಟ್ಟುತ್ತವೆ
ನಾನು
ಬೂದಿಯಾಗುತ್ತೇನೆ

ನಿನ್ನ ನೆನಪುಗಳು
ಮೋಡಗಳಾಗಿ ತೇಲಿಬರುತ್ತವೆ ಸದಾ
ನನ್ನ ಬಳಿಗೆ

ಮಳೆ ಸುರಿಸುತ್ತವೆ
ನಾನು ಮತ್ತೆ ಮರವಾಗಿ
ಚಿಗುರುತ್ತೇನೆ

-ಎನ್ ಕೆ ಹನುಮಂತಯ್ಯ


ನಿನ್ನ ನೆನಪುಗಳು
ಬೆಂಕಿಯ ಹಕ್ಕಿಗಳಾಗಿ ಹಾರಿಬರುತ್ತವೆ ಸದಾ
ನನ್ನ ಬಳಿಗೆ

ಆಗ ನಾನು
ಮರವಾಗುತ್ತೇನೆ
ಅವು
ಗೂಡುಕಟ್ಟುತ್ತವೆ
ನಾನು
ಬೂದಿಯಾಗುತ್ತೇನೆ

ನಿನ್ನ ನೆನಪುಗಳು
ಮೋಡಗಳಾಗಿ ತೇಲಿಬರುತ್ತವೆ ಸದಾ
ನನ್ನ ಬಳಿಗೆ

ಮಳೆ ಸುರಿಸುತ್ತವೆ
ನಾನು ಮತ್ತೆ ಮರವಾಗಿ
ಚಿಗುರುತ್ತೇನೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...