Wednesday, December 18, 2013

ಇತಿಹಾಸವೆಂದರೆ?








 ಕು.ಸ.ಮಧುಸೂದನ್



ಐದು ಸಾವಿರ ವರ್ಷಗಳ....?
(ಪುರಾಣವೆನ್ನುವುದೊ-ಇತಿಹಾಸವೆನ್ನುವುದೊ?)
ಅಷ್ಟೆತ್ತರದ ಅರಮನೆ
ಅಂಬರ ಮುಟ್ಟುವ ಕಳಸ ಗೋಪುರಗಳು
ಸುತ್ತೇಳು ಕೋಟೆ
ಗೋಡೆಗಳ ಮೇಲೆ
ಫಿರಂಗಿಗಳ ದಂಡು
ಸುತ್ತ ಶಸ್ತ್ರಸಜ್ಜಿತ ಸೈನಿಕರ ಹಿಂಡು
ಅಲ್ಲಲ್ಲಿ
ವಿಶಾಲ ದೇವಳಗಳು
ಸಾಹಿತ್ಯ-ಸಂಗೀತ
ಸಭಾಭವನಗಳು
ಮೀಟಿದರೆ ನಾದ ಹೊಮ್ಮಿಸೊ
ತಂತಿವಾದ್ಯಗಳು

ಕಲ್ಯಾಣ ಮಹೋತ್ಸವಕ್ಕಾಗಿ ಅಷ್ಟಗಲದ ಛತ್ರಗಳು
ಕಸದ ತೊಟ್ಟಿ ಸುತ್ತ ಕಂತ್ರಿ ನಾಯಿಗಳು
ತಲೆ ಹಿಡಿಯಲು ಹುಡುಕಾಡುವ ಛತ್ರಿಗಳು
ಬರೆದಿಟ್ಟ ಗ್ರಂಥಗಳ ಕಂತೆಗಳು
ಬೊಗಳೆ ಬಿಡುವ ಬೊಂತೆಗಳು
ಆಳುವ ಸರದಾರರು
ಅವರ ಹೆಂಡಂದಿರು
ಹೆಂಡಂದಿರ ಮಿಂಡಂದಿರು
ಮನೆಹಾಳ
ವಂದಿ ಮಾಗಧರಿಗಾಗಿ ಕಟ್ಟಿದ ಮಹಲುಗಳು
ಅದರೊಳಗಿನ ತೆವಲುಗಳು

ಐದು ಸಾವಿರ ವರ್ಷದ
ಸಂಸ್ಕ್ರತಿಯ
ವಾರಸುದಾರರು
ಬೀದಿಗೊಬ್ಬರು
ನಡುನಡುವೆ
ವರ್ಣಸಂಕರದ ನೆಪಕೆ
ಗರ್ಜಿಸುವ


ಸಿಂಹ ಶಾರ್ಧೂಲಗಳು
ಮಗ್ಗದ ಮನೆಯಲ್ಲಿ
ಬೆತ್ತಲೆ ನಿಂತ
ಅಂಗನೆಯರು
ವಾರಂಗನೆಯೆ ಮನೆಯಲ್ಲಿ
ಪಂಡಿತೋತ್ತಮರು!
ತಮಾಷೆ ನೋಡುತ್ತಿರುವ
ಬುದ್ದಿಜೀವಿಗಳು!!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...