Wednesday, December 11, 2013

ಕೆಲವು ಸಲಬದುಕು 
ಕೆಲವು ಸಲ ಹಗಲು ತೆರೆದುಕೊಳ್ಳುತ್ತದೆ
ಕೆಲವು ಸಲ ರಾತ್ರಿ..

ಒಮ್ಮೊಮ್ಮೆ ನೋವಿನಲ್ಲಿ ಹುಟ್ಟುತ್ತದೆ
ಕೆಲವೊಮ್ಮೆ ನಗುವಿನಲಿ ಕೊನೆಗಾಣುತ್ತದೆ

ಏನೊಂದೂ ಹೇಳದೇ


ವಿರಾಟ ಜ್ವಾಲೆಯಲಿ ತುಟಿಗೆ ಮಾತು ತುಂಬುತ್ತದೆ
ಮಾಗಿಯ ಚಳಿಯಾಗಿ ಮೂಳೆಗೆ ಮಾತು ಕಲಿಸುತ್ತದೆ


ಬೆಂಕಿ ಬೇನೆ ನೋವು  
ವಿನಾಶದ ಪಟ್ಟಹೊತ್ತು ತಿರುಗುವ ಲೋಕದಲಿ
ಬದುಕು ಬರೆದಿಟ್ಟ ಬರಹದ ಹಾಗಲ್ಲ
ಅನ್ನುವುದೇ ಮರೆತು ಹೋಗುವ ಕಾಲದಲಿ
ಜೀವ ಹೀಗೆ ಕಾಡುವುದೆಂದು ಹೇಗೆ ಹೇಳುವುದು ?

ಹೂವು ನಗು
ಮತ್ತು ಪ್ರೇಮಗಳಲಿ
ಸಾವಿಗೆ ಯಾವುದೂ ಕಾರಣವಲ್ಲವೆಂದು ಹೇಗೆ ಹೇಳುವುದು ?

ಬೆಳಕಾಗುವ ಸುಗಂಧವಾಗುವ ಆಸೆ
ಸುಟ್ಟುಕೊಳ್ಳುವ ಅರಿವಿದ್ದೂ ಮೊಳೆಯುತ್ತದೆ
ಖರೆ
ನಶೆಯಿಲ್ಲದ ಬದುಕು ನನ್ನದಲ್ಲ
ಬಾಯಾರಿ ಕಡಲ ಕೂಡಿದ್ದೇನೆ
ಆವಿಯಾಗದೇ ಹೊರಬರಲು ದಾರಿಯಿಲ್ಲ

ನನಗೆ ಹೆಚ್ಚೇನೂ ತಿಳಿದಿಲ್ಲ
ಸಾವಿನ ಭಾಷೆಯ ಅನುವಾದಿಸುವವ ಇನ್ನೂ ಸಿಕ್ಕಿಲ್ಲ
ಈ ದಾರಿಯಲ್ಲಿ
ಬದುಕಿನ ಭಾಷೆಯನ್ನು ಮಾತನಾಡುವವರೂ ಕಮ್ಮಿಯಾಗಿದ್ದಾರೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...