Thursday, January 23, 2014

ದೀಪ




  ಭಾವಜೀವಿ ಮಂಜು


ದೀಪ ಹಚ್ಚಲೇ ಬಾರದೆಂದಿರುವೆ
ಹಚ್ಚಿದ ದೀಪ ಆರಿ ಹೋದ ಮೇಲೆ,
ಕತ್ತಲಲೆ ಬದುಕಬೇಕೆಂಬುದೇ 
ಬದುಕಿನ ನಿಯಮವೆಂದ ಮೇಲೆ...

ಭಾವವೆಂಬ ಬತ್ತಿ ಹೊಸೆದು, 
ಪ್ರೀತಿಯೆಂಬ ಎಣ್ಣೆ ಸುರಿದು
ಆರಾಧನೆಯಿಂದ ಜ್ಯೋತಿ ಹಚ್ಚಿದೆ, 
ಗಾಳಿಯೂ ಸುಳಿಯದಂತೆ ಜೋಪಾನ ಮಾಡಿದೆ,
ಆದರೂ ಅಸುನೀಗಿದ ಹಣತೆಯ ಕಂಡು
ದೀಪ ಹಚ್ಚಲೇ ಬಾರದೆಂದಿರುವೆ....

ಒಡಲೊಳಗಿನ ನೋವುಗಳ ಮರೆತು
ಮನದೊಳಗಿನ ಕಾವುಗಳ ಕಳೆದು,
ಕಂಬನಿಗಳ ಕಡೆದು,
ಕತ್ತಲಿನ ನಡುವಿನಲ್ಲೇ
ಹಚ್ಚಿದ ಹಣತೆ ಅಳಿದು ಹೋದ ಮೇಲೆ
ದೀಪ ಹಚ್ಚಲೇ ಬಾರದೆಂದಿರುವೆ..

ಸೊಡರಿರದ ಬದುಕಲ್ಲಿ
ಸೋಲುಗಳ ನಡುವಲ್ಲಿ
ನೋವನ್ನೇ ಮೆರೆಸಿ
ಕಾವನ್ನೇ ಕಾಯಿಸಿ
ಬದುಕಿನ ನಡುವಲ್ಲೇ ನಾನೇ
ಉರಿದು ಬೂದಿಯಾಗುವೆ...
ಆಗ ಹಚ್ಚಲಿ ಹಣತೆ.....


                                                                              

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...