Tuesday, February 18, 2014

ಫೆ 23 ಮೈಸೂರು : ಪಂ.ತಾರಾನಾಥ ಫೌಂಡೇಷನ್ - ಸಂಗೀತ ದಿನ
          ಪಂ.ತಾರಾನಾಥ ಫೌಂಡೇಷನ್
                                ಮೈಸೂರು


                  ಭಾನುವಾರದ ಬೆರಗು


        ಹಿಂದೂಸ್ತಾನೀ ಹಾಡುಗಾರಿಕೆ : ಕವನ ಹೆಗಡೆ

       ಹಾರ್ಮೋನಿಯಂ: ಬಿ.ಶ್ರೀರಾಮ ಭಟ್
      ತಬಲಾ ಸಾಥ್ :  ಮಿಲಿಂದ್   ಸಿತಾರ್ ವಾದನ : ಸುಂದರನಾಥ್
   ತಬಲಾ ಸಾಥ್ :  ಮಿಲಿಂದ್
೨೩ ಫೆಬ್ರವರಿ ೨೦೧೪, ಭಾನುವಾರ  ಬೆಳಗ್ಗೆ ೧೦ ರಿಂದ ಸ್ಥಳ : ಬಿಡಾರಂ ಕೃಷ್ಣಪ್ಪ ರಾಮಮಂದಿರ
ನಾರಾಯಣಶಾಸ್ತ್ರಿ ರಸ್ತೆ,   ಮೈಸೂರು           ನೀವು ಬಂದರೆ ನಮಗೆಲ್ಲ ಹಿಗ್ಗು

                          
                                       ಪಂ.ರಾಜೀವ ತಾರಾನಾಥ

                                                         ಮ್ಯಾನೇಜಿಂಗ್ ಟ್ರಸ್ಟೀ
ಕವನ ಹೆಗಡೆ
ಬೆಂಗಳೂರಿನಲ್ಲಿರುವ ಕವನ ಹೆಗಡೆ ಎರಡನೇ ಪಿಯು ವಿದ್ಯಾರ್ಥಿ. ಲಕ್ಷ್ಮೀನಾರಾಯಣ ಹೆಗಡೆ ಮತ್ತು ಭಾಗೀರತಿ ಹಗಡೆ ದಂಪತಿಗಳ ಮಗಳು. ಏಳನೇ ವರ್ಷದಲ್ಲಿ ಲಘು ಸಂಗೀತ ಮತ್ತು ಕೀಬೋರ್ಡ್ ಮೂಲಕ ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದ ಕವನ, ಮುಂದೆ ಉಸ್ತಾದ್ ಫೈಯ್ಯಾಜ್ ಖಾನ್ ಅವರ ಬಳಿ ನಡೆದು ಶಾಸ್ತ್ರೀಯ ಸಂಗೀತಕ್ಕೆ ತನ್ನನ್ನು ಕೊಟ್ಟುಕೊಂಡಳು. ಈಗಲೂ ಅವರೇ ಗುರುಗಳು. ಜೊತೆಗೆ ಪ್ರೇಮಲತಾ ದಿವಾಕರ್ ಅವರ ಬಳಿ ಲಘು ಶಾಸ್ತ್ರೀಯ ಸಂಗೀತ ಮತ್ತು ಪಂ. ವಿ.ಎಂ.ನಾಗರಾಜ್ ಅವರ ಬಳಿ ಹಾರ್ಮೋನಿಯಂ ನುಡಿಸಾಣಿಕೆಯನ್ನೂ ಅಭ್ಯಾಸ ಮಾಡುತ್ತಿದ್ದಾಳೆ.

ಕವನ ಅನೇಕ ವೇದಿಕೆಗಳಲ್ಲಿ ಹಾಡಿದ್ದಾಳೆ; ಬಹಮಾನಗಳನ್ನೂ ಗೆದ್ದಿದ್ದಾಳೆ. ಇತ್ತೀಚಿನ ಸ್ಪಿಕ್‌ಮೆಕೆಯ ’ನಾದಭೇದ’ ಸ್ಪರ್ಧೆಯಲ್ಲಿಯೂ ಈಕೆ ಭಾಗವಹಿಸಿದ್ದಳು. ಅನೇಕ ಗಾಯಕರಿಗೆ ಹಾರ್ಮೋನಿಯಂ ಸಾಥನ್ನೂ ನೀಡಿದ್ದಾಳೆ.


ಸುಂದರನಾಥ್:
ಗಾಯನದಿಂದಲೇ ಸಂಗೀತವನ್ನು ಆರಂಭಿಸಿದ ಸುಂದರನಾಥ್ ನಂತರ ಆಯ್ದುಕೊಂಡದ್ದು ಸಿತಾರ್ ವಾದನವನ್ನು. ಧಾರವಾಡದ ಉಸ್ತಾದ್ ಬಾಲೇಖಾನ್ ಅವರ ಬಳಿ ಒಂದು ದಶಕದಷ್ಟು ಕಾಲ ಸಿತಾರ್ ಅಭ್ಯಾಸ ಮಾಡಿದ ನಂತರ ಷಫೀಕ್ ಖಾನ್ ಅವರ ಬಳಿ ಕಲಿತರು. ಮುಂದೆ ಪಂ.ರಾಮಪ್ರಪ್ಪನ್ ಭಟ್ಟಾಚಾರ‍್ಯರ ಬಳಿಗೆ ಹೋದರು. ಇದೀಗ ಉಸ್ತಾದ್ ವಿಲಾಯತ್ ಖಾನ್ ಅವರ ಶಿಷ್ಯ ಪಂ.ಅರವಿಂದ ಪಾರಿಖ್ ಅವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿರುವ ಸುಂದರನಾಥ್ ಆಕಾಶವಾಣಿ ಮತ್ತು ದೂರದರ್ಶನಗಳ ’ಬಿ’ ಹೈ ಕಲಾವಿದರೂ ಹೌದು. ಮೀರಜ್, ಮುಂಬೈ, ಧಾರವಾಡ, ಪಾಂಡಿಚೇರಿ, ಮಂಗಳೂರು, ದಿಲ್ಲಿ ಹೀಗೆ ಅನೇಕ ಕಡೆಗಳಲ್ಲಿ, ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ.
ಶ್ರೀರಾಮ ಭಟ್:
 ಕರ್ನಾಟಕ ಮತ್ತು ಹಿಂದೂಸ್ತಾನೀ ಶೈಲಿಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿರುವ ಶ್ರೀರಾಮ ಭಟ್ ಪುತ್ತೂರು ತಾಲ್ಲೂಕಿನ ಬಲ್ನಾಡಿನವರು. ಸಿವಿಲ್ ಇಂಜಿನಿಯರ್ ಆಗಿ ಮೈಸೂರಿನಲ್ಲಿ ನೆಲಸಿದ್ದಾರೆ. ಆಕಾಶವಾಣಿಯ ’ಬಿ ಹೈ’ ಕಲಾವಿದರಾಗಿರುವ ಭಟ್ ಹಾರ್ಮೋನಿಯಂ ವಾದ್ಯವನ್ನೂ ಚೆನ್ನಾಗಿ ನುಡಿಸಬಲ್ಲರು. ಅನೇಕ ಗಾಯಕರಿಗೂ ಹಾರ್ಮೋನಿಯಂ ಸಾಥ್ ನೀಡಿದ್ದಾರೆ. ತಾಳವಾದ್ಯದಲ್ಲೂ ಇವರಿಗೆ ವಿಶೇಷ ಪರಿಣತಿ ಇದೆ. ಅನೇಕ ಪ್ರಮುಖ ವೇದಿಕೆಗಳಲ್ಲಿ ಹಾಡಿದ್ದಾರೆ. ಸದ್ಯ ಪಂ.ವೀರಭದ್ರಯ್ಯ ಯರಗಲ್ ಅವರ ಬಳಿ ಹಿಂದೂಸ್ತಾನೀ ಸಂಗೀತ ಕಲಿಕೆಯನ್ನು ಮುಂದುವರಿಸಿದ್ದಾರೆ. 

ಮಿಲಿಂದ್:
ಆರಂಭಿಕ ಹಂತದಲ್ಲಿ ಪಂ.ಶರಣಕುಮಾರ್ ಗುತ್ತರಗಿ ಅವರಿಂದ ತಬಲಾದಲ್ಲಿ ಮಾರ್ಗದರ್ಶನ ಪಡೆದ ಮಿಲಿಂದ್, ಕೆಲವು ವರ್ಷಗಳಿಂದ ಪಂಡಿತ್ ರವೀಂದ್ರ ಯಾವಗಲ್ ಅವರ ಬಳಿ ಕಲಿಯುತ್ತಿದ್ದಾರೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನಿಡುವ ಸಿಸಿಆರ್‌ಟಿ ಸ್ಕಾಲರ್‌ಷಿಪ್ಪನ್ನು ಪಡೆದುಕೊಂಡ ಮಿಲಿಂದ್, ಹೈದರಾಬಾದ್ ಮತ್ತು ಗೋವಾಗಳಲ್ಲಿ ಮಾನವ ಸಂಪನ್ಮೂಲ ಇಲಾಖೆ ಏರ್ಪಡಿಸಿದ್ದ ಅಖಿಲ ಭಾರತ ಸಂಗೀತ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...