Wednesday, February 12, 2014

ಒಂದು ದನಿ


-ಲೀನಾ ತೀಬಿ

ಅನು : ಎಂ.ಆರ್. ಕಮಲಾ

ಬಿಟ್ಟು ಬಿಡು ನನ್ನ:
ಇರುಳಿಗೆ,
`ಸುನ್ನಿಗಳ' ಕಿಟಕಿಯಿಂದ
ಹೊಮ್ಮಿ ಬರುವ ಕತ್ತಲಿಗೆ,
ನೋವಿನಿಂದ ಚರಗುಟ್ಟುವ
ಒಣಗಿದೆಲೆಗಳಿಗೆ,

ಬಿಟ್ಟು ಬಿಡು ನನ್ನ:
ಬಿದಿರ ಕೊಳಲಿನಲ್ಲಿ
ಗಾಳಿಯಾಡುವುದಕ್ಕೆ
ನನ್ನದೇ ರೀತಿಯಲ್ಲಿ ಬಿಕ್ಕುವುದಕ್ಕೆ...

ಬಿಟ್ಟು ಬಿಡು ನನ್ನ:
`ಅಭಾವ'ಕ್ಕೆ,
ಹೃದಯ ತೆರೆದು
ಕಸ ಗುಡಿಸುವುದಕ್ಕೆ
`ಅಭಾವ'ದ `ಭಾವ'ಕ್ಕೆ
ಮೆಲ್ಲನೆ ಹತ್ತಿರವಾಗುವುದಕ್ಕೆ!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...