Friday, February 14, 2014

ಸೃಜನಶೀಲತೆ ಮತ್ತು ನಮ್ಮ ಕೊನೆಯ ತೀರ್ಮಾನಗಳು

 ಶೂದ್ರ ಶ್ರೀನಿವಾಸ್


‘‘ಠಾಗೋರರ ಕಾವ್ಯದಲ್ಲಿ ವಿಶ್ವದ ಸಾಮರಸ್ಯ ವನ್ನು ಕುರಿತ ತನ್ಮಯ ಗೀತೆಗಳು ಎಷ್ಟಿವೆಯೋ, ಅಷ್ಟೇ ಪ್ರಮಾಣದಲ್ಲಿ ಭಗ್ನತೆಯನ್ನು ಕುರಿತ ಕವಿತೆ ಗಳು ಇವೆ. ಅದಕ್ಕಾಗಿಯೇ ಕನಿಷ್ಠ ಪಕ್ಷ ಇಬ್ಬರು ಠಾಗೋರರನ್ನು ಅವರ ಕಾವ್ಯದಲ್ಲಿ ಕಾಣಲು ಸಾಧ್ಯವಿದೆ. ಒಬ್ಬ ಜಾದೂಗಾರ, ಭಾಷೆಯನ್ನು ಕುಣಿಸಿ ಮಣಿಸಿ ಪ್ರತಿಲೋಕ ಸೃಷ್ಟಿಸುವ ಗಾರುಡಿಗ. ಇಲ್ಲಿ ಠಾಗೋರರ ಕಾವ್ಯವನ್ನು ಈಗಲೂ ಬಂಗಾಳಿಗಳು ಹುಚ್ಚೆದ್ದು ಹಾಡುವ ಈ ಕಾರಣಕ್ಕಾಗಿಯೇ ಇಲ್ಲಿ ಠಾಗೋರರ ಕಾವ್ಯ ಪ್ರಾರ್ಥನೆಯಾಗಿ ಬಿಡು ತ್ತದೆ. ಹುಚ್ಚು ಪ್ರೇಮಿಯ ಉನ್ಮತ್ತವಾಗಿ ಬಿಡುತ್ತದೆ. ದೇವರನ್ನು ಕಾಣ ಬಯಸುವ ಜೋಗಿ ಜಂಗಮರ ಆತ್ಮ ಒಂದು ಕಡೆ ಹೇಳುವ ಹಾಗೆ, ‘ವಿಸ್ಮಯ’ ಇಲ್ಲಿಯ ಸ್ಥಾಯಿಭಾವ. ಅರಣ್ಯದಲ್ಲಿ ನಡೆಯು ವಾಗ ಅಂಗಾಲು ಎಳೆಹುಲ್ಲು ಮುಟ್ಟಿ ದಾಗ ಆಗುವ ರೋಮಾಂಚನ; ಇಕ್ಕೆಲದ ಕಾಡುಗಳು ಸೃಷ್ಟಿಸುವ ರೋಮಾಂಚನ-ಇವೆಲ್ಲವೂ ಆ ಕಾವ್ಯದಲ್ಲಿವೆ.’’

ಬಹುಶಃ ಈ ಸಂಭ್ರಮ- ಸಂತೋಷಗಳು ಭಾಷಾಂತರಗಳಲ್ಲಿ ಉಳಿಯಲಾರವು. ಅದಕ್ಕೆಂದೇ ಒಮ್ಮೆಮ್ಮೆ ಅನ್ನಿಸುತ್ತದೆ. ಅನೇಕ ಸಾರಿ ಭಾಷೆಗಳು ತಮ್ಮ ಪ್ರಿಯಕರ ಕವಿಗಳನ್ನು ತಮ್ಮಲ್ಲೇ ಬಚ್ಚಿಟ್ಟು ಹೊರಗೇ ಬಿಡದಷ್ಟು ಅಸೂಯಪರವಾಗಿ ಬಿಡುತ್ತವೆ ಎಂದು. ಕನ್ನಡ ಬೇಂದ್ರೆಯನ್ನು, ಬಂಗಾಳಿ ಠಾಗೋರರನ್ನು ಹಾಗೆ ತಮ್ಮ ಒಡಲೊಳಗೆ ಬಚ್ಚಿಟ್ಟು ಕೊಂಡು ಬಿಟ್ಟಿವೆ. ಈ ಭಾಷಾಂತರದ ಅಸಾಧ್ಯತೆಯ ಕಾರಣಕ್ಕೋ ಏನೋ, ಠಾಗೋರರನ್ನು ನಾವು ಮರೆತು ಬಿಟ್ಟಿದ್ದೆವು. ಕನ್ನಡದಲ್ಲಿ ನಾರಾಯಣ ಸಂಗಮ ಮತ್ತು ಬೇಂದ್ರೆ ಜತೆಗೂಡಿ ಮಾಡಿದ ಅನುವಾದ ಗಳನ್ನು ಬಿಟ್ಟರೆ,ಆಮೇಲೆ ದೊಡ್ಡ ರೀತಿಯಲ್ಲಿ ಠಾಗೋರ್ ಕನ್ನಡಕ್ಕೆ ಬಂದೇ ಇಲ್ಲ. ಇಂಗ್ಲಿಷ್‌ನಲ್ಲಿ ಕೂಡ 1985ರಲ್ಲಿ ವಿಲಿಯಂ ರ್ಯಾಡಿಸ್ ಒಂದು ಹೊಸ ಅನುವಾದ ಸಂಕಲನ ತರುವತನಕ ಠಾಗೋರ್ ಮರೆತೇ ಹೋಗಿದ್ದರು.’’
-ಡಾ.ಡಿ.ಆರ್.ನಾಗರಾಜ್
‘ಮೇ ತಿಂಗಳ ಹೂವು’ ಲೇಖನದಿಂದಡಿ.ಆರ್. ನಾಗರಾಜ್ ನಾಗರಾಜ್ ನಾನು ಇಷ್ಟಪಡುವ ಕೆಲವೇ ಅತ್ಯುತ್ತಮ ಚಿಂತಕರಲ್ಲಿ ಮತ್ತು ವಿಮರ್ಶಕರಲ್ಲಿ ಒಬ್ಬ. ಕುರ್ತುಕೋಟಿ, ಯು.ಆರ್.ಅನಂತಮೂರ್ತಿ, ಲಂಕೇಶ್ ಮತ್ತು ರಹಮತ್ ತರೀಕೆರೆ ಮುಂತಾದವರನ್ನು ಮತ್ತೆ ಮತ್ತೆ ಓದಿಕೊಳ್ಳುವ ರೀತಿಯಲ್ಲಿ ನಾಗರಾಜನ ಬರವಣಿಗೆಯನ್ನು ಓದಿಕೊಳ್ಳುವೆ. ಹೀಗೆ ಓದಿ ಕೊಳ್ಳುವಾಗ; ನನಗೆ ಎಲ್ಲಿಯೂ ತೊಡಕೆನ್ನಿಸಲಿಲ್ಲ. ಕ್ಲಿಷ್ಟ ಅನ್ನಿಸಲಿಲ್ಲ. ಇದನ್ನು ಒಂದು ಮುಖ್ಯ ಕಾರಣಕ್ಕಾಗಿ ಪ್ರಸ್ತಾಪಿಸಲು ಮೇಲಿನ ಕೆಲವು ಸಾಲುಗಳನ್ನು ಸ್ವಲ್ಪ ದೀರ್ಘವಾಗಿಯೇ ಪ್ರಸ್ತಾಪಿಸಿ ರುವೆ. ಹಾಗೆ ನೋಡಿದರೆ ರವೀಂದ್ರನಾಥ ಟಾಗೂ ರರನ್ನು ಓದುವಾಗಲೆಲ್ಲ ‘ಮೇ ತಿಂಗಳ ಹೂವು’ ಲೇಖನದ ಸಾಲುಗಳು ಗುನುಗುನಿಸುತ್ತಿರುತ್ತವೆ. ಅಷ್ಟೇ ಏಕೆ ಎರಡು ವರ್ಷಗಳ ಹಿಂದೆ ಕಲ್ಕತ್ತೆಯ ನನಗೆ ಪ್ರಿಯವಾದ ಯಾತ್ರಾಸ್ಥಳ ‘ಕಾಲೇಜ್ ಸ್ಟ್ರೀಟ್’ನ್ನು ಎರಡು ಗಂಟೆ ಸುತ್ತಾಡಿ ಮತ್ತೆ ಸುತ್ತಾಡಲು ಕಾಫಿ ಕುಡಿದು ಚೈತನ್ಯ ಪಡೆಯಲು ಅಲ್ಲಿಯೇ ಇರುವ ಕಾಫಿ ಬಾರ್‌ಗೆ ಹೋದೆ. ಅಲ್ಲಿ ಲೇಖಕರು, ಕಲಾವಿದರು ಕಾಫಿಚೀಪುತ್ತ ಸಾಕಷ್ಟು ಕಾಲವನ್ನು ಕಳೆಯುವ ಸ್ಥಳವದು. ಅಲ್ಲಿ ನಾವು ಪ್ರವೇಶ ಮಾಡಿದಾಕ್ಷಣ ಮನಮೋಹಕವಾಗಿ ಆಕರ್ಷಿಸುವ ‘ಲೈಫ್‌ಸೈಜ್’ನ ಎರಡು ಪಟ್ಟು ಎತ್ತರದ ಭಾವಚಿತ್ರವಿದೆ. ಅದು ಟಾಗೂರರ ಮೂವತ್ತೈದು-ನಲವತ್ತು ವಯೋಮಾನದ ಚಿತ್ರವಿರಬಹುದು. ಎರಡು ಮೂರು ಕಪ್ ಕಾಫಿ ಕುಡಿಯುತ್ತ ಆ ಚಿತ್ರವನ್ನು ಕಣ್ತುಂಬ ಮತ್ತು ಮನಸ್ಸಿನ ತುಂಬ ತುಂಬಿಕೊಂಡಿದ್ದೆ. ಹೀಗೆ ತುಂಬಿಕೊಳ್ಳುವಾಗ ಅಥವಾ ಮಾನಸಿಕವಾಗಿ ಆಸ್ವಾದಿಸುವಾಗ ಕೇವಲ ‘ಗೋರಾ’ಮತ್ತು ‘ಕುಮುದಿನಿ’ಕಾದಂಬರಿಗಳು ಹಾಗೂ ಕಥೆಗಳು ಮಾತ್ರವಲ್ಲ, ನನಗೆ ತುಂಬ ಪ್ರಿಯವಾದ ‘ಗಾಂಧೀಜಿ, ಬುದ್ಧ ರಾಜಾರಾಮ ಮೋಹನ್ ರಾಯ್ ಮತ್ತು ತಪೋವನ’ದಂತಹ ಲೇಖನಗ ಳನ್ನು ಅವಲೋಕಿಸಿಕೊಂಡಿರುವೆ. ಹೀಗೆ ಅವ ಲೋಕಿಸಿಕೊಳ್ಳುವಾಗ; ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಎಷ್ಟು ಪ್ರಯತ್ನಪಟ್ಟರೂ ‘ಆಡೆನ್’ನ ಒಟ್ಟು ಕಾವ್ಯದ ‘ಆಂಥಾಲಜಿ’ ಸಿಕ್ಕಿರ ಲಿಲ್ಲ. ಆದರೆ ಆ ‘ಕಾಲೇಜ್ ಸ್ಟ್ರೀಟ್’ ಎಂಬ ಪುಸ್ತಕಗಳ ಯಾತ್ರಾ ಸ್ಥಳದಲ್ಲಿ ಕೇಳಿದ ಐದೇ ನಿಮಿಷದಲ್ಲಿ ಆಡೇನ್‌ನ ಆಕೃತಿ ನನ್ನ ಕೈ ಸೇರಿತ್ತು. ಅಂಥ ಪ್ರೀತಿಯ ಪುಸ್ತಕದ ಪುಟಗಳನ್ನು ತಿರುವು ಹಾಕುವುದನ್ನು ಪಕ್ಕಕ್ಕಿಟ್ಟು ಆ ಭಾವಚಿತ್ರವನ್ನು ನೋಡುತ್ತ ಕೂತಿದ್ದೆ. ಈಗಲೂ ಟಾಗೂರರನ್ನು ಓದುವಾಗ ಅಥವಾ ಅವರನ್ನು ಕುರಿತು ಚಿಂತಿಸು ವಾಗ ಮನಸ್ಸಿನ ತುಂಬ ಪ್ರತಿಫಲಿಸುತ್ತಿರುತ್ತದೆ. ಅದಕ್ಕೆ ಪೂರಕವೆಂಬಂತೆ ಡಿ.ಆರ್. ನಾಗರಾಜನ ‘ಮೇ ತಿಂಗಳ ಹೂವು’ ಕೂಡ ಇರುತ್ತದೆ. ಅರಿ ಯುವುದಕ್ಕೆ ಕಷ್ಟವೆಂಬುದು ಮತ್ತು ಕ್ಲಿಷ್ಟವೆಂಬುದು ಇರಲಾರದು. ಇದೇ ರೀತಿಯಲ್ಲಿ ಕೆ.ವಿ. ನಾರಾ ಯಣ ಅವರಂಥ ಗಂಭೀರ ವಿಮರ್ಶಕರ ಬರವಣಿಗೆಯನ್ನು ಅತ್ಯಂತ ಅನನ್ಯತೆಯಿಂದಲೇ ಓದುತ್ತ ಬಂದಿದ್ದೇನೆ. ‘ಶೂದ್ರ’ಕ್ಕೆ ನಾನಾ ರೀತಿಯ ಲೇಖನಗಳನ್ನು ಬರೆದವರು. ಅತ್ಯಂತ ಸರಳ ವ್ಯಕ್ತಿತ್ವದ ಸ್ವಲ್ಪ ಮಟ್ಟಿಗೆ ಕ್ಲಿಷ್ಟ ಮನಸ್ಥಿತಿಯ ವಿದ್ವಾಂಸರು.

ಈ ಇಬ್ಬರು ವಿಮರ್ಶಕರನ್ನು ಇಲ್ಲಿ ಪ್ರಸ್ತಾಪಿ ಸಲು ಪ್ರಯತ್ನಿಸುತ್ತಿರುವುದು ಬಹುಮುಖ್ಯ ಕಾರ ಣಕ್ಕಾಗಿ ಅವರ ವಿಮರ್ಶೆಯನ್ನು ಅಥವಾ ಇತರೆ ಬರವಣಿಗೆಯನ್ನು ಕುರಿತು ಚರ್ಚಿಸಲು ಅಲ್ಲ. ಇದೇ ಫೆಬ್ರವರಿ ಏಳರಂದು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಜನ್ಮದಿನ. ಕಳೆದ ಹದಿನೈದು ವರ್ಷಗಳಿಂದ ಅವರ ಹೆಸರಿನ ‘ಡಾ.ಜಿಎಸ್ಸೆಸ್ ವಿಶ್ವಸ್ತ ಮಂಡಲಿ(ರಿ.)’ಸಂಸ್ಥೆಯಿಂದ ಗಂಭೀರ ವಿಮರ್ಶೆಯನ್ನು ಪ್ರೋತ್ಸಾಹಿಸಲು; ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವಂಥದ್ದು. ಇದಕ್ಕಾಗಿ ಪ್ರೊ.ಜಿ.ಎಸ್.ಎಸ್. ಅವರು ಕವಿಯಾಗಿ, ಕಾವ್ಯ ಮೀಮಾಂಸೆಯ ಹಾಗೂ ಸೌಂದರ್ಯ ಮೀಮಾಂಸೆಯ ಅತ್ಯು ತ್ತಮ ಚಿಂತಕರಾಗಿ ವಿಮರ್ಶೆಯ ಬಗ್ಗೆ ಗಾಢ ವಾದ ಒಲವನ್ನು ಬೆಳೆಸಿಕೊಂಡವರು. ಮತ್ತು ಅದನ್ನು ಪ್ರೋತ್ಸಾಹಿಸುತ್ತ ಬಂದವರು. ಈ ದಿಕ್ಕಿನಲ್ಲಿ ಅವರು ಬೆಂಗಳೂರು ವಿಶ್ವವಿದ್ಯಾಲ ಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾಗ ಸುಮಾರು ಹನ್ನೆರಡು ವರ್ಷ ಎಂತೆಂಥ ಅಮೂಲ್ಯ ಮನಸ್ಸುಗಳನ್ನು ಒಂದೆಡೆ ಸೇರಿಸಿ ‘ಸಂವಾದ’ಗಳನ್ನು ಏರ್ಪಡಿಸುತ್ತಿದ್ದರು. ಹೊಸ ಚಿಂತನೆಗಳ ಒಂದೇ ಟ್ರೆಂಡೇ ಸೃಷ್ಟಿ ಯಾಗಲು ಸಾಧ್ಯವಾಯಿತು. ಆ ಕಾಲಘಟ್ಟಕ್ಕೆ ಎಂಥ ವಿಶ್ಲೇಷಣೆಯ ಗುಣವಾಚಕ ವನ್ನು ಸೇರಿಸಿದರೂ; ಅದು ಸಾಲದು ಅನ್ನಿಸಿಬಿಡುತ್ತದೆ. ಇದನ್ನೇ ಅವರು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಗಿದ್ದಾಗಲೂ ಮುಂದುವರಿಸಿದರು. ಮುಂದೆ ತಮ್ಮ ಹೆಸರಿನ ವಿಶ್ವಸ್ತ ಮಂಡಲಿಯಿಂದ ವಿಮರ್ಶೆಯ ಓಘ ಆರೋಗ್ಯಪೂರ್ಣವಾಗಿ ಮುಂದು ವರಿಯಬೇಕೆಂದು ಬಯಸಿದರು. ಅದಕ್ಕೊಂದು ಸಮಿತಿಯನ್ನು ಅರ್ಥಾತ್ ಟ್ರಸ್ಟನ್ನು ರೂಪಿಸಿ ಪ್ರತಿವರ್ಷ ಪ್ರಶಸ್ತಿ ಯನ್ನು ಕೊಡಲು ಪ್ರಾರಂಭಿಸಿದರು. ಇಲ್ಲಿ ಯವರೆವಿಗೆ ಅತ್ಯುತ್ತಮ ಮನಸ್ಸುಗಳಿಗೆ ಅದು ಲಭಿಸಿದೆ. ಈ ಪ್ರಶಸ್ತಿಯ ಕಾರ್ಯ ಕ್ರಮವೂ ಗಂಭೀರವಾಗಿಯೇ ನಡೆ ಯುತ್ತ ಬಂದಿದೆ. ಪ್ರಶಸ್ತಿ ಪಡೆದವರೂ ಕೂಡ ಅಭಿಮಾನದಿಂದ ಬೀಗುವಂಥ ಮನಸ್ಥಿತಿಯನ್ನು ಸೃಷ್ಟಿಸಿದೆ. 2000ದಲ್ಲಿ ಮೊದಲನೆಯ ಪ್ರಶಸ್ತಿಯನ್ನು ಡಾ.ಡಿ.ಆರ್. ನಾಗರಾಜ್‌ಗೆ ಕೊಡಲಾಗಿತ್ತು. ಆಗ ಅವನು ನಿಧನ ಹೊಂದಿದ್ದ. ಆದರೂ ಅವನ ವಿಮರ್ಶೆಯ ಹೆಚ್ಚುಗಾರಿಕೆಯನ್ನು ಸಮಿತಿಯು ಗ್ರಹಿಸಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಇಂದು ವಿಮರ್ಶಾ ಕ್ಷೇತ್ರದಲ್ಲಿ ಗೌರವಿಸಬಹುದಾದ ಎಲ್ಲರಿಗೂ ಆ ಪ್ರಶಸ್ತಿಯು ಲಭಿಸಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...