Thursday, February 13, 2014

“ ವಿಲ್ ಯೂ ಮ್ಯಾರಿ ಮೀ….? ” 
ಬೊಳುವಾರು ಮುಹಮ್ಮದ್ ಕುಂಞ

“ ವಿಲ್ ಯೂ ಮ್ಯಾರಿ ಮೀ….? ”
------------------------------
’ಹ್ಹ..ಹ್ಹಾ.., ಅದನ್ನೆಲ್ಲ ಇಲ್ಲಿ.., ’ಸ್ಯಾನ್ ಹೊಸೇ’ಯಲ್ಲಿ ಹೇಳಿದ್ರೆ, ’ಹೌ ಸ್ಟುಪಿಡ್’ ಎಂದು ನಕ್ಕಾರು!. ಭಟ್ಕಳದಲ್ಲಿರುವ ಅಕ್ಕ ಹೈಸ್ಕೂಲಿನಲ್ಲಿರುವಾಗ ಒಬ್ಬನೇ ಒಬ್ಬ ಹುಡುಗನೊಂದಿಗೂ ಮುಖ ಕೊಟ್ಟು ಮಾತಾಡಿದ್ದಿಲ್ಲವಂತೆ! ಒಮ್ಮೆ ’ಸ್ಕೂಲ್ ಡೇ’ ಗೆ ಕಾಗದ ತೋರಣ ಕಟ್ಟುತ್ತಿದ್ದಾಗ ಪಕ್ಕದಲ್ಲಿದ್ದ ಹುಡುಗನೊಬ್ಬನಿಗೆ ’ಆ ಗೋಂದು ಬಾಕ್ಸ್ ಕೊಡು’ ಅಂತ ಹೇಳಿದ್ದೇ ಮೊದಲ ಮಾತಂತೆ! 

ಶಾಪಿಂಗ್ ಮಾಲ್’ನಲ್ಲಿ ನೀರಿನ ಬಾಟಲ್ ಕೊಳ್ಳುವಾಗಲೂ ’ಹಲಾಲ್’ ಹೌದಾ ಅಲ್ವಾ ಅಂಥ ಚೆಕ್ ಮಾಡುವ ಡ್ಯಾಡಿಗೆ, ತಾನು ಗುಟ್ಟಾಗಿ ’ಡೇಟ್’ ಮಾಡ್ತಿರೋದು ಗೊತ್ತಾಬಿಟ್ರೇ..? ಮಮ್ಮಿಗೆ ಆವತ್ತೇ ಡ್ಯಾಡಿ ಹೇಳಿದ್ರಲ್ಲವಾ? “ ಇವ್ಳಿಗೆ ಡಿಗ್ರಿ ಅಂತ ಒಂದು ಆದ್ರೆ ಸಾಕು. ಇಂಡಿಯನ್ ಹುಡುಗನನ್ನೇ ತಲಾಶ್ ಮಾಡು ಅಂತ ಅನ್ವರ್’ನಿಗೆ ಹೇಳಿದ್ದೇನೆ. ಇಲ್ಲಿ ಒಬ್ಬೊಬ್ಬನಿಗೆ ನಾಲ್ಕು ನಾಲ್ಕು ಗರ್ಲ್ ಫ್ರೆಂಡ್ಸ್ ಇರ್ತಾರೆ..ಹುಂ.., ಒಮ್ಮೊಮ್ಮೆ ಅನಿಸ್ತಾ ಇದೆ. ಇಲ್ಲಿಯ ’ಸಿಟಿಜನ್ ಶಿಪ್’ ಗಿಟ್ಟಿಸಿಕೊಂಡದ್ದೇ ತಪ್ಪಾಯಿತೇ ಅಂತ..”. 

ಶಬಾನಾ ಎಲ್ಲವನ್ನೂ ಲೆಕ್ಕವಿಟ್ಟಿದ್ದಳು. ಅವನ ಕಣ್ಣಿಗೆ ಕಣ್ಣು ಕಣ್ಣು ಕೂಡಿಸಿದ್ದು ಆರು ಸಲ. ಅವನಾಗ ’ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿ’ಯಲ್ಲಿ ’ಮಾಸ್ಟರ್ಸ್ ಇನ್ ರಿಲಿಜಿಯಸ್ ಸ್ಟಡೀಸ್’ ಸ್ಟೂಡೆಂಟ್. ಇಂಡಿಯನ್ ಫ್ಯಾಮಿಲಿ ಬಾಯ್; ಕನ್ಸರ್ವೇಟಿವ್ ಇರಬಹುದಾ? ಆ ಡ್ಯೂಡ್ ನೇರವಾಗಿ ದಿಟ್ಟಿಸಿದಾಗಲೂ ’ಹೈ’ ಅಂದವನಲ್ಲ. ಸರಿಯಾಗಿ ಮೀಸೆ ಹುಟ್ಟುವ ಮೊದ್ಲೇ ಸೆಟ್ ಮಾಡಿಕೊಳ್ಳದಿದ್ದರೆ ತಾನು ’ನನ್’ ಅಗಬೇಕಾದಿತು. ಇಲ್ಲಿ ಗರ್ಲ್ ಫ್ರೆಂಡ್ಸ್ ಇಲ್ಲದ ಹುಡುಗರೇ ಇಲ್ಲ. ಥ್ಯಾಂಕ್ ಗಾಡ್! ಅವನಿಗಿನ್ನೂ ಯಾರೂ ಸೆಟ್ಟಾದಂತಿಲ್ಲ. ಕ್ರಿಸ್ಮಸ್’ಬಾಲ್’ಗೆ ಬಂದವನನ್ನು ಕ್ಲಾಸ್ ಮೇಟ್ ಸಾಂಡ್ರಾ ಡ್ಯಾನ್ಸಿಗೆ ಕರೆದು, ’ಸಾರಿ, ಈ ಡೋಂಟ್ ಡ್ಯಾನ್ಸ್’ ಎಂದು ಅವನಿಂದ ಹೇಳಿಸಿ, ತನ್ನ ಮಾಹಿತಿಗಳಿಗೆ ಎವಿಡೆನ್ಸ್ ಕೊಟ್ಟಾಗ, ಶಬಾನಾ ತನ್ನ ಹೊಸ ವರ್ಷದ ರೆಸೊಲ್ಯೂಶನ್ ನಿರ್ಧರಿಸಿಯೇ ಬಿಟ್ಟಿದ್ದಳು! 
 
ಹೊಸ ವರ್ಷದ ಮೊದಲ ಶುಕ್ರವಾರವೇ ’ರೆಸೊಲ್ಯೂಷನ್’ ಕಾರ್ಯರೂಪಕಿಳಿದಿತ್ತು. ಕ್ಲಾಸು ಮುಗಿಸಿ ಮಹಡಿಯ ಮೆಟ್ಟಲುಗಳನ್ನು ಇಲ್ಲಿಯುತ್ತಿರುವಂತೆಯೇ, “ನಾವು ಯಾಕೆ ಕಾರ್ ಪೂಲ್ ಮಾಡಬಾರದು?” ಎಂದು ಪ್ರಶ್ನಿಸಿದ್ದಳು. ಅವನು ನೋಡುತ್ತಲೇ ನಿಂತುಬಿಟ್ಟಿದ್ದ! ನಿತ್ಯ ಟೈಟ್ ಜೀನ್ಸ್ ಬಣ್ಣದ ಟಾಪ್’ಗಳಲ್ಲಿರುವವಳು, ಫಿರೋಜ್ ಕಲರಿನ ಕಮೀಜ್, ತೆಳು ಗುಲಾಬಿ ಸೆಲ್ವಾರ್’ನಲ್ಲಿ ಹೊಳೆಯುತ್ತಿದ್ದಾಳೆ. ದುಪಟ್ಟಾದ ಮರೆಯಲ್ಲಿ ಬೆಳದಿಂಗಳು ಚೆಲ್ಲುತ್ತಿದ್ದ ಅವಳ ಕಣ್ಣುಗಳ ಕರೆಯನ್ನು ನಿರಾಕರಿಸುವಂತೆಯೇ ಇರಲಿಲ್ಲ.  ಜೆಸ್ವಿಂದರ್ ಸಿಂಗ್ ಹೇಳಿದ್ದ, “ಕಾಲ್ ಮಿ ಜೆಸ್ಸಿ”. 

’ಹೇ.. ಅಲ್ಲಾ.., ನೀನು ಈ ಸರ್ದಾರ್ಜಿಗಳಿಗೆ ಮಾತ್ರ ಯಾಕೆ ಇಂಥಾ ’ಐ ಲ್ಯಾಶಸ್ ಕೊಟ್ಟಿದ್ದೀಯಾ..? ’ಪಾಲೋ ಅಲ್ಟೋ’ದಿಂದ ’ಬಿಗ್ ಸರ್’ ವರೆಗಿನ ರಸ್ತೆಯಂದರೆ ಸ್ವರ್ಗದ ದಾರಿ. ದಾರಿಯುದ್ದಕ್ಕೂ ಅವನು ಹೇಳುತ್ತಿದ್ದದ್ದು ತಾನು ಮಾಡುತ್ತಿರುವ ’ಇನ್ಟರ್ನ್ಯಾಶನಲ್ ಹ್ಯೂಮನ್ ರೈಟ್ಸ್’ ಥೀಸಿಸ್ ಬಗ್ಗೆಯೇ. ಮುಂದಿನ ತಿಂಗಳು ’ಬರ್ಲಿನ್ ವಾಲ್’ ನೋಡಲು ಜರ್ಮನಿಗೆ ಹೋಗಬೇಕು. ಆನಂತರ ಆಗಸ್ಟ್’ನಲ್ಲಿ ಇಂಡಿಯಾ ಟೂರ್. ’ವಾಘಾ’ ಗಡಿಯಲ್ಲಿ ಇಂಡಿಪೆಂಡೆನ್ಸ್ ಡೇ ಪೆರೇಡ್ ಬಗ್ಗೆ ನೋಟ್ಸ್ ಮಾಡಿಕೊಳ್ಳಬೇಕಾಗಿದೆ. ಜೆಸ್ಸಿ ಮಾತಾಡುತ್ತಲೇ ಇದ್ದ... ಇಂಡಿಯಾಕ್ಕೆ ತಾನೂ ಬರುವೆ ಅಂತ ಹೇಳಲೇ..? ಭಟ್ಕಳಕ್ಕೆ ಹೋದರೆ, ಮುತ್ತುಪ್ಪಾಡಿಗೂ ಹೋಗಿ ’ಚಾಂದಜ್ಜನನ್ನೂ ನೋಡಬಹುದು.....
 
ಬೀಚ್ ರೆಸ್ಟೂರಾದಲ್ಲಿ ಕಾಫಿ ತಂದಿರಿಸಿ ಹೋಗಿದ್ದ ವೇಯ್ಟರ್ ಎಚ್ಚರಿಸಿದೆ ಹೋಗಿದ್ದರೆ, ಕುರ್ಚಿಗಳಲ್ಲಿ ಕಣ್ಣು ಮುಚ್ಚಿ ಕುಳಿತಿದ್ದವರು ಕಣ್ಣು ತೆರೆಯುತ್ತಿರಲಿಲ್ಲ. ಟಿ.ವಿ.ಯಲ್ಲಿ ’ಎ.ಬಿ.ಸಿ.’ ರಿಪೋರ್ಟರನೊಬ್ಬ ಮೊಟ್ಟೆಯಾಕಾರದ ಮನುಷ್ಯನೊಂದಿಗೆ ಸಂದರ್ಶನ ನಡೆಸುತ್ತಾ, ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಬಯಸಿ ಬಿತ್ತರಿಸುವ ಹಟದಲ್ಲಿದ್ದ. ಸಂದರ್ಶನ ಮುಗಿದು ವಾರ್ತೆ ಆರಂಭವಾಗಿ ಪರದೆಯಲ್ಲಿ ಜರ್ಮನಿಯ ನೇತಾರ ’ಅಗಾನ್ ಕ್ರೆಂಝ್’ ಕಾಣಿಸಿಕೊಂಡಾಗ ಜೆಸ್ಸಿ ಸೆಟೆದು ಕುಳಿತಿದ್ದ!.

“ ಕಲ್ಲು ಬಂಡೆಗಳ ಗೋಡೆಯಿರಲಿ, ರಾಜಕೀಯ ಸಿದ್ಧಾಂತಗಳ ಗೋಡೆಯಿರಲಿ ಅಥವಾ ಜಾತಿ ಧರ್ಮಗಳ ಗೋಡೆಯೇ ಅಗಿರಲಿ, ಎರಡು ಹೃದಯಗಳ ನಡುವಿನ ಪ್ರೀತಿಯನ್ನು ತಡೆದು ನಿಲ್ಲಿಸುವ ಶಕ್ತಿ ಯಾವ ಗೋಡೆಗೂ ಇಲ್ಲ. ಇಂದಿನಿಂದ ಬರ್ಲಿನ್ ವಾಲ್ ಮುಕ್ತ” ಎನ್ನುತ್ತಿದ್ದಂತೆಯೇ ಜೆಸ್ಸಿ ಎದ್ದು ನಿಂತಿದ್ದ! ತನ್ನೆರಡೂ ಕೈಗಳಿಂದ ಶಬಾನಾಳ ಬಲಗೈ ಹಿಡಿದುಕೊಂಡು ಪ್ರೊಪೋಸ್ ಮಾಡಿದ್ದ,
 
“ ಐ ಲವ್ ಯು ಶಬಾನಾ. ವಿಲ್ ಯು ಮ್ಯಾರಿ ಮಿ?”

ಸ್ವಾತಂತ್ಯದ ಓಟ- [1002-1003]
 
No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...