Monday, February 03, 2014

ಪ್ರೀತಿ ಕಲಹಗಳಲ್ಲಿ





















ಕೆ ಬಿ ಜಗದೀಶ್



ಇದ್ದಿಲ ಮೇಲೆ ಬೆಳ್ಳಿ ಅಕ್ಷರಗಳ ಕೆತ್ತುವ ಕುಸುರಿ ಕೆಲಸ
ಇಬ್ಬರ ನಡುವೆ ಅಂತರ ಸರಿದು ಹೋದ ದಿನಗಳ

ಹೊಸದಾಗಿ ತಂದ ಫ್ರಿಡ್ಜ್‌ನಲ್ಲಿ ವಾರದ ಹಿಂದೆ ಇಟ್ಟ
ದೋಸೆ ಹಿಟ್ಟಿನಂತೆ
ತಾಜಾತನವೇನು ಕಾಯ್ದಿರಿಸಿದೆ
ಇಬ್ಬರ ನಡುವಿನಲಿ ನಡೆದ ಸಂಭಾಷಣೆಗಳು
ಕಿರು ಬೆರಳ ಸ್ಪರ್ಷ
ಎಲ್ಲ ಹಳತು
ಮಾತುಗಳು, ಮೌನಗಳು ಕಳೆದ ದಿನಗಳು

ನನ್ನ ಮೊಗ ನೀನು, ನಿನ್ನ ಮೊಗ ನಾನು ನೋಡಲಾಗದ
ನ್ಯಾಯಾಲಯದ ಮೆಟ್ಟಿಲು, ಬಾಗಿಲುಗಳು
ಹೊಸತುಗಳಷ್ಟೆ 



No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...