Sunday, February 09, 2014

ಹಾರಾಟ



ಒಡಿಯಾ ಮೂಲ: ಶರ್ಮಿಷ್ಠಾ ಸಾಹು
ಕನ್ನಡಕ್ಕೆ: ಡಾ ಎಚ್ ಎಸ್ ಅನುಪಮಾ


 
ನನ್ನೊಳಗೊಂದು
ಹಕ್ಕಿಯಿದೆ
ಅದಕ್ಕೆ ಗೊತ್ತು
ನನ್ನ ಎದೆ
ಪಂಜರವಲ್ಲ ಎಂದು.

ಹಾರುತ್ತಾ ಅದು
ಹಾಡುತ್ತದೆ.
ನಾನಾ ಸೋಗುಗಳಿಂದ
ನನ್ನ ದಿಗಿಲುಗೊಳಿಸುತ್ತದೆ.

ಅದು ಹಾರುತ್ತಲೇ ಉಳಿಯುತ್ತದೆ
ಸಂಬಂಧಗಳ ಕಡಿಯುತ್ತ,
ಆಪ್ತ ನಿಕಟತೆಯನ್ನು ಒಡೆದುಹಾಕುತ್ತ.
ಅದು ಹಾರುತ್ತದೆ
ಲೆಕ್ಕವಿರದಷ್ಟು ಹಣತೆಗಳ ಹಚ್ಚಿ
ಪ್ರಕ್ಷುಬ್ಧ ಇರುಳುಗಳ ಸೀಳಿಹಾಕುತ್ತ.

ಅದು ಹಾರುವುದೆಂದೇ
ಮಿತಿಯಲ್ಲ ನನಗೆ. 
ಗಾಳಿಯ ಚದುರಿಸುತ್ತಲೇ ಇರುವೆ 
ಆದರೂ ಇದೆ ಅದು ಪಲಾಯನ ಮಾಡದೇ.

ಎಂಥ ನಿಷ್ಫಲ
ನನ್ನ ಕಣ್ಣು, ಮೂಗು, ತುಟಿಗಳ
ಆಕಾರ ಅಳತೆಗಳ ನೋಡಿ
ಕಿಮ್ಮತ್ತು ಅಂದಾಜಿಸುವ ನಿಮ್ಮ ಪ್ರಯತ್ನ!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...