Monday, February 10, 2014

ಪರ್ಯಾಯ ಶಕ್ತಿ ಪ್ರದರ್ಶನಕ್ಕೆ ಮತ್ತೆ ರಂಗಸಜ್ಜಿಕೆಅಶೋಕ್ ರಾಮ್ ಡಿ ಆರ್

ಸೌಜನ್ಯ : ವಿಜಯ ಕರ್ನಾಟಕ


ದೇಶದ ರಾಜಕೀಯದಲ್ಲಿ ಅತಿ ನಿಧಾನಗತಿಯಲ್ಲಿ ಸಾಗು ವ ವರು ಯಾರು? ಅಂತಹ ಸ್ಪರ್ಧೆಯಲ್ಲಿ ಯಾವಾ ಲೂ ಮೊದಲ ಸ್ಥಾನವನ್ನು ಪಡೆಯುವ ಕಾಂಗ್ರೆಸ್‌ಗೆ ತೃತೀಯ ರಂಗ ಕಟ್ಟಲು ಹೊರಟಿರುವ ನಾಯಕರು ಈ ಬಾರಿ ಇನ್ನಿಲ್ಲದ ಪೈಪೋಟಿ ನೀಡುತ್ತಿದ್ದಾರೆ.

ದೇಶ ಆಳುವ ಕನಸು ಹೊತ್ತ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮ ದಂಡನಾಯಕರನ್ನೆಲ್ಲ ದೇಶದ ಮೂಲೆ ಮೂಲೆಗೆ ಅಟ್ಟಿ ಪಟೇಲರ ಪ್ರತಿಮೆ ಕಟ್ಟಲೆಂದು ಕಬ್ಬಿಣ ಕಾಯಿಸಿ ಕುಟ್ಟಿಸಲಾರಂಭಿಸಿ ತಿಂಗಳುಗಳಾಯಿತು, ಊರೂರ ಬೀದಿಯಲ್ಲಿ ಟೀ ಕುಡಿದು ಪಾರ್ಟಿ ಮಾಡಿ ಎಂದು ಹುರಿದುಂಬಿಸಿ ವಾರಗಳಾ ಯಿತು. ಕರೆದಲ್ಲಿಗೆಲ್ಲ ಹೋಗಿ ಮೈಕು ಸಿಕ್ಕಲ್ಲೆಲ್ಲ ಕಾಂಗ್ರೆಸ್ ಪಕ್ಷವನ್ನು ಹಿಡಿದು ಚಚ್ಚಲಾರಂಭಿಸಿ ವರ್ಷಗಳಾಯಿತು. ಹೀಗೆ ಮೋದಿ ದಂಡಯಾತ್ರೆ ಅಷ್ಟ ದಿಕ್ಕುಗಳಲ್ಲಿಯೂ ಆರಂಭವಾದ ಬಳಿಕ ವಾರ ಗಳ ಹಿಂದೆ ದಿಢೀರನೆ ಮೇಲೆದ್ದಿದೆ ಕಾಂಗ್ರೆಸ್. ಹೀಗೆ ತಡರಾತ್ರಿ ಯಲ್ಲಿ ಎದ್ದು ಕುಳಿತ ಕಾಂಗ್ರೆಸ್ ಪಕ್ಕದಲ್ಲೇ ಹಾಸಿ ಮಲಗಿದ್ದ ಹಳೆಯ ತೃತೀಯ ರಂಗದ ಅದೇ ಹಳೆಯ ನಾಯಕರು ಅರೆ ಮನಸ್ಸಿನಿಂದ ಈಗ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.

ಇವರೆಲ್ಲ, ಹೊರಗೇನೋ ಗದ್ದಲವಾಗುತ್ತಿದೆಯಲ್ಲ ಎಂದು ಮೂರು ತಿಂಗಳುಗಳ ಹಿಂದೆ ಒಂದು ಬಾರಿ ಮಲಗಿದಲ್ಲೇ ಹೊರ ಳಿ ದ್ದುಂಟು. ಅರೆ, ಏನೋ ಆಗಿ ಹೋಯಿತು ಎಂದು ಎಲ್ಲರೂ ಅಂದುಕೊಂಡರೆ, ಅಲ್ಲಿಂದಾಚೆಗೆ ಮತ್ತೇನೂ ನಡೆಯ ಲಿಲ್ಲ. ಏನೂ ಆಗಲಿಲ್ಲ ಎಂದು ಯಾರಿಗೂ ನಿರಾಶೆಯೂ ಆಗಿಲ್ಲ. ಏಕೆಂದರೆ ಇವರು ಈಗಲೇ ಎದ್ದು ಏನನ್ನೋ ಸಾಧಿಸಿಬಿಡುತ್ತಾರೆ ಎನ್ನುವ ನಿರೀಕ್ಷೆ ಯಾರಿಗೂ ಇಲ್ಲ. ಹಿಂದೆಲ್ಲ ಚುನಾವಣೆ ಹೊತ್ತಿಗೆ ಸರಿಯಾಗಿ ಎದ್ದು ಕೈ ಕೈ ಹಿಡಿದು ನಿಂತವರು ಚುನಾವಣೆ ಆರಂಭಕ್ಕೆ ಮೊದಲೇ ರಂಗ ಬಿಟ್ಟು ಓಡಿ ಹೋಗಿದ್ದಾರೆ. ಚುನಾ ವಣೆ ಬಳಿಕವಂತೂ ತಮ್ಮ ಹಳೆಯ ಭಾಷಣಗಳನ್ನೆಲ್ಲ ಮರೆತು ಹೊಸದೊಂದು ಭಾಷಣವನ್ನು ನಿಂತಲ್ಲೇ ಸಿದ್ಧಪಡಿಸಿಕೊಂಡು ಒದರಿದ್ದಾರೆ. ಈ ಕಾರಣದಿಂದ 1996ರಲ್ಲಿ ವೈಭವದ ಉತ್ತುಂಗ ದಲ್ಲಿದ್ದ ತೃತೀಯ ರಂಗವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ದಾಳಿಯಿಂದ ಜೀವ ಉಳಿಸಿಕೊಂಡರೆ ಸಾಕೆನ್ನುವಂತಾಗಿ ಹೋಗಿದೆ. ಈ ಬಾರಿ ಕಾಂಗ್ರೆಸ್‌ನ ಹೊಡೆತಕ್ಕಿಂತ ಬಿಜೆಪಿ ಭಯವೇ ಇವರನ್ನೆಲ್ಲ ಒಂದೆಡೆ ತರುತ್ತಿದೆ. ಆದರೆ ಹಳೆಯ ಗೊಂದಲವೇ ಈ ಬಾರಿಯೂ ತೃತೀಯ ರಂಗದ ರಚನೆಯ ಪ್ರಯತ್ನಗಳಲ್ಲಿ ಕಾಣಿಸುತ್ತಿದೆ. ಕರ್ನಾಟಕ ಮೂಲದ ಜಾತ್ಯತೀತ ಜನತಾದಳ, ತಮಿಳುನಾಡಿನ ಎಐಎಡಿಎಂಕೆ, ಬಿಹಾರದಲ್ಲಿ ಅಧಿಕಾರದ ಲ್ಲಿ ರುವ ಸಂಯುಕ್ತ ಜನತಾದಳ, ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿಗೆ ಮೊದಲೇ ದಶಕಗಳ ಹಿಂದೆಯೇ ದೇಶದಲ್ಲಿ ಹೊಸ ದೊಂದು ರಾಜಕೀಯ ಅಲೆ ಎಬ್ಬಿಸಿದ್ದ ಅಸ್ಸಾಂ ಗಣ ಪರಿಷದ್, ಜಾರ್ಖಂಡ್‌ನಲ್ಲಿ ಬಿಜೆಪಿಯ ವೋಟ್‌ಬ್ಯಾಂಕ್‌ಗೆ ಲಗ್ಗೆ ಇಡುವ ಶಂಕೆ ಇರುವ ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾ ತಾಂತ್ರಿಕ್) ಮತ್ತು ಇವರನ್ನೆಲ್ಲ ಒಂದೆಡೆ ಶಿಸ್ತಾಗಿ ಕೂರಿಸಲು ಪ್ರಯತ್ನಿ ಸುತ್ತಿರುವ ಎಡ ಪಕ್ಷಗಳು, ಹೀಗೆ ಒಟ್ಟು ಸುಮಾರು 14 ರಾಜಕೀಯ ಪಕ್ಷಗಳು ತೃತೀಯ ರಂಗದ ವೇದಿಕೆ ಏರಲು ಸಜ್ಜಾಗಿವೆ ಎನ್ನಲಾಗುತ್ತಿದೆ. ಸದ್ಯಕ್ಕೆ ಈ ಸಂಖ್ಯೆ 11 ದಾಟುತ್ತಿಲ್ಲ.

ಜಾತ್ಯತೀತ ಶಕ್ತಿಗಳನ್ನೆಲ್ಲ ಒಂದುಗೂಡಿಸಲೆಂದು ನವೆಂಬರ್‌ನಲ್ಲಿ ದಿಲ್ಲಿಯಲ್ಲಿ ದೊಡ್ಡ ಸಭೆಯೇ ನಡೆದರೂ ಅದು ಇನ್ನೂ ಒಂದು ಸ್ಪಷ್ಟ ರೂಪ ಪಡೆದುಕೊಳ್ಳಲಿಲ್ಲ. ನಿಜಕ್ಕೂ ಗಂಭೀರ ಎನ್ನಬಹುದಾದ ಬೆಳವಣಿಗೆಗಳು ಕಳೆದ ಒಂದೆರಡು ವಾರಗಳಿಂದ ಆರಂಭವಾಗಿವೆ. ದಿಲ್ಲಿಯಲ್ಲಿರುವ ದೇವೇಗೌಡರ ಮನೆಯಲ್ಲಿ ತೃತೀಯ ರಂಗದ ಕೆಲವು ನಾಯಕರು ಸೋಮವಾರ ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ. ಅಂದರೆ, ಇನ್ನೂ ರಂಗದೊಳಗೆ ಯಾರು ಬರುತ್ತಾರೆ, ಯಾರು ಹೊರಗುಳಿಯುತ್ತಾರೆ ಎನ್ನುವುದು ಸ್ಪಷ್ಟ ವಿಲ್ಲ. ರಂಗ ಸೇರಬಹುದಾದ ಪಕ್ಷಗಳ ಜತೆ ಬಿಹಾರದ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರದವರೆಗೂ ಮಾತುಕತೆ ನಡೆಸಲಿದ್ದಾರಂತೆ. ಇದರರ್ಥ ಬೆಂಗಳೂರಿನಲ್ಲಿ ನಡೆಯುವ ತೃತೀಯ ರಂಗ ರ‌್ಯಾಲಿಯ ವೇಳೆಗೇ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ.

ತೃತೀಯ ರಂಗದ ಚಟುವಟಿಕೆಗಳು ತಡವಾಗಿ ಆರಂಭವಾಗಿರು ವುದನ್ನು ಟೀಕಿಸಬಹುದೇ ಹೊರತು ಅವುಗಳ ಪ್ರಭಾವವನ್ನಲ್ಲ. ಸದ್ಯಕ್ಕೆ ಈ ರಂಗದೊಳಗೆ ಹಲವು ಘಟಾನುಘಟಿಗಳೇ ಕಾಣಿಸುತ್ತಿ ದ್ದಾರೆ. ತಮಿಳುನಾಡಿನಲ್ಲಿ ಎಐಎಡಿಎಂಕೆಯ ಜಯಲಲಿತಾ ಅವರ ಸಾಧನೆ ಹಿಂದಿಗಿಂತಲೂ ಉತ್ತಮವಾಗಿರುವ ಸೂಚನೆ ಗಳಿವೆ. ಸದ್ಯಕ್ಕೆ ಒಂದಲ್ಲಾ ಒಂದು ವಿವಾದ ಎದುರಿಸುತ್ತಿರುವ ಉತ್ತರಪ್ರದೇಶದ ಸಮಾಜವಾದಿ ಪಾರ್ಟಿ ಕನಿಷ್ಠ 20 ಸ್ಥಾನಗಳನ್ನಾ ದರೂ ಗೆಲ್ಲಲಿದೆ. ಎಡಪಕ್ಷಗಳು ತಮ್ಮ ಘನ ಘೋರ ಸೋಲಿ ನಲ್ಲಿಯೂ 20ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳನ್ನು ಸದೆಬಡಿದಿರುವ ಮಮತಾ ಬ್ಯಾನರ್ಜಿ ಅವರನ್ನು ರಂಗಕ್ಕೆ ಕರೆ ತರಲು ಪ್ರಯತ್ನಗಳು ನಡೆದಿವೆ. ಬಿಹಾರದಲ್ಲಿ ಯಾವುದೇ ಪವಾಡ ನಡೆದರೂ ಸಂಯುಕ್ತ ಜನತಾದಳ ಹತ್ತರ ಗಡಿ ದಾಟುವ ನಿರೀಕ್ಷೆ ಇದೆ. ಹೀಗೆ, ಯಾವುದೇ ಪಕ್ಷದ ಅಲೆ ಎಷ್ಟೇ ಜೋರಾಗಿ ಬೀಸಿದರೂ ಇವರೆಲ್ಲ ಸೇರಿ ಕನಿಷ್ಠ ನೂರು ಸ್ಥಾನಗಳನ್ನು ಗೆದ್ದು ತೃತೀಯ ರಂಗವನ್ನು ನಿಲ್ಲಿಸಬಲ್ಲರು. ಆದರೆ, ಮತ ಎಣಿಕೆ ಮುಗಿದ ಮೇಲೆ ಇದೇ ಒಗ್ಗಟ್ಟು ಉಳಿಯಲಿದೆಯೆ ಎನ್ನುವುದು ಮತ್ತೊಂದು ಪ್ರಶ್ನೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸಮಾನ ಅಂತರ ಕಾಯ್ದು ಕೊಳ್ಳುವ ಪ್ರತಿಜ್ಞೆಗಳೆಲ್ಲ ಸುಳ್ಳಾಗಿ, ಅಧಿಕಾರ ದೊರೆಯು ವುದೇ ಆದರೆ ಯಾವ ಅಂತರದ ಅಡ್ಡಿಯೂ ಇಲ್ಲ ಎನ್ನುವುದು ತೃತೀಯ ರಂಗದ ರಾಜಕೀಯ ಇತಿಹಾಸದುದ್ದಕ್ಕೂ ಸಾಬೀತಾ ಗಿರು ವುದರಿಂದ ರಂಗ ಏರಬಯಸುವ ಹೊಸ ನಾಯಕರಲ್ಲಿ ಹೊಸ ಉತ್ಸಾಹವೇನೂ ತುಂಬಿಲ್ಲ. ಆದರೆ, ಇವರಿಂದ ಬದಲಾ ವಣೆ ಆಗುವುದೇ ಇಲ್ಲವೆ? ಈ ಪ್ರಶ್ನೆಗೆ ದೇಶದಲ್ಲಿರುವ ಗೊಂದಲ ದಲ್ಲೇ ಉತ್ತರ ಇದೆ. ಎರಡು ದಶಕಗಳಿಂದ ಅಧಿಕಾರದಿಂದ ದೂರವಾಗಿರುವ ತೃತೀಯ ರಂಗಕ್ಕೆ ಏನಾದರೂ ಅವಕಾಶ ಇದ್ದರೆ ಅದು ಈ ಬಾರಿಯೇ. ಆದರೆ, ಮೋದಿ ಅಲೆ ಎನ್ನುವುದು ನಿಜಕ್ಕೂ ದೇಶದುದ್ದಗಲಕ್ಕೂ ಬೀಸಿಯೇ ಬಿಟ್ಟರೆ ತೃತೀಯ ರಂಗ ಎನ್ನು ವುದೂ ಆ ಬಿರುಗಾಳಿಯಲ್ಲಿ ತರಗೆಲೆಯಂತೆ ಹಾರಿ ಹೋಗಬೇಕು. ಆದರೆ, ಮೋದಿ ಅಲೆ ಅಷ್ಟು ಬಲವಾಗಿದೆಯೆ? ಅದಕ್ಕೆ ಉತ್ತರ ಇನ್ನೂ ಸ್ಪಷ್ಟವಿಲ್ಲ. ಬಿಜೆಪಿ, ಕಾಂಗ್ರೆಸ್ ಇವುಗಳಲ್ಲಿ ಯಾವುದೇ ಒಂದು 200ರ ಗಡಿ ದಾಟದಿದ್ದರೆ ಆಗ ತೃತೀಯ ರಂಗದ ಆಟ ಶುರುವಾಗಬಹುದು.

ಆಗ ತೃತೀಯ ರಂಗದಲ್ಲಿ ಮುಂದಿನ ಸಾಲಿನಲ್ಲಿ ಕಾಣಿಸಿ ಕೊಳ್ಳುತ್ತಿರುವ ಎಐಎ ಡಿಎಂಕೆಯ ಜಯಲಲಿತಾ ಅವರು ಮೊದಲು ಇಲ್ಲಿಂದ ಮಾಯವಾಗಿ ಮೋದಿ ಪಕ್ಕದಲ್ಲಿ ಕಾಣಿಸಿ ಕೊ ಳ್ಳ ಬಹುದು. ದೇಶದ ಉಳಿದೆಲ್ಲ ರಾಜ್ಯಗಳಿಗಿಂತ ಹೆಚ್ಚು ಗೊಂದಲ ದಲ್ಲಿರುವ ಆಂಧ್ರಪ್ರದೇಶದಲ್ಲಿ ಹೇಗಾದರೂ ಮಾಡಿ ತಲೆ ಉಳಿಸಿ ಕೊಳ್ಳಲು ತಂತ್ರ ಹೆಣೆಯುತ್ತಿರುವ ತೆಲುಗುದೇಶಂ ಅವರ ಚಂದ್ರ ಬಾಬು ನಾಯ್ಡು ಅವರ ನಡೆಯನ್ನು ಈಗಲೇ ಹೇಳುವಂತಿಲ್ಲ. ಇವರೆಲ್ಲರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಸದ್ಯಕ್ಕೆ ಸೈದ್ಧಾಂತಿಕವಾಗಿ ಬಿಜೆಪಿಯಿಂದ ದೂರವಿರುವವರು. ರಂಗದಲ್ಲಿ 11ರಿಂದ 14 ಪಕ್ಷಗಳು ಇರಲಿವೆ ಎನ್ನುವುದು ಇನ್ನೂ ಸುದ್ದಿಗಳಲ್ಲಷ್ಟೇ ಇದೆ. ಆದರೆ, ಎಡಪಕ್ಷಗಳು, ಸಂಯುಕ್ತ ಜನತಾದಳ ಮತ್ತು ಜಾತ್ಯತೀತ ಜನತಾದಳಗಳಷ್ಟೇ ಇಂಥದೊಂದು ರಂಗ ಬೇಕು ಎಂದು ಪಣತೊಟ್ಟು ನಿಂತಂತಿವೆ.

ಹೀಗೆ ತೃತೀಯ ರಂಗ ಕಟ್ಟಲು ಮುಂದಾಗಿರುವವರು ಹಲವು ಸವಾಲುಗಳನ್ನು ಎದುರಿಸಿ ನಿಲ್ಲಬೇಕಿದೆ. ಮೊದಲನೆಯದಾಗಿ ಅದು ಇಂತಹ ರಂಗ ಒಂದನ್ನು ಕಟ್ಟುವುದರಿಂದ ಲಾಭ ಇದೆ ಎನ್ನುವುದನ್ನು ಸಣ್ಣ- ಪುಟ್ಟ ಪಕ್ಷಗಳಿಗೆ ಮನವರಿಕೆ ಮಾಡಿಕೊಡ ಬೇಕಿದೆ. ಚುನಾವಣೆ ಮುಗಿದ ಬಳಿಕವೂ ತಾವು ಈ ರಂಗದ ಲ್ಲಿಯೇ ಉಳಿಯಲಿದ್ದೇವೆ, ಬೆಳೆಯಲಿದ್ದೇವೆ ಎನ್ನುವ ವಿಶ್ವಾಸ ಹುಟ್ಟಿಸಬೇಕಿದೆ. ಹೀಗೆ ಕೊನೆಗಾಲದಲ್ಲಿ ರಂಗ ಕಟ್ಟಿದ ಬಳಿಕ ಉಳಿದಿರುವ ಎರಡು ಮತ್ತೊಂದು ತಿಂಗಳುಗಳಲ್ಲಿ ತಾವೇಕೆ ಮತ್ತೊಂದು ರಂಗ ಕಟ್ಟಿದ್ದೇವೆ ಎನ್ನುವುದನ್ನು ಮತದಾರರಿಗೆ ಬಿಡಿಸಿ ಹೇಳಬೇಕಿದೆ.

ಆಮ್ ಆದ್ಮಿ ಪಾರ್ಟಿಯ ಜನ ನಿಂತದ್ದು, ಮಲಗಿದ್ದು, ಎದ್ದದ್ದು, ಕುಳಿತದ್ದು ಎಲ್ಲವನ್ನೂ ಟ್ವಿಟರ್, ಫೇಸ್‌ಬುಕ್‌ಗಳ ಮೂಲಕ ಮಿಂಚಿನ ವೇಗದಲ್ಲಿ ಜನರಿಗೆ ಮುಟ್ಟಿಸುತ್ತಿರುವ ಹೊತ್ತಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ತಮ್ಮ ಭವ್ಯ ಸಂದೇಶ ಗಳನ್ನು ಜನರಿಗೆ ಬಿತ್ತರಿಸಲು ದೇಶದ ಎಲ್ಲ ಹೋರ್ಡಿಂಗ್‌ಗಳು ಮತ್ತು ಮಾಧ್ಯಮಗಳ ಜಾಗವನ್ನು ಬುಕ್ ಮಾಡಿ ಕುಳಿತಿರುವಾಗ ಇದೆಲ್ಲ ಸಾಧ್ಯವೆ ? ಇಂತಹ ಮಿಂಚಿನ ಓಟವನ್ನು ಇವುಗಳಿಂದ ಖಂಡಿತ ನಿರೀಕ್ಷಿಸುವುದು ಸಾಧ್ಯವಿಲ್ಲ. ತೃತೀಯ ರಂಗದಲ್ಲಿ ಸೇರುವ ಪಕ್ಷಗಳೆಲ್ಲ ಅವುಗಳ ಕಾಲ ಮೇಲೆ ನಿಂತಿರುವಂಥವೇ ಆಗಿವೆ. ಅವುಗಳೆಲ್ಲ ಒಂದು ನಿರ್ದಿಷ್ಟ ರಾಜ್ಯ, ಪ್ರದೇಶಗಳಿಗೆ ಸೀಮಿತ. ಈ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಹಿಂದುಳಿದರೂ ಅವುಗಳಿಗೆ ಯಾವುದೇ ನಷ್ಟವಿಲ್ಲ. ಆದರೆ, ಇಲ್ಲಿನ ಕೆಲವು ಪಕ್ಷಗಳು ಭಾಷೆಗಳ ಆಧಾರದ ಮೇಲೂ ಬೆಳೆದು ನಿಂತಿರುವುದರಿಂದ ಯಾವುದೋ ರಾಜ್ಯದಲ್ಲಿ ನೆಲೆಸಿರುವ ಮತ್ತೊಂದು ಭಾಷೆಯ ಜನರು ತಮ್ಮ ಮೆಚ್ಚಿನ ಪಕ್ಷದ ಜತೆ ನಿಂತ ಪ್ರಾದೇಶಿಕ ಪಕ್ಷಕ್ಕೆ ಬೆಂಬಲ ನೀಡಬಹುದು ಎನ್ನುವುದು ಈ ರಂಗದೊಳಗಿನ ಪಕ್ಷಗಳ ಸಣ್ಣ ಆಸೆ. ಈ ಮತಪಲ್ಲಟ ಒಂದೆರಡು ಪರ್ಸೆಂಟ್‌ಗಳಷ್ಟಾದರೂ ತೃತೀಯ ರಂಗ ಧನ್ಯ. ಇಂತಹ ಬೆಳವಣಿಗೆಗಳೆಲ್ಲ ಹೀಗೆ ಕೆಲವರಲ್ಲಿ ಇಂತಹ ಆಸೆ ಹುಟ್ಟಿಸುತ್ತಿರುವಾಗಲೇ ತೃತೀಯ ರಂಗ ರಚನೆ ಏನಿದ್ದರೂ ಲೋಕಸಭೆ ಚುನಾವಣೆ ಬಳಿಕ ಎಂದು ಹೇಳಿಬಿಟ್ಟಿದ್ಧಾರೆ ಸಿಪಿಐ-ಎಂ ನಾಯಕ ಸೀತಾರಾಂ ಯಚೂರಿ. ಉತ್ತರಪ್ರದೇಶ ದಂತಹ ದೊಡ್ಡ ರಾಜ್ಯ ಆಳುತ್ತಿರುವ ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್ ಸಹ ಇದೇ ಮಾತು ಆಡುತ್ತಿದ್ದಾರೆ.

ದುರಂತವೆಂದರೆ ಒಂದು ಮೈತ್ರಿ ಕೂಟವನ್ನು ಚುನಾವಣೆಗೆ ಮೊದಲು ಕಟ್ಟದಿದ್ದರೆ, ಚುನಾವಣೆ ಬಳಿಕ ಅದು ಸಾಧ್ಯವೆ? ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ 90ರ ದಶಕದಿಂದೀ ಚೆಗೆ ಮತ ಎಣಿಕೆ ಮುಗಿದ ಮರುಕ್ಷಣವೇ ಯಾವ ವೇಗದಲ್ಲಿ ಹೊಸ ಮಿತ್ರರನ್ನು ಹುಡುಕುತ್ತಿವೆ ಎಂದರೆ ಆ ವೇಗವನ್ನು ಮಾತ್ರ ತೃತೀಯ ರಂಗಿಗಳು ಹಿಂದಿಕ್ಕುವುದು ಕಷ್ಟ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...