Wednesday, March 12, 2014

ದಲಿತ ಕನ್ನಡ ಸಾಹಿತ್ಯ ಪರಿಷತ್ ಒಂದು ಅವಲೋಕನ

ಜ ಪಿ. ಸಿದ್ದರಾಜು

 

ದಲಿತ ಕನ್ನಡ ಸಾಹಿತ್ಯ ಪರಿಷತ್ ಒಂದು ಅವಲೋಕನ

ದಲಿತ ಸಾಹಿತ್ಯಕ್ಕೆ ಪ್ರತ್ಯೇಕತೆಯ ಅವಶ್ಯಕತೆ ಯಿದೆ. ಕನ್ನಡದಲ್ಲೇ ಈ ಪ್ರತ್ಯೇಕತೆಯ ಕೂಗು ಸುಮಾರು 1970ರಿಂದಲೂ ಕೇಳಿ ಬಂದಿದೆ. ಶತಶತಮಾನಗಳಿಂದಲೂ ಅನುಭವಿಸುತ್ತ ಬಂದಿ ರುವ ನೋವು, ಅಪಮಾನ, ಆಕ್ರಮಣ, ಸಾಮಾ ಜಿಕ ಬಹಿಷ್ಕಾರ, ಅಸಮಾನತೆಯ ಕ್ರೌರ್ಯಗಳು ಬಡವರ ಬದುಕನ್ನೇ ತಿಂದು ತೇಗಿವೆ. ದಲಿತರ ವೇದನೆಗೆ ಧ್ವನಿಯಾಗಿ ಪರಿತಪಿಸಿದವರೆಂದರೆ ದಲಿತ ಸಾಹಿತಿಗಳು ಹಾಗೂ ದಲಿತ ಸಂಘಟನೆ ಗಳೇ ವಿನಃ ಇಂದು ಪ್ರಶ್ನೆ ಮಾಡುವವರಲ್ಲ. ಸಾಹಿತ್ಯವಲಯದಲ್ಲಿ ತಾರತಮ್ಯ ಮೊದಲಿ ನಿಂದಲೂ ಇದೆ ಹಾಗೂ ಮುಂದುವರಿಯುತ್ತಾ ಬರುತ್ತಿದೆ. ದಲಿತ ಸಾಹಿತ್ಯ ಕ್ರಾಂತಿಕಾರಿ ಬರವ ಣಿಗೆಗಳು, ಕ್ರಾಂತಿಕಾರಿ ಗೀತೆಗಳು ದಲಿತ ಚಳವಳಿ ಗಳನ್ನು ಹುಟ್ಟುಹಾಕಿ ಶಕ್ತಿಯನ್ನು ತುಂಬಿದವು. 

ಇವೆಲ್ಲಾ ಸಾಮಾಜಿಕ ಅಸಮಾನತೆಯ ಸುಡುವ ಸಮಸ್ಯೆಗಳನ್ನು ಹಾಗೂ ಗಾಯದ ಮೇಲೆ ಎಳೆದ ಬರೆಗಳನ್ನು ಹಾಗೂ ಮಾಸದ ಗಾಯಗಳನ್ನು ಪ್ರತಿಬಿಂಬಿಸಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಬೇರೆ ಯವರ ಅಮಾನುಷ ಧೋರಣೆಗೆ ಒಳಗಾಗಿ ಶೋಷಿತ ವರ್ಗಗಳು ಅಸ್ಪಶ್ಯರಾಗಿ ಬದುಕುತ್ತಿ ದ್ದಾರೆ. ಅವರು ಅನುಭವಿಸಿದ ಅಮಾನುಷ ಬದುಕು, ಅವಹೇಳನೆಗೆ ಗುರಿಯಾಗಿ ನೋವುಗಳೆ ಒಳಗೊಂಡಂತಹ ಸಾಹಿತ್ಯವು ದಲಿತ ಸಾಹಿತ್ಯವಾಗಿ ಒಡಮೂಡಿದೆ. ವರ್ತಮಾನದಲ್ಲಿ ದಲಿತ ಸಾಹಿತ್ಯಕ್ಕೆ ಮನ್ನಣೆ ಇದೆ. ಆದರೆ ದಲಿತ ಜನಾಂಗವು ಅನುಭ ವಿಸುತ್ತಿರುವ ಕಷ್ಟಕಾರ್ಪಣ್ಯಗಳಿಗೆ ಬೆಲೆಯಿಲ್ಲವಾ ಗಿದೆ. ತುಳಿದವರಿಗೆ ಏನು ಗೊತ್ತು ಬಡತನದ ನೋವು?. ಅದರ ಅನುಭವವಿರುವುದು ತುಳಿತಕ್ಕೊಳಗಾದವರಿಗೆ ಮಾತ್ರ. ಜಾತಿ ಧರ್ಮ, ಕುಲ ವರ್ಗೀಕರಣ ವ್ಯವಸ್ಥೆಗಳಲ್ಲಿ ಇನ್ನೂ ಪ್ರತ್ಯೇಕತೆಯ ನೋಟ ಬದಲಾಗಿಲ್ಲ. ದಲಿತ ಸಾಹಿತ್ಯವು ದುಃಖವನ್ನು ಅನುಭವಿಸಿ ದವರ, ಕರಾಳ ಕಗ್ಗತಲಲ್ಲಿ ಸತ್ತು ಬದುಕಿರುವವರ ಸಂಘಟನೆ ಮತ್ತು ಹೋರಾಟಗಳಿಗೆ ಮಾರ್ಗ ತೋರುವ ದಿಕ್ಸೂಚಿ, ಅಂತರಂಗದಲ್ಲಿ ಮಡುಗಟ್ಟಿದ ದುಃಖ ದುಮ್ಮಾನಗಳಿಗೆ ಮರುಧ್ವನಿಯನ್ನು ಸೂಚಿ ಸುವ ಸಂಕೇತ, ಇದೊಂದು ಬಹಳ ಗಂಭೀರವಾದ ವಿಚಾರವೆಂದು ದಲಿತ ಸಾಹಿತಿಗಳು ಅರ್ಥ ಮಾಡಿ ಕೊಳ್ಳಬೇಕಾಗಿದೆ. ನಿನ್ನೆಗಳ ಕರಾಳ ನೆನಪುಗಳು ವರ್ತಮಾನದಲ್ಲೂ ಮುಂದುವರಿಯುತ್ತಿದ್ದು, ಭವಿಷ್ಯದಲ್ಲೂ ದಲಿತರು ಶೋಷಿತರು ಮತ್ತು ಅಸ್ಪಶ್ಯರನ್ನು ಕಾಡದೆ ಬಿಡುವುದಿಲ್ಲ. ಅಹಿಂದ ಎಂಬ ಭ್ರಮಾತ್ಮಕ ಸಂಘಟನೆಯಿಂದ ದಲಿತರಿಗೆ ಯಾವ ರೀತಿಯ ಸಂವೇದನೆಯು ಇದುವರೆಗೂ ದೊರೆತಿಲ್ಲ. ಇದು ರಾಜಕೀಯ ಸಂಘಟನೆಯಾಗಿ ಹೊರ ಹೊಮ್ಮಿತೇ ವಿನಃ ವೇದನೆಗೆ ಸಂವೇದನೆ ಯಾಗಿ ಕಾರ್ಯ ಪ್ರವೃತ್ತವಾಗಲಿಲ್ಲ. ದಲಿತ ವರ್ಗವು ಎಲ್ಲಾ ಕ್ಷೇತ್ರಗಳಲ್ಲಿಯೂ ಅಂದರೆ ಶೈಕ್ಷಣಿಕ ರಾಜಕೀಯ ಆರ್ಥಿಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿಯೂ ಸ್ವಾತಂತ್ರ ಸಿಕ್ಕ ನಂತರವೂ ನಗಣ್ಯ ವರ್ಗವಾಗಿಯೇ ಮುಂದುವರಿಯುತ್ತಾ ಬಂದಿದೆ.

 ದಲಿತರ ಬಡವರ ನಿರ್ಗತಿಕರ ಬಗ್ಗೆ ಯಥೇಚ್ಛ ವಾಗಿ ಲೇಖನಗಳು ಬರಹಗಳು ಭಾಷಣಗಳು ಘೋಷಣೆಗಳನ್ನು ಮಾಡಿದವರೆಂದರೆ ದಲಿತ ಸಾಹಿತಿಗಳೇ ವಿನಾಃ ಬೇರೆ ಸಾಹಿತಿಗಳಲ್ಲ ಎಂಬು ದನ್ನು ಮನವರಿಕೆ ಮಾಡಿಕೊಳ್ಳಬೇಕು. ಕನಸು ಗಳನ್ನು ಕಟ್ಟಿಕೊಂಡು ಬದುಕು ಪ್ರಜ್ವಲಿಸಬೇಕಾದರೆ ಹಕ್ಕುಗಳ ಪ್ರತಿಪಾದನೆಗಾಗಿ ಸ್ವಾತಂತ್ರಕ್ಕಾಗಿ ಪ್ರತಿಭಟನೆ, ಸಂಘರ್ಷಗಳು ಇಂದಿಗೂ ಅನಿವಾ ರ್ಯವಾಗಿದೆ. ದಲಿತರ ನೋವುಗಳೇ ಸಾಹಿತ್ಯ ವಾಗಿ ಹೊರಹೊಮ್ಮಿವೆ. ಅವರು ಪಟ್ಟಂತಹ ಕಷ್ಟ ಕಾರ್ಪಣ್ಯಗಳು, ಆತಂಕಗಳು, ಬದುಕು ಬವಣೆ ಗಳು ಜೀವಂತಿಕೆಯ ಕೃತಿಗಳಾಗಿ ಮೂಡಿ ಬಂದಿವೆ. ಬೇರೆಯವರು ಅಲ್ಪಸ್ವಲ್ಪ ಬರೆದಿದ್ದರೆ ದಲಿತ ಸಾಹಿತಿಗಳ ಪೂರಕ ಚಿಂತನೆಯ ಆಕಸ್ಮಿಕ ಬರವಣಿಗೆಗಳೇ ವಿನಃ ಅನುಭವಿಸಿ ಬರೆದ ವಿಚಾರಗಳಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದ ಪುಟಗಳನ್ನು ತಿರುವಿ ಹಾಕಿ ಕೆದಕಿ ದರೂ ದಲಿತರ ಬದುಕನ ನಾಡಿ ಮಿಡಿತಗಳನ್ನು ಮತ್ತು ತಳಮಳಗಳನ್ನು ಅಭಿವ್ಯಕ್ತಿಸಿದ ಯಾವ ಬರಹಗಾರರೂ ಕಂಡುಬರುವುದಿಲ್ಲ. ಹಾಗೂ ಇದನ್ನು ಊಹಿಸಿಕೊಳ್ಳುವುದು ಕಷ್ಟದ ಕೆಲಸ. ಮಾನವೀಯ ವೌಲ್ಯದ ಜೀವಂತಿಕೆ ಇರುವ ದಲಿತ ಸಾಹಿತ್ಯವು ದೃಢ ಮನಸ್ಸು ಮತ್ತು ಭರವಸೆಗಳನ್ನು ನೀಡುವ ಇಚ್ಛಾಶಕ್ತಿಯನ್ನು ಬೆಳೆಸುತ್ತಿದೆ. ನಮ್ಮ ಸಮಸ್ಯೆಗಳನ್ನು ನಾವೇ ಬಗೆ ಹರಿಸಿಕೊಳ್ಳಬೇಕು. ಸ್ವಾಭಿಮಾನವನ್ನು ಬೆಳೆಸಿ ಕೊಳ್ಳುವ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂತಿ ರಬೇಕು.

ದಲಿತ ಕನ್ನಡ ಸಾಹಿತ್ಯದ ಪ್ರತ್ಯೇಕತೆಯ ಅವಶ್ಯಕತೆ ಏಕೆ ಎನ್ನುವವರು ದಲಿತರ ಹೋರಾಟ ಗಳಿಗೆ ಅದೆಷ್ಟು ವರ್ಷಗಳಿಂದ ಧ್ವನಿ ನೀಡಿದ್ದಾರೆ? ಇಲ್ಲ. ಅದರ ಅವಶ್ಯಕತೆ ಅವರಿಗಿಲ್ಲ. ತಂತ್ರಗಾರಿ ಕೆಯ ಕೆಲವೊಂದು ಸಂದರ್ಭಗಳನ್ನು ಸೃಷ್ಟಿ ಮಾಡುವಂತಹ ದಲಿತರ ಪರ ಹೋರಾಟಗಳನ್ನು ದಮನ ಮಾಡುವ ನಿಕೃಷ್ಟ ಮನಸ್ಸಿನ ಅಪಸ್ವರದ ಧ್ವನಿ ಎಂದೇ ಹೇಳಬಹುದು. ಸಮಾಜದಲ್ಲಿ ಬೇರೂರಿದ್ದ ನೋವು, ಅಸಮಾನತೆ, ಅಸ್ಪಶ್ಯತೆ, ಜಾತೀಯತೆಯ ಕಳೆಯನ್ನು ಕಿತ್ತೊಗೆಯುವ ಸಂದೇಶವನ್ನು ದಲಿತ ಸಾಹಿತ್ಯವು ನೀಡುತ್ತದೆ. ಆದರೆ ಆ ಕಳೆಯು ಮತ್ತಷ್ಟು ಬಲಗೊಂಡು ಬೆಳೆಯುವಂತೆ ಮಾಡುತ್ತಿದೆ ಇಂದಿನ ಸಮಾಜ. ಸಾಹಿತ್ಯವನ್ನು ಆಧರಿಸಿ, ತಪ್ಪು ಕಲ್ಪನೆಯಿಂದ ಹೊರಬಂದು ಸಮಾನತೆಯ ತಿರುಳನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯ ಸಾಹಿತಿಗಳಿಂದಲೇ ನಿರಂತರವಾಗಿ ಆಗಬೇಕು.

ತಮ್ಮ ಅನುಭವಕ್ಕೆ ಸರಿಹೊಂದುವ ಪರಿವರ್ತ ನೆಯ ಉದ್ದೇಶವನ್ನು ಹೊಸಬಗೆಯ ನೀತಿ ನಿಯಮಗಳಲ್ಲಿ ಸ್ವಯಂಭಾಗಿಯಾಗಿ ಆ ಮುಖಾಂತರವೇ ತಮ್ಮ ತಪ್ಪುಗಳಿಂದ ಪಾಠ ಕಲಿತು ತಮ್ಮನ್ನೂ ಪರಿವರ್ತಿಸಿಕೊಳ್ಳುತ್ತಿರುವ, ಎಂತಹ ಕಷ್ಟದ ಸ್ಥಿತಿಯಲ್ಲೂ ಹೊಂದಿಕೊಳ್ಳುತ್ತಿರುವ ತಾಳ್ಮೆಯನ್ನು ಬೇರೆಯವರು ಅರ್ಥಮಾಡಿಕೊಳ್ಳು ವುದು ಕಷ್ಟ. ಇಂತಹ ಚಳವಳಿಗಳು ಹಳೆಯ ಮತ್ತು ಹೊಸ ಚಳವಳಿಗಳ ಪರಂಪರೆಗಳಿಂದ ಸ್ಫೂರ್ತಿ ಪಡೆದ ನಕಲುಗಳು ಅಲ್ಲ. ಇದು ದಲಿತ ಚಳವಳಿ. ಇದಕ್ಕೆ ಸ್ಫೂರ್ತಿ ಎಂದರೆ ದಲಿತ ಕನ್ನಡ ಸಾಹಿತ್ಯವೇ ಹೊರತು ಮತ್ಯಾವ ಕನ್ನಡ ಸಾಹಿತ್ಯವೂ ಅಲ್ಲ.

 ದಲಿತರ ಪ್ರಗತಿ ಎಂಬುವುದು ಸತ್ಯಕ್ಕೆ ದೂರವಾಗಿದೆ. ಪ್ರಗತಿಯನ್ನು ಪ್ರತಿಪಾದಿಸುವ ಲೋಕದ ದೃಷ್ಟಿಕೋನ ಬದಲಾಗದ ಹೊರತು ಜ್ಞಾನ ಮತ್ತು ಉತ್ತಮ ಬದುಕಿನ ಆದರ್ಶಗಳು ಒಂದುಗೂಡುವುದಿಲ್ಲ. ಭವಿಷ್ಯದಲ್ಲಿ ಪ್ರಗತಿಯ ದೃಷ್ಟಿಯ ಗ್ರಹಿಕೆ ಮತ್ತೊಂದು ಜೀವಂತಿಕೆಯ ಭ್ರಮೆಯೆಂದೇ ಸಾಬೀತಾಗುತ್ತದೆ. ಮತ್ತೊಮ್ಮೆ ಭ್ರಮೆಗೆ ಜೀವಕೊಡುವ ಕೆಲವು ಪ್ರಯತ್ನಗಳು ಮತ್ತು ಹುಸಿ ಕನಸಿನ ಉತ್ಪಾದಕರು ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳಷ್ಟು ಮಂದಿ ಇದ್ದಾರೆ. ಶರಣ ಸಾಹಿತ್ಯವು ಶರಣರ ವಚನ, ತತ್ವ ಮತ್ತು ಆದರ್ಶಗಳು ನಡೆದು ಬಂದ ದಾರಿ, ಸಾಧನೆ ಇವುಗಳನ್ನು ಅಧ್ಯಯನ ಮಾಡಿ ಸಮಾಜದ ನೆಲೆಗಟ್ಟಿಗೆ ನೀಡುತ್ತಿದ್ದರೆ ದಲಿತ ಸಾಹಿತ್ಯವು ಬಡವರ ದುಃಖ ದುಮ್ಮಾನಗಳನ್ನು ಹೊರತೆಗೆದು ವೈಜ್ಞಾನಿಕ ಮನೋಭಾವನೆ, ವೈಚಾರಿಕತೆಯ ತಳಹದಿಯನ್ನು ಬದುಕಿನ ಸಂಘರ್ಷಗಳನ್ನು ಒಳ ಹಾಗೂ ಹೊರಪದರಗಳನ್ನು ತೆರೆದು ಪರಿಕಲ್ಪನೆ ಗಳನ್ನು ಮೂಡಿಸುವ, ಅದಕ್ಕೆ ಪೂರಕವಾದ ಅವಕಾಶಗಳನ್ನು ಕಲ್ಪಿಸುವ ವ್ಯವಸ್ಥೆಯನ್ನು ಹುಟ್ಟುಹಾಕುವ ಮೂಲ ಉದ್ದೇಶವಾಗಿದೆ. ನೈತಿಕವಾದ ಕೆಡಕುಗಳು ಮತ್ತು ಗುಲಾಮಗಿರಿ ಯನ್ನು ಬೆಳೆಸುವ ಸಮಾಜದ ವಿರೋಧನೀತಿ, ದೇಶಕ್ಕೆ ಧಕ್ಕೆ ಉಂಟಾದರೂ ತಮ್ಮ ಹಿತವನ್ನು ರಕ್ಷಣೆ ಮಾಡಿಕೊಳ್ಳುವವರು ಒಂದು ಶಕ್ತಿಶಾಲಿ ವರ್ಗ ಮತ್ತೊಂದು ಶಕ್ತಿಹೀನವರ್ಗವನ್ನು ಅಪೇಕ್ಷೆ ಪಡುತ್ತದೆ.
ಆದ್ದರಿಂದ ದಲಿತ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಒಂದೇ ಆಗಲು ಹೇಗೆ ಸಾಧ್ಯ? ತನ್ನದೇ ಆದ ಪ್ರತ್ಯೇಕತೆಯ ಅಸ್ತಿತ್ವವನ್ನು ಉಳಿಸಿ ಬೆಳೆಸಿಕೊಳ್ಳುವುದೇ ಸೂಕ್ತ. ಸಾಧನೆಗೆ ಶೋಧನೆಯೇ ಸಾಕ್ಷಿ. ದಲಿತ ಸಾಹಿತ್ಯವು ಎಲ್ಲರ ಮನದಲ್ಲಿ ಆಲೋಚನೆಯನ್ನು ಬಿತ್ತುವ ಜೊತೆಗೆ ಸಮಾಜದ ಕ್ರೌರ್ಯದ ಅಂಚಿನ ವಿಷಾದವನ್ನು ಎತ್ತಿ ತೋರಿಸುತ್ತದೆ. ಅದು ಅದು ದಲಿತ ಸಾಹಿತ್ಯದ ತಿರುಳು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...