Saturday, May 31, 2014

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ೨೦೧೨ – ೧೩ ನೆಯ ಸಾಲಿನ ಗೌರವ ಪ್ರಶಸ್ತಿ

ಶೇಷನಾರಾಯಣ

Hasan Nayeem Surkod
ಹಸನ್ ನಯೀಂ ಸುರಕೋಡ

ಡಾ. ಮ. ನ. ಜವರಯ್ಯ ಆರ್ ಕೆ ಹುಡಗಿ

ಎಂ ಆರ್ ಕಮಲಾ 

ಶೇಷನಾರಾಯಣ, ಹಸನ್ ನಯೀಂ ಸುರಕೋಡ, ಡಾ. ಮ. ನ. ಜವರಯ್ಯ, ಆರ್ ಕೆ ಹುಡಗಿ, ಮತ್ತು ಎಂ ಆರ್ ಕಮಲಾ ಅವರಿಗೆ ಅವರ ಅನುವಾದ ಸಾಹಿತ್ಯಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ  ೨೦೧೨ – ೧೩ ನೆಯ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ.

ಶೇಷನಾರಾಯಣ ಅವರು ತಮಿಳಿನಿಂದ 9 ಕೃತಿಗಳನ್ನು ಕನ್ನಡಕ್ಕೆ ಮತ್ತು 3 ಕೃತಿಗಳನ್ನು ಕನ್ನಡದಿಂದ ತಮಿಳಿಗೆ ಅನುವಾದ ಮಾಡಿದ್ದಾರೆ. ಹಸನ್ ನಯೀಂ ಸುರಕೋಡ ಅವರು ಉರ್ದು ಮತ್ತು ಹಿಂದಿ ಭಾಷೆಯ ವೈಚಾರಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.  ಡಾ. ಮ. ನ. ಜವರಯ್ಯ ಅವರು ಡಾ. ಅಂಬೇಡ್ಕರ್  ಬರೆಹಗಳನ್ನು ದೊಡ್ಡ ಪ್ರಮಾಣದಲ್ಲಿ ಕನ್ನಡಕ್ಕೆ ತಂದವರು. ಆರ್ ಕೆ ಹುಡಗಿ ಅವರು ಎಡಪಂಥೀಯ ಚಿಂತನೆಯ 24 ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಎಂ ಆರ್ ಕಮಲಾ ಅವರು  ಆಫ್ರಿಕನ್, ಆಫ್ರೋ ಅಮೆರಿಕನ್ ಮತ್ತು ಅರಬ್ ರಾಷ್ಟ್ರಗಳ ಹೆಣ್ಣು ದನಿಗಳನ್ನು ಕನ್ನಡಕ್ಕೆ ತಂದು ಅವರ ಹೋರಾಟದ ಬದುಕನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟವರು .

ಈ ಪ್ರಶಸ್ತಿ ೨೫,೦೦೦ ನಗದು ಮತ್ತು ಸರಸ್ವತಿ ಫಲಕವನ್ನೊಳಗೊಂಡಿದೆ.

ಗೌರವ ಪ್ರಶಸ್ತಿ ಪಡೆದ ಎಲ್ಲರಿಗೂ  ’ಲಡಾಯಿ ಪ್ರಕಾಶನ’ದ ಅಭಿನಂದನೆಗಳು.

ಪ್ರಶಸ್ತಿ ಸ್ವೀಕಾರದ ಸಂದರ್ಭ : ಒಂದು ಅನಿಸಿಕೆ
ಡಾ ಎಚ್ ಎಸ್ ಅನುಪಮಾಮಹಿಳಾ ಸಾಹಿತ್ಯಕ್ಕಾಗಿ ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿಯನ್ನು ‘ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ’ ನೀಡಿದಾಗ ಅನಿಸಿದ್ದು:

ರಮಾಬಾಯಿ ಅವರ ಹೆಸರು ಹಾಗೂ ಮಹಿಳಾ ಸಾಹಿತ್ಯ ಎಂಬ ಕೆಟಗರಿ - ಇವೆರೆಡರ ಬಹುಮಾನಕ್ಕೆ ಆಯ್ಕೆಯಾದ ನನ್ನ ಬರವಣಿಗೆ ಒಂದು ತೆರನ ತಳಮಳವನ್ನು, ಜವಾಬ್ದಾರಿಯನ್ನು ಹುಟ್ಟಿಸಿದೆ ಎಂದು ಹೇಳಬಹುದು. ಅಂಬೇಡ್ಕರರ ಸಹಚರಿಯಾಗಿ ಅವರ ಜೀವನದ ಆರಂಭಿಕ ಹೋರಾಟಗಳನ್ನು, ಬದುಕಿನ ಹೋರಾಟಗಳ ದಾರಿಯನ್ನು ಸವೆಸಿದ್ದ ರಮಾಬಾಯಿ ಅವರ ಕೌಟುಂಬಿಕ ಬದುಕನ್ನು ಪೋಷಿಸಿದವರು. ನೇರವಾಗಿ ಅಂಬೇಡ್ಕರರ ಜೊತೆ ಚಳುವಳಿಯಲ್ಲಿ ಧುಮುಕಿದವರಲ್ಲವಾದರೂ ಅವರ ಕುಟುಂಬದ ಜವಾಬ್ದಾರಿಯನ್ನು ವಿದ್ಯಾರ್ಥಿಯಾಗಿ ಅಂಬೇಡ್ಕರ್ ಅಮೆರಿಕಕ್ಕೆ ಹೋದಾಗಲೂ ನಿಭಾಯಿಸಿದವರು. ಒಂದು ಕುಟುಂಬದ ಇಂಟೆಗ್ರಿಟಿಯನ್ನು ಕಷ್ಟ ಕಾಲದಲ್ಲೂ; ಸಂಗಾತಿಯ ಆಬ್ಸೆನ್ಸ್‌ನಲ್ಲೂ ಕಾಯ್ದುಕೊಂಡು ಹೋಗುವುದು ಮಹಿಳೆಯ ಬದುಕಿನ ಒಂದು ಅಲಿಖಿತ ಜವಾಬ್ದಾರಿಯಾಗಿದೆ. ಅಂಥ ರಮಾಬಾಯಿ ಅಸಂಖ್ಯ ಜನರನ್ನು ತಮ್ಮ ಹೆಸರಿನಿಂದ, ಇರವಿನಿಂದ ಪ್ರಭಾವಿಸಿದ್ದಾರೆ. ಅವರ ಹೆಸರಿನಲ್ಲಿ ಮಹಿಳಾ ಸಾಹಿತ್ಯವನ್ನು ಗುರುತಿಸಿರುವುದು ನನ್ನ ಜವಾಬ್ದಾರಿಯನ್ನು ತುಂಬ ಹೆಚ್ಚಿಸಿದೆ.

ಮುಖ್ಯವಾದ ಇನ್ನೊಂದು ವಿಷಯ - ಮಹಿಳಾ ಸಾಹಿತ್ಯಕ್ಕಾಗಿ ಈ ಬಹುಮಾನ ಬಂದಿರುವುದು. ಮಹಿಳಾ ಸಾಹಿತ್ಯ ಹುಟ್ಟಿದ್ದೇ ತೀರಾ ಇತ್ತೀಚೆಗೆ. ಎಷ್ಟೋ ಸಹಸ್ರಮಾನ ಮಹಿಳಾ ಸಾಹಿತ್ಯ ಅಲಿಖಿತವಾಗೇ ಉಳಿಯಿತು. ವಚನಕಾರ್ತಿಯರಿಗಿಂತ ಮುಂಚೆ ಭಕ್ತಿಸಾಹಿತ್ಯವನ್ನು ಹೊರತುಪಡಿಸಿ ಮಹಿಳೆಯರು ಬರೆದಿದ್ದು, ಅನಿಸಿದ್ದನ್ನು ಆಡಿದ್ದು ಕಡಿಮೆ. ವಚನ ಕಾಲದ ನಂತರವೂ ಎಷ್ಟೋ ವರ್ಷ ಕಾಲ ಮಹಿಳೆಯರು ಅಭಿವ್ಯಕ್ತಿಗೆ ಸಾಹಿತ್ಯ ಪ್ರಕಾರವನ್ನು ನೆಚ್ಚಿಕೊಳ್ಳಲಿಲ್ಲ. ಹಾಗಿರುವಾಗ ಸಾವಿತ್ರಿ ಬಾಯಿ ಫುಲೆ, ತಾರಾಬಾಯಿ ಶಿಂಧೆ, ಮುದ್ದುಪಳನಿ, ಸರಸ್ವತಿಬಾಯಿ ರಾಜವಾಡೆ, ಕಮಲಾದೇವಿ ಅವರಂಥ ಅನೇಕರ ಬದುಕು, ನಿಲುವುಗಳಿಂದ ಸ್ಫೂರ್ತಿ ಪಡೆಯಬೇಕಾಗಿದೆ. ನಮ್ಮ ಅಸಂಖ್ಯ ಸೋದರಿಯರು ಇವತ್ತಿಗೂ ಜ್ಞಾನದಿಂದ ವಂಚಿತರಾಗಿ ದೂರವಿದ್ದಾರೆ. ೬೫% ಹುಡುಗಿಯರಷ್ಟೇ ಶಿಕ್ಷಿತರು. ಅಕ್ಷರ ಜ್ಞಾನ ಪಡೆದವರೂ ಕೂಡಾ ತಮ್ಮ ಬಾಯಿಗೊಂದು ಸೆನ್ಸಾರ್ ಬೋರ್ಡ್ ಅಂಟಿಸಿಕೊಂಡು, ಪೆನ್ನಿಗೊಂದು ಸೈಲೆನ್ಸರ್ ಹಚ್ಚಿಕೊಂಡು ಕುಳಿತಿದ್ದಾರೆ. ಎಳೆಯ ಹುಡುಗಿಯರು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಬಾಲ್ಯವಿವಾಹ, ದೇವದಾಸಿ ಪದ್ಧತಿ, ವರದಕ್ಷಿಣೆ, ಮರ್ಯಾದಾ ಹತ್ಯೆ ಮತ್ತಿತರ ಸಾಮಾಜಿಕ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಅಕ್ಷರ ಕಲಿಯಹೋದಂಥ ಸೋದರಿಯರು ಗುರುಗಳಿಂದ, ಮಾರ್ಗದರ್ಶಕರಿಂದ, ರಕ್ಷಕರಿಂದ, ಪರೀಕ್ಷಕರಿಂದ, ಆರಕ್ಷಕರಿಂದ, ವಕೀಲ-ನ್ಯಾಯಾಧೀಶರಿಂದ, ಪತ್ರಕರ್ತರಿಂದ, ಮಂತ್ರಿ ಅಧಿಕಾರಿಗಳಿಂದ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಎಷ್ಟೋ ಮಹಿಳಾ ದೌರ್ಜನ್ಯ ನಡೆದ ಪ್ರಕರಣಗಳು ವರದಿಯಾಗಿ ಹುಯಿಲೆಬ್ಬಿಸಿದರೂ ಕೊನೆಗೆ ಬೇರೆ ವಿಷಯಗಳೇ ಮುನ್ನೆಲೆಗೆ ಬಂದು ಮಹಿಳೆಯ ಇಷ್ಯೂ ಹಿಂದೆ ಸರಿಯುತ್ತಿದೆ.

ನಮ್ಮ ನೆಲದಲ್ಲಷ್ಟೇ ಅಲ್ಲ, ದೂರದೂರದ ಆಫ್ಘನಿಸ್ಥಾನ, ನೈಜೀರಿಯಾ, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಇದೇ ಪರಿಸ್ಥಿತಿಯಿದೆ. ಮಲಾಲಾ ವಿಷಯ ಎಲ್ಲರಿಗೂ ಗೊತ್ತೇ ಇದೆ. ನಿಮಗೆಲ್ಲ ತಿಳಿದಿರಬಹುದು, ನೈಜೀರಿಯಾದಲ್ಲಿ ‘ಬೋಕೋ ಹರಾಂ’ ಎಂಬ ಸಶಸ್ತ್ರ ಪ್ರತ್ಯೇಕತಾವಾದಿ ಸಂಘಟನೆ ಬೋರ್ಡಿಂಗ್ ಸ್ಕೂಲ್ ಒಂದರಿಂದ ೨೭೬ ಹುಡುಗಿಯರನ್ನು - ಬಹುತೇಕರು ೧೪-೧೮ವರ್ಷದೊಳಗಿನವರು - ಅಪಹರಿಸಿ ನೆರೆಯ ದೇಶಗಳಿಗೆ ಮಾರಿಬಿಟ್ಟಿದೆ. ಬೊಕೊ ಹರಾಂ ಎಂದರೆ ಪಾಶ್ಚಾತ್ಯ ಶಿಕ್ಷಣ ನಿಷೇಧ ಎಂದು ಅರ್ಥ. ಆ ಸಂಘಟನೆ ಹೆಣ್ಮಕ್ಕಳು ಸಾಂಪ್ರದಾಯಿಕ ಶಿಕ್ಷಣ ಕಲಿತರೆ ಸಾಕು, ಅವರಿಗೇಕೆ ಇಂಗ್ಲಿಷ್ ಶಿಕ್ಷಣ ಎಂದು ಕೇಳುತ್ತದೆ. ಹೆಣ್ಣುಮಕ್ಕಳು ವೇಶ್ಯಾವಾಟಿಕೆಗೆ ಮಾರಲ್ಪಟ್ಟರೂ ಅಡ್ಡಿಯಿಲ್ಲ, ಆದರೆ ವಿದ್ಯೆ ಕಲಿಯಬಾರದು. 

ಹೀಗಿರುತ್ತ ನಾ ಕಲಿತ ನಾಲ್ಕಕ್ಷರ ಹಾಗೂ ಅದು ನನಗೆ ಕೊಡಮಾಡಿದ ಭಾಷೆ ನನಗೆ ಅಪರಿಮಿತ ಜವಾಬ್ದಾರಿಯನ್ನು ನೀಡಿದೆ. ಆ ಎಲ್ಲ ಸೋದರಿಯರ ಬಾಯಿದ್ದೂ ಮಾತನಾಡಲಾರದ ಸ್ಥಿತಿಗೆ ನನ್ನ ಪೆನ್ನು ಎಲ್ಲೋ ಲವಲೇಶದಷ್ಟು, ಮರಳು ಕಣದಷ್ಟು ಸ್ಪಂದಿಸಿರಬಹುದಷ್ಟೆ. ಈ ಅಕ್ಷರ ತಿಳಿಯದವರ ನೋವನ್ನು ಅನುಭೂತಿಯಿಂದ ಅರಿತು ಮೂಡಿಸಿದ ಸಾಲುಗಳಿಗೆ ದೊರೆತ ಬಹುಮಾನ ನನ್ನ ಪೂರ್ವಸೂರಿ ಮಹಿಳೆಯರಿಗೇ ಸಲ್ಲುತ್ತದೆ. ಸಾವಿತ್ರಿಬಾಯಿ ಫುಲೆಯವರಿಂದ ಹಿಡಿದು ದು. ಸರಸ್ವತಿ, ಗೌರಿ, ಮಲ್ಲಿಗೆಯ ತನಕ ಎಲ್ಲ ಹೆಣ್ಣುಜೀವಗಳೊಂದಿಗೆ ನಾನು ಈ ಪ್ರಶಸ್ತಿ ನೀಡಿರುವ ಜವಾಬುದಾರಿಯನ್ನು, ಗುರುತಿಸುವಿಕೆಯನ್ನು ಹಂಚಿಕೊಳ್ಳಬಯಸುತ್ತೇನೆ. 

ಅಕ್ಷರ ಕಲಿಕೆಯಿಂದ ಬಂದ ಕಿಂಚಿತ್ ಜ್ಞಾನ, ರೆಕಗ್ನಿಷನ್ ಮತ್ತು ಅಧಿಕಾರ ನನ್ನನ್ನು ಜನಸಾಮಾನ್ಯರಿಂದ ದೂರಮಾಡದೇ ಇರಲಿ; ಎಲ್ಲರ ಎದೆಯೊಳಗೂ ಇರುವುದು ಮಿಡಿವ ಹೃದಯವೇ ಆಗಿರುವಾಗ ಜಾತಿ/ದೇಶ/ಮತಗಳ ಕಾರಣದಿಂದ ಪರಸ್ಪರ ಕಾದಾಟ ನಿಲ್ಲಿಸುವಂತೆ ವಿಶ್ವವನ್ನು ಎಚ್ಚರಿಸುವ ತಾಯಂದಿರು ಹೆಚ್ಚಾಗಲಿ ಎಂದು ಆಶಿಸುತ್ತ;

ಮೊದಲ ನಡೆನುಡಿಗಳನ್ನು ತಿದ್ದಿ ತೀಡಿದ ಅಮ್ಮ, ಅಣ್ಣ; ಕುಟುಂಬ ಜವಾಬ್ದಾರಿಯಿಂದ ಹೊರತಾದ ನನ್ನ ಚಟುವಟಿಕೆಗಳಿಗೆ ಸಹಕರಿಸುವ ಕೃಷ್ಣ, ಪುಟ್ಟಿ, ಪವಿ ಮತ್ತು ಕನಸು; ನನ್ನೆಲ್ಲ ಹೆಜ್ಜೆಗಳ ಸಹಪಯಣಿಗ ಬಸೂ; ೧೭ ಪುಸ್ತಕಗಳು, ಅಪ್ರಕಟಿತ ಬರಹಗಳನ್ನು ಪ್ರೀತಿಯಿಂದ ಓದಿ ಮೌಲಿಕ ಮಾತುಗಳನಾಡಿರುವ ಸಬಿಹಾ ಮೇಡಂ; ಹಾಗೂ ಅಕ್ಕನ ಬಳಗದ ಎಲ್ಲ ಗೆಳತಿಯರನ್ನು ನೆನೆಯುತ್ತಾ ಈ ಖುಷಿ ಹಂಚಿಕೊಂಡಿದ್ದೇನೆ. ಪ್ರಶಸ್ತಿ ಮೊತ್ತವನ್ನು ವಂಚಿತ ಮಕ್ಕಳ ಶಿಕ್ಷಣ/ಸವಲತ್ತು/ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಮಾನತಾ ಮಹಿಳಾ ವೇದಿಕೆಗೆ ನೀಡುತ್ತೇನೆ.

ಪ್ರೊ. ಮಲ್ಲೇಪುರಂ ಪ್ರತಿಷ್ಠಾನದವರಿಗೆ ಧನ್ಯವಾದಗಳು.

ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ - 2014 ಕ್ಕೆ ಕವನಗಳ ಆಹ್ವಾನ


ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರಿಂದ ಕರ್ನಾಟಕದ ಉದಯನ್ಮೋಖ ಹಾಗೂ ಎಲೆಮರೆಯ ಕವಿಗಳನ್ನು ಬೆಳಕಿಗೆ ತರುವ ಸದುದ್ದೇಶದಿಂದ " ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ - 2014" ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವನಗಳನ್ನು ಕಳುಹಿಸಬಹುದಾಗಿದೆ. ಬಹುಮಾನಗಳು - ಪ್ರಥಮ ಬಹುಮಾನ - 2000, ದ್ವೀತಿಯ ಬಹುಮಾನ 1000, ತೃತೀಯ ಬಹುಮಾನ 500 ಆಗಿರುತ್ತದೆ. ಕವನಗಳು ಕಳುಹಿಸಲು ಕೊನೆಯ ದಿನಾಂಕ 
ಜುಲೈ 05.

ಕವನಗಳು ಕಳುಹಿಸಬೇಕಾದ ವಿಳಾಸ;
ಜೀವನ್ ಪ್ರಕಾಶನ, ಅಂಚೆ ಪೆಟ್ಟಿಗೆ ಸಂಖ್ಯೆ 03, ಹೆಚ್ ಎಸ್ ಗಾರ್ಡನ್, ಚಿಕ್ಕಬಳ್ಳಾಪುರ - 562 101
ನುಡಿ ತಂತ್ರಾಂಶದಲ್ಲಿ ಟೈಪಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು. jeevanprakashana@gmail.com
ಹೆಚ್ಚಿನ ಮಾಹಿತಿಗಾಗಿ 9901982195 ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ.

Thursday, May 29, 2014

ಮೋದಿ: ನಮ್ಮ ಆತಂಕಗಳು


ಎನ್ ಎಸ್ ಶಂಕರ್ 

ಮೋದಿ: ನಮ್ಮ ಆತಂಕಗಳು

 

ಆಯ್ತಪ್ಪ, ‘ಹಳೆ ಕತೆ’ಯನ್ನೆಲ್ಲ ಬಿಟ್ಟೇ ಮಾತಾ ಡೋಣ. ಈಗ ಮೋದಿ ನಮ್ಮ ದೇಶದ ಪ್ರಧಾನಿ. ಮುಂದೇನು ಮಾಡುತ್ತಾರೆ, ಅದಲ್ಲವೇ ಮುಖ್ಯ? ಹಾಗಾದರೆ ಜನಾದೇಶಕ್ಕೆ ಬೆಲೆ ಇಲ್ಲವೇ? ‘‘ಮೊದಲ ಭಾಷಣದಲ್ಲೇ ಹೇಗೆ ಇಡೀ ದೇಶವನ್ನು ಮುನ್ನಡೆಸುವ ಕಾಳಜಿ ತೋರಿ ಕಣ್ಣಲ್ಲಿ ನೀರು ಹಾಕಿಕೊಂಡು ಮಾತಾಡಿದರು...?’’ ಎಂದು ಮೋದಿ ಭಕ್ತರು ಬೊಟ್ಟು ಮಾಡಿ ಕೇಳುತ್ತಿದ್ದಾರೆ. ‘‘ನೀವು ಮಾತೆತ್ತಿದರೆ 2002ರ ಗೋಧ್ರಾ, ನಂತರದ ಹಿಂಸಾಕಾಂಡದ ವಿಷಯ ತೆಗೆಯುತ್ತೀರಿ. ಈಗ ಮೋದಿ ಬದಲಾಗಿದ್ದಾರೆ. ಈಗೇನಿದ್ದರೂ ಅಭಿವೃದ್ಧಿ’’ ಎನ್ನುತ್ತಾರೆ. ಯಾರಾದರೂ ಮೋದಿ ವಿರುದ್ಧ ಒಂದೇ ಒಂದು ವಿಮರ್ಶಾತ್ಮಕ ಪದ ನುಡಿದರೆ ಸಾಕು, ಈ ಅನುಯಾಯಿಗಳು ಒಮ್ಮಿಂದೊಮ್ಮೆಲೇ ಉದ್ರಿಕ್ತರಾಗಿ ಜಿದ್ದಿನಿಂದ ಮೈ ಮೇಲೆರಗುತ್ತಾರೆ....

ನಮ್ಮ ಮೊದಲ ಆತಂಕ- ಈ ಸೈರಣೆಯಿಲ್ಲದ, ತೀವ್ರ ಅಸಹನೆಯ, ಭೀತಿ ಹುಟ್ಟಿಸುವ ವಾತಾವರಣವನ್ನು ಕುರಿತದ್ದು. ನಮ್ಮ ಡಾ. ಯು.ಆರ್. ಅನಂತಮೂರ್ತಿಯವರು ಮಹಾ ಏನು ಹೇಳಿದರು? ‘‘ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನು ಇರಲಾರೆ’’ ಎಂದರು. ಅಷ್ಟಕ್ಕೇ ಎಲ್ಲ ಸುದ್ದಿ ವಾಹಿನಿಗಳು ಮೋದಿ ವಕ್ತಾರರಂತೆ ಅವರ ಮೇಲೆ ಬಿದ್ದರು. ಇನ್ನು ನಮೋ ಬ್ರಿಗೇಡ್‌ನವರು ಅನಂತಮೂರ್ತಿಯವರನ್ನು ಕರಾಚಿಗೇ ಕಳಿಸಲು ತುದಿಗಾಲಲ್ಲಿ ನಿಂತು ಟಿಕೆಟ್ ವ್ಯವಸ್ಥೆ ಮಾಡುತ್ತೇವೆ ಎಂದು ಮುಂದಾ ದರು. ಅಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಗಿರಿರಾಜ ಸಿಂಗ್ ‘‘ಮೋದಿ ವಿರೋಧಿಗಳೆಲ್ಲ ಪಾಕಿಸ್ತಾನಕ್ಕೆ ಹೋಗಲಿ’’ ಎಂದು ಆಗಲೇ ಅಪ್ಪಣೆ ಕೊಟ್ಟಾಗಿತ್ತು! (ಅಂತೂ ಇವರಿಗೆಲ್ಲ ಭಾರತಕ್ಕಿಂತ ಪಾಕಿಸ್ತಾನವೇ ಅಚ್ಚುಮೆಚ್ಚಿನ ದೇಶವಾದಂತಿದೆ....!) ನಮ್ಮ ಆತಂಕ- ಈ ಭಿನ್ನ ದನಿಯನ್ನು ಎಳ್ಳಷ್ಟೂ ಸಹಿಸದ, ಅಭಿಪ್ರಾಯ ಭೇದ, ಚರ್ಚೆ, ವಾಗ್ವಾದಗಳ ಜನತಾಂತ್ರಿಕ ಧರ್ಮದ ಕತ್ತನ್ನೇ ಹಿಸುಕಹೊರಡುವ ಈ ಸಾಂಸ್ಕೃತಿಕ ಭಯೋತ್ಪಾದನೆ ಕುರಿತದ್ದು. ತುರ್ತು ಪರಿಸ್ಥಿತಿ ಬಿಟ್ಟು ನಮ್ಮ ದೇಶದಲ್ಲಿ ಇನ್ಯಾವಾಗಲೂ ಈ ವಾತಾವರಣ ಇರಲಿಲ್ಲ.

2014ರ ಚುನಾವಣಾ ಪ್ರಚಾರದ ಕೆಲವು ಚಿತ್ರಗಳು:

ನರೇಂದ್ರ ಮೋದಿಯವರ ಬಲಗೈ ಭಂಟ ಅಮಿತ್ ಷಾ ಉತ್ತರ ಪ್ರದೇಶ, ಅದರಲ್ಲೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ‘‘ಮುಝಪ್ಪರ್ ನಗರ ಕೋಮು ಗಲಭೆಗೆ ಪ್ರತೀಕಾರವಾಗಿ ಬಿಜೆಪಿಗೆ ಓಟು ಕೊಡಿ’’ ಎಂದು ಕರೆ ಕೊಟ್ಟರೆ, ಬಿಜೆಪಿ ಈ ಭಾಷಣದಲ್ಲಿ ಏನೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿತು...! ಇನ್ನೊಬ್ಬ ಮುಖಂಡ ಹುಕುಂ ಸಿಂಗ್ ಕೋಮು ಗಲಭೆಯ ಮುಸ್ಲಿಂ ನಿರಾಶ್ರಿತರನ್ನು ತನ್ನ ಕ್ಷೇತ್ರವಾದ ಶಾಮ್ಲಿ ಜಿಲ್ಲೆಯ ಕೈರಾನಾದಲ್ಲಿ ಮತ ಚಲಾಯಿಸಲು ಬಿಡುವುದಿಲ್ಲ ಎಂದು ಗುಡುಗಿದರು.

ಇನ್ನು ಮುಂಬೈಯಲ್ಲಿ ಮೋದಿ ವೇದಿಕೆ ಮೇಲೆ ಕೂತಿರುವಂತೆಯೇ ಶಿವಸೇನಾ ಮುಖಂಡ ರಾಮದಾಸ್ ಕದಂ ಮಾತಾಡಿದ್ದು ಹೀಗೆ:
‘‘ಈ ಮುಸ್ಲಿಮರು ಪೊಲೀಸರ ವಿರುದ್ಧ ದಂಗೆಯೆದ್ದು ಅವರ ವಾಹನಗಳನ್ನು ಸುಟ್ಟು ಹಾಕಿದರು. ನಮ್ಮ ಹುತಾತ್ಮರ ವಿಗ್ರಹಗಳನ್ನು ಒಡೆದು ಹಾಕಿದರು. ಇವರು ನಮ್ಮ ಮಹಿಳಾ ಪೊಲೀಸರ ಮಾನಭಂಗ ಮಾಡುತ್ತಾರೆ. ಇಂಥ ದುಷ್ಕೃತ್ಯಗಳಿಗೆ ನರೇಂದ್ರ ಮೋದಿ ಶಿಕ್ಷೆ ಕೊಡಿಸದೆ ಬಿಡುವುದಿಲ್ಲ ಎಂದು ನಾನು ಬಲ್ಲೆ.... ಮೋದಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನವನ್ನು ಆರೇ ತಿಂಗಳಲ್ಲಿ ನಾಶ ಮಾಡುತ್ತಾರೆ...’’ ಕೇಳಿಸಿಕೊಂಡು ಮೋದಿ ಸುಮ್ಮನೆ ಕೂತಿದ್ದರು!

 ವಿಶ್ವ ಹಿಂದೂ ಪರಿಷತ್ತಿನ ಪ್ರವೀಣ್ ತೊಗಾಡಿಯಾರಂತೂ ಹಿಂದೂ ಪ್ರದೇಶ ಗಳಲ್ಲಿ ಮುಸ್ಲಿಮರು ಮನೆ ಅಥವಾ ಬೇರೆ ಯಾವುದೇ ಆಸ್ತಿ ಕೊಂಡರೆ ಅದನ್ನು ಬಲಾತ್ಕಾರದಿಂದ ಕಿತ್ತುಕೊಂಡು ಮುಸ್ಲಿಮರನ್ನು ಓಡಿಸಲು ಭಾವನಗರದಲ್ಲಿ ಬಹಿರಂಗ ಕರೆ ಕೊಟ್ಟರು. ‘‘ಆ ಮಾಲಕರು ಒಪ್ಪದಿದ್ದರೆ ಕಲ್ಲುಗಳು, ಟೈರುಗಳು ಹಾಗೂ ಟೊಮೆಟೊಗಳನ್ನು ಹಿಡಿದು ಅವರ ಹತ್ತಿರ ಹೋಗಿ. ಅದರಲ್ಲೇನೂ ತಪ್ಪಿಲ್ಲ. ರಾಜೀವ್ ಗಾಂಧಿಯವರ ಹಂತಕರನ್ನೇ ಗಲ್ಲಿಗೇರಿಸಿಲ್ಲ. ಇಲ್ಲಿ ಭಯಪಡುವಂಥದೇನೂ ಇಲ್ಲ. ಮೊಕದ್ದಮೆ ನಡೆಯುತ್ತಲೇ ಇರುತ್ತದೆ. ನಾನು ಈ ಹಿಂದೆಯೂ ಇದನ್ನು ಮಾಡಿ ದ್ದೇನೆ. ಮುಸ್ಲಿಮರು ಆಸ್ತಿ, ದುಡ್ಡು ಎರಡನ್ನೂ ಕಳೆದುಕೊಂಡಿದ್ದಾರೆ...’’ ಇದಕ್ಕೆ ಮೋದಿ ನೀಡಿದ ಪ್ರತಿಕ್ರಿಯೆ ಏಕೈಕ ಟ್ವೀಟ್ ರೂಪದಲ್ಲಿತ್ತು: ‘‘ಬಿಜೆಪಿಯ ಹಿತೈಷಿಗಳೆಂದು ಹೇಳಿಕೊಳ್ಳುವವರು ಅಭಿವೃದ್ಧಿ ಮತ್ತು ಒಳ್ಳೆಯ ಆಡಳಿತದ ಮೂಲ ಸಂಗತಿ ಬಿಟ್ಟು ವಿಷಯಾಂತರ ಮಾಡುತ್ತಿದ್ದಾರೆ. ನಾನು ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ಅನುಮೋದಿಸುವುದಿಲ್ಲ. ಅಂಥವರು ಸಂಯಮ ವಹಿಸಬೇಕು...’’ ಅಷ್ಟೇ, ಮುಗಿಯಿತು!
2002ರಿಂದೀಚೆಗೆ ಎರಡು ಬಾರಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆದು ಎರಡೂ ಬಾರಿ ಮೋದಿ ಮುಖ್ಯ ಮಂತ್ರಿಯಾಗಿ ಆರಿಸಿ ಬಂದರು. ಸರಿ, ಆ ಎರಡೂ ಚುನಾವಣೆಗಳಲ್ಲಿ ಅವರ ಪಕ್ಷದಿಂದ ಎಷ್ಟು ಮಂದಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿದ್ದರು?
ಒಬ್ಬರಿಗೂ ಇಲ್ಲ!

ಅದು ‘ಹಳೇ ಕತೆ’. ಒಪ್ಪಿಕೊಳ್ಳೋಣ. ಹಾಗಾದರೆ ಈ ಬಾರಿ ಅಭೂತಪೂರ್ವ ಎಂಬಂತೆ ಲೋಕಸಭೆಗೆ ಬಿಜೆಪಿ ಪಕ್ಷದ 282 ಅಭ್ಯರ್ಥಿಗಳು ಆರಿಸಿ ಬಂದಿದ್ದಾರಲ್ಲ, ಅವರಲ್ಲಿ ಮುಸ್ಲಿಂ ಸದಸ್ಯರೆಷ್ಟು ಮಂದಿ?
ಒಬ್ಬರೂ ಇಲ್ಲ! (ಸದ್ಯ ಈಗ ಕೇಂದ್ರ ಸಂಪುಟದಲ್ಲಿ ನಜ್ಮಾ ಹೆಪ್ತುಲ್ಲಾ ಒಬ್ಬರಿಗಾದರೂ ಅವಕಾಶ ಸಿಕ್ಕಿತು ಎಂಬುದೇ ಸಮಾಧಾನ.)

ಅಂದರೆ ಇದು, ಜನಸಂಖ್ಯೆಯ ಸುಮಾರು ಶೇಕಡಾ 14ರಷ್ಟಿರುವ ಒಂದು ಇಡೀ ಅಲ್ಪಸಂಖ್ಯಾತ ಸಮುದಾಯವನ್ನು ಸಾರ್ವಜನಿಕ ವಲಯದಿಂದಲೇ ಹೊರಗಿಡುವ ರಾಜಾರೋಷದ ಪ್ರಯತ್ನವಲ್ಲವೇ? ಹಾಗಾ ದರೆ ಮೋದಿ ಬದಲಾಗಿದ್ದಾರಾದರೆ ಯಾವ ಅರ್ಥದಲ್ಲಿ?...

ಇವರ ದಿಗ್ವಿಜಯದ ನಿಜವಾದ ಅರ್ಥ ಏನೆಂಬುದಕ್ಕೆ ಇಲ್ಲೇ ಬಿಜೆಪಿಯೇತರ ಸರಕಾರವಿರುವ ನಮ್ಮ ರಾಜ್ಯದಲ್ಲೇ ದೃಷ್ಟಾಂತಗಳು ಸಿಕ್ಕಿದವು. ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆಯೇ ಮಂಗಳೂರು ಜಿಲ್ಲೆಯಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಎರಡು ಮಸೀದಿಗಳ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಅಪ್ರಚೋದಿತ ದಾಳಿ ನಡೆಯಿತು. (ಬಂಟ್ವಾಳ ತಾಲೂಕಿನ ವಿಟ್ಲ ಮೂಡ್ನೂರು ಗ್ರಾಮದ ಕಂಬಳಬೆಟ್ಟು ಮಸೀದಿ ಹಾಗೂ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೈಕಂಬ ಬಳಿಯ ಸೂರಲ್ಪಾಡಿಯಲ್ಲಿನ ಮಸೀದಿ. ಕಂಬಳಬೆಟ್ಟುವಿನಲ್ಲಿ ಮುಸ್ಲಿಮರ ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ ಮಸೀದಿಯೊಳಕ್ಕೆ ನುಗ್ಗಿ ಪಟಾಕಿ ಸಿಡಿಸಿದರೆ, ಸೂರಲ್ಪಾಡಿಯಲ್ಲಿ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿ ದರು.) ಮೇ 18ರಂದು ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಹೂಡೆಯಲ್ಲಿ ಕಳೆದ 18 ವರ್ಷಗಳಿಂದ ಚಿಕನ್ ಮಾರಾಟ ಮಾಡುತ್ತಿದ್ದ ಮುಹಮ್ಮದ್ ಅಯಿಸ್ ಎಂಬಾತನನ್ನು ಮೋಟರ್ ಬೈಕ್‌ಗಳಲ್ಲಿ ಬಂದ ಕೆಲವು ಬಿಜೆಪಿ ಕಾರ್ಯಕರ್ತರು ‘‘16ರ ವಿಜಯಯಾತ್ರೆಗೆ ಬಂದಿದ್ದೆಯಾ?’’ ಎಂದು ಕೇಳಿ ಆತ ‘ಇಲ್ಲ’ ಎಂದಾಗ ಹಿಡಿದು ಬಾರಿಸಿದ್ದಾರೆ. ಆತನೀಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಿಜಾಪುರದಲ್ಲೂ ಹೊಸ ಸರಕಾರದ ಪ್ರಮಾಣವಚನದ ದಿನ ವಿಜಯಯಾತ್ರೆ ನೆಪದಲ್ಲಿ ಆರಂಭವಾದ ಮೆರವಣಿಗೆ ಕೋಮುಗಲಭೆಯಲ್ಲಿ ಪರ್ಯವಸಾನವಾಯಿತು. ಅಲ್ಲಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳರೇ ಪ್ರಚೋದನೆ ನೀಡಿದರೆನ್ನಲು ವೀಡಿಯೊ ಸಾಕ್ಷಿ ಇಟ್ಟುಕೊಂಡು ಜಿಲ್ಲೆಯ ಪೊಲೀಸ್ ವರಿಷ್ಠರು ಈಗ ಅವರನ್ನು ಬಂಧಿಸಿದ್ದಾರೆ...

ಇನ್ನು ರಾಹುಲ್ ಗಾಂಧಿ ಮದುವೆಯಾಗಿಲ್ಲ. ಅವರು ದಲಿತರ ಮನೆಗೆ ಹನಿಮೂನ್‌ಗೆಂದು ಹೋಗುತ್ತಾರೆ ಎಂಬ ತಲೆತಿರುಕ ಹೇಳಿಕೆ ನೀಡಿದ ಬಾಬಾ ರಾಮದೇವ್‌ರನ್ನು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಮಹಾತ್ಮ ಗಾಂಧೀಜಿಗೆ ಹೋಲಿಸಿದರು!....
ಇದು,- ಈ ವಿಷಪೂರಿತ ರಾಜಕಾರಣವೇ- ಮೋದಿ ನಾಯಕತ್ವದಲ್ಲಿ ನಮ್ಮಂಥವರನ್ನು ಕಂಗೆಡಿಸುತ್ತಿರುವ ಎಲ್ಲಕ್ಕಿಂತ ದೊಡ್ಡ ಆತಂಕ.
ಹೋಗಲಿ, ಮೋದಿಯವರ ಅಭಿವೃದ್ಧಿ? ಗುಜರಾತ್ ಮಾದರಿ?

ಸಾಮಾನ್ಯವಾಗಿ ಅಂಕಿ ಅಂಶಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ದೇವನೂರ ಮಹಾದೇವ ಕೆಲವು ಉದಾಹರಣೆಗಳನ್ನು ಕಲೆ ಹಾಕಿ ಬರೆದರು:1. ಗುಜರಾತ್‌ನಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕಾಗಿ ಮೀಸಲಿಟ್ಟಿದ್ದ 1100 ಎಕರೆ ಭೂಮಿಯನ್ನು ಸರಕಾರ ನ್ಯಾನೊ ಕಾರು ಕಂಪೆನಿಗೆ ಚದರ ಮೀಟರ್‌ಗೆ 900 ರೂಪಾಯಿ ದರದಲ್ಲಿ ನೀಡಿತು. ಆ ಭೂಮಿಯ ಮಾರುಕಟ್ಟೆ ದರ ಚದರ ಮೀಟರ್‌ಗೆ 10,000 ರೂಪಾಯಿ! ಜೊತೆಗೆ ಆ ಸಂಸ್ಥೆಗೆ ಶೇಕಡಾ 0.10 ಬಡ್ಡಿ ದರದಲ್ಲಿ 9,570 ಕೋಟಿ ರೂಪಾಯಿ ಸಾಲದ ವ್ಯವಸ್ಥೆ ಮಾಡಿಕೊಡಲಾಗಿದೆ!

2. ಮೋದಿಯವರ ಆಪ್ತ-ಗೌತಮ್ ಅದಾನಿಯವರ ಉದ್ಯಮ ಸಮೂಹಕ್ಕೆ ಸರಕಾರ 18 ಸಾವಿರ ಎಕರೆ ಭೂಮಿಯನ್ನು ಬಂಜರು ಭೂಮಿ ಎಂದು ಘೋಷಿಸಿ ಎಕರೆಗೆ ನಾಲ್ಕು ಸಾವಿರದಿಂದ ಒಂದು ಲಕ್ಷ 30 ಸಾವಿರ ರೂಪಾಯಿಗಳವರೆಗೆ ನಿಗದಿ ಮಾಡಿ ನೀಡಿದೆ. ಅದೇ ಬಂಜರು ಭೂಮಿಯನ್ನು ಅದಾನಿ ಗ್ರೂಪ್, ಎಕರೆಗೆ 32 ಲಕ್ಷದಿಂದ ನಾಲ್ಕು ಕೋಟಿ ರೂಪಾಯಿವರೆಗೆ ದರ ನಿಗದಿ ಮಾಡಿ ಮಾರಿಕೊಂಡಿದೆ. ಅಷ್ಟೇ ಅಲ್ಲ, ಸ್ವತಃ ಸರಕಾರಿ ಉದ್ದಿಮೆಗಳೂ ಅದಾನಿಯಿಂದ ಅದೇ ದರದಲ್ಲಿ ಭೂಮಿ ಕೊಂಡಿವೆ...!

ಹೀಗೆ ಸಾರ್ವಜನಿಕ ಸಂಪತ್ತನ್ನು ಬಳಿದು ಕಾರ್ಪೊರೇಟ್ ಕುಬೇರರ ಹೊಟ್ಟೆಗೆ ಹಾಕುವುದೇ ಅಭಿವೃದ್ಧಿ ಎನ್ನುವುದಾದರೆ.... ಅದು ನಮ್ಮೆಲ್ಲರ ಬಹು ದೊಡ್ಡ ಆತಂಕ.

ಸಮಾಜವಾದದ ಕನಸಿನ ಕುದುರೆಯನೇರಿ
ಜಿ.ಪಿ.ಬಸವರಾಜು  
 
ನಮ್ಮದು ಸಮಾಜವಾದಿ, ಮತಧರ್ಮ ನಿರಪೇಕ್ಷ, ಪ್ರಜಾಪ್ರಭುತ್ವ ಗಣರಾಜ್ಯ. ನಮ್ಮ ಸಂವಿಧಾನ ರಚನೆಯಾದಾಗ ಅದರ ಪೀಠಿಕಾ ಭಾಗದಲ್ಲಿ ’ಸಮಾಜವಾದಿ’ ಎಂಬ ಪದವೇ ಇರಲಿಲ್ಲ. ೧೯೭೬ರಲ್ಲಿ ಸಂವಿಧಾನಕ್ಕೆ ೪೨ನೇ ತಿದ್ದುಪಡಿಯನ್ನು ತಂದು ಈ ಪದವನ್ನು ಸೇರಿಸಲಾಯಿತು. ಉದಾರವಾದೀ ಧೋರಣೆಯ ನೆಹರೂ ’ಸಮಾಜವಾದಿ’ ಗಣರಾಜ್ಯಕ್ಕೆ ವಿರೋಧಿಯೇನೂ ಆಗಿರಲಿಲ್ಲ; ಆದರೂ ಪ್ರಥಮ ಪ್ರಧಾನಿಯಾದ ಅವರಿಗೆ ಈ ’ಸಮಾಜವಾದಿ’ ಪದವನ್ನು ನಮ್ಮ ಸಂವಿಧಾನದ ಆಶಯಕ್ಕೆ ಸೇರಿಸುವ ಚಿಂತನೆ ಬರಲೇ ಇಲ್ಲ. ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಮಾನವನ ಘನತೆಗಾಗಿ ಸೆಣಸಿದವರು. ಜಗತ್ತಿನ ಯಾವ ಭಾಗದಲ್ಲಿಯೂ ಮನುಷ್ಯ ಗುಲಾಮನಾಗಿ ಬದುಕಬಾರದು ಎಂಬ ಹಂಬಲ ಅವರ ಜೀವನದ ಬಹುದೊಡ್ಡ ಕನಸಾಗಿತ್ತು; ಮನುಷ್ಯನ ಘನತೆಗಾಗಿ ಅವರು ತಮ್ಮ ಇಡೀ ಜೀವನವನ್ನು ಹೋರಾಟವಾಗಿ ರೂಪಿಸಿಕೊಂಡವರು. ಮಾರ್ಕ್ಸ್, ಬುದ್ಧ, ಗಾಂಧಿ, ಲೋಹಿಯಾ ಸೇರಿದಂತೆ ಜಗತ್ತಿನ ಅನೇಕ ಚಿಂತಕರ ವಿಚಾರಧಾರೆಯನ್ನೆಲ್ಲ ಅವರು ಅರೆದು ಕುಡಿದವರಾಗಿದ್ದರು. ಅವರಂಥ ಸಮಾಜವಾದಿ ಇನ್ನೊಬ್ಬರಿಲ್ಲ ಎನ್ನುವಂತಿದ್ದರು. ಅವರೇ ರಚಿಸಿದ ಸಂವಿಧಾನದಲ್ಲಿ ’ಸಮಾಜವಾದಿ’ ಎಂಬ ಪದವನ್ನು ಸಂವಿಧಾನದ ಪೀಠಿಕೆಯಲ್ಲಿ ಬಳಸಲಿಲ್ಲ. ಬಹುದೊಡ್ಡ ವಿದ್ವಾಂಸರಾಗಿದ್ದ ಮತ್ತು ಹರಿತ ಬುದ್ಧಿಯವರಾಗಿದ್ದ ಡಾ.ಅಂಬೇಡ್ಕರ್ ಅವರು ಈ ಪದವನ್ನು ಬಳಸದೆ ಇರಲು ಅವರದೇ ಆದ ಕಾರಣಗಳು ಇದ್ದವೆಂದು ತೋರುತ್ತದೆ.

ಈ ಪದ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಬಂದು ಸೇರುತ್ತಿದ್ದಂತೆಯೇ ನಮ್ಮ ರಾಜಕೀಯ ಕ್ಷೇತ್ರದಲ್ಲಿ ಎದ್ದು ಕಾಣುವ ಬದಲಾವಣೆಗಳಾದವು. ಅನೇಕ ಪಕ್ಷಗಳು ಈ ’ಸಮಾಜವಾದಿ’ ಪದವನ್ನು ಹಿಡಿದು ಎಳೆದಾಡಿದವು. ಬಹುಪಾಲು ರಾಜಕೀಯ ಪಕ್ಷಗಳು ತಮ್ಮ ಆಶಯ ಸಮಾಜವಾದಿ ಹಿನ್ನೆಲೆಯದು ಎಂದೇ ಹೇಳಿಕೊಂಡವು. ಕೆಲವು ಪಕ್ಷಗಳು ಈ ಪದವನ್ನೇ ತಮ್ಮ ಪಕ್ಷಗಳ ಹೆಸರಿನಲ್ಲಿ ಸೇರಿಸಿಕೊಂಡವು. ತಮ್ಮ ಪ್ರಣಾಳಿಕೆಯನ್ನು ರಚಿಸುವಾಗಲೇ ’ಸಮಾಜವಾದಿ’ ಆಶಯ ಎದ್ದುಕಾಣುವಂತೆ ಮಾಡಿದವು. ಅಂತೂ ಸಮಾಜವಾದ ಎನ್ನುವುದು ಭಾರತದ ರಾಜಕೀಯ ಬದುಕಿನಲ್ಲಿ ಎಲ್ಲೆಲ್ಲೂ ಕಾಣುವಂತಾಯಿತು.
ವ್ಯಂಗ್ಯ ಎಂದರೆ ನಿಜವಾದ ಅರ್ಥದಲ್ಲಿ ಸಮಾಜವಾದ ಎನ್ನುವುದು ನಮ್ಮಿಂದ ದೂರವಾಗತೊಡಗಿತು. ಖಾಸಗೀ ಬಂಡವಾಳವೇ ಮೆರೆದಾಡಿತು. ಸಾರ್ವಜನಿಕ ವಲಯ ಮತ್ತು ಗಾಂಧೀಜಿ ಕನಸಿದ್ದ ಸಹಕಾರ ವಲಯಗಳು ಕುಗ್ಗತೊಡಗಿದವು. ಆಧುನಿಕತೆ ಮತ್ತು ವಿದೇಶಿ ಬಂಡವಾಳವೇ ಸರ್ವರ ಹಿತವನ್ನು ಬಯಸುವ ಸಾಧನ ಎಂದು ನಂಬಲಾಯಿತು. ಆರ್ಥಿಕ ಉದಾರ ನೀತಿಗಳೇ ನಮ್ಮ ಪ್ರಗತಿಯ ತತ್ವಗಳಾದವು. ಭಾರತ ಇದೇ ಹಾದಿಯಲ್ಲಿ ಹೆಜ್ಜೆ ಹಾಕಿತು. ಖಾದಿ, ಗ್ರಾಮೋದ್ಯೋಗ, ಸಣ್ಣ ಸಣ್ಣ ಉದ್ದಿಮೆಗಳು, ಸಹಕಾರ ಕ್ಷೇತ್ರದ ಅನೇಕ ಚಟುವಟಿಕೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಹಿಂದೆ ಸರಿಯತೊಡಗಿದವು.

೨೧ನೇ ಶತಮಾನದ ಬೆಳವಣಿಗೆಗಳಂತೂ, ಬೃಹತ್ ಬಂಡವಾಳಗಳ ರೆಕ್ಕೆಗಳನ್ನು ಕಟ್ಟಿಕೊಂಡು ಭಾರತ ಮುಗಿಲಿಗೆ ಹಾರಲು ನೆರವಾದವು. ನಮ್ಮ ಆರ್ಥಿಕ ನೀತಿಯಂತೂ ಬಂಡವಾಳದಾರರಿಗೆ ಬಾಗಿಲುಗಳನ್ನು ಹಾರೊಡೆಯಿತು. ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೊರೇಟ್ ಸಂಸ್ಥೆಗಳು ಭಾರತಕ್ಕೆ ನುಗ್ಗಿಬಂದವು. ಎಲ್ಲೆಲ್ಲೂ ಹಣವೇ ಹರಿದಾಡಿತು. ಭಾರತದ ಏಳಿಗೆಯಾದಂತೆಯೂ ಕಂಡಿತು. ಮಾಹಿತಿ ಮತ್ತು ತಂತ್ರಜ್ಞಾನದಲ್ಲಾದ ಬೆಳವಣಿಗೆಗಳೂ ಇಂಥ ಭ್ರಮೆಯನ್ನು ಹುಟ್ಟಿಸಲು ನೆರವಾದವು. ಅನೇಕ ಕ್ಷೇತ್ರಗಳಲ್ಲಿ ಮಿಂಚಿನ ಬದಲಾವಣೆಗಳು ಆದದ್ದೂ ನಿಜ. ಆದರೆ ನಮ್ಮ ಸಂವಿಧಾನದಲ್ಲಿ ಪ್ರಸ್ತಾಪವಾಗಿರುವ ’ಸಮಾಜವಾದ’ ದಿಕ್ಕುತಪ್ಪಿ ಹೋಯಿತು. ಜಾತಿ, ಧರ್ಮ, ಮೂಲಭೂತವಾದ ಮನುಷ್ಯ-ಮನುಷ್ಯರ ನಡುವೆ ಬಹುದೊಡ್ಡ ಗೋಡೆಗಳನ್ನು ಕಟ್ಟಿದವು. ಬಡವ-ಬಲ್ಲಿದ, ಹಳ್ಳಿ-ನಗರ, ವಿದ್ಯಾವಂತ-ಅವಿದ್ಯಾವಂತ ಹೀಗೆ ಸೃಷ್ಟಿಯಾದ ವರ್ಗಗಳು ಅವುಗಳ ನಡುವಿನ ಅಂತರ ದೊಡ್ಡದಾಗುತ್ತಲೇ ಹೋಯಿತು. ಪರಸ್ಪರ ಪ್ರೀತಿ, ವಿಶ್ವಾಸ ಮಾಯವಾಗುತ್ತ ಹೋದವು. ಸಹಕಾರ ಎಂಬುದಕ್ಕೆ ಬೇರೆಯೇ ಅರ್ಥಗಳು ಅಂಟಿಕೊಳ್ಳತೊಡಗಿದವು. ನೈತಿಕ ನೆಲಗಟ್ಟು ಎಂಬುದು ಇಲ್ಲವಾಯಿತು. ಗಾಂಧೀ, ಅಂಬೇಡ್ಕರ್, ಲೋಹಿಯಾ ಇವರ‍್ಯಾರೂ ಭಾರತಕ್ಕೆ ಈ ಸ್ಥಿತಿ ಬಂದೆರಗಬಹುದೆಂದು ಊಹಿಸಿರಲಿಲ್ಲ. ಅಂಥ ಸ್ಥಿತಿಯಲ್ಲಿ ನಾವಿಂದು ನಿಂತಿದ್ದೇವೆ.

ಇಂಥ ಸ್ಥಿತಿಯ ನಡುವೆಯೂ ನಿಜವಾದ ’ಸಮಾಜವಾದ’ಕ್ಕಾಗಿ ಹಂಬಲಿಸುವ ಮನಸ್ಸುಗಳು ಇನ್ನೂ ಉಳಿದುಕೊಂಡಿರುವುದು ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಮಾತ್ರವಲ್ಲ, ಸಮಾಜವಾದದ ಬಗೆಗೂ ನಮ್ಮ ಕನಸುಗಳನ್ನು ಇನ್ನೂ ಚಿಗುರಿಸಲು ನೆರವಾಗಿವೆ. ಸಮಾಜವಾದೀ ಸಮಾಜಕ್ಕಾಗಿ ಕನಸಿದ ಮಹಾನ್ ಚಿಂತಕರ ವಿಚಾರಧಾರೆಯಿಂದ ಪ್ರಭಾವಿತರಾದ ಅನೇಕರು ಇದಕ್ಕೆ ಕಾರಣವಿರಬಹುದು. ಎಳೆಯ ತಲೆಮಾರಿಗೆ ಯಾವ ವಿಚಾರಧಾರೆಯೂ ಬೇಡವೇನೋ ಎನ್ನುವ ಈ ಹೊತ್ತಿನಲ್ಲೂ ಸಮಾಜವಾದೀ ಆಶಯಕ್ಕೆ ಬೆಂಬಲ ನೀಡುವಂಥ ಚಟುವಟಿಕೆಗಳು ನಡೆಯುತ್ತಲೇ ಇವೆ. ಮತಧರ್ಮಗಳನ್ನು ಒಂದು ಪ್ರಬಲ ಅಸ್ತ್ರದಂತೆ ಬಳಸಿ ರಾಜಕೀಯ ದಾಳಗಳನ್ನು ನಡೆಸುತ್ತಿರುವ ಚುನಾವಣೆಗಳನ್ನು ನಾವು ನೋಡುತ್ತಿರುವಂತೆಯೇ, ಮತಧರ್ಮಗಳನ್ನು ಧಿಕ್ಕರಿಸುತ್ತಿರುವ ತಲೆಮಾರನ್ನೂ ನಾವು ನೊಡುತ್ತಿದ್ದೇವೆ. ಇಂಥವರ ಸಂಖ್ಯೆ ಸಣ್ಣದು ಎಂಬುದು ನಿಜ. ಆದರೆ ನಮ್ಮ ಆರ್ಥಿಕ, ಸಾಮಾಜಿಕ ಸನ್ನಿವೇಶಗಳೇ ಮತಧರ್ಮಗಳನ್ನು ಮೀರುವ ಸನ್ನಿವೇಶವನ್ನು ಸೃಷ್ಟಿಮಾಡುತ್ತಿವೆ. ಪ್ರೇಮ ವಿವಾಹಗಳು ಇವತ್ತಿಗೂ ಚಾಲ್ತಿಯಲ್ಲಿವೆ ಮತ್ತು ಹೆಚ್ಚುತ್ತಿವೆ. ಜಾತಿಮತಗಳು ಇಂಥ ಮದುವೆಗಳಲ್ಲಿ ಮುಖ್ಯವಾಗುವುದಿಲ್ಲ. ವಿದ್ಯೆ ಉದ್ಯೋಗಗಳು ಕಾರಣವಾಗಿ ಬೇರೆಯ ರಾಜ್ಯ ಮತ್ತು ರಾಷ್ಟ್ರಗಳಿಗೆ ಹೋಗುತ್ತಿರುವ ನಮ್ಮ ತರುಣ ತರುಣಿಯರು ಮತಧರ್ಮಗಳ ಗೆರೆಗಳನ್ನು ದಾಟುವುದು ಅನಿವಾರ್ಯವಾಗುತ್ತಿದೆ. ಅಂಥವರ ನಡುವಿನ ಪ್ರೇಮ ವಿವಾಹಗಳು ಜಾತಿರಹಿತ ಸಮಾಜ ನಿರ್ಮಾಣಕ್ಕೆ ಸಣ್ಣ ಕೊಡುಗೆಯನ್ನಾದರೂ ನೀಡುತ್ತಿವೆ. ಇಷ್ಟಾದರೂ, ಜಾತಿ ವರ್ಗಗಳನ್ನು ಮೀರುವ ಪ್ರಯತ್ನಗಳು ದೊಡ್ಡದಾಗಿ ನಡೆಯಬೇಕು. ನಮ್ಮ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನೇ ನಾವು ಹೊಸದಾಗಿ ರೂಪಿಸಿಕೊಳ್ಳಬೇಕಾಗಿದೆ. ನಮ್ಮ ಆರ್ಥಿಕ ನೀತಿಯನ್ನಂತೂ ಹೊಸದಾಗಿಯೇ ಕಟ್ಟಿಕೊಳ್ಳುವುದು ನಮಗೆ ಅನಿವಾರ್ಯವಾಗಬೇಕು. ಭಾರತದ ರಾಜಕಾರಣದಲ್ಲಿ ಏಕಾಏಕಿ ಹುಟ್ಟಿಕೊಂಡ ’ಆಮ್ ಆದ್ಮಿ’ ಪಕ್ಷದಲ್ಲಿ ಕೊರತೆಗಳು ಇವೆಯಾದರೂ, ಸಮಾಜವಾದಿ ಚಿಂತನೆಯ ಹೊಸ ಮೊಳಕೆಗಳು ಅಲ್ಲಿ ಕಾಣಿಸುತ್ತಿರುವುದು ನಿಜ.

ಪ್ರೇಮ ವಿವಾಹಗಳು ಜಾತಿಯನ್ನು ಮೀರುವ ದಿಕ್ಕಿನಲ್ಲಿ ಚಲಿಸುತ್ತಿವೆ ಎಂಬುದು ನಿಜ. ಆದರೆ ಸರಳವಿವಾಹಗಳು ಮಾತ್ರ ಸಾಕಾರಗೊಳ್ಳುತ್ತಿಲ್ಲ. ಹಣ ಹರಿದಾಡುತ್ತಿರುವ ಈ ದಿನಗಳಲ್ಲಿ ಮಧ್ಯಮ ವರ್ಗ ಮತ್ತು ಮೇಲ್‌ಮಧ್ಯಮ ವರ್ಗ ಅದ್ಧೂರಿಯ ಕಡೆಗೇ ತಿರುಗಿದೆ ಮತ್ತು ಅದ್ಧೂರಿಯ ಮದುವೆಗಳೇ ಪ್ರತಿಷ್ಠೆಯ ಮಾನದಂಡಗಳಾಗಿವೆ. ನಮ್ಮ ಸರ್ಕಾರಗಳು ಕೂಡಾ ಈ ದಿಕ್ಕಿನ ಚಿಂತನೆಗೇ ಕುಮ್ಮಕ್ಕು ಕೊಡುತ್ತಿವೆ. ಕೊನೆಮೊದಲಿಲ್ಲದಂತೆ ತಲೆ ಎತ್ತುತ್ತಿರುವ ’ಕಲ್ಯಾಣ (ಯಾರ ಕಲ್ಯಾಣ?) ಮಂಟಪ’ಗಳಂತೂ ಈ ದೇಶದ ಬಡವರನ್ನು ಅಣಕಿಸುತ್ತಿರುವಂತೆ ತೋರುತ್ತಿವೆ. ಅಷ್ಟೇ ಅಲ್ಲ ಅವು ತಲೆ ಎತ್ತಿದ ಪರಿಸರವನ್ನು ತೀರ ಕೆಟ್ಟದಾಗಿ ಕೆಡಿಸುತ್ತಿವೆ. ರಾಜ್ಯ ಸರ್ಕಾರಗಳು ಈ ದುರಂತವನ್ನು ಕಣ್ಣೆತ್ತಿ ನೋಡದ ಸ್ಥಿತಿಯಲ್ಲಿವೆ. ಕಲ್ಯಾಣ ಮಂಟಪಗಳು ದೊಡ್ಡ ಆದಾಯ ಮೂಲಗಳಾಗಿ ಪರಿವರ್ತನೆಯಾಗುತ್ತಿವೆ.

ಸಾಮೂಹಿಕ ವಿವಾಹಗಳೇನೋ ಮೆಚ್ಚಬೇಕಾದ ಸಂಗತಿಗಳೇ. ಆದರೆ ಇಲ್ಲಿಯೂ ಹಲವಾರು ದೋಷಗಳಿವೆ; ವ್ಯಂಗ್ಯಗಳೂ ಇವೆ. ತಾಳಿ, ಪಂಚೆ, ಸೀರೆಗಳನ್ನು ಉಚಿತವಾಗಿ ಕೊಡುತ್ತ ಈ ಬಡವರನ್ನು ಗೇಲಿಮಾಡುವ, ಅವರ ಆರ್ಥಿಕ ಅಸಹಾಯಕತೆಯನ್ನು ಎತ್ತಿತೋರಿಸುವ ಕ್ರೌರ್ಯವೂ ಇಂಥ ವಿವಾಹಗಳ ಹಿಂದೆ ಇದೆ. ಇಂಥ ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯುತ್ತಿರುವುದು ಧಾರ್ಮಿಕ ಸಂಸ್ಥೆಗಳ ಆಶ್ರಯದಲ್ಲಿಯೇ. ಹೀಗಾಗಿ ಮತಧರ್ಮಗಳನ್ನು ಗಟ್ಟಿಗೊಳಿಸುವ, ಮೌಢ್ಯಗಳನ್ನು ಬೆಳೆಸುವ ಹುನ್ನಾರವೇ ಹಿನ್ನೆಲೆಯಲ್ಲಿ ಕ್ರಿಯಾಶೀಲವಾಗಿರುತ್ತದೆ.

ಇಂಥ ಹೊತ್ತಿನಲ್ಲಿ ಕುವೆಂಪು ಅವರ ವೈಚಾರಿಕ ಚಿಂತನೆಗೆ ಬೆಂಬಲಕೊಡುವ ’ಮಂತ್ರ ಮಾಂಗಲ್ಯ’ ಮದುವೆಗಳು ಅರ್ಥಪೂರ್ಣವಾಗುತ್ತವೆ. ಆದರೆ ಇಂಥ ಮದುವೆಗಳು ಹೆಚ್ಚು ಜನಪ್ರಿಯವಾಗುತ್ತಿಲ್ಲ. ’ಮಂತ್ರ ಮಾಂಗಲ್ಯ’ ಮದುವೆಗಳಲ್ಲಿ ಸರಳತೆ ಮಾತ್ರ ಕಾಣುವುದಿಲ್ಲ. ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿ ಅವರ ವಿವಾಹದ ವಿಚಾರದಲ್ಲಿ ತಳೆದ ನಿಲುವು, ಸರಳತೆ ಇಡೀ ನಾಡಿಗೆ ಆದರ್ಶವಾಗಬೇಕು. ಸರ್ಕಾರ ಕೂಡಾ ಇಂಥ ಮದುವೆಗಳಿಗೆ ಬೆಂಬಲವಾಗಿ ನಿಲ್ಲಬೇಕು.
ಕರ್ನಾಟಕದಲ್ಲಿ ಹೊಸ ಬೆಳಕಿನಂತೆ ಕಾಣಿಸಿಕೊಂಡ ’ಮಾನವ ಮಂಟಪ’ ಇಂಥ ಸರಳ, ಜಾತ್ಯತೀತ, ಧರ್ಮಾತೀತ ಮದುವೆಗಳಿಗೆ ವೇದಿಕೆಯಾಗುವುದರ ಮೂಲಕ ಸಮಾಜವಾದಿ ಚಿಂತನೆಯನ್ನು ಚಿಗುರಿಸಿತು. ಈ ವೇದಿಕೆಯನ್ನು ಬಳಸಿಕೊಂಡು ನೂರಾರು ತರುಣ ತರುಣಿಯರು ತಮ್ಮ ದಾಂಪತ್ಯ ಜೀವನವನ್ನು ಪ್ರವೇಶಿಸಿದರು. ಇದು ಖಂಡಿತವಾಗಿಯೂ ಹೊಸ ತಲೆಮಾರಿಗೆ ಹೊಸ ಭರವಸೆಯನ್ನು ಮೂಡಿಸಿದ್ದು ಹೌದು. ಆದರೆ ಇದನ್ನು ಗಟ್ಟಿಗೊಳಿಸುವ, ಇಡೀ ರಾಜ್ಯಕ್ಕೇ ಇದು ವ್ಯಾಪಿಸುವಂತೆ ಮಾಡುವ ಪ್ರಯತ್ನ ಅಷ್ಟಾಗಿ ಮುಂದುವರಿಯಲಿಲ್ಲ. ’ಮಾನವ ಮಂಟಪ’ ಈಗ ಕೊಂಚ ಮಂಕಾಗಿದೆ.


ಈ ಮಧ್ಯೆ ನಮ್ಮ ಸಮಾಜವಾದಿ ಮಿತ್ರರು ತಮ್ಮ ಮಕ್ಕಳ ಮದುವೆಯನ್ನು ಮಾಡುವಾಗ ಮತಧರ್ಮಗಳನ್ನು ಮೀರುತ್ತಿದ್ದಾರೆ. ಇದು ಸಂತೋಷದ ಸಂಗತಿ. ಜೊತೆಗೆ ಹೊಸ ತಲೆಮಾರಿಗೆ ಸೇರಿದ ಅವರ ಮಕ್ಕಳೂ ಈ ಆಶಯವನ್ನು ಬೆಂಬಲಿಸುತ್ತಿದ್ದಾರೆ. ಇವರ ಸಂಖ್ಯೆ ದೊಡ್ಡದಿಲ್ಲದೆ ಇರಬಹುದು. ಆದರೆ ಒಂದು ನಂಬಿಕೆಯನ್ನು ಮುಂದೆ ಕೊಂಡೊಯ್ಯುವ ದಿಕ್ಕನಲ್ಲಿ ಇದು ಮಹತ್ವದ್ದು. ಆದರೆ ಈ ಸಮಾಜವಾದಿ ಮಿತ್ರರು ಕೂಡಾ ಸರಳ ವಿವಾಹದಲ್ಲಿ, ಮಂತ್ರ ಮಾಂಗಲ್ಯದಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವುದು, ಮದುವೆಯೆಂದರೆ ಅದ್ಧೂರಿಯ ಮದುವೆ, ಅದ್ಧೂರಿಯಲ್ಲಿಯೇ ತಮ್ಮ ಪ್ರತಿಷ್ಠೆ ಇದೆ ಎಂದು ಭಾವಿಸಿರುವುದು ದುರಂತ. ಅದ್ಧೂರಿಯ ಮದುವೆಗಳ ಬಗ್ಗೆ ನಾಚಿಕೆಪಟ್ಟುಕೊಳ್ಳುವ ಸಂವೇದನೆಯನ್ನೂ ಇಂಥ ಮಿತ್ರರು ಕಳೆದುಕೊಂಡಿರುವುದು ಯಾವುದರ ಮುನ್ಸೂಚನೆ?
(ಸೌಜನ್ಯ: ಸಂಯುಕ್ತ ಕರ್ನಾಟಕ)
-ಜಿ.ಪಿ.ಬಸವರಾಜು
೯೪೮೦೦ ೫೭೫೮೦

Wednesday, May 28, 2014

ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

ಆನಂದ ಪ್ರಸಾದ್


ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

 

 

ಮನುಷ್ಯನಿಗೆ ವಾಸಕ್ಕೆ ಮನೆ ಬೇಕು. ಐದಾರು ಸದಸ್ಯರು ಇರುವ ಒಂದು ಸಂಸಾರದ ಸುಗಮ ಜೀವನಕ್ಕೆ ಹೆಚ್ಚೆಂದರೆ ಏಳೆಂಟು ಕೊಠಡಿಗಳಿರುವ ಮನೆ ಧಾರಾಳ ಸಾಕು. ಆದರೆ ಹಣದ ಮದ ತಲೆಗೇರಿದ ಧನಿಕರು ಇಂದು ಹಲವಾರು ಅಂತಸ್ತುಗಳುಳ್ಳ ಹಲವು ಕೊಠಡಿಗಳನ್ನು ಹೊಂದಿರುವ ಮನೆಗಳನ್ನು ಕಟ್ಟಿಸುತ್ತಿದ್ದಾರೆ. ಹಣ ಉಳ್ಳವರು ತಮಗೆ ಬೇಕಾದಷ್ಟು ದೊಡ್ಡ ಮನೆ ಕಟ್ಟಿಸುತ್ತಾರೆ ಇದರಿಂದ ಏನು ತೊಂದರೆ, ನಿಮಗೇಕೆ ಹೊಟ್ಟೆಕಿಚ್ಚು ಎಂದು ಬಂಡವಾಳಶಾಹಿ ವ್ಯವಸ್ಥೆಯ ಸಮರ್ಥಕರು ಕೇಳುತ್ತಾರೆ. ವಾಸ್ತವವಾಗಿ ಇದರಿಂದ ಪರಿಸರ ಸಮತೋಲನಕ್ಕೆ ನಿಶ್ಚಿತವಾಗಿಯೂ ತೊಂದರೆ ಇದೆ. ಹೇಗೆಂದರೆ ದೊಡ್ಡ ದೊಡ್ಡ ಬಂಗಲೆ ಕಟ್ಟಿಸಿದಷ್ಟೂ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ, ಪರಿಸರ ಮಾಲಿನ್ಯ ಹೆಚ್ಚುತ್ತದೆ. ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಲು ಅಪಾರ ಪ್ರಮಾಣದಲ್ಲಿ ಕಬ್ಬಿಣ, ಸಿಮೆಂಟು, ಮರಳು, ಜಲ್ಲಿ ಇತ್ಯಾದಿಗಳು ಬೇಕಾಗುತ್ತವೆ. ಇದರಿಂದಾಗಿ ಹೆಚ್ಚು ಹೆಚ್ಚು ಗಣಿಗಾರಿಕೆ ಮಾಡಬೇಕಾಗುತ್ತದೆ. ಕಬ್ಬಿಣ ಅದಿರು ಅಗೆಯಲು, ಅದನ್ನು ಸಾಗಿಸಲು, ಅದಿರನ್ನು ಕರಗಿಸಿ ಕಬ್ಬಿಣವಾಗಿ ಮಾಡಲು ಅಪಾರ ಪ್ರಮಾಣದಲ್ಲಿ ಪಳೆಯುಳಿಕೆ ಇಂಧನ ಬಳಕೆಯಾಗುತ್ತದೆ. ಇದರಿಂದ ಇಂಗಾಲನಿಲ ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಿ ಹಸಿರು ಮನೆ ಪರಿಣಾಮ ಉಂಟಾಗುತ್ತದೆ. ವಾತಾವರಣದಲ್ಲಿ ಇಂಗಾಲ ನಿಲಗಳು ಸೂರ್ಯನ ಶಾಖವನ್ನು ಹಿಡಿದು ಇಡುವುದನ್ನು ಹಸಿರು ಮನೆ ಪರಿಣಾಮ ಎನ್ನಲಾಗುತ್ತದೆ. ಇದರಿಂದಾಗಿ ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುತ್ತಿದೆ. ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುವುದರ ಪರಿಣಾಮ ಎಲ್ಲರ ಮೇಲೆಯೂ ಆಗುತ್ತದೆ. ಆವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳನ್ನು ಕಟ್ಟಿ ಪರಿಸರ ಸಮತೋಲನ ಕೆಡಿಸುವ ಶ್ರೀಮಂತರ ದೊಡ್ಡಸ್ಥಿಕೆಯ ಪ್ರದರ್ಶನದಿಂದ ಎಲ್ಲರ ಮೇಲೆಯೂ ದುಷ್ಪರಿಣಾಮ ಆಗುತ್ತದೆ. ಹೀಗಾಗಿ ಇದನ್ನು ಬಡವರ ಹೊಟ್ಟೆಕಿಚ್ಚು ಎಂದು ತಳ್ಳಿಹಾಕುವಂತಿಲ್ಲ. ರಿಲಯನ್ಸ್ ಕಂಪೆನಿಯ ಒಡೆಯ ಮುಖೇಶ್ ಅಂಬಾನಿ ಮುಂಬೈಯಲ್ಲಿ 27 ಅಂತಸ್ತುಗಳುಳ್ಳ 4,00,000 ಚದರ ಮೀಟರ್ ವಿಸ್ತೀರ್ಣದ 6,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿದ ಭಾರೀ ಬಂಗಲೆಯನ್ನು ಈ ದೃಷ್ಟಿಯಿಂದ ನೋಡಬೇಕು. ಕೆಲವರು ಇದನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುತ್ತಾರೆ. ಇದರಿಂದಾಗಿ ಉದ್ಯೋಗಾವಕಾಶ ಹೆಚ್ಚುತ್ತದೆ, ಹೆಚ್ಚು ಹೆಚ್ಚು ನಿರ್ಮಾಣ ಚಟುವಟಿಕೆ ನಡೆದಷ್ಟೂ ಆರ್ಥಿಕತೆಗೆ ಹೆಚ್ಚಿನ ಬಲ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ. ಇದು ನಿಜವಾಗಿಯೂ ಒಂದು ಅತ್ಯಂತ ಬೇಜವಾಬ್ದಾರಿಯ ಮೂರ್ಖ ಚಿಂತನೆಯಾಗಿದೆ. ಈ ರೀತಿಯ ಚಿಂತನೆ ಆತ್ಮಹತ್ಯಾಕಾರಕ ಎಂದೇ ಹೇಳಬೇಕಾಗುತ್ತದೆ. ಇದು ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳ, ಎಲ್ಲ ಮಾನವರ ಹಿತಚಿಂತನೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡುವ ಚಿಂತನೆ ಆಗಿರುವುದಿಲ್ಲ.

   ಹೆಚ್ಚು ಹೆಚ್ಚು ಐಶಾರಾಮಿ ವಾಹನಗಳ ತಯಾರಿಕೆ ಹಾಗೂ ಬಳಕೆ ಕೂಡ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಉದಾಹರಣೆಗೆ ಮನುಷ್ಯನ ಅನುಕೂಲಕ್ಕೆ ಒಂದು ಕುಟುಂಬಕ್ಕೆ ಒಂದು ಸಾಮಾನ್ಯ ಕಾರು ಧಾರಾಳ ಸಾಕು ಅದೂ ಹೆಚ್ಚೆಂದರೆ ಏಳೆಂಟು ಲಕ್ಷ ಬೆಲೆಯ ಕಾರು ಸಾಕು. ಆದರೆ ಇಂದು ಶ್ರೀಮಂತರು 20 ಲಕ್ಷ, 50 ಲಕ್ಷ ಬೆಲೆಯ ಬೃಹದಾಕಾರದ ಕಾರುಗಳನ್ನು ಕೊಂಡು ಆ ಕಾರುಗಳಲ್ಲಿ ಒಬ್ಬನೇ ಓಡಾಡುತ್ತಾ ಪರಿಸರಕ್ಕೆ ಅಪಾರ ಹಾನಿ ಮಾಡುತ್ತಿದ್ದಾರೆ. ಇಂಥ ಹಾನಿಯನ್ನು ಮನುಷ್ಯನು ವಿವೇಕವನ್ನು ಬಳಸಿದರೆ ತಡೆಯಲು ಸಾಧ್ಯ. ಆದರೆ ಪ್ರಪಂಚದಲ್ಲಿ ಇರುವ ಶ್ರೀಮಂತರಿಗೆ ಇಂದು ವಿವೇಕದ ಅಭಾವ ಇದೆ. ದೊಡ್ಡ ದೊಡ್ಡ ಐಶಾರಾಮಿ ಕಾರುಗಳು ಮಾನವನಿಗೆ ಅಗತ್ಯವೇ ಇಲ್ಲ. ದೊಡ್ಡ ದೊಡ್ಡ ಕಾರುಗಳ ಉತ್ಪಾದನೆ ಹಾಗೂ ಬಳಕೆ ಹೆಚ್ಚಾದಷ್ಟೂ ಪರಿಸರಕ್ಕೆ ಹಾನಿ ತಪ್ಪಿದ್ದಲ್ಲ. ಹೇಗೆಂದರೆ ದೊಡ್ಡ ದೊಡ್ಡ ಐಶಾರಾಮಿ ಕಾರುಗಳನ್ನು ತಯಾರಿಸಲು ಕಬ್ಬಿಣ, ೈಬರ್, ಪ್ಲಾಸ್ಟಿಕ್ ಇನ್ನಿತರ ಘಟಕಗಳು ಹೆಚ್ಚು ಹೆಚ್ಚು ಬೇಕಾಗುತ್ತದೆ. ಇವುಗಳನ್ನು ಹೆಚ್ಚು ಹೆಚ್ಚು ಬಳಸಿದಷ್ಟೂ ಅದರ ದುಷ್ಪರಿಣಾಮ ಪರಿಸರದ ಮೇಲೆ ಆಗುತ್ತದೆ ಎಂಬ ಚಿಂತನೆ ಬಂಡವಾಳಶಾಹಿ ಆರ್ಥಿಕ ಚಿಂತಕರಿಗೆ ಇಲ್ಲ. ಅವರ ದೃಷ್ಟಿ ಇರುವುದು ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉದ್ಯೋಗಾವಕಾಶ, ಜನರು ಹೆಚ್ಚು ಹೆಚ್ಚು ಶ್ರೀಮಂತರಾಗುವುದು ಮಾತ್ರ. ಹೀಗಾದರೆ ಮಾತ್ರ ಅದು ಅಭಿವೃದ್ಧಿ ಎಂಬುದು ಬಂಡವಾಳಶಾಹಿ ಆರ್ಥಿಕ ಚಿಂತಕರ ದೂರದೃಷ್ಟಿಯಿಲ್ಲದ ಚಿಂತನೆಯಾಗಿದೆ. ಯೋಚನಾಶಕ್ತಿಯಿರುವ ಏಕೈಕ ಪ್ರಾಣಿಯಾದ ಮಾನವನಿಗೆ ಭಾರೀ ಐಶಾರಾಮಿ ಬಂಗಲೆ, ಐಶಾರಾಮಿ ಕಾರುಗಳು ಇಲ್ಲದೆಯೂ ಆರಾಮವಾಗಿ ಬದುಕಬಹುದು ಎಂಬ ಚಿಂತನೆ ಇಲ್ಲದೆ ಇರುವುದು ಶೋಚನೀಯ.

   ಮನುಷ್ಯನ ವಿವೇಕ ಮರೆಯಾಗಿ ಪ್ರದರ್ಶನದ ಹುಚ್ಚು ಹೆಚ್ಚಾಗಲು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಕಾರಣವಾಗುತ್ತಿದ್ದು ಮೇರೆಯಿಲ್ಲದ ಭೋಗ ಜೀವನ ಜಗತ್ತಿನಾದ್ಯಂತ ಹೆಚ್ಚುತ್ತಿದೆ. ಈ ರೀತಿಯ ಅಭಿವೃದ್ಧಿಯ ಹುಚ್ಚು ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಿದೆ. ಬಹಳಷ್ಟು ಶ್ರೀಮಂತರಿಗೆ ವಿವೇಕ ಪ್ರಜ್ಞೆ ಇಲ್ಲದೆ ಇರುವುದರಿಂದಾಗಿ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ತೊಂದರೆಯಾಗುವ ಸಂಭವ ಕಂಡುಬರುತ್ತಿದೆ. 

 ಭೂಮಿಯ ಉಷ್ಣಾಂಶ ಏರುತ್ತಿರುವುದರಿಂದಾಗಿ ಹಲವು ಪ್ರಾಣಿ, ಸಸ್ಯ ಪ್ರಭೇದಗಳು ಕಣ್ಮರೆಯಾಗುತ್ತಿವೆ. ಎಲ್ಲರ ಹಿತಚಿಂತನೆ ಮಾಡದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯೇ ಇದಕ್ಕೆ ಕಾರಣ. ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಶ್ರೀಮಂತರಿಗೆ ಮಾತ್ರ ಗೌರವ ಇರುವುದರಿಂದಾಗಿ ಎಲ್ಲರೂ ಶ್ರೀಮಂತರಾಗುವ ಹುಚ್ಚು ಓಟದಲ್ಲಿ ಸ್ಪರ್ಸುತ್ತಿದ್ದಾರೆ. ಈ ಹುಚ್ಚು ಸ್ಪರ್ಧೆಯ ಪರಿಣಾಮವಾಗಿ ಆವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳು, ಐಶಾರಾಮಿ ವಾಹನಗಳನ್ನು ಹೊಂದುವ ಚಟ ಮನುಷ್ಯನಲ್ಲಿ ಬೆಳೆಯುತ್ತಿದೆ. ಇದು ಆವಶ್ಯಕತೆ ಇದ್ದು ನಡೆಯುವ ಓಟವಲ್ಲ ತಾನು ಇತರರಿಗಿಂತ ಮೇಲು ಎಂದು ತೋರಿಸುವ ಸಲುವಾಗಿ ನಡೆಯುತ್ತಿರುವ ಮಾನವನ ಅವಿವೇಕವಾಗಿದೆ. ಬಂಡವಾಳಶಾಹಿ ವ್ಯವಸ್ಥೆಯ ಚಿಂತಕರು ಲಂಗುಲಗಾಮಿಲ್ಲದ ಅಭಿವೃದ್ಧಿಯ ಹುಚ್ಚನ್ನು ನಿಯಂತ್ರಿಸದೆ ಇದ್ದರೆ ಭವಿಷ್ಯ ಅದರಲ್ಲೂ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಬಹುದು.

    ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಬಳಸಿ ಬಿಸಾಡುವುದು ಅಭಿವೃದ್ಧಿಯ ಮಾನದಂಡವಾಗಿದೆ. ಇದರಿಂದ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ, ಬೆಳವಣಿಗೆಯ ದರ ಹೆಚ್ಚುತ್ತದೆ ಎಂಬುದು ಈ ತರಹದ ಅಭಿವೃದ್ಧಿಯ ಸಮರ್ಥಕರ ದೂರದೃಷ್ಟಿಯಿಲ್ಲದ ವಾದವಾಗಿದೆ. ಹೀಗಾಗಿ ಮಾನವನ ಸುಗಮ ಜೀವನಕ್ಕೆ ಅನಿವಾರ್ಯವಲ್ಲದ ಹಲವು ವಸ್ತುಗಳು ಇಂದು ಮಾರುಕಟ್ಟೆಯಲ್ಲಿದ್ದು ಅವುಗಳ ಮಾರಾಟಕ್ಕಾಗಿ ಬಂಡವಾಳಶಾಹಿಗಳಿಂದ ನಿಯಂತ್ರಿಸಲ್ಪಡುವ ಟಿವಿ ಮಾಧ್ಯಮ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ. ಜಾಹೀರಾತುಗಳೇ ಟಿವಿ ಮಾಧ್ಯಮದ ಜೀವಾಳವಾಗಿರುವ ಕಾರಣ ನೈತಿಕತೆ ಎಂಬುದು ಟಿವಿ ಮಾಧ್ಯಮದಿಂದ ಬಹುತೇಕ ಕಣ್ಮರೆಯಾಗಿದೆ. ಹೀಗಾಗಿ ಆವಶ್ಯಕವಲ್ಲದ ಹಲವು ಸಾಮಗ್ರಿಗಳ ಜಾಹೀರಾತುಗಳು ಟಿವಿ ಹಾಗೂ ಇತರ ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದು ಜನರ ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸಿ ಪರಿಸರದ ಮೇಲೆ ಹಾನಿ ಮಾಡಲು ಪರೋಕ್ಷ ಕಾರಣವಾಗಿದೆ. ನಗರಗಳಲ್ಲಿ ಹೆಚ್ಚು ಹೆಚ್ಚು ವಿದ್ಯುತ್ ಬಳಕೆ ಮಾಡಿದಷ್ಟೂ ಅದು ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ. 

ಆವಶ್ಯಕತೆ ಇಲ್ಲದಿದ್ದರೂ ನಗರಗಳಲ್ಲಿ ವಿದ್ಯುತ್ ದೀಪಗಳು ಹಗಲು ರಾತ್ರಿ ಎಂಬ ಪರಿವೆ ಇಲ್ಲದೆ ಉರಿಯುತ್ತಿರುತ್ತವೆ. ಚಳಿಗಾಲ, ಮಳೆಗಾಲದಲ್ಲಿಯೂ ಸೆಕೆ ಇಲ್ಲದಿದ್ದರೂ ಹವಾನಿಯಂತ್ರಣ ಸಾಧನ ಬಳಕೆ, ಪ್ಯಾನುಗಳ ಬಳಕೆ ನಿರಂತರವಾಗಿ ನಡೆಯುತ್ತಿರುತ್ತದೆ ಮತ್ತು ಈ ರೀತಿಯ ಜೀವನವೇ ಶ್ರೇಷ್ಠ ಎಂಬ ಚಿಂತನೆಯನ್ನು ಬಂಡವಾಳಶಾಹಿ ವ್ಯವಸ್ಥೆ ಜನರಲ್ಲಿ ಬಿತ್ತಿ ಬೆಳೆಸಿದೆ. ಹೀಗಾಗಿ ಎಷ್ಟು ವಿದ್ಯುತ್ ಉತ್ಪಾದನೆ ಆದರೂ ಸಾಕಾಗುವುದಿಲ್ಲ. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಅಗ್ಗದ ವಿದ್ಯುತ್ ಉತ್ಪಾದಿಸಲು ಉಷ್ಣ ವಿದ್ಯುತ್ ಒಂದೇ ಮಾರ್ಗವಾಗಿರುವುದರಿಂದ ವಾತಾವರಣದಲ್ಲಿ ಹಸಿರು ಮನೆ ಅನಿಲ ಪರಿಣಾಮ ಉಂಟು ಮಾಡುವ ಇಂಗಾಲದ ಅನಿಲಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಯಾವುದು ಜೀವನಕ್ಕೆ ಆವಶ್ಯಕ, ಯಾವುದಕ್ಕೆಜೀವನದಲ್ಲಿ ಮಹತ್ವ ನೀಡಬೇಕು ಎಂಬುದು ಅತ್ಯಂತ ಹೆಚ್ಚು ವಿದ್ಯಾವಂತ ಹಾಗೂ ಉನ್ನತ ಹುದ್ದೆಗಳಲ್ಲಿ ಇರುವ ಜನತೆಗೂ ತಿಳಿಯದೆ ಹೆಚ್ಚು ಹೆಚ್ಚು ಹಣ ಮಾಡುವುದು, ಹೆಚ್ಚು ಹೆಚ್ಚು ಆಸ್ತಿಪಾಸ್ತಿ ಮಾಡಿಡುವುದು, ಹೆಚ್ಚು ಹೆಚ್ಚು ಭೋಗಸಾಧನಗಳನ್ನು ಕೊಂಡು ಪೇರಿಸುವುದು ಶ್ರೇಷ್ಠ ಜೀವನ ವಿಧಾನ ಎಂಬ ಸಮೂಹ ಸನ್ನಿಯನ್ನು ಆಧುನಿಕ ಬಂಡವಾಳಶಾಹಿ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಹುಟ್ಟು ಹಾಕಿದೆ. ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆ ಹಾಗೂ ಮುಕ್ತ ಮಾರುಕಟ್ಟೆಯು ಹುಟ್ಟು ಹಾಕಿರುವ ಎಂದೆಂದೂ ತೀರದ ದಾಹದ ಬಗ್ಗೆ ಮರುಚಿಂತನೆ ಮಾಡದೆ ಇದ್ದರೆ ಪ್ರಾಕೃತಿಕ ವಿಕೋಪಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿ ಜನರ ಜೀವನ ದುರ್ಬರವಾಗಲಿದೆ. ಇದರ ಮುನ್ಸೂಚನೆ ಈಗಾಗಲೇ ಹೆಚ್ಚುತ್ತಿರುವ ಬರಗಾಲ, ಚಂಡಮಾರುತ, ಸುಂಟರಗಾಳಿ, ಅತಿವೃಷ್ಟಿ, ವಿಪರೀತ ಸೆಕೆ, ಹೆಚ್ಚುತ್ತಿರುವ ಕಾಡ್ಗಿಚ್ಚು ಮೊದಲಾದವುಗಳ ರೂಪದಲ್ಲಿ ಆರಂಭವಾಗಿದೆ. ಆದರೂ ಅಭಿವೃದ್ಧಿಯ ಹುಚ್ಚಿಗೆ ಬಲಿಯಾಗಿರುವ ನಮಗೆ ಈ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ. ಇದನ್ನೆಲ್ಲಾ ಜನತೆಯ ಮುಂದೆ ಚರ್ಚಿಸಿ ಜಾಗೃತಿ ಮೂಡಿಸಬೇಕಾಗಿರುವ ಮಾಧ್ಯಮಗಳೇ ಬಂಡವಾಳಶಾಹಿ ಹಾಗೂ ಜಾಹೀರಾತುಗಳ ಕೃಪೆಯಲ್ಲಿ ಬದುಕಿರುವುದರಿಂದ ಜನರನ್ನು ಎಚ್ಚರಿಸುವವರೇ ಇಂದು ಇಲ್ಲವಾಗಿದ್ದಾರೆ. ಈ ಬಗ್ಗೆ ಪರ್ಯಾಯ ಮಾಧ್ಯಮಗಳು ಇಂದು ಚಿಂತಿಸುವುದು ಅಗತ್ಯವಿದೆ.

ಮೋದಿಗೆ ನರೇಂದ್ರನ ಹಾದಿ ಕ್ಷೇಮಕರ, ಭಾರತಕ್ಕೂ ಹಿತಕರಜ.ಹೋ. ನಾರಾಯಣಸ್ವಾಮಿಮೋದಿಗೆ ನರೇಂದ್ರನ ಹಾದಿ ಕ್ಷೇಮಕರ, ಭಾರತಕ್ಕೂ ಹಿತಕರ

ಸ್ವಾಮಿ ವಿವೇಕಾನಂದರಾಗುವ ಮೊದಲು ನರೇಂದ್ರನಾಥದತ್ತ ಸರ್ವಧರ್ಮ ಸಮನ್ವಯಾಚಾರ್ಯ ಶ್ರೀ ರಾಮಕೃಷ್ಣ ಪರಮಹಂಸರಿಂದ ಪ್ರಭಾವಿತರಾದವರು. ರಾಮಕೃಷ್ಣ ಪರಮ ಹಂಸರು ಕಾಲದಲ್ಲಿ ಲೀನವಾದ ಮೇಲೆ ನರೇಂದ್ರ ನಾಥದತ್ತ ಪರಿವ್ರಾಜಕನಾಗಿ ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ ಇಡೀ ಭಾರತವನ್ನು ಸುತ್ತಿ ಆಡುವ ಅದರ ನಾಡಿಯ ಮಿಡಿತವನ್ನು ಅಂತರ್‌ವೀಕ್ಷಣೆಯಿಂದ ಗ್ರಹಿಸಿ ದೀಪ್ತಗೊಂಡವರು.


ನರೇಂದ್ರನಾಥದತ್ತರ ಪರಿವ್ರಾಜಕ ಯಾತ್ರೆ ಕೇವಲ ಯಾತ್ರೆಯಾಗಿರಲಿಲ್ಲ. ಹಿಮಾಲಯ ಶಿಖರದ ಔನ್ನತ್ಯದಲ್ಲಿ ಕಂಡ ಭವ್ಯ ಸಂಸ್ಕೃತಿಯು ಒಂದಾದರೆ ಆ ಸಂಸ್ಕೃತಿಯನ್ನೊಳಗೊಂಡ ಭರತ ಭೂಮಿಯಲ್ಲಿ ತಾಂಡವವಾಡುತ್ತಿದ್ದ ದುಃಖ ದಾರಿದ್ರಗಳ, ಅಜ್ಞಾನ ಅಂಧಕಾರ ಗಳ, ಮನುಷ್ಯರನ್ನು ಪಶು ಪ್ರಾಣಿಗಳಿಗೂ ಕಡೆಯಾಗಿ ಕಾಣುತ್ತಿದ್ದ ಪುರೋಹಿತಶಾಹಿಯ ಉಪಟಳವನ್ನು ಪ್ರತ್ಯಕ್ಷ ದರ್ಶಿಸಿದರು. ದೇವರು ಧರ್ಮದ ಹೆಸರಿನಲ್ಲಿ ಮುಗ್ಧ ಜನರನ್ನು ಶೋಷಿಸುತ್ತಿದ್ದುದನ್ನು ಕಂಡು ಕುದಿದರು, ಮಮ್ಮಲ ಮರುಗಿದರು. ಯಾವ ತಪ್ಪನ್ನೂ ಮಾಡದೆ ಯಾತನೆಗೆ ಸಿಲುಕಿದ್ದವರನ್ನು ಕಂಡು ಕರಗಿದರು. ಇದೊಂದು ನಾಡೋ ಇಲ್ಲಾ ನರಕದ ಬೀಡೋ ಎಂದು ನೊಂದು ನಲುಗಿದರು. ಅವರ ಕಣ್ಣ ಮುಂದೆ ಕಟ್ಟಿದ್ದ ಭವ್ಯ ಭಾರತದ ಆದರ್ಶ ಛಿದ್ರವಾಯಿತು. ಬಡತನ, ಅಜ್ಞಾನ, ರೋಗ ರುಜಿನಗಳು ಜನಸಾಮಾನ್ಯರನ್ನು ಆವರಿಸಿ ಕಿತ್ತು ತಿನ್ನುತ್ತಿರುವ ದೃಶ್ಯ ಕಣ್ಮುಂದೆ ಕಟ್ಟಿತು. ಸನಾತನ ಸಂಸ್ಕೃತಿಯನ್ನು ನಾಲಿಗೆಯ ತುದಿಯಲ್ಲಿ ವಟಗುಡುತ್ತ ಮೂಢನಂಬಿಕೆಗಳನ್ನು ಬಿತ್ತಿ ಅಜ್ಞಾನ ಅಂಧಕಾರಗಳತ್ತ ಜನಸಾಮಾನ್ಯರನ್ನು ತಳ್ಳಿ ಸ್ವಾರ್ಥ ಸಾಸಿಕೊಳ್ಳುತ್ತಿದ್ದ ಪುರೋಹಿತರನ್ನು ಕಂಡು ಕುದಿದರು. ‘‘ಎಲ್ಲಿಯವರೆಗೆ ಅಜ್ಞಾನ, ಬಡತನ, ಮೂಢನಂಬಿಕೆಗಳು ಇರುತ್ತದೆಯೋ, ಪುರೋಹಿತರು ಬಡಜನರ ರಕ್ತವನ್ನು ಜಿಗಣೆಗಳಂತೆ ಹೀರುತ್ತಿರುವರೋ ಅಲ್ಲಿಯವರೆಗೆ ಓ ಭಾರತಮಾತೆ ನಿನಗೆ ದಾಸ್ಯ ತಪ್ಪದು’’ ಎಂದು ಕಣ್ಣೀರು ಕರೆದರು. ಬಿಡುಗಡೆಯ ದಾರಿಗಾಗಿ ಪರಿತಪಿಸಿದರು. ಅಡಿಯಿಂದ ಮುಡಿವರೆಗೆ ಸುಡುತ್ತಿದ್ದ ತಾಪವನ್ನು ತಾಳಲಾರದೆ ಉಕ್ಕಿ ಭೋರ್ಗರೆಯುತ್ತಿದ್ದ ಸಮುದ್ರಕ್ಕೆ ಧುಡುಮ್ಮನೆ ಧುಮುಕಿ ಈಜಿ ಕನ್ಯಾಕುಮಾರಿಯ ಬಂಡೆಯನ್ನೇರಿದರು. ಬಿಡುಗಡೆಯ ದಾರಿಗಾಗಿ ಧ್ಯಾನ ಮಗ್ನರಾಗಿ ಕುಳಿತರು. ಅವರ ಹೃದಯ ಸಾಗರದಲ್ಲಿ ಅಲ್ಲೋಲ ಕಲ್ಲೋಲವಾಗಿ ಭೋರ್ಗರೆದು ಬಂದಪ್ಪಳಿಸಿದ ವಿಚಾರ ತಂರಗಗಳಾವುವು?

‘‘ತಾಯಿ, ನಿನ್ನ ಸೌಂದರ್ಯವನ್ನು ಕುರೂಪ ಗೈದವರನ್ನು ಮನ್ನಿಸು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಹಿಂದೂ, ಮುಸಲ್ಮಾನ, ಪಾರಸಿ, ಕ್ರೈಸ್ತ, ಇನ್ನೂ ನೂರಾರು ಭೇದಗಳನ್ನು ಕಲ್ಪಿಸಿಕೊಟ್ಟರು. ಗೊಡ್ಡು ಪದ್ದತಿಯನ್ನೇ ಧರ್ಮವೆಂದು ಬೋಸಿ ನಿನ್ನನ್ನು ಪರಕೀಯರಿಗೆ ದಾಸಿಯನ್ನಾಗಿಸಿದರು. ನಿನ್ನ ಐಶ್ವರ್ಯ, ವಿದ್ವತ್ತು, ಧರ್ಮ ಎಲ್ಲಿ ಹೋಯಿತು? ಪುರೋಹಿತರ ಉಪಟಳದಿಂದ, ಜಾತಿಭೇದಗಳ ಕ್ರೌರ್ಯದಿಂದ, ಪಾಮರರ ಮೂರ್ಖತನದಿಂದ ಸರ್ವವೂ ಸರ್ವನಾಶವಾಯಿತು.ಮುಷ್ಠಿ ಹಿಡಿಯದಂತೆ ಅಶಕ್ತರನ್ನಾಗಿಸಿ ಅಂಗಲಾಚುವಂತೆ ಮಾಡಿದ್ದೇವೆ.ಅಂಗೈಯಲ್ಲಿ ಅನಂತವನ್ನು ತೋರಿಸಿದ್ದೇವೆ! ಮೋಸ ಮೋಸ ಮೋಸ ಎಲ್ಲೆಲ್ಲೂ ಮೋಸ ವಂಚನೆ! ನಾನು ಧೃತಿಗೆಟ್ಟ ದರಿದ್ರರಿಗೆ ನೇರವಾಗಿ ಧೈರ್ಯ ತುಂಬುತ್ತೇನೆ. ಅವರ ಸೇವೆ ಮಾಡುತ್ತೇನೆ ಪಶುತ್ವಕ್ಕಿಳಿದಿರುವವರನ್ನು ಕನಿಷ್ಠ ಮನುಷ್ಯತ್ವಕ್ಕೆ ಎತ್ತುತ್ತೇನೆ. ಅದಕ್ಕಾಗಿ ತುಡಿದು ದುಡಿಯುತ್ತೇನೆ, ಮಡಿಯುತ್ತೇನೆ’’

ಈ ವಜ್ರ ಸಂಕಲ್ಪವನ್ನು ಹೃದಯದಲ್ಲಿ ಹೊತ್ತು ಉತ್ತರಾಭಿಮುಖವಾಗಿ ನಡೆದರು. ನರೇಂದ್ರನಾಥದತ್ತ ಹೈದರಾಬಾದಿಗೆ ಬಂದ ಸುದ್ದಿ ತಿಳಿದ ಖೇತ್ರಿ ಮಹಾರಾಜರು ಮಗನ ಹುಟ್ಟುಹಬ್ಬಕ್ಕೆ ಅವರನ್ನು ಆಹ್ವಾನಿಸಿ ವಿವೇಕಾನಂದ ಎಂದು ಕರೆದು ಆ ಹೆಸರನ್ನು ಸ್ಥಿರಗೊಳಿಸಿದರು.

 ಪರಿವ್ರಾಜಕರಾಗಿದ್ದಾಗ ವಿವೇಕಾನಂದರು ಕಣ್ಣಾರೆ ಕಂಡ ಭಾರತದ ವಾಸ್ತವ ಚಿತ್ರಣ ಶತಮಾನ ಕಳೆದರೂ ಕಿಂಚಿತ್ತೂ ಕರಗದೆ ಅಂದಿನಂತೆ ಇಂದೂ ತಾಂಡವವಾಡುತ್ತಿದೆ. ಮೇಲ್ನೋಟಕ್ಕೆ ಅಭಿವೃದ್ಧಿ ಎಂದು ಕಂಡರೂ ಅಂತರಂಗದಲ್ಲಿ ಅಸಹನೀಯವಾದ ಅಮಾನವೀಯ ಹೀನಕೃತ್ಯಗಳ ನಗ್ನ ನರ್ತನ ನಿರಂತರ ನಡೆದಿದೆ. ಅನಕ್ಷರತೆ, ಅಕ್ಷರಸ್ತ ಅನಕ್ಷರತೆ, ಅಜ್ಞಾನ, ಮೂಢನಂಬಿಕೆಗಳಿಂದಾಗಿ ವೌಢ್ಯ ಮನಮನದಲ್ಲಿ ಮಡುಗಟ್ಟಿದೆ. ಮೋಸ, ವಂಚನೆ, ಸುಲಿಗೆ, ಭ್ರಷ್ಟಾಚಾರ ನಿರಾಯಾಸವಾಗಿ ಉಲ್ಬಣಗೊಳ್ಳುತ್ತಿದೆ. ಬದಲಾವಣೆಗೆ ಕಿಂಚಿತ್ತೂ ತೆರೆದುಕೊಳ್ಳದ ಪುರೋಹಿತಶಾಹಿ ಇದಕ್ಕೆ ಪ್ರಚೋದಿಸುತ್ತ ಇಂಧನ ಸುರಿಯುತ್ತಿದೆ. ಮನುಕುಲದ ಮುನ್ನಡೆಗೆ ಮಾರಕವಾದ ಈ ಪುರೋಹಿತ ಶಾಹಿಯನ್ನು ಕುರಿತು ವಿವೇಕಾನಂದರು ‘‘ಬನ್ನಿ, ಮನುಷ್ಯರಾಗಿ! ಪ್ರಗತಿಗೆ ಯಾವಾಗಲೂ ವಿರುದ್ಧವಾಗಿರುವ ಪುರೋಹಿತರನ್ನು ಒದ್ದೋಡಿಸಿ. ಅವರೆಂದಿಗೂ ತಿದ್ದಿಕೊಳ್ಳುವುದಿಲ್ಲ. ಅವರ ಹೃದಯ ಎಂದಿಗೂ ವಿಶಾಲ ಆಗುವುದಿಲ್ಲ. ಶತಶತಮಾನಗಳಿಂದ ಬಂದ ಮೂಢನಂಬಿಕೆ ಮತ್ತು ದಬ್ಬಾಳಿಕೆಯ ಸಂತಾನ ಅವರು! ಮೊದಲು ಪುರೋಹಿತ ಶಾಹಿಯನ್ನು ಬೇರು ಸಹಿತ ಕಿತ್ತೊಗೆಯಿರಿ. ಬನ್ನಿ, ಮನುಷ್ಯರಾಗಿ, ಮುಂದೆ ಬನ್ನಿ. ಸಂಕುಚಿತ ಬಿಲಗಳಿಂದ ಹೊರಬನ್ನಿ, ಕಣ್ಣುಬಿಟ್ಟು ಹೊರಗೆ ನೋಡಿ. ಇತರ ಜನಾಂಗಗಳು ಹೇಗೆ ಮುಂದುವರಿಯುತ್ತಿವೆ ಎಂಬುದನ್ನು ನೋಡಿ. ನೀವು ಮನುಷ್ಯರನ್ನು ಪ್ರೀತಿಸುವಿರಾ? ನಿಮ್ಮ ದೇಶವನ್ನು ಪ್ರೀತಿಸುವಿರಾ? ಹಾಗಾದರೆ ಬನ್ನಿ, ಉನ್ನತವಾದ ಕೆಲಸಗಳಿಗಾಗಿ ನಾವು ಹೋರಾಡುವ’’ಎಂದು ಕೊಟ್ಟ ಅಮೃತೋಪಮ ಕರೆಯನ್ನು ಇನ್ನಾದರೂ ನಾವು ಮಾನ್ಯ ಮಾಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯ ಮುಂದೆ ಇರುವ ಸವಾಲುಗಳು ಹಲವಾರು. ಅವುಗಳಿಗೆ ಬಹುತೇಕ ಪರಿಹಾರಗಳು ವಿವೇಕಾನಂದರ ವಿಚಾರಗಳಲ್ಲಿವೆ. ಹಾಗಾಗಿ ನರೇಂದ್ರ ಮೋದಿಗೆ ನರೇಂದ್ರನಾಥದತ್ತನ ಹಾದಿ ಕ್ಷೇಮವೂ ಭಾರತಕ್ಕೆ ಹಿತಕರವೂ ಆಗಿದೆ. ಈಗ ಬೇಕಾಗಿರುವುದು ಅದನ್ನು ಅನುಸರಿಸುವ ಉದಾತ್ತ ಮನಸ್ಸು ಅಷ್ಟೆ.

1984ರಿಂದ ಏಕೈಕ ಸ್ಥಿರ ಸರಕಾರವಿರಲಿಲ್ಲ. ಈಗ ವಿರೋಧಪಕ್ಷವೂ ಇರದಂತೆ ಬಿಜೆಪಿ ಏಕೈಕ ಪಕ್ಷವಾಗಿ ಹೊರಹೊಮ್ಮಿದೆ. ಹಾಗಾಗಿ ಅದರ ಜವಾಬ್ದಾರಿ ಗುರುತರವಾದುದು. ನರೇಂದ್ರ ಮೋದಿಯ ಮೇಲೆ ಭಾರತದ ಜನಮಾನಸ ಇಟ್ಟಿರುವ ಭರವಸೆ ಹುಸಿಯಾಗದಂತೆ ಕಾರ್ಯ ನಿರ್ವಹಿಸಬೇಕಾದ ಜವಾಬ್ದಾರಿಯುತ ಹೊಣೆ ಇದೆ. ಸ್ಪಷ್ಟ ಬಹುಮತ ಎಂದರೆ ಎರಡು ಅಲುಗಿನ ಕತ್ತಿ ಯಂತೆ. ಅದನ್ನು ಹೇಗಾದರೂ ಬಳಸಬಹುದು. ಅದು ಮಾನವೀಯ ನೆಲೆಯದಾದರೆ ಆನಂದದ ಹೊನಲು, ಅಮಾನವೀಯವಾದರೆ ನೆತ್ತರ ಕಡಲು. ಹೊನಲಾಗಿಸುವ ಇಲ್ಲಾ ನೆತ್ತರ ಕಡಲಾಗಿಸುವ ಎರಡೂ ಆಯ್ಕೆಗಳು ಈಗ ನರೇಂದ್ರ ಮೋದಿಯ ವಶದಲ್ಲಿವೆ. ಹೊನಲಾಗುವ ಹಾದಿ ಹಿಡಿಯುತ್ತದೆ ಎಂದು ಆಶಿಸೋಣ.

ಧಾರ್ಮಿಕ ಹೊಣೆಗಾರಿಕೆ: ವಿವೇಕಾನಂದರು ‘‘ನಮ್ಮ ಮಾತೃ ಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮಿದುಳು ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ’’ ಎಂದಿದ್ದಾರೆ. (7-244)

ಸರ್ವಧರ್ಮ ಸಮನ್ವಯದ ರಾಷ್ಟ್ರ ಭೂಮಿಯ ಮೇಲಿದ್ದು ಅದು ಭಾರತ ಒಂದೇ. ಅದು ಅದರ ಹೆಗ್ಗಳಿಕೆ. ಅದನ್ನು ಕಾಪಾಡಿ ಕೊಳ್ಳುವುದರಲ್ಲಿಯೇ ಹಿರಿತನವಿದೆ.ವೈವಿಧ್ಯತೆಯೇ ಸೃಷ್ಟಿಯ ರಹಸ್ಯ. ಅದು ನಾಶವಾದರೆ ಸೌಂದರ್ಯವೇ ನಾಶವಾದಂತೆ. ಇದರ ರಹಸ್ಯವನ್ನುಸಾಕ್ಷಾತ್ಕರಿಸಿಕೊಂಡ ವಿವೇಕಾನಂದರು‘‘ಪ್ರತಿಯೊಬ್ಬರೂ ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನು ಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ. ಆಗ ಧರ್ಮ ಮತ್ತು ಆಧ್ಯಾತ್ಮಿಕ ಭಾವನೆ ನಾಶವಾಗುವುದು (5.29)’’ಎಂದಿದ್ದಾರೆ.

ವಿವೇಕಾನಂದರ ವಾಣಿಯ ಈ ಸೂಕ್ಷ್ಮವನ್ನು ನರೇಂದ್ರ ಮೋದಿ ಗ್ರಹಿಸಬೇಕು. ಧರ್ಮ ಎಂದರೆ ಕೊಲ್ಲುವುದಲ್ಲ ಕೊಲ್ಲುವ ಮನಸ್ಸನ್ನು ಗೆಲ್ಲುವುದು. ಧರ್ಮದ ಹೆಸರಿನಲ್ಲಿ ನರಹತ್ಯೆಗೈದ ಜರ್ಮನಿಯ ಹಿಟ್ಲರನ ದಾರುಣ ಅಂತ್ಯ ಕಣ್ಣ ಮುಂದಿದೆ. ಹಾಗಾಗಿ ನರೇಂದ್ರ ಮೋದಿ ಧರ್ಮ ಸಮನ್ವಯದ ಹೆದ್ದಾರಿಯಲ್ಲಿ ಮುನ್ನಡೆಯುವುದು ಸರ್ವವಿಧದಲ್ಲೂ ಹಿತಕರವಾದುದು. ಅಮಾನವೀಯವಾಗಿ ಕೆಡವಿದ ಬಾಬರಿ ಮಸೀದಿಯನ್ನು ಪುನ ನಿರ್ಮಿಸಿ ಅದರ ಪಕ್ಕದಲ್ಲಿ ರಾಮಮಂದಿರವನ್ನು ಕಟ್ಟಿ ಧರ್ಮ ಸಮನ್ವಯವನ್ನು ಜಗತ್ತಿಗೆ ಸಾರಬೇಕು. ಹಾಗೆ ಮಾಡುವುದು ವಿಶ್ವದ ಆದರ್ಶವಾಗುತ್ತದೆ.

ಮಾಯಾ ಏಂಜೆಲೋ ; ಎರಡು ಕವಿತೆಗಳು

ಮಾಯಾ ಏಂಜೆಲೋ
ಅನುವಾದ: ಎಮ್‌.ಎಸ್‌.ರುದ್ರೇಶ್ವರ ಸ್ವಾಮಿ


ನಿರಾಕರಣೆ


ಪ್ರಿಯನೇ,
ಅದಾವ ಜನ್ಮದಲ್ಲಿ,
ಮತ್ತಿನ್ಯಾವ ಲೋಕದಲ್ಲಿ
ನಿನ್ನ ತುಟಿ, ಕೈಗಳು
ಭಾವನೆಗಳಿಲ್ಲದ ಎದೆಗಾರಿಕೆಯ ನಗೆ
ನನಗೆ ಗೊತ್ತಾಗಿದ್ದು.
ಸಿಹಿಯಾದ ಆ ಹೆಚ್ಚುಗಾರಿಕೆಯನ್ನೆ
ಬಹಳವಾಗಿ ನಾನು
ಪ್ರೀತಿಸುವುದು.
ಏನಿದೆ ಗ್ಯಾರಂಟಿ
ಮತ್ತೆ ನಾವು ಕೂಡುತ್ತೇವೆಂದು...
ಬೇರೆ ಲೋಕಗಳಲ್ಲಿ
ಭವಿಷ್ಯದ ದಿನಗಳಿಗೆ ದಿನಾಂಕಗಳಿಲ್ಲ.
ನನ್ನ ದೇಹದ ಆತುರವನ್ನು
ಸುಮ್ಮನೆ ಅಸಡ್ಡೆ
ಮಾಡುತ್ತೇನೆ
ಮತ್ತೊಂದು ಅನಿರೀಕ್ಷಿತ
ಮಧುರ ಭೇಟಿಯ
ಭರವಸೆ ನೀಡದೆ, ನಾನು
ಸಾಯುವುದಕ್ಕೆ ಬಯಸುವುದಿಲ್ಲ.
ಒಂಟಿ...


ನೀರಿಗೆ ನೀರಡಿಕೆಯ ದಾಹವಾಗದಿರುವಲ್ಲಿ
ಬ್ರೆಡ್‌ನ ಹೋಳುಗಳು ಕಲ್ಲಾಗದಿರುವಲ್ಲಿ
ನನ್ನ ಆತ್ಮಕ್ಕೊಂದು ಮನೆಯನ್ನು
ಹುಡುಕುವುದು ಹೇಗೆಂದು
ಕಳೆದ ಇರುಳಿಡೀ ಯೋಚಿಸುತ್ತಲೇ ಮಲಗಿದೆ
ಒಂದು ಹೊಳಹು ತಲೆಗೆ ಬಂತು
ನನ್ನ ಆಲೋಚನೆ ತಪ್ಪೆಂದು ಅನ್ನಿಸುವುದಿಲ್ಲ
ಯಾರೂ, ಯಾರೊಬ್ಬರೂ
ಅದನ್ನು ಇಲ್ಲಿ ಮಾಡಲಾರರು ಒಂಟಿಯಾಗಿ.
ಇದ್ದಾರೆ ಹಲವರು ಲಕ್ಷಾಧಿಪತಿಗಳು
ಹಣವಿದ್ದರೇನು ಬಂತು, ಉಪಯೋಗಿಸುವಂತಿಲ್ಲ
ಅವರ ಹೆಂಡಿರು ನಾಣ್ಯದ ಹಾಗೆ ಸುತ್ತ ಓಡುತ್ತಾರೆ
ಮಕ್ಕಳು ಹಾಡುತ್ತಾರೆ ಮನೋವ್ಯಥೆಯನ್ನು.
ಇದ್ದಾರೆ ಅವರಿಗೆ ದುಬಾರಿ ವೈದ್ಯರು
ಕಲ್ಲಾದ ಹೃದಯಗಳನ್ನು ವಾಸಿ ಮಾಡುವುದಕ್ಕೆ.
ಆದರೆ ಯಾರೂ ಇಲ್ಲ, ಯಾರೊಬ್ಬರೂ
ಅದನ್ನು ಇಲ್ಲಿ ಮಾಡಲಾರರು ಒಂಟಿಯಾಗಿ.
ಈಗ ನೀನು ಹತ್ತಿರದಿಂದ ಕಿವಿಗೊಟ್ಟು ಕೇಳಿಸಿಕೊಂಡರೆ;
ಹೇಳುತ್ತೇನೆ ನಿನಗೆ, ನನಗೆ ಗೊತ್ತಿರುವುದನ್ನು
ಕಾರ್ಮುಗಿಲು ಸೇರುತ್ತಿವೆ ಗಾಳಿ ಬೀಸಲಿದೆ
ಮನುಕುಲ ಸಂಕಟಪಡುತ್ತಿದೆ ನರಳಾಟ ಕೇಳಿಸುತ್ತಿದೆ,
ಏಕೆಂದರೆ ಯಾರೂ, ಯಾರೊಬ್ಬರೂ
ಅದನ್ನು ಇಲ್ಲಿ ಮಾಡಲಾರರು ಒಂಟಿಯಾಗಿ.
ಒಂಟಿಯಾಗಿ, ಒಬ್ಬೊಂಟಿಯಾಗಿ ಯಾರೂ,
ಯಾರೂ ಅದನ್ನಿಲ್ಲಿ ಮಾಡಲಾರರು ಒಂಟಿಯಾಗಿ...

ಹೆಣ್ಣು


ಮಾಯಾ ಏಂಜೆಲೊಪ್ರತಿ ಹೆಣ್ಣಿನ ಕೈಯಲ್ಲೂ ಇರಬೇಕು -- ಅಗತ್ಯ ಇರಲೀ ಇಲ್ಲದಿರಲಿ, ಬಯಕೆ ಇರಲೀ ಇಲ್ಲದಿರಲಿ, ತನ್ನದೇ ಆದ ಮನೆಯೊಂದನ್ನು ಬಾಡಿಗೆಗೆ ಪಡೆದು ಸ್ವತಂತ್ರವಾಗಿ ಬಾಳುವ ಛಾತಿ, ಅದಕ್ಕೆ ಬೇಕಾಗುವಷ್ಟು ಹಣ.
ಪ್ರತಿ ಹೆಣ್ಣಿನ ಬಳಿಯೂ ಇರಬೇಕು -- "ನಿನ್ನ ನಾ ನೋಡಬೇಕು, ಇನ್ನೊಂದು ಘಂಟೆಯಲ್ಲಿ ತಯಾರಾಗು" ಎಂದು ತನ್ನ ಕೆಲಸದ ಮೇಲಧಿಕಾರಿ ಅಥವಾ ಪ್ರಿಯತಮ ಹೇಳಿದಾಗ, ಉಡಲು ಅತ್ಯುತ್ತಮ ಸೀರೆ ಅಥವಾ ತೊಡಲು ಭರ್ಜರೀ ಪೋಷಾಕು.
ಪ್ರತಿ ಹೆಣ್ಣಿಗೂ ಇರಬೇಕು -- ಅತ್ಯಂತ ಸಂತೃಪ್ತಿ ತಂದ ಯೌವನ, ಅದನ್ನು ಹಿಂದೆಬಿಟ್ಟು ಸಾಗುವ ಹಿರಿತನ, ಮತ್ತೆ ಮತ್ತೆ ಹೇಳಿಕೊಂಡು ಖುಷಿಪಡುವಂಥಾ ಜೀವನ, ಅದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾ ಕಳೆಯುವ ಮುದಿತನ.
ಪ್ರತಿ ಹೆಣ್ಣಿನಬಳಿಯೂ ಇರಬೇಕು -- ಯಾವ ಸ್ಕ್ರೂಮೊಳೆಯನ್ನಾದರೂ ತಿರುಗಿಸಬಲ್ಲ ಸ್ವಯಂಚಾಲಿತ ಭೈರಿಗೆ. ಪ್ರತಿ ಹೆಣ್ಣಿಗೂ ಇರಬೇಕು -- ಯಾವಾಗಲೂ ನಗಿಸುವಂಥ ಗೆಳೆಯ, ಬಂದಾಗ ಅಳು, ಅಳಲು ಬಿಡುವ ಗೆಳತಿ.
ಪ್ರತಿ ಹೆಣ್ಣಿನ ಬಳಿಯೂ ಇರಬೇಕು -- ಕುಟುಂಬದಲ್ಲಿ ಮತ್ತಾರ ಬಳಿಯೂ ಇಲ್ಲದಂಥಾ ಅಪರೂಪದ ಕುರ್ಚಿ-ಸೋಫ-ಮೇಜಿನ ಸೆಟ್ಟು. ಪ್ರತಿ ಹೆಣ್ಣಿನ ಬಳಿಯೂ ಇರಬೇಕು -- ಅತಿಥಿಗಳನ್ನು ತಣಿಸುವ ಪಾಕಶಾಸ್ತ್ರ-ರಹಸ್ಯ, ಕೋರೈಸುವ ತಟ್ಟೆ-ಲೋಟ-ಚಮಚಗಳ ಕಟ್ಟು, ಕತ್ತುದ್ದದ ಮಧುಪಾನಪಾತ್ರೆಗಳು ಒಟ್ಟು, ಕೊನೇಪಕ್ಷ ಎಂಟೆಂಟರ ಸೆಟ್ಟು.
ಪ್ರತಿ ಹೆಣ್ಣೂ ಪಡೆದಿರಬೇಕು -- ವಿಧಿಯನ್ನು ವಶದಲ್ಲಿಟ್ಟುಕೊಂಡಂಥ ನಿರಾಳ ಮನಸ್-ಸ್ಥಿತಿ. ಪ್ರತಿ ಹೆಣ್ಣೂ ಅರಿತಿರಬೇಕು -- ತನ್ನ ತಾನೇ ಕಳೆದುಕೊಳ್ಳದ ಜಾಗೃತಿ ಆದರೂ ಗಾಢವಾಗಿ ಪ್ರೀತಿಸುವ ರೀತಿ.
ಪ್ರತಿ ಹೆಣ್ಣಿಗೂ ಇರಬೇಕು -- ಸ್ನೇಹವನ್ನು ಕಳೆದುಕೊಳ್ಳದೇ ಕೆಲಸಕ್ಕೆ ರಾಜೀನಾಮೆಕೊಡುವ ಜಾಣ್ಮೆ, ಮಾಜೀ ಪ್ರಣಯಿಯಿಂದ ಕಳಚಿಕೊಳ್ಳುವ ಉಪಾಯ, ಸಂಗಾತಿಯೆದುರು ಸೆಟೆದು ನಿಂತು ಪ್ರತಿರೋಧಿಸುವ ಸ್ಥೈರ್ಯ.
ಪ್ರತಿ ಹೆಣ್ಣೂ ಅರಿತಿರಬೇಕು -- ಶಕ್ತಿಮೀರಿ ದುಡಿದು ಸಾಧಿಸಬೇಕಾದ್ದು ಯಾವುದು, ಸದ್ದಿಲ್ಲದೇ ಕೈತೊಳೆದುಕೊಳ್ಳಬೇಕಾದ್ದು ಯಾವುದು, ಇವೆರಡರ ನಡುವಣ ವ್ಯತ್ಯಾಸ.
ಪ್ರತಿ ಹೆಣ್ಣೂ ಅರಿತಿರಬೇಕು -- 'ಮೊಳಕಾಲಿನ ಉದ್ದವನ್ನಾಗಲೀ ನಿತಂಬದ ಅಗಲವನ್ನಾಗಲೀ ತಂದೆತಾಯಿಗಳ ಪ್ರಕೃತಿಯನ್ನಾಗಲೀ ಬದಲಾಯಿಸುವುದು ಸಾಧ್ಯವಿಲ್ಲ' ಎಂಬ ಸತ್ಯ.
ಪ್ರತಿ ಹೆಣ್ಣೂ ಅರಿತಿರಬೇಕು -- 'ಬಾಲ್ಯ ಪರಿಪೂರ್ಣವಾಗಿರಲಿಲ್ಲದಿದ್ದರೇನಂತೆ, ಅದು ಮುಗಿದು ಯಾವುದೋ ಯುಗವಾಗಿದೆ' ಎಂಬ ವರ್ತಮಾನ.
ಪ್ರತಿ ಹೆಣ್ಣೂ ಅರಿತಿರಬೇಕು -- 'ಪ್ರೀತಿಗಾಗಿ ತಾನು ಏನೆಲ್ಲ ಮಾಡಲು ಸಿದ್ಧ ಏನೆಲ್ಲ ಮಾಡಲು ಸಿದ್ಧಳಿಲ್ಲ' ಎಂಬ ಇತಿ-ಮಿತಿ. ಪ್ರತಿ ಹೆಣ್ಣೂ ಹೊಂದಿರಬೇಕು -- ಏಕಾಂಗಿಯಾಗಿರುವ ಅಗತ್ಯವಿಲ್ಲದಿದ್ದರೂ ಏಕಾಂಗಿಯಾಗಿರಬಲ್ಲ ತಾಕತ್ತು.
ಪ್ರತಿ ಹೆಣ್ಣೂ ಹೊಂದಿರಬೇಕು -- 'ಯಾರನ್ನು ನಂಬಬಹುದು, ಯಾರನ್ನು ನಂಬಬಾರದು, ನಂಬಿದರೂ ಎಷ್ಟು ನಂಬಬಹುದು' ಎಂಬ ತಿಳುವಳಿಕೆ, ಅದರ ಜೊತೆಜೊತೆಗೇ ಯಾವುದನ್ನೂ ತೀರ ಮನಸ್ಸಿಗೆ ಹಚ್ಚಿಕೊಳ್ಳದ ನಡವಳಿಕೆ.
ಪ್ರತಿ ಹೆಣ್ಣೂ ಹೊಂದಿರಬೇಕು -- 'ಮನಸ್ಸಿಗೆ ಶಾಂತಿ-ಸಮಾಧಾನಗಳ ಅಗತ್ಯವಿದ್ದಾಗ ತನ್ನ ಆಪ್ತ ಗೆಳತಿಯ ನಡುಮನೆಗೆ ಹೋಗಬೇಕೋ ಊರಾಚೆಯ ವನದಲ್ಲಿರುವ ಬಿಡುಮನೆಗೆ ಹೋಗಬೇಕೋ' ಎಂಬ ತೀರ್ಮಾನಶಕ್ತಿ.
ಪ್ರತಿ ಹೆಣ್ಣೂ ಹೊಂದಿರಬೇಕು -- 'ಒಂದು ದಿನದಲ್ಲಿ, ಒಂದು ತಿಂಗಳಲ್ಲಿ, ಅಥವಾ ಒಂದು ವರ್ಷದಲ್ಲಿ ಏನು ಸಾಧಿಸಬಹುದು, ಏನು ಸಾಧಿಸಲಾಗದು' ಎಂಬುದರ ಪರಿಕಲ್ಪನೆ.

ಜೂನ 8 ಮಂಡ್ಯ : ಬೆಸಗರಹಳ್ಳಿ ಕಥಾ ಸಂಕಲನ ಪ್ರಶಸ್ತಿ 2013 ಪ್ರದಾನಮೇ 31 ಬೆಂಗಳೂರ : ಪುಸ್ತಕ ಬಿಡುಗಡೆ ಪ್ರಶಸ್ತಿ ಪ್ರದಾನ ಮತ್ತು ವಿಚಾರ ಸಂಕಿರಣ

ಮೂರು ಖಲೀಲ ಗಿಬ್ರಾನ್ ಪ್ರೇಮ ಪತ್ರಗಳು


ನಮ್ಮ ಪ್ರಕಾಶನದಿಂದ ಪ್ರಕಟಣೆಗೆ ಸಿದ್ದವಾಗಿರುವ ಖಲೀಲ ಗಿಬ್ರಾನ್ ಪ್ರೇಮ ಪತ್ರಗಳು ಪುಸ್ತಕದಿಂದ ಆಯ್ದುಕೊಂಡಿದ್ದು

ಕನ್ನಡಕ್ಕೆ : ಕಸ್ತೂರಿ ಬಾಯರಿ 

Displaying 2.jpg
 


1


ನ್ಯೂಯಾರ್ಕ್                                                          ೨ ಜನೇವರಿ ೧೯೧೪

ಪ್ರೀತಿಯ ಜಿಯಾಧ,
    ಕೆಲವು ತಿಂಗಳಿಂದ ಮನದಲ್ಲಿ ವಿಪರೀತ ಯೋಚನೆಗಳು. ಪ್ರತಿಕ್ರಿಯಿಸದಿದ್ದರೂ, ಒಂದು ಉತ್ತರ ಬರೆಯದಿದ್ದರೂ ನೀನು ಕೆಟ್ಟವಳು ಅಂತ ಯೋಚಿಸಲು ಆಗುತ್ತಿಲ್ಲ. ನಿನಗೆ ನಿನ್ನ ಕೆಟ್ಟತನದ ಬಗ್ಗೆ ಅರಿವಾಗಿ ಈಗ ಪಶ್ಚಾತ್ತಾಪ ಪಟ್ಟಿರಬಹುದು. ನಾನು ನಿನ್ನನ್ನು ನಂಬುತ್ತೇನೆ. ಮತ್ತು ಪ್ರತಿ ಮಾತಿಗೂ ನಮ್ರವಾಗಿ ಆ ನಂಬುಗೆ ಇಮ್ಮಡಿಸುತ್ತ ಹೋಗುತ್ತದೆ. ನೀನು ನಿನ್ನ ಕೆಟ್ಟತನವನ್ನು ಪ್ರತಿಪಾದಿಸಿದರೂ ಅದು ಒಳ್ಳೆಯ ಸಹಚಾರಿ ಹಾಗೂ ಪ್ರಭಾವಶಾಲಿ. ನನಗೆ ಅನುಮತಿ ಕೊಡು ನಿನಗೆ ಹೇಳಲು, ನರಕದ ಬಾಗಿಲುಗಳಲ್ಲಿ ಕೆಟ್ಟತನದ ಕರಿನೆರಳು ಆವರಿಸಿಕೊಂಡಿದೆ. ಇದನ್ನು ನೀನು ನಂಬುತ್ತೀ ತಾನೆ?

    ನನಗೆ ತಿಳಿಯುತ್ತಿಲ್ಲ. ಇಂತಹ ಕೆಟ್ಟತನದ ಆಯುಧ ನೀನು ಹೇಗೆ ಬಳಸುತ್ತೀ ಎಂದು. ದಯವಿಟ್ಟು ವಿವರಣೆ ಕೊಟ್ಟು ನನ್ನನ್ನು ತಿಳಿಗೊಳಿಸುತ್ತೀಯಾ? ನಿನ್ನ ಪ್ರತಿ ಪತ್ರಕ್ಕೂ ನಾನು ತಪ್ಪದೇ ಉತ್ತರಿಸುತ್ತಿದ್ದೇನೆ. ನಿನ್ನ ಪ್ರತಿ ಮೆಲುಧ್ವನಿ ನನ್ನ ಕಿವಿಯಲ್ಲಿ ರಿಂಗಣಿಸುತ್ತದೆ. ಅದರ ಪ್ರತಿಧ್ವನಿಗಳನ್ನೂ ನಾನು ಅರ್ಥೈಸಿಕೊಂಡಿದ್ದೇನೆ. ನೀನು ಯಾವುದೇ ಪಾಪಗಳನ್ನು ಪರಿಗಣಿಸಬೇಕಾಗಿಲ್ಲ. ಮತ್ತೆ ಶಿಕ್ಷೆ ಅನುಭವಿಸಬೇಕಾಗಿಲ್ಲ. ನೀನು ಆರಾಧನೆಯಿಂದ ನನ್ನನ್ನು ಗೆದ್ದಿರುವೆ. ನಾನು ನಂಬಿದ್ದೇನೆ, ಕಾಳಿಯ ಖಡ್ಗ ದಿಯನಾಳ ಬಾಣ ನಿನ್ನ ಖಚಿತ ನಿಲುವಾಗಿದೆ.

    ನಾವೀಗ ತಿಳಿಯಬೇಕಾಗಿದೆ. ಯಾರ ಹೃದಯದಲ್ಲಿ ಕೆಟ್ಟತನ ತುಂಬಿದೆ, ಯಾರಿಗೆ ಶಿಕ್ಷೆ ಕೊಡಬೇಕಾಗಿದೆ? ಎರಡು ವರುಷಗಳ ಹಿಂದೆ ಆಡಿದ ಮಾತುಕತೆಯನ್ನು ಮೆಲುಕು ಹಾಕಬೇಕಾಗಿದೆ ಈಗ.

    ನಿನ್ನ ಆರೋಗ್ಯ ಹೇಗಿದೆ? ನಿನ್ನ ಸಂಗತಿಗಳು ಏನಾಗಿವೆ? ನೀನು ಚೆನ್ನಾಗಿರುವೆಯಾ? ಮತ್ತೆ ನಿನ್ನ ಶಕ್ತಿಯನ್ನು ಲೆಬನಾನ್‌ನಲ್ಲಿರುವ ಮನೆಯಲ್ಲಿ ಆಹ್ಲಾದಿಸುತ್ತಿರುವೆಯಾ? ನೀನು ಕಳೆದ ಬೇಸಿಗೆಯಲ್ಲಿ ನಿನ್ನ ಮತ್ತೊಂದು ಕೈಯ ಕೀಲು ತಪ್ಪಿಸಿಕೊಂಡಿರುವೆಯೋ ಹೇಗೆ? ನಿನ್ನ ಅಮ್ಮ ಈಜಿಪ್ತಕ್ಕೆ ನೀನು ಎರಡು ಶಕ್ತಿಯುತ ತೋಳುಗಳಿಂದ ಕುದುರೆ ಸವಾರಿ ಮಾಡಿ ಬರಲು ಇಚ್ಛಿಸುವಳೆ? ಇಂಥ ಸವಾರಿಗೆ ಅನುಮತಿ ಸಿಕ್ಕೀತೆ? ನನ್ನ ಪ್ರಕಾರ ಆರೋಗ್ಯ ಬಹಳ ದೊಡ್ಡ ಭಾಗ್ಯ. ನಾನು ಬೇಸಿಗೆ ಕಾಲ ಹಾಗೂ ಚಳಿಗಾಲವನ್ನು ಪರ್ವತಗಳ ಸಾಲಿನಲ್ಲಿ, ಸಮುದ್ರದ ದಂಡೆಯಲ್ಲಿ ಅಲ್ಲಿಂದಿಲ್ಲಿಗೆ ಓಡಾಡಿ, ನನ್ನ ಕೆಲಸ ಹಾಗೂ ಕನಸುಗಳೊಂದಿಗೆ ಗುದ್ದಾಡಲು ನ್ಯೂಯಾರ್ಕ್‌ಗೆ ವಾಪಸ್ಸು ಬಂದಿದ್ದೇನೆ. ಒಂದು ವಿಚಿತ್ರ ಕನಸು ನನ್ನನ್ನು ಪರ್ವತದ ತುತ್ತತುದಿಗೆ ಕೊಂಡೊಯ್ದು, ಮತ್ತೆ ಧುತ್ತೆಂದು ಆಳವಾದ ಪ್ರಪಾತದ ಕಣಿವೆಯಲ್ಲಿ ತಂದು ನಿಲ್ಲಿಸಿದೆ.

    ನನಗೆ ಖುಷಿಯಾಗಿದೆ. ಅರಬ್ ಪತ್ರಿಕೆ ’ಆಲ್ ಫೊನೂನ್’ ನಿನ್ನ ಬರವಣಿಗೆಯನ್ನು ಸ್ವೀಕರಿಸಿದೆ. ಅದರ ಸಂಪಾದಕ ಒಳ್ಳೆಯ ಸ್ವಭಾವದ ಯುವಕ. ಬಹಳ ವಿಚಾರವಂತ. ಅವನು ಒಳ್ಳೆಯ ಕವಿತೆಗಳಿಗಾಗಿ ಅಲಿಫ್ ಲೇಖನಗಳಿಗಾಗಿ ತುಂಬ ಪ್ರಸಿದ್ಧನಾದವನು. ಇವನ ಬಗ್ಗೆ ಗೌರವ ಯಾಕೆಂದರೆ ಅವನು ಯುರೋಪಿನ ಎಲ್ಲಾ ಸಾಹಿತ್ಯವನ್ನು ಅರೆದು ಕುಡಿದವನು. ನನ್ನ ಸ್ನೇಹಿತನೊಬ್ಬ ಆಲ್ ಫೊನೂನ್ ಪತ್ರಿಕೆಯಲ್ಲಿ ಒಂದು ದೊಡ್ಡ ಕಾದಂಬರಿಯನ್ನು ಬರೆಯಲು ಪ್ರಾರಂಭಿಸಿದ್ದಾನೆ. ನಾನೂ ಕೂಡಾ ಆಲ್ ಫೊನೂನ್ ಪತ್ರಿಕೆಯ ಸಂಪಾದಕನಿಗೆ ನಿನ್ನ ಲೇಖನವನ್ನು ಕಳುಹಿಸಿದ್ದೇನೆ. ಅವನು ಅದನ್ನು ತುಂಬ ಖುಷಿಯಿಂದ ಮುಂದುವರಿಸುವುದಾಗಿ ಹೇಳಿದ್ದಾನೆ.

    ನನಗೆ ಹೇಳಲು ಪಶ್ಚಾತಾಪವಾಗುತ್ತದೆ. ನಾನು ಯಾವುದೇ ಸಂಗೀತ ವಾದ್ಯಗಳನ್ನು ನುಡಿಸಿಲ್ಲ. ಜೀವನವನ್ನು ಪ್ರೀತಿಸಿದಂತೆ ನಾನು ಸಂಗೀತವನ್ನು ತುಂಬಾ ಪ್ರೀತಿಸುತ್ತೇನೆ. ನಾನು ಅದರ ಇತಿಹಾಸ, ತತ್ವಗಳು, ಅದರ ಮೂಲಸ್ವರೂಪ ಹಾಗೂ ಅದರ ಬೆಳವಣಿಗೆ ಬಗ್ಗೆ ಆಳವಾಗಿ ಲಕ್ಷ  ಕೊಟ್ಟಿದ್ದೇನೆ. ಒಂದು ವೇಳೆ ನಾನು ಇನ್ನೊಂದಷ್ಟು ಕಾಲ ಬದುಕಿ ಉಳಿದೆನಾದರೆ, ಅರೆಬಿಕ್ ಹಾಗೂ ಪರ್ಶಿಯನ್ ಗೀತೆಗಳ ಬಗ್ಗೆ ಒಂದು ಸುದೀರ್ಘ ಪ್ರಬಂಧ ಬರೆಯಬೇಕೆಂದಿರುವೆ. ವಾರಕ್ಕೆ ಒಮ್ಮೆ ಇಲ್ಲಾ ಎರಡು ವಾರಕ್ಕೊಮ್ಮೆ ನಾನು ಓಪೇರಾಗಳಿಗೆ ಭೆಟ್ಟಿ ಕೊಡುತ್ತೇನೆ. ನನಗೆ ಸಿಂಫನಿ ಸೋನಾಟ, ಕನಾಟಗಳೆಂದರೆ ಇಷ್ಟ. ಓಪೇರಾ ಸರಳ ಸುಂದರ, ನನ್ನ ಮನಸ್ಸಿಗೆ ಒಗ್ಗುವಂತಾಗಿದೆ.

    ನನಗೆ ನೀನು ನುಡಿಸುವ ಔದ ಮೇಲೆ ಹೊಟ್ಟೆಕಿಚ್ಚು. ಅದನ್ನು ನೀನು ಎಷ್ಟು ಹತ್ತಿರದಿಂದ ನುಡಿಸುತ್ತೀ. ನೀನು ಅದರ ತಂತಿಗಳನ್ನು ಮೀಟಿದರೆ ಅದರಿಂದ ಹೊರಡುವ ಸುಮಧುರ ನಾದ ನನ್ನನ್ನು ಹುಚ್ಚನಾಗಿ ಮಾಡಿಸುತ್ತದೆ. ಆ ರಾಗವನ್ನು ನಾನು ಬಹಳ ಪ್ರೀತಿಸುತ್ತೇನೆ. ಯಾಕೆಂದರೆ ಆ ಹಾಡುಗಳು ಪ್ರವಾದಿ ಮಹಮ್ಮದ್ ಕುರಿತದ್ದು ಆಗಿದೆ.

    ನೀನು ಭವ್ಯವಾದ ಸ್ಪಿಂಕ್ಸ್ಸ್ ಪಕ್ಕದಲ್ಲಿ ನಿಂತುಕೊಂಡು ನನ್ನ ಬಗ್ಗೆ ವಿಚಾರ ಮಾಡುತ್ತೀಯೋ? ನಾನು ಈಜಿಪ್ತಿಗೆ ಹೋದಾಗ ಬಂಗಾರ ಬಣ್ಣದ ಮರಳುಗಳ ಮೇಲೆ ಕುಳಿತು ಬಹಳ ಹೊತ್ತಿನವರೆಗೆ ಸ್ಪಿಂಕ್ಸ್ ಮತ್ತು ಪಿರಮಿಡ್ಡುಗಳನ್ನು ನೋಡುತ್ತಿದ್ದೆ. ಆವಾಗ ನನಗೆ ಹದಿನೆಂಟು ವರ್ಷಗಳು. ನನ್ನ ಹೃದಯ ಬಿರುಗಾಳಿಗೆ ಒಡ್ಡಿ ನಿಂತ ಆ ಕಲಾಕೃತಿಗಳ ಬಗ್ಗೆ ತುಂಬಿ ಬಂದಿತ್ತು. ಸ್ಪಿಂಕ್ಸ್ ನನ್ನನ್ನು ನೋಡಿ ನಕ್ಕ ಹಾಗೆ ಅನಿಸಿತ್ತು ಮತ್ತು ನನ್ನ ಹೃದಯ ಸಿಹಿದುಃಖ ಹಾಗೂ ಕಹಿ ಖುಷಿಯಿಂದ ತುಂಬಿತ್ತು.

    ನಿನ್ನಂತೆ ನಾನೂ ಕೂಡಾ ಡಾ. ಸಾಮ್ಯುವಲ್‌ರ ಆರಾಧಕ. ಲೆಬನಾನಿನ ಇತಿಹಾಸದ ಹೊಸ ಪರ್ವಕೆ ಅವರದು ವಿಶಿಷ್ಟ ಕೊಡುಗೆ. ಪಶ್ಚಿಮ ದೇಶಗಳಿಗೆ, ನಿಖರವಾಗಿ ಡಾ. ಸಾಮ್ಯುವಲ್ ಅಂತಹ ವ್ಯಕ್ತಿಗಳ ಪ್ರಭಾವ ಬೇಕಾಗಿತ್ತು. ಈಜಿಪ್ಟ ಮತ್ತು ಸಿರಿಯಾ ದೇಶಗಳಿಗೆ, ಸೂಫಿ ಹಾಗೂ ಧರ್ಮ ಪಂಥಗಳ ಬದಲಾವಣೆಗೆ ಬೇಕಾಗಿತ್ತು.

    ನೀನು ’ಖೈರಲ್ಲಾಹ ಖೈರಲ್ಲಾಹ’ ಫ್ರೆಂಚ್ ಪುಸ್ತಕ ಓದಿರುವೆಯೋ ಹೇಗೆ? ನಾನು ಇದುವರೆಗೆ ಅದನ್ನು ನೋಡಿಲ್ಲ. ಆದರೆ ಗೆಳೆಯನೊಬ್ಬ ಹೇಳಿದ ಅದರಲ್ಲಿ ನನ್ನ ಬಗ್ಗೆ, ನಿನ್ನ ಬಗ್ಗೆ ಒಂದೊಂದು ಅಧ್ಯಾಯವಿದೆಯಂತೆ. ನಿನ್ನ ಹತ್ತಿರ ಎರಡು ಪ್ರತಿಗಳಿದ್ದರೆ ಒಂದನ್ನು ದಯವಿಟ್ಟು ನನಗೆ ಕಳುಹಿಸಿಕೊಡು. ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆ. ಈಗ ಮಧ್ಯರಾತ್ರಿ. ಅದಕ್ಕೆ ನಿನಗೆ ಶುಭರಾತ್ರಿ.

    ನನ್ನ ಸಲುವಾಗಿ ದೇವರು ನಿನ್ನ ಕಾಪಾಡಲಿ.

    ನಿನ್ನ ವಿಧೇಯ
    ಗಿಬ್ರಾನ್ ಖಲೀಲ್ ಗಿಬ್ರಾನ್2ನ್ಯೂಯಾರ್ಕ್                                                               ೨೪ನೇ ಜನವರಿ ೧೯೧೯

ಪ್ರೀತಿಯ ಮಿಸ್ ಜಿಯಾಧ,
    ನೀನು ಸುಂದರ ಹಾಗೂ ಒಳ್ಳೆಯ ವಿಚಾರಗಳ ಉತ್ತೇಜನದಿಂದ ಶಾಂತವಾಗಿರುವೆ ಅಂತ ತಿಳಿದಿದ್ದೇನೆ. ನೀನು ಕಳುಹಿಸಿದ ’ಆಲ್ ಮುಕತ್ತಾಫ್’ ಸರಣಿ ಲೇಖನಗಳನ್ನು ಬಹಳಷ್ಟು ಖುಷಿಯಿಂದ, ಆರಾಧನೆಯಿಂದ ಓದಿದ್ದೇನೆ. ನಿನ್ನ ಲೇಖನಗಳಲ್ಲಿ, ನನ್ನ ಕನಸುಗಳು, ವಿಚಾರಗಳು ಅದೇ ಮೃದುತ್ವ, ಪ್ರಾಮಾಣಿಕತೆಯನ್ನು ಒಳಗೊಂಡಿವೆ. ಅವುಗಳಲ್ಲಿರುವ ತತ್ವಗಳನ್ನು ಹಾಗೂ ಸಿದ್ಧಾಂತಗಳನ್ನು ನಾನು ನಿನ್ನೊಂದಿಗೆ ಮುಖಾಮುಖಿಯಾಗಿ ಚರ್ಚಿಸಲು ಇಷ್ಟಪಡುತ್ತೇನೆ. ಒಂದು ವೇಳೆ ನಾನು ಕೈರೋದಲ್ಲಿ ಇದ್ದರೆ ಖಂಡಿತ ನಿನ್ನ ಭೆಟ್ಟಿಯಾಗಿ ಚರ್ಚಿಸುತ್ತಿದ್ದೆ. ನಿನ್ನ ಲೇಖನ, ಮನಸ್ಸು ಮತ್ತು ಹೃದಯ, ’ಸ್ಥಳಗಳ ಉತ್ತೇಜನಗಳು’ ಮತ್ತು ’ಹೆನ್ರಿ ಬರ್ಗಸನ್’ ಬಗ್ಗೆ ತಪ್ಪದೇ ಮಾತನಾಡುತ್ತಿದ್ದೆ. ಆದರೆ ಪೂರ್ವದ ತುದಿಯಲ್ಲಿರುವ ಕೈರೋ ಎಲ್ಲಿ, ಪಶ್ಚಿಮದ ದೂರತೀರದಲ್ಲಿರುವ ನ್ಯೂಯಾರ್ಕ್ ಎಲ್ಲಿ? ನಮ್ಮ ಚರ್ಚೆಗೆ ಅವಕಾಶಗಳಿಲ್ಲ. ಆದರೆ ಅದು ಈಡೇರಲಿ ಎಂದು ನಾನು ಆಶಿಸುತ್ತೇನೆ.

    ನಿನ್ನ ಲೇಖನಗಳು ಬಹಳಷ್ಟು ಓದಿನ ಹಿನ್ನಲೆಯಲ್ಲಿ ವಿದ್ವತ್‌ಪೂರ್ಣವಾಗಿ, ಒಳ್ಳೆಯ ಅಭಿರುಚಿಯ ಅಭಿವ್ಯಕ್ತಿಯೊಂದಿಗೆ, ಆಯ್ದ ವಿಷಯಗಳು ಪರಿಪೂರ್ಣವಾಗಿ ಸಂಯೋಜನೆಗೊಂಡಿವೆ. ಅವು ನಿಖರವಾಗಿ ನಿನ್ನ ವೈಯಕ್ತಿಕ ಖಾಸಗೀ ವಿಷಯಗಳನ್ನು ಒಳಗೊಂಡು ತುಂಬ ಆಕರ್ಷಕವಾಗಿ ಅರೆಬಿಕ್ ಭಾಷೆಯನ್ನು ಬಿಂಬಿಸಿವೆ. ನನಗೆ ಗೊತ್ತು, ಅನುಭವಗಳನ್ನು ಸಾರ್ವತ್ರಿಕಗೊಳಿಸುವುದು ಎಲ್ಲಾ ಜ್ಞಾನಕ್ಕಿಂತ ಹೆಚ್ಚಿನದು.

    ನಾನು ನಿನ್ನ ಕೇಳುತ್ತೇನೆ. ಒಂದು ವೇಳೆ ನಿನ್ನ ಅಪೂರ್ವವಾದ ಜ್ಞಾನ ಹಾಗೂ ಅನುಭವಗಳನ್ನು ಹೊರಗೆ ಒರೆಗಲ್ಲು ಹಚ್ಚುವೆಯಾದರೆ ಅಲ್ಲಿ ನಿನ್ನ ವಿಶೇಷವಾದ ಅನುಭವಗಳನ್ನು ಮತ್ತೆ ನಿನ್ನ ಆದರ್ಶವಾದ ಹೇಳಲಾಗದ ಸತ್ಯಗಳನ್ನು ವಿವರಿಸುತ್ತೀಯೋ ಹೇಗೆ? ಸೃಜನಾತ್ಮಕ ಕ್ರಿಯೆ ಬಹಳ ವಿಶಿಷ್ಟವಾದದ್ದು. ಒಬ್ಬ ಸೃಜನಾತ್ಮಕ ವ್ಯಕ್ತಿಗೆ ಪದ್ಯಗದ್ಯದ ಸೃಜನಾತ್ಮಕ ಚಟುವಟಿಕೆ ಪದ್ಯಗದ್ಯಗಳಿಗಿಂತ ಎತ್ತರವಾದದ್ದು. ನಿನ್ನ ಆರಾಧಿಸುವ ವ್ಯಕ್ತಿಯಾಗಿ ನಾನು ನಿನ್ನ ಕವಿತೆ, ’ಸ್ಪಿಂಕ್ಸನ ಮುಗುಳ್ನಗೆ’ ತುಂಬ ಇಷ್ಟಪಡುತ್ತೇನೆ. ನನಗೆ ನಿನ್ನ ಲೇಖನ ಈಜಿಪ್ತದ ಕಲೆ ಹಾಗೂ ಬೆಳವಣಿಗೆ ವರ್ಷದಿಂದ ವರ್ಷಕ್ಕೆ, ಸಾಮ್ರಾಜ್ಯದಿಂದ ಸಾಮ್ರಾಜ್ಯದವರೆಗೆ ಒಳಗೊಂಡಿರುವ ಸಂಗತಿಗಳು ಮಾಡಿರುವ ಪರಿಣಾಮಕ್ಕಿಂತ ಈ ಕವಿತೆ ತುಂಬ ಇಷ್ಟ. ಸ್ಪಿಂಕ್ಸನ ಮುಗುಳ್ನಗೆ ಕವಿತೆ, ನೀನು ನನಗಾಗಿಯೇ ಅರ್ಪಿತ ಎಂಬಂತೆ ಬರೆದಿರುವೆ. ಆದರೆ ಈಜಿಪ್ತದ ಇತಿಹಾಸದ ಲೇಖನಗಳು ಸಾರ್ವತ್ರಿಕವಾಗಿವೆ ಮತ್ತೆ ವಿದ್ವತ್‌ಪೂರ್ಣವಾಗಿವೆ.

    ಈಜಿಪ್ಟಿನ ಕಲೆಯ ಬಗ್ಗೆ ನಿನ್ನ ವಿಚಾರಗಳು ಪೂರ್ತಿಯಾಗಿ ನಿನ್ನ ವೈಯಕ್ತಿಕ ವಿಷಯಾಧಾರಿತ ವಿಷಯಗಳನ್ನು ಒಳಗೊಂಡಿವೆ. ಆದರೆ ನನ್ನ ಪ್ರಕಾರ ಕಲೆ ಎಂಬುದು ತೇಲುವ ಅಭಿವ್ಯಕ್ತಿಗಳು ಹಾಗೂ ಒಬ್ಬ ವ್ಯಕ್ತಿಯ ಆತ್ಮದ ತುಣುಕುಗಳು. ಇಲ್ಲಿ ಓದು ಜಾಣ್ಮೆ, ಸಂಶೋಧನೆ ಎಲ್ಲವೂ ಒಂದು ಸಾಮಾಜಿಕ ಬದ್ಧತೆಯಿಂದ ಕೂಡಿರುತ್ತದೆ.

    ನಾನು ಹೇಳುತ್ತಿರುವುದಿಷ್ಟೇ, ಕಲೆಯ ಬಗ್ಗೆ ಒಂದು ವಿನಂತಿ ಇರಲಿ. ನಾನು ನಿನ್ನಲ್ಲಿ ವಿನಂತಿಸಿಕೊಳ್ಳುತ್ತೇನೆ. ಯಾಕೆಂದರೆ, ಗಾಪ್ಪೂ, ಎಲಿಜಬೆತ್ ಬ್ರೌನಿಂಗ್, ಆಲಿವ್ ಶಿರೀನರಂತೆ ಸ್ವರ್ಗ ಮತ್ತು ಭೂಮಿಗೆ ಬಂಗಾರದ, ಬೆಳ್ಳಿಯ ನಿಚ್ಚಣಿಕೆಯನ್ನು ನೀ ನೆಡಬೇಕಾಗಿದೆ. ಅದೊಂದು ಗುನುಗುಟ್ಟುವ ಮೋಹಕ ಲೋಕ.

    ದಯಮಾಡಿ ನನ್ನ ಆರಾಧನೆಯನ್ನು ಲೆಕ್ಕಕ್ಕಿಡು. ನನ್ನ ಆಳವಾದ ಗೌರವವನ್ನು ಸ್ವೀಕರಿಸು.
    ದೇವರು ನನ್ನ ಸಲುವಾಗಿ ನಿನ್ನ ಕಾಪಾಡಲಿ.

    ನಿನ್ನ ವಿಧೇಯ
    ಗಿಬ್ರಾನ್ ಖಲೀಲ್ ಗಿಬ್ರಾನ್

3

ನ್ಯೂಯಾರ್ಕ್                                                               ೭ನೇ ಫೆಬ್ರುವರಿ ೧೯೧೯

ನನ್ನ ಪ್ರೀತಿಯ ಮಿಸ್ ಮಯ್,

    ನಿನ್ನ ಪತ್ರವು ನನಗೆ ಸಾವಿರ ವಸಂತಕಾಲ ಹಾಗೂ ಶಿಶಿರ ಋತುವಿನ ನೆನಪುಗಳನ್ನು ಕೊಟ್ಟಿತು. ನಾನು ಮತ್ತೊಮ್ಮೆ ದೆವ್ವಗಳ ಮುಂದೆ ನಿಂತಂತೆ ಅವು ಯುರೋಪಿನ ಭೂಕಂಪದಲ್ಲಿ ಮಾಯವಾದಂತೆ ಅನಿಸಿತು. ಎಷ್ಟೊಂದು ದೀರ್ಘವಾದ, ಭವ್ಯವಾದ ಮೌನ ಅದು!

    ನಿನಗೆ ಗೊತ್ತೇ ಗೆಳತಿ? ನಿನ್ನ ಅಪೂರ್ಣ ವಾಕ್ಯಗಳಲ್ಲಿ ನಾನು ಎಷ್ಟೊಂದು ಭದ್ರತೆ, ಗೆಳೆತನ ಮತ್ತು ಹಿತ ಅನುಭವಿಸಿದ್ದೇನೆ? ನಾನು ಎಷ್ಟೊಂದು ಸಲ ನನ್ನಲ್ಲಿಯೇ ಹೇಳಿಕೊಳ್ಳುತ್ತೇನೆ. ’ದೂರದ ಪೂರ್ವದಲ್ಲಿ ಒಬ್ಬ ಅವಿವಾಹಿತ ಮಹಿಳೆ, ಹುಟ್ಟುವದಕ್ಕಿಂತ ಮುಂಚೆ ದೇವಸ್ಥಾನದ ಒಳಗೆ ಪ್ರವೇಶ ಪಡೆದವಳು, ಪವಿತ್ರದಲ್ಲಿ ಪವಿತ್ರಳು’, ಮುಂಜಾನೆ ಮಬ್ಬು ನಸುಕಿನಲ್ಲಿ ಗುಪ್ತಗಾಮಿನಿಯಾಗಿ ಬಂದವಳು. ಅವಳು ನನ್ನ ದೇಶವನ್ನು ತನ್ನ ದೇಶವೆಂದೇ ನಂಬಿದವಳು. ನನ್ನ ಜನರೇ ಅವಳ ಜನರೆಂದು ಒಪ್ಪಿಕೊಂಡವಳು. ಅವಳ ಪ್ರತಿ ಪತ್ರವೂ ಮೆಲುದನಿಯ ಮಂತ್ರವನ್ನೂ, ಕಲ್ಪನೆಯನ್ನೂ ನನ್ನ ಕಿವಿಯಲ್ಲಿ ಉಸುರಿಸುತ್ತದೆ! ನನಗೆ ಗೊತ್ತು ಎಂದಿಗೂ ಅವಳು ಪತ್ರ ಬರೆಯುವುದನ್ನು ನಿಲ್ಲಿಸುವುದಿಲ್ಲ. ಅವಳು ಬುದ್ಧಿವಂತಿಕೆಗೆ ಒಳ್ಳೆಯ ತೀರ್ಪಿಗೆ ಯಾವಾಗಲೂ ಬದ್ಧಳಾಗಿರುವವಳು.

    ಸ್ಪಿಂಕ್ಸ್‌ನ ಬಗ್ಗೆ ಬರೆದ ಲೇಖನಿಗೆ ನಾನು ಆಲ್‌ಫೊನೂನ್‌ನ ಸಂಪಾದಕನಿಗೆ ಯಾವ ಒತ್ತಡವನ್ನೂ ತಂದಿಲ್ಲ. ದೇವರು ನನ್ನ ಕ್ಷಮಿಸಲಿ. ಒಂದು ವೇಳೆ ನಾನು ಹಾಗೆ ಮಾಡಿದ್ದರೆ ಅದು ನನ್ನ ಸ್ವಭಾವಕ್ಕೆ ವಿರುದ್ಧವಾದ ನಿಲುವು. ಸಣ್ಣ ಗುಂಪಿನ ಕಾವ್ಯ ಬರೆಯುವರು ಅವರು ಚೇತನಗಳನ್ನು ಅವರ ಜೀವನದ ಸೂತ್ರಗಳಿಂದ ಪಡೆದಿರುತ್ತಾರೆ. ಅವರ ಅನುಭವಗಳು ಅವರ ಬದುಕಿನಿಂದಲೇ ಹುಟ್ಟಿರುತ್ತವೆ. ಯಾವುದೇ ಒತ್ತಾಯದ ಬೇಡಿಕೆ ಕಲೆಯನ್ನು ಸಮೃದ್ಧಿಗೊಳಿಸುವುದಿಲ್ಲ. ಪ್ರತಿ ಅನುಭವವೂ, ಪ್ರತಿ ಪ್ರೇರಣೆಯೂ ಸ್ವಾಭಾವಿಕವಾಗಿ ಹುಟ್ಟಿ, ವಿಷಯಗಳ ಔಚಿತ್ಯವನ್ನು ಪ್ರತಿಪಾದಿಸುತ್ತದೆ. ಮತ್ತೆ ನೀನು ಬರೆದಿರುವೆ ಅಂತಹ ಅದ್ಭುತವಾದ ಲೇಖನಿ ಬರೆಯಲು ಸಾಧ್ಯವೇ? ಹುರ್ರಾ ಮಯ್, ನೀನು ನಿನ್ನದೇ ಕಲಾತ್ಮಕ ಬುದ್ಧಿಶಕ್ತಿಯನ್ನು ಹೊಂದಿರುವೆ. ಸ್ಪಿಂಕ್ಸನ ನಗೆಯ ಬಗ್ಗೆ ವಿಷಯ ವಿವರಣೆಗಳನ್ನು ನಿನಗೆ ಒಪ್ಪಿಸುತ್ತೇನೆ. ನೀನು ಸ್ಪಿಂಕ್ಸನ ನಗೆಯ ಮೇಲೆ ಒಂದು ಅದ್ಭುತವಾದ ಲೇಖನ ಬರೆ. ನಾನು ಮಯ್‌ಳ ಮೋಹಕ ನಗೆಯ ಮೇಲೆ ಕವಿತೆ ಬರೆಯುವೆ. ಆದರೆ ನಾನು ಮಯ್‌ಳ ನಗು ನೋಡಲು ಈಜಿಪ್ತಿಗೆ ಬರಬೇಕಾಗಿದೆ. ಇದಕ್ಕಿಂತ ಹೆಚ್ಚಿನದು ಒಬ್ಬ ಕವಿಯಾದ ಮನುಷ್ಯ ಒಬ್ಬ ಹೆಣ್ಣುಮಗಳ ನಗೆಯ ಬಗ್ಗೆ ಹೇಳಬಲ್ಲನೆ? ಲಿಯೋನಾರ್ಡ ಡವಿಂಚಿ ತನ್ನ ಮೊನಲಿಸಾಳ ನಗೆಯ ಬಗ್ಗೆ ಹಾಗೆ ಹೇಳಿದ್ದನಲ್ಲ! ಆದರೆ ಲೆಬನಾನಿನ ಈ ಅವಿವಾಹಿತ ಮಹಿಳೆಯ ನಗು ತುಂಬ ನಿಗೂಢವಾದದ್ದು. ಅದನ್ನು ವಿವರಿಸಲು ಹಾಗೂ ಅನುಭವಿಸಲು ಸ್ವತಃ ಹೋಗಬೇಕು ಹತ್ತಿರ. ಈ ಲೆಬನಾನಿನ ಈಜಿಪ್ತಿನ ಮಹಿಳೆ ಸಾಕ್ಷಾತ್ಕಾರದ ಸತ್ಯಗಳನ್ನು ತನ್ನ ಸೂಕ್ಷ ವಾದ ಸೆರಗಿನಿಂದ ಮುಚ್ಚಿ ತುಟಿಗಳಿಂದ ಆ ನಗುವನ್ನು ಮರೆಮಾಚಿದ್ದಾಳೆ.

    ನನ್ನ ಕವನ ಸಂಕಲನ ಮ್ಯಾಡ್ ಮ್ಯಾನ್ ಬಗ್ಗೆ ನಿನಗೆ ತಿಳಿಸಬೇಕಾಗಿದೆ. ನೀನು ಬರೆದಿರುವ ಕ್ರೌರ್ಯದ ಒಂದು ತುಣುಕು ಅದರಲ್ಲಿದೆ. ಮತ್ತೆ ದೊಡ್ಡದಾದ ಗುಹೆಯ ಕತ್ತಲೆ ಅದರಲ್ಲಿದೆ. ಆದರೆ ನಾನು ಇಂತಹ ಕಠೋರವಾದ ಕಟು ವಿಮರ್ಶೆಯನ್ನು ಇದುವರೆಗೆ ಕೇಳಿಲ್ಲ. ಅಮೆರಿಕಾದ, ಇಂಗ್ಲೆಂಡಿನ ಕೆಲವು ವರ್ತಮಾನ ಪತ್ರಿಕೆಗಳು ಈ ಪುಟ್ಟ ಪುಸ್ತಕದ ಬಗ್ಗೆ ಕಾಳಜಿಪೂರ್ವಕವಾಗಿ ಬರೆದದ್ದು ಇದೆ. ಮಾಯ್‌ಫ್ರೆಂಡ್ ಮತ್ತು ಸ್ಲೀಪ್‌ವಾಕರ್ ಬರಹಗಳು ಕೆಲವೊಂದು ನಿಖರವಾದ ವಿಮರ್ಶೆಯನ್ನು ಹೊಂದಿವೆ. ನನ್ನ ಗೆಳತಿ ನೀನು ಅವುಗಳಲ್ಲಿ ಕ್ರೌರ್ಯವನ್ನು ಹೇಗೆ ಕಂಡಿರುವಿ? ಇದರಿಂದ ನನಗೆ ಯಾವ ತರಹದ ಲಾಭ ಆಗಿದೆ ಎಂಬುದನ್ನು ಇಡೀ ಜಗತ್ತೇ ಹೊಗಳುತ್ತದೆ. ಆದರೆ ನನ್ನ ಮಯ್‌ಳನ್ನು ನಾನು ಕಳೆದುಕೊಂಡಿದ್ದೇನೆ. ಪಶ್ಚಿಮದವರು ಮ್ಯಾಡ್‌ಮ್ಯಾನ್‌ನ ಕನಸುಗಳನ್ನು ತಮ್ಮದೇ ಕನಸುಗಳೆಂಬಂತೆ ಖುಷಿಪಡುತ್ತಿದ್ದಾರೆ. ಆದರೆ ಆಲ್‌ಫೊನೂನ್ ಪತ್ರಿಕೆಯಲ್ಲಿ ಬಂದ ಇಂಗ್ಲಿಷ್ ಭಾಷಾಂತರ ಮೂಲ ಆಶಯಕ್ಕೆ ಕೊಂಚ ಧಕ್ಕೆ ಉಂಟುಮಾಡಿದೆ.

    ನಾನು ನೀನು ಬಳಸಿದ ’ವಾಕರಿಕೆ’ ಶಬ್ದವನ್ನು ಕೆಂಪು ಶಾಯಿಯಿಂದ ರೌಂಡ್ ಹಾಕಿದ್ದೇನೆ. ನಿನ್ನ ವಿಮರ್ಶೆ ಮ್ಯಾಡ್‌ಮ್ಯಾನ್‌ಗೆ ನನ್ನ ಸ್ಲೀಪ್‌ವಾಕರ್, ಎಸ್ಟರಡೇ, ಟೂಮಾರೋ ಎಲ್ಲವನ್ನು ತಲೆಯಲ್ಲಿ ಇರಿಸಿಕೊಂಡು ಮಾಡಿರುವೆ ಎಂಬುದು ನನಗೆ ಗೊತ್ತು. ಆ ವಾಕರಿಕೆ ಶಬ್ದದ ಬದಲಾಗಿ ಬೇರೆ ಶಬ್ದದ ಬಳಕೆ ನಿನ್ನಿಂದಾಗದೋ ಹೇಗೆ?

    ನಾನು ನಿನಗೆ ನನ್ನಾತ್ಮದ ಕತ್ತಲಗುಹೆಯ ಬಗ್ಗೆ ಹೇಳಬೇಕಾಗಿದೆ. ಆ ಗುಹೆ ನಿನ್ನನ್ನು ಎಷ್ಟೊಂದು ಹೆದರಿಸಬಹುದು. ಒಬ್ಬ ಅಲೆಮಾರಿ ಅನಾಥ ಜನರ ಬಳಲಿಕೆಯ ದಾರಿಯಲ್ಲಿ ಸಿಕ್ಕು ದಟ್ಟ ಹೊಲಗಳಲ್ಲಿ, ಕಾಡು ಮೇಡುಗಳಲ್ಲಿ ಕಳೆದುಹೋಗಿದ್ದಾನೆ. ನಾನು ನನ್ನಾತ್ಮದ ಗುಹೆಗಳನ್ನು, ನನ್ನ ತಲೆ ಎಲ್ಲೂ ಇಡಲು ಸ್ಥಳ ದೊರೆಯದಿದ್ದಾಗ ಮೊರೆ ಹೋಗಿದ್ದೇನೆ. ನಾನು ಪ್ರೀತಿಸುವ ಒಬ್ಬರಾದರೂ ಈ ಹೊರೆಯನ್ನು ಇಳಿಸಿ ನನ್ನ ಪ್ರಾರ್ಥನೆಯನ್ನು ಮನ್ನಿಸುವರೆಂದು ಆಶಿಸುವೆ.

    ನನಗೆ ಖುಷಿಯಾಗಿದೆ. ಮ್ಯಾಡ್‌ಮ್ಯಾನ್‌ನ ಮೂರು ವಿಶ್ಲೇಷಣೆಗಳು ನಿನ್ನ ಮೂರನೇ ಕಣ್ಣಿನಿಂದ ಧೃಡೀಕರಿಸಲ್ಪಟ್ಟಿದೆ. ನಿನ್ನ ಸೂಕ್ಷ ತೆ ಕೇಳಲಾಗದ್ದನ್ನು, ಮಾತನಾಡಲಾಗದ್ದನ್ನು ಮೌನದ ಆಳವನ್ನೂ, ಸ್ವೀಕರಿಸಲಾಗದ ಧ್ವನಿಯನ್ನು, ಸಿಹಿ ನೋವನ್ನು, ಖುಷಿಯ ಆಳವನ್ನು, ನೋಡದ, ತಿಳಿಯದ ದೂರದ ಅಂತರದಿಂದ ವಿವರಿಸಲ್ಪಟ್ಟಿದೆ. ನಿನಗೆ ಋಣಿಯಾಗಿದ್ದೇನೆ.

    ನೀನು ನನ್ನನ್ನು ಅರಿತುಕೊಂಡಂತೆ ಎಲ್ಲರೂ ನನ್ನನ್ನು ಅರಿತುಕೊಳ್ಳಲಿ. ಕೆಲವೊಬ್ಬರು ನಮ್ಮ ಬಾಹ್ಯ ಚಟುವಟಿಕೆಯಿಂದ ನಮ್ಮನ್ನು ಗುರುತಿಸುತ್ತಾರೆ. ಆದರೆ ನೀನು ಅಂತರಂಗದ ಸಖಿ. ನಮ್ಮ ಒಳಗಿನ ರಹಸ್ಯಗಳು ಅರಿತವರಿಗಷ್ಟೇ ಗೊತ್ತಾಗುತ್ತದೆ. ಇದು ಭಾವಗಳ ಮಿಲನ. ಸ್ವಾತಂತ್ರ್ಯ ಎಲ್ಲ ಚಲನೆಗಳನ್ನು ಹುಟ್ಟು ಹಾಕುತ್ತದೆ ಎಂದು ನೀನು ಹೇಳುತ್ತಿ. ಓಕ್ ಮತ್ತು ಎಲ್ಲೋ ಗಿಡಗಳು ಒಂದರ ನೆರಳಿನಲ್ಲಿ ಇನ್ನೊಂದು ಬೆಳೆಯಲಾರವು.

    ನನ್ನ ಪತ್ರದಲ್ಲಿ ನಾನು ವಿವರಿಸಿಲ್ಲ. ಕೆಲವೊಬ್ಬರಿಗೆ ಮೃದುವಾದ ಮಂಜಿನ ಪರದೆಯ ಶಬ್ದಗಳು ಒಂದು ಮೂರ್ತಿಯಾಗಿ ಶಿಲ್ಪವಾಗುತ್ತದೆ ಎಂದು ತಿಳಿದಿಲ್ಲ. ಅದರೆ ಲೆಬನಾನಿನ ಅವಿವಾಹಿತ ಮಹಿಳೆ, ಎಲ್ಲಾ ಸೂಕ್ಷ  ಶಬ್ದಗಳ ತರಂಗಗಳನ್ನು ಗ್ರಹಿಸಿ ಮಂಜಿನಲ್ಲಿ ಮೂರ್ತಿಯನ್ನು ಮಾಡುವ ತಾಕತ್ತು ಉಳ್ಳವಳು ನೀನು.

    ನಿನ್ನ ಸುಂದರವಾದ ಆತ್ಮ, ಉತ್ತಮವಾದ ಆದರ್ಶದ ಹೃದಯ ಇಟ್ಟುಕೊಂಡು ನೀನು ಶಾಂತವಾಗಿರು. ದೇವರು ನಿನ್ನ ರಕ್ಷಿಸಲಿ.

    ನಿನ್ನ ವಿಧೇಯ
    ಗಿಬ್ರಾನ್ ಖಲೀಲ್ ಗಿಬ್ರಾನ್

ಹಾಗೆ ಇದೆ ಆಕಾಶದೀಪ್ತಿ ಭದ್ರಾವತಿ


ಭಾನುವಾರದ ಒಂದು ಮಧ್ಯಾಹ್ನ
ಆಸೆ ಕಂಗಳ ಪುಟ್ಟ ಹುಡುಗಿ
ಯಾರೋ ಎಂದೋ ಕೊಟ್ಟ ಕೆಂಪಂಚಿನ ಲಂಗ ತೊಟ್ಟ
ಬರಿಗಾಲಿನವಳು
ಬರಿಗೈಯಲ್ಲೊಂದು ಹರಕು
ಚೀಲವ ಹಿಡಿದು
ಆಚೀಚೆ ಬಿದ್ದ ಪ್ಲಾಸ್ಟಿಕ್ ಕವರುಗಳ ಹೆಕ್ಕಿ
ತುಂಬುತಲ್ಲೇ ತಾನು ನಿಂತ ನೆಲವನ್ನೊಮ್ಮೆ
ಗಗನ ಚುಂಬಿ ಮಹಡಿ ಮನೆಗಳನ್ನೊಮ್ಮೆ ಓರೆಗಣ್ಣಲ್ಲೇ
ನೋಡುತ್ತಾ ತಲೆ ಬಗ್ಗಿಸಿ ನಡೆಯುತ್ತಿದ್ದಾಳೆ
ರಸ್ತೆಯ ತುಂಬೆಲ್ಲಾ ಐಷಾರಾಮಿ ಮಕ್ಕಳು ಸೈಕಲ್
ತುಳಿಯುತ್ತಾ ತಮ್ಮದೇ ಇರುವಿನಲ್ಲಿ ಗಿರಕಿ
ಹೊಡೆಯುತ್ತಿದ್ದಾರೆ
ಇವರ‍್ಯಾರೋ ಬೇರೇ ಲೋಕದವರು ಅಂದುಕೊಳ್ಳುತ್ತ
ಎಲ್ಲರನ್ನೂ ಕಣ್ಣಂಚಿನಲ್ಲಿಯೇ ಬಚ್ಚಿಟ್ಟುಕೊಂಡು ತಡವಾದರೆ ಗದರುವ
ಅಪ್ಪನ ನೆನಪಾಗಿ ಸಾಗಿದ್ದಾಳೆ
ಮನೆಯ ಸೂರಿನೊಳಗೆ ಈಕೆಯ ನೆರಳಕಂಡ ಅವ್ವ
ಬಂದೆಯಾ ಬಾ ಒಂದಿಷ್ಟು ಪಾತ್ರೆಗಳ
ತೊಳೆದಿಟ್ಟು ಬಿಡು ಅಂದದ್ದು ಕೇಳಿ ಮರುಮಾತಿಲ್ಲದೆ ಹೂಂ
ಅಂದಿದ್ದಾಳೆ .
ಸೂರ‍್ಯ ಮುಳುಗುವುದ ಕಂಡ ಆಕೆಯ ತಮ್ಮ ಆಟ
ಮುಗಿಸಿ ಒಳಬಂದು ಅವ್ವನ ಕೈಯ ಬಿಳಿ ಕಾಫಿಯ ಹೀರಿ
ಓದಲು ಶುರುವಿಟ್ಟಿದ್ದಾನೆ
ಸಂಡೇ, ಮಂಡೇ, ಟ್ಯೂಸ್ಡೇ....


Monday, May 26, 2014

ಬೆರಳು
ಹಾರೋಹಳ್ಳಿ ರವೀಂದ್ರ


ಎಚ್ಚರ ತಪ್ಪಿದ ಒಂದೇ ಕಾರಣಕ್ಕೆ
ಕೇಸರಿ ಬಟ್ಟೆಯೊಳಗುಟ್ಟುತ್ತಿದ್ದ
ಮೂಲಭೂತವಾದಿಗಳು
ಬ್ಯಾಲೆಟ್ ಬಾಕ್ಸ್ ನಲ್ಲಿ ಹುಟ್ಟಿಕೊಂಡಿದ್ದಾರೆ

ತಲೆಯೊಳಗೆ ಫ್ಯಾಸಿಸ್ಟ್ ಎದ್ದು ಕುಣಿಯುತ್ತಿದೆ
ಮಡಿಲಲ್ಲಿ ದೇಶ ಶಾಂತವಾಗಿ ಮಲಗಿದೆ
ಕೈಯಲ್ಲಿ ಖಡ್ಗ ಘರ್ಜಿಸುತ್ತಿದೆ
ಕತ್ತರಿಸಿ ಬಿಸಾಡಬಹುದು
ಯಾವ ತುಕುಡಾ ಯಾವ ದಿಕ್ಕಿಗೋ?
ಹಿತ್ತಲ ಗಿಡಗಳ ಮೇಲೆ ಕಣ್ಣಿದೆ
ಮೆದುಳಿಗಾದರು ಕೈ ಹಾಕಬಹುದು
ಬುಡಕ್ಕಾದರು ಕೈ ಹಾಕಬಹುದು
ನಿಮ್ಮ ಸೆರಗು ಹೊರತೇನಲ್ಲ
ಯಾವುದಕ್ಕು ಕಾಂಪೌಡುಗಳನ್ನು
ಭದ್ರ ಮಾಡಿಕೊಳ್ಳಿ
ಬುದ್ದ ಬಸವ ಅಂಬೇಡ್ಕರ್‍
ನಾರಾಯಣಗುರು ಜ್ಯೋತಿಭಾ ಫುಲೆ
ಗಾಂಧಿ ಲೋಹಿಯಾ ಸೇರಿದಂತೆ
ಕೊಟ್ಟ ಖಡ್ಗಗಳನ್ನು
ಪ್ರತಿಯೊಬ್ಬರು ಹಿಡಿದಿದ್ದರೆ ಸರಿಯಾಗುತಿತ್ತು
ಆಯಾಯ ಜನಾಂಗದವರು ಮಾತ್ರ
ಮನೆಯ ಗದ್ದುಗೆಯಲಿಟ್ಟು
ಅಪ್ಪಿ ಮುದ್ದಾಡಿದ ತಪ್ಪಿಗೆ
ದೊಡ್ಡ ಗಂಡಾಂತರವನ್ನೆ
ಎದುರಿಸಬೇಕಾಗಿದೆ
ನಾಜಿಗಳ ಸಂತತಿ ನಾಶವಾಯ್ತು ಎಂದು ಕೊಂಡೆ
ಯಾರದೋ ಪಾದದ ಮಾರ್ಗವಾಗಿ
ಭಾರತಕ್ಕೂ ಹರಿದು ಬಂದಿವೆ
ನಿಮ್ಮ ರಕ್ತದಾ ಕಣಗಳು
ಮಸೀದಿ ಸರಿ ರಾತ್ರಿಯಲ್ಲಿ ಸಿಡಿಯಬಹುದು
ಚರ್ಚು ಹಾಡುಹಗಲೆ ಹರಿಯಬಹುದು
ಬುದ್ದ ದಿಕ್ಕೆಟ್ಟು ಓಡಬಹುದು
ಉಳಿಸಿಕೊಳ್ಳಲು ಕೈ ಕಾಲುಗಳನ್ನು
ಧಾನವಾಗಿ ಕೊಡಬೇಕಾಗುತ್ತದೆ
ನರನಾಡಿಗಳಲ್ಲಿ ಶಕ್ತಿ ತುಂಬಿಕೊಳ್ಳಿ
ಚುಕ್ಕಾಣಿ ಹಿಡಿದವರು ಮತಾಂಧರು
ನ್ಯೂರಂಬರ್‍ಗ್ ನಲ್ಲಿ ವಿಚಾರಣೆ ನಡೆದು
ಲಕ್ಷಾಂತರ ಮಂದಿಯನ್ನು ಗಲ್ಲಿಗೇರಿಸಿದಾಗೆ
ಇಲ್ಲಿ ಸಾಧ್ಯವಿಲ್ಲ
ನ್ಯಾಯಾಂಗ
ಕಾರ್ಯಾಂಗ
ಶಾಸಕಾಂಗ
ಕೋಮುವಾದಿಗಳ ತೆಕ್ಕೆಯಲ್ಲಿ
ವಿಚಾರಣೆ ನಡೆಸುವುದು
ಗಲ್ಲಿಗೇರಿಸುವುದು
ಸಜ್ಜನರನ್ನೆ ಹೊರತು
ದುರ್ಜನರನ್ನಲ್ಲ
ಪ್ರಜಾಪ್ರಭುತ್ವಕ್ಕೆ
ಮೂರೆ ಕಂಬಗಳು ಸಾಕೆಂದರು
ಮಹಾನುಭಾವರೊಬ್ಬರು
ಸಾಮಾನ್ಯರನ್ನು ಸೇರಿ ಎಲ್ಲರನ್ನೂ ಕಾಯ್ದುಕೊಳ್ಳುತ್ತೇವೆಂದು
ನಿಮಿರಿ ನಿಂತ ನಾಲ್ಕನೇ ಕಂಬ
ಬಂಡವಾಳಶಾಯಿಗಳು ಚೀಪಿ ಬಿಸಾಡಿದ ಮೂಳೆಗಾಗಿ
ಸಮಾಜದ ಗುರುತರವಾದ ಜವಾಬ್ದಾರಿಯನ್ನೆ
ಮರೆತುಬಿಟ್ಟಿದ್ದಾರೆ
ಚಡ್ಡಿ ಟೋಪಿ ಲಾಠೀಗಳಿಗೆ
ಸ್ವಾತಂತ್ಯ್ರ ಸಿಕ್ಕಿದೆಯಂತೆ
ಪಾಠ ಹೇಳಲು ಬರುತ್ತಿದ್ದಾರೆ
ಅವನತಿಯ ಶಂಖ ಊದುತ್ತ
ಇಟ್ಟಿಗೆ ಪವಿತ್ರವಲ್ಲ
ಜೀವ ಪವಿತ್ರವೆಂದ
ಲಂಕೇಶರ ನೆಲಕ್ಕೆ
ಲಂಕೆಗೆ ಬಂದ ಗತಿ ಬರಬಹುದು
ಸಾಕಷ್ಟು ವರ್ಷಗಳಿಂದ ಉತ್ತರ ಕೊಟ್ಟು ಸಾಕಾಗಿದೆ
ಲೇಖನಿಗೆ ಪ್ರತಿ ಲೇಖನಿ
ವಾದಕ್ಕೆ ಪ್ರತಿವಾದ
ರೋಸಿ ಹೋಗಿದೆ ಜನ್ಮ
ರಾಮ ಮತ್ತು ಶಂಭೂಕನಿಗೆ
ರಾಮ ಉತ್ತರಿಸಿದ್ದು ರಕ್ತದಿಂದಲೆ
ಕೌರವರಿಗೆ
ಕೃಷ್ಣ ಉತ್ತರಿಸಿದ್ದು ರಕ್ತದಿಂದಲೆ
ದಾನವ ಕುಲದ ಹಿರಣ್ಯ ಕಶ್ಯಪನಿಗೆ
ವಿಷ್ಣು ಉತ್ತರಿಸಿದ್ದು ರಕ್ತದಿಂದಲೆ
ಮಹಿಷಾಸುರನಿಗೆ
ಚಾಮುಂಡೇಶ್ವರಿ ಉತ್ತರಿಸಿದ್ದು ರಕ್ತದಿಂದಲೆ
ಬುದ್ದನಿಗೆ
ಶಂಕರಾಚಾರ್ಯ ಉತ್ತರಿಸಿದ್ದು ರಕ್ತದಿಂದಲೆ
ಎಲ್ಲರಿಗೂ ರಕ್ತಾಭಿಷೇಕ ಮಾಡಿಯೇ
ಅಧೀಕಾರ ಗಿಟ್ಟಿಸಿಕೊಂಡಿದ್ದು
ರಕ್ತಕ್ಕೆ ರಕ್ತವೆ ಉತ್ತರಿಸಬೇಕಾಗಿದೆ
ನಿಮ್ಮ ಅಟ್ಟಿಗಳ ಅಟ್ಟದ ಮೇಲೆ
ತುಕ್ಕು ಹಿಡಿದ ಆಯುಧಗಳನ್ನು
ಉಜ್ಜಿ ಮಸೆದುಕೊಳ್ಳಿ
ನಡೆಯ ಬೇಕಿದೆ ಒಂದು ರಕ್ತಕ್ರಾಂತಿ
ತಾಕತ್ತಿದ್ದರೆ ಸೈ ಎನ್ನಿ
ಚಾಲ್ಸ್ ಡಾರ್ವಿನ್ ಹೇಳಿದ ಹಾಗೆ
ಉಳಿವಿಗಾಗಿ ಹೋರಾಟ ಮಾಡಿಬಿಡೋಣ
ಯಾಕೆಂದರೆ
ಇದು
ಬೆರಳ್ ನಿಂದ ಕೊರಳ್ ಗೆ
ಬಂದಿರುವ ಪ್ರಶ್ನೆ?

ಮೇ 27 ಧಾರವಾಡ : ರಮಾಬಾಯಿ ಅಂಬೇಡ್ಕರ್ ಚಲನಚಿತ್ರ ಮತ್ತು 79ನೇ ಪುಣ್ಯಸ್ಮರಣೆ
ಪ್ರಿಯಾಂಕಾಗಾಗಿ ರಣಹೇಡಿಗಳ ಮೊರೆ
ಸನತಕುಮಾರ ಬೆಳಗಲಿ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣ, ಆತನಿಗೆ ಅನುಭವ ಸಾಲದು, ಪ್ರಿಯಾಂಕಾ ಗಾಂಧಿ ಪ್ರಚಾರಕ್ಕೆ ಬಂದಿದ್ದರೆ ಹೀಗಾಗುತ್ತಿರಲಿಲ್ಲ. ಹೀಗೆ ತರಾವರಿ ಮಾತುಗಳು ಕಾಂಗ್ರೆಸ್ ನಾಯಕತ್ವದ ಒಂದು ವಲಯದಲ್ಲಿ ಕೇಳಿ ಬರುತ್ತಿವೆ. ಮಾಜಿ ಕೇಂದ್ರ ಸಚಿವ ಕೆ.ವಿ.ಥಾಮಸ್, ಹಿರಿಯ ನಾಯಕ ಸತ್ಯವ್ರತ್ ಚತುರ್ವೇದಿ, ಯುವ ನಾಯಕ ಮಿಲಿಂದ್ ದೇವ್ರಾರಿಂದ ಹಿಡಿದು ರಾಜ್ಯದ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ವರೆಗೆ ಎಲ್ಲರಿಂದ ಇದೇ ಮಾತುಗಳು ಕೇಳಿ ಬರುತ್ತಿವೆ. ರಾಹುಲ್ ಗಾಂಧಿ ಬದಲಿಗೆ ಪ್ರಿಯಾಂಕಾ ಗಾಂಧಿಯನ್ನು ಮುಂದಿಟ್ಟುಕೊಂಡು ಚುನಾವಣೆಯ ನಡೆಸಿ ಕಾಂಗ್ರೆಸ್ ಸೋತಿದ್ದರೂ ಇವರಿಂದ ಇಂಥವೇ ಮಾತುಗಳು ಬರುತ್ತಿದ್ದವು. ರಾಹುಲ್ ಗಾಂಧಿಯು ನೆಹರೂ ಮನೆತನದ ಕುಡಿ. ಆತ ರಾಜಕೀಯಕ್ಕೆ ಬಂದು ಹತ್ತು ವರ್ಷಗಳಾಗಿರಬಹುದಷ್ಟೆ. ಆದರೆ ಧರ್ಮಸಿಂಗ್ 50 ವರ್ಷದಿಂದ ರಾಜಕೀಯ ದಲ್ಲಿದ್ದವರು. ಅರವತ್ತರ ದಶಕದಲ್ಲಿ ಗುಲ್ಬರ್ಗದ ಕಮ್ಯುನಿಸ್ಟ್ ನಾಯಕ ಗಂಗಾಧರ ನಮೋಶಿ ಅದೇ ತಾನೇ ಕಾನೂನು ಪದವಿ ಗಳಿಸಿಕೊಂಡು ಬಂದಿದ್ದ ಹಿಂದುಳಿದ ವರ್ಗದ ಈ ತರುಣನನ್ನು ನಗರಸಭೆಗೆ ನಿಲ್ಲಿಸಿ ಗೆಲ್ಲಿಸಿದ್ದರು.

 1972ರಲ್ಲಿ ಧರ್ಮಸಿಂಗ್ ಕಾಂಗ್ರೆಸ್ ಸೇರಿ ಜೇವರ್ಗಿಯಿಂದ ವಿಧಾನಸಭೆಗೆ ಚುನಾಯಿತರಾಗಿ ಬಂದರು. ಜೇವರ್ಗಿ ಲಿಂಗಾಯತ್ ಪ್ರಾಬಲ್ಯದ ಪ್ರದೇಶವಾದರೂ ಇಂದಿರಾ ಗಾಂಧಿ ಗಾಳಿಯಲ್ಲಿ ಜಾತಿ, ಮತ ಮೀರಿ ಜನಬೆಂಬಲ ಪಡೆದು ಗೆದ್ದು ಬಂದ ಧರ್ಮಸಿಂಗ್‌ಗೆ ಜಾತಿ ಬಲವಿರಲಿಲ್ಲ. ಅವರ ರಜಪೂತ್ ಸಮುದಾಯದ ನೂರೈವತ್ತು ಮನೆಗಳು ಮಾತ್ರ ಆ ಕ್ಷೇತ್ರದಲ್ಲಿವೆ. ಆದರೆ ಸುಮಾರು ನಲವತ್ತು ವರ್ಷ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿ ಮಂತ್ರಿಯಾಗಿ, ಮುಖ್ಯಮಂತ್ರಿ ಯಾಗಿ ಸದಾ ಅಧಿಕಾರದಲ್ಲಿದ್ದ ಧರ್ಮ ಸಿಂಗ್ ಈಗ ತಮ್ಮ ಸೋಲಿಗೆ ರಾಹುಲ್ ಗಾಂಧಿಯನ್ನು ಹೊಣೆ ಮಾಡುತ್ತಿರುವುದೇಕೆ?

ಇಷ್ಟು ವರ್ಷ ಅಧಿಕಾರ ರಾಜಕಾರಣ ದಲ್ಲಿದ್ದು ಒಂದು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬರಲು ಇವರಿಗೆ ರಾಹುಲ್ ಗಾಂಧಿ ನೆರವೇಕೆ ಬೇಕು? ಮೊದಲು ನೆಹರೂ ನಂತರ ಇಂದಿರಾ ಗಾಂಧಿ, ಆ ನಂತರ ರಾಜೀವ ಗಾಂಧಿ ಈಗ ರಾಹುಲ್ ಗಾಂಧಿ, ಮುಂದೆ ಪ್ರಿಯಾಂಕಾ ಗಾಂಧಿ. ಹೀಗೆ ಒಂದೇ ಕುಟುಂಬದ ಕುಡಿಗಳನ್ನೇ ಒಂದು ಪಕ್ಷ ಯಾಕೆ ಆಶ್ರಯಿಸಬೆಕು. ಇದು ಬರೀ ಧರ್ಮಸಿಂಗ್ ಒಬ್ಬರ ಮಾತಲ್ಲ. ಕಾಂಗ್ರೆಸ್‌ನ ಬಹುತೇಕ ನಾಯಕರಿಗೆ ಸ್ವಂತ ಮುಖವೇ ಇಲ್ಲ. ಇವರನ್ನು ಗೆಲ್ಲಿಸಲು ಗಾಂಧಿ ಕುಟುಂಬದ ನೆರವು ಬೇಕೆ ಬೇಕು. ಹೀಗೆ ಗಾಂಧಿ ಕುಟುಂಬದ ನೆರವು ಪಡೆದು ಅಧಿಕಾರಕ್ಕೆ ಬಂದು ಇವರು ಜನರಿಗಾದರೂ ಒಳ್ಳೆಯದನ್ನು ಮಾಡುತ್ತಾರಾ? ಅದು ಹೋಗಲಿ ಕಾಂಗ್ರೆಸ್ ಕಾರ್ಯಕರ್ತರನ್ನಾದರೂ ಬೆಳೆಸುತ್ತಾರಾ? ರಾಜಕೀಯ ನಾಯಕತ್ವವನ್ನಾದರೂ ತಯಾರು ಮಾಡುತ್ತಾರಾ? ಅದ್ಯಾವುದನ್ನು ಮಾಡದ ಇವರು ಕಾರ್ಯಕರ್ತರ ಬದಲು ತಮಗೆ ಬೇಕೆಂದಾಗ, ಬೇಕಾದ್ದನ್ನು ಪೂರೈಸುವ ಏಜೆಂಟರನ್ನು ಸಾಕಿಕೊಂಡಿರುತ್ತಾರೆ. ಚುನಾಯಿತ ಪ್ರತಿನಿಧಿಗಳನ್ನಾಗಿ ಚೇಲಾಗಳನ್ನೇ ಮಾಡುತ್ತಾರೆ. ತಮಗೆ ವಯಸ್ಸಾದರೆ ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತಾರೆ. ಪಕ್ಷದಲ್ಲಿ ಕಾಂಗ್ರೆಸ್‌ನ ಅನೇಕ ನಾಯಕತು ವರ್ಷಗಟ್ಟಲೆ ಕೆಲಸ ಮಾಡಿದ ಕಾರ್ಯಕರ್ತರನ್ನು ಮೂಲೆಗೆ ತಳ್ಳಿ ತಮ್ಮ ಪ್ರಭಾವ ಬೆಳೆಸಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಕ್ಕಳನ್ನು ತಯಾರು ಮಾಡುತ್ತಾರೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಸಚಿವ ಆರ್.ವಿ. ದೇಶಪಾಂಡೆ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವೇ ಇಲ್ಲದ ತಮ್ಮ ಪುತ್ರನನ್ನು ಕಾರವಾರ ಲೋಕಸಭಾ ಕ್ಷೇತ್ರದಿಂದ ನಿಲ್ಲಿಸಿದ್ರು. ಆತನಿಗೆ ಟಿಕೇಟ್ ಕೊಡಿಸಲು ತಮ್ಮ ಬೀಗ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ವಶೀಲಿ ಹಚ್ಚಿ ಕೊನೆಗೂ ಟಿಕೇಟ್ ತಂದರು. ಆದರೆ ಜನ ಈ ಅಮೂಲ್ ಬೇಬಿಯನ್ನು ಸೋಲಿಸಿದರು. ಹೀಗೆ ಅನೇಕರು ಸನ್‌ಸ್ಟ್ರೋಕ್‌ನಿಂದ ಬೆಳೆಯುತ್ತಿದ್ದಾರೆ. ಯಾಕೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಬೇರೆ ಕಾರ್ಯಕರ್ತರೇ ಇರಲಿಲ್ಲವೇ? ತಮ್ಮ ನಂತರದ ನಾಯಕತ್ವಕ್ಕೆ ಮಕ್ಕಳನ್ನೇ ಏಕೆ ಇವರು ತಯಾರು ಮಾಡುತ್ತಾರೆ? ಹೀಗೆ ವಂಶಾಡಳಿತದ ರೋಗ ಪಕ್ಷದಲ್ಲಿ ಎಲ್ಲೆಡೆ ವ್ಯಾಪಿಸಿದರೆ ಆ ಪಕ್ಷ ಹೇಗೆ ಉಳಿಯುತ್ತದೆ? ಕಾಂಗ್ರೆಸ್ ಹೀಗೆ ಇಂಥ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಲಾಭವನ್ನು ಪಡೆದ ಸಂಘಪರಿವಾರ ಸ್ವಯಂ ಸೇವಕರಾಗಿ ಬೆಳೆದ ಮೋದಿಯನ್ನು ಮುಂದಿಟ್ಟುಕೊಂಡು ತನ್ನ ಗುರಿ ಸಾಧಿಸಿತು.

 ಹೋಗಲಿ, ಕಾಂಗ್ರೆಸ್ ಸೋಲಿಗೆ ಪ್ರಿಯಾಂಕಾ ಗಾಂಧಿ ಬರಲಿಲ್ಲ ಎಂಬುದು ಒಂದೇ ಕಾರಣವೇ? ಕಳೆದ ಎರಡು ದಶಕಗಳಿಂದ ಯುಪಿಎ ಸರಕಾರ ಅನುಸರಿಸಿಕೊಂಡು ಬಂದ ಜಾಗತೀಕರಣ, ಉದಾರೀಕರಣ ನೀತಿ, ನವ ಉದಾರವಾದಿ ಧೋರಣೆ, ಅದರ ಪರಿಣಾಮವಾಗಿ ಹಣದುಬ್ಬರ, ಬೆಲೆಏರಿಕೆ, ಭ್ರಷ್ಟಾಚಾರ ಇವೆಲ್ಲ ಕಾರಣವಲ್ಲವೇ? ಈ ದೇಶ ವಿರೋಧಿ ನೀತಿಯ ನೇಣುಗಂಬಕ್ಕೆ ಕಾಂಗ್ರೆಸನ್ನು ವರಿಸಿದ ಕಾರ್ಪೊರೇಟ್ ಬಂಡವಾಳಗಾರರು ಈಗ ನರೇಂದ್ರ ಮೋದಿ ಎಂಬ ಅವತಾರ ಪುರುಷನನ್ನು ಧರೆಗಿಳಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ಅರ್ಥವಾಗಲಿಲ್ಲವೇ?


ದೇಶದ ಬಹುತೇಕ ರಾಜಕೀಯ ನಾಯಕರಿಗೆ ತಮ್ಮ ಮಕ್ಕಳನ್ನು ರಾಜಕೀಯ ಉತ್ತರಾಧಿಕಾರಿಗಳನ್ನಾಗಿ ಮಾಡುವ ತವಕ. ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಉತ್ತರಪ್ರದೇಶದಲ್ಲಿ ತಾನು ತೆರವುಗೊಳಿಸಿದ ಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಪುತ್ರ ಅಖಿಲೇಶ್ ಯಾದವ್‌ನನ್ನು ತಂದರು. ಲೋಕಸಭೆ ಚುನಾವಣೆಯಲ್ಲಿ ತಾನು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದರು. ಉಳಿದ ಮೂರು ಸ್ಥಾನಗಳಲ್ಲಿ ಸೊಸೆ ಡಿಂಪಲ್, ಸೋದರಳಿಯ ರಾದ ಅಕ್ಷಯ ಯಾದವ್ ಹಾಗೂ ಧರ್ಮೇಂದ್ರ ಯಾದವ್ ಗೆದ್ದರು. ಇವರಿಗೆ ರಾಜಕಾರಣದ ಗಂಧ ಗಾಳಿ ಗೊತ್ತಿಲ್ಲ. ಇಂಥವರನ್ನು ಕಟ್ಟಿಕೊಂಡು ಲೋಕಸಭೆಯಲ್ಲಿ ಮೋದಿ ಸರಕಾರವನ್ನು ಎದುರಿಸುವುದು ಹೇಗೆ ಎಂದು ಪೇಚಾಡುತ್ತಿದ್ದಾರೆ. ಇನ್ನು ಪಿ.ಚಿದಂಬರಂ ಎಂಬ ಮಹಾಶಯ ಈತ ತಮಿಳುನಾಡಿನ ಚೆಟ್ಟಿಯಾರ ಕುಟುಂಬಕ್ಕೆ ಸೇರಿದ ಕಾರ್ಪೊರೇಟ್ ಕಂಪೆನಿಗಳ ಚೇಲಾ. ವೇದಾಂತ ಕಂಪೆನಿಯಲ್ಲಿ ಈತನ ಶೇರುಗಳಿವೆ. ಈತ ಈ ಸಲ ಲೋಕಸಭೆ ಚುನಾವಣೆಯಲ್ಲಿ ತಾನು ಪ್ರತಿನಿಧಿಸುತ್ತಿದ್ದ ಶಿವಗಂಗಾ ಕ್ಷೇತ್ರದಿಂದ ತನ್ನ ಪುತ್ರನನ್ನು ನಿಲ್ಲಿಸಿದ ಮಗ ಸೋತ. ಈಗ ಕರ್ನಾಟಕದಿಂದ ರಾಜ್ಯಸಭಾ ಸದಸ್ಯನಾಗಲು ಮಸಲತ್ತು ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ಈ ಚಿದಂಬರಂ ಗೃಹಮಂತ್ರಿಯಾಗಿದ್ದಾಗ ದೇಶ ಕಂಡ ಮಹಾನ್ ಕ್ರಾಂತಿಕಾರಿ ನಾಯಕ ಚೆರಕುರಿ ರಾಜಕುಮಾರ್ (ಆಝಾದ್) ಅವರನ್ನು ಮಾತುಕತೆಗೆ ಕರೆದು ಮೋಸ ಮಾಡಿ ಎನ್‌ಕೌಂಟರ್ ಹೆಸರಿನಲ್ಲಿ ಕೊಲ್ಲಿಸಿದ.

ಹೀಗೆ ಕಾಂಗ್ರೆಸ್‌ನಲ್ಲಿ ಇರುವವರೆಲ್ಲ ಇಂಥ ಮುತ್ತುರತ್ನಗಳೇ. ಇವರಿಗೆ ಪಕ್ಷದ ಸಿದ್ಧಾಂತದ ಗೊಡವೇ ಬೇಕಿಲ್ಲ. ಅಧಿಕಾರದಲ್ಲಿದ್ದಾಗ ನಿರಂತರ ಕಬಳಿಕೆಯೊಂದೇ ಇವರ ಕಾಯಕ. ತಳಪಾಯ ದಿಂದ ಪಕ್ಷವನ್ನು ಕಟ್ಟಲು ಕಾರ್ಯಕರ್ತರನ್ನು ಸೈದ್ಧಾಂತಿಕವಾಗಿ ತಯಾರು ಮಾಡಲು ಏನನ್ನೂ ಮಾಡದ ಇವರು ಚುನಾವಣೆ ಬಂದಾಗ ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಪೋಟೊ ಹಿಡಿದುಕೊಂಡು ಬರುತ್ತಾರೆ. ಒಮ್ಮೆ ಗೆದ್ದು ಬಿಟ್ಟರೆ ಮಾತ್ರ ಮತದಾರರ ಬಳಿ ಸುಳಿಯುವುದಿಲ್ಲ. ಇವರನ್ನು ಗೆಲ್ಲಿಸಲು ನೆಹರೂ ಕುಟುಂಬದವರು ದೇಶದ ತುಂಬಾ ಓಡಾಡಬೇಕಂತೆ.

ಇದಕ್ಕೆ ಪ್ರತಿಯಾಗಿ ಸಂಘಪರಿವಾರ ನಿರಂತರವಾಗಿ ತನ್ನ ವಿಭಜನಕಾರಿ ಅಜೆಂಡಾವನ್ನು ಇಟ್ಟುಕೊಂಡು ಜನರ ಮಧ್ಯೆ ಕೆಲಸ ಮಾಡುತ್ತದೆ. ಕಾಂಗ್ರೆಸ್ ನಾಯಕರನ್ನೇ ವಿ.ಎಚ್.ಪಿ. ವೇದಿಕೆಗೆ ಕರೆತಂದು ಕಿವಿಯ ಮೇಲೆ ಹೂ ಇಡುತ್ತದೆ. ಕರಾವಳಿ ಮತ್ತು ಮಲೆನಾಡನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಆರೆಸ್ಸೆಸ್ ಇಲ್ಲಿ ಬಾಬಾಬುಡನ್‌ಗಿರಿ ಹೆಸರಿನಲ್ಲಿ ದನಸಾಗಾಟದ ಸೋಗಿನಲ್ಲಿ ಎಷ್ಟೆಲ್ಲಾ ಛಿದ್ರಕಾರಿ ಚಟುವಟಿಕೆ ನಡೆಸುತ್ತಾ ಬಂತು. ಇದನ್ನು ವಿರೋಧಿಸಿ ಕಮ್ಯುನಿಸ್ಟ್ ಪಕ್ಷಗಳು ಕಾರ್ಯಕರ್ತರು ಮತ್ತು ಕೋಮು ಸೌಹಾರ್ದ ವೇದಿಕೆ ಗೆಳೆಯರು ನಿರಂತರ ಹೋರಾಟಕ್ಕಿಳಿದರು. ಆದರೆ ಕಾಂಗ್ರೆಸ್ ನಾಯಕರು ಯಾಕೆ ಬಾಯಿಗೆ ಬೀಗ ಹಾಕಿ ಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರವಾದರೂ ಇವರೇನು ಮಾಡುತ್ತಿದ್ದಾರೆ? ದಕ್ಷಿಣ ಕನ್ನಡದಲ್ಲಿ ಅಶಾಂತಿಗೆ ಕಾರಣವಾದ ಶಕ್ತಿಗಳನ್ನೇಕೆ ಹತ್ತಿಕ್ಕಿಲ್ಲ? ಅನಂತಮೂರ್ತಿಗೆ ಬೆದರಿಕೆ ಹಾಕುತ್ತಿರುವ ನಮೊ ಬ್ರಿಗೇಡ್ ನಾಯಕನನ್ನು ಯಾಕೆ ಬಂಧಿಸಿಲ್ಲ? ಲೋಕಸಭಾ ಚುನಾವಣೆ ಯಲ್ಲಿ ಪಕ್ಷದ ತಳಪಾಯವೇ ನಿರ್ನಾಮ ವಾಗಿರುವಾಗ, ಈಗಲೂ ಕರ್ನಾಟಕದಲ್ಲಿ ಮಂತ್ರಿಗಳಾಗಲೂ, ಉಪ ಮುಖ್ಯಮಂತ್ರಿ ಯಾಗಲು ಈ ಪರಿ ಪರದಾಟವೇಕೆ? ಈ ಸೋಲಿನ ಸಂದರ್ಭದಲ್ಲಾದರೂ ಇವರಿಗೆ ಮೈಮೇಲೆ ಎಚ್ಚರ ಇರಬೇಡವೇ?

ರಾಜೀವ ಗಾಂಧಿ ಎಲ್ಟಿಟಿಇ ಮಾನವ ಬಾಂಬ್‌ಗೆ ಬಲಿಯಾದ ನಂತರ ಸೋನಿಯಾ ಗಾಂಧಿ ಕುಸಿದು ಹೋಗಿದ್ದರು. ಇನ್ನು ರಾಜಕೀಯವೇ ಬೇಡ ಎಂದು ತೀರ್ಮಾನಿಸಿ ದ್ದರು. ಆಗ ಮುಖಹೀನ ಕಾಂಗ್ರೆಸ್ ನಾಯಕರೇ, ಆಕೆಗೆ ದುಂಬಾಲು ಬಿದ್ದು ಪಕ್ಷದ ನಾಯಕತ್ವ ನೀಡಿದರು. ಇಂದಿರಾ ಗಾಂಧಿ, ಆಕೆಯ ಪುತ್ರ ರಾಜೀವ ಗಾಂಧಿ ಬಲಿದಾನ ಮಾಡಿದರು. ಆ ಸಹಾನುಭೂತಿ ಅಲೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ನೆಹರೂ ಮನೆತನ ಅಧಿಕಾರ ಅನುಭವಿಸಿದ ಬಗ್ಗೆ ಹೇಳುವವರು ಆ ಮನೆತನದ ಪ್ರಾಣತ್ಯಾಗ ಮಾಡಿದವರ ಬಗ್ಗೆ ಮಾತನಾಡುವುದಿಲ್ಲ. ಕಾಂಗ್ರೆಸ್ ಈ ಬಿಕ್ಕಟ್ಟಿನಿಂದ ಪಾರಾಗಬೇಕಾದರೆ ಪ್ರಿಯಾಂಕಾ ಬಂದರೂ ಸಾಧ್ಯವಿಲ್ಲ. ತಳ ಹಂತದಿಂದ ಪಕ್ಷದ ಕಾರ್ಯಕರ್ತರಿಗೆ ಗಾಂಧಿ, ನೆಹರೂ ಸಿದ್ಧಾಂತದ ಬಗ್ಗೆ ಸೈದ್ಧಾಂತಿಕ ತರಬೇತಿ ನೀಡಬೇಕು. ಹಣ ಗಳಿಸಲು ವಲಸೆ ಬರುವವರನ್ನು ಹೊರದಬ್ಬಬೇಕು. ಫ್ಯಾಸಿಸ್ಟ್ ಶಕ್ತಿಗಳ ಅಪಾಯದ ವಿರುದ್ಧ ಬೀದಿ ಬೀದಿಯಲ್ಲಿ ಪ್ರತಿಭಟಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನವಿರೋಧಿ ನವ ಉದಾರವಾದಿ ನೀತಿಗೆ ಎಳ್ಳುನೀರು ಬಿಡಬೇಕು. ನೆಹರೂ ಗಾಂಧಿ ತೋರಿಸಿದ ದಾರಿಯಲ್ಲಿ ಸಾಗಬೇಕು. ಇದೊಂದೆ ಉಳಿದ ದಾರಿ.

ಧರ್ಮಸಿಂಗ್, ದೇಶಪಾಂಡೆಯಂಥ ನಾಯಕರಿಗೆ ವಯಸ್ಸಾಗಿದೆ. ಇಷ್ಟು ವರ್ಷ ಅಜೀರ್ಣವಾಗುವಷ್ಟು ಅಧಿಕಾರ ಸುಖ ಅನುಭವಿಸಿದ್ದಾರೆ. ಈಗ ಕೂತರೆ ಇವರನ್ನು ಎಬ್ಬಿಸಿ ನಿಲ್ಲಿಸಲು ನಾಲ್ಕು ಜನ ಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಚುನಾವಣಾ ರಾಜಕಾರಣದಲ್ಲಿ ಏದುಸಿರು ಬಿಡದೇ ತಳಹಂತದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸ ಮಾಡಲಿ. ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ತರಲಿ. ಇದೂ ಆಗದಿದ್ದರೆ ತಣ್ಣಗೆ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲಿ.

Sunday, May 25, 2014

ಹರಿದ ಪತ್ರ ಕಥಾ ಸಂಕಲನದ ಮುಖಪುಟನೂರು ವರ್ಷಗಳ ತೀವ್ರ ದಾಹವಿರುವ ಒಂದು ಗ್ಲಾಸ್


ಗೌತಮ್ ಸಿದ್ಧಾರ್ಥನ್
ನೂರು ವರ್ಷಗಳ ತೀವ್ರ ದಾಹವಿರುವ ಒಂದು ಗ್ಲಾಸ್ಈ ಲೇಖನದ ಬರಹಗಾರರಾದ ಗೌತಮ್ ಸಿದ್ಧಾರ್ಥನ್
ತಮಿಳಿನ ಪ್ರಸಿದ್ಧ ಅಂಕಣಕಾರ, ಕಥಾಲೇಖಕ, ಪ್ರಬಂಧಕಾರ ಹಾಗೂ ರಾಜಕೀಯ ಚಿಂತಕರು.


ಮಾಧ್ಯಮಗಳು ನರೇಂದ್ರ ಮೋದಿಯ ಪ್ರಚಂಡ ವಿಜಯವನ್ನು ಭಾರೀ ಉಲ್ಲಾಸ, ಉತ್ಸಾಹದೊಂದಿಗೆ ಆಚರಿಸುತ್ತಿವೆ. ಚುನಾವಣಾ ಕದನದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಗಳಿಸಿಕೊಟ್ಟಿರುವ ಮೋದಿಯ ಇಮೇಜ್ ಇಡೀ ದೇಶವನ್ನು ನೆರಳಿನಂತೆ ಆವರಿಸಿದೆ.


  ಸೋಶಿಯಲ್ ನೆಟ್‌ವರ್ಕ್ ವೆಬ್‌ಸೈಟ್‌ಗಳಾದ ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲಿ ಮೋದಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಮೋದಿಯ ಪರವಾಗಿ ವಾದ- ಪ್ರತಿವಾದ ಗಳನ್ನು ಮಂಡಿಸುವವರಿಗೇನೂ ಕಡಿಮೆಯಿಲ್ಲ.


   ನರೇಂದ್ರ ಮೋದಿ ಭಾರತದಲ್ಲಿ ಮುನ್ನಡೆಸುತ್ತಿರುವ ನೂತನ ರಾಜಕೀಯ ಸನ್ನಿವೇಶ ಇದಾಗಿದೆ. ಎಲ್ಲಾ ರೀತಿಯ ಚರ್ಚೆಗಳು, ಸಂಭಾಷಣೆಗಳು, ಎಲ್ಲಾ ಬ್ಲಾಗ್‌ಗಳು ಹಾಗೂ ಟ್ವೀಟ್‌ಗಳು ಮೋದಿಯ ಸುತ್ತಲೂ ತಿರುಗುತ್ತಿವೆ. ಲೋಕಸಭಾ ಚುನಾವಣೆಗೆ ಮೊದಲು ಭಾರತದಲ್ಲಿ ಚಲಾವಣೆಗೆ ಬಿಟ್ಟ ವಿನೂತನವಾದ ‘ಮಾನಸಿಕ ಹೊರನೋಟ’ ಇದಾಗಿದೆ. ಮೋದಿ ವಿಕಸನಗೊಳಿಸಿದ ಹಾಗೂ ಬಿಜೆಪಿಯು ಮಂತ್ರವೆಂಬಂತೆ ಪಠಿಸಿದ ಅಸದೃಶವಾದ ಆಧುನಿಕ ರಾಜಕೀಯ ತತ್ವಜ್ಞಾನ ಇದಾಗಿದೆ.


 ಬೆಂಬಲ, ವಿರೋಧ, ಅಪಮಾನ, ಗೌರವ, ಅಣಕು, ಹಾಗೂ ಚಾತುರ್ಯ ಈ ಎಲ್ಲಾ ಪದಗಳಿಗೆ ಮೋದಿಯ ಹೆಸರು ಪರ್ಯಾಯವೆಂದು ಮಾಧ್ಯಮಗಳು ಬಣ್ಣಿಸುತ್ತಿವೆ. ಮಾಧ್ಯಮಗಳೇ ಮೋದಿಯ ಮೋಡಿಗೆ ಸಿಲುಕಿರುವಾಗ, ಬೀದಿಯಲ್ಲಿರುವ ಶ್ರೀಸಾಮಾನ್ಯ ಕೂಡಾ ಮೋದಿಯ ವರ್ಚಸ್ಸನ್ನು ಬೆರಗಿನಿಂದ ನೋಡಿದ್ದರಲ್ಲಿ ಅಚ್ಚರಿಯಿಲ್ಲ. ವಿಷಯ ಏನೇ ಇರಲಿ, ಮೋದಿಯ ಇಮೇಜ್ ದೇಶದ ನಾಗರಿಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ನಿಂತಿದೆ. ಆದರೆ ಇದನ್ನು ನಮ್ಮ (ದೇಶದ) ಪ್ರಯೋಜನಕ್ಕೆ ಬಳಸಿಕೊಳ್ಳಬಹುದಾಗಿದೆ.


  ಮಾಧ್ಯಮಗಳು ಹಾಗೂ ಸಾಮಾಜಿಕ ಅಂತರ್ಜಾಲ ತಾಣಗಳು, ಮೋದಿ ವಾದದಪ್ರಚಾರಕ್ಕೆ ಹೊಸ ರಭಸವನ್ನು ನೀಡಿವೆ ಹಾಗೂ ಅದನ್ನು ಒಂದು ಸಮಗ್ರ ಕಾರ್ಯತಂತ್ರವಾಗಿ ಪರಿವರ್ತಿಸಿದೆ.
 ಈಗ ದೇಶವು ಮೋದಿ ಎಂಬ ಚೇತೋಹಾರಿ ಲಘುಪಾನೀಯವನ್ನು ಭಾರೀ ಉಲ್ಲಾಸದೊಂದಿಗೆ ಸೇವಿಸುತ್ತಿದೆ.
ಮೋದಿ ತನ್ನ ಚೊಚ್ಚಲ ಸಂಸತ್ ಪ್ರವೇಶವನ್ನು ಪೌರಾಣಿಕ ಸ್ಪರ್ಶದೊಂದಿಗೆ ಆಡಂಬರ ಭರಿತವಾಗಿ ಪ್ರದರ್ಶಿಸಿದ್ದಾರೆ. ಸಂಸತ್ ಭವನದ ದ್ವಾರದ ಮೆಟ್ಟಲುಗಳ ಮೇಲೆ ಅವರು ಕಾಲಿಡುತ್ತಿದ್ದಂತೆಯೇ ಅವರು ತಲೆ ತಗ್ಗಿಸಿ,ಕೈಗಳನ್ನು ಜೋಡಿಸಿ ಪ್ರಾರ್ಥಿಸುವ ಮೆಲೋಡ್ರಾಮಾವನ್ನು ಇಡೀ ದೇಶ ವೀಕ್ಷಿಸಿದೆ. ಮತ್ತು ಇಡೀ ದೇಶದಲ್ಲಿ ದೇಶಭಕ್ತಿಯ ಜ್ವಾಲೆ ಹೊತ್ತಿ ಉರಿಯತೊಡಗಿದೆ !.
 ಭಾರತೀಯ ಮನಸ್ಥಿತಿಯು, ಶತಶತಮಾನ ಗಳಿಂದಲೂ ವೃತ್ತಿಯನ್ನು ಹಾಗೂ ಅಧ್ಯಾತ್ಮಿಕತೆಯನ್ನು ಪರಸ್ಪರ ಸಮೀಕರಿಸುತ್ತಿವೆ. ಕಾರ್ಖಾನೆ, ಕಚೇರಿಗಳನ್ನೂ ಪೂಜಿಸುವ ಭಾರತೀಯರಲ್ಲಿ ಅನೇಕರಿಗೆ ದೇವ ರೆಂಬುದು ಜೀವನೋಪಾಯದ ಸಾಧನವೂ ಆಗಿದೆ ಯೆಂಬುದು ವಾಸ್ತವ. ಮೇಲ್ವರ್ಗದ, ಮಧ್ಯಮವರ್ಗದ ಹಾಗೂ ದುಡಿಯುವ ವರ್ಗ ಹೀಗೆ ಎಲ್ಲರೂ ‘ನಾವುಮಾಡುವ ಕಾಯಕವೇ ದೇವರು’ ಎಂಬ ಆದರ್ಶವನ್ನು ಒಪ್ಪಿಕೊಳ್ಳುತ್ತವೆ. ಆಸ್ತಿಕನಿರಲಿ ಇಲ್ಲವೇ ನಾಸ್ತಿಕನಿರಲಿತನ್ನ ಉದ್ಯೋಗದ ಕ್ಷೇತ್ರವನ್ನು ದೇವಾಲಯವಾಗಿ ಪರಿಗಣಿ ಸುವ ಪರಿಕಲ್ಪನೆಯನ್ನು ಈ ಮಣ್ಣಿನ ಪ್ರತಿಯೊಬ್ಬ ವ್ಯಕ್ತಿಯು ಮಾನಸಿಕವಾಗಿ ಒಪ್ಪಿಕೊಳ್ಳುತ್ತಾರೆ.


ಈ ಮೆಲೋಡ್ರಾಮಾದ ಮೂಲಕ ವಿಶ್ವದ ಖ್ಯಾತ ಜಾದೂಗಾರ ಹೌಡಿನಿಯಂತೆ, ಮೋದಿ ದೇಶದ ಜನತೆಯನ್ನು ಭಾವಪರವಶಗೊಳಿಸುತ್ತಾರೆ.


  ಕೆದರಿದಕೂದಲುಗಳ ಚಿಂತಕರು ತಲೆಕೆರೆದು ಕೊಳ್ಳುತ್ತಾ ಇದನ್ನು ನಾಟಕವೆಂದಾಗಲಿ ಅಥವಾ ಬೂಟಾಟಿಕೆಯೆಂದಾಗಲಿ ಟೀಕಿಸಬಹುದು.

ಅದು ಕೂಡಾ ಸರಿಯೆನ್ನೋಣ. ಆದರೆ ಹಿಂದಿನ ಪೂರ್ವಾಧಿಕಾರಿಗಳು ಮೋದಿಯ ಮೆಲೋಡ್ರಾಮಾದ ನಟನೆಯನ್ನು ಯಾಕೆ ಮಾಡಲಿಲ್ಲ?.


 ಅದು ಕೇವಲ ನಟನೆ ಅಥವಾ ಡ್ರಾಮಾವೇ ಎಂಬುದು ಇಲ್ಲಿ ಚರ್ಚಿಸಬೇಕಾದ ಮುಖ್ಯ ವಿಷಯವಲ್ಲ. ಆದರೆ ಮೋದಿಯ ಈ ನಡವಳಿಕೆಯು, ದೇಶದಾದ್ಯಂತ ಜನತೆಯ ನಿಶ್ಚೇಷ್ಟ ಮನಸ್ಥಿತಿಯನ್ನು ತಟ್ಟಿ ಎಬ್ಬಿಸಿದೆಯೆಂಬುದು ವಾಸ್ತವ.
ಕಳೆದ ಕೆಲವು ವರ್ಷಗಳಿಂದ ನಮ್ಮ ಸಿನೆಮಾಗಳಲ್ಲಿ ಕೂಡಾ ಇಂತಹ ಭಾವಾತ್ಮಕ ತೀವ್ರತೆಯ ದೃಶ್ಯಗಳು ಕಾಣಸಿಗುತ್ತಿಲ್ಲ.


  ಹಿಂದೆ ಶಾಂತರಾಮ್,ರಾಜ್‌ಕಪೂರ್ ಮತ್ತಿತರರು ನಿರ್ದೇಶಿಸಿದ ಚಿತ್ರಗಳಲ್ಲಿ ದೇಶಭಕ್ತಿಯ ಹುರುಪಿದ್ದವು. ಈ ಚಿತ್ರಗಳು ಜನಸಾಮಾನ್ಯರನ್ನು ಭಾವಪರವಶಗೊಳಿಸಿದ್ದವು. ಇಂತಹ ಚಿತ್ರಗಳ ದೃಶ್ಯಗಳಲ್ಲಿ ಮುಖ್ಯಪಾತ್ರಗಳು ಜನತೆಯಲ್ಲಿ ದೇಶಭಕ್ತಿಯನ್ನು ಪುಟಿದೆಬ್ಬಿಸುವ ನಟನೆಗಳನ್ನು ಪ್ರದರ್ಶಿಸುತ್ತಿದ್ದವು. ಆದರೆ ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಚಿತ್ರಗಳು ದೇಶಭಕ್ತಿಯ ಕಾವನ್ನು ಕಳೆದುಕೊಂಡಿವೆ ಹಾಗೂ ಜಾಗತೀಕರಣದ ಈ ಯುಗದಲ್ಲಿ ಭಾವನಾತ್ಮಕ ದೇಶಭಕ್ತಿಯನ್ನು ಪ್ರದರ್ಶಿಸುವ ವ್ಯಕ್ತಿತ್ವವು ಹಾಸ್ಯಾಸ್ಪದವಾಗಿ ಬಿಟ್ಟಿದೆ.


ಎಲ್ಲಾ ಭಾಷೆಗಳ ಚಲನ ಚಿತ್ರಗಳಲ್ಲಿ ಅಪರಾಧಕ್ಕೆ ಸಂಬಂಧಿಸಿದ ದೃಶ್ಯಗಳೇ ಸಾಮಾನ್ಯವಾಗಿಬಿಟ್ಟಿದೆ. ಇಂತಹ ದೇಶಭಕ್ತಿಯ ಮೆಲೊಡ್ರಾಮಾವನ್ನು ಭಾರತೀಯರ ಮನಸ್ಸಿನಲ್ಲಿ ಕೆತ್ತುವ ಕಾರ್ಯವನ್ನು ಮೋದಿ ಮಾಡಿಮುಗಿಸಿದ್ದಾರೆ.


      ಇಂತಹ ಆರಾಧನಾ ಮನೋಭಾವವು ಸಮಾಜಕ್ಕೆ ಹಲವಾರು ಸಂಕೇತಗಳನ್ನು ರವಾನಿಸುತ್ತವೆ. ದೇಶವನ್ನು ದೇವಾಲಯವೆಂದು ಪರಿಗಣಿಸಿ ಪೂಜಿಸುವುದು, ಕೈಗಾರಿಕೆಗಳಿಗೆ ನಮಿಸುವುದು ಹಾಗೂ ಆ ಮೂಲಕ ಕೈಗಾರಿಕೆಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಕಟ್ಟಕಡೆಯದಾಗಿ ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡುವುದು. ಕೈಗಾರಿಕೆಗಳ ಮಹಾನತೆಯನ್ನು ಮಾನ್ಯ ಮಾಡುವುದು ಹಾಗೂ ಕೈಗಾರಿಕಾ ಬೆಳವಣಿಗೆಗೆ ಹುರುಪು ನೀಡುವುದು, ಜಾಗತೀಕರಣದ ಪ್ರಕ್ರಿಯೆ ಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳುವುದು ಹಾಗೂ ಆ ಮೂಲಕ ಅಂತಾರಾಷ್ಟ್ರೀಯ ಮಾನದಂಡಗಳ ವೌಲ್ಯಮಾಪನ ಮಾಡುವುದು ಹಾಗೂ ಜೀವನದಲ್ಲಿ ಸಮೃದ್ಧಿಯನ್ನು ಸಾಧಿಸಲು ಅಡಿಪಾಯವನ್ನು ಹಾಕುವುದು.... ಮೋದಿ ಪ್ರದರ್ಶಿಸಿದ ಈ ಒಂದು ಸಂಕೇತದಿಂದ ಈ ಎಲ್ಲಾ ಚಿಂತನೆಗಳು ದೇಶದ ಜನತೆಯ ಮನದಲ್ಲಿ ಅಚ್ಚಳಿಯದೆ ಮೂಡುತ್ತವೆ.
ಇದರ ಬೆನ್ನಲ್ಲೇ ಮೋದಿ ಎನ್‌ಡಿಎ ಸಂಸದರ ಸಭೆ ಯನ್ನುದ್ದೇಶಿಸಿ ಮಾಡಿದ ಭಾಷಣವು ಸಂಪೂರ್ಣವಾಗಿ ನಾಟಕೀಯತೆ ಹಾಗೂ ಭಾವಾನಾತ್ಮಕ ಶಬ್ದಾಡಂಬರ ಗಳಿಂದ ಕೂಡಿದ್ದವು. ನಮ್ಮ ಹೊಣೆಗಾರಿಕೆಗಳನ್ನು ಸಂಪೂರ್ಣಗೊಳಿಸಲು ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವಂತೆ ಅವರು ಕಹಳೆ ಧ್ವನಿಯೊಂದಿಗೆ ಕರೆ ನೀಡಿದರು.


 ‘‘ನಮ್ಮ ಸಂವಿಧಾನದ ಶಕ್ತಿಗೆ ಧನ್ಯವಾದಗಳು. ಸರಳ ಹಾಗೂ ವಿನೀತ ಹಿನ್ನೆಲೆಯಿಂದ ಬಂದ ಬಡವ ನೊಬ್ಬನು, ಈಗ ಪ್ರಧಾನಿಯಾಗಿ ನಿಂತುಕೊಳ್ಳಲು ಸಾಧ್ಯವಾಗಿದೆ. ಪ್ರಜಾತಾಂತ್ರಿಕತೆ ಚುನಾವಣಾ ವ್ಯವಸ್ಥೆಯ ಶಕ್ತಿಯುತ ಆಯಾಮ ಇದಾಗಿದೆ’’ ಎಂದು ಅವರು ಹೇಳಿದರು.


 ತನ್ನ ಭಾಷಣದಲ್ಲಿ ಅವರು ಜನಪ್ರಿಯ ಪುರಾಣ ಕಾವ್ಯವಾದ ಮಹಾಭಾರತವನ್ನು ವಿವಿಧ ಭಾವ ಗಳೊಂದಿಗೆ ನೆನಪಿಸಲು ಯತ್ನಿಸಿದರು. ಮಹಾಭಾರತದ ಕೆಲವು ಪ್ರಸಿದ್ಧ ದೃಶ್ಯಗಳ ಜನರ ಮನಪಟಲದಲ್ಲಿ ಹರಿದಾಡುವಂತೆ ಮಾಡುವಲ್ಲಿ ಅವರು ಯಶಸ್ವಿ ಯಾದರು. ಸಮಾಜದ ಹಿಂದುಳಿದ ವರ್ಗಕ್ಕೆ ಸೇರಿದ ಮಹಾಪರಾಕ್ರಮಿಯಾದ ಕರ್ಣನಿಗೆ, ಕ್ಷತ್ರಿಯರ ಸಭೆಗೆ ಪ್ರವೇಶಿಸಲಾಗಿತ್ತು. ಈ ಅಪಮಾನದಿಂದ ನೊಂದ ಆತ ತನಗೆ ಎದುರಾದ ಎಲ್ಲಾ ಅಡ್ಡಿಗಳನ್ನು ನಿವಾರಿಸಿ, ರಾಜನಾಗಿ ಸಿಂಹಾಸನವೇರುತ್ತಾನೆ.


ನಂತರ ಮೋದಿ ಇದ್ದಕ್ಕಿದ್ದಂತೆ ಅರ್ಜುನನ ಪರಾಕ್ರಮವನ್ನು ದೇಶದ ಜನತೆ ನೆನಪಿಸುವಂತೆ ಮಾಡುತ್ತಾರೆ. ಬಡವರ ಹಕ್ಕುಗಳಿಗೆ ಹೋರಾಡುವ ಶಪಥ ಮಾಡುತ್ತಾರೆ. ಇದೇ ವೇಳೆ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ದುಡಿಯಬೇಕೆಂದು ಬೋಧಿಸುವ ಶ್ರೀಕೃಷ್ಣನನ ನೆನಪನ್ನೂ ಅವರು ಮೂಡಿಸುತ್ತಾರೆ. ಇದರ ಜೊತೆಗೆ ದುಷ್ಟ ಹಾಗೂ ಮೋಸದ ನಗೆಯ ಶಕುನಿಯ ನೆನಪೂ ಕೂಡಾ ಕೆಲವು ಭಾರತೀಯರಿಗೆ ಬಂದರೆ ಅಚ್ಚರಿಯೇನಿಲ್ಲ.


 ‘‘ಈ ಲೋಟವನ್ನು ನೋಡಿ. ಕೆಲವರು ಹೇಳುತ್ತಾರೆ ಇದರಲ್ಲಿ ಅರ್ಧದಷ್ಟು ನೀರಿದೆಯೆಂದು, ಇನ್ನು ಕೆಲವರು ಹೇಳುತ್ತಾರೆ ಅದು ಅರ್ಧ ಖಾಲಿಯಾಗಿದೆಯೆಂದು. ಆದರೆ ನಾನು ಮಾತ್ರ ಅದರಲ್ಲಿ ಅರ್ಧದಷ್ಟು ನೀರಿದೆ ಹಾಗೂ ಉಳಿದರ್ಧಷ್ಟು ವಾಯುವಿದೆ’’ ಎಂದು ಹೇಳುತ್ತೇನೆ.


  ಝೆನ್ ತತ್ವಜ್ಞಾನಿಯಂತೆ ಇಂತಹ ಮಾತುಗಳನ್ನು ಮೋದಿ ಆಡುವಾಗ, ನಮ್ಮ ಸುಶಿಕ್ಷಿತ ಯುವಜನತೆ ಅವರ ಭಾಷಣದ ಮತ್ತಿನಲ್ಲಿ ತೇಲತೊಡಗುತ್ತಾರೆ.


ಆದರೆ ಶ್ರೀಯುತ ಮೋದಿಯವರೇ ನೀವು ಕಪ್‌ನಲ್ಲಿರುವ ಅರ್ಧದಷ್ಟು ನೀರು ಹಾಗೂ ಅರ್ಧದಷ್ಟು ಗಾಳಿಯ ಬಗ್ಗೆ ಮಾತನಾಡಿದ್ದೀರಿ. ಆದರೆ ಒಂದು ಕಪ್ ನೀರಿನ ಮಹತ್ವದ ಅಂಶವೊಂದನ್ನು ನೆನಪಿಸಿಕೊಳ್ಳಲು ನಿಮಗೆ ಸಾಧ್ಯವಾಗಲಿಲ್ಲ. ಅದೇನೆಂದರೆ ಬಾಯಾರಿಕೆಯನ್ನು ತೀರಿಸುವುದು. ಈ ಅಂಶವನ್ನು ನೀವು ಮನದಟ್ಟು ಮಾಡಿಕೊಳ್ಳಬೇಕಾಗಿದೆ.
ನಿಮ್ಮ ಭಾಷಣದಲ್ಲಿ ನೀವು ನಮ್ಮ ಸಂವಿಧಾನದ ಪಿತಾಮಹ ಡಾ.ಅಂಬೇಡ್ಕರ್ ಅವರನ್ನು ಸ್ಮರಿಸಬೇಕಿತ್ತು.ಮಂಡಲ್ ಆಯೋಗಕ್ಕೆ ಸಂಬಂಧಿಸಿ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ಕೊಡುಗೆಯನ್ನು ನೀವು ನೆನಪಿಸಿಕೊಳ್ಳಬೇಕಿತ್ತು. ಅಷ್ಟೇ ಅಲ್ಲ ಎ.ವಿ.ಆರ್.ಪೆರಿಯಾರ್ ಕೂಡಾ ಶ್ಲಾಘಿಸುವ ಮೂಲಕ ವಿಶಾಲ ದೃಷ್ಟಿಕೋನವನ್ನು ಪ್ರದರ್ಶಿಸಬೇಕಿತ್ತು.
 ಆದರೆ, ನೀವು ಬೇರೊಬ್ಬರನ್ನು ಸ್ಮರಿಸಿದ್ದೀರಿ. ಆರ್‌ಎಸ್‌ಎಸ್‌ನ ಉನ್ನತ ನಾಯಕನಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಗುಣಗಾನವನ್ನು ನೀವು ಮಾಡಿದ್ದೀರಿ. ಬಹುಮುಖಿ ಪ್ರತಿಭೆಯ ದೀನ್‌ದಯಾಳ್ ಉಪಾಧ್ಯಾಯ ಉತ್ತಮ ಅರ್ಥಶಾಸ್ತ್ರಜ್ಞ ಹಾಗೂ ಭಾರತೀಯ ಚಿಂತಕರಾಗಿದ್ದರು. ಖ್ಯಾತ ಸಮಾಜಶಾಸ್ತ್ರಜ್ಞ, ಇತಿಹಾಸಕಾರನಾಗಿಯೂ ಅವರು ಹೆಸರು ಪಡೆದಿದ್ದರು. ಅಷ್ಟೇ ಅಲ್ಲದೆ ಆರೆಸ್ಸೆಸ್‌ನ ಚಿಂತನೆಗಳನ್ನು ಹಾಗೂ ಸಿದ್ಧಾಂತಗಳನ್ನು ಪ್ರಚಾರಪಡಿಸುವ ‘ಪಾಂಚಜನ್ಯ’ ವಾರಪತ್ರಿಕೆ ಹಾಗೂ ‘ಸ್ವದೇಶಿ’ ದಿನಪತ್ರಿಕೆಯ ಸಂಪಾದಕರೂ ಆಗಿದ್ದರು.


    ದೇಶವು ನಿಮ್ಮ ಹೆಸರಿನೊಂದಿಗೆ ಪ್ರತಿಧ್ವನಿಸು ತ್ತಿರಬೇಕೆಂಬ ಹಂಬಲವು ನಿಮ್ಮಲ್ಲಿದೆಯೆಂಬುದು ಸಂಸತ್ ಭವನದಲ್ಲಿನ ನಿಮ್ಮ ಚೊಚ್ಚಲ ಭಾಷಣವು ಬಯಲುಗೊಳಿಸಿದೆ. ಋಗ್ವೇದದಲ್ಲಿ ‘ಮುನ್ನಡೆಯ’ ತತ್ವಜ್ಞಾನವನ್ನು ಪ್ರಸಾರ ಮಾಡುವ ಚೈರಾವತಿ ಮಂತ್ರ ವನ್ನು ನಿಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದೀರಿ. ಈ ಮಂತ್ರವು ಆರೆಸ್ಸೆಸ್‌ನ ಸಿದ್ದಾಂತದ ಪ್ರಚಾರದ ಗೀತೆಯೂ ಆಗಿದೆ. ಭಾರತವು ವಿವಿಧ ಧರ್ಮಗಳು, ಜನಾಂಗಗಳು ಹಾಗೂ ಭಾಷೆಗಳ ನೆಲವೀಡಾಗಿರುವ ವಿಶಾಲವಾದ ಭೂಪ್ರದೇಶವಾಗಿದೆ. ನಿಮ್ಮ ಭಾಷಣದಲ್ಲಿ ಆರೆಸ್ಸೆಸ್ ಮುಖವಾಡವು ಸ್ಫಟಿಕದಂತೆ ಸ್ಪಷ್ಟವಾಗಿ ಗೋಚರ ವಾಗುತ್ತದೆ. ಈ ಮುಖವಾಡವು ನಿಮ್ಮನ್ನು ಒಂದೇ ಧರ್ಮದ ವರ್ಚಸ್ಸನ್ನು ಬಿಂಬಿಸುವಂತೆ ಬಲ ವಂತ ಪಡಿಸುತ್ತದೆ. ಈ ಇಮೇಜ್‌ನಿಂದಾಗಿ ಧಾರ್ಮಿಕ ವೈಷಮ್ಯಗಳು ತಲೆಯೆತ್ತುವ ಸಾಧ್ಯತೆಗಳೂ ಇವೆ.


 ನಿಮ್ಮ ಉತ್ತರಾಧಿಕಾರಿಯಾಗಿ ಮಹಿಳೆಯೊಬ್ಬರನ್ನು ನೇಮಿಸಿದುದು ನಿಮ್ಮ ಆಡಳಿತಾತ್ಮಕ ಜಾಣ್ಮೆಯನ್ನು ತೋರಿಸುತ್ತದೆ. ನೀವು ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಿದ ಕ್ಷಣದಿಂದ ಯಾವುದೇ ಫೈಲ್ ವಿಲೇವಾರಿಯಾಗದೆ ಉಳಿದಿಲ್ಲ... ಈ ಎಲ್ಲಾ ವಿಷಯಗಳು ನಿಮ್ಮಿಂದ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸುತ್ತವೆ.


ಈಗ ಹಠಾತ್ತನೆ, ನಿತೀನ್ ಗಡ್ಕರಿಯವರು‘‘ಮೋದಿ ಪ್ರಧಾನಿಯಾಗಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದು ಹಿಂದುತ್ವದ ಪುನರುತ್ಥಾನವಾಗಿದೆ’’ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ಆರೆಸ್ಸೆಸ್ಸಿಗರು ಕೊಚ್ಚಿಕೊಳ್ಳುವಂತೆ,ಈ ವಿಜಯವು ಹಿಂದುತ್ವದ ಪುನರುತ್ಥಾನಕ್ಕೆ ಸಂದ ಗೆಲುವಲ್ಲ. ಬದಲಿಗೆ ಈ ವಿಜಯವು ಭಾರತೀಯರಲ್ಲಿ ಜಾಗೃತಿ ಮೂಡಿಸಬೇಕೆಂಬ ಆಶಯವನ್ನು ಹೊಂದಿದೆ.ದೇಶವನ್ನು ದೀರ್ಘ ಸಮಯದಿಂದ ಕಾಡುತ್ತಿರುವ ಭ್ರಷ್ಟಾಚಾರ ದಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕೆಂಬ ಭಾರತೀಯರ ತುಡಿತವು ನಿಮಗೆ ಈ ಗೆಲುವನ್ನು ತಂದುಕೊಟ್ಟಿದೆ. ನೀವು ಗುಜರಾತ್ ರಾಜ್ಯವನ್ನು ಇಡೀ ದೇಶದಲ್ಲಿ ಶ್ರೇಷ್ಠ ರಾಜ್ಯವಾಗಿ ರೂಪಿಸಿದ್ದೀರಿಯೆಂಬ ಮಾಧ್ಯಮಗಳ ಅತಿರಂಜಿತ ಪ್ರಚಾರವನ್ನು ನಂಬಿದ್ದರು ಹಾಗೂ ಇದೇ ಪವಾಡವನ್ನು ಇಡೀ ದೇಶದಲ್ಲಿ ಪುನಾರವರ್ತಿಸಿ ಎಂಬ ಹಂಬಲದೊಂದಿಗೆ ಅವರು ನಿಮಗೆ ಬೆಂಬಲ ನೀಡಿದ್ದಾರೆ.


  ನಿಮ್ಮ ಭಾಷಣದಲ್ಲಿ ವರ್ಣಾಶ್ರಮ ಧರ್ಮ ವ್ಯವಸ್ಥೆಯನ್ನೇ ಅಡಿಪಾಯವಾಗಿಟ್ಟುಕೊಂಡಿರುವ ಹಾಗೂ ಕೆಳವರ್ಗಗಳನ್ನು ದಮನಿಸುವ ಪ್ರಬಲ ಸಮುದಾಯದ ರಾಜಕೀಯವನ್ನು ಆಧರಿಸಿರುವ ಕೆಲವು ಪುರಾಣ ಕಥಾನಕಗಳನ್ನು ನೀವು ನಮ್ಮ ಮುಂದಿಟ್ಟಿರುವಿರಿ. ಆದರೆ ಇತಿಹಾಸದ ತ್ಯಾಜ್ಯಗಳಲ್ಲಿ ಅದುಮಿಡಲ್ಪಟ್ಟ ಇಲ್ಲವೇ ಅಡಗಿಸಿಟ್ಟ ಕೆಲವು ಸಣ್ಣ ಕಥೆಗಳನ್ನು ನಿಮ್ಮ ಮುಂದಿಡಬಯಸುತ್ತೇನೆ.


   ಬ್ರಾಹ್ಮಣರ ವೃತ್ತಿಯಾಗಿದ್ದ ವೇದಗಳನ್ನು ಕಲಿಯಲು ಪ್ರಯತ್ನಿಸಿದ ಶಂಭೂಕ ಎಂಬ ಶೂದ್ರನನ್ನು ಶ್ರೀರಾಮ ಕೊಂದ. ಶ್ರೀರಾಮನ ಈ ಕೃತ್ಯವನ್ನು ವರ್ಣಾಶ್ರಮದ ಚೌಕಟ್ಟಿನಲ್ಲಿ ಧರ್ಮಯುತವಾದುದು ಹಾಗೂ ರಾಜನ ಕರ್ತವ್ಯವಾಗಿತ್ತು ಎಂಬಂತೆ ಬಿಂಬಿಸಲಾಗುತ್ತಿದೆ. ರಾಮನ ಈ ಕೃತ್ಯವನ್ನು ಅಂಬೇಡ್ಕರ್ ತನ್ನ ಕೃತಿ ‘ಅನಿಹಿಲೇಶನ್ ಆಫ್ ಕಾಸ್ಟ್ಸ್’(ಜಾತಿಗಳ ನಿರ್ನಾಮ) ನಲ್ಲಿ ಟೀಕಿಸಿದ್ದಾರೆ.ತಥಾಕಥಿತ ರಾಮರಾಜ್ಯದ ಕಲ್ಪನೆಯ ‘ಕ್ರಿಮಿನಲ್ ಸ್ವರೂಪ’ವನ್ನು ಇದೆನ್ನಬಹುದು.
ಪುರಾಣದಲ್ಲಿರುವ ಈ ಸಣ್ಣ ಕಥೆಯನ್ನು ಧರ್ಮವೆಂದು ಯಾವ ಅರ್ಥದಲ್ಲಿ ಪರಿಗಣಿಸುವಿರಿ.
ಬಿಲ್ಲು ವಿದ್ಯೆಯಲ್ಲಿ ಪಾರಂಗತನಾಗಿದ್ದಕ್ಕೆ ಶಿಕ್ಷೆಯಾಗಿ ಏಕಲವ್ಯ ಎಂಬ ಬುಡಕಟ್ಟು ವ್ಯಕ್ತಿ ತನ್ನ ಹೆಬ್ಬೆರಳನ್ನೇ ಕತ್ತರಿಸಿದ ಪೌರಾಣಿಕ ಘಟನೆಯನ್ನು ಯಾವ ಗ್ರಹಿಕೆಯೊಂದಿಗೆ ಕಾಣುವಿರಿ?.
  ದಕ್ಷಿಣ ಭಾರತದ ರಾಜ್ಯವೊಂದರಲ್ಲಿ ದೇಗುಲ ಪ್ರವೇಶಿಸಲು ಯತ್ನಿಸಿದ ನಂದನ್‌ನನ್ನು ಜೀವಂತವಾಗಿ ದಹಿಸಿದ ದೃಶ್ಯವು ಹಲವು ಭಾರತೀಯರನ್ನು ಈಗಲೂ ಕಾಡುತ್ತಿದೆ. ಈಗ, ನಿಮ್ಮ ಮುಂದೆ ಖಾಲಿ ಗ್ಲಾಸನ್ನು ಇರಿಸಲಾಗಿದೆ. ಆದರೆ ಅದು ಖಾಲಿಯೆಂದು ಯೋಚಿಸ ದಿರಿ. ಅಥವಾ ಝೆನ್ ತತ್ವಜ್ಞಾನಿಯ ಹಾಗೆ ಅದರಲ್ಲಿ ಪೂರ್ತಿ ಗಾಳಿ ತುಂಬಿದೆಯೆಂಬುದಾಗಿಯೂ ಯೋಚಿಸದಿರಿ. ಸುಮಾರು ನೂರು ವರ್ಷಗಳ ತೀವ್ರ ದಾಹದಿಂದ ತಹತಹಿಸುತ್ತಿರುವ ಗ್ಲಾಸ್ ಇದಾಗಿದೆ.

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...