Monday, June 09, 2014

ಸಮುದ್ರದಾಳದ ಮುತ್ತುಗಳ ಹುಡುಕುತ್ತಾ...ಜಗದಿ ಜಲಮಂಗಳ
 

ಆಗಸ್ಟ ೧೫ ರಿಂದ ಶುರುವಾದ ನನ್ನ ಪತ್ರಿಕೋಧ್ಯಮ ಪಯಣ ನನ್ನನ್ನು ತುಂಬ ಬದಲಿಸಿ ಬಿಟ್ಟಿದೆ ಎನಿಸುತ್ತದೆ. ಸ್ನೇಹಿತ ಮಾತುಗಳಿಂದ ಕೇಳುತ್ತಾ ಅಥವಾ ಯಾವುದೋ ಪೇಪರ್ ಓದುವಾಗ, ಟಿವಿ ನೋಡುವಾಗ ನಾನು ಇವರಂತೆ ಆಗಬಹುದು ಎನಿಸಿತ್ತು. ಆ ಅವಕಾಶವನ್ನು ಸಂವಾಸ ಸಂಸ್ಥೆ ಮಾಡಿಕೊಟ್ಟಿತ್ತು. ೬ ತಿಂಗಳ ನನ್ನ ಕಲಿಕಾ ಪಯಣದಲ್ಲಿ ಆದಂತಹ ಅನುಭವಗಳು ಜೀವನದುದ್ದಕ್ಕೂ ದಾರಿದೀಪಗಳಿದ್ದಂತೆ.

ಸಂವಾದ ನನಗೆ ಹೊಸದೇನು ಆಗಿರಲಿಲ್ಲ. ಸಮಾನತೆಯನ್ನು ತರುವಲ್ಲಿ ಯುವಜನರನ್ನು ಸಂಘಟಿಸುತ್ತಿದ್ದ ಸಂವಾದ ಸಂಸ್ಥೆಗೆ ನಾನು ಹಳೆಯ ವಿದ್ಯಾರ್ಥಿಯೇ ಸರಿ. ಸಂವಾದದಲ್ಲಿ ಕಂಪ್ಯೂಟರ್ ತರಬೇತಿಯ ಜೊತೆಗೆ ಸುಸ್ಥಿರ ಕೃಷಿ ತರಬೇತಿಯನ್ನು ಪಡೆದುಕೊಂಡು ನಿರ್ಭಯವಾಗಿ ಮಾತಾನಾಡುವ ಕೌಶಲ್ಯ ಬೆಳೆಸಿಕೊಂಡಿದ್ದೇನು. ಆದರೆ ನನಗೆ ಪತ್ರಿಕೋದ್ಯಮ ಹೊಸದು.

ರಾಜ್ಯದ ನಾನಾ ಭಾಗಗಳಿಂದ ಬಂದಿದಂತಹ ವಿದ್ಯಾರ್ಥಿಗಳು ನನ್ನ ಸಹಪಾಠಿ ಸ್ನೇಹಿತರಾದರು. ಅವರ ಪರಿಚಯದಿಂದ ಆರಂಭವಾದ ಸಂಬಂಧ, ಮುಗಿಯದ ಅನುಬಂಧವಾಗಿ ಮಾರ್ಪಟ್ಟವು.
ಪರಸ್ಪರರನ್ನು ಗೌರವಿಸುತ್ತಾ, ಟೀಕಿಸುತ್ತಾ, ವಿರೋದಿಸುತ್ತಾ ಸ್ನೇಹ ಒಡನಾಡದಿಂದ ೬ ತಿಂಗಳು ಪೂರೈಸಿದೆವು.

ಪತ್ರಿಕೆ, ಟಿವಿ, ಪುಸ್ತಕ, ಕಂಪ್ಯೂಟರ್ ಇಂಟರ್‌ನೆಟ್ ಗಳಿಂದ ಆರಂಭವಾದ ನಮ್ಮ ಕಲಿಕೆ ವಿಮರ್ಶೆ ಬರೆಯುವ, ಪ್ರತಿದಿನ ಪತ್ರಿಕೆಗಳಿಗೆ ಪತ್ರಗಳನ್ನು ಬರೆಯುವರೆಗೆ ಬೆಳೆಯಿತು. ಒಂದೇ ವಿಷಯದ ಬಗ್ಗೆ ಬೇರೆ ಬೇರೆ ಪತ್ರಿಕೆಗಳಲ್ಲಿ ಯಾವ ರೀತಿಯ ವರದಿಗಳು ಬರುತ್ತವೆ ಎಂಬುದನ್ನು ಗುರುತಿಸುವುದು ಮುಂದುವರಿದಿತ್ತು. ಕೊನೆಯ ದಿನಗಳಲ್ಲಿ ನಾವೇ ಪಾಠ ಮಾಡುವ ಹಂತಕ್ಕೆ ತಲುಪಿದ್ದೇವು.

ಮಾಧ್ಯಮದ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಿದ ನುರಿತ ಅನುಭವಿಗಳು ನಮಗೆ ಪಾಠ ಬೋದಿಸುತ್ತಿದ್ದರು. ಅವರು ಸಹ ನಮ್ಮೊಳಗೆ ಒಬ್ಬರಾಗಿ ಬೆರೆತು ವಿಷಯವನ್ನು ಸರಳವಾಗಿ ಸುಲಭವಾಗಿ ಅರ್ಥ ಮಾಡಿಸುತ್ತಿದ್ದರು. ಜಿ ಎನ್ ಮೋಹನ್ ರಂತಹವರು, ಪಾರ್ವತೀಸ್ ನಂತಹವರು ನಮ್ಮ ಗುರುಗಳಾಗಿದ್ದು ನಮಗೆ ಅಚ್ಚರಿ ಮೂಡಿಸಿತ್ತು. ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಬ್ಬಿಬು ಆಗುತ್ತಿದ್ದವು. ಇತರೆ ಎಲ್ಲಾ ಗುರುಗಳು ನಮ್ಮ ಸ್ನೇಹಿತರಲ್ಲಿ ಒಬ್ಬರಂತೆ ಇದ್ದೂ ನಮಗೆ ಸೂಕ್ತ ಮಾರ್ಗದರ್ಶನ ನೀಡಿ ಜೀವನದಾರಿ ತೋರಿಸಿದರು.

ಕೆ ಆರ್ ಮಾರ್ಕೆಟ್ ಸುತ್ತುವಿಕೆ ಪ್ರಾರಂಭವಾದ ನಮ್ಮ ಅಲೆದಾಟ, ಬೆಂಗಳೂರೆಲ್ಲ ಸುತ್ತಾಡಿ, ಮಂಗಳೂರನ್ನು ಮುಟ್ಟಿತ್ತು. ವರದಿಗಾರಿಕೆಗಾಗಿ ಅದೆಷ್ಟು ಬಾರಿ ರವೀಂದ್ರ ಕಲಾ ಕ್ಷೇತ್ರ ಬೇಟಿ ಮಾಡಿದೆವೋ ಗೊತ್ತಿಲ್ಲ. ಅಲ್ಲಿ ನಾಟಕ ನೋಡುವುದಲ್ಲದೆ, ಅಲ್ಲಿಯೇ ನಾವು ನಾಟಕ ಕಲಿತು ಅಭಿನಯಿಸಿಯೂ ಆಯಿತು. ನಾಟಕ ನಿರ್ದೇಶಕರಾದ ಮಂಜು ನಾರಾಯಣರಂತು ಸದಾ ಚಟುವಟಿಕೆಯಿಂದ ಇರುವವರಾಗಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡು ಮೂಡಬಿದರೆಯಲ್ಲಿ ನಾಲ್ಕು ದಿನ ಅವಧಿಯೊಂದಿಗೆ ಕೆಲಸ ಮಾಡಿದೆನು.

ನನ್ನ ಜೊತೆಗಿನ ಇಪ್ಪತು ಕಲಿಕಾರ್ಥಿಗಳು ವಿಬಿನ್ನ ವಿಶಿಷ್ಟಾರ್ಥಿಗಳೇ ಆಗಿದ್ದರು. ಒಬ್ಬರನ್ನು ಒಬ್ಬರೂ ಮೀರಿಸುವ ಮನೋಬಲ ಉಳ್ಳವರಾಗಿದ್ದರು. ಉತ್ತರ ಕರ್ನಾಟಕ ಬಿಸಲ ನಾಡಿನವರೂ ಹೆಚ್ಚಿದ್ದರೂ ಬೆಚ್ಚಗಿರುವ ದಕ್ಷಿಣದವರನೂ ಕಡಿಮೆ ಇರಲಿಲ್ಲ. ಇವರೆಲ್ಲರೊಂದಿಗೆ ಅದೆಷ್ಟು ಗಂಟೆಗಳು ಮಾತನಾಡಿದ್ದೆನೋ, ಸುತ್ತಾಡಿದೆನೊ, ಜಗಳವಾಡಿದೆನೊ, ವಾದ ಮಾಡಿದನೋ ಗೊತ್ತಿಲ್ಲ. ಎಲ್ಲರ ಅತಂರಾಳದ ಅನುಭವಗಳನ್ನು ಕೆದಕಿ ಕಲಿತವನು ನಾನು. ಎಲ್ಲರಿಗೂ ನಾನು ಚಿರಋಣಿ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...