Tuesday, July 22, 2014

ಒಂಟಿಯಲ್ಲ ನಾ ಇನ್ನು..




ಬೋನಿ ಎಂ 
ಡಿಸ್ಕೋ ಗ್ರೂಪ್‌ನ ಪ್ರಸಿದ್ಧ ಹಾಡು
 
 
ಕನ್ನಡ ಓದು: ಡಾ ಎಚ್ ಎಸ್ ಅನುಪಮಾ


ಆಮ್ ಬಾರ್ನ್ ಅಗೇನ್, ಈ ಫೀಲ್ ಫ್ರೀ, ನೋ ಲಾಂಗರ್ ಅಲೋನ್

ಪುನರ್ಜನ್ಮ ಪಡೆದೆ, ಮುಕ್ತಳಾದೆ, ಒಂಟಿಯಲ್ಲ ನಾ ಇನ್ನು
ಅಗೋ, ಗೋಚರಿಸುತಿದೆ ಬೆಳಕು ಅಲ್ಲೊಂದು
ತೋರಿಸುತಿದೆ ಬೆಳಗಿ ಅದು ನನ್ನದೇ ಲೋಕವೆಂದು.

ಎದುರೇ ನಿಚ್ಚಳದ ಹಾದಿ, ನೋಡುತಿರುವೆ
ಗೊತ್ತು, ನಡೆವುದೇನಿದ್ದರೂ ಇನ್ನು ನಿನ್ನೊಂದಿಗೇ
ನನ್ನ ಯಾವ ಪ್ರಾರ್ಥನೆಯೂ ಹುಸಿ ಹೋಗಲಿಲ್ಲ, ಮರು ಜನುಮ ಪಡೆದೆ..

ಮತ್ತೆ ಹುಟ್ಟಿ ಬಂದೆ, ಮುಕ್ತಳಾದೆ, ನನ್ನೊಳಗೊಂದು ಹೊಸತನ ನುಸುಳಿದೆ
ಹುಚ್ಚು ಕಡಲಲಿ ದಿಗಿಲಿನಿಂದ ತೇಲುವ ನಾವೆಯಲ್ಲ ನಾ ಇನ್ನು ಮೇಲೆ.
ಪ್ರೇಮವಿತ್ತು ನನ್ನ ಹರಸಲಾಗಿದೆ, ಉಳಿದ ಬದುಕಿಗೆ ಜೊತೆಯಾಗಿ
ನನ್ನಾವ ಪ್ರಾರ್ಥನೆಯೂ ಹುಸಿ ಹೋಗಲಿಲ್ಲ, ಬಂದೆ ಮತ್ತೊಮ್ಮೆ ಹುಟ್ಟಿ..

ಪ್ರೇಮ ನನ್ನೆದೆ ಸೋಕಿದ ಚಣದಿಂದ, ಹೊಸ ಅರ್ಥ ಮೂಡಿದೆ ಬದುಕಿಗೆ
ಆಗಸದಲಿ ಗೊತ್ತುಗುರಿಯಿರದ ಅಲೆವ ಅಲೆಮಾರಿಯಲ್ಲ ನಾ ಇನ್ನು ಮೇಲೆ
ಮತ್ತೆ ಭರವಸೆ ಮೂಡಿದೆ, ನನಗೂ ಒಂದು ನಾಳೆಯಿದೆ
ಹೊಚ್ಚ ಹೊಸ ನಾಳೆ, ಗೊತ್ತು ನಾ ಅದರ ಎದುರಿಸಬಲ್ಲೆ.

ಮತ್ತೆ ಹುಟ್ಟಿ ಬಂದೆ ನಾ, ಬಿಡುಗಡೆಯಾದೆ, ಇನ್ನು ನಾ ಒಂಟಿಯಲ್ಲ
ಅಗೋ ತೇಜೋಮಯ ಬೆಳಕು, ಬೆಳಗಿ ಹೇಳುತಿದೆ ಲೋಕ ನನ್ನದೇ ಎಂದು.
ನೋಡುತಿರುವೆ, ಎದುರೇ ನಿಚ್ಚಳದ ಹಾದಿ
ಗೊತ್ತು, ಇನ್ನು ನನ್ನ ನಡಿಗೆ ನಿನ್ನೊಂದಿಗೇ.
ನನ್ನ ಯಾವ ಪ್ರಾರ್ಥನೆಯೂ ಹುಸಿಯಾಗಲಿಲ್ಲ, ನಾ ಮತ್ತೆ ಹುಟ್ಟಿದೆ
ನನ್ನಾವ ಪ್ರಾರ್ಥನೆಯೂ ಹುಸಿಯಲ್ಲ ಏಕೆಂದರೆ ನಾ ಮತ್ತೆ ಹುಟ್ಟಿಬಂದೆ..

(ಬೋನಿ ಎಂ ಡಿಸ್ಕೋ ಗ್ರೂಪ್‌ನ ಪ್ರಸಿದ್ಧ ಹಾಡು)

ಕನ್ನಡ ಓದು: ಅನುಪಮಾ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...