Saturday, July 26, 2014

ನೆನಪಿನ ಹಕ್ಕಿ : ಅಂತಃಕರಣದ ಆತ್ಮಕಥನ


ಇಂದಿನ ಪ್ರಜಾವಾಣಿಯಲ್ಲಿ


ನೆನಪಿನ ಹಕ್ಕಿ
ಮರಾಠವಾಡಾದ ದಲಿತನ ಆತ್ಮಕಥನ
ಮರಾಠಿ ಮೂಲ:
ಪ್ರ.ಈ. ಸೋನಕಾಂಬಳೆ
ಕನ್ನಡಕ್ಕೆ:
ಚಂದ್ರಕಾಂತ ಪೋಕಳೆ
ಪು: 172 ; ಬೆ: ರೂ.140
ಪ್ರ: ಲಡಾಯಿ ಪ್ರಕಾಶನ
ಪ್ರಸಾದ ಹಾಸ್ಟೇಲ್‌, ಗದಗ ಭಾರತದ ಯಾವ ಭಾಷೆಯಲ್ಲೂ ಕಾಣಿಸದಷ್ಟು ಆತ್ಮಕಥನಗಳು ಮರಾಠಿಯಲ್ಲಿ ಪ್ರಕಟವಾಗಿವೆ. ದಮನಿತರು, ಶೋಷಣೆಗೆ ಒಳಗಾದವರು ತಾವು ಕಂಡ ಅನುಭವನ್ನು ತಮಗೆ ವಿಶಿಷ್ಟವಾದ ಭಾಷೆಯಲ್ಲಿ ಬರೆದಾಗ ಸಾಹಿತ್ಯ ಲೋಕ ಬೆಚ್ಚಿಬಿದ್ದಿತ್ತು. ಏಕೆಂದರೆ ಹಲವರು ಕಾಣದ ಲೋಕದ ಲೋಕ ಅದಾಗಿತ್ತು. ಪ್ರ.ಈ. ಸೋನಕಾಂಬಳೆ ಮರಾಠಿಯಲ್ಲಿ ಬರೆದು ಪ್ರಕಟಿಸಿದ ಆತ್ಮಕಥೆ ‘ನೆನಪಿನ ಹಕ್ಕಿ’ಯನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಜಾತಿಯ ಕಾರಣಕ್ಕಾಗಿ ತಾವು ಅನುಭವಿಸಿದ ಸಂಕಟ, ಅವಮಾನ, ತಳಮಳ, ಯಾತನೆಯವನ್ನು ಸೋನಕಾಂಬಳೆ ಇಲ್ಲಿ ಬರೆದಿದ್ದಾರೆ. ಅದು ದಿಟ್ಟತನದಿಂದ, ಮಾನವೀಯತೆಯಿಂದ ಎಲ್ಲವನ್ನೂ ಮುಕ್ತವಾಗಿ ನೋಡುತ್ತದೆ. ಅದಕ್ಕೂ ಮುಖ್ಯವಾಗಿ ಇದು ಅಂತಃಕರಣದಿಂದ ಕೂಡಿದೆ.

ಇಲ್ಲಿ ಗಮನ ಸೆಳೆಯುವುದು ಅದರ ಆಡು ಭಾಷೆಯ ನಿರೂಪಣೆ. ಮೂಲದಲ್ಲಿ ಇದು ‘ಮಹಾರ’ ಭಾಷೆಯ ನಿರೂಪಿತವಾಗಿದೆ. (ಈ ‘ಮಹಾರ’ ಭಾಷೆಯನ್ನು ಲೇಖಕ ದಯಾ ಪವಾರ ಮರಾಠಿ ಭಾಷೆಯ ಮೂಲ ಶುದ್ಧರೂಪ ಎಂದಿದ್ದಾರೆ). ಅದನ್ನು ಅಷ್ಟೇ ಸಮರ್ಥವಾಗಿ ಉತ್ತರ ಕರ್ನಾಟಕದ ಆಡುನುಡಿಗೆ ಚಂದ್ರಕಾಂತ ಪೋಕಳೆ ಅನುವಾದಿಸಿದ್ದಾರೆ. ಇದು ಈ ಅನುವಾದದ ಮುಖ್ಯಅಂಶ. ಭಿನ್ನವಾದ ಅನುಭವಲೋಕವೊಂದನ್ನು ಮಂಡಿಸುವ ಈ ಆತ್ಮಕಥನ ಈ ಅನುವಾದದ ಮೂಲಕ ಹೊಸಲೋಕವನ್ನು, ಮಹಾರಾಷ್ಟ್ರದ ಮರಾಠವಾಡಾದ ಒಂದು ಕಾಲದ ದಮನಿತ ಜೀವಗಳ ಭಾವನೆಗಳನ್ನು ದಟ್ಟವಾಗಿ ಚಿತ್ರಿಸುತ್ತದೆ. ತಮ್ಮೊಂದಿಗೆ ಬದುಕುತ್ತಿರುವ ಮನುಷ್ಯರನ್ನು ಪ್ರೀತಿಯಿಂದ ಅರಿತುಕೊಳ್ಳಲು ಲೇಖಕನೊಬ್ಬ ಮಾಡಿದ ಪ್ರಯತ್ನದ ಭಾಗವಾಗಿಯೇ ಇದು ಬರೆಯಲ್ಪಟ್ಟಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...