Friday, September 12, 2014

ರಾಘವೇಶ್ವರ ಭಾರತಿ ಸ್ವಾಮೀಜಿ ಬಂಧನ :ಶಿವಮೊಗ್ಗ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮನವಿ
                          ಪ್ರಗತಿಪರ ಸಂಘಟನೆಗಳ ಒಕ್ಕೂಟ, ಶಿವಮೊಗ್ಗ
 ದಿನಾಂಕ:೧೧.೦೯.೧೪,                                                                                                     ಶಿವಮೊಗ್ಗ 

                                                           
ಗೆ, ಮಾನ್ಯ ಮುಖ್ಯಮತ್ರಿಗಳು,
 ಕರ್ನಾಟಕ ಸರ್ಕಾರ,
 ಬೆಂಗಳೂರು        

 ಮೂಲಕ : ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ
ಮಾನ್ಯರೆ,

ವಿಷಯ : ರಾಘವೇಶ್ವರ ಭಾರತಿ ಸ್ವಾಮೀಜಿ ಬಂಧನ ಮುಂದೂಡಿಕೆಯ ತೀರ್ಪು ದುರದೃಷ್ಟಕರ: ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಆಗ್ರಹ

ಅತ್ಯಾಚಾರದ ಗಂಭೀರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಯವರನ್ನು ಸೆ.೧೯ರವರೆಗೆ ಬಂಧಿಸಬಾರದು ಹಾಗೂ ವಿಚಾರಣೆಗೂ ಒಳಪಡಿಸಬಾರದು ಎಂದು ಹೈಕೋರ್ಟ್ ಪೋಲಿಸರಿಗೆ ನೀಡಿರುವ ನಿರ್ದೇಶನ ದುರದೃಷ್ಟಕರವಾದದ್ದು.

ರಾಮಚಂದ್ರಪುರಮಠದ ಬಹುಕಾಲದ ಭಕ್ತರೂ, ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಗಾಯಕರೂ ಆದ ಪ್ರೇಮಲತಾ ಅವರು ರಾಘವೇಶ್ವರ ಸ್ವಾಮೀಜಿ ತನಗೆ ಬೆದರಿಕೆ ಒಡ್ಡಿ, ಮತ್ತಿನ ಆಹಾರವನ್ನು ಪ್ರಸಾದವೆಂದು ತಿನ್ನಿಸಿ, ಬೇರೆ ಬೇರೆ ಊರುಗಳಲ್ಲಿ ತನ್ನ ಮೇಲೆ ನಿರಂತರ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿ ಸ್ವಹಸ್ತಾಕ್ಷರದಲ್ಲಿ ದೀರ್ಘವಾದ ಪ್ರತಿ ಘಟನೆಯ ವಿವರಗಳುಳ್ಳ ದೂರನ್ನು ಪೋಲಿಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಪ್ರೇಮಲತಾ ಅವರ ಪುತ್ರಿ ಅಂಶುಮತಿ ಶಾಸ್ತ್ರಿ ತನ್ನ ತಾಯಿಗೆ ಮತ್ತಿನ ಪ್ರಸಾದವನ್ನು ನೀಡಿ ಆಕೆಯನ್ನು ರಾಘವೇಶ್ವರ ಸ್ವಾಮೀಜಿ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ. ಈಗ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪದಡಿ ಸ್ವಾಮೀಜಿಯ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರೇಮಲತಾ ಅವರು ಸ್ವಾಮೀಜಿಯ ವಿರುದ್ಧ ನೀಡಿದ ದೂರಿನ ವಿವರಗಳು  ರಾಜ್ಯಮಟ್ಟದ ವಾರಪತ್ರಿಕೆಗಳಲ್ಲಿ ಮತ್ತು ಕೆಲವು ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಸ್ವಾಮೀಜಿ ಅವರನ್ನು ಬಂಧಿಸಲು ತೆರಳಿದ ಪೋಲಿಸರು ಕಾಣದ ಕೈಗಳ ಒತ್ತಡಕ್ಕೆ ಮಣಿದು ಬರಿಕೈಯಲ್ಲಿ ಮರಳಿದರು. ಈಗ ರಾಜ್ಯ ಉಚ್ಚ ನ್ಯಾಯಾಲಯವೇ  ಆರೋಪಿತ ಸ್ವಾಮೀಜಿಯವರನ್ನು ಸೆ.೧೯ರವರೆಗೆ ಬಂಧಿಸಬಾರದು ಹಾಗೂ ವಿಚಾರಣೆಗೂ ಒಳಪಡಿಸಬಾರದು ಎಂದು ಪೋಲಿಸರಿಗೆ ನೀಡಿರುವ ನಿರ್ದೇಶನ ನೀಡಿದೆ. ಈ ನಿರ್ದೇಶನ ಸಮಾಜದಲ್ಲಿ ತಪ್ಪು ಸಂದೇಶವನ್ನು ರವಾನಿಸುವ ಅಪಾಯವಿದೆ.

ಸ್ವಾಮೀಜಿ ಅವರು ನಿರಪರಾಧಿಗಳೇ ಇರಬಹುದು. ಆದರೆ ಅದು ನಮ್ಮ ಕಾನೂನಿನ ಪ್ರಕ್ರಿಯೆಯಲ್ಲಿ  ಸಾಬೀತಾಗಬೇಕು. ತನ್ನನ್ನು ಹಣಕ್ಕಾಗಿ ಪ್ರೇಮಲತಾ ಮತ್ತು ದಿವಾಕರ ಶಾಸ್ತ್ರಿ ದಂಪತಿಗಳು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಸ್ವಾಮೀಜಿ ಕಡೆಯಿಂದ ದೂರು ದಾಖಲಾದ ತಕ್ಷಣ ಅವರನ್ನು ಬಂಧಿಸುವ ಪೋಲಿಸರು, ಅನೇಕ ವರ್ಷಗಳಿಂದ ತನ್ನ ಮೇಲೆ ಸ್ವಾಮೀಜಿ ಅತ್ಯಾಚಾರ ಮಾಡುತ್ತಿದ್ದರೆಂದು ಮಹಿಳೆಯೊಬ್ಬರು ವಿವರವಾದ ದೂರು ನೀಡಿದರೂ ಇನ್ನೂ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸದಿರುವುದು ಮತ್ತು ವಿಚಾರಣೆಯನ್ನು ಮುಂದೂಡುವಂತೆ ನ್ಯಾಯಾಲಯ ನಿರ್ದೇಶನ ನೀಡುವುದು ಸಮಾನ ಕಾನೂನಿನ ಅನುಷ್ಟಾನದ ವಿರುದ್ಧವಾಗಿದೆ ಎಂದು ನಾವು ಭಾವಿಸುತ್ತೇವೆ. ಸರ್ಕಾರ ಈ ಪ್ರಕರಣದಲ್ಲಿ ತನ್ನ ನಿರ್ದೇಶನವನ್ನು ಪುನರ್ ಪರೀಶೀಲಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಈ ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ಒಪ್ಪಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುತ್ತ ತ್ವರಿತ ತನಿಖೆಗೆ ಒತ್ತಾಯಿಸುತ್ತೇವೆ.

ಓಟಿನ ರಾಜಕಾರಣ ಮಾಡುವ ಕೆಲವು ರಾಜಕಾರಣಿಗಳು, ಮಂತ್ರಿಗಳು ಮತ್ತು ಕೆಲವು ಸ್ವಾಮೀಜಿಗಳು ಆರೋಪಿತ ಸ್ವಾಮೀಜಿಯ ಪರವಾಗಿ ಮಾತನಾಡುತ್ತ ಸಂತ್ರಸ್ಥ ಮಹಿಳೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಮಹಿಳೆಯರ ಘನತೆಗೆ ಧಕ್ಕೆ ತರುತ್ತಿರುವುದನ್ನು ನಾವು ಖಂಡಿಸುತ್ತೇವೆ.
     ವಂದನೆಗಳೊಂದಿಗೆ

ಟಿ.ಆರ್ ಕೃಷ್ಣಪ್ಪ                              ಕಲ್ಲೂರು ಮೇಘರಾಜ್                                    ವಾಮದೇವಗೌಡ
ಜಿಲ್ಲಾಧ್ಯಕ್ಷರು, ಪಿ.ಯು.ಸಿ.ಎಲ್,     ಸಂಚಾಲಕರು,ಶಾಂತವೇರಿ             ಜಿಲ್ಲಾಧ್ಯಕ್ಷರು,ಗ್ರಾಮ ಗಣರಾಜ್ಯ ವೇದಿಕೆ
                                   ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್,      

ಅಶೋಕ್ ಯಾದವ್                                               ಜಿ.ಮಾದಪ್ಪ                                      ಕೆ.ಪಿ.ಶ್ರೀಪಾಲ್        ಸಂಚಾಲಕ,ಅಣ್ಣಾ ಹಜಾರೆ ಹೋರಾಟ ಸಮಿತಿ,  ಮಾಜಿ ವಿಧಾನಪರಿಷತ್ ಸದಸ್ಯರು,  ಅಧ್ಯಕ್ಷರು, ನಮ್ಮ ಹಕ್ಕು ವೇದಿಕೆ  

ಅ.ರಾ.ಶ್ರೀನಿವಾಸ
ಪತ್ರಕರ್ತರು,ಸಾಗರ


ಸುವರ್ಣ ನಾಗರಾಜ್  
ಮುಖಂಡರು, ಸಂಚಾಲಕರು,                 
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್,

  ಶೇಖರ್ ಗೌಳೇರ್                             ಮಂಜುಳಾದೇವಿ                           ದೂಗೂರು ಪರಮೇಶ್ವರ
  ಜನ ವಿಜ್ಞಾನ ಪರಿಷತ್,                   ಹಿರಿಯ ವಕೀಲರು,                                  ಸಂಚಾಲಕರು, ಡಿ.ಎಸ್.ಎಸ್


ಸರ್ಜಾಶಂಕರ ಹರಳಿಮಠ                       ಕಬಸೆ ಅಶೋಕಮೂರ್ತಿ                                  
ರಾಜ್ಯ ಕಾರ್ಯದರ್ಶಿ,ಪಿ.ಯು.ಸಿ.ಎಲ್ ,     ಸಂಚಾಲಕರು, ಭೂ ಹಕ್ಕು ಹೋರಾಟ ಸಮಿತಿ,ಸಾಗರ,   

       ಕಡ್ಲೆಕಾಯಿ ಮಂಜುನಾಥ್
        ಹೋರಾಟಗಾರರು.

1 comment:

  1. ಪ್ರಗತಿಪರರ ಈ ಬೇಡಿಕೆ ನ್ಯಾಯಯುತವಾದುದು. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಎಲ್ಲರೂ ಸಮಾನರು. ನ್ಯಾಯದೊಳಗೂ ರಾಜಕೀಯ ನುಸುಳಿದರೆ ಅದಕ್ಕಿಂತ ಅಪಾಯ ಪ್ರಜಾಪ್ರಭುತ್ವಕ್ಕೆ ಬೇರೇನೂ ಇಲ್ಲ. ನಮ್ಮದೂ ಅದೇ ಬೇಡಿಕೆ.

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...