Wednesday, September 17, 2014

ನಿನ್ನ ಪ್ರೀತಿಸುವುದಿಲ್ಲ




ನನ್ನ ಫೋಟೋ

        ನಟರಾಜ ಬೂದಾಳ

 


ನಿನ್ನ ಮನದ ಮೂಲೆಯಲ್ಲಿ ಅರಳಿ ನಗುತಿರುವ ಪ್ರೇಮ
ಕವನವ ಓದಿ ಬರುವೆ ಆದರೆ ಪ್ರೀತಿಸುವುದಿಲ್ಲ
ನಿನ್ನ ಅದುರುವ ತುಟಿಗಳೆರಡನೂ ಕಲೆಹಾಕಿ ನೆನೆಹಾಕಿ
ಸವಿದು ಮುದ್ದಿಸಿ ಬರುವೆ ಆದರೆ ಪ್ರೀತಿಸುವುದಿಲ್ಲ
ಮನಸು ತೆರೆವ ಮುನ್ನವೇ ಬಂದು ಆವರಿಸುವ ನಿನ್ನ
ಮರಳದಂತೆ ಬಂಧಿಸಿ ಇಡುವೆ ಆದರೆ ಪ್ರೀತಿಸುವುದಿಲ್ಲ
ಬೇಡುವವ ಬಂದರೂ ನೀನೇ ಇರಬಹುದೇನೋ ಎಂದು
ಕಾತರಿಸಿ ಹಂಬಲಿಸುವೆ ಆದರೆ ಪ್ರೀತಿಸುವುದಿಲ್ಲ.
ನಿನ್ನ ಹನಿಹನಿಯಾಗಿ ಹೀರಿ ನನ್ನ ಕುರುಹು ಕಾಣದ
ಹಾಗೆ ಕೂಡಿಬಿಡುವೆ ಆದರೆ ಪ್ರೀತಿಸುವುದಿಲ್ಲ
ನಿನ್ನ ಮನದ ಅಂಗಳದಲ್ಲಿ ರಂಗವಲ್ಲಿಯಿಟ್ಟು ನಡುವೆ ನನ್ನ
ಮನಸಿಟ್ಟು ಬರುವೆ ಆದರೂ ನಿನ್ನ ಪ್ರೀತಿಸುವುದಿಲ್ಲ.
                       
                                 

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...