Tuesday, September 23, 2014

ದೀಪ ಮತ್ತು ಕಣಿವೆಯ ಸೀಳು...




ಮಮತಾ ಅರಸೀಕೆರೆ


ಅಬ್ಬಾ ಎಷ್ಟೊಂದು ಚಂದ
ಕಣಿವೆಯ ಸೀಳು
ಹೌದು ನಾನು ಹೆಣ್ಣು
ಈ ಜಗತ್ತಿನ ಗೀಳು

ಕಣಿವೆಯೂ ಇದೆ
ಸೀಳೂ ಇದೆ
ನಾನು ಭೂಮಿ
ಪರ್ವತ ಸ್ತನ ಮಂಡಲೆ..!
2
ಕಣ್ಣಲ್ಲೇ ಅಳೆದುಬಿಡುತ್ತೀರಿ
ಕರಾರುವಾಕ್ಕು ಅಳತೆಗಳು
ಬೇಡವೇ ಬೇಡ ನಿಮಗೆ
ಯಾವುದೇ ಸಿದ್ದ ಮಾಪಕಳು
ಬಾಯಿ ತುಂಬಾ ಚಪ್ಪರಿಸುತ್ತೀರಿ
ಮತ್ತೆ ಮತ್ತೆ ಸವಿಯುತ್ತೀರಿ
ಅದೆಷ್ಟು ತೆವಲೋ
ಅದೇ ಧ್ಯಾನ, ಅದೇ ಉಸಿರು
ರಸಗವಳವೇ ಅಂಗಾಂಗಗಳ ಹೆಸರು..
3
ನಿಮ್ಮ ಕ್ಯಾಮೆರಾಗೂ ಗೊತ್ತು
ಎದೆ, ಹೊಕ್ಕುಳು, ತೊಡೆಗಳು
ರೋಮಾಂಚನಗೊಳಿಸುವ
ಸಾಮಗ್ರಿಗಳು
ನಿಮ್ಮ ಅಂಕೆಯ ಹೊರತಾಗಿಯೂ
ಎಲ್ಲೆಲ್ಲೋ ಚಲಿಸಿಬಿಡುತ್ತವೆ.
ಪಾಪ ನಿಮ್ಮನ್ನು ತಬ್ಬಿಬ್ಬುಗೊಳಿಸುತ್ತವೆ
4
ಕೋಟೆ , ಗುಹ್ವರ ಏರಿ
ಹತ್ತಿ , ಇಳಿದು
ಕಿರುಚಿ , ಪರಚಿ
ನಿಮಗದು ವಿಕೃತಾನಂದ
ನಮಗದು ಅತ್ಯಾಚಾರ
ಕೊನೆಗೆ
ಹದ್ದು ಮೀರಿತೆಂದು
ಅಸಮ್ಮತಿಯ ನಡುವೆಯೂ
ಬುರ್ಖಾ ತೊಡಿಸಿಬಿಡುತ್ತೀರಿ
ವರ್ತುಲದಲ್ಲಿ ಸಿಲುಕಿಸಿ
ವಂಚಿಸಿತ್ತೀರಿ
ಪರದೆ ನಿಜವಾಗಿಯೂ ಬೇಕು
ನಿಮ್ಮ ಕ್ಯಾಮೆರಾಗಳಿಗೆ
ನಿಮ್ಮ ನಿಮ್ಮ ಕಣ್ಣುಗಳಿಗೆ
ಮತ್ತು
ನಿಮ್ಮ ನಿಮ್ಮ ಮನಸ್ಸುಗಳಿಗೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...