Wednesday, October 15, 2014

ಮೀನು ಮತ್ತು ನಗು



Charles Bukowski (ಚಾರ್ಲ್ಸ್ ಬಕೊವಸ್ಕಿ)

ಅನು: ಕೆಂಚನೂರು ಶಂಕರ



ನಮ್ಮ ಮನೆಯಲ್ಲಿ
ಒಂದು ಮೀನಿನ ತೊಟ್ಟಿಯಿತ್ತು
ಅದರಲ್ಲಿ ಐದು ಹೊಂಬಣ್ಣದ ಮೀನುಗಳಿದ್ದವು

ಅವುಗಳು
ನಾವು ಸಂತೋಷವಾಗಿರಬೇಕೆಂದು ಬಯಸುತ್ತವೆ
ಎಂಬುದು ನನ್ನಮ್ಮನ ನಂಬಿಕೆಯಾಗಿತ್ತು
ಮತ್ತು ಅಮ್ಮ ಯಾವಾಗಲೂ ನಗುತ್ತಿರುತ್ತಿದ್ದಳು
ಅಪ್ಪ ಹೊಡೆಯುತ್ತಿರುವಾಗಲೂ !
ಮತ್ತೆ ನನಗೂ ಹೇಳುತ್ತಿದ್ದಳು
ಮಗನೇ , ಸದಾ ನಗುತ್ತಿರಬೇಕೆಂದು
ಆದರೆ ಅಪ್ಪ ಅಮ್ಮನಿಗೆ ಹೊಡೆಯುವಾಗ
ನನಗೆ ನಗುವುದು ಕಷ್ಟವಾಗುತ್ತಿತ್ತು 


ಒಂದು ದಿನ ಐದೂ ಮೀನು ಸತ್ತುಹೋದವು
ತೊಟ್ಟಿಯ ಮೇಲ್ಬಾಗದಲ್ಲಿ ತೇಲುತ್ತಿದ್ದವು
ಮನೆಗೆ ಬಂದ ಅಪ್ಪ
ಅಷ್ಟೂ ಮೀನನ್ನು ಬೆಕ್ಕಿಗೆ ಹಾಕಿಬಿಟ್ಟ
ಅಂದು ನನಗಂತೂ
ಬೆಕ್ಕು ನನ್ನಮ್ಮನ ನಗುವನ್ನು
ತಿನ್ನುತ್ತಿರುವಂತೆಯೇ ಅನ್ನಿಸಿತು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...