Tuesday, October 07, 2014

ಅಶ್ರುವೀಣೆ

ತ್ರಿಪುರನೇನಿ  ಶ್ರೀನಿವಾಸ್
ಕನ್ನಡಕ್ಕೆ: ಸೃಜನ್

ಹೂವು ನೆಲದ ಮೇಲೆ ಬಿದ್ದರೆ 
ಪರಿಮಳ ಗಾಯಗೊಳುತ್ತದೆ 
ಮೃದುತ್ವ ಮೌನವಾಗಿ ರೋದಿಸುತ್ತದೆ 
ಶರೀರಕ್ಕಾದರೂ ಅಶರೀರಕ್ಕಾದರೂ  
ದುಃಖ ಒಂದೇ ಅಲ್ಲವೇ ?

ತಾರೆ ನೆಲಕ್ಕೆ ಜಾರಿ ಬಿದ್ದರೆ 
ಬೆಳದಿಂಗಳು ಗಾಯಗೊಳುತ್ತದೆ 
ಕಾಂತಿ ಪುಂಜ ಗರ್ಭ ಶೋಕದಿಂದ ಕಣ್ಣೀರಾಗುತ್ತದೆ 
ಜೀವಕ್ಕಾದರೂ ನಿರ್ಜೀವಕ್ಕಾದರೂ 
ವಿರಹ ದುಃಖವೇ ಅಲ್ಲವೇ ?

ಹಾಡು ನೆಲಕಚ್ಚಿದರೆ 
ಸಂಗೀತ ಗಾಯಗೊಳುತ್ತದೆ 
ಸಪ್ತಸ್ವರಗಳು ಶ್ರು ವೀಣೆಗಳಾಗುತ್ತವೆ 
ರೂಪಕ್ಕಾದರೂ ನಿರೂಪಕ್ಕಾದರೂ 
ಎದೆಯ ಮೌನ ಶಾಪವಲ್ಲವೇ ?

ಮನಸ್ಸು ನೆಲಕ್ಕೆ ಬಿದ್ದರೆ 
ಬದುಕು ಗಾಯಗೊಳುತ್ತದೆ 
ಬಾಂಧವ್ಯ ಹರಿದು ಹೋಗುತ್ತದೆ 
ಮಮತೆಯಾದರೂ ನಿರ್ಮಮತೆಯಾದರೂ 
ದಿಗಿಲು ಭಾರವಲ್ಲವೇ ?

ಕ್ರಾಂತಿ ನೆಲಕಚ್ಚಿದರೆ 
ಹೋರಾಟ ಗಾಯಗೊಳ್ಳುತ್ತದೆ 
ದಾರಿ ಹೆಜ್ಜೆ ಹಾಕುವುದ ನಿಲಿಸುತ್ತದೆ 
ಅಮರನಾದರೂ ನಶ್ವರನಾದರೂ 
ತಾತ್ಕಾಲಿಕ ಸೋಲು ತಪ್ಪಿದ್ದಲ್ಲ ಅಲ್ಲವೇ ?

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...