Wednesday, October 15, 2014

`ನೋವು'




ಎಂ.ಆರ್ ಕಮಲಾ





ಬಣ್ಣದ ಲಂಗ,
ಕಸೂತಿ ಸೀರೆ
ತರಹೇವಾರಿ ಹೂವು
ಚುಕ್ಕೆ ಬಳೆ, ಬಿಂದಿ
ನಕ್ಷತ್ರ ಓಲೆ , ಪರ್ಸು
ಮ್ಯಾಚಿಂಗ್ ಚಪ್ಪಲಿ
ಬೇಕೆ, ಬೇಕೆ?
ಇಡೀ ದಿನ ಓಣಿ ಸುತ್ತಿದರೂ
ತೆರೆಯಲಿಲ್ಲ ..
ಒಂದೇ ಒಂದು ಮನೆಯ ಕದ!
`ನೋವು' ಯಾರೋ ಕೂಗಿದರು...
ಹೆಣ್ಣು ಮಕ್ಕಳೆಲ್ಲ
ದಬದಬನೆ ಹೊರಗೋಡಿ
ಸಿಕ್ಕವರ ಕಣ್ಣಲ್ಲೆಲ್ಲ
ತಮ್ಮ ಮುಖ ನೋಡಿಕೊಂಡರು!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...