Monday, November 24, 2014

29 ನವೆಂಬರ್ ಮೈಸೂರು : ಹಾಡಿನ ಮೋಡಿ                        ಪಂ. ತಾರಾನಾಥ ಫೌಂಡೇಷನ್ ಮೈಸೂರು                         ಹಾಡಿನ ಮೋಡಿ


                  ಹಿಂದೂಸ್ತಾನಿ ಗಾಯನ : ಪಂ. ಶ್ರೀಪಾದ ಹೆಗಡೆ ಕಂಪ್ಲಿ

                      ಹಾರ್ಮೋನಿಯಂ: ಶ್ರೀಮತಿ ನಾಗವೇಣಿ

                         ತಬಲಾ :  ಪಂ. ರವಿಕಿರಣ ನಾಕೋಡ್


               ೨೦೧೪ರ ನವೆಂಬರ್ ೨೯, ಶನಿವಾರ ಸಂಜೆ ೬ ಕ್ಕೆ
                ಸ್ಥಳ : ಮೀನಾಕ್ಷಿ (ಎಂ.ಎಲ್.ಕೃಷ್ಣಸ್ವಾಮಿ ಅವರ ನಿವಾಸ)


            ೧೨/ಎ, ಮೊದಲ ಮುಖ್ಯರಸ್ತೆ, ನಾಲ್ಕನೇ ಹಂತ, ಟಿ.ಕೆ. ಬಡಾವಣೆ

                        (ಕಾಮಾಕ್ಷಿ ಆಸ್ಪತ್ರೆ ಹತ್ತಿರ) ಮೈಸೂರು-೫೭೦ ೦೦೯

 

                 (ದೂರವಾಣಿ: ೯೮೪೫೦೪೩೯೫೭, ೯೦೩೬೩೧೧೧೧೯)


              

               

                                  ನಿಮಗೆ ಸ್ಚಾಗತ
                           ಪಂ. ರಾಜೀವ ತಾರಾನಾಥ

                          ಪಂ.ತಾರಾನಾಥ ಫೌಂಡೇಷನ್ 


ಪಂ. ಶ್ರೀಪಾದ ಹೆಗಡೆ ಕಂಪ್ಲಿ: 
ಗ್ವಾಲಿಯರ್ ಘರಾನಾ ಮತ್ತು ಕಿರಾಣಾ ಘರಾಣಾ ಶೈಲಿಯ ಉತ್ತಮಾಂಶಗಳನ್ನೆಲ್ಲ ಮೈಗೂಡಿಸಿಕೊಂಡು, ತಮ್ಮ ಕಂಠದ ಸೊಗಸುಗಾರಿಕೆಯಿಂದ ಹಿಂದೂಸ್ತಾನೀ ಗಾಯನಕ್ಕೊಂದು ವಿಶೇಷ ಮೆರುಗನ್ನು ತಂದಿರುವ ಪಂ.ಶ್ರೀಪಾದ ಹೆಗಡೆ ಧಾರವಾಡದಲ್ಲಿ ನೆಲಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಂಪ್ಲಿಯವರಾದ ಶ್ರೀಪಾದ ಹೆಗಡೆ ಹಿಂದೂಸ್ತಾನೀ ಗಾಯನದ ಮೋಡಿಗೆ ಬಾಲ್ಯದಲ್ಲಿಯೇ ಮರುಳಾದವರು. ಮೊದಲು ಪಂ. ಗಣಪತಿ ಭಟ್ ಹಾಸಣಗಿ ಅವರಲ್ಲಿ, ನಂತರ ಹಿಂದೂಸ್ತಾನೀ ಹಾಡುಗಾರಿಕೆಯ ಅಪ್ರತಿಮ ಗುರು ಪಂ.ಬಸವರಾಜ ರಾಜಗುರು ಅವರ ಬಳಿ ಶಿಷ್ಯವೃತ್ತಿ. ರಾಷ್ಟ್ರದ ಉದ್ದಗಲಕ್ಕೂ ಓಡಾಡಿ, ಪ್ರಮುಖ ವೇದಿಕೆಗಳಲ್ಲಿ ಹಾಡಿ, ಸಾವಿರಾರು ಜನ ಕೇಳುಗರ ತಲೆದೂಗಿಸಿರುವ ಹೆಗಡೆ ಅವರಿಗೆ ಹಲವು ಪ್ರಶಸ್ತಿಗಳು; ಬಗೆಬಗೆಯ ಗೌರವದ ಮೆರುಗು. ಇವರ ಮಾರ್ಗದರ್ಶನದಲ್ಲಿ ಹಾಡುಗಾರಿಕೆಯನ್ನು ಕಲಿಯುತ್ತಿರುವ ಶಿಷ್ಯರ ಸಂಖ್ಯೆಯೂ ದೊಡ್ಡದೇ.ಡಾ. ರವಿಕಿರಣ ನಾಕೋಡ: 
ಪ್ರತಿಭೆ ಮತ್ತು  ತಾರುಣ್ಯ ತುಂಬಿ ತುಳುಕುವ ರವಿಕಿರಣ ಕರ್ನಾಟಕ ವಿಶ್ವವಿದ್ಯಾಲಯದಿಂದ ತಬಲಾ ವಾದನದಲ್ಲಿ ಸ್ನಾತಕೋತ್ತರ ಪದವಿ, ನಂತರ ಹಂಪಿ ವಿವಿಯಿಂದ ಡಾಕ್ಟರೇಟ್ ಪಡೆದವರು. ಆಕಾಶವಾಣಿ ಮತ್ತು ದೂರದರ್ಶನದ ’ಎ’ಗ್ರೇಡ್ ಕಲಾವಿದರು. ತಂದೆ ಪ್ರಚಂಡ ತಬಲಾವಾದಕ ಪಂ. ರಘುನಾಥ ನಾಕೋಡ್; ತಾಯಿ ವಿದುಷಿ ರೇಣುಕಾ ನಾಕೋಡ್ ಸುಗಮ ಸಂಗೀತದಲ್ಲಿ ಟಾಪ್‌ಗ್ರೇಡ್ ಕಲಾವಿದೆ. ಇಡೀ ಕುಟುಂಬವೇ ಸಂಗೀತದ ಕುಟುಂಬ. ಅಜ್ಜ ಅರ್ಜುನಸಾ ನಾಕೋಡ್ ಹೆಸರಾಂತ ಹಿಂದೂಸ್ತಾನಿ ಗಾಯಕರು. ದೊಡ್ಡ ಸಂಗೀತ ಪರಂಪರೆಯನ್ನೇ ಬೆನ್ನಿಗೆ ಕಟ್ಟಿಕೊಂಡು ಬಂದ ರವಿಕಿರಣ್ ತಮ್ಮ ಪರಿಶ್ರಮದಿಂದ ಮೇಲೇರಿದವರು. ರಾಷ್ಟ್ರದ ಅನೇಕ ಪ್ರಸಿದ್ಧ ಗಾಯಕರು ಮತ್ತು ವಾದಕರಿಗೆ ತಬಲಾ ಸಾಥ್ ನೀಡಿದ್ದಾರೆ. ಬಹುಮಾನಗಳು, ಪ್ರಶಸ್ತಿಗಳು, ಪ್ರಸಿದ್ಧಿ ಎಲ್ಲವೂ ಇವರ ಜೊತೆಯಲ್ಲಿಯೇ ಇವೆ.

ಶ್ರೀಮತಿ ನಾಗವೇಣಿ: 
ಪಂ.ವಸಂತ ಕನಕಾಪುರ ಅವರಲ್ಲಿ ಅನೇಕ ವರ್ಷ ಹಾರ್ಮೋನಿಯಂ ಅಭ್ಯಾಸ. ನಂತರ ತಮ್ಮ ಪತಿ ಶ್ರೀಪಾದ ಹೆಗಡೆಯವರಲ್ಲಿ ಶಿಕ್ಷಣ ಮುಂದುವರಿಕೆ. ಜೊತೆಗೆ ಹಲವಾರು ಶಿಷ್ಯರಿಗೆ ಹಾಡುಗಾರಿಕೆಯನ್ನೂ ಕಲಿಸುತ್ತಿದ್ದಾರೆ. ಅನೇಕ ಕಲಾವಿದರಿಗೆ ಹಾರ್ಮೋನಿಯಂ ಸಾಥ್ ನೀಡಿದ ಕೀರ್ತಿಯೂ ಶ್ರೀಮತಿ ನಾಗವೇಣಿ ಅವರಿಗಿದೆ. ಪತಿಯ ಜೊತೆಯಲ್ಲಿ ಧಾರವಾಡದಲ್ಲಿ ನೆಲಸಿದ್ದಾರೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...