Monday, November 17, 2014

ಒಬ್ಬಂಟಿಯಾಗಿ ನಡೆ!


ಒಬ್ಬಂಟಿಯಾಗಿ ನಡೆ!



ಕೆ ಪಣಿರಾಜ





ಜೊತೆಗಿರುವ ಯಾರನ್ನೂ ನಂಬಬೇಡ
ಗುಟ್ಟನ್ನ್ಯಾರಿಗೂ ಬಿಟ್ಟು ಕೊಡಬೇಡ
ಒಬ್ಬಂಟಿಯಾಗಿ ನಡೆ!

ಕನ್ನಡಿ ಎದಿರು ನಿಲ್ಲು.
’ಥೂ! ಕೊಳಕರೇ! ದ್ರೋಹಿಗಳೇ!
ನಿಮ್ಮನ್ನು ನಾಯಿಕುನ್ನಿಯ ಹಾಗೆ-
ಹೊಡೆದು ಕೊಲ್ಲುತ್ತೇನೆ’ ಅಂತ
ಅಂತರಂಗ ಬಿಚ್ಚಿದ ಉರಿಗೆ ಕನ್ನಡಿ-
ಕರಕಾಗುತ್ತದೆ: ಮತ್ತೇನೂ ಕಾಣದು;
ಈಗ ಏನೂ ಕಾಣದು:ಯಾವ ಬಿಂಬವೂ ಇಲ್ಲ
ಮುಗುಳ್ನಗು-
’ಎನ್ನ ಬಾಂಧವರೇ!’ ಅನ್ನು, ಆದರೆ
ಅಪ್ಪಬೇಡ, ಯಾರನ್ನೂ ಒಪ್ಪಬೇಡ.

ಒಬ್ಬಂಟಿಯಾಗಿ ನಡೆ!
ಒಂದು ಕಪ್ಪು ಕನ್ನಡಕ
         ತೊಟ್ಟುಕೋ
ಮೂಗಿಗೆ ಮುಸುಕು
         ಹಾಕಿಕೋ
ವಿಡಿಯೋ ಕ್ಯಾಮೆರಾ ರೆಡಿ
         ಮಾಡಿಕೋ, ಒಮ್ಮೆಲೇ
ಒದರು:”ಸ್ವಚ್ಛತೆ! ಸ್ವಚ್ಛತೆಗೆ ನಾನು
                 ಬದ್ಧ!
ಎನ್ನ ಮನೆಯಂಗಳದಿಂದಲೇ
                 ಶುದ್ಧಿ!’
ತಾಲಿಮು
         ಮಾಡಿರಬೇಕು
ದಂಗು
ಹೊಡೆಸುವಂತಿರಬೇಕು
ಮರೆಯಬೇಡ.

ಒಬ್ಬಂಟಿಯಾಗಿ ನಡೆ!
’ಎಲವೋ’
         ಎಂಬ ದನಿ ಮನದಲ್ಲಿ
ಮಾಸದಂತೆ ಅಚ್ಚು
                 ಹಾಕಿಕೊಂಡಿರು
’ಅಯ್ಯಾ!’
         ಎಂದು ಹಲ್ಲುಕಿರಿ
’ಅಂತರಂಗ-
         ಬಹಿರಂಗ’
ಒಂದೇ ಸಿಕ್ಕಾದ ಎರಡು
         ಬೆನ್ನು ಕಣೋ!
ಬಿಲ್ಲೆ ಹಾರಿಸು
         ಚಿತ್ತಾದರೆ- ಬೆಂಕಿ ಹಚ್ಚು
ಟಪ್ಪಾದರೆ-
ಕೆಂಡ ಆರದಂತೆನೀರು ಹನಿಸು.

ಯಾರನ್ನೂ
ನಂಬಬೇಡ
ಗುಟ್ಟ
ಬಿಟ್ಟು ಕೊಡಬೇಡ
ಒಬ್ಬಂಟಿಯಾಗಿ ನಡೆ!

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...