Thursday, November 20, 2014

ಕಾಡು ಹುವ್ವು



















ತೆಲುಗು ಮೂಲ: ಸ್ವರೂಪಾ ರಾಣಿ
ಇಂಗ್ಲಿಷ್‌ಗೆ: ಕೆ. ಪುರುಷೋತ್ತಮ್

ಕನ್ನಡಕ್ಕೆ: ಡಾ ಎಚ್. ಎಸ್. ಅನುಪಮಾ
 
 
 
 

ಪೊದೆಯಲ್ಲಿ ಸಿಕ್ಕಿಬಿದ್ದ ಹಕ್ಕಿಗೆ
ಮುಳ್ಳು ಚುಚ್ಚುವ ಹಾಗೆ
ತಲೆಮಾರುಗಳಿಂದ ಬೆಳೆದ
ಗುಲಾಮಗಿರಿಯ ಮುಳ್ಳು
ಎಲ್ಲಕಡೆ ಚುಚ್ಚುತ್ತಿದೆ.

ಇತ್ತ ದರಿ ಅತ್ತ ಪುಲಿ
ಮನೆಯೊಳಗಿನ ಗಂಡಸುತನ ಒಂದು ಕಪಾಳಕ್ಕೆ ಬಾರಿಸಿದರೆ
ಬೀದಿಯ ಗಂಡಸುತನ ಇನ್ನೊಂದು ಕೆನ್ನೆಗೆ ಹೊಡೆವಾಗ
ನನ್ನ ನಾನು ಬೀಜದಂತೆ ಹೂತುಕೊಳ್ಳಬೇಕೆನಿತ್ತು. 

ಹಾಸ್ಟೆಲಿನಲ್ಲಿ, 
ಮದುವೆಯಾಗಬಲ್ಲ ವಧುವನರಸಿ ಅಲ್ಲ್ಲ
ಕಾಮದ ಹಸಿವಿಗೆ ಆಹಾರವಾದಾಳೆಂದು
ವಾರ್ಡನ್ ಹಿಂದೆಹಿಂದೆ ಬಂದಾಗ  
ಈ ದೇಹವನ್ನೇ ವಿಸರ್ಜಿಸಬೇಕೆನಿಸಿತ್ತು.

ಬಾಲ್ಯದಲ್ಲಿ
ಹಣೆಮೇಲೆ ಬೊಟ್ಟಿಲ್ಲ, ಬೋಳುಹಣೆಯೆಂದು
ಅವರು ನನ್ನ ಅವಮಾನಿಸಿದಾಗ
ಗಬ್ಬು ನಾರುವ ಹಳ್ಳಿಯಲ್ಲಿ
ಮೂಗು ಹೊಸೆದುಹಾಕಿಬಿಡಬೇಕೆನಿಸಿತ್ತು.

ಅಂತೂ ಒಂದು ಕೆಲಸವೆಂದು ಸಿಕ್ಕಾಗ
ಮೀಸಲಾತಿಯಿಂದ ಬಂದವಳೆಂದು
ಗುಸಪಿಸ ಮಾತಾಡುವಾಗ
ನನ್ನ ನಾನೇ ಮುಳುಗಿಸಿಬಿಡಬೇಕೆನಿಸಿತ್ತು.

ಮತ್ತೆ ಮೇಲೇಳದಂತೆ ದಣಿದಿರುವಾಗ
ಹುಲ್ಲು ಗರಿಕೆಯೂ
ಸೂಜಿಯಂತೆ ಚುಚ್ಚುತ್ತಿದೆ
ಆದರೂ
ಅರಳುತ್ತೇನೆ
ಕಾಡು ಹುವ್ವಿನಂತೆ..
ಧುಮುಕುತ್ತೇನೆ ಕಾಡತೊರೆಯಂತೆ
ಎಲ್ಲ ಅಡೆತಡೆಗಳ ದಾಟಿ..


(ಚಲ್ಲಪಳ್ಳಿ ಸ್ವರೂಪಾ ರಾಣಿ ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಬೌದ್ಧ ಅಧ್ಯಯನ ವಿಭಾಗದಲ್ಲಿ ಬೋಧಕರಾಗಿದ್ದಾರೆ. )

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...