Wednesday, December 10, 2014

ಕವಿತೆ ಆಗಲೊಲ್ಲದ ಸಾಲು







ಎಣ್ಣೆ ಟ್ಯಾಂಕರ್ ನ
ಅಪಘಾತದ ಸುದ್ದಿ
ಗಾಳಿಯಲಿ ತೇಲಿ
ಸೋರುವ ಎಣ್ಣೆ
ತುಂಬಿಕೊಳಲು
ಕ್ಯಾನ್ ಹಿಡಿದು
ಓಡೋಡಿ ಬಂದರು ಜನ 

ಹಣತೆಗೆ ಎಣ್ಣೆಯಿದ್ದೂ
ಕತ್ತಲಲಿ ಕುಳಿತವರು

ಸಾಲುಗಟ್ಟಿದರು 

ಎಲ್ಲರ ಬಾಯಲೂ ಒಂದೇ ಮಾತು:
ಎಣ್ಣೆ ಸಿಗುತ್ತಿದೆ
ಒಳ್ಳೇ ಕ್ವಾಲಿಟಿ ಎಣ್ಣೆ
ಪುಕಟ್ ಎಣ್ಣೆ..
ಬಳಸುವವರಿಲ್ಲದೆ
ಸೋರಿ ದಂಡವಾಗುತ್ತಿದೆ
ತುಂಬಿಕೋ ನಿನ್ನ ಹಣತೆ ಮಿಕ್ಕುವಷ್ಟು
ತುಂಬಿಡು ನಿನ್ನ ಬಿಂದಿಗೆ ತುಂಬುವಷ್ಟು

ನಾ ಮುಂದು
ನೀ ಮುಂದು ಎಂದು
ಓಡೋಡಿ ಬರುವವರ
ಭರಾಟೆಯಲಿ


ವಾಹನದಡಿ ಅಪ್ಪಚ್ಚಿಯಾದ
ಚಾಲಕನ ಕ್ಷೀಣಸ್ವರ
ಯಾರಿಗೂ ಕೇಳದೆ
ಕಳೆದೇಹೋಯಿತು
ಸಂತೆಯೊಳಗಿನ
ಅನಾಥರ ಹಾಗೆ

ತುಸುಹೊತ್ತು
ರಸ್ತೆಯ ಮೇಲೆ
ಅಳಿದುಳಿದ ಮನುಷ್ಯತ್ವದ
ಹೆಗಲ ಮೇಲೆ
ಬಿಸಿಲು ಕೋಲು
ತಣ್ಣಗೆ ಬಿದ್ದಿತ್ತು

1 comment:

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...