Wednesday, February 25, 2015

ವಿವಾದಾತ್ಮಕ ಭೂ ಮಸೂದೆ ಬಿಜೆಪಿಗೆ ಸೆರಗಿನ ಕೆಂಡ
ಕುಂಕುಮ್ ದಾಸ್‌ಗುಪ್ತಾ

ವಿವಾದಾತ್ಮಕ ಭೂ ಮಸೂದೆ ಬಿಜೆಪಿಗೆ ಸೆರಗಿನ ಕೆಂಡ

ನರೇಂದ್ರ ಮೋದಿ ಸರಕಾರ ಹೊಸ ಭೂ ಮಸೂದೆಯನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದೆ. ಭೂಸ್ವಾೀನ ಹಾಗೂ ಪುನರ್ವಸತಿಯಲ್ಲಿ ನ್ಯಾಯಬದ್ಧ ಪರಿಹಾರ ಮತ್ತು ಪಾರದರ್ಶಕ (ತಿದ್ದುಪಡಿ) ಮಸೂದೆ-2015 ಸಂಸತ್ತಿನ ಒಪ್ಪಿಗೆ ಪಡೆಯಬೇಕಿದೆ. ಕಳೆದ ವರ್ಷ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಈ ಸಂಬಂಧ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. ಈಗಾಗಲೇ ಜಾರಿಗೊಳಿಸಿರುವ ಸುಗ್ರೀವಾಜ್ಞೆಯ ಅವ ಮಾರ್ಚ್ 20ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಕಾಯ್ದೆಯ ಬದಲಾವಣೆಗಳಿಗೆ ಸಂಸತ್ ಒಪ್ಪಿಗೆ ಅನಿವಾರ್ಯವಾಗಿದೆ. ಸೋಮವಾರ ಆರಂಭವಾದ ಬಜೆಟ್ ಅವೇಶನದಲ್ಲಿ ಇದು ಆಂಗೀಕಾರವಾಗದಿದ್ದರೆ ಸಮಸ್ಯೆ ಎದುರಾಗಲಿದೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಮಸೂದೆ ಆಂಗೀಕಾರ ಸುಲಭ. ಆದರೆ ರಾಜ್ಯಸಭೆಯಲ್ಲಿ ಸಂಖ್ಯೆ ಕೊರತೆ ಇರುವ ಹಿನ್ನೆಲೆಯಲ್ಲಿ ಅಂಗೀಕಾರ ಪಡೆಯುವುದು ಕಷ್ಟಸಾಧ್ಯವಾಗಲಿದೆ.

ಈ ಸುಗ್ರೀವಾಜ್ಞೆಯ ಎರಡು ಪ್ರಮುಖ ವಿಗಳು ವಿವಾದ-ಕೋಲಾಹಲಕ್ಕೆ ಕಾರಣ ವಾಗಿವೆ. ಭೂಸ್ವಾೀನಕ್ಕೆ ರೈತರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯ ಮಾಡುವ ವಿಯನ್ನು ರದ್ದು ಮಾಡುವುದು ಒಂದು; ಸಾರ್ವಜನಿಕ- ಖಾಸಗಿ ಸಹಭಾಗಿ ತ್ವದ ಯೋಜನೆಗಳ ಹಾಗೂ ಖಾಸಗಿ ಯೋಜನೆಗಳ ಸಾಮಾಜಿಕ ಪರಿಣಾಮದ ವೌಲ್ಯಮಾಪನಕ್ಕೆ ಸಂಬಂಧಪಟ್ಟದ್ದು ಇನ್ನೊಂದು.
ಮಸೂದೆಯಲ್ಲಿ ಸಾಮಾಜಿಕ ಪರಿಣಾಮ ವೌಲ್ಯಮಾಪನ ಬಗ್ಗೆ ಸ್ಪಷ್ಟತೆ ಇಲ್ಲ. ಇದರ ವಿಶ್ಲೇಷಣೆಯನ್ನು ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಹಾಗೂ ಇದು ಖಂಡಿತವಾಗಿಯೂ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಪರವಾಗಿಲ್ಲ. ಇಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸ್ಪಷ್ಟ ನಿಬಂಧನೆ ಇರಬೇಕು ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

 
ಇದನ್ನು ಬಿಜೆಪಿ ಒಪ್ಪಿಕೊಳ್ಳುವುದು ಪಕ್ಷದ ಆಂತರಿಕ ವಿಚಾರ. ಆದರೆ 2014ರ ಚುನಾವಣೆ ಬಳಿಕ ಕಳಾಹೀನವಾಗಿರುವ ವಿರೋಧ ಪಕ್ಷಗಳಿಗೆ ಮಾತ್ರ ಹೋರಾಟಕ್ಕೆ ಪ್ರಬಲ ಅಸ ದೊರಕಿದಂತಾಗಿದೆ. ಇದಕ್ಕೆ ಬಿಜೆಪಿ ದೀರ್ಘಾವಯಲ್ಲಿ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.

ಸೋಮವಾರ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು, ಪ್ರಮುಖ ಸರಕಾರಿ ಯೋಜನೆಗಳಿಗೆ ಭೂಮಿ ಸ್ವಾೀನ ಮಾಡಿಕೊಳ್ಳುವ ವೇಳೆ ರೈತರ ಹಿತಾಸಕ್ತಿಗೆ ಯಾವ ಧಕ್ಕೆಯೂ ಆಗದಂತೆ ಮಸೂದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಇದನ್ನು ಕೇಳುವ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್ ಪಕ್ಷ ಈಗಾಗಲೇ ರಾಜ್ಯಸಭೆಯಲ್ಲಿ ಮಸೂದೆ ವಿರುದ್ಧ ಕೋಲಾಹಲ ಎಬ್ಬಿಸಿದೆ. ಯುಪಿಎ ಯೋಜನೆಗಳ ಪರಿಷ್ಕರಣೆ ಬಿಟ್ಟರೆ ರಾಷ್ಟ್ರಪತಿಗಳ ಭಾಷಣದಲ್ಲಿ ಯಾವ ಹೊಸ ದೃಷ್ಟಿಕೋನವೂ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಣ್ಣಾ ಸವಾಲು

ಸಂಸತ್ತಿನ ಹೊರಗೂ ಎನ್‌ಡಿಎ ಸರಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ. ಭ್ರಷ್ಟಾಚಾರ ವಿರೋ ಧುರೀಣ ಹಾಗೂ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಸರಕಾರದ ಕ್ರಮದ ವಿರುದ್ಧ ಕೆಂಡಕಾರಿದ್ದಾರೆ. ಉದ್ದೇಶಿತ ಮಸೂದೆ ವಿರುದ್ಧ ಜನಾಂದೋಲನಕ್ಕೆ ಚಾಲನೆ ನೀಡಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕೂಡಾ ಈ ಚಳವಳಿಯನ್ನು ಬೆಂಬಿಸಿದ್ದು, ಎರಡು ದಿನಗಳ ಕಾಲ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಇದಾದ ತಕ್ಷಣ ಸುಮಾರು ಮೂರರಿಂದ ನಾಲ್ಕು ತಿಂಗಳ ಕಾಲ ದೇಶಾದ್ಯಂತ ಪಾದಯಾತ್ರೆ ಕೈಗೊಂಡು ಈ ರೈತವಿರೋ ಮಸೂದೆ ವಿರುದ್ಧ ಮತ್ತು ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿಗೆ ತಂದ ಕ್ರಮದ ವಿರುದ್ಧ ಜನಜಾಗೃತಿ ಮೂಡಿಸುವ ಮಹಾ ಆಂದೋಲನವನ್ನೂ ನಡೆಸಲು ಉದ್ದೇಶಿಸಿದ್ದಾರೆ.

ಅಣ್ಣಾ ಹಝಾರೆ ಇದೀಗ ಸವಕಲು ನಾಣ್ಯ ಎಂಬ ಭಾವನೆ ಬಹಳಷ್ಟು ಮಂದಿಗೆ ಇರಬಹುದು. ಆದರೆ ಇಂಥ ವಿವಾದಗಳ ಪ್ರಬಲ ಅಸ ಕೈಗೆ ಸಿಕ್ಕಿದಾಗ, ಅವರ ಶಕ್ತಿಯನ್ನು ಲಘುವಾಗಿ ಪರಿಗಣಿಸಲು ಖಂಡಿತಾ ಸಾಧ್ಯವಿಲ್ಲ. ಇಂಥ ವಿಷಯಗಳು ಜನರನ್ನು ಆಂದೋಲನಕ್ಕೆ ಧುಮುಕುವಂತೆ ಆಕರ್ಷಿಸಬಲ್ಲರು. ಬಡವರ ವಿರುದ್ಧ ಸರಕಾರ ಮತ್ತು ಕಾರ್ಪೊರೇಟ್ ಕಂಪೆನಿಗಳ ಷಡ್ಯಂತ್ರ ಎಂದು ಬಿಂಬಿತವಾಗಿರುವ ಈ ಸಮಸ್ಯೆ ಇಡೀ ಆಂದೋಲನ ಜನರ ಧ್ವನಿಯಾಗಿ ರೂಪುಗೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಶೇಕಡ 60ಕ್ಕಿಂತ ಹೆಚ್ಚು ಕೃಷಿಕರೇ ಇರುವ ಭಾರತದಂಥ ದೇಶಗಳಲ್ಲಿ ಇಂಥ ಆಂದೋಲನಗಳು ಯಾವುದೇ ಆಳುವ ಪಕ್ಷಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುವುದು ಖಂಡಿತ. ಅಣ್ಣಾ ಹಝಾರೆ ಚಳವಳಿಯನ್ನು ಲಘುವಾಗಿ ಪರಿಗಣಿಸಿ, ಸಮರ್ಥವಾಗಿ ನಿರ್ವಹಿಸದ ಕಾಂಗ್ರೆಸ್ ಸರಕಾರ ತಮ್ಮ ತಪ್ಪಿಗೆ ಯಾವ ಬೆಲೆ ತೆರಬೇಕಾಗಿ ಬಂತು ಎನ್ನುವುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು.

ಜಂತರ್ ಮಂಥರ್‌ನಲ್ಲಿ ಹಝಾರೆಯವರ ಪ್ರತಿಭಟನೆಗೆ ಖ್ಯಾತ ಚಳವಳಿಗಾರ ಹಾಗೂ ಏಕತಾ ಪರಿಷತ್ ಮುಖಸ್ಥ ಪಿ.ವಿ.ರಾಜಗೋಪಾಲ್ ಅವರೂ ಸೇರಿಕೊಳ್ಳಲಿ ದ್ದಾರೆ. ಅವರು ಈ ಮಸೂದೆಯನ್ನು ವಿರೋಸಿ ಹರ್ಯಾಣದ ಪಲ್ವಾಲ್‌ನಿಂದ ರ್ಯಾಲಿ ಕೈಗೊಂಡಿದ್ದು, ಮಂಗಳವಾರ ದಿಲ್ಲಿ ತಲುಪಿದ್ದಾರೆ. ಏಕತಾ ಪರಿಷತ್ ಹಲವಾರು ವರ್ಷಗಳಿಂದ ಜನಸಾಮಾನ್ಯರ ಭೂಮಿ ಹಕ್ಕು ಉಳಿಸಲು ತಳಮಟ್ಟದಿಂದ ಆಂದೋಲನ ಹಮ್ಮಿಕೊಳ್ಳುತ್ತಾ ಬಂದಿದೆ.

ಭೂಸುಧಾರಣೆ ಕಥೆ ಏನು?

ಭೂಸ್ವಾೀನ ಸಮಸ್ಯೆಯನ್ನು ಬಿಜೆಪಿ ಬಗೆಹರಿಸುವ ಪ್ರಯತ್ನದಲ್ಲಿದ್ದರೂ, ಈ ನಿಟ್ಟಿನಲ್ಲಿ ಅದರ ಪ್ರಯತ್ನ ಮಾತ್ರ ತೀರಾ ನಗಣ್ಯ. ಈ ಬಗ್ಗೆ ಪಕ್ಷ ಅಕೃತವಾಗಿ ಇದುವರೆಗೆ ಯಾವ ಸಂದೇಶವನ್ನೂ ನೀಡಿಲ್ಲ. ಇಂಥ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯಗಳ ಬಗ್ಗೆ ಕೂಡಾ ಆ ಪಕ್ಷ ಹೊಂದಿರುವ ಧೋರಣೆ ಅಚ್ಚರಿ ಉಂಟುಮಾಡಿದೆ. ಎನ್‌ಡಿಎನಲ್ಲಿ ಹಲವು ಅಂಗ ಪಕ್ಷಗಳು ಸೇರಿದ್ದರೂ, ಬಿಜೆಪಿ ತನ್ನ ದಾರಿಯಲ್ಲೇ ಅಥವಾ ಹೆದ್ದಾರಿಯಲ್ಲೇ ಮುನ್ನುಗ್ಗಿದೆ. ಈ ಪಕ್ಷಗಳು ಮಸೂದೆ ಬಗ್ಗೆ ಯಾವ ಅಭಿಪ್ರಾಯ ಹೊಂದಿವೆ. ಇವುಗಳು ವಿರೋಧ ಪಕ್ಷಗಳ ಜತೆ ಕೈಜೋಡಿಸಿದರೆ ಪರಿಣಾಮ ಏನಾಗಬಹುದು ಎಂದೂ ಅಂದಾಜಿಸಿದಂತಿಲ್ಲ. ಈಗಾಗಲೇ ಎನ್‌ಡಿಎಯ ಕೆಲ ಅಂಗ ಪಕ್ಷಗಳು ಮಸೂದೆ ಬಗ್ಗೆ ಅಪಸ್ವರ ಎತ್ತಿವೆ.

ಇಡೀ ವಿವಾದವನ್ನು ತನ್ನ ಪರವಾಗಿ ತಿರುಗಿಸಿಕೊಳ್ಳುವ ಎಲ್ಲ ಅವಕಾಶವೂ ಬಿಜೆಪಿಗೆ ಇತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಭೂಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸುವುದು ಮತ್ತು ನಿರ್ಗತಿಕ ಬಡವರು ಮತ್ತು ಭೂರಹಿತರಿಗೆ ಭೂಮಿ ಹಂಚುವ ಆಶ್ವಾಸನೆ ನೀಡುವ ಮೂಲಕ ವಿವಾದಕ್ಕೆ ಮಂಗಳ ಹಾಡುವ ಅವಕಾಶ ಆ ಪಕ್ಷಕ್ಕೆ ಇತ್ತು.

ಎಲ್ಲರಿಗೂ ಸಮಾನವಾಗಿ ಭೂಮಿ ಹಂಚಿಕೆಯಾಗಬೇಕು ಎಂಬ ಕನಸು ರಾಷ್ಟ್ರಮಟ್ಟದಲ್ಲೇ ಹಾಗೆಯೇ ಉಳಿದುಕೊಂಡಿದೆ. ಜಮೀನ್ದಾರಿ ಪದ್ಧತಿಯನ್ನು ಕೊನೆಗೊಳಿಸಿ, ಉಳುವವನಿಗೆ ಭೂಮಿಯ ಹಕ್ಕು ನೀಡುವ ಸಂಬಂಧ ಬಹುತೇಕ ರಾಜ್ಯಗಳು 1950ರ ದಶಕದಲ್ಲಿ ಭೂಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿದ್ದರೂ, ದೇಶಾದ್ಯಂತ ಇದುವರೆಗೂ ಈ ಕನಸು ನನಸಾಗಿಲ್ಲ.
ಭೂಸುಧಾರಣಾ ಕಾಯ್ದೆಯ ಕಟ್ಟುನಿಟ್ಟಿನ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲದಿರುವುದನ್ನು ಇದೀಗ ಅಸ್ತಿತ್ವ ಕಳೆದುಕೊಂಡಿರುವ ಯೋಜನಾ ಆಯೋಗ ಕೂಡಾ ಎತ್ತಿತೋರಿಸಿದೆ. ಕಾನೂನು ಮತ್ತು ಆಡಳಿತಾತ್ಮಕ ಅಡೆತಡೆಗಳು, ಭೂದಾಖಲೆಗಳು ಸಮರ್ಪಕವಾಗಿ ಇಲ್ಲದಿರುವುದು ಮತ್ತು ದುರ್ಬಲ ಆಡಳಿತ ವ್ಯವಸ್ಥೆಯ ಕಾರಣಗಳಿಂದಾಗಿ ಈ ಸಮಸ್ಯೆ ಇನ್ನೂ ಆಂದೋಲನದ ರೂಪು ಪಡೆದಿಲ್ಲ,

ಯುಪಿಎ ಸರಕಾರ 2008ರಲ್ಲಿ ಅಸ್ತಿತ್ವಕ್ಕೆ ತಂದ ಭೂಸುಧಾರಣಾ ಮಂಡಳಿ ಇದುವರೆಗೂ ಒಮ್ಮೆಯೂ ಸಭೆ ಸೇರಿಲ್ಲ. ಈ ಮಂಡಳಿಯ ಅಧ್ಯಕ್ಷರಾಗಿರುವ ಪ್ರಧಾನಿ ನರೇಂದ್ರ ಮೋದಿಯವರಾದರೂ ಮಂಡಳಿಯನ್ನು ಪುನರುಜ್ಜೀವನಗೊಳಿಸಿ ಈ ಅಪೂರ್ಣ ಕಾರ್ಯಸೂಚಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸಬಹುದಿತ್ತು. ಮೋದಿ ಸರಕಾರ ಇದರ ಬದಲಾಗಿ ಈ ಕಠಿಣ ಹಾಗೂ ನಿರ್ದಯವಾದ ಮಸೂದೆಯನ್ನು ಮಂಡಿಸಲು ಮುಂದಾಗಿದೆ. ಹಿರಿಯ ಕಮ್ಯುನಿಸ್ಟ್ ಮುಖಂಡರೊಬ್ಬರು ಹೇಳುವಂತೆ ನಿಜ ಅರ್ಥದಲ್ಲಿ ಇದು, ಒತ್ತಾಯಪೂರ್ವಕ ಭೂಸ್ವಾೀನ (ವಿಶೇಷ ಅವಕಾಶ) ಕಾಯ್ದೆ.

27 ಫೆ ಬೆಂಗಳೂರು : ಜನ ಜಾಗೃತಿ ಸಮಾವೇಶ


ಜಾತಿ ಮತ್ತು ವರ್ಗ ದೌರ್ಜನ್ಯ: ಮಹಿಳಾ ಪ್ರತಿರೋಧದ ನೆಲೆಗಳು

ಕೆ.ನೀಲಾ 
ಅಂತಾತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಈ ಪ್ರಭುತ್ವದ ಕಾನೂನಿನಿಂದಾಗಿ ಖರೇವು ಅರ್ಥದೊಳಗೆ ನಾ ಮಾಡ್ಲಿಕ್ ಹೊಂಟ್ರ ಕದನ ಗ್ಯಾರಂಟಿ. ಕದನದ ಹಿನ್ನೆಲೆಯೊಳಗೆ ಅಂತಾರಾಷ್ಟ್ರೀಯ ದಿನಾಚರಣೆ  ಹುಟ್ಟಿಕೊಂಡಿದೆ. ಮತ್ತ ೮ನೇ ತಾರೀಕಿನ ಘೋಷಣೆ ಇತ್ತಲ್ಲ, ಅವತ್ತು ನಮ್ಮ ಕಾರ್ಮಿಕ ಮಹಿಳೆಯರು ಉಳಿದೆಲ್ಲ ಆರ್ಥಿಕ ಬೇಡಿಕೆಗಳ ಜೊತೆಗೆ ಮುನ್ನೆಲೆಯಾಗಿ ಮತದಾನ ಹಕ್ಕಿನ ಬೇಡಿಕೆಯನ್ನು ಇಟ್ಟು ಹೋರಾಟ ಮಾಡಿದ್ರು. ಅದು ರಾಷ್ಟ್ರೀಯ ಪ್ರಜ್ಞೆಯ ಹೋರಾಟ ಆಗಿತ್ತು. ಅದನ್ನು ನೆನಪಿಸಿಕೊಳ್ಳುತ್ತಾ...... ಮಹಿಳೆಯರ ಪ್ರಶ್ನೆಯಂದ್ರಾ ಅದೊಂದು ಹಂಗಿಸಿ ಅನುಮಾನಿಸುವ ಪದವಲ್ಲ. ಪುರುಷ ಮತ್ತು ಮಹಿಳೆ ಎದುರು ಬದುರು ನಿಂತಿರುವ ಪ್ರಶ್ನೆಯಲ್ಲ. ಅದನ್ನು ನಾನು ಉತ್ತರ ಕರ್ನಾಟಕ ಭಾಷೆಯ ಒಳಗ ಹೇಳಬೇಕು ಅಂತಂದ್ರ ಇದು ಸಕಲ ಜೀವಾತ್ಮರಿಗೆ ಲೇಸು ಬಯಸುವ ಒಂದು ಚಳುವಳಿ. ಅದೇ ನಮ್ಮ ಸಂಸ್ಕೃತಿ. ಸಕಲ ಜೀವಾತ್ಮಾರಿಗೆ ಲೇಸು ಬಯಸುವಂಥ ಈ ಚಳುವಳಿಯನ್ನು ನಾವು ನಾಡಿನಾದ್ಯಂತ ಪ್ರಖರವಾಗಿ ಮುಂದಕ್ಕ ತೊಕ್ಕೊಂಡು ಹೋಗುವಂಥ ಹೊಣೆಗಾರಿಕೆ ನಮ್ಮ ಮ್ಯಾಲ ಐತಿ.

    ಕಳೆದ ಅನೇಕ ವರ್ಷಗಳಿಂದ ನಮ್ಮ ನಾಡಿನೊಳಗ ಅನೇಕ ಸಂಘ ಸಂಸ್ಥೆಗಳು ಮಹಿಳಾಪರ ಕಾರ್ಯಕ್ರಮಗಳನ್ನ  ನಿರ್ವಹಿಸುತ್ತಾ ಇದಾರ. ಆ ರೀತಿಯ ಪ್ರತಿ ವ್ಯಕ್ತಿ ಶಕ್ತಿ ಎಲ್ಲರಿಗೂ ನಾನೊಂದು ದೊಡ್ಡ ಸಲಾಮು ಹೇಳಿ, ಕೆಲವು ಅಂಶ ನಿಮ್ಮ ಮುಂದೆ ಮಂಡಿಸುತ್ತೀನಿ. ವೇದಿಕೆಯ ಮೇಲೆ ಇಷ್ಟುತನಕ ಲಿಂಗರಾಜಕಾರಣ, ವರ್ಗ ರಾಜಕಾರಣ, ಜಾತಿ ರಾಜಕಾರಣ ಎಲ್ಲಾ ವಿಷಯಗಳನ್ನು ನಿಮ್ಮ ಮುಂದೆ ಇಟ್ಟಿದ್ರು.

      ನಾವು ಇಲ್ಲಿ ಮುಂಜಾನೆದ್ದು ಯಾರ‍್ಯಾರ‍್ನ ನೆನೆಯಬೇಕು ಅಂತ ಕೇಳಿದ್ರ, ನಮ್ಮ ಜಾನಪದ ಅಕ್ಕ ಅಥವಾ ತಾಯಿ ಬೀಸುತ್ತಾ ಒಂದು ಮಾತು ಹೇಳುತ್ತಿರುತ್ತಾರೆ.
        ಮುಂಜಾನೆ ನಾನೆದ್ದು ಯಾರ‍್ಯಾರ ನೆನೆಯಲಿ
        ಎಳ್ಳು ಜೀರಿಗೆ ಬೆಳೆಯುವ ತವರವರ ಎದ್ದೊಂದು ಗಳಿಗೆ

    ಆಯ್ತು ತವರವರನ್ನು ನೆನೆಯೋಣ. ಆದ್ರ ಇವತ್ತಿಗೂ ಸಹಿತ ೯೦-೯೫ ಪರ್ಸೆಂಟು ನಮ್ಮ ಹೆಣ್ಣು ಮಕ್ಕಳು ಆಸ್ತಿವಂಚಿತರು ಆಗ್ಯಾರಲ್ಲ. ನಮ್ಮನ್ನು ಹೆತ್ತವರೇ ನಮಗೆ ಆಸ್ತಿ ಕೊಡಲು ತಯಾರಿಲ್ಲ. ಕಟ್ಟಿಕೊಂಡಿರುವ ಗಂಡನ ಮನೆಯವರು ಆಸ್ತಿ ಕೊಡಲು ತಯಾರಿಲ್ಲ. ಇಂಥ ಸಂದರ್ಭದಲ್ಲಿ ನಮಗೊಂದು ಬಲವಾದ ಕಾನೂನು ಮಾಡಿಕೊಟ್ಟಂತಹ, ಹೆಣ್ಣುಮಕ್ಕಳಿಗೆ, ಸಮಸ್ತಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ಇರಬೇಕು ಅಂತ ಕಾನೂನು ಮಾಡಿಕೊಟ್ಟಂತಹ ಡಾ. ಬಾಬಾ ಸಾಹೇಬ್ ಅಂಬೇಡ್ಕರರನ್ನು ಮುಂಜಾನೆದ್ದು ನಮ್ಮ ಹೆಣ್ಣುಮಕ್ಕಳು ಮತ್ತು ಸಮಸ್ತ ಜನತೆ ನೆನೆಯಲಿಕ್ಕೆ ಸಾಧ್ಯವಾಗಬೇಕು. ಹೆಣ್ಣುಮಕ್ಕಳನ್ನು ಜಾಗತಿಕ ದಲಿತತ್ವಕ್ಕೆ ದೂಡಿದ ಪ್ರಕ್ರಿಯೆಯನ್ನು ವಿವರಿಸಲು ನಾನು ಹೋಗುವುದಿಲ್ಲ. ಸಮಸ್ತ ಹೆಣ್ಣುಮಕ್ಕಳು ಜಾಗತಿಕ ದಲಿತತ್ವಕ್ಕೆ ತಳ್ಳಲ್ಪಟ್ಟವರು. ಅದರೊಂದಿಗೆ ಭಾರತದ  ಛಿoಟಿಣexಣದೊಳಗ ಇವತ್ತು ಬಹಳ ದೊಡ್ಡ ಸಂಖ್ಯೆಯಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೀತದ, ಅದು ನಮ್ಮ ಶ್ರೇಣೀಕೃತ ವ್ಯವಸ್ಥೆಗೆ ಅನುಸರಿಸಿ ನಡೀತದ.


    ಬಡವರು, ಭೂರಹಿತರು ಮತ್ತು ಅತ್ಯಂತ ಕಡು ಬಡತನಕ್ಕೆ ಒಳಗಾದವರು, ದಲಿತರು, ಹಿಂದುಳಿದವರು, ಗ್ರಾಮೀಣ ಪ್ರದೇಶದಲ್ಲಿರುವವರು, ಈ ರೀತಿ ಶ್ರೇಣೀಕೃತ ವ್ಯವಸ್ಥೆ ರೀತಿಯೊಳಗೇನೆ ನಮ್ಮ ಬಡತನದ  ಅಂಕಿ ಅಂಶ ಸಿಗುತ್ತವೆ ಅಂತ ನಮಗ ಗಮನಿಸಲು ಸಾಧ್ಯವಾಗಬೇಕು. ವರ್ಗ ಮತ್ತು ಜಾತಿ ಈ ಎರಡು ಪ್ರಶ್ನೆಗಳು ಸಹಿತ ಒಂದಕ್ಕೊಂದು ತಳಕು ಹಾಕಿಕೊಂಡು ಇವತ್ತು ಬೆಳೆದು ಬಂದಿರುವುದನ್ನು ನೋಡ್ತೇವೆ. ಹಾಗಾಗಿ ನಮ್ಮ ಚಳುವಳಿಯನ್ನು, ಇವತ್ತು ವರ್ಗ ತಾರತಮ್ಯದ ವಿರುದ್ಧ ಚಳುವಳಿಯನ್ನು ಮಾಡ್ತ ಮಾಡ್ತನೆ ಜಾತಿಯ ತಾರತಮ್ಯದ ವಿರುದ್ಧ ಸಹ ಚಳುವಳಿ ಮಾಡುವಂತಹ ಅವಶ್ಯಕತೆ ಹಿಂದೆಂದಿಗಿಂತ ಇವತ್ತು ಹೆಚ್ಚದ. ಅದನ್ನು ಮುಂದೆಯೂ ಅದನ್ನು ಗಮನಿಸಲು ನಮಗ ಸಾಧ್ಯವಾಗಬೇಕು.

     ನಾನು ಇಲ್ಲಿ ಬಂದಂತಹ ಎಲ್ಲ ಹೆಣ್ಮಕ್ಳು ಸಹಿತ ಮನೆಯೊಳಗೆ ಕೆಲಸ ಮಾಡಿಬಂದಿದೀವಿ. ನಮ್ಮ ಯಾರ ಮನೆಯೊಳಗೂ ರೊಟ್ಟಿ ತಟ್ಟಿದ್ದಕ್ಕೂ, ಮುದ್ದೆ ತಟ್ಟಿದ್ದಕ್ಕೂ, ಅಡಿಗೆ ಮನೆ ಕೆಲಸ ಮಾಡಿದ್ದಕ್ಕೂ, ಬಟ್ಟೆ ತೊಳೆದದ್ದಕ್ಕೂ, ಪಾತ್ರೆ ತೊಳೆದಿದ್ದಕ್ಕೂ ನಮಗೆ ಖಂಡಿತಾ ಕೂಲಿಯಿಲ್ಲ. ನೀವು ಏನಾದರೂ ಆರ್ಥಿಕ ವಿಚಾರ ಮಾತಾಡಕ ಚಾಲು ಮಾಡಿದ್ರಿ ಅಂದ್ರ, ಆವಾಗ ಹೊಸ ವಾದ ನಿಮ್ಮ ಎದುರು ಬಂದು ಬಿಡ್ತದ. ಅದು ಎನು ಅಂತಂದ್ರ ’ನೀವು ತಾಯಿಯಾಗಿ, ಅಕ್ಕ-ತಂಗಿ ಇಷ್ಟೆಲ್ಲ ಆಗಿ ಇಷ್ಟೊಂದು ನಮ್ಮ ನಿಮ್ಮ ಮಧ್ಯದ ಭಾವನಾತ್ಮಕ ಸಂಬಂಧ ಇಟ್ಟುಕೊಂಡು ನೀವು ವ್ಯವಹಾರಿಕವಾಗಿ ನೋಡ್ತಿರೇನೂ’ ಅಂತ ನಮಗ ಪ್ರಶ್ನೆ ಮಾಡ್ತಾರ. ಅಂದ್ರ ನಾವು ವ್ಯಾವಹಾರಿಕ ಮಾತನಾಡಿದಾಗ ಭಾವನಾತ್ಮಕ ಪ್ರಶ್ನೆ ಎತ್ತಿ, ಭಾವನಾತ್ಮಕ ಮಾತನಾಡಿದಾಗ ವ್ಯವಹಾರಿಕ ಪ್ರಶ್ನೆ ಎತ್ತಿ ಗಲಿಬಿಲಿ ಮಾಡ್ತಾರ. ಇದ್ರ ಉದ್ದೇಶವೇನು ಅಂದ್ರ ಹೆಂಗಸರನ್ನು ಬಿಟ್ಟಿಯಾಗಿ, ಪುಕ್ಕಟೆಯಾಗಿ ದುಡಿಯುವುದಕ್ಕ ಬೇಕಾದಂತಹ ತಂತ್ರ ಕುತಂತ್ರವನ್ನು ಹೆಣ್ದಿದ್ದಾರ ಅಂತ ಅನ್ನುವುದು ನಮಗೆ ಸ್ಪಷ್ಟವಾಗುತ್ತದೆ. ಬಂಧುಗಳೇ, ನಾನು ಹಳ್ಳಿಯಲ್ಲಿ ಕೆಲಸ ಮಾಡ್ತೀನಿ. ನಮ್ಮ ಗೌಡರ ಮನೆಯಾಗ ಜಮೀನ್ದಾರರ ಹೆಂಡತಿ ಬಂಗಾರ ಹೇರಿಕೊಂಡು ಮೀಟಿಂಗ್‌ಗೆ ಬಂದಿರ್‌ತಾರ. ಅಂಥವ್ರನ್ನ ಒಂದು ಮಾತು ಕೇಳ್ತೀನಿ, ’ಏನಕ್ಕ ನಿಮ್ಮ ತಂಗಿ ಬಡತನದಲ್ಲಿ ಇದ್ದಳಾ, ನಿಮ್ಮ ಒಂದು ತೊಲ ಬಂಗಾರನ ತೆಗೆದು ಕೊಡ್ತೀಯಾ?’ ಅಂದ್ರ ’ಇಲ್ಲ’. ಆಕೆಯ ಮೈಮೇಲೆ ಹಾಕಿಕೊಂಡಿರುವ ಬಂಗಾರ ಆ ಗೌಡ/ಸಾಹುಕಾರನ ಹೆಂಡತಿ ಅಂತ ತೋರಿಸಿಕೊಳ್ಳಲು ಹಾಕಿಕೊಂಡಿರುವುದೇ ವಿನ: ಆಕೆಗೆ ಅದರ ಮ್ಯಾಲೆ ಯಾವ ರೀತಿಯ ಅಧಿಕಾರನೂ ಇಲ್ಲ. ಹಂಗೇನೇ ನಮ್ಮ ಉದ್ಯೋಗಸ್ತ ಹೆಣ್ಣು ಮಕ್ಕಳು ಸಹಿತ ಒಂದು ಲಕ್ಷ ರೂಪಾಯಿ ಯುಜಿಸಿ ಸಂಬಳ ತೆಗೆದುಕೊಂಡ್ರ ಸಹಿತ, ಅದರ ಮೇಲೆ ಅವಳದು ಎಷ್ಟು ಅಧಿಕಾರ ಇರ‍್ತದ?  ನೀವು ಅವರನ್ನು ಕೇಳಬಹುದು, ಆ ಮಾತು ಬೇರೆ. ನಮ್ಮ ಹೆಣ್ಣುಮಕ್ಕಳನ್ನು ಮನೆಯ ಒಳಗೂ ಹೊರಗೂ ಪುಕ್ಸಟೆ ದುಡಿಸಿಕೊಳ್ಳಲು ಬೇಕಾದಂತಹ ವ್ಯವಸ್ಥೆ ನಮ್ಮ ಸಮಾಜದ್ದು ಅದಲ್ಲ ಅದನ್ನು ಗಮನಿಸಲು ನಮಗ ಸಾಧ್ಯವಾಗಬೇಕು. ಮತ್ತೆ ಹಿಂಗೇನೆ ಅಂಗನವಾಡಿ, ಬಿಸಿಯೂಟ, ಇಟ್ಟಿಗೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವವರು, ಗಾರ್ಮೆಂಟ್‌ನಲ್ಲಿ ಕೆಲಸ ಮಾಡುವವರು, ಬೇರೆ ಬೇರೆ ರೀತಿ (ಇತ್ತೀಚಿನ ಹತ್ತು ವರ್ಷಗಳಿಂದ) ಹಳ್ಳಿಗಳಿಂದ ನಗರಕ್ಕೆ ವಲಸೆ ಶುರುವಾಗಿಬಿಟ್ಟಿದೆ. ಈ ವಲಸೆ ಬರುವ ಸಂಖ್ಯೆ ಬಹಳ ದೊಡ್ಡದಾಗಿದೆ. ದಲಿತ ಮಹಿಳೆಯರ ಸಂಖ್ಯೆಯೂ ಅಷ್ಟೇ ದೊಡ್ಡ ರೀತಿಯಲ್ಲಿ ಅಗಿದೆ. ಸಣ್ಣ ರೈತರು, ಬಡ ರೈತರು, ಸಾಮಾನ್ಯ ರೈತರು, ಕೃಷಿ ಕೂಲಿ ಕಾರ್ಮಿಕರು ಇವರೆಲ್ಲರೂ ಪಟ್ಟಣಕ್ಕೆ ಬರಲು ಶುರುಮಾಡಿದ್ದಾರೆ.

    ಎಲ್ಲಿ ಒಂದು ಆರ್ಥಿಕ ಅಸಮಾನತೆ ಉಂಟಾಗುತ್ತದೋ ಎಲ್ಲಿ ಸಂಪತ್ತು ಒಂದು ಕಡೆ ಕ್ರೋಢೀಕರಣವಾಗಿ ಬಡತನ ಜಾಸ್ತಿಯಾಗುತ್ತೋ ಅಲ್ಲಿ ವಿಚಿತ್ರವಾದ, ವಿಕಾರವಾದ ಎಲ್ಲ ರೀತಿಯ ಕ್ರೌರ್ಯ ತಲೆದೋರುತ್ತ ಅನ್ನೋದನ್ನು ಗಮನಿಸಲಿಕ್ಕೆ ನಮಗೆ ಸಾಧ್ಯವಾಗಬೇಕು. ಹಾಗಾಗಿ ಇವತ್ತು ನಗರದೊಳಗೆ ಹೆಣ್ಣುಮಕ್ಕಳನ್ನು ಅವಳ ಶರೀರ, ಅವಳ ಮನಸ್ಸು, ಅವಳ ಶ್ರಮ ಎಲ್ಲವನ್ನು ಸಹಿತ ಪುಕ್ಸಟೆಯಾಗಿ ದುಡಿಸಿಕೊಳ್ಳಲು ಬೇಕಾದ ಫ್ಲೆಕ್ಸಿಬಲ್ ರೀವರ್ ರೀತಿಯಲ್ಲಿ ದುಡಿಸಿಕೊಳ್ಳಲು ಬೇಕಾದಂತಹ ಕಾನೂನು ಸರ್ಕಾರದಿಂದ ಆಗಿದೆ.

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯೆನ್ನುವುದು ಮಹಿಳೆಯ ಅಸ್ಮಿತೆ, ಸ್ವಾಭಿಮಾನ, ವಿಮೋಚನೆಯ  ಹಕ್ಕಿಗಾಗಿ ನಮ್ಮ ಚಳವಳಿಯನ್ನು ತೀವ್ರಗೊಳಿಸಬೇಕಾಗಿದೆ. ಮಹಿಳೆಯರು ಒಂದು ವರ್ಗದ ಧಾಳಿಯಿಂದ, ಜಾತಿಯ ಧಾಳಿಯಿಂದ ಕಷ್ಟಪಡುತ್ತಿರುವ ಈ ಸಂದರ್ಭದೊಳಗೆ ನಾವು ಮಹಿಳಾ ಚಳುವಳಿಯನ್ನು ತೀವ್ರಗೊಳಿಸಬೇಕು ಅನ್ನುವ ಮಾತನ್ನು ಹೇಳುತ್ತಾ, ಈ ಚಳುವಳಿಗೆ ಹೆಗಲು ಕೊಟ್ಟಂತಹ ಇಲ್ಲಿ ಸೇರಿದಂತಹ ನಿಮಗೆಲ್ಲರಿಗೂ ವಂದಿಸುತ್ತೇನೆ.


***

ಅತ್ಯಾಚಾರ :ಸಾಮೂಹಿಕ ಹಾಗೂ ವ್ಯಕ್ತಿಗತ ನೆಲೆಗಳ ಪರಿಹಾರ
ಮಲ್ಲಿಗೆ
ಮಹಿಳಾ ಮುನ್ನಡೆ, ಮಂಡ್ಯ.
ಅತ್ಯಾಚಾರ ಮತ್ತು ವಯಸ್ಸಿನ ಕುರಿತಾದ ಚರ್ಚೆ ಬಹಳ ವಿಸ್ತಾರವೂ ಕಗ್ಗಂಟಿನಂಥದ್ದೂ ಆಗುತ್ತಾ ಹೋಗುತ್ತಿದೆ. ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಟ ನಡೆಸುವ ಸಂದರ್ಭದಲ್ಲಿ ಅತ್ಯಾಚಾರಕ್ಕೂ ಹೆಣ್ಣುಮಕ್ಕಳ ವಯಸ್ಸಿಗೂ ನೇರವಾಗಿ ಸಂಬಂಧ ಕಲ್ಪಸುವ ಚರ್ಚೆಗಳು ನಡೆಯುತ್ತಿರುವುದನ್ನು ವಕೀಲೆ ಗೆಳತಿ ಶೀಲಾ ರಾಮನಾಥನ್ ಪ್ರಸ್ತಾಪಿಸುತ್ತಿದ್ದರು. ಅತ್ಯಾಚಾರ ಎಂಬುದನ್ನು ’ಮಹಿಳೆಯ ಘನತೆಯ ಮೇಲಿನ ದಾಳಿ’ (ಔಟ್‌ರೇಜಿಂಗ್ ದ ಮಾಡೆಸ್ಟಿ ಆಫ್ ವಿಮೆನ್) ಎಂದು ಪರಿಗಣಿಸಬೇಕೆಂದರೆ, ಒಂದು ಲೈಂಗಿಕ ಹಿಂಸೆ ಅಥವಾ ಅತ್ಯಾಚಾರದ ಘಟನೆಯನ್ನು ಅದಕ್ಕೆ ಗುರಿಯಾದ ಹೆಣ್ಣುಮಗಳು ಹಾಗೆ ಅಂದುಕೊಂಡರೆ ಮಾತ್ರ ಸಾಧ್ಯವೇ ಅಥವಾ ಅದನ್ನು ತೀರ್ಮಾನಿಸುವುದಕ್ಕೆ ಬೇರೆ ಮಾನದಂಡಗಳೂ ಇವೆಯೇ? ಶಿಶುವಿನ ಮೇಲೆ ಲೈಂಗಿಕ ಹಲ್ಲೆ ನಡೆದರೆ, ಅದನ್ನು ಹೇಗೆ ಅತ್ಯಾಚಾರವೆಂದು ಪರಿಗಣಿಸಬಹುದು ಎಂಬುದರ ಬಗ್ಗೆ ಗಹನವಾದ ಚರ್ಚೆಗಳು ನಡೆದಿವೆ. ಅಂದರೆ, ಅತ್ಯಾಚಾರವೇ ಆಗಲಿ ಅಥವಾ ಬೇರೆ ಸಂದರ್ಭಗಳೇ ಆಗಲಿ ಮಹಿಳೆಯ ಲೈಂಗಿಕ ಜೀವನದ ಸುತ್ತ ಅನೇಕ ಪ್ರಶ್ನೆಗಳೇಳುತ್ತವೆ. ಆದ್ದರಿಂದ, ಈ ವಿಚಾರದ ಚರ್ಚೆಯನ್ನು ನಾವು ಅತ್ಯಾಚಾರ ಮತ್ತು ವಯಸ್ಸು ಎಂದು ಆರಂಭಿಸುವುದಕ್ಕಿಂತ, ಮಹಿಳೆಯ ಲೈಂಗಿಕ ಜೀವನದ ಆರಂಭದ ವಯಸ್ಸು ಎಂದು ಮಾರ್ಪಡಿಸಿಕೊಂಡರೆ, ಚರ್ಚೆಯ ಚೌಕಟ್ಟನ್ನು ನಿಗದಿಗೊಳಿಸುವುದು ಸುಲಭವಾಗುತ್ತದೆ.

ಮಹಿಳೆಯ ಲೈಂಗಿಕ ಜೀವನವು ಯಾವಾಗ ಆರಂಭವಾಗಬೇಕು ಎಂಬುದನ್ನು ನಿರ್ಧರಿಸುವವರು ಯಾರು ಎಂಬುದು ಕೂಡಾ ಒಂದು ಪ್ರಶ್ನೆಯೇ. ಜೆರಾಲ್ಡಿನ್ ಫೋರ‍್ಬ್ಸ್‌ರವರು ಬರೆದಿರುವ ’ಆಧುನಿಕ ಭಾರತದಲ್ಲಿ ಮಹಿಳೆ’ ಪುಸ್ತಕದಲ್ಲಿ ಈ ವಿಚಾರವಾಗಿ ೧೮೬೦ರಷ್ಟು ಹಿಂದೆಯೇ ಸುದೀರ್ಘ ಚರ್ಚೆ ನಡೆದಿರುವುದರ ಬಗ್ಗೆ ಉಲ್ಲೇಖಗಳಿವೆ. ಬ್ರಿಟೀಷ್ ಅಧಿಕಾರಿಗಳಿಗೆ ಭಾರತದಲ್ಲಿ ಹೆಣ್ಣುಮಕ್ಕಳ ಲೈಂಗಿಕ ಜೀವನದ ಆರಂಭ ಅವರು ಋತುಮತಿಯಾಗುವುದಕ್ಕಿಂತ ಮೊದಲೇ ಆಗುತ್ತದೆಂಬುದು ಆಘಾತದ ಸಂಗತಿಯಾಗಿತ್ತು. ಹುಡುಗಿ ಸಣ್ಣವಳಿರುವಾಗಲೇ ಮದುವೆ ಆಗುತ್ತದಾದರೂ, ಆಕೆಯ ದಾಂಪತ್ಯ ಋತುಮತಿಯಾದ ನಂತರವೇ ಆಗುತ್ತದೆಂದು ಭಾರತದ ಮುಖಂಡರುಗಳು ವಿವರಿಸಿದರೂ, ಅದು ಕೂಡಾ ಅಸಾಧ್ಯದ ಸಂಗತಿಯೆಂದೇ ಬ್ರಿಟೀಷ್ ಸರಕಾರದ ಅಭಿಪ್ರಾಯವಾಗಿತ್ತು. ಆದ್ದರಿಂದ, ದಾಂಪತ್ಯದ ಆರಂಭವು ಹುಡುಗಿಯರ ಒಪ್ಪಿಗೆಯೊಂದಿಗೆ ನಡೆಯಬೇಕೆಂದು ಬ್ರಿಟೀಷ್ ಸರ್ಕಾರ ೧೮೬೦ರಲ್ಲಿ ಕ್ರಿಮಿನಲ್ ಕೋಡನ್ನು ರೂಪಿಸಿತು. ಆದರೆ, ಈ ವಯಸ್ಸು ಎಷ್ಟೆಂದು ತೀರ್ಮಾನಿಸುವ ಹಕ್ಕನ್ನು ಪೋಷಕರಿಗೆ ಬಿಟ್ಟಿತು. ಅದರಿಂದಾಗಿ ಹಿಂದೂ ಪ್ರಮುಖರು ಈ ವಯಸ್ಸು ೧೦ ವರ್ಷಗಳೆಂದು ನಿಗದಿಪಡಿಸಿದರು! ಈ ವಿಚಾರ ಮತ್ತೆ ೧೮೮೦ರಲ್ಲಿ ಚರ್ಚೆಗೆ ಬಂದು ನಂತರ ೧೮೯೨ರಲ್ಲಿ ಅಲ್ಪಸ್ವಲ್ಪ ತಿದ್ದುಪಡಿಯೊಂದಿಗೆ ಹುಡುಗಿ ಒಪ್ಪಿಗೆ ನೀಡುವ ವಯಸ್ಸು ೧೨ ವರ್ಷಗಳೆಂದು ನಿರ್ಧರಿಸಲ್ಪಟ್ಟಿತು. (ಆಧುನಿಕ ಭಾರತದಲ್ಲಿ ಮಹಿಳೆ).ವಿಪರ್ಯಾಸದ ಸಂಗತಿಯೆಂದರೆ, ಮಹಿಳೆಯರ ಪರವಾಗಿ ಈ ಎಲ್ಲಾ ನಿರ್ಧಾರಗಳನ್ನೂ ಎಂದಿನಂತೆ ಪುರುಷರೇ ತೆಗೆದುಕೊಳ್ಳುತ್ತಿದ್ದುದು ಬ್ರಿಟೀಷ್ ಸರ್ಕಾರಕ್ಕೆ ತಪ್ಪೆಂದು ಕಾಣದೇ ಹೋದದ್ದು! ಇದರ ಜೊತೆಗೇ, ಒಂದು ವೇಳೆ ಹೆಣ್ಣುಮಕ್ಕಳು ತಮಗೆ ದೊರೆತ ಈ ಒಪ್ಪಿಗೆಯ ಹಕ್ಕನ್ನು ಚಲಾಯಿಸಿದರೆ ಏನಾಗುತ್ತಿತ್ತು ಎಂಬುದಕ್ಕೂ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ನಿದರ್ಶನಗಳು ಸಿಗುತ್ತವೆ. ೧೯೧೧ರಲ್ಲಿ ರುಕ್ಮಾಬಾಯಿ ಎಂಬ ಹುಡುಗಿಯ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ದಾಖಲೆಗೆ ಸಿಕ್ಕಿದೆ. ಬಾಲ್ಯವಿವಾಹವಾಗಿದ್ದ ರುಕ್ಮಾಬಾಯಿ ಎಂಬ ಹುಡುಗಿ ದೊಡ್ಡವಳಾದ ನಂತರ ಗಂಡನ ಮನೆಗೆ ಹೋಗುವ ಸಂದರ್ಭ ಬರುತ್ತದೆ. ಆಕೆ, ಈ ವಿವಾಹ ತನ್ನ ಒಪ್ಪಿಗೆಯಿಂದ ನಡೆದದ್ದಲ್ಲ ಎಂದು ಗಂಡನ ಮನೆಗೆ ಹೋಗಲು ನಿರಾಕರಿಸುತ್ತಾಳೆ. ಆದರೆ, ಇದನ್ನು ಗಂಡನ ಕುಟುಂಬ ಒಪ್ಪುವುದಿಲ್ಲ, ಆಕೆಯ ಪತಿಯು ಪತ್ನಿ ತನ್ನ ಮನೆಗೆ ಬರಬೇಕೆಂದು ನ್ಯಾಯಾಲಯಕ್ಕೆ ಹೋಗುತ್ತಾನೆ. ಹಿಂದೂ ಧರ್ಮದ ಪ್ರಮುಖರು ಆತನ ಪರವಾಗಿ ವಾದಿಸುತ್ತಾರೆ. ರುಕ್ಮಾಬಾಯಿ ದಾಂಪತ್ಯ ಆರಂಭಿಸಲು ಒಪ್ಪಿಗೆ ನಿರಾಕರಿಸುವ ಹಕ್ಕು ತನಗಿದೆ ಎಂದು ವಾದಿಸುತ್ತಾಳೆ. ಆದರೆ, ನ್ಯಾಯಾಲಯ ಆತನ ವಾದಕ್ಕೇ ಬೆಂಬಲ ನೀಡಿತು, ರುಕ್ಮಾಬಾಯಿ ಆಗಲೂ ಹೋಗಲು ಒಪ್ಪಲಿಲ್ಲವಾಗಿ ಆಕೆಗೆ ೫ ವರ್ಷಗಳ ಕಠಿಣ ಸಜೆ ನೀಡುತ್ತದೆ. ಇದರ ವಿರುದ್ಧ ರಮಾಬಾಯಿ ಮೊದಲಾಗಿ ಸಮಾಜ ಸುಧಾರಕಿಯರು ಪ್ರತಿಭಟಿಸಿದಾಗ ಅಂತಿಮವಗಿ ಆಕೆಗೆ ೫ ತಿಂಗಳ ಸಜೆ ನೀಡಿ ಬಿಡುಗಡೆಗೊಳಿಸಲಾಗುತ್ತದೆ. ಬಿಡುಗಡೆಯಾದ ರುಕ್ಮಾಬಾಯಿ ಹೆಣ್ಣುಮಕ್ಕಳ ಒಪ್ಪಿಗೆ ಎಂಬದು ಕೇವಲ ಕಾಗದದ ಮೇಲಷ್ಟೇ ಉಳಿದಿದೆಯೇ ಹೊರತು, ಅದನ್ನು ಜಾರಿಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸುತ್ತಾಳೆ.

ಇದೇ ಪರಿಸ್ಥಿತಿ ಈಗಲೂ ಮುಂದುವರೆಯುತ್ತಿರುವುದು ಸ್ವತಂತ್ರ ಭಾರತದ ದುರಂತ! ಈಗಲೂ ಭಾರತದ ಕಾನೂನಿನ ಪ್ರಕಾರ ಪತ್ನಿಗೆ ೧೬ ವರ್ಷ ತುಂಬಿದ್ದರೆ, ಆಕೆಯ ಒಪ್ಪಿಗೆ ಇಲ್ಲದೆಯೂ ಆಕೆಯೊಂದಿಗೆ ಪತಿ ಲೈಂಗಿಕ ಸಂಬಂಧ ಹೊಂದಬಹುದು ಮತ್ತು ಅದನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಲು ಬರುವುದಿಲ್ಲ! ಇದರ ಹಿಂದಿನ ತರ್ಕ ಏನು ಎಂಬುದೇ ಅರ್ಥವಾಗುವುದಿಲ್ಲ. ಭಾರತದ ಕಾನೂನು ಕರ್ತೃಗಳ ಪಿತೃಪ್ರಧಾನ ಮನಸ್ಥಿತಿ ಎಂಬುದನ್ನು ಬಿಟ್ಟರೆ ಬೇರೆ ಕಾರಣ ಹೊಳೆಯುವುದಿಲ್ಲ. ಈ ಕಾನೂನಿನ ಕಾರಣಕ್ಕಾಗಿ ಎಷ್ಟೋ ಹೆಣ್ಣುಮಕ್ಕಳು, ತಮ್ಮ ವೈವಾಹಿಕ ಜೀವನ ಹಿಂಸಾತ್ಮವಾಗಿತ್ತು ಎಂಬುದನ್ನು ಸಾಬೀತು ಪಡಿಸಲು ಇತರ ಹಿಂಸೆಯ ರೂಪಗಳನ್ನು ತೋರಿಸಬೇಕಾಗುತ್ತದೆ ಆದರೆ ಬಹಳಷ್ಟು ಗಂಡ-ಹೆಂಡತಿಯರ ನಡುವಿನ ಸಂಬಂಧದಲ್ಲಿ ಒಪ್ಪಿಗೆಯಿಲ್ಲದ ಲೈಂಗಿಕ ಸಂಬಂಧವೇ ಹಿಂಸೆಯ ಮೂಲವಾಗಿರುತ್ತದೆ. ಅದರಲ್ಲೂ ೧೬ ವರ್ಷದ ನಂತರ ಬಲವಂತದ ಸಂಬಂಧ ಅತ್ಯಾಚಾರವಲ್ಲ ಎಂದು ಕಾನೂನೇ ಹೇಳುವುದು, ಸಾಂಕೇತಿಕವಾಗಿಯಾದರೂ  ವೈವಾಹಿಕ ಸಂಬಂಧದೊಳಗೆ ಅಥವಾ ಹೊರಗೆ ಮಹಿಳೆಯ ನಿರ್ಧಾರದ ಹಕ್ಕನ್ನು ಒಪ್ಪಲು ಸಮಾಜ ಹಾಗೂ ಕಾನೂನು ಸಿದ್ಧವಿಲ್ಲ ಎಂಬುದನ್ನು ತೋರಿಸುತ್ತದೆ.

ಈಗಲೂ, ಈ ಆಯ್ಕೆಯ ಹಕ್ಕಿನ ವಿಚಾರವೇ ಅತ್ಯಾಚಾರದ ಸುತ್ತ ಅನೇಕ ಪ್ರಶ್ನೆಗಳನ್ನೆಬ್ಬಿಸುತ್ತದೆ. ಉದಾಹರಣೆಗೆ, ಅತ್ಯಾಚಾರಕ್ಕೆ ಗುರಿಯಾದ ವ್ಯಕ್ತಿ ಪುಟ್ಟ ಮಗುವೋ ಆಥವಾ ತೀರಾ ವಯಸ್ಸಾದ ವೃದ್ಧೆಯೋ ಆದರೆ, ಅಥವಾ ಅತ್ಯಾಚಾರದ ಬಲಿಪಶುವಿನ ಕೊಲೆಯಾಗಿದ್ದರೆ, ಆಗ ಅಲ್ಲಿ ಆಯ್ಕೆಯ ಪ್ರಶ್ನೆಯನ್ನು ಸಮಾಜವಾಗಲೀ, ನ್ಯಾಯಾಂಗವಾಗಲೀ ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಇದನ್ನು ಬಿಟ್ಟರೆ ಉಳಿದ ಸಂದರ್ಭದಲ್ಲಿ, ಲೈಂಗಿಕ ಹಿಂಸೆಗೆ ಗುರಿಯಾದದ್ದು ವಯಸ್ಕ ಮಹಿಳೆಯಾದರೆ, ಘಟನೆಯಲ್ಲಿ ನಡೆದದ್ದು ಅತ್ಯಾಚಾರವೋ, ಒಪ್ಪಿಗೆಯ ಲೈಂಗಿಕ ಸಂಬಂಧವೋ ಎಂಬುದರ ಸುತ್ತ ಕೊನೆಯಿಲ್ಲದ ವಾದ-ವಿವಾದಗಳು ನಡೆಯುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ, ಅತ್ಯಾಚಾರಿಯೊಂದಿಗೆ ಆ ಮಹಿಳೆಗೆ ಮೊದಲೇ ಲೈಂಗಿಕ ಸಂಬಂಧವಿತ್ತೆಂದು ಸಾಧಿಸಿ ತೋರಿಸಲು ಪ್ರಯತ್ನ ನಡೆಯುತ್ತದೆ.

ಒಂದು ವರ್ಷದ ಹಿಂದೆ ನಡೆದ ಎರಡು ಪ್ರಕರಣಗಳನ್ನು ಹೋಲಿಸಿ ನೋಡಿದಾಗ ಈ ವಿಚಾರ ಸ್ಪಷ್ಟವಾಗುತ್ತದೆ. ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ೭ ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆಯಿತು. ಬಹಳ ಭಾವನಾತ್ಮಕವಾಗಿ ಸ್ಪಂದಿಸಿದ ಜನರು ಮತ್ತು ವಿದ್ಯಾರ್ಥಿನಿಯರು ಅದನ್ನು ಪ್ರತಿಭಟಿಸಿದರು. (ದೆಹಲಿ ನಿರ್ಭಯಾ ಪ್ರಕರಣದಲ್ಲೂ ಬಲಿಪಶುವಿನ ಸಾವಿನ ಕಾರಣಕ್ಕೆ ಅದು ಹೆಚ್ಚು ಆಕ್ರೋಶಕ್ಕೆ ಕಾರಣವಾಗಿತ್ತು). ಆದರೆ, ಈ ದೇಶದ ’ಪ್ರಗತಿಪರ’ ಪತ್ರಿಕಯೊಂದರ ಖ್ಯಾತ ಪತ್ರಕರ್ತನ ಮೇಲೆ ಆತನ ಸಹೋದ್ಯೋಗಿ ಯುವತಿಯು ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ, ಅವರಿಬ್ಬರ ನಡುವೆ ಇದ್ದಿರಬಹುದಾದ ’ಅನೈತಿಕ’ ಸಂಬಂಧದಿಂಧ ಮೊದಲ್ಗೊಂಡು, ಹಣದ ಕಾರಣಕ್ಕೆ ಮಾಡುವ ಬ್ಲ್ಯಾಕ್‌ಮೇಲ್‌ತನಕ ಯುವತಿಯ ಮೇಲೆ ಎಲ್ಲಾ ರೀತಿಯ ಅನುಮಾನಗಳ ನೆರಳುಗಳೂ ಹರಿದಾಡಿದವು. ಐತಿಹಾಸಿಕವಾಗಿ ಕುಖ್ಯಾತವಾದ ಭಂವರೀದೇವಿ ಪ್ರಕರಣದಲ್ಲಾಗಲೀ, ಮಥುರಾ ಪ್ರಕರಣದಲ್ಲಾಗಲೀ ಹೆಣ್ಣುಮಕ್ಕಳ ವಯಸ್ಸು ಮತ್ತು ಹಿನ್ನೆಲೆ, ಅವರ ಮೇಲಾದ ಅಪರಾಧಕ್ಕೆ ಸಮರ್ಥನೆಯಾಗಿ ನಿಂತಿತ್ತು. ಹೀಗಾಗಿಯೇ, ದೆಹಲಿ ಪ್ರಕರಣದ ನಂತರ, ನ್ಯಾ.ವರ್ಮಾ ಸಮಿತಿ ನೇಮಕವಾದಾಗ ದೇಶದ ಎಲ್ಲಾ ಮಹಿಳಾಪರರೂ, ಒಪ್ಪಿಗೆಯಿಲ್ಲದ/ಬಲವಂತದ ಲೈಂಗಿಕ ಕ್ರಿಯೆಯನ್ನು ಆ ಮಹಿಳೆಯ ಹೇಳಿಕೆಯನ್ನಾಧರಿಸಿ ನಿರ್ಧರಿಸಬೇಕೆ ಹೊರತು ಪ್ರಕರಣದ ಸಾಂದರ್ಭಿಕ ಅಂಶಗಳನ್ನು ಪರಿಗಣಿಸಿ ಅಲ್ಲ ಎಂದು ಒತ್ತಾಯಿಸಿದರು. ಅದರಂತೆ ಕಾಯ್ದೆಯಲ್ಲಿಯೂ ತಿದ್ದುಪಡಿ ಬಂದಿದೆ. ಆದರೆ, ಸಾಮಾಜಿಕ ಮನೋಭಾವದಲ್ಲಿ ಅದು ಬರಬೇಕಾದರೆ ಸಾಕಷ್ಟು ಸಮಯ ಮತ್ತು ಪ್ರಯತ್ನ ಬೇಕಿದೆ.

ಅತ್ಯಾಚಾರ ಮತ್ತು ವಯಸ್ಸು ಎಂಬ ಚರ್ಚೆಯಲ್ಲಿ ಬಹಳ ಮುಖ್ಯವಾದ ಮತ್ತೊಂದು ಅಂಶ, ಅತ್ಯಾಚಾರ ನಡೆಸುವ ಪುರುಷನ ವಯಸ್ಸು. ಇತ್ತೀಚಿನ ದಿನಗಳಲ್ಲಿ ೧೨ರಿಂದ ೧೯ರವರೆಗಿನ ’ಟೀನೇಜ್’ ಯುವಕರು ಲೈಂಗಿಕ ಅಪರಾಧಗಳನ್ನು ಹೆಚ್ಚುಹೆಚ್ಚಾಗಿ ನಡೆಸುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಒಟ್ಟಾರೆ ಅತ್ಯಾಚಾರ ಎಂಬುದೇ ಪುರುಷಾಧಿಪತ್ಯ ಮನಸ್ಥಿತಿಯ ಕಾರಣಕ್ಕಾಗಿ ನಡೆಯುತ್ತದಾದರೂ, ಸಣ್ಣ ವಯಸ್ಸಿನ ಗಂಡುಮಕ್ಕಳು ಇಂತಹ ಮನಃಸ್ಥಿತಿಗೆ ಒಳಗಾಗುತ್ತಿರುವುದಕ್ಕೆ ನೇರವಾಗಿ ಜಾಗತೀಕರಣದ ನಂತರದ ಉಪಭೋಗಿ ಸರಕು ಸಂಸ್ಕೃತಿ ಕಾರಣವೆಂಬುದಕ್ಕೆ ಅನೇಕ ಅಧ್ಯಯನಗಳ ಸಾಕ್ಷಿ ಇದೆ. ಇಂತಹ ಮನಸ್ಥಿತಿಯನ್ನೇ ಉದ್ದೀಪಿಸುವ ಸಿನೆಮಾ, ಇಂಟರ್‌ನೆಟ್ ಡೌನ್‌ಲೋಡ್‌ಗಳು ವ್ಯಾಪಾರೀ ಕಂಪೆನಿಗಳ ಲಾಭ ಹೆಚ್ಚಿಸುತ್ತಾ, ಅಮಾಯಕ ಯುವಕರನ್ನು ಅಪರಾಧಿಗಳನ್ನಾಗಿಸುತ್ತಿವೆ. ದೆಹಲಿ ಪ್ರಕರಣದ ಆರೋಪಿಗಳಲ್ಲೊಬ್ಬ ಮೈನರ್ ಆಗಿದ್ದದ್ದು ಇದರ ಸುತ್ತಲಿನ ಚರ್ಚೆಯನ್ನು ತೀಕ್ಷ್ಣಗೊಳಿಸಿದೆ. ಆತನಿಗೂ ಮರಣದಂಡನೆ ನೀಡಬೇಕೆಂದು ಸಾಕಷ್ಟು ಗಟ್ಟಿಯಾದ ದನಿ ಕೇಳಿತ್ತು. ಇಲ್ಲಿ, ಇಂತಹ ಮನಃಸ್ಥಿತಿ ರೂಪುಗೊಳ್ಳುತ್ತಿರುವುದಕ್ಕೆ ಕಾರಣವಾಗುತ್ತಿರುವ ಸಮಾಜೋ-ಮನೋವೈಜ್ಞಾನಿಕ ಹಿನ್ನೆಲೆಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾದ ಮತ್ತು ಅದರಲ್ಲಿ ಬದಲಾವಣೆ ತರಲು ಪ್ರಯತ್ನ ಹೆಚ್ಚು ಮಾಡಬೇಕಾದ ಅಗತ್ಯ ಹೆಚ್ಚಿದೆ.

ಅತ್ಯಾಚಾರ ಒಂದು ಸಾಮೂಹಿಕ ಕ್ರೌರ್ಯದ ಪರಿಸ್ಥಿತಿ. ಇದರ ಪರಿಹಾರವನ್ನು ವ್ಯಕ್ತಿಗತ ನೆಲೆಯಲ್ಲಿ ಮಾತ್ರವೇ ಕಂಡುಕೊಳ್ಳಲು ಪ್ರಯತ್ನಿಸುವುದು ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲಾರದು. ಇದನ್ನು ವ್ಯಕ್ತಿಗತ ನೆಲೆಯಲ್ಲಿಯೂ, ಸಾಮೂಹಿಕ ನೆಲೆಯಲ್ಲಿಯೂ ಏಕಕಾಲದಲ್ಲಿ ಪರಿಹರಿಸಲು ಪ್ರಯತ್ನಿಸುವ ಸಮಗ್ರ ರೀತಿಯ ಯೋಜನೆಯ ಅಗತ್ಯವಿದೆ. ಆ ದಿಕ್ಕಿಗೆ, ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವೂ ಆಲೋಚಿಸಬೇಕು ಮತ್ತು ನಿರ್ದಿಷ್ಟ ಕಾರ್ಯಯೋಜನೆ ರೂಪಿಸಬೇಕೆಂಬುದು ನಮ್ಮ ಆಶಯ. ಸಮಕಾಲೀನವಾದ ಬಹುಮುಖ್ಯವಾದ ವಿದ್ಯಮಾನವೊಂದರ ಮೂಲಕ ಇಡೀ ಮಹಿಳಾ ಸಮುದಾಯದ ವಿಶಾಲ ಸಮಸ್ಯೆಗಳಿಗೆ ಸ್ಪಂದಿಸುವ ಅಗತ್ಯ ತೀವ್ರವಾಗಿದ್ದು, ಈ ಸವಾಲನ್ನು ನಾವೆಲ್ಲರೂ ಕೈಗೆತ್ತಿಕೊಳ್ಳೋಣ.

’ನನ್ನ ಲೈಂಗಿಕ ಅಭಿವ್ಯಕ್ತಿ, ಆಯ್ಕೆ, ಆಕರ್ಷಣೆ, ಆದ್ಯತೆಗಳು ನನ್ನ ವೈಯಕ್ತಿಕ ವಿಚಾರ’ಅಕೈ ಪದ್ಮಶಾಲಿ 
ಸಾಮಾಜಿಕ ಹೋರಾಟಗಾರ್ತಿ

 ಜೈವಿಕ ಲಿಂಗವನ್ನು ಎರಡು ವಿಭಾಗಗಳಾಗಿ ನೋಡಬಹುದು. ಶಿಶ್ನವಿದ್ದರೆ ಗಂಡುಮಗು, ಯೋನಿಯಿದ್ದರೆ ಹೆಣ್ಣುಮಗು. ಎರಡೂ ಲಿಂಗವಿದ್ದರೆ ಅಂತರ್‌ಲಿಂಗದ ಮಗು. ಲಿಂಗತ್ವ ಎಂದರೆ  ಪಿತೃಪ್ರಧಾನ ಸಮಾಜ ಮಾಡಿರುವ ಕಟ್ಟುಪಾಡುಗಳು, ಹಾಕಿರುವ ಚೌಕಟ್ಟಿನಲ್ಲಿ ಶಿಶ್ನ ಹಾಗೂ ಯೋನಿಯ ಆಧಾರದಲ್ಲಿ ಜನಿಸಿದ ಮಕ್ಕಳು ಇಕ್ಕಟ್ಟಿನ ಪಾತ್ರ ಮಾದರಿಯನ್ನು ಅನುಸರಿಸುತ್ತ ಬರಬೇಕಾದ ನಿರ್ಮಿತ ಪರಿಸ್ಥಿತಿ. ಆದರೆ ಲಿಂಗತ್ವ ಎನ್ನುವುದು ನಾನು ಮಾಡುವ ಆಯ್ಕೆ ಎಂದು ನಾನು ಘೋಷಿಸುತ್ತೇನೆ. ಅದು ನನ್ನ ಅಭಿವ್ಯಕ್ತಿ. ಯೋನಿಯಿಲ್ಲದ, ಗರ್ಭಚೀಲವಿಲ್ಲದ, ಮೊಲೆಯಿಲ್ಲದ, ಋತುಮತಿಯಾಗದ ಹೆಣ್ಣು ನಾನು. ಸಾಮಾಜಿಕ ವ್ಯವಸ್ಥೆಯಲ್ಲಿ ಕಲ್ಪಿತವಾಗಿರುವ ಈ ಕಟ್ಟುಪಾಡುಗಳನ್ನು ಪ್ರಶ್ನಿಸಿ, ಧಿಕ್ಕರಿಸಿ ನಮ್ಮ ಸಮಾಜವನ್ನು ನಿರ್ಮಾಣ ಮಾಡಬೇಕಿದೆ.
ಲಿಂಗತ್ವದ ಆಧಾರದಲ್ಲಿ ಗಂಡಾಗಿ ಹುಟ್ಟಿ, ಹೆಣ್ಣಾಗಿ ಪರಿವರ್ತನೆಗೊಳ್ಳುವ, ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆಗೊಳ್ಳುವವರ ಸಮುದಾಯಗಳಿಗೆ ಕುಟುಂಬದವರು, ಸಂಬಂಧಿಕರು, ಅಕ್ಕಪಕ್ಕದವರು, ಶಿಕ್ಷಣ ವ್ಯವಸ್ಥೆ, ಉದ್ಯೋಗ, ವೈವಿಧ್ಯ, ಗುರುತಿಸುವಿಕೆ, ಮೂಲಭೂತ ನಾಗರಿಕ ಸಾಂವಿಧಾನಿಕ ಮಾನವ ಹಕ್ಕುಗಳು ಯಾವುದೂ ದೊರಕದಿರುವುದು ವಿಷಾದದ, ಬೇಸರದ ಸಂಗತಿಯಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ಪೊಲೀಸರು ನಡೆಸುವ ದೌರ್ಜನ್ಯ ಹೇಳತೀರದು. ಕೋಕಿಲ ಎನ್ನುವ ಲೈಂಗಿಕ ಅಲ್ಪಸಂಖ್ಯಾತಳ ಮೇಲೆ ೨೦೦೪ರಲ್ಲಿ ಬಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಅವಲ ಯೋನಿಯ ಮೇಲೆ, ಮೊಲೆ ತೊಟ್ಟುಗಳ ತುದಿಯನ್ನು ಸಿಗರೇಟ್‌ನಿಂದ ಸುಟ್ಟು, ಅವಳ ಮೇಲೆ ಬಲಾತ್ಕಾರ ಮಾಡಿದರು.
---------

ಲೈಂಗಿಕತೆಗೆ ಬಹು ಆಯಾಮಗಳಿವೆ. ಹಾಗಾಗಿ, ಸಲಿಂಗಕಾಮ ದ್ವಿಲಿಂಗಕಾಮ ಪರಲಿಂಗಕಾಮ ಮೊದಲಾದವುಗಳ ಬಗ್ಗೆ ಸಮಾಜದಲ್ಲಿ ಇರುವ ಮಡಿವಂತಿಕೆಯನ್ನು ಹೊಡೆದೋಡಿಸಬೇಕಾಗಿದೆ. ನನ್ನ ಲೈಂಗಿಕ ಅಭಿವ್ಯಕ್ತಿ, ಆಯ್ಕೆ, ಆಕರ್ಷಣೆ, ಆದ್ಯತೆಗಳು ನನ್ನ ವೈಯಕ್ತಿಕ ವಿಚಾರ. ರಾಜ್ಯಾಂಗ, ನ್ಯಾಯಾಂಗ, ಕಾರ‍್ಯಾಂಗ, ಮಾಧ್ಯಮಗಳೂ ಸೇರಿದಂತೆ ನನ್ನ ಖಾಸಗಿ ಜೀವನದಲ್ಲಿ ಮೂಗು ತೂರಿಸುವ ಹಕ್ಕು ಯಾರಿಗೂ ಇಲ್ಲ. ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದಿಂದ ದೂರವಿಡುವುದು, ಶೋಷಣೆ ಮಾಡುವುದು, ಹಿಂಸಿಸುವುದು, ವಿಚಿತ್ರವೆಂಬಂತೆ ಕಾಣುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಸಂಗತಿಯಾಗಿದೆ.

ಗೀತೆ ಕುರಿತು ಪೇಜಾವರರಿಗೊಂದು ಪತ್ರಶಶಿ ಪುತ್ತೂರ
ವಾರ್ತಾಭಾರತಿ


ಮಾನ್ಯರೇ,

 

ಪೇಜಾವರ ಶ್ರೀಗಳು ಗೀತೆಯ ಕುರಿತು ವಾರ್ತಾಭಾರತಿ ಪತ್ರಿಕೆಯಲ್ಲಿ (25-2-15) ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನು ನೋಡಿದೆ. ಭಗವದ್ಗೀತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಕೆಲವರದನ್ನು ಕೆಟ್ಟದಾಗಿ ನಿಂದಿಸುತ್ತಿದ್ದಾರಲ್ಲದೇ ಕೆಲವರು ಅದನ್ನು ಸುಡಬೇಕೆನ್ನುವಷ್ಟರ ಮಟ್ಟಕ್ಕೆ ಹೋದದ್ದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಶ್ರೀಗಳು ಹೇಳಿರುವ ‘‘ಸರಿಯಾಗಿ ಅರ್ಥೈಸಿಕೊಳ್ಳಿ’’ ಎಂಬ ಮಾತೇ ಇಲ್ಲಿ ಗೊಂದಲ ಹುಟ್ಟಲು ಮೂಲ ಕಾರಣ ಎಂಬುವುದನ್ನು ಹೇಳಲೇ ಬೇಕಾಗುತ್ತದೆ. ಹೇಗೆಂದರೆ, ಹದಿನೆಂಟು ಅಧ್ಯಾಯಗಳ, ದೊಡ್ಡ ಸಂಖ್ಯೆಯಲ್ಲಿ ಹಲವಾರು ಶ್ಲೋಕಗಳೇ ತುಂಬಿರುವ ಗೀತೆಯನ್ನು ಯಾವ ರೀತಿಯಲ್ಲೂ ಕೂಡ ನೋಡಲು ಸಾಧ್ಯವಿದೆ. ಮೇಲ್ವರ್ಗದವರಿಗೆ ಇದೊಂದು ತತ್ವ ಹಾಗೂ ಧರ್ಮೋಪದೇಶದ ಗ್ರಂಥವಾಗಿ ಕಂಡರೆ ಸಾಮಾಜಿಕವಾಗಿ ನೋವುಂಡ ಕೆಲವರಿಗೆ ಸಮಾಜದಲ್ಲಿನ ಕೆಲ ಅಸಮಾನತೆಗಳಿಗೆ ತಾತ್ವಿಕ ನೆಲೆಗಟ್ಟನ್ನು ನೀಡುವ ಮೂಲಕ ಈ ಗ್ರಂಥ ನಮ್ಮ ಮೇಲಾಗುತ್ತಿರುವ ಅನ್ಯಾಯಗಳಿಗೆ ಮೂಲ ಕಾರಣವಾಗಿ ತೋರುತ್ತಿರುವುದು ಕೂಡ ಹೌದು.

ಭಗವದ್ಗೀತೆ ಒಂದು ಸಾಮಾನ್ಯ ಗ್ರಂಥವಾಗಿ ಪರಿಗಣಿಸಲ್ಪಡದೇ, ಭಗವಾನ್ ಶ್ರೀಕೃಷ್ಣನ ಬಾಯಿಯಿಂದಲೇ ಹೇಳಲ್ಪಟ್ಟ ಸಂದೇಶಗಳಿವು ಎಂಬ ಅಚಲ ನಂಬಿಕೆಯನ್ನು ಆರಂಭದಿಂದಲೂ ಬಿತ್ತಲಾಗಿರುವ ಕಾರಣ ಗೀತೆಯಲ್ಲಿ ಉಲ್ಲೇಖಿತವಾದ ಎಲ್ಲ ಪದಗಳಿಗೂ ಅದರದ್ದೇ ಆದ ಧಾರ್ಮಿಕ ಹಾಗೂ ಸಾಮಾಜಿಕ ಮಾನ್ಯತೆಯಿರುವುದು ಸ್ಪಷ್ಟ. ತಾವು ಹೇಳಿರುವ ‘ಪಾಪಯೋನಿ’ಗಳ ಕುರಿತು ಹೇಳುವು ದಾದರೆ, 9ನೆ ಅಧ್ಯಾಯದ 32ನೆ ಶ್ಲೋಕವಾದ ಮಾಂ ಹಿ ಪಾರ್ಥ ವೃಪಾಶ್ರಿತ್ಯ ಯೇಪಿ ಸ್ಯ: ಪಾಪಯೋನಯ: ಸೀಯೋ ವೈಶ್ಯಸ್ತಥಾ ಶೂದ್ರಾಸ್ತೇಪಿ ಯಾಂತಿ ಪರಾಂಗತಿಯಲ್ಲಿ ಹೇಳಿರುವ ಮಾತು ಅತ್ಯಂತ ಸರಳವೇ ಹೌದು ಅಂದರೆ, ಓ ಪಾರ್ಥನೇ ಇಲ್ಲಿ ಕೇಳು, ಸೀ, ವೈಶ್ಯ, ಶೂದ್ರರಂತಹ ಪಾಪಯೋನಿ (ಹಿಂದಿನ ಪಾಪಕರ್ಮ ಗಳಿಂದಾಗಿ ಕೆಟ್ಟಜನ್ಮದಲ್ಲಿ ಹುಟ್ಟಿದವರು) ಗಳೂ ಕೂಡ ನನ್ನನ್ನು ನಂಬಿದಾದಲ್ಲಿ ಪರಮಗತಿ (ಮೋಕ್ಷ)ಯನ್ನು ಪಡೆಯಬಲ್ಲರು. ಎಂದಷ್ಟೆ ಇಲ್ಲಿ ಹೇಳಲಾಗಿದೆ. ಆದರೆ, ಸೀ, ವೈಶ್ಯ, ಶೂದ್ರರನ್ನು ಇಲ್ಲಿ ಉಲ್ಲೇಖಿಸಿದ ರೀತಿ ಸಮಾಜಕ್ಕೆ ತಪ್ಪುಸಂದೇಶವನ್ನು ಖಂಡಿತವಾಗಿಯೂ ನೀಡುವಂತಿರುವುದೇ ಸಮಸ್ಯೆಗೆ ಮೂಲಕಾರಣ. ಸ್ವಯಂ ನಿಮ್ಮ ಮೂಲ ಗುರುಗಳಾದ ಮಧ್ವಾಚಾರ್ಯರೂ ಕೂಡ ಶೂದ್ರಾದಿಗಳನ್ನು ಪಾಪಯೋನಿ ಎಂಬುದರ ಮತ್ತೊಂದು ರೂಪವಾದ ‘‘ನಿತ್ಯನಾರಕಿ’’ಗಳೆಂದು ಕರೆಯಲು ಈ ಶ್ಲೋಕವೇ ಪ್ರೇರಣೆಯಾಗಿರುವ ಸಾಧ್ಯತೆಯಿದೆ.

ಇನ್ನು ಸುಡುವ ಪ್ರಕ್ರಿಯೆಗೆ ಬರೋಣ. ಗೀತೆಯನ್ನು ಸುಡಬೇಕೆಂದವರದ್ದು ಸರಿಯೋ ತಪ್ಪೋ ಅದು ಇಲ್ಲಿ ಸದ್ಯಕ್ಕೆ ಅಪ್ರಸ್ತುತ. ಆದರೆ ಈ ಕುರಿತಾಗಿ ನೀವು ಒಂದು ಮಾತನ್ನು ಎತ್ತಿದ್ದೀರಿ. ಅದೆಂದರೆ ‘‘ಕುರ್‌ಆನ್, ಬೈಬಲ್‌ಗಳ ಕುರಿತು ಈ ರೀತಿಯಾಗಿ ಮಾತಾಡುವ ಧೈರ್ಯ ಇವರಿಗಿದೆಯೇ’’ ಎಂದು. ಈ ನಿಮ್ಮ ಪ್ರಶ್ನೆಯಲ್ಲೇ ಅದಕ್ಕೆ ಸ್ಪಷ್ಟ ಉತ್ತರವಿದೆ ಸ್ವಾಮಿ. ಅಂಬೇಡ್ಕರರು ತಮ್ಮ ಹೋರಾಟದ ಸಮಯದಲ್ಲಿ ಅವರ ಸಮುದಾಯವನ್ನು ನಿಕೃಷ್ಟವಾಗಿ ನೋಡಲು ಕಾರಣವಾದ ‘ಮನುಸ್ಮತಿ’ಯನ್ನು ಸುಟ್ಟಿದ್ದರು. ಇದು ಕೇವಲ ಸಾಂಕೇತಿಕವಾದ ಪ್ರತಿಭಟನೆಯೇ ಹೊರತು ಅದನ್ನವರು ನಂತರ ಯಾವತ್ತಿಗೂ ಕೂಡ ಮುಂದುವರಿಸಿರಲಿಲ್ಲ. ಇಂತಹ ಹೋರಾಟಗಾರರಿಗೆ ಬೇರೆ ಏನೂ ಮಾಡಲು ಕೆಲಸ ಇಲ್ಲದೆ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಿಲ್ಲವೆಂಬುದರ ಅರಿವಿರಲಿ. ಇಂತಹ ವಿಚಾರಗಳ ಕಾರಣಕ್ಕೆ ನೋವುಣ್ಣುತ್ತಿರುವ, ಅವಮಾನಕ್ಕೊಳಗಾಗುತ್ತಿರುವ ಸಮುದಾಯವೊಂದು ಈ ರೀತಿಯಾಗಿ ತನ್ನ ಅಸಮಾಧಾನವನ್ನು ಇಲ್ಲಿ ತೋರ್ಪಡಿಸುತ್ತಿದೆ ಯಷ್ಟೆ. ಇಲ್ಲಿ ಮಾತಾಡುತ್ತಿರುವವರಿಗೆ ಕುರ್‌ಆನ್ ಆಗಲೀ ಬೈಬಲ್ ಆಗಲೀ ಯಾವ ರೀತಿಯಲ್ಲೂ ಸಂಬಂಧಪಡದೇ ಇದ್ದಾಗ ಅವರಿಗೆ ಅದರ ಕುರಿತಾಗಿ ಮಾತಾಡುವ ಅವಶ್ಯಕತೆಯಾದರೂ ಏನಿದೆ ಸ್ವಾಮಿ? ಬೈಬಲ್‌ನಲ್ಲಾಗಲೀ ಕುರ್‌ಆನಿನಲ್ಲಾಗಲೀ ಇಲ್ಲಿನ ಶೂದ್ರ ಸಮುದಾಯವನ್ನು ‘ಪಾಪಯೋನಿ- ನಿತ್ಯ ನಾರಕಿ’ಗಳೆಂದ ಉಲ್ಲೇಖಗಳಿದ್ದರೆ ಆ ವಿಚಾರ ಖಂಡಿತವಾಗಿಯೂ ಚರ್ಚೆಗೆ ಬರುತ್ತಿತ್ತು. ತಮ್ಮ ಹುಳುಕುಗಳನ್ನು ಮರೆಸಲು ಇನ್ಯಾರನ್ನೋ ಎಳೆದು ದಾರಿತಪ್ಪಿಸುವ ಇಂತಹ ವಿತಂಡವಾದಗಳೆಲ್ಲ ಯಾತಕ್ಕೆ?

ಸುಖ ದು:ಖ ಜಯಾಪಜಯಗಳನ್ನು ಒಂದೇ ರೀತಿಯಲ್ಲಿ ಕಾಣಬೇಕು ಎಂಬ ಸಂದೇಶ ಗೀತೆಯಲ್ಲಿದೆ. ಇಂತಹ ‘‘ಸಮತ್ವಂ ಯೋಗ ಉಚ್ಯತೆ’’ ಎಂಬ ಶ್ಲೋಕವನ್ನು ನೀವು ನಿಮ್ಮದೇ ರೀತಿಯಲ್ಲಿ ವಿಸ್ತರಿಸಿ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವವನೇ ‘‘ಯೋಗಿ’’ ಎಂದಿದ್ದೀರಿ. ಆದರೆ ನಮ್ಮಲ್ಲಿ ಖಾವಿಧಾರಿಗಳು ಕಾಣ ಸಿಗುವರೇ ವಿನಹ ನೀವಂದಂತಹ ಯೋಗಿಗಳು ಮಾತ್ರ ಎಲ್ಲೂ ಕಾಣಿಸರು. ‘‘ಸರ್ವೇ ಜನಾ ಸುಖಿನೋ ಭವಂತು’’ ಅನ್ನುತ್ತಲೇ ಒಂದು ವರ್ಗವನ್ನು ಪ್ರಾಣಿಗಳಿಗೂ ಕೀಳಾಗಿ ನೋಡಲ್ಪಡುತ್ತದೆ. ಎಲ್ಲರಲ್ಲೂ ಕೂಡ ಪರಮಾತ್ಮನಿದ್ದಾನೆ ಎನ್ನುತ್ತಲೇ ಜಾತಿಯ ನೆಪದಲ್ಲಿ ಊಟದ ಮಧ್ಯದಿಂದಲೇ ಯಾರನ್ನೋ ನಿಷ್ಕರುಣೆಯಿಂದ ಎಬ್ಬಿಸಲಾಗುತ್ತದೆ. ಎಲ್ಲರನ್ನೂ ಸಮಾನವಾಗಿ ಕಾಣುವ ತತ್ವವೆಂದರೆ ಇದೇನಾ ಸ್ವಾಮೀ? ಮತ್ತೆ ನೀವು ವ್ಯಾಖ್ಯಾನಿಸಿದ ಚಾತುರ್ವರ್ಣದ ಕುರಿತು ಮಾತನಾಡದಿರುವುದೇ ಒಳಿತು. ಯಾಕೆಂದರೆ ನೀವಂದಂತೆ ಗುಣಧರ್ಮಗಳ ಆಧಾರದಲ್ಲಿ ಬ್ರಾಹ್ಮಣ-ಶೂದ್ರತ್ವದ ವಿಭಾಗ ನಡೆದದ್ದು ನಿಜಕ್ಕೂ ಹೌದಾದರೆ ನಿಮ್ಮ ಅಷ್ಟಮಠಗಳ ಕೆಲ ಯತಿಗಳೇ ತಮ್ಮ ಪೀಠವನ್ನು ಕಳಕೊಳ್ಳಬೇಕಾಗಬಹುದೆಂಬುದು ನಿಮಗೂ ಗೊತ್ತಿದೆಯಲ್ಲವೇ? ಕೇವಲ ಹುಟ್ಟಿನ ಕಾರಣದ ಜಾತಿಯ ನೆಪದಲ್ಲಿ ಅವರೆಲ್ಲ ಅಲ್ಲಿ ಮೆರೆಯಿಸಲ್ಪಡುತ್ತಿದ್ದಾರೆಂಬ ವಾಸ್ತವ ನಿಮಗೆ ತಿಳಿದಿಲ್ಲವೇ? ಯಾತಕ್ಕೆ ಸುಮ್ಮನೆ ಈ ಎಲ್ಲ ಕಣ್ಣೊರೆಸುವ ತಂತ್ರಗಳು ಸ್ವಾಮಿ?

Tuesday, February 24, 2015

‘ಮಲೆಗಳಲ್ಲಿ ಮದುಮಗಳು’: ಏತಕ್ಕೆ ಇಷ್ಟು ಆಸಕ್ತಿ?


ಡಿ.ಬಿ. ಸತ್ಯಪ್ರಕಾಶ್, ಬೆಂಗಳೂರು.    ‘ಮಲೆಗಳಲ್ಲಿ ಮದುಮಗಳು’: ಏತಕ್ಕೆ ಇಷ್ಟು ಆಸಕ್ತಿ?

ನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದಾದ ಮಹಾಕವಿ ಕುವೆಂಪು ವಿರಚಿತ ‘ಮಲೆಗಳಲ್ಲಿ ಮದುಮಗಳು’ ನಾಟಕದ ಮರು ಪ್ರದರ್ಶನ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎ. ದಯಾನಂದ ಅವರು ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ನಾಲ್ಕು ವಿಭಿನ್ನ ರಂಗಸ್ಥಳಗಳಲ್ಲಿ ಸುಮಾರು ಒಂಬತ್ತು ಗಂಟೆಗಳ ಅವಯಲ್ಲಿ ನಡೆಯುವ ಈ ಮಹಾನಾಟಕ ‘ಮಲೆಗಳಲ್ಲಿ ಮದುಮಗಳು’ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಪ್ರದರ್ಶನಗಳನ್ನು ಕಂಡು ಬಹಳ ಜನರ ಮೆಚ್ಚುಗೆ ಪಡೆದಿದೆ. ಆದರೆ ಈ ಪ್ರದರ್ಶನದ ಸಾಂಸ್ಕೃತಿಕ ಲಾಭ, ಪ್ರಯೋಜನಗಳ ಕುರಿತು ಬಂದ ವಿಮರ್ಶೆ ಟೀಕೆ ಟಿಪ್ಪಣಿಗಳಿಗಂತೂ ಯಾರೂ ಕಿವಿಗೊಡುವುದಿಲ್ಲ.

  ಇಂತಹ ಮಹಾನಾಟಕಗಳ ತಯಾರಿ, ಪ್ರದರ್ಶನಕ್ಕೆ ಅಪಾರ ಹಣ ವೆಚ್ಚ ಆಗುವುದರಿಂದ ಖಾಸಗಿ ವ್ಯಕ್ತಿಗಳು ಮತ್ತು ರಂಗ ಸಂಸ್ಥೆಗಳ ಇಲಾಖೆಯ ನೆರವಿಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ ಎನ್ನುವುದಂತೂ ನಿಜ. ‘ಮಲೆಗಳಲ್ಲಿ ಮದುಮಗಳು’ ವಿಶೇಷವೆಂದರೆ ಈ ನಾಟಕದ ಪೂರ್ಣ ತಯಾರಿ, ಪ್ರಸ್ತುತಿ, ಪ್ರದರ್ಶನಗಳ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ನೇರವಾಗಿ ಹೊತ್ತುಕೊಂಡಿದೆ. ವಿಶೇಷವಾಗಿ ಮುಖ್ಯಮಂತ್ರಿಗಳು ಸರಕಾರದಿಂದಲೇ ಇದಕ್ಕಾಗಿ ಕೋಟ್ಯಂತರ ರೂ. ಮಂಜೂರು ಮಾಡಿದ್ದಾರೆ. ಈಗಾಗಲೇ ಎರಡು ಆವೃತ್ತಿಗಳಿಗೂ ಹಣ ಮಂಜೂರಾಗಿ ಈ ಬಾರಿ ಮೂರನೇ ಆವೃತ್ತಿಗೂ ಸರಕಾರದ ಇಲಾಖೆಯೇ ಆಸಕ್ತಿ ವಹಿಸಿದೆ. ಇದು ಬಹಳ ಅಪರೂಪದ ಸರಕಾರಿ ವಿದ್ಯಮಾನ. ಇದು ಸಂಸ್ಕೃತಿಪ್ರಿಯರಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮಹಾಕವಿ ಕುವೆಂಪುರವರು ಮತ್ತು ಅವರ ಕೃತಿಯ ಬಗ್ಗೆ ಅಪಾರವಾದ ಗೌರವ ಇಟ್ಟುಕೊಂಡೇ ಕೆಳಕಂಡಂತೆ ಪ್ರಶ್ನೆಗಳನ್ನು ಮುಂದಿಡುತ್ತಿದ್ದೇನೆ.

 ನಮ್ಮ ಸಾಂಸ್ಕೃತಿಕ ವಲಯದಲ್ಲಿ ಸರಕಾರದ ನೆರವು ಅಗತ್ಯ ಇರುವ ನೂರಾರು ವಿಚಾರಗಳಿವೆ. ಯಾವುದಕ್ಕೂ ಇಲ್ಲದ ಸರಕಾರದ ಮತ್ತು ಇಲಾಖೆಯ ಆಸಕ್ತಿ ಇದಕ್ಕೆ ಮಾತ್ರ ಏಕೆ? ಅದೇ ರಂಗತಂಡ, ಅದೇ ನಾಟಕಕಾರ ಮತ್ತು ಅದೇ ನಿರ್ದೇಶಕರ ಅದೇ ನಾಟಕದ ಪ್ರಸ್ತುತಿಗೆ ಸರಕಾರ ಪುನಃ ಪುನಃ ಲಕ್ಷಾಂತರ ಇಲ್ಲವೇ ಕೋಟ್ಯಂತರ ರೂಪಾಯಿಗಳನ್ನು ಕೊಡುವುದು ಸರಿಯೇ? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೇರೆ ಯಾವುದಕ್ಕೂ ಇಲ್ಲದಿದ್ದರೂ ಈ ನಾಟಕದ ವಿಚಾರದಲ್ಲಿ ಮಾತ್ರ ಆಸಕ್ತಿ ತೋರಿಸುತ್ತಿರುವುದೇಕೆ? ಬೇರೆ ಇನ್ಯಾವ ರಂಗ ಪ್ರಸ್ತುತಿಗೂ ಇಷ್ಟು ಆಸಕ್ತಿ ಏಕಿಲ್ಲ? ಮತ್ತೂ ಹೇಳಬೇಕೆಂದರೆ ಸಂಗೀತ- ಚಿತ್ರಕಲೆ- ಶಿಲ್ಪಕಲೆ ಮುಂತಾದ ಇತರ ಕಲೆಗಳ ವಿಷಯದಲ್ಲಿ ಎಂತಹ ಆಸಕ್ತಿ ವಹಿಸಲಾಗಿದೆ? ಈ ನಾಟಕದ ಪ್ರತೀ ಪ್ರದರ್ಶನ, ಆವೃತ್ತಿಯಲ್ಲಿ ನಾಟಕಕಾರ, ರಂಗತಂಡ, ನಿರ್ದೇಶಕ, ರಂಗಸಜ್ಜಿಕೆ, ನಟನಟಿಯರು, ಮೇಳ ಇವುಗಳಿಗೆ ಎಷ್ಟು ಸಂಭಾವನೆೆ ಕೊಡಲಾಗಿದೆ ಎಂಬುದನ್ನು ತಿಳಿಸಬೇಡವೇ? ಮೇಲೆ ಹೇಳಿದ ಎಲ್ಲ ವಿಷಯಗಳಲ್ಲಿ ವಿವರಗಳನ್ನು ತಿಳಿಯಲು ತೆರಿಗೆ ತೆರುವ ಜನರಿಗೆ ಹಕ್ಕು ಇದೆ ಎನ್ನುವುದು ನಿರ್ವಿವಾದ. ಆದ್ದರಿಂದ ಮೇಲಿನ ಎಲ್ಲ ವಿವರಗಳನ್ನು ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ, ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಬೇಕು ಎಂದು ಜನರ ಪರವಾಗಿ ಆಗ್ರಹಿಸುತ್ತೇನೆ. ಈ ಸರಕಾರಿ ಇಲಾಖೆಯ ಆಸಕ್ತಿಯ ಪಾರದರ್ಶಕತೆ ಕುರಿತು ಸಂಶಯಗಳನ್ನು ನಿವಾರಿಸಬೇಕಾದದ್ದು ಸರಕಾರದ ಮತ್ತು ಇಲಾಖೆಯ ಕರ್ತವ್ಯ. ಇದು ನಮ್ಮ ಸರಕಾರದ ಸಂಸ್ಕೃತಿ ಪ್ರೇಮ ಎಂದು ಹೇಳಿಬಿಟ್ಟರೆ ಸಂಶಯ ನಿವಾರಣೆಯಾಗುವುದಿಲ್ಲ. ಇಲಾಖೆಯ ಸಚಿವೆ ಉಮಾಶ್ರೀ, ಕಾರ್ಯದರ್ಶಿಗಳಾದ ಶ್ರೀಮತಿ ನಾಗಲಾಂಬಿಕಾ ದೇವಿ ಅವರು ಇದರತ್ತ ಗಮನ ಹರಿಸಬೇಕು ಎಂದು ಪ್ರಾರ್ಥಿಸುತ್ತೇನೆ.

ಕನಕದಾಸರ ಕೀರ್ತನೆಗಳಲ್ಲಿ ಸಂಸ್ಕೃತಿ, ರಾಜಕೀಯನರಸಿಂಹ ಮೂರ್ತಿ ಹೂವಿನಹಳ್ಳಿ, 

ಬೆಂಗಳೂರು

ಕನಕದಾಸರ ಕೀರ್ತನೆಗಳಲ್ಲಿ ಸಂಸ್ಕೃತಿ, ರಾಜಕೀಯ


ಸಾಹಿತ್ಯ ಕೃತಿಗಳನ್ನು ನಾವು ಅಧ್ಯಯನ ಮಾಡುತ್ತಾ ಬಂದಾಗ, ಮಹತ್ವದ ಲೇಖಕರು ಯಾವುದೋ ಶತಮಾನದಲ್ಲಿ ಅಥವಾ ಸಾವಿರಾರು ವರ್ಷಗಳ ಹಿಂದೆ ಸಾಹಿತ್ಯ ಕೃತಿಗಳನ್ನು ಬರೆದು, ಇಂದಿಗೂ ಜನರ ನಡುವೆ ಜೀವಂತವಾಗಿದ್ದಾರೆ. ಬದುಕನ್ನು ಕುರಿತು ಬರೆದ ಮಹತ್ವದ ಲೇಖಕರ, ಕವಿಗಳ ಕಾವ್ಯಗಳು, ಕಾದಂಬರಿಗಳು, ವಚನಗಳು, ಕೀರ್ತನೆಗಳು ಇಂದಿಗೂ ಮತ್ತೆ ಮತ್ತೆ ಚರ್ಚೆಯಾಗುತ್ತಾ, ಪುನರಾವರ್ತನೆಯಾಗುತ್ತಾ ಜನರ ಮನಸ್ಸುಗಳಲ್ಲಿ ಜೀವಂತವಾಗಿ ಬದುಕಿದ್ದಾರೆನ್ನುವ ವಿಷಯವನ್ನು ಕುರಿತು ಅಧ್ಯಯನ ಮಾಡುವುದು ಆರೋಗ್ಯಕರವಾದ ಬೆಳವಣಿಗೆಯಾಗಿದೆ.

 ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಕನಕದಾಸರು, ಸಮಾಜದ ಅಸಮಾನತೆ, ರಾಜಕೀಯ, ಸಂಸ್ಕೃತಿಯ ಲೇಖಕರಾಗಿ, ಹೋರಾಟಗಾರರಾಗಿ ಅವರ ಕೃತಿಗಳಲ್ಲಿ, ಕೀರ್ತನೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

 ಪ್ರಬಲ ವರ್ಗಗಳು, ದುರ್ಬಲವರ್ಗಗಳನ್ನು ಹಿಡಿದಿಟ್ಟುಕೊಂಡು ಅಕಾರ ಚಲಾಯಿಸು ವಂಥ ‘ರಾಜಕೀಯ’ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ಮಾನದಂಡವಾಗಿದೆ. ಇಂದಿಗೂ ಅದೇ ರೀತಿಯ ರಾಜಕೀಯ ಮುಂದುವರಿಯುತ್ತಿರುವುದನ್ನು ನಾವು ನೋಡುತ್ತಾ ಅಂತಹ ರಾಜಕೀಯದ ಚಕ್ರದೊಳಗೆ ಬದುಕುತ್ತಿದೇವೆ.

ಕನಕದಾಸರು ಇಂಥ ಸಂಸ್ಕೃತಿ ಮತ್ತು ರಾಜಕಾರಣದ ವಿರುದ್ಧ ತಿರುಗಿ ಬಿದ್ದರು. ಸಮಾನತೆಗಾಗಿ ಹೋರಾಟಕ್ಕಿಳಿದ ಬಂಡಾಯಗಾರನಾಗಿ ರಾಮಧಾನ್ಯ ಕೃತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ವಚನ ಚಳವಳಿಯ ನಂತರದ ದಿನಗಳಲ್ಲಿ ಪುರೋಹಿತ ಸಮುದಾಯದ ಸಂಸ್ಕೃತಿ ಪ್ರಧಾನವಾಗಿ ಬೆಳೆದಿತ್ತು. ಪ್ರಬಲ ಜಾತಿಗಳ, ದೇವಾಲಯಗಳ ‘ರಾಜಕೀಯ’ ಜನರನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಕನಕದಾಸರು ಇಂಥ ಮೇಲ್ಜಾತಿಯ ಸಂಸ್ಕೃತಿ ಮತ್ತು ಅಕಾರ ಶಕ್ತಿಯ ಪ್ರಬಲವರ್ಗದ ರಾಜಕಾರಣದ ವಿರುದ್ಧ ಬಂಡೆದ್ದವರಾಗಿ ಕಾಣಿಸಿಕೊಂಡಿರುವುದು ಅವರ ಕೃತಿ ಕೀರ್ತನೆಗಳನ್ನು ಓದುವುದರಿಂದ ನಮಗೆ ಅರ್ಥವಾಗುತ್ತದೆ.

  ಇಂದಿನ ದಿನಗಳಲ್ಲಿಯೂ ಕನಕದಾಸರು ಹೇಳಿರುವಂಥ ಸಂಸ್ಕೃತಿ ಮತ್ತು ರಾಜಕಾರಣ ವನ್ನು ಸಮಾನತೆಯ ನೆಲೆಯಲ್ಲಿ ಅಧ್ಯಯನ ಮಾಡಿದಾಗ ಕನಕದಾಸರನ್ನು ಆಧ್ಯಾತ್ಮದ ವಿಚಾರಗಳನ್ನು ಹೇಳಿದ ಸಂತನೆಂದು ಕರೆಯುವುದಿಲ್ಲ. ಏಕೆಂದರೆ ಕನಕದಾಸರ ಕೀರ್ತನೆ, ಕೃತಿಗಳನ್ನು ಅಧ್ಯಯನ ಮಾಡಲು ಪ್ರವೇಶಿಸಿದಾಗ, ನನಗನ್ನಿಸುವುದು ದೈವದ, ಧರ್ಮದ ರೂಪಕಗಳನ್ನಿಟ್ಟುಕೊಂಡು ಅನುಭವದ ಬದುಕಿನ ಮೂಲಕ ದಂಗೆ ಕೋರನಾಗಿ, ದುರ್ಬಲ ಜಾತಿಗಳ ಪರವಾಗಿ ನಿಂತು, ಶೋಷಿತ ಸಮುದಾಯದ ಜನಗಳ ನ್ಯಾಯಕ್ಕಾಗಿ, ಅಭಿವೃದ್ಧಿಗಾಗಿ, ಸಮಾನತೆಗಾಗಿ, ಸಿಗಬೇಕಾದ ಸ್ಥಾನಮಾನಗಳ ಹೋರಾಟಕ್ಕಾಗಿ, ತನ್ನ ಬದುಕನ್ನು ಸಮರ್ಪಿಸಿಕೊಂಡ ದಾಸಪಂಥದ ವಿಭಿನ್ನ ವ್ಯಕ್ತಿಯಾಗಿ ಕಂಡುಬರುತ್ತಾರೆ.

ಇಂದು ಸಂಸ್ಕೃತಿ, ರಾಜಕೀಯದ ವೌಲ್ಯ ಗಳನ್ನು ಭಾಷಣಗಳನ್ನಾಗಿ, ಪ್ರಚಾರಕ್ಕಾಗಿ, ಪರಿವರ್ತಿಸಿಕೊಂಡಿದ್ದಾರೆ. ಜನರನ್ನು ಮೋಸಗೊಳಿಸುತ್ತಿರುವ, ದಿಕ್ಕು ತಪ್ಪಿಸುತ್ತಿರುವ ಪ್ರವೃತ್ತಿ ನಮ್ಮಲ್ಲಿ ಮುಂದುವರಿಯುತ್ತಿದೆ. ಅಂಥ ಮೋಸಗೊಳಿಸುವ ಗುಂಪಿನ ವಿರುದ್ಧ ಆ ಸಮಯದಲ್ಲೇ ಬಂಡುಕೋರನಾಗಿ ಸಾಮಾನ್ಯ ಜನರ ಸಮಸ್ಯೆಗಳಿಗೆ, ನೋವುಗಳಿಗೆ ಸ್ಪಂದಿಸುವ ಸಮಾನತೆಯ ರೂವಾರಿಯಾಗಿ ಹೋರಾಟಕ್ಕಿಳಿದವರು ಕನಕದಾಸರು. ಕನಕದಾಸರ ‘‘ಕಲಿಯೇರಿ ಬಂತು ಕೀರ್ತನೆ’’ಯ ಸಾಲುಗಳನ್ನು ನೋಡಿ.

ಅತ್ತೆಯೇ ಸೊಸೆಯಾಗಿ ಸೊಸೆಯು ಅತ್ತೆಯಾಗಿ
ಪುತ್ರ ಪಿತನಾಗಿ ಪಿತ ಪುತ್ರನಾಗಿ
ಮತ್ತೆ ಗಂಡನಿಗೆ ಹೆಂಡತಿಯೆ ಗಂಡನು ಆಗಿ
ವರ್ತಿಸುವರಯ್ಯ ತಮಗೆದುರಿಲ್ಲವೆಂದು.

ಅನ್ನ, ವಸಗಳಿಂದ ಚನ್ನಾಗಿ ಬಾಳುವರ ಭಿನ್ನ ತಂತ್ರವ ಮಾಡಿ ಕೆಡಿಸುತಿಹರು
 ಸತ್ಯ ಧರ್ಮಗಳೆಲ್ಲ ಎತ್ತ ಪೋದವೊ ಕಾಣೆ

ಉತ್ತಮರ ಜೀವನಕೆ ದಾರಿಯಿಲ್ಲ. ನಿತ್ಯದಲಿ ಕಳುವು ವ್ಯಭಿಚಾರವುಳ್ಳವರೆಲ್ಲ
ಅರ್ಥ ಸಂಪದರಾಗಿ ಅನುಭವಿಸುತಿಹರು.
ಹರಿಹರ ಪೂಜೆಗಳು ಹಗರಣಗಳಾದವು
ಉರಿಮೋರೆ ಚಾಮುಂಡಿ ಶಕ್ತಿಗಳಿಗೆ
ಕುರಿ ಕೋಣ ನೈವೇದ್ಯ ಧೂಪದೀಪಗಳಿಂದ
ಪರಮ ಭಕ್ತಿಯ ಮಾಡಿ ಪೂಜಿಸುವರಯ್ಯ
 ‘‘ಕಲಿಯೇರಿ ಬಂತು’’ಪುಟ 74-75
(ಕನಕದಾಸರ ಜನಪ್ರಿಯ ಕೀರ್ತನೆಗಳು)
ಕನಕದಾಸರ ಮೇಲ್ಕಂಡ ಕೀರ್ತನೆಯಿಂದ ದೇಶದ ಜನರ ರಾಜಕೀಯ ‘ಸಂಸ್ಕೃತಿ’ ಎಂಥದೆಂಬುದು ಅರ್ಥವಾಗುತ್ತ್ತದೆ.

ಹಿರಿಯ ತಲೆಮಾರಿನ, ಕಿರಿಯ ತಲೆಮಾರಿನ ಸಂಬಂಧದ ವೌಲ್ಯಗಳಲ್ಲಾಗಿರುವ ಬದಲಾವಣೆಯನ್ನು ಕೀರ್ತನೆಯಲ್ಲಿ ಗುರುತಿಸ ಬಹುದು. ಕುಟುಂಬದಲ್ಲಾಗಿರುವ ವೌಲ್ಯಗಳ ವಿವರವನ್ನು ತಿಳಿದುಕೊಳ್ಳಬಹುದು. ಹಿರಿಯ ಕಿರಿಯ ತಲೆಮಾರಿನ ಜನರ ಮಾತುಗಾರಿಕೆ, ಸ್ಥಾನಮಾನ, ಗೌರವದಂಥ ನಿಯಮಗಳಿಗೆ ಬೆಲೆ ಇಲ್ಲದಂತಾಗಿದೆ. ಹಿರಿಯರು, ಕಿರಿಯರು ಹೇಳಿದಂತೆ ಕೇಳಿಕೊಂಡು ಬದುಕುವಂಥ ಸಂಸ್ಕೃತಿಯೊಂದು ನಿರ್ಮಾಣವಾಗಿರುವುದನ್ನು ನಾವು ನೋಡುತ್ತಿದ್ದೇವೆ. ದೇಶದ ಜನರ ಬದುಕಿನ ಸಂಸ್ಕೃತಿಯಲ್ಲಾದ ಬದಲಾವಣೆಗಳನ್ನು ಕೀರ್ತನೆ ಹೇಳುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಭಕ್ತಿಯನ್ನು, ಧರ್ಮವನ್ನು, ದೈವವನ್ನು ಪ್ರಧಾನವಾಗಿಟ್ಟುಕೊಂಡು ಪುರೋಹಿತ ಸಮುದಾಯ, ದೇವಾಲಯಗಳ ಮಾಲಕರು ದೊಡ್ಡ ದೊಡ್ಡ ವ್ಯಾಪಾರಗಾರರ ಗುಂಪುಗಳು ಜನರನ್ನು ವಂಚಿಸಿ, ಮೋಸಗೊಳಿಸುವಂಥ ಕ್ರಿಯೆ ನಿರಂತರವಾಗಿ ನಡೆಯುತ್ತಿದೆ.

ಭಾರತದಂಥ ದೇಶದಲ್ಲಿ ಭಕ್ತಿ, ದೇವಾಲಯಗಳು ಹಣವಂತರ, ಅಕಾರ ಬಲದವರ, ಪುರೋಹಿತ ಸಮುದಾಯ ಗಳಿಗೆ, ರಾಜಕೀಯ ನಾಯಕರಿಗೆ, ಧರ್ಮದ ನಾಯಕರಿಗೆ ಬೇಕಾದ ಸಂಪತ್ತು, ಸವಲತ್ತುಗಳನ್ನು, ಆಸ್ತಿ, ಅಕಾರವನ್ನು ಸಂಪಾದನೆ ಮಾಡಿಕೊಳ್ಳುವ ವ್ಯಾಪಾರದ ಕೇಂದ್ರಗಳಾಗಿರುವುದನ್ನು ನಾವು ಇಂದಿಗೂ ನೋಡುತ್ತಿದ್ದೇವೆ.

ಹಣಬಲ, ಧರ್ಮದಬಲ, ರಾಜಕೀಯ ಬಲ ಇರುವ ಜನರು ತಮ್ಮ ಬದುಕನ್ನು ಭದ್ರ ಪಡಿಸಿಕೊಳ್ಳುವುದಕ್ಕಾಗಿ ಸೃಷ್ಟಿಸಿಕೊಂಡಿರುವ ಆಚರಣೆಗಳನ್ನು, ನಂಬಿಕೆಗಳನ್ನು, ಧರ್ಮವನ್ನು, ದೇವಾಲಯಗಳನ್ನು ನಂಬಿಕೊಂಡು ಕೆಳಜಾತಿಗಳ ಜನರು ತಮ್ಮ ಬದುಕನ್ನು ತಾವೇ ಸುಟ್ಟುಕೊಳ್ಳುತ್ತಿದ್ದಾರೆ. ಕನಕದಾಸರು ಮೇಲ್ಕಂಡ ಗುಂಪುಗಳ ಸಮುದಾಯದವರು ಪ್ರಚಾರ ಮಾಡುತ್ತಿರುವ ಸಂಸ್ಕೃತಿಯನ್ನು ಕೃತಿ ಕೀರ್ತನೆಗಳಲ್ಲಿ ವಿರೋಸುವ ನೆಲೆ ಇದೆ.

 ಕನಕದಾಸರ ಕೃತಿ, ಕೀರ್ತನೆಗಳಲ್ಲಿ ಕೆಳವರ್ಗದ, ಮೇಲ್ವರ್ಗದ ಜನರ ಸಂಸ್ಕೃತಿಯ ಸಂಘರ್ಷವಿದೆ. ಪ್ರಬಲವರ್ಗ, ಜಾತಿ ಸಂಸ್ಕೃತಿಯ ವಿರುದ್ಧ ಸಂಘರ್ಷಕ್ಕಿಳಿದ ಬಸವಣ್ಣ, ಕನಕದಾಸರಂಥ ತ್ಯಾಗಮಯ ಮನಸ್ಸುಗಳು ಸೋಲುತ್ತವೆ ಎಂಬುದು ನಿಜ. ಆದರೆ ದಮನಕ್ಕೊಳಗಾದವರ ಬದುಕಿಗೆ ಒಂದು ಹೊಸ ದಾರಿಯನ್ನು ಕಟ್ಟಿಕೊಟ್ಟವರೆಂದು ಧೈರ್ಯವಾಗಿ ಹೇಳಬಹುದು. ದಾಸ ಸಾಹಿತ್ಯಪ್ರಚಾರದಲ್ಲಿ ಬರುವ ಕನಕದಾಸರಂಥವರು ಕೀರ್ತನೆಗಳನ್ನು, ವಚನಕಾರರ ವಚನಗಳನ್ನು ಅಧ್ಯಯನ ಮಾಡಿದಾಗ ತಿಳಿದು ಬರುವುದೆಂದರೆ, ಆರ್ಥಿಕವಾಗಿ ಪ್ರಬಲರಾದವರು ಈ ದೇಶದಲ್ಲಿ ವ್ಯಭಿಚಾರ, ಕಳ್ಳತನ, ಮೋಸ ಮಾಡಿ ಬದುಕುತ್ತಿರುವಂತ ವ್ಯಕ್ತಿಗಳನ್ನು ಗೌರವಿಸುವುದರ ಜೊತೆಗೆ, ಗೌರವಾನ್ವಿತ ವ್ಯಕ್ತಿಗಳಂತೆ ಬದುಕುತ್ತಾರೆ. ಇದು ಈ ದೇಶದ ಸಂಸ್ಕೃತಿಯಾಗಿದೆ. ಇಂಥ ಸಂಸ್ಕೃತಿಯ ವಿರುದ್ಧ ತಿರುಗಿಬಿದ್ದ ಕವಿಯಾಗಿದ್ದಾರೆ ಕನಕದಾಸ.

  ಹಣವಂತರು, ಪುರೋಹಿತ ಸಮುದಾಯದವರು, ವ್ಯಾಪಾರ ವರ್ಗದ ಜನ ಸಂಸ್ಕೃತಿಯ ಹೆಸರಿನಲ್ಲಿ ಭಕ್ತಿಯನ್ನು ಒಂದು ಕಾರ್ಖಾನೆ ರೂಪಕ್ಕೆ ಬದಲಾಯಿಸಿದ್ದಾರೆ. ಲಾಭದ ಗುರಿಯನ್ನು ಮುಖ್ಯವಾಗಿಟ್ಟುಕೊಂಡು, ದೇವಾಲಯಗಳನ್ನು, ಟ್ರಸ್ಟ್ ಗಳನ್ನು ನಿರ್ಮಾಣ ಮಾಡುತ್ತಾ ಸರಕಾರದಿಂದ, ಬಂಡವಾಳಗಾರರಿಂದ, ರಾಜಕೀಯ ನಾಯಕರಿಂದ, ಜನರಿಂದ ಬರುವ ಸಂಪತ್ತನ್ನು ಲೂಟಿ ಹೊಡೆಯುತ್ತಾ ಐಷಾರಾಮದ ಬದು ಕನ್ನು ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಕನಕದಾಸರ ‘‘ಕಲಿಯೇರಿ ಬಂತು’’ ಕೀರ್ತನೆಯಲ್ಲಿ ಮೇಲ್ವರ್ಗದ ಪುರೋಹಿತ ಸಮುದಾಯದ ಜನರು ಮೋಸಗೊಳ್ಳುತ್ತಿರುವ ಜನರನ್ನು ಬಡಿದು ತಿನ್ನುತ್ತಿರುವ ಸಂಸ್ಕೃತಿಯನ್ನು ವಿರೋಸುತ್ತಾರೆ. ಜನರ ಜೀವನದಲ್ಲಾದ ವೌಲ್ಯಗಳ ಬದಲಾವಣೆಯ ಕುರಿತು ಹಾಡಿದ್ದಾರೆ ಕನಕದಾಸರು. 

ಎಕ್ಕನಾತಿ, ಎಲ್ಲಮ್ಮ ಮಾರಿದುರ್ಗಿ ಚೌಡಿಯರ
ಅಕ್ಕರಿಂದಲಿ ಪೂಜೆ ಮಾಡಲೇಕೆ
ಕಿಕ್ಕಿರಿದು ಯಮನ ದೂತರೆಳೆದೊಯ್ದಿಗ
 ಶಕ್ತಿ ಆರು ಬಿಡಿಸಿ ಕೊಂಡರೇನೊ ಮರುಳೆ

ಸಂಭ್ರಮದಲೊಂದ್ಹೊತ್ತು ನೇಮದಲ್ಲಿದ್ದು ತಂಬಿಟ್ಟಿನಾ ದೀಪ ಹೊರಲೇತಕ್ಕೆ

ಕೊಂಬು ಹೋತ ಕುರಿ ಕೋಣಾನಾ ಬಲಿಗೊಂಬ ದೊಂಬಿ ದೈವಗಳ ಭಜಿಸದಿರು ಮನವೆ
ಜ್ಞಾನವಿಲ್ಲದೆ ಹೀನ ದೈವವ ಭಜಿಸಲು
 ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ?
ಸಿರಿಯಾದಿ ಕೇಶವರಾಯನ ನೆರೆ ನಂಬಿ
 ಸ್ಥಿರವಾದ ಪದವಿಯ ಪಡೆ ಹುಚ್ಚು ಮನವೆ
 ದಾನ ಧರ್ಮವ ಮಾಡಿ ಸುಖಿಯಾಗು ಮನವೆ
(ಕನಕದಾಸರ ಜನಪ್ರಿಯ ಕೀರ್ತನೆಗಳು ಪುಟ 111-112)

ಸಾವಿರಾರು ಜಾತಿಗಳು, ಲಕ್ಷಾಂತರ ದೈವಗಳು, ಜನಾಂಗಗಳ ಬಹು ಸಂಸ್ಕೃತಿ ಇರು ವಂತಹ ದೇಶಗಳಲ್ಲಿ ಮಾನವ ಆರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ವಾಗುವುದಿಲ್ಲವೆನ್ನುವ ವೈಜ್ಞಾನಿಕ ಸತ್ಯವನ್ನು ಕನಕದಾಸರು ಜನರಿಗೆ ತಿಳಿಸಿದ್ದಾರೆ. ಮಾನವನ ಅಭಿವೃದ್ಧಿಗೆ, ಪರಿವರ್ತನೆಗೆ, ದೈವಗಳು, ದೇವಾಲಯಗಳು, ಧರ್ಮಗಳು, ಜಾತಿಗಳು ಅಡ್ಡಗೋಡೆಯನ್ನು ನಿರ್ಮಿಸಿ ಅರಿವಿಲ್ಲದ ಕತ್ತಲೆಯಲ್ಲಿ ಬದುಕುವಂತೆ ಮಾಡುತ್ತೇವೆ ಎನ್ನುವ ವಿಚಾರವನ್ನು ಹೇಳಿದ ಕಾಲಜ್ಞಾನಿಗಳಾಗಿದ್ದಾರೆ ಬಸವಣ್ಣ, ಕನಕದಾಸ.

ಸತ್ತವನು ಉಣ್ಣುವನೆಂದು
ನಿತ್ಯ ಪಿಂಡ ವಿಕ್ಕುತ್ತೀರಿ
ಎಳ್ಳು ದರ್ಬೆಕೈಲಿ ಹಿಡಿದು
ಪಿತರ ತೃಪ್ತಿ ಪಡಿಸುತ್ತೀರಿ
ಎಳ್ಳು ಮೀನು ನುಂಗಿ ಹೋಯಿತು
ಮಂತ್ರಾಕ್ಷತೆಯ ಕೈಗೆ ಕೊಟ್ಟು
ಮೋಕ್ಷವನು ಹಾರೈಸುವಿರಿ
ಮಂತ್ರವೆಲ್ಲೋ ಅಕ್ಷತೆಯೆಲ್ಲೋ
ಹೇಳುವವನು ಅವಿವೇಕಿ
ಕೇಳುವವನು ಅಜ್ಞಾನಿ
ಆವ ಕರ್ಮವೊ ಇದು ಆವ ಧರ್ಮವೊ
(ಕನಕದಾಸರ ಜನಪ್ರಿಯ ಕೀರ್ತನೆಗಳು. ಪುಟ 24)

 ಹುಟ್ಟು ಸಾವುಗಳ ಆಚರಣೆಗಳನ್ನು ಸೃಷ್ಟಿಸಿಕೊಂಡು, ಜೀವನ ನಡೆಸುವ ಸಮುದಾಯವೊಂದರ ಸಾಂಸ್ಕೃತಿಕ ಆಚರಣೆಗಳ ವಿರೋಧವನ್ನು ಕೀರ್ತನೆಯಲ್ಲಿ ಕಾಣಬಹದು. ಭಾರತದಂತಹ ದೇಶದಲ್ಲಿ ಭಕ್ತಿಯ, ಸಂಸ್ಕೃತಿಯ ರಾಜಕಾರಣದ ಹೆಸರಿನಲ್ಲಿ ಜನರನ್ನು ನಂಬಿಸುತ್ತಾರೆ. ಬೀದಿ ಬೀದಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಸರಕಾರಿ ವಾಹನಗಳಲ್ಲಿ, ಚಾನೆಲ್‌ಗಳಲ್ಲಿ ಧಾರ್ಮಿಕ, ಭಕ್ತಿಯ ಕಾರ್ಯಕ್ರಮಗಳ ಆಚರಣೆಗಳನ್ನು ಪ್ರಚಾರ ಮಾಡಿ ಹಣ ಸಂಪಾದನೆ ಮಾಡುವ ವ್ಯಾಪಾರಿ ಮನೋಭಾವದ ಜನರು ತುಂಬಿ ಹೋಗಿದ್ದಾರೆ. ಕನಕದಾಸರು ಇಂಥ ಸಂಸ್ಕೃತಿಯ ಜನರ ಆಚರಣೆಗಳನ್ನು ನಂಬಿ ಮೋಸ ಹೋಗಬೇಡಿ, ನಿಮ್ಮ ಬದುಕಿಗೆ ನೀವೇ ಸಮಾ ತೋಡಿಕೊಳ್ಳಬೇಡಿ ಎನ್ನುವ ಸಂದೇಶವನ್ನೂ ಕೊಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇವಾಲಯಗಳ ಪ್ರವೇಶದ ಬಗ್ಗೆ ಚರ್ಚೆಯಾಗುತ್ತಿದೆ. ದಲಿತರನ್ನು, ಬಡವರನ್ನು, ನಿರ್ಗತಿಕ ಜನರನ್ನು ಮನಸ್ಸಿನ ಒಳಗೆ ಬಿಟ್ಟುಕೊಳ್ಳದ ಜನರಿಗೆ ದೇವಾಲಯಗಳ ಒಳಗೆ ಪ್ರವೇಶ ಯಾಕೆ ಬೇಕು?.

 ದೇವಾಲಯಗಳು, ಆಚರಣೆಗಳು ಜಾತಿಗಳನ್ನು ನಿರಾಕರಿಸುವ ಮೂಲಕ ಬಸವಣ್ಣ ಮತ್ತು ಕನಕದಾಸರು ಮನುಷ್ಯನ ಅಭಿವೃದ್ಧಿಗೆ ಪೂರಕವಾಗುವಂತ ಹೊಸ ಸಂಸ್ಕೃತಿಯೊಂದನ್ನು ಕಟ್ಟಲು ಹೋಗಿ ವಿಲರಾದರು. ಆದರೆ ಜನರ ಹೊಸ ಬದುಕಿನ ಬದಲಾವಣೆಯ ಹಾದಿಗೆ ಹೊಸ ಮಾರ್ಗವನ್ನು ಹಾಕಿಕೊಟ್ಟ ತ್ಯಾಗದ ಮನಸ್ಸುಳ್ಳವರಾಗಿ ಇಂದಿಗೂ ಅವರ ಕೃತಿಗಳು, ಕೀರ್ತನೆಗಳು, ವಚನಗಳು ಜನರ ನಡುವೆ ಚರ್ಚೆಯಾಗುತ್ತಿವೆ.

ಜನಕ ಹಿತದವನೆಂದು ನಂಬಬಹುದೇ ಹಿಂದೆ
ತನಯ ಪ್ರಹ್ಲಾದನಿಗೆ ಪಿತ ಮುನಿದನು.
ಜನನಿ ರಕ್ಷಿಪಳೆಂತೆಂಬೆನೆ ಆ ಕುಂತಿ
ತನಯ ರಾಧೇಯನಿಗೆ ಎರಡೆಣಿನಿಸಿದ ಮೇಲೆ
ಮಗನು ತೆತ್ತಿಗನೆನಲೆ ಕಂಸ ತನ್ನಯ ಪಿತನ
ನಿಗಳ ಬಂಧನದಿಂದ ಬಂಸಿದನು
ಜಗವರಿಯೆ ಸೋದರನು ಮಮತೆಯುಳ್ಳವನೆನಲೆ
ಹಗೆವೆರಸಿ ವಾಲಿಯನು ಅನುಜ ಕೊಲಿಸಿದ ಮೇಲೆ
ತನಗೆ ದೇಹಾನು ಬಂಧುಗಳೇ ಬಂಧುಗಳೆಂದು
ಮನದಿ ನಿಚ್ಚಳವಾಗಿ ನಂಬಬೇಡ. ಆರು ಹಿತದವರೆಂದು ನಂಬಬೇಡ.
 (ಕನಕದಾಸರ ಜನಪ್ರಿಯ ಕೀರ್ತನೆಗಳು ಪುಟ 21)

 ನಂಬಿಕೆ ಕಳೆದುಕೊಂಡಿರುವ ವ್ಯಕ್ತಿಗಳ ಸಂಬಂಧವನ್ನು ರಾಜಕೀಯ ವಿಚಾರವನ್ನು ಕೀರ್ತನೆಯಲ್ಲಿ ಗುರುತಿಸಬಹುದು. ತಂದೆ -ಮಗ, ತಾಯಿ- ಮಗ, ಅಣ್ಣ, ತಮ್ಮ, ಸಂಬಂಧಗಳು ಅಕಾರ ಸ್ಥಾನಮಾನಗಳು, ಹಣ ಸಂಪಾದನೆಯ ಆಸ್ತಿ ಸಂಪಾದನೆಯ ವಿಚಾರಕ್ಕೆ ಬಂದಾಗ ಸಂಬಂಧಗಳನ್ನು ಕಳೆದುಕೊಂಡು, ಹಗೆತನವನ್ನು ಮುಂದು ಮಾಡಿಕೊಂಡು ಒಬ್ಬರಿಗೊಬ್ಬರು ಕಾದಾಟಕ್ಕೆ ಇಳಿದು ಸಾವನ್ನಪ್ಪುವ ಸನ್ನಿವೇಶಗಳು ಕೀರ್ತನೆಯಲ್ಲಿ ಹೇಳಿದ್ದಾರೆ.

ಬಸವಣ್ಣ, ಕನಕದಾಸರ ವಚನಗಳನ್ನು, ಕೀರ್ತನೆಗಳನ್ನು ಓದುತ್ತಿದ್ದೇವೆ. ಸಂಭ್ರಮದಿಂದ ಅವರ ಹೆಸರಿನಲ್ಲಿ ವಿಚಾರಸಂಕಿರಣಗಳು, ಜ್ಯೋತಿಯ ಯಾತ್ರೆಗಳು ಜಯಂತಿಗಳು ನಡೆಸುತ್ತಿದ್ದಾರೆ. ಆದರೆ ಅವರು ಹೇಳಿರುವಂಥ ವಿಚಾರಗಳನ್ನು ಬದುಕಿಗೆ ಅಳವಡಿಸಿಕೊಳ್ಳದೆ ಧಾರ್ಮಿಕ ಭಕ್ತಿಯ ಕವಚವನ್ನು ತೊಡಿಸುವಂತಹ, ವೈಭವೀಕರಿಸುವಂತಹ ಜನಸಮುದಾಯ ಬೆಳೆದಿದೆ.

ಇಂದಿನ ದಿನಗಳಲ್ಲಿ ಸಾಂಸ್ಕೃತಿಕ, ರಾಜಕಾರಣ ಶುದ್ಧೀಕರಣವಾಗಬೇಕಾಗಿದೆ. ಜಡಗೊಂಡಿರುವ ಧಾರ್ಮಿಕ ಭಕ್ತಿಯ ವಿಚಾರಗಳನ್ನು ಪುನರ್ ಚಿಂತನೆಗೆ ಒಳಪಡಿಸಿ ಚರ್ಚಿಸಬೇಕಾಗಿದೆ. ಭಾರತದಂಥ ದೇಶದಲ್ಲಿ ದೈವಗಳನ್ನು, ನಂಬಿಕೆಗಳನ್ನು, ಆಚರಣೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಜನರ ಮನಸ್ಸುಗಳಿಗೆ ತುಂಬಿ, ಆರ್ಥಿಕವಾಗಿ, ಮಾನಸಿಕ ಸಬಲರಾಗಿ ಬೆಳೆಯದಿರುವ ಹಾಗೆ ನೋಡಿ ಕೊಳ್ಳುತ್ತಿರುವ ಹಣವಂತರು, ಪುರೋಹಿತರು, ದೇವಾಲಯಗಳ ನಿರ್ಮಾಪಕರು, ರಾಜಕೀಯದವರು ಸದಾ ಎಚ್ಚರವಹಿಸಿ ಕೆಲಸ ಮಾಡುತ್ತಿರುತ್ತಾರೆ.

ದಿಢೀರನೆ ಹಣವಂತರಾಗಬೇಕೆಂಬ ಮನಸ್ಸುಳ್ಳ ಜನರು, ಆಲೋಚಿಸುವ ಮನಸ್ಸಿಲ್ಲದವರು ಅವರು ಹೇಳುವ ವಿಚಾರಗಳನ್ನು ನಂಬಿಕೊಂಡು ಹಣವಂತರು, ಪುರೋಹಿತರು ದೇವಾಲಯಗಳ ನಿರ್ಮಾಪಕರು ಜ್ಯೋತಿಷಿಗಳು ಹೇಳುವ ಆಕರ್ಷಣೀಯ ವಿಚಾರಗಳಿಗೆ ಬಲಿಯಾಗಿ ನಿರ್ಗತಿಕರು, ಬೆವರನ್ನು ಸುರಿಸಿ ದುಡಿದು ತಿನ್ನುವ ಶ್ರಮಜೀವಿಗಳು, ದಲಿತರು, ಸೀಯರು, ಇನ್ನಷ್ಟು ನೆಲಕಚ್ಚಿ ಜೀವಂತವಾಗಿ ಸಾಯುತ್ತಲೇ ಬದುಕುತ್ತಿದ್ದಾರೆೆ.

ಜ್ಞಾನವಿರುವ ಓದಿಕೊಂಡಿರುವ ನಾಗರಿಕ ಜನರೆೇ ದೇವಾಲಯಗಳ ನಿರ್ಮಾಣ, ಭಕ್ತಿಯ ಆಡಂಬರ, ಜಾತಿಗಳನ್ನು ಭದ್ರಪಡಿಸುವಂಥ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು, ಸ್ಥಾನಮಾನಗಳನ್ನು ಅಕಾರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕನಕದಾಸ, ಬಸವಣ್ಣನವರು ಮಾನವನ ಅಭಿವೃದ್ಧಿಗಾಗಿ ಹೇಳಿರುವ ವಿಚಾರಗಳಿಗೆ ನಾವುಗಳು ಮಸಿಬಳಿಯುತ್ತಿದ್ದೇವೆ.

ಕಡಲ ದಡವನ್ನೆ ಒಯ್ದವಳಿಗೆ
ಪ್ರವೀಣಕುಮಾರ ದೈವಜ್ಞಾಚಾರ್ಯಬೇಕಿರದ ಕಡೆ
ಬೇಕಂತಲೇ ಪಾದ ಹುಗಿದು
ಗೂಡು ಕಟ್ಟುತ್ತೇನೆ ಮರಳರಾಶಿಯಲ್ಲಿ

ಸುಖಾಸುಮ್ಮನೆ ಇಲ್ಲಿಯವರೆಗೆ
ಹೊಂಚು ಹಾಕಿ ಬರುವ ಅಲೆಗೂ
ಕಾಲು ಸೋಲಬೇಕು ಈ ದಿನ

ನಿನ್ನೊಡನೆ ನಡೆವಾಗ ಕಡಲ
ದಂಡೆಯ ಮೇಲೆ
ಚಪ್ಪಲಿಯ ಬದಲು ಉರಿಪಾದ
ಇರಿಸುತ್ತೇನೆ ಗೆಳತಿ
ನಾ ಪ್ರೀತಿಸುವ ಪದಗಳೆಲ್ಲ
ಧಗಧಗಿಸಿ ಉರಿದು ಸುಟ್ಟು
ಬೂದಿಯಾಗಲಿ ಅಲ್ಲಿ

ಉಕ್ಕುಕ್ಕಿ ಬರುವ ಕಡಲ
ಅಲೆಗೆ ತಡೆಯಾಗುವ ದಡವನ್ನೆ
ನೀನು ಹೊತ್ತೊಯ್ದಿರುವಾಗ
ಅಲೆ ನಿಲ್ಲುವದಾದರೂ ಹೇಗೆ?
ಎಲ್ಲಿ?
ಹುಟ್ಟುವ ಸೂರ್ಯನಿಗೂ ಒಂದು
ತಾವು ಬೇಕಲ್ಲವೆ ನಾಳೆಗೆ?
ಆಗೋ ಅಲ್ಲಿ, ಬಾನಂಚಿನಲ್ಲಿ
ಬಳಿದಿದ್ದೇನೆ ನೋಡು
ನನ್ನದೇ ಕೆಂಪು ರಕ್ತದಲ್ಲಿ
ಕಣ್ತುಂಬಿಕೋ ಬೇಕಿದ್ದರೆ
ಬೇಕಾದಷ್ಟು ಬರೆದುಕೋ
ನಿನ್ನಿಷ್ಟದ ಕಪ್ಪುಸೂರ್ಯನನ್ನು
ಅದೇ ಇದ್ದಿಲಲ್ಲಿ

ಈ ಕಡಲು ಈ ದಂಡೆ
ನೊರೆವಾಲು, ಮುಸ್ಸಂಜೆ
ತಂಪು ನೆರಳು
ಕೊನೆಗೆ
ನನ್ನ ಸಾವೂ!

ಎಲ್ಲ ನೀನೆ ಆಗಿರುವಾಗ
ಛೆ, ನನ್ನದೇನಿದೆ ಇಲ್ಲಿ
ಬರೀ ಹೂತುಹೋದ ಪಾದಗಳು!

1 ಮಾರ್ಚ ಬೆಂಗಳೂರು: ಲೇಖಕಿಯರ ಸಂಘದ ದತ್ತಿನಿಧಿ ಬಹುಮಾನ ವಿತರಣಾ ಸಮಾರಂಭ


ಮಂಜುಲ : ಕನ್ನಡಿಯಂಥ ಕಾರ್ಟೂನ್


Monday, February 23, 2015

7 ಮಾರ್ಚ ಬೆಂಗಳೂರು : ಅತ್ಯಾಚಾರ, ಮಹಿಳಾ ದೌರ್ಜನ್ಯ ನೆಲೆ ಮತ್ತು ಪರ್ಯಾಯ-ವಿಚಾರ ಸಂಕಿರಣ


ಅಸ್ಸಾಂ: ಚಹಾ ತೋಟದ ಸಂಕಟಗಳು
ಹರ್ಷ ಮಂದರ್

ಅಸ್ಸಾಂ: ಚಹಾ ತೋಟದ ಸಂಕಟಗಳು

ಕಳೆದ ವರ್ಷ-ಅಂದರೆ 2014ರ ಡಿ.23ರಂದು ಅಸ್ಸಾಂನ ಕಾಡುಗಳಲ್ಲಿ ವಾಸಿಸುತ್ತಿರುವ ನಿಃಶಸ್ತ್ರ ಆದಿವಾಸಿಗಳ ಮೇಲೆ ಸುಯೋಜಿತ ಮಾರಣಾಂತಿಕ ದಾಳಿಯೊಂದು ನಡೆದಿತ್ತು. ಈ ದಾಳಿಯಲ್ಲಿ ಹೆಂಗಸರು, ಮಕ್ಕಳು ಸೇರಿದಂತೆ ಸುಮಾರು 70 ಮಂದಿ ಹತರಾಗಿದ್ದರು. ಈ ದಾಳಿಯು ಪ್ರದೇಶದಲ್ಲೇ ಅತ್ಯಂತ ದಮನಿತ ಹಾಗೂ ನಿರ್ಲಕ್ಷಕ್ಕೊಳಗಾದ ಸಮುದಾಯದ ಮೇಲೆ ನಡೆದಿರುವುದು ಎಲ್ಲಕಿಂತಲೂ ಹೆಚ್ಚಿನ ದುರಂತವಾಗಿದೆ.

ಮಹಾ ವಸಾಹತುಶಾಹಿ ಬಂಡವಾಳಶಾಹಿ ಉದ್ಯಮದ ಪಳಯುಳಿಕೆಯಂತೆ 19ನೆ ಶತಮಾನದ ಮಧ್ಯಭಾಗದಿಂದಲೇ ಅಸ್ಸಾಂನಲ್ಲಿ ಜೀತ ಕಾರ್ಮಿಕರಾಗಿರುವ ಅವರ ವಸಾಹತಿನ ಕ್ರೂರ ಚರಿತ್ರೆಯನ್ನು ಜಯೀತಾ ಶರ್ಮಾ ಎಂಬವರು ಕೂಲಂಕಶ ಸಂಶೋಧನೆ ನಡೆಸಿ ಬರೆದಿರುವ ತನ್ನ ‘ಸೋಮಾರಿ ಸ್ಥಳೀಯರು, ಕೂಲಿ ಕಾರ್ಮಿಕರು ಮತ್ತು ಅಸ್ಸಾಂನ ಚಹಾ ಉದ್ಯಮ’ ಎಂಬ ಪ್ರಬಂಧದಲ್ಲಿ ವಿವರಿಸಿದ್ದಾರೆ. ಅಸ್ಸಾಂನ ಬೆಟ್ಟಗಳಲ್ಲಿ ಹಾಗೂ ಬಯಲುಗಳಲ್ಲಿ ಹುಲುಸಾಗಿ ಬೆಳೆದ ಚೀನದ ಚಹಾದಿಂದಾಗಿ ಅಲ್ಲಿನ ಅರಣ್ಯ ಪ್ರದೇಶ ಬೋಳಾಯಿತು. ಅವರು ಸಾಮಾನ್ಯವಾಗಿ ಕಾರ್ಮಿಕರನ್ನು ಚೀನದಿಂದಲೇ ತರುತ್ತಿದ್ದರು ಹಾಗೂ ಅವರನ್ನೇ ನಂಬಿದ್ದರು. ಆದರೆ, ಚೀನದ ಕಾರ್ಮಿಕರು ದಟ್ಟವಾದ ಅರಣ್ಯವನ್ನು ನೆಲಸಮ ಮಾಡುವ ಕಾಯಕಕ್ಕೆ ಯೋಗ್ಯರಲ್ಲವೆಂಬುದನ್ನು ಅವರು ಮನಗಂಡರು.

ಇದು ನಾಗಾಗಳಂತಹ ದೇಶೀಯ ಬುಡಕಟ್ಟು ಸಮುದಾಯಗಳ ಕಾರ್ಮಿಕರ ನೇಮಕಕ್ಕೆ ದಾರಿ ಮಾಡಿಕೊಟ್ಟಿತು. ಅವರು ದೃಢಕಾಯದ ಕಠಿಣ ಪರಿಶ್ರಮಿಗಳು ಹಾಗೂ ಅಕ್ಕಿ ಹಾಗೂ ಚಿಪ್ಪು, ಮಣಿಗಳಂತಹ ಅಲ್ಪ ವಸ್ತುಗಳಿಗೆ ಬದಲಾಗಿ ಕೆಲಸ ಮಾಡುತ್ತಾರೆಂಬುದನ್ನು ಮಾಲಕರು ತಿಳಿದಿದ್ದರು. ಆದರೆ, ಅವರು ತಮಗೆ ತೋಚಿದಾಗ ಕೆಲಸ ಮಾಡುತ್ತಿದ್ದರು ಹಾಗೂ ಯಾರದೇ ಆಳ್ವಿಕೆಗೆ ಅಥವಾ ನಿಯಂತ್ರಣಕ್ಕೆ ಒಳಗಾಗಿರಲು ನಿರಾಕರಿಸುತ್ತಿದ್ದರು. ಮಾಲಕರು ಇತರ ಸ್ಥಳೀಯ ಬುಡಕಟ್ಟು ಜನರೊಂದಿಗೆ ಪ್ರಯೋಗ ನಡೆಸಿದರು. ಆದರೆ, ಚಹಾ ತೋಟಗಳ ಕಠಿಣ ಶಿಸ್ತಿಗೆ ಒಳಪಡಲು ಅವರು ಒಪ್ಪದ ಕಾರಣ ಮಾಲಕರು ಅನಿವಾರ್ಯವಾಗಿ ಹೊರಗಿನ ಕಾರ್ಮಿಕರನ್ನು ಹುಡುಕಬೇಕಾಯಿತು ಎಂದು ಶರ್ಮಾರ ಸಂಶೋಧನೆ ತಿಳಿಸಿದೆ.

ಆ ಕಾಲಘಟ್ಟದಲ್ಲಿ ಮಧ್ಯ ಭಾರತದ ಛೋಟಾ ನಾಗಪುರ ಬಯಲಿನ ಬುಡಕಟ್ಟು ಜನರು ಜುಜುಬಿ ಸಂಬಳಕ್ಕೆ ಭಾರೀ ಸಂಖ್ಯೆಯಲ್ಲಿ ಸಕ್ಕರೆ ಕಾರ್ಖಾನೆ, ನೀಲಿ ತೋಟಗಾರಿಕೆ ಹಾಗೂ ರೈಲ್ವೆಯ ನಿರ್ಮಾಣ ಕಾಮಗಾರಿಗಳಿಗೆ ನೇಮಕಗೊಂಡಿದ್ದರು. ಅವರು ಚಹಾ ತೋಟಗಳ ಮಾಲಕರು ಬಯಸಿದ್ದ, ಕಠಿಣ, ಸ್ಥಿತಿಸ್ಥಾಪಕ ಹಾಗೂ ಸತತ ಪರಿಶ್ರಮದ ಮಾನದಂಡಕ್ಕೆ ಯೋಗ್ಯರಾಗಿದ್ದರು. ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಸ್ಟೀಮರ್, ರಸ್ತೆಮಾರ್ಗ ಹಾಗೂ ಬಳಿಕ ರೈಲುಗಳ ಮೂಲಕ ಸುದೀರ್ಘ ಕಠಿಣ ಪ್ರಯಾಣದ ಮೂಲಕ ಮಧ್ಯ ಭಾರತದಿಂದ ಮೇಲಿನ ಅಸ್ಸಾಂನ ಅರಣ್ಯಗಳು ಹಾಗೂ ತೋಟಗಳಿಗೆ ಕಳುಹಿಸಿಕೊಡಲಾಯಿತೆಂಬುದನ್ನು ಶರ್ಮಾ ನೆನಪಿಸುತ್ತಾರೆ.

ಈ ಕರಾರು ಕಾರ್ಮಿಕರು ಮತ್ತವರ ಕುಟುಂಬಗಳನ್ನು ಯಾವುದೇ ಮೂಲ ಸೌಲಭ್ಯವಿಲ್ಲದ, ಇಕ್ಕಟ್ಟಾದ ಕಾರ್ಮಿಕರ ವಸಾಹತುಗಳಲ್ಲಿ ಇರಿಸಲಾಗಿತ್ತು. ಅಲ್ಲಿನ ಹಳ್ಳ-ಕೊಳ-ಬೆಟ್ಟಗಳ ಪರಿಚಯವಿಲ್ಲದುದರಿಂದ ಅವರು ಅಲ್ಲಿಂದ ಓಡಿಹೋಗುವ ಹಾಗಿರಲಿಲ್ಲ. ಅಲ್ಲದೆ, ಅವರು ಅಲ್ಲಿಂದ ಪರಾರಿಯಾಗದಂತೆ ನಾಯಿಗಳೊಂದಿಗೆ ಕಾವಲು ನಡೆಸಲು ಗುಡ್ಡಗಾಡು ಜನರ ‘ಕೈಬಿಸಿ’ ಮಾಡುತ್ತಿದ್ದರು. ಆದುದರಿಂದ ಈ ಕಾರ್ಮಿಕರು ಅಲ್ಲಿ ಹೊರಗಿನ ಯಾವುದೇ ಸಂಪರ್ಕ ಅಥವಾ ಪ್ರಚೋದನೆಗಳಿಲ್ಲದೆ, ಏಕಾಂತ ಬದುಕನ್ನು ನಡೆಸಬೇಕಿತ್ತೆಂದು ಶರ್ಮಾ ಬರೆದಿದ್ದಾರೆ. ಈ ಗಾಯಗಳ ಮೇಲೆ ಉಪ್ಪು ಸುರಿದಂತೆ ಬ್ರಿಟಿಶ್ ತೋಟಗಾರರು ಕರಾರಿನ ಅವಧಿಗೆ ಮುನ್ನ ಯಾವನೇ ಕಾರ್ಮಿಕ ಅಲ್ಲಿಂದ ಓಡಿಹೋಗಲು ಯತ್ನಿಸಿದರೆ ಅವನನ್ನು ಬಂಧಿಸುವ ಖಾಸಗಿ ಕಾನೂನು ಅಧಿಕಾರ ಹೊಂದಿದ್ದರು.

 ವಿಸ್ತಾರವಾದ ಅರಣ್ಯ ಪ್ರದೇಶದ ಲಭ್ಯತೆ ಕರಾರಿನ ಅವಧಿ ಮುಗಿದ ಬಳಿಕವೂ ಕಾರ್ಮಿಕರನ್ನು ಅಸ್ಸಾಂನಲ್ಲೇ ನಿಲ್ಲುವಂತೆ ಆಕರ್ಷಿಸಿತು. ಅವರು ಕಾಡನ್ನು ಕಡಿದು ಭತ್ತದ ಗದ್ದೆಗಳನ್ನು ನಿರ್ಮಿಸಿದರು. ಅಲ್ಲದೆ ತೋಟಗಾರಿಕೆಯ ತುರ್ತು ಹಂಗಾಮಿನಲ್ಲಿ ‘ಫಾಲ್ತೂ’ ಎಂಬ ಹೆಸರಿನ ಗುತ್ತಿಗೆ ಕಾರ್ಮಿಕರಾಗಿಯೂ ಅವರು ಕೆಲಸ ಮಾಡುತ್ತಿದ್ದರು. ಕ್ರಮೇಣ ಒಂದೊಮ್ಮೆ ದಟ್ಟಾರಣ್ಯವಾಗಿದ್ದ ಪ್ರದೇಶಗಳಲ್ಲಿ ಮಧ್ಯಭಾರತದ ಬುಡಕಟ್ಟು ಜನರ ವಸಾಹತುಗಳು ರೂಪುಗೊಂಡವು. ಅಲ್ಲಿ ಅವರು ಸ್ಥಳೀಯ ಬೋಡೊ, ಹಿಂದಿನ ಕೂಲಿ ಆದಿವಾಸಿಗಳು ಮೇಲ್ಜಾತಿಯ ಅಸ್ಸಾಮಿ ಹಿಂದೂಗಳು ಹಾಗೂ ಹೊಸದಾಗಿ ಬಂದ ನೇಪಾಳಿ ಮತ್ತು ಪೂರ್ವ ಬಂಗಾಳಿಗಳಂತಹ ಸಮುದಾಯಗಳೊಂದಿಗೆ ಜೀವಿಸತೊಡಗಿದರು. ಅವರ ತವರೂರಿನ ಸಂಬಂಧ ಕ್ರಮೇಣ ಕಡಿದುಹೋಯಿತು. ಅವರು ತಮ್ಮ ಮೂಲ ಆದಿವಾಸಿ ಭಾಷೆಯಲ್ಲೇ ಮಾತನಾಡುತ್ತಿದ್ದರು. ಅಸ್ಸಾಮಿ ಹಾಗೂ ಹಿಂದಿ ಭಾಷೆಗಳನ್ನು ಕಲಿತರು.

ಇಂತಹ ಅಕ್ಷರಶಃ ಜೀತ ಪದ್ಧತಿ 1920ರ ವರೆಗೆ ಮುಂದುವರಿದಿತ್ತು. ಗಾಂಧೀಜಿ ಹಾಗೂ ಸಿ.ಎಫ್.ಆ್ಯಂಡ್ರೂ ನೇತೃತ್ವದ ರಾಷ್ಟ್ರೀಯ ಚಳವಳಿಯೊಂದು ಬಳಿಕ ಇಂತಹ ಕರಾರು ಕಾರ್ಮಿಕತನದ ಪದ್ಧತಿಗೆ ಅಂತ್ಯ ಹಾಡುವಂತೆ ಮಾಡಿತು. ಆದಾಗ್ಯೂ, ಈ ಕಾರ್ಮಿಕರು ಹೆಸರಿಗಷ್ಟೇ ಸ್ವತಂತ್ರವಾಯಿತು. ಅವರು ದೀನರಾಗಿ, ಆಜ್ಞಾಪಾಲಕರಾಗಿಯೇ ಉಳಿದರು. ದೇಶಕ್ಕೆ ಸ್ವಾತಂತ್ರ ಲಭಿಸಿದ ಬಳಿಕವೂ ಅವರು ವಸಾಹತು ಶಾಹಿಗೆ ಹತ್ತಿರವಾದ ನೌಕರಿ ಹಾಗೂ ವಾಸ್ತವ್ಯ ಪರಿಸ್ಥಿತಿಯಲ್ಲೇ ಮುಂದುವರಿದರು.

ಇಂದು ಅಸ್ಸಾಂನ ಒಟ್ಟು ಜನಸಂಖ್ಯೆಯ ಶೇ.15ರಿಂದ 20ರಷ್ಟು ತಥಾಕಥಿತ ಚಹಾ-ಬುಡಕಟ್ಟು ಜನರಿದ್ದಾರೆಂದು ಅಂದಾಜಿಸಲಾಗಿದೆ. ಆದರೆ, ಅವರು ರಾಜ್ಯದ ಅತ್ಯಂತ ಕನಿಷ್ಠ ಮಾನವಾಭಿವೃದ್ಧಿ ಸೂಚಿಯ ಬದುಕನ್ನು ನಡೆಸುತ್ತಿದ್ದಾರೆ. ಅಸ್ಸಾಂನಲ್ಲಿ ಚಹಾ-ಬುಡಕಟ್ಟು ಪರಿಶಿಷ್ಟ ವರ್ಗವೆಂದು ಅಧಿಸೂಚಿತವಾಗಿಲ್ಲ. ಆದುದರಿಂದ ಅವರು ಮೀಸಲಾತಿಯ ಲಾಭದಿಂದ ವಂಚಿತರಾಗಿದ್ದಾರೆ. ಚಹಾತೋಟಗಳ ಕಾರ್ಮಿಕರಿಗೆ ಕನಿಷ್ಠ ವೇತನಕ್ಕಿಂತಲೂ ಕಡಿಮೆ ಸಂಬಳ ನೀಡಲಾಗುತ್ತಿದೆ. ಅಲ್ಲದೆ ಅದನ್ನು ಭಾಗಶಃ ವಸ್ತುರೂಪದಲ್ಲಿ ನೀಡಲಾಗುತ್ತಿದೆ. ಕಡಿಮೆ ವೇತನಕ್ಕೂ ಕಾರ್ಮಿಕರು ದೊರೆಯುವಂತೆ ಮಾಡಲು ಚಹಾತೋಟಗಳ ಕಾರ್ಮಿಕರ ವಸಾಹತನ್ನು ಅಭಿವೃದ್ಧಿಗೊಳಿಸದೆ, ಅವರು ಸದಾ ಮಾಲಕರಿಗೆ ಅವಲಂಬಿತರಾಗಿರುವಂತೆ ಮಾಲಕರು ಇರಿಸುತ್ತಾರೆಂದು ಕಾರ್ಮಿಕ ಆರ್ಥಿಕಜ್ಞ ಬಿ. ಸೈಕಿಯಾ 2008ರಲ್ಲಿ ವರದಿ ಮಾಡಿದ್ದರು.

1993ರಲ್ಲಿ ಬೋಡೊಲ್ಯಾಂಡ್ ಸ್ವಾಯತ್ತ ಮಂಡಳಿಯ ಸೃ ಷ್ಟಿಯೊಂದಿಗೆ ಈ ದಮನಿತ ಹಾಗೂ ತಿರಸ್ಕೃತ ಜನರ ದುರದೃಷ್ಟವು ಇನ್ನೂ ಹದಗೆಡುವಂತಾಯಿತು. ಈ ಪ್ರದೇಶದಲ್ಲಿ ಸ್ಥಳೀಯ ಬೋಡೊ ಬುಡಕಟ್ಟು, ಬಂಗಾಲಿ ಮುಸ್ಲಿಮರು ಹಾಗೂ ಚಹಾ-ಬುಡಕಟ್ಟುಗಳ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಶೇ.30ರಷ್ಟಿದೆ. ಸಶಸ್ತ್ರ ಬೋಡೊ ಉಗ್ರರು ಬಂಗಾಳಿ ಮುಸ್ಲಿಮರು ಹಾಗೂ ಆದಿವಾಸಿಗಳನ್ನು ಗುರಿಯಿರಿಸಿ ಆಗಾಗ ಹಿಂಸಾಚಾರ ನಡೆಸುತ್ತಿದ್ದಾರೆ. 1996 ಹಾಗೂ 1997ರಲ್ಲಿ ನಡೆದಿದ್ದ ಹಿಂಸಾಚಾರ ಅಂತಹ ದಾಳಿಗಳಲ್ಲೇ ಅತ್ಯಂತ ಬರ್ಬರವಾದುದಾಗಿತ್ತು. ಈ ಹಿಂಸಾಚಾರದ ತುರೀಯಾವಸ್ಥೆಯಲ್ಲಿ ಸುಮಾರು 3 ಲಕ್ಷ ಆದಿವಾಸಿಗಳು ಪರಿಹಾರ ಶಿಬಿರಗಳ ಆಶ್ರಯ ಪಡೆದಿದ್ದರು. ಅದಾಗಿ ಸುಮಾರು 2 ದಶಕಗಳೇ ಕಳೆದಿದ್ದರೂ ಅಂತಹ ಕೆಲವು ಪರಿಹಾರ ಶಿಬಿರಗಳು ಈಗಲೂ ಚಾಲನೆಯಲ್ಲಿವೆ. ಫಿಜಿ ಹಾಗೂ ಮಾರಿಷಸ್‌ಗಳಂತಹ ದೇಶಗಳಿಗೆ ಸಾಗಿಸಲಾಗಿರುವ ಇದೇ ಪ್ರದೇಶದ ಗುತ್ತಿಗೆ ಕಾರ್ಮಿಕರು ಇಂದು ಶಿಕ್ಷಣ, ಆರ್ಥಿಕ ಬಲ ಗಳಿಸಿರುತ್ತಾರೆ. ಮಾತ್ರವಲ್ಲದೆ, ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೇಗೇರಿದ ಉದಾಹರಣೆಗಳೂ ಇವೆ. ಆದರೆ, ಈ ಸಭ್ಯ ಹಾಗೂ ಉದ್ಯಮಶೀಲ ಜನರು ತಮ್ಮದೇ ಸ್ವಂತ ನಾಡಲ್ಲಿ ಈಗಲೂ ಬದುಕಿನ ಕನಿಷ್ಠ ಆವಶ್ಯಕತೆಗಳಿಂದ ವಂಚಿತರಾಗಿ, ವಂಚನೆಗೊಳಗಾಗುತ್ತ, ಅಪೌಷ್ಟಿಕತೆ, ಅನಕ್ಷರತೆಗಳಿಂದ ನರಳುತ್ತ, ಗುರಿಯಿರಿಸಿದ ಹಿಂಸಾಚಾರದ ಅಲೆಗಳೆದುರು ತಮ್ಮನ್ನು ರಕ್ಷಿಸಿಕೊಳ್ಳಲಾಗದಷ್ಟು ಅಸಹಾಯಕತೆಯಿಂದ ಜೀವಿಸುತ್ತಿರುವುದು ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ.

ಸೇಡಿನ ರಾಜಕಾರಣ: ಸರಣಿ ವಿವಾದಕ್ಕೆ ಕಾರಣ
ಕುಮಾರ್ ಶಕ್ತಿಶೇಖರ್ಸೇಡಿನ ರಾಜಕಾರಣ: ಸರಣಿ ವಿವಾದಕ್ಕೆ ಕಾರಣ

 

 

ಸರಕಾರದ ಉನ್ನತ ಹುದ್ದೆಗಳಿಗೆ ನೇಮಕ, ರಾಜೀನಾಮೆ, ಪದಚ್ಯುತಿ ಎಲ್ಲದರಲ್ಲೂ ವಿವಾದವೇ. ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ ಸರಕಾರ ಕಳೆದ ಒಂಬತ್ತು ತಿಂಗಳಲ್ಲಿ ಇಂಥ ವಿವಾದಗಳ ಸರಣಿಯನ್ನೇ ಸೃಷ್ಟಿಸಿದೆ. ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ ನಳಂದಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಎರಡನೇ ಅವಧಿಗೆ ಕಾರ್ಯ ನಿರ್ವಹಿಸಲು ಅವಕಾಶ ನಿರಾಕರಿಸಿರುವುದು ವಿವಾದಗಳ ಸರಣಿಗೆ ಹೊಸ ಸೇರ್ಪಡೆ. ಹುದ್ದೆ ತ್ಯಜಿಸುವಂತೆ ಕೇಂದ್ರ ಸರಕಾರ ತಮ್ಮ ಮೇಲೆ ಒತ್ತಡ ಹೇರಿದೆ ಎಂದು ಅಮರ್ತ್ಯಸೇನ್ ಆಪಾದಿಸಿದ್ದಾರೆ. ಆದರೆ ಕೇಂದ್ರ ಇದನ್ನು ನಿರಾಕರಿಸಿದೆ.

ದೀರ್ಘಕಾಲದಿಂದ ಮೋದಿ ಹಾದಿಯನ್ನು ಟೀಕಿಸುತ್ತಾ ಬಂದಿರುವ ಸೇನ್ ಇದೀಗ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಗೆ ಪತ್ರ ಬರೆದು ಪ್ರಕರಣಕ್ಕೆ ತಿರುವು ನೀಡಿದ್ದಾರೆ. ಅಮರ್ತ್ಯ ಸೇನ್ ಅವರನ್ನು ಎರಡನೇ ಅವಧಿಗೆ ಕುಲಪತಿಯಾಗಿ ನೇಮಕ ಮಾಡುವಂತೆ ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ ಒಮ್ಮತದ ನಿರ್ಣಯ ಕೈಗೊಂಡು ಅದನ್ನು ರಾಷ್ಟ್ರಪತಿಗಳಿಗೆ ತಿಂಗಳ ಹಿಂದೆಯೇ ಕಳುಹಿಸಿದ್ದರೂ, ಅದಕ್ಕೆ ಆಂಗೀಕಾರ ನೀಡದಿರುವ ಕ್ರಮದ ಹಿಂದೆ ಕೇಂದ್ರ ಸರಕಾರದ ಕೈವಾಡವಿದೆ ಎನ್ನುವುದು ಅವರ ಆರೋಪ.

ಕಳೆದ ತಿಂಗಳು ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರ ಪದಚ್ಯುತಿಗೆ ಸೂಚಿಸಿದ ಕೇಂದ್ರ ಸರಕಾರ ಅವರ ಹುದ್ದೆಗೆ ಅಮೆರಿಕ ರಾಯಭಾರಿಯಾಗಿದ್ದ ಸುಬ್ರಹ್ಮಣ್ಯಂ ಜೈಶಂಕರ್ ಅವರನ್ನು ನಿಯೋಜಿಸಿತ್ತು. ಜೈಶಂಕರ್ ಜನವರಿ 31ರಂದು ಭಾರತೀಯ ವಿದೇಶಾಂಗ ಸೇವೆಯಿಂದ ನಿವೃತ್ತರಾಗಬೇಕಿತ್ತು. ಆದರೆ ವಿದೇಶಾಂಗ ಕಾರ್ಯದರ್ಶಿಯಾಗಿ ಅವರನ್ನು ನಿಯೋಜಿಸಿ ಮತ್ತೆ ಎರಡು ವರ್ಷ ಕಾಲ ಅದೇ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತು.

ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರ ಅಧಿಕಾರಾವಧಿಯನ್ನು ಮೊಟಕುಗೊಳಿಸಲಾಗಿದೆ ಎಂಬ ಒಂದು ಸಾಲಿನ ಆದೇಶ ಅವರ ಪದಚ್ಯುತಿಗೆ ಸಾಕಾಯಿತು. ಸ್ವತಂತ್ರ ಭಾರತದ ಇತಿಹಾಸದಲ್ಲೇ ವಿದೇಶಾಂಗ ಸೇವೆಯಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರನ್ನು ಹಠಾತ್ತನೇ ಪದಚ್ಯುತಗೊಳಿಸಿದ ಎರಡನೇ ನಿದರ್ಶನ ಇದು. 1987ರಲ್ಲಿ ರಾಜೀವ್‌ಗಾಂಧಿ ಸರಕಾರ ಅಂದಿನ ವಿದೇಶಾಂಗ ಕಾರ್ಯದರ್ಶಿ ಎ.ಪಿ.ವೆಂಕಟರಮಣನ್ ಅವರನ್ನು ಪದಚ್ಯುತಗೊಳಿಸಿ, ಕೆ.ಪಿ.ಎಸ್.ಮೆನನ್ ಅವರನ್ನು ಆ ಹುದ್ದೆಗೆ ನಿಯೋಜಿಸಿತ್ತು.

ಭಾರತೀಯ ವಿದೇಶಾಂಗ ಸೇವೆಗೆ 1977ರಲ್ಲಿ ಸೇರ್ಪಡೆಯಾದ ಸುಜಾತಾ ಸಿಂಗ್ ಸೇವಾಜ್ಯೇಷ್ಠತೆಯಲ್ಲಿ ಜೈಶಂಕರ್‌ಗಿಂತ ಹಿರಿಯರು. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಭೇಟಿಯಿಂದ ಹಿಂದಿರುಗಿದ ಮರುದಿನವೇ ಸುಜಾತಾ ಅವರನ್ನು ಹುದ್ದೆಯಿಂದ ಕಿತ್ತೆಸೆಯಲಾಯಿತು. ಮುಂದಿನ ಜುಲೈನಲ್ಲಿ ನಿವೃತ್ತರಾಗಬೇಕಿದ್ದ ಅವರನ್ನು ಆರು ತಿಂಗಳು ಮುಂಚಿತವಾಗಿಯೇ ಪದಚ್ಯುತಗೊಳಿಸಲಾಯಿತು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸುಜಾತಾ ಅವರ ಪರವಾಗಿಯೇ ಇದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಾಲಯದ ಸೂಚನೆಯಂತೆ ಅವರನ್ನು ಪದಚ್ಯುತಗೊಳಿಸಿ ಜೈಶಂಕರ್ ಅವರನ್ನು ನೇಮಕ ಮಾಡಲಾಯಿತು. ಸುಜಾತಾ ಅವರ ಪದಚ್ಯುತಿ ಪ್ರಕರಣದ ಬಗ್ಗೆ ನನಗೆ ಯಾವ ಮಾಹಿತಿಯೂ ಇರಲಿಲ್ಲ ಎಂದು ಸುಷ್ಮಾ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ, ವಾಸ್ತವವಾಗಿ ಸುಜಾತಾ ಅವರನ್ನು ಮುಂದುವರಿಸುವಂತೆ ಸುಷ್ಮಾ ವಾದಿಸಿದ್ದರು.

 ಹೊಸ ಗೃಹಕಾರ್ಯದರ್ಶಿ ನೇಮಕದಲ್ಲೂ ವಿವಾದ ಭುಗಿಲೆದ್ದಿತ್ತು. ಗೃಹಕಾರ್ಯದರ್ಶಿ ಅನಿಲ್ ಗೋಸ್ವಾಮಿಯವರು ಬಹುಕೋಟಿ ಶಾರದಾ ಹಗರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ಪದಚ್ಯುತಗೊಳಿಸಿ ಅವರ ಹುದ್ದೆಗೆ 1979ರ ಬ್ಯಾಚ್‌ನ ಅಧಿಕಾರಿ ಎಲ್.ಸಿ.ಗೋಯಲ್ ಅವರನ್ನು ನಿಯುಕ್ತಿ ಮಾಡಿತ್ತು. ಶಾರದಾ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಗೋಸ್ವಾಮಿ ವಿರುದ್ಧ ಆರೋಪ ಮಾಡಿ, ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಮಾತಂಗ್ ಸಿಂಗ್ ಬಂಧನವನ್ನು ತಡೆಯಲು ಪ್ರಭಾವ ಬೀರುತ್ತಿದ್ದಾರೆ ಎಂದು ಹೇಳಿತ್ತು.

ಯುಪಿಎಸ್‌ಸಿ ಸದಸ್ಯ ಎ.ಪಿ.ಸಿಂಗ್ ಅವರನ್ನೂ ಎನ್‌ಡಿಎ ಸರಕಾರ ಹುದ್ದೆಯಿಂದ ಕೆಳಗಿಳಿಸಿತ್ತು. ನಂತರ ಅವರ ಆಸ್ತಿ ವಿವರ, ಬ್ಯಾಂಕ್ ಖಾತೆ ವಿವರ, ಲಾಕರ್ ಹಾಗೂ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸಲ್ಲಿಸುವಂತೆ ಆದೇಶಿಸಿತ್ತು. ತೆರಿಗೆ ಕಳ್ಳತನ ಆರೋಪ ಎದುರಿಸುತ್ತಿದ್ದ ಮಾಂಸ ರಫ್ತುದಾರ ಮೊಯಿನ್ ಖುರೇಷಿ ಜತೆಗೆ ಅವರ ಸಂಬಂಧದ ಬಗ್ಗೆ ತನಿಖೆ ಆರಂಭಿಸಿತು. ಎ.ಪಿ.ಸಿಂಗ್ ಅವರು ತಮ್ಮ ಅಪಾರ್ಟ್‌ಮೆಂಟ್‌ನ ನೆಲಮಾಳಿಗೆಯನ್ನು ಖುರೇಷಿಯವರಿಗೆ ಬಾಡಿಗೆಗೆ ನೀಡಿದ್ದಾರೆ ಎಂಬ ಆರೋಪವಿತ್ತು.

ಜನವರಿ 13ರಂದು ಕೇಂದ್ರ ಸರಕಾರ, ರಕ್ಷಣಾ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಅವಿನಾಶ್ ಚಂದೇರ್ ಅವರನ್ನು ವಜಾ ಮಾಡಿತ್ತು. ಅವರ ಅಧಿಕಾರಾವಧಿ ಮುಗಿಯುವ 15 ತಿಂಗಳು ಮುನ್ನವೇ ಈ ಕ್ರಮ ಕೈಗೊಂಡಿತ್ತು. ಅವರ ಸೇವಾವಧಿ ಗುತ್ತಿಗೆಯನ್ನು ಜನವರಿ 31ಕ್ಕೆ ಕೊನೆಗೊಳಿಸುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರಸಂಪುಟ ನೇಮಕಾತಿ ಸಮಿತಿ ಆಂಗೀಕರಿಸಿತು.

ಡಿಆರ್‌ಡಿಒ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕ ಹುದ್ದೆ ಜತೆಗೆ ರಕ್ಷಣಾ ಸಚಿವರ ವೈಜ್ಞಾನಿಕ ಸಲಹಾಗಾರರೂ ಆಗಿದ್ದ ಚಂದೇರ್ ಅವರ ಅಧಿಕಾರಾವಧಿ 2014ರ ನವೆಂಬರ್ ಕೊನೆಗೆ ಅಂತ್ಯಗೊಳ್ಳಬೇಕಿತ್ತು. 64 ವರ್ಷ ವಯಸ್ಸಿನ ಅವರ ಸೇವೆಯನ್ನು ಗುತ್ತಿಗೆ ಆಧಾರದಲ್ಲಿ 2016ರ ಮೇ 31ರ ವರೆಗೆ ಮುಂದುವರಿಸಲು ಇದೇ ಸರಕಾರ ನಿರ್ಧಾರ ಕೈಗೊಂಡಿತ್ತು. ಅವರ ಸೇವಾವಧಿಯನ್ನು ವಿಸ್ತರಿಸಿದ ಬಳಿಕ ಅವರು ಕೇಂದ್ರ ಸರಕಾರದ ಕ್ರಮಗಳನ್ನು ಪ್ರಶ್ನಿಸಿದ್ದೇ ಅವರ ಪದಚ್ಯುತಿಗೆ ಕಾರಣವಾಯಿತು. ಡಿಆರ್‌ಡಿಓ ಬಗೆಗೆ ಮೋದಿಯವರು ಹೊಂದಿದ್ದ ಲಘು ಧೋರಣೆಯನ್ನು ಸಹಿಸಲಾಗದು ಎಂದು ಚಂದೇರ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ)ನ ಮುಖ್ಯಸ್ಥೆಯಾಗಿದ್ದ ಲೀಲಾ ಸ್ಯಾಮ್ಸನ್ ರಾಜೀನಾಮೆ ನೀಡಿದ ಬಳಿಕ ಆ ಹುದ್ದೆಗೆ ಚಿತ್ರ ನಿರ್ಮಾಪಕ ಪಹ್ಲಾಜ್ ನಿಹಲಾನಿ ಅವರನ್ನು ನೇಮಕ ಮಾಡಿತು. ಚಿತ್ರನಿರ್ಮಾಪಕರು ಚಿತ್ರಗಳಲ್ಲಿ 28 ಶಬ್ದಗಳನ್ನು ಬಳಸದಂತೆ ನಿಷೇಧಿಸುವ ನಿರ್ಧಾರವನ್ನು ಏಕಪಕ್ಷೀಯವಾಗಿ ಕೈಗೊಂಡ ಹಿನ್ನೆಲೆಯಲ್ಲಿ ನಿಹಲಾನಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಮಂಡಳಿಯ ಸದಸ್ಯರ ಜತೆ ಚರ್ಚಿಸದೇ ಅಧ್ಯಕ್ಷರು ಈ ನಿರ್ಧಾರ ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸದಸ್ಯರ ಜತೆಗೆ ಚರ್ಚಿಸದೇ ನಿಷೇಧಿತ ಪದಗಳ ಪಟ್ಟಿಯನ್ನು ಪ್ರಾದೇಶಿಕ ಕಚೇರಿಗಳಿಗೆ ಕಳುಹಿಸಿದ್ದು, ಇದು ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಅಧ್ಯಕ್ಷರ ಈ ಕ್ರಮ ತೀವ್ರ ಆಕ್ಷೇಪಾರ್ಹ ಎಂದು ಮಂಡಳಿ ಸದಸ್ಯ ಅಶೋಕೆ ಪಂಡಿತ್ ಅಭಿಪ್ರಾಯಪಟ್ಟಿದ್ದಾರೆ. ಅಧ್ಯಕ್ಷರು ಸೂಚಿಸಿರುವ 28 ಪದಗಳು ಬಾಲಿವುಡ್ ಚಿತ್ರನಿರ್ಮಾಪಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕ್ರಮ ಅಸಂಬದ್ಧ, ದಮನಕಾರಿ ಮತ್ತು ಸೃಜನಾತ್ಮಕ ಸ್ವಾತಂತ್ರ್ಯಕ್ಕೆ ವಿರುದ್ಧವಾದದ್ದು ಎಂದು ಚಿತ್ರ ನಿರ್ಮಾಪಕರು ಆಕ್ಷೇಪಿಸಿದ್ದಾರೆ.

ಸಿಬಿಎಫ್‌ಸಿ ಅಧ್ಯಕ್ಷ ನಿಹಲಾನಿ, ಸದಸ್ಯರಾದ ವಾಣಿ ತ್ರಿಪಾಠಿ ಟಿಕೂ ಮತ್ತಿತರರು ಆಡಳಿತಾರೂಢ ಬಿಜೆಪಿಗೆ ನಿಕಟವರ್ತಿಗಳು ಎಂಬ ಕಾರಣಕ್ಕಷ್ಟೇ ಅವರನ್ನು ಈ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಮೋದಿಯವರನ್ನು ಆ್ಯಕ್ಷನ್ ಹೀರೊ ಎಂದು ಬಣ್ಣಿಸಿದ್ದ ನಿಹಲಾನಿ ಚಿತ್ರ ನಿರ್ಮಾಪಕರು ಎನ್ನುವುದಕ್ಕಿಂತ ಬಿಜೆಪಿ ವ್ಯಕ್ತಿ ಎಂದೇ ಗುರುತಿಸಿಕೊಂಡಿದ್ದರು.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರನ್ನು ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡುವ ಸಂಬಂಧ ಹೊರಡಿಸಿದ ಸುಗ್ರೀವಾಜ್ಞೆ ಕೂಡಾ ಸಾರ್ವತ್ರಿಕ ಟೀಕೆಗೆ ಗುರಿಯಾಗಿದೆ. ವಿರೋಧ ಪಕ್ಷಗಳು ಈ ಕ್ರಮವನ್ನು ಟೀಕಿಸಿದ್ದರೆ ಬಿಜೆಪಿ ಸಮರ್ಥಿಸಿಕೊಂಡಿದೆ. ಪ್ರಧಾನಿಗೆ ತಮ್ಮ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಇದೆ ಎನ್ನುುದು ಬಿಜೆಪಿ ಸಮರ್ಥನೆ.

ಮೋದಿ ಸರಕಾರ ಅಧಿಕಾರಕ್ಕೆ ಬಂದ ಎರಡೇ ದಿನಗಳಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿ, ಟ್ರಾಯ್ ಅಧ್ಯಕ್ಷರು ಸದ್ಯಕ್ಕೆ ಯಾವುದೇ ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳದಂತೆ ಅವರ ಅಧಿಕಾರವನ್ನು ಮೊಟಕುಗೊಳಿಸಿತು. ಆಯಕಟ್ಟಿನ ಹುದ್ದೆಗಳಲ್ಲಿ ವ್ಯಕ್ತಿಗಳ ನೇಮಕ, ಪದಚ್ಯುತಿ ಹಾಗೂ ರಾಜೀನಾಮೆ ಪ್ರಕರಣಗಳು ಮೋದಿ ಆಡಳಿತಾವಧಿಯಲ್ಲಿ ವಿವಾದದ ಅಲೆಯನ್ನೇ ಸೃಷ್ಟಿಸಿವೆ. ಯುಪಿಎ ಸರಕಾರ ನೇಮಕ ಮಾಡಿದ್ದ ಆರು ಮಂದಿ ರಾಜ್ಯಪಾಲರು- ಕೆ.ಶಂಕರನಾರಾಯಣನ್ (ಮಹಾರಾಷ್ಟ್ರ), ಎಂ.ಕೆ.ನಾರಾಯಣನ್ (ಪಶ್ಚಿಮಬಂಗಾಳ), ಅಶ್ವನಿಕುಮಾರ್ (ನಾಗಾಲ್ಯಾಂಡ್), ಬಿ.ಎಲ್.ಜೋಶಿ (ಉತ್ತರ ಪ್ರದೇಶ), ಬಿ.ವಿ.ವಾಂಛೂ (ಗೋವಾ) ಮತ್ತು ಶೇಖರ್ ದತ್ (ಛತ್ತೀಸ್‌ಗಢ)- ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಒತ್ತಾಯಪೂರ್ವಕ ರಾಜೀನಾಮೆ ನೀಡಿದ್ದರು.

ವಿರೆರಾಂನ ರಾಜ್ಯಪಾಲ ವಿ.ಪುರುಷೋತ್ತಮ್ ಅವರನ್ನು ನಾಗಾಲ್ಯಾಂಡ್‌ಗೆ ವರ್ಗಾವಣೆ ಮಾಡಿದ ಬಳಿಕ ಅವರು ರಾಜೀನಾಮೆ ಸಲ್ಲಿಸಿದರು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಜತೆ ಉತ್ತಮ ಸಂಬಂಧ ಹೊಂದಿರದಿದ್ದ ಅಲ್ಲಿನ ರಾಜ್ಯಪಾಲರಾಗಿದ್ದ ಕಮಲಾ ಬೆನಿವಾಲ್ ಅವರನ್ನಂತೂ ಸರಕಾರ ಮಿಜೋರಾಂ ರಾಜ್ಯಪಾಲ ಹುದ್ದೆಯಿಂದ ವಜಾ ಮಾಡಿತ್ತು. ಅಂತೆಯೇ ಮಾಜಿ ಕಾಂಗ್ರೆಸ್ ಮುಖಂಡ ವೀರೇಂದ್ರ ಕಟಾರಿಯಾ ಅವರನ್ನೂ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ವಜಾ ಮಾಡಿತ್ತು.

ಮೂರು ಬಾರಿ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದು ನಂತರ ಕೇರಳ ರಾಜ್ಯಪಾಲರಾಗಿದ್ದ ಶೀಲಾ ದೀಕ್ಷಿತ್ ಅವರಂತೂ ಎನ್‌ಡಿಎ ಸರಕಾರದ ಕ್ರಮವನ್ನು ಬಹಿರಂಗವಾಗಿ ಟೀಕಿಸಿದ್ದರು. ಯುಪಿಎ ನೇಮಕ ಮಾಡಿದ್ದ ರಾಜ್ಯಪಾಲರ ರಾಜೀನಾಮೆಗೆ ಒತ್ತಡ ತರುತ್ತಿರುವುದು ಖಂಡನೀಯ ಎಂದು ಹೇಳಿದ್ದರು. ಸಂವಿಧಾನಾತ್ಮಕ ಅಧಿಕಾರ ಹೊಂದಿರುವ ರಾಜ್ಯಪಾಲರನ್ನು ಮನಬಂದಂತೆ ಬದಲಿಸುವ ಹಾಗೂ ಅವಮಾನ ಮಾಡುವ ಕ್ರಮ ಪ್ರಜಾಸತ್ತಾತ್ಮಕ ಕ್ರಮವಲ್ಲ ಎಂದು ಟೀಕಿಸಿದ್ದರು.

28 ಫೆ 1ಮತ್ತು 2 ಮಾರ್ಚ ಅರಸೀಕೆರೆ : ಸಾಹಿತ್ಯ ಅಕಾಡಮಿ ಕಥಾ ಕಮ್ಮಟಸಾವು


ಎಸ್ ಕುಮಾರಇನ್ನು ಸತ್ತು ಹೋಗುವೆ
ಎಂಬ ದೀಪ
ಯಾಕಷ್ಟು ಬೆಳಗುತ್ತದೆ!
ಯಾರಿಗಾಗಿ?
ಕರಗಿ ಹೋಗಬೇಕಾದ್ದು
ಕರಗದೇ
ಇದ್ದಂತೆ
ಮಿಸುಕಾಡುತ್ತದೆ
ಛೆ!
ಸಾವು ಹೀಗೇ.
ಇರಬಹುದು
ಮತ್ತು ಮರೆಸೀತೆ
ಎಂದರೆ
ತೂರಾಡುತ್ತದೆ ತಂಗಾಳಿ
ಮಳೆಯೂ ಹನಿ ಹನಿ
ಒಳಗೆ ಇದ್ದಷ್ಟು ಒದ್ದೆ
ಹೊರಗೆ ಬಿದ್ದಷ್ಟು
ಹರಿವು
ಎಂಥ ಸಾವು!
ನಕ್ಕಿತ್ತು
ನಿನ್ನೆ ವರೆಗೆ
ನಾಳೆಯ ಬೆಳದಿಂಗಳು
ಎಲ್ಲಿಗೆ ಹೋಗಬೇಕು?
ದಾರಿಗೆ ತಿರುವು
ಆಳಕೆ ಕತ್ತಳು
ಆಕಾಶಕ್ಕೆ ಎಲ್ಲಿದೆ ಗುರಿ?
ಥೂ
ಹಾಳು ಗೊಂದಲ
ಗಾಳಿ ಪಟ
ಮುಚ್ಚಿ ಹಾಕಿದರೆ
ವಾಸನೆ
ತೆರೆದಿಟ್ಟರೆ ನಾಚಿಕೆ
ಬೇಕಾಬಿಟ್ಟಿ ಸಾಧ್ಯವಿಲ್ಲ.
ನಾನಿನ್ನು ಸುಮ್ಮನಿರುವುದಿಲ್ಲ

ಮಡಿವಾಳ ಸಮಾಜದ ಮಹಾನ್ ಚಿಂತಕ, ಸಂತ ಗಾಡಗೆ ಬಾಬಾ ಮಹಾರಾಜ


-ಹೊ.ಬ.ನಾಗಸಿದ್ದಾರ್ಥ ಹೊಲೆಯಾರ್.

 
 
 
"ನಮ್ಮ ದೇಶದಲ್ಲಿ ಗುಣವಾಗದ ದೊಡ್ಡ ಗಾಯವೊಂದಿದೆ, ಅದೇ ಅಸ್ಪøಶ್ಯತೆ. ಸ್ಪøಶ್ಯರು-ಅಸ್ಪøಶ್ಯರು ಎಂಬ ಬೇಧವಿದೆ. ನೀನು ಯಾವ ಜಾತಿ ಎಂದು ಕೇಳುವವನಿಗೆ ಸಮಾನತೆ ಬೇಕಿಲ್ಲ. ಆತನಿಗೆ ನಾಲ್ಕು ಕೈಗಳಿದ್ದು, ಈತನಿಗೇನಾದರೂ ಒಂದೂವರೆ ಕೈಗಳಿವೆಯೇ? ಆತನಿಗೆ ನಾಲ್ಕು ಕಣ್ಣುಗಳಿದ್ದು, ಈತನಿಗೆ ಎರಡೇ ಕಣ್ಣುಗಳಿವೆಯೇ? ಆತನಿಗೆ ನಾಲ್ಕು ಕಾಲುಗಳಿದ್ದು, ಈತನಿಗೆ ಒಂದೇ ಕಾಲಿದೆಯೇ? ಮೇಲೆನುವವನಿಗೆ ಮೂವತ್ತೆರಡು ಹಲ್ಲುಗಳಿರುವಂತೆ ಅಸ್ಪøಶ್ಯನೆನಿಸಿಕೊಂಡಿರುವವನಿಗೂ ಮೂವತ್ತೆರಡೇ ಹಲ್ಲುಗಳಲ್ಲವೇ? ಮೇಲೆನಿಸಿದವನಿಗೆ ಮೂವತ್ತೆರಡಿದ್ದು, ಅಸ್ಪøಶ್ಯನಾದವನಿಗೆ ಹತ್ತೇ ಹಲ್ಲುಗಳಿವೆಯೇ ? ನೀವು ತಾಯ ಉದರದಲ್ಲಿ ಎಷ್ಟು ತಿಂಗಳಿರುತ್ತೀರಿ ? ಒಂಭತ್ತು ತಿಂಗಳಲ್ಲವೆ ? ಅಸ್ಪøಶ್ಯರು ನಾಲ್ಕು ಅಥವಾ ಆರು ತಿಂಗಳುಗಳಷ್ಟೇ ಇರುತ್ತಾರೆಯೆ ? ನದಿಗಳನ್ನು ದೇವರೇ ಮಾಡಿರುವನೆಂದಾದರೆ ಆತ ಮಹಾರ್‍ನದಿ, ಮರಾಠನದಿ, ಮಾಂಗ್‍ನದಿ ಎಂದು ಸೃಷ್ಠಿಸಿದ್ದಾನೆಯೇ ? ಮುಸಲ್ಮಾನರು, ಇಸಾಯಿಗಳು ನೀರನ್ನು ಮುಟ್ಟಿದಾಗ ಆಗದ ಅಸ್ಪøಶ್ಯತೆ ಮಹಾರ್, ಮಾಂಗ್ ಗಳು ಮುಟ್ಟಿದಾಗ ಆಗುತ್ತದೆಯೇ ?

ಮುಂಬೈನಲ್ಲಿ ಯಾರ ಬಳಿ ಹೆಚ್ಚಿನ ಸಂಪತ್ತಿದೆ ? ಮಾರವಾಡಿ, ಗುಜರಾತಿ, ಮತ್ತು ಬ್ರಾಹ್ಮಣರ ಬಳಿ ಇದೆ. ಮುಂಬೈನಲ್ಲಿ ಯಾರಿಗೆ ಅನ್ನಕ್ಕೆ ತೊಂದರೆ ಇದೆ ? ಮರಾಠ, ಮಾಲಿ, ತೇಲಿ, ನಾವಿಂದ, ಅಗಸ, ಚಮ್ಮಾರ, ಮೀನುಗಾರ, ಕುಂಬಾರ, ಅಕ್ಕಸಾಲಿ, ಬಡಿಗ, ಬೆಲ್ದಾರ, ಕೊರವ, ಗೊಂಡ, ಗವಾರಿ, ಮಾದಿಗ ಮತ್ತು ಹೊಲೆಯರಿಗೆ. ಇವರು ಪ್ರಾಣಿಗೆ ಸಮಾನ.

ಯಾವಾಗ ಭೂಮಿ ಹುಟ್ಟಿತೋ ಆಗಿನಿಂದ ದೇವರು ಯಾರಿಗೂ ಸಿಕ್ಕಿಲ್ಲ. ಯಾರಿಗೂ ಕಾಣಿಸಿಲ್ಲ. ಆತ ಕಾಣಿಸುವ ವಸ್ತುವಲ್ಲ. ಗುಡಿಯ ದೇವರು, ನಂದಿಯ ದೇವರು, ಇಲ್ಲಿ ದೇವರು, ಅಲ್ಲಿ ದೇವರು, ರಾಮೇಶ್ವರದ ದೇವರು, ಬದ್ರಿಯ ನಾರಾಯಣ ದೇವರು ಹೀಗೆ ಪ್ರಪಂಚ ದೇವರ ಸಂತೆಯಾಗಿದೆ.

ದೇವರನ್ನು ತಂದು ಮಂದಿರದಲ್ಲಿ ಸ್ಥಾಪಿಸುತ್ತೀರಿ. ಅದಕ್ಕೆ ನೀವೇ ಸ್ನಾನ ಮಾಡಿಸುತ್ತೀರಿ. ಯಾರಿಗೆ ಸ್ನಾನ ಮಾಡಲು ಬರುವುದಿಲ್ಲವೋ ಅವನನ್ನು ದೇವರೆನ್ನಬೇಕೆ? ದೇವರಿಗೆ ದೋತರ ಉಡಲು ಬರುವುದಿಲ್ಲ. ಅವನನ್ನು ದೇವರೆನ್ನಬೇಕೆ? ದೇವರ ಮುಂದೆ ನೈವೇದ್ಯ ಇಟ್ಟರೆ ನಾಯಿ ತಿನ್ನುತ್ತದೆ. ನಾಯಿಯನ್ನು ಓಡಿಸಲಾಗದವನನ್ನು ದೇವರೆನ್ನಬೇಕೆ? ದೀಪ ಆರಿದ ಮೇಲೆ ದರ್ಶನಕ್ಕೆ ಜನ ಬಂದರೆ ದೀಪ ಹಚ್ಚುತ್ತೀರಿ. ದೀಪ ದೊಡ್ಡದೋ ? ದೇವರು ದೊಡ್ಡವನೋ ?

ಇಂದಿನಿಂದಲೇ ಮಕ್ಕಳನ್ನು ಓದಿಸಿರಿ. ಹಣ್ಣ್ಗವಿಲ್ಲದಿದ್ದರೆ ಊಟದ ತಟ್ಟೆ ಮಾರಿ ಬಿಡಿ. ಅಂಗೈಯಲ್ಲಿ ಊಟ ಮಾಡಿ. ಹೆಂಡತಿಗೆ ಕಡಿಮೆ ಬೆಲೆಯ ಸೀರೆ ಕೊಡಿಸಿ. ಅತ್ತೆ ಮಾವರಿಗೆ ಅತಿಯಾದ ಸತ್ಕಾರ ಮಾಡಬೇಡಿ. ಮಕ್ಕಳನ್ನು ಶಾಲೆಗೆ ಕಳಿಸುವುದನ್ನು ಮರೆಯಬೇಡಿ.

 
 
 ವಿದ್ಯೆಯೇ ಬಹುದೊಡ್ಡ ಸಂಪತ್ತು. ನಮಗೆ ನಿಮಗೆ ವಿದ್ಯೆ ಇರಲಿಲ್ಲ. ನಮಗೆ ಕೂಲಿ ಕೆಲಸವಾದರೂ ಸಿಕ್ಕಿತ್ತು. ಈಗಿನಿಂದಲೇ ಓದಿಸದಿದ್ದರೆ ಮುಂದೆ ಕೂಲಿ ಕೆಲಸವೂ ಸಿಗಲಾರದು ಬೂಟು ಪಾಲಿಷ್ ಮಾಡಬೇಕಾಗುತ್ತದೆ. ವಿದ್ಯೆ ಎಂಥಹ ದೊಡ್ಡ ಶಕ್ತಿಯಾಗಿದೆ. ಡಾ: ಅಂಬೇಡ್ಕರ್ ಸಾಹೇಬರ ತಾತಾ ಮುತ್ತಾತ ಕಸಗುಡಿಸುವ ಕೆಲಸ ಮಾಡಿದರು. ಅವರ ತಂದೆಗೆ ಬುದ್ದಿ ಜಾಗೃತವಾಯಿತು. ಅವರು ಅಂಬೇಡ್ಕರ್ ರವರನ್ನು ಶಾಲೆಗೆ ಸೇರಿಸಿದರು. ಡಾ: ಅಂಬೇಡ್ಕರ್ ಸಾಹೇಬರು ಸಣ್ಣ ಪುಟ್ಟ ಕೆಲಸ ಮಾಡಲಿಲ್ಲ. ಅವರು ಭಾರತದ ಸಂವಿಧಾನವನ್ನು ರಚಿಸಿದರು. ಅವರು ಶಾಲೆಗೆ ಹೋಗಿರದಿದ್ದರೆ ಕಸ ಗುಡಿಸುವ ಕೆಲಸ ತಪ್ಪುತ್ತಿರಲಿಲ್ಲ. ಹರಕು ಮುರಕು ಮನೆಯಲ್ಲಿ ಇರಿ. ಆದರೆ ಮಕ್ಕಲಿಗೆ ಶಿಕ್ಷಣ ಕೊಡಿಸುವುದನ್ನು ಮರೆಯಬೇಡಿ".

ಇಂತಹ ಅದ್ಭುತವಾದ ಪ್ರಚಂಡವಾದ ವಿಚಾರಧಾರೆಯನ್ನು ತಮ್ಮ ಭಜನೆಗಳಲ್ಲೇ ಹೇಳಿ ಮಹಾರಾಷ್ಟ್ರದ ಮೂಲೆ ಮೂಲೆಗಳಲ್ಲಿ ಜನಜಾಗೃತಿಯನ್ನುಂಟು ಮಾಡಿದವರು ಬೇರಾರೂ ಅಲ್ಲ ಸ್ವತಃ ಅನಕ್ಷರಸ್ಥರಾಗಿ ಈ ದೇಶದ ಅತ್ಯಂತ ಶೋಷಿತ ಜಾತಿಗಳಲ್ಲೊಂದಾಗಿರುವ ಮಡಿವಾಳ (ಅಗಸ) ಸಮಾಜಕ್ಕೆ ಸೇರಿದ ಕ್ರಾಂತಿಕಾರಿ ಸಮಾಜ ಪರಿವರ್ತಕರೆಂದೇ ಮಹಾರಾಷ್ಟ್ರದಲ್ಲಿ ಮನೆಮಾತಾಗಿರುವ ಸಂತ ಗಾಡಗೆ ಮಹಾರಾಜರು.

ಮಹಾರಾಷ್ಟ್ರದ ಅಂಕೋಲಾ ಜಿಲ್ಲೆಯ ಶೇಣಗಾಂವ ಎಂಬಲ್ಲಿ 1876 ರ ಫೆಬ್ರವರಿ ಮಾಹೆಯ 23ನೇ ತಾರೀಖಿನಂದು ಅವರು ಜನಿಸಿದರು. ಅವರ ತಂದೆಯ ಹೆಸರು ಜಿಂಗರಾಜಿ. ತಾಯಿಯ ಹೆಸರು ಸಕ್ಕೂಬಾಯಿ. ಹುಟ್ಟಿದಾಗ ಮಗುವಿಗೆ ಹೆತ್ತವರು ಇಟ್ಟ ಹೆಸರು ಡೆಬೂಜಿ. ಅವರ ಜಾತಿ ಅಗಸ (ಧೋಬಿ ಅಥವಾ ಮಡಿವಾಳ)

ಧೋಬಿ (ಅಗಸ) ಸಮಾಜದ ಬಗ್ಗೆ ಇರುವ ಮಾತುಗಳನ್ನು ಗಮನಿಸಿ.
1. ಅಗಸನ ಮಗಳಿಗೆ ಮನೆಯಲ್ಲಿ ಸುಖವಿಲ್ಲ. ನದೀ ದಡದಲ್ಲೂ ಸುಖವಿಲ್ಲ.
2. ಅಗಸನಿಗೆ ಅನ್ಯ ಪ್ರಾಣಿಯಿಲ್ಲ, ಕತ್ತೆಗೆ ಬೇರೆ ಒಡೆಯನಿಲ್ಲ.
3. ಅಗಸನ ಒಟ್ಟೆ ಯಾವಾಗಲೂ ಕೊಳಕು.
4. ನೂರಾರು ಒಟ್ಟೆಗಳು, ಆದರೆ ರಾಣಿ ಅಗಸರವಳು.
5. ಅಗಸನ ನಾಯಿ ಹಳ್ಳಕ್ಕೂ ಇಳಿಯಲಿಲ್ಲ. ಮನೆಗೂ ಹತ್ತಲಿಲ್ಲ.
6. ಹೊಸದರಲ್ಲಿ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದ.

ಭಾರತದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಜಾತಿಗಳನ್ನು ಕುರಿತು ಒಂದಲ್ಲ ಒಂದು ವಿಧವಾದ ಇಂತಹ ಹೇಳಿಕೆಗಳು ಇದ್ದೇ ಇರುತ್ತದೆ. ಇವುಗಳಲ್ಲಿ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು.

1. ಹೊಲೆಯನ ಮಾತು ನೆಲ್ಲುಲ್ಲಿನ ಬೆಂಕಿ ಎರಡೂ ಒಂದೆ.
2. ತೊರೆಯ ಹಣ ಕೊಟ್ಟು ಹಮ್ಮು ಕೊಂಡನಂತೆ.
3. ಉಪ್ಪಲಶೆಟ್ಟಿ ನೀತರ್ರ ನಾಪೊರ್ರ್ರಾ.
4. ಹಾಳೂರಿಗೆ ಉಳಿದವನೇ ಗೌಡ.
5. ಹಾವನ್ನು ನಂಬಿದರೂ, ಹಾರುವಯ್ಯನನ್ನು ನಂಬಬೇಡ.

ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗಿರುವ ಜಾತಿಗಳೆಂದರೆ ಅಸ್ಪøಶ್ಯ ಜಾತಿಗಳು. ಅದರಲ್ಲೂ ಜಾಡಮಾಲಿ ಜಾತಿಗೆ ತಗುಲಿಕೊಂಡಿರುವ ಕಸುಬಿನಿಂದಾಗಿ ಅದು ಹಿಂದೂ ಸಮಾಜದ ಅತ್ಯಂತ ಕೆಳಜಾತಿಯೆಂದೇ ಪರಿಗಣಿಸಲ್ಪಟ್ಟಿದೆ. ಆದರೆ ಅವರೇನಾದರೂ ಈ ಕಸುಬನ್ನು ಒಂದೇ ದಿನ ನಿಲ್ಲಿಸಿದರೆ ಈ ದೇಶದ ಸ್ಪಚ್ಛತೆಯ ಅಸಲು ಬಣ್ಣ ಗೊತ್ತಾಗುತ್ತದೆ. ಅವರು ಹಾಗೆ ತೀರ್ಮಾನ ಮಾಡುವ ದಿನ ಶೀಘ್ರವಾಗಿ ಬರಲೆಂದು ನಾನು ಜಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ. ಇನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಮಡಿವಾಳ ಸಮಾಜ ಅತ್ಯಂತ ಭೀಕರ ಸ್ಥಿತಿಯಲ್ಲಿರುವ ಜಾತಿಯಾಗಿದೆ. ಈ ಸಮಾಜದ ಕೆಲವೇ ಕೆಲವು ಕುಟುಂಬಗಳು ದೊಡ್ಡ ದೊಡ್ಡ ಗ್ರಾಮಗಳಲ್ಲಿ ವಾಸಿಸುತ್ತಿವೆ. ಈ ಕುಟುಂಬಗಳು ಊರಿನ ಪ್ರಭಾವಿ ಜಾತಿಗಳ ಬಟ್ಟೆ ಹೊಗೆಯಲೆಂದೇ ತಮ್ಮ ಬದುಕನ್ನು ಮೀಸಲಿಟ್ಟಿರುತ್ತವೆ. ಇಂದು ಆಸ್ಪತ್ರೆಗಳು ಬಹುತೇಕ ಎಲ್ಲೆಡೆ ಅಸ್ತಿತ್ವಕ್ಕೆ ಬಂದಿವೆ. ಈ ಆಸ್ಪತ್ರೆಗಳಲ್ಲಿ ಗ್ರಾಯದಿಂದ ನರಳುವವರ ಕೀವು, ರಕ್ತ, ಮಲ ಮೂತ್ರವಷ್ಠೇ ಅಲ್ಲದೆ ಋತುಚಕ್ರವಾದ ಹೆಂಗಸರ ಕೊಳಕು ಬಟ್ಟೆಗಳೂ ಸೃಷ್ಟಿಯಾಗುತ್ತವೆ. ಇದನ್ನೆಲ್ಲ ಶುಚಿಗೊಳಿಸಲು ಇಂದು ವಾಷಿಂಗ್ ಮೆಷಿನ್‍ಗಳು ಸಂಶೋಧನೆಗೊಂಡು ಕೆಲಸ ಮಾಡುತ್ತಿವೆ. ಆದರೆ ಎಲ್ಲೆಡೆ ಇದೇ ವ್ಯವಸ್ಥೆ ಇಲ್ಲ. ಬದಲಿಗೆ ಮನುಷ್ಯರೇ ಇದನ್ನು ಶುಚಿಗೊಳಿಸುತ್ತಾರೆ. ಆ ಮನುಷ್ಯರು ಇಂಡಿಯಾದಲ್ಲಿ ಒಂದು ಜಾತಿಯಾಗಿರುವುದೇ ಈ ದೇಶದ ಮತ್ತು ಆ ಜಾತಿಯ ದೊಡ್ಡ ದುರಂತವಾಗಿದೆ. ಆದರೆ ಇದಕ್ಕೆ ಯಥಾಪ್ರಕಾರ ಹಿಂದೂಗಳಿಗೆ ಕರುಣೆಯಾಗಲೀ ಸಹಾನುಭೂತಿಯಾಗಲೀ ನಾಚಿಕೆಯಾಗಲೀ ಇಲ್ಲ.

ಇಂಥಹ ಅತ್ಯಂತ ಶೋಷಿತ ವರ್ಗದಲ್ಲಿ ಜನಿಸಿದ ಡೆಬೂಜಿಯವರು ತಮ್ಮ ತಂದೆಯನ್ನು 1884 ರಲ್ಲಿ ಕಳೆದುಕೊಂಡರು. ಅವರು ಅಕಾಲಿಕ ಮರಣ ಹೊಂದಲು ಕುಡಿತವೇ ಕಾರಣವಾಗಿತ್ತು. ಸಾಯುವ ಮುನ್ನ ಡೆಬೂಜಿಯವರ ತಂದೆ ಜಿಂಗರಾಜೀಯವರು ತಮ್ಮ ಹೆಂಡತಿ ಸಖೂಬಾಯಿಗೆ ಹೀಗೆಂದು ಹೇಳುತ್ತಾರೆ.

"ಸಖೂ ಈ ಸಾರಾಯಿ ನನ್ನ ಹೆಣ ಮುಚ್ಚಲು ಎರಡೂವರೆ ಗಜ ಒಟ್ಟೆಯೂ ಇಲ್ಲದಂತೆ ಮಾಡಿತು. ಅದು ನನ್ನ ಸುಖ, ಶಾಂತಿ, ಮನೆ, ಭೂಮಿ ಎಲ್ಲವನ್ನೂ ಕಿತ್ತುಕೊಂಡಿತು. ನನ್ನ ಕೊನೆಯ ಕೆಲಸ ಮಾಡಿಕೊಡು ಸಖೂ ಎತ್ತು ಬೀಸಾಡು ಈ ಕೆಟ್ಟ ದೇವರನ್ನು ಎಸೆದು ಬಿಡು ಗಟಾರಕ್ಕೆ. ನನ್ನ ಡೆಬೂಜಿ ಈ ದೇವರ ಹೆಸರಿನಲ್ಲಿ ಸಾರಾಯಿಯನ್ನು ಪ್ರಸಾದವೆಂದು ಕುಡಿದು ಅದರ ದಾಸನಾಗದಿರಲಿ. ನನ್ನ ಡೆಬೂಜಿ ಈ ದೇವರುಗಳಿಂದ, ಸಾರಾಯಿಯಿಂದ ದೂರವಿರಲಿ"

ಗಂಡನ ಮರಣದ ನಂತರ ಸಖೂಬಾಯಿಯವರು ಮಗ ಡೆಬೂಜಿಯನ್ನು ತವರೂರಾದ ದಾಪೂರೆಗೆ ಹೊತ್ತು ನಡೆದರು. ಅಲ್ಲಿ ಅವರಿಗೆ ಆಕೆಯ ತಂದೆ ಹಂಜೀರ ರಾವಜಿ ಮತ್ತು ಅಣ್ಣ ಚಂದ್ರಬಾನಜಿ ಆಶ್ರಯ ನೀಡಿದರು. ದೊಡ್ಡವರಾದ ಡೆಜೂಜಿ ದನ ಮೇಯಿಸುವ ಕ್ರಿಯೆಯಲ್ಲಿ ತೊಡಗಿಕೊಂಡರು. ಅವರೊಂದಿಗೆ ಗೆಳೆಯರ ಬಳಗ ಒಂದು ಭಜನಾ ಮಂಡಳಿಯನ್ನು ಕಟ್ಟಿಕೊಂಡಿತ್ತು. ಅವರು ತಾಳ. ಹಲಗೆ ಮತ್ತು ಏಕತಾರಿಗಳನ್ನು ಸಿದ್ಧಮಾಡಿಕೊಂಡರು. ಆರಂಭದಲ್ಲಿ ಮನರಂಜನೆಗಾಗಿ ಹಾಡುತ್ತಿದ್ದ ಅವರು ಬರಬರುತ್ತಾ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳನ್ನು ಸೇರಿಸಿ ಹಾಡತೊಡಗಿದರು. ಅವರು ಬೇರೆ ಬೇರೆ ಊರುಗಳಿಗೆ ಭಜನೆಗಾಗಿ ಹೋಗತೊಡಗಿದರು. ಇದರಿಂದ ಡೆಜೂಜಿಗೆ ಬೇಡಿಕೆ ಹೆಚ್ಚಾಯಿತು. ಭಜನೆಗಳಲ್ಲಿ ಅವರು ಅಂಧ ನಂಬಿಕೆ ಮತ್ತು ಸಾರಾಯಿ ಕುಡಿತದ ವಿರುದ್ಧ ಮತನಾಡತೊಡಗಿದರು. ಸಾಲ ತೆಗೆದುಕೊಳ್ಳದಂತೆ ಎಚ್ಚರಿಸುವುದು, ಶುಚಿಯಾಗಿರುವಂತೆ ಹೇಳುವುದು, ಹುಕ್ಕ ಮತ್ತು ಬೀಡಿ ಸೇದುವುದನ್ನು ಟೀಕಿಸುವುದು ಇತ್ಯಾದಿ ಮಾಡುತ್ತಲೇ ಅವರ ಖ್ಯಾತಿ ಪ್ರಜ್ವಲಿಸತೊಡಗಿತು. ಜನರು ಅವರ ಮಾತುಗಳನ್ನು ಗಂಭೀರವಾಗಿ ಕೇಳತೊಡಗಿದರು.

ಹೀಗಿರುವಾಗ ಅವರು 1892 ರಲ್ಲಿ ಒಬ್ಬ ಬಡ ದೋಬಿಯಾದ ಧನಾಜಿ ಕಲ್ಲರ್ ಎಂಬುವವರ ಮಗಳಾದ ಕುಂತಾ ಬಾಯಿಯವರನ್ನು ಲಗ್ನವಾದರು.

ಅವರ ಸಾಂಸಾರಿಕ ಜೀವನ ಚೆನ್ನಾಗಿಯೇ ಇತ್ತು. ಅವರಿಗೆ ಅಲೋಕಾಬಾಯಿ ಮತ್ತು ಕಲಾವತಿಬಾಯಿ ಎಂಬ ಇಬ್ಬರು ಹೆಣ್ಣು ಮಕ್ಕಳಾದರು. ಅವರ ಹೆಂಡತಿ ಮೂರನೇ ಮಗುವಿಗೆ ಗರ್ಭವತಿಯಾಗಿದ್ದರು. ಹೀಗಿರುವಾಗಲೇ ಅವರು ಗೃಹತ್ಯಾಗ ಮಾಡಲು ನಿರ್ಧರಿಸಿದರು. ಗೃಹತ್ಯಾಗಕ್ಕೆ ಅವರು ಕಂಡುಕೊಂಡ ಕಾರಣ ಹೆಚ್ಚೂ ಕಡಿಮೆ ಸಿದ್ದಾರ್ಥನು ಗೃಹತ್ಯಾಗ ಮಾಡಿದಂತೆಯೇ ಇತ್ತೆಂದು ಶ್ರೀ ಸತ್ನಾಮ್ ಸಿಂಹ ರವರು ತಮ್ಮ ಹಿಂದಿ ಕೃತಿಯಲ್ಲಿ ಹೀಗೆ ವಿವರಿಸುತ್ತಾರೆ. (ಅನು: ಡಾ: ಸೂರ್ಯಕಾಂತ ಎಸ್.ಸುಜ್ಯಾತ್)

" ಮಕ್ಕಳನ್ನು ನಾಯಿ ಹಂದಿಗಳೂ ಹುಟ್ಟಿಸುತ್ತವೆ. ಹೊಟ್ಟೆಪಾಡಿಗಾಗಿ ಕತ್ತೆಯೂ ಶ್ರಮ ಪಡುತ್ತದೆ. ನಾನೂ ಸಹ ಹಾಗೆಯೇ ಬದುಕಿದರೆ ಮನುಷ್ಯ ಮತ್ತು ಪ್ರಾಣಿಗಳಿಗೂ ಇರುವ ವ್ಯತ್ಯಾಸವೇನು ಹೀಗೇ ಯೋಚಿಸಿದ ಅವರ ಮನಸ್ಸಿನಲ್ಲಿ ಅವರ ತಾಯಿ, ಹೆಂಡತಿ, ಮಕ್ಕಳು ಸುಳಿಯುತ್ತಾರೆ. ಮನೆ ಬಿಟ್ಟರೆ ಅವರ ಗತಿಯೇನೆಂದು ಅವರು ಚಿಂತಿಸುತ್ತಾರೆ. ಅವರು ದುಡಿದು ಹೊಟ್ಟೆ ತುಂಬಾ ಅನ್ನ, ಮೈ ತುಂಬಾ ಬಟ್ಟೆ ಹೊದೆಯಲು ಶಕ್ತರಾಗಿದ್ದಾರೆ. ನಾನಿಲ್ಲದೇ ಇದ್ದರೂ ಇವರು ಅದನ್ನು ಹೇಗಾದರೂ ಮಾಡಿಕೊಳ್ಳುತ್ತಾರೆ. ಹೀಗೆ ಯೋಚಿಸಿದ ಡೆಬೂಜಿ ಕೇವಲ ಈಶ್ವರ ಪ್ರಾಪ್ತಿಗೆ ಗೃಹತ್ಯಾಗ ಮಾಡದೆ ಜನಸೇವೆಗಾಗಿ ಗೃಹತ್ಯಾಗ ಮಾಡುತ್ತಾರೆ. ಭಗವಾನ್ ಬುದ್ಧರು 2500 ವರ್ಷಗಳ ಹಿಂದೆ ಹೀಗೆಯೇ ಮಾಡಿದ್ದರು. ಆಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ಡೆಬೂಜಿ ಗೃಹತ್ಯಾಗ ಮಾಡಿದಾಗಲೂ ಅವರಿಗೆ 29 ವರ್ಷಗಳಷ್ಠೇ ಆಗಿತ್ತು. ಮನೆ ಬಿಡುವಾಗ ಅವರ ಕೈಯಲ್ಲಿ ಮಣ್ಣಿನ ಗಡಿಗೆ ಇತ್ತು. ಹರಿದ ಚಿಂದಿ ಬಟ್ಟೆಗಳನ್ನು ಅವರು ಸುತ್ತುಕೊಂಡಿದ್ದರು. ಭಗವಾನ್ ಬುದ್ದರೂ ಸಹ ಚೀವರಕ್ಕಾಗಿ ಇದೇ ರೀತಿ ಮಾಡಿದ್ದರು. ಚೀವರಕ್ಕೆ ಪಾಳಿ ಭಾಷೆಯಲ್ಲಿ ಪಾಸುಕುಲಿನ (ಹರಿದ ಚಿಂದಿಗಳ ವಸ್ತ್ರ) ವೆಂದು ಕರೆಯಲಾಗುತ್ತದೆ. ಮರಾಠಿ ಭಾಷೆಯಲ್ಲಿ ಒಡೆದ ಮಣ್ಣಿನ ಬೋಕಿಯನ್ನು ‘ಗಡಗಾ' ಎನ್ನುತ್ತಾರೆ. (ನಮ್ಮ ಹಳ್ಳಿಗಳಲ್ಲಿ ಗಡಿಗೆ ಎನ್ನುತ್ತಾರೆ) ಇದನ್ನು ತಮ್ಮೊಂದಿಗೆ ಸದಾ ಇಟ್ಟುಕೊಂಡಿದ್ದರಿಂದಲೇ ಅವರನ್ನು ‘ಗಾಡಗೆ ಬಾಬಾ' ಎಂದು ಜನ ಕರೆಯ ತೊಡಗಿದರು.

ಸ್ವಚ್ಛತಾ ಆಂದೋಲನದ ಪಿತಾಮಹ:

ಅವರು ಊರು ಬಿಟ್ಟ ನಂತರ ಅವರು ನಡೆದ ಊರುಗಳೆಲ್ಲಾ ಕಸದ ಹೊಂಡಗಳಂತೆ ಅವರಿಗೆ ಕಂಡಿತು. ಜನರು ಕಸಕಡ್ಡಿಯನ್ನು ಸಿಕ್ಕ ಸಿಕ್ಕ ಕಡೆಗಳಲ್ಲಿ ಸುರಿಯುತ್ತಿದ್ದ್ದುದನ್ನು ಅವರು ಕಂಡರು. ಸಿಕ್ಕಸಿಕ್ಕ್ಕೆಡೆಗಳಲ್ಲಿ ಜನರು ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಬಾವಿಗಳಿಗೆ ಚಪ್ಪಲಿ ಧರಿಸಿಕೊಂಡೇ ಇಳಿದು ನೀರು ತರುತ್ತಿದ್ದರು. ಅದರಲ್ಲೇ ಸ್ನಾನ, ಮಾಡಿ ಅದನ್ನೇ ಕುಡಿಯುತ್ತಿದ್ದರು. ಇದರಿಂದ ಜನ ರೋಗ ರುಜಿನಗಳಿಗೆ ಒಳಗಾಗುತ್ತಿದ್ದರು. ಇದನ್ನು ಕಂಡ ಗಾಡ್‍ಗೆ ಬಾಬಾ ಜನ ಸೇವೆಯನ್ನು ಸ್ವಚ್ಛತೆಯಿಂದಲೇ ಆರಂಬಿಸಿದರು. ಕಸಗುಡಿಸುವ ಪೊರಕೆ ಸದಾ ಅವರ ಕೈಯಲ್ಲಿರುತ್ತಿತ್ತು. ಹೀಗೆ ಅವರು ದೇಶವಾಸಿಗಳಿಗೆ ಸ್ವಚ್ಛತೆಯ ಪಾಠ ಕಲಿಸಿದರು. ಆದರೆ ಗಾಂಧಿವಾದಿಗಳು, ಗಾಂಧೀಜಿಯವರನ್ನು ಮಹಾಮಹಿಮರನ್ನಾಗಿಸಲು ಸ್ವಚ್ಛತಾ ಆಂದೋಲನದ ಜನಕರೆಂದು ಪ್ರಚಾರ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ಸ್ವತಃ ಗಾಂಧೀಜಿ ಬಾಬಾರಿಂದ ಪ್ರಭಾವಿತರಾಗಿದ್ದರು.

1952 ರ ಜನವರಿವರೆಗೆ ಅವರು ಯಾವುದೇ ಸಮಿತಿಯಿಲ್ಲದೆ ಅನೇಕ ಕೆಲಸಗಳನ್ನು ಮಾಡುತ್ತಾ ಬಂದರು. ಅವರ ಅನುಯಾಯಿಗಳು 1952 ಫೆಬ್ರವರಿ 8 ರಂದು ಗಾಡಗೆ ಬಾಬಾ ಮಿಷನ್ ಸ್ಥಾಪಿಸಿದರು. ಮಹಾರಾಷ್ಟ್ರದ ಮಾಜಿ ಮುಖ್ಯ ಮಂತ್ರಿ ಶ್ರೀ ಬಿ.ಜಿ.ಖೇರ್ ರವರು ಈ ಸಂಸ್ಥೆಗಳಿಗಾಗಿ ಒಂದು ಟ್ರಸ್ಟ್‍ನ್ನು ಸ್ಥಾಪಿಸಿದರು. ಈ ಟ್ರಸ್ಟ್‍ನ ಅಡಿಯಲ್ಲಿ 60 ಸಂಸ್ಥೆಗಳು ಸ್ಥಾಪನೆಗೊಂಡವು. ಅವರ ಮರಣದ ನಂತರ 41 ಸಂಸ್ಥೆಗಳು ಸ್ಥಾಪನೆಗೊಂಡವು. ಅವರು ಬಾಬಾಸಾಹೇಬ ಡಾ: ಅಂಬೇಡ್ಕರ್ ರವರ ಪೀಪಲ್ಸ್ ಎಜುಕೇಷನ್ ಸೊಸೈಟಿ ಮತ್ತು ಡಾ. ಪಂಜಾಬರಾವ್ ದೇಶ್‍ಮುಖ್ ರವರ ಸಂಸ್ಥೆಗಳಿಗೆ ಉಧ್ದಾರವಾಗಿ ದಾನ ನೀಡಿದರು.

ಗಾಡಗೆ ಬಾಬಾ ಮತ್ತು ಡಾ: ಅಂಬೇಡ್ಕರ್:

ಗಾಡಗೆ ಬಾಬಾರವರು 1949 ರಲ್ಲಿ ಪಂಡರಪುರದಲ್ಲಿ ನಿರ್ಮಿಸಿದ್ದ, ಧರ್ಮಶಾಲೆಯನ್ನು ಅದೇ ವರ್ಷ ಜುಲೈ 14 ರಂದು ಡಾ: ಅಂಬೇಡ್ಕರ್ ರವರಿಗೆ ಹಸ್ತಾಂತರಿಸಿದರು.

ಡಾ: ವಿಮಲಕೀರ್ತಿಯವರು ಬರೆದಿರುವ "ಗಾಡಗೆ ಬಾಬಾ ಸಚಿತ್ರ ಜೀವನ" ಕೃತಿಯಲ್ಲಿ "ಡಾ. ಅಂಬೇಡ್ಕರರ ಮೇಲೆ ಆಸೀಮ ಪ್ರೇಮ' ಶೀರ್ಷಿಕೆಯಡಿಯಲ್ಲಿ "ಗಾಡಗೆ ಬಾಬಾ ಅವರಿಗೆ ಅವರ ಸಮಕಾಲೀನ ಅನೇಕ ನಾಯಕರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಳ್ಳೆಯ ಸಂಬಂಧವಿತ್ತು. ಆದರೆ ಡಾ. ಬಾಬಾ ಸಾಹೇಬ ಅಂಬೇಡ್ಕರರೊಂದಿಗೆ ಅತ್ಯಂತ ಮಧುರವಾದ ಸಂಬಂಧವಿತ್ತು. ಇಂತಹ ಸಂಬಂಧ ಬೇರೆ ಯಾವ ನಾಯಕರೊಂದಿಗೂ ಇರಲಿಲ್ಲ. ಇವರಿಬ್ಬರೂ ಒಬ್ಬರಿಗೊಬ್ಬರು ಎಷ್ಟೋ ಬಾರಿ ಭೇಟಿಯಾಗಿದ್ದರು. ಅವರಿಬ್ಬರ ಮದ್ಯೆ ಸಂವಾದವೂ ನಡೆದಿತ್ತು. ಡಾ. ಅಂಬೇಡ್ಕರ್ ಗಾಡಗೆ ಬಾಬಾ ಅವರ ಕಾರ್ಯಗಳನ್ನು ಪ್ರಶಂಸಿಸಿದರೆ ಗಾಡಗೆ ಬಾಬಾ ಡಾ. ಅಂಬೇಡ್ಕರರ ಕಾರ್ಯಗಳನ್ನು ಪ್ರಶಂಸಿಸುತ್ತಿದ್ದರು. ಒಮ್ಮೆ ದಾದರ್‍ನ ಡಾ. ಮಹಾಜನಿಯವರ ಮನೆಯಲ್ಲಿ ಗಾಡಗೆ ಬಾಬಾರವರು ಅನಾರೋಗ್ಯದ ಅವಸ್ಥೆಯಲ್ಲಿದ್ದರು. ಮಹಾನಂದಸ್ವಾಮಿಯವರು ಬಾಬಾ ಅವರ ಅನಾರೋಗ್ಯದ ಕುರಿತು ಡಾ. ಅಂಬೇಡ್ಕರರಿಗೆ ತಿಳಿಸಿದರು. ಆಗ ಡಾ. ಅಂಬೇಡ್ಕರ್ ಅವರು ಭಾರತದ ಕಾನೂನು ಮಂತ್ರಿಯಾಗಿದ್ದರು. ಅಂದು ಸಾಯಂಕಾಲವೇ ದಿಲ್ಲಿಗೆ ಹೋಗಬೇಕಿತ್ತು. ಕೆಲ ಸಮಯದಲ್ಲಿಯೇ ನಿಲ್ದಾಣ ತಲುಪಬೇಕಿತ್ತು, ರೈಲಿಗಾಗಿ ಹೆಚ್ಚು ಸಮಯವಿರಲಿಲ್ಲ. ಆದರೆ ಡಾ. ಅಂಬೇಡ್ಕರ್ ತಕ್ಷಣ ಎದ್ದುನಿಂತು "ಹಾಗಾದರೆ ನಾನು ಅವರ ದರ್ಶನ ಮಾಡಲೇಬೇಕು" ಎಂದರು. ಜೊತೆಯಲ್ಲಿ ಎರಡು ಕಂಬಳಿಗಳನ್ನು ಕೊಂಡು ಮಹಾನಂದಸ್ವಾಮಿಯೊಂದಿಗೆ ಡಾ. ಮಹಾಜನೀಯವರ ಮನೆಗೆ ಹೋದರು. ವಿಷಯ ತಿಳಿಯುತ್ತಲೇ ಬಾಬಾ ಹಾಸಿಗೆಯಿಂದ ಎದ್ದು ಕುಳಿತು ‘ನೀವೇಕೆ ಬಂದಿರಿ? ನಿಮಗೆ ಒಂದೊಂದು ನಿಮಿಷವೂ ಬಹಳಷ್ಟು ಬೆಲೆಯುಳ್ಳದ್ದು. ನಾನು (ವಿರಕ್ತ) ಭಿಕ್ಷುಕನಿದ್ದೇನೆ. ನಿಮ್ಮದು ಬಹುದೊಡ್ಡ ಹುದ್ದೆ' ಎಂದು ನುಡಿದರು. ಆಗ ಡಾ. ಅಂಬೇಡ್ಕರ್ ಅವರು ‘ಬಾಬಾ ನಮ್ಮ ಅಧಿಕಾರ ಎರಡು ದಿನದ್ದು, ನಾಳೆ ಕುರ್ಚಿಯಿಂದ ಇಳಿದರೆ ನಮ್ಮನ್ನು ಕೇಳುವವರು ಯಾರಿದ್ದಾರೆ? ನಿಮ್ಮ ಅಧಿಕಾರ ಅಮರವಾದದ್ದಾಗಿದೆ' ಎಂದು ನುಡಿದರು. ಆಗ ಕರ್ಮವೀರ ಭಾವೂರಾವ ಪಾಟೀಲ, ದಿವಾನ್ ಬಹದ್ದೂರ ಜಗತಾಪರೂ ಬಾಬಾ ಅವರನ್ನು ಕಾಣಲು ಬಂದಿದ್ದರು. ಇವರೆಲ್ಲರ ಎದುರಿನಲ್ಲಿ ಬಾಬಾ ಅವರು ಪಂಢರಪುರ ಧರ್ಮಶಾಲೆಯನ್ನು ಡಾ. ಅಂಬೇಡ್ಕರರಿಗೆ ಒಪ್ಪಿಸಿದರು.

ಡಾ. ಅಂಬೇಡ್ಕರ್ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸುವವರಿದ್ದರು, ಗಾಡಗೆ ಬಾಬಾ ಮುಂಬೈಯ ಜೆ.ಜೆ.ಹಾಸ್ಪಿಟಲ್ ಹತ್ತಿರದ ಧರ್ಮಶಾಲೆಯಲ್ಲಿ ನಡೆಯುತ್ತಿದ್ದ ಶಾಲೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಡಾ. ಅಂಬೇಡ್ಕರ್ ತಮ್ಮ ಒಬ್ಬ ದೂತನನ್ನು ಅವರಲ್ಲಿಗೆ ಕಳಿಸಿದರು. ಬಾಬಾ ಅವರೊಂದಿಗೆ ಡಾ: ಅಂಬೇಡ್ಕರ್ರವರಿಗೆಗೆ ಧರ್ಮಾಂತರದ ಕುರಿತು ಚರ್ಚಿಸುವ ಬಯಕೆಯಿತ್ತು. ಗಾಡಗೆ ಬಾಬಾ ಅವರು ಬಹುಬೇಗ ಡಾ. ಅಂಬೇಡ್ಕರರನ್ನು ಕಾಣಲು ಕೊಲಾಬಾ ತಲುಪಿದರು. ಡಾ.ಅಂಬೇಡ್ಕರ್ ಅವರೊಂದಿಗೆ ಧರ್ಮಾಂತರದ ಕುರಿತು ವಿಸ್ತಾರವಾಗಿ ಮಾತನಾಡಿ ತುಂಬಾ ಸಂತೋಷಪಟ್ಟರು.

"ಎಲ್ಲ ಅಸ್ಪøಶ್ಯ ಸಮಾಜ ನಿಮ್ಮ ಜೊತೆಗಿದೆ, ನೀವು ತೋರಿಸಿದ ದಾರಿಯಲ್ಲಿ ಅವರೂ ನಡೆಯುತ್ತಾರೆ" ಎಂದು ಡಾ. ಅಂಬೇಡ್ಕರರಿಗೆ ಹೇಳಿದರು. ಆಗ ಬಾಬಾಸಾಹೇಬರು "ಬಾಬಾ ನಾನು ಎಲ್ಲ ಅಸ್ಪøಶ್ಯರನ್ನೂ ಕರೆದುಕೊಂಡು ಬುದ್ಧನಲ್ಲಿ ಶರಣು ಹೋಗುತ್ತೇನೆ. ಈ ಸಮಾರಂಭ ನಾಗಪುರದಲ್ಲಿ ನಡೆಯಲಿದೆ. ನಮಗೆ ನಿಮ್ಮ ಆಶೀರ್ವಾದ ಬೇಕು" ಎಂದು ಗದ್ಗದಿತರಾದರು. ಬಾಬಾ ಅವರು ಡಾ. ಅಂಬೇಡ್ಕರ್ ಅವರ ಕಾರ್ಯಕ್ಕಾಗಿ ಶುಭ ಹಾರೈಸಿ, ನಮಸ್ಕರಿಸಿ ಅಲ್ಲಿಂದ ಬೀಳ್ಕೊಂಡರು.

ಯಾವಾಗ ಡಾ. ಬಾಬಾಸಾಹೇಬ ಅಂಬೇಡ್ಕರರ ಆಕಸ್ಮಿಕ (6 ಡಿಸೆಂಬರ್ 1956) ನಿಧನವಾಯಿತೋ ಆಗ ಗಾಡಗೆ ಬಾಬಾ ಅವರ ಒಳಗುದಿ ಇಮ್ಮಡಿಯಾಯಿತು. ಏಕೆಂದರೆ ಡಾ. ಅಂಬೇಡ್ಕರ್ ರೂಪದಲ್ಲಿ ಅಸ್ಪøಶ್ಯರಿಗೆ ಒಬ್ಬ ಧರ್ಮಗುರು ಸಿಕ್ಕಂತಿತ್ತು. ಗಾಡಗೆಬಾಬಾ ಅತ್ಯಂತ ದುಃಖದಿಂದ "ಶೋಷಿತ ಸಮಾಜದ 7 ಕೋಟಿ ಬಾಲಕರನ್ನು ಬಿಟ್ಟು ಡಾ. ಅಂಬೇಡ್ಕರ್ ಹೊರಟುಹೋದರು. ಅವರ ಸಾವಿನಿಂದ ಈ ಬಾಲಕರು ನಿರ್ಗತಿಕರಾದರು. ಈಗೀಗ ಇವರು ಬಾಬಾ ಸಾಹೇಬರ ಕೈಹಿಡಿದು ನಡೆಯಲು ಆರಂಭಿಸಿದ್ದರು. ಅದೇ ಕೈಯನ್ನು ವಿಧಿ ಕಸಿದುಕೊಂಡಿತು. ಬಾಬಾ ಸಾಹೇಬರು ಇನ್ನೂ ಕೆಲವು ದಿನ ಇರುತ್ತಿದ್ದರೆ ಈ ಬಾಲಕರು ಸ್ವತಃ ನಡೆದಾಡಲು ಧೈರ್ಯ ಮಾಡುತ್ತಿದ್ದರು" ಎಂದು ದುಃಖಭರಿತ ಉದ್ಗಾರವೆತ್ತಿದ್ದರು.

6 ಡಿಸೆಂಬರ್ 1956 ರಂದು ಬಾಬಾರವರು ಬಾಂದ್ರಾಕ್ಕೆ ಬಂದರು. ಆ ದಿನ ಭಾರತದ ಕೋಟಿ ಕೋಟಿರ ಮುಕ್ತಿದಾತ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಆಕಸ್ಮಿಕ ನಿಧನವಾಯಿತು.

ಗಾಡಗೆ ಬಾಬಾ ಅವರಿಗೆ ಈ ದುಃಖದ ವಿಷಯ ತಿಳಿಯಿತು. ಅವರ ಒಳಮನಸ್ಸು ತತ್ತರಿಸಿತು. ಶೋಷಿತರ, ಮಹಿಳೆಯರ, ಕಾರ್ಮಿಕರ, ರೈತರ ಹಕ್ಕುಗಳಿಗಾಗಿ ಡಾ. ಅಂಬೇಡ್ಕರ್ ಅವರು ಬಹಳಷ್ಟು ಪ್ರಖರವಾಗಿ ಹೋರಾಡುತ್ತಾ ಅವರನ್ನು ಉದ್ಧರಿಸುತ್ತಾರೆ ಎಂಬ ಭರವಸೆಯಿತ್ತು. ಆದರೆ ಬಾಬಾ ರವರಿಗಿಂತ ಮೊದಲೇ ಹೊರಟು ಹೋದದ್ದು ದಮನಿತ ಜನವರ್ಗಕ್ಕೆ ಭಾರೀ ನಷ್ಟವುಂಟು ಮಾಡಿತು.

ಡಾ.ಅಂಬೇಡ್ಕರರ ನಿರ್ಗಮನದ ನಂತರ ಗಾಡಗೆ ಬಾಬಾ ಸಂಪೂರ್ಣ ಕುಸಿದು ಹೋದರು. ಔಷಧ ಸೇವೆಯನ್ನು ಬಿಟ್ಟುಬಿಟ್ಟರು. ಅಂದೇ ಅವರು ಅಮರಾವತಿಯೆಡೆಗೆ ಹೊರಟರು. ಮುಂಬೈ-ಹೌರಾ ಎಕ್ಸಪ್ರೆಸ್ ಮೂಲಕ ಹೊರಟರು. ತಂತಿ ಸಂದೇಶದ ಮೂಲಕ ಈ ಸುದ್ದಿ ನಾಸಿಕ, ಅಕೋಲಾ ಮುರ್ತಿಜಾಪುರ, ಅಮರಾವತಿ ಹಾಗೂ ವಡನೇರಾಗಳಿಗೆ ಮುಟ್ಟಿಸಲಾಯಿತು. ಪ್ರತಿ ನಿಲ್ದಾಣದಲ್ಲಿಯೂ ಜನ ಬಾಬಾ ಅವರ ದರ್ಶನಕ್ಕಾಗಿ ಸೇರಿದ್ದರು.

13 ಡಿಸೆಂಬರ್ 1956 ಕ್ಕೆ ಬಾಬಾ ಅವರ ಆರೋಗ್ಯ ಮತ್ತೆ ಕೈಕೊಟ್ಟಿತು. ಅವರನ್ನು ಇರ್ವಿನ್ ಆಸ್ಪತ್ರೆಯಲ್ಲಿ ಸೇರ್ಪಡೆ ಮಾಡಲಾಯಿತು. ಅಲ್ಲಿ ಅವರನ್ನು ಆಕ್ಸಿಜನ್ ಆಧಾರದ ಮೇಲೆ ಇರಿಸಲಾಗಿತ್ತು. ಡಿಸೆಂಬರ್ 17 ರಂದು ಬಹಳಷ್ಟು ನೋವನ್ನು ಅನುಭವಿಸಿದ್ದರು. ಡಿಸೆಂಬರ್ 18 ರಂದು ಆಸ್ಪತ್ರೆಯನ್ನೂ ತೊರೆದರು. 19 ರಂದು ವಡನೇರಾಕ್ಕೆ ಹೋದರು. ಅಲ್ಲಿ ತಮ್ಮ ಅನುಯಾಯಿಗಳನ್ನು ಒಂದೆಡೆ ಸೇರಿಸಿ "ನಾನು ಚೆನ್ನಾಗಿದ್ದೇನೆ, ದೇಹದಲ್ಲಿ ನಿಶಕ್ತಿ ಇನ್ನೂ ಇದೆ. ನನ್ನನ್ನು ನಾಗರವಾಡಿಗೆ ತೆಗೆದುಕೊಂಡು ನಡೆಯಿರಿ" ಎಂದರು. ಹಾಗೆ ಸಾಗುತ್ತಿರುವಾಗ "ನನ್ನ ಸಾವು ಯಾರ ಮನೆಯಲ್ಲಿಯೂ ಆಗಬಾರದು. ನಾನು ನನ್ನ ಗುರಿಯತ್ತ ಸಾಗುತ್ತ ದಾರಿಯಲ್ಲಿಯೇ ಸಾಯಲು ಇಚ್ಛಿಸುತ್ತೇನೆ. ನನ್ನ ಸಾವು ಎಲ್ಲಿ ಸಂಭವಿಸುವುದೋ ಅಲ್ಲಿಯೇ ನನ್ನ ಅಂತಿಮ ಸಂಸ್ಕಾರ ಮಗಿಸಿರಿ. ನನ್ನ ಮೂರ್ತಿ ಬೇಡ, ಸಮಾಧಿ ಬೇಡ, ಮಂದಿರ ಬೇಡ, ಸ್ಮಾರಕ ನಿರ್ಮಿಸುವುದೂ ಬೇಡ. ನನ್ನಿಂದ ಮಾಡಿಸಲಾದ ಕೆಲಸವೇ ನನ್ನ ನಿಜವಾದ ಸ್ಮಾರಕ" ಎಂದು ತಮ್ಮ ಅಂತಿಮ ಇಚ್ಛೆಯನ್ನು ವ್ಯಕ್ತಪಡಿಸಿದರು.
ಇಂದು ಗಾಡಗೆ ಬಾಬಾ ಮಹಾರಾಜ ಮಹಾರಾಷ್ಟ್ರದ ಶೋಷಿತ ವರ್ಗಗಳ ಆರಾಧ್ಯ ದೈವವಾಗಿದ್ದಾರೆ.

-ಹೊ.ಬ.ನಾಗಸಿದ್ದಾರ್ಥ ಹೊಲೆಯಾರ್. @9916721874

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...