Saturday, February 07, 2015

ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಕಥಾ ಸಂಕಲನ ಆಹ್ವಾನ
ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾ ಸಂಕಲನ ಪ್ರಶಸ್ತಿಗೆ 2014ರಲ್ಲಿ ಮೊದಲ ಮುದ್ರಣ ಕಂಡ ಕಥಾ ಸಂಕಲನಗಳನ್ನು ಆಹ್ವಾನಿಸ­ಲಾಗಿದೆ.

ಪ್ರಕಾಶಕರು ಅಥವಾ ಲೇಖಕರು, ಪ್ರಕಟಿತ ಕಥಾ ಸಂಕಲನದ ಮೂರು ಪ್ರತಿಗಳನ್ನು ಕಳುಹಿಸಬೇಕು. ಪ್ರಶಸ್ತಿಯು  25 ಸಾವಿರ ನಗದು, ಪ್ರಮಾಣ ಪತ್ರ ಮತ್ತು ಫಲಕ ಒಳಗೊಂಡಿದ್ದು, ಜೂನ್‌ ಮೊದಲನೇ ವಾರದಲ್ಲಿ ಮಂಡ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ‘ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ’ದ ಪ್ರಕಟಣೆ ತಿಳಿಸಿದೆ.

ಕೃತಿಗಳನ್ನು ಮಾರ್ಚ್ 31ರೊಳಗೆ ಕಳುಹಿಸಬೇಕು.
ವಿಳಾಸ:
ಅಧ್ಯಕ್ಷರು,
ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ,
ನಂ. 90, 16ನೇ ಅಡ್ಡರಸ್ತೆ,
4ನೇ ಹಂತ,
ಜೆ.ಪಿ. ನಗರ,
ಬೆಂಗಳೂರು –560 078.
ಮೊಬೈಲ್: 94499 87678.


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...