Monday, February 23, 2015

ಆನ್‌ಲೈನ್ ದೌರ್ಜನ್ಯ: ಮಹಿಳೆಯರ ಸದ್ದಡಗಿಸುವ ಹುನ್ನಾರ

ಆನ್‌ಲೈನ್ ದೌರ್ಜನ್ಯ: ಮಹಿಳೆಯರ ಸದ್ದಡಗಿಸುವ ಹುನ್ನಾರ

ರಿಚಾ ಕೌಲ್ ಪಡ್ತೆ

ಕಳೆದ ರವಿವಾರ ಅಡಿಲೇಡ್‌ನ ಓವಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಕದನ ನಡೆಯುತ್ತಿತ್ತು. ಈ ಸಂದರ್ಭದಲ್ಲಿ, ಇಲ್ಲಿ ಯಾರು ಗೆದ್ದರು ಎನ್ನುವುದು ಮುಖ್ಯವಲ್ಲ. ಪಾಕಿಸ್ತಾನಿಗಳು ನಮಗಿಂತ ಆಕರ್ಷಕರಾಗಿಯೇ ಇದ್ದಾರೆ. ನೆರೆಯ ರಾಷ್ಟ್ರದವರಾದ ನಾವು ಅವರಿಗಿಂತ ಈ ವಿಚಾರದಲ್ಲಿ ಒಂದು ಹೆಜ್ಜೆ ಹಿಂದೆ ಎಂದು ಬಝ್‌ಫೀಡ್ ಇಂಡಿಯಾ ಸಂಪಾದಕಿ ರೇಗಾ ಝಾ ಅವರು ಟ್ವೀಟ್ ಮಾಡಿದ್ದರು.

ಇದು ಪ್ರಚೋದಕ ಟ್ವೀಟ್. ಖಂಡಿತವಾಗಿಯೂ ಬೌದ್ಧಿಕ ಟೀಕೆಗಳನ್ನು ಆಹ್ವಾನಿಸುವಂಥದ್ದು. ಆದರೆ ಈ ಟ್ವೀಟ್ ಮಾಡಿದ ಸಂಪಾದಕಿ ವಿರುದ್ಧ ಬಂದ ಪ್ರತಿಕ್ರಿಯೆಗಳು ಮಾತ್ರ ಕೀಳು ಅಭಿರುಚಿಯವುಗಳು. ಇವು ಅಹಂಗೆ ಪೆಟ್ಟಾದ ಭಾರತೀಯ ಪುರುಷರ ಕೀಳು ಅಭಿರುಚಿಯ ಪ್ರತೀಕ.

ಆಕೆಗೆ ವ್ಯಾಕ್ಸಿಂಗ್ ಅಗತ್ಯ; ನಿಮ್ಮ ಅನಗತ್ಯ ಕೂದಲುಗಳನ್ನು ಸುಟ್ಟುಹಾಕಬೇಕು; ನೀಚ ಪಾಕಿಸ್ತಾನಿಗಳಿಂದ ಆಕೆ ಗುದ್ದಿಸಿಕೊಂಡಿರಬೇಕು- ಇವು ಬಂದ ಸೌಮ್ಯ ಪ್ರತಿಕ್ರಿಯೆಗಳ ಕೆಲ ಸ್ಯಾಂಪಲ್‌ಗಳು. ಕೊನೆಗೆ ಅತ್ಯಾಚಾರ ಬೆದರಿಕೆಯ ಪ್ರತಿಕ್ರಿಯೆಗಳೂ ಬಂದವು.

ಕಳೆದ ಮೂರು ದಿನಗಳಲ್ಲಿ ಝಾ ಅವರಿಗೆ ಹಿಂಸಾತ್ಮಕ ಬೆದರಿಕೆ ಪ್ರತಿಕ್ರಿಯೆಗಳ ಪ್ರವಾಹವೇ ಬರುತ್ತಿದೆ. ಇಂಟರ್‌ನೆಟ್‌ನಲ್ಲಿ ಆಕೆಯ ಮೇಲೆ ಮಾತ್ರವಲ್ಲ; ಮಹಿಳೆಯರ ಮೇಲಿನ ಆನ್‌ಲೈನ್ ಅವಹೇಳನ ನಿರಂತರವಾಗಿ ಹೆಚ್ಚುತ್ತಲೇ ಇದೆ. ಗೇಮಿಂಗ್ ಸಮುದಾಯ (ಗೇಮರ್‌ಗೇಟ್)ನಲ್ಲಿ ಲೈಂಗಿಕ ಪ್ರಚೋದನೆ ವಿರುದ್ಧ ಧ್ವನಿ ಎತ್ತಿದ ಮಹಿಳೆಯೊಬ್ಬರು ಎದುರಿಸಿದ ಹಿಂಸೆ, ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ಈ ಸಮುದಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಫೇಸ್‌ಬುಕ್ ಮೂಲಕ ಆಕೆಯ ಗಂಡನೇ ಹಿಂಸಾತ್ಮಕ ಬೆದರಿಕೆ ಹಾಕಿದ್ದ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಕೆ ಒತ್ತಾಯಿಸಿದ್ದಾಳೆ. ಅಂತೆಯೇ ಫೇಸ್‌ಬುಕ್‌ನ ಲೈಂಗಿಕ ವಿಷಯಗಳ ಬಗ್ಗೆ ತ್ರಿಷ್ಟಾ ಹೆಡ್ರೆನ್ ಆರಂಭಿಸಿದ ರೇಪ್‌ಬುಕ್ ವಿರುದ್ಧವೂ ಇಂಥ ಬೆದರಿಕೆಗಳ ಪ್ರವಾಹವೇ ಬಂದಿದೆ.

ಆನ್‌ಲೈನ್ ಅವಹೇಳನ

ಕಳೆದ ಕೆಲ ವರ್ಷಗಳ ಕಾಲ ವಿಶ್ವಾದ್ಯಂತ ಕೆಲ ಆಸಕ್ತ ಗುಂಪುಗಳು ಕಲೆಹಾಕಿದ ಸಾಕ್ಷಿ ಮತ್ತು ಸಂಶೋಧನೆಗಳ ಪ್ರಕಾರ, ಆನ್‌ಲೈನ್‌ನಲ್ಲಿ ಹೆಚ್ಚು ಕಾಲ ಇರುವ ಮಹಿಳೆಯರು ಹಲವು ವಿಧದಲ್ಲಿ ದಾಳಿಗೊಳಗಾಗುವ ಅಪಾಯವಿದೆ. ಬಹುತೇಕ ಮಹಿಳೆಯರು ಹೇಳುವಂತೆ ಆಯಾ ದೇಶಗಳ ಪುರುಷರಿಂದಲೇ ಇಂಥ ದಾಳಿಯ ಎಚ್ಚರಿಕೆಗಳು ಬರುತ್ತಿವೆ. ಅಮೆರಿಕದಲ್ಲಿ 1990ರಲ್ಲಿ ಅಲ್ಲಿನ ಅಟಾರ್ನಿ ಮೈಕ್ ಗಾಡ್ವಿನ್ ಹೊಸ ಸಿದ್ಧಾಂತವನ್ನು ಮುಂದಿಟ್ಟರು. ಸುದೀರ್ಘ ಚರ್ಚೆಗಳು ನಡೆದಷ್ಟೂ ಅವರನ್ನು ನಾಝಿ ಅಥವಾ ಹಿಟ್ಲರ್ ಮನೋಭಾವದ ವ್ಯಕ್ತಿ ಎಂದು ಬಣ್ಣಿಸುವ ಸಾಧ್ಯತೆ ಹೆಚ್ಚು ಎನ್ನುವುದು ಈ ಸಿದ್ಧಾಂತ. ಇದಾದ 20 ವರ್ಷಗಳ ಬಳಿಕ ಇದೀಗ ಮತ್ತೊಂದು ಸಿದ್ಧಾಂತ ರೂಪುಗೊಂಡಿದೆ. ಆನ್‌ಲೈನ್‌ನಲ್ಲಿರುವ ಮಹಿಳೆಗೆ ರೇಪ್ ಬೆದರಿಕೆಯ ಸಾಧ್ಯತೆ ಸನಿಹದಲ್ಲೇ ಇದೆ ಎನ್ನುವುದು ಹೊಸ ಸಿದ್ಧಾಂತ.

ಚೇತನ್ ಭಗತ್ (ಆನ್‌ಲೈನ್ ಜಗತ್ತಿನ ಬಗ್ಗೆ ಮಾತನಾಡುವಾಗ ಅದರ ಬಾಬಾ ರಾಮ್‌ದೇವ್ ಎನಿಸಿಕೊಂಡ ಇವರ ಬಗ್ಗೆ ಪ್ರಸ್ತಾಪಿಸದಿದ್ದರೆ ಅದು ಅಪೂರ್ಣ) ಜನರಿಗೆ, ಒಬ್ಬ ಪುರುಷ ಸಂಪಾದಕ ಭಾರತೀಯ ಮಹಿಳೆಗೆ ರಸಿಕತೆ ಇಲ್ಲ ಪಾಕಿಸ್ತಾನಿ ಮಹಿಳೆಯರೇ ಹೆಚ್ಚು ಸೆಕ್ಸಿಯಾಗಿರುತ್ತಾರೆ ಎಂದು ಟ್ವೀಟ್ ಮಾಡಿದ ಸಂದರ್ಭವನ್ನು ಕಲ್ಪಿಸಿಕೊಂಡರೆ ಏನಾಗುತ್ತದೆ ಎಂದು ಪ್ರಶ್ನಿಸಿದಾಗ, ಇದು ಈ ಚರ್ಚೆಗೆ ಪ್ರಸ್ತುತವಾಗುವ ಪ್ರಶ್ನೆಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ನಾವು ತದ್ವಿರುದ್ಧವಾಗಿ ಕಲ್ಪಿಸಿಕೊಳ್ಳಬೇಕಾದರೆ, ಮಹಿಳೆಯರೂ ಪುರುಷರಂತೆ ಮುಕ್ತವಾಗಿ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದರೂ, ಬೆದರಿಕೆಯ ಅಪಾಯಕ್ಕೆ ಒಳಗಾಗದಂಥ ಸೈಬರ್ ಜಗತ್ತನ್ನು ನಾವು ಕಲ್ಪಿಸಿಕೊಳ್ಳಬೇಕು.

ಇಂಟರ್‌ನೆಟ್‌ನಲ್ಲಿ ಮಹಿಳೆಯರು ಮತ್ತು ಪುರುಷರ ಅನುಭವಗಳು ಭಿನ್ನವಾಗಿರಲು, ವಾಸ್ತವವಾಗಿ ಈ ನೆಟ್ ಪ್ರದೇಶ ಕಾರಣವಲ್ಲ. ಖಂಡಿತವಾಗಿಯೂ ಇತರ ಎಲ್ಲ ಸಾರ್ವಜನಿಕ ಸ್ಥಳಗಳಂತೆ ಲಿಂಗ ಅಸಮಾನತೆ ಇದಕ್ಕೆ ಮುಖ್ಯ ಕಾರಣ. ಯಾರು ಈ ತಂತ್ರಜ್ಞಾನವನ್ನು ಶೋಧಿಸಿದರು ಎನ್ನುವಲ್ಲಿಂದ, ಇಂಟರ್‌ನೆಟ್ ವೇದಿಕೆಗಳವರೆಗೂ ಈ ಲಿಂಗ ಅಸಮಾನತೆಯ ಭೂತವನ್ನು ಉದಾಸೀನ ಮನೋಭಾವದಿಂದಲೇ ನೋಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಮಹಿಳೆಯರಿಗಿಂತ ಹೆಚ್ಚು ಮಂದಿ ಪುರುಷರು ಇರುತ್ತಾರೆ ಎನ್ನುವುದು ವಾಸ್ತವ. ಆದ್ದರಿಂದ ನಮ್ಮ ಇಂಟರ್‌ನೆಟ್ ಜಗತ್ತಿನಲ್ಲಿ ಲಿಂಗ ಸಮಾನತೆ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.ಬೀದಿನಡಿಗೆಯಂತೆ ಆನ್‌ಲೈನ್‌ನಲ್ಲಿ ಮಾತನಾಡುವುದು ಮಹಿಳೆಯರಿಗೆ ಬೀದಿಯಲ್ಲಿ ನಡೆದಷ್ಟೇ ಕಷ್ಟದ ಕೆಲಸ. ಆನ್‌ಲೈನ್ ಅವಹೇಳನವನ್ನು ಮತ್ತೆ ಮತ್ತೆ ಪ್ರಕಟಿಸಬಹುದು ಮತ್ತು ಸಂಗ್ರಹಿಸಿ ಇಡಬಹುದು. ಇದರಿಂದಾಗಿ ಮಹಿಳೆಯರು ಆಫ್‌ಲೈನ್‌ನಲ್ಲಿದ್ದಾಗಲೂ ಇದರ ಹಿಂಸೆ ಅನುಭವಿಸುತ್ತಲೇ ಇರಬೇಕಾಗುತ್ತದೆ.

ರಸ್ತೆಯಲ್ಲಿ ನಡೆಯುವ ಮಹಿಳೆಯೊಬ್ಬರ ಪರಿಸ್ಥಿತಿಯನ್ನು ನಿದರ್ಶನವಾಗಿ ತೆಗೆದುಕೊಳ್ಳಿ. ಆಕೆಯನ್ನು ದಿಟ್ಟಿಸಿ ನೋಡುವ, ಗೇಲಿ ಮಾಡುವ, ಲಘುವಾಗಿ ಮಾತನಾಡುವ, ತಡವರಿಸುವ, ಹಲ್ಲೆ ಮಾಡುವ ಸಂಭವಗಳು ಇದ್ದೇ ಇರುತ್ತವೆ. ಈ ಎಲ್ಲ ಹಿಂಸೆಯನ್ನೂ ಒಟ್ಟಾಗಿ ನೋಡಿದಾಗ ಆಕೆಗೆ ಸ್ಪಷ್ಟವಾದ ಸಂದೇಶ ರವಾನೆಯಾಗಿರುತ್ತದೆ; ಇದು ಆಕೆಯ ಬೀದಿಯಲ್ಲ. ಈ ಬೀದಿಯನ್ನು ಪ್ರವೇಶಿಸುವುದು ಎಂದರೆ ಆಕೆ ಎದುರಿಸಲೇಬೇಕಾದ ಶಿಕ್ಷೆ ಎನ್ನುವುದು ಆಕೆಗೆ ಖಚಿತವಾಗಿರುತ್ತದೆ.

ಇಂಟರ್‌ನೆಟ್ ಇನ್ನೂ ವಿಶಾಲವಾದ ವೇದಿಕೆ. ಟ್ವಿಟ್ಟರ್, ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವುದು ಖಂಡಿತವಾಗಿಯೂ ಬೀದಿನಡಿಗೆಗೆ ಸಮ. ಕೀಳು ಅಭಿರುಚಿಯ ಪ್ರತಿಕ್ರಿಯೆಗಳು, ಹಿಂಬಾಲಿಸುವ ಅಥವಾ ರೇಪ್ ಬೆದರಿಕೆಗಳು ಇಲ್ಲಿ ಮಹಿಳೆಗೆ ಎದುರಾಗುವ ಶಿಕ್ಷೆ. ಪುರುಷ ಪ್ರಧಾನವಾದ ಬೀದಿಗೆ ಪ್ರವೇಶ ಮಾಡಿದ್ದಕ್ಕೆ ಮಹಿಳೆ ಶಿಕ್ಷೆ ಎದುರಿಸುವಂತೆ, ಆನ್‌ಲೈನ್ ಅವಹೇಳನ ಕೂಡಾ ಇದಕ್ಕಿಂತ ಭಿನ್ನವಲ್ಲ. ಮಹಿಳೆಯ ಧ್ವನಿ ಅಡಗಿಸುವ ಕ್ರೌರ್ಯವೇ ಇಲ್ಲೂ ನಡೆಯುವುದು.

ಮಾತಿನ ಮೂಲಕ ನಡೆಯುವ ಲೈಂಗಿಕ ದೌರ್ಜನ್ಯ ಮಹಿಳೆಯರು ಏನು ಹೇಳಿದರು ಎಂಬ ಕಾರಣಕ್ಕಾಗಿ ಅಲ್ಲ; ಅವರು ಎಂದೂ ಮತ್ತೆ ಮಾತನಾಡದಂತೆ ಮಾಡುವ ಹುನ್ನಾರ ಎಂದು ಹೊಸದಿಲ್ಲಿ ಮೂಲದ ಇಂಟರ್‌ನೆಟ್ ಪ್ರಜಾಪ್ರಭುತ್ವ ಯೋಜನೆಯೊಂದರಿಂದ ತಿಳಿದುಬಂದಿದೆ. ಮಹಿಳಾ ಪತ್ರಕರ್ತರು ಹಾಗೂ ಟ್ವಿಟ್ಟರ್‌ನಲ್ಲಿ ಹೆಚ್ಚು ಮಾತನಾಡುವ ಮಹಿಳೆಯರೇ ಹೆಚ್ಚಾಗಿ ಇಂಥ ದೌರ್ಜನ್ಯಕ್ಕೆ ತುತ್ತಾಗುತ್ತಾರೆ ಎನ್ನುವುದು ಕೂಡಾ ಸಮೀಕ್ಷೆಯಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ಆನ್‌ಲೈನ್‌ನಲ್ಲಿ ಮಾತನಾಡುವ ಬಹುತೇಕ ಮಹಿಳೆಯರನ್ನು ಮುಂದೆ ಅವರು ಎಂದೂ ಮಾತನಾಡದಂತೆ ಸದ್ದಡಗಿಸುವ ರೀತಿಯ ಅವಹೇಳನಗಳು ನಡೆಯುತ್ತಲೇ ಇರುತ್ತವೆ.
ಆದರೆ ಅವರು ಮಾತು ಖಂಡಿತವಾಗಿಯೂ ಬಿಡುವುದಿಲ್ಲ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...