Thursday, February 12, 2015

ಹಸಿರುಮನೆ ಪರಿಣಾಮಕ್ಕೆ ಹಸಿರು ಹೊದಿಕೆಯೇ ಪರಿಹಾರರೋಹಿಂಟನ್ ಇಮ್ಯಾನ್ಯುಯಲ್

ವಾರ್ತಾಭಾರತಿ

 

ಹಸಿರುಮನೆ ಪರಿಣಾಮಕ್ಕೆ ಹಸಿರು ಹೊದಿಕೆಯೇ ಪರಿಹಾರ

 

 

ಅನಿಯಂತ್ರಿತ ಹೊಗೆಯುಗುಳುವಿಕೆ ಜಾಗತಿಕ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೆ ನಗರಗಳಲ್ಲಿ ನೆರಳಿನ ವಾತಾವರಣ ನಿರ್ಮಿಸುವ ಮೂಲಕ ನಗರಗಳ ವಾತಾವರಣದಲ್ಲಿ ಭಾರೀ ಬದಲಾವಣೆ ತರಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ವಿಶ್ವದ ಒಟ್ಟು ಜನವಸತಿಯ ಪ್ರದೇಶಗಳ ಪೈಕಿ ನಗರ ಪ್ರದೇಶ ಶೇಕಡ 2ರಷ್ಟು ಮಾತ್ರ. ಆದರೆ ಜಾಗತಿಕ ವಾತಾವರಣದ ವಿಷಯಕ್ಕೆ ಬಂದಾಗ ನಗರಗಳು ಪ್ರಮುಖ ಪರಿಣಾಮ ಬೀರುತ್ತವೆ. ನಗರಗಳು ಸಾಮಾನ್ಯವಾಗಿ ಹಳ್ಳಿಪ್ರದೇಶಗಳಿಗಿಂತ ಹೆಚ್ಚು ತಾಪಮಾನ ಹೊಂದಿರುತ್ತವೆ. ಆದ್ದರಿಂದಲೇ ನಗರಗಳನ್ನು ಉಷ್ಣದ್ವೀಪಗಳು ಎಂದು ಕರೆಯುವುದು ವಾಡಿಕೆ.

ನಗರಗಳು ಉಷ್ಣಪ್ರದೇಶಗಳಾಗಲು ಹಲವು ಕಾರಣಗಳಿವೆ. ವಾಹನಗಳ ಸಂಚಾರದ ಪರಿಣಾಮ ಉಂಟಾಗುವ ಮಾಲಿನ್ಯ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುತ್ತವೆ. ಅಂದರೆ ರಾತ್ರಿವೇಳೆ ನಗರಗಳು ಬಿಸಿಯಾಗಿಯೇ ಇರಲು ಇದು ಕಾರಣವಾಗುತ್ತದೆ. ನಗರ ಗಳಲ್ಲಿ ವ್ಯಾಪಕ ಪ್ರಮಾಣಗಳಲ್ಲಿ ಮರ ಗಳನ್ನು ಕಡಿಯುವ ಕಾರಣದಿಂದ ಶಾಖವನ್ನು ಹೀರಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ. ಮರಗಿಡಗಳು ಶಾಖವನ್ನು ಹೀರಿಕೊಂಡು ಅವುಗಳನ್ನು ಪೋಷಕಾಂಶಗಳಾಗಿ ಬಳಕೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಪಾದಚಾರಿ ರಸ್ತೆಗಳಿಗೆ ಹಾಕಿರುವ ಪೇವ್‌ಮೆಂಟ್ ಹಾಗೂ ಡಾಂಬರು ರಸ್ತೆಗಳು ಶಾಖವನ್ನು ಕ್ಷಿಪ್ರವಾಗಿ ಹೊರಸೂಸಿ, ಗಾಳಿಗೆ ಬಿಡುತ್ತವೆ. ಮಳೆನೀರನ್ನು ಚರಂಡಿಗಳ ಮೂಲಕ ಹರಿದುಹೋಗಲು ಬಿಡುವುದರಿಂದ, ಮಳೆನೀರಿನಿಂದ ತೊಯ್ದು ಶಾಖವನ್ನು ಹೀರಿಕೊಳ್ಳುವ ಗುಣವನ್ನು ನಗರ ಪ್ರದೇಶದ ಮಣ್ಣಿನಿಂದಲೂ ಕಡಿಮೆ ಮಾಡುತ್ತದೆ.

 ಇಷ್ಟು ಸಾಲದೆಂಬಂತೆ ಜನದಟ್ಟಣೆ. ಜನರ ದೇಹದಿಂದ ಉತ್ಪತ್ತಿಯಾಗುವ ಉಷ್ಣ ಮತ್ತು ಕಟ್ಟಡಗಳ ಉಷ್ಣತೆ ಮತ್ತಷ್ಟು ಬಿಸಿ ಹೆಚ್ಚಲು ಕಾರಣವಾಗುತ್ತದೆ. ಇವು ಗಳನ್ನು ತಣ್ಣಗಾಗಿಸಲು ಬಳಸುವ ಹವಾನಿಯಂತ್ರಕ ಯಂತ್ರಗಳು ನಗರ ಉಷ್ಣತೆಗೆ ಮತ್ತಷ್ಟು ಪೂರಕವಾಗುತ್ತದೆ. ಹವಾನಿಯಂತ್ರಣ ಯಂತ್ರಗಳು ಬಿಸಿಗಾಳಿಯನ್ನು ಬೀದಿಗೆ ಬಿಟ್ಟು, ವಾತಾವರಣದಿಂದ ತಂಪಿನ ಅಂಶವನ್ನು ಹೀರಿಕೊಳ್ಳುತ್ತವೆ. ಅಂದರೆ ಇನ್ನೊಂದು ವಿಧದಲ್ಲಿ ಹೇಳುವುದಾದರೆ, ಇವುಗಳನ್ನು ಬಿಸಿ ಮಾಡುವ ಯಂತ್ರಗಳೆಂದೇ ಕರೆಯಬಹುದು.

ನಗರಗಳ ವ್ಯಾಪ್ತಿ ಹೆಚ್ಚುತ್ತಿದ್ದು, ಹೆಚ್ಚು ಹೆಚ್ಚು ಜನ ಅಲ್ಲಿಗೆ ಆಕರ್ಷಿತರಾಗುತ್ತಿರುವ ಹಿನ್ನೆಲೆಯಲ್ಲಿ, ವಾತಾವರಣದಲ್ಲಿ ಉಷ್ಣತೆ ಹೆಚ್ಚುವ ಪ್ರವೃತ್ತಿಯೂ ನಿಧಾನವಾಗಿ ಹೆಚ್ಚುತ್ತಲೇ ಇದೆ. ಇಂಗ್ಲೆಂಡ್‌ನ ದಕ್ಷಿಣ ಭಾಗದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಉಷ್ಣಾಂಶದ ವ್ಯತ್ಯಾಸ 6 ಡಿಗ್ರಿ ಸೆಂಟಿಗ್ರೇಡ್‌ನಷ್ಟಿರುತ್ತದೆ. ಗ್ಲಾಸ್ಕೊ ನಗರದಲ್ಲಿ ಇತ್ತೀಚೆಗೆ ಜನಸಂಖ್ಯೆಗೆ ಕಡಿವಾಣ ಹಾಕಿದ್ದರೂ, ಗ್ರಾಮೀಣ ಪ್ರದೇಶಗಳಿಗಿಂತ ಶೇಕಡ 8ರಷ್ಟು ಹೆಚ್ಚು ಉಷ್ಣಾಂಶ ಇಲ್ಲಿ ಕಂಡುಬರುತ್ತದೆ.

ಕೆಲ ಉಷ್ಣಪ್ರದೇಶಗಳಲ್ಲಂತೂ ಈ ಪ್ರಮಾಣ ಮಿತಿಮೀರಿದೆ. ಉದಾಹರಣೆಗೆ ಶ್ರೀಲಂಕಾದ ರಾಜಧಾನಿ ಕೊಲಂಬೋದಿಂದ ಹಲವಾರು ಕುಟುಂಬಗಳು ತಂಪು ಹವೆಯ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ. ಫಿಯೊನಿಕ್ಸ್, ಅರಿರೆನಾ ಮತ್ತಿತರ ಪ್ರದೇಶಗಳಲ್ಲಿ ಹೆಚ್ಚಿನ ಶಾಖವನ್ನು ತಡೆಯುವ ಸಲುವಾಗಿ ನಗರಗಳ ಬೆಳವಣಿಗೆಯನ್ನು ನಿರ್ಬಂಸಲಾಗಿದೆ. ಹೆಚ್ಚಿನ ಉಷ್ಣತೆ ಇರುವ ನಗರಗಳಾದ ಲಂಡನ್ ಅಥವಾ ಪ್ಯಾರೀಸ್‌ನಲ್ಲಿ ಕೂಡಾ ಅನಿರೀಕ್ಷಿತ ಬಿಸಿಗಾಳಿ ನೂರಾರು, ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡಿರುವುದನ್ನು ಕಾಣಬಹುದು. ಫಿಯೋನಿಕ್ಸ್ ಪಟ್ಟಣದ ರಾತ್ರಿಗಿಂತ ಹಗಲು ಮತ್ತಷ್ಟು ಭೀಕರ.

ಜಾಗತಿಕ ತಾಪಮಾನ ಚರ್ಚೆ

ಜಾಗತಿಕ ತಾಪಮಾನದ ಬಗೆಗೆ ನಡೆಯು ತ್ತಿರುವ ವ್ಯಾಪಕ ಚರ್ಚೆಗಳು ನಗರಗಳ ಉಷ್ಣತೆ ಹೆಚ್ಚುತ್ತಿರುವ ಬಗ್ಗೆಯೇ ಕೇಂದ್ರೀಕೃತವಾಗಿವೆ. ಆದರೆ ವಾಸ್ತವವಾಗಿ ವಿಶ್ವಾದ್ಯಂತ ತಾಪಮಾನ ಹೆಚ್ಚುತ್ತಿರುವ ಬಗ್ಗೆ ಗಂಭೀರ ಚಿಂತನೆ ನಡೆಸ ಬೇಕಿದೆ.
ಜಾಗತಿಕ ತಾಪಮಾನ ನಿಯಂತ್ರಿಸುವ ನೀತಿ ನಿರೂಪಕರು ನಗರಗಳ ಉಷ್ಣಾಂಶವನ್ನು ಕಡಿಮೆ ಮಾಡುವುದು ಹೇಗೆ ಎಂಬ ಬಗ್ಗೆಯೇ ಒತ್ತು ನೀಡಿ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದಾರೆ. ನಗರಗಳನ್ನು ತಂಪು ಮಾಡಲು ಯಾವ ಕ್ರಮ ಅಗತ್ಯ ಎಂಬ ಬಗ್ಗೆ ಚಿಂತಿಸುತ್ತಾರೆ. ಇದು ಸಮಸ್ಯೆಗೆ ಖಂಡಿತವಾಗಿಯೂ ದೊಡ್ಡ ಮಟ್ಟದ ಪರಿಹಾರ ಒದಗಿಸಬಹುದು. ಆದರೆ ವಾತಾವರಣಕ್ಕೆ ಸೇರುವ ಇಂಗಾಲದ ಪ್ರಮಾಣವನ್ನು ನಿಯಂತ್ರಿಸುವ ಕಾರ್ಯಕ್ಕೆ ಮಾತ್ರ ಒತ್ತು ನೀಡಿದಲ್ಲಿ ಇದು ವಿಲವಾಗುವ ಸಾಧ್ಯತೆ ಹೆಚ್ಚು ಅಥವಾ ಆ ಪ್ರಯತ್ನಕ್ಕೆ ತಣ್ಣೀರೆರಚಿದಂತೆ ಆಗುವುದು ಖಚಿತ. 2050ರಲ್ಲಿ ವಿಶ್ವದಲ್ಲಿ ಆಗಬಹುದಾದ ವಾತಾವರಣ ಬದಲಾವಣೆ ಯನ್ನು ಅಂದಾಜಿಸಿ ಅದಕ್ಕೆ ತಕ್ಕಂತೆ ಕಾರ್ಯ ಯೋಜನೆ ರೂಪಿಸುವ ಕಾರ್ಯ ಮಾತ್ರ ಆಗುತ್ತಿಲ್ಲ.
ಆದರೆ ಸ್ಥಳೀಯ ತಾಪಮಾನ ಹೆಚ್ಚಳದ ಜತೆಜತೆಗೇ ದಶಕಗಳಿಂದ ನಗರಗಳ ಜನತೆ ಬಾಳು ರೂಪಿಸಿಕೊಂಡಿದ್ದಾರೆ. ವಿಶ್ವದ ವಿವಿಧ ನಗರಗಳನ್ನು ಅವಲೋಕಿಸಿದರೆ, ತಾಪಮಾನ ನಿಯಂತ್ರಣ ನಿಟ್ಟಿನಲ್ಲಿ ಬಹುತೇಕ ಕಡೆಗಳಲ್ಲಿ ತಾವು ಹೇಳಿಕೊಳ್ಳುವುದಕ್ಕಿಂತ ಕಡಿಮೆ ಕೆಲಸ ಆಗಿದೆ.

ಒಂದೇ ಪರಿಹಾರ ಕಾರ್ಯಸಾಧುವಲ್ಲ

ಬಿಸಿ ಅಥವಾ ಶೀತ ವಾತಾವರಣದ ಸಮಸ್ಯೆಗಳ ಪರಿಹಾರಮಾರ್ಗವೇ ಭಿನ್ನ. ಹೆಚ್ಚು ಉಷ್ಣಾಂಶ ಮತ್ತು ತೇವಾಂಶ ಇರುವ ಕೊಲಂಬೊ ನಗರದಲ್ಲಿ ಕೈಗೊಂಡ ಸಮೀಕ್ಷೆಯ ಪ್ರಕಾರ, ಅಕ ಪ್ರಮಾಣದ ಸೌರ ವಿಕಿರಣ ಕಂಡುಬಂದಿದೆ. ಆದರೆ ವರ್ಷವಿಡೀ ಮಳೆಯಾಗುವ ಕಾರಣದಿಂದ ನೀರಿನ ಲಭ್ಯತೆ ಹಾಗೂ ನಗರ ಪ್ರದೇಶಗಳಲ್ಲಿ ಗಿಡಮರಗಳು ಹೆಚ್ಚಾಗಿ ಇರುವ ಕಾರಣದಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಉಷ್ಣಾಂಶದ ವ್ಯತ್ಯಾಸ ತೀರಾ ಕಡಿಮೆ ಇದೆ. ಅಂದರೆ ವಲಸೆ ಹೋಗುವುದು ಕೂಡಾ ಇಲ್ಲಿನ ಸಮಸ್ಯೆಗೆ ಪರಿಹಾರವಾಗಲಾರದು.

ಆದರೆ ತೇವಾಂಶ ಹೆಚ್ಚಾಗಿರುವ ವಾತಾವರಣದಲ್ಲಿರಬಹುದು; ಇಲ್ಲವೇ ಒಣಹವೆಯ ಪ್ರದೇಶಗಳಿರಬಹುದು; ನಗರ ಪ್ರದೇಶಗಳಲ್ಲಿ ನೆರಳು ಹೆಚ್ಚಿಸುವುದರಿಂದ ವಾತಾವರಣ ಬದಲಾವಣೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ ಎನ್ನುವುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಗರ ಪ್ರದೇಶಗಳ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ನೆರಳು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ. ನೆರೆಯವರ ಜಾಗದಲ್ಲಿ ನೆರಳು ಕಲ್ಪಿಸುವ ಸಾಹಸ ಬೇಡ ಎಂಬ ನಾಣ್ನುಡಿ, ಸಾರ್ವಜನಿಕ ಸ್ಥಳಗಳಲ್ಲಿ ನೆರಳು ಕಲ್ಪಿಸುವ ಸಾಹಸ ಮಾಡಿ ಎಂದು ಬದಲಾಗಬೇಕಿದೆ.

ಇದು ಕೇವಲ ಕಟ್ಟಡಗಳಿಗೆ ನೆರಳು ಕಲ್ಪಿಸುವುಷ್ಟೇ ಅಲ್ಲ; ಇದು ಅಗತ್ಯವೂ ಅಲ್ಲ. ಆದರೆ ನಗರದ ಭೌಗೋಳಿಕ ಪ್ರದೇಶ ಅಂದರೆ ಎರಡು ಕಟ್ಟಡಗಳ ನಡುವಿನ ಅಂತರವನ್ನು ನೈಸರ್ಗಿಕ ನೆರಳಿನಿಂದ ಆವರಿಸುವ ಕಾರ್ಯ ಅಗತ್ಯ ವಾಗಿ ಆಗಬೇಕಿದೆ. ಆದರೆ ಇದರಿಂದ ಕಟ್ಟಡಗಳಿಗೆ ಅಗತ್ಯವಾದಾಗ ಬೆಳಕು ಬೀಳುವಂತೆ ಎಚ್ಚರ ವಹಿಸಬೇಕು.

 ಆದರೆ ಆಗಸದಲ್ಲಿ ಸೂರ್ಯ, ಭೂಮಿಯ ಮೇಲ್ಮೆಗಿಂತ ಭಾರೀ ಎತ್ತರದಲ್ಲಿರುವುದರಿಂದ, ಕಟ್ಟಡಗಳ ಎತ್ತರ ಮತ್ತು ಭೌಗೋಳಿಕ ಸಂರಚನೆ ನಡುವೆ ಸಮನ್ವಯತೆ ಉಂಟಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜತೆಗೆ ಗಿಡಮರಗಳನ್ನು ಹೆಚ್ಚಾಗಿ ಬೆಳೆಸುವ ಮೂಲಕ ನೆರಳು ಹೆಚ್ಚಿಸುವ ಕಾರ್ಯ ಆಗಬೇಕು.

ಕಟ್ಟಡಗಳ ನಿರ್ಮಿತಿ ಪ್ರದೇಶದ ನಡುವಿನ ಅಂತರವನ್ನು ನೆರಳಿನಿಂದ ತುಂಬುವುದು, ಗಿಡಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ತಂಪಾದ ನೆರೆಹೊರೆಯನ್ನು ಬೆಳೆಸಿ ದಲ್ಲಿ, ಖಂಡಿತವಾಗಿಯೂ ಗ್ರಾಮೀಣ ಪ್ರದೇಶಗಳಿಗಿಂತಲೂ ತಂಪಿನ ವಾತಾವರಣ ನಿರ್ಮಿಸಲು ಸಾಧ್ಯವಿದೆ. ಇದು ಹಲವಾರು ಬೆಳೆಯುತ್ತಿರುವ ನಗರಗಳ ಪಾಲಿಗೆ ಒಳ್ಳೆಯ ಸುದ್ದಿ ಮತ್ತು ಈ ನಿಟ್ಟಿನಲ್ಲಿ ಜನಸಾಮಾನ್ಯರ ಗಮನ ಸೆಳೆಯಲು ಒಳ್ಳೆಯ ವಿಧಾನವೂ ಹೌದು. ಕೆಲ ಉಷ್ಣಪ್ರದೇಶಗಳಲ್ಲಂತೂ ಕೆಲವು ಡಿಗ್ರಿಗಳಷ್ಟು ಉಷ್ಣಾಂಶ ಹೆಚ್ಚಾದರೂ, ತಡೆದುಕೊಳ್ಳುವುದು ಅಸಾಧ್ಯ.

ತಂಪು ಪ್ರದೇಶದ ನಗರಗಳು ವಾತಾವರಣ ಬದಲಾವಣೆಯ ಪರಿಣಾಮ ತಡೆಯಲು ಏನು ಮಾಡಬಹುದು ಎನ್ನುವುದಕ್ಕೆ ನ್ಯೂಯಾರ್ಕ್ ಮತ್ತು ಲಂಡನ್ ಒಳ್ಳೆಯ ನಿದರ್ಶನ. ಈ ನಗರಗಳ ಉಷ್ಣದ್ವೀಪ ತಡೆ ನಿಯಮಾವಳಿಗಳಲ್ಲಿ, ಯೋಜನಾಬದ್ಧವಾಗಿ ಗಿಡಮರಗಳನ್ನು ಬೆಳೆಸುವುದು, ಉದ್ಯಾನವನ ಪ್ರದೇಶದಲ್ಲಿ ಪಾದಚಾರಿ ರಸ್ತೆಗಳಿಗಾಗಿ ಪೇವ್‌ಮೆಂಟ್‌ಗಳನ್ನು ಹಾಕುವುದನ್ನು ನಿಯಂತ್ರಿಸುವುದು ಮತ್ತು ಸಂಚಾರ ನಿಯಂತ್ರಣ ಕ್ರಮಗಳು ಸೇರಿವೆ. ಆದರೆ ಇಂಥ ನೀತಿ ನಿಯಮಗಳಾಗಲೀ, ನಿಯಂತ್ರಣ ಕ್ರಮಗಳಾಗಲೀ ಉಷ್ಣಪ್ರದೇಶಗಳಲ್ಲಿ ಕಂಡುಬರುತ್ತಿಲ್ಲ. ಆದರೆ ಸಿಂಗಾಪುರ ಮಾತ್ರ ಇದಕ್ಕೆ ಅಪವಾದ. ಸಿಂಗಾಪುರದಲ್ಲಿ ಮಾತ್ರ ಸಂಚಾರ ನಿರ್ಬಂಧ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಶೀತ ಪ್ರದೇಶದ ಗ್ಲಾಸ್ಕೊದಂಥ ನಗರಗಳನ್ನು ತಂಪಾಗಿ ಇಡಲು ಅಗತ್ಯ ಕ್ರಮಗಳ ಬಗ್ಗೆ ವ್ಯಾಪಕ ಚಿಂತನೆ ನಡೆದಿದೆ. ಇದು ಉಷ್ಣಾಂಶ ಹೆಚ್ಚುತ್ತಿದೆ ಎಂಬ ಒಂದೇ ಕಾರಣದಿಂದ ಅಲ್ಲ. ಮುಂದಿನ ದಶಕಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಮುಂದಾಲೋಚನೆಯಿಂದ ಇಂಥ ಕ್ರಮಗಳನ್ನು ರೂಪಿಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಈಗಲೇ ನಿಯಂತ್ರಣ ವಿಧಾನವನ್ನು ಅನುಸರಿಸಲಾಗುತ್ತಿದೆ. ಅಂದರೆ ನಗರ ಪ್ರದೇಶಗಳಲ್ಲಿ ಶೇಕಡ 20ರಷ್ಟು ಮರಗಿಡಗಳನ್ನು ಹೆಚ್ಚಾಗಿ ಬೆಳೆಸಿದರೆ, ನಗರ ಪ್ರದೇಶದಲ್ಲಿ 2050ನೆ ಇಸ್ವಿ ವೇಳೆಗೆ ಉಷ್ಣಾಂಶ ಹೆಚ್ಚುವುದನ್ನು ಅರ್ಧದಷ್ಟು ಖಂಡಿತವಾಗಿಯೂ ತಡೆಯಬಹುದು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಇದು ಸಕಾಲ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...