Tuesday, March 03, 2015

ದಲಿತ ಸಿಎಂ ಎಂಬ ಅಹಿಂದ ಒಡೆವ ಹುನ್ನಾರ


ದರ್ಶನ್ ಬಳ್ಳೇಶ್ವರ


 ದಲಿತ ಸಿಎಂ ಎಂಬ ಅಹಿಂದ ಒಡೆವ ಹುನ್ನಾರ

ಕರ್ನಾಟಕ ಏಕೀಕರಣಗೊಂಡು ಇಲ್ಲಿಗೆ 58ವರ್ಷಗಳು ಕಳೆದಿವೆ. ಸಾವಿರಾರು ಹೋರಾಟಗಾರರ ಶ್ರಮದ ಲವಾಗಿ ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಾಕಿಂತಗೊಂಡಿತ್ತು. ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. 1956 ನವೆಂಬರ್ 1ರಂದು ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಒಗ್ಗೂಡಿಸಿ ಸೇರಿಸಲಾಯಿತು. ಅಂದಿನ ಮೊದಲ ಮುಖ್ಯಮಂತ್ರಿಯಾಗಿ ಎಸ್.ನಿಜಲಿಂಗಪ್ಪಅಕಾರ ನಡೆಸಿದರು. ಇನ್ನು ‘ಕರ್ನಾಟಕ’ ಎಂಬ ಪದಕ್ಕೆ ಅರ್ಥ ಹುಡುಕುತ್ತ ಹೋದರೆ ಅನೇಕ ವ್ಯತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಅದರಲ್ಲಿ ಕರು +ನಾಡು ಎಂಬ ಪದ ಇದಕ್ಕೆ ಪೂರಕವಾಗಿದೆ. ಕರುನಾಡು ಎಂದರೆ ಎತ್ತರದ ಪ್ರದೇಶ ಎಂದು ಅರ್ಥ.

ಇಲ್ಲಿಯ ರಾಜಕೀಯ ವ್ಯವಸ್ಥೆ ಬಹು ವಿಭಿನ್ನವಾದ ನೆಲೆಗಟ್ಟನ್ನು ಹೊಂದಿದೆ. ಭಾರತದಲ್ಲಿ ನಡೆದ ಸಮಾಜವಾದ, ಕಾಗೋಡು ಸತ್ಯಾಗ್ರಹ, ದಲಿತ, ಬಲಪಂಥೀಯ ಮತ್ತು ಎಡಪಂಥೀಯ ಚಳವಳಿಗಳು ಸೇರಿದಂತೆ ಹತ್ತಾರು ಜನಪರ ಮತ್ತು ಪ್ರಗತಿಪರ ಹೋರಾಟಕ್ಕೆ ಈ ರಾಜ್ಯ ಬೇರು ಇದ್ದಂತೆ ಎಂದರು ತಪ್ಪಿಲ್ಲ. ಹಾಗೆಯೇ ರಾಮಕೃಷ್ಣ ಹೆಗಡೆ, ದೇವೇಗೌಡ, ಬಂಗಾರಪ್ಪ, ದೇವರಾಜ ಅರಸು, ಜೆ. ಎಚ್. ಪಟೇಲ್ ಹೀಗೆ ಅನೇಕ ಮಹಾನ್‌ನೇತಾರರನ್ನು ದೇಶದ ರಾಜಕಾರಣಕ್ಕೆ ಕೊಡುಗೆಯಾಗಿ ಕರ್ನಾಟಕ ನೀಡಿದೆ. ಮಾಜಿ ಪ್ರಧಾನಿ ಮತ್ತು ‘ಉಕ್ಕಿನ ಮಹಿಳೆ’ ಎಂದೆ ಹೆಸರಾಗಿದ್ದ ದಿವಂಗತ ಇಂದಿರಾ ಗಾಂ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಸೋಲು ಕಂಡಾಗ ಕರ್ನಾಟಕದ ಚಿಕ್ಕಮಗಳೂರು ಲೋಕಾಸಭಾ ಕ್ಷೇತ್ರದಲ್ಲಿ ಸ್ಪರ್ಸಿ ಗೆಲವು ಸಾಸಿ ಲೋಕಸಭೆ ಪ್ರವೇಶಿಸಿದ್ದರು... ಹೀಗೆ ಹತ್ತಾರು ರೋಚಕ ರಾಜಕೀಯ ಘಟನಾವಳಿಗಳಿಗೆ ಕರ್ನಾಟಕ ವೇದಿಕೆಯಾಗಿದೆ.
 ಈಗ ಕರ್ನಾಟಕದಲ್ಲಿ ಅಹಿಂದ ನಾಯಕ ಎಂದೇ ಬಿಂಬಿತವಾದ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಅಕಾರದಲ್ಲಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರೋಕ್ಷವಾಗಿ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿಕೊಂಡು ಚುನಾವಣೆಗೆ ಹೋಗಿದ್ದರ ಲವಾಗಿ 121 ಸ್ಥಾನಗಳನ್ನು ಪಡೆದಿತ್ತು. ಅದರಂತೆ ಕಾಂಗ್ರೆಸ್ ಹೈಕಮಾಂಡ್, ಶಾಸಕರ ಒಪ್ಪಿಗೆ ಮೇರೆಗೆ ಅವಿರೋಧವಾಗಿ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯಾಗಿ ಮಾಡಿ ಜನರಿಗೆ ಪರೋಕ್ಷವಾಗಿ ಕೊಟ್ಟ ಮಾತು ಉಳಿಸಿಕೊಂಡಿತ್ತು. ಆದರೆ ದಿನಕಳೆದಂತೆ ಪರಿಸ್ಥಿತಿ ಬದಲಾಗುತ್ತಿದೆ. ಸಿದ್ದರಾಮಯ್ಯ ವಿರುದ್ಧ ಮತ್ತು ಸಿಎಂ ಬದಲಾವಣೆಗೆ ಕೂಗುಗಳು ಕೇಳಿ ಬರುತ್ತಿವೆ. ಕರ್ನಾಟಕ ರಾಜಕಾರಣ ಮತ್ತು ಕಾಂಗ್ರೆಸ್ ವಲಯದಲ್ಲಿ ಇತ್ತಿಚೇಗೆ ಭಾರೀ ಸುದ್ದಿ ಮಾಡಿರುವ ವಿಷಯ ‘ದಲಿತ ಮುಖ್ಯಮಂತ್ರಿ’ ನೇಮಕ. ಇದಕ್ಕೆ ಕೆಲ ನಾಯಕರು ರಾಜ್ಯಾದ್ಯಾಂತ ಹೋರಾಟವನ್ನೆ ರೂಪಿಸುತ್ತಿದ್ದಾರೆ. ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ. ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ದಿಲ್ಲಿಯಲ್ಲಿರುವ ಕಾಂಗ್ರೆಸ್ ಹೈ ಕಮಾಂಡ್ ಬಳಿ 5 ಸಾವಿರ ಜನರ ನಿಯೋಗ ತೆಗದುಕೊಂಡು ಹೋಗುವುದಾಗಿ ಹೇಳಿದ್ದಾರೆ.

ಇದೆಲ್ಲ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೆ ಸರಿ. ಶತ ಶತಮಾನಗಳಿಂದ ರಾಜ್ಯ ಮತ್ತು ದೇಶದಲ್ಲಿ ದಲಿತರು, ಅಸ್ಪಶ್ಯರು ಮತ್ತು ಹಿಂದುಳಿದ ಸಮುದಾಯಗಳು ಮೇಲ್ವರ್ಗಗಳ ಶೋಷಣೆಯನ್ನು ಅನುಭವಿಸುತ್ತಲೆ ಬಂದಿವೆ. ಇಂದಿಗೂ ಅನುಭವಿಸುತ್ತಲೆ ಇವೆ. ಅದು ಸಾಮಾಜಿಕವಾಗಿ, ರಾಜಕೀಯವಾಗಿ, ಅರ್ಥಿಕವಾಗಿ, ಬೌದ್ಧಿಕವಾಗಿ ಹಿಂದುಳಿದಿರುವ ಈ ಸಮುದಾಯಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರರ ಮಾತಿನಂತೆ ರಾಜಕೀಯ ಅಕಾರ ಪಡೆಯುವ ಅನಿವಾರ್ಯತೆ ಖಂಡಿತ ಇದೆ. ಈಗಾಗಲೇ ರಾಜ್ಯದಲ್ಲಿ ಶೇ.16ರಷ್ಟಿರುವ ಲಿಂಗಾಯತರು 23 ವರ್ಷ, ಶೇ.14ರಷ್ಟಿರುವ ಒಕ್ಕಲಿಗರು 18 ವರ್ಷಗಳ ಮುಖ್ಯಮಂತ್ರಿ ಗಾದಿಯನ್ನು ಅನುಭವಿಸಿದ್ದಾರೆ. ಆದರೆ ಎಲ್ಲರಿಗಿಂತ ಹೆಚ್ಚಿರುವ ಶೋಷಿತ ವರ್ಗವಾದ ದಲಿತರು ಮಾತ್ರ ಇದುವರೆಗೂ ರಾಜ್ಯ ಮುಖ್ಯಮಂತ್ರಿಯಾಗದಿರುವುದು ದುರ್ದೈವ.ಕರ್ನಾಟಕ ಸರಕಾರ ರಚನೆಯಾಗಿ 58 ವರ್ಷಗಳು ಕಳೆದರೂ ದಲಿತರೊಬ್ಬರು ಈ ರಾಜ್ಯದ ಮುಖ್ಯಮಂತ್ರಿಯಾಗದಿರುವುದು ನಿಜಕ್ಕೂ ಬೇಸರದ ಸಂಗತಿ. ದಲಿತರನ್ನು ಕೆವಲ ವೋಟ್ ಬ್ಯಾಂಕ್‌ಗೆ ಸಿಮೀತ ಮಾಡಿಕೊಂಡು ಅವರಿಗೆ ಸರಿಯಾದ ರಾಜಕೀಯ ಅಕಾರ ನೀಡದೆ ಶೋಷಣೆ ಮಾಡಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ, ಡಿ ಮಂಜುನಾಥ್, ಕೆ. ಎಚ್. ರಂಗನಾಥ್, ಕರಿಯಣ್ಣ ಸೇರಿದಂತೆ ಹತ್ತಾರು ದಲಿತ ನಾಯಕರಿಗೆ ಈ ಹಿಂದೆ ಮುಖ್ಯಮಂತ್ರಿಯಾಗುವ ಅವಕಾಶಗಳಿದ್ದರೂ ಕೆಲ ರಾಜಕೀಯ ನಾಯಕರ ಜಾತೀಯತೆ ಮನೋಭಾವದಿಂದಾಗಿ ಅವಕಾಶ ದೊರೆಯಲಿಲ್ಲ.


ಈ ಹಿನ್ನೆಲೆಯಲ್ಲಿ ದಲಿತ ನಾಯಕರು ಮತ್ತು ಸಂಘಟನೆಗಳು ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂದು ಎಬ್ಬಿಸಿರುವ ಕೂಗೂ ಮತ್ತು ಹೋರಾಟ ನ್ಯಾಯಸಮ್ಮತವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆಯನ್ನು ಹೊಂದಿರುವ ಬಹಳಷ್ಟು ದಲಿತ ನಾಯಕರಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಸಂಸದ ಮುನಿಯಪ್ಪ ಹೀಗೆ ಅನೇಕ ನಾಯಕರು ಕಾಂಗ್ರೆಸ್ ಪಡಸಾಲೆಯಲ್ಲಿ ಸಿಎಂ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಇವರು ಯಾರು ಕೂಡ ನಾವು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಲ್ಲ. ಬದಲಾಗಿ ಈ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಈಗಿರುವ ಮುಖ್ಯಮಂತ್ರಿ ಒಳ್ಳೆಯ ಕೆಲಸ ಮಾಡುತ್ತಿದ್ದು, ಐದು ವರ್ಷಗಳ ಪೂರ್ಣಾವಗೆ ಸಿದ್ದರಾಮಯ್ಯ ಮುಖ್ಯಮಂತ್ರಿ. ಮುಂದಿನ ಚುನಾವಣೆ ವೇಳೆ ಬೇಕಾದರೆ ದಲಿತರ ನಾಯಕತ್ವದಲ್ಲೆ ಹೋಗಿ, ಮತ್ತೆ ಅಹಿಂದ ಮತಗಳನ್ನು ಒಗ್ಗೂಡಿಸಿ ವಿಜಯ ಪತಾಕೆ ಹಾರಿಸಿ ದಲಿತ ನಾಯಕನೋರ್ವನನ್ನು ಮುಖ್ಯಮಂತ್ರಿ ಮಾಡೋಣ ಎಂದು ಹೇಳುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ದಲಿತ ಸಿಎಂ ಬೇಡಿಕೆ ಇಟ್ಟಿರುವ ನಾಯಕರು ಯಾರು ಎಂಬ ಪ್ರಶ್ನೆ ಬಂದಾಗ, ಕೆಲ ಅನುಮಾನಗಳು ಸಹಜವಾಗಿ ಹುಟ್ಟತ್ತವೆ. ರಾಜ್ಯದಲ್ಲಿ ಅಹಿಂದ ಸಮುದಾಯಗಳು ಹಿಂದೆಂದೂ ಕಾಣದ ರೀತಿಯಲ್ಲಿ ಒಂದಾಗಿವೆ. ಮೇಲ್ವರ್ಗಗಳನ್ನು ಅಕಾರದಿಂದ ದೂರವಿಟ್ಟು ತಮ್ಮ ಎಲ್ಲ ಸಮುದಾಯಗಳ ನಾಯಕನನ್ನು ಮುಖ್ಯಮಂತ್ರಿ ಮಾಡಿವೆ. ಇದನ್ನು ಸಹಿಸದ ಮೇಲ್ವರ್ಗಗಳು ಯಾರಿಗೂ ತಿಳಿಯದ ರೀತಿಯಲ್ಲಿ ಕೆಲ ದಲಿತ ನಾಯಕರ ತಲೆಕೆಡಿಸಿ ‘ದಲಿತ ಸಿಎಂ ಹೋರಾಟ’ ಹೆಸರಿನಲ್ಲಿ ಕೆಲ ದಲಿತ ನಾಯಕರನ್ನು ಛೂ ಬಿಟ್ಟಿವೆ. ಇದರಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳನ್ನು, ದಲಿತರಿಂದ ದೂರ ಮಾಡಿ ರಾಜಕೀಯ ಲಾಭಕ್ಕೆ ಮುಂದಾಗಿವೆೆ. ಆ ಮೂಲಕ ಅಹಿಂದ ಸಮುದಾಯಗಳನ್ನು ದೂರ ಮಾಡಿದರೆ, ನಾವು ಅಕಾರಕ್ಕೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ನಿರತವಾಗಿವೆ. ಇದು ಅವರು ಇಲ್ಲಿಯವರೆಗೆ ನಡೆಸಿಕೊಂಡು ಬಂದ ಒಡೆದು ಆಳುವ ಕುತಂತ್ರದ ಮುಂದುವರಿದ ಭಾಗವಾಗಿದೆಯೆ ಎಂಬ ಅನುಮಾನ ಕಾಡುತ್ತಿದೆ.


ಇದಕ್ಕೆ ಪುಷ್ಟಿ ನೀಡುವಂತೆ ನಿವೃತ್ತ ಐಎಎಸ್ ಅಕಾರಿ ಕೆ. ಶಿವರಾಮ್ ಮತ್ತು ದಲಿತ ಸಮರ ಸೇನೆ ನಾಯಕ ವೆಂಕಟಸ್ವಾಮಿ ಇವರು ಪ್ರತ್ಯೇಕ ಸಂಘಟನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೆ, ಈ ಇಬ್ಬರೂ ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ .ೆ ಶಿವರಾಮ್ ಜೆಡಿಎಸ್‌ನಲ್ಲಿ ಸ್ಪರ್ಸಿದ್ದು, ಇಂದಿಗೂ ಜೆಡಿಎಸ್‌ನಲ್ಲೇ ಇದ್ದಾರೆ. ಇನ್ನು ವೆಂಕಟಸ್ವಾಮಿ ಆರ್‌ಪಿಐ(ರಿಪಬ್ಲಿಕ್ ಪಾರ್ಟಿ ಆ್ ಇಂಡಿಯಾ)ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದಾರೆ. ಈ ಎರಡು ಪಕ್ಷಗಳು ಒಂದಲ್ಲ ಒಂದು ರೀತಿಯಲ್ಲಿ ಅಹಿಂದ ಸಮುದಾಯಗಳ ವಿರೋಗಳೆ ಆಗಿವೆ. ಇದರಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಬಹುಮುಖ್ಯವಾದ ಪಾತ್ರವಹಿಸಿದ್ದು ಗೋಚರಿಸಿವೆ. ಅಸ್ಪಶ್ಯತೆ ಮತ್ತು ಮನುಸ್ಮತಿಯ ಮೇಲೆ ನಂಬಿಕೆ ಇಟ್ಟುಕೊಂಡಿರುವ ಆರೆಸ್ಸೆಸ್ ಮತ್ತು ಸಂಘಪರಿವಾರ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಯನ್ನು ಎಂದೂ ಸಹಿಸಿಲ್ಲ. ಸಿದ್ದರಾಮಯ್ಯ ಕಳೆದ ಎರಡು ವರ್ಷಗಳಲ್ಲಿ ಅಹಿಂದ ಸಮುದಾಯಗಳಿಗೆ ಭರ್ಜರಿ ಯೋಜನೆ ನೀಡಿದ್ದಾರೆ. ಹೀಗೆ ಬಿಟ್ಟರೆ ಅಹಿಂದ ವರ್ಗಗಳು ಸರಕಾರದ ಸೌಲಭ್ಯ ಪಡೆದು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತವೆ. ಆಗ ನಮ್ಮ ರಾಜಕೀಯ ತಂತ್ರಗಳು ನಡೆಯುವುದಿಲ್ಲ, ಎಂಬ ಅತಂಕ ಕೇಸರಿ ಸಂಕೇತದ ನಾಯಕರಿಗೆ ಕಾಡುತ್ತಿದೆ. ಅದಕ್ಕೆ ಕೇಂದ್ರ ಸರಕಾರದಲ್ಲಿ ತನ್ನೊಂದಿಗೆ ಭಾಗಿಯಾಗಿರುವ ರಿಪಬ್ಲಿಕ್ ಪಾರ್ಟಿ ಆ್ ಇಂಡಿಯಾ ಪಕ್ಷದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಮತ್ತು ದಲಿತ ನಾಯಕ ವೆಂಕಟಸ್ವಾಮಿಯನ್ನು ಅಸವಾಗಿಸಿಕೊಂಡು ಅಹಿಂದ ವರ್ಗಗಳನ್ನು ಛಿದ್ರಗೊಳಿಸಲು ಮುಂದಾಗಿದೆ.. ಈ ಅಂಶಗಳನ್ನು ನೋಡುವುದಾದರೆ ‘ಶತ್ರುವಿನ ಶತ್ರು ಮಿತ್ರ’ ಎಂಬ ಮಾತು ನೆನಪಿಗೆ ಬರುತ್ತದೆ. ಬಿಜೆಪಿಯ ಈ ಕುತಂತ್ರಕ್ಕೆ ಜೆಡಿಎಸ್ ಕೂಡ ಕೈಗೂಡಿಸಿರುವಂತೆ ಕಾಣುತ್ತಿದೆ. ಯಾವಾಗಲೂ ಒಂದೆ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ದೊಡ್ಡ ಗೌಡರು ಈಗಲೂ ಅದೇ ಆಟ ಆಡುತ್ತಿದ್ದಾರೆ ಅನಿಸುತ್ತಿದೆ.

ರಾಜಕೀಯ ಶತ್ರು ಸಿದ್ದರಾಮಯ್ಯರನ್ನು ಅಕಾರದಿಂದ ಕೆಳಗಿಳಿಸಿ, ಅಹಿಂದ ಸಮುದಾಯಗಳನ್ನು ಒಡೆಯುವ ದೂರಾಲೋಚನೆ ಅವರಲ್ಲಿದೆ. ಅದಕ್ಕೆ ದಲಿತ ನಾಯಕ ಮತ್ತು ಐಎಎಸ್ ನಿವೃತ್ತ ಅಕಾರಿ ಕೆ.ಶಿವರಾಮ್ರನ್ನು ಬಳಸಿಕೊಂಡು ಅಹಿಂದ ವರ್ಗಗಳನ್ನು ವಿಂಗಡಿಸುವ ಕುತಂತ್ರ ನಡೆಸಿದೆ. ದಲಿತ ನಾಯಕರನ್ನು ಮುಂದೆ ಬಿಟ್ಟು ಹೋರಾಟ ನಡೆಸಿದ್ರೆ, ಸರಕಾರ ಕೆಡವಿದ ಕೆಟ್ಟ ಹೆಸರು ನಮಗೆ ಬರುವುದಿಲ್ಲ. ಜೊತೆಗೆ ಸಿದ್ದರಾಮಯ್ಯರನ್ನು ಅಕಾರದಿಂದ ಕೆಳಗಿಳಿಸಿದರು ಮತ್ತು ಅಹಿಂದ ಸಮುದಾಯಗಳನ್ನು ಒಡೆದರು ಎಂಬ ಅದರ ಪೂರ್ಣ ಹೊಣೆ ಈ ದಲಿತ ನಾಯಕರ ಮೇಲೆ ಹಾಕಬಹುದು. ಇನ್ನ್ನು ಮುಂದಿನ ಚುನಾವಣೆಗಳಲ್ಲಿ ಮೇಲ್ವರ್ಗಗಳ ಮತಗಳೊಂದಿಗೆ ಒಡೆದು ಹೋದ ಅಹಿಂದ ಮತಗಳನ್ನು ಪಡೆದು ಇನ್ನೊಂದು ಮೇಲ್ ವರ್ಗದ ವ್ಯಕ್ತಿಯನ್ನು ಅಕಾರಕ್ಕೆ ತರಬಹುದಲ್ಲವೆ. ಸಮಾಜದ ಶೋಷಿತ ಸಮುದಾಯಗಳಲ್ಲಿ ಮೊದಲಿನ ಸಾಲಿನಲ್ಲಿರುವ ದಲಿತ ಸಮುದಾಯದ ಒಬ್ಬ ವ್ಯಕ್ತಿ ರಾಜ್ಯದಲ್ಲಿ ಸಿಎಂ ಆಗಬೇಕೆಂಬ ಮಾತಿನಲ್ಲಿ ಯಾವುದೇ ತಪ್ಪಿಲ್ಲ. ಹಾಗೆ ನೋಡಿದ್ರೆ ಈಗಾಗಲೇ ರಾಜ್ಯದಲ್ಲಿ ಅತ್ಯುನ್ನತ ಮುಖ್ಯಮಂತ್ರಿ ಗಾದಿ ದೊರಕಬೇಕಾಗಿತ್ತು. ಆದರೆ ಮೇಲ್ವರ್ಗಗಳ ಕುತಂತ್ರದಿಂದಾಗಿ ಆ ಅವಕಾಶ ತಪ್ಪುತ್ತ ಬಂದಿದೆ. ಆದರೆ ದುರಂತವೆಂದರೆ ಈ ‘ದಲಿತ ಮುಖ್ಯಮಂತ್ರಿಯ ಬಾಣ’ ಮತ್ತೋರ್ವ ಶೋಷಿತ ಸಮುದಾಯದ ನಾಯಕ ಸಿಎಂ ಆಗಿರುವ ವೇಳೆ ಬೀಳುತ್ತಿರುವುದು ಮಾತ್ರ ನಿಜಕ್ಕೂ ಶೋಚನಿಯ.

ಒಂದು ಮಾತಿದೆ ಸಿಂಹ, ಹುಲಿಗಳಿಗೆ ಒಗ್ಗೂಡಿ ಬದುಕುವ ಅಗತ್ಯವಿಲ್ಲ ಯಾಕೆಂದರೆ ಅವುಗಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಶಕ್ತಿ ಇರುತ್ತದೆ. ಒಗ್ಗೂಡಿ ಬದುಕುವ ಅನಿವಾರ್ಯತೆ ಇರುವುದು ಜಿಂಕೆ, ಮೊಲ, ಸಾರಂಗದಂತಹ ಬಲಹೀನ ಪ್ರಾಣಿಗಳಿಗೆ. ಈ ಮಾತಿನ ಅರ್ಥ ರಾಜ್ಯದ ಜಾತಿ ವ್ಯವಸ್ಥೆಗೂ ಅನ್ವಯವಾಗುತ್ತದೆ. ರಾಜ್ಯದಲ್ಲಿರುವ ಮೇಲ್ಜಾತಿಗಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುತ್ತವೆ. ಆದರೆ ಸಮಾಜದ ಸಣ್ಣಪುಟ್ಟ ಮತ್ತು ಶೋಷಿತ ಸಮುದಾಯಗಳಿಗೆ ತಮ್ಮ ರಕ್ಷಣೆ ಮಾಡಿಕೊಳ್ಳಲು ‘ಅಹಿಂದ’ ಎಂಬ ಈಡಿಗಟ್ಟಿನ ಸಂಘಟನೆ ಅಗತ್ಯವಿದೆ. ದಲಿತ ಮುಖ್ಯಮಂತ್ರಿ ಕೇಳುತ್ತಿರುವ ಕೆಲ ದಲಿತ ನಾಯಕರು ಮೇಲ್ವರ್ಗಗಳ ಈ ಕುತಂತ್ರವನ್ನು ಅರ್ಥ ಮಾಡಿಕೊಂಡು, ಕೆಲವರ ಹುನ್ನಾರಕ್ಕೆ ಹರಕೆಯ ಕುರಿಯಾಗದಿರಲಿ ಎಂಬುದು ಎಲ್ಲಾ ಅಹಿಂದ ಸಮುದಾಯಗಳ ಆಶಯ.

1 comment:

  1. ಈ ಲೇಖನ ಕಂಡು ನಗು ಬರುತ್ತಿದೆ. ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಬೇಡಿಕೆ ಸಿದ್ದರಾಮಯ್ಯ ಮುಖ್ಯ ಮಂತ್ರಿ ಆಗುವ ಮುಂಚಿಯಿಂದಲೇ ಕೆಳುಬಂದಿತ್ತು. ತಮ್ಮದೇ ಪಕ್ಷದವರ ಹುನ್ನಾರದಿಂದ ಪರಮೇಶ್ವರ ಚುನಾವಣೆಯಲ್ಲಿ ಸೋತಿರದಿದ್ದರೆ ನ್ಯಾಯಯುತವಾಗಿ ಮುಖಮಂತ್ರಿ ಪದವಿಗೆರುತ್ತಿದ್ದರು.

    ಪ್ರಸ್ತಕ್ತ ಮುಖ್ಯಮಂತ್ರಿಗಳು ಅಹಿಂದ ವೇದಿಕೆ ತಮ್ಮ ರಾಜಕೀಯ ಭವಿಷ್ಯಕ್ಕೆ ಬಳಸಿಕೊಂಡಿದ್ದಾರೆ ಹೊರತು ನಿಜವಾಗಿಯುವು ಅವರಿಗೆ ಹಿಂದುಳಿದರವರ ಮೇಲಿನಿ ಕಾಳಜಿಯಿಂದಲ್ಲ. ನ್ಯಾಯುತ ಬೇಡಿಕೆಗಾಗಿ ಪ್ರತಿಭಟಿಸಿದ್ದ ವಿಧ್ಯಾರ್ಥಿಗಳ ಮೇಲೆ ಪೋಲಿಕಾರಿಂದ ಒದೆಸಿದ ಸರ್ಕಾರ ಅಹಿಂದ ರಕ್ಷಣೆ ಮಾಡುತ್ತಿದೆ ಎಂದರೆ ನಂಬಲು ಸಾಧ್ಯವಿಲ್ಲ. ಇಲ್ಲಿವರೆಗೆ ಈ ಘನ ಸರ್ಕಾರ ಅಹಿಂದ ಜನರಿಗೆ ಏನು ಮಾಡಿದೆ.

    ಈಗಿನ ಮುಖ್ಯಮಂತ್ರಿ ಮುಂದುವರೆದರೆ ತಪ್ಪೇನಿಲ್ಲ ಆದರೆ ದಲಿತ ಮುಖ್ಯಮಂತ್ರಿ ಬೇಡಿಕೆ ಒಂದು ಹುನ್ನಾರ ಎಂಬ ವಿಶ್ಲೇಷಣೆ ರಹಿತ ಹೇಳಿಕೆ

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...