Thursday, June 04, 2015

ಸಾವಳಗಿ ಸನತ್‌ಗೆ ಶಾಮಣ್ಣ ಪ್ರಶಸ್ತಿ.ಮಲ್ಲಿಕಾರ್ಜುನ ಹೆಗ್ಗಳಗಿ


ಸಮತಾವಾದಿ ಚಿಂತನೆಯ ಹಿರಿಯ ಪತ್ರಕರ್ತ ಸನತ್ಕುಮಾರ ಬೆಳಗಲಿ ಅವರು ವ್ಯವಸ್ಥೆಯೊಂದಿಗೆ ಎಂದೂ ರಾಜಿಮಾಡಿಕೊಳ್ಳದ, ಅಧಿಕಾರಸ್ಥರನ್ನು ಓಲೈಸದ ತಮ್ಮ ಮೊಣಚು ಬರಹಗಳಿಂದ ರಾಜ್ಯದ ಪತ್ರಿಕಾವಲಯದಲ್ಲಿ ಹೆಸರು ಮಾಡಿದ್ದಾರೆ.


ಸುಮಾರು ನಾಲ್ಕು ದಶಕಕಾಲ ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರಿನ ಪ್ರಮುಖ ಪತ್ರಿಕೆಗಳಲ್ಲಿ ಕೆಲಸಮಾಡಿ ಈಗ ಅವರು ನಿವೃತ್ತರಾಗಿ ಬೆಂಗಳೂರಲ್ಲಿಯೇ ನೆಲಸಿದ್ದಾರೆ. ಅವರು ಬರೆಯುವ ಹವ್ಯಾಸ ಉಳಿಸಿಕೊಂಡು ಈಗಲೂ ಪತ್ರಿಕೆಗಳಿಗೆ ಆಗಾಗ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ.

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕ ಸಾವಳಗಿ ಸನತಕುಮಾರ ಅವರ ಹುಟ್ಟೂರು. ಅಲ್ಲಿನ ಧರ್ಮಣ್ಣ ಬೆಳಗಲಿ ಮತ್ತು ಕೃಷ್ಟಾಬಾಯಿ ದಂಪತಿಗಳ ನಾಲ್ವರ ಮಕ್ಕಳ ಪೈಕಿ ಇವರು ಎರಡನೇ ಅವರು. ತಂದೆ ಧರ್ಮಣ್ಣಾ ಬೆಳಗಲಿ ಹಾಗೂ ಇವರ ಕಕಂ್ಕದಿರೆಲ್ಲ ಸ್ವಾತಂತ್ಯ ಯೋಧರು. ದೇಶಕ್ಕಾಗಿ ಸ್ವಂತದ ಆಸ್ತಿ ಪಾಸ್ತಿ ಕಳೆದುಕೊಂಡು ಕಷ್ಟ ಅನುಭವಿಸಿದವರು. ಸನತಕುಮಾರ ಅವರ ಮೇಲೆ ಅವರ ಕುಟುಂಬ ಹಿರಿಯ ಗಾಡ ಪ್ರಭಾವ ಇದೆ.


ಸನತಕುಮಾರ ಅವರ ಒಂದು ರೋಚಕ ಬರಹ ಅವರನ್ನು ಪತ್ರಿಕಾ ವೃತ್ತಿಗೆ ಕರೆತಂದಿತು. ಪದವಿ ಪರಿಕ್ಷೆ ಪಾಸಾದ ನಂತರ ಸಿ.ಪಿ.ಐ. ಪಕ್ಷದ ಸಂಘಟನೆಯಲ್ಲಿ ತೊಡಗಿದರು. 1970-80 ರ ದಶಕದಲ್ಲಿ ಉತ್ತರ ಕನರ್ಾಟಕ ಹಳ್ಳಿಗಲ್ಲಿ ಹನಮಂತ ದೇವರ ಓಕುಳಿ ಆಚರಣೆ ಬಹು ಜೋರಾಗಿ ನಡೆಯುತ್ತಿತು. ಓಕಳಿಯ ಧಾಮರ್ಿಕ ಆಚರಣೆಯ ಹೆಸರಿನಲ್ಲಿ ಕೆಳವರ್ಗದ ಮಹಿಳೆಯರಿಗೆ ಹಾಡು ಹಗಲೆ ನಡು ಬೀದಿಯಲ್ಲಿ ರಾಡಿಯ ಹೊಲಸು ನೀರನ್ನು ಎರಚಲಾಗುತ್ತಿತು. 1975ರ ಜೂನ ತಿಂಗಳಲ್ಲಿ ಸಾವಳಗಿ ಗ್ರಾಮದಲ್ಲಿ ನಡೆದ ಓಕುಳಿಯಲ್ಲಿ ದಲಿತ ಮಹಿಳೆಯರಿಗೆ ಮೇಲು ಜಾತಿಯ ಗಂಡಸರು ಹಾಡು ಹಾಗಲೇ ನಡುಬೀದಿಯಲ್ಲಿ ರಾಡಿ ನೀರು ಎರಚಿ ಕೇಕೆ ಹಾಕಿ ಕುಣಿದಾಡಿದರು. ಸುಮಾರು ಎರಡು ತಾಸು ಈ ಅನಾಗರಿಕ ಆಚರಣೆ ನಡೆಯಿತು. ಗ್ರಾಮದ ಜನರು ಹಾಗೂ ಅನೇಕ ಮಹಿಳೆಯರೂ ಈ ಓಕುಳಿ ನೋಡಿ 'ಎಂಜಾಯ್' ಮಾಡಿದರು. ಆದರೆ ಇದನ್ನು ಪ್ರತ್ಯಕ್ಷ ಕಂಡ ಸನತ್ಕುಮಾರ ಅವರ ಮನ ಕಲುಕಿತು. ಇದೊಂದು ಅನಾಗರಿಕ ಆಚರಣೆ ಇದನ್ನು ಖಂಡಿಸಲೇ ಬೇಕು ಎಂದು ಅವರು ನಿರ್ಧರಿಸಿದರು. ಮರುದಿನ ಸಂಯುಕ್ತ ಕನರ್ಾಟಕ ಪತ್ರಿಕೆಗೆ ಓಕುಳಿ ಅನಾಗರಿಕ ಆಚರಣೆ ಖಂಡಿಸಿ ಜನಮನಕ್ಕೆ ಪತ್ರ ಬರೆದರು. ಸಾವಳಗಿ ಭಾರತದ ಉಪರಾಷ್ಟ್ರಪತಿ - ಹಂಗಾಮಿ ರಾಷ್ಟ್ರಪತಿಯಾಗಿದ್ದ ಬಿ. ಡಿ. ಜತ್ತಿ ಅವರ ಹುಟ್ಟೂರು. ಓಕಳಿ ನಡೆದ ಸಂದರ್ಭದಲ್ಲಿ ಜತ್ತಿ ಅವರೇ ಹಂಗಾಮಿ ರಾಷ್ಟ್ರಪತಿಯಾಗಿದ್ದರು.

ಪತ್ರಿಕೆಗೆ ಬರೆದ ಬರಹದಲ್ಲಿ ಹಂಗಾಮಿ ರಾಷ್ಟ್ರಪತಿಗಳ ಹುಟ್ಟೂರಲ್ಲಿ ಅನಾಗರಿಕವಾಗಿ ಓಕಳಿ ಆಚರಣೆ ನಡೆಯುತ್ತಿದೆ. ದಲಿತ ಬಡ ಮಹಿಳೆಯರು ಅಲ್ಪಸ್ವಲ್ಪ ಹಣದ ಆಮಿಷಕ್ಕಾಗಿ ನಡುಬೀದಿಯಲ್ಲಿ ನಿಂತು ಗಂಡಸರಿಂದ ರಾಡಿ ನೀರು ಉಗ್ಗಿಸಿಕೊಳ್ಳುತ್ತಾರೆ. ಇದೆಲ್ಲ ದೇವರ ಹೆಸರಿನಲ್ಲಿ ನಡೆಯುವ ಅನಾಗರಿಕ, ಅಮಾನವೀಯ, ಆಚರಣೆಯಾಗಿದೆ. ಇದು ನಿಲ್ಲಬೇಕು ಎಂದು ಅವರು ಲೇಖನದಲ್ಲಿ ಆಗ್ರಹ ಮಾಡಿದ್ದರು.

ಈ ಪತ್ರ ಸಂಯುಕ್ತ ಕನರ್ಾಟಕ ಪತ್ರಿಕೆಯ ಮುಖ ಪುಟದ ಮೇಲ್ಭಾಗದಲ್ಲಿ 'ಓಕಳಿಯಲ್ಲಿ ದುಶ್ಯಾಸನರ ಕೇಕೇ' ಎಂಬ ತಲೆ ಬರಹದಲ್ಲಿ ದಿನಾಂಕ: 19/06/1975 ರ ಸಂಚಿಕೆಯಲ್ಲಿ ಪ್ರಕಟವಾಯಿತು. ಈ ಬರಹ ನಾಡಿನ ಪ್ರಜ್ಞಾವಂತರ ಗಮನ ಸೆಳೆಯಿತು. ಕನರ್ಾಟಕ ತುಂಬ ಪ್ರತಿಭಟನೆ ನಡೆಯತೊಡಗಿದವು. ಆಗ ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬಿ ಬಸಲಿಂಗಪ್ಪ, ಕೆ. ಎಚ್. ರಂಗನಾಥ, ವಿರಪ್ಪ ಮೋಯಿಲಿ, ಸಚಿವರಾಗಿದ್ದರು. ಸಂಯುಕ್ತ ಕನರ್ಾಟಕದಲ್ಲಿ ಪ್ರಕಟವಾದ ಈ ಪತ್ರ ಹಾಗೂ ಜನರ ಪ್ರತಿಭಟನೆಯನ್ನು ಗಮನಿಸಿ ತಕ್ಷಣ ಓಕಳಿ ನಿಷೇಧಿಸಿ ಆಜ್ಞೆ ಹೊರಡಿಸಿದರು.
Rahul Belagali's photo.

ಈ ಲೇಖನ ಬರೆದಿದ್ದಕ್ಕೆ ಆಗ ಸಾವಳಗಿಯ ಜನ ಸನತ್ಕುಮಾರ ಅವರಿಗೆ ವಿಪರೀತ ಕಿರುಕುಳ ನೀಡಿದರು. ಇದನ್ನೇಲ್ಲ ಯಾಕೆ ಬರೆದೆ ? ಓಕುಳಿ ನಿಲ್ಲಿಸಿದರೆ ಮಳೆ ಯಾಗುವುದಿಲ್ಲ. ಬೆಳೆ ಬರುವದಿಲ್ಲ ಎಂದೂ ಟೀಕಿಸತೊಡಗಿದರು. ಅವರಿಗೆ ಜೀವ ಬೆದರಿಕೆ ಕೂಡ ಹಾಕಲಾಯಿತು. ಇದನ್ನೇಲ್ಲ ಗಮನಿಸಿದ ಸಂಯುಕ್ತ ಕನರ್ಾಟಕ ಪತ್ರಿಕೆ ಸನತ್ಕುಮಾರವನ್ನು ಉಪ ಸಂಪಾದಕ ಎಂದು ನೇಮಕ ಮಾಡಿಕೊಂಡು ರಕ್ಷಣೆ ಒದಗಿಸಿತು. ಹೀಗೆ ಸನತ್ಕುಮಾರ ಪತ್ರಿಕಾರಂಗ ಪ್ರವೇಶಿಸಿದರು.

ಪತ್ರಿಕೋದ್ಯಮ ಒಂದು ಸೇವೆ ಜನರ ನೋವಿಗೆ ಧ್ವನಿ ನೀಡುವ ಅವಕಾಶ ಎಂದು ನಂಬಿಕೊಂಡು ಅವರು ದೀರ್ಘಕಾಲ ಪತ್ರಿಕಾರಂಗದಲ್ಲಿ ದುಡಿದಿದ್ದಾರೆ. ಸಮಾಜವಾದ ಚಿಂತನೆ, ಮೂಢ ನಂಬಿಕೆಗಳ ಖಂಡನೆ ಹಾಗೂ ಜನಪರ ಹೋರಾಟಗಳನ್ನು ಬೆಂಬಲಿಸಿ ಅವರು ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ.

ಸನತಕುಮಾರ ಖ್ಯಾತ ಪತ್ರಕರ್ತ ದಿ. ಖಾದ್ರಿ ಶಾಮಣ್ಣ ಅವರ ಆತ್ಮೀಯ ಶಿಷ್ಯರಾಗಿದ್ದರು. ಸನತ್ ಅವರು ಓಕಳಿ ಆಚರಣೆ ಖಂಡಿಸಿ ಲೇಖನ ಬರೆದಾಗ ಖಾದ್ರಿ ಅವರೇ ಸಂಯುಕ್ತ ಕನರ್ಾಟಕ ಸಂಪಾದಕರಾಗಿದ್ದರು. ಈಗ ಸನತ್ ಅವರಿಗೆ ದಿ. ಖಾದ್ರಿ ಶಾಮಣ್ಣ ಪ್ರಶಸ್ತಿ ಲಭಿಸಿರುವುದು ನಿಜಕ್ಕೂ ಅರ್ಹ ವ್ಯಕ್ತಿಗೆ ಸಂದ ಗೌರವಾಗಿದೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...