Wednesday, October 21, 2015

ಹಿಂದುತ್ವವಾದಿ ಫ್ಯಾಶಿಸಂಗೆ ಯಹೂದಿವಾದದ ಸ್ವಾಭಾವಿಕ ನಂಟು
ಆನಂದ್ ಸಿಂಗ್

  ಹಿಂದುತ್ವವಾದಿ ಫ್ಯಾಶಿಸಂಗೆ ಯಹೂದಿವಾದದ ಸ್ವಾಭಾವಿಕ ನಂಟುಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆ ನ್ಯೂಯಾರ್ಕ್‌ನಲ್ಲಿ ನಡೆದಾಗ, ಮೋದಿಯವರು ಗುಜರಾತ್ ಹತ್ಯಾಕಾಂಡದ ರಕ್ತದ ಕಲೆಗಳು ಅಂಟಿದ್ದ ಕೈಯಿಂದ ನೆತನ್ಯಾಹು ಅವರ ಹಸ್ತಲಾಘವ ಮಾಡಿದರು. ಬಹುಶಃ ಗಾಝಾಪಟ್ಟಿಯ ಅಮಾಯಕರ ಹತ್ಯಾಕಾಂಡದಿಂದ ಪ್ರಭಾವಿತರಾಗಿರಬೇಕು. ನೆತನ್ಯಾಹು ಎಷ್ಟರಮಟ್ಟಿಗೆ ಪುಳಕಿತರಾದರು ಎಂದರೆ ಕಳೆದು ಹೋಗಿದ್ದ ತಮ್ಮ ಮಲ ಸಹೋದರ ಸಿಕ್ಕಿದಷ್ಟು ಅವರಿಗೆ ಖುಷಿಯಾಗಿದ್ದಿರಬೇಕು. ತಕ್ಷಣ ಮೋದಿಯವರನ್ನು ಇಸ್ರೇಲ್‌ಗೆ ಆಹ್ವಾನಿಸಿದರು. ಈ ಮೊದಲೇ ಗುಜರಾತ್ ಮುಖ್ಯಮಂತ್ರಿಯಾಗಿ ಇಸ್ರೇಲ್‌ಗೆ ಭೇಟಿ ನೀಡಿದ್ದ ಮೋದಿ, ಪ್ರಧಾನಿಯಾಗಿಯೂ ಆ ದೇಶಕ್ಕೆ ಮೊದಲ ಭೇಟಿ ನೀಡಿದರು. 

ಕಳೆದ ವರ್ಷ ಇಸ್ರೇಲ್, ಗಾಝಾಪಟ್ಟಿಯ ಮೇಲೆ ಬಾಂಬ್‌ದಾಳಿ ಮಾಡುವ ಮೂಲಕ ಇತಿಹಾಸದ ಅತ್ಯಂತ ಬರ್ಬರ ಹತ್ಯಾಕಾಂಡಕ್ಕೆ ಕಾರಣವಾದಾಗ, ಭಾರತವೂ ಸೇರಿದಂತೆ ವಿಶ್ವಾದ್ಯಂತ ನ್ಯಾಯಪ್ರಿಯ ಜನತೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆದರೆ ಇದೇ ವೇಳೆಗೆ ಭಾರತದ ಹುಚ್ಚು ಉನ್ಮಾದದ ಹಿಂದುತ್ವವಾದಿ ಫ್ಯಾಶಿಸ್ಟರ ವಿಜಯ ಅಟ್ಟಹಾಸ ಅಧಿಕಾರದ ಪ್ರತಿಹಂತದಲ್ಲೂ ಉತ್ತುಂಗದಲ್ಲಿತ್ತು. ಮೋದಿ ನೇತೃತ್ವದಲ್ಲಿ ಹಿಂದುತ್ವವಾದಿ ಫ್ಯಾಶಿಸ್ಟರು ಅಧಿಕಾರದ ಚುಕ್ಕಾಣಿ ಹಿಡಿದು ಇದೀಗ ವರ್ಷ ಸಂದಿದೆ. ಬಿಜೆಪಿ ಸರಕಾರ ಕಳೆದ ಒಂದು ವರ್ಷದಲ್ಲಿ ತನ್ನ ನಡತೆಯ ಮೂಲಕ ಹಿಂದುತ್ವವಾದಿ ಫ್ಯಾಶಿಸ್ಟರು ಮತ್ತು ಯಹೂದಿವಾದಿಗಳ ನಡುವೆ ಸೈದ್ಧಾಂತಿಕ ಸಂಪರ್ಕ ಇದೆ ಎನ್ನುವುದನ್ನು ಖಚಿತಪಡಿಸಿದೆ. ಈ ಸ್ನೇಹಪರತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಸ್ನೇಹಾಚಾರದ ಕುರುಹಾಗಿ, ಕಳೆದ ಮೂರು ತಿಂಗಳಲ್ಲಿ ಮೂರು ಬಾರಿ ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ಮತ ಚಲಾಯಿಸುವ ಬದಲು ಮತದಾನದಿಂದ ಹೊರಗೆ ಉಳಿದಿದೆ.


1992ರಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ನವ ಉದಾರೀಕರಣದ ಹಾದಿ ಹಿಡಿದ ಸಂದರ್ಭದಲ್ಲಿ ಇಸ್ರೇಲ್ ಜತೆ ರಾಜತಾಂತ್ರಿಕ ಸಂಬಂಧವನ್ನು ಆರಂಭಿಸಿದಾಗ ಭಾರತ ಹಾಗೂ ಇಸ್ರೇಲ್ ನಡುವಿನ ಸಂಬಂಧ ಗಟ್ಟಿ ನೆಲೆ ಕಂಡುಕೊಂಡಿತು. ಇದಾದ ಬಳಿಕ ಎಚ್.ಡಿ.ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರಕಾರ ಬರಾಕ್ ಕ್ಷಿಪಣಿ ಒಪ್ಪಂದ ಮಾಡಿಕೊಂಡಿತು. ಇದು ಉಭಯ ದೇಶಗಳ ನಡುವಿನ ರಕ್ಷಣಾ ಸಂಬಂಧಕ್ಕೆ ನಾಂದಿಯಾಯಿತು. ಇನ್ನೊಂದು ಗಮನಾರ್ಹ ಅಂಶವೆಂದರೆ ಸಂಸದೀಯ ಮತ್ತು ಹುಸಿ ಕಮ್ಯುನಿಸ್ಟರು ಸರಕಾರದ ಭಾಗವಾಗಿದ್ದು, ಗೃಹಖಾತೆಯಂಥ ಪ್ರಮುಖ ಖಾತೆ ಹೊಂದಿದ್ದರು. ನಂತರ ಬಂದ ಅಟಲ್ ಬಿಹಾರಿ ವಾಜಪೇಯಿ ಸರಕಾರ ಇಸ್ರೇಲ್ ಜತೆಗಿನ ಸಂಬಂಧವನ್ನು ಹೊಸ ಎತ್ತರಕ್ಕೆ ಒಯ್ದಿತು. ಇದೇ ವೇಳೆಗೆ ಇಸ್ರೇಲ್‌ನ ನರಭಕ್ಷಕ ಪ್ರಧಾನಿ ಏರಿಯಲ್ ಶರೋನ್ ಭಾರತಕ್ಕೆ ಭೇಟಿ ನೀಡಿದರು. ಇದು ಇಸ್ರೇಲ್ ಪ್ರಧಾನಿಯೊಬ್ಬರ ಮೊಟ್ಟಮೊದಲ ಭಾರತ ಭೇಟಿ. 2004ರಿಂದ 2014ರ ನಡುವೆ, ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲೂ ಇಸ್ರೇಲ್ ಜೊತೆಗಿನ ರಕ್ಷಣಾ ಸಂಬಂಧವನ್ನು ವಿಸ್ತರಿಸುವ ಪ್ರಕ್ರಿಯೆ ಯಾವುದೇ ತಡೆ ಇಲ್ಲದೆ ಮುಂದುವರಿಯಿತು.


ಕಳೆದ ವರ್ಷ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಇಸ್ರೇಲ್ ಜತೆಗಿನ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನ ಆರಂಭವಾ ಯಿತು. ಗಾಝಾಪಟ್ಟಿಯ ಮೇಲೆ ಇಸ್ರೇಲ್ ಬಾಂಬ್‌ದಾಳಿ ನಡೆಸುವ ವೇಳೆ, ಬಹುಶಃ ತಮ್ಮ ಯಹೂದಿವಾದಿ ಗೆಳೆಯರಿಗೆ ಇರಿಸು ಮುರಿಸು ಆಗಬಹುದು ಎಂಬ ಕಾರಣಕ್ಕೆ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲೂ ಹಿಂದುತ್ವವಾದಿಗಳು ಅವಕಾಶ ನಿರಾಕರಿಸಿದರು. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯಸಭೆ ನ್ಯೂಯಾರ್ಕ್‌ನಲ್ಲಿ ನಡೆದಾಗ, ಮೋದಿಯವರು ಗುಜರಾತ್ ಹತ್ಯಾಕಾಂಡದ ರಕ್ತದ ಕಲೆಗಳು ಅಂಟಿದ್ದ ಕೈಯಿಂದ ನೆತನ್ಯಾಹು ಅವರ ಹಸ್ತಲಾಘವ ಮಾಡಿದರು. ಬಹುಶಃ ಗಾಝಾಪಟ್ಟಿಯ ಅಮಾಯಕರ ಹತ್ಯಾಕಾಂಡದಿಂದ ಪ್ರಭಾವಿತರಾಗಿರಬೇಕು. ನೆತನ್ಯಾಹು ಎಷ್ಟರಮಟ್ಟಿಗೆ ಪುಳಕಿತರಾದರು ಎಂದರೆ ಕಳೆದು ಹೋಗಿದ್ದ ತಮ್ಮ ಮಲ ಸಹೋದರ ಸಿಕ್ಕಿದಷ್ಟು ಅವರಿಗೆ ಖುಷಿಯಾಗಿದ್ದಿರಬೇಕು. ತಕ್ಷಣ ಮೋದಿಯವರನ್ನು ಇಸ್ರೇಲ್‌ಗೆ ಆಹ್ವಾನಿಸಿದರು. ಈ ಮೊದಲೇ ಗುಜರಾತ್ ಮುಖ್ಯಮಂತ್ರಿಯಾಗಿ ಇಸ್ರೇಲ್‌ಗೆ ಭೇಟಿ ನೀಡಿದ್ದ ಮೋದಿ, ಪ್ರಧಾನಿಯಾಗಿಯೂ ಆ ದೇಶಕ್ಕೆ ಮೊದಲ ಭೇಟಿ ನೀಡಿದರು.
ಮೋದಿ- ನೆತನ್ಯಾಹು ಭೇಟಿ ಬಳಿಕ ರಕ್ಷಣಾ ಖರೀದಿ ಮಂಡಳಿ 800 ಕೋಟಿ ರೂಪಾಯಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಅನುಮೋದನೆ ನೀಡಿತು. ಈ ಪೈಕಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ಸಬ್‌ಮೆರಿನ್‌ಗಳನ್ನು ನೌಕಾಪಡೆಗೆ ಖರೀದಿಸಲು ಯೋಜನೆಯಲ್ಲಿ ಅನುಮತಿ ನೀಡಲಾಗಿತ್ತು. 320 ದಶಲಕ್ಷ ರೂಪಾಯಿ ವೆಚ್ಚದಲ್ಲಿ 8000 ಸ್ಪೈಕ್, ಇಸ್ರೇಲ್ ನಿರ್ಮಿತ ಟ್ಯಾಂಕ್ ನಿರ್ದೇಶಿತ ಕ್ಷಿಪಣಿ ತಡೆಸಾಧನಗಳ ಖರೀದಿಗೆ ಒಪ್ಪಿಗೆ ನೀಡಲಾಯಿತು. ಇದನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಸುದೀರ್ಘ ಕಾಲದಿಂದ ಹವಣಿಕೆ ನಡೆಸುತ್ತಿತ್ತು. ಅಮೆರಿಕದ ರಕ್ಷಣಾ ಸಚಿವ ಚುಕ್ ಹಗೆಲ್ ಅವರು ತಮ್ಮ ಭಾರತ ಭೇಟಿಯ ವೇಳೆ, ಈ ಕ್ಷಿಪಣಿಗಳನ್ನು ಭಾರತಕ್ಕೆ ಮಾರಾಟ ಮಾಡಲು ಸಾಕಷ್ಟು ಲಾಬಿ ನಡೆಸಿದ್ದರು. ಆದರೆ ಅಮೆರಿಕನ್ ಕ್ಷಿಪಣಿಗಳ ಬದಲು ಇಸ್ರೇಲ್ ಕ್ಷಿಪಣಿಗಳಿಗೆ ಆದ್ಯತೆ ನೀಡಿರುವ ಕ್ರಮದಿಂದ ಹಿಂದುತ್ವವಾದಿಗಳು ಹಾಗೂ ಯಹೂದಿವಾದಿಗಳ ನಡುವಿನ ಸಂಬಂಧ ಸ್ಪಷ್ಟವಾಗಿ ತಿಳಿಯುತ್ತದೆ. ಭವಿಷ್ಯದಲ್ಲಿ ಭಾರತಕ್ಕೆ ಮತ್ತಷ್ಟು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಇರಾನ್ ಡೋಮ್ ಮಾರಾಟ ಮಾಡಲು ಇಸ್ರೇಲ್ ಉದ್ದೇಶಿಸಿದೆ.


ಕಳೆದ ವರ್ಷದ ನವೆಂಬರ್ ಆರಂಭದಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಇಸ್ರೇಲ್‌ಗೆ ಭೇಟಿ ನೀಡಿದರು. 2000ನೆ ಇಸ್ವಿಯಲ್ಲಿ ಲಾಲ್‌ಕೃಷ್ಣ ಅಡ್ವಾಣಿ ಭೇಟಿ ನೀಡಿದ ಬಳಿಕ ಆ ದೇಶಕ್ಕೆ ಪ್ರವಾಸ ಕೈಗೊಂಡ ಮೊಟ್ಟಮೊದಲ ಗೃಹಸಚಿವ ಇವರು. ತಮ್ಮ ಭೇಟಿಯ ವೇಳೆ ಇಸ್ರೇಲಿನ ರಕ್ಷಣಾ ಕಂಪೆನಿಗಳಿಗೆ ಭೇಟಿ ನೀಡಿ, ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದರು. ಇಸ್ರೇಲ್ ರಕ್ಷಣಾ ಸಚಿವ ಮೋಸೆ ಯಾಲೊನ್ ಜೊತೆಗಿನ ಭೇಟಿ ವೇಳೆ, ರಕ್ಷಣಾ ವಲಯದ ನೇರ ವಿದೇಶಿ ಬಂಡವಾಳದ ವಿಚಾರದಲ್ಲಿ ಮೋದಿ ಸರಕಾರ ವಿಶೇಷ ವಿನಾಯಿತಿಗಳನ್ನು ನೀಡುತ್ತಿದೆ ಎಂದು ಸ್ಪಷ್ಟಪಡಿಸಿದರು. ರಕ್ಷಣಾ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸುವ ಇಂಗಿತವನ್ನು ಇಸ್ರೇಲ್ ರಕ್ಷಣಾ ಸಚಿವರು ವ್ಯಕ್ತಪಡಿಸಿದರು. ತಮ್ಮ ಭೇಟಿ ವೇಳೆ ರಾಜನಾಥ್‌ಸಿಂಗ್ ಅವರು ಗಾಝಾಪಟ್ಟಿಯ ಗಡಿಭಾಗದ ಇಸ್ರೇಲಿ ಮಿಲಿಟರಿ ಚೆಕ್‌ಪಾಯಿಂಟ್‌ಗಳಿಗೂ ಭೇಟಿ ನೀಡಿದ್ದರು. ಇಸ್ರೇಲಿ ಸೇನೆ ಗಡಿಭದ್ರತೆಗಾಗಿ ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ರಾಜನಾಥ್ ಸಿಂಗ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು. ಇದರಲ್ಲಿ ದೂರಗಾಮಿ ಹಗಲು- ರಾತ್ರಿ ಕ್ಯಾಮರಾ ವೀಕ್ಷಣಾ ವ್ಯವಸ್ಥೆಯೂ ಸೇರಿದೆ. ಇದಕ್ಕೆ ಹೊರತಾಗಿ ರಾಜನಾಥ್‌ಸಿಂಗ್ ಅವರು, ಗಡಿಭಾಗದಲ್ಲಿ ಹಲವು ಕಿಲೋಮೀಟರ್‌ಗಳವರೆಗೂ ಚಲನ ವಲನಗಳ ಮೇಲೆ ನಿಗಾ ವಹಿಸುವ ರಾಡಾರ್ ವ್ಯವಸ್ಥೆಯ ಬಗ್ಗೆಯೂ ಪ್ರಭಾವಿತರಾದರು. ಇದರ ಜತೆಗೆ ಗಾಝಾಪಟ್ಟಿಯ ಗಡಿಭಾಗದಲ್ಲಿ ಸುರಂಗ ಕೊರೆಯುವುದನ್ನು ಪತ್ತೆ ಮಾಡಲು ಅಳವಡಿಸಿದ್ದ ಭೂಕಂಪನದ ಚಲನೆಯನ್ನು ಅಳೆಯುವ ಸೆನ್ಸಾರ್ ಬಗ್ಗೆಯೂ ಸಿಂಗ್ ಆಕರ್ಷಿತರಾದರು. ಸಹಜವಾಗಿಯೇ ಭವಿಷ್ಯದಲ್ಲಿ ಈ ಎಲ್ಲ ತಂತ್ರಜ್ಞಾನವನ್ನು ಇಸ್ರೇಲ್, ಭಾರತಕ್ಕೆ ಮಾರಾಟ ಮಾಡಲಿದೆ. ರಾಜನಾಥ್‌ಸಿಂಗ್ ಅವರಿಗೆ ಇವುಗಳನ್ನು ಪ್ರದರ್ಶಿಸಿದ್ದು ಇದೇ ಕಾರಣಕ್ಕೆ ಎನ್ನುವುದು ಸ್ಪಷ್ಟ.


ನಿಷೇಧ, ಬಂಡವಾಳ ಹಿಂದೆಗೆತ ಹಾಗೂ ನಿರ್ಬಂಧದ ಕ್ರಮವಾಗಿ ವಿಶ್ವದ ಹಲವು ದೇಶಗಳು ಇಸ್ರೇಲ್ ಜೊತೆಗಿನ ವ್ಯಾಪಾರಿ ಸಂಬಂಧವನ್ನು ಸೀಮಿತಗೊಳಿಸುವ ಪ್ರಕ್ರಿಯೆ ಕಳೆದ ಒಂದು ದಶಕದಿಂದ ನಡೆದು ಬಂದಿದೆ. ಇದು ಆ ದೇಶದ ಆರ್ಥಿಕ ಪ್ರಗತಿಗೆ ಅಪಾಯದ ಮುನ್ಸೂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಜೊತೆಗಿನ ಸಂಬಂಧ ವೃದ್ಧಿ ಆ ದೇಶದ ಆರ್ಥಿಕತೆಗೆ ವರದಾನವಾಗಲಿದೆ. ಇಸ್ರೇಲ್ ಜೊತೆಗಿನ ರಕ್ಷಣಾ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಿರುವ ದೇಶಗಳಲ್ಲಿ ಅಮೆರಿಕ ಹೊರತುಪಡಿಸಿದರೆ ಭಾರತವೇ ಪ್ರಮುಖ ರಾಷ್ಟ್ರ. ಇಸ್ರೇಲ್ ಮಾರಾಟ ಮಾಡುತ್ತಿರುವ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತ ಅಗ್ರಗಣ್ಯ ರಾಷ್ಟ್ರ. ಅಂತೆಯೇ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವಲ್ಲಿ ಇಸ್ರೇಲ್ ಎರಡನೆ ಅತಿದೊಡ್ಡ ರಾಷ್ಟ್ರ. ಕೇವಲ ರಕ್ಷಣಾ ಕ್ಷೇತ್ರದಲ್ಲಿ ಮಾತ್ರವಲ್ಲ; ಭಾರತದ ಹಲವು ರಾಜ್ಯಗಳಲ್ಲಿ ಜಲ ಸಂರಕ್ಷಣೆ ಹಾಗೂ ನೀರಾವರಿ ಮತ್ತಿತರ ವಿಷಯಗಳ ಬಗೆಗಿನ ಶ್ರೇಷ್ಠತಾ ಕೇಂದ್ರಗಳನ್ನು ಆರಂಭಿಸಿದೆ. ಈ ಮೂಲಕ ತಾಂತ್ರಿಕ ಸಹಾಯ ನೀಡುತ್ತಿರುವ ಇಸ್ರೇಲ್ ಮುಂದಿನ ದಿನಗಳಲ್ಲಿ ಇಂಥ ಇನ್ನಷ್ಟು ಕೇಂದ್ರಗಳನ್ನು ಆರಂಭಿಸಲಿದೆ. ಹಿಂದುತ್ವ ಶಕ್ತಿಗಳು ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ಸಹಜವಾಗಿಯೇ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಭೂತವನ್ನು ಮತ್ತೆ ಹುಟ್ಟುಹಾಕಲಾಗಿದೆ. ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಅಮಾಯಕರನ್ನು ಹತ್ಯೆ ಮಾಡುವ ಇಸ್ರೇಲ್ ಕ್ರಮವನ್ನು ಇಸ್ರೇಲ್‌ನ ಖ್ಯಾತ ಇತಿಹಾಸತಜ್ಞರೊಬ್ಬರು ಹಂತಹಂತವಾಗಿ ತೀವ್ರಸ್ವರೂಪ ಪಡೆಯುವ ಹತ್ಯಾಕಾಂಡ ಎಂದು ಬಣ್ಣಿಸಿದ್ದಾರೆ. ಹಿಂದುತ್ವವಾದಿ ಫ್ಯಾಶಿಸ್ಟರು ಈ ಹಂತಹಂತವಾಗಿ ತೀವ್ರಸ್ವರೂಪ ಪಡೆಯುವ ಹತ್ಯಾಕಾಂಡದ ಕೌಶಲವನ್ನು ತಮ್ಮ ಸೈದ್ಧಾಂತಿಕ ಸಂಬಂಧಿಗಳಿಂದ ಕಲಿಯಲೇಬೇಕಾಗಿದೆ. ಆ ಮೂಲಕ ಅವರು ಅದನ್ನು ಭಾರತದಲ್ಲೂ ಜಾರಿಗೆ ತರಬಹುದು. ಮೋದಿಯವರ ಮುಂದಿನ ಇಸ್ರೇಲ್ ಭೇಟಿಯನ್ನು ಈ ದೃಷ್ಟಿಕೋನದಿಂದ ನೋಡಬೇಕಾಗಿದೆ.


(ಕೃಪೆ: ಕೌಂಟರ್‌ಕರೆಂಟ್ಸ್.ಒಆರ್‌ಜಿ)

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...