Monday, November 30, 2015

ಪಂಜು ಗಂಗುಲಿ ಕಾರ್ಟೂನ್
ಚರಕ ಸಂಹಿತೆಯ ಪ್ರಕಾರ ಗೋಮಾಂಸ ದಿವ್ಯೌಷಧ : ವಿಜ್ಞಾನಿ ಭಾರ್ಗವ


ಭಾರತದ ಪ್ರಾಚೀನ ಗ್ರಂಥಗಳು ಗೋಮಾಂಸ ಭಕ್ಷಣೆಯ ಮೇಲೆ ಯಾವುದೇ ನಿಷೇಧವನ್ನು ಹೇರಿಲ್ಲ , ಮಾತ್ರವಲ್ಲ ಆಯುರ್ವೇದದ ಆಚಾರ್ಯ ಚರಕ ಅವರು "ಮನುಷ್ಯನ ಕೆಲವೊಂದು ಗಂಭೀರ ವ್ಯಾದಿಗಳ ಚಿಕಿತ್ಸೆಗೆ ಗೋಮಾಂಸವು ದಿವ್ಯೌಷಧವಾಗಿದೆ ಎಂದು ಶಿಫಾರಸು ಕೂಡ ಮಾಡಿದ್ದರು' ಎಂಬುದಾಗಿ ಹಿರಿಯ ವಿಜ್ಞಾನಿ ಪಿ. ಎಂ. ಭಾರ್ಗವ ಅವರು ತಮಗೆ 1986ರಲ್ಲಿ ಸರಕಾರವು ನೀಡಿದ್ದ ಪದ್ಮ ಭೂಷಣ ಪ್ರಶಸ್ತಿಯನ್ನು ಮರಳಿಸುತ್ತಾ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಸೆಲ್ಯುಲರ್‌ ಮತ್ತು ಮೈಕ್ರೋ ಬಯಾಲಜಿ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿರುವ 87ರ ಹರೆಯದ ಭಾರ್ಗವ ಅವರು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಪ್ರತಿಭಟಿಸಿ ಕಳೆದ 29ರಂದು ತಮ್ಮ ಪದ್ಮಭೂಷಣ ಪ್ರಶಸ್ತಿಯನ್ನು ಸರಕಾರಕ್ಕೆ ಮರಳಿಸಿದ್ದರು. ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಭಾರ್ಗವ ಅವರು ತಮ್ಮ ಪ್ರಶಸ್ತಿಯನ್ನು ಮರಳಿಸುತ್ತಾ ಬರೆದಿದ್ದ ಪತ್ರದಲ್ಲಿ ಚರಕ ಸಂಹಿತೆಯನ್ನು ಉಲ್ಲೇಖೀಸಿ ಹೀಗೆ ಬರೆದಿದ್ದರು:

"ಮನುಷ್ಯನಲ್ಲಿ ಅತಿಯಾದ ಪ್ರಮಾಣದಲ್ಲಿ ಮಾಂಸ ಪೇಶಿಗಳು ನಷ್ಟವಾದ ಸಂದರ್ಭದಲ್ಲಿ ಆತನಿಗೆ ಎದುರಾಗುವ ಪೀಡೆಗಳನ್ನು ನಿವಾರಿಸಲು ಗೋಮಾಂಸ ಸೇವನೆಯು ದಿವ್ಯೌಷಧ, ಮಾತ್ರವಲ್ಲ ಆತನಿಗೆ ನಿರಂತರವಾಗಿ ಬಾಧಿಸುವ ಒಣಕೆಮ್ಮು, ಆಗಾಗ ಬರುವ ಜ್ವರ, ಆಯಾಸ, ಮಿತಿ ಮೀರಿದ ಪ್ರಮಾಣದಲ್ಲಿ ಆತನ ದೇಹದಲ್ಲಿ ತುಂಬಿಕೊಳ್ಳುವ ವಾಯು, ರೈನಿಟಿಸ್‌, ಮತ್ತು ಮಿತಿಮೀರಿದ ಹಸಿವು ಮುಂತಾದವುಗಳನ್ನು ನಿವಾರಿಸಲು ಗೋಮಾಂಸ ಸೇವನೆ ರಾಮಬಾಣವಾಗಿ ಕಾರ್ಯನಿರ್ವಹಿಸಬಲ್ಲುದು"
.
ದಾದ್ರಿಯಲ್ಲಿ ಮೊಹಮ್ಮದ್‌ ಇಖ್‌ಲಾಕ್‌ಅವರನ್ನು ಗೋಮಾಂಸ ಭಕ್ಷಣೆ ಮತ್ತು ಶೇಖರಣೆಯ ಆರೋಪದಲ್ಲಿ ಹೊಡೆದು ಚಚ್ಚಿ ಸಾಯಿಸಿರುವ ಕೆಲಸ ಬಿಜೆಪಿಯ ಕ್ಷುದ್ರ ಶಕ್ತಿಗಳಿಂದ ಆಗಿರಬಹುದಾದರೂ ಬಿಜೆಪಿಗೆ ಜನರ ಆಹಾರ, ವಿಹಾರ, ಉಡುಗೆ ತೊಡುಗೆ, ಪ್ರೀತಿ ಪ್ರೇಮ, ಓದುವ ಸಾಹಿತ್ಯ ಮುಂತಾಗಿ ಎಲ್ಲವನ್ನೂ ನಿಯಂತ್ರಿಸುವ ಹೆಬ್ಬಯಕ್ಕೆ ಇರುವಂತೆ ಕಂಡುಬರುತ್ತದೆ. ಅಂತೆಯೇ ಜನಜೀವನದಲ್ಲಿ ಅಸಹಿಷ್ಣುತೆಯ ವಿಷಬೀಜವನ್ನು ಬಿತ್ತಲಾಗುತ್ತಿದೆ' ಎಂದು ಭಾರ್ಗವ ತಮ್ಮ ಪತ್ರದಲ್ಲಿ ಟೀಕಿಸಿದ್ದಾರೆ.

Sunday, November 29, 2015

pratap bhanu mehta : who is a patriot?


clip

ಇಂದು ಗದಗದಲ್ಲಿ ಎಂ ಎಂ ಕಲ್ಬುರ್ಗಿ ನಾಟಕ 'ಖರೇ ಖರೇ ಸಂಗ್ಯಾ ಬಾಳ್ಯಾ' ಪ್ರದರ್ಶನ
ಸಾಗರದ ಸ್ಪಂದನ ರಂಗ ತಂಡದಿಂದ ನವೆಂಬರ್ 30 ರ ಸೋಮವಾರ ಸಂಜೆ 7 30 ಗಂಟೆಗೆ
ಗದಗದ ತೋಂಟದಾರ್ಯ ಮಠದ ಆವರಣದಲ್ಲಿ ಖರೇ ಖರೇ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನವಿದೆ.ಎಂ ಎಂ ಕಲ್ಬುರ್ಗಿ ರಚಿಸಿದ ಎಂ ವಿ ಪ್ರತಿಭಾ ನಿರ್ದೇಶನದ ಈ ನಾಟಕ ಈಗಾಗಲೇ ನಾಡಿನೆಲ್ಲೆಡೆ 18ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.
ರಂಗಾಸಕ್ತರಿಗೆ ಸ್ವಾಗತ
ಲಾವಣ್ಯ ಪ್ರಭಾ ಕೆ. ಎನ್.ಎರಡು ಕವಿತೆಗಳು

೧ 

ಉಸಿರಿಂದ ಉಸಿರಿಗೆಎಚ್ಚರವಾದಾಗ ಜೋರಾಗಿ ಕೇಳಿದ್ದು ಚೀರಾಟದ ಶಬ್ದ
ಈ ಅಳುವೇ ಸುತ್ತಲಿದ್ದವರ ಹರ್ಷಕ್ಕೆ
ಕಾರಣವಾಗಿತ್ತಂತೆ.
ಉಸಿರಾಟ ಶುರುವಾಗಿ ಒಳಗೆ ಹೊರಗೆ ಓಡಾಟ
ಪುಪ್ಪುಸಗಳ ಸಂಕುಚನ ವಿಕಸನಗಳಿಗೆ
ಪುಟ್ಟ ಫ್ರಾಕಿನ ನೆರಿಗೆಗಳ ಕುಣಿದಾಟ.
ನಿದ್ದೆ, ಕನಸು, ಎಚ್ಚರ ಎಲ್ಲದರೊಳಗೂ
ಉಸಿರಿನ ಸರಾಗ ರಾಗಮಾಲಿಕೆ
ಕೋಪದಲ್ಲಿ ಕೊಂಚ ತಾರಸ್ಥಾಯಿ
ಪ್ರೇಮದಲ್ಲಿ ಮಂದ್ರಸ್ಥಾಯಿ
ಅಕ್ಷತೆ ಮುಹೂರ್ತದ ಸಾಥ್‌ಗೆ
ಜೊತೆಗಾರನ ಎದೆಬಡಿತದ ಶಹನಾಯಿ.
ಗಾಳಿಬಲೂನಿನ ಬ್ರಹ್ಮಾಂಡದೊಳಗಿನ ಜೀವದ ಈಜು
ನೀರಿನೊಳಗಾಡಿದೆ ಮೀನು
ಬಾಗಿಲಿಲ್ಲದ ಮನೆ- ಹಾಗಾಗೇ
ಒಳಮನೆಯಿಂದ ಹೊರಮನೆಗೆ, ಮತ್ತೆ
ಹೊರಗಿಂದ ಒಳಗೆ ಸಲೀಸು ನಡೆದಾಟ.
ಕಾಲಲೀಲೆಗೆ ಶಿಥಿಲಗೊಂಡ ಪಂಜರ
ಮುರಿದು ಬಿದ್ದು ಹಕ್ಕಿ ಹಾರುವ ಹೊತ್ತು
ಮತ್ತೆ ನಿಶ್ಚಿತಗೊಳ್ಳುವ ಗೂಡು ಯಾರಿಗೆ ಗೊತ್ತು ?
ಬಯಲು ಆಲಯ ಎಲ್ಲವೂ ಒಂದೇ ಆಗುವ ಸಮಯ
ಎದೆಗೆ ಎದೆಯಾನಿಸಿ ಅವನಿಟ್ಟ ಪ್ರೇಮಶ್ವಾಸ
ವನ್ನು ಕೊನೇಬಾರಿಯೆಂಬಂತೆ ನಿಧಾ..... ನ
ಒಳಗೆ, ಒಳಗೆ ಎಳೆದುಕೊಳ್ಳುತ್ತಾ.... ಧ್ಯಾನ
ಒಳಗೆಳೆದುಕೊಂಡು ಹೊರಬಿಟ್ಟ ಕೊನೆಯುಸಿರು
ಮತ್ತೊಂದು ಹೊಸಜೀವ ಹೊಸದೇಹದೊಳಗಿನ
ಚೀರುವಿಕೆಯಲ್ಲಿ ಹೊಸ ಸೃಷ್ಟಿಯಲ್ಲಿ
ಹೊರಗಾಗುವ ಹೊತ್ತಿಗೆ....
ಅವನ ಹೂವು ಅವನದೇ ಮುಡಿಗೆ


೨ 

ಅಮ್ಮನಿಲ್ಲದ ಮಗು


ಅಮ್ಮನಿಲ್ಲದ ಮಗು...
ಮುಗಿಲುಗಳೇ ತೀಡಿ ಅವಳ
ಮುಂಗುರುಳ ನವಿರಾಗಿ
ಉಲ್ಲಸಿತಗೊಳ್ಳಿ
               
ಅಮ್ಮನಿಲ್ಲದ ಮಗು...
ಅಮ್ಮನಂಥ ಭೂಮಿಯೇ
ಮಲಗಿಸು ಮಡಿಲೊಡ್ಡಿ ಮೆಲ್ಲಗೆ
ಅಮ್ಮನೇ ಆಗು
               
ಅಮ್ಮನಿಲ್ಲದ ಮಗು...
ಹಕ್ಕಿಗಳೇ ಹೋಗಿ ಹಾರಿ
ಮಾತಾಡಿಸಿ ಅವಳ ಮುದ್ದುಮುದ್ದಾಗಿ
ಹಗುರಾಗಿ ನೀವೂ
               
ಅಮ್ಮನಿಲ್ಲದ ಮಗು...
ಗೊಂಚಲಲ್ಲಾಡುವ ಹೂಹಣ್ಣುಗಳೇ
ಅವಳ ತುಟಿಗೆ ನಿಮ್ಮನ್ನು ತಾಗಿಸಿಕೊಳ್ಳಿ
ಮತ್ತಷ್ಟು ಸಿಹಿಗೊಳ್ಳಿ

ಅಮ್ಮನಿಲ್ಲದ ಮಗು...
ಓ ದೇವರೇ ! ಪೊರೆ ನಿನ್ನ ಮಗುವನ್ನು
ಕೇವಲ ಕೇ... ವ... ಲ
ಮನುಷ್ಯ ಮಾತ್ರದವರಿಂದ
ಸಾರ್ಥಕವಾಗಲಿ ಹೆಸರು
ಅನಾಥನಾಥ ದೀನಬಂಧು
***

ಲಾವಣ್ಯ ಪ್ರಭಾ (೧೯೭೧) ಕನಕಪುರದಲ್ಲಿ ಹುಟ್ಟಿದವರು. ಕನ್ನಡ ಎಂಎ ಮಾಡಿ ಗೃಹಿಣಿಯಾಗಿರುವ ಅವರು ಮೈಸೂರಿನಲ್ಲಿದ್ದಾರೆ. ಹುಟ್ಟಲಿರುವ ನಾಳೆಗಾಗಿ, ಗೋಡೆ ಗಿಡ, ನದಿ ಧ್ಯಾನದಲ್ಲಿದೆ ಎಂಬ ಮೂರು ಕವನ ಸಂಕಲನ ಪ್ರಕಟಿಸಿದ್ದಾರೆ.

ವಿಳಾಸ: ೧೨, ೪ನೇ ಬ್ಲಾಕ್, ಎಸ್‌ಬಿಎಂ ಲೇಔಟ್, ಶ್ರೀರಾಂಪುರ ೨ನೇ ಹಂತ, ಮೈಸೂರು - ೫೭೦೦೨೩.

 lavanyakn12@gmail.com

ಲಲಿತಾ ಸಿದ್ಧಬಸವಯ್ಯ ಎರಡು ಕವಿತೆಗಳು
೧ 

ಒಳ್ಳೆ ಅಪ್ಪನ ಮಗಳು ಮತ್ತು ಒಳ್ಳೆ ಗಂಡನ ಹೆಂಡತಿಯೂ


ನಾನೂ ಕಂಭಯ್ಯನವರು
ಒಂದೆ ಆಫೀಸಿನ ಒಂದೆ ಸೆಖ್ಷನ್ನಿಗೆ ಗೂಟ ಹೊಡಕೊಂಡಿದ್ದೆವು
ಒಂದಲ್ಲ ಎರಡಲ್ಲ ಒಂಭತ್ತು ವರ್ಷ

ಕುಹಕಗಳನ್ನ ಕಂಡಾಗೆಲ್ಲ ಮಾರಮ್ಮ
ನಾಗುತ್ತಿದ್ದ ನನಗೆ ಈ ತಣ್ಣನ್ನೆ ಪಾಯಸದಂಥ ಮನುಷ್ಯ
ಅಷ್ಟೂ ವರ್ಷ ಹೇಳಿದ್ದು ಒಂದೆ ಹಿತವಚನ;
“ಕಾಲ ಕೆಟ್ಟೋಯ್ತು ಮೇಡಮ್ಮೋರೆ
ಕಾದಾಡಿ ಮುಖ ಕೆಡಿಸ್ಗಳ್ಳದು ಎಷ್ಟೊತ್ತು ಲಲ್ತಮ್ಮೋರೆ
ಅಂದೋರೆ ದೊಡ್ಡೋರಾಗ್ಲಿ ಬಿಡ್ರಿ
ಖಾಯಮ್ ಅಟೆಂಡೆನ್ಸ್ ಇಲ್ ಯಾರ್ಗೈತ್ರಿ”

ಹೇಳಿದ್ದೊಂದೆ ಅಲ್ಲ
ತಮ್ಮ ಹಿತವಚನ ತಾವೆ ಪಾಲಿಸಿದರು ಕೂಡಾ;
ಏಳು ಚಿಕ್ಕವರು ಕುತ್ತಿಗೆ ಹತ್ತಿ ಕೂತಾಗಲೂ
ಸಲಾಮು ಹೊಡೆದರು ನೆತ್ತಿ ತಗುಲಿಸಿಕೊಂಡು     

ಹೆಂಡತಿ ಸೆರೆಗೆಳೆದರು ಸುಮ್ಮನಿದ್ದ ಕುಂತೀದೇವಿ ಸಂತಾನದ ತರ
ನಡೆದರು ಕಂಡೇ ಇಲ್ಲವೆನುವಂತೆ ಕೈಗೆ ಬಂದ ಬಡ್ತಿ ಕಂಡೋರ
ಪಾಲಾದರೂ; ರಿಲೀವಾದರು ವರ್ಗವಾದಾಗೆಲ್ಲ ಉಸಿರುಬಿಡದೆ
ಮತ್ತೆಲ್ಲಿಲ್ಲಿನ ಕಸ ತಂದು ಟೇಬಲ್ಲಿಗೆ ಸುರಿದರೂ
ವಿಲೆ ಮಾಡಿದರು ಸಂತ ಸೋಮಾನಂದನ ಹಾಗೆ;

-೨-

ಇಂಥ ಕಂಭಯ್ಯನವರ ಮಗಳು
ಆಫೀಸಿನ ಹತ್ತಿರ ಹೇರ್ಪಿನ್ನಿಗೊ ನೋಟ್‌ಬುಕ್ಕಿಗೊ
ಅಪ್ಪನ್ನ ತಾವು ದುಡ್ಡು ಕೇಳೊಕೆ ಬರುತ್ತಿದ್ದವಳು
ಅವಳ ಮಾತು ಅವಳಿಗೇ ಕೇಳುತ್ತೊ ಇಲ್ಲವೊ
ಅನುವಂಥ ಸಣ್ಣಸ್ವರದವಳು
ಅರೆಸ್ಟಾದಳು

ವ್ಯತ್ಯಾಸವಿಲ್ಲ
ಯಾರು ನಂಬಿದರೂ ಬಿಟ್ಟರೂ
ಬಡ ಕಂಭಯ್ಯನವರ ಹಂಗೆ ಇಟ್ಟುಕೊಳಲಿಲ್ಲ
ಇಪ್ಪತ್ನಾಲ್ಕು ಇಂಟು ಏಳರ ವೀರಚಾನೆಲ್ಲುಗಳು
ಕಣ್ಣು ತೂತು ಬೀಳುವವರೆಗು ಅದೆ ದೃಶ್ಯಾವಳಿ
ಮೂರನೆಯವರ ಬಾಯಿಗೆ ಬೀಳದಿದ್ದ ಅವರ ಮನೆವಾರ್ತೆ
ಈಗೆಲ್ಲರ ನಡುಮನೆಯಲ್ಲಿ

ಅವಳೆ ಕೊಟ್ಟ ಹೇಳಿಕೆ;
ಕೊಲೆಮಾಡಿ ಗಂಡನ್ನ
ಆಮೇಲೆ ತುಂಡುತುಂಡು ಮಾಡಿ ಹೆಣವನ್ನ
ಮನೆಯಲ್ಲಿಟ್ಟುಕೊಂಡೆ ಮಲಗಿದ್ದಳಂತೆ ಮೂರುದಿನ
ಸರೆಂಡರಾದಳಂತೆ ನಾಲ್ಕನೆ ದಿನ

ಒಳ್ಳೆ ಅಪ್ಪನಿಂದಲೆ ಜನುಮ ರೋಸಿತ್ತು
ಬೇಕಾಗಿರಲಿಲ್ಲ ಮುಖಕ್ಕುಗಿದರು ಒರೆಸಿಕೊಂಡು ಬರುವ
ಅಂಥದ್ದೆ ಗಂಡನೂ

ಒಳ್ಳೆಯವನ ಮಗಳಾದ್ದಕ್ಕೆ
ಕಣ್ಣು ಬಾಯಿ ಎರಡು ಮಾತ್ರ ಕಟ್ಟಿಕೊಂಡಿದ್ದೆ
ಒಳ್ಳೆಯವನ ಹೆಂಡಿರಾದ್ದಕ್ಕೆ ಕಟ್ಟಬೇಕಾಯ್ತು
ಉಲ್ಲಾಸದ ಸಕಲ ಸೌಭಾಗ್ಯ; ಎಷ್ಟು ದಿನ ನೆಟ್ಟುಕೊಳ್ಳಲಿ
ತೋರಿಕೆಯ ತುಳಸಿವನ?

ಈ ಕಂಭಯ್ಯನ
ಮಗಳ ತಲೆಯಿಂದೆ ಚೆಂಡಾಡಲಿ
ನಿಂಬೆಹಣ್ಣು ಹಿಡಕೊಂಡು ನಗುನಗುತ ಹೋಗುವೆ
ಗಲ್ಲುಗಂಭಕ್ಕೆ; ಆದರೀ ಒಳ್ಳೆತನದ ತುರುಚೆಬಳ್ಳಿ
ನಿಶ್ಶೇಷವಾಗಬೇಕು ನನ್ನ ತಲೆಗೇ; ಅದು ಕಾರಣ ಇದು ಜೊಳ್ಳು
ಬೀಜದಕಾಯಿ ಈ ಗಂಡನೆಂಬುದ ತುಂಡುತುಂಡು ಮಾಡಿ
ಹೀಗೆ ಹೀಗೆ ಕತ್ತರಿಸಿದೆ ಹೀಗೆ ಹೀಗೆ ತುಂಬಿದೆ

ಉಗ್ಗದೆ ತಗ್ಗದೆ
ಅಳದೆ ಮುಖ ಮುಚ್ಚಿಕೊಳ್ಳದೆ
ಪ್ರಾಯದ ಹುಡುಗಿ ವಿವರಗಳ ಹೇಳುತ್ತಿದ್ದರೆ
ಹಳೆಮನುಷ ಪೋಲೀಸಪ್ಪನಿಗೇ ಬೆವರು

-೩-

ನಮ್ಮ ನಿಘಂಟುಗಳ
ನೂರುವರ್ಷಕ್ಕೊಂದು ಸಲ ಬಿಸಿಲಿಗೆ ಹಾಕಿದರೂ ಸಾಕು
ಶಬ್ದಕ್ಕೆ ಒಂದೆ ಅರ್ಥದ ಜೈಲಿಂದ ಬಿಡುಗಡೆಯಾಗಿ
ಒಳಿತು ಕೆಡುಕಿನ ವ್ಯಾಖ್ಯಾನಕ್ಕಂಟಿದ ನುಸಿರೋಗ ವಾಸಿಯಾಗಿ
ಪ್ರಾತ:ಕಾಲ ಸ್ಮರಿಸುವ ಪವಿತ್ರಕನ್ಯೆ
ಯರ ಪಟ್ಟಿಗೆ ಸೇರ್ಪಡೆಯಾದಾಳು
ಕಂಭಯ್ಯನವರ ಮಗಳೂ

ದೇವರೇ
ಅಷ್ಟಾಗಲಿ, ತಥಾಸ್ತು ಅನ್ನು!
***


೨ 
ಕವಿ ನಾನು ನಾನಾವರ್ಣಿ - ಇಕಾರಾಂತ ಸ್ತ್ರೀಲಿಂಗ ಶುದ್ಧಪ್ರಯೋಗ


ಹುಡುಕಿದ್ದೇನೆ
ನನ್ನ ದೇವಿಯ ನಾನೇ; ಹೆಸರಿಟ್ಟಿದ್ದೇನೆ
ನಾನು ಪೂಜಿಸಿದ್ದಕ್ಕೆ ಅವಳು ದೇವಿ, ನಾನು ಬರೆದದ್ದಕ್ಕೆ ಅವಳು
ಪುರಾಣನಾಮ ಚೂಡಾಮಣಿ;
ಅವಳ ಸೃಷ್ಟಿಸಿದ ನಾನು ಬ್ರಹ್ಮಿಣಿ;
ಈ ಅಕ್ಷರದೇವಿಯ ನಿತ್ಯೋಪಾಸಕಿ; ನಾನು
ವಿಪ್ರಪ್ರಿಯಾ ವಿಪ್ರೋತ್ತಮೆ;

ತೂಗಿ ತೂಗಿ
ಸ್ವರ ವ್ಯಂಜನಗಳ ಸರಂಜಾಮು
ಇತ್ತ ಹಿಸಿದು ಅತ್ತ ಬೆಸೆದು
ಎಂದೂ ಸಮವಾಗದಿದ್ದರು ತ್ರಾಸು
ಕೈ ಚೆಲ್ಲಿಲ್ಲ ಸುಸ್ತೆಂದು, ಕೂಡಿಟ್ಟಿದ್ದೇನೆ ವರ್ಣಭೇದವಿರದ ವರ್ಣಸಂಪತ್ತ
ನಾನುಗ್ರಾಣದ ಜಿಪುಣೆ ಲೇವಾದೇವಿಯಲ್ಲಿ ಅಪ್ಪಟ ಜಾಣೆ
ಹಳೆಬಂಗಾರ ಕಳೆದಿಲ್ಲ, ಶೋಧಿಸಿದ್ದೇನೆ ಹೊಸ ನಮೂನೆ;
ಕಾಸಿಗೆ ಸೋಲದ ಕುಶಲೆ; ನಾನು
ವೈಶ್ಯಕುಲ ರತ್ನಪ್ರಾಯೆ;


ಕಣ್ಣಿಗೆಣ್ಣೆಬಿಟ್ಟು
ಬೆಲೆಕಟ್ಟಲಾಗದ ರೇಸಿಮೆಯಲ್ಲಿ ಬಚ್ಚಿಟ್ಟು
ಏಳುಸುತ್ತಿನ ಕೋಟೆ, ಆಳುದ್ದದ ಅಗಳು, ಚತುರಂಗ ಸೇನೆ
ಈ ಅಕ್ಷರಚಕ್ರಾಧಿಪತ್ಯವ ಕಾವ ಕೊತ್ವಾಲಿಕೆಯಲ್ಲಿ
ನಾನು ಸೋಲೊಪ್ಪಿಕೊಳ್ಳದ ಯೋಧೆ; ರಣತಂತ್ರ ನಿಪುಣೆ
ಜೋಪಾಸನೆಯಲ್ಲಿ ಪಳಗಿದ ಸೇನಾಧಿಪೆ
ಹುಡುಕಿದರೊಬ್ಬಳೆ; ನಾನು
ನಿಜದಲ್ಲಿ ನಿಜಕ್ಷತ್ರಿಯೆ;

ಈ ಇದಕೆ ತೊಡಗುವ 
ಮೊದಲು ಬೇಕಾದ್ದು ಬೇಡದ್ದೆನ್ನದೆ
ಓದಿಗೊದಗಿ ಬಂದದ್ದನ್ನೆಲ್ಲ ರೊಪ್ಪದೆ ಕೂಡಿ
ಒಗ್ಗದ್ದನ್ನೂ ತಿಗುರಿಗಿಟ್ಟು ಆಕಾರ ಮಾಡಿ
ಒರಟೆಂದು ಜನ ಬಿಟ್ಟಿದ್ದನ್ನೂ ಬುರುಡೆಯುಬ್ಬೆಯೊಳು
ಮೆದು ಬೇಯಿಸಿ ಮಡಿಮಾಡಿ
ಹದ ಮೀರಿ ಸೇದಿದ್ದನ್ನೂ ಉಪ್ಪೂರಿಸಿ ರಸನೆಗೆ ತಂದು
ಒಂದೊಂದು ಶಬುದವೂ ಒಬ್ಬೊಬ್ಬ ರಾಜಕುಮಾರಿ
ಯೆಂದೆ ಬಗೆದು ಸೇವಿಸಿದ್ದೇನೆ ಬಗೆಬಗೆ; ದೊಡ್ಡಮಂದೆಗೆ ನುಗ್ಗಿ
ನನ್ನ ಕರು ಹುಡುಕಬಲ್ಲ ನಿಖರ ಚಹರೆಯ ಜಾತಿ
ಹದಿನೆಂಟು ಕಸುಬಿನ ಆಯಗಾತಿ; ನಾನು
ಶೂದ್ರಾತಿಶೂದ್ರೆ ಶೂದ್ರಸಂಪನ್ನೆ;

ಉಟ್ಟ ಸೀರೆಯ
ಮೇಲೇ ಉಚ್ಚಿಬಿಟ್ಟಿವೆ ಅಕ್ಷರಗಳು
ಇಶ್ಶಿಶ್ಶಿಯೆಂದು ನಾನು ಮುಖ ಸೊಟ್ಟಗಿಟ್ಟಿದ್ದರೆ
ಕಸುಬಿನ ಮೇಲಾಣೆ; ಬಾಚಿ ಬಳಿದು ಹೊತ್ತು ಶಿರದಮೇಲೆ
ತಿಪ್ಪೆಗೆಸೆದು ಬರುವಾಗಲೂ ಕಕ್ಕ ಕೆದಕಿದ್ದೇನೆ
ಎರಡು ಕಾಸಿಗೆ ಬರುವಂತದ್ದೇನಾದರೂ
ಎಸೆದುಬಿಟ್ಟೆನೆ ಎಂದನುಮಾನಗೊಂಡು;
ಸಹನೆಯಲಿ ಸಾವಿರವರ್ಷ
ಮುಟ್ಟಿಸಿಗೊಳ್ಳದವರಿಗಿಂತ ಕೊಟ್ಟಕೊನೆ; ನಾನು
ಪಂಚಮರಲ್ಲಿ ಮರುಪಂಚಮೆ;

ಕವಿ ನಾನು ನಾನಾವರ್ಣಿ
ಇಕಾರಾಂತ ಸ್ತ್ರೀಲಿಂಗ ಶುದ್ಧಪ್ರಯೋಗ
ಕರ್ತರಿ ಕರ್ಮಣಿಗಿಲ್ಲ ತಾವು; ಸಣ್ಣಗೆ ಕೊಯ್ಯಲಾರಿರಿ ನೀವು

ವರ್ಣಾಂತರ ಮರುವರ್ಣಾಂತರ
ನನಗೆ ಸುಲಭ ನೀರು ಕುಡಿದಷ್ಟು ಅಥವಾ ಅದಕ್ಕಿಂತಲೂ;
ಇಕಾರಾಂತ ಸ್ತ್ರೀಲಿಂಗ ಶುದ್ಧಪ್ರಯೋಗ - ಕವಿ ನಾನು ನಾನಾವರ್ಣಿ 
ನೋಡಿ ಈಗೇನು ಮಾಡುತ್ತೀರೋ
ಅದೇನೇನು ಕಾಯಿಸಿ ಅದೆಲ್ಲೆಲ್ಲಿಗೆ ಬಿಡುತ್ತೀರೊ
ಬಣ್ಣಗುರುಡರೆ;
***

ಲಲಿತಾ ಸಿದ್ಧಬಸವಯ್ಯ (೧೯೫೫) ತುಮಕೂರು ಜಿಲ್ಲೆ ಕೊರಟಗೆರೆಯವರು. ಜೀವಶಾಸ್ತ್ರ ಪದವೀಧರರಾಗಿ, ಸರ್ಕಾರಿ ನೌಕರರಾಗಿ ೨೮ ವರ್ಷ ಕೆಲಸ ಮಾಡಿರುವ ಲಲಿತಾ ಅವರ ಪತಿ ನಿವೃತ್ತ ಕನ್ನಡ ಪ್ರಾಧ್ಯಾಪಕ, ಲೇಖಕ, ಚಿನ್ಮಯಿ ಪ್ರಕಾಶನ ಮತ್ತು ವಿಜಯಪ್ರಗತಿ ವಾರಪತ್ರಿಕೆಯ ನಿರ್ವಾಹಕ ಕೋಳಾಲ ಸಿದ್ಧಬಸವಯ್ಯನವರು. ಇದುವರೆಗೆ ೫ ಕವನ ಸಂಕಲನಗಳು, ಒಂದು ನಾಟಕ, ಒಂದು ನಗೆ ಪ್ರಹಸನ ಸಂಗ್ರಹ, ಒಂದು ಕಥಾ ಸಂಕಲನ ಪ್ರಕಟವಾಗಿವೆ. ಬಿಎಂಶ್ರೀ ಕಾವ್ಯ ಪ್ರಶಸ್ತಿ, ಪುತಿನ ಕಾವ್ಯ ಪ್ರಶಸ್ತಿ, ಕ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಇನ್ಫೊಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಮನ್ನಣೆ ಪಡೆದ ಲಲಿತಾ ಅವರ ಕವಿತೆ-ಸಂಕಲನಗಳು ಕರ್ನಾಟಕ ವಿಶ್ವವಿದ್ಯಾಲಯ, ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯ ಸೇರಿದಂತೆ ಹಲವು ಕಡೆ ಸಾಹಿತ್ಯ ವಿದ್ಯಾರ್ಥಿಗಳ ಪಠ್ಯವಾಗಿವೆ.

ವಿಳಾಸ : no.4(B), SHALOM MANOR, countryside lay out, opp to wipro corporate office, sarjapura road B'LORE- 35.
lalithasid@rediffmail.comನಾನೇಕೆ ಪ್ರಶಸ್ತಿ ವಾಪ್ಸಿ ಮಾಡಿದೆ : ಇಂದಿನ ಕನ್ನಡ ಪ್ರಭದಲ್ಲಿ
ಚಂದ್ರ ಗಂಗೊಳ್ಳಿ ಕಾರ್ಟೂನ್

4 ಡಿಸೆಂಬರ್, ಬೆಂಗಳೂರು : ಹೊಸ ಓದು

ಹತ್ಯೆ : ಒಂದು ಕಾರ್ಟೂನ್ಒಂದು ಮಾತು-ಒಂದು ಚಿತ್ರ


“Your only problem, perhaps, is that you scream without letting yourself cry.”
~ Friedrich Nietzsche
ಇದು ಭಾರತದ ಫ್ಯಾಶಿಸಂನ ಕರಾಳ ಮುಖಸನತ್ ಕುಮಾರ್ ಬೆಳಗಲಿ‘‘ಭಾರತದಲ್ಲಿ ಒಂದು ವೇಳೆ ಫ್ಯಾಶಿಸಂ ಬಂದರೆ ಅದು ಬಹುಸಂಖ್ಯಾತ ಕೋಮುವಾದದ ಮೂಲಕ ಬರಹುದು’’ ಎಂದು ಜವಾಹರಲಾಲ್ ನೆಹರೂ ಎಂಬತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಈಗ ಪರಿಸ್ಥಿತಿ ಅಂದಿಗೂ ಇಂದಿಗೂ ತುಂಬ ಬದಲಾಗಿದೆ. ಇಲ್ಲಿ ಫ್ಯಾಶಿಸಂ ಜರ್ಮನಿಯ ಹಿಟ್ಲರ್ ಮಾದರಿಯಲ್ಲಿ, ಇಟಲಿಯ ಮುಸಲೋನಿಯ ಮಾದರಿಯಲ್ಲಿ ನೇರವಾಗಿ ಬರುವುದಿಲ್ಲ. ಇಲ್ಲಿಯ ಮನುವಾದದ ಮಿಶ್ರಣದೊಂದಿಗೆ ೫೬ ಇಂಚಿನ ಎದೆಯ ನಾಯಕನ ನೇತೃತ್ವದಲ್ಲಿ ನಯವಾಗಿ ಬರುತ್ತದೆ ಎಂಬ ಸೂಚನೆಗಳು ಕಾಣುತ್ತಿವೆ. ಇಲ್ಲಿಯ ಫ್ಯಾಶಿಸಂ ಸ್ವರೂಪ ಹೇಗಿರುತ್ತದೆ ಅಂದರೆ, ಆಳುವವರ ಅಂತರಂಗದಲ್ಲಿ ‘ಹಿಂದೂರಾಷ್ಟ್ರ ನಿರ್ಮಾಣದ ಮಸಲತ್ತು ಮಡುಗಟ್ಟಿ ನಿಂತಿರುತ್ತದೆ. ಬಹಿರಂಗದಲ್ಲಿ ಸಾಮರಸ್ಯ ಸಂಸ್ಕೃತಿಯ ಗುಣಗಾನ ನಡೆಯುತ್ತಿರುತ್ತದೆ. ‘ನಮ್ಮದು ಭಾರತ ಧರ್ಮ’ ಎಂದು ಹೇಳುತ್ತಲೇ; ತಮ್ಮ ಧರ್ಮ ಸಹನೆಯ ಶಿಖರ ಎಂಬ ಅಹಂಕಾರದಿಂದ ಕೂಡಿದ ಹೆಮ್ಮೆ ಉಕ್ಕೆರುತ್ತಿರುತ್ತದೆ. ಇನ್ನೊಂದೆಡೆ ಸಂಪತ್ತು ಅದರ ಪಾಲಿಗೆ ಕಲಾಪ ನಡೆಸುತ್ತದೆ. ಆದರೆ ಸಂವಿಧಾನೇತರ ಧರ್ಮ ಸಂಪತ್ತು ಕಾರ್ಯಸೂಚಿಗಳನ್ನು ತೀರ್ಮಾನಿಸುತ್ತದೆ. ಹಿಟ್ಲರ್ ಕಾಲದಲ್ಲಿ ಬಂಡವಾಳಶಾಹಿ ಬಿಕ್ಕಟ್ಟಿನ ನಡುವೆ ಹೊರಳಾಡುತ್ತಿತ್ತು. ಸಮಾಜವಾದಿ ಸೋವಿಯತ್ ರಶ್ಯ ಇತ್ತು. ಈಗ ನವಉದಾರವಾದದ ಕಾಲ ಮಾರುಕಟ್ಟೆ ಶಕ್ತಿಗಳು, ಮನುವಾದಿ ಕುಯುಕ್ತಿಗಳ ಜೊತೆ ಸೇರಿ ಮಸಲತ್ತು ನಡೆಸಿರುವ ಈ ಕಾಲದಲ್ಲಿ ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಮುಂದಿಟ್ಟುಕೊಂಡೇ ಅದನ್ನು ನಿರರ್ಥಕಗೊಳಿಸುವ ಹುನ್ನಾರಗಳು ನಡೆದಿವೆ. ಸಮಾಜವಾದಿ ಆಶಯದ ವಿರುದ್ಧ ಸಂಚುಗಳು ತೀವ್ರಗೊಂಡಿವೆ. ವಾಸ್ತವವಾಗಿ ೧೯೫೦ ಜನವರಿ ೨೬ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನ. ಆದರೆ ಈ ಸರಕಾರಕ್ಕೆ ತನ್ನ ಮುಖ ಮುಚ್ಚಿಕೊಳ್ಳಲು ಈಗ ತುರ್ತಾಗಿ ಅದರ ಅಗತ್ಯವಿತ್ತು. ಅಂತಲೇ ನವೆಂಬರ್ ೨೬ರಂದು ಸಂವಿಧಾನ ದಿನವೆಂದು ಸಂಸತ್ ಅಧಿವೇಶನ ನಡೆಸಿತು. ಗಾಂಧಿ ಜಯಂತಿಯನ್ನು ಇದೇ ರೀತಿ ಅಪವ್ಯಾಖ್ಯಾನಗೊಳಿಸಲಾಗಿತ್ತು. ಚರಿತ್ರೆಯನ್ನು ಬದಲಿಸುವುದು ಈಗ ಅಧಿಕಾರದಲ್ಲಿರುವವರ ಅಜೆಂಡಾ. ಅದಕ್ಕೆ ಪೂರಕವಾಗಿ ಎಲ್ಲವೂ ನಡೆಯುತ್ತವೆ. ಇವರದು ಗಣಪತಿಗೆ ಹಾಲು ಕುಡಿಸಿದ ಪರಂಪರೆ ಅಲ್ಲವೇ?

‘‘ಸಮಾಜವಾದ ಮತ್ತು ಜಾತ್ಯತೀತತೆ ಭಾರತಕ್ಕೆ ಪರಕೀಯ ಶಬ್ದಗಳು’’ ಎಂದು ಆರೆಸ್ಸೆಸ್ ಸರಸಂಘಚಾಲಕ ಮಾಧವ್ ಸದಾಶಿವ ಗೊಳ್ವಲ್ಕರ್ ಎಪ್ಪತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಈಗ ಅದೇ ಗುರೂಜಿಯ ಶಿಷ್ಯರಾದ ಗೃಹ ಸಚಿವ ರಾಜನಾಥ್ ಸಿಂಗ್ ಅದೇ ಜಾತ್ಯತೀತತೆ ಮತ್ತು ಸಂವಿಧಾನದ ಮೇಲೆ ಸಂಸತ್ತಿನಲ್ಲಿ ದಾಳಿ ಮಾಡಿದ್ದಾರೆ. ಸಂವಿಧಾನದಲ್ಲಿ ಅನಂತರ ಇವುಗಳನ್ನು ಸೇರಿಸಲಾಗಿದೆಯೆಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತಾಡಿದ ಹಣಕಾಸು ಸಚಿವ ಅರುಣ್‌ಜೇಟ್ಲಿ ೧೯೩೩ರಲ್ಲಿ ಜರ್ಮನಿಯಲ್ಲಿ ತುರ್ತು ಸ್ಥಿತಿ ಹೇರಿದ ಹಿಟ್ಲರ್‌ಗೂ ೧೯೭೫ರಲ್ಲಿ ತುರ್ತು ಸ್ಥಿತಿ ಹೇರಿದ ಇಂದಿರಾ ಗಾಂಧಿಗೂ ಹೋಲಿಕೆ ಮಾಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್‌ನಿಂದ ಬರಬೇಕಾದಷ್ಟು ಪ್ರತಿರೋಧ ಬರಲಿಲ್ಲ. ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಾತ್ರ ‘‘ನಾವು ದಲಿತರು ಈ ದೇಶದ ಮೂಲನಿವಾಸಿಗಳು. ಆರ್ಯರು ಹೊರಗಿನವರು. ನೀವು ಬೇಕಾದರೆ ದೇಶಬಿಟ್ಟು ಹೋಗಿ’’ ಎಂದು ಗುಡುಗಿದರು. ಆದರೆ ಹಿಟ್ಲರ್‌ಗೂ ಸಂಘಪರಿವಾರಕ್ಕೆ ಇರುವ ಸೈದ್ಧಾಂತಿಕ ನಂಟಿನ ಬಗ್ಗೆ ಕಾಂಗ್ರೆಸ್ ಸಂಸದರು ಮಾತಾಡಬೇಕಿತ್ತು. ಆದರೆ ಅಂಥ ಅಧ್ಯಯನಶೀಲತೆ ಕಾಂಗ್ರೆಸ್ ಸದಸ್ಯರಲ್ಲಿ ಕಾಣುತ್ತಿಲ್ಲ.

ರಾಜ್ಯಸಭೆಯಲ್ಲಿ ಸಿಪಿಎಂನ ಸೀತಾರಾಂ ಯೆಚೂರಿ ಅವರು ಮಾತ್ರ ಗೊಳ್ವಲ್ಕರರು ಹಿಟ್ಲರ್‌ನನ್ನು ಶ್ಲಾಘಿಸಿ ಬರೆದ ಪುಸ್ತಕವನ್ನು ಓದಿ ನೀವು ಆ ಪರಂಪರೆಗೆ ಸೇರಿದವರು ಎಂದು ಟೀಕಿಸಿದರು. ದಾದ್ರಿಯ ಕಗ್ಗೊಲೆ, ಹರ್ಯಾಣದಲ್ಲಿ ದಲಿತ ಮಕ್ಕಳಿಬ್ಬರ ಜೀವಂತ ದಹನ, ದಾಭೋಲ್ಕರ್, ಪನ್ಸಾರೆ, ಕಲಬುರ್ಗಿಯವರ ಹತ್ಯೆ, ಆದಿತ್ಯನಾಥ, ಸಾಕ್ಷಿ ಮಹಾರಾಜ, ಸಾಧ್ವಿ ಪ್ರಾಚಿ, ನಿರಂಜನ ಜ್ಯೋತಿ ಮುಂತಾದವರ ಹೇಳಿಕೆಗಳ ಬಗ್ಗೆ ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮುನ್ನವೇ ಪ್ರಧಾನಿ ಮೋದಿ ‘ಭಾರತವೇ ನಮ್ಮ ಧರ್ಮ’ ಎಂದು ತಿಪ್ಪೆ ಸಾರಿಸಿದರು. ತಮ್ಮ ಪಾತಕಗಳನ್ನು ಮುಚ್ಚಿಕೊಳ್ಳಲು ತುರ್ತು ಸ್ಥಿತಿ ಆಲಾಪ ಮಾಡಿದರು. ಇದು ಈ ದೇಶದ ಸಂಘಿ ಫ್ಯಾಶಿಸಂನ ವೈಖರಿ. ದೇಶದ ತುಂಬೆಲ್ಲ ನಿತ್ಯ ಪ್ರಚೋದನಾಕಾರಿ ಚಟುವಟಿಕೆಗಳು ನಡೆಯುತ್ತಲೇ ಇವೆ. ಬಂಟ್ವಾಳದಲ್ಲಿ ಹರೀಶ್ ಪೂಜಾರಿ ಎಂಬ ತರುಣನನ್ನು ಮುಸ್ಲಿಂ ಗೆಳೆಯನೊಂದಿಗೆ ಹೊರಟಾಗ ಇರಿದು ಕೊಂದರು. ಬಜರಂಗದಳ ಕಾರ್ಯಕರ್ತರು ಎಂದಾಗ ಬಾಯಿಮುಚ್ಚಿಕೊಂಡರು. ಈ ಹರೀಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಜರಂಗದಳದ ಭುವಿತ್ ಶೆಟ್ಟಿ ಬಂಧನಕ್ಕೊಳಗಾಗಿದ್ದಾರೆ. ಯಾವುದೇ ವ್ಯಕ್ತಿಗತ ದ್ವೇಷ, ವೃತ್ತಿ, ಮತ್ಸರ ಯಾವುದೂ ಇಲ್ಲದೆ ಭುವಿತ್ ಶೆಟ್ಟಿ ಸಮೀವುಲ್ಲಾ ಎಂಬ ತರುಣನನ್ನು ಮುಸ್ಲಿಂ ಎಂಬ ಕಾರಣಕ್ಕೆ ಹತ್ಯೆ ಮಾಡಲು ಯತ್ನಿಸುತ್ತಾನೆಂದರೆ, ಮುಸ್ಲಿಂ ಇರಬಹುದು ಎಂಬ ಕಾರಣಕ್ಕೆ ಹರೀಶ್ ಪೂಜಾರಿಯನ್ನು ಕೊಲ್ಲುವುದಾದರೆ ಕೋಮುವಾದ ಯಾವ ಪರಿ ಜನರನ್ನು ಹುಚ್ಚರನ್ನಾಗಿ ಮಾಡಿದೆ ಎಂಬುವುದು ಸ್ಪಷ್ಟವಾಗುತ್ತದೆ. ಇದಕ್ಕಾಗಿ ಯಾರನ್ನೂ ವೈಯಕ್ತಿಕವಾಗಿ ರೂಪಿಸದೇ ಭುವಿತ್ ಶೆಟ್ಟಿ ಅಂತ ವಿಕೃತರನ್ನು ಸೃಷ್ಟಿಸಿದ ಸಂಘಟನೆ ಯಾವುದು? ನಾಥೂರಾಂ ಗೊಡ್ಸೆಯನ್ನು ಸೃಷ್ಟಿಸಿದ ಆ ಸಿದ್ಧಾಂತವೇ ಈ ಭುವಿತ್ ಶೆಟ್ಟಿ ಅವರಂಥ ತರುಣ್‌ರನ್ನು ಕೊಲೆಗಡುಕರನ್ನಾಗಿ ಮಾಡುವುದಲ್ಲವೇ? ಬಹಿರಂಗ ಸಭೆಯಲ್ಲಿ ಸಾಮರಸ್ಯ, ಶಾಂತಿ ಎಂದು ನಾಟಕವಾಡುತ್ತ ಗುಪ್ತ ಬೈಠಕ್‌ಗಳಲ್ಲಿ ಅಮಾಯಕರ ಹತ್ಯೆಯ ಸಂಚುಗಳು ರೂಪುಗೊಳ್ಳುತ್ತಿಲ್ಲವೇ?

ಭುವಿತ್ ಶೆಟ್ಟಿಯಂಥ ಲಕ್ಷಾಂತರ ಯುವಕರ ತಲೆಯಲ್ಲಿ ಜನಾಂಗ ದ್ವೇಷದ ವಿಷಬೀಜ ಬಿತ್ತಿ ಅವರ ಬದುಕನ್ನು ಹಾಳು ಮಾಡಿದವರು ಯಾರು? ಅಸಹಿಷ್ಣುತೆ ಪ್ರತಿಭಟಿಸಿ ಸಾಹಿತಿಗಳು ಪ್ರಶಸ್ತಿ ವಾಪಸು ಮಾಡಿದರೆ ‘‘ಎಲ್ಲಿದೆ ಅಸಹಿಷ್ಣುತೆ’’ ಎಂದು ಕೂಗುಮಾರಿಗಳಂತೆ ಅರಚಾಡುವವರು ಹರೀಶ್ ಪೂಜಾರಿ ಹತ್ಯೆಯ ಬಗ್ಗೆ ಅವರೇನು ಹೇಳುತ್ತಾರೆ?
ಇದೇ ಭಾರತದ ನವೀನ ಫ್ಯಾಶಿಸಂನ ಸ್ವರೂಪ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುತ್ತದೆ. ಸಂಸತ್ ಕಲಾಪ ಅದರ ಪಾಡಿಗೆ ನಡೆಯುತ್ತಿರುತ್ತದೆ. ಪ್ರಧಾನಿ ಸಂಸತ್ತಿನಲ್ಲಿ ‘‘ಭಾರತವೇ ಸರಕಾರದ ಧರ್ಮ’ ಎಂದು ಹೇಳುತ್ತಿರುತ್ತಾರೆ. ಹೊರಗಡೆ ಘರ್‌ವಾಪಸಿ, ದಾದ್ರಿ ಹತ್ಯಾಕಾಂಡ, ದಲಿತರ ಕಗ್ಗೊಲೆ ಕೋಮು ಪ್ರಚೋದನೆಗಳು ನಡೆಯುತ್ತಿರುತ್ತವೆ. ಹಿಟ್ಲರ್‌ನಂತೆ ತುರ್ತುಸ್ಥಿತಿ ಹೇರದೆ ಫ್ಯಾಶಿಸಂ ಇಲ್ಲಿ ಕರಾಳರೂಪದಲ್ಲಿ ಬರುತ್ತದೆ. ಆದರೆ ಇಲ್ಲಿ ಅಂಬೇಡ್ಕರ್ ರೂಪಿಸಿದ ಸಂವಿಧಾನವಿದೆ. ಗಾಂಧಿ ನೆಹರೂ ಹಾಕಿದ ಪ್ರಜಾಪ್ರಭುತ್ವದ ಪರಂಪರೆ ಅಚಲವಾಗಿದೆ. ಸಾರ್ವಜನಿಕ ಅಭಿಪ್ರಾಯ ಜಾಗೃತವಾಗಿದೆ. ಮಾಧ್ಯಮಗಳು ಎಷ್ಟೇ ತಪ್ಪುಗಳ ನಡುವೆಯೂ ಕ್ರಿಯಾಶೀಲವಾಗಿವೆ. ಜನಪರ ಸಂಘಟನೆಗಳು ಜೀವಂತವಾಗಿವೆ. ಹೀಗಾಗಿ ಮೋಹನ್ ಭಾಗವತ್‌ರ ಹಿಟ್ಲರ್ ಮಾದರಿ ಹಿಂದೂರಾಷ್ಟ್ರದ ಹುನ್ನಾರ ಯಶಸ್ವಿಯಾಗುವುದಿಲ್ಲ.

ಭಾರತದ ಫ್ಯಾಶಿಸಂನ ಈ ಭಯಾನಕ ಸ್ವರೂಪದ ಬಗ್ಗೆ ಜಾಗೃತಿ ಮಾಡಿಸಬೇಕಿದೆ. ೧೯೪೭ರಿಂದ ೧೯೯೨ರವರೆಗೆ ಈ ದೇಶ ನೆಮ್ಮದಿಯಾಗಿತ್ತು. ತೊಂಬತ್ತರ ದಶಕದ ಬಾಬರಿ ಮಸೀದಿ ನೆಲಸಮ ಘಟನೆ ಅನಂತರ ಪರಿಸ್ಥಿತಿ ಬಿಗಡಾಯಿಸುತ್ತಲೇ ಬಂದಿದೆ. ಮೊದಲು ಬ್ರಾಹ್ಮಣ, ಬನಿಯಾ ಸಂಘಟನೆ ಎಂದು ಜನರಿಂದ ತಿರಸ್ಕರಿಸಲ್ಪಟ್ಟಿದ್ದ ಆರೆಸ್ಸೆಸ್, ನಿರಂತರ ದ್ವೇಷದ ವಿಷಬೀಜ ಬಿತ್ತಿ ಹಿಂದೂ, ಮುಸಲ್ಮಾನ, ಕ್ರೈಸ್ತರ ನಡುವೆ ಅಲ್ಲಲ್ಲಿ ಅಪನಂಬಿಕೆಯ ಕಂದಕ ನಿರ್ಮಿಸಿದೆ. ಜಗತ್ತಿನ ಬಂಡವಾಳಶಾಹಿ ಮತ್ತು ಭಾರತದ ಬ್ರಾಹ್ಮಣ ಬಿಕ್ಕಟ್ಟಿನಲ್ಲಿದ್ದಾಗ ಇಂಥ ಹುನ್ನಾರಗಳನ್ನು ನಡೆಸುತ್ತದೆ. ಅಲ್ಪಸಂಖ್ಯಾತರನ್ನು ಮೂಲೆಗೆ ತಳ್ಳಿದ ಅನಂತರ ದಲಿತರು ಮತ್ತು ಹಿಂದುಳಿದವರ ಮೀಸಲಾತಿಯನ್ನು ನಾಶ ಮಾಡುವ ರಹಸ್ಯ ಕಾರ್ಯಸೂಚಿಯನ್ನು ಅದು ಹೊಂದಿದೆ. ಇದನ್ನು ಮೋಹನ್ ಭಾಗವತ್ ಇತ್ತೀಚೆಗೆ ಬಹಿರಂಗವಾಗಿ ಹೇಳಿದ್ದಾರೆ. ಇಂಥ ಸನ್ನಿವೇಶದಲ್ಲಿ ಫ್ಯಾಶಿಸಂಗೆ ವಿರೋಧವಾದ ಬಲಿಷ್ಠ ಅಲೆಯೊಂದು ಈ ದೇಶದಲ್ಲಿ ಬರಬೇಕಾಗಿದೆ. ಪ್ರಗತಿಪರ, ಜಾತ್ಯತೀತ, ದಲಿತ, ಹಿಂದುಳಿದ ಜನವರ್ಗಗಳು ಈ ದೇಶವನ್ನು ಉಳಿಸಲು ಒಂದಾಗಿ ನಿಲ್ಲಬೇಕಾಗಿದೆ.

Saturday, November 28, 2015

ಸಿದ್ದು ಸತ್ಯಣ್ಣವರ ಹೊಸ ಪುಸ್ತಕ
 ಹತ್ತು ಹಡದರೂ ಮೊದಲ ಹೆರಿಗೆ ಸಂಭ್ರಮಾನೇ ಬ್ಯಾರೆ. ಅದಕ ಚೊಚ್ಚಲ ಪುಸ್ತಕ ' ಹೊಲ, ಅಪ್ಪ ಮತ್ತು ನಾನು' ಪ್ರಬಂಧ ಸಂಕಲನ ದೊಡ್ಡ ಅನುಭವ ನನ್ನ ಪಾಲಿಗೆ. ಇನ್ನೇನು ಭವಿಷ್ಯ ಮುಗದ ಹೋತು ಅನಕೊಂಡಿದ್ದ ಒಂದ ವರ್ಷದ ಹಿಂದ ಕೆಲಸ ಸಿಕ್ತು. ಅದಾಗಿ ಕರೆಕ್ಟ್ ಹತ್ತು ತಿಂಗಳಕ ಅಂದ್ರ ಬರೋ ಸೋಮವಾರ ಪುಸ್ತಕ ಕೈಯಾಗ ಇರ್ತದ. ೨೦೧೪ ನೇ ಸಾಲಿಗೆ ಯುವ ಲೇಖಕರ ಚೊಚ್ಚಲ ಕೃತಿಗೆ ಧನ ಸಹಾಯಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಇದನ್ನು ಆಯ್ಕೆ ಮಾಡಿದ್ದು, ಪ್ರಕಟಿಸಲು ನೆರವಾತು. ಬದುಕು ಕೊಟ್ಟ ಧಾರವಾಡದಾಗ ಮುಂದಿನ ತಿಂಗಳ ಸಂಡೂಲಾದ ಒಂದ ರವಿವಾರ ಬಿಡುಗಡೆ.

-ಸಿದ್ದು ಸತ್ಯಣ್ಣವರ 

ಸಿದ್ದು ಸತ್ಯಣ್ಣವರ ಎರಡು ಕವಿತೆಗಳು


 
1
ಭವಿಷ್ಯ ಹಿಡಿದು ನಿಂತ ಅವ್ವ


ವಂಶವಾಹಿಯ ಕುರುಹಾದ
ಅಜ್ಜನ ಖುಷ್ಕಿ ಕೃಷಿಭೂಮಿಯಲಿ
ನಿಟ್ಟುಸಿರು,  ವಿಷಾದ ಹೆಪ್ಪುಗಟ್ಟಿದ ಮೈಲಿಗಲ್ಲು ಬಿಟ್ಟರೆ
ಅಪ್ಪನ ಪಾದದ ಗುರುತುಗಳ ಢಾಳ ಮೌನ
ಫಸಲೆಲ್ಲಾ ಸೊಲ್ಲಡರಿ ಕಪ್ಪಿಟ್ಟಾಗ
ಅಪ್ಪ ಅಲ್ಲಿ ನೆಟ್ಟದ್ದು ರಕ್ತ ಮಾಂಸಗಳ ಹೊರತಾದ ಒಲವಿರಬಹುದೇ? 

ತಾ ತಿನ್ನುವ ಎರಡು ತುತ್ತಿಗೆ
ಊರನ್ನೇ ಹುಗಿಯಬಹುದಾದ ಕರಿ ಹಲ್ಲ ಹೊತ್ತು
ನಗುತ್ತಿದ್ದ ಹೊಲಕ್ಕೆ
ಅಪ್ಪ ಪ್ರಕೃತಿಗೆ ಇದಿರಾಗಿ ಅದೆಷ್ಟು ಬಡಿದಾಡಿಕೊಂಡಿದ್ದು?
ಕತ್ತಲನ್ನೇ ಕಕ್ಕಿದ ಹಗಲು

ವಜನ, ಭಜನೆ, ಭಕ್ತಿಗಳ ಬದುವಾಚೆಗೆ ಮೂಟೆ ಕಟ್ಟಿ
ಎಳೆ ಉಳ್ಳಾಗಡ್ಡಿ ಹುಟ್ಟದೆ, ಸಾಲ ಕೊಟ್ಟವ
ಬಾಯಲಿ ಕೊಸರ್ಯಾಡಿದಾಗ ನಿಜವಾದ  ಕುರುಕ್ಷೇತ್ರ ನನ್ನಪಾಲಿಗೆ
ನೀರಿಗೂ ದಾಹದ ರುಚಿ ಗೊತ್ತಾದ ಘಳಿಗೆಯದು 

ಹುಟ್ಟದ ಪೀಕು, ಪ್ರೇಯಸಿಯನ್ನು ಕಸಿದು
ಮುಂಗಾರಿಯಿಂದ ಹಿಂಗಾರಿಗೆ ಮತ್ತೇನೋ
ಬಿತ್ತಿದಾಗ ಅಲ್ಲಲ್ಲಿ ಹುಟ್ಟಿ, ನೆರಳನ್ನೇ ತುಳಿದು
ಕಾಡಿದ್ದು ಇನ್ನಿಲ್ಲದಷ್ಟು

ದೀಪಕ್ಕೆ ಮುತ್ತಿಟ್ಟ ತುಟಿಗಳು ಸುಟ್ಟಾಗ
ಅಲ್ಲಿ ಅಂಥಾ ಗಾಯದ ಗುಲಗಂಜಿ ಗುರುತೂ ಇಲ್ಲ
ಅಪ್ಪನ ಕನಸುಗಳೇ ಈಗ ನೀರಾವರಿ
ಅದಕ್ಕೆ ಅವ್ವ, ಅವ್ವನೆಂದು ಕರೆಸಿಕೊಳ್ಳುತ್ತಿರಬೇಕು
ಪಿಂಗಾಣಿಯ ಪಾತ್ರೆಯಲಿ ಭವಿಷ್ಯವ ಹಿಡಿದು

2
ಸತ್ತು ಹುಟ್ಟಿದವರುಎದೆಯ ಮೇಲೆ ಗುಲಾಬಿ ಚಿಗುರು
ಹಸಿವಿಗೆ ಅನ್ನವಿಲ್ಲದಿದ್ದರೂ ನಮ್ಮವರ ನೆನಪುಗಳು
ಅದೋ ನೋಡಿ ಅಲ್ಲಿ
ನೀವು ನಕ್ಕ ಚಿತ್ರಗಳೂ ನಮ್ಮ ಬತ್ತಳಿಕೆಯಲಿ 

ಹೊನ್ನಂಬರಿಕೆಯ ಗರಿಕೆಗಳು
ಜೀವನದ ಪುಟಗಳಲಿ ಶಾಯಿ
ಬೇರಿನ ಮಣ್ಣು ಎದೆಯ ಹರವಿನ ಮೇಲೆ
ತುಂತುರು ಹನಿಗಳನ್ನು ದಾಹಕ್ಕೆ ಮದ್ದಾಗಿ ಬಳಸಿಕೊಳ್ಳುವುದು ಗೊತ್ತು
ಅದು ನೀವೆ ಕಲಿಸಿದ ವಿದ್ಯೆ.....! 

ಗೋಡೆಗಾತು ನಿಂತ ಚಪ್ಪಲಿಗಳಿಗೀಗ ನಿರಾಳ
ಕಾಲ ಗುರುತುಗಳು ನೆಲದ ಮೇಲೆ
ಪಾದಬರಹ ಹಣೆಬರಹವಾಗಬಾರದೇಕೆ?
ನಾವೊಂದೆ ಕಡೆ ತಿರುಗಾಡಿಲ್ಲ
ಅಲ್ಲಿ ಏನುಂಟು ಏನಿಲ್ಲ 

ಸತ್ತ ವಸಾಹತುಗಳ ಹುಡುಕಾಟದಲಿ
ಇದ್ದ ಬದುಕು ನಿರ್ಜೀವ ಆಸ್ತಿ
ನಾಲ್ಕು ತುತ್ತಿಗಾಗಿ ಅಲ್ಲಿ ಕಣ್ಣೀರ ಕೋವಿ
ಬತ್ತದ ಅವ್ವನ ಹಾಲು,  ನಾ ಸತ್ತಾಗಲೂ?
ಅಪ್ಪನೊಂದಿಗೆ ಅವಳ ಬಿಟ್ಟರೆ ನೆಚ್ಚಿಕೊಳ್ಳಲಿನ್ನ್ಯಾರು?
ಜಗತ್ತಿನ ತುಂಬಾ ಸಹೃದಯಿ ಅನಾಥ ಮಾತಾಪಿತೃಗಳು

ಆ ಬೀದಿಯ ಹೊಟ್ಟೆಯ ತುಂಬಾ
ಪುಟ್ಟ ಜಗತ್ತಿನ ಅನವರತ ಕಾದಾಟ, ಚೀರಾಟ
ಬ್ರಹ್ಮಾಂಡದಲ್ಲಿ ಬದುಕಿದವರು ಒಳಗಿನ ಒಂದು
ಬಂಧೀಖಾನೆಯ ಗೆಲ್ಲಲಾಗಲಿಲ್ಲ
ಅವ್ವನ ರಾಟಿ ಯಂತ್ರ ಶತಮಾನ ದಾಟಿ
ತಂಗಿ ಕೈಯ್ಯಲ್ಲೀಗ ಚಿಕ್ಕ ಸೂಜಿ
ಹೆಂಡತಿಯದ್ದೋ ಬರೀ ನೂಲು ರೇಷ್ಮೆಯ ಮಾತು

ಕಿಡಿಗೇಡಿಗಳ ಕಿಡಿ ಅಬ್ಬಾ! ಅದೆಂಥಾ ಬೆಂಕಿ
ಹೆ ಹೆ ಅವರು ಕಡ್ಡಿಗೀರಿದ್ದು ನೀರಿನ ಮನೆಯ ಮೇಲೆ
ಹುಟ್ಟಿ ಸತ್ತವರಲ್ಲ ನಾವು
ಸತ್ತು ಹುಟ್ಟಿದವರು,  ಬದುಕು ಗೊತ್ತು
ಜೊತೆಗದರ ನೀತಿಗಳು ದಾರಿಯ ಮುಂದೆಸಿದ್ದು ಸತ್ಯಣ್ಣವರ ಯುವ ಕವಿ ಸಿದ್ದು ಸತ್ಯಣ್ಣವರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದವರು. ಸಧ್ಯ ಧಾರವಾಡದಲ್ಲಿ ಸುವರ್ಣ ವಾಹಿನಿಯ ಪತ್ರಕರ್ತರು. ಅವರ ಮೊದಲ ಪುಸ್ತಕ ' ಹೊಲ, ಅಪ್ಪ ಮತ್ತು ನಾನು' ಪ್ರಬಂಧಗಳ ಸಂಕಲನ ಮುಂದಿನ ವಾರ ಬಿಡುಗಡೆಯಾಗಲಿದೆ.


siddumcj@gmail.com


9632338494 


ಅಲ್ಲಿ ನಾನು ಕಳೆದು ಹೋಗಿದ್ದೆ...ಶೂದ್ರ ಶ್ರೀನಿವಾಸ್


ನಾವು ಎಷ್ಟೇ ಧೈರ್ಯವಂತರಾಗಿದ್ದರೂ, ಛಲವಾದಿಗಳಾಗಿದ್ದರೂ ಪರಕೀಯ ಸ್ಥಳಗಳಲ್ಲಿ ಮಾನಸಿಕವಾಗಿ, ದೈಹಿಕವಾಗಿ ದುರ್ಬಲರಾಗಿ ಬಿಟ್ಟಿರುತ್ತೇವೆ. ಇಂಥದ್ದು ಸೆಪ್ಟಂಬರ್ 2015ರ ಎರಡನೆ ವಾರದಲ್ಲಿ ಒಂದಷ್ಟು ಸಮಯ ಅನುಭವಿಸಿದ್ದೆ. ಬೆಳಗ್ಗೆಯಿಂದ ಅಪರೂಪದ ಗ್ರಾಂಡ್ ಕೆನಾನ್‌ನ ವೈಭವವನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದೆ. ಅದನ್ನು ಇಲ್ಲಿ ಪ್ರತ್ಯೇಕವಾಗಿಯೇ ವಿವರಿಸಬೇಕಾಗುತ್ತದೆ. ಅಷ್ಟೊಂದು ವೈವಿಧ್ಯಮಯತೆಯನ್ನು ನೂರಾರು ಅಥವಾ ಸಾವಿರಾರು ವರ್ಷಗಳಿಂದ ಪ್ರಕೃತಿಯಲ್ಲಿ ಆದ ಏರುಪೇರುಗಳಿಂದ ಪಡೆದಿರುವಂಥದ್ದು. ಇದಕ್ಕೆ ಪೂರಕವೆಂಬಂತೆ ನೂರಾರು ಮೈಲಿ ಹೋದರೂ ಒಂದೇ ಒಂದು ಮರಗಿಡವಿಲ್ಲದ ಮರುಭೂಮಿಯಂಥ ಪ್ರದೇಶ. ಇಂಥದ್ದಕ್ಕೆಲ್ಲ ರಾಜಧಾನಿಯೆಂಬಂತೆ ಲಾಸ್‌ವೇಗಾಸ್ ಇರುವಂಥದ್ದು. ಏನೇನು ಬೆಳೆಯದ ಕಡೆ ಜನ ಹೇಗೆ ವಾಸಿಸುವರು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚಕಿತಗೊಂಡಿರುವೆ. ಹಾಗೆ ನೋಡಿದರೆ ಈ ಲಾಸ್‌ವೇಗಾಸ್‌ಗೆ ಪ್ರವೇಶಿಸುವ ಮುನ್ನವೇ ಗೆಳೆಯರಿಂದ ಕೇಳಿಸಿಕೊಂಡಿದ್ದೆ: ‘‘ಶೂದ್ರ ಎಚ್ಚರದಿಂದ ಇರು. ಕ್ಯಾಸಿನೋ ಎಂಬ ಜೂಜಿನ ಆಕರ್ಷಕ ಸಲಕರಣೆಗಳ ಮಧ್ಯೆ ಸಿಕ್ಕಿಕೊಂಡು; ಮತ್ತೆ ನಿನ್ನ ದೇಶಕ್ಕೆ ವಾಪಸ್ಸು ಹೋಗದಂತೆ ಮಾಡಿಬಿಡುತ್ತದೆ’’ ಎಂದು. ಅಮೆರಿಕದ ಕ್ಯಾಲಿಪೋರ್ನಿಯಾದ ಈ ಲಾಸ್‌ವೇಗಾಸ್ ಸ್ಯಾನ್‌ಫ್ರಾನ್ಸಿಸ್‌ಕೊ, ಲಾಸ್ ಏಂಜಲೀಸ್ ರೀತಿಯಲ್ಲಿಯೇ ವಿಚಿತ್ರ ನಗರ. ಅಥವಾ ಆ ಎರಡೂ ನಗರಗಳಿಗಿಂತ ಹುಚ್ಚನ್ನು ತುಂಬಿಕೊಂಡಿರುವ ‘ಮ್ಯಾಡ್‌ಮ್ಯಾಡ್ ಸಿಟಿ’. ಒಮ್ಮಾಮ್ಮೆ ಈ ರೀತಿಯ ನಗರವೂ ಇರಲು ಸಾಧ್ಯವೇ ಅನ್ನಿಸಿಬಿಡುತ್ತದೆ.

 1985ರಲ್ಲಿ ಥಾಯ್ಲೆಂಡ್‌ನ ಬ್ಯಾಂಕಾಂಕ್‌ನಲ್ಲಿದ್ದಾಗ; ಓ ದೇವರೇ ಇಂಥ ನಗರಗಳನ್ನು ಸೃಷ್ಟಿ ಮಾಡಿದ್ದೀಯ ಎಂದು ದೇವರನ್ನು ನಂಬದಿದ್ದರೂ; ಬಾಲ್ಯ ಕಾಲದಲ್ಲಿ ಆರಾಧಿಸಿಕೊಳ್ಳುತ್ತಿದ್ದ ಆ ಅಸ್ಪಷ್ಟ ದೇವರ ನೆನಪು ಗುನುಗುನಿಸಿಕೊಳ್ಳುವಂತೆ ಮಾಡಿತ್ತು. ಆಗ ಲಾಸ್‌ವೇಗಾಸ್ ಬಗ್ಗೆ ಏನೇನು ಕೇಳಿರಲಿಲ್ಲ. ಆದರೆ ಈ ನಗರದ ಮುಂದೆ ಆ ಬ್ಯಾಂಕಾಕ್ ನಗರ ಪುಟ್ಟ ಮಗುವಿದ್ದಂತೆ. ಬಾಸ್ಟನ್‌ನಿಂದ ಒಂದು ವಾರದ ಮಟ್ಟಿಗೆ ವೆಸ್ಟ್‌ಕೋರ್ಸ್ಟ್ ಕ್ಯಾಲಿಫೋರ್ನಿಯಾದ ಪ್ರದೇಶವನ್ನು ಸುತ್ತಲು ಹೊರಟಾಗ ‘ಲಾಸ್‌ಏಂಜಲೀಸ್’ನ್ನು ನೋಡಲು ಹೋಗುತ್ತಿದ್ದೇನೆ ಎಂದು. ಯಾಕೆಂದರೆ ಅದು ವಿಶ್ವದ ಮನರಂಜನೆಯ ರಾಜಧಾನಿಯೆಂದು ಎಲ್ಲೆಡೆ ಕರೆಸಿಕೊಂಡಿರುವಂಥದ್ದು. ನಿಜವಾಗಿಯೂ ಅದನ್ನು ನೋಡಿದ ಮೇಲೆ ಕರೆಸಿಕೊಳ್ಳಲು ಅರ್ಹವಾಗಿರುವಂಥದ್ದು. ಅದೇನೆ ಆಗಿರಲಿ, ಈ ನಗರದ ಮುಂದೆ ಲಾಸ್‌ವೇಗಾಸನ್ನು ಕೂರಿಸಿದರೆ; ಅಯ್ಯೋ ದಾರಿ ತಪ್ಪಿರುವಂಥ ನಗರ ಅನ್ನಿಸದಿರದು. ಆದರೆ ಎಲ್ಲ ಆಕ್ಷೇಪಣೆಗಳನ್ನು ಮರೆತು ಇದು ವಿಚಿತ್ರ ಜೂಜುಕಟ್ಟೆ ನಗರ ಎಂದು ಎಲ್ಲರೂ ಆರೋಪಿಸಿ ಬಿಟ್ಟಿದ್ದಾರೆ. ನಿಜವಾಗಿಯೂ ಇದು ಆ ರೀತಿಯ ನಗರವೇ ಆಗಿದೆ.

ಲಾಸ್‌ವೇಗಾಸ್‌ನ ವಿಮಾನ ನಿಲ್ದಾಣವೇ ಮನಮೋಹಕ ಹುಡುಗಿಯಂತೆ ಕಂಗೊಳಿಸುವ ವಿವಿಧ ರೂಪಗಳ ‘ಕ್ಯಾಸಿನೋ’ ಎಂಬ ಬಣ್ಣಬಣ್ಣದ ಪೆಟ್ಟಿಗೆಗಳು. ಪಕ್ಕದಲ್ಲಿ ಯಾರು ನಿಂತಿದ್ದಾರೆ ಎಂಬ ಅರಿವೂ ಇಲ್ಲದೆ ಅದರಲ್ಲಿ ಮಗ್ನರಾಗಿರುವಂಥ ಜೂಜುಕೋರರು. ಊಟ, ನಿದ್ದೆ, ಮನೆ ಮಂದಿಯನ್ನೆಲ್ಲ ಮರೆಸುವ ಜೂಜು. ಇದು ಸರಕಾರಕ್ಕೆ ಎಂತೆಂಥ ಅಕ್ರಮ ಆದಾಯದ ಮೂಲಗಳನ್ನು ಸೃಷ್ಟಿಸಿಕೊಡಬಲ್ಲುದು ಎಂದು ಒಂದು ಕ್ಷಣ ಗಾಬರಿಗೊಂಡೆ. ಗೆಳೆಯರಲ್ಲಿ ಸಾಕಷ್ಟು ಮಂದಿ ಹೇಳಿದ್ದರು: ಲಾಸ್‌ವೇಗಾಸ್ ವರ್ಷದ ಮುನ್ನೂರ ಅರವತ್ತೈದು ದಿನವೂ ನಿದ್ದೆ ಹೋಗದೆ ತನ್ನ ಧಣಿವನ್ನು ಮರೆತಿರುವಂಥ ನಗರ. ಆದ್ದರಿಂದ ಹುಷಾರಾಗಿರು ಎಂದು ಹೇಳಿದ್ದರಲ್ಲಿ ಯಾವುದೇ ರೀತಿಯ ಉಡಾಫೆ ಇರಲಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಬಂದ ದಾರಿಯನ್ನು ಮರೆಸುವಂಥ ವಿವರಿಸಲಾಗದ ಆಕರ್ಷಣೆಗಳು. ವಿಶಾಲವಾದ ಪರದೆಯ ರೀತಿಯ ಗೋಡೆಗಳ ಮೇಲೆ ಎಂತೆಂಥದೋ ವಾದ್ಯಗಳ ಶಬ್ದದಲ್ಲಿ ಕರಗಿ ಹೋದವರಂತೆ ಕುಣಿದು ಕುಪ್ಪಳಿಸುವ ಲಯ ತಪ್ಪಿದ ನೃತ್ಯ. ಆ ಸಂಸ್ಕೃತಿಗೆ ನಾವು ಪರಕೀಯರಾಗಿರುವುದರಿಂದ ಒಂದು ರೀತಿಯ ತಲ್ಲಣಗಳಿಂದ ನಡುಗಿ ಹೋಗಿರುತ್ತೇವೆ. ಜಗತ್ತಿನಲ್ಲಿರುವ ಎಲ್ಲ ಡಿಸ್ಕೋ ಸಂಸ್ಕೃತಿ ಇಲ್ಲಿ ಬಂದು ಬಿದ್ದು ಚೆಲ್ಲಾಪಿಲ್ಲಿಯಾಗಿ ಗದ್ದಲವೆಬ್ಬಿಸುತ್ತಿದೆ ಎಂಬ ಅಭಿಪ್ರಾಯ ಧುತ್ತನೆ ಮನಸ್ಸಿನ ತುಂಬ ಆವರಿಸಿಕೊಂಡು ಕಸಿವಿಸಿಯನ್ನು ಸೃಷ್ಟಿಮಾಡಿಬಿಟ್ಟಿರುತ್ತದೆ. ಇಂಥ ನಗರಕ್ಕೆ ಸೆಪ್ಟಂಬರ್ 17ರಂದು ಪ್ರವೇಶ ಮಾಡಬೇಕಾಯಿತು. ಮೊದಲೇ ತಿಳಿಸಿದಂತೆ ವಿಮಾನದಲ್ಲಿಯೇ ದಾರಿತಪ್ಪಿಸುವಂತಿದ್ದ ಕ್ಯಾಸಿನೋ ಎಂಬ ಜೂಜಿನ ಯಂತ್ರಗಳು. ಅದಕ್ಕೆ ಪೂರಕವಾದಂತಹ ಎಂಥದೋ ಅವ್ಯಕ್ತ ಆಕರ್ಷಣೆಗಳು. ಅತ್ಯಂತ ವಿಶಾಲವಾದ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳು. ಎಲ್ಲವನ್ನು ಸರಳವಾಗಿ ನೋಡುವಂತಹವರಿಗಂತೂ; ವಿಷವರ್ತುಲವಾಗಿ ತಲೆಸುತ್ತು ಬರುವಂತೆ ತಬ್ಬಿಬ್ಬುಗೊಳಿಸಿಬಿಟ್ಟಿರುತ್ತದೆ. ಅರೆನಗ್ನ ಚಿತ್ರಗಳಲ್ಲಿ ಮುಖಕ್ಕೆ ರಾಚುವಂಥ ಜಾಹೀರಾತು ಫಲಕಗಳು. ಒಮ್ಮೆಮ್ಮೆ ಅನ್ನಿಸುವುದು ಇವೆಲ್ಲ ಇಲ್ಲಿ ಅಜೀರ್ಣವಾಗಿ ಅಥವಾ ‘ಔಟ್ ಡೇಟೆಡ್’ ಆಗಿ; ಭಾರತದಂತಹ ರಾಷ್ಟ್ರಗಳಿಗೆ ಅಕ್ರಮವಾಗಿ ಬಂದು ಬೀಳುತ್ತಲೇ ಒಟ್ಟು ನಮ್ಮ ನೂರಾರು ವರ್ಷಗಳ ಅಭಿರುಚಿ ಇಲ್ಲವೇ ಜೀವನ ವಿಧಾನವನ್ನೇ ತಲೆಕೆಳಗೆ ಮಾಡಿ ಬಿಡುತ್ತದೆ ಅನ್ನಿಸತೊಡಗಿತ್ತು. ಆ ವಿಮಾನ ನಿಲ್ದಾಣವನ್ನು ದಾಟಿ ಅಲ್ಲಿಂದ ಹತ್ತು ಹದಿನೈದು ಮೈಲಿ ದೂರದಲ್ಲಿದ್ದ ಲಾಸ್‌ವೇಗಾಸ್ ಮಧ್ಯಭಾಗದ ‘ಪ್ಲಾನೆಟ್ ಹಾಲಿವುಡ್ ಇಂಟರನ್ಯಾಷನಲ್ ಹೋಟೆಲ್’ಗೆ ಬಂದೆವು. ಅಲ್ಲಿ ಎಲ್ಲ ರೀತಿಯ ಚೆಕ್ಕಿಂಗ್ ಮುಗಿಸಿ ಕ್ಯಾಲಿಫೋರ್ನಿಯಾದ ಪ್ರವಾಸಕ್ಕೆಂದು ನೋಂದಾಯಿಸಿಕೊಂಡ ಭಾರತದ ಬೇರೆ ಬೇರೆ ರಾಜ್ಯಗಳ ಒಂದಷ್ಟು ಮಂದಿ ಒಂದೆಡೆ ಸೇರಿದೆವು. ಅವರಲ್ಲಿ ಬೆಂಗಳೂರಿನವರೂ ಇಬ್ಬರು ದಂಪತಿ ಇದ್ದರು. ಕಳೆದ ಹದಿನೈದು ವರ್ಷಗಳಿಂದ ದುಬೈನಲ್ಲಿದ್ದುದರಿಂದ; ಅದಕ್ಕೆ ಹತ್ತಿರವಿರುವ ಸಂಸ್ಕೃತಿಯಲ್ಲಿ ಕರಗಿ ಹೋಗಿದ್ದವರು. ಇನ್ನು ಕೆಲವರು ಗುಜರಾತಿನ ಕಡೆಯಿಂದ ಬಂದವರು. ಪಕ್ಕಾ ಬಿಜೆಪಿ ಸಂಸ್ಕೃತಿಯವರು.

ಪ್ರವಾಸವನ್ನು ವ್ಯವಸ್ಥೆ ಮಾಡಿದ್ದ ವಿವರವಾದ ಮಾಹಿತಿಯನ್ನು ಕೊಟ್ಟರು. ರಾತ್ರಿ 11:30ರ ವರೆಗೆ ಈ ನಗರದ ರಾತ್ರಿಯ ಲೋಕ ಹೇಗೆ ಇರುತ್ತದೆಂಬುದನ್ನು ನೋಡೋಣ ಎಂದು ತಿಳಿಸಿದ್ದರು. ಗಡಿಬಿಡಿಯಿಂದ ನಮಗೆ ವ್ಯವಸ್ಥೆ ಮಾಡಿದ್ದ ಮುವತ್ತೇಳನೆಯ ಅಂತಸ್ತಿನ ಕೊಠಡಿಗೆ ಹೋದೆವು. ಜೊತೆಯಲ್ಲಿ ನನ್ನ ಪತ್ನಿ ಮತ್ತು ಆಕೆಯ ಅತ್ತಿಗೆ ಇದ್ದರು. ಆ ಹೋಟೆಲೇ ಒಂದು ದೊಡ್ಡ ಹಳ್ಳಿ ಇದ್ದಂತೆ ಇತ್ತು. ಬಾಸ್ಟನ್‌ನಿಂದ ಎರಡು ವಿಮಾನಗಳನ್ನು ಬದಲಾಯಿಸಿ ಏಳು ಸಾವಿರ ಮೈಲಿ ಪ್ರಯಾಣ ಮಾಡುವಾಗ ಸಾಕಷ್ಟು ಆಯಾಸವಾಗಿತ್ತು. ಆದರೂ ಪ್ಯಾಕೇಜ್ ಪ್ರವಾಸದಲ್ಲಿ ವಿರಾಮವನ್ನು ಬಯಸಲು ಆಗುವುದಿಲ್ಲ. ಸಿದ್ಧವಾಗಿ ಕೆಳಗೆ ಬಂದೆವು. ಎಲ್ಲರೂ ಪ್ರವಾಸ ವ್ಯವಸ್ಥೆ ಮಾಡಿದ್ದ ಅದರ ಮುಖ್ಯಸ್ಥೆ ಮಿಹಿಕಾ ಪೇಥೆ ಎಂಬ ಕ್ರಿಯಾಶೀಲ ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋದೆವು. ಹಾಗೆ ಹೀಗೆ ಸುತ್ತಾಡಿ ಆ ಮಹಡಿ ಈ ಮಾಹಿತಿ ಎಂದು ನಾನಾ ವಿಧದ ಯಂತ್ರಗಳ ನಡುವೆ ಸಾಗುತ್ತ ಇಳಿಯುತ್ತ ಕಣ್ಣಿಗೆ ಬಡಿಯುವ ಬೆಳಕಿನ ಚಿತ್ರಗಳನ್ನು ಎದುರಿಸುತ್ತ; ಅಷ್ಟೇ ತೀವ್ರತೆಯಿಂದ ಕಿವಿಗಳನ್ನು ಅಪ್ಪಳಿಸುವ ಗದ್ದಲವನ್ನು ಸಹಿಸಿಕೊಂಡು ಭಾರತದ ಆಹಾರ ಸಿಗುವ ಹೋಟೆಲ್‌ಗೆ ಹೋದೆವು. ಬೊಫೆ ಸಿಸ್ಟಮ್. ವಿಧವಿಧವಾದ ಐಟಮುಗಳು. ಸಾಕಷ್ಟು ಜನರ ಒತ್ತಡವಿದ್ದರೂ ತಿಂದು ಹೊರಗೆ ಬಂದೆವು. ನಮಗಾಗಿ ಬಸ್ಸೊಂದು ಕಾದಿತ್ತು. ಅದರಲ್ಲಿ ಕ್ರಿಯಾಶೀಲ ಗೈಡೂ ಇದ್ದ. ಸುಮಾರು ಮೂರು ಗಂಟೆ ಲಾಸ್‌ವೇಗಾಸ್‌ನಲ್ಲಿ ಎಂತೆಂಥದೋ ಮೈನಡುಗಿಸುವ ಬೆಳಕಿನ ಚಮತ್ಕಾರಗಳು. ಆ ಗೈಡು ಇದು ವೇಗಾಸ್‌ನ ಆಡಳಿತದ ಕಚೇರಿ, ಇದು ಇಂಥ ಸ್ಮಾರಕ ಹೀಗೆ ಒಂದೊಂದನ್ನೇ ತೋರಿಸುತ್ತ ವಿವರಣೆ ಕೊಡುತ್ತ ಹೋದ. ಪರಿಚಯದ ದೃಷ್ಟಿಯಿಂದ ಸ್ವೀಕರಿಸುತ್ತ ಹೋದೆ. ಆದರೆ ಇಂಥ ನಗರಗಳಿಗೆ ನಾವು ನೈತಿಕವಾಗಿ ಆರೋಪಿಸಿಕೊಳ್ಳುವ ಅಥವಾ ಆರೋಪಿಸುವ ‘ಆತ್ಮ’ ಎಂಬುದು ಇರುತ್ತದೆಯೇ ಎಂಬುದು ಕಾಡುತ್ತ ಹೋಯಿತು.

ಕ್ಷುಲ್ಲಕ ಮನರಂಜನೆಯ ನೆಪದಲ್ಲಿ; ಎಂತೆಂಥದೋ ತೆವಲುಗಳನ್ನು ಪ್ರಚೋದಿಸಲು ಮಾತ್ರ ಸಾಧ್ಯವಿರುತ್ತದೆ. ಅಗಾಧವಾದ ಪ್ರಮಾಣದಲ್ಲಿ ಪ್ರವಾಸಿಗರನ್ನು ಹಾಗೂ ಸ್ಥಳೀಯರನ್ನು ಆಕರ್ಷಿಸುವ ಇಂಥ ಚಟುವಟಿಕೆಗಳು ಕೊನೆಗೂ ಏನನ್ನು ಬಿಟ್ಟು ಹೋಗಬಹುದು ಅನ್ನಿಸುತ್ತದೆ. ಹಾಗೆ ನೋಡಿದರೆ ನಾನು ಅಮೆರಿಕದ ಸುತ್ತಾಟದಲ್ಲಿ ಬಾಸ್ಟನ್, ವಾಷಿಂಗಟನ್, ನಾರ್ತ್ ಕರೋಲಿನಾದ ರ್ಯಾಲಿಯನ್ನು ಇಷ್ಟಪಟ್ಟಷ್ಟು, ಈ ನಗರವನ್ನಂತು ಇಷ್ಟಪಡಲು ಆಗಲೇ ಇಲ್ಲ. ಹಾಗೆ ನೋಡಿದರೆ ಆಂಗ್ಲ ಭಾಷೆಯ ಮಹತ್ವಪೂರ್ಣ ಲೇಖಕ ಜಿ.ಕೆ. ಚೆಸ್ಟರ್‌ಟನ್ ನೂರು ವರ್ಷಗಳ ಹಿಂದೆ ‘ವಾಟ್ ಐ ಸಾ ಇನ್ ಅಮೆರಿಕ’ ಎಂಬ ಅಮೂಲ್ಯ ಕೃತಿಯನ್ನು ಪ್ರಕಟಿಸಿದ್ದಾರೆ. ಅಮೆರಿಕದ ಬೆಳವಣಿಗೆಯ ಏರುಪೇರುಗಳನ್ನು ಕುರಿತು ಆತ್ಮೀಯವಾಗಿ ಬರೆದಿರುವ ಕೃತಿ. ಈ ಕೃತಿಯು ಕಾರವಾರದ ಗ್ರಂಥಾಲಯದಲ್ಲಿ ಸಿಕ್ಕಿದಾಗ ಪುಳಕಿತನಾಗಿದ್ದೆ. ಅವರು ಬಾಸ್ಟನ್ ಅಂಥ ಪ್ರಸಿದ್ಧ ನಗರವನ್ನು ಕುರಿತು ಬರೆಯುವಾಗ; ‘‘ನನಗೆ ಬಾಸ್ಟನ್ ಹೆಸರಿಗಿಂತ, ಆ ನಗರ ತುಂಬ ಪ್ರಿಯವಾಯಿತು’’ ಎಂದಿದ್ದಾರೆ! ಚೆಸ್ಟರ್‌ಟನ್ ಅವರ ಮಾತನ್ನೇ ಮುಂದಿಟ್ಟುಕೊಂಡು ಯೋಚಿಸಿದರೆ ‘ಲಾಸ್‌ವೇಗಾಸ್’ ಹೆಸರು ಎಷ್ಟು ಚೆನ್ನಾಗಿದೆ. ಆದರೆ ಅದು ಬಾಚಿತಬ್ಬಿಕೊಂಡಿರುವ ವ್ಯವಹಾರದ ತುತ್ತತುದಿಯನ್ನು ನಾವು ಹೇಗೆ ಗ್ರಹಿಸಿಕೊಳ್ಳಬೇಕು ಅನ್ನಿಸುತ್ತದೆ. ಒಂದು ದೃಷ್ಟಿಯಿಂದ ಈಗಿನ ಪ್ರಮಾಣದಲ್ಲಿ ಅಂದು ‘ಲಾಸ್‌ವೇಗಾಸ್; ಇರಲು ಸಾಧ್ಯವೇ ಇಲ್ಲ. ಅಮೆರಿಕದಂಥ ಸಾಕಷ್ಟು ಮುಂದುವರಿದ ಹಾಗೂ ಜಗತ್ತಿಗೆ ಯಜಮಾನನಂತೆ ವರ್ತಿಸುವ ಬಹುದೊಡ್ಡ ದೇಶವು; ಎಷ್ಟೇ ನೈಸರ್ಗಿಕ ವೈಪರೀತ್ಯಗಳಿರಲಿ; ಬೇರೆ ರೀತಿಯಲ್ಲಿ ಆರ್ಥಿಕ ಆಯಾಮಗಳನ್ನು ಸೃಷ್ಟಿಸಲು ಸಾಧ್ಯವಿತ್ತು. ಇದು ನನ್ನಂಥವರ ಆಶಯದ ಮಾತಾಗಬಹುದು.

ಪ್ರಶಸ್ತಿ ವಾಪಸಾತಿ ಲೇಖಕರ ಸಮಾವೇಶ : ಪತ್ರಿಕಾ ವರದಿ
 


Our act not politically motivated, say writers

The hindu

Writers from various States interacting with presspersons in Dharwad on Friday.— Photo: By Special Arrangement
 
Writers from various States interacting with presspersons in Dharwad on Friday.— Photo: By Special Arrangement 
 
Writers from Karnataka, Maharashtra, Goa, and Gujarat, who have returned their awards in protest against the alleged intolerance in the country, clarified here on Friday that their act was symbolic and not politically motivated. The writers, who had assembled here for a convention, interacted with presspersons prior to the event. Dr. M.M. Kalburgi Hatya Virodhi Horata Vedike, Dharwad, had organised the event.

Writers G.N. Devy and Anil Joshi from Gujarat, Rahimat Tarikere, K. Neela and others spoke on why they chose to return the awards.

They said that the killing of Narendra Dabholkar, Govind Pansare, and Kalburgi prompted them and other writers from across the country to raise their voice against the mounting intolerance. “Returning the award is a sober and symbolic way of registering our protest,” they said.
On allegations that those who were returning the awards benefited from the previous Congress-led governments, the writers sought to clarify that they were non-political and said they had even opposed the Emergency.

Denying the charges that they were selective in opposing fundamentalism and intolerance, they said that just because the writers had not returned their awards earlier did not mean that they should keep quiet now.

The writers said that “the common in India was highly tolerant.” However, it was some fundamentalists and vested interests that were disturbing peace and harmony in the country. It was the duty of the writers, artistes, film-makers and other responsible citizens of society to register their protest on such occasions.

To a query, Mr. Anil Joshi clarified that they had not lowered the dignity and prestige of the country by returning the awards.

Writers Rajendra Chenni, Ramesh Oza, Uttam Parmar, Kanaji Patel, Manashi Jeni, Sanjeev Khandekar, Vaishali Narkar, R.K. Hudugi and others took part in the interaction.

Thursday, November 26, 2015

A Muslim Lady Shows Mirror to All Intolerance Rants in This Brilliant Article.
Sofiya Rangwala


Amidst a fake atmosphere of Intolerance being created in India, in the last 1 month, I owe my version of what I, a Muslim lady, living and working in India feel like. This has been due from me since sometime. Now, I feel the water has gone above the head and I too need to share my views. So, here it is.

I am a Muslim lady, a practicing dermatologist by profession and I run my own high- end laser skin clinic, in Bangalore. I was brought up in Kuwait and at the age of 18, came to India to pursue medical education. I decided to stay back in India while almost all my friends left India for greener pastures. Not even once did I consider that being a Muslim could create a problem for me, as my sense of nationalism held me back to my roots and so here I am, serving my country since the last 20 years.

I studied in Manipal, Karnataka. I lived alone like all students do. While I was in college, all my professors were Hindus and almost all the people who I would interact with were Hindus as well. There is not a single incident when anyone showed partiality towards me based on my gender or religion. Every single one of them was kind and in fact sometimes, I felt as though they made an extra effort to make feel like I was one of them. I am ever so grateful to all of them for making my life in Manipal as comfortable as it could get.

After leaving Manipal, I relocated to Bangalore with my husband. By then I had been married and so we decided to make our life in Bangalore. There is a reason, why we chose Bangalore and here is where I will talk about my husband. He is a Muslim too, with a very typical first name, Iqbal. He is an aerospace engineer with MTech from IIT-Chennai and PhD from Germany. His profession takes him to the most highly secured organizations of India, like DRDO, NAL, HAL, GTRE, ISRO, IISc, BHEL; you name it and be assured that he has visited all of them without any hassles. Not even once he has been stripped off or asked for special security clearance or any such bias has been shown towards him. And NO, things have not changed even after Modi gov came into power. Things are in fact more disciplined and streamlined even at government organizations, from what I hear from my husband. As a matter of fact, Iqbal has been completely stripped each time he traveled to US and was under secret surveillance while he was doing his PhD in Germany, after the 9/11 attacks on US. We literally received a letter from the German government that he has been cleared and is not anymore under suspicion. Talk about Muslim paranoia! Its very understandable too due to the current situations in the world. My husband is highly respected and loved by the people he works with, and all of them happen to be Hindus. None of this has changed even in recent times, so Intolerance is just a word for us on a practical basis.

I opened my clinic last year, just before Modi gov came into power. I am a law-abiding citizen and I file my taxes like service tax on a monthly basis. I have never indulged in any activities, which could put me into any kind of trouble. I am comfortably running my clinic, which is doing very well, thanks to all my patients and clients, who all happen to be Hindus. A handful of my patients are from other communities. My entire staff is Hindu, and believe me when I say that they take better care of my clinic than I could any day! I interact with bankers, government officers and with so many people on a daily basis. Not even once in the last 20 years, did I have the need to even think of leaving India! My entire family lives abroad and all that I need to do is just decide that I don’t want to stay here. I have open offers of opening clinic in Kuwait, which would fetch me huge amount of revenue and yet why should I stay in India, if I am not happy and if I am facing any kind of bias?

In Kuwait, we are considered as NOBODY. Yes, despite being in Kuwait for the last 40 years or so, my family is still considered as expatriates, with no rights. We need to renew our resident permit periodically and the laws there constantly keep changing, making the life of expatriates only harder. We have to strictly comply with their rules and laws, which is fine but we are openly discriminated. They consider Asians as third grade people, while giving preference to their citizens, Arabs and Whites. We are not unhappy there but we have no sense of belonging either. At least, I never had and never have even when I visit Kuwait now. We are Muslims in a Muslim country, and yet we are considered as Indians with no special regards. I figured long back ago, that India is the only country, where I will have a sense of belonging. You are an Indian-American in US, Indian-Canadian in Canada, Indian-British in UK and so on but only in India you are an Indian. Period. Rest can say whatever they want and defend their choices but this is a fact. You can only feel at home, in your own home. I have lived in different places and everywhere I stand out but in India. No body in India asks me, ‘Are you an Indian?’, and this is what makes all the difference.

So, what are these celebrities ranting about? An ordinary citizen like my husband and I are not facing any such issues, then what have they faced? Why is Amir Khan’s wife, Kiran Rao feeling so afraid? They are prominent people, living in posh localities, their children study in the best of schools and they have personal security escorting them at all times. I travel alone everyday and yet don’t feel afraid. I want to know as a responsible citizen, from Amir Khan and Shahrukh Khan as well, why did they make such irresponsible statements and spoil the image of the 13 crores of Muslims in India? Who the hell are they to make public statements based on their personal perception? Who gave them the liberty to tarnish the image of my country on an International level, that Muslims are not safe in India? How dare Pakistan invites them to stay in Pakistan? I feel hurt when I read the statements of my Hindu friends on Muslims. I feel afraid that they are being pushed to the limit and the tolerance and acceptance that I have enjoyed all these years, might just vanish! I feel afraid that my own people might shun me and I may get alienated in my own country, because of a handful of ungrateful bunch of fools! How long can I expect majority of Hindus to tolerate this nuisance? It’s high time that Muslims understand the value of the freedom and acceptance that we enjoy in India and if not, I pray that my Hindu fellow citizens continue to keep their patience.


 
– Sofiya Rangwala

ಸುಲ್ತಾನಾಳ ಕನಸುಬೇಗಂ ರುಖಿಯಾ ಶೇಖಾವತ್ ಹುಸೇನ್ 
(೧೮೮೦-೧೯೩೨)

(ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟ ಈ ಬರಹ ಮೊದಲು ೧೯೦೫ರಲ್ಲಿ ಮದ್ರಾಸಿನ ‘ಇಂಡಿಯನ್ ಲೇಡೀಸ್ ಮ್ಯಾಗಜೀನ್’ನಲ್ಲಿ ಪ್ರಕಟವಾಯಿತು.)

 ಅನುವಾದ : ಡಾ ಎಚ್. ಎಸ್. ಅನುಪಮಾ


ಒಂದು ಸಂಜೆ ನಮ್ಮ ಬೆಡ್‌ರೂಮಿನ ಆರಾಮ ಕುರ್ಚಿಯಲ್ಲಿ ಕೂತು ಭಾರತದ ಹೆಣ್ತನದ ಸ್ಥಿತಿಗತಿ ಕುರಿತು ಸೋಂಬೇರಿಯಂತೆ ಯೋಚಿಸುತ್ತ ಇದ್ದೆ. ನಾನು ತೂಕಡಿಸಿದೆನೋ ಇಲ್ಲವೋ ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ನನಗೆ ನೆನಪಿರುವ ಮಟ್ಟಿಗೆ ಎಚ್ಚರಾಗಿಯೇ ಇದ್ದೆ. ಬೆಳದಿಂಗಳ ಆಗಸದಲ್ಲಿ ಸಾವಿರಾರು ಚಿಕ್ಕೆಗಳು ವಜ್ರದಂತೆ ಸ್ಪಷ್ಟವಾಗಿ ಹೊಳೆಯುತ್ತಿದ್ದವು.

ಇದ್ದಕ್ಕಿದ್ದಂತೆ ಒಬ್ಬ ಹೆಂಗಸು ನನ್ನೆದುರು ನಿಂತಳು; ಅವಳು ಒಳಗೆ ಹೇಗೆ ಬಂದಳೋ ಗೊತ್ತಿಲ್ಲ. ಅವಳು ನನ್ನ ಗೆಳತಿ ಸಿಸ್ಟರ್ ಸಾರಾ.

‘ಶುಭಮುಂಜಾವು’ ಎಂದಳು ಸಾರಾ. ಅದು ಬೆಳಿಗ್ಗೆಯಲ್ಲ, ನಕ್ಷತ್ರಭರಿತ ರಾತ್ರಿ. ನಾನು ಒಳಗೊಳಗೇ ನಕ್ಕೆ. ಆದರೂ ‘ಹೇಗಿದೀ?’ ಎಂದೆ.

‘ನಾನು ಆರಾಮ. ಹೊರಬಂದು ನಮ್ಮ ಕೈದೋಟವನ್ನೊಮ್ಮೆ ನೋಡುತ್ತೀಯಾ?’ ಎಂದಳು.

ಅಷ್ಟೊತ್ತಿನಲ್ಲಿ ಹೋಗಲು ಕಷ್ಟವೇನೂ ಇರಲಿಲ್ಲ, ಆದರೂ ಕಿಟಕಿಯಿಂದ ಹೊರಗೆ ಚಂದ್ರನತ್ತ ನೋಡಿದೆ. ಹೊರಗಿದ್ದ ಪುರುಷ ಸೇವಕರು ಗಾಢ ನಿದ್ದೆಯಲ್ಲಿರಬಹುದು, ಸಿಸ್ಟರ್ ಸಾರಾ ಜೊತೆ ಆರಾಮಾಗಿ ಅಡ್ಡಾಡಿಬರಬಹುದು ಎನಿಸಿತು.

ನಾವು ಡಾರ್ಜಿಲಿಂಗಿನಲ್ಲಿದ್ದಾಗ ಹೀಗೇ ಒಟ್ಟೊಟ್ಟಿಗೆ ವಾಕಿಗೆ ಹೋಗುತ್ತಿದ್ದೆವು. ಅಲ್ಲಿನ ಬೊಟಾನಿಕಲ್ ಗಾರ್ಡನಿನಲ್ಲಿ ಕೈಕೈ ಹಿಡಿದು ಗಟ್ಟಿಯಾಗಿ ಏನೇನೋ ಹರಟುತ್ತ ನಡೆದದ್ದು ನೆನಪಾಯಿತು. ನನ್ನನ್ನು ಅಂಥ ಎಲ್ಲಿಗೋ ಕರೆದೊಯ್ಯಲೇ ಈಕೆ ಹೀಗೆ ಕೇಳುತ್ತಿರಬಹುದು ಎನಿಸಿ ಅವಳ ಕೇಳಿಕೆಗೆ ಒಪ್ಪಿಕೊಂಡೆ.

ನಡೆಯುತ್ತಾ ನೋಡುತ್ತೇನೆ, ಆಗಲೇ ಬೆಳಗಾಗಿದೆ! ಶಹರ ಎಚ್ಚೆತ್ತಿದೆ, ಬೀದಿಗಳು ಗಿಜಿಗಿಜಿಯೆಂದು ಜನರಿಂದ ತುಂಬಿ ತುಳುಕುತ್ತಿವೆ. ನನಗೆ ಸಿಕ್ಕಾಪಟ್ಟೆ ಸಂಕೋಚವಾಯಿತು, ಹಾಡಹಗಲೇ ಬೀದಿಯಲ್ಲಿ ನಡೆಯುತ್ತಿದ್ದೇನೆ. ಆದರೆ ಒಬ್ಬೇಒಬ್ಬ ಪುರುಷನೂ ಎದುರು ಸಿಗಲಿಲ್ಲ.

ದಾರಿಹೋಕರು ಕೆಲವರು ನನಗೆ ತಮಾಷೆ ಮಾಡಿದರು. ಅವರ ಭಾಷೆ ನನಗರ್ಥವಾಗುತ್ತಿರಲಿಲ್ಲ. ಆದರೂ ಅವರು ತಮಾಷೆ ಮಾಡುತ್ತಿದ್ದಾರೆಂದು ಮಾತ್ರ ಅರ್ಥವಾಯಿತು. ಅವರೇನು ಹೇಳುತ್ತಿರುವುದೆಂದು ಗೆಳತಿಯ ಬಳಿ ಕೇಳಿದೆ:

‘ನೀನು ತುಂಬ ಗಂಡುತನ ಇರುವವಳಂತೆ ಕಾಣುವಿ ಎಂದು ಹೆಂಗಸರು ಹೇಳುತ್ತಿದ್ದಾರೆ.’

‘ಗಂಡುತನ? ಹಾಗೆಂದರೇನು?’

‘ಎಂದರೆ ನೀನು ಗಂಡಸರಂತೆ ನಾಚಿಕೆ ಮತ್ತು ಮೃದು ಸ್ವಭಾವದವಳಂತೆ ಕಾಣುತ್ತೀ ಎನ್ನುತ್ತಿದ್ದಾರೆ.’

‘ಗಂಡಸರಂತೆ ನಾಚಿಕೆ ಮತ್ತು ಮೃದು ಸ್ವಭಾವದವಳು?’ ತಿರುಗಿ ನೋಡುತ್ತೇನೆ, ನನ್ನ ಜೊತೆಯಿರುವವಳು ಸಾರಾ ಆಗಿರದೇ ಬೇರಿನ್ನಾರೋ ಒಬ್ಬಳು ಅಪರಿಚಿತೆ ಆಗಿರುವುದು ನೋಡಿ ನನಗೆ ತುಂಬ ಭಯವಾಯಿತು. ಎಂಥ ಮೂರ್ಖಳು ನಾನು, ಈ ಹೆಂಗಸನ್ನು ನನ್ನ ಹಳೆಯ ದಿನಗಳ ಪ್ರಿಯಗೆಳತಿ ಸಾರಾ ಎಂದು ತಪ್ಪಾಗಿ ಗುರ್ತಿಸಿದೆನಲ್ಲ?

ನಾವಿಬ್ಬರೂ ಕೈಕೈ ಹಿಡಿದು ನಡೆಯುತ್ತಿದ್ದುದರಿಂದ ನನ್ನ ಕೈ ನಡುಗುವುದನ್ನು ಅವಳು ಗುರುತಿಸಿದಳು. ‘ಯಾಕೆ ಏನಾಯಿತು ಗೆಳತಿ?’ ಪ್ರೀತಿಯಿಂದ ಕೇಳಿದಳು. ‘ಒಂದುರೀತಿ ವಿಲಕ್ಷಣ ಎನಿಸುತ್ತಿದೆ’, ತಪ್ಪೊಪ್ಪಿಕೊಳ್ಳುವವರಂತೆ ಹೇಳಿದೆ: ‘ನನಗೆ ಪರ್ದಾನಶೀನ್ ರೂಢಿ, ಹೀಗೆ ಬೀದಿಯಲ್ಲಿ ಬುರ್ಖಾ ಇಲ್ಲದೇ ನಡೆಯುವುದು ರೂಢಿಯಿಲ್ಲ.’

‘ಯಾರಾದರೂ ಗಂಡಸರು ಎದುರು ಬಂದಾರೆಂದು ನೀನು ಭಯಪಡಬೇಕಿಲ್ಲ. ಇದು ಮಹಿಳಾ ರಾಜ್ಯ. ದುಷ್ಟತನ ಮತ್ತು ಪಾಪ ಮುಕ್ತ ರಾಜ್ಯ. ನೀತಿಯೇ ಇಲ್ಲಿ ರಾಜ್ಯವಾಳುತ್ತದೆ.’

ಅಂದಹಾಗೆ ಸುತ್ತಮುತ್ತಿನ ದೃಶ್ಯ ನನಗೆ ಬಹಳ ಖುಷಿ ಕೊಡುತ್ತಿದ್ದವು. ನಿಜಕ್ಕೂ ತುಂಬ ಸುಂದರವಾಗಿತ್ತು. ಹಸಿರು ಹುಲ್ಲನ್ನು ನಾನು ವೆಲ್ವೆಟ್ ನೆಲಹಾಸೆಂದು ಭಾವಿಸಿದೆ. ಯಾವುದೋ ಮೆತ್ತನೆ ರತ್ನಗಂಬಳಿ ಮೇಲೆ ನಡೆಯುತ್ತಿರುವಂತೆನಿಸಿ ಬಗ್ಗಿ ನೋಡಿದೆ, ಹಾದಿ ಮೇಲೆ ಪಾಚಿ ಮತ್ತು ಹೂಗಳು ಹರಡಿದ್ದವು.

‘ಎಷ್ಟು ಚೆನ್ನಾಗಿದೆ ಅಲ್ವಾ ಇದು?’ ಎಂದೆ.

‘ನಿನಗಿಷ್ಟವಾಯಿತೆ?’ ಎಂದಳು ಸಿಸ್ಟರ್ ಸಾರಾ. ನಾನವಳನ್ನು ಸಿಸ್ಟರ್ ಸಾರಾ ಅನ್ನುತ್ತಲೇ ಇದ್ದೆ, ಅವಳು ನನಗೆ ನನ್ನ ಹೆಸರು ಹಿಡಿದೇ ಕರೆಯುತ್ತಿದ್ದಳು.

‘ಹೌದು, ತುಂಬ ಇಷ್ಟವಾಯಿತು. ಆದರೆ ನನಗೆ ಮೃದುವಾದ ಸವಿಯಾದ ಹೂವುಗಳ ಮೇಲೆ ನಡೆಯುವುದು ಇಷ್ಟವಿಲ್ಲ.’

‘ಯೋಚನೆ ಮಾಡಬೇಡ ಪ್ರಿಯ ಸುಲ್ತಾನಾ, ನೀನು ನಡೆಯುವುದರಿಂದ ಆ ಹೂವುಗಳಿಗೆ ಹಾನಿಯಾಗುವುದಿಲ್ಲ. ಅವು ಬೀದಿಯ ಹೂಗಳು.’

‘ಇಡೀ ಊರು ತೋಟದಂತೆ ಕಾಣುತ್ತಿದೆ. ತುಂಬ ಕೌಶಲಪೂರ್ಣವಾಗಿ ಗಿಡಮರಗಳನ್ನು ನೆಟ್ಟಿದ್ದೀರಿ.’

‘ನಿಮ್ಮ ಕಲಕತ್ತಾ ಇದಕ್ಕಿಂತ ಒಳ್ಳೆಯ ತೋಟವಾಗಬಹುದು, ನಿಮ್ಮ ದೇಶಬಾಂಧವರು ಹಾಗಾಗಬೇಕೆಂದು ಬಯಸಿದ್ದೇ ಆದರೆ.’

‘ಅವರಿಗೆ ಚಿಂತನೆ ನಡೆಸಲು ಬೇಕಾದಷ್ಟು ವಿಷಯ ಇರುವಾಗ ಕೈತೋಟ ಕುರಿತು ಯೋಚಿಸುವುದು ಕಾಲಹರಣವೆಂದೇ ಅವರು ಭಾವಿಸುತ್ತಾರೆ.’

‘ಅವರಿಗೆ ಅದಕ್ಕಿಂತ ದೊಡ್ಡ ನೆಪ ಸಿಗುವುದಿಲ್ಲವಲ್ಲ, ಅದಕ್ಕೆ’ ಎಂದು ನಗುತ್ತ ಹೇಳಿದಳು.

ಗಂಡಸರೆಲ್ಲ ಎಲ್ಲಿದ್ದಾರೊ ಎಂದು ತುಂಬ ಕುತೂಹಲವಾಯಿತು. ನಡೆಯುವಾಗ ನೂರಕ್ಕೂ ಮಿಕ್ಕಿ ಮಹಿಳೆಯರನ್ನು ಭೇಟಿಯಾದೆ, ಆದರೆ ಒಬ್ಬ ಗಂಡಸೂ ಕಂಡಿರಲಿಲ್ಲ.

‘ಗಂಡಸರೆಲ್ಲ ಎಲ್ಲಿದ್ದಾರೆ?’ ಎಂದೆ.

‘ಎಲ್ಲಿರಬೇಕೋ ಅಲ್ಲಿ, ಅವರವರಿಗೆ ಸೂಕ್ತ ಜಾಗದಲ್ಲಿ.’

‘ಅವರವರ ಜಾಗದಲ್ಲಿ ಎಂದರೆ ಎಲ್ಲಿ ಎಂದು ದಯವಿಟ್ಟು ಹೇಳು.’

‘ಓ, ನಂದೇ ತಪ್ಪು. ನೀನಿಲ್ಲಿಗೆ ಎಂದೂ ಬಂದವಳಲ್ಲವಾದ್ದರಿಂದ ನಿನಗೆ ನಮ್ಮ ಪದ್ಧತಿ ಅರ್ಥವಾಗಲ್ಲ. ನಾವು ನಮ್ಮ ಗಂಡಸರನ್ನು ಮನೆಯೊಳಗೆ ಕೂಡಿ ಹಾಕಿದ್ದೇವೆ.’

‘ನಮ್ಮನ್ನು ಜೆನಾನಾದಲ್ಲಿ ಇಟ್ಟ ಹಾಗೆಯೇ?’

‘ಹಾಂ, ಸರಿಯಾಗಿ ಹಾಗೆಯೇ.’

‘ಏನು ತಮಾಷೆ ಅಲ್ವ?’ ನನಗೆ ತಡೆಯಲಾಗದ ನಗು ಬಂತು. ಸಿಸ್ಟರ್ ಸಾರಾ ಕೂಡಾ ನಕ್ಕಳು.

‘ಆದರೆ ಪ್ರಿಯ ಸುಲ್ತಾನಾ, ನಿರಪಾಯಕಾರಿ ಹೆಂಗಸರನ್ನು ಕೂಡಿಹಾಕಿ ಗಂಡಸರನ್ನು ಹೊರಬಿಡುವುದು ಎಷ್ಟೊಂದು ಅನ್ಯಾಯ ಅಲ್ಲವೆ?’

‘ಯಾಕೆ? ಜೆನಾನಾದ ಹೊರಗೆ ಬರುವುದು ಹೆಂಗಸರಿಗೆ ಅಷ್ಟು ಸುರಕ್ಷಿತವಲ್ಲ, ಯಾಕೆಂದರೆ ನಾವು ಹುಟ್ಟಾ ಅಬಲೆಯರು.’

‘ಹೌದು, ಎಲ್ಲಿಯವರೆಗೆ ಬೀದಿಗಳಲ್ಲಿ ಗಂಡಸರಿರುತ್ತಾರೋ ಅಲ್ಲಿಯವರೆಗೆ ಅದು ಸುರಕ್ಷಿತವಲ್ಲ, ಸಂತೆಗೆ ಕಾಡುಪ್ರಾಣಿ ನುಗ್ಗಿದರೂ ಸುರಕ್ಷಿತವಲ್ಲ.’

‘ಹೌದೌದು, ಸುರಕ್ಷಿತವಲ್ಲ.’

‘ಒಂದುವೇಳೆ ಒಬ್ಬ ಹುಚ್ಚ ಹುಚ್ಚರ ಆಶ್ರಮದಿಂದ ತಪ್ಪಿಸಿಕೊಂಡು ಬಂದು ಮನುಷ್ಯರಿಗೆ, ಕುದುರೆಗಳಿಗೆ, ಉಳಿದ ಜೀವಿಗಳಿಗೆ ತೊಂದರೆ ಕೊಡುತ್ತಿದ್ದ ಎಂದಿಟ್ಟುಕೊ. ಆಗ ನಿನ್ನ ದೇಶವಾಸಿಗಳು ಏನು ಮಾಡುತ್ತಾರೆ?’

‘ಅವರನ್ನು ಹಿಡಿಯಲು ಪ್ರಯತ್ನಿಸಿ ಅವರ ಆಶ್ರಮಕ್ಕೇ ಒಯ್ದು ಬಿಟ್ಟುಬರುತ್ತಾರೆ.’

‘ಧನ್ಯವಾದ. ಹುಚ್ಚರಲ್ಲದವರನ್ನು ಆಶ್ರಮದಲ್ಲಿಟ್ಟು, ಹುಚ್ಚರನ್ನು ಬೀದಿಯಲ್ಲಿ ತಿರುಗಲು ಬಿಡುವುದು ಜಾಣತನ ಅಲ್ಲ ಅಲ್ಲವೆ?’

‘ಖಂಡಿತ, ಅಲ್ಲ’ ನಾನು ನಸು ನಗುತ್ತ ಹೇಳಿದೆ.

‘ಹ್ಞಾಂ, ವಾಸ್ತವವಾಗಿ ನಿನ್ನ ದೇಶದಲ್ಲಿ ಇದೇ ಆಗುತ್ತಿರುವುದು. ಒಂದಲ್ಲ ಒಂದು ತರಲೆ ಮಾಡುವ ಅಥವಾ ಅಂತಹ ತರಲೆಗಳ ನಿಲ್ಲಿಸಲಾರದ ಗಂಡಸರನ್ನು ಸ್ವೇಚ್ಛೆಯಾಗಿ ತಿರುಗಲು ಬಿಡಲಾಗಿದೆ. ಮುಗ್ಧ ಹೆಣ್ಣುಮಕ್ಕಳನ್ನು ಜೆನಾನಾದಲ್ಲಿ ಕೂಡಿಹಾಕಲಾಗಿದೆ. ಮುಕ್ತವಾಗಿ ಹೊರಗಿರಲು ತರಬೇತಿಯೇ ಇಲ್ಲದ ಗಂಡಸರನ್ನು ನಂಬುವುದಾದರೂ ಹೇಗೆ?’

‘ನಮ್ಮ ಸಮಾಜದ ಆಗುಹೋಗುಗಳಲ್ಲಿ ಕೈಹಾಕಲು ನಮಗೆ ಯಾವ ಅವಕಾಶವೂ ಇಲ್ಲ. ಭಾರತದಲ್ಲಿ ಪುರುಷನೇ ದೇವರು ಮತ್ತು ಯಜಮಾನ. ಅವ ಎಲ್ಲ ಅವಕಾಶ, ಅಧಿಕಾರವನ್ನು ತಾನೇ ತೆಗೆದುಕೊಂಡು ಹೆಂಗಸರನ್ನು ಜೆನಾನಾದಲ್ಲಿ ಕೂಡಿಹಾಕಿದ್ದಾನೆ.’

ಅಷ್ಟೊತ್ತಿಗೆ ಸಿಸ್ಟರ್ ಸಾರಾ ಮನೆಯನ್ನು ಮುಟ್ಟಿದೆವು. ಅದು ಹೃದಯ ಆಕಾರದ ಕೈದೋಟದಲ್ಲಿತ್ತು. ಅದು ಕಬ್ಬಿಣದ ಛಾವಣಿಯಿಂದ ಕಟ್ಟಿದ ಬಂಗಲೆ. ಉಳಿದ ಸಿರಿವಂತರ ಬಂಗಲೆಗಳಿಗಿಂತ ಚೆನ್ನಾಗಿ, ತಂಪಾಗಿ ಇತ್ತು. ಅದು ಎಷ್ಟು ನೀಟಾಗಿ, ಚಂದವಾಗಿ, ಪೀಠೋಪಕರಣಗಳಿಂದ ಎಷ್ಟು ಅಲಂಕೃತವಾಗಿ ಇತ್ತೆಂದು ವರ್ಣಿಸಲೇ ಆಗುವುದಿಲ್ಲ.

ಪಕ್ಕಪಕ್ಕ ಕುಳಿತೆವು. ಒಳಗಿನಿಂದ ಎಂಬ್ರಾಯಿಡರಿ ಕೆಲಸದ ಒಂದು ಬಟ್ಟೆ ತಂದು ಹೊಸ ವಿನ್ಯಾಸ ಮೂಡಿಸಿ ಎಂಬ್ರಾಯಿಡರಿ ಮಾಡತೊಡಗಿದಳು.

‘ನಿನಗೆ ಹೆಣಿಗೆ ಮತ್ತು ಹೊಲಿಗೆ ಬರುತ್ತದೆಯೆ?’

‘ಹೌದು, ನಮಗೆ ಜೆನಾನಾದಲ್ಲಿ ಮಾಡಲು ಅದನ್ನು ಬಿಟ್ಟರೆ ಬೇರೆ ಕೆಲಸವಿಲ್ಲ.’

‘ಆದರೆ ನಮ್ಮ ಜೆನಾನಾದವರು ಎಂಬ್ರಾಯಿಡರಿ ಮಾಡುವರೆನ್ನುವ ಯಾವುದೇ ಭರವಸೆಯಿಲ್ಲ ನಮಗೆ!’ ಜೋರಾಗಿ ನಗುತ್ತ ಹೇಳಿದಳು. ‘ಗಂಡಸರಿಗೆ ಸೂಜಿಕಣ್ಣಿನಲ್ಲಿ ದಾರ ತೂರಿಸುವಷ್ಟೂ ಸಹನೆಯೇ ಇಲ್ಲ!’

ಅಲ್ಲಿ ಟೀಪಾಯಿಯ ಮೇಲೆ ಹರಡಿದ್ದ ಹಲವು ಎಂಬ್ರಾಯಿಡರಿ ಬಟ್ಟೆಗಳತ್ತ ತೋರಿಸಿ, ‘ಇವನ್ನೆಲ್ಲ ನೀನೇ ಮಾಡಿದೆಯಾ?’ ಎಂದು ಕೇಳಿದೆ.

‘ಹೌದು.’

‘ಇವನ್ನೆಲ್ಲ ಮಾಡಲು ನಿನಗೆ ಸಮಯವಾದರೂ ಹೇಗೆ ಸಿಕ್ಕಿತು? ನೀನು ಕಚೇರಿ ಕೆಲಸವನ್ನೂ ಮಾಡುತ್ತಿರುವೆ, ಅಲ್ಲವೆ?’

‘ಹೌದು. ಆದರೆ ನಾನು ಇಡಿಯ ದಿನ ಕಚೇರಿಗೆ ಅಂಟಿ ಕೂತಿರುವುದಿಲ್ಲ. ನನ್ನ ಕೆಲಸವನ್ನು ಚಕಚಕ ಎರಡೇ ಗಂಟೆಗಳಲ್ಲಿ ಮುಗಿಸಿಬಿಡುವೆ.’

‘ಎರಡೇ ಗಂಟೆ! ಅದು ಹೇಗೆ ಮುಗಿಸುವೆ? ನಮ್ಮ ದೇಶದಲ್ಲಿ ಎಲ್ಲ ಆಫೀಸರರೂ, ಉದಾಹರಣೆಗೆ ಮ್ಯಾಜಿಸ್ಟ್ರೇಟರೂ ಸಹಾ, ಏಳು ಗಂಟೆ ಕಾಲ ಕಚೇರಿ ಕೆಲಸ ಮಾಡಬೇಕು.’

‘ಅವರಲ್ಲಿ ಕೆಲವರು ಕೆಲಸ ಮಾಡುವುದು ನೋಡಿದ್ದೇನೆ. ಅವರು ಏಳುಗಂಟೆ ಕೆಲಸ ಮಾಡುತ್ತಾರೆ ಎಂದು ಅನಿಸಿದೆಯೆ ನಿನಗೆ?’

‘ಹೌದು, ಖಂಡಿತ ಮಾಡುತ್ತಾರೆ.’

‘ಇಲ್ಲ ಸುಲ್ತಾನಾ. ಅವರು ಮಾಡುವುದಿಲ್ಲ. ಚೊರೂಟು ಸೇದುತ್ತಾ ಸಮಯ ವ್ಯರ್ಥ ಮಾಡುತ್ತಾರೆ. ಕೆಲವರಂತೂ ಕಚೇರಿ ಸಮಯದಲ್ಲೇ ೨-೩ ಚೊರೂಟು ಎಳೆಯುತ್ತಾರೆ. ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚು ಮಾತಾಡುತ್ತಾರೆ, ಕಡಿಮೆ ಮಾಡುತ್ತಾರೆ. ಒಂದು ಚೊರೂಟು ಸೇದಲು ಅರ್ಧ ಗಂಟೆ ಬೇಕು. ಅವರು ದಿನಕ್ಕೆ ಹನ್ನೆರೆಡು ಚೊರೂಟು ಸೇದುವವರು ಅಂತಿಟ್ಟುಕೊ, ಎಷ್ಟಾಯಿತು? ನೋಡು, ಆರು ತಾಸು ಬರಿಯ ಸೇದುವುದಕ್ಕೆ ವ್ಯರ್ಥವಾಯಿತು.’

ಹೀಗೇ ನಾವು ಅನೇಕ ವಿಷಯಗಳ ಕುರಿತು ಮಾತಾಡಿದೆವು. ಅಲ್ಲಿ ಸಾಂಕ್ರಾಮಿಕ ಕಾಯಿಲೆಗಳಿರಲಿಲ್ಲ, ಸೊಳ್ಳೆಗಳು ಕಚ್ಚುವುದಿಲ್ಲ ಎಂದು ಗೊತ್ತಾಯಿತು. ಅಲ್ಲಿಲ್ಲಿ ಅಪಘಾತಗಳಲ್ಲಿ ಬಿಟ್ಟರೆ ಮಹಿಳಾರಾಜ್ಯದಲ್ಲಿ ಯಾರೂ ತಾರುಣ್ಯದಲ್ಲೇ ಅಕಾಲ ಮರಣಕ್ಕೀಡಾಗುವುದಿಲ್ಲ ಎಂದು ತಿಳಿದು ತುಂಬ ಆಶ್ಚರ್ಯವಾಯಿತು.

‘ನಮ್ಮ ಅಡಿಗೆಮನೆ ನೋಡುತ್ತೀಯೇನು?’ ಕೇಳಿದಳು.

‘ಖುಷಿಯಿಂದ’ ಹೇಳಿದೆ, ನೋಡಲು ಹೋದೆವು. ನಾನಲ್ಲಿಗೆ ಹೋದಾಗ ಗಂಡಸರು ಎಲ್ಲ ತೊಳೆದು ಸ್ವಚ್ಛಗೊಳಿಸುತ್ತಿದ್ದರು. ಒಂದು ಸುಂದರ ತರಕಾರಿ ತೋಟದಲ್ಲಿ ಅಡಿಗೆ ಮನೆಯಿತ್ತು. ಪ್ರತಿ ಬಳ್ಳಿ, ಪ್ರತಿ ಟೊಮ್ಯಾಟೊ ಗಿಡವೂ ತಮಗೆ ತಾವೇ ಆಭರಣದಂತಿದ್ದವು. ಹೊಗೆ, ಕರಿಮಸಿ ಯಾವುದೂ ಅಡಿಗೆ ಮನೆಯಲ್ಲಿ ಕಾಣಲಿಲ್ಲ. ಅದು ಶುಭ್ರವಾಗಿ, ಪ್ರಕಾಶಮಾನವಾಗಿ ಇತ್ತು. ಕಿಟಕಿಗಳು ಹೂಬಳ್ಳಿಗಳಿಂದ ಸುತ್ತುವರೆಯಲ್ಪಟ್ಟಿದ್ದವು. ಹೊಗೆ, ಬೆಂಕಿಯ ಯಾವ ಸುಳುಹೂ ಕಾಣಲಿಲ್ಲ.

‘ನೀವು ಅಡುಗೆ ಹೇಗೆ ಮಾಡುತ್ತೀರಿ?’ ಕೇಳಿದೆ.

‘ಸೂರ್ಯನ ಶಾಖದಿಂದ.’ ಎಂದಳು. ಅದೇವೇಳೆ ಸೂರ್ಯನ ಸಾಂದ್ರಗೊಳಿಸಲ್ಪಟ್ಟ ಶಾಖ ಹಾಯುವ ಪೈಪನ್ನು ತೋರಿಸಿದಳು. ತೋರಿಸುತ್ತ ಅಲ್ಲೇ ಸರಸರ ಏನನ್ನೋ ತಯಾರಿಸಿದಳು.

‘ಸೂರ್ಯನ ಶಾಖ ಒಗ್ಗೂಡಿಸಿ ಸಂಗ್ರಹಿಸಲು ಏನು ಮಾಡುತ್ತೀರಿ?’ ತುಂಬ ಆಶ್ಚರ್ಯದಿಂದ ಕೇಳಿದೆ.

‘ಹಾಗಾದರೆ ನಮ್ಮ ಪೂರ್ವೇತಿಹಾಸವನ್ನೂ ನಿನಗೆ ಸ್ವಲ್ಪ ಹೇಳಲೇಬೇಕು. ೩೦ ವರ್ಷ ಕೆಳಗೆ, ನಮ್ಮ ಇವತ್ತಿನ ರಾಣಿ ೧೩ ವರ್ಷದವಳಾದಾಗ ಸಿಂಹಾಸನಕ್ಕೆ ಅಧಿಪತಿಯಾದಳು. ಅವಳು ಹೆಸರಿಗಷ್ಟೆ ರಾಣಿ. ಪ್ರಧಾನಮಂತ್ರಿಯೇ ರಾಜ್ಯ ಆಳುತ್ತಿದ್ದ. ನಮ್ಮ ಒಳ್ಳೆಯ ರಾಣಿ ವಿಜ್ಞಾನವನ್ನು ಬಹು ಇಷ್ಟಪಡುತ್ತಿದ್ದಳು. ತನ್ನ ದೇಶದ ಎಲ್ಲ ಹೆಣ್ಮಕ್ಕಳೂ ಶಿಕ್ಷಣ ಕಲಿಯಬೇಕೆಂದು ಸುತ್ತೋಲೆ ಹೊರಡಿಸಿದಳು. ಹಲವು ಹುಡುಗಿಯರ ಶಾಲೆ ತೆರೆಯಲ್ಪಟ್ಟು, ಅವಳ ಸಹಾಯದಿಂದ ನಡೆಯತೊಡಗಿದವು. ಹೆಣ್ಮಕ್ಕಳಲ್ಲಿ ಶಿಕ್ಷಣ ಹಬ್ಬತೊಡಗಿತು. ಬಾಲ್ಯವಿವಾಹ ನಿಂತುಹೋಯಿತು. ೨೧ ವರ್ಷದ ಒಳಗೆ ಯಾವ ಹುಡುಗಿಯೂ ಮದುವೆಯಾಗುವಂತಿಲ್ಲ ಎಂಬ ಕಾನೂನು ಬಂತು. ನಿನಗೆ ಹೇಳಬೇಕೆಂದರೆ ಈ ಎಲ್ಲ ಬದಲಾವಣೆ ಬರುವ ಮುಂಚೆ ನಾವೂ ಕಟ್ಟುನಿಟ್ಟಾಗಿ ಪರ್ದಾ ಆಚರಿಸುತ್ತಿದ್ದೆವು.’

‘ಎಲ್ಲ ಹೇಗೆ ಬದಲಾಗಿಹೋಯಿತು?’ ನಗುತ್ತ ಪ್ರಶ್ನೆ ಕೇಳಿ ಅವಳನ್ನು ತಡೆದೆ.

‘ಬೇರ್ಪಡಿಸುವಿಕೆ ಹಾಗೇ ಇದೆ. ಕೆಲವೇ ವರ್ಷಗಳಲ್ಲಿ ಪ್ರತ್ಯೇಕ ಯೂನಿವರ್ಸಿಟಿ ಶುರುವಾದವು. ಅಲ್ಲಿ ಗಂಡಸರನ್ನು ಸೇರಿಸಿಕೊಳ್ಳಲಿಲ್ಲ. ರಾಣಿ ವಾಸಿಸುವ ರಾಜಧಾನಿಯಲ್ಲಿ ಎರಡು ಯೂನಿವರ್ಸಿಟಿಗಳಿವೆ. ಒಂದು ಯೂನಿವರ್ಸಿಟಿ ಹಲವು ಪೈಪುಗಳ ಜೋಡಿಸಲ್ಪಟ್ಟ ವಿಶಿಷ್ಟ ಬಲೂನನ್ನು ಕಂಡುಹಿಡಿಯಿತು. ಅದು ಮೋಡದ ನಾಡಿಗಿಂತ ಮೇಲೆ ತೇಲುವಂತೆ ಮಾಡಿದರು. ಮೋಡಗಳಿಂದ ಬಲೂನು ನಮಗೆಷ್ಟು ನೀರು ಬೇಕೋ ಅಷ್ಟನ್ನು ಹೀರಿಕೊಂಡು ಸಂಗ್ರಹಿಸುತ್ತದೆ. ಹೆಚ್ಚೆಚ್ಚು ನೀರು ಬಳಸಿದಂತೆ ಹೆಚ್ಚೆಚ್ಚು ಮೋಡಗಳು ಖಾಲಿಯಾಗಿ ಯೂನಿವರ್ಸಿಟಿ ಪ್ರದೇಶದಲ್ಲಿ ಬಿರುಗಾಳಿ, ಮಳೆ ಬರುವುದನ್ನು ನಮ್ಮ ಲೇಡಿ ಪ್ರಿನ್ಸಿಪಾಲ್ ತಡೆಗಟ್ಟಿದರು.

‘ಹೌದಾ! ಇಲ್ಲಿ ಕೆಸರೇ ಇಲ್ಲ ಏಕೆ ಎಂದು ಈಗ ನಂಗೆ ಅರ್ಥವಾಗ್ತ ಇದೆ’ ಎಂದೆ. ಆದರೆ ನೀರನ್ನು ಪೈಪುಗಳಲ್ಲಿ ಹಿಡಿದಿಡುವುದು ಹೇಗೆಂದು ನನಗೆ ತಿಳಿಯಲಿಲ್ಲ. ಅವಳು ನನಗೆ ಹಂತಹಂತವಾಗಿ ವಿವರಿಸಿದಳಾದರೂ ನನಗೆ ಅರ್ಥವಾಗಲಿಲ್ಲ, ಏಕೆಂದರೆ ವಿಜ್ಞಾನ ಕುರಿತ ನನ್ನ ತಿಳುವಳಿಕೆ ಏನೂ ಇಲ್ಲವೆನ್ನುವಷ್ಟು ಕಡಿಮೆ. ಅವಳು ಮುಂದುವರೆಸಿದಳು: ‘ಬೇರೆ ಯೂನಿವರ್ಸಿಟಿಗಳಿಗೆ ಇದರಿಂದ ಹೊಟ್ಟೆಕಿಚ್ಚಾಯಿತು. ಅವರು ಪೈಪೋಟಿಯಿಂದ ನಮಗಿಂತ ಬೇರೇನಾದರೂ ವಿಶೇಷವಾದದ್ದು ಮಾಡಬೇಕೆಂದು ಪಣತೊಟ್ಟರು. ಕೊನೆಗೆ ಸೂರ್ಯನ ಶಾಖವನ್ನು ತಮಗೆಷ್ಟು ಬೇಕೋ ಅಷ್ಟು ಹಿಡಿದಿಡುವ ಯಂತ್ರವೊಂದನ್ನು ಕಂಡುಹಿಡಿದರು. ಹಾಗೆ ಸಂಗ್ರಹಿಸಿದ ಶಾಖವನ್ನು ಬೇಕಾದಾಗ, ಬೇಕಾದವರಿಗೆ ಕೊಟ್ಟು ಬಳಸುವ ವಿಧಾನ ಅಭಿವೃದ್ಧಿಪಡಿಸಿದರು.

‘ಹೆಣ್ಣುಮಕ್ಕಳು ಹೀಗೆ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿದದಾಗ ಗಂಡಸರು ಸೈನ್ಯಶಕ್ತಿ ಹೆಚ್ಚಿಸುವ ಕೆಲಸದಲ್ಲಿ ಮಗ್ನರಾಗಿಹೋದರು. ಮಹಿಳಾ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಮೋಡದಿಂದ ನೀರನ್ನೂ, ಸೂರ್ಯನಿಂದ ಶಾಖವನ್ನೂ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಸಿದ್ದಾರೆ ಎಂದು ಗೊತ್ತಾದಾಗ ಅವರ ನಕ್ಕು ಅತ್ತ ಸರಿಸಿಬಿಟ್ಟರು. ಇಡೀ ಪ್ರಯತ್ನವೇ ‘ಅತಿಭಾವುಕ ಕನಸು’ ಎಂದು ಕರೆದರು.’

‘ನಿಮ್ಮ ಸಾಧನೆಗಳು ನಿಜಕ್ಕೂ ಅದ್ಭುತವಾಗಿವೆ. ಆದರೆ ಗಂಡಸರನ್ನು ಜೆನಾನಾದಲ್ಲಿ ತುಂಬಲು ಹೇಗೆ ಸಾಧ್ಯವಾಯಿತು ಅಂತ ಹೇಳು. ಅವರನ್ನು ಮೊದಲು ಹಿಡಿದಿರಾ?’

‘ಇಲ್ಲ’

‘ಆದರೆ ಅವರು ತಮ್ಮ ಮುಕ್ತ ವಾತಾವರಣದ ಸ್ವಚ್ಛಂದ ಬದುಕನ್ನು ತಾವೇ ಬಿಟ್ಟುಕೊಟ್ಟು ಶರಣಾಗಿ ನಾಲ್ಕು ಗೋಡೆಗಳ ನಡುವಿನ ಜೆನಾನಾದಲ್ಲಿರಲು ಒಪ್ಪಿರುವುದು ಅಸಾಧ್ಯ. ಬಹುಶಃ ಅವರಿಗಿಂತ ಹೆಚ್ಚು ಬಲ ಪ್ರಯೋಗಿಸಿ ಈ ಕೆಲಸ ಮಾಡಿಕೊಂಡಿರಬೇಕು.’

‘ಹೌದು, ಅವರನ್ನು ಬಲವನ್ನು ಹಿಂದಿಕ್ಕಲಾಯಿತು.’

‘ಯಾರಿಂದ? ಸ್ತ್ರೀಯೋಧರಿಂದ ಇರಬೇಕಲ್ಲವೆ?’

‘ಇಲ್ಲ, ಶಸ್ತ್ರಾಸ್ತ್ರಗಳಿಂದಲ್ಲ.’

‘ಹೌದು, ಸಾಧ್ಯವಿರಲಾರದು. ಗಂಡಸರ ಶಸ್ತ್ರಾಸ್ತ್ರಗಳು ಹೆಂಗಸರದಕ್ಕಿಂತ ಬಲವಾದವು. ಹಾಗಾದರೆ ಏನು ಮಾಡಿದಿರಿ?’

‘ಬುದ್ಧಿಯಿಂದ’

‘ಆದರೆ ಅವರ ಮಿದುಳೂ ಹೆಂಗಸರದಕ್ಕಿಂತ ಭಾರ ಮತ್ತು ದೊಡ್ಡ ಇರುವಂಥದು, ಅಲ್ಲವೆ?’

‘ಹೌದು, ಆದರೇನು? ಆನೆಗೆ ಮನುಷ್ಯನದಕ್ಕಿಂದ ದೊಡ್ಡ, ಭಾರವಾದ ಮಿದುಳಿದೆ. ಆದರೆ ಮನುಷ್ಯ ಆನೆಯನ್ನು ಸರಪಳಿಯಿಂದ ಬಂಧಿಸಿ ತನಗಿಷ್ಟ ಬಂದ ಕೆಲಸ ಮಾಡಿಸುವುದಿಲ್ಲವೆ?’

‘ಸರಿಯಾಗಿ ಹೇಳಿದೆ, ಆದರೆ ದಯವಿಟ್ಟು ಹೇಳು, ಇದೆಲ್ಲ ಹೇಗೆ ಸಾಧ್ಯವಾಯಿತು? ನನಗೆ ಅದನ್ನು ತಿಳಿಯಲು ತಡೆಯಲಾರದ ಕುತೂಹಲ.’

‘ಹೆಣ್ಣುಮಕ್ಕಳ ಮಿದುಳು ಗಂಡಸರದಕ್ಕಿಂತ ಚುರುಕಾಗಿ ಓಡುತ್ತದೆ. ೧೦ ವರ್ಷ ಕೆಳಗೆ ಸೈನ್ಯಾಧಿಕಾರಿಗಳು ನಮ್ಮ ಆವಿಷ್ಕಾರಗಳನ್ನು ಅತಿಭಾವುಕ ಕನಸು ಎಂದು ಕರೆದಮೇಲೆ ಕೆಲವು ತರುಣಿಯರಿಗೆ ಅವರಿಗೆ ಸರಿಯಾಗಿ ತಿರುಗಿ ಹೇಳಬೇಕೆಂಬ ತುಡಿತ ಹುಟ್ಟಿತು. ಆದರೆ ಎರಡೂ ಯೂನಿವರ್ಸಿಟಿಯ ಮಹಿಳಾ ಪ್ರಿನ್ಸಿಪಾಲರು ಅವರಿಗೆ ಉತ್ತರವನ್ನು ಪದಗಳಿಂದ ಅಲ್ಲ, ಅವಕಾಶ ಸಿಕ್ಕಾಗ  ಕ್ರಿಯೆಯಿಂದ ತೋರಿಸಬೇಕು ಎಂದರು. ಅಂತಹ ಅವಕಾಶಕ್ಕೆ ಅವರು ಹೆಚ್ಚು ಕಾಯಬೇಕಾಗಲಿಲ್ಲ.’

‘ಎಂಥ ಆಶ್ಚರ್ಯ?’ ನಾನು ಮನದುಂಬಿ ಚಪ್ಪಾಳೆ ತಟ್ಟಿದೆ. ‘ಈಗ ಹೆಮ್ಮೆಯ ಗಣ್ಯರು ಭಾವುಕ ಕನಸುಗಳನ್ನು ತಾವೇ ಕಾಣುತ್ತಿದ್ದಾರೆ.’

‘ಪಕ್ಕದ ದೇಶದಿಂದ ಕೆಲವು ಜನ ನಮ್ಮ ದೇಶಕ್ಕೆ ಬಂದು ಆಶ್ರಯ ಪಡೆದರು. ಅವರು ಎಂಥದೋ ರಾಜಕೀಯ ಅಪರಾಧದ ಕಾರಣವಾಗಿ ತೊಂದರೆಯಲ್ಲಿ ಸಿಲುಕಿದ್ದರು. ಒಳ್ಳೆಯ ಆಡಳಿತಕ್ಕಿಂತ ಅಧಿಕಾರಕ್ಕೇ ಹಂಬಲಿಸುತ್ತಿದ್ದ ಅಲ್ಲಿನ ರಾಜ ದಯಾಳುವಾದ ನಮ್ಮ ರಾಣಿಯ ಬಳಿ ಅವರನ್ನು ಕೊಡಲು ಹೇಳಿದ. ರಾಣಿ ಆಶ್ರಯ ಕೇಳಿ ಬಂದ ನಿರಾಶ್ರಿತರಿಗೆ ಸಹಾಯ ನಿರಾಕರಿಸುವುದು ತನ್ನ ತತ್ವಕ್ಕೆ ವಿರುದ್ಧವೆಂದು ನಿರಾಕರಿಸಿದಳು. ಅದಕ್ಕೆ ಸಿಟ್ಟಾದ ಆ ದೇಶದ ರಾಜ ನಮ್ಮ ಮೇಲೆ ಯುದ್ಧ ಸಾರಿದ. ನಮ್ಮ ಸೈನ್ಯಾಧಿಕಾರಿಗಳು ತುದಿಗಾಲಲ್ಲಿ ಸಿದ್ಧರಾಗಿ ಯುದ್ಧಭೂಮಿಯಲ್ಲಿ ಶತ್ರುವನ್ನು ಎದುರುಗೊಳ್ಳಲು ಹೋದರು. ಆದರೆ ಶತ್ರು ತುಂಬ ಬಲಶಾಲಿಯಾಗಿದ್ದ. ನಮ್ಮ ಸೈನಿಕರು ವೀರಾವೇಶದಿಂದ ಕಾದಾಡಿದದೇನೋ ನಿಜ, ಆದರೆ ಅವರ ಪ್ರಯತ್ನಗಳ ಹೊರತಾಗಿ ವಿದೇಶೀ ಸೈನ್ಯ ನಮ್ಮ ಪ್ರಾಂತ್ಯವನ್ನು ಆಕ್ರಮಿಸುತ್ತಾ ಒಂದೊಂದೇ ಹೆಜ್ಜೆ ಮುಂದೆ ಬಂತು.

ಹೆಚ್ಚುಕಮ್ಮಿ ಎಲ್ಲ ಗಂಡಸರೂ ಯುದ್ಧಕ್ಕೆ ಹೋದರು. ೧೬ ವರ್ಷದ ಹುಡುಗರವರೆಗೆ ಎಲ್ಲ ಗಂಡಸರೂ ಯುದ್ಧಕ್ಕೆ ಹೋದರು. ಬಹಳಷ್ಟು ಸೈನಿಕರನ್ನು ಕೊಲ್ಲಲಾಯಿತು. ಕೆಲವರನ್ನು ಓಡಿಸಲಾಯಿತು. ಶತ್ರುಸೈನಿಕರು ರಾಜಧಾನಿಯಿಂದ ೨೫ ಮೈಲು ಪ್ರದೇಶ ದೂರದವರೆಗೆ ಬಂದೇ ಬಿಟ್ಟರು.

ಜ್ಞಾನಿ, ಹಿರಿಯ ಮಹಿಳೆಯರೆಲ್ಲ ರಾಣಿಯ ಅರಮನೆಯಲ್ಲಿ ಸೇರಿ ನಮ್ಮ ನೆಲವನ್ನು ಉಳಿಸಿಕೊಳ್ಳಲು ಮುಂದೇನು ಮಾಡುವುದೆಂಬ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಿದರು. ಕೆಲವರು ನಾವೂ ಯೋಧರಂತೆ ಯುದ್ಧ ಮಾಡಬೇಕೆಂದರು. ಮತ್ತೆ ಕೆಲವರು ತಕರಾರೆತ್ತಿ ಹೆಂಗಸರು ಕತ್ತಿ, ಕೋವಿಗಳೊಂದಿಗೆ ಯುದ್ಧ ಮಾಡುವ ತರಬೇತಿ ಪಡೆದವರಲ್ಲ; ಮತ್ತಿನ್ಯಾವುದೇ ಶಸ್ತ್ರಾಸ್ತ್ರದೊಂದಿಗೆ ಹೋರಾಡಿ ಅಭ್ಯಾಸವಿಲ್ಲ ಎಂದರು. ಉಳಿದವರು ತಮ್ಮ ದೇಹ ದುರ್ಬಲವಾಗಿದೆ ಎಂದು ಖೇದಗೊಂಡರು.

‘ದೇಹಬಲದಿಂದ ದೇಶ ಉಳಿಸಲಾರಿರಾದರೆ ಬುದ್ಧಿಬಲದಿಂದ ಉಳಿಸಿ’ ಎಂದಳು ರಾಣಿ. ಕೆಲ ಸಮಯ ಸ್ಮಶಾನ ಮೌನ. ಕೊನೆಗೆ ಮಹಾರಾಣಿ ಹೇಳಿದಳು: ನನ್ನ ನೆಲ ಮತ್ತು ಮರ್ಯಾದೆ ಎರಡೂ ಕಳೆದು ಹೋಗುವುದಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೆ. ಆಗ ಅದುವರೆಗು ಮಾತನಾಡದೆ ಯೋಚಿಸುತ್ತ ಕುಳಿತಿದ್ದ ಸೂರ್ಯನ ಶಾಖ ಸಂಗ್ರಹಿಸಿರುವ ಎರಡನೆ ಯೂನಿವರ್ಸಿಟಿಯ ಮಹಿಳಾ ಪ್ರಿನ್ಸಿಪಾಲ್ ಎದ್ದು ನಿಂತು ನಾವು ಹೆಚ್ಚುಕಮ್ಮಿ ಎಲ್ಲ ಕಳೆದುಕೊಂಡಿದ್ದೇವೆ, ನಮಗೆ ತುಂಬ ಕಡಿಮೆ ಭರವಸೆ ಉಳಿದಿದೆ ಎಂದಳು. ಆದರೂ ಒಂದು ಮಾರ್ಗವಿದೆ, ಬೇಕಾದರೆ ಪ್ರಯತ್ನಿಸಬಹುದು, ನನಗೆ ತಿಳಿದಂತೆ ಅದು ಏಕೈಕ ಮತ್ತು ಕೊನೆಯ ದಾರಿ ಎಂದು ಹೇಳಿದಳು. ಅದರಲ್ಲಿ ಸೋತರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದಳು. ಅಲ್ಲಿ ಸೇರಿದ ಎಲ್ಲರೂ ಸಾವು ಬೇಕಾದರೂ ಬರಲಿ, ಅಡಿಯಾಳಾಗಿ ಮಾತ್ರ ಬದುಕಲಾರೆವು ಎಂದು ಪ್ರತಿಜ್ಞೆಗೈದರು.

ರಾಣಿ ಎಲ್ಲರಿಗೂ ವಂದಿಸಿ ಮಹಿಳಾ ಪ್ರಿನ್ಸಿಪಾಲರಿಗೆ ಅವರ ಪ್ರಯತ್ನ ನಡೆಸಲು ಹೇಳಿದರು. ಆಗ ಆಕೆ ಎದ್ದುನಿಂತು, ‘ನಾವು ಹೊರಗೆ ಹೋಗುವ ಮೊದಲು ನಮ್ಮ ಗಂಡಸರು ಜೆನಾನಾದೊಳಗೆ ಬರಬೇಕು. ಪರ್ದಾ ಆಚರಣೆಯ ಸಲುವಾಗಿ ನಾನು ಈ ಬೇಡಿಕೆ ಇಡುತ್ತಿದ್ದೇನೆ.’ ರಾಣಿ ಅದು ಹೌದು ಎಂದು ಒಪ್ಪಿದಳು.

‘ಮರುದಿನ ರಾಣಿ ಎಲ್ಲ ಗಂಡಸರನ್ನು ಕರೆದು ಗೌರವ ಮತ್ತು ಸ್ವಾತಂತ್ರ್ಯದ ಉಳಿವಿನ ಸಲುವಾಗಿ ಎಲ್ಲರೂ ಜೆನಾನಾಗೆ ತೆರಳಬೇಕೆಂದು ಕೇಳಿಕೊಂಡಳು. ಗಾಯಗೊಂಡು ದಣಿದ ಅವರು ಈ ಆಜ್ಞೆಯನ್ನು ವರವೆಂದು ಸ್ವೀಕರಿಸಿದರು. ವಿರೋಧದ ಒಂದು ಮಾತೂ ಹೇಳದೆ ತಲೆಬಾಗಿಸಿ ಎಲ್ಲರೂ ಜೆನಾನಾದೊಳಗೆ ಹೋದರು. ಈ ದೇಶಕ್ಕೆ ಯಾವುದೇ ಭರವಸೆ ಇಲ್ಲವೆಂಬ ಬಗ್ಗೆ ಅವರಿಗೆ ಖಚಿತವಿತ್ತು. ಆಗ ಮಹಿಳಾ ಪ್ರಿನ್ಸಿಪಾಲ್ ತನ್ನ ಎರಡು ಸಾವಿರ ವಿದ್ಯಾರ್ಥಿಗಳೊಂದಿಗೆ ರಣರಂಗಕ್ಕೆ ಹೋದರು. ಶೇಖರಿಸಿಟ್ಟ ಸೂರ್ಯನ ಎಲ್ಲ ಶಾಖ ಮತ್ತು ಕಿರಣಗಳನ್ನು ಶತ್ರುಗಳ ಮೇಲೆ ಹರಿಯಬಿಟ್ಟರು. ಆ ಬೆಳಕು ಮತ್ತು ಶಾಖ ಮನುಷ್ಯರು ತಡೆಯಲಾರದಷ್ಟು ಇತ್ತು. ಕಂಗಾಲಾಗಿ ಅವರೆಲ್ಲ ಓಡತೊಡಗಿದರು. ಆ ಗಲಿಬಿಲಿಯಲ್ಲಿ ಅದನ್ನು ಎದುರಿಸುವುದು ಹೇಗೆಂದೇ ಅವರಿಗೆ ತಿಳಿಯಲಿಲ್ಲ. ತಮ್ಮ ಬಂದೂಕು ಮತ್ತಿತರ ಶಸ್ತ್ರಾಸ್ತ್ರಗಳನ್ನು ಅವರು ಅಲ್ಲಲ್ಲೇ ಬಿಟ್ಟು ಹೋದಾಗ ಅವನ್ನೂ ಸೂರ್ಯನ ಶಾಖದಿಂದ ಸುಟ್ಟು ನಾಶಗೊಳಿಸಲಾಯಿತು. ಆಗಿನಿಂದ ನಮ್ಮ ದೇಶವನ್ನು ಆಕ್ರಮಿಸಲು ಯಾರೂ ಪ್ರಯತ್ನಿಸಿಲ್ಲ.’

‘ಆಗಿನಿಂದ ನಿಮ್ಮ ಗಂಡಸರು ಜೆನಾನಾದಿಂದ ಹೊರಬರಲು ಪ್ರಯತ್ನಿಸಲೇ ಇಲ್ಲವೆ?’

‘ಹೌದು, ಅವರಿಗೆ ಸ್ವತಂತ್ರವಾಗಬೇಕೆನಿಸಿತು. ಕೆಲವು ಪೊಲೀಸ್ ಕಮಿಷನರುಗಳು ಮತ್ತು ಜಿಲ್ಲಾ ನ್ಯಾಯಾಧೀಶರು ಮಿಲಿಟರಿ ಅಧಿಕಾರಿಗಳನ್ನು ಯುದ್ಧ ವೈಫಲ್ಯಕ್ಕೆ ಹೊಣೆಗಾರರನ್ನಾಗಿಸಿ ಜೈಲಿಗಟ್ಟಲು ಅರ್ಹರಾದರೂ ಕೂಡ ಅವರು ನಿರ್ಲಕ್ಷ್ಯ ತೋರದೆ ಇರುವುದರಿಂದ ಶಿಕ್ಷಿಸದೆ ಮತ್ತೆ ಅವರವರ ಅಧಿಕಾರದಲ್ಲಿ ಮುಂದುವರೆಸುವಂತೆ ಕೋರಿ ರಾಣಿಗೆ ಪತ್ರ ಕಳಿಸಿದರು. ಆಗ ರಾಣಿಯು ಸುತ್ತೋಲೆಯೊಂದನ್ನು ಕಳಿಸಿ ಅವರ ಸೇವೆ ಅವಶ್ಯವಿರುವಾಗ ಕರೆಸಿಕೊಳ್ಳಲಾಗುವುದೆಂದೂ, ಅಲ್ಲಿಯವರೆಗೆ ಎಲ್ಲರೂ ಅವರವರ ಜಾಗಗಳಲ್ಲಿರಬೇಕೆಂದೂ ತಿಳಿಸಿದಳು. ಅವರಿಗೀಗ ಪರ್ದಾ ಪದ್ಧತಿ ರೂಢಿಯಾಗಿ ಗೊಣಗುಡುವುದು ನಿಲಿಸಿ ಅಲ್ಲಿಗೇ ಹೊಂದಿಕೊಂಡಿರುವುದರಿಂದ ನಾವು ಅವರನ್ನು ಮರ್ದಾನಾ ಎನ್ನುವುದಿಲ್ಲ, ಜೆನಾನಾ ಎನ್ನುತ್ತೇವೆ.’

‘ಆದರೆ ಕಳ್ಳತನ, ಕೊಲೆ ಪ್ರಕರಣಗಳಲ್ಲಿ ಪೊಲೀಸರು ಅಥವಾ ಮ್ಯಾಜಿಸ್ಟ್ರೇಟರಿಲ್ಲದೆ ಹೇಗೆ ನಿಭಾಯಿಸುವಿರಿ?’

‘ಮರ್ದಾನಾ ಪದ್ಧತಿ ಇರುವುದರಿಂದ ಅಪರಾಧ ಅಥವಾ ತಪ್ಪಿತಸ್ಥರ ಪ್ರಕರಣಗಳೇ ಇಲ್ಲ. ಆದ್ದರಿಂದ ಅಪರಾಧಿಯನ್ನು ಕಂಡುಹಿಡಿಯಲು ನಮಗೆ ಪೊಲೀಸರೇ ಬೇಡ. ಅಥವಾ ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟರೇ ಬೇಡ.’

‘ಅದು ನಿಜವಾಗಿ ತುಂಬ ಒಳ್ಳೆಯದು. ಅಕಸ್ಮಾತ್ ಯಾರಾದರೂ ಅಪ್ರಾಮಾಣಿಕ ವ್ಯಕ್ತಿಯಿದ್ದರೂ ಅವರನ್ನು ಸುಲಭವಾಗಿ ಸರಿ ಮಾಡಬಹುದು. ಒಂದು ಹನಿ ರಕ್ತ ಸುರಿಸದೆ ನಿರ್ಧಾರಕ ಗೆಲುವನ್ನು ನಿಮಗೆ ತಂದುಕೊಡಲು ಸಾಧ್ಯವಾದರೆ, ಕಷ್ಟವಿಲ್ಲದೆ ಅಪರಾಧವನ್ನೂ ಅಪರಾಧಿಗಳನ್ನೂ ತಡೆಯಬಹುದು.’

‘ಈಗ ಸುಲ್ತಾನಾ, ನೀನು ಇಲ್ಲೆ ಕೂತಿರುವೆಯೋ ಅಥವಾ ನನ್ನ ಜೊತೆ ಹಜಾರಕ್ಕೆ ಬರುತ್ತೀಯೋ?’ ಸಾರಾ ಕೇಳಿದಳು.

‘ನಿನ್ನ ಅಡುಗೆಮನೆ ಅಂತಃಪುರದ ಭೋಜನಾಲಯಕ್ಕಿಂತ ಕಡಿಮೆಯಿಲ್ಲ’ ನಗುತ್ತ ಹೇಳಿದೆ. ‘ಆದರೆ ನಾವೀಗ ಈ ಜಾಗ ಬಿಡಲೇಬೇಕು. ಗಂಡಸರು ಅಡಿಗೆಮನೆಯ ಕೆಲಸದಿಂದ ಇಷ್ಟು ಹೊತ್ತು ಅವರನ್ನು ದೂರವಿಟ್ಟಿದ್ದಕ್ಕೆ ನಮ್ಮನ್ನು ಶಪಿಸುತ್ತಿರಬಹುದು.’ ನಾವಿಬ್ಬರೂ ಮನಸಾರೆ ನಕ್ಕೆವು.

‘ನಾನು ಮನೆಗೆ ವಾಪಸು ಹೋದ ನಂತರ ನನ್ನ ಗೆಳತಿಯರಿಗೆ ದೂರದ ಮಹಿಳಾ ರಾಜ್ಯದ ಬಗ್ಗೆ, ಅಲ್ಲಿ ಹೆಂಗಸರೇ ರಾಜ್ಯವಾಳುತ್ತ ಎಲ್ಲವನ್ನೂ ನಿಯಂತ್ರಿಸುತ್ತಿರುವ ಬಗ್ಗೆ, ಮರ್ದಾನದಲ್ಲಿ ಗಂಡಸರನ್ನಿಟ್ಟು ಅಡಿಗೆ, ಮನೆಕೆಲಸ, ಮಕ್ಕಳನ್ನು ನೋಡಿಕೊಳ್ಳುವಂತೆ ಮಾಡಿರುವ ಬಗ್ಗೆ, ಅಡಿಗೆಯನ್ನು ಅದು ಸಂತೋಷಕೊಡುವಷ್ಟು ಸರಳಗೊಳಿಸಿರುವ ಬಗ್ಗೆ ಏನಾದರೂ ಹೇಳಿದರೆ ಎಲ್ಲ ತುಂಬ ಆಶ್ಚರ್ಯಪಡುತ್ತಾರೆ.’

‘ಹೌದು, ನೀನಿಲ್ಲಿ ನೋಡಿದ ಎಲ್ಲದರ ಬಗೆಗೆ ಅವರಿಗೆ ಹೇಳು.’

‘ದಯವಿಟ್ಟು ನನಗೆ ಉಳುಮೆಯನ್ನು ಹೇಗೆ ಮಾಡುತ್ತೀರಿ? ಕೃಷಿ ಮತ್ತಿತರ ಕಠಿಣ ದುಡಿಮೆಯ ಕೆಲಸ ಹೇಗೆ ಮಾಡುತ್ತೀರಿ ಅಂತ ಹೇಳು.’

‘ನಮ್ಮ ಹೊಲಗಳನ್ನು ವಿದ್ಯುತ್ತಿನ ಸಹಾಯದಿಂದ ಉಳುತ್ತೇವೆ. ಉಳಿದ ಕಠಿಣ ಕೆಲಸಗಳಿಗೂ ಅದೇ ಶಕ್ತಿ ಒದಗಿಸುತ್ತದೆ. ಅದನ್ನೇ ವಾಯುಯಾನದ ಓಡಾಟಕ್ಕೂ ಕೂಡಾ ಬಳಸುತ್ತೇವೆ. ನಮಗೆ ಯಾವುದೇ ರೈಲು ರಸ್ತೆಯಿಲ್ಲ, ಅಥವಾ ಟಾರು ಹಾಕಿದ ರಸ್ತೆಗಳಿಲ್ಲ.’

‘ಓ, ಅದಕ್ಕೇ ರಸ್ತೆ, ರೈಲು ಅಪಘಾತ ಸಂಭವಿಸುವುದೇ ಇಲ್ಲ ಇಲ್ಲಿ. ನಿಮಗೆ ಯಾವಾಗಲಾದರೂ ಮಳೆನೀರಿನ ಕೊರತೆ ಬಂದಿದೆಯೆ?’

‘ನೀರಿನ ಬಲೂನನ್ನು ಸ್ಥಾಪಿಸಿದ ಮೇಲೆ ಹಾಗಾಗಿಲ್ಲ. ನೀನು ದೊಡ್ಡ ಬಲೂನುಗಳು ಮತ್ತು ಅವಕ್ಕೆ ಅಂಟಿಸಿದ ಪೈಪುಗಳನ್ನು ನೋಡಿರಬಹುದು. ಅವುಗಳ ಸಹಾಯದಿಂದ ನಾವು ಎಷ್ಟು ಬೇಕೋ ಅಷ್ಟು ಮಳೆನೀರನ್ನು ಪಡೆಯಬಹುದು. ಅದರಿಂದ ನಮಗೆ ಪ್ರವಾಹ ಮತ್ತು ಗುಡುಗು ಸಿಡಿಲಿನ ಭಯವಿಲ್ಲ. ಪ್ರಕೃತಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಫಸಲು ಕೊಡುವಂತೆ ಮಾಡಲು ನಾವೆಲ್ಲ ನಿರತರಾಗಿರುತ್ತೇವೆ. ನಾವು ಸುಮ್ಮನೆ ಕೂರುವುದೇ ಇಲ್ಲವಾದ್ದರಿಂದ ನಮ್ಮ ನಡುವೆ ಜಗಳಗಳೇ ಇಲ್ಲ. ನಮ್ಮ ರಾಣಿಗೆ ಸಸ್ಯಶಾಸ್ತ್ರ ಎಂದರೆ ಬಲುಪ್ರೀತಿ; ಇಡೀ ದೇಶವನ್ನೇ ಒಂದು ಉದ್ಯಾನವನವನ್ನಾಗಿ ಮಾಡುವ ಮಹದಾಸೆ ಅವಳದು.’

‘ಅತ್ಯುತ್ತಮ ಯೋಚನೆ. ನಿಮ್ಮ ಮುಖ್ಯ ಆಹಾರ ಯಾವುದು?’

‘ಹಣ್ಣು’

‘ಬೇಸಿಗೆಯಲ್ಲಿ ನಿಮ್ಮ ದೇಶವನ್ನು ಹೇಗೆ ತಂಪಾಗಿಡುತ್ತೀರಿ? ನಾವು ನಮ್ಮ ದೇಶದಲ್ಲಿ ಮಳೆಯನ್ನು ದೇವಲೋಕದ ವರವೆಂದೇ ಭಾವಿಸುತ್ತೇವೆ.’

‘ತಡೆಯಲಾರದಷ್ಟು ಸೆಖೆಯಾದಾಗ ಕಾರಂಜಿಗಳ ನೀರನ್ನು ಸಿಂಪಡಿಸುತ್ತೇವೆ. ಚಳಿಗಾಲದಲ್ಲಿ ಸೂರ್ಯನ ಶಾಖದಿಂದ ನಮ್ಮ ಕೋಣೆಗಳನ್ನು ಬೆಚ್ಚಗಿಡುತ್ತೇವೆ.’

ಅವಳು ಸ್ನಾನದಮನೆ ತೋರಿಸಿದಳು. ಅದರ ಛಾವಣಿ ತೆಗೆಯಬಲ್ಲಂಥದು. ಅವಳಿಗೆ ಬೇಕಾದಾಗ ಶವರ್ ಸ್ನಾನ ಮಾಡಲು ಡಬ್ಬಿಯ ಮುಚ್ಚಳ ತೆಗೆದಂತೆ ಸ್ನಾನದಮನೆಯ ಛಾವಣಿ ತೆಗೆದು ಶವರಿನ ನಲ್ಲಿ ತಿರುಗಿಸಿದರಾಯಿತು.

‘ನೀವು ಅದೃಷ್ಟವಂತರು’ ಹೇಳಿದೆ, ‘ನಿಮಗೆ ಬೇಕೆನ್ನುವುದೇ ಏನೂ ಉಳಿದಿಲ್ಲ. ಅಂದಹಾಗೆ ನಿಮ್ಮ ಧರ್ಮ ಯಾವುದು?’

‘ನಮ್ಮ ಧರ್ಮ ಪ್ರೀತಿ ಮತ್ತು ಸತ್ಯದ ಮೇಲೆ ನಿಂತಿರುವಂಥದು. ಒಬ್ಬರನ್ನೊಬ್ಬರು ಪ್ರೀತಿಸುವುದು ಮತ್ತು ಸಂಪೂರ್ಣ ಸತ್ಯವಾಗಿರುವುದು ನಮ್ಮ ಧಾರ್ಮಿಕ ಕರ್ತವ್ಯ. ಯಾರೇ ಆಗಲಿ, ಅವನು ಅವಳು, ಸುಳ್ಳು ಹೇಳಿದರೆ..’

‘ಮರಣದಂಡನೆ ಶಿಕ್ಷೆ?’

‘ಇಲ್ಲ, ಮರಣದಂಡನೆ ಶಿಕ್ಷೆಯಲ್ಲ. ನಾವು ದೇವರ ಸೃಷ್ಟಿಯನ್ನು ಕೊಲ್ಲುವುದರಲ್ಲಿ ಸಂತೋಷ ಕಾಣುವವರಲ್ಲ. ಸುಳ್ಳು ಹೇಳುವವರಿಗೆ ಮತ್ತಿನ್ಯಾವತ್ತೂ ವಾಪಸು ಬರದಂತೆ ಈ ನೆಲ ಬಿಟ್ಟು ಹೋಗು ಎನ್ನುತ್ತೇವೆ.’

‘ಎಂದರೆ ಅಪರಾಧಿಗೆ ಕ್ಷಮೆಯೇ ಇಲ್ಲವೇ?’

‘ಇದೆ, ಅವರು ಪ್ರಾಮಾಣಿಕವಾಗಿ ಪ್ರಾಯಶ್ಚಿತ್ತ ಮಾಡಿಕೊಂಡರೆ.’

‘ನಿಮ್ಮ ಸಂಬಂಧಿಗಳನ್ನು ಬಿಟ್ಟರೆ ಬೇರೆ ಗಂಡಸರನ್ನು ನೀವು ನೋಡುವುದೇ ಇಲ್ಲವೆ?’

‘ಪವಿತ್ರ ಸಂಬಂಧಗಳನ್ನು ಬಿಟ್ಟು ಬೇರಾರನ್ನೂ ನೋಡುವುದಿಲ್ಲ.’

‘ನಮ್ಮಲ್ಲಿ ಪವಿತ್ರ ಸಂಬಂಧದ ವಿಸ್ತಾರ ಸಣ್ಣದು. ಕಸಿನ್ನುಗಳು ಕೂಡಾ ಪವಿತ್ರವಲ್ಲ.’

‘ಆದರೆ ನಮ್ಮದು ತುಂಬ ವಿಸ್ತೃತ ವರ್ತುಲ. ದೂರದ ಸಂಬಂಧಿಗಳೂ ಸೋದರರಷ್ಟೇ ಪವಿತ್ರರು.’

‘ಅದು ತುಂಬ ಒಳ್ಳೆಯದು. ನಿಮ್ಮ ರಾಜ್ಯದಲ್ಲಿ ಬರೀ ಶುದ್ಧತೆಯೇ ತುಂಬಿಕೊಂಡಿದೆ. ನನಗೆ ನಿಮ್ಮ ರಾಣಿಯನ್ನು ನೋಡಬೇಕೆನಿಸುತ್ತಿದೆ. ಅವಳೇ ತಾನೇ ತನ್ನ ದೂರದೃಷ್ಟಿ ಮತ್ತು ಚಾತುರ್ಯದಿಂದ ಇದನ್ನೆಲ್ಲ ಆಗಮಾಡಿದ್ದು.’

‘ಆಯಿತು’ ಎಂದಳು ಸಾರಾ.

ಒಂದು ಚಚ್ಚೌಕ ಮರದ ತುಂಡಿಗೆ ಸ್ಕ್ರೂವಿನಿಂದ ಎರಡು ಸೀಟು ಕೂರಿಸಿದಳು. ಅದಕ್ಕೆ ಎರಡು ನಯಸಾದ, ಪಾಲಿಶ್ ಆದ ಬಾಲುಗಳ ಕೂಡಿಸಿದಳು. ಅದೇನೆಂದು ಕೇಳಿದಾಗ ಅದು ಹೈಡ್ರೋಜನ್ ಬಾಲ್ ಎಂದೂ, ಗುರುತ್ವಾಕರ್ಷಣೆ ಮೀರಿ ಹೋಗಲು ಅದು ಸಹಾಯ ಮಾಡುವುದೆಂದೂ ಅವಳು ಹೇಳಿದಳು. ಬೇರೆಬೇರೆ ಭಾರ ಹೊತ್ತೊಯ್ಯಲು ಬೇರೆಬೇರೆ ಗಾತ್ರದ ಬಾಲ್‌ಗಳನ್ನು ಬಳಸುವುದಾಗಿ ಹೇಳಿದಳು. ನಂತರ ಆ ಏರ್ ಕಾರಿಗೆ ಎರಡು ರೆಕ್ಕೆಗಳ ತರಹದ ರಚನೆಗಳ ಅಂಟಿಸಿದಳು. ಅವು ವಿದ್ಯುತ್ತಿನ ಸಹಾಯದಿಂದ ನಡೆಯುತ್ತವೆ ಎನ್ನುತ್ತ ನಾವು ಸರಿಯಾಗಿ ಕೂತ ನಂತರ ಒಂದು ಬಟನನ್ನು ಒತ್ತಿದಳು. ಆ ರೆಕ್ಕೆಗಳು ತಿರುಗತೊಡಗಿದವು. ನಾವು ವೇಗವೇಗವಾಗಿ ಚಲಿಸತೊಡಗಿದೆವು. ನಾವು ಆರೇಳು ಅಡಿ ಮೇಲೇರಿದೊಡನೆ ಸೀದಾ ಹೋಗತೊಡಗಿದೆವು. ನಮ್ಮ ಚಲನೆ ನನ್ನ ಅನುಭವಕ್ಕೆ ಬರುವ ಹೊತ್ತಿಗೆ ರಾಣಿಯ ಉದ್ಯಾನ ಕಣ್ಣಿಗೆ ಬಿತ್ತು.

ನನ್ನ ಗೆಳತಿ ಮೊದಲು ಮಾಡಿದ್ದನ್ನೆಲ್ಲ ಮತ್ತೆ ತಿರುವುಮುರುವಾಗಿ ಮಾಡಿ ವಾಹನ ಕೆಳಗಿಳಿಸಿದಳು. ನೆಲಕ್ಕೆ ತಾಗಿದ ಕೂಡಲೇ ಅದು ನಿಂತಿತು.

ನಾನು ಹಾರಿ ಬರುವಾಗ ರಾಣಿ ತನ್ನ ನಾಲ್ಕು ವರ್ಷದ ಮಗಳೊಡನೆ, ಅವಳನ್ನು ನೋಡಿಕೊಳ್ಳುವ ಮಹಿಳೆಯೊಡನೆ ನಡೆದು ಬರುತ್ತ ಇದ್ದಳು.

‘ಹಲ್ಲೊ, ನೀನಿಲ್ಲಿ?’ ರಾಣಿ ಸಾರಾಳನ್ನು ನೋಡಿ ಕೂಗಿದಳು. ನನ್ನನ್ನು ರಾಣಿಗೆ ಪರಿಚಯಿಸಲಾಯಿತು, ಅವಳು ನನ್ನನ್ನು ಆದರದಿಂದ ಬರಮಾಡಿಕೊಂಡಳು.

ನನಗೆ ಅವಳೊಡನೆ ಗೆಳೆತನ ಮಾಡಲು ತುಂಬ ಖುಷಿಯಾಯಿತು. ಮಾತಾಡುತ್ತ ಆಡುತ್ತ ರಾಣಿ ತನ್ನ ರಾಜ್ಯದವರು ಬೇರೆಯವರೊಡನೆ ವ್ಯಾಪಾರ ನಡೆಸಲು ತನ್ನದೇನೂ ಅಭ್ಯಂತರವಿಲ್ಲ ಎಂದಳು. ‘ಆದರೆ, ಎಲ್ಲಿ ಹೆಂಗಸರನ್ನು ಜೆನಾನಾದಲ್ಲಿಟ್ಟಿದ್ದಾರೋ ಆ ದೇಶಗಳ ಜೊತೆಗೆ ಯಾವ ವ್ಯವಹಾರವೂ ಸಾಧ್ಯವಾಗುವುದಿಲ್ಲ. ನಾವು ಬೇರೆಯವರ ನೆಲ ಆಕ್ರಮಿಸಲಾರೆವು; ಕೊಹಿನೂರ್ ವಜ್ರಕ್ಕಿಂತ ಸಾವಿರ ಪಟ್ಟು ಹೊಳೆಯುವ ವಜ್ರವಿದ್ದರೂ ಅದಕ್ಕಾಗಿ ಹೋರಾಡಲಾರೆವು. ಅಥವಾ ಮಯೂರ ಸಿಂಹಾಸನದಿಂದ ಯಾವ ಆಡಳಿತಗಾರನನ್ನೂ ಕೆಳದೂಡಲಾರೆವು. ನಾವು ಜ್ಞಾನದ ಆಳ ಸಮುದ್ರಕ್ಕೆ ಜಿಗಿಯುತ್ತೇವೆ. ಪ್ರಕೃತಿಯು ನಮಗಾಗೇ ಅಲ್ಲಿಟ್ಟಿರುವ ರತ್ನಗಳಿಗಾಗಿ ಹುಡುಕುತ್ತೇವೆ. ನಿಸರ್ಗದತ್ತ ಕಾಣಿಕೆಗಳನ್ನು ಎಷ್ಟು ಸಾಧ್ಯವೋ ಅಷ್ಟು ಸಂತಸದಿಂದ ಅನುಭವಿಸುತ್ತೇವೆ’ ಎಂದಳು.

ರಾಣಿಯಿಂದ ಬೀಳ್ಕೊಂಡ ಮೇಲೆ ನಾವು ಪ್ರಸಿದ್ಧ ಯೂನಿವರ್ಸಿಟಿಗಳನ್ನು ನೋಡಹೋದೆವು. ಅವರ ಕೆಲವು ಉತ್ಪಾದನಾ ಘಟಕ, ಪ್ರಯೋಗಾಲಯ, ವೀಕ್ಷಣಾಲಯಗಳನ್ನು ನೋಡಿದೆ. ಅವನ್ನೆಲ್ಲ ನೋಡಿದ ಮೇಲೆ ಮತ್ತೆ ಏರ್ ಕಾರ್ ಹತ್ತಿ ಕೂತೆವು. ಆದರೆ ಅದು ಹೊರಟಕೂಡಲೇ ಅದು ಹೇಗೋ ನಾನು ಜಾರಿ ಬಿದ್ದೆ. ಜಾರುವಿಕೆ ನನ್ನನ್ನು ಕನಸಿನಿಂದ ಎಳೆತಂದಿತು. ಕಣ್ತೆರೆದಾಗ ನನ್ನ ಮಲಗುವ ಕೋಣೆಯ ಈಸಿಚೇರಿನಲ್ಲಿ ಒರಗಿ ತೂಕಡಿಸುತ್ತ ಇದ್ದೆ!

ಡಾ. ಎಚ್. ಎಸ್. ಅನುಪಮಾ  ವೈದ್ಯೆ. ಮೂಲತಃ ಶಿವಮೊಗ್ಗ ಜಿಲ್ಲೆಯವರು. ಈಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೃತ್ತಿ ನಿರತರು. ಕವಿತೆ, ಕಥೆ, ವೈಚಾರಿಕ, ವೈದ್ಯಕೀಯ, ಪ್ರವಾಸ ಬರಹಗಳನ್ನು ಬರೆಯುವ ಇವರ 29 ಪುಸ್ತಕಗಳು ಪ್ರಕಟಗೊಂಡಿವೆ. ಅದರಲ್ಲಿ ಸಂಪಾದನೆ ಮತ್ತು ಅನುವಾದ ಪುಸ್ತಕಗಳೂ ಸೇರಿವೆ. ದಲಿತ, ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಡಾ. ಎಚ್. ಎಸ್. ಅನುಪಮಾ
ಜಲಜಾ ಹೆರಿಗೆ ಮತ್ತು ಜನರಲ್ ಆಸ್ಪತ್ರೆ
ಕವಲಕ್ಕಿ-581361
ತಾ: ಹೊನ್ನಾವರ ಜಿ: ಉತ್ತರ ಕನ್ನಡ

anukrishna93@gmail.com


9480211320
     

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...